Pour voir les autres types de publications sur ce sujet consultez le lien suivant : ಸತ್ಯ.

Articles de revues sur le sujet « ಸತ್ಯ »

Créez une référence correcte selon les styles APA, MLA, Chicago, Harvard et plusieurs autres

Choisissez une source :

Consultez les 31 meilleurs articles de revues pour votre recherche sur le sujet « ಸತ್ಯ ».

À côté de chaque source dans la liste de références il y a un bouton « Ajouter à la bibliographie ». Cliquez sur ce bouton, et nous générerons automatiquement la référence bibliographique pour la source choisie selon votre style de citation préféré : APA, MLA, Harvard, Vancouver, Chicago, etc.

Vous pouvez aussi télécharger le texte intégral de la publication scolaire au format pdf et consulter son résumé en ligne lorsque ces informations sont inclues dans les métadonnées.

Parcourez les articles de revues sur diverses disciplines et organisez correctement votre bibliographie.

1

ಸುಪ್ರಿಯಾ, ಮಲಶೆಟ್ಟಿ. "ವಚನಗಳಲ್ಲಿ ಖಗೋಳ ವಿಜ್ಞಾನ". AKSHARASURYA JOURNAL 04, № 04 (2024): 84 to 91. https://doi.org/10.5281/zenodo.13284072.

Texte intégral
Résumé :
ವಿಜ್ಞಾನ ಮತ್ತು ಆಧ್ಯಾತ್ಮಿಕತೆಯು ಒಂದೇ ಸತ್ಯವನ್ನು ಎರಡು ರೀತಿಯಲ್ಲಿ ಕಾಣುವುದು. ಬ್ರಹ್ಮಾಂಡ ಮತ್ತು ಪಿಂಡಾಂಡ, ಬಾಹ್ಯ ಜಗತ್ತು ಮತ್ತು ಆಂತರಿಕ ಜಗತ್ತು ಎಂಬ ಎರಡು ಜಗತ್ತುಗಳಿವೆ. ಅನುಭವದಿಂದ ಈ ಎರಡು ಕ್ಷೇತ್ರಗಳಿಂದಲೂ ನಮಗೆ ಸತ್ಯ ದೊರಕುವುದು. ಆಂತರಿಕ ಅನುಭವದಿಂದ ಸಂಗ್ರಹಿಸಿರುವುದೇ ಮನಶಾಸ್ತ್ರ , ತತ್ವಶಾಸ್ತ್ರ ಮತ್ತು ಧರ್ಮ. ಬಾಹ್ಯ ಜಗತ್ತಿನಿಂದ ನಮಗೆ ಭೌತವಿಜ್ಞಾನಗಳು ದೊರಕುವವು. ಪೂರ್ಣವಾದ ಸತ್ಯವು ಎರಡು ಕ್ಷೇತ್ರಗಳಿಂದ ಬರುವ ಅನುಭವಗಳಿಗೆ ವಿರೋಧವಿಲ್ಲದೆ ಇರಬೇಕು. ಪಿಂಡಾಂಡವು ಬ್ರಹ್ಮಾಂಡಕ್ಕೆ ಪ್ರಮಾಣವಾಗಿರಬೇಕು. ಸತ್ಯವು ಯಾವ ಕ್ಷೇತ್ರಕ್ಕೆ ಸೇರಿದ್ದರು ಪರಸ್ಪರ ವಿರೋಧಗಳಿರುವುದಿಲ್ಲ ಆಂತರಿಕ ಸತ್ಯಕ್ಕೂ ಬಾಹ್ಯ ಸತ್ಯಕ್ಕೂ ಪರಸ್ಪರ ವಿರೋಧವಿಲ್ಲ. 
Styles APA, Harvard, Vancouver, ISO, etc.
2

ಭೀಮಣ್ಣ, ಎಚ್. "ಚಂಚಲ ಮನಸ್ಸು". AKSHARASURYA JOURNAL 04, № 04 (2024): 151 to 156. https://doi.org/10.5281/zenodo.13284183.

Texte intégral
Résumé :
ಮನಸ್ಸು ಹರಿಯುವ ನೀರು ಇದ್ದಹಾಗೆ ಸದಾ ಕಾಲ ಚಲಿಸುತ್ತದೆ. ಮನಸ್ಸನ್ನು ಕುರಿತು ಹಲವು ಜ್ಞಾನಿಗಳು, ಶರಣರು ತಮ್ಮದೇ ಆದ ದೃಷ್ಟಿಕೋನದಲ್ಲಿ ವಿವರಿಸಿದ್ದಾರೆ. ಯಾರು ತಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುತ್ತಾರೋ ಅವರು ಈ ಜಗದ ಯಾವ ಶಕ್ತಿಯನ್ನು ಗೆಲ್ಲಬಲ್ಲರು ಚಂಚಲವಾದ ಮನಸ್ಸು ಮನುಷ್ಯನ ಸುಖವನ್ನು ಹಾಳುಮಾಡುತ್ತದೆ. ಹುಡುಕಾಟದ ಹಾದಿಯಲ್ಲಿ ನೆಮ್ಮದಿಯೂ ಕೂಡ ಕಳೆದುಕೊಳ್ಳುತ್ತದೆ. ಯಾವುದು ಸತ್ಯ ಯಾವುದು ಸುಳ್ಳು ಎಂದು ಅರಿಯದೆ ಕೊನೆಗೆ ತನ್ನತನವನ್ನು ಕಳೆದುಕೊಂಡು ಹಾಳಾಗುತ್ತದೆ. ಹೀಗೆ ಬಲ್ಲವರು ಮನಸ್ಸನ್ನು ಕುರಿತು ಅಧ್ಯಯನ ಮಾಡಿ ಮನುಷ್ಯನ ಸುಖ ಶಾಂತಿ ಕಾಪಾಡುವಲ್ಲಿ ಮನಸ್ಸು ಹರಿ ಬಿಟ್ಟರೆ ಮನುಷ್ಯ ಜೀವನವೇ ಹಾಳಾಗುತ್ತದೆ ಎಂದು ಹೇಳುತ್ತಾರೆ. ಯಾರು ತಮ್ಮ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುತ್ತಾರೋ ಅವರು ಮಹಾನ್ ವ್ಯಕ್ತಿಗಳಾಗುತ್ತ
Styles APA, Harvard, Vancouver, ISO, etc.
3

ತೇಜಾವತಿ, ಕೆ. "ಕುವೆಂಪುರವರ ಜಲಗಾರ ನಾಟಕ". AKSHARASURYA JOURNAL 05, № 06 (2025): 83 to 91. https://doi.org/10.5281/zenodo.14788756.

Texte intégral
Résumé :
ರಾಷ್ಟ್ರಕವಿ ಕುವೆಂಪುರವರು ಕನ್ನಡದ ಮೇರು ಕವಿ, ಅಗ್ರಮಾನ್ಯ ಕವಿ, ಕಾದಂಬರಿಕಾರ, ವಿಮರ್ಶಕ, ಉತ್ತಮ ಚಿಂತಕರೂ ಆಗಿದ್ದರು. ಇವರು ಅನೇಕ ನಾಟಕಗಳನ್ನು ಬರೆದಿದ್ದಾರೆ. 20ನೇಯ ಶತಮಾನದ ಶ್ರೇಷ್ಠಕವಿ, ವರಕವಿ ಬೇಂದ್ರೆಯವರಿಂದ “ಯುಗದಕವಿ ಜಗದಕವಿ” ಎನಿಸಿಕೊಂಡವರು. ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದವರು ಕುವೆಂಪುರವರು.ಜಲಗಾರ ನಾಟಕ ಆರಂಭಗೊಳ್ಳುವುದು ಆಗಷ್ಟೇ ಸೂರ್ಯ ಮೂಡುವ ಹೊತ್ತಿನಲ್ಲಿ ಇನ್ನೂ ರಂಗದ ಮೇಲೆಲ್ಲಾ ಮಬ್ಬು ಮಬ್ಬು ಕತ್ತಲು, “ಮೂಡಿ ಬಾ, ಮೂಡಿ ಬಾ, ಜಗದ ಕಣ್ಣೆ ಬಾ, ಬಾ” ಎಂದು ಬೆಳಗನ್ನು ಸ್ವಾಗತಿಸುವ ಹಾಡಿನ ಮೂಲಕ ನಾಟಕ ಆರಂಭಗೊಳ್ಳುತ್ತದೆ. ಜಲಗಾರ ನಾಟಕದಲ್ಲಿ ಇರುವುದು ಎರಡು ದೃಶ್ಯಗಳು. ಮೊದಲನೆಯದು “ದೇವಸ್ಥಾನಕ್ಕೆ ಜನರು ಹೋಗುತ್ತಿರುವುದು” ಎರಡನೆಯದು “ದೇವಸ್ಥಾನದಿಂ
Styles APA, Harvard, Vancouver, ISO, etc.
4

ಗೀತಾಲಕ್ಷ್ಮಿ, ಎಸ್.ಎನ್. "ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು". AKSHARASURYA JOURNAL 06, № 04 (2025): 27 to 41. https://doi.org/10.5281/zenodo.15490828.

Texte intégral
Résumé :
ʼʼವಚನಕಾರರು ಮೌಲ್ಯಗಳಿಗಾಗಿಯೇ ಬದುಕಿದವರು”. ನೆಡೆ-ನುಡಿಯ ಸಮನ್ವಯದ ಅಗತ್ಯತೆಯನ್ನು ಸಾರಿದ್ದಾರೆ. ನಮ್ಮ ನುಡಿಯು ಸತ್ಯಶುದ್ಧವಾಗಿರಬೇಕು, ಪಾರದರ್ಶಕವಾಗಿರಬೇಕು, ಪ್ರಕಾಶಮಾನವಾಗಿರಬೇಕು. ಮನವನ್ನು ಮುಟ್ಟುವಂತಿರಬೇಕು. ಸಕಲಜೀವಿಗಳಲ್ಲಿ ಮನುಷ್ಯ ಮಾತ್ರ ಜೀವನ ಮೌಲ್ಯಗಳನ್ನಳವಡಿಸಿಕೊಳ್ಳಲು ಸಾಧ್ಯ. ಮೌಲ್ಯಗಳಿಂದಲೇ ಜೀವನ ಸಾರ್ಥಕವಾಗುತ್ತದೆ. ಈ ಹಿನ್ನಲೆಯಲ್ಲಿ ಮೌಲ್ಯಗಳು, ಬದುಕಿಗೆ ಅನಿವಾರ್ಯವಾಗಿವೆ. ಸತ್ಯ, ಅಹಿಂಸೆ, ನಿಸ್ವಾರ್ಥ, ಪ್ರೀತಿ, ತ್ಯಾಗ, ಸ್ನೇಹ, ಪ್ರಾಮಾಣಿಕತೆ ಇಂತಹ ಅನೇಕ ಜೀವನ ಮೌಲ್ಯಗಳನ್ನು ವಚನಕಾರರಲ್ಲಿ ಕಾಣಬಹುದಾಗಿದೆ. ಕಾಯಕ, ದಾಸೋಹ, ಸಾಮಾಜಿಕನ್ಯಾಯದಂತಹ ಮೌಲ್ಯಗಳನ್ನು ಶರಣರು ಹೊಸದಾಗಿ ಕಟ್ಟಿಕೊಟ್ಟಿದ್ದಾರೆ. ಜೀವ ಎಷ್ಟು ಮುಖ್ಯವೋ ಜೀವನವೂ ಅಷ್ಟೇ ಮುಖ್ಯ, ಜೀವನ ಎಷ್ಟು ಮುಖ್ಯವೋ ಜೀವನ ಮೌಲ್ಯಗಳೂ ಅಷ್ಟೇ ಮುಖ್ಯ
Styles APA, Harvard, Vancouver, ISO, etc.
5

ಎಂ., ಎನ್. ಅರ್ಚನ ತೇಜಸ್ವಿ. "ಪರಿಪೂರ್ಣತೆಯ ಭ್ರಮೆ ಕಳಚುವ ಕಂಬಾರರ ಸಿರಿಸಂಪಿಗೆ". AKSHARASURYA JOURNAL 05, № 06 (2025): 08 to 16. https://doi.org/10.5281/zenodo.14788695.

Texte intégral
Résumé :
ಚಂದ್ರಶೇಖರ ಕಂಬಾರರ ʼಸಿರಿಸಂಪಿಗೆʼ ಹಾಗು ಗಿರೀಶ್ ಕಾರ್ನಾಡರ ʼನಾಗಮಂಡಲʼ-ಈ ಎರಡೂ ಕೃತಿಗಳಿಗೂ ಎ.ಕೆ. ರಾಮಾನುಜನ್ ಅವರು ಹೇಳಿದ ಒಂದು ಜಾನಪದ ಕತೆಯೇ ಆಧಾರ. ನಾಗಮಂಡಲ ಓದಿದ ನನಗೆ, ಇದೇ ಕತೆಯನ್ನು ಕಂಬಾರರು ಹೇಗೆ ಬಳಸಿಕೊಂಡಿದ್ದಾರೆ ಎಂದು ತಿಳಿಯುವ ಕುತೂಹಲವಿತ್ತು.ಕಂಬಾರರು ಈ ಕತೆಯನ್ನು ಕಟ್ಟಿಕೊಡುವ ಪರಿ ಸಂಪೂರ್ಣ ಭಿನ್ನ.ಜಾನಪದವನ್ನು ಬಹಳ ಶಕ್ತಿಯುತವಾಗಿ ಬಳಸಿಕೊಳ್ಳುವ ಕಂಬಾರರು ಈ ನಾಟಕಕ್ಕೆ ಯಕ್ಷಗಾನ ರಂಗ ಪ್ರಕಾರವನ್ನು ಬಳಸಿಕೊಂಡಿರುವುದು ಇನ್ನೊಂದು ವಿಶೇಷ. ಈ ವಿಶೇಷತೆಯನ್ನು ಮತ್ತಷ್ಟು ವಿವರವಾಗಿ ಅರಿಯುವ ಉದ್ದೇಶವೂ ನನ್ನ ಲೇಖನ ರಚನೆಯ ಹಲವು ಕಾರಣಗಳಲ್ಲಿ ಒಂದು. ಇನ್ನು ನನ್ನ ಸಂಶೋಧನಾ ಲೇಖನದ ಮುಖ್ಯ ಉದ್ದೇಶ, ಇಂದಿಗೂ ಮನುಷ್ಯನನ್ನು ಕಾಡುವ ಹಲವು ಪ್ರಶ್ನೆಗಳಿಗೆ ಕಂಬಾರರ ʼಸಿರಿಸಂಪಿಗೆʼ ಉತ್ತರ ನೀಡುತ್ತದೆಯೇ ಎಂದು ಅರಿಯುವ ಅದಮ
Styles APA, Harvard, Vancouver, ISO, etc.
6

ಸೋಮಶೇಖರ, ಎಂ. "ಹರಿಹರನ ರಗಳೆಯಲ್ಲಿ ಶರಣ ಕೆಂಬಾವಿ ಭೋಗಣ್ಣ". AKSHARASURYA 04, № 02 (2024): 145 to 156. https://doi.org/10.5281/zenodo.11525997.

Texte intégral
Résumé :
ವಚನ ಸಾಹಿತ್ಯದ ಮಾತು ಬಂದ ತಕ್ಷಣವೇ ನಮ್ಮಲ್ಲಿ ಬಸವಾದಿ ಶರಣರ ಆಲೋಚನೆಗಳು ಸುಳಿದಾಡುತ್ತವೆ. ವಚನ ಸಾಹಿತ್ಯದ ಮೇಲೆ ಸಾಕಷ್ಟು ಸಂಶೋಧನೆಗಳು ನಡೆದಿದೆ; ನಡೆಯತ್ತಲೇ ಇದೆ. ವಚನ ಸಾಹಿತ್ಯವನ್ನು ಅಧ್ಯಯನದ ದೃಷ್ಟಿಯಿಂದ ಬಸವಪೂರ್ವ ಯುಗ (11ನೇ ಶತಮಾನ), ಬಸವ ಯುಗ (12-13ನೇ ಶತಮಾನ), ಬಸವೋತ್ತರ ಯುಗ (15-19ನೇ ಶತಮಾನ) ಹಾಗೂ ಆಧುನಿಕ ಯುಗ (20ನೇ ಶತಮಾನ) ಎಂದೂ ವಿಭಾಗಿಸಿಕೊಳ್ಳಲಾಗಿದೆ. ಈ ಸಾಹಿತ್ಯ ಸೃಷ್ಟಿಯ ಪ್ರಮುಖ ಕಾರಣ ಹಾಗೂ ಪ್ರೇರಣೆಗಳೆಂದರೆ ಶರಣ ಧರ್ಮದ ತತ್ವಗಳ ಪ್ರಸಾರ ಮಾಡುವುದು ಹಾಗೂ ಅಂದಿನ ಸಮಾಜದಲ್ಲಿನ ಅಸಮಾನತೆಯನ್ನು ಹೊಡೆದೋಡಿಸುವುದು. ಹನ್ನೊಂದನೆಯ ಶತಮಾನದಲ್ಲಿ ಈ ಕಾರ್ಯವನ್ನು ಕೈಗೊಂಡವರು ಕೊಂಡಗುಳಿ ಕೇಶಿರಾಜ, ಕೆಂಬಾವಿ ಭೋಗಣ್ಣ, ಶಂಕರದಾಸಿಮಯ್ಯ, ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಸಕಳೇಶ ಮಾದರಸ, ಜೇಡರದಾಸಿಮಯ್ಯ ಹಾಗೂ ಚಂದ
Styles APA, Harvard, Vancouver, ISO, etc.
7

ಭವ್ಯ, ಆರ್. "ಚಾರಿತ್ರಿಕ ಹಿನ್ನೆಲೆಯಲ್ಲಿ ಪ್ರಭುತ್ವ: ಕರ್ನಾಟಕ ಮತ್ತು ಕನ್ನಡ ಭಾಷೆ". AKSHARASURYA JOURNAL 03, № 04. SPECIAL ISSUE. (2024): 59 to 68. https://doi.org/10.5281/zenodo.10929698.

Texte intégral
Résumé :
ಭಾಷೆ ಮತ್ತು ಸಂಸ್ಕೃತಿ ಅಂತಃಸಂಬಂಧಿತವಾಗಿ ಏರ್ಪಟ್ಟ ರೂಪಕತೆಯಾಗಿದೆ. ಒಂದು ಪ್ರಾದೇಶಿಕ ಸಂಸ್ಕೃತಿ ರೂಪಿತವಾಗಲು ಅಲ್ಲಿಯ ಭಾಷೆಯೇ ಬಹುಮುಖ್ಯವಾದ ಅಂಶವಾಗಿರತ್ತದೆ. ಭಾಷೆ ಇರದೇ ಜಗತ್ತಿನ ಯಾವ ವ್ಯಾಪರವೂ ಇಲ್ಲ. ಜಗತ್ತಿನ ಚರಿತ್ರೆಯನ್ನು ಗಮನಿಸಿದರೆ ನಮಗೆ ವೇದ್ಯವಾಗುವ ಸತ್ಯ ಒಂದಿದೆ. ಯಾವ ಭಾಷೆಯು ಶ್ರೇಷ್ಠವಲ್ಲ, ಅದೇ ರೀತಿ ಯಾವ ಭಾಷೆಯೂ ಕನಿಷ್ಠವೂ ಅಲ್ಲ. ಜಗತ್ತಿನ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವ ರೂಪಿತವಾಗಬೇಕಾದರೆ ಅದು ಕೇವಲ ಸಾಮಾಜಿಕ ಸಂಬಂಧಗಳಿಂದ, ರಾಜಕೀಯ ಪ್ರಭುತ್ವದಿಂದ ಮತ್ತು ಧಾರ್ಮಿಕ ಶ್ರೇಷ್ಠತೆಯ ಅಮಲಿನಿಂದ ಮಾತ್ರ ಆ ಪರಿಸ್ಥಿತಿ ನಿರ್ಮಾಣವಾಗಲು ಸಾಧ್ಯ. ಭಾಷೆಗಳನ್ನು ಆಡುವ ಸಮುದಾಯಗಳು ಚರಿತ್ರೆಯಲ್ಲಿ ಅನುಭವಿಸಿದ ಏರುಪೇರುಗಳು ಆಯಾ ಭಾಷೆಗಳ ಮೇಲೂ ಪರಿಣಾಮ ಬೀರಿರುತ್ತವೆ. ಪ್ರಬಲ ಪ್ರಭುತ್ವ ಅಧಿಕಾರವುಳ್ಳ ಸಮುದಾಯದ ಭಾಷೆಗ
Styles APA, Harvard, Vancouver, ISO, etc.
8

ಸುಮಾ, ಆರ್. "ಮೀಮಾಂಸೆ: ಜೀವನ ಮತ್ತು ಕಾವ್ಯ". AKSHARASURYA JOURNAL 06, № 06 (2025): 72 to 79. https://doi.org/10.5281/zenodo.15581023.

Texte intégral
Résumé :
ಮೀಮಾಂಸೆ ಯಾವುದೇ ವಿಷಯದ ವಿಚಾರಪೂರ್ಣ ಚಿಂತನೆ, ತಾರ್ಕಿಕ ತೀರ್ಮಾನ, ವಿಮರ್ಶೆ, ಚರ್ಚೆ, ವಿಶ್ಲೇಷಣೆ ಇತ್ಯಾದಿಯಾಗಿ ಅರ್ಥೈಸಲ್ಪಡುತ್ತದೆ. ಸಹೃದಯ ಓದುಗರಿಗೆ ತಿಳಿದಿರುವಂತೆ ಕಾವ್ಯ ಮೀಮಾಂಸೆ ಚಿರಪರಿಚಿತ. ಆದರೆ ಜೀವನ ಮೀಮಾಂಸೆ.. ಅಂತರ್ಗತ. ಜೀವನವು ಹಲವು ಮುಖಗಳನ್ನು ಹೊಂದಿದ ಜೈವಿಕ ಜಗತ್ತಿನ ವ್ಯಾಪಾರ. ಹುಟ್ಟು-ಸಾವುಗಳ ನಡುವಿನ ಅಭಿವೃದ್ಧಿ ಮತ್ತು ಹೋರಾಟ. ‘ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ, ಮದುವೆಗೊ, ಮಸಣಕೋ ಕರೆದಲ್ಲಿಗೆ ಹೋಗೆಂದ ಮಂಕುತಿಮ್ಮ’, ‘ಇರುವ ಭಾಗ್ಯವ ನೆನೆದು ಬಾರೆನೆನ್ನದಿರು, ಹರುಷಕ್ಕಿದೆ ದಾರಿ’, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ – ಎಂಬುದಾಗಿ ಹೇಳಿ ಜೀವನವನ್ನು ಮೀಮಾಂಸೆಗೆ ಒಳಪಡಿಸಿದ್ದಾರೆ.ಕಾವ್ಯ ಮೀಮಾಂಸೆ ಮತ್ತು ಜೀವನ ಮೀಮಾಂಸೆಯ ನಡುವಿನ ಸಂಬಂಧಗಳ ಬಗ
Styles APA, Harvard, Vancouver, ISO, etc.
9

ಮಂಜುನಾಥ, ಆರ್. ಪಿ., та ವಿ. ಬೆಟ್ಟಕೋಟೆ ನಾಗೇಶ್. "ಕನ್ನಡ ರಂಗಭೂಮಿಗೆ ನಾಟ್ಯ ಕಲಾಪ್ರಪೂರ್ಣ 'ಬಳ್ಳಾರಿ ರಾಘವ'ರ ಕೊಡುಗೆ". AKSHARASURYA 04, № 01 (2024): 18 to 28. https://doi.org/10.5281/zenodo.11162107.

Texte intégral
Résumé :
ಬಳ್ಳಾರಿಯ ರಾಘವರು ಈ ನಾಡು ನುಡಿ ಕಂಡ ಅದ್ಭುತವಾದ ಪ್ರತಿಭೆ. ಅವರು ಎರಡು ರಾಜ್ಯಗಳ ಸಾಂಸ್ಕೃತಿಕ ಲೋಕದ ಸಂಪತ್ತು ಎನಿಸಿದ್ದಾರೆ. ಕೇವಲ ತಮ್ಮ ಅಭೂತಪೂರ್ವ ಅಭಿನಯ ಚಾತುರ್ಯದ ಮೂಲಕವೇ ಇಡೀ ವಿಶ್ವದ ಗಮನ ಸೆಳೆದ ಧೀಮಂತ ಕಲಾ ಚೇತನ. ಇಂತಹ ಅಗಮ್ಯ ಚೇತನವೊಂದು ನಮ್ಮ ಈ ಗಡಿ ಭಾಗದಲ್ಲಿ ಆಗು ಹೋಗಿರುವುದು ನಮ್ಮೆಲ್ಲರ ಸುದೈವವೇ ಸರಿ. ಹುಟ್ಟಿದ್ದು ಅನಂತಪುರ ಜಿಲ್ಲೆಯ ತಾಡಪತ್ರಿಯಲ್ಲಾದರೂ ತಮ್ಮ ಬೆಳವಣಿಗೆಯನ್ನು ಕಂಡು ಕೊಂಡಿದ್ದೆಲ್ಲಾ ಬಳ್ಳಾರಿಯ ತಮ್ಮ ಮಾವನಾವರಾದ ಖ್ಯಾತ ವಕೀಲ, ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಾಮಾಚಾರ್ಯರ ಒಡನಾಟದಲ್ಲಿಯೇ ಸಾಗಿತು. ಮೊದ ಮೊದಲು ವಕೀಲ ವೃತ್ತಿಯಲ್ಲಿ ಪಾಂಡಿತ್ಯಗಳಿಸಲು ಬಳ್ಳಾರಿಗೆ ಬಂದು ನಾಟಕ ಕಲೆಯಲ್ಲಿ ನೈಪುಣ್ಯತೆಯನ್ನು ಗಳಸಿದರು. ಇದಕ್ಕೆ ಮೂಲ ಪ್ರೇರಣೆ ಮಾವನವರಾದ ಧರ್ಮಾವರಂ ರಾಮಕೃಷ್ಣಮಾಚಾರ್ಯರು ಹಾ
Styles APA, Harvard, Vancouver, ISO, etc.
10

ಸಂತೋಷ್‌, ಕುಮಾರ್‌ ಆರ್‌.ಎಂ. "ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು". AKSHARASURYA JOURNAL 06, № 04 (2025): 78 to 89. https://doi.org/10.5281/zenodo.15490942.

Texte intégral
Résumé :
ವಚನ ಸಾಹಿತ್ಯವು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅಮೂಲ್ಯ ಸಂಪತ್ತಾಗಿದೆ. ಇದು 12ನೇ ಶತಮಾನದಲ್ಲಿ ಜನಿಸಿದ ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದ್ದು, ಬಸವಾದಿ ಶರಣರು ಇದನ್ನು ಜನಸಾಮಾನ್ಯರಿಗೆ ತಲುಪುವಂತೆ ಮಾಡಿದರು. ವಚನ ಸಾಹಿತ್ಯವು ಧಾರ್ಮಿಕ, ಸಾಮಾಜಿಕ ಮತ್ತು ದಾರ್ಶನಿಕ ಚಿಂತನೆಗಳನ್ನು ಒಳಗೊಂಡಿದೆ ಮತ್ತು ಭಕ್ತಿ ಚಳವಳಿಯ ಪ್ರಮುಖ ಭಾಗವಾಗವೂ ಆಗಿದೆ. ವಚನ ಸಾಹಿತ್ಯವು ʼಸಮಾನತೆʼ, ʼಶ್ರಮʼ-ʼಕಾಯಕʼ ಮತ್ತು ʼಭಕ್ತಿʼಯ ಮಹತ್ವ, ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಶರಣರು ಜಾತಿ, ಲಿಂಗ, ಆರ್ಥಿಕ ಸ್ಥಿತಿ ಮುಂತಾದ ಬೇಧಭಾವಗಳನ್ನು ತಿರಸ್ಕರಿಸಿದರು. ಅಲ್ಲದೆ ಇವರು ಜಾತಿ-ವರ್ಣಭೇದಗಳ ವಿರೋಧವಾಗಿಯೂ ಮತ್ತು ಸಮಾನತೆಗೆ ಹೆಚ್ಚಿನ ಮನ್ನಣೆಯನ್ನು ನೀಡಿದರು.ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮೊದಲಾದ ಶರಣರು &ldq
Styles APA, Harvard, Vancouver, ISO, etc.
11

Pinto, Melwyn. "ಸತಾಚೊ ಸೊಧ್ ಆನಿ ಸತಾಚ್ಯಾ ಸ್ಥಾಪನಾ ಮಧೆಂ ಸಂಸೊಧ್". MJES Journal of Amar Konkani 2, № 2 (2023): 4–7. https://doi.org/10.69852/aloy.mjesjak.2.2/17945/.

Texte intégral
Résumé :
ಕನ್ನಡಾಚೊ ವಿಮರ್ಶಕ್, ಸಂಸೊಧ್ಕಾ.ರ್ ಆನಿ ತುಮಕೂರು ವಿಶ್ವವಿದ್ಯಾಲಯಾಚ್ಯಾ ಕನ್ನಡ ವಿಭಾಗಾಚೊ ಪ್ರೊಫೆಸರ್ ಡಾ| ನಿತ್ಯಾನಂದ ಶೆಟ್ಟಿನ್ ಆಯ್ಲೆವಾರ್ ಲಿಕ್ಲ್ಲೆಂ ಪುಸ್ತಕ್ ಮಾರ್ಗಾನ್ವೇಷಣೆ: ಸಾಹಿತ್ಯ ಸಂಶೋಧನೆಯ ರೀತಿ ನೀತಿ. ಹ್ಯಾ ಪುಸ್ತಕಾಂತ್ ಸಂಸೊಧಾವಿಶಿಂ ತಾಣೆಂ ಸಾಂಗ್ಚೊ ಏಕ್ ಪ್ರಮುಕ್ ವಿಚಾರ್ ಅಸೊ ಆಸಾ. ದೋನ್ ರಿತಿಂಚೆ ಸಂಸೊಧ್ ಸಾಧ್ಯ್ ಆಸಾತ್: ಪಯ್ಲೊ ಸತಾಚೆಂ ಸ್ಥಾಪನ್ (ಸತ್ಯ ಸ್ಥಾಪನೆ) ಕರ್ಚೊ ವಯ್ವಾಟಿ ‘ಸಂಸೊಧ್’ ಆನಿ ದುಸ್ರೊ ಸತಾಚೊ ಸೊಧ್ (ಸತ್ಯ ಶೋಧನೆ) ಕರ್ಚೊ ವಸ್ತುನಿಷ್ಟ್ ಸಂಸೊಧ್. ಹ್ಯಾ ದೊನಾಂ ಮಧೆಂ ವಿಶೇಸ್ ಫರಕ್ ಆಸಾ. ಸತಾಚೆಂ ಸ್ಥಾಪನ್ ಕರ್ಚೆಂ ಬೋವ್ ಸಲೀಸ್. ಮ್ಹಜ್ಯೆಲಾಗಿಂ ಥೊಡಿಂ ಪೂರ್ವ್ಪೀ್ಡಿತ್ ಕಲ್ಪನಾಂ ಆಸಾತ್. ಸಮಾಜ್ಯೆ ವಿಶಿಂ, ಹೆರ್ ಜಾತಿ ಧರ್ಮಾ ವಿಶಿಂ, ವಾ ಮ್ಹಾಕಾ ಜಾಯ್ನಾತ್ಲ್ಲ್ಯಾಂ ವಿಶಿಂ ಮ್ಹಜ್ಯೊ ಥೊ
Styles APA, Harvard, Vancouver, ISO, etc.
12

ಶರಣಪ್ಪ, ಬಸಪ್ಪ ಜಗ್ಗಲ. "ಬೆಳ್ವೊಲನಾಡಿನ ರಾಷ್ಟ್ರಕೂಟರ ಕಾಲದ ಶಾಸನೋಕ್ತ ಜೈನ ಮುನಿಗಳು". AKSHARASURYA JOURNAL 04, № 06 (2024): 143 to 151. https://doi.org/10.5281/zenodo.13725641.

Texte intégral
Résumé :
“ಪೂರ್ಣತ್ವ ಸಂಪಾದನೆ ಜೀವನದ ಗುರಿ. ಜೀವವು ಆತ್ಮವಿಕಾಸದ ಮಹಾ ಕಮ್ಮಟವೆನಿಸಿದುದು. ಪರಿಪೂರ್ಣದೆಡೆಗೆ ಸಾಗಲು ಜೈನಧರ್ಮ ಆನಂದಮಯವಾಗಿದೆ, ಆಶಾವಾದಿಯಾಗಿದೆ”. ಇಲ್ಲಿ ಮನುಷ್ಯ ಸ್ವಪ್ರಯತ್ನದಿಂದ ಜೀವನವನ್ನು ಉತ್ತಮಗೊಳಿಸಿಕೊಂಡು, ಮಹೋನ್ನತವಾದುದನ್ನು ಸಾಧಿಸುತ್ತಾನೆ. ಇದೇ ಜೈನಧರ್ಮ ತತ್ವದಂತೆ ಕರ್ಮಬಂಧನಕ್ಕೊಳಗಾದ ಜೀವಾತ್ಮನು ಅನೇಕ ಭವಗಳನ್ನು ದಾಟುತ್ತ ಬಂದು, ಕರ್ಮಬಂಧವನ್ನು ಕಿತ್ತೊಗೆದು, ಭವಬಂಧನದಿಂದ ಮುಕ್ತಗೊಂಡು ಸಿದ್ದನಾಗುತ್ತಾನೆ. ತನ್ನಂತೆ ಇನ್ನುಳಿದ ಜೀವಾತ್ಮರೂ ಮುಕ್ತರಾಗಬೇಕೆಂಬ ಸದುದ್ದೇಶದಿಂದ ತಾನು ಕಂಡುಂಡ, ಅರಿತುಕೊಂಡ ಜ್ಞಾನದ ಹಿನ್ನೆಲೆಯಲ್ಲಿ ಈ ಜೀವಾಜೀವಗಳ ಸೃಷ್ಟಿ, ಸಂಸಾರದ ಕಲ್ಪನೆಯನ್ನು ಉಪದೇಶಿಸಿಸುವನು. ಜೀವಾತ್ಮನು ಬಯಸುವ ಅನಂತ ಸುಖವಾದ ಮುಕ್ತಿ ಪ್ರಾಪ್ತವಾಗಲು ಕಾಲಲಬ್ಬಿಗಿಂತ ಮೊದಲು ಸಮ್ಯಕ್ತ್ವಲಭಿಸಬ
Styles APA, Harvard, Vancouver, ISO, etc.
13

ಚನ್ನವೀರಯ್ಯ. "ವಚನಗಳಲ್ಲಿನ ಜಾತಿ ಪದ್ಧತಿ ಮತ್ತು ಮೌಢ್ಯಗಳ ವಿಶ್ಲೇಷಣೆ". AKSHARASURYA 05, № 02 (2024): 135 to 142. https://doi.org/10.5281/zenodo.14035388.

Texte intégral
Résumé :
ಹನ್ನೇರಡನೇ ಶತಮಾನವನ್ನು ವಚನ ಸಾಹಿತ್ಯದ ಪರ್ವಕಾಲ ಎಂದು ಕರೆಯಬಹುದು. ಏಕೆಂದರೆ ಜನಸಾಮಾನ್ಯರ ಆಡುಭಾಷೆಯ ಮೂಲಕ ಕನ್ನಡಭಾಷೆಯನ್ನು ಉತ್ತುಂಗಕ್ಕೆ ಏರಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಬಹು ಮುಖ್ಯವಾಗಿ ಜಾತಿ, ಮತ, ವರ್ಗ, ವರ್ಣ, ಮೇಲು, ಕೀಳು ಹಾಗೂ ಸಾಮಾಜಿಕ ಪಿಡುಗುಗಳಾದ ಮೂಢನಂಬಿಕೆಗಳು ಅನಿಷ್ಟಪದ್ದತಿಗಳ ಆಚರಣೆಯಿಂದ ಸಮಾಜದ ಅಭಿವೃದ್ಧಿಗೆ ಮಾರಕವಾದುದು ಎಂಬುದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿ ಸಾಮಾಜಿಕ ಬದಾಲಾವಣೆಗೆ ಮುನ್ನುಡಿ ಬರೆದು ನವಮನ್ವಂತರಕೆ ದಾರಿ ದೀಪವಾದವರು. ಆ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದರು. ಸಾಮಾಜಿಕ ಬದಲಾಣೆಯ ಜೊತೆಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಅಂತಹ ಕೆಲವು ವಚನಕಾರರ ವಚನಗಳ ವಿಶ್ಲೇಷಣೆ ಈ ಲೇಖನದಲ್ಲಿ ಚರ್ಚಿಸಲಾಗಿದೆ.
Styles APA, Harvard, Vancouver, ISO, etc.
14

ಗೌಡ., ಎಂ.ಟಿ. "ವಚನ ಸಾಹಿತ್ಯ: ಮಾನವ ಮೌಲ್ಯಗಳ ಪ್ರತಿಬಿಂಬ". AKSHARASURYA JOURNAL 06, № 04 (2025): 90 to 96. https://doi.org/10.5281/zenodo.15490961.

Texte intégral
Résumé :
ವಚನವೆಂಬುದು ಕೇವಲ ಸಾಹಿತ್ಯ ಪ್ರಕಾರವಲ್ಲ ಅದು ಒಂದು ಚಳುವಳಿ ಕೂಡ ಆಗಿದೆ. ಅದನ್ನು ಸಮಾಜೋ ಧಾಶ್ರಮಿಕ ಚಳುವಳಿ, ಕಾಯಕ ಜೀವಿಗಳ, ಚಳುವಳಿ ಪರಿಪೂರ್ಣ ಚಳುವಳಿ ಎಂದು ಬಗೆಬಗೆಯಾಗಿ ಕನ್ನಡ ವಿದ್ವಾಂಸರು ಅದರ ಸ್ವರೂಪ ಮಹಿಮೆಯನ್ನು ಬಣ್ಣಿಸಿದ್ದಾರೆ. ವಚನ ಸಾಹಿತ್ಯ ಇಡೀ ಭಾರತೀಯ ಭಾಷೆಗಳಲ್ಲಿಯೇ ವಿಶಿಷ್ಟವಾದುದು. ಕನ್ನಡ ಸಾಹಿತ್ಯವು ವಿಶ್ವ ಸಾಹಿತ್ಯಕ್ಕೆ ನೀಡಿದ ಕೊಡುಗೆ ಆದಾಗಿದೆ ಎಂದರೂ ನಡೆಯುತ್ತದೆ. ಮಾನವ ಕುಲದ ಸರ್ವಾಂಗೀಣ ವಿಕಾಸಕ್ಕಾಗಿ ಶ್ರಮಿಸಿದ ಮಹಾತ್ಮರಾದ ಶಿವಶರಣರು ಅನನ್ಯ ಕೊಡುಗೆ ನೀಡಿರುವ ಜಗತ್ತಿನ ಅಪರೂಪದ ಸಾಹಿತ್ಯ ವಚನಗಳು. ವಚನಗಳು ಎಂದಾಕ್ಷಣ ನೆನಪಾಗುವುದೇ ಶಿವಶರಣರು. ಶರಣ ಪಂಥಕ್ಕೆ ಭಕ್ತಿಯ ಶಕ್ತಿಯೇ ಕೇಂದ್ರ ಬಿಂದು. ವಚನ ಸಾಹಿತ್ಯವು ಸವಿಸ್ತಾರವಾದ ಸಮುದ್ರದ ಆಳದಲ್ಲಿನ ಮುತ್ತು, ರತ್ನಗಳನ್ನು ಹೆಕ್ಕಿ ಅಳೆದು, ತೂಗಿ ಸ
Styles APA, Harvard, Vancouver, ISO, etc.
15

ಲೋಕೇಶ, ಆರ್. "ಮೈಸೂರು ಅರಸರ ಕಾಲದ ಸಮ-ತತ್ತ್ವದ ಶಿಕ್ಷಣದ ವ್ಯವಸ್ಥೆ". AKSHARASURYA JOURNAL 03, № 04. SPECIAL ISSUE. (2024): 74 to 82. https://doi.org/10.5281/zenodo.10929729.

Texte intégral
Résumé :
ನಮ್ಮ ನಾಡಿನ ಪ್ರಾಚಿನ ಪರಂಪರೆ ಹಾಗೂ ಸನಾತನವೆನಿಸಿದ ಭಾರತೀಯ ಜ್ಞಾನ ಸಂಪತ್ತು ಮತ್ತು ಚಿಂತನಶೀಲತೆ ರಾಷ್ಟ್ರೀಯ ಶಿಕ್ಷಣ ನೀತಿಯ ದಾರಿದೀಪವಾಗಿದೆ. ಜ್ಞಾನ, ವಿವೇಕ ಹಾಗೂ ಸತ್ಯ ಭಾರತೀಯ ದಾರ್ಶನಿಕ ಚಿಂತನೆಯ ಅತ್ಯುನ್ನತ ಸಾಧನೆಯ ಗುರಿಗಳಾಗಿದ್ದವು. ಆತ್ಮಸಾಕ್ಷಾತ್ಕಾರ ಮತ್ತು ಆತ್ಮವಿಮೋಚನೆ ಶಿಕ್ಷಣದ ಗುರಿಯಾಗಿತ್ತು. ಅತ್ಯುತ್ತಮ ಮಟ್ಟದ ಬಹುಶಿಸ್ತೀಯ ಅಧ್ಯಯನಗಳು ಜ್ಞಾನದ ಗಡಿಗಳನ್ನು ವಿಸ್ತರಿಸಿ ಎಲ್ಲೆಡೆಯಿಂದಲೂ ಜ್ಞಾನ ಸ್ವೀಕಾರ ಕಾರ್ಯ ನಡೆಯುತ್ತಲೇ ಇತ್ತು. ಇದು ಕನ್ನಡ ನಾಡಿಗೂ ಮಾದರಿಯಾಗಿ ಕನ್ನಡ ನಾಡು ಕೂಡ ಯಾವುದಕ್ಕೂ ಹಿಂದೆ ಬೀಳದೆ ತನ್ನದೇ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳುತ್ತಲೇ ಮಾದರಿ ರಾಜ್ಯವಾಗಿ ಚರಿತ್ರೆಯಲ್ಲಿ ಗುರುತಾಗತೊಡಗಿತು. ಭಾರತೀಯ ಭವ್ಯ ಪರಂಪರೆಯಲ್ಲಿ ಕನ್ನಡ ನಾಡಿನ ಹಿರಿಮೆ ದೇಸೀ ತನದಿಂದಲೇ ಹೆಸರಾದುದು. ಅದು ಬ
Styles APA, Harvard, Vancouver, ISO, etc.
16

ಪ್ರಕಾಶ, ಬಿ. "'ಕರ್ವಾಲೊ'-ಕಾದಂಬರಿ ಒಂದು ತಾತ್ವಿಕತೆಯ ಓದು". AKSHARASURYA 03, № 06 (2024): 110 to 116. https://doi.org/10.5281/zenodo.11127182.

Texte intégral
Résumé :
‘ಕರ್ವಾಲೊ’ ಕಾದಂಬರಿ ಬದುಕಿನ ಮೂಲ ದ್ರವ್ಯಕ್ಕೆ-ಅವುಗಳ ಪ್ರತ್ಯೇಕ ಸ್ಥಿತಿಯಲ್ಲಿ ಇದ್ದಿರಬಹುದಾದ ಅಥವಾ ಇದ್ದಂತೆ ಕಾಣಿಸುವ ಮೂರ್ತ ಅರ್ಥದೊಂದಿಗೆ ಕರಗಿಕೊಂಡು ಅಂತಿಮವಾಗಿ ಅಮೂರ್ತ ಅಥವಾ ನಿಗೂಢ ಅರ್ಥ ಪರಂಪರೆಗಳನ್ನು ಅನುರಣಿಸುವಂತೆ ಮಾಡುವ ಹೊಂಚು ತೇಜಸ್ವಿಯವರ ಈ ಕೃತಿಯಲ್ಲಿ ಇದೆ. ಕರಾರುವಾಕ್ಕಾದ ಶಾಸ್ತ್ರಜ್ಞಾನದ ಆನ್ವೇಷಣೆಗಾಗಿ ಅಲ್ಲ, ಸತ್ಯಾನುಭವದ ಅರಸುವಿಕೆಗಾಗಿ ಎಂಬುದು ಗಮನಾರ್ಹ. ನೀರಸ ವಸ್ತುವಿನಂತೆ ಜನ ಸಾಮಾನ್ಯರಿಂದ ದೂರ ಉಳಿದು ಬಿಡುವ ವೈಜ್ಞಾನಿಕ ಸತ್ಯಗಳು ಈ ಕಾದಂಬರಿಯಲ್ಲಿ ವಿಜ್ಞಾನದ ಅನೇಕ ವರ್ಷಗಳ ಸಾಧನೆಯನ್ನು ತಟಕ್ಕನೆ ಏರುಪೇರು ಮಾಡಬಲ್ಲ ಶಕ್ತಿಯನ್ನು, ರಹಸ್ಯಗಳನ್ನು ಸಂಗತಿಗಳನ್ನು ಪಡೆದುಕೊಂಡಿರುವ ಜೀವಚರ. ಇದು ನಮ್ಮ ಪ್ರಜ್ಞೆ; ನಮ್ಮ ಕುತೂಹಲ; ನಮ್ಮ ದಿಗ್ಭ್ರಮೆಯೂ ಹೌದು; ನಮ್ಮ ತಿಳುವಳಿಕೆಯ ದಿಕ್‌
Styles APA, Harvard, Vancouver, ISO, etc.
17

ಕವಿತಾ, ಆರ್., та ಜಮದಂಡಿ ರಾಜಶೇಖರ. "ಹಾಸ್ಯ ಲೋಕ ಸ್ವರ್ಗ ಸುಖ (ನಕ್ಕರೆ ಅದೇ ಸ್ವರ್ಗ)". International Journal of Philosophy and Languages (IJPL) 2, № 1 (2023): 48–52. https://doi.org/10.5281/zenodo.8170677.

Texte intégral
Résumé :
<strong>ಉದ್ದೇಶ</strong>: <em>ಹಾಸ್ಯ ಬರೀ ಸಂತಸವನ್ನು ನೀಡುವುದಲ್ಲ. ಹಾಸ್ಯ ಪರಸ್ಪರ ಆತ್ಮೀಯತೆಯನ್ನು ಆಸ್ವಾದಿಸುವುದಕ್ಕೆ ಇರುವ ಒಂದು ಶಕ್ತಿ. ಹಣದಿಂದ ಒಬ್ಬ ವ್ಯಕ್ತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಹಾಸ್ಯದಿಂದ / ನಗುವಿನಿಂದ ವ್ಯಕ್ತಿಯನ್ನು ಗೆಲ್ಲಲು ಸಾಧ್ಯ ಮತ್ತು ದೃಢವಾಗಿ ನಿಲ್ಲಲು ಸಾಧ್ಯ.</em> <em>ಪ್ರೀತಿ </em><em>ಮತ್ತು</em> <em>ನಗು ಎಷ್ಟು ಚಿಕ್ಕ ಪದ. ಆದರೆ ಆ ಪದಗಳಿಗೆ ಇಡೀ ಜಗತ್ತನ್ನು ಗೆಲ್ಲುವ ಶಕ್ತಿ ಇದೆ. ನಗು ಇರುವ ಕಡೆ ಪ್ರೀತಿ ಬೆಳೆಯುತ್ತೆ. ಪ್ರೀತಿ ಬೆಳೆದ ಕಡೆ ನಗು ತುಂಬಿರುತ್ತೆ.</em> <em>ಹಾಸ್ಯ ಪ್ರಜ್ಞೆಯನ್ನು ಎಲ್ಲರನ್ನು ಮೂಡಿಸಿ ನಗು-ನಗುತ್ತಾ ಇರುವಂತೆ ಮಾಡುವುದೇ ಇದರ ಉದ್ದೇಶ. ಅಷ್ಟೇ ಅಲ್ಲ ಇತರರ ಗಮನವನ್ನು ಆಕರ್ಷಿಸುವುದು. ಸಾಮರಸ್ಯವನ್ನು ಸೃಷ್ಟಿಸುವುದು. ಸಂದೇಶವನ್ನು ಸ್ಮರಣಾರ್ಹವಾ
Styles APA, Harvard, Vancouver, ISO, etc.
18

Pinto, Joachim. "ಅಸ್ಮಿತಾಯ್: ಕೊಂಕಣಿ ಅಸ್ಮಿತಾಯೆಚೆಂ ವಿಸಂಗತ್ ಪ್ರತಿಬಿಂಬ್?" MJES Journal of Amar Konkani 3, № 1 (2023): 41–73. https://doi.org/10.69852/aloy.mjesjak.3.1/18031/.

Texte intégral
Résumé :
ಇತಿಹಾಸೀಕ್ ಸಿನೆಮಾಂ ವಿವಾದಾತ್ಮಕ್ ಜಾಂವ್ಚಿ ಅನಿವಾರ್ಯ್ ಘಡ್ಣೂಕ್ ಭೂತ್ಕಾ ಳಾಕ್ ವಿಶ್ಲೇಷಣ್ ಕರ್ನ್ ಪಡ್ದ್ಯಾಚೆರ್ ದಾಕಂವ್ಚ್ಯಾ ಸಂಕೀರ್ಣಾತೆಚೆರ್ ರೊಂಬೊನ್ ಆಸಾ. ಇತಿಹಾಸಾಚೊ ವಿಂಚ್ಣಾರ್ ಭಾಗ್ ಘೆವ್ನ್ ಫಿಲ್ಮ್ ತಯಾರ್ ಕರ್ತಾನಾ ನಿರ್ದೇಶಕ್ ವೀಕ್ಷಕಾಕ್ ಮನೋರಂಜನ್ ದಿಂವ್ಚೆಂ ಆನಿ ಆಪ್ಣಾಚೆಂ ರಚನ್ ಕಲಾತ್ಮಕ್ ಜಾಯ್ಶೆಂ ಪಳೆಂವ್ಚೆಂ - ಹ್ಯಾ ದೋನ್ ಧ್ಯೇಯಾಂ ಮಧೆಂ ಸಮತೋಲನ್ ರಾಕೊನ್ ವ್ಹರ್ಚ್ಯಾ ಧ್ವಂದ್ವಾಂತ್ ಸಾಂಪ್ಡಾತಾ. ಮನ್ ಭುಲೊಂವ್ಚೆಂ ನಿರೂಪಣ್ ಆನಿ ವೀಕ್ಷಕಾಕ್ ನಾಟಕೀಯ್ ಅನ್ಭೊಗ್ ದಿಜೆ ಮ್ಹಳ್ಳ್ಯಾ ಉದ್ದೇಶಾನ್ ಚಲ್ಚ್ಯಾ ಹ್ಯೆ ವಿಂಚವ್ಣೆ ಪಾಸತ್ ಅಕ್ಷರಶಃ ಇತಿಹಾಸೀಕ್ ನಿಖರತೆ ಥಾವ್ನ್ ಪಯ್ಸ್ ಸರ್ಚ್ಯಾಕ್‌ ನಿರ್ದೇಶಕಾನ್ ಕಲಾತ್ಮಕ್ ಸ್ವಾತಂತ್ರಾಚೊ ವಾಪಾರ್ ಕರಿಜೆ ಪಡ್ತಾ. ಇತಿಹಾಸಾಚೆರ್ ಹೊಂದ್ವೊನ್ ಕಾಡ್ಚಿಂ, ಗುಂಡಾಯೆಚ್ಯಾ ಅರ್ಥ
Styles APA, Harvard, Vancouver, ISO, etc.
19

ಆಯ್., ಬಿ. ಸಾತಿಹಾಳ. "ಪಂಪನ ಕಥಾಸತ್ಯ ಮತ್ತು ಕಾವ್ಯ ನಿಷ್ಠೆ ಹಾಗೂ ಕಾಮವಾಸನೆ: ಆದಿ ಪುರಾಣವನ್ನು ಅನುಲಕ್ಷಿಸಿ." AKSHARASURYA 03, № 06 (2024): 97 to 109. https://doi.org/10.5281/zenodo.11127143.

Texte intégral
Résumé :
&lsquo;ಜನ್ಮಾಂತರಗಳಲ್ಲಿ ನಂಭಿಕೆಯಿಟ್ಟು ಸ್ಮರತತ್ವವನ್ನು ಸಂಪೂರ್ಣವಾಗಿ ವಿರೋಧಿಸುತ್ತ, ದಕ್ಕಿದ ಭೋಗ-ವೈಭವಗಳನ್ನೆಲ್ಲ ಬದಿಗಿಟ್ಟು, ತಲೆಗೂದಲನ್ನು ಕಿತ್ತು ದೀಕ್ಷೆ ಕೈಕೊಂಡು, ಗತಪ್ರಾಣನಾಗುವುದರಿಂದ ಜೀವನಿಗೆ ಪುನರ್ ಜನ್ಮದಲ್ಲಿ ಅತ್ಯಾನಂತವಾದ ಪದವಿ-ಫಲಗಳು ಸಹಸ್ರಸಾಗರೋಪಮಾನ ಕಾಲದವರೆಗೆ ಸಿಕ್ಕುತ್ತವೆ&rsquo;ಎನ್ನುವುದು ಜೈನ ಪುರಾಣಗಳ ಪ್ರಬಲವಾದ ನಿಲುವು. ಇದನ್ನು ತನ್ನ ಆದಿಪುರಾಣ ಕಾವ್ಯದಲ್ಲಿ ನಿರೂಪಿಸಲು ಹೊರಟಿರುವ ಪಂಪನಿಗೆ ಇದು ಸುಲಭವಾದ ಕೆಲಸವಾಗಿರಲಿಲ್ಲ. ಬಹುಪ್ರಾಚೀನ ಕಾಲದಿಂದಲೂ ಬೆಳೆದು ಬಂದಿರುವ ಧಾರ್ಮಿಕ ಕಲ್ಪನೆ ಕನ್ನಡ ನಾಡಿನಲ್ಲಿ ಪಂಪನ ಕಾಲಕ್ಕಾಗಲೇ ಪರ-ವಿರೋಧಗಳನ್ನು ಸ್ವೀಕರಿಸುತ್ತ, ಎದುರಿಸುತ್ತ, ಕುಂಟುತ್ತ ಸಾಗಿತ್ತು. ಅಂಥ ಸಂದರ್ಭದಲ್ಲಿ ಪಂಪನು ಧಾರ್ಮಿಕ ಕಲ್ಪನೆಯನ್ನು ಕಾವ್ಯಸತ್ಯವನ್ನಾಗಿಸುವುದರ ಮೂಲಕ ಜೈನಧರ್ಮ
Styles APA, Harvard, Vancouver, ISO, etc.
20

ಮೋಹನ್‌, ಕುಮಾರ್‌ ಆರ್‌. "ನೇಯ್ಗೆ ಕಾಯಕದ ಶರಣ ಮತ್ತು ಶರಣೆಯರ ವಚನಗಳ ಮಹತ್ವ". AKSHARASURYA JOURNAL 06, № 06 (2025): 47 to 60. https://doi.org/10.5281/zenodo.15580976.

Texte intégral
Résumé :
ಆದ್ಯವಚನಕಾರರಾದ ಜೇಡರ ದಾಸಿಮಯ್ಯನವರು ನೇಯ್ಗೆ ಕಾಯಕವನ್ನು ಮಾಡುತ್ತಿದ್ದ ಶ್ರೇಷ್ಠ ಶಿವಶರಣ ಹಾಗೆಯೇ ದೊರೆತಿರುವ ಆಧಾರಗಳ ಮೇರೆಗೆ ದಾಸಿಮಯ್ಯನ ಪತ್ನಿ ದುಗ್ಗಳೆ, ಅಮುಗಿ ದೇವಯ್ಯ, ಅಮುಗೆ ರಾಯಮ್ಮ, ಆದಯ್ಯ, ಕದಿರ ರೆಮ್ಮವ್ವೆ, ಕದಿರ ಕಾಯಕದ ಕಾಳವ್ವೆಯರು ಕೂಡ ನೇಯ್ಗೆ ಕಾಯಕವನ್ನು ಮಾಡುತ್ತ ಸಮಾಜಕ್ಕೆ ತಮ್ಮದೇ ಆದ ವಚನಗಳ ಮೂಲಕ ಸಮಾಜದ ಸರ್ವೋನ್ನತಿಗೆ ಶ್ರಮಿಸಿದ ಕಾಯಕ ಶರಣ ಮತ್ತು ಶರಣೆಯರು. ನೇಯ್ಗೆ ಕಾಯಕವನ್ನು ಮಾಡುತ್ತಿದ್ದ ಈ ಶರಣ ಮತ್ತು ಶರಣೆಯರು ತಮ್ಮ ಅನುಭವ, ಆತ್ಮಾನುಭೂತಿಯನ್ನು ಸಮಾಜದ ಜನರೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸಿದರು. ಸರಳ ಮತ್ತು ಸ್ಪಷ್ಟ ನುಡಿಗಳಲ್ಲಿ ವಚನಗಳನ್ನು ಕಟ್ಟಿಕೊಟ್ಟು ದಾಂಪತ್ಯದಿಂದಲೂ ಮೋಕ್ಷ ಸಂಪಾದನೆ ಸಾಧ್ಯವೆಂಬ ಅಧ್ಯಾತ್ಮಿಕ ಚಿಂತನೆಯನ್ನು ತೋರಿದವರು. ಸತ್ಯದ ಪ್ರತಿಪಾದನೆ, ಸ್ತ್ರೀಪರ ಕಾಳಜಿ, ಸ್ತ್ರೀಸಮ
Styles APA, Harvard, Vancouver, ISO, etc.
21

ಶೋಭಾರಾಣಿ, ಎನ್. "ವೈದೇಹಿಯವರ ಶಕುಂತಲೆ ಎಂಬ ಎಚ್ಚರ". AKSHARASURYA 05, № 01 (2024): 73 to 78. https://doi.org/10.5281/zenodo.13870784.

Texte intégral
Résumé :
ಶಕುಂತಲೆಯ ಕಥೆ ಮಹಾಭಾರತದ ಶಾಕುಂತಲೋಪಾಖ್ಯಾನದ ಕಾಲದಿಂದಲೂ ಭಾರತದ ಎಲ್ಲ ಭಾಷೆಗಳ ಕವಿಗಳನ್ನು ಆಕರ್ಷಿಸಿದೆ. ಸಂಸ್ಕೃತದ ಕವಿ ಕಾಳಿದಾಸನಂತೂ &ldquo;ಅಭಿಜ್ಞಾನ ಶಾಕುಂತಲ&rdquo;ವನ್ನೇ ಬರೆದ. ಶಕುಂತಲೆಯ ಮುಗ್ಧತೆ, ದುಷ್ಯಂತ-ಶಕುಂತಲೆಯರ ಪ್ರೇಮ, ವಿವಾಹ, ವಿಯೋಗ ಮತ್ತು ಮರು ಸಮಾಗಮಗಳನ್ನು ಕಾವ್ಯಾತ್ಮಕವಾಗಿಸಿ ರಮ್ಯ ನಾಟಕದ ಇತಿಹಾಸದಲ್ಲಿ ಶಕುಂತಲೆಯ ಕಥೆಯನ್ನು ಅಜರಾಮರಗೊಳಿಸಿದ. ಇದಕ್ಕೆ ಕಾರಣ ಹಲವು. ಶಾಕುಂತಲದ ಕಥೆಯಲ್ಲಿರುವ ರಮ್ಯತೆ, ಅದರ ವಸ್ತು ವಿಸ್ತಾರ, ಅಭಿಜಾತ ಗುಣಗಳು, ವಿಧಿವಾದ ಇತ್ಯಾದಿಗಳು ಒಂದು ಕಡೆಯಾದರೆ; ರಾಜಪ್ರಭುತ್ವ, ಸಿಂಹಾಸನ, ವಾರಸುದಾರಿಕೆಯ ಹಕ್ಕು-ಹಂಬಲಗಳು ಮತ್ತೊಂದು ಕಡೆ ನಿಂತು ಹಿಂದಿನ ಕವಿಗಳನ್ನು ಪ್ರೇರೇಪಿಸಿದೆ. ಹಾಗೆಯೇ ಕಥೆ ಹಳೆಯದಾದರೂ ಅದರೊಳಗೆ ಹುದುಗಿರುವ ಸತ್ವ ಇಂದಿನ ಲೇಖಕರನ್ನೂ ಚಿಂತನೆಗೆ ಹಚ್ಚಿದೆ. ಹ
Styles APA, Harvard, Vancouver, ISO, etc.
22

ತಾರಾಮಣಿ, ಆರ್. "ಗಿರೀಶ್ ಕಾರ್ನಾಡರ ನಾಗಮಂಡಲ ನಾಟಕ: ಸಂಕೇತಗಳ ಪರಾಮರ್ಶೆ". AKSHARASURYA 04, № 02 (2024): 113 to 124. https://doi.org/10.5281/zenodo.11525902.

Texte intégral
Résumé :
ಪ್ರಮುಖ ಚಿಂತಕರಲ್ಲಿ ಒಬ್ಬರಾದ ಎ ಕೆ ರಾಮಾನುಜನ್&zwnj; ಅವರು ಹೇಳಿದ ಜನಪದ ಕಥೆಯನ್ನು ಆಧರಿಸಿ ನಾಟಕ ಕ್ಷೇತ್ರದ ಧೀಮಂತ ಪ್ರತಿಭೆಗಳಾದ ಗಿರೀಶ್&zwnj; ಕಾರ್ನಾಡರು ನಾಗಮಂಡಲ ನಾಟಕವನ್ನೂ, ಕಂಬಾರರು ಸಿರಿಸಂಪಿಗೆ ನಾಟಕವನ್ನೂ ರಚಿಸಿದ್ದಾರೆ. ಎರಡು ನಾಟಕಗಳ ವಸ್ತು ಒಂದೇ ಆದರೂ ನಿರೂಪಣಾ ಶೈಲಿ, ನಾಟಕದ ತಂತ್ರಗಾರಿಕೆ ಹಾಗೂ ಧೋರಣೆಗಳು ಭಿನ್ನವಾಗಿವೆ. ನಾಟಕಗಳು ಮೇಲ್ನೋಟಕ್ಕೆ ಸರಳವಾದ ವಸ್ತುವನ್ನು ಒಳಗೊಂಡಂತೆ ಕಂಡರೂ ಓದುಗರಿಗೆ ಒಂದು ಸುಂದರವಾದ, ಅದ್ಭುತವಾದ ಸತ್ಯದ ಅನಾವರಣ ಮಾಡಿಸುತ್ತದೆ. ನಾಗಮಂಡಲ ನಾಟಕವು ಸಾಂಸ್ಕೃತಿಕ, ಧಾರ್ಮಿಕ, ಮಾನಸಿಕ ಮತ್ತು ಸಾಮಾಜಿಕ ಜೀವನವನ್ನು ಸಂಕೇತಗಳ ಬಳಕೆಯ ಮೂಲಕ ಪ್ರತಿಬಿಂಬಿಸುತ್ತದೆ. ನಾಟಕವು ಪಿತೃಪ್ರಧಾನ ವ್ಯವಸ್ಥೆಯಲ್ಲಿನ ಪುರುಷನ ನ್ಯೂನ್ಯತೆಗಳನ್ನು, ವರ್ತನೆಯ ರೀತಿಯನ್ನು ಹಾಗೂ ಪುರಾತನ ಸಾಂಪ್ರದಾಯಿಕ
Styles APA, Harvard, Vancouver, ISO, etc.
23

ವಿಜಯಲಕ್ಷ್ಮೀ, ಸುಬ್ಬರಾವ್, та ಎಂ. ಭೈರಪ್ಪ ಕುಪ್ಪನಹಳ್ಳಿ. "ಗೀತನಾಟಕ ಪ್ರವೇಶ: ಸಂಸ್ಕೃತ ನಾಟಕ ಮತ್ತು ನಾಟಕದಲ್ಲಿ ಸಂಗೀತ". AKSHARASURYA 05, № 01 (2024): 01 to 32. https://doi.org/10.5281/zenodo.13870268.

Texte intégral
Résumé :
ಬಹುಮುಖ ಪ್ರತಿಭೆಯ ಡಾ.ವಿಜಯಾ ಸುಬ್ಬರಾಜ್ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಾಯಿ ಲಕ್ಷ್ಮಿ, ಹಾಗೂ ತಂದೆ ಸೀತಾರಾಂ ಅವರು. ಓದಿದ್ದು ಬೆಂಗಳೂರಿನಲ್ಲೇ. ಕನ್ನಡ ಮತ್ತು ಇಂಗ್ಲಿಷ್&zwnj;ನಲ್ಲಿ ಎಂ.ಎ ಮತ್ತು ಎಲ್.ಎಲ್.ಬಿ. ಪದವೀಧರೆಯಾದವರು. ಫ್ರೆಂಚ್ ಭಾಷೆಯ ಡಿಪ್ಲೊಮ ಪದವಿಯನ್ನೂ ಹಿಂದಿ ಸಾಹಿತ್ಯರತ್ನ ಪದವಿಯನ್ನೂ ಅಧ್ಯಯನ ಮಾಡಿದವರು. ಎಂ.ಇ.ಎಸ್. ಕಾಲೇಜಿನಲ್ಲಿ ಸುದೀರ್ಘ ಕಾಲ ಪ್ರಾಧ್ಯಾಪಕ ಹುದ್ದೆ ನಿರ್ವಹಿಸುತ್ತಲೇ ನಿರಂತರವಾಗಿ ಹಲವು ಮಾಧ್ಯಮಗಳಲ್ಲಿ ತಮ್ಮ ಪ್ರಯೋಗಶೀಲತೆಯನ್ನು ದುಡಿಸಿಕೊಂಡವರು, ಕಥೆ, ಕವಿತೆ, ನಾಟಕ, ಕಾದಂಬರಿ, ಪ್ರವಾಸ ಕಥನ, ಅನುವಾದ, ವೈಚಾರಿಕ ಬರೆಹ, ವಿಮರ್ಶೆ, ಸಂಶೊಧನೆ ಮುಂತಾದ ವಿಭಿನ್ನ ಪ್ರಕಾರಗಳಲ್ಲಿ ಅವರ ಶಕ್ತಿ, ಪ್ರತಿಭೆಗಳು ಬೆಳಗಿವೆ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಓದುವ ಬರೆಯುವ ಹವ್ಯಾಸ ರೂಢಿಸಿಕ
Styles APA, Harvard, Vancouver, ISO, etc.
24

Pinto, Melwyn. "ಕೊಂಕ್ಣಿ ಸಂಸ್ಥ್ಯಾಂತ್ ಸಂಸೊಧಾಚಿಂ ಸಭಾರ್ ಕಾಮಾಂ ಜಾವ್ನ್ಂಚ್ ಆಸಾತ್". MJES Journal of Amar Konkani 1, № 1 (2021): 3–4. https://doi.org/10.69852/aloy.mjesjak.1.1/17765/.

Texte intégral
Résumé :
ಕೊರೋನಾ ಆನಿ ಲೋಕ್ಡಾಾವ್ನಾ ನಿಮ್ತಿಂ ಜಾಯ್ ಪುರ್ತೆಂ ಲುಕ್ಸಾಣ್ ಜಾಲಾಂ ಆನಿ ಆಜೂನ್ ಪರಿಗತ್ ವಿಶೇಸ್ ಸುದ್ರೊಂಕ್ ನಾ ಮ್ಹಳ್ಳೆಂ ಸತ್. ತರಿಕೀ ಕೊಂಕ್ಣೆಚ್ಯಾ ಸಂದರ್ಭಿಂ, ಆನಿ ವಿಶೇಸ್ ಕರ್ನ್ ಕೊಂಕ್ಣಿ ಸಾಹಿತ್ಯ್ ಆನಿ ಲಿಕ್ಣೆಚ್ಯಾ ಸಂದರ್ಭಿಂ, ಕೊರೋನಾ ಆನಿ ಲೋಕ್ ಡಾವ್ನ್ ಎಕಾ ರಿತಿಂ ಬೆಸಾಂವಾಚೊ ಕಾಳ್ ಜಾಂವ್ಕ್ ಪಾವ್ಲೊ ಮ್ಹಣ್ ಸಾಂಗ್ಯೆತ್ ಕೊಣ್ಣಾ. ಪಾಟ್ಲ್ಯಾ ಥೊಡ್ಯಾ ಮಹಿನ್ಯಾಂನಿ ಕೊಂಕ್ಣೆಂತ್ ವಿವಿಧ್ ಬೊಲಿಂನಿ ಫಾಯ್ಸ್ ಜಾಲ್ಲೆ ಬೂಕ್ ಪಳೆತಾನಾ ಅಸಲೆಂ ಏಕ್ ಚಿಂತಾಪ್ ಉದೆತಾ. ಹಿ ವಾಡಾವಳ್ ಮುಕಾರುನ್ಂಬಚ್ ವಚೊಂದಿ ಮ್ಹಳ್ಳಿ ಆಪೇಕ್ಷಾ ಆಮ್ಚಿ ಜಾವ್ನಾಸಾ. ಪ್ರಸ್ತುತ್ ‘ಅಮರ್ ಕೊಂಕಣಿ’ ಅಂಕ್ಯಾಂತ್ ತೀನ್ ಉಂಚ್ಲಿಂ ಲೇಕನಾಂ ಆಸಾತ್. ಫಾ. ದೇವದತ್ತ ಕಾಮತ್ ಹಾಣಿಂ ಲಿಕ್ಲ್ಲೆಂ ಕೊಂಕಣಿ ಭಾಸ್ ಆನಿ ವ್ಯಾಕರಣಾ ಲಗ್ತಿ ಏಕ್ ಲೇಕನ್, ಲೇಕಕಾಚೊ ಕೊಂ
Styles APA, Harvard, Vancouver, ISO, etc.
25

Pinto, Melwyn. "ಭಾಶೆ ವಾಡಾವಳೆಂತ್ ಸಂಸೊದಾಚಿ ಗರ್ಜ್". MJES Journal of Amar Konkani 2, № 1 (2022): 4–7. https://doi.org/10.69852/aloy.mjesjak.2.1/17877/.

Texte intégral
Résumé :
ಎಕ್ಯೆ ಭಾಶೆಚ್ಯೆ ವಾಡಾವಳೆಂತ್ ಸಂಸೊಧಾಚೊ ಮಹತ್ವ್ ಆನಿ ಪಾತ್ರಾ ವಿಶಿಂ ಸಬಾರ್ ಪಾವ್ಟಿಂ ಸವಾಲಾಂ ಉಬ್ಜಾಲ್ಲಿಂ ಆಸಾತ್. ಎಕ್ಯೆ ಭಾಶೆಚ್ಯಾ ವಾಡಾವಳೆಕ್ ಪ್ರಮುಕ್ ಜಾವ್ನ್ ತಿ ಭಾಸ್ ಉಲೊಂವ್ಚೆ ಮನಿಸ್, ತ್ಯೆ ಭಾಶೆಂತ್ ಸಾಹಿತ್ಯ್ ರಚ್ಚೆ ವ್ಯಕ್ತಿ ಆನಿ ತ್ಯೆ ಭಾಶೆಚ್ಯಾ ವಿವಿಧ್ ಸ್ತರಾಂಚೆರ್ ಸಂಸೊಧ್ ಕರ್ಚೆ ಸಂಸೊಧ್‍ಕಾರ್ ಆಸ್ಲ್ಯಾರ್ ಮಾತ್ರ್ ತಿ ಭಾಸ್ ಜಿವಾಳ್ ಉರ್ತಾ ಮ್ಹಣ್ ಸಾಂಗ್ಯೆತ್. ಹ್ಯಾ ತೀನ್ ಆಯಾಮಾಂಕ್ ಆನ್ಯೇಕ್ ಆಧುನಿಕ್ ಆಯಾಮ್ ಆಮಿ ಸೆರ್ಸಿಜೆ ಪಡ್ತಾ: ಆಜ್ ಏಕ್ ಭಾಸ್ ಡಿಜಿಟಲ್ ಮಾದ್ಯಮಾಂತ್‍ಯೀ ಆಸಾಜೆ ಜಾಲ್ಲಿ ಅನಿವಾರ್ಯತಾ ಆಸಾ ಆನಿ ಅಶೆಂ ಆಸ್ಲ್ಯಾರ್ ಮಾತ್ರ್ ತಿ ಜಿವಾಳ್ ಉರೊಂಕ್ ಸಾಧ್ಯ್. ಆಯ್ಚೆ ಪರಿಸ್ಥಿತೆಂತ್ ಇಂಗ್ಲಿಷಾ ತಸಲಿ ಭಾಸ್ ಸಬಾರ್ ಇತರ್ ಲ್ಹಾನ್ ಲ್ಹಾನ್ ಭಾಸಾಂಕ್ ಗಿಳುನ್ ಆಸಾ ಮ್ಹಳ್ಳೆಂ ಸರ್ವಾಂಕ್ ಕಳಿತ್ ಆಸೊಂಕ
Styles APA, Harvard, Vancouver, ISO, etc.
26

SHA, SHETTAR. "ಬೌದ್ಧರು ನಿರ್ಮಿಸಿದ ಪ್ರಾಕೃತ ಜಗದ್ವಲಯ". AKSHARASURYA JOURNAL 03, № 03 (2024): 01 to 25. https://doi.org/10.5281/zenodo.10774933.

Texte intégral
Résumé :
ಕನ್ನಡ ಸಾಹಿತ್ಯ, ಸಂಸ್ಕೃತಿ, ಶಾಸನ, ಚರಿತ್ರೆ, ಭಾಷೆಯ ಕುರಿತು ಆಳವಾದ ಸಂಶೋಧನೆ ನಡೆಸಿ ಹೊಸ ತಿಳಿವು ನೀಡುವ ಮೂಲಕ ಕನ್ನಡದ ಮನಸುಗಳನ್ನು ಬೆಳಗಿದ ಸಂಶೋಧಕರಲ್ಲಿ ಪ್ರೊ.ಷ.ಶೆಟ್ಟರ್ ಅವರು ಅಗ್ರಗಣ್ಯರಾಗಿದ್ದಾರೆ. ಪ್ರೊ. ಷಡಕ್ಷರಪ್ಪ ಶೆಟ್ಟರ್ ಅವರು ಜನಿಸಿದ್ದು 11 ಡಿಸೆಂಬರ್ 1935ರಂದು ಬಳ್ಳಾರಿ ಜಿಲ್ಲೆ ಹಡಗಲಿ ತಾಲ್ಲೂಕಿನ ಹಂಪಸಾಗರದಲ್ಲಿ. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್&zwnj;ನಲ್ಲಿ ಉನ್ನತ ವ್ಯಾಸಂಗ ಮಾಡಿದ ಇವರು ಸಾಹಿತ್ಯ, ಚರಿತ್ರೆ, ಪ್ರಾಕ್ತನಶಾಸ್ತ್ರ, ಶಾಸನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳಗನ್ನಡ ಕಾವ್ಯ ಕುರಿತು ಸುಮಾರು 30ಕ್ಕೂ ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕುವಲ್ಲಿ ಇವರ ಸಂಶೋಧನೆಗಳ ಕೊಡುಗೆ ಬಹಳ ಇತ್ತು. ಕೇಂಬ್ರಿಜ್, ಹಾರ್ವರ್ಡ್,
Styles APA, Harvard, Vancouver, ISO, etc.
27

ಡಿ.ಆರ್.‌, ನಾಗರಾಜ್, та ಎಂ. ಭೈರಪ್ಪ ಕುಪ್ಪನಹಳ್ಳಿ. "ಅಲ್ಲಮನ ಕಾಯ ಸಿದ್ಧಾಂತ". AKSHARASURYA JOURNAL 05, № 04 (2024): 01 to 29. https://doi.org/10.5281/zenodo.14289448.

Texte intégral
Résumé :
ಡಾ.ಡಿ.ಆರ್.ನಾಗರಾಜ್ ಅವರ ಹೆಸರು ಕೇಳಿದಾಕ್ಷಣ ಕನ್ನಡದ ಶ್ರೇಷ್ಠ ವಿಮರ್ಶಕರು ಎಂಬ ಪ್ರಶಂಸೆಯೇ ಮೊದಲಿಗೆ ನೆನಪಾಗುತ್ತದೆ. ಆದರೆ, ಡಿ.ಆರ್.ಎನ್ ಅವರು ವಿಮರ್ಶೆ ಎಂಬ ಪ್ರಾಕಾರಸೀಮೆಯನ್ನು ದಾಟಿಕೊಂಡು ನಿಸ್ಸೀಮರಾಗಿ ಸೃಜನಶೀಲ ಲೇಖಕರಾಗಿಯೂ ಸಾಂಸ್ಕೃತಿಕ ಸಂಶೋಧಕರಾಗಿಯೂ ಮಹತ್ತರವಾದ ಸಾಧನೆಯನ್ನು ಮಾಡಿದ್ದಾರೆ. ಬೈನರಿ ವಿಭಜನೆಯ ಚಿಂತನಕ್ರಮಗಳಿಂದಾಗಿ ಕನ್ನಡಕ್ಕೆ ಉಂಟಾಗುತ್ತಿರುವ ಧಕ್ಕೆಯನ್ನು ಮನಗಂಡು ಕನ್ನಡ ಪ್ರಜ್ಞಾವಲಯದ ವೈಶಾಲ್ಯತೆಯನ್ನೂ ವೈವಿಧ್ಯತೆಯನ್ನೂ ತನ್ಮೂಲಕ ಕೂಡಲಸಂಗಮಗೊಳಿಸಿದ ಅಪೂರ್ವ ಚಿಂತಕರಾಗಿದ್ದಾರೆ. ಭಾರತದ ಪ್ರಮುಖ ಚಿಂತಕರಲ್ಲಿ ಒಬ್ಬರಾಗುವ ಮಟ್ಟಿಗೆ ಬೆಳೆದ ಡಿ.ಆರ್&zwnj;.ನಾಗರಾಜ್ ಅವರ ಬರವಣಿಗೆಯು ಪ್ರಖರ ಚಿಂತನೆಗೆ ಹೆಸರುವಾಸಿಯಾಗಿದೆ. ನಟರಾಜ್ ಹುಳಿಯಾರ್ ಅವರು ದಾಖಲಿಸುವಂತೆ, &lsquo;ಸಾಹಿತ್ಯ ವಿಮರ್ಶೆ, ಸಂಶೋಧನೆ,
Styles APA, Harvard, Vancouver, ISO, etc.
28

ಎಸ್., ಎಸ್. ಹಿರೇಮಠ, та ಭೈರಪ್ಪ ಎಂ. "ಕರ್ನಾಟಕದಲ್ಲಿ ದಲಿತರು". AKSHARASURYA JOURNAL 04, № 04 (2024): 01 to 44. https://doi.org/10.5281/zenodo.13283983.

Texte intégral
Résumé :
<strong>ನೆಲಮೂಲ ಸಂಸ್ಕೃತಿಯ ಮಹಾಶೋಧಕರಾಗಿ ಪ್ರೊ.ಎಸ್.ಎಸ್.ಹಿರೇಮಠರ ಕಾಯಕ</strong> ನೆಲಮೂಲ ಸಂಸ್ಕೃತಿಯ ಜಾಡಿನಲ್ಲಿ ಸಂಶೋಧನೆಯನ್ನು ಕೈಗೊಂಡು ಬಹುತ್ವ ಭಾರತ ಹಾಗೂ ದಲಿತ ಸಂಸ್ಕೃತಿಯ ವಿರಾಟ್ ಸ್ವರೂಪವನ್ನು ಅನಾವರಣ ಮಾಡಿದ ಮಹಾಶೋಧಕರಲ್ಲಿ ಪ್ರೊ.ಎಸ್.ಎಸ್.ಹಿರೇಮಠ ಅವರು ಪ್ರಾತಃಸ್ಮರಣೀಯರಾಗಿದ್ದಾರೆ. ತಮ್ಮ ಅಧ್ಯಾಪನ ಮತ್ತು ಸಂಘಟನಾ ಕಾಯಕದ ಮೂಲಕ ಜನಪರ ಮನಸುಗಳನ್ನು ರೂಪಿಸಿದ ಕ್ರಾಂತಿಕಾರಿಯೂ ಆಗಿದ್ದ ಹಿರೇಮಠ ಮೇಷ್ಟ್ರು ಸಂಶೋಧನಾ ಕಾಯಕದ ಮೂಲಕ ಸೀಮಿತ ಬೌದ್ಧಿಕ ಹಾಗೂ ಸಾಂಸ್ಕೃತಿಕ ಸೀಮೆಗಳನ್ನು ಬಹುವಾಗಿ ವಿಸ್ತರಿಸಿಕೊಟ್ಟಿದ್ದಾರೆ. ಆದಿಮ ನೆಲೆಯಿಂದ ಹಿಡಿದು ಆಧುನಿಕ ನೆಲೆಯ ಸಾಂಸ್ಕೃತಿಕ ಸಂಗತಿಗಳ ವರೆಗೂ ಆಳವಾದ ಸಂಶೋಧನೆಯನ್ನು ಕೈಗೊಂಡ ಹಿರೇಮಠರು ಲೋಕಮುಖೀ ಒಳಹರವಿನ ಅನೇಕ ಸೂಕ್ಷ್ಮಗಳನ್ನು ನಿಕಷಕ್ಕೆ ಒಡ್ಡಿದ್ದಾರೆ; ನೆಲದರಿವಿನ ಸೀಮ
Styles APA, Harvard, Vancouver, ISO, etc.
29

ಭೈರಪ್ಪ, ಡಾ ಎಂ. "ಲೋಕಧ್ಯಾನದಲ್ಲಿ ‘ಸಂಭೋಳಿ’ ಕಂಡ ಸತ್ಯ-ಮಿಥ್ಯಗಳ ಸಂ-ದರ್ಶನ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 31 березня 2023, 33–40. http://dx.doi.org/10.59176/kjksp.v2i1.2288.

Texte intégral
Résumé :
ಲೋಕಸಂಸ್ಕೃತಿಯ ಪ್ರಜ್ಞಾಪರಂಪರೆಯಲ್ಲಿ ಜೀವನಧ್ಯಾನದಿಂದ ಮೂಡಿದ ಅರಿವು ಕಾಲಕಾಲಗಳನ್ನೂ ದಾಟಿಕೊಂಡು ಬಂದು ಈ ಹೊತ್ತಿಗೂ ಯಾವೊತ್ತಿಗೂ ದೀಪಧಾರಿಯಾಗಿ ಕಂಗೊಳಿಸುತ್ತಿದೆ. ಜೀವನಧ್ಯಾನಿಗಳು ತಮ್ಮೊಳಗೆ ಲೋಕವನ್ನೂ, ಲೋಕದೊಳಗೆ ತಮ್ಮನ್ನೂ ಕನ್ನಡಿಯಾಗಿಸಿಕೊಂಡು ನಿತ್ಯಬೆಳಗುವ ಸತ್ಯ-ಮಿಥ್ಯಗಳ ಸಂ-ದರ್ಶನ ಮಾಡುತ್ತಾರೆ. ಮೌನ-ಮಾತುಗಳ ನಡುವಿನ ಮಧ್ಯಮದೀವಿಗೆ ಹಿಡಿದು ಬೆಳಕಿನ ಬೀಜಗಳನ್ನು ಚೆಲ್ಲ್ಲುತ್ತಾ ನಡೆಯುತ್ತಾರೆ. ಇಂಥ ಧ್ಯಾನಿಗಳ ಸಾಲಿನಲ್ಲಿ ಅಪರಿಮಿತ ಸಂವೇದನಾಶೀಲರ ವಿಸ್ತರಣೆಯಂತೆ ಕಾಣುವ, ಅಭಿವ್ಯಕ್ತಿ ಪರಂಪರೆಯಲ್ಲಿ ಅನನ್ಯತೆ ಸಾಧಿಸಿಕೊಂಡಿರುವ ಸಾಹಿತ್ಯಚೇತನರೂ ಅಸಂಖ್ಯ. ಲೋಕವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ನುಂಗಿನೊಣೆಯುತ್ತಿರುವ ಕಾರ್ಗತ್ತÀ್ತಲೊಳಗೆ ಕರಗಿಹೋಗದೆ, ಅಲ್ಲಮನು ಹೇಳುವಂತೆ ‘ಅಪರಿಮಿತದ ಕತ್ತಲೆಯೊಳಗೆ ವಿಪರೀತ ಬೆಳಕನಿತ್ತವ
Styles APA, Harvard, Vancouver, ISO, etc.
30

ಆರ್., ಕವಿತಾ, та ರಾಜಶೇಖರ ಜಮದಂಡಿ. "ಹಾಸ್ಯ ಲೋಕ ಸ್ವರ್ಗ ಸುಖ (ನಕ್ಕರೆ ಅದೇ ಸ್ವರ್ಗ)". International Journal of Philosophy and Languages (IJPL), 30 червня 2023, 48–52. http://dx.doi.org/10.47992/ijpl.2583.9934.0013.

Texte intégral
Résumé :
ಉದ್ದೇಶ: ಹಾಸ್ಯ ಬರೀ ಸಂತಸವನ್ನು ನೀಡುವುದಲ್ಲ. ಹಾಸ್ಯ ಪರಸ್ಪರ ಆತ್ಮೀಯತೆಯನ್ನು ಆಸ್ವಾದಿಸುವುದಕ್ಕೆ ಇರುವ ಒಂದು ಶಕ್ತಿ. ಹಣದಿಂದ ಒಬ್ಬ ವ್ಯಕ್ತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಹಾಸ್ಯದಿಂದ / ನಗುವಿನಿಂದ ವ್ಯಕ್ತಿಯನ್ನು ಗೆಲ್ಲಲು ಸಾಧ್ಯ ಮತ್ತು ದೃಢವಾಗಿ ನಿಲ್ಲಲು ಸಾಧ್ಯ. ಪ್ರೀತಿ ಮತ್ತು ನಗು ಎಷ್ಟು ಚಿಕ್ಕ ಪದ. ಆದರೆ ಆ ಪದಗಳಿಗೆ ಇಡೀ ಜಗತ್ತನ್ನು ಗೆಲ್ಲುವ ಶಕ್ತಿ ಇದೆ. ನಗು ಇರುವ ಕಡೆ ಪ್ರೀತಿ ಬೆಳೆಯುತ್ತೆ. ಪ್ರೀತಿ ಬೆಳೆದ ಕಡೆ ನಗು ತುಂಬಿರುತ್ತೆ. ಹಾಸ್ಯ ಪ್ರಜ್ಞೆಯನ್ನು ಎಲ್ಲರನ್ನು ಮೂಡಿಸಿ ನಗು-ನಗುತ್ತಾ ಇರುವಂತೆ ಮಾಡುವುದೇ ಇದರ ಉದ್ದೇಶ. ಅಷ್ಟೇ ಅಲ್ಲ ಇತರರ ಗಮನವನ್ನು ಆಕರ್ಷಿಸುವುದು. ಸಾಮರಸ್ಯವನ್ನು ಸೃಷ್ಟಿಸುವುದು. ಸಂದೇಶವನ್ನು ಸ್ಮರಣಾರ್ಹವಾಗಿ ಪರಿವರ್ತಿಸುವುದು. ಉದ್ವೇಗ, ಉದ್ರೇಕಗಳನ್ನು ಉಪಶಮನ ಮಾಡುವುದು. ಸ
Styles APA, Harvard, Vancouver, ISO, etc.
31

ಮುಯಿನ್, ಸೈಯದ್. "ಅಲ್ಲಿದೆ ನಮ್ಮನೆ ..... ಇಲ್ಲಿ ಬಂದೆ ಸುಮ್ಮನೆ !!" ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 1 березня 2024, 74–80. http://dx.doi.org/10.59176/kjksp.v3i1.2340.

Texte intégral
Résumé :
ಪ್ರಸ್ತುತ ಲೇಖನವು ಕೆ. ಎಸ್. ನರಸಿಂಹಸ್ವಾಮಿ ಅವರ ಮನೆಯಿಂದ ಮನೆಗೆ ಕವನದ ವಿಶ್ಲೇಷಣೆಯಾಗಿದೆ. ಸಾವು ಮುಕ್ತಿಯ ಸಂಕೇತ, ಬದುಕಿನ ಜಂಜಾಟಗಳಿAದ, ನೋವು, ಪರದಾಟಗಳಿಂದ ಮುಕ್ತನಾಗುವ ಕ್ರಿಯೆ, ಸುಖ, ದುಖಗಳು ಶಾಶ್ವತವಲ್ಲ ಆದರೆ ಸಾವು ಶಾಶ್ವತವಾದುದು, ಸಾವು ಲೌಕಿಕ ಜಗತ್ತಿಗೆ ವಿದಾಯ ಮತ್ತು ಹೊಸ ಜಗತ್ತಿನಲ್ಲಿ ಹೊಸ ಜೀವನಕ್ಕೆ ಸ್ವಾಗತವನ್ನು ಒಳಗೊಂಡಿರುತ್ತದೆ. ಈ ಸತ್ಯದ ಕುರಿತಾಗಿ ಕವನ ಚರ್ಚೆ ಮಾಡುವುದು ಸೂಚ್ಯಾರ್ಥದ ಮೂಲಕ. ‘ಹೆಸರಿರದ ಇನ್ನೊಂದು ಮನೆಗೆ ಹೊಸತು ಹಳೆಯದು ಎಲ್ಲ ಯಾತ್ರೆ ಹೊರಟಿದ್ದೇವೆ’ ಎನ್ನುವ ಮಾತು ಆಧ್ಯಾತ್ಮಿಕ ಹುಟುಕಾಟವನ್ನು ಸೂಚಿಸುವಂತಹದ್ದಾಗಿದೆ. ಜೀವನದ ಕೊನೆಯಲ್ಲಿ ಹೊಸಬರು ಮತ್ತು ಹಳಬರು ಎಂಬ ಯಾವುದೇ ಭೇದ ಭಾವವಲ್ಲದೆ ಎಲ್ಲಾ ಜೀವರಾಶಿಗಳೂ ಆದರವಿರದ, ಹೆಸರಿರದ, ಕದವಿರದ ಇನ್ನೊಂದು ಮನೆಗೆ ಹೋಗಲೇಬೇಕಾಗುತ್ತದೆ. ಅದೇ ಕ
Styles APA, Harvard, Vancouver, ISO, etc.
Nous offrons des réductions sur tous les plans premium pour les auteurs dont les œuvres sont incluses dans des sélections littéraires thématiques. Contactez-nous pour obtenir un code promo unique!