Academic literature on the topic 'ಅಸ್ಪೃಶ್ಯತೆ'

Create a spot-on reference in APA, MLA, Chicago, Harvard, and other styles

Select a source type:

Consult the lists of relevant articles, books, theses, conference reports, and other scholarly sources on the topic 'ಅಸ್ಪೃಶ್ಯತೆ.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Journal articles on the topic "ಅಸ್ಪೃಶ್ಯತೆ"

1

ರುಕ್ಮಿಣಿ, ವಿ. "ಡಾ. ಬಿ.ಆರ್. ಅಂಬೇಡ್ಕರ್‌ ಅವರ ದೃಷ್ಟಿಯಲ್ಲಿ ಅಸ್ಪೃಶ್ಯತೆ". AKSHARASURYA JOURNAL 06, № 05 (2025): 175 to 185. https://doi.org/10.5281/zenodo.15504614.

Full text
Abstract:
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್‌ ಅವರು ಹಿಂದೂ ಸಮಾಜಕ್ಕೆ ಕಳಂಕವೆನಿಸಿರುವ ಅಸ್ಪೃಶ್ಯತೆಯ ವಿವಿಧ ಆಯಾಮಗಳನ್ನು ವೈಜ್ಞಾನಿಕವಾಗಿ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಭಾರತದಲ್ಲಿ ಮಾತ್ರ ಇದರ ಆಚರಣೆ ಏಕೆ ಮುಂದುವರೆದಿದೆ ಎಂಬುದರ ಬಗ್ಗೆ ವಿಶ್ಲೇಷಣೆ ನೀಡಿದ್ದಾರೆ. ಹಿಂದೂ ಸಮಾಜವನ್ನು ಮಾನವೀಯ ಮೌಲ್ಯಗಳು ಸಮಾನತೆ ಸ್ವಾತಂತ್ರ್ಯ, ನ್ಯಾಯ, ವಿಶ್ವ ಭ್ರಾತೃತ್ವದ ಆಧಾರದ ಮೇಲೆ ಪುನರ್ಘಟಿಸುವ ಪ್ರಯತ್ನವನ್ನು ಅವರ ಸಾಮಾಜಿಕ ಚಿಂತನೆಯಲ್ಲಿ ಕಾಣಬಹುದು. ಸಾಮಾಜಿಕ ಸಂಶೋಧನೆಯ ನೆಲೆಗಟ್ಟಿನಲ್ಲಿ ಅಂಬೇಡ್ಕರ್‌ ಅವರ ಅಸ್ಪೃಶ್ಯತೆಯ ಕುರಿತ ಸಾಮಾಜಿಕ, ರಾಜಕೀಯ, ಧಾರ್ಮಿಕ ವಿಚಾರಗಳು ತುಂಬಾ ಮಹತ್ವವಾಗಿವೆ. ಯುರೋಪಿನ ಚರಿತ್ರೆಯಲ್ಲಿ ಕಂಡುಬರುವ ಅನೇಕ ಅನ್ಯಾಯಗಳನ್ನು ಮೂಢನಂಬಿಕೆಗಳನ್ನು ನಿವಾರಿಸಲಾಗಿದೆ. ಆದರೆ ಭಾರತದಲ್ಲಿ ಹಿಂದೂ ಬ್ರಾಹ್ಮಣ
APA, Harvard, Vancouver, ISO, and other styles
2

ನಾಗರಾಜ, ಹರಿಜನ. "ಅಸ್ಪೃಶ್ಯತೆಯ ನಿರ್ಮೂಲನೆಯಲ್ಲಿ ಸಾಂವಿಧಾನಿಕ ನಿಬಂಧನೆಗಳ ಪಾತ್ರ". AKSHARASURYA JOURNAL 06, № 05 (2025): 105 to 113. https://doi.org/10.5281/zenodo.15504316.

Full text
Abstract:
ಭಾರತವು ಒಂದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಜನಿಸಿದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಅಡಿಯಲ್ಲಿ ಸಮಾನತೆ ಮತ್ತು ಸಮಾನ ಅವಕಾಶಗಳನ್ನು ಪಡೆದು ಸಮಾಜದಲ್ಲಿ ಘನತೆಯಿಂದ ಜೀವಿಸಲು ಅವಕಾಶವಿದೆ. ಭಾರತದಲ್ಲಿ ಸಾವಿರಾರು ಜಾತಿಗಳ ಸಂಕೀರ್ಣತೆಯಿದ್ದರೂ ಸಹ ಎಲ್ಲರೂ ಸಮಾನರು ಎಂಬ ಸಮಾನತೆಯ ಆಶಯವನ್ನು ಇಲ್ಲಿನ ಸಂವಿಧಾನ ಎತ್ತಿಹಿಡಿದಿದೆ. ವಿಶ್ವದ ಅತ್ಯಂತ ದೊಡ್ಡ ಸಂವಿಧಾನ ನಮ್ಮದಾಗಿದ್ದು ಇದರ ಹೆಮ್ಮೆಯ ಸಂಗತಿಯೆಂದರೆ ಅದುವೇ ಸಮಾನತೆ ಎಂದು ಹೇಳಬಹುದು. ಭಾರತದ ಸರ್ಕಾರವು ಸಂವಿಧಾನ ಜಾರಿಯಾದಾಗಿನಿಂದ ಹಿಡಿದು ಪ್ರಸ್ತುತ ದಿನಮಾನದವರೆಗೆ ಇಲ್ಲಿನ ಪ್ರತಿಯೊಬ್ಬ ಪ್ರಜೆಯೂ ಭ್ರಾತೃತ್ವ ಭಾವನೆಯೊಂದಿಗೆ ಯಾವುದೇ ಜಾತಿ, ವರ್ಗ ಮತ್ತು ಮತಗಳ ಬೇಧಭಾವವಿಲ್ಲದೇ ʼನಾವೆಲ್ಲರೂ ಭಾರತೀಯರು, ನಾವೆಲ್ಲರೂ ಸಮಾನರು’ ಎನ್ನುವಂತೆ ಕಾಯ್ದೆ ಕಾನೂನುಗಳನ್ನ
APA, Harvard, Vancouver, ISO, and other styles
3

ಸುನೀತಾ, ಮಹೇಶ್ವರಿ. "ಬಸವಣ್ಣನವರ ದೃಷ್ಟಿಯಲ್ಲಿ ಅಸ್ಪೃಶ್ಯತೆ". AKSHARASURYA 05, № 01 (2024): 134 to 138. https://doi.org/10.5281/zenodo.13871042.

Full text
Abstract:
೧೨ನೇ ಶತಮಾನದ ಆಂದೋಲನದ ನಾಯಕ ಮತ್ತು ಕೇಂದ್ರ ವ್ಯಕ್ತಿ ಆದ ಬಸವಣ್ಣ ಸಾಹಿತ್ಯದೃಷ್ಟಿಯಿಂದ ನೋಡಿದಾಗ ಆತ ಒಬ್ಬ ಅತ್ಯುತ್ತಮ ಕೃತಿಕಾರ ಸಮಾನತೆಯ ತತ್ವವನ್ನು ಸಾರಿದ ಹರಿಕಾರ ಎಂದು ಹೇಳುವುದು ಆಕಸ್ಮಿಕವೇ ಸರಿ. ಆತ ಹುಟ್ಟಿದ್ದು ಬಿಜಾಪುರ್ ಜಿಲ್ಲೆಯ ಬಸವನಬಾಗೇವಾಡಿ ಅಗ್ರಹಾರ ಎಂಬ ಊರಲ್ಲಿ ೧೧೩೪ಲ್ಲಿ ಜನನವಾಯಿತು. ತಂದೆ ಮಾದರಸ ತಾಯಿ ಮಾದಲಾಂಬಿಕೆ. ಇವರು ಬಾಲ್ಯದಿಂದಲೇ ವೈದಿಕ ಸಂಸ್ಕೃತಿಯ ವಿರೋಧಿಗಳಾಗಿದ್ದರು. ಇವರು ಹುಟ್ಟಿದ್ದು ಉತ್ತಮ ಬ್ರಾಹ್ಮಣ ಮನೆತನದಲ್ಲಿ ಆದರು ದಲಿತ ವರ್ಗದ ಜೊತೆ ಬೆರೆತು ಅವರಿಗಾಗಿ ತನ್ನ ಜೀವನದುದ್ದಕ್ಕೂ ಹೋರಾಡಿದನೆಂದು ತಿಳಿದು ಬರುತ್ತದೆ. ಹೊಸ ಹೊಸ ಬಗೆಯ ಅನೇಕ ಸುಧಾರಣೆಗಳನ್ನು ಜಾರಿಗೆ ತಂದು ನಮ್ಮ ಆಡಳಿತವನ್ನು ಸರಳಗೊಳಿಸಿದರು. ಎಲ್ಲಾ ಶರಣರನ್ನು ಕೂಡಿಸಿ ಎಲ್ಲಾ ಜಾತಿಯವರೊಡನೆ ತಮ್ಮನ್ನು ತಾವು ತೊಡಗಿಸಿಕೊಂಡು ಸ
APA, Harvard, Vancouver, ISO, and other styles
4

ನಾಗನಗೌಡ, ಗೌಡ್ರ. "ಡಾ. ಬಿ. ಆರ್. ಅಂಬೇಡ್ಕರ್‌‌ ಅವರ ಸಾಮಾಜಿಕ ನ್ಯಾಯದ ಚಿಂತನೆಗಳು". AKSHARASURYA JOURNAL 06, № 05 (2025): 94 to 104. https://doi.org/10.5281/zenodo.15504293.

Full text
Abstract:
ಡಾ. ಬಿ.ಆರ್. ಅಂಬೇಡ್ಕರ್‌ ಒಬ್ಬ ಭಾರತೀಯ ಶ್ರೇಷ್ಠ ರಾಜಕೀಯ ನಾಯಕ, ತತ್ವಜ್ಞಾನಿ, ಸಾಮಾಜಿಕ ಚಿಂತಕ, ಇತಿಹಾಸ ಸಂಶೋಧಕ, ಆರ್ಥಿಕ ತಜ್ಞ, ಶ್ರೇಷ್ಠ ಬರಹಗಾರ, ಮಹಿಳಾ ಸಮಾನತೆಯ ಹರಿಕಾರ, ದಲಿತರ ಸೂರ್ಯ, ಕಾರ್ಮಿಕ ಬಂಧು, ಕಾನೂನು ತಜ್ಞ, ಸಂವಿಧಾನ ಶಿಲ್ಪಿ ಎಂದೆಲ್ಲಾ ಪ್ರಖ್ಯಾತರಾಗಿದ್ದಾರೆ. ಭಾರತೀಯ ಸಮಾಜವು ಶತ ಶತಮಾನಗಳಿಂದಲೂ ವರ್ಣ, ಜಾತಿಯ ಹೆಸರಿನಲ್ಲಿ ವರ್ಗೀಕರಣಗೊಂಡು ಇಡೀ ಮಾನವ ಸಂಬಂಧಗಳ ಮೌಲ್ಯವನ್ನೇ ಹಾಳು ಮಾಡಿದೆ. ಸಮಾಜದ ಬಹುಪಾಲು ಜನಾಂಗ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬಲಿಷ್ಠವಾಗಿರುವ ಜಾತಿ, ವರ್ಗಗಳ ತುಳಿತಕ್ಕೆ ಸಿಲುಕಿ ನಲುಗಿವೆ. ಅಂಬೇಡ್ಕರ್‌‌ರವರು ಬಾಲ್ಯದಿಂದಲೂ ಕಂಡುಂಡ ಅಸ್ಪೃಶ್ಯತೆಯ ನೋವು ಅಪಮಾನಗಳು ಅವರನ್ನು ಸಾಮಾಜಿಕ ಚಿಂತನೆಡೆಗೆ ಮುಖ ಮಾಡುವಂತೆ ಪೇರೆಪಿಸಿದವು. ಅವರು ಶಿಕ್ಷಣ-ಸಂಘಟನೆ-ಹೋರಾಟ ಎಂಬ ತತ
APA, Harvard, Vancouver, ISO, and other styles
5

ಅಂಜಿನಪ್ಪ, ಎಲ್.ಟಿ. "ಕನ್ನಡದಲ್ಲಿ ಮೀಸಲಾತಿ ಚಳವಳಿಯ ಇತಿಹಾಸ: ಒಂದು ಅವಲೋಕನ". AKSHARASURYA JOURNAL 06, № 06 (2025): 01 to 10. https://doi.org/10.5281/zenodo.15580870.

Full text
Abstract:
ಪ್ರಸ್ತುತ ಈ ಲೇಖನದಲ್ಲಿ ಭಾರತದಲ್ಲಿನ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆ ಶೂದ್ರರು ಅನುಭವಿಸಿದ ಯಾತನೆಗಳು, ಹನ್ನೆರಡನೇ ಶತಮಾನದಲ್ಲಿ ಆದ ಸಾಮಾಜಿಕ ಕ್ರಾಂತಿಗಳು, ಸ್ವಾತಂತ್ರ ಪೂರ್ವದಲ್ಲಿನ ಮೀಸಲಾತಿ ಕ್ರಮಗಳು ನಂತರದ ಬೆಳವಣಿಗೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಕೊಲ್ಲಾಪುರದ ಶಾಹುಮಹಾರಾಜರು ಹಿಂದುಳಿದವರಿಗೆ ಶೇಕಡ 50ರಷ್ಟು ಮೀಸಲಾತಿಯನ್ನು ಜಾರಿಗೆ ತಂದ ಮೊದಲ ಭಾರತೀಯ ರಾಜ ಎಂಬ ಹೆಗ್ಗಳಿಕೆ ಪಾತ್ರವಾದ ರೀತಿ ಹಾಗೂ ಅವರ ಕೈಗೊಂಡ ಕಾರ್ಯವೈಖರಿಗಳನ್ನು ಇಲ್ಲಿ ತಿಳಿಸಲಾಗಿದೆ. ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರು ಹಿಂದುಳಿದವರಿಗೆ ನೀಡಿದ ಕೊಡುಗೆಗಳು ಅವರ ಅಧಿಕಾರವಧಿಯಲ್ಲಿ ಜಾರಿಗೆ ತಂದ ಮಿಲ್ಲರ್ ಆಯೋಗ, ಮಿಲ್ಲರ್ ಆಯೋಗವು ಆ ಸಂದರ್ಭದಲ್ಲಿ ಅಧಿಕಾರಿಗಳಿಗೆ ನೀಡುತ್ತಿದ್ದ ತಾರತಮ್ಯ ಸಂಬಳದ ಸೌಲತ್ತುಗಳು ಇತರ ಸೌಲತ್ತುಗಳು ಹಾಗೂ ಆಯೋಗ ಕ
APA, Harvard, Vancouver, ISO, and other styles
6

ಪ್ರಸನ್ನಕುಮಾರ್, ಕೆ. "ಅಂಬೇಡ್ಕರ್‌ರವರ ಸಾಮಾಜಿಕ ಚಿಂತನೆಗಳು". AKSHARASURYA JOURNAL 05, № 06 (2025): 110 to 116. https://doi.org/10.5281/zenodo.14788784.

Full text
Abstract:
ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿ ಎಂದು ಕರೆಸಿಕೊಂಡ ಮಹಾನ್ ವ್ಯಕ್ತಿ. ಇವರು ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಇವರು ದೇಶಕ್ಕಾಗಿ ಮಾಡಿದ ಹೋರಾಟಗಳು ಎಂತಹ ದುರ್ಬಲ ವ್ಯಕ್ತಿಗಳನ್ನೂ ಸಹ ಎಚ್ಚರಿಸುತ್ತದೆ. ಇವರ ಕೊಡುಗೆಯನ್ನು ಭಾರತೀಯ ಜನತೆ ಎಂದಿಗೂ ಮರೆಯುವುದಿಲ್ಲ. ಸಂವಿಧಾನ ರಚನೆಗೆ ಮಾತ್ರವಲ್ಲದೇ ಅವರ ಸೇವೆ ಜನತೆಯನ್ನು ಜಾಗೃತರಾಗಿ ಮಾಡುವ ಸಾಧನವಾಗಿದೆ ಎನ್ನಬಹುದು. ಅಂಬೇಡ್ಕರ್ ಅವರು ವೈಚಾರಿಕತೆಯ ನೆಲೆಯಲ್ಲಿ ಈ ದೇಶವನ್ನು ಮುಂದೆ ತೆಗೆದುಕೊಂಡು ಹೋಗಬೇಕೆಂಬ ಮಹದಾಶಯವನ್ನು ಹೊಂದಿರುವ ಅಪರೂಪ ವ್ಯಕ್ತಿ. ಈ ಹಿನ್ನಲೆಯಲ್ಲಿಯೇ ಅವರು “ಈ ದೇಶದಲ್ಲಿ ಗುಡಿ-ಗೋಪುರಗಳಿಗಿಂತ ಶಾಲೆಗಳು ತೆರೆದರೆ, ಆ ದೇಶ ಉದ್ದಾರವಾಗುತ್ತದೆ” ಎಂಬ ನಿಲುವನ್ನು ತ
APA, Harvard, Vancouver, ISO, and other styles
7

ನವೀನ್, ಕುಮಾರ ಎ. ಜಿ. "ಅಂಬೇಡ್ಕರ್‌: ಅಸ್ಪೃಶ್ಯರ ಆರ್ಥಿಕ ಸ್ವಾವಲಂಬನೆಗಾಗಿ ನಡೆಸಿದ ಚಿಂತನೆಗಳು". AKSHARASURYA JOURNAL 06, № 05 (2025): 121 to 132. https://doi.org/10.5281/zenodo.15504345.

Full text
Abstract:
ಇಂದು ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗಗಳ ಏಳಿಗೆಯು ಒಂದು ರಾಷ್ಟ್ರೀಯ ಸಮಸ್ಯೆಯಾಗಿ ಉಳಿಯುತ್ತ ಬಂದಿದೆ. ಕಳೆದ ನಲವತ್ತು ವರ್ಷಗಳಿಂದ ಅಂದರೆ 1991 ರಿಂದ ಮಾಹಿತಿ ತಂತ್ರಜ್ಞಾನದಿಂದ ಪ್ರಾರಂಭವಾಗಿ 2018ರ ಮೇಕಿಂಗ್ ಇಂಡಿಯಾ ವರೆಗೆ ಅನೇಕ ಯೋಜನೆಗಳು ಹತ್ತಾರು ಭಾಗ್ಯಗಳು ಅಪಾರ ಪ್ರಮಾಣದ ಆರ್ಥಿಕ ನೆರವು ನೀಡಲಾಗಿದೆ. ಆದರೂ ಸಮಾಜದಲ್ಲಿ ಆರ್ಥಿಕ ದುರ್ಬಲ ವರ್ಗ ಸಮಾಜಿಕವಾಗಿ ಮುಖ್ಯವಾಹಿನಿಯಲ್ಲಿ ಬಂದು ಮಹತ್ತರವಾದ ಸಾಧನೆ ಮಾಡುವಲ್ಲಿ ವಿಫಲವಾಗಿದೆ. ಬಡತನ ನಿರ್ಮೂಲನೆ ಅಸಾಧ್ಯವೇನೋ ಅನಿಸುವಷ್ಟರ ಮಟ್ಟಕ್ಕೆ ಬಂದು ನಿಂತಿದೆ. ದೌರ್ಜನ್ಯ, ದಬ್ಬಾಳಿಕೆ, ಕೊಲೆ, ಸುಲಿಗೆ, ಮೋಸ, ಸಂಪತ್ತಿನ ಕ್ರೋಢಿಕರಣಕ್ಕಾಗಿ ನಡೆಯುತ್ತ ಕಾನೂನೆ ಭಯಪಡುವ ಮಟ್ಟಕ್ಕೆ ನಡೆಯುತ್ತಿವೆ. ಇದರ ಪರಿಣಾಮ ಜನ ಅನ್ಯ ಧರ್ಮಕ್ಕೆ ಮತಾಂತರ ಹೊಂದುತ್ತ ಅಲ್ಲಿಯೂ ನೆಮ್ಮದಿ ಕಾಣದ
APA, Harvard, Vancouver, ISO, and other styles
8

ಶೋಭಾ, ಸುರೇಶ್. "ಡಾ. ಅಂಬೇಡ್ಕರ್‌‌ರವರ ಸಾಮಾಜಿಕ ಆಲೋಚನೆಗಳು ಅಸ್ಪೃಶ್ಯರ ವಿಮೋಚನೆ". AKSHARASURYA JOURNAL 06, № 05 (2025): 207 to 219. https://doi.org/10.5281/zenodo.15504651.

Full text
Abstract:
ಸ್ವತಂತ್ರ್ಯಪೂರ್ವ ಭಾರತದ ಜಾತಿ ವ್ಯವಸ್ಥೆಯ ಕರಾಳತೆ ಕಹಿ ಅನುಭವಗಳೊಂದಿಗೆ ಡಾ|| ಬಿ. ಆರ್. ಅಂಬೇಡ್ಕರ್‌‌ರವರು ಅಸ್ಪೃಶ್ಯರಿಗೆ ಮೀಸಲಾತಿ ದೊರಕುವಂತೆ ಮಾಡಿದ ಹೋರಾಟದಲ್ಲಿ ಯಶಸ್ಸನ್ನು ಕಾಣುತ್ತಾರೆ. ತಮ್ಮ ಪ್ರತಿಭೆ ಹಾಗೂ ಪರಿಶ್ರಮದಿಂದ ಬದುಕಿನಲ್ಲಿ ಯಶಸ್ಸನ್ನು ಕಂಡರು. ಜಾತಿಯ ಕಾರಣದಿಂದ ಅನೇಕ ಸಂಕಷ್ಟಗಳಿಗೆ ಅವಮಾನಕ್ಕೆ ಗುರಿಯಾಗುತ್ತಾರೆ. ಬದುಕಿನುದ್ದಕ್ಕೂ ಕೆಳವರ್ಗದ ಜನರಿಗಾಗಿ ಹೋರಾಡಿ ಮೀಸಲಾತಿಯ ಮೂಲಕ ಹಿಂದುಳಿದವರನ್ನು ಮುಖ್ಯವಾಹಿನಿಗೆ ತಂದು ಈ ಸೌಲಭ್ಯ ಪಡೆದವರು ತಮ್ಮ ವರ್ಗದವರ ಏಳಿಗೆಗಾಗಿ ಪ್ರಯತ್ನಪಡಬೇಕು ಎಂಬ ಆಶಯವನ್ನು ಹೊಂದಿದ ಅಂಬೇಡ್ಕರ್‌‌ರವರಿಗೆ ತೀವ್ರ ನಿರಾಸೆಯಾಗುತ್ತದೆ. ಕೆಳ ಸಮುದಾಯಗಳಲ್ಲಿಯೇ ಪರಸ್ಪರ ಆಂತರಿಕ ಭಿನ್ನಾಭಿಪ್ರಾಯಗಳು, ಅಸಮಾನತೆಗಳು, ತಾರತಮ್ಯಗಳ ಕಾರಣಗಳಿಂದ ಪ್ರಬಲ ಜಾತಿಯವರ ದೌ
APA, Harvard, Vancouver, ISO, and other styles
9

ವಿಜಯಲಕ್ಷ್ಮಿ, ದತ್ತಾತ್ರೇಯ ದೊಡ್ಡಮನಿ. "ವೀಸಾದ ನಿರೀಕ್ಷೆಯಲ್ಲಿನ ನೆನಪುಗಳ ಸುರುಳಿ". AKSHARASURYA JOURNAL 06, № 05 (2025): 241 to 248. https://doi.org/10.5281/zenodo.15504724.

Full text
Abstract:
ಆತ್ಮಕಥೆ ಕನ್ನಡ ಸಾಹಿತ್ಯದ ಒಂದು ಸಾಹಿತ್ಯ ಪ್ರಕಾರವಾಗಿ ಬೆಳೆದು ಬಂದಿರುವುದನ್ನು ನೋಡುತ್ತೇವೆ. ಮನುಷ್ಯನ ಸುತ್ತಲೂ ನಡೆಯುವ ಮತ್ತು ಅವರ ಅಂತರಾಳದಲ್ಲಿರುವ ಹೂರಣಗಳನ್ನು ಹೊರ ಹಾಕುವ ಒಂದು ಪ್ರಕಾರವಾಗಿ ಕಾಣುತ್ತೇವೆ. ಒಬ್ಬ ಮನುಷ್ಯನ ಇಡೀ ಬದುಕಿನಲ್ಲಿ ನಡೆದಂತಹ ತಪ್ಪು-ಸರಿ, ಸಿಹಿ-ಕಹಿ ಘಟನೆಗಳಿಗೆ ಅಕ್ಷರ ರೂಪವನ್ನು ನೀಡುತ್ತಾನೆ. ತಮ್ಮ ಅಂತರಾಳದ ತಮುಲಗಳನ್ನು ಸ್ವವಿಮರ್ಶೆಗೆ ಒಳಪಡಿಸಿಕೊಳ್ಳಲಾಗುತ್ತದೆ. ಆದರೆ ಬಾಬಾ ಸಾಹೇಬರು ಬರೆದ ಅವರ ಆತ್ಮಕಥೆಯಲ್ಲಿ ಅವರ ಬದುಕಿನ ಕಹಿ ಘಟನೆಗಳು ಹೇಗೆ ಮುಂದೆ ಅವರು ಇಡೀ ಸಮಾಜದ ಏಳಿಗೆಗಾಗಿ ಅವುಗಳನ್ನೆ ಆಧಾರವಾಗಿ ಬಳಸಿಕೊಂಡರು ಎನ್ನುವುದನ್ನು ಅವರ ಬದುಕೆ ನಮಗೆ ತೋರಿಸಿಕೊಡುತ್ತದೆ. ʼವೀಸಾದ ನಿರೀಕ್ಷೆಯಲ್ಲಿನ ನೆನಪುಗಳ ಸುರುಳಿ’ ಇದು ಡಾ. ಬಿ.ಆರ್. ಅಂಬೇಡ್ಕರ್‌ ಅವರು ಬರೆದಿರುವ ಆತ್ಮಕಥ
APA, Harvard, Vancouver, ISO, and other styles
10

ಆಶಾಲತಾ, ಪಿ. "ಭಾರತದ ಪ್ರಜಾತಂತ್ರ: ಡಾ. ಬಿ.ಆರ್. ಅಂಬೇಡ್ಕರ್‌ ಚಿಂತನೆಗಳು". AKSHARASURYA JOURNAL 06, № 05 (2025): 01 to 09. https://doi.org/10.5281/zenodo.15504104.

Full text
Abstract:
ಭಾರತದಲ್ಲಿ ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯ, ಮಹಿಳಾ ಹಕ್ಕುಗಳ ಬಗೆಗೆ ತೀವ್ರವಾಗಿ ಚಿಂತಿಸಿ, ಆ ಸಾಮಾಜಿಕ ಸುಧಾರಣೆಗಳಿಗೆ ಕಾನೂನಿನ ಚೌಕಟ್ಟು ಅವಶ್ಯವೆಂದು, ಭಾರತದ ಸಂವಿಧಾನದಲ್ಲಿ ಆ ಮೌಲ್ಯಗಳನ್ನು ಹಲವಾರು ವಿಧಿಗಳ ರೂಪದಲ್ಲಿ ಕ್ರೋಢೀಕರಿಸಿ, ಶೋಷಿತ ಸಮುದಾಯಗಳಲ್ಲಿ ಸ್ವಾಭಿಮಾನ, ಆತ್ಮಗೌರವ ಮತ್ತು ಅನ್ಯಾಯಗಳ ವಿರುದ್ಧ ಹೋರಾಟದ ಮನೋಭಾವವನ್ನು ಮೂಡಿಸಿದ ಮಹಾನ್ ಮಾನವತಾವಾದಿ, ಸಂವಿಧಾನಶಿಲ್ಪಿ, ಅರ್ಥಶಾಸ್ತ್ರಜ್ಞ, ಕಾನೂನು ತಜ್ಞ ಡಾ. ಬಾಬಾಸಾಹೇಬ್ ಅಂಬೇಡ್ಕರ್‌‌ರವರು. ಮೂಲತ ಅಂಬೇಡ್ಕರ್‌‌ರವರು, ಬೆಳೆದು ಬಂದ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳು, ಅಸ್ಪೃಶ್ಯತೆ, ಬಡತನ, ದೌರ್ಜನ್ಯ ಈ ಎಲ್ಲಾ ಜಾತಿಯ ಅಸಮಾನತೆಗಳ ಭೀತಿಗಳನ್ನು, ಒಳಗೊಂಡ ಸಮಾಜವಾಗಿತ್ತು. ಹಾಗಾಗಿ ಸಹಜವಾಗಿಯೇ ಶೋಷಿತ ಸಮುದಾಯಗಳ ಶೋಷಣೆಯ ವಿವಿಧ ಸ್ವರೂಪಗಳ
APA, Harvard, Vancouver, ISO, and other styles
More sources
We offer discounts on all premium plans for authors whose works are included in thematic literature selections. Contact us to get a unique promo code!