To see the other types of publications on this topic, follow the link: ಅನುಭವ.

Journal articles on the topic 'ಅನುಭವ'

Create a spot-on reference in APA, MLA, Chicago, Harvard, and other styles

Select a source type:

Consult the top 28 journal articles for your research on the topic 'ಅನುಭವ.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Browse journal articles on a wide variety of disciplines and organise your bibliography correctly.

1

ಮನುಕುಮಾ‌ರ್, ಎಸ್.ವಿ. "ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆ". AKSHARASURYA JOURNAL 06, № 04 (2025): 49 to 55. https://doi.org/10.5281/zenodo.15490876.

Full text
Abstract:
ಸರಳವಾದ, ಸುಲಲಿತವಾದ, ಸುಮಾಧುರ್ಯತೆಯ ಕಂಪನ್ನು ಸೂಸಿದ ವೈಶಿಷ್ಟ್ಯಪೂರ್ಣವಾದ ಸಾಹಿತ್ಯವೇ “ವಚನ ಸಾಹಿತ್ಯ”  ಶಿವಶರಣರ ಅಂತರ್ಗತ ಅನುಭವದ ನಿರ್ಭಯವಾದ ನೀತಿ, ಮತ, ತತ್ವಭೋಧನೆಯ ಸಾರವಾಗಿದೆ.  ವಚನ ಸಾಹಿತ್ಯ ಒಂದು ಅನನ್ಯ ಮತ್ತು ಪ್ರಬಲ ಸಾಹಿತ್ಯ ಪ್ರಕಾರವಾಗಿದ್ದು ಈ ಸಾಹಿತ್ಯವು ಆಧ್ಯಾತ್ಮಿಕತೆ, ಸಮಾಜದ ಸುಧಾರಣೆ ಮತ್ತು ಅನುಭವ ಶ್ರದ್ಧೆಯ ಬಗೆಗಿನ ಆಳವಾದ ಚಿಂತನೆಗಳನ್ನು ಪ್ರತಿಬಿಂಬಿಸುತ್ತದೆ.  ವಚನ ಸಾಹಿತ್ಯ ಮುಖ್ಯ ಉದ್ದೇಶ ಸಮಾಜ ಸುಧಾರಣೆ. ರಾಜಕೀಯವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಆಂತರೀಕ ಪರಿಶುದ್ಧಿಗೆ ಮತ್ತು ದೈವೀಕ ಏಕತೆಗೆ ಮಹತ್ವ ನೀಡುವುದಾಗಿದೆ. ಸಮಾಜದಲ್ಲಿ ಜಾತಿ, ವರ್ಣ ಮತ್ತು ಲಿಂಗಭೇದಗಳನ್ನು ವಿರೋದಿಸಿ ಸಮಾನತೆಯ ಮತ್ತು ಜಾತಿ ರಹಿತ ಸಮಾಜದ ಸುಧಾರಣೇ ಮೂಡಿಸುವ ಉದ್ದೇಶವಾಗಿದೆ. ವಚನಕಾರರು
APA, Harvard, Vancouver, ISO, and other styles
2

ಜ್ಯೋತಿ, ಎನ್. ಭಟ್. "ಮಾನವೀಯ ಸಮಾಜ ರೂಪಿಸುವಲ್ಲಿ ವಚನಗಳ ಪಾತ್ರ". AKSHARASURYA JOURNAL 06, № 04 (2025): 97 to 106. https://doi.org/10.5281/zenodo.15490983.

Full text
Abstract:
ವಚನ ಸಾಹಿತ್ಯವು 12ನೇ ಶತಮಾನದ ಕನ್ನಡದ ವಿಶಿಷ್ಟ ಸಾಹಿತ್ಯಪ್ರಕಾರವಾಗಿದೆ. ಇದನ್ನು ಪಂಡಿತರಿಗೆ ಮೀಸಲಾಗಿದ್ದ ಸಾಹಿತ್ಯದ ಮೀರೆದು, ಸಾಮಾನ್ಯ ಜನರ ಬದುಕು, ಅನುಭವ, ತತ್ವಗಳನ್ನು ಸರಳವಾದ ಭಾಷೆಯಲ್ಲಿ ವ್ಯಾಖ್ಯಾನಿಸಿ ಸಮಾಜದಲ್ಲಿ ಜಾಗೃತಿ ತರಲು ಶರಣರು ಬಳಸಿದರು. ಮಾತನ್ನು ಮತಿಸಿದಾಗ ಮಾತ್ರ ವಚನವಾಗುವುದು ಎಂಬ ತತ್ವದೊಂದಿಗೆ, ವಚನಗಳು ಅನುಭವದ ಭಾವಗೀತೆಗಳಾಗಿವೆ. ಇದರಲ್ಲಿ ಧರ್ಮ, ನೀತಿ, ಜ್ಞಾನ, ಶ್ರಮ, ಸಮಾನತೆ, ಕಾಯಕ ಮತ್ತು ದಾಸೋಹದಂತಹ ಮಾನವ ಮೌಲ್ಯಗಳು ಸೊಗಸಾಗಿ ಪ್ರತಿಬಿಂಬಿಸುತ್ತವೆ. ಜಾತಿ, ಲಿಂಗ, ಧರ್ಮಗಳ ಭೇದವನ್ನು ತಿರಸ್ಕರಿಸಿ ಎಲ್ಲರಿಗೂ ಸಮಾನ ಸ್ಥಾನವಿರಬೇಕು ಎಂಬ ಸಂದೇಶ ನೀಡುತ್ತವೆ. ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮಪ್ರಭು, ಚನ್ನಬಸವಣ್ಣನಂತಹ ಶರಣರು ಸಮಾಜ ಸುಧಾರಣೆಗೆ ಮುಂಚೂಣಿಯಲ್ಲಿದ್ದರು. ಅವರು ಪುರಾಣಕಥೆಗಳನ್ನು ಬಳಸದೆ, ತ
APA, Harvard, Vancouver, ISO, and other styles
3

ಸಾವಿತ್ರಿ, ಮಠ. "ವಚನ ಚಳುವಳಿ ಮತ್ತು ಮಹಿಳಾ ಸಮಾನತೆ". AKSHARASURYA JOURNAL 06, № 05 (2025): 201 to 206. https://doi.org/10.5281/zenodo.15504642.

Full text
Abstract:
ಹನ್ನೆರಡನೆಯ ಶತಮಾನದಲ್ಲಿ ವಚನಗಳ ಮೂಲಕ ಸಾಮಾಜಿಕ ಚಿಂತನೆ, ವೈಚಾರಿಕತೆ, ಧಾರ್ಮಿಕ ಓರೆಕೋರೆಗಳ ವಿಶ್ಲೇಷಣೆ ಕಾಯಕ ಶ್ರದ್ಧೆಯೊಂದಿಗೆ ಮಹಿಳೆಯರಿಗೆ ಸ್ವಾತಂತ್ರ್ಯ ಸಮಾನತೆ ನೀಡಿ ಅವರಲ್ಲಿ ವಿಶ್ವಾಸವನ್ನು ಮೂಡಿಸಿದವರು ಶಿವಶರಣರು. ತಮ್ಮ ವಚನಗಳಲ್ಲಿ ಲಿಂಗಾತೀತ ನೆಲೆಯನ್ನು ಪುರಸ್ಕರಿಸಿ, ಲಿಂಗತಾರತಮ್ಯದ ಸಮಾಜದಲ್ಲಿ ವಿಚಾರ, ವಿಮರ್ಶೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು ವಚನ ಚಳುವಳಿ. ಹೆಣ್ಣನ್ನು ʻಮಾಯೆʼ ಎಂದು ಹೀಗಳೆಯುತ್ತಿದ್ದ ಪುರುಷ ಪ್ರಧಾನ ಮನೋಧೋರಣೆಗೆ ತಡೆಹಾಕಿ ಹೆಣ್ಣನ್ನು ಹತ್ತಿಕ್ಕುವ ಸಮಾಜದ ಕೌರ್ಯವನ್ನು ಖಂಡಿಸಿ ಸ್ತ್ರೀಸಂವೇದನೆಗೆ ಹೊಸ ಆಯಾಮವನ್ನು ತಂದುಕೊಟ್ಟವರು ವಚನಕಾರರು. ಇದರಿಂದ ಸಮಾಜದಲ್ಲಿ ಮಹಿಳೆಯರಿಗೆ ಸಾಕಷ್ಟು ಅವಕಾಶಗಳು ದೊರೆತು ಅನುಭವ ಮಂಟಪದಲ್ಲಿ ಪುರುಷರ ಸಮಾನವಾಗಿ ಚರ್ಚೆ ಮಾಡಿ ಸಮಾಜಕ್ಕೆ ಮಹಿಳೆಯರ ಕೊಡುಗೆ ಏನೆಂಬು
APA, Harvard, Vancouver, ISO, and other styles
4

ತ್ರಿವೇಣಿ. "ಸಾಮಾಜಿಕ ಹರಿಕಾರ ಬಸವಣ್ಣ". AKSHARASURYA JOURNAL 04, № 04 (2024): 139 to 143. https://doi.org/10.5281/zenodo.13284139.

Full text
Abstract:
ಪ್ರಭುತ್ವದ ಮೇಲಾಟಕ್ಕೆ ಪರ್ಯಾಯವಾಗಿ ಜನಶಕ್ತಿ ರೂಪುಗೊಳ್ಳಬೇಕೆಂದು ಬಯಸುತ್ತಿದ್ದ ಬಸವಣ್ಣನವರು ಕಾಯಕ-ದಾಸೋಹಗಳ ಮುಖೇನ ಅದನ್ನು ಸಾಧಿಸುವ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಕಾಳಜಿಯುಳ್ಳ ಸಮಾನ ಮನಸ್ಕರ ಸಂಘಟನೆಯಿಂದ ಮಾತ್ರ ಇಂಥದ್ದನ್ನು ಸಾಧಿಸಲು ಸಾಧ್ಯವೆಂಬ ನಿಲುವಿನಲ್ಲಿ, ಜಾತಿ, ವರ್ಣ, ವರ್ಗಗಳೇ ಮೊದಲಾದ ಎಲ್ಲ ಬಂಧನಗಳನ್ನು ಮೀರಿದ ‘ಅನುಭವ ಮಂಟಪ’ ಎಂಬ ಒಂದು ಅದ್ಭುತ ವೇದಿಕೆಯನ್ನು ರೂಪಿಸಿದರು. ಅನುಭವಮಂಟಪದಲ್ಲಿ ಎಲ್ಲರೂ ಸಮಾನಭಾವದಲ್ಲಿ ಸಾಮಾಜಿಕ ಒಳಿತಿನ ಉದ್ದೇಶದಿಂದ ಸೇರಿ ಪರಸ್ಪರ ಚರ್ಚೆ ಮಾಡಿದರು. ಆ ಮೂಲಕ ಅಂದೇ ಪ್ರಜಾಪ್ರಭುತ್ವಕ್ಕೆ ಅಡಿಗಲ್ಲನ್ನು ಹಾಕಿದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇನ್ನಿಲ್ಲದ ಮಹತ್ವ ನೀಡಿದ ಅನುಭವ ಮಂಟಪವು ಶರಣ ಶರಣೆಯರೆಲ್ಲ ಲಿಂಗ-ಜಾತಿಬೇಧಗಳಿಲ್ಲದಂತೆ ಒಗ್ಗೂಡಲು ಇಂಬು ನೀಡಿತು. ಇಂ
APA, Harvard, Vancouver, ISO, and other styles
5

ಶಂಕರ್, ಜ್ಯೋತಿ, та ಮಮತ ಬಿ ಆರ್. "ಶಿವಶರಣೆಯರ ವಚನಗಳಲ್ಲಿ ಪ್ರಾಣಿ ಪ್ರತಿಮೆ". Shanlax International Journal of Arts, Science and Humanities 12, S1-Oct (2024): 219–23. https://doi.org/10.34293/sijash.v12is1-oct.8308.

Full text
Abstract:
ಜಗತ್ತಿನ ಸಾಂಸ್ಕೃತಿಕ ಇತಿಹಾಸವನ್ನು ಗಮನಿಸಿದರೆ ನಮ್ಮ ಕನ್ನಡ ನಾಡಿನ ಶರಣಸಂಸ್ಕೃತಿಯು ಮಹತ್ತರವಾದುದು. ೧೨ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ಶರಣ ಸಂಸ್ಕೃತಿ ಹಾಗೂ ವಚನ ಸಾಹಿತ್ಯವು ಅಂದಿನ ಸಮಾಜದಲ್ಲಿ ನೆಲೆಯೂರಿದ್ದ ಅನೇಕ ಮೂಢನಂಬಿಕೆಗಳು, ಅಂಧಶ್ರದ್ಧೆಗಳು, ಅಂಧ ಆಚರಣೆಗಳು, ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಲು ಸಹಾಯಕವಾಗಿದ್ದವು. ಬಸವಣ್ಣನವರಿಂದ ಸ್ಥಾಪಿತವಾದ ಅನುಭವ ಮಂಟಪದಲ್ಲಿ ಎಲ್ಲಾ ಶರಣರು ತನ್ನ ಅನುಭವ, ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದರು. ಇದಕ್ಕಾಗಿ ಅವರು ಬಳಸಿಕೊಂಡ ಮಾಧ್ಯಮವೇ ವಚನಗಳು. ಶಿವಶರಣರು ಸಮಾಜದಲ್ಲಿ ಕಂಡ ಅನೇಕ ವಿಷಯಗಳನ್ನು ತಮ್ಮ ಮನದ ಅಂತರಾಳದಲ್ಲಿ ತುಡಿಯುತ್ತಿರುವ ಭಾವನೆಗಳನ್ನು ಸಮರ್ಪಕವಾಗಿ ವ್ಯಕ್ತಪಡಿಸಲು ಅನೇಕ ಪ್ರತಿಮೆಗಳನ್ನು ಬಳಸಿಕೊಂಡರು. ಅವುಗಳಲ್ಲಿ ಪ್ರಾಣಿ ಪ್ರತಿಮೆ ಕೂಡ ಒಂದಾಗಿದೆ.
APA, Harvard, Vancouver, ISO, and other styles
6

ರೇಣುಕಮ್ಮ, ಜೆ. "ಮಾಸ್ತಿ ವೆಂಕಟೇಶ ಅಯ್ಯಂಗಾರರ ಸಣ್ಣ ಕಥೆಗಳಲ್ಲಿನ ಕೌಟುಂಬಿಕ ಸಫಲತೆ". AKSHARASURYA 05, № 01 (2024): 104 to 113. https://doi.org/10.5281/zenodo.13870938.

Full text
Abstract:
ಸಣ್ಣ ಕತೆಗಳ ಜನಕ ಎಂದೇ ಪ್ರಸಿದ್ಧರಾದವರು ಮಾಸ್ತಿ ವೆಂಕಟೇಶ ಅಯ್ಯಂಗಾರರು. ಶ್ರೀನಿವಾಸ ಎಂಬ ಕಾವ್ಯನಾಮದಿಂದ ಸಣ್ಣ ಕಥೆಗಳನ್ನು ರಚಿಸಿದ್ದಾರೆ. ಅವರ ಕೆಲವು ಸಣ್ಣ ಕಥೆಗಳಲ್ಲಿ ಬರುವ ಕೌಟುಂಬಿಕ ಸಫಲತೆಯನ್ನು ಶೋಧಿಸುವ ಪ್ರಯತ್ನವೇ ಈ ಲೇಖನದ ಉದ್ಧೇಶ. ‘ರಂಗನ ಮದುವೆ’ ಯಿಂದ ಹಿಡಿದು ಮಾಯಣ್ಣನ ಕನ್ನಡಿ ತನಕ ಅವರ ಸಣ್ಣ ಕಥೆಗಳಲ್ಲಿ ಕಾಣುವುದು ಸಾಮಾನ್ಯ ಘಟನೆಗಳನ್ನು ಮತ್ತು ಉತ್ಪ್ರೇಕ್ಷೆಯಿಲ್ಲದೆ ನಿರೂಪಿಸುವ ಶೈಲಿಯನ್ನು. ‘ವೆಂಕಟಿಗನ ಹೆಂಡತಿ’ಯಲ್ಲಿ ನೀತಿ ತಪ್ಪಿದ ಹೆಂಡತಿಯನ್ನು ಮತ್ತೆ ಅನುಕಂಪದಿಂದ ಸ್ವೀಕರಿಸುವ ಕಟ್ಟಿಗೆ ಮಾರುವ ವೆಂಕಟಿಗನಿಂದ ಹಿಡಿದು ಕರ್ಮಯೋಗದ ಕೊನೆಯದಿನದಲ್ಲಿ ನಿರ್ಲಿಪ್ತರಾಗಿ ಬೆಳಕಿನ ಲೋಕಕ್ಕೆ ತೆರಳಿದ ಮಹ಼ರ್ಷಿ ವಾಮದೇವ ದ್ವೈಪಾಯನರವರೆಗೆ ಎಲ್ಲಾ ಪಾತ್ರಗಳ ಜೀವನವನ್ನು ಚಿತ್ರಿಸಿರುವುದು ಸಹ
APA, Harvard, Vancouver, ISO, and other styles
7

ಪ್ರಕಾಶ. "ವಚನಕಾರ್ತಿಯರಲ್ಲಿ ಬಂಡಾಯದ ನೆಲೆಗಳು". AKSHARASURYA JOURNAL 06, № 04 (2025): 56 to 63. https://doi.org/10.5281/zenodo.15490899.

Full text
Abstract:
೧೨ನೇ ಶತಮಾನದ ವಚನಚಳವಳಿಯೇ ಚಾರಿತ್ರಿಕವಾಗಿ ಬಹುದೊಡ್ಡ ಪ್ರಮಾಣದ ಬಂಡಾಯಕ್ಕೆ ನೂತನ ಅಯಾಸವನ್ನು ನೀಡಿತು. ಸುಮಾರು ಮೂವತ್ತೆರಡು ಜನ ಶರಣೆಯರು ವಚನಗಳನ್ನು ರಚಿಸಿ ಶ್ರೇಷ್ಠ ಚಿಂತಕಿಯರಾದರು ಅವರು ಸಮಾಜದ ಡಾಂಭಿಕತೆಯ ವಿರುದ್ಧ ಪ್ರತಿಭಿಟಿಸಿದ ರೀತಿ ಅಗಮ್ಯವಾದುದು. ಲಿಂಗಭೇದ ನಿರಾಕರಣೆ, ಮನೋಪ್ರವೃತ್ತಿಗಳ ವಿರುದ್ಧ ಪ್ರತಿಭಟನೆ ಮಾಡಿರುವುದು ಅವರ ಜ್ಞಾನ, ಆತ್ಮಸ್ಥೈರ್ಯ ಹಾಗೂ ಅವರ ಒಳಗಿನ ಬಂಡಾಯ ಗುಣಕ್ಕೆ ಸಾಕ್ಷಿಯಾಗಿದೆ.ಪುರುಷ ಪ್ರಧಾನ ಸಮಾಜವು ತನ್ನ ಹಿತಾಶಕ್ತಿಯನ್ನು ಕಾಯ್ದುಕೊಂಡು ಮಹಿಳೆಯನ್ನು ಕತ್ತಲೆಯ ಕೂಪಕ್ಕೆ ತಳ್ಳಿತ್ತು ೧೨ನೇಯ ಶತಮಾನದ ಬಸವಾದಿ ಶರಣರು ಮಹಿಳೆಯರ ಬದುಕಿನಲ್ಲಿದ್ದ ಕತ್ತಲೆಯನ್ನು ಸರಿಸಿ ಬೆಳಕಿನ ಮಾರ್ಗವನ್ನು ದರ್ಶಿಸಿದರು ಮನುಷ್ಯನ ಸಣ್ಣತನವನ್ನು ಶಮನಗೊಳಿಸಿ ಸಮಾನತೆಯ ತಳಹದಿಯ ಮೇಲೆ ಮಾನವೀಯವಾದ ಸಮಸಂಸ್ಕೃತಿಯ ಸಮಾಜ
APA, Harvard, Vancouver, ISO, and other styles
8

ಮೋಹನ್‌, ಕುಮಾರ್‌ ಆರ್‌. "ನೇಯ್ಗೆ ಕಾಯಕದ ಶರಣ ಮತ್ತು ಶರಣೆಯರ ವಚನಗಳ ಮಹತ್ವ". AKSHARASURYA JOURNAL 06, № 06 (2025): 47 to 60. https://doi.org/10.5281/zenodo.15580976.

Full text
Abstract:
ಆದ್ಯವಚನಕಾರರಾದ ಜೇಡರ ದಾಸಿಮಯ್ಯನವರು ನೇಯ್ಗೆ ಕಾಯಕವನ್ನು ಮಾಡುತ್ತಿದ್ದ ಶ್ರೇಷ್ಠ ಶಿವಶರಣ ಹಾಗೆಯೇ ದೊರೆತಿರುವ ಆಧಾರಗಳ ಮೇರೆಗೆ ದಾಸಿಮಯ್ಯನ ಪತ್ನಿ ದುಗ್ಗಳೆ, ಅಮುಗಿ ದೇವಯ್ಯ, ಅಮುಗೆ ರಾಯಮ್ಮ, ಆದಯ್ಯ, ಕದಿರ ರೆಮ್ಮವ್ವೆ, ಕದಿರ ಕಾಯಕದ ಕಾಳವ್ವೆಯರು ಕೂಡ ನೇಯ್ಗೆ ಕಾಯಕವನ್ನು ಮಾಡುತ್ತ ಸಮಾಜಕ್ಕೆ ತಮ್ಮದೇ ಆದ ವಚನಗಳ ಮೂಲಕ ಸಮಾಜದ ಸರ್ವೋನ್ನತಿಗೆ ಶ್ರಮಿಸಿದ ಕಾಯಕ ಶರಣ ಮತ್ತು ಶರಣೆಯರು. ನೇಯ್ಗೆ ಕಾಯಕವನ್ನು ಮಾಡುತ್ತಿದ್ದ ಈ ಶರಣ ಮತ್ತು ಶರಣೆಯರು ತಮ್ಮ ಅನುಭವ, ಆತ್ಮಾನುಭೂತಿಯನ್ನು ಸಮಾಜದ ಜನರೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸಿದರು. ಸರಳ ಮತ್ತು ಸ್ಪಷ್ಟ ನುಡಿಗಳಲ್ಲಿ ವಚನಗಳನ್ನು ಕಟ್ಟಿಕೊಟ್ಟು ದಾಂಪತ್ಯದಿಂದಲೂ ಮೋಕ್ಷ ಸಂಪಾದನೆ ಸಾಧ್ಯವೆಂಬ ಅಧ್ಯಾತ್ಮಿಕ ಚಿಂತನೆಯನ್ನು ತೋರಿದವರು. ಸತ್ಯದ ಪ್ರತಿಪಾದನೆ, ಸ್ತ್ರೀಪರ ಕಾಳಜಿ, ಸ್ತ್ರೀಸಮ
APA, Harvard, Vancouver, ISO, and other styles
9

ಯಲ್ಲಪ್ಪ, ಬಸಪ್ಪ ಕಡಕೋಳ. "ಗಣ್ಯರು ಕಂಡಂತೆ ತಲ್ಲೂರು ರಾಯನಗೌಡರು". AKSHARASURYA 03, № 06 (2024): 143 to 152. https://doi.org/10.5281/zenodo.11127295.

Full text
Abstract:
“ತಲ್ಲೂರು ರಾಯನಗೌಡರು ಸಮಗ್ರ ಅಧ್ಯಯನ” ಬಹುಮುಖಿಯಾಗಿ ನಡೆಯುವಂತದ್ದು. ರಾಯನಗೌಡರು ಬಹುಮುಖ ವ್ಯಕ್ತಿತ್ವ ಹೊಂದಿದವರಾಗಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯಾ ನಂತರ ಕರ್ನಾಟಕ ಏಕೀಕರಣ ಜೊತೆಗೆ ಸಾಹಿತ್ಯ ಸಂಶೋಧನೆಯಲ್ಲಿ ಅವರ ವ್ಯಕ್ತಿತ್ವವನ್ನು ದಾಖಲೆಗಳ ಮೂಲಕ ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಅವರ ನಿಧನ 30-9-1982 ರ ನಂತರ ಅವರ ಅಳಿಯ ಅಂದರೆ ರಾಯನಗೌಡರ ಮಗಳಾದ ದೇವಿಕಾರಾಣಿಯವರ (ಸದ್ಯ ಬೆಂಗಳೂರಿನಲ್ಲಿ ಇದ್ದಾರೆ) ಅವರ ಪತಿ ದಿವಂಗತ ಪ್ರೊ. ಬಸನಗೌಡ. ಆರ್. ಪಾಟೀಲರು ತಮ್ಮ ಮಾವನವರ ವ್ಯಕ್ತಿತ್ವ ಕುರಿತು ಅಗ್ರಗಣ್ಯ ಸ್ವಾತಂತ್ರ್ಯ ಯೋಧ ತಲ್ಲೂರು ರಾಮನಗೌಡರು ಜೀವನ ದರ್ಶನ ಗ್ರಂಥ ಪ್ರಕಟಣೆಯ ಯೋಜನೆ ಹಾಕಿಕೊಂಡ ಸಂದರ್ಭದಲ್ಲಿ, ಅವರು ರಾಯನಗೌಡರ ಅತ್ಯಂತ ನಿಕಟವರ್ತಿಗಳನ್ನು ಭೇಟಿಯಾದರು. ಅವರಲ್ಲಿ ಬಹುತೇಕರು ಇಂ
APA, Harvard, Vancouver, ISO, and other styles
10

ವಸುಂಧರಿ, ಎನ್. "ವಚನ ಚಳುವಳಿ ಮತ್ತು ಸಮಾಜ ಪರಿವರ್ತನೆ". AKSHARASURYA JOURNAL 06, № 05 (2025): 233 to 240. https://doi.org/10.5281/zenodo.15504705.

Full text
Abstract:
ಆತ್ಮಾನುಭಾವದ ಚೈತನ್ಯ ಮತ್ತು ಸಮಾಜಕಲ್ಯಾಣದ ತೀವ್ರಕಾಳಜಿಯೊಂದಿಗೆ ಮೂಢನಂಬಿಕೆ, ಕಂದಾಚಾರಗಳಿಂದ ಜಡವಾಗಿದ್ದ ಸಮಾಜವನ್ನು ಪರಿವರ್ತಿಸುವ ಸಂಕಲ್ಪದಿಂದ ಅವರು ಒಂದು ವಿನೂತನ ಚಳುವಳಿಯನ್ನೇ ಪ್ರಾರಂಭಿಸಿದರು. ಮೇಲು-ಕೀಳು ಎಂಬ ವರ್ಣ ಅಸಮಾನತೆ;ಬಡವ ಬಲ್ಲಿದ ಎಂಬ ವರ್ಗ ತಾರತಮ್ಯ;ಹೆಣ್ಣು-ಗಂಡು ಎಂಬ ಲಿಂಗಭೇದ ಇವೆಲ್ಲ ತರತಮ ವ್ಯವಸ್ಥೆಯನ್ನು ಹೋಗಲಾಡಿಸಿ ಸಮಾನತೆಯ ಆಧಾರದ ಮೇಲೆ ಹೊಸ ಸಮಾಜವನ್ನು ಅವರು ಕಟ್ಟಬಯಸಿದರು. ಇದಕ್ಕಾಗಿ ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪನೆಯಾಯಿತು. ಬಸವಣ್ಣ ಸಂಚಾಲಕನಾಗಿ ಮುಂದೆ ನಿಂತ. ಮಹಾನುಭಾವಿ ಅಲ್ಲಮಪ್ರಭುವಿನ ಮಾರ್ಗದರ್ಶನ ದೊರೆಯಿತು. ಚೆನ್ನಬಸವ, ಅಕ್ಕನಾಗಮ್ಮ, ಹಡಪದ ಅಪ್ಪಣ್ಣ, ಮಡಿವಾಳ ಮಾಚಯ್ಯ ಮೊದಲಾದ ನೂರಾರು ವಚನಕಾರರು ಕಾರ್ಯಕರ್ತರಾಗಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡರು. ಬಸವಾದಿ ಶರಣರು ಕಲ್ಯಾಣದಲ್ಲಿ ಹೊ
APA, Harvard, Vancouver, ISO, and other styles
11

ಲಕ್ಷ್ಮಿದೇವಿ, ಎನ್‌. "ಬಾಚಿಕಾಯಕದ ಕಾಳವ್ವೆಯ ವಚನದಲ್ಲಿ ಕಾಯಕ, ಮಾತು ಮತ್ತು ವ್ರತ ಪ್ರಜ್ಞೆ". AKSHARASURYA 04, № 03 (2024): 117 to 124. https://doi.org/10.5281/zenodo.12672873.

Full text
Abstract:
ವಚನಗಳಲ್ಲಿ ನಾವು ವಿಚಾರ ಸ್ವಾತಂತ್ರ್ಯದ ಪರಾಕಾಷ್ಟೆಯನ್ನು ಕಾಣುತ್ತೇವೆ. “ಉದರ ನಿಮಿತ್ತಂ ಬಹುಕೃತ ವೇಷಂ” ಎಂಬ ಮಾತೊಂದಿದೆ. ಹೊಟ್ಟೆ ಹೊರೆಯುವುದಕ್ಕಾಗಿ ಮಾನವ ಅನೇಕ ವೇಷಗಳನ್ನು ಕೈಗೊಳ್ಳುತ್ತಾನೆ. ಆದರೆ ಶರಣರು ಹೊಟ್ಟೆ ಹೊರೆಯುವ ಕಾಯಕದ ಮೂಲಕ ದಾಸೋಹ ಸಿದ್ಧಾಂತವನ್ನು ಅನುಭಾವದ ಮೂಲಕ ಸಮಾಜಕ್ಕೆ ಸಾರಿದವರು. ಅಸಮಾನತೆಯ ಸಮಾಜದಲ್ಲಿ ಶೂದ್ರರಿಗೆ, ಅಸ್ಪೃಶ್ಯರಿಗೆ, ಹೆಣ್ಣಿಗೆ ಸಮಾನ ಸ್ಥಾನಮಾನವನ್ನು ತಂದುಕೊಟ್ಟ ಕೀರ್ತಿ ಬಸವಣ್ಣನರಿಗೆ ಸಲ್ಲುತ್ತದೆ. ೧೨ನೇ ಶತಮಾನದ ಸಮಾಜದಲ್ಲಿ ಅಕ್ಷರ ಕ್ರಾಂತಿಯ ಮೂಲಕ ಸ್ತ್ರೀ-ಪುರುಷ ಸಮಾನತೆಯನ್ನು ಪಡೆದದ್ದು ಪವಾಡವೇ ಸರಿ. ಅದರಲ್ಲೂ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಮಹಿಳೆ ಅನುಭವ ಮಂಟಪದ ಗೋಷ್ಠಿಯಲ್ಲಿ ಪುರುಷನಷ್ಟೇ ಸಮಾನತೆಯನ್ನು ಕೈಗೊಂಡಿದ್ದು ಸಮಾಜಿಕ ಕ್ರಾಂತಿ ಎನ್ನಬಹುದು. ಅವರಲ್ಲಿ
APA, Harvard, Vancouver, ISO, and other styles
12

ಸಂತೋಷ್‌, ಕುಮಾರ್‌ ಆರ್‌.ಎಂ. "ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು". AKSHARASURYA JOURNAL 06, № 04 (2025): 78 to 89. https://doi.org/10.5281/zenodo.15490942.

Full text
Abstract:
ವಚನ ಸಾಹಿತ್ಯವು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅಮೂಲ್ಯ ಸಂಪತ್ತಾಗಿದೆ. ಇದು 12ನೇ ಶತಮಾನದಲ್ಲಿ ಜನಿಸಿದ ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದ್ದು, ಬಸವಾದಿ ಶರಣರು ಇದನ್ನು ಜನಸಾಮಾನ್ಯರಿಗೆ ತಲುಪುವಂತೆ ಮಾಡಿದರು. ವಚನ ಸಾಹಿತ್ಯವು ಧಾರ್ಮಿಕ, ಸಾಮಾಜಿಕ ಮತ್ತು ದಾರ್ಶನಿಕ ಚಿಂತನೆಗಳನ್ನು ಒಳಗೊಂಡಿದೆ ಮತ್ತು ಭಕ್ತಿ ಚಳವಳಿಯ ಪ್ರಮುಖ ಭಾಗವಾಗವೂ ಆಗಿದೆ. ವಚನ ಸಾಹಿತ್ಯವು ʼಸಮಾನತೆʼ, ʼಶ್ರಮʼ-ʼಕಾಯಕʼ ಮತ್ತು ʼಭಕ್ತಿʼಯ ಮಹತ್ವ, ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಶರಣರು ಜಾತಿ, ಲಿಂಗ, ಆರ್ಥಿಕ ಸ್ಥಿತಿ ಮುಂತಾದ ಬೇಧಭಾವಗಳನ್ನು ತಿರಸ್ಕರಿಸಿದರು. ಅಲ್ಲದೆ ಇವರು ಜಾತಿ-ವರ್ಣಭೇದಗಳ ವಿರೋಧವಾಗಿಯೂ ಮತ್ತು ಸಮಾನತೆಗೆ ಹೆಚ್ಚಿನ ಮನ್ನಣೆಯನ್ನು ನೀಡಿದರು.ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮೊದಲಾದ ಶರಣರು &ldq
APA, Harvard, Vancouver, ISO, and other styles
13

ಗೌಡ., ಎಂ.ಟಿ. "ವಚನ ಸಾಹಿತ್ಯ: ಮಾನವ ಮೌಲ್ಯಗಳ ಪ್ರತಿಬಿಂಬ". AKSHARASURYA JOURNAL 06, № 04 (2025): 90 to 96. https://doi.org/10.5281/zenodo.15490961.

Full text
Abstract:
ವಚನವೆಂಬುದು ಕೇವಲ ಸಾಹಿತ್ಯ ಪ್ರಕಾರವಲ್ಲ ಅದು ಒಂದು ಚಳುವಳಿ ಕೂಡ ಆಗಿದೆ. ಅದನ್ನು ಸಮಾಜೋ ಧಾಶ್ರಮಿಕ ಚಳುವಳಿ, ಕಾಯಕ ಜೀವಿಗಳ, ಚಳುವಳಿ ಪರಿಪೂರ್ಣ ಚಳುವಳಿ ಎಂದು ಬಗೆಬಗೆಯಾಗಿ ಕನ್ನಡ ವಿದ್ವಾಂಸರು ಅದರ ಸ್ವರೂಪ ಮಹಿಮೆಯನ್ನು ಬಣ್ಣಿಸಿದ್ದಾರೆ. ವಚನ ಸಾಹಿತ್ಯ ಇಡೀ ಭಾರತೀಯ ಭಾಷೆಗಳಲ್ಲಿಯೇ ವಿಶಿಷ್ಟವಾದುದು. ಕನ್ನಡ ಸಾಹಿತ್ಯವು ವಿಶ್ವ ಸಾಹಿತ್ಯಕ್ಕೆ ನೀಡಿದ ಕೊಡುಗೆ ಆದಾಗಿದೆ ಎಂದರೂ ನಡೆಯುತ್ತದೆ. ಮಾನವ ಕುಲದ ಸರ್ವಾಂಗೀಣ ವಿಕಾಸಕ್ಕಾಗಿ ಶ್ರಮಿಸಿದ ಮಹಾತ್ಮರಾದ ಶಿವಶರಣರು ಅನನ್ಯ ಕೊಡುಗೆ ನೀಡಿರುವ ಜಗತ್ತಿನ ಅಪರೂಪದ ಸಾಹಿತ್ಯ ವಚನಗಳು. ವಚನಗಳು ಎಂದಾಕ್ಷಣ ನೆನಪಾಗುವುದೇ ಶಿವಶರಣರು. ಶರಣ ಪಂಥಕ್ಕೆ ಭಕ್ತಿಯ ಶಕ್ತಿಯೇ ಕೇಂದ್ರ ಬಿಂದು. ವಚನ ಸಾಹಿತ್ಯವು ಸವಿಸ್ತಾರವಾದ ಸಮುದ್ರದ ಆಳದಲ್ಲಿನ ಮುತ್ತು, ರತ್ನಗಳನ್ನು ಹೆಕ್ಕಿ ಅಳೆದು, ತೂಗಿ ಸ
APA, Harvard, Vancouver, ISO, and other styles
14

ರಾಜಕುಮಾರ, ಎಂ. ಸಿಂಧೆ. "ಡಾ. ಬಿ. ಆರ್. ಅಂಬೇಡ್ಕರ್‌ ಅವರ ಬದುಕಿನಿಂದ ಕಲಿಯಬೇಕಾದ ಸಂದೇಶ". AKSHARASURYA JOURNAL 06, № 01 (2025): 12 to 21. https://doi.org/10.5281/zenodo.14961338.

Full text
Abstract:
ಕಲಿಕೆ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿದೆ. ಅದು ನಿತ್ಯ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಹುಟ್ಟಿನಿಂದ ಸಾವಿನವರೆಗೂ ಜೀವನುದ್ದಕ್ಕೂ ವಿವಿಧ ಜ್ಞಾನಶಾಖೆಗಳ ಮೂಲಕ ಜೀವನಾನುಭವ ಪಡೆಯುತ್ತ, ಹಳೆ ಬೇರು ಹೊಸ ಚಿಗುರು ಎಂಬಂತೆ ಗುರುಹಿರಿಯರ ನಡೆ-ನುಡಿ, ಆಚಾರ ವಿಚಾರಗಳನ್ನು ಅನುಲಕ್ಷಿಸುತ್ತ, ಭವಿಷ್ಯದ ಬದುಕಿನ ಅಗತ್ಯತೆಗಳನ್ನು ಕಲ್ಪಿಸಿಕೊಳ್ಳುತ್ತ ಹಳೆಯ ಮತ್ತು ಹೊಸದರ ಸಮ್ಮಿಶ್ರಣದೊಂದಿಗೆ ಸುಂದರ ಬದುಕು ಕಟ್ಟಿಕೊಳ್ಳಲು ‘ಕಲಿಕೆ’ ಎಂಬ ಪ್ರಕ್ರಿಯೆ ನಡೆಯುತ್ತಲೇ ಸಾಗುತ್ತದೆ.‘ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ’ ಯಿಂದ ಆರಂಭವಾಗಿ ಕಲಿಕೆ ಮುಂದುವರೆಯುತ್ತದೆ. ‘ದೇಶ ಸುತ್ತು ಇಲ್ಲವೇ ಕೋಶ ಓದು’ ಎಂಬಂತೆ ಸಾಹಿತ್ಯ, ಕಾವ್ಯ, ಪುರಾಣ, ಶಾಸ್ತ್ರ, ಕಲೆ ಹೀಗೆ ನೂರಾರು ಪ್ರಕಾರದ ಗ್ರಂಥಗಳ ಅಧ್ಯ
APA, Harvard, Vancouver, ISO, and other styles
15

ಅಜೀತ, ಪಾತ್ರೋಟ, та ರುಮ್ಮಾ ಶಿವಗಂಗಾ. "'ವೀಸಾದ ನಿರೀಕ್ಷಣೆಯಲ್ಲಿ ಆತ್ಮಕಥನ': ಡಾ.ಬಿ.ಆರ್. ಅಂಬೇಡ್ಕರರ ಜೀವನ ಮತ್ತು ಪ್ರಯೋಗಗಳು." AKSHARASURYA 04, № 03 (2024): 78 to 87. https://doi.org/10.5281/zenodo.12672742.

Full text
Abstract:
ಆತ್ಮಕಥೆ ಬರೆದುಕೊಳ್ಳುವುದು ಮನುಷ್ಯ ಬದುಕಿನ ಪ್ರಮುಖ ಬೆಳವಣಿಗೆಯಾಗಿದೆ. ಈ ಕಾರಣವಾಗಿಯೆ ಮನುಷ್ಯ ತನ್ನ ಸರಿ ತಪ್ಪುಗಳನ್ನು ನಿವೇದಿಸಿಕೊಂಡು ಬದುಕಿನ ವಿಕಾಸದತ್ತ ದಾಪುಗಾಲಿಡುವುದು ಕಾಣಬಹುದು. ಮಾನವ ಬೆಳವಣಿಗೆ ಮತ್ತು ವಿಕಾಸ ಕ್ರಮದಲ್ಲಿ ತನ್ನ ಬದುಕಿನ ಅನುಭವಗಳನ್ನು ಮನೆ, ಸಮಾಜ, ಪರಿಸರ, ಸಂಸ್ಕೃತಿಗಳಿಂದ ರೂಪುಗೊಂಡಿವೆ. ಅವುಗಳು ಮನುಷ್ಯ ಒಳ ಹೊರಗನ್ನು ಅರಿತುಕೊಳ್ಳಲು ಸಹಾಯ ಮಾಡುತ್ತವೆ. ಇಲ್ಲಿ ಪ್ರಮುಖವಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಬದುಕಿನುದ್ದಕ್ಕೂ ಅನುಭವಿಸಿದ ದುಖಃ ದುಮ್ಮಾನಗಳು, ಸಂಕಟಗಳು ಮತ್ತು ಅವುಗಳಿಂದ ಬಿಡುಗಡೆಗೆ ಹಾತೋರೆಯುವ ಮನಸ್ಥಿತಿ ಪ್ರಕಟಗೊಳ್ಳುತ್ತದೆ. ಅಲ್ಲದೆ ಅವರು ಕಂಡುಕೊಳ್ಳುವ ಪರಿಹಾರೋಪಾಯಗಳು ಎಲ್ಲವೂ ಒಂದೊಂದು ಹೊಸ ಪ್ರಯೋಗದಂತೆ ಗೋಚರಿಸುತ್ತದೆ. ಅಲ್ಲದೆ ಅವು ಓದುಗರಿಗೆ ಸಂದೇಶಗಳಾಗಿ ಮಾರ್ಪಡುತ್
APA, Harvard, Vancouver, ISO, and other styles
16

ಪರಸಪ್ಪ, ಹೆಚ್., та ಎಂ. ಸೋಮಶೇಖರ. "ಜಿ.ಎಸ್. ಶಿವರುದ್ರಪ್ಪನವರ ಕಾವ್ಯಮೀಮಾಂಸೆಯ ತಾತ್ವಿಕ ಚಿಂತನೆಗಳು". AKSHARASURYA JOURNAL 06, № 01 (2025): 38 to 43. https://doi.org/10.5281/zenodo.14961396.

Full text
Abstract:
ಮೀಮಾಂಸೆ ಎಂದರೆ ಚಿಂತನೆ, ಚರ್ಚೆ ಎಂದರ್ಥ. ಕಾವ್ಯವನ್ನು ಕುರಿತ ಚರ್ಚೆಯನ್ನು ಕಾವ್ಯಮೀಮಾಂಸೆ ಎಂದು ಕರೆಯಲಾಗಿದೆ. ಅಂದರೆ ಕವಿ-ಕಾವ್ಯ-ಸಹೃದಯ ವಿಚಾರಗಳನ್ನು ಕುರಿತ ಚರ್ಚೆ ಕಾವ್ಯದ ಆಸ್ವಾದನೆಯಿಂದ ಉಂಟಾಗುವ ಅನುಭವ ಅದಕ್ಕೆ ಕಾರಣವಾದ ತೃತೀಯ ರೂಪ ಮತ್ತು ಸ್ವರೂಪ ಇವುಗಳನ್ನು ವಿವರಿಸುವ ಶಾಸ್ತ್ರವೇ ಕಾವ್ಯಮೀಮಾಂಸೆ. ಪಾಶ್ಚತ್ಯರಲ್ಲಿ ಮಾತಿನ ವಿವಿಧ ರೀತಿಗಳನ್ನು ಹೇಳುವ ಭಾಷಣ ಮತ್ತು ಲೇಖನಶಾಸ್ತ್ರ ಎಂಬ ಒಂದು ಶಾಸ್ತ್ರವಿದೆ. ಹೀಗೆ ಉಕ್ತಿ ಚಮತ್ಕಾರವನ್ನು ತಿಳಿಸುವ ಶಾಸ್ತ್ರವೇ ‘ಅಲಂಕಾರಶಾಸ್ತ್ರ’ ಕಾವ್ಯದ ತಿರುಳನ್ನು ಅದರ ನಿರ್ಮಾಣ ಕ್ರಮವನ್ನು ನಿರೂಪಿಸುವದಕ್ಕೆ ಕಾವ್ಯಮೀಮಾಂಸೆ ಮತ್ತೊಂದು ಶಾಸ್ತ್ರ. ಸೌಂದರ್ಯ ಸ್ವರೂಪವನ್ನು ವಿಚಾರಮಾಡುವ ಸೌಂದರ್ಯಮೀಮಾಂಸೆ ಇದು ಮತ್ತೊಂದು ಶಾಸ್ತ್ರ. ಈ ಮೂರು ಶಾಸ್ತ್ರಗಳು ಪಾಶ್ಚಾತ್ಯರಲ್ಲಿ ಪ
APA, Harvard, Vancouver, ISO, and other styles
17

ಮಮತ, ಎಂ. "ಸಿನಿಮಾವಾಗಿ ವೈದೇಹಿಯವರ 'ಗುಲಾಬಿ ಟಾಕೀಸು' ಹಾಗೂ 'ಅಮ್ಮಚ್ಚಿಯೆಂಬ ನೆನಪು'". AKSHARASURYA JOURNAL 04, № 04 (2024): 131 to 138. https://doi.org/10.5281/zenodo.13284130.

Full text
Abstract:
ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತ ಹೆಸರು ವೈದೇಹಿ. ನೇರ ದಿಟ್ಟ ಗಂಭೀರ ನಡೆನುಡಿಯಿಂದ ಕನ್ನಡ ಮಹಿಳಾ ಸಾಹಿತ್ಯದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದವರು. ವೈದೇಹಿಯವರ ಕೃತಿಗಳಲ್ಲಿ ಅನುಭವದ ಮಾಲಿಕೆ ಇದೆ. ಹೆಣ್ಣಿನ ಗಂಭೀರ ಸಮಸ್ಯೆಗಳ ಬಗ್ಗೆ ಕಾಳಜಿ ಇದೆ. ಹಾಗಾಗಿ ಅವರ ಕಥೆಗಳು ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗದೆ ನಾಟಕವಾಗಿ ರಂಗದ ಮೇಲೆ, ಸಿನಿಮಾವಾಗಿ ಪರದೆಯ ಮೇಲೆ ಪ್ರದರ್ಶನಗೊಂಡಿದೆ. ಮಹಿಳಾಪರವಾಗಿ, ಹೆಣ್ಣಿಗೊಂದು ಗಟ್ಟಿ ಧ್ವನಿಯಾಗಿ, ಸಾಂತ್ವನದ ನುಡಿಗಳ ಮೂಲಕ ಓದುಗರನ್ನು ತಲುಪಿದೆ. ಹೆಣ್ಣಿನ ಅನುಭವದ ನೆಲೆಯಿಂದ ಬದುಕನ್ನು ಪರಿಶೀಲನಾತ್ಮಕವಾಗಿ ನೋಡುವ ಕಾಳಜಿಯೊಂದು ಆಕೆಯ ಕೃತಿಗಳಲ್ಲಿ ಕಾಣಿಸುತ್ತದೆ. ಕನ್ನಡದ ಸಿನಿ ಪರದೆಯಲ್ಲಿ ವೈದೇಹಿ ಅವರ ‘ಗುಲಾಬಿ ಟಾಕೀಸು’ ಅದೇ ಹೆಸರಿನಲ್ಲಿ ಕನ್ನಡದ ಕಲಾತ್ಮಕ ಚಿತ್ರವಾಗಿ ಮೂಡಿ
APA, Harvard, Vancouver, ISO, and other styles
18

ಸತ್ಯಮಂಗಲ, ಮಹಾದೇವ. "ವಚನ ಸಾಹಿತ್ಯದಲ್ಲಿ ಜೀವನಕೌಶಲ್ಯದ ಆಯಾಮಗಳು". AKSHARASURYA JOURNAL 05, № 04 (2024): 47 to 53. https://doi.org/10.5281/zenodo.14289637.

Full text
Abstract:
ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಜೀವನ ಕೌಶಲ್ಯಗಳನ್ನು ಬದುಕಿನ ಮೌಲ್ಯಗಳಾಗಿ ಅಳವಡಿಸಿಕೊಂಡು ‘ಅರಿತೆಡೆ ಶರಣ ಮರೆತೆಡೆ ಮಾನವ’ ಎಂಬ ಮಾತನ್ನು ಸಾಕ್ಷೀಕರಿಸುವಂತೆ ಬದುಕಿದವರು ಶಿವಶರಣರು. ವಚನ ರೂಪದಲ್ಲಿ ಬರೆದ ಅವರ ಅನುಭವದ ನುಡಿಗಳು, ಅವುಗಳಲ್ಲಿ ಅಡಗಿರುವ ಜೀವ ಕೌಶಲ್ಯಗಳನ್ನು, ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ 10 ಮುಖ್ಯವಾದ ಜೀವನ ಕೌಶಲ್ಯಗಳನ್ನು ತೌಲನಿಕವಾಗಿ ಅಧ್ಯಯನ ನಡೆಸಿ, ಜೀವನ ಕೌಶಲ್ಯಗಳನ್ನು ಒಳಗೊಂಡಿರುವ ವಚನಗಳನ್ನು ವಿಶ್ಲೇಷಿಸಲಾಗಿದೆ. ವಚನಗಳ ಅರ್ಥ, ವ್ಯಾಪ್ತಿ ಮತ್ತು ದೃಷ್ಟಿಕೋನ ವಿಶಾಲವಾದದ್ದು ಮನೋವೈಜ್ಞಾನಿಕವಾಗಿ ಅಧ್ಯಯನ ನಡೆಸಿದಾಗ ಅದು ಸಮುದ್ರದ ಅಲೆಗಳಂತೆ ಭಿನ್ನವೂ ಮತ್ತು ವೈವಿದ್ಯಪೂರ್ಣವೂ ಆದ ಅರ್ಥವಿವೇಚನೆಯ ಸಾಧ್ಯತೆಗಳನ್ನು ಓದುಗರಿಗೆ ತೆರೆದಿಡುವುದರ ಜೊತೆಗೆ ಇಂದಿನ ಒತ್ತಡಯುಕ್ತ ಬದುಕಿನಲ್ಲಿ ಕೌಶಲ
APA, Harvard, Vancouver, ISO, and other styles
19

ರಾಘವೇಂದ್ರ, ಬಿ. ಎ. ದ್ರಾಕ್ಷಿ, та ಹೆಚ್‌. ವಿಶ್ವಮಾನವ ವಿಜಯಕುಮಾರ. "ಚೆನ್ನಣ್ಣ ವಾಲೀಕಾರ ಅವರ ಕಥೆಗಳಲ್ಲಿ ಪ್ರತಿರೋಧದ ನೆಲೆ". AKSHARASURYA 04, № 02 (2024): 98 to 112. https://doi.org/10.5281/zenodo.11525890.

Full text
Abstract:
ಕಥೆ ಹೇಳುವುದು ಮತ್ತು ಕೇಳುವುದು ಮನುಷ್ಯನ ಆಸಕ್ತಿ ಮತ್ತು ಹವ್ಯಾಸಿ ಎರಡು ಹೌದು. ಕೆಲವು ವರ್ಷಗಳ ಹಿಂದೆ ದೂರದರ್ಶದನಂತಹ ಮಾಧ್ಯಮಗಳು ಬರುವುದಕ್ಕೆ ಮುಂಚೆ ಭಾರತದಂತಹ, ಕರ್ನಾಟಕದಂತಹ ಹಳ್ಳಿಗಳಲ್ಲಿ ಹಿರಿಯರು ಹೇಳುವ ಕತೆಗಳೇ ಮನರಂಜನೆಯ ತಾಣಗಳು ಆಗಿದ್ದವು. ನನಗೆ ನೆನಪಿರುವ ಹಾಗೆ ಚಿಕ್ಕವನಿರುವಾಗ ನಮ್ಮ ಅಜ್ಜಿಯೂ ಹಲವೂ ಕಥೆಗಳನ್ನು ಹೇಳಿ ಕಥೆ ಎಂದರೆ ಏನು ಎಂಬುದನ್ನು ಪರಿಚಯಿಸಿದ್ದಳು. ಅಷ್ಟೇ ಅಲ್ಲದೆ ಅವರು ಹೇಳುವ ಕಥೆಗಳಲ್ಲಿ ಜೀವನದ ಬದುಕಿನ ಅನುಭವದ ಸತ್ಯಾಸತ್ಯಗಳನ್ನು ಒಳಗೊಂಡಿರುವಂತಹ ಮೌಲ್ಯಯುತವಾದ, ನೀತಿಯುತವಾದ ಸಂದೇಶಗಳನ್ನು ಸಾರುವ ಕಥೆಗಳಾಗಿದ್ದವು. ಇಂತಹ ಕಥೆಗಳನ್ನು ಹಿರಿಯರಿಂದ ಕೇಳಿ ಆಧುನಿಕ ಕಥಾ ಸಾಹಿತ್ಯದಲ್ಲಿ ಹಲವಾರು ಕಥೆಗಳನ್ನು ಬರೆದ ಕಥೆಗಾರರು ಕನ್ನಡ ಸಾಹಿತ್ಯದಲ್ಲಿ ಕಂಡು ಬರುತ್ತಾರೆ. ಅವರಲ್ಲಿ ಚೆನ್ನಣ್ಣ ವಾಲೀಕಾರರು
APA, Harvard, Vancouver, ISO, and other styles
20

ತಿಮ್ಮಣ್ಣ, ಭೀಮರಾಯ. "ಸಂಗೀತದ ಹುಟ್ಟು ಮತ್ತು ಬೆಳವಣಿಗೆ". AKSHARASURYA 04, № 01 (2024): 61 to 72. https://doi.org/10.5281/zenodo.11162478.

Full text
Abstract:
ಭಾರತೀಯ ಸಂಗೀತದ ಇತಿಹಾಸ, ಸಂಗೀತದ ಉಗಮ ಮತ್ತು ವಿಕಾಸ ಹೇಗಾಯಿತು, ಯಾರಿಂದಾಯಿತು ಎಂದು ಪರಿಪೂರ್ಣವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಸಂಗೀತದ ಹುಟ್ಟಿನ ಬಗೆಗೆ ವಿದ್ವಾಂಸರಲ್ಲಿ ಭಿನ್ನಾಬಿಪ್ರಾಯಗಳಿವೆ. ಶ್ರೀ ಟಿ.ವಿ.ಸುಬ್ಬರಾವ್ ಇವರು ತಮ್ಮ ‘ಸ್ಟಡೀಸ್ ಇನ್ ಇಂಡಿಯನ್ ಮ್ಯೂಸಿಕ್’ ಎಂಬ ಪುಸ್ತಕದಲ್ಲಿ “ಆದಿಮಾನವರ ಮನೋಭಾವಗಳು ನೈಸರ್ಗಿಕ, ಸುಖಪೂರ್ಣ ಹಾಗೂ ದುಃಖ ಪೂರ್ಣ ಅನುಭವದ ಅನುಸಾರವಾಗಿ ಬದಲಾಯಿಸುತ್ತಿದ್ದವು. ಅರಣ್ಯದಲ್ಲಿ ಆದಿಮಾನವನಿಗೆ ಸಂತೋಷವಾದಾಗ ಉಚ್ಛಧ್ವನಿಯಲ್ಲಿ ಕೂಗುತ್ತಿದ್ದನು. ದುಃಖವಾದಾಗ ಅವನ ‘ಆಕ್ರೋಶದ’ ಧ್ವನಿ ನೀಚವಾಗುತ್ತಿತ್ತು. ಪಶು-ಪಕ್ಷಿಗಳ ರೋಧನೆ, ದುಂಬಿಯ ಝೇಂಕಾರ, ಧನುಸ್ಸಿನ ಠೇಂಕಾರ, ಬಿದಿರು ವನದಲ್ಲಿ ಗಾಳಿಯ ಚಲನದಿಂದ ಉತ್ಪತ್ತಿಯಾಗುವ ಧ್ವನಿ ಇತ್ಯಾದಿಗಳಲ್ಲಿಯೂ ಪ್ರಾಚೀನ
APA, Harvard, Vancouver, ISO, and other styles
21

ತೀ.ನಂ., ಶ್ರೀಕಂಠಯ್ಯ, та ಕುಪ್ಪನಹಳ್ಳಿ ಎಂ. ಭೈರಪ್ಪ ಸಂಯೋಜನೆ:. "ಕನ್ನಡದಲ್ಲಿ ಕಾವ್ಯಲಕ್ಷಣ ಗ್ರಂಥಗಳು". Aksharasurya Journal 05, № 05 (2025): 01 to 37. https://doi.org/10.5281/zenodo.14619428.

Full text
Abstract:
<strong>ದೇಶಭಾಷಾ ವಿದ್ವದ್ವಲಯದ ಮೇರುವಿದ್ವಾಂಸರು ಪ್ರೊ.ತೀ.ನಂ.ಶ್ರೀ</strong>&lsquo;ಭಾರತೀಯ ಕಾವ್ಯ ಮೀಮಾಂಸೆ&rsquo; ಎಂಬ ಮಹೋನ್ನತ ಕಾವ್ಯ-ಶಾಸ್ತ್ರ ಗ್ರಂಥದ ಮೂಲಕ ಕನ್ನಡ ದೇಶಭಾಷಾ ವಿದ್ವದ್ವಲಯದ ವಿಶ್ವಾತ್ಮಕತೆಯನ್ನು ಸಾಕಾರಗೊಳಿಸಿದ ಮೇರುವಿದ್ವಾಂಸರು ಪ್ರೊ.ತೀ.ನಂ.ಶ್ರೀ ಅವರು. ಆಚಾರ್ಯ ಬಿ.ಎಂ.ಶ್ರೀ. ಅವರ ಪರಂಪರೆಯಲ್ಲಿ ಅವರ ಉತ್ತರಾಧಿಕಾರಿ ಎಂಬಂತೆ ನಡೆದು ಜನಪ್ರಿಯ ಅಧ್ಯಾಪಕರೂ ಸಂಮೋಹಕ ಭಾಷಣಕಾರರೂ ಆಗಿ ಪ್ರಸಿದ್ಧರಾದವರು; ಕನ್ನಡದ ವಿಶ್ವವಿದ್ಯಾನಿಲಯಗಳಲ್ಲಿ ಭಾಷಾಶಾಸ್ತ್ರದ ಅಧ್ಯಯನಕ್ಕೆ ಬುನಾದಿಯನ್ನು ಹಾಕಿದವರು; ಆಧುನಿಕ ಕನ್ನಡ ನಿಘಂಟಿನ ರಚನೆಗಾಗಿ ತಮ್ಮ ಸಮಯ, ಶಕ್ತಿ ಸಾಮರ್ಥ್ಯಗಳನ್ನೂ, ವಿದ್ವತ್ತನ್ನೂ ವಿನಿಯೋಗಿಸಿದ ದಿಗ್ಗಜರಲ್ಲಿ ಒಬ್ಬರು. ಅವರನ್ನು ಸಮಕಾಲೀನರು ಕಂಡಂತೆ ಅವರ ಬೋಧಿಸತ್ವ ಸನ್ನಿಭ ಮನೋಹರ ವ್ಯಕ್ತಿತ್ವವನ್
APA, Harvard, Vancouver, ISO, and other styles
22

ಹುಲುಗಯ್ಯ, ನಾಯಕರ್, та ರಾಮಕೃಷ್ಣಯ್ಯ ಕೆ. "ಬಯಲಾಟದಲ್ಲಿ ಯುವಜನತೆಯ ಪಾಲ್ಗೊಳ್ಳುವಿಕೆ: ಒಂದು ಅವಲೋಕನ". AKSHARASURYA JOURNAL 06, № 03 (2025): 11 to 22. https://doi.org/10.5281/zenodo.15343712.

Full text
Abstract:
ಬಯಲಾಟವು ನಮ್ಮ ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟ ಸ್ಥಾನಮಾನವನ್ನು ಪಡೆದ ಜಾನಪದ ರಂಗ ಕಲೆಯಾಗಿದೆ. ಈ ರಂಗ ಕಲಿಯು ಸುಮಾರು 150 ರಿಂದ 300 ವರ್ಷಗಳ ಹಿಂದಿನ ಇತಿಹಾಸ ಹೊಂದಿದೆ ಎಂಬುದು ಬಯಲಾಟ ಕೃತಿಗಳಿಂದ ಮತ್ತು ಕೆಲವು ವಿದ್ವಾಂಸರಗಳಿಂದ ತಿಳಿದು ಬಂದಿದೆ. ಇದಕ್ಕಿಂತ ಪೂರ್ವದಲ್ಲೂ ಬಯಲಾಟದ ಕುರುಹುಗಳು ಇರುವುದರ ಬಗ್ಗೆ ಇತಹಾಸವು ಕೆಲವು ಉದಾಹರಣೆಗಳಂದಿಗೆ ಸ್ಪಷ್ಟಪಡಿಸಲು ಯತ್ನಸಿದೆ. ಇಂತಹ ಬಯಲಾಟದಲ್ಲಿ ಇಂದಿನ ಯುವಜನತೆ ತೊಡಿಕೊಳ್ಳುವುದು ಬಹಳ ಜರೂರಿನ ಸಂಗತಿಯಾಗಿ ಕಂಡುಬರುತ್ತದೆ. ಏಕೆಂದರೆ ಈ ಬಯಲಾಟವು ಹಿಂದಿನ ಕಾಲದ ಅನಕ್ಷರಸ್ಥ ಜನತೆಗೆ ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುತ್ತಾ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಹಬಾಳ್ವೆಯೊಂದಿಗೆ ಸಾರ್ಥಕತೆಯ ಜೀವನವನ್ನು ಸಾಗಿಸುವ ದಾರಿಯನ್ನು ತೋರಿಸುತ್ತಾ ಬಂದಿದೆ. ಪ್ರಪಂಚಕ್ಕೆ ಮಾದರ
APA, Harvard, Vancouver, ISO, and other styles
23

ಜಿ., ವೆಂಕಟಸುಬ್ಬಯ್ಯ, та ಭೈರಪ್ಪ ಎಂ. "ಎರಡು ಶಬ್ದಗಳ ನಿಷ್ಪತ್ತಿ ಮತ್ತು ಅರ್ಥವಿಚಾರ". AKSHARASURYA 04, № 02 (2024): 01 to 17. https://doi.org/10.5281/zenodo.11525363.

Full text
Abstract:
ಜಗಮೆಚ್ಚಿದ ನುಡಿಗಾರುಡಿಗ ಪ್ರೊ.ಜಿ.ವೆಂಕಟಸುಬ್ಬಯ್ಯನವರುಕರುನಾಡು ಕಂಡ ಕನ್ನಡದ ಮೇರು ನಿಘಂಟು ತಜ್ಞ, ನುಡಿ ಗಾರುಡಿಗ, ನುಡಿಬ್ರಹ್ಮ, ಶಬ್ದಬ್ರಹ್ಮ, ಅಕ್ಷರಬ್ರಹ್ಮ, ನಡೆದಾಡುವ ನಿಘಂಟು, ಅಪ್ರತಿಮ ಸಂಶೋಧಕ, ಜಗಮೆಚ್ಚಿದ ಕನ್ನಡ ಪ್ರಾಧ್ಯಾಪಕ ಎಂದೇ ಜನಪ್ರಿಯರಾದವರು ನಾಡೋಜ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು. ನುಡಿಸಾಗರದ ಆಳಕ್ಕೂ ಉದ್ದಗಲಕ್ಕೂ ಮುಳುಗೆದ್ದು ಈಜಾಡಿ &lsquo;ಕನ್ನಡ ನಿಘಂಟು&rsquo;ಗಳೆಂಬ ಮುತ್ತುರತ್ನಗಳನ್ನು ಹೊರತಂದುಕೊಟ್ಟ ಶೋಧನವೀರ ನುಡಿಕಾರರು ಜಿವಿ. ಆಂಗ್ಲಮುಖಿ ಹಾಗೂ ಕಲಾರಾಹಿತ್ಯ ಶಿಕ್ಷಣಯಾನದಲ್ಲಿ ಕನ್ನಡಪ್ರಜ್ಞೆಯನ್ನು ಬೆಳಗುವ ಮೂಲಕ ಅಸಂಖ್ಯ ಕನ್ನಡ ಕಟ್ಟಾಳುಗಳನ್ನು ರೂಪುಗೊಳಿಸುವ ಮೂಲಕ ಈ ನೆಲಕ್ಕೆ ಅಪೂರ್ವ ಕಾಣಿಕೆಯಿತ್ತ ಜಿವಿ ಅವರು ಶ್ರೇಷ್ಠ ಪ್ರಾಧ್ಯಾಪಕರಾಗಿದ್ದಾರೆ. ಸಂಶೋಧಕರಾಗಿ ಹಾಗೂ ಪ್ರಾಧ್ಯಾಪಕರಾಗಿ ಮಾತ್ರವ
APA, Harvard, Vancouver, ISO, and other styles
24

ಬಿ. ಆರ್, ರಘುನಂದನ್. "ಕನ್ನಡದ ಓದು ಮತ್ತು ಅಭಿವ್ಯಕ್ತಿಯನ್ನು ವಿಸ್ತರಿಸುವ ಎಲ್. ಎನ್ ಮುಕುಂದರಾಜ್ ಅವರ ಬರಹಗಳು". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 1 березня 2024, 92–98. http://dx.doi.org/10.59176/kjksp.v3i1.2342.

Full text
Abstract:
ಕವಿತೆ, ನಾಟಕ ಸಾಹಿತ್ಯ, ರಂಗಭೂಮಿ, ಜೀವನ ಚಿತ್ರ, ಕಾದಂಬರಿ, ಮಕ್ಕಳ ಸಾಹಿತ್ಯ, ವೃತ್ತಿಜೀವನ, ಶೈಕ್ಷಣಿಕ ಸಂಘಟನೆ, ಅಧ್ಯಾಪನ, ಸಮಾಜ, ರಾಜಕಾರಣ, ಧರ್ಮ, ಮತೀಯತೆ, ಮಾನವೀಯತೆ, ಜೀವನ ಪ್ರೇಮ ಹೀಗೆ ಮುಂತಾದ ಆಯಾಮಗಳನ್ನು ಜೀವ ಪರವಾಗಿ ನೋಡುತ್ತಾ, ತಾನು ಕಂಡು ಒಳಗಣ್ಣನ್ನು ಸಹೃದಯ ಲೋಕಕ್ಕೂ ತೋರುವ ಬರಹಗಳನ್ನು ಬರೆಯುತ್ತಾ ಕನ್ನಡದ ಓದು ಪ್ರಜ್ಞೆಯನ್ನು ವಿಸ್ತರಿಸಿದ ಹಿರಿಯ ಲೇಖಕರು ಮುಕುಂದರಾಜು ಅವರು. ಸುದೀರ್ಘ ಕನ್ನಡ ಪಾಠ ಮಾಡಿದ ಅನುಭವ, ಚರಿತ್ರೆ ಮತ್ತು ರಾಜಕಾರಣ ಹೇಗೆಲ್ಲಾ ಸಂಕೀರ್ಣಗೊಳಿಸಿ ಜನವಿರೋಧಿಯಾದ ಅಧಿಕಾರವನ್ನು ಅನುಭವಿಸುತ್ತಿದೆ ಎಂಬ ಧೋರಣೆಯನ್ನು ತಮ್ಮ ಪ್ರತೀ ಮಾತುಬರಹ ಹಾಗೂ ಸೃಜನಶೀಲ ಅಭಿವ್ಯಕ್ತಿಯಲ್ಲಿ ಕಾಣಬಹುದು.
APA, Harvard, Vancouver, ISO, and other styles
25

ಹೆಚ್. ಎಸ್., ಸಂತೋಷ. "ಮಹಿಳಾ ತತ್ವಪದಕಾರ್ತಿಯರ ಅನುಭಾವದ ನೆಲೆ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 30 вересня 2023, 124–31. http://dx.doi.org/10.59176/kjksp.v2i2.2308.

Full text
Abstract:
ಇತಿಹಾಸದಲ್ಲಿ ಹೆಚ್ಚು ಚರ್ಚೆಗೆ ಒಳಪಟ್ಟ ಪಾತ್ರ ಮಹಿಳೆಯ ಪಾತ್ರ ಮಹಿಳೆಯರ ಬಗೆಗೆ ಶತ ಶತಮಾನಗಳಿಂದಲೂ ಪ್ರಾಚೀನ ಕನ್ನಡ ಸಾಹಿತ್ಯಗಳಿಂದ ಹಿಡಿದು ಆಧುನಿಕ ಕಾಲಘಟ್ಟದವರೆಗೂ ವಿಭಿನ್ನ ನೆಲೆಯಲ್ಲಿ ಚರ್ಚೆ ಮಾಡಲಾಗುತ್ತಿದೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಚನ, ಸ್ವರವಚನ, ಕೀರ್ತನೆ, ತತ್ವಪದಗಳು ವಿಭಿನ್ನ ಆಶಯಗಳೊಂದಿಗೆ ಬೆಳೆದು ಬಂದಿದೆ. ಅದರಲ್ಲೂ ಸಾಹಿತ್ಯವೇ ಸೃಷ್ಟಿಯಾಗಿಲ್ಲ ಎಂಬ ಕಾಲದಲ್ಲಿ ಹದಿನಾರರಿಂದ ಇಪ್ಪತ್ತನೇಯ ಶತಮಾನದ ಅವಧಿಯಲ್ಲಿ ತತ್ವಪದ ಸಾಹಿತ್ಯವು ಹುಟ್ಟಿ ಸಮಾಜದ ಜನಮಾನಸದಲ್ಲಿ ಆಳವಾಗಿ ಬೇರೂರಿತು. ವಚನಗಳ ಸಮಾಜಮುಖಿಯ ಆಯಾಮ, ಕೀರ್ತನೆಗಳ ಭಕ್ತಿಯ ಆಯಾಮ, ಸ್ವರ ವಚನಗಳ ಅನುಭಾವಿಕ ಆಯಾಮಗಳ ಪ್ರಭಾವ ಪ್ರೇರಣೆಯಿಂದ ತತ್ವಪದ ಸಾಹಿತ್ಯವು ಹುಟ್ಟಿತು. ಪರಮಾತ್ಮನ ಬಗೆಗಿನ ಅನುಭವ ಈ ಪದ್ಯಗಳಲ್ಲಿ ವ್ಯಕ್ತ ಗೊಂಡಿರುವುದರಿಂದ ಇವಕ್ಕೆ ಅನುಭ
APA, Harvard, Vancouver, ISO, and other styles
26

-, Wilma Fernandes. "ದಕ್ಷಿಣ ಕನ್ನಡ ಜಿಲ್ಲೆಯ ಕೊಂಕಣಿ ಭಾಷಾ ನಾಟಕಕಾರ ಚಾ. ಫ್ರಾ. ದೆಕೊಸ್ತಾರವರು ಬರೆದ ಕೊಂಕಣಿ ನಾಟಕಗಳಲ್ಲಿರುವ ಸ್ತ್ರೀಪಾತ್ರಗಳ ಬಗ್ಗೆ ಒಂದು ಅವಲೋಕನ". International Journal For Multidisciplinary Research 5, № 6 (2023). http://dx.doi.org/10.36948/ijfmr.2023.v05i06.11481.

Full text
Abstract:
ಕ್ರಾಂತಿಕಾರಿ ನಾಟಕಕಾರ ಎಂದೇ ಪ್ರಸಿದ್ಧರಾಗಿರುವ ಚಾ. ಫ್ರಾ. ದೆಕೊಸ್ತಾರವರು ಕೊಂಕಣಿ ಭಾಷೆಯ ಖ್ಯಾತ ಸಾಹಿತಿ. ಅವರ ಪೂರ್ಣ ಹೆಸರು ಚಾರ್ಲ್ಸ್ ಫ್ರಾನ್ಸಿಸ್ ದೆಕೊಸ್ತಾ. ಅವರನ್ನು ಚಾ. ಫ್ರಾ. ಎಂದು ಕರೆಯಲಾಗುತ್ತಿತ್ತು. ಸಣ್ಣ ವಯಸ್ಸಿನಿಂದಲೇ ಸಾಹಿತ್ಯದ ಮೇಲೆ ಅಭಿರುಚಿ ಇರುವ ಚಾ. ಫ್ರಾ. ೧೯೫೨ ರಲ್ಲಿ ಮೊದಲ ಕವಿತೆ ಬರೆದು ಪ್ರಕಟಿಸಿದರು. ಅವರು ಕವಿ, ಲೇಖಕ ಹಾಗೂ ನಾಟಕಕಾರರಾಗಿದ್ದಾರೆ. ಮಾತ್ರವಲ್ಲದೆ ಉತ್ತಮ ನಟ, ನಿರ್ದೇಶಕರಾಗಿಯೂ ಕಾರ್ಯ ನಿರ್ವಹಸಿದ್ದಾರೆ. ಚಾ. ಫ್ರಾ. ರವರು ಕೊಂಕಣಿ ರಂಗಮಂಚಕ್ಕೆ ಹೊಸ ರೂಪ ನೀಡಿದರು. ಅವರು ರಚಿಸಿದ ನಾಟಕಗಳು ವಿಭಿನ್ನವಾಗಿದ್ದು ಸಮಾಜದ ಆಗಹೋಗುಗಳ ಪ್ರತಿಬಿಂಬ ಕಂಡ ಅನುಭವ ಪ್ರೇಕ್ಷಕರ ಮನಸ್ಸನಲ್ಲಿ ಮೂಡುತ್ತಿತ್ತು. ಅವರ ನಾಟಕಗಳಲ್ಲಿನ ಸಂಭಾಷಣೆ ತುಂಬಾ ತೀಕ್ಷ್ಣವಾಗಿರುತ್ತಿದ್ದವು. ಯಾವ ಸಂಕೋಚವೂ ಇಲ್ಲದೆ
APA, Harvard, Vancouver, ISO, and other styles
27

ಎ. ಕೆ., ಡಾ ರವಿಶಂಕರ. "ಜೈನ ಜನಪದ ಪದ್ಯ ಸಾಹಿತ್ಯ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 30 вересня 2022, 31–40. http://dx.doi.org/10.59176/kjksp.v1i2.2213.

Full text
Abstract:
ಜನವಾಣಿ ಬೇರು; ಕವಿವಾಣಿ ಹೂ’ ಎಂಬ ಬಿ. ಎಂ. ಶ್ರೀಕಂಠಯ್ಯ ಅವರ ನುಡಿಯಂತೆ ಜಾನಪದ ಸಾಹಿತ್ಯವು ಪಠ್ಯಲೋಕದ ಪಾಂಡಿತ್ಯಕ್ಕೆ ತಳಹದಿಯನ್ನು ಸೃಷ್ಠಿಸಿದ ಸಾಹಿತ್ಯವೆಂದು ಕರೆಯಬಹುದು. ಎರಡು ಸಾವಿರದ ಮೇಲೆ ಎರಡು ದಶಕಗಳ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಯಾವುದೇ ಸಾಹಿತ್ಯ ಪಠ್ಯವನ್ನು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ ಆ ಪಠ್ಯವು ಆಯಾ ಪರಿಸರದ ಮೂಲ ಜನಪದರ ಕೂಸಿನಂತೆ ಗೋಚರಿಸುತ್ತದೆ. ಜಾನಪದ ಸಾಹಿತ್ಯವು ವಿಶ್ವಸಾಹಿತ್ಯವಾಗಿದೆ. ಎಲ್ಲಾ ದೇಶಗಳಲ್ಲೂ, ಎಲ್ಲಾ ಧರ್ಮಗಳಲ್ಲೂ ತಾವು ಬದುಕುವ ಪರಿಸರ ಹಾಗೂ ಜೀವನ ವಿಧಾನದ ಕೈಗನ್ನಡಿಯಾಗಿ ರೂಪಿಸಿಕೊಂಡು ಬಂದಿದ್ದಾರೆ. ಮನುಷ್ಯನ ಅನುಭವಗಳೇ ಅನುಭಾವ ಸಾಹಿತ್ಯವಾದ ಪರಿಯು ಜಾನಪದವೆಂಬ ವಿಶಾಲಕ್ಷೇತ್ರವನ್ನು ಆವರಿಸಿದೆ.
APA, Harvard, Vancouver, ISO, and other styles
28

Gowda, Harisha. "ಸಣ್ಣಕತೆಗಳಲ್ಲಿ ಕೃಷಿ ಸಂಸ್ಕೃತಿಯ ಶಿಕ್ಷಣದ ಸಾಧ್ಯತೆಗಳು ಮತ್ತು ಸವಾಲುಗಳು". ShodhKosh: Journal of Visual and Performing Arts 5, № 2 (2024). https://doi.org/10.29121/shodhkosh.v5.i2.2024.3984.

Full text
Abstract:
ಕೃಷಿಕರಲ್ಲಿ ಶಿಕ್ಷಣ ಕಲಿತ ಮತ್ತು ಕಲಿಯದೆ ಇರುವವರ ನಡುವಿನ ಸಾಮರಸ್ಯ: “ಮುಟ್ಟು” ಕತೆಯಲ್ಲಿ ಕೃಷಿ ಕುಟುಂಬದ ಬದುಕು ಮತ್ತು ಕೃಷಿ ಕುಟುಂಬದಿAದ ಶಿಕ್ಷಣ ಪಡೆದು ದುಡಿಯಲು ಬೆಂಗಳೂರು ಸಿಟಿಗೆ ಹೋದವರ ನಡುವಿನ ಸಾಮರಸ್ಯದ ತೊಡಕುಗಳು, ಹಳ್ಳಿ ಮತ್ತು ನಗರವಾಸಿಗಳ ಅನುಭವದ ಮೂಲಕ ಅಭಿವ್ಯಕ್ತಗೊಳ್ಳುತ್ತವೆ. ಈ ಕತೆಯ ನಾಯಕಿ “ನಿಮ್ಮಿ” “ಯಾವ್ದಾದ್ರು ಜಮೀನ್ದಾರನ್ನ ಮದುವೆಯಾಗಿ ತೋಟಗಾರಿಕೆ ಅಂತ ಹಾಯಾಗಿರಬಹುದಿತ್ತು ಅಂತ ಸಾವಿರಸಲ ಅನಿಸಿದೆ. ಬರಿ ಅನಿಸುವುದಷ್ಟೇ, ಆದರೆ ಬೆಂಗಳೂರು ಎಂಬ ಮಾಯಾ ನಗರಿಯ ವ್ಯಾಮೋಹ ಯಾರನ್ನು ಬಿಡುತ್ತದೆ. ಇಲ್ಲೇನೋ ಕಡಿದು ಕಟ್ಟೆ ಹಾಕಿ ಉದ್ಧಾರ ಮಾಡುವುದಿದೆ, ಎಂಬ ಹುಚ್ಚು ಹಂಬಲ. ಸಾಧಿಸುತ್ತಿರುವುದು ಏನೂ ಅಲ್ಲ ಎರಡು ಹೊತ್ತಿನ ಊಟ ಬಟ್ಟೆ ಅವಶ್ಯಕತೆಗಳನ್ನಷ್ಟೇ.
APA, Harvard, Vancouver, ISO, and other styles
We offer discounts on all premium plans for authors whose works are included in thematic literature selections. Contact us to get a unique promo code!