Pour voir les autres types de publications sur ce sujet consultez le lien suivant : ಭಕ್ತಿ.

Articles de revues sur le sujet « ಭಕ್ತಿ »

Créez une référence correcte selon les styles APA, MLA, Chicago, Harvard et plusieurs autres

Choisissez une source :

Consultez les 26 meilleurs articles de revues pour votre recherche sur le sujet « ಭಕ್ತಿ ».

À côté de chaque source dans la liste de références il y a un bouton « Ajouter à la bibliographie ». Cliquez sur ce bouton, et nous générerons automatiquement la référence bibliographique pour la source choisie selon votre style de citation préféré : APA, MLA, Harvard, Vancouver, Chicago, etc.

Vous pouvez aussi télécharger le texte intégral de la publication scolaire au format pdf et consulter son résumé en ligne lorsque ces informations sont inclues dans les métadonnées.

Parcourez les articles de revues sur diverses disciplines et organisez correctement votre bibliographie.

1

ಶ್ರೀದೇವಿ та ಕುಂಬ್ಳೆ ಧನಂಜಯ. "ಶ್ರೀ ದೇವೀ ಮಹಾತ್ಮೆ ಮತ್ತು ಭಕ್ತಿ ಪರಂಪರೆ". AKSHARASURYA JOURNAL 04, № 04 (2024): 53 to 62. https://doi.org/10.5281/zenodo.13284021.

Texte intégral
Résumé :
ನಮ್ಮ ಸಂಸ್ಕೃತಿಯಲ್ಲಿ ಹಲವು ರೂಪಗಳೊಂದಿಗೆ, ಹಲವು ಮಾರ್ಪಾಡುಗಳೊಂದಿಗೆ ಭಕ್ತಿ ಪರಂಪರೆಯು ನಾಡಿನಾದ್ಯಂತ ಹಬ್ಬಿಕೊಂಡು ಬಂದಿದೆ. ಸಾಹಿತ್ಯಕವಾಗಿಯೂ, ಸಾಂಸ್ಕೃತಿಕವಾಗಿಯೂ ಭಕ್ತಿ ಪರಂಪರೆಯು ಹಲವು ಆಯಾಮಗಳಲ್ಲಿ ಬಹುಮುಖ್ಯ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಇದರಿಂದಾಗಿ ಜನಸಾಮಾನ್ಯರಲ್ಲಿರುವ ಭಕ್ತಿಯ ಭಾವ ಹಲವಾರು ವಿಧಾನಗಳ ಮೂಲಕ ಪ್ರಕಟಗೊಳ್ಳುತ್ತದೆ. ದೇವರನ್ನು ಪ್ರೀತಿಯಿಂದ, ಶ್ರದ್ಧಾ-ಭಕ್ತಿಯಿಂದ, ಆತ ನಮ್ಮವನೇ ಎಂಬ ಸಲಿಗೆಯಿಂದ, ಸಮರ್ಪಣಾ ಭಾವದಿಂದ ಹಲವರು ಹಲವು ರೀತಿಯಲ್ಲಿ ಒಲಿಸಿಕೊಳ್ಳುವ, ಸಾಕ್ಷಾತ್ಕರಿಸಿಕೊಳ್ಳುವ ಪ್ರಯತ್ನ ಭಕ್ತಿ ಪರಂಪರೆಯ ಪ್ರಾಮುಖ್ಯತೆ ಎಷ್ಟಿದೆ ಎಂಬುದನ್ನು ಹೇಳುತ್ತದೆ. ದೇವರ ಅನುಗ್ರಹಕ್ಕಾಗಿ ಜನರು ಇಂತಹ ವಿವಿಧ ಭಕ್ತಿ ಮಾರ್ಗದ ಮೂಲಕ ಪ್ರಯತ್ನಿಸುವುದೇ ಭಕ್ತಿ ಪರಂಪರೆಯ ವೈಶಿಷ್ಟ್ಯತೆ.ಭಕ್ತಿ ಪರಂಪರೆ ಎಂದಾಕ್ಷಣ
Styles APA, Harvard, Vancouver, ISO, etc.
2

ಚಿಕ್ಕಮಗಳೂರು, ಗಣೇಶ. "ವರ್ತಮಾನದ ಕನ್ನಡಿಯಲ್ಲಿ ಕನಕ ದರ್ಶನ". AKSHARASURYA JOURNAL 04, № 05 Special Issue (2024): 06 to 16. https://doi.org/10.5281/zenodo.13294272.

Texte intégral
Résumé :
ಭಕ್ತಿಯ ಖಾಸಗಿ ವಿಚಾರಗಳನ್ನು ಸಮಾಜ ಸುಧಾರಣೆಗೆ ಮಾಧ್ಯಮವಾಗಿ ಬಳಸಿಕೊಂಡ ಕನಕದಾಸರು ಕನ್ನಡ ನಾಡಿನ ಅನನ್ಯ ಭಕ್ತಿ ಕವಿ. ಅವರು ವಾಸಿಸುತ್ತಿದ್ದ ಮಧ್ಯಕಾಲೀನ ಅವಧಿಯು ಸಂಕೀರ್ಣವಾಗಿತ್ತು. ಇದು ಧರ್ಮ ಮತ್ತು ಆಡಳಿತದ ನಡುವಿನ ತೀವ್ರ ಸಂಘರ್ಷದ ಅವಧಿ. ಅಲ್ಲಿ ಅವರು ಹರಿದಾಸ ಚಳವಳಿಯ ಮುಖವಾಣಿಯಾಗಿ ನಮ್ಮನ್ನು ಭೇಟಿಯಾಗುತ್ತಾರೆ. ಆ ಚಳವಳಿಯ ತತ್ತ್ವಶಾಸ್ತ್ರವು ಮೇಲ್ನೋಟಕ್ಕೆ ಉದಾರವಾದದ್ದಾಗಿತ್ತು. ಆಂತರಿಕವಾಗಿ ದೋಷಯುಕ್ತ, ತಾರತಮ್ಯ ಮತ್ತು ಅಸಮ ನೆಲ. ಕನಕನೂ ತನ್ನ ಹಿನ್ನಲೆಯಲ್ಲಿ ಇಟ್ಟುಕೊಂಡಿರುವ ಎಲ್ಲ ಸೈದ್ಧಾಂತಿಕ ಗೊಂದಲಗಳಲ್ಲಿ ಸಿಲುಕಿಕೊಳ್ಳುತ್ತಾನೆ. ವ್ಯಾಸಕೂಟ ಮತ್ತು ದಾಸಕೂಟಗಳು ತಾತ್ವಿಕ ಸಂಘರ್ಷದ ನಡುವೆ ತಮ್ಮನ್ನು ತಾವು ಪ್ರತಿಪಾದಿಸಲು ಹೆಣಗಾಡುತ್ತವೆ.  ಚಳವಳಿಯ ಪರಿಸರದಲ್ಲೂ ಅಪಾರ ಒಂಟಿತನ ಅನುಭವಿಸಿದ ಕವಿ. ಇದಕ್ಕೆ ಕಾರಣವೆ
Styles APA, Harvard, Vancouver, ISO, etc.
3

ಪ್ರಸನ್ನ, ಡಾ ಪಿ ಬಿ. "ಸತ್ಯಕ್ಕನ ವಚನಗಳಲ್ಲಿ ಭಕ್ತಿ". International Journal of Kannada Research 10, № 3 (2024): 107–10. http://dx.doi.org/10.22271/24545813.2024.v10.i3b.1027.

Texte intégral
Styles APA, Harvard, Vancouver, ISO, etc.
4

ಸಂತೋಷ್‌, ಕುಮಾರ್‌ ಆರ್‌.ಎಂ. "ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು". AKSHARASURYA JOURNAL 06, № 04 (2025): 78 to 89. https://doi.org/10.5281/zenodo.15490942.

Texte intégral
Résumé :
ವಚನ ಸಾಹಿತ್ಯವು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅಮೂಲ್ಯ ಸಂಪತ್ತಾಗಿದೆ. ಇದು 12ನೇ ಶತಮಾನದಲ್ಲಿ ಜನಿಸಿದ ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದ್ದು, ಬಸವಾದಿ ಶರಣರು ಇದನ್ನು ಜನಸಾಮಾನ್ಯರಿಗೆ ತಲುಪುವಂತೆ ಮಾಡಿದರು. ವಚನ ಸಾಹಿತ್ಯವು ಧಾರ್ಮಿಕ, ಸಾಮಾಜಿಕ ಮತ್ತು ದಾರ್ಶನಿಕ ಚಿಂತನೆಗಳನ್ನು ಒಳಗೊಂಡಿದೆ ಮತ್ತು ಭಕ್ತಿ ಚಳವಳಿಯ ಪ್ರಮುಖ ಭಾಗವಾಗವೂ ಆಗಿದೆ. ವಚನ ಸಾಹಿತ್ಯವು ʼಸಮಾನತೆʼ, ʼಶ್ರಮʼ-ʼಕಾಯಕʼ ಮತ್ತು ʼಭಕ್ತಿʼಯ ಮಹತ್ವ, ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಶರಣರು ಜಾತಿ, ಲಿಂಗ, ಆರ್ಥಿಕ ಸ್ಥಿತಿ ಮುಂತಾದ ಬೇಧಭಾವಗಳನ್ನು ತಿರಸ್ಕರಿಸಿದರು. ಅಲ್ಲದೆ ಇವರು ಜಾತಿ-ವರ್ಣಭೇದಗಳ ವಿರೋಧವಾಗಿಯೂ ಮತ್ತು ಸಮಾನತೆಗೆ ಹೆಚ್ಚಿನ ಮನ್ನಣೆಯನ್ನು ನೀಡಿದರು.ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮೊದಲಾದ ಶರಣರು &ldq
Styles APA, Harvard, Vancouver, ISO, etc.
5

ಮನುಕುಮಾ‌ರ್, ಎಸ್.ವಿ. "ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆ". AKSHARASURYA JOURNAL 06, № 04 (2025): 49 to 55. https://doi.org/10.5281/zenodo.15490876.

Texte intégral
Résumé :
ಸರಳವಾದ, ಸುಲಲಿತವಾದ, ಸುಮಾಧುರ್ಯತೆಯ ಕಂಪನ್ನು ಸೂಸಿದ ವೈಶಿಷ್ಟ್ಯಪೂರ್ಣವಾದ ಸಾಹಿತ್ಯವೇ “ವಚನ ಸಾಹಿತ್ಯ”  ಶಿವಶರಣರ ಅಂತರ್ಗತ ಅನುಭವದ ನಿರ್ಭಯವಾದ ನೀತಿ, ಮತ, ತತ್ವಭೋಧನೆಯ ಸಾರವಾಗಿದೆ.  ವಚನ ಸಾಹಿತ್ಯ ಒಂದು ಅನನ್ಯ ಮತ್ತು ಪ್ರಬಲ ಸಾಹಿತ್ಯ ಪ್ರಕಾರವಾಗಿದ್ದು ಈ ಸಾಹಿತ್ಯವು ಆಧ್ಯಾತ್ಮಿಕತೆ, ಸಮಾಜದ ಸುಧಾರಣೆ ಮತ್ತು ಅನುಭವ ಶ್ರದ್ಧೆಯ ಬಗೆಗಿನ ಆಳವಾದ ಚಿಂತನೆಗಳನ್ನು ಪ್ರತಿಬಿಂಬಿಸುತ್ತದೆ.  ವಚನ ಸಾಹಿತ್ಯ ಮುಖ್ಯ ಉದ್ದೇಶ ಸಮಾಜ ಸುಧಾರಣೆ. ರಾಜಕೀಯವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಆಂತರೀಕ ಪರಿಶುದ್ಧಿಗೆ ಮತ್ತು ದೈವೀಕ ಏಕತೆಗೆ ಮಹತ್ವ ನೀಡುವುದಾಗಿದೆ. ಸಮಾಜದಲ್ಲಿ ಜಾತಿ, ವರ್ಣ ಮತ್ತು ಲಿಂಗಭೇದಗಳನ್ನು ವಿರೋದಿಸಿ ಸಮಾನತೆಯ ಮತ್ತು ಜಾತಿ ರಹಿತ ಸಮಾಜದ ಸುಧಾರಣೇ ಮೂಡಿಸುವ ಉದ್ದೇಶವಾಗಿದೆ. ವಚನಕಾರರು
Styles APA, Harvard, Vancouver, ISO, etc.
6

ಮೋಹನ್‌, ಕುಮಾರ್‌ ಆರ್‌. "ನೇಯ್ಗೆ ಕಾಯಕದ ಶರಣ ಮತ್ತು ಶರಣೆಯರ ವಚನಗಳ ಮಹತ್ವ". AKSHARASURYA JOURNAL 06, № 06 (2025): 47 to 60. https://doi.org/10.5281/zenodo.15580976.

Texte intégral
Résumé :
ಆದ್ಯವಚನಕಾರರಾದ ಜೇಡರ ದಾಸಿಮಯ್ಯನವರು ನೇಯ್ಗೆ ಕಾಯಕವನ್ನು ಮಾಡುತ್ತಿದ್ದ ಶ್ರೇಷ್ಠ ಶಿವಶರಣ ಹಾಗೆಯೇ ದೊರೆತಿರುವ ಆಧಾರಗಳ ಮೇರೆಗೆ ದಾಸಿಮಯ್ಯನ ಪತ್ನಿ ದುಗ್ಗಳೆ, ಅಮುಗಿ ದೇವಯ್ಯ, ಅಮುಗೆ ರಾಯಮ್ಮ, ಆದಯ್ಯ, ಕದಿರ ರೆಮ್ಮವ್ವೆ, ಕದಿರ ಕಾಯಕದ ಕಾಳವ್ವೆಯರು ಕೂಡ ನೇಯ್ಗೆ ಕಾಯಕವನ್ನು ಮಾಡುತ್ತ ಸಮಾಜಕ್ಕೆ ತಮ್ಮದೇ ಆದ ವಚನಗಳ ಮೂಲಕ ಸಮಾಜದ ಸರ್ವೋನ್ನತಿಗೆ ಶ್ರಮಿಸಿದ ಕಾಯಕ ಶರಣ ಮತ್ತು ಶರಣೆಯರು. ನೇಯ್ಗೆ ಕಾಯಕವನ್ನು ಮಾಡುತ್ತಿದ್ದ ಈ ಶರಣ ಮತ್ತು ಶರಣೆಯರು ತಮ್ಮ ಅನುಭವ, ಆತ್ಮಾನುಭೂತಿಯನ್ನು ಸಮಾಜದ ಜನರೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸಿದರು. ಸರಳ ಮತ್ತು ಸ್ಪಷ್ಟ ನುಡಿಗಳಲ್ಲಿ ವಚನಗಳನ್ನು ಕಟ್ಟಿಕೊಟ್ಟು ದಾಂಪತ್ಯದಿಂದಲೂ ಮೋಕ್ಷ ಸಂಪಾದನೆ ಸಾಧ್ಯವೆಂಬ ಅಧ್ಯಾತ್ಮಿಕ ಚಿಂತನೆಯನ್ನು ತೋರಿದವರು. ಸತ್ಯದ ಪ್ರತಿಪಾದನೆ, ಸ್ತ್ರೀಪರ ಕಾಳಜಿ, ಸ್ತ್ರೀಸಮ
Styles APA, Harvard, Vancouver, ISO, etc.
7

ಶಂಕರ್ಸ, ಜ್ಯೋತಿ, та ಮಾರುತಿ ಜಿ. "ಹರಿದಾಸ ಸಾಹಿತ್ಯದ ಉಗಮ ಮತ್ತು ವಿಕಾಸ". Shanlax International Journal of Arts, Science and Humanities 12, S1-Oct (2024): 250–53. https://doi.org/10.34293/sijash.v12is1-oct.8316.

Texte intégral
Résumé :
ಕರ್ನಾಟಕದಲ್ಲಿ ಮಧ್ಯಕಾಲೀನ ಕನ್ನಡ ಸಾಹಿತ್ಯವು ಸಾಂಸ್ಕೃತಿಕ ಇತಿಹಾಸದ ದೃಷ್ಟಿಯಿಂದ ಅತ್ಯಂತ ಮಹತ್ವ ಪೂರ್ಣವಾದ ಕಾಲಘಟ್ಟವಾಗಿದೆ. ನಡುಗನ್ನಡ ಸಾಹಿತ್ಯವು ಪ್ರಮುಖವಾಗಿ ವಚನ ಸಾಹಿತ್ಯ, ಹರಿದಾಸ ಸಾಹಿತ್ಯ ಪರಂಪರೆಯ ತನ್ನದೇ ಆದ ತಾತ್ವಿಕ ನಿಲುವುಗಳೊಂದಿಗೆ ಕನ್ನಡ ಸಾಹಿತ್ಯ ಚರಿತ್ರೆಯ ಪ್ರಮುಖ ಘಟ್ಟವಾಗಿದೆ. ಶಾಸ್ತç ಸಾಹಿತ್ಯಗಳಿಗೆ ಪ್ರಮುಖ ಆಧಾರ- ‘ಮಾನವನ ಬದುಕು-ಬದುಕುವ ಬಗೆ”೧ ಎಂಬುದಾಗಿದೆ. ಪುರಂದರದಾಸರು ಹೇಳುವ “ಮಾನವ ಜನ್ಮ ದೊಡ್ಡದು,ಇದನು ಹಾನಿ ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ”, “ಈಸಬೇಕು ಇದ್ದು ಜಯಿಸಬೇಕು” ‘ಚಿಂತನಾ ಲಹರಿಯು ಮೂಲ ಬೇರುಗಳನ್ನು ‘ಶಾಸ್ತç ಸಾಹಿತ್ಯ’ದಲ್ಲಿ ಮನಗಾಣಬಹುದು. ಆದ್ದರಿಂದ ಹರಿದಾಸರಲ್ಲಿರುವ ಬಾಳಿನ ಚಿಂತನೆಗಳ ಮೂಲ ನೆಲೆಗಟ್ಟು, ವ್ಯಕ್ತಿತ್ವ ವಿಚಾರಗಳಿಗೆ ಸ್ಫೂರ್ತಿ- ಭಾರತೀಯ ಶಾಸ್ತçದಲ್ಲಿನ ತಳಹದಿಯ ವಿಚಾ
Styles APA, Harvard, Vancouver, ISO, etc.
8

., ಡಾ ಚೆಲುವರಾಜು. "ಮಂಟೇಸ್ವಾಮಿ ಮತ್ತು ಅನನ್ಯ ಭಕ್ತಿ ಭಾವದ ದೊಡ್ಡಮ್ಮ ತಾಯಿ". International Journal of Kannada Research 7, № 1 (2021): 42–45. http://dx.doi.org/10.22271/24545813.2021.v7.i1a.1010.

Texte intégral
Styles APA, Harvard, Vancouver, ISO, etc.
9

ಚೆಲುವರಾಜು. "ಮಂಟೇಸ್ವಾಮಿ ಮತ್ತು ಅನನ್ಯ ಭಕ್ತಿ ಭಾವದ ದೊಡ್ಡಮ್ಮ ತಾಯಿ". AKSHARASURYA JOURNAL 03, № 04. SPECIAL ISSUE. (2024): 139 to 147. https://doi.org/10.5281/zenodo.10929889.

Texte intégral
Résumé :
ಶಿಕ್ಷಣವಿಲ್ಲದ ನಮ್ಮ ಗ್ರಾಮೀಣ ಜನಸಾಮಾನ್ಯರ ಮಾತೇ ಜನಪದ ಎನ್ನಬಹುದಾದರೂ ಈ ಪದ ಇನ್ನೂ ವಿಶಾಲವಾದ ಅರ್ಥವನ್ನು ಹೊಂದಿದೆ. ಮನುಕುಲದ ಮೊದಲ ಇತಿಹಾಸವೇ ಜನಪದ. ಗ್ರಾಮೀಣ ಜನತೆಯ ಮಾತುಕತೆ, ನಡವಳಿಕೆಗಳು, ಆಚಾರ ವಿಚಾರ, ಪದ್ಧತಿಗಳು, ನಂಬಿಕೆ, ಸಂಪ್ರದಾಯ, ಧಾರ್ಮಿಕತೆ, ತಾತ್ವಿಕ ಸಂಗತಿಗಳು ಮೊದಲಾದವುಗಳನ್ನು ಜನಪದ ಒಳಗೊಂಡು ಜಾನಪದವಾದರೆ, ಈ ಎಲ್ಲ ಸಮಸ್ತವನ್ನು ಒಳಗೊಂಡದ್ದು ಜಾನಪದ. ಜನಪದ ಮಹಾಕಾವ್ಯವು ಮೌಖಿಕ ಪರಂಪರೆಯಾಗಿದ್ದು ಸಾಂಸ್ಕೃತಿಕ ಪುರಾಣವೂ ಆಗಿದೆ. ಒಂದು ವಿಶಿಷ್ಟ ಭೂ ಪ್ರದೇಶ ಅಥವಾ ಬುಡಕಟ್ಟು ಪರಂಪರೆಯಲ್ಲಿ ಸೃಷ್ಟಿಯಾದ ಅನೇಕ ಕಥಾನಕಗಳಲ್ಲಿ ಮಂಟೇಸ್ವಾಮಿ ಜನಪದ ಕಾವ್ಯವು ತುಂಬಾ ಮಹತ್ವದ್ದು. ಜನಪದ ಸಾಹಿತ್ಯ ಪ್ರಕಾರಗಳಲ್ಲಿ ಜನಪದ ಕಾವ್ಯಗಳೂ ಒಂದು. ಜನಪದ ಮಹಾಕಾವ್ಯ ಆಯಾ ಕಾಲಘಟ್ಟ ಮನೋಧರ್ಮಗಳ ಹಿನ್ನೆಲೆಯಲ್ಲಿ ಹುಟ್ಟುತ್ತವೆ. ಜನಪದ
Styles APA, Harvard, Vancouver, ISO, etc.
10

ಮುಕ್ತಾ, ಪೈ., та ಶಂಕರ್ ಜ್ಯೋತಿ. "ವಚನ ಚಳುವಳಿ ಮತ್ತು ಸಮಾಜ ಪರಿವರ್ತನೆ". AKSHARASURYA JOURNAL 06, № 05 (2025): 84 to 93. https://doi.org/10.5281/zenodo.15504282.

Texte intégral
Résumé :
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯಕ್ಕೊಂದು ವಿಶಿಷ್ಟವಾದ ಸ್ಥಾನವಿದೆ. ಇದು ಎಲ್ಲಾ ವರ್ಗ, ವರ್ಣದ ಜನಸಾಮಾನ್ಯರು ತಮ್ಮ ಮನಸ್ಸಿನಲ್ಲಿದ್ದ ಭಾವನೆಗಳನ್ನು ವ್ಯಕ್ತಪಡಿಸಿದ ಅದ್ಭುತವಾದ ಭಕ್ತಿ ಸಾಹಿತ್ಯ. ಮೇಲು-ಕೀಳು, ಜಾತಿ-ಮತ, ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರೂ ಸಾಮೂಹಿಕವಾಗಿ ಪಾಲ್ಗೊಂಡ ಸಾಹಿತ್ಯ ಜಗತ್ತಿನ ಇತಿಹಾಸದಲ್ಲಿಯೇ ವಿರಳವಾಗಿದೆ. ಶರಣ ಧರ್ಮದ ವಿಶಿಷ್ಟತೆ ಎಂದರೆ ಪೂಜೆ ಪುನಸ್ಕಾರಗಳಿಗೆ, ಯಜ್ಞ ಯಾಗಾದಿಗಳಿಗೆ, ಆಚರಣೆಗಳಿಗೆ ಅವಕಾಶ ನೀಡಲಿಲ್ಲ. ವಚನಾಕಾರರು 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಹೀಗೆ ಹಲವು ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ತಂದು ಸಮಾಜದಲ್ಲಿ ನಿರ್ಲಕ್ಷಕ್ಕೆ ಒಳಗಾದ ಜನ ಸಮೂಹವನ್ನು ಒಂದೆಡೆ ಸೇರಿಸುವ ಕಾರ್ಯವನ್ನು ಮಾಡಿದರು. ವಚನ ಚಳುವಳಿಯ ದೀಪವನ್ನು ನೂರಾರು ವಚನಕಾರರು ಹಚ
Styles APA, Harvard, Vancouver, ISO, etc.
11

ಶೀಲಾದೇವಿ, ಎಸ್. ಬಿರಾದಾರ. "ವೀರಾಂಗಿಣಿ ಅಕ್ಕಮಹಾದೇವಿ". AKSHARASURYA JOURNAL 04, № 06 (2024): 152 to 156. https://doi.org/10.5281/zenodo.13725661.

Texte intégral
Résumé :
ಹಳೆಗನ್ನಡ ಸಾಹಿತ್ಯವು ರಾಜ್ಯಾಶ್ರಯದಲ್ಲಿಯೇ ಪಂಡಿತ ಪಾಮರರಿಗೆ ಮಾತ್ರ ಸಿಮಿತವಾಗಿತ್ತು. ಹನ್ನೆರಡನೆ ಶತಮಾನದಲ್ಲಿ ವಚನ ಸಾಹಿತ್ಯಯೂ ತೀರಾ ಸರಳ ಸಹಜವಾಗಿ ತಾವು ಬೋದಿಸುವುದು ಸಾಮಾನ್ಯನಿಗೂ ತಲುಪಬೇಕು ಎಂಬ ಆಶಯ ಹೊಂದಿದವರು. ಶಿವಶರಣರು ಶಿವಶರಣೆಯರ ಆಲೋಚನೆಗಳನ್ನು ಅನುಭವಗಳನ್ನು ವಿಚಾರಧಾರೆಗಳೆ ವಚನ. ಜನಸಾಮಾನ್ಯರ ಭಾಷೆಯಲ್ಲಿಯೆ ತಮ್ಮ ಭಾವನೆಗಳನ್ನು ಅನಿಸಿಕೆಗಳನ್ನು ತತ್ವಗಳನ್ನು ಹಾಗೂ ಅವರ ಆತ್ಮಾನುಭವಗಳೇ ವಚನರೂಪದಲ್ಲಿ ವ್ಯಕ್ತಪಡಿಸಿದ್ದು ವಚನ ಸಾಹಿತ್ಯ. ವಚನ ಸಾಹಿತ್ಯ ವಿಶ್ವಕ್ಕೆ ಕೊಡುಗೆಯಾಗಿ ನೀಡಿರುವುದು ಕನ್ನಡ ಸಾಹಿತ್ಯದ ಹೆಮ್ಮೆಯಾಗಿದೆ. ವಚನ ಸಾಹಿತ್ಯದಲ್ಲಿ ಕಾಣಿಸುವ ವಿಶಿಷ್ಟ ಪ್ರತಿಭೆಯ ಮಹಿಳೆ ಅಕ್ಕಮಹಾದೇವಿ. ಕನ್ನಡ ಸಾಹಿತ್ಯದ ಮೊದಲ ಕವಿಯತ್ರಿ ಮತ್ತು ವಚನಗಾರ್ತಿ, 12 ನೆಯ ಶತಮಾನದ ಪ್ರಪ್ರಥಮವಾಗಿ ಪುರುಷರಿಗೆ ಸಮಾನವಾಗಿ ನಿಂ
Styles APA, Harvard, Vancouver, ISO, etc.
12

ಲಕ್ಷ್ಮಿದೇವಿ, ಎನ್‌. "ಬಾಚಿಕಾಯಕದ ಕಾಳವ್ವೆಯ ವಚನದಲ್ಲಿ ಕಾಯಕ, ಮಾತು ಮತ್ತು ವ್ರತ ಪ್ರಜ್ಞೆ". AKSHARASURYA 04, № 03 (2024): 117 to 124. https://doi.org/10.5281/zenodo.12672873.

Texte intégral
Résumé :
ವಚನಗಳಲ್ಲಿ ನಾವು ವಿಚಾರ ಸ್ವಾತಂತ್ರ್ಯದ ಪರಾಕಾಷ್ಟೆಯನ್ನು ಕಾಣುತ್ತೇವೆ. “ಉದರ ನಿಮಿತ್ತಂ ಬಹುಕೃತ ವೇಷಂ” ಎಂಬ ಮಾತೊಂದಿದೆ. ಹೊಟ್ಟೆ ಹೊರೆಯುವುದಕ್ಕಾಗಿ ಮಾನವ ಅನೇಕ ವೇಷಗಳನ್ನು ಕೈಗೊಳ್ಳುತ್ತಾನೆ. ಆದರೆ ಶರಣರು ಹೊಟ್ಟೆ ಹೊರೆಯುವ ಕಾಯಕದ ಮೂಲಕ ದಾಸೋಹ ಸಿದ್ಧಾಂತವನ್ನು ಅನುಭಾವದ ಮೂಲಕ ಸಮಾಜಕ್ಕೆ ಸಾರಿದವರು. ಅಸಮಾನತೆಯ ಸಮಾಜದಲ್ಲಿ ಶೂದ್ರರಿಗೆ, ಅಸ್ಪೃಶ್ಯರಿಗೆ, ಹೆಣ್ಣಿಗೆ ಸಮಾನ ಸ್ಥಾನಮಾನವನ್ನು ತಂದುಕೊಟ್ಟ ಕೀರ್ತಿ ಬಸವಣ್ಣನರಿಗೆ ಸಲ್ಲುತ್ತದೆ. ೧೨ನೇ ಶತಮಾನದ ಸಮಾಜದಲ್ಲಿ ಅಕ್ಷರ ಕ್ರಾಂತಿಯ ಮೂಲಕ ಸ್ತ್ರೀ-ಪುರುಷ ಸಮಾನತೆಯನ್ನು ಪಡೆದದ್ದು ಪವಾಡವೇ ಸರಿ. ಅದರಲ್ಲೂ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಮಹಿಳೆ ಅನುಭವ ಮಂಟಪದ ಗೋಷ್ಠಿಯಲ್ಲಿ ಪುರುಷನಷ್ಟೇ ಸಮಾನತೆಯನ್ನು ಕೈಗೊಂಡಿದ್ದು ಸಮಾಜಿಕ ಕ್ರಾಂತಿ ಎನ್ನಬಹುದು. ಅವರಲ್ಲಿ
Styles APA, Harvard, Vancouver, ISO, etc.
13

ಗಿರಿಯಪ್ಪ, ಎನ್. ಜಿ. "ಕುಲಕ್ಕೆ ತಿಲಕ ನಮ್ಮ ಮಾದರ ಚೆನ್ನಯ್ಯ". AKSHARASURYA 04, № 03 (2024): 109 to 116. https://doi.org/10.5281/zenodo.12672850.

Texte intégral
Résumé :
ಮಾದರ ಚೆನ್ನಯ್ಯ 12ನೇ ಶತಮಾನಕ್ಕಿಂತಲೂ ಹಿಂದೆ ಜೀವಿಸಿದ್ದವನು. ಮಾದರ ಚೆನ್ನಯ್ಯನು ಹಲವಾರು ವಚನಗಳನ್ನು ರಚಿಸಿದ್ದಿರಬಹುದು ಆದರೆ ಚೆನ್ನಯ್ಯನು ಬರೆದ ವಚನಗಳಲ್ಲಿ ಸದ್ಯಕ್ಕೆ 10 ವಚನಗಳು ದೊರೆತಿರುತ್ತವೆ. “ಕೈಯುಳಿ ಕತ್ತಿ ಅಡಿಗೂಟಕ್ಕಡಿಯಾಗಬೇಡ” ಎಂಬುದು ಚೆನ್ನಯ್ಯನ ವಚನಗಳ ಅಂಕಿತವಾಗಿದೆ. ಚೆನ್ನಯ್ಯನು ಚೋಳ ರಾಜನ ಆಸ್ಥಾನದಲ್ಲಿ ಲಾಯದ ಕುದುರೆಗಳಿಗೆ ಹುಲ್ಲು ತರುವ ಕೆಲಸ ಮಾಡುತ್ತಿದ್ದನು. ಚೆನ್ನಯ್ಯ ಗುಪ್ತ ಶಿವಭಕ್ತನಾಗಿದ್ದನು. ಅದೇ ರೀತಿ ಚೋಳರಾಜನು ಮಹಾಶಿವ ಭಕ್ತನಾಗಿದ್ದನು. ಪ್ರತಿದಿನ ಚೋಳ ರಾಜನ ಮನೆಯಲ್ಲಿ ದಿವ್ಯವಾದ ಅನ್ನವನ್ನು ಶಿವನುಂಡು ತೃಪ್ತ ನಾಗುವವರೆಗೂ ಕಾದಿರುತ್ತಿದ್ದನು. ಒಮ್ಮೆ ಚೋಳನ ಮನೆಗೆ ಶಿವನು ಊಟ ಸವಿಯಲು ಬಂದಿರುವುದಿಲ್ಲ. ಅಂದು ಶಿವನು ಚೆನ್ನಯ್ಯನ ಮನೆಯಲ್ಲಿ ಅಂಬಲಿ ರುಚಿಸವಿದು ಸಂತೃಪ್ತನಾಗಿರುತ್
Styles APA, Harvard, Vancouver, ISO, etc.
14

ಗೀತಾ, ಎ.ಸಿ. "ಅಕ್ಕಮಹಾದೇವಿಯ ವಚನಗಳಲ್ಲಿ ಸ್ತ್ರೀ ಚಿಂತನೆಗಳು". AKSHARASURYA JOURNAL 06, № 04 (2025): 42 to 48. https://doi.org/10.5281/zenodo.15490848.

Texte intégral
Résumé :
ಹನ್ನೆರಡನೆಯ ಶತಮಾನವೆಂದರೆ; ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಸಾಹಿತ್ಯಿಕ ಕ್ಷೇತ್ರದಲ್ಲಿ ಬದಲಾವಣೆಗೊಂಡ ಕಾಲ. ಅದನ್ನು ಕ್ರಾಂತಿ ಎಂದೇ ಕರೆಯಬೇಕಾಗುತ್ತದೆ. ಹಿಂದೆ ಸಮಾಜದಲ್ಲ್ಲಿದ್ದ ಅಸಮಾನತೆ, ಶೋಷಣೆಗಳನ್ನು ಕಂಡು ಅನುಭವಿಸಿದ್ದ ಶರಣ, ಶರಣೆಯರು ಮೇಲು-ಕೀಳು ಸ್ತ್ರೀ-ಪುರುಷ ಇತ್ಯಾದಿ ಭೇದ ರಹಿತವಾದ ವರ್ಗರಹಿತವಾದ ಸಮಾಜವನ್ನು ಕಟ್ಟಲು ಪ್ರಯತ್ನಿಸಿದರು. 12ನೇ ಶತಮಾನದ ಪ್ರಸಿದ್ಧ ವಚನಕಾರ್ತಿ ಅಕ್ಕಮಹಾದೇವಿ. ಬಸವಣ್ಣನವರ ಸಮಕಾಲೀನಳಾಗಿ ಬದುಕಿದಳು. ಈಕೆ ಶಿವಶರಣೆಯಾಗಿ, ವಚನಕಾರ್ತಿಯಾಗಿ, ಚೆನ್ನಮಲ್ಲಿಕಾರ್ಜುನನ ಭಕ್ತೆಯಾಗಿ ಪ್ರಸಿದ್ಧಳಾದವಳು. ಈಕೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿ ಎಂಬ ಗ್ರಾಮದಲ್ಲಿ ನಿರ್ಮಲ ಮತ್ತು ಸುಮತಿಯರ ಮಗಳಾಗಿ ಜನಿಸಿದಳು. ಬಾಲ್ಯದಲ್ಲೇ ಶಿವಭಕ್ತಿಯನ್ನು ಹೊಂದಿದ್ದ ಈಕೆಗೆ ಶಿವಪೂಜೆ ಶಿವಧ್ಯಾನಗಳೇ
Styles APA, Harvard, Vancouver, ISO, etc.
15

ಚನ್ನವೀರಯ್ಯ. "ವಚನಗಳಲ್ಲಿನ ಜಾತಿ ಪದ್ಧತಿ ಮತ್ತು ಮೌಢ್ಯಗಳ ವಿಶ್ಲೇಷಣೆ". AKSHARASURYA 05, № 02 (2024): 135 to 142. https://doi.org/10.5281/zenodo.14035388.

Texte intégral
Résumé :
ಹನ್ನೇರಡನೇ ಶತಮಾನವನ್ನು ವಚನ ಸಾಹಿತ್ಯದ ಪರ್ವಕಾಲ ಎಂದು ಕರೆಯಬಹುದು. ಏಕೆಂದರೆ ಜನಸಾಮಾನ್ಯರ ಆಡುಭಾಷೆಯ ಮೂಲಕ ಕನ್ನಡಭಾಷೆಯನ್ನು ಉತ್ತುಂಗಕ್ಕೆ ಏರಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಬಹು ಮುಖ್ಯವಾಗಿ ಜಾತಿ, ಮತ, ವರ್ಗ, ವರ್ಣ, ಮೇಲು, ಕೀಳು ಹಾಗೂ ಸಾಮಾಜಿಕ ಪಿಡುಗುಗಳಾದ ಮೂಢನಂಬಿಕೆಗಳು ಅನಿಷ್ಟಪದ್ದತಿಗಳ ಆಚರಣೆಯಿಂದ ಸಮಾಜದ ಅಭಿವೃದ್ಧಿಗೆ ಮಾರಕವಾದುದು ಎಂಬುದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿ ಸಾಮಾಜಿಕ ಬದಾಲಾವಣೆಗೆ ಮುನ್ನುಡಿ ಬರೆದು ನವಮನ್ವಂತರಕೆ ದಾರಿ ದೀಪವಾದವರು. ಆ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದರು. ಸಾಮಾಜಿಕ ಬದಲಾಣೆಯ ಜೊತೆಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಅಂತಹ ಕೆಲವು ವಚನಕಾರರ ವಚನಗಳ ವಿಶ್ಲೇಷಣೆ ಈ ಲೇಖನದಲ್ಲಿ ಚರ್ಚಿಸಲಾಗಿದೆ.
Styles APA, Harvard, Vancouver, ISO, etc.
16

ಕುಸುಮಾಂಜಲಿ, ಎಲ್. ಸಿ. ಜಗದೀಶ್. "ವಚನ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ". AKSHARASURYA JOURNAL 06, № 04 (2025): 11 to 18. https://doi.org/10.5281/zenodo.15490805.

Texte intégral
Résumé :
ಇದರಲ್ಲಿ ವಚನ ಸಾಹಿತ್ಯ ಮತ್ತು ಸ್ತ್ರೀ ಸಂವೇದನೆಯ ಸಂಬಂದವನ್ನು ಹೇಳಲಾಗಿದೆ. ಸ್ತ್ರೀ ಸಂವೇನೆ ಎಂದರರೇನು ಮತ್ತು ಸ್ತ್ರೀವಾದಕ್ಕಿರುವ ಮೌಲ್ಯವು ಯಾವುದು ಹಾಗೂ ಸಂವೇದನೆ ಎಂದರೆ ಏನು ಎಂದು ವಿವರಿಸಲಾಗಿದೆ. ಆದರೆ ಸ್ತ್ರೀವಾದವನ್ನು ಇಲ್ಲಿ ಆನ್ವಯಿಕವಾಗಿ ಮಾತ್ರವೇ ಬಳಸಲಾಗಿದೆ. ಎಲ್ಲಿಯೂ ವಚನ ಕಾರ್ತಿಯರನ್ನು ಮತ್ತು ವಚನಗಳನ್ನು ಹೆಚ್ಚು ಉಲ್ಲೇಖಿಸಲಿಕ್ಕೆ ಹೋಗಲಿಲ್ಲ. 
Styles APA, Harvard, Vancouver, ISO, etc.
17

ಗೌಡ., ಎಂ.ಟಿ. "ವಚನ ಸಾಹಿತ್ಯ: ಮಾನವ ಮೌಲ್ಯಗಳ ಪ್ರತಿಬಿಂಬ". AKSHARASURYA JOURNAL 06, № 04 (2025): 90 to 96. https://doi.org/10.5281/zenodo.15490961.

Texte intégral
Résumé :
ವಚನವೆಂಬುದು ಕೇವಲ ಸಾಹಿತ್ಯ ಪ್ರಕಾರವಲ್ಲ ಅದು ಒಂದು ಚಳುವಳಿ ಕೂಡ ಆಗಿದೆ. ಅದನ್ನು ಸಮಾಜೋ ಧಾಶ್ರಮಿಕ ಚಳುವಳಿ, ಕಾಯಕ ಜೀವಿಗಳ, ಚಳುವಳಿ ಪರಿಪೂರ್ಣ ಚಳುವಳಿ ಎಂದು ಬಗೆಬಗೆಯಾಗಿ ಕನ್ನಡ ವಿದ್ವಾಂಸರು ಅದರ ಸ್ವರೂಪ ಮಹಿಮೆಯನ್ನು ಬಣ್ಣಿಸಿದ್ದಾರೆ. ವಚನ ಸಾಹಿತ್ಯ ಇಡೀ ಭಾರತೀಯ ಭಾಷೆಗಳಲ್ಲಿಯೇ ವಿಶಿಷ್ಟವಾದುದು. ಕನ್ನಡ ಸಾಹಿತ್ಯವು ವಿಶ್ವ ಸಾಹಿತ್ಯಕ್ಕೆ ನೀಡಿದ ಕೊಡುಗೆ ಆದಾಗಿದೆ ಎಂದರೂ ನಡೆಯುತ್ತದೆ. ಮಾನವ ಕುಲದ ಸರ್ವಾಂಗೀಣ ವಿಕಾಸಕ್ಕಾಗಿ ಶ್ರಮಿಸಿದ ಮಹಾತ್ಮರಾದ ಶಿವಶರಣರು ಅನನ್ಯ ಕೊಡುಗೆ ನೀಡಿರುವ ಜಗತ್ತಿನ ಅಪರೂಪದ ಸಾಹಿತ್ಯ ವಚನಗಳು. ವಚನಗಳು ಎಂದಾಕ್ಷಣ ನೆನಪಾಗುವುದೇ ಶಿವಶರಣರು. ಶರಣ ಪಂಥಕ್ಕೆ ಭಕ್ತಿಯ ಶಕ್ತಿಯೇ ಕೇಂದ್ರ ಬಿಂದು. ವಚನ ಸಾಹಿತ್ಯವು ಸವಿಸ್ತಾರವಾದ ಸಮುದ್ರದ ಆಳದಲ್ಲಿನ ಮುತ್ತು, ರತ್ನಗಳನ್ನು ಹೆಕ್ಕಿ ಅಳೆದು, ತೂಗಿ ಸ
Styles APA, Harvard, Vancouver, ISO, etc.
18

ರಾಜಕುಮಾರ, ಎಂ. ಸಿಂಧೆ. "ಡಾ. ಬಿ. ಆರ್. ಅಂಬೇಡ್ಕರ್‌ ಅವರ ಬದುಕಿನಿಂದ ಕಲಿಯಬೇಕಾದ ಸಂದೇಶ". AKSHARASURYA JOURNAL 06, № 01 (2025): 12 to 21. https://doi.org/10.5281/zenodo.14961338.

Texte intégral
Résumé :
ಕಲಿಕೆ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿದೆ. ಅದು ನಿತ್ಯ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಹುಟ್ಟಿನಿಂದ ಸಾವಿನವರೆಗೂ ಜೀವನುದ್ದಕ್ಕೂ ವಿವಿಧ ಜ್ಞಾನಶಾಖೆಗಳ ಮೂಲಕ ಜೀವನಾನುಭವ ಪಡೆಯುತ್ತ, ಹಳೆ ಬೇರು ಹೊಸ ಚಿಗುರು ಎಂಬಂತೆ ಗುರುಹಿರಿಯರ ನಡೆ-ನುಡಿ, ಆಚಾರ ವಿಚಾರಗಳನ್ನು ಅನುಲಕ್ಷಿಸುತ್ತ, ಭವಿಷ್ಯದ ಬದುಕಿನ ಅಗತ್ಯತೆಗಳನ್ನು ಕಲ್ಪಿಸಿಕೊಳ್ಳುತ್ತ ಹಳೆಯ ಮತ್ತು ಹೊಸದರ ಸಮ್ಮಿಶ್ರಣದೊಂದಿಗೆ ಸುಂದರ ಬದುಕು ಕಟ್ಟಿಕೊಳ್ಳಲು ‘ಕಲಿಕೆ’ ಎಂಬ ಪ್ರಕ್ರಿಯೆ ನಡೆಯುತ್ತಲೇ ಸಾಗುತ್ತದೆ.‘ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ’ ಯಿಂದ ಆರಂಭವಾಗಿ ಕಲಿಕೆ ಮುಂದುವರೆಯುತ್ತದೆ. ‘ದೇಶ ಸುತ್ತು ಇಲ್ಲವೇ ಕೋಶ ಓದು’ ಎಂಬಂತೆ ಸಾಹಿತ್ಯ, ಕಾವ್ಯ, ಪುರಾಣ, ಶಾಸ್ತ್ರ, ಕಲೆ ಹೀಗೆ ನೂರಾರು ಪ್ರಕಾರದ ಗ್ರಂಥಗಳ ಅಧ್ಯ
Styles APA, Harvard, Vancouver, ISO, etc.
19

ಗುಂಡಣ್ಣ, ಪಿ. "ಬೌದ್ಧ ಬಿಕ್ಕು ಮತ್ತು ದೇವರಗುಡ್ಡರ ದೀಕ್ಷೆಯ ವಿಧಾನಗಳ ಅವಲೋಕನ". AKSHARASURYA JOURNAL 06, № 03 (2025): 68 to 78. https://doi.org/10.5281/zenodo.15344335.

Texte intégral
Résumé :
ಯಾವುದೇ ಒಂದು ಮತ, ಧರ್ಮದ ಅಸ್ತಿತ್ವ ಉಳಿದಿರುವುದು ಅದನ್ನು ಅನುಸರಿಸುವ ಪರಂಪರೆಯಿಂದ ಪರಂಪರೆಗೆ ಸಾಗಿಸುವ ಅನುಯಾಯಿಗಳ ಮೇಲೆ. ಇವರ ಬಗ್ಗೆ ತಿಳಿದುಕೊಳ್ಳದೆ ಮತ, ಧರ್ಮಗಳ ಸತ್ವವನ್ನು ಗ್ರಹಿಸಲಾಗುವುದಿಲ್ಲ. ಮೌಖಿಕ ಪರಂಪರೆಯಲ್ಲಿ ಸಾಗಿ ಬಂದಿರುವ ಕಥನ, ಕಾವ್ಯ, ಲಾವಣಿ ಮೊದಲಾದವುಗಳು ಕಾಲಾನಂತರದಲ್ಲಿ ಭಿನ್ನ ಪ್ರದೇಶ, ಸಂದರ್ಭಗಳಲ್ಲಿ ಮಾರ್ಪಾಟುಗೊಂಡು ಮೂಲದಲ್ಲಿ ಇಲ್ಲದ ವಿಷಯಾಂಶಗಳನ್ನು, ಘಟನೆಗಳನ್ನು ಸೇರಿಸಿ ರೂಪುಗೊಂಡಿರುವ ಸಾಧ್ಯತೆ ದಟ್ಟವಾಗಿದೆ. ಆದರೆ ನಿಯಮ, ಆಚರಣೆಗಳು ಎಷ್ಟೇ ತಲೆಮಾರುಗಳು ದಾಟಿ ಬಂದರು ಹೆಚ್ಚು ಬದಲಾವಣೆಗೊಳಿಸದೆ ಅನುಸರಿಸಲಾಗಿರುತ್ತದೆ. ಮಂಟೇಸ್ವಾಮಿ, ಸಿದ್ದಪ್ಪಾಜಿ ಜಾತ್ರೆಗಳಲ್ಲಿ ಮಾಂಸಹಾರ, ಭಂಗಿ ಸೇವನೆಯ ಪದ್ದತಿ ಇದೆ. ಮಲೆಯ ಮಾದಯ್ಯನ ನೆಲೆಯಲ್ಲಿ ಹೆಣ್ಣು ಗಂಡಿನ ಸಂಬಂಧಕ್ಕಾಗಲಿ, ಮಾಂಸ-ಮದ್ಯಗಳ ಸೇವನೆಗಾಗಲಿ ಅವ
Styles APA, Harvard, Vancouver, ISO, etc.
20

ವಿಜಯಲಕ್ಷ್ಮೀ, ಸುಬ್ಬರಾವ್, та ಎಂ. ಭೈರಪ್ಪ ಕುಪ್ಪನಹಳ್ಳಿ. "ಗೀತನಾಟಕ ಪ್ರವೇಶ: ಸಂಸ್ಕೃತ ನಾಟಕ ಮತ್ತು ನಾಟಕದಲ್ಲಿ ಸಂಗೀತ". AKSHARASURYA 05, № 01 (2024): 01 to 32. https://doi.org/10.5281/zenodo.13870268.

Texte intégral
Résumé :
ಬಹುಮುಖ ಪ್ರತಿಭೆಯ ಡಾ.ವಿಜಯಾ ಸುಬ್ಬರಾಜ್ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಾಯಿ ಲಕ್ಷ್ಮಿ, ಹಾಗೂ ತಂದೆ ಸೀತಾರಾಂ ಅವರು. ಓದಿದ್ದು ಬೆಂಗಳೂರಿನಲ್ಲೇ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಎಂ.ಎ ಮತ್ತು ಎಲ್.ಎಲ್.ಬಿ. ಪದವೀಧರೆಯಾದವರು. ಫ್ರೆಂಚ್ ಭಾಷೆಯ ಡಿಪ್ಲೊಮ ಪದವಿಯನ್ನೂ ಹಿಂದಿ ಸಾಹಿತ್ಯರತ್ನ ಪದವಿಯನ್ನೂ ಅಧ್ಯಯನ ಮಾಡಿದವರು. ಎಂ.ಇ.ಎಸ್. ಕಾಲೇಜಿನಲ್ಲಿ ಸುದೀರ್ಘ ಕಾಲ ಪ್ರಾಧ್ಯಾಪಕ ಹುದ್ದೆ ನಿರ್ವಹಿಸುತ್ತಲೇ ನಿರಂತರವಾಗಿ ಹಲವು ಮಾಧ್ಯಮಗಳಲ್ಲಿ ತಮ್ಮ ಪ್ರಯೋಗಶೀಲತೆಯನ್ನು ದುಡಿಸಿಕೊಂಡವರು, ಕಥೆ, ಕವಿತೆ, ನಾಟಕ, ಕಾದಂಬರಿ, ಪ್ರವಾಸ ಕಥನ, ಅನುವಾದ, ವೈಚಾರಿಕ ಬರೆಹ, ವಿಮರ್ಶೆ, ಸಂಶೊಧನೆ ಮುಂತಾದ ವಿಭಿನ್ನ ಪ್ರಕಾರಗಳಲ್ಲಿ ಅವರ ಶಕ್ತಿ, ಪ್ರತಿಭೆಗಳು ಬೆಳಗಿವೆ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಓದುವ ಬರೆಯುವ ಹವ್ಯಾಸ ರೂಢಿಸಿಕ
Styles APA, Harvard, Vancouver, ISO, etc.
21

ಸಂತೋಷ್‌, ಕುಮಾರ್‌ ಆರ್‌.ಎಂ. "ಮಂಕುತಿಮ್ಮನ ಕಗ್ಗ: ಆದರ್ಶ ಮತ್ತು ನೈತಿಕ ಮೌಲ್ಯಗಳ ಸಮನ್ವಯ". AKSHARASURYA 06, № 02 (2025): 31 to 44. https://doi.org/10.5281/zenodo.15123973.

Texte intégral
Résumé :
ಡಿ.ವಿ.ಜಿ.ಯವರ ʼಮಂಕುತಿಮ್ಮನ ಕಗ್ಗ’ವು ಕನ್ನಡ ಸಾಹಿತ್ಯದ ಅನನ್ಯ ಪಂಕ್ತಿಯು, ತತ್ವಪೂರ್ಣವೂ, ಜೀವನಕ್ಕೆ ದಾರಿದೀಪವಾಗಿದೆ. ಡಿ.ವಿ.ಜಿ ಅವರು ರಚಿಸಿದ ಈ ಕೇವಲ ಕಾವ್ಯಕೃತಿಯಲ್ಲ, ಜೀವನದ ಸಾರ್ಥಕತೆಯನ್ನು ಅರಿತುಕೊಳ್ಳಲು ಮಾರ್ಗದರ್ಶನ ನೀಡುವ ತತ್ತ್ವಚಿಂತನೆಯ ಗ್ರಂಥವಾಗಿದೆ. ಮಂಕುತಿಮ್ಮನ ಕಗ್ಗದಲ್ಲಿ ವ್ಯಕ್ತವಾಗಿರುವ ಚಿಂತನಶೀಲತೆ, ತಾತ್ತ್ವಿಕ ದೃಷ್ಟಿಕೋನ ಹಾಗೂ ಆಧ್ಯಾತ್ಮಿಕ ಅರಿವು, ಮಾನವ ಮೌಲ್ಯಗಳನ್ನು ಪ್ರತಿಪಾದಿಸುವ ಸಿದ್ಧಾಂತಗಳಾಗಿವೆ.ಈ ಕಾವ್ಯಕೃತಿಯಲ್ಲಿ ಜೀವನದ ನೈಜತೆಯನ್ನು ಮನಗಾಣಿಸುವಂತೆ ಮಾಡುವ ತತ್ವೋಪದೇಶಗಳು ಸಂಕಲಿತವಾಗಿವೆ. ಜೀವನದಲ್ಲಿ ಏರಿಳಿತಗಳು ಸಹಜ, ಆದರೆ ಮಾನವನ ಹೊಣೆಗಾರಿಕೆ, ಶ್ರದ್ಧೆ, ತಾಳ್ಮೆ ಮತ್ತು ನೈತಿಕತೆ ಅವಶ್ಯಕವೆಂಬ ವಿಚಾರವನ್ನು ಕವಿ ಬಹಳ ಸರಳ ಹಾಗೂ ಗಂಭೀರ ರೀತಿಯಲ್ಲಿ ಪ್ರತಿಪಾದಿಸುತ್ತಾರೆ. ಆಧ್ಯಾ
Styles APA, Harvard, Vancouver, ISO, etc.
22

ಮಂಜುನಾಥ, ಆರ್. ಪಿ., та ವಿ. ಬೆಟ್ಟಕೋಟೆ ನಾಗೇಶ್. "ಕನ್ನಡ ರಂಗಭೂಮಿಗೆ ನಾಟ್ಯ ಕಲಾಪ್ರಪೂರ್ಣ 'ಬಳ್ಳಾರಿ ರಾಘವ'ರ ಕೊಡುಗೆ". AKSHARASURYA 04, № 01 (2024): 18 to 28. https://doi.org/10.5281/zenodo.11162107.

Texte intégral
Résumé :
ಬಳ್ಳಾರಿಯ ರಾಘವರು ಈ ನಾಡು ನುಡಿ ಕಂಡ ಅದ್ಭುತವಾದ ಪ್ರತಿಭೆ. ಅವರು ಎರಡು ರಾಜ್ಯಗಳ ಸಾಂಸ್ಕೃತಿಕ ಲೋಕದ ಸಂಪತ್ತು ಎನಿಸಿದ್ದಾರೆ. ಕೇವಲ ತಮ್ಮ ಅಭೂತಪೂರ್ವ ಅಭಿನಯ ಚಾತುರ್ಯದ ಮೂಲಕವೇ ಇಡೀ ವಿಶ್ವದ ಗಮನ ಸೆಳೆದ ಧೀಮಂತ ಕಲಾ ಚೇತನ. ಇಂತಹ ಅಗಮ್ಯ ಚೇತನವೊಂದು ನಮ್ಮ ಈ ಗಡಿ ಭಾಗದಲ್ಲಿ ಆಗು ಹೋಗಿರುವುದು ನಮ್ಮೆಲ್ಲರ ಸುದೈವವೇ ಸರಿ. ಹುಟ್ಟಿದ್ದು ಅನಂತಪುರ ಜಿಲ್ಲೆಯ ತಾಡಪತ್ರಿಯಲ್ಲಾದರೂ ತಮ್ಮ ಬೆಳವಣಿಗೆಯನ್ನು ಕಂಡು ಕೊಂಡಿದ್ದೆಲ್ಲಾ ಬಳ್ಳಾರಿಯ ತಮ್ಮ ಮಾವನಾವರಾದ ಖ್ಯಾತ ವಕೀಲ, ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಾಮಾಚಾರ್ಯರ ಒಡನಾಟದಲ್ಲಿಯೇ ಸಾಗಿತು. ಮೊದ ಮೊದಲು ವಕೀಲ ವೃತ್ತಿಯಲ್ಲಿ ಪಾಂಡಿತ್ಯಗಳಿಸಲು ಬಳ್ಳಾರಿಗೆ ಬಂದು ನಾಟಕ ಕಲೆಯಲ್ಲಿ ನೈಪುಣ್ಯತೆಯನ್ನು ಗಳಸಿದರು. ಇದಕ್ಕೆ ಮೂಲ ಪ್ರೇರಣೆ ಮಾವನವರಾದ ಧರ್ಮಾವರಂ ರಾಮಕೃಷ್ಣಮಾಚಾರ್ಯರು ಹಾ
Styles APA, Harvard, Vancouver, ISO, etc.
23

ಕಮಲಾ, ಹಂಪನಾ, та ಎಂ. ಭೈರಪ್ಪ ಕುಪ್ಪನಹಳ್ಳಿ. "ಜೈನ ದೃಷ್ಟಿಯಲ್ಲಿ ಸ್ತ್ರೀ". AKSHARASURYA 03, № 06 (2024): 01 to 18. https://doi.org/10.5281/zenodo.11126790.

Texte intégral
Résumé :
ಕನ್ನಡ ಮಹಿಳಾ ಸಾಹಿತ್ಯ ಜಗತ್ತಿನಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದವರಲ್ಲಿ ಡಾ.ಕಮಲಾ ಹಂಪನಾ ಅವರು ಪ್ರಮುಖರಾಗಿದ್ದಾರೆ. ಕಥೆ, ಕಾವ್ಯ, ನಾಟಕ, ಕಾದಂಬರಿ ಕ್ಷೇತ್ರಗಳಲ್ಲಿ ಗಣನೀಯ ಕೃಷಿ ಮಾಡಿರುವ ಹಲವಾರು ಲೇಖಕಿಯರು ನಮಗೆ ಸಿಗುತ್ತಾರೆ. ಆದರೆ ಸಂಶೋಧನೆ, ಸಂಪಾದನೆಯಂಥ ವಿದ್ವತ್ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಮಹತ್ತರವಾದ ಕಾಣ್ಕೆಯನ್ನು ನೀಡಿದ ಲೇಖಕಿಯರು ಅಪರೂಪ. ಅಂತಹ ಅಪರೂಪದ ಸಂಶೋಧಕಿಯರಲ್ಲಿ ಕಮಲಾ ಹಂಪನಾ ಅವರು ಅಗ್ರಗಣ್ಯರಾಗಿ ಕಾಣುತ್ತಾರೆ. ಸಾಮಾಜಿಕ ತಾರತಮ್ಮ ಹಾಗೂ ಲಿಂಗ ತಾರತಮ್ಯಗಳ ನಡುವೆ ಹಲವಾರು ಸವಾಲುಗಳನ್ನು ದಾಟಿಕೊಂಡು ಅಧ್ಯಯನ ನಡೆಸಿ, ಬೋಧನೆ-ಸಂಶೋಧನೆಯ ಬೇಸಾಯದಲ್ಲಿ ಗುರುತರವಾದ ಸಾಧನೆಗೈದು ಮಾದರಿ ಮಹಿಳೆ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಡಾ.ಕಮಲಾ ಹಂಪನಾ ಅವರು ಬೆಂಗಳೂರು ಜಿಲ್ಲೆ ದೇವನಹಳ್ಳಿಯಲ್ಲಿ ೧
Styles APA, Harvard, Vancouver, ISO, etc.
24

Lohit, P. "ಸ್ತ್ರೀ ಜಾತಿಗೆ ದಾರಿದೀಪ ಮಹಾದೆೀವಿ". IJIRMPS Volume 6, Issue 6 (2018). https://doi.org/10.5281/zenodo.1490566.

Texte intégral
Résumé :
ಅಕ್ಕಮಹಾದೇವಿ ಪರಮ ಶಿವಭಕ್ತೆ. ಆಕೆ ಶಿವನೊಂದಿಗೆ ಸತಿ-ಪತಿ ಭಾವ ಹೊಂದಿದ್ದ ಭಕ್ತ ಶಿರೋಮಣಿ. ಈ ಕಾರಣದಿಂದ ಲೌಕಿಕವಾಗಿ ವಿವಾಹಬಂಧನಕ್ಕೆ ಒಳಪಡುವ ಆಸೆ ಆಕೆಗಿರಲಿಲ್ಲ. ಆದರೆ ಬಲವಂತ ಮಾಘಸ್ನಾನ ಆಕೆಯ ಧೃತಿ ಕೆಡಿಸಿತು. ಈ ನಿಮಿತ್ತವಾಗಿ ಅಕ್ಕ ಮಹಾದೇವಿಯು ಸ್ವಗೃಹವನ್ನು ತ್ಯಜಿಸಿ ಶ್ರೀಶೈಲವನ್ನು ಸೇರಿ ಪರಶಿವನಲ್ಲಿ ಐಕ್ಯವಾದಳು. ಈ ಪರಮ ಸಾಧ್ವಿ ಅನುಕರಣೀಯ ವ್ಯಕ್ತಿ.
Styles APA, Harvard, Vancouver, ISO, etc.
25

ಕೆ., ರುಜುವಾನ್. "ಚಿತ್ರದುರ್ಗ ಪರಿಸರದ ಚಕ್ಕೆ ಭಜನೆ: ವೈಶಿಷ್ಟ್ಯತೆಗಳು". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 1 березня 2024, 67–73. http://dx.doi.org/10.59176/kjksp.v3i1.2339.

Texte intégral
Résumé :
ಜಾನಪದ ಎನ್ನುವುದು ಕೇವಲ ಹಾಡಲ್ಲ. ಅದರಲ್ಲಿ ದೈವದ ಮೇಲಿನ ಭಕ್ತಿ-ಧ್ಯಾನ, ಚಿಂತನೆಯಷ್ಟೆ ಇರುವುದಿಲ್ಲ. ಅದರೊಡಲಲ್ಲಿ ಧಾರ್ಮಿಕ ಆಚರಣೆ, ಸಾಮಾಜಿಕ ಪ್ರಜ್ಞೆ, ಕಲೆ, ನಡೆ-ನುಡಿ, ಮೊದಲಾದವುಗಳನ್ನೆಲ್ಲಾ ಒಳಗೊಂಡಿರುತ್ತದೆ. ಜನಪದರ ಒಡಲಾಳದಲ್ಲಿ ಹುಟ್ಟಿಕೊಂಡAತಹ ಕಲೆಗಳು, ನಾಗರೀಕತೆಗಳ ಯುಗಮಾನಗಳಷ್ಟೇ ಪುರಾತನವಾದವುಗಳು. ಮನುಷ್ಯನಿಗೆ ಗಾಳಿ, ಬೆಳಕು, ನೀರು, ಆಹಾರಗಳಷ್ಟೇ ಕಲೆಗಳ ಅವಶ್ಯಕತೆ ಹಾಗೂ ಅನಿವಾರ್ಯತೆ ಕಂಡುಬAದಿರಬೇಕು. ಅಂತೆಯೇ ಅನಾದಿಕಾಲದಿಂದಲೂ ಇಂದಿನವರೆಗೂ ಜನಪದಕಲೆಗಳು ಜನಪದರ ಉಸಿರಾಗಿ ಜೀವಂತವಾಗಿ ಉಳಿದುಬಂದಿದೆ. ಈ ದೃಷ್ಟಿಯಿಂದ ಮಾನವನ ಚರಿತ್ರೆಯೆಂದರೆ ಒಂದರ್ಥದಲ್ಲಿ ಅವನು ಉಳಿಸಿ ಬೆಳೆಸಿಕೊಂಡು ಬಂದಿರುವ ಮೌಲಿಕವಾದ ಈ ನಾಡಿನ ಸಾಹಿತ್ಯ, ಸಂಸ್ಕೃತಿ ಕಲೆಗಳ ಇತಿಹಾಸವೇ ಆಗಿದೆ ಎನ್ನಬೇಕು. ಜನಪದ ಕಲೆಗಳು ಒಂದು ನಾಡಿನ ಇಲ್ಲವೆ ಒಂದ
Styles APA, Harvard, Vancouver, ISO, etc.
26

ಹೆಚ್. ಎಸ್., ಸಂತೋಷ. "ಮಹಿಳಾ ತತ್ವಪದಕಾರ್ತಿಯರ ಅನುಭಾವದ ನೆಲೆ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 30 вересня 2023, 124–31. http://dx.doi.org/10.59176/kjksp.v2i2.2308.

Texte intégral
Résumé :
ಇತಿಹಾಸದಲ್ಲಿ ಹೆಚ್ಚು ಚರ್ಚೆಗೆ ಒಳಪಟ್ಟ ಪಾತ್ರ ಮಹಿಳೆಯ ಪಾತ್ರ ಮಹಿಳೆಯರ ಬಗೆಗೆ ಶತ ಶತಮಾನಗಳಿಂದಲೂ ಪ್ರಾಚೀನ ಕನ್ನಡ ಸಾಹಿತ್ಯಗಳಿಂದ ಹಿಡಿದು ಆಧುನಿಕ ಕಾಲಘಟ್ಟದವರೆಗೂ ವಿಭಿನ್ನ ನೆಲೆಯಲ್ಲಿ ಚರ್ಚೆ ಮಾಡಲಾಗುತ್ತಿದೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಚನ, ಸ್ವರವಚನ, ಕೀರ್ತನೆ, ತತ್ವಪದಗಳು ವಿಭಿನ್ನ ಆಶಯಗಳೊಂದಿಗೆ ಬೆಳೆದು ಬಂದಿದೆ. ಅದರಲ್ಲೂ ಸಾಹಿತ್ಯವೇ ಸೃಷ್ಟಿಯಾಗಿಲ್ಲ ಎಂಬ ಕಾಲದಲ್ಲಿ ಹದಿನಾರರಿಂದ ಇಪ್ಪತ್ತನೇಯ ಶತಮಾನದ ಅವಧಿಯಲ್ಲಿ ತತ್ವಪದ ಸಾಹಿತ್ಯವು ಹುಟ್ಟಿ ಸಮಾಜದ ಜನಮಾನಸದಲ್ಲಿ ಆಳವಾಗಿ ಬೇರೂರಿತು. ವಚನಗಳ ಸಮಾಜಮುಖಿಯ ಆಯಾಮ, ಕೀರ್ತನೆಗಳ ಭಕ್ತಿಯ ಆಯಾಮ, ಸ್ವರ ವಚನಗಳ ಅನುಭಾವಿಕ ಆಯಾಮಗಳ ಪ್ರಭಾವ ಪ್ರೇರಣೆಯಿಂದ ತತ್ವಪದ ಸಾಹಿತ್ಯವು ಹುಟ್ಟಿತು. ಪರಮಾತ್ಮನ ಬಗೆಗಿನ ಅನುಭವ ಈ ಪದ್ಯಗಳಲ್ಲಿ ವ್ಯಕ್ತ ಗೊಂಡಿರುವುದರಿಂದ ಇವಕ್ಕೆ ಅನುಭ
Styles APA, Harvard, Vancouver, ISO, etc.
Nous offrons des réductions sur tous les plans premium pour les auteurs dont les œuvres sont incluses dans des sélections littéraires thématiques. Contactez-nous pour obtenir un code promo unique!