To see the other types of publications on this topic, follow the link: ಗಂಡು-ಹೆಣ್ಣು.

Journal articles on the topic 'ಗಂಡು-ಹೆಣ್ಣು'

Create a spot-on reference in APA, MLA, Chicago, Harvard, and other styles

Select a source type:

Consult the top 40 journal articles for your research on the topic 'ಗಂಡು-ಹೆಣ್ಣು.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Browse journal articles on a wide variety of disciplines and organise your bibliography correctly.

1

ಚಂದ್ರಕಲಾ, ಹೆಚ್. ಆರ್. "ಹಿಜ್ರಾ ಸಮುದಾಯದ ರೇವತಿ ಆತ್ಮಕಥೆಯ ನೆರಳುಗಳ ಜಾಡು". AKSHARASURYA JOURNAL 03, № 04. SPECIAL ISSUE. (2024): 148 to 156. https://doi.org/10.5281/zenodo.10929908.

Full text
Abstract:
ಕನ್ನಡದಲ್ಲಿ ಈಗೀಗ ಅನುವಾದಿತ ಆತ್ಮಕಥನಗಳ ಸಂಖ್ಯೆ ಹೆಚ್ಚುತ್ತಿವೆ. ಕನ್ನಡದ ಆತ್ಮಕಥನಗಳ ಮಾದರಿಗೆ ಇದೊಂದು ವಿಶಿಷ್ಟ ಸೇರ್ಪಡೆ ಏಕೆಂದರೆ ಬಹುಪಾಲು ಆತ್ಮಕಥನಗಳಿಗೆ ಆತ್ಮವಿರದೆ, ಆತ್ಮವಂಚನೆಯಿಂದ ಕೂಡಿರುತ್ತವೆ. ರೇವತಿಯ ಆತ್ಮಕಥೆ ‘ಬದುಕು ಬಯಲು’ ಕೃತಿಯಲ್ಲಿ ಬಾಲ್ಯದ ಅನುಭವಗಳ ಗಟ್ಟಿತನ ಮತ್ತು ಪ್ರಾಮಾಣಿಕತೆ ಬೆಳೆಯುತ್ತಾ ಪಕ್ವವಾಗುತ್ತಾ ಸಾಗಿ ಈ ಲೋಕವನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಿ ರೇವತಿಯ ಆತ್ಮಘನತೆಯನ್ನು ಹೆಚ್ಚಿಸುತ್ತದೆ. ಪರಮಾತ್ಮನನ್ನು ದರ್ಶಿಸುತ್ತದೆ. ದೇಹದ ಅಂಗಾಂಗಗಳ ಮೂಲಕ ಗಂಡು, ಹೆಣ್ಣು ಎಂದು ಗುರುತಿಸಲಾಗುತ್ತದೆ. ಬದುಕು ಗಂಡು-ಹೆಣ್ಣೆಂಬ ದ್ವಿಲಿಂಗದ ಸುತ್ತವೇ ಹೆಣೆದುಕೊಂಡಿದೆ. ಆದರೆ ಗಂಡಿನೊಳಗಿರುವ ಹೆಣ್ಣಿನ ಭಾವನೆ, ನಡವಳಿಕೆಯನ್ನು ಗುರುತಿಸುವುದು ಹೇಗೆಂಬ ಪ್ರಶ್ನೆಗೆ ಈ ಕೃತಿ ಉತ್ತರದಾಯಿಯಾಗಿದೆ.
APA, Harvard, Vancouver, ISO, and other styles
2

ಮುಕ್ತಾ, ಪೈ., та ಶಂಕರ್ ಜ್ಯೋತಿ. "ವಚನ ಚಳುವಳಿ ಮತ್ತು ಸಮಾಜ ಪರಿವರ್ತನೆ". AKSHARASURYA JOURNAL 06, № 05 (2025): 84 to 93. https://doi.org/10.5281/zenodo.15504282.

Full text
Abstract:
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯಕ್ಕೊಂದು ವಿಶಿಷ್ಟವಾದ ಸ್ಥಾನವಿದೆ. ಇದು ಎಲ್ಲಾ ವರ್ಗ, ವರ್ಣದ ಜನಸಾಮಾನ್ಯರು ತಮ್ಮ ಮನಸ್ಸಿನಲ್ಲಿದ್ದ ಭಾವನೆಗಳನ್ನು ವ್ಯಕ್ತಪಡಿಸಿದ ಅದ್ಭುತವಾದ ಭಕ್ತಿ ಸಾಹಿತ್ಯ. ಮೇಲು-ಕೀಳು, ಜಾತಿ-ಮತ, ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರೂ ಸಾಮೂಹಿಕವಾಗಿ ಪಾಲ್ಗೊಂಡ ಸಾಹಿತ್ಯ ಜಗತ್ತಿನ ಇತಿಹಾಸದಲ್ಲಿಯೇ ವಿರಳವಾಗಿದೆ. ಶರಣ ಧರ್ಮದ ವಿಶಿಷ್ಟತೆ ಎಂದರೆ ಪೂಜೆ ಪುನಸ್ಕಾರಗಳಿಗೆ, ಯಜ್ಞ ಯಾಗಾದಿಗಳಿಗೆ, ಆಚರಣೆಗಳಿಗೆ ಅವಕಾಶ ನೀಡಲಿಲ್ಲ. ವಚನಾಕಾರರು 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಹೀಗೆ ಹಲವು ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ತಂದು ಸಮಾಜದಲ್ಲಿ ನಿರ್ಲಕ್ಷಕ್ಕೆ ಒಳಗಾದ ಜನ ಸಮೂಹವನ್ನು ಒಂದೆಡೆ ಸೇರಿಸುವ ಕಾರ್ಯವನ್ನು ಮಾಡಿದರು. ವಚನ ಚಳುವಳಿಯ ದೀಪವನ್ನು ನೂರಾರು ವಚನಕಾರರು ಹಚ
APA, Harvard, Vancouver, ISO, and other styles
3

ಸೌಮ್ಯ, ವಿ. "ಹೆಣ್ಣು ಹದ್ದಿನ ಸ್ವಯಂವರ: ಆಧುನಿಕತೆ ಹಾಗೂ ಸ್ತ್ರೀ ವಾದವನ್ನು ಅನುಲಕ್ಷಿಸಿ". AKSHARASURYA 04, № 03 (2024): 61 to 67. https://doi.org/10.5281/zenodo.12672703.

Full text
Abstract:
ಬಾನು ಮುಶ್ತಾಕ್ ರವರ ಬಹುತೇಕ ಕತೆಗಳು ಮಹಿಳೆಯ ಬದುಕಿನ ಕುರಿತು ಆಶಾವಾದವನ್ನು ಹೊಂದಿವೆ. ಇತ್ತೀಚೆಗೆ ಬಿಡುಗಡೆಯಾದ ಅವರ ಕಥಾಸಂಕಲನ ‘ಹೆಣ್ಣು ಹದ್ದಿನ ಸ್ವಯಂವರ’‌ ದಲ್ಲಿನ ಇದೇ ಶಿರ್ಷಿಕೆಯ ಕತೆ ಆಧುನಿಕತೆ ಹಾಗೂ ಸ್ತ್ರೀವಾದಗಳ ನೈತಿಕತೆಯ ಹುಡುಕಾಟದಲ್ಲಿ ತೊಡಗಿರುವ ಆಶಾವಾದವನ್ನು ಝಳಪಿಸಿದ ಕತೆಯೆಂದೆ ಅನಿಸಿದೆ. ಇಲ್ಲಿ ಅನ್ಯ ಬದುಕಿನಿಂದ ಪಡೆದುಕೊಂಡ ಆಧುನಿಕತೆ ಹಾಗೂ ಸಹಜ ಸಂವೇದಿತ ಆಧುನಿಕತೆ – ಇವೆರಡೂ ಸಹ ಪರಸ್ಪರ ಪ್ರಭಾವಕ್ಕೆ, ಪ್ರಚೋದನೆಗೆ ಒಳಗಾಗಿರುವಂತಿದೆ. ಇಂದು ಕಂಡುಬರುತ್ತಿರುವ ಸೃಜನಶೀಲತೆ ಮತ್ತು ಸ್ವಂತಿಕೆಯ ಹೊಸ ಬದುಕಿನ ದೃಷ್ಟಿಕೋನವು ಇಲ್ಲಿದೆ. ಅಲ್ಲದೆ, ಸ್ತ್ರೀವಾದಿ ಚಿಂತನೆಯ ತಾತ್ವಿಕತೆಯಾದ ಪ್ರಜ್ಞೆಯ ಜಾಗೃತಿ ಹಾಗೂ ಸ್ವಾಭಿವ್ಯಕ್ತಿಯ ಜಿಜ್ಞಾಸೆಯೂ ಇಲ್ಲಿ ಒಡಮೂಡಿದೆ. ಲೇಖಕಿಯ ಹೆಣ್ಣಿನ ಅಸ್ತ
APA, Harvard, Vancouver, ISO, and other styles
4

ವಸುಂಧರಿ, ಎನ್. "ವಚನ ಚಳುವಳಿ ಮತ್ತು ಸಮಾಜ ಪರಿವರ್ತನೆ". AKSHARASURYA JOURNAL 06, № 05 (2025): 233 to 240. https://doi.org/10.5281/zenodo.15504705.

Full text
Abstract:
ಆತ್ಮಾನುಭಾವದ ಚೈತನ್ಯ ಮತ್ತು ಸಮಾಜಕಲ್ಯಾಣದ ತೀವ್ರಕಾಳಜಿಯೊಂದಿಗೆ ಮೂಢನಂಬಿಕೆ, ಕಂದಾಚಾರಗಳಿಂದ ಜಡವಾಗಿದ್ದ ಸಮಾಜವನ್ನು ಪರಿವರ್ತಿಸುವ ಸಂಕಲ್ಪದಿಂದ ಅವರು ಒಂದು ವಿನೂತನ ಚಳುವಳಿಯನ್ನೇ ಪ್ರಾರಂಭಿಸಿದರು. ಮೇಲು-ಕೀಳು ಎಂಬ ವರ್ಣ ಅಸಮಾನತೆ;ಬಡವ ಬಲ್ಲಿದ ಎಂಬ ವರ್ಗ ತಾರತಮ್ಯ;ಹೆಣ್ಣು-ಗಂಡು ಎಂಬ ಲಿಂಗಭೇದ ಇವೆಲ್ಲ ತರತಮ ವ್ಯವಸ್ಥೆಯನ್ನು ಹೋಗಲಾಡಿಸಿ ಸಮಾನತೆಯ ಆಧಾರದ ಮೇಲೆ ಹೊಸ ಸಮಾಜವನ್ನು ಅವರು ಕಟ್ಟಬಯಸಿದರು. ಇದಕ್ಕಾಗಿ ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪನೆಯಾಯಿತು. ಬಸವಣ್ಣ ಸಂಚಾಲಕನಾಗಿ ಮುಂದೆ ನಿಂತ. ಮಹಾನುಭಾವಿ ಅಲ್ಲಮಪ್ರಭುವಿನ ಮಾರ್ಗದರ್ಶನ ದೊರೆಯಿತು. ಚೆನ್ನಬಸವ, ಅಕ್ಕನಾಗಮ್ಮ, ಹಡಪದ ಅಪ್ಪಣ್ಣ, ಮಡಿವಾಳ ಮಾಚಯ್ಯ ಮೊದಲಾದ ನೂರಾರು ವಚನಕಾರರು ಕಾರ್ಯಕರ್ತರಾಗಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡರು. ಬಸವಾದಿ ಶರಣರು ಕಲ್ಯಾಣದಲ್ಲಿ ಹೊ
APA, Harvard, Vancouver, ISO, and other styles
5

ರಾಮಕೃಷ್ಣಯ್ಯ, ಎಂ. "ಜನಪದ ಕಥೆಗಳಲ್ಲಿ ಮಹಿಳಾಲೋಕ". AKSHARASURYA 04, № 02 (2024): 33 to 41. https://doi.org/10.5281/zenodo.11525737.

Full text
Abstract:
ಜನಪದ ಕಥೆಗಳಲ್ಲಿ ಮಹಿಳಾ ಲೋಕ ತಲೆಮಾರಿನಿಂದ ತಲೆಮಾರಿಗೆ ಮೌಖಿಕವಾಗಿ ಹರಿದು ಬಂದಿರುವ ಕಥೆಯನ್ನು ನಮ್ಮಲ್ಲಿ ‘ಅಜ್ಜಿಯ ಕಥೆ’, ‘ಅಡುಗೋಲಜ್ಜಿಯ’ ಕಥೆಯಂತಲೂ ಕರೆಯುವುದುಂಟು. ಕಥೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವಲ್ಲಿ ಪ್ರಧಾನ ಪಾತ್ರ ಅಜ್ಜಿಯರದೇ ಆಗಿರುತ್ತದೆ. ವಾಚಕ ಪರಂಪರೆಯ ಈ ಕಥೆಗಳು ಹರಿದು ಬರುವಾಗ ಸಾಹಿತ್ಯ ಪರಂಪರೆಗೆ ಹೋಗಿರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಕಥೆಗಳು ತಮ್ಮ ವಸ್ತುವಿನಲ್ಲಿ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸಗೊಳ್ಳಬಹುದು. ಆದರೆ ಒಂದೇ ಬಗೆಯ ಸಾಮಾಜಿಕ ಮತ್ತು ವೈಯಕ್ತಿಕ ಅಗತ್ಯಗಳು ಎಲ್ಲಾ ಕಡೆ ಇದ್ದೇ ಇರುತ್ತವೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿಯೂ ಹೆಣ್ಣು ಕೀಳು, ಅವಲಂಬಿತಳು, ಪುರುಷನಿಲ್ಲದೆ ಅವಳ ಜೀವನ ನಿರರ್ಥಕ ಎಂದೆಲ್ಲಾ ಭಾವಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಜನ
APA, Harvard, Vancouver, ISO, and other styles
6

ಕೆ.ಜಿ., ಚವಾಣ. "ಸುಧಾಮೂರ್ತಿ ಕಾದಂಬರಿಗಳಲ್ಲಿ ಸ್ತ್ರೀವಾದಿ ಪರಿಕಲ್ಪನೆಗಳು". AKSHARASURYA 03, № 06 (2024): 41 to 54. https://doi.org/10.5281/zenodo.11126906.

Full text
Abstract:
ಸುಧಾಮೂರ್ತಿಯವರು ಕನ್ನಡ ನಾಡಿನ ಪ್ರಮುಖ ಬರಹಗಾರರು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಲೇಖಕಿ, ಸರಳ ಸಜ್ಜನಿಕೆಯ ವ್ಯಕ್ತಿ, ಉತ್ತಮ ವಾಗ್ಮಿ, ಸದಾ ಕ್ರೀಯಾಶೀಲರು, ಸಮಾಜಕ್ಕೆ ಸ್ಪೂರ್ತಿ ನೀಡುವ ಶಕ್ತಿಯಾಗಿ, ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದಾರೆ. ಕನ್ನಡ ಮಾತ್ರವಲ್ಲದೆ ಇಂಗ್ಲೀಷ್ ಭಾಷೆಯಲ್ಲಿಯೂ ಹಲವು ಕೃತಿಗಳನ್ನು ಬರೆದು ಪ್ರಸ್ತುತದಲ್ಲಿ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದು, ಬಿಲ್‌ಗೇಟ್ಸ್ ಪ್ರತಿಷ್ಠಾನದ ಸಾರ್ವಜನಿಕ ಆರೋಗ್ಯ ಉಪಕ್ರಮಗಳ ಸದಸ್ಯರೂ ಆಗಿದ್ದಾರೆ. ಮಹಿಳೆಯರ ಜ್ಞಾನ ಸಂಪಾದನೆ, ಸಂಸ್ಕೃತಿ ಸಂಪನ್ನತೆಯನ್ನು ಹೆಚ್ಚಿಸಲು ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ, ಸಾಮಾಜಿಕ ಉನ್ನತಿಗೂ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ಬಿಡುವು ಮಾಡಿಕೊಂಡು ಕಥೆ, ಕಾದಂಬರಿಗಳನ್ನು, ಮಕ್ಕಳ
APA, Harvard, Vancouver, ISO, and other styles
7

ಭೀ., ಜಿ. ನಂದನ. "ಭಾರತ ಸಂವಿಧಾನ ಮತ್ತು ಬಸವಾದಿ ಶರಣರ ಚಿಂತನೆಗಳು". AKSHARASURYA 03, № 06 (2024): 117 to 128. https://doi.org/10.5281/zenodo.11127212.

Full text
Abstract:
ಭಾರತದ ಸಂವಿಧಾನ ಮತ್ತು ಬಸವಾದಿಶರಣರ ಚಿಂತನೆಗಳು ಎಂಬ ಎರಡು ಮಹಾನ್ ಐತಿಹಾಸಿಕ ದಾಖಲೆಗಳು. ಭಾರತದ ಸಂವಿಧಾನವನ್ನು ಮತ್ತು ಶರಣರ ವಚನ ಸಾಹಿತ್ಯವನ್ನು ಆಳವಾಗಿ ಆಧ್ಯಯನಗೈದವರಿಗೆ ವಚನ ಸಾಹಿತ್ಯದ ಪ್ರತಿಧ್ವನಿಯೇ ಭಾರತ ಸಂವಿಧಾನವೆಂಬ ಒಂದು ಸತ್ಯವು ಗೋಚರಿಸುತ್ತದೆ. ವಚನ ಸಾಹಿತ್ಯದ ವ್ಯಾಪ್ತಿಯು ಆಕಾಶದಷ್ಟು ವಿಶಾಲವಾದದ್ದು ಮತ್ತು ಸಾಗರದಷ್ಟು ಆಳವಾದದ್ದು ಹಾಗು ಅದು ವಿಶ್ವಮಾನವ ಕುಲಕೊಟಿಗೆ ಕಾಲಾತೀತವಾಗಿ ಸಂಬಂಧಿಸಿದ್ದಾಗಿದೆ. ಆದರೆ ಭಾರತದ ಸಂವಿಧಾನವು ವಿಶ್ವದ ಎಲ್ಲ ಸಂವಿಧಾನಗಳ ಒಳ್ಳೆ ಅಂಶಗಳನ್ನು ಒಳಗೊಂಡಿದ್ದರೂ ಅದರ ವ್ಯಾಪ್ತಿಯು ಮಾತ್ರ ಭಾರತಕ್ಕಷ್ಟೇ ಸಿಮಿತವಾಗಿದೆ. ಭಾರತದ ಸಂವಿಧಾನವು ಸಂಸತ್ತಿಕ ಪ್ರಜಾಪ್ತಭುತ್ವ ಮತ್ತು ಸಮಾಜಿಕ ಕಲ್ಯಾಣ ರಾಜ್ಯದ ಹಾಗು ಸಾಮಾಜಿಕ ನ್ಯಾಯದ ಕುರಿತಷ್ಟೇ ಚಿಂತಿಸಿದರೆ ವಚನ ಸಾಹಿತ್ಯವು ಆಧ್ಯಾತ್ಮಿಕ ಪ್ರಜಾ
APA, Harvard, Vancouver, ISO, and other styles
8

ಪಂಪಾಪತಿ, ವಿ. "ಸವದತ್ತಿ ಎಲ್ಲಮ್ಮ: ಹೆಣ್ಣು ಮಕ್ಕಳ ಅರ್ಪಣೆಯ ಹಿನ್ನೆಲೆ". International Journal of Advance Research in Multidisciplinary 2, № 1 (2024): 361–65. https://doi.org/10.5281/zenodo.13320387.

Full text
Abstract:
ದೇವಾಲಯಗಳಿಗೆ ಸೇವೆ ಸಲ್ಲಿಸುವ ಆಚರಣೆಯು ಬಹುಹಿಂದಿನಿಂದಲೂ ಬೆಳೆದುಬಂದಿತ್ತು. ಪೆನ್ಸರ್ ಉಲ್ಲೇಖಿಸುವಂತೆ ಗುಜರಾತ್ ಪ್ರಾಂತ್ಯದಲ್ಲಿ 20 ಸಾವಿರ ಹೆಣ್ಣು ಮಕ್ಕಳು ಬೌದ್ಧ ದೇವಾಲಯಗಳಿದ್ದು ಬುದ್ಧ ವಿಗ್ರಹಕ್ಕೆ ನೈವೇದ್ಯ ಹಾಗೂ ಪುಷ್ಪಗಳನ್ನು ಏರಿಸುವ ಹೊತ್ತಿನಲ್ಲಿ ಹಾಡಬೇಕಾಗಿತ್ತು. ಈ ಮಧ್ಯೆ ಇವೆಲ್ಲದರಿಂದ ಬೇರೆಯಾದ ಸಂದರ್ಭ ಒಂದಿದೆ. ಮೊಗಲ್ ಸಾಮ್ರಾಜ್ಯದ ಔರಂಗಜೇಬನಿಗೆ ಕಲಾಶಕ್ತಿ ಇಲ್ಲದ ಕಾರಣ ಒಂದು ಅನುಕೂಲವಾಯಿತು. ಅರಸ ಒಂದು ಸನ್ನದು ಹೊರಡಿಸಿ ಹೆಣ್ಣು ಮಕ್ಕಳು ಹಾಡಿ ನರ್ತಿಸುವುದನ್ನು ನಿಷೇಧಿಸಿದನಲ್ಲದೆ, ಅಂತಹ ಹೆಣ್ಣು ಮಕ್ಕಳಿಗೆ ಮದುವೆಯಾಗಬೇಕೆಂದು ಶಿಕ್ಷೆ ವಿಧಿಸಿದ್ದನಂತೆ! ತಪ್ಪಿದರೆ ಸಾಮ್ರಾಜ್ಯದಿಂದ ಹೊರ ಹೋಗಬೇಕೆಂದು ಸಾರಿದನಂತೆ. ಪೂರ್ವ ಭಾರತದಲ್ಲಿ ಒರಿಸ್ಸಾದ ಜಗನ್ನಾಥ ದೇವಾಲಯದಲ್ಲಿ ಸುಮಾರು 9ನೇ ಶತಮಾನದ ಹೊತ್ತಿಗೆ ದೇವರೆದ
APA, Harvard, Vancouver, ISO, and other styles
9

ಕೆ., ಅನಂತಾಚಾರ್. "ʼಸ್ತ್ರೀ ಅಸ್ಮಿತೆ :ವಿಭಿನ್ನ ನೆಲೆಗಳುʼ ಕೃತಿಯ ಒಳನೋಟ". AKSHARASURYA JOURNAL 06, № 06 (2025): 17 to 25. https://doi.org/10.5281/zenodo.15580909.

Full text
Abstract:
ಹೆಣ್ಣು ಯಾವಾಗಲೂ ಒಂದು ಮೂಲೆಗುಂಪಿನಂತೆ ಎಂಬ ವಾದ ಸದಾ ಹರಡಿ ಹೋಗಿರುವ ಸಂದರ್ಭದಲ್ಲಿ ಚೇತನಾ ಹೆಗಡೆ ಅವರ “ಸ್ತ್ರೀ ಅಸ್ಮಿತೆ : ವಿಭಿನ್ನ ನೆಲೆಗಳು” ಕೃತಿಯು ವಿಭಿನ್ನ ಮಾದರಿಯ ಅಧ್ಯಯನವನ್ನು ನಮ್ಮ ಮುಂದಿಡುತ್ತದೆ. ಈ ಕೃತಿಯು ವ್ಯಕ್ತಿ ಮತ್ತು ವ್ಯಕ್ತಿತ್ವಗಳನ್ನು ಸದಾ ಕಾಲ ಬೇರೆಯಾಗಿ ಕಾಣುವ ವ್ಯತ್ಯಾಸಗಳಿಂದ ಹೊರತಾಗಿದೆ. ಹಾಗೆಂದ ಮಾತ್ರಕ್ಕೆ ಎಲ್ಲಾ ಒಂದೇ ಎಂದು ಭಾವಿಸುವ ಹಾಗಿಲ್ಲ. ಜೈವಿಕ ವ್ಯತ್ಯಾಸಗಳನ್ನು ಅಂಗೀಕರಿಸುತ್ತಲೇ ಹೆಣ್ಣಿನ ಅಸ್ಮಿತೆಯನ್ನು ಗುರುತಿಸುವ ಕೆಲಸವನ್ನು ಲೇಖಕಿ ಮಾಡಿದ್ದಾರೆ. ಹೆಣ್ಣು ಮತ್ತು ಹೆಣ್ತನವನ್ನು ಹೆಣ್ಣು ಅಧ್ಯಯನ ಮಾಡಿದಾಗ ಉಂಟಾಗುವ ತೀಕ್ಷ್ಣ ಬದಲಾವಣೆಗಳು ಮತ್ತು ಪರಿಣಾಮಗಳನ್ನು ಕಟ್ಟಿಕೊಡುವಲ್ಲಿ ಈ ಕೃತಿಯು ಪರಿಣಾಮಕಾರಿಯಾಗಿದೆ ಎನ್ನಲು ಅಡ್ಡಿಯಿಲ್ಲ. ವರ್ಜೀನಿಯಾ ವೂಲ್ಫ್ ಕೇಳುತ್ತಾಳೆ
APA, Harvard, Vancouver, ISO, and other styles
10

ಅಣ್ಣಮ್ಮ. "ಅಡಿಗರ ಕಾವ್ಯದಲ್ಲಿ ಮಹಿಳೆ". AKSHARASURYA 05, № 02 (2024): 35 to 41. https://doi.org/10.5281/zenodo.14034854.

Full text
Abstract:
ನವೋದಯದ ಜಾಡಿನಲ್ಲೇ ಮೊದಲ ಮೂರು ಸಂಕಲನ (ಭಾವತರಂಗ, ಕಟ್ಟುವೆವು ನಾವು, ನಡೆದು ಬಂದ ದಾರಿ) ಬರೆದ ಗೋಪಾಲಕೃಷ್ಣ ಅಡಿಗರು, ಈ ಮೂರು ಸಂಕಲನದಲ್ಲಿ ಮಹಿಳೆಯನ್ನು ಕುರಿತು ಅನೇಕ ಕವಿತೆಗಳನ್ನು ಬರೆಯುತ್ತಾರೆ. ರೊಮ್ಯಾಂಟಿಕ್ ಸಂಪ್ರದಾಯದಲ್ಲಿ ಕಂಡುಬರುವ ಅತಿಭಾವುಕತೆ, ಸೌಂದರ್ಯೋಪಾಸನೆ, ನಿಸ್ಸತ್ವವಾದ ಭಾಷೆ ತ್ಯಜಿಸಿ ವಾಸ್ತವಿಕ ಜೀವನಕ್ಕೆ ಸ್ಪಂದಿಸಿ ಕವಿತೆ ರಚಿಸುವ ಪ್ರಯೋಗಕ್ಕೆ ಕೈ ಹಚ್ಚಿದ್ದು ನಂತರ ಕಂಡು ಬರುತ್ತೆ. 1938ರಿಂದ 1942ರ ವರೆಗೆ ಅನೇಕ ಕವಿತೆಗಳನ್ನು ಬರೆದ ಅಡಿಗರು ‘ಜೀವನಸಖಿ’ ‘ನಗು ನನ್ನ ನಲ್ಲೆ’ ‘ಮುಗುದೆ ಇವಳು’ ‘ನನ್ನವಳೀ ಹೆಣ್ಣು’ ‘ನನ್ನ ಮೋಹದ ಮೂರ್ತಿ’ ‘ಒಡೆದು ಬಿದ್ದ ಕೊಳಲು’ ‘ಹೆಣ್ಣು: 1’ ‘ಹೆಣ್ಣು: 2&rsquo
APA, Harvard, Vancouver, ISO, and other styles
11

ಸಾವಿತ್ರಿ, ಮಠ. "ವಚನ ಚಳುವಳಿ ಮತ್ತು ಮಹಿಳಾ ಸಮಾನತೆ". AKSHARASURYA JOURNAL 06, № 05 (2025): 201 to 206. https://doi.org/10.5281/zenodo.15504642.

Full text
Abstract:
ಹನ್ನೆರಡನೆಯ ಶತಮಾನದಲ್ಲಿ ವಚನಗಳ ಮೂಲಕ ಸಾಮಾಜಿಕ ಚಿಂತನೆ, ವೈಚಾರಿಕತೆ, ಧಾರ್ಮಿಕ ಓರೆಕೋರೆಗಳ ವಿಶ್ಲೇಷಣೆ ಕಾಯಕ ಶ್ರದ್ಧೆಯೊಂದಿಗೆ ಮಹಿಳೆಯರಿಗೆ ಸ್ವಾತಂತ್ರ್ಯ ಸಮಾನತೆ ನೀಡಿ ಅವರಲ್ಲಿ ವಿಶ್ವಾಸವನ್ನು ಮೂಡಿಸಿದವರು ಶಿವಶರಣರು. ತಮ್ಮ ವಚನಗಳಲ್ಲಿ ಲಿಂಗಾತೀತ ನೆಲೆಯನ್ನು ಪುರಸ್ಕರಿಸಿ, ಲಿಂಗತಾರತಮ್ಯದ ಸಮಾಜದಲ್ಲಿ ವಿಚಾರ, ವಿಮರ್ಶೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು ವಚನ ಚಳುವಳಿ. ಹೆಣ್ಣನ್ನು ʻಮಾಯೆʼ ಎಂದು ಹೀಗಳೆಯುತ್ತಿದ್ದ ಪುರುಷ ಪ್ರಧಾನ ಮನೋಧೋರಣೆಗೆ ತಡೆಹಾಕಿ ಹೆಣ್ಣನ್ನು ಹತ್ತಿಕ್ಕುವ ಸಮಾಜದ ಕೌರ್ಯವನ್ನು ಖಂಡಿಸಿ ಸ್ತ್ರೀಸಂವೇದನೆಗೆ ಹೊಸ ಆಯಾಮವನ್ನು ತಂದುಕೊಟ್ಟವರು ವಚನಕಾರರು. ಇದರಿಂದ ಸಮಾಜದಲ್ಲಿ ಮಹಿಳೆಯರಿಗೆ ಸಾಕಷ್ಟು ಅವಕಾಶಗಳು ದೊರೆತು ಅನುಭವ ಮಂಟಪದಲ್ಲಿ ಪುರುಷರ ಸಮಾನವಾಗಿ ಚರ್ಚೆ ಮಾಡಿ ಸಮಾಜಕ್ಕೆ ಮಹಿಳೆಯರ ಕೊಡುಗೆ ಏನೆಂಬು
APA, Harvard, Vancouver, ISO, and other styles
12

ಸೀತಾ, ಹೆಚ್. ಎನ್. "ಕ್ರೀಡಾ ಮಹಿಳೆ : ಸಮಸ್ಯೆ ಮತ್ತು ಸವಾಲುಗಳು". AKSHARASURYA 03, № 06 (2024): 129 to 136. https://doi.org/10.5281/zenodo.11127245.

Full text
Abstract:
 ‘ಆಗದಾಗದು ಏನು ನನ್ನಿಂದ’ ಎನ್ನುವ ಬದಲು ಏನಾದಿತೋ ನೋಡೋಣ ಸಾಧ್ಯವಾದಷ್ಟು ಪ್ರಯತ್ನಿಸೋಣ ಎನ್ನುವ ನಿರ್ಧಾರ ಬದುಕಿನ ಹೊಲದಲ್ಲಿ ಬಂಗಾರದ ಬೀಜ ನೆಡುತ್ತದೆ. ಸಾಧಕನ ಹಾದಿಯಲ್ಲಿ ಇದೊಂದು ಮಹತ್ತರ ಹೆಜ್ಜೆ. ಯಾರೇ ಆಗಲಿ ಒಂದು ಹೆಜ್ಜೆ ಮುಂದಿಡದಿದ್ದರೆ ಪಯಣವಾದರೂ ಸಾಗುವುದೆಂತು? ಪಯಣ ಪ್ರಾರಂಭವಾಗುವುದೇ ಮುಂದೆ ಹೋಗಬೇಕೆಂಬ ಮನೋಬಲದ ಕ್ರಿಯೆಯಿಂದ, ಆಚರಣೆಯಿಂದ. ಹೀಗಿಲ್ಲದ ಮನುಜರ ಅದೆಷ್ಟೋ ಚಿಂತನೆಗಳು ಎಂದು ರೆಕ್ಕೆ ಹೊತ್ತಿ ಹಾರುವುದೇ ಇಲ್ಲ. ಮುಂದೆ ಕಾರಣವೆಂದರೆ ನನಸಾಗುವ ಸಾಮರ್ಥ್ಯ ಸಿದ್ಧಿಸಬೇಕಾದರೆ ಅನುಷ್ಠಾನದಲ್ಲಿ ಅಚಲ ನಂಬಿಕೆ ಇರಬೇಕು. ಸಾಧಿಸುವ ಅದಮ್ಯ ಉತ್ಸಾಹ ಪುಟಿಯುತ್ತಿರಬೇಕು. ಇಂಥ ಅದಮ್ಯ ಉತ್ಸಾಹವನ್ನಿರಿಸಿಕೊಂಡು ಕ್ರೀಡಾರಂಗದಲ್ಲಿ ಸಾಧನೆ ಮಾಡುತ್ತಿರುವ ಶರ್ಮಿಳಾನಿಕೋಲೇಟ್. ದೀಪಿಕಾಪಲ್ಲಿಕಲ್ ಸೈನಾನೆಹ್ವಾಲ
APA, Harvard, Vancouver, ISO, and other styles
13

ಶೀಲಾದೇವಿ, ಎಸ್. ಬಿರಾದಾರ. "ವೀರಾಂಗಿಣಿ ಅಕ್ಕಮಹಾದೇವಿ". AKSHARASURYA JOURNAL 04, № 06 (2024): 152 to 156. https://doi.org/10.5281/zenodo.13725661.

Full text
Abstract:
ಹಳೆಗನ್ನಡ ಸಾಹಿತ್ಯವು ರಾಜ್ಯಾಶ್ರಯದಲ್ಲಿಯೇ ಪಂಡಿತ ಪಾಮರರಿಗೆ ಮಾತ್ರ ಸಿಮಿತವಾಗಿತ್ತು. ಹನ್ನೆರಡನೆ ಶತಮಾನದಲ್ಲಿ ವಚನ ಸಾಹಿತ್ಯಯೂ ತೀರಾ ಸರಳ ಸಹಜವಾಗಿ ತಾವು ಬೋದಿಸುವುದು ಸಾಮಾನ್ಯನಿಗೂ ತಲುಪಬೇಕು ಎಂಬ ಆಶಯ ಹೊಂದಿದವರು. ಶಿವಶರಣರು ಶಿವಶರಣೆಯರ ಆಲೋಚನೆಗಳನ್ನು ಅನುಭವಗಳನ್ನು ವಿಚಾರಧಾರೆಗಳೆ ವಚನ. ಜನಸಾಮಾನ್ಯರ ಭಾಷೆಯಲ್ಲಿಯೆ ತಮ್ಮ ಭಾವನೆಗಳನ್ನು ಅನಿಸಿಕೆಗಳನ್ನು ತತ್ವಗಳನ್ನು ಹಾಗೂ ಅವರ ಆತ್ಮಾನುಭವಗಳೇ ವಚನರೂಪದಲ್ಲಿ ವ್ಯಕ್ತಪಡಿಸಿದ್ದು ವಚನ ಸಾಹಿತ್ಯ. ವಚನ ಸಾಹಿತ್ಯ ವಿಶ್ವಕ್ಕೆ ಕೊಡುಗೆಯಾಗಿ ನೀಡಿರುವುದು ಕನ್ನಡ ಸಾಹಿತ್ಯದ ಹೆಮ್ಮೆಯಾಗಿದೆ. ವಚನ ಸಾಹಿತ್ಯದಲ್ಲಿ ಕಾಣಿಸುವ ವಿಶಿಷ್ಟ ಪ್ರತಿಭೆಯ ಮಹಿಳೆ ಅಕ್ಕಮಹಾದೇವಿ. ಕನ್ನಡ ಸಾಹಿತ್ಯದ ಮೊದಲ ಕವಿಯತ್ರಿ ಮತ್ತು ವಚನಗಾರ್ತಿ, 12 ನೆಯ ಶತಮಾನದ ಪ್ರಪ್ರಥಮವಾಗಿ ಪುರುಷರಿಗೆ ಸಮಾನವಾಗಿ ನಿಂ
APA, Harvard, Vancouver, ISO, and other styles
14

ಸೋಮಶೇಖರ್, ಎಲ್. ಆರ್. "ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಾಹಿತ್ಯದ ಬೆಳವಣಿಗೆ". Aksharasurya Journal 05, № 05 (2025): 128 to 131. https://doi.org/10.5281/zenodo.14619667.

Full text
Abstract:
ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ಕೂಡಗೆ ಅಪಾರವಾದದ್ದು ಜನಪದ ಸಾಹಿತ್ಯದ ಕಾಲದಿಂದಲ್ಲೂ ಮಹಿಳೆಯರು ತಮ್ಮ ಅನುಭವಗಳನ್ನು ತಮ್ಮ ಆತಂಕವನನ್ನು, ತಮ್ಮ ನೋವು ನಲಿವುಗಳನ್ನು ಮೌಖಿಕವಾಗಿ ವ್ಯಕ್ತಪಪಡಿಸುತ್ತಾ ಬಂದಿದ್ದಾರೆ . ಪ್ರಾಚೀನ ಕಾಲದಿಂದಲ್ಲೂ ಮಹಿಳೆಯರು ತಮ್ಮ ಮನನಸ್ಸಿನ ಭಾವನೆಗಳನ್ನು ಅಭಿವ್ಯಕ್ತಿ ಪಡಿಸಲು ಆಯ್ಕೆಮಾಡಿಕೊಂಡ ಮಾರ್ಗವೆ ಬರವಣಿಗೆ, ಈ ಬರವಣಿಗೆಯ ಮೂಲಕ ಮಹಿಳಾಲೋಕದ ಬದುಕಿನ ಚಿತ್ರಣವನ್ನು ಜನರ ಮುಂದಿಡಲು ಬರೆಯಲು ಪ್ರಾರಂಬಿಸುತ್ತಾರೆ ಸಾಹಿತ್ಯದಲ್ಲಿ ಹೆಣ್ಣು ಹೇಗೆ ಬರವಣಿಗೆಯನ್ನು ಪ್ರಾರಂಬಿಸಿ ಮುನ್ನೆಲೆಗೆ ಬಂದಿದ್ದಾರೆ ಅವರ ಪ್ರತಿಭಾಶಕ್ತಿ ಅವರ ಕ್ರೀಯಾಶೀಲತೆ ಬರವಣಿಗೆಯಲ್ಲಿ ವ್ಯಕ್ತವಾಗಿರುವುದನ್ನು ಈ ಲೇಖನದಲ್ಲಿ ಕಾಣಬಹುದಾಗಿದೆ. 
APA, Harvard, Vancouver, ISO, and other styles
15

ಶ್ರೀಧರ್, ಆರ್. "ಕಾರ್ಮಿಕರ ಹಿತರಕ್ಷಕ ಡಾ. ಬಾಬಾಸಾಹೇಬ್ ಅಂಬೇಡ್ಕರ್‌". AKSHARASURYA JOURNAL 06, № 05 (2025): 220 to 225. https://doi.org/10.5281/zenodo.15504669.

Full text
Abstract:
ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ಹಾಗೂ ರಾಜಕೀಯ ಕೊಡುಗೆ ಅಪಾರ. ಬಹುಜನರ ಬವಣೆಯ ಬದುಕಿನೊಳಗೆ ಇಳಿದು ಲವಣದಂತೆ ಕರಗಿರುವ ಬಾಬಾಸಾಹೇಬರು ಅಪ್ಪಟ ಪ್ರಜಾಪ್ರಭುತ್ವವಾದಿ. ರೈತರು, ಕಾರ್ಮಿಕರು, ಹೆಣ್ಣು ಮಕ್ಕಳ ಉನ್ನತಿಗೆ ಹಾಗೂ ಸಕಲ ಜೀವಿಗಳ ಘನತೆಗೆ ಅಗತ್ಯವಾದ ಮಾರ್ಗಗಳನ್ನು ಶೋಧಿಸಿದ ಶ್ರೇಷ್ಠ ವಿಮೋಚಕ. ಭಾರತದಲ್ಲಿ ಕಾರ್ಮಿಕರಿಗೆ ಯಾವುದೇ ಹಕ್ಕುಗಳು ದೊರೆತಿದ್ದರೆ, ಕಾರ್ಮಿಕರು ಅದರ ಫಲಾನುಭವಿಗಳು ಆಗಿದ್ದರೆ ಅದರ ಸಂಪೂರ್ಣ‌ ಯಶಸ್ಸು ಬಾಬಾಸಾಹೇಬರಿಗೆ ಸಲ್ಲಬೇಕು. ಪ್ರಸ್ತುತ ಲೇಖನದಲ್ಲಿ ಜನಪರವಾದ ಅಭಿವೃದ್ಧಿ ಯೋಜನೆಗಳು ಮತ್ತು ಕಾರ್ಮಿಕರ ಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸಿದ ಬಾಬಾಸಾಹೇಬರ ಪಾತ್ರವನ್ನು ಅಭಿವ್ಯಕ್ತಿಸುವ ಪ್ರಯತ್ನ ಮಾಡಲಾಗಿದೆ.
APA, Harvard, Vancouver, ISO, and other styles
16

ಮುನಿರಾಜ, ಎ. "ಪ್ಯಾಸೆಂಜರ್ ಗಾಡಿ". AKSHARASURYA 03, № 06 (2024): 68 to 73. https://doi.org/10.5281/zenodo.11127063.

Full text
Abstract:
ಮನುಷ್ಯನ ಸ್ವಭಾವವು ಏಕಾಂತದಲ್ಲಿದ್ದಾಗಲೂ, ಸಭೆಯಲ್ಲಿದ್ದಾಗಲೂ ಬಹು ವ್ಯತ್ಯಾಸವಾಗಿಯೇ ವರ್ತಿಸುತ್ತದೆ. ಏಕೆಂದರೆ ಅದಕ್ಕೆ ಒಳಗೆ ಒಂದು ಭಯ ಕಾಡುತ್ತಿರುತ್ತದೆ. ಅದೆಂದರೆ ವ್ಯಕ್ತಿ ತಾನು ವಾಸಿಸುತ್ತಿರುವ ಪರಿಸರದ ಸಾಮಾಜಿಕ ಕಟ್ಟಳೆಗಳು. ತನಗೆ ಇಷ್ಟವಿರಲಿ ಇಲ್ಲದಿರಲಿ ಅವುಗಳನ್ನು ಪಾಲಿಸಲೇಬೇಕು. ಇದು ಬಹುವಾಗಿ ಇತರ ಜನರೆದುರು ಪಾಲಿಸಿದಂತೆ ನಟಿಸಿದರೂ ಏಕಾಂತದಲ್ಲಿ, ಅಂತರಂಗದಲ್ಲಿ ಅದಕ್ಕೆ ಹಲವು ಸಲ ನೆಲೆಯೇ ಇರುವುದಿಲ್ಲ. ಇಂತಹ ಅನೇಕ ಅಮೂರ್ತ ಕಲ್ಪನೆಗಳಲ್ಲಿ ಒಂದು ಜಾತಿ. ಇದು ಎಷ್ಟೋ ಸಮಾಜಗಳನ್ನು ತನ್ನ ಬಡಬಾನಲದ ಒಡಲಿಗೆ ಆಹಾರವಾಗಿಸಿದೆ; ಇಂದಿಗೂ ಆಗಿಸುತ್ತಿದೆ ಕೂಡ. ಅಂತೆಯೇ ಲಿಂಗಭೇದ. ಗಂಡು-ಹೆಣ್ಣಿನ ನಡುವಿನ ಶಾರೀರಿಕ ಕ್ಷಮತೆಯ ಗುಣಾವಗುಣಗಳನ್ನು ನಿಷ್ಕರ್ಷಿಸಿ ಒಡಂಬಡದ ಜನರು ಇವರಿಬ್ಬರ ಸಮಾನತೆಯ ದೀಪಕ್ಕೆ ಎಣ್ಣೆಯನ್ನೇ ಹಾಕರು. ಅದು
APA, Harvard, Vancouver, ISO, and other styles
17

ಗುಂಡಣ್ಣ, ಪಿ. "ಬೌದ್ಧ ಬಿಕ್ಕು ಮತ್ತು ದೇವರಗುಡ್ಡರ ದೀಕ್ಷೆಯ ವಿಧಾನಗಳ ಅವಲೋಕನ". AKSHARASURYA JOURNAL 06, № 03 (2025): 68 to 78. https://doi.org/10.5281/zenodo.15344335.

Full text
Abstract:
ಯಾವುದೇ ಒಂದು ಮತ, ಧರ್ಮದ ಅಸ್ತಿತ್ವ ಉಳಿದಿರುವುದು ಅದನ್ನು ಅನುಸರಿಸುವ ಪರಂಪರೆಯಿಂದ ಪರಂಪರೆಗೆ ಸಾಗಿಸುವ ಅನುಯಾಯಿಗಳ ಮೇಲೆ. ಇವರ ಬಗ್ಗೆ ತಿಳಿದುಕೊಳ್ಳದೆ ಮತ, ಧರ್ಮಗಳ ಸತ್ವವನ್ನು ಗ್ರಹಿಸಲಾಗುವುದಿಲ್ಲ. ಮೌಖಿಕ ಪರಂಪರೆಯಲ್ಲಿ ಸಾಗಿ ಬಂದಿರುವ ಕಥನ, ಕಾವ್ಯ, ಲಾವಣಿ ಮೊದಲಾದವುಗಳು ಕಾಲಾನಂತರದಲ್ಲಿ ಭಿನ್ನ ಪ್ರದೇಶ, ಸಂದರ್ಭಗಳಲ್ಲಿ ಮಾರ್ಪಾಟುಗೊಂಡು ಮೂಲದಲ್ಲಿ ಇಲ್ಲದ ವಿಷಯಾಂಶಗಳನ್ನು, ಘಟನೆಗಳನ್ನು ಸೇರಿಸಿ ರೂಪುಗೊಂಡಿರುವ ಸಾಧ್ಯತೆ ದಟ್ಟವಾಗಿದೆ. ಆದರೆ ನಿಯಮ, ಆಚರಣೆಗಳು ಎಷ್ಟೇ ತಲೆಮಾರುಗಳು ದಾಟಿ ಬಂದರು ಹೆಚ್ಚು ಬದಲಾವಣೆಗೊಳಿಸದೆ ಅನುಸರಿಸಲಾಗಿರುತ್ತದೆ. ಮಂಟೇಸ್ವಾಮಿ, ಸಿದ್ದಪ್ಪಾಜಿ ಜಾತ್ರೆಗಳಲ್ಲಿ ಮಾಂಸಹಾರ, ಭಂಗಿ ಸೇವನೆಯ ಪದ್ದತಿ ಇದೆ. ಮಲೆಯ ಮಾದಯ್ಯನ ನೆಲೆಯಲ್ಲಿ ಹೆಣ್ಣು ಗಂಡಿನ ಸಂಬಂಧಕ್ಕಾಗಲಿ, ಮಾಂಸ-ಮದ್ಯಗಳ ಸೇವನೆಗಾಗಲಿ ಅವ
APA, Harvard, Vancouver, ISO, and other styles
18

ತಾರಾಮಣಿ, ಆರ್. "ಗಿರೀಶ್ ಕಾರ್ನಾಡರ ನಾಗಮಂಡಲ ನಾಟಕ: ಸಂಕೇತಗಳ ಪರಾಮರ್ಶೆ". AKSHARASURYA 04, № 02 (2024): 113 to 124. https://doi.org/10.5281/zenodo.11525902.

Full text
Abstract:
ಪ್ರಮುಖ ಚಿಂತಕರಲ್ಲಿ ಒಬ್ಬರಾದ ಎ ಕೆ ರಾಮಾನುಜನ್‌ ಅವರು ಹೇಳಿದ ಜನಪದ ಕಥೆಯನ್ನು ಆಧರಿಸಿ ನಾಟಕ ಕ್ಷೇತ್ರದ ಧೀಮಂತ ಪ್ರತಿಭೆಗಳಾದ ಗಿರೀಶ್‌ ಕಾರ್ನಾಡರು ನಾಗಮಂಡಲ ನಾಟಕವನ್ನೂ, ಕಂಬಾರರು ಸಿರಿಸಂಪಿಗೆ ನಾಟಕವನ್ನೂ ರಚಿಸಿದ್ದಾರೆ. ಎರಡು ನಾಟಕಗಳ ವಸ್ತು ಒಂದೇ ಆದರೂ ನಿರೂಪಣಾ ಶೈಲಿ, ನಾಟಕದ ತಂತ್ರಗಾರಿಕೆ ಹಾಗೂ ಧೋರಣೆಗಳು ಭಿನ್ನವಾಗಿವೆ. ನಾಟಕಗಳು ಮೇಲ್ನೋಟಕ್ಕೆ ಸರಳವಾದ ವಸ್ತುವನ್ನು ಒಳಗೊಂಡಂತೆ ಕಂಡರೂ ಓದುಗರಿಗೆ ಒಂದು ಸುಂದರವಾದ, ಅದ್ಭುತವಾದ ಸತ್ಯದ ಅನಾವರಣ ಮಾಡಿಸುತ್ತದೆ. ನಾಗಮಂಡಲ ನಾಟಕವು ಸಾಂಸ್ಕೃತಿಕ, ಧಾರ್ಮಿಕ, ಮಾನಸಿಕ ಮತ್ತು ಸಾಮಾಜಿಕ ಜೀವನವನ್ನು ಸಂಕೇತಗಳ ಬಳಕೆಯ ಮೂಲಕ ಪ್ರತಿಬಿಂಬಿಸುತ್ತದೆ. ನಾಟಕವು ಪಿತೃಪ್ರಧಾನ ವ್ಯವಸ್ಥೆಯಲ್ಲಿನ ಪುರುಷನ ನ್ಯೂನ್ಯತೆಗಳನ್ನು, ವರ್ತನೆಯ ರೀತಿಯನ್ನು ಹಾಗೂ ಪುರಾತನ ಸಾಂಪ್ರದಾಯಿಕ
APA, Harvard, Vancouver, ISO, and other styles
19

ಸಂದೇಶ್, ಎ. ಎಸ್. "'ಅವಳ ಪಥ' ಒಂದು ನೋಟ". AKSHARASURYA 03, № 05 (2024): 75–87. https://doi.org/10.5281/zenodo.10938082.

Full text
Abstract:
ಜನಪದ ಸಾಹಿತ್ಯದಿಂದ ಇಂದಿನವರೆಗಿನ ಮಹಿಳಾ ಪಯಣವನ್ನು ಈ ಲೇಖನ ದಾಖಲಿಸುತ್ತದೆ. ಮಾತೃಪ್ರಧಾನ ಸಂಸ್ಕೃತಿಯಿಂದ, ಪಿತೃಪ್ರಧಾನ ಸಂಸ್ಕೃತಿಯವರೆಗಿನ ಚಲನೆಯನ್ನು ಸಾಮಾಜಿಕ, ಆರ್ಥಿಕ, ಕೌಟುಂಬಿಕ, ಧಾರ್ಮಿಕ ನೆಲೆಯ ಹಿನ್ನೆಲೆಯಲ್ಲಿ ಶೋಧಿಸಿದೆ. ಪ್ರಸ್ತುತ ಕೃತಿಯು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಸ್ತ್ರೀ ಪರ ಆಲೋಚನಾ ಕ್ರಮಗಳ ವಿಕಾಸವನ್ನು ಗುರುತಿಸುತ್ತದೆ. ಜನಪದ ಸಾಹಿತ್ಯ ಹಾಗೂ ಹಳಗನ್ನಡ ಕಾವ್ಯಗಳಿಂದ ಹಿಡಿದು ಮಹಿಳೆಯರ ಪ್ರಸ್ತುತ ಸಾಹಿತ್ಯಾಭಿವ್ಯಕ್ತಿಯನ್ನು ರೂಪಿಸುತ್ತಿರುವ ಬೌದ್ಧಿಕ ದ್ರವ್ಯ ಯಾವುದೆಂಬುದು ಇಲ್ಲಿ ಶೋಧಿತವಾಗಿದೆ. ವಚನಕಾರ್ತಿಯರ ದೇಸಿ ಮಾದರಿಯಿಂದ ತೊಡಗಿ, ಈ ಕಾಲದ ಪ್ರಮುಖ ತಾತ್ವಿಕತೆಯಾದ ಸ್ತ್ರೀವಾದಿ ಸಿದ್ಧಾಂತಗಳವರೆಗೆ ಇಲ್ಲಿನ ಚರ್ಚೆಯ ಹರಹಿದೆ. ನವೋದಯ ಸಾಹಿತ್ಯದ ಸಾಮಾಜಿಕ ಅರಿವು, ಪ್ರಗತಿಶೀಲ ಸಾಹಿತ್ಯದ ವೈಚಾರಿಕ ನಿಲುವ
APA, Harvard, Vancouver, ISO, and other styles
20

ರಶ್ಮಿ, ಪಿ. "ಗೊರೂರರ 'ವೈಯ್ಯಾರಿ' ಕಥಾಸಂಕಲನದಲ್ಲಿನ ಮಹಿಳಾ ಪಾತ್ರಗಳು". AKSHARASURYA JOURNAL 05, № 03 Special Issue (2024): 76 to 83. https://doi.org/10.5281/zenodo.14246574.

Full text
Abstract:
ಆಧುನಿಕ ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದಲ್ಲಿ ಕಥಾಪ್ರಕಾರದಲ್ಲಿ ಸಾಧನೆ ಮಾಡಿದ ಹಿರಿಯ ಕಥೆಗಾರರ ಪೈಕಿ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ರವರು ಒಬ್ಬರು. ಇವರ 140ಕ್ಕೂ ಹೆಚ್ಚಿನ ಕಥೆಗಳು ಆರು ಕಥಾ ಸಂಕಲನಗಳಲ್ಲಿ ಹರಡಿಕೊಂಡಿವೆ. ಇವರ ‘ವೈಯ್ಯಾರಿ’ ಕಥಾ ಸಂಕಲನದಲ್ಲಿನ ‘ಭೂತಯ್ಯನ ಮಗ ಅಯ್ಯು’, ‘ಗಂಡುಬೀರಿ ಹೊಸಬಿ’, ‘ಪುಟ್ಟ ಮಲ್ಲಿಗೆ’, ‘ಈಡಿಗರ ಹೆಣ್ಣು’, ‘ಲಕ್ಕಿಯ ಗಂಡಂದಿರು’ ಎಂಬ ಕಥೆಗಳ ವ್ಯಾಪ್ತಿಯಲ್ಲಿ ಬರುವ ಮಹಿಳಾ ಪಾತ್ರಗಳನ್ನು ವಿವೇಚನೆ ಮಾಡುವುದು ಪ್ರಸ್ತುತ ಲೇಖನದ ಉದ್ದೇಶ. ಕೌಟುಂಬಿಕ ಜೀವನದಲ್ಲಿ ತಾಯಿಯಾಗಿ, ಸೊಸೆಯಾಗಿ, ಮಗಳಾಗಿ ಎಲ್ಲಾ ಅವಸ್ಥೆಗಳಲ್ಲಿ ತನ್ನ ಅಸ್ಮಿತೆಯ ಮುದ್ರೆಯನ್ನು ಒತ್ತುವ ಮಹಿಳೆ ಸಮಾಜದಲ್ಲಿ ತನ್ನ ಸ್ವಾತಂತ್ರ್
APA, Harvard, Vancouver, ISO, and other styles
21

ಪ್ರಕಾಶ. "ವಚನಕಾರ್ತಿಯರಲ್ಲಿ ಬಂಡಾಯದ ನೆಲೆಗಳು". AKSHARASURYA JOURNAL 06, № 04 (2025): 56 to 63. https://doi.org/10.5281/zenodo.15490899.

Full text
Abstract:
೧೨ನೇ ಶತಮಾನದ ವಚನಚಳವಳಿಯೇ ಚಾರಿತ್ರಿಕವಾಗಿ ಬಹುದೊಡ್ಡ ಪ್ರಮಾಣದ ಬಂಡಾಯಕ್ಕೆ ನೂತನ ಅಯಾಸವನ್ನು ನೀಡಿತು. ಸುಮಾರು ಮೂವತ್ತೆರಡು ಜನ ಶರಣೆಯರು ವಚನಗಳನ್ನು ರಚಿಸಿ ಶ್ರೇಷ್ಠ ಚಿಂತಕಿಯರಾದರು ಅವರು ಸಮಾಜದ ಡಾಂಭಿಕತೆಯ ವಿರುದ್ಧ ಪ್ರತಿಭಿಟಿಸಿದ ರೀತಿ ಅಗಮ್ಯವಾದುದು. ಲಿಂಗಭೇದ ನಿರಾಕರಣೆ, ಮನೋಪ್ರವೃತ್ತಿಗಳ ವಿರುದ್ಧ ಪ್ರತಿಭಟನೆ ಮಾಡಿರುವುದು ಅವರ ಜ್ಞಾನ, ಆತ್ಮಸ್ಥೈರ್ಯ ಹಾಗೂ ಅವರ ಒಳಗಿನ ಬಂಡಾಯ ಗುಣಕ್ಕೆ ಸಾಕ್ಷಿಯಾಗಿದೆ.ಪುರುಷ ಪ್ರಧಾನ ಸಮಾಜವು ತನ್ನ ಹಿತಾಶಕ್ತಿಯನ್ನು ಕಾಯ್ದುಕೊಂಡು ಮಹಿಳೆಯನ್ನು ಕತ್ತಲೆಯ ಕೂಪಕ್ಕೆ ತಳ್ಳಿತ್ತು ೧೨ನೇಯ ಶತಮಾನದ ಬಸವಾದಿ ಶರಣರು ಮಹಿಳೆಯರ ಬದುಕಿನಲ್ಲಿದ್ದ ಕತ್ತಲೆಯನ್ನು ಸರಿಸಿ ಬೆಳಕಿನ ಮಾರ್ಗವನ್ನು ದರ್ಶಿಸಿದರು ಮನುಷ್ಯನ ಸಣ್ಣತನವನ್ನು ಶಮನಗೊಳಿಸಿ ಸಮಾನತೆಯ ತಳಹದಿಯ ಮೇಲೆ ಮಾನವೀಯವಾದ ಸಮಸಂಸ್ಕೃತಿಯ ಸಮಾಜ
APA, Harvard, Vancouver, ISO, and other styles
22

ಮೀನಾಕುಮಾರಿ, ಎಂ. "ಟಿ. ವಿ ಮಾಧ್ಯಮದಲ್ಲಿ ಮಹಿಳೆಯರ ಸ್ಥಾನಮಾನ". AKSHARASURYA 04, № 02 (2024): 137 to 144. https://doi.org/10.5281/zenodo.11525979.

Full text
Abstract:
ಟಿ. ವಿ ಮಾಧ್ಯಮದಲ್ಲಿ ಮಹಿಳೆಯ ಸ್ಥಾನಮಾನಗಳ ಕುರಿತು ಅನೇಕ ಚರ್ಚೆಗಳು ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಜನಸಾಮಾನ್ಯರ ಮೇಲೆ ಅತಿ ಹೆಚ್ಚು ಪ್ರಭಾವವನ್ನು ಬೀರುತ್ತಿವೆ. ಸುದ್ದಿಯಾಗಲಿ, ಮನರಂಜನೆಯಾಗಲಿ ಇನ್ನೂ ಮತ್ತಿತರ ವಿಷಯಗಳಾಗಲಿ ದಿನದಿಂದ ದಿನಕ್ಕೆ ಭಿನ್ನತೆಯನ್ನು ಪಡೆದುಕೊಳ್ಳುತ್ತಿವೆ. ಈ ಬೆಳವಣಿಗೆಯಲ್ಲಿ ಮಹಿಳೆಯ ಪಾತ್ರಗಳೂ ಸಹ ಬದಲಾಗುತ್ತಿವೆ. ಮಾಧ್ಯಮಗಳು ಮಹಿಳೆಯನ್ನು ಹೆಚ್ಚು ಹೆಚ್ಚು ಕಡೆ ಪ್ರಬಲೆಯಾಗಿ, ಧೈರ್ಯದ ಮೂರ್ತಿಯಾಗಿ, ಸಧೃಡೆಯಾಗಿ ತೋರಿಸುವ ಪ್ರಯತ್ನಗಳು ನಡೆಯುತ್ತಿವೆ. ಹಾಗೆಯೇ ಅದಕ್ಕೆ ವೈರುಧ್ಯವೆಂಬಂತೆ ಖಳನಾಯಕಿಯಾಗಿ, ಧೂರ್ತೆಯಾಗಿ, ಅಬಲೆಯಾಗಿ ಬಿಂಬಿಸುತ್ತಲೂ ಇವೆ. ಉದ್ಯೋಗಸ್ಥ, ವಿಚಾರವಂತ ಮಹಿಳೆಯರನ್ನು ಗಮನದಲ್ಲಿರಿಸಿಕೊಂಡು ಮಾಧ್ಯಮಗಳು ತಮ್ಮ ಕಾರ್ಯಕ್ರಮಗಳನ್ನು ರೂಪಿಸುವುದು ತೀರಾ ಕಡಿಮೆ. ಹಾಗೆ
APA, Harvard, Vancouver, ISO, and other styles
23

ಚಂದ್ರಶೇಖರ್, ಎನ್. "ಬೆಸಗರಹಳ್ಳಿ ರಾಮಣ್ಣ ಅವರ 'ಬೇಲ' ಕಥೆಯಲ್ಲಿನ ಬಹುತ್ವದ ಬೆರಗು". AKSHARASURYA JOURNAL 04, № 06 (2024): 35 to 44. https://doi.org/10.5281/zenodo.13724477.

Full text
Abstract:
ಕನ್ನಡ ಕಥಾ ಜಗತ್ತಿನಲ್ಲಿ ಬೆಸಗರಹಳ್ಳಿ ರಾಮಣ್ಣನವರು ಮೂಡಿಸಿದ ಛಾಪು ಓದುಗ ಲೋಕಕ್ಕೆ ಇಂದಿಗೂ ಆಪ್ತವಾಗಿಯೇ ಇದೆ. ತಮ್ಮ ವೃತ್ತಿ ಹಾಗೂ ಪ್ರವೃತ್ತಿಗಳಲ್ಲಿ ಸಾಮರಸ್ಯವನ್ನು ಕಾಯ್ದುಕೊಂಡು ಅವರು ಮಾಡಿದ ಸಾಹಿತ್ಯ ಕೃಷಿ ವಿಶೇಷವಾದದ್ದು. ತಮ್ಮ ಬರಹಗಳಲ್ಲಿ ಮೂಡಿ ಬಂದಿರುವ ನಿರಾಡಂಬರ ಹಾಗೂ ಸಹಜತೆ ತಮ್ಮ ಬರಹದ ಶಕ್ತಿಯನ್ನು ಹೆಚ್ಚಿಸಿದೆ. ಒಬ್ಬ ಓದುಗನಿಗೆ ಕತೆಗಾರ, ಕಾದಂಬರಿಕಾರ ಕೊಡಮಾಡುವ ಭಾವನಾತ್ಮಕ ಸಾಂತ್ವನ ಇವರ ರಚನೆಗಳಲ್ಲಿ ಅಗಾಧವಾದ ಇಳುವರಿಯನ್ನು ನೀಡಿದೆಯೆಂದರೆ ತಪ್ಪಾಗಲಾರದು. ಇವರು ಸಮಾಜವನ್ನು ಕಂಡ, ಕಟ್ಟಿಕೊಟ್ಟ ನೋಟಕ್ರಮವೇ ಭಿನ್ನವಾದದ್ದು. ಸಾಮಾಜಿಕವಾದ ಹಾವು ಏಣಿಯಾಟದಲ್ಲಿ ಜಮೀನ್ದಾರಿ ಪದ್ದತಿ ಹಾಗೂ ವೇಶ್ಯಾವೃತ್ತಿಯ ಕರಾಳ ಮುಖವನ್ನು ‘ಬೇಲ’ ಕತೆಯಲ್ಲಿ ಅನಾವರಣಗೊಳಿಸಿದ್ದಾರೆ. ವೃತ್ತಿಯಲ್ಲಿ ನರ್ತಕಿಯಾದ ಸ್ಪುರದ್
APA, Harvard, Vancouver, ISO, and other styles
24

ಶುಭಾ, ಮರವಂತೆ. "ಮಹಿಳಾ ಯಕ್ಷಗಾನದ ಸವಾಲುಗಳು ಮತ್ತು ಸಾಧ್ಯತೆ". Aksharasurya Journal 05, № 05 (2025): 48 to 54. https://doi.org/10.5281/zenodo.14619490.

Full text
Abstract:
ಮಹಿಳೆಯರಿಗೆ ಹೊಂದುವ ಕಥಾ ಸಂವಿಧಾನ, ನವೀನ ತಂತ್ರ ಪರಿಕರಗಳನ್ನು ನಾವೇ ಕಂಡುಕೊಳ್ಳುದರ ಮೂಲಕ ಯಕ್ಷರಂಗದಲ್ಲೊಂದು ಮಹಿಳಾ ಲೋಕವನ್ನು ಸೃಷ್ಟಿಸುವ ಸವಾಲು ನಮ್ಮ ಮುಂದಿದೆ. ನಮ್ಮ ನಡೆಯಲ್ಲಿ ಅನನ್ಯತೆಯ ದಾರಿ ಗುರುತುಗಳು ಬೇಕಾಗಿವೆ. ಪ್ರಯೋಗಶೀಲ ಮನಸ್ಸು ಬೆಳೆದರೆ ಯಕ್ಷಗಾನದ ಏಕತಾನತೆಯನ್ನು ಮಹಿಳೆಯರು ಮುರಿದು ಮರು ಕಟ್ಟಲು ಸಾಧ್ಯವಿದೆ. ಮೊದಲು ಮಹಿಳೆಯರು ಯಕ್ಷಗಾನ ನೋಡುವುದೆ ಅಪರಾಧವೆಂದು ಭಾವಿಸುವ ಕಾಲಘಟ್ಟದಿಂದ ಬಹುದೂರ ಬಂದಿದ್ದೇವೆ. ಗಂಡಸೊಬ್ಬನೆ ಕಲಾವಿದನಾಗಿ ಅವನಷ್ಟಕ್ಕೆ ಇದ್ದು ಕುಟುಂಬದಿಂದ ದೂರ ಉಳಿದು ಬದುಕುತ್ತಿದ್ದ ಕಾಲ ಈಗ ಬದಲಾಗಿದೆ. ಹೆಣ್ಣು ಮಕ್ಕಳಿಂದಾಗಿ ಮನೆ ಮನೆಯು ಕಲಾ ಕುಟೀರವಾಗಿದೆ. ಮಹಿಳೆ ತಾನೂ ಕಲಾವಿದೆಯಾಗಿ ಮಕ್ಕಳನ್ನೂ ಆ ದೆಸೆಯಲ್ಲಿ ಪ್ರೋತ್ಸಾಹಿಸುತ್ತಾ ಕುಟುಂಬವನ್ನೆ ಆ ಕಡೆಗೆ ಚಲಿಸುವಂತೆ ಮಾಡುತ್ತಿರುವುದು ವಿಶ್
APA, Harvard, Vancouver, ISO, and other styles
25

ಆರತಿ, ಎಸ್. "ಮಲ್ಲಿಕಾ ಘಂಟಿಯವರ 'ಚಾಜ' ನಾಟಕದಲ್ಲಿ ಸಾಂಸ್ಕೃತಿಕ ಸಂಘರ್ಷ". AKSHARASURYA 04, № 03 (2024): 88 to 94. https://doi.org/10.5281/zenodo.12672754.

Full text
Abstract:
ಪುರಾತನ ಕಾಲದಿಂದಲೂ ಸಾಮ್ರಾಜ್ಯಶಾಹಿಗಳು, ಪುರುಷಪ್ರಧಾನತೆ ಮತ್ತು ಪುರೋಹಿತಶಾಹಿತ್ವಗಳು ಒಟ್ಟಾಗಿಯೇ ಮಹಿಳೆಯರ ಮೇಲೆ ನೂರಾರು ಕಟ್ಟುಪಾಡುಗಳನ್ನು ಹೇರಿವೆ. ಹೆಣ್ಣು ಒಂದು ವಸ್ತು ಎಂದು ಪುರುಷಪ್ರಧಾನ ವ್ಯವಸ್ಥೆಯ ಧರ್ಮವು ನಿರ್ವಹಿಸುತ್ತದೆ. ಪುರುಷನ ಅಧಿಕಾರ ಸ್ಥಾಪನೆಯ ಕಾರಣದಿಂದ ಅವನೇ ಹುಟ್ಟು ಹಾಕಿದ ಧರ್ಮ, ಕಾನೂನು, ನಿಯಮಗಳು, ಕಟ್ಟುಪಾಡುಗಳು ಹೆಣ್ಣನ್ನು ನಿರ್ದಾಕ್ಷಿಣ್ಯವಾಗಿ ನಡೆಸಿಕೊಳ್ಳುತ್ತವೆ. ಕುಟುಂಬ, ಆಸ್ತಿ, ಉತ್ಪಾದನೆ ಹೀಗೆ ಎಲ್ಲದರ ಮೇಲೆ ಪುರಷಾಧಿಪತ್ಯವೇ ಇರುತ್ತದೆ. ಈ ಕಾರಣದಿಂದಾಗಿ ಬಾಲ್ಯವಿವಾಹ, ಸತಿಪದ್ಧತಿ, ವಿಧವಾ ಸಮಸ್ಯೆ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆ, ಬಹುಪತ್ನಿತ್ವ, ವರದಕ್ಷಿಣೆ ಮುಂತಾದ ಕ್ರೂರ ಸಂಪ್ರಧಾಯಗಳಿಗೆ ಹೆಣ್ಣನ್ನು ಸಿಲುಕಿಸಿ ಅವಳನ್ನು ನಿರಂತರ ಶೋಷಣೆಗೆ ಒಳಗುಮಾಡಲಾಗಿದೆ. ಮನುಸ್ಮೃತಿ ಮೊದಲಾದ ಕೃತ
APA, Harvard, Vancouver, ISO, and other styles
26

ಶಿವಾನಂದ, ಹಂಚಿನಾಳ. "ಜೋಕುಮಾರ ಸ್ವಾಮಿ: ಹೆಣ್ಣುತನದ ಸಾರ್ಥಕತೆಯ ನೀರಿಕ್ಷೆಯಲ್ಲಿ". AKSHARASURYA JOURNAL 05, № 06 (2025): 105 to 109. https://doi.org/10.5281/zenodo.14788766.

Full text
Abstract:
ಚಂದ್ರಶೇಖರ ಕಂಬಾರರು ನವ್ಯ ಸಾಹಿತ್ಯ ಸಂದರ್ಭದಲ್ಲಿ ಒಬ್ಬ ಮುಖ್ಯ ಕವಿಯಾಗಿ, ನಾಟಕಕಾರರಾಗಿ ಒಟ್ಟಿನಲ್ಲಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡವರು. ಕನ್ನಡಕ್ಕೆ 8ನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹಿರಿಮೆ ಇವರದು. ಸಿರಿಸಂಪಿಗೆ ನಾಟಕಕ್ಕೆ 1990ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಇವರು ಕರಿಮಾಯಿ, ಜಿಕೆ ಮಾಸ್ತರ್ ಅವರ ಪ್ರಣಯ ಪ್ರಸಂಗ, ಸಿಂಗಾರವ ಮತ್ತು ಅರಮನೆ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ಚಾಳೇಶ್, ನಾಯಿಕತೆ, ಕಾಡು ಕುದುರೆ ಇದು ಚಲನಚಿತ್ರವಾಗಿ ಪ್ರಸಿದ್ಧಿ ಪಡೆದಿದೆ. ಜೋಕುಮಾರಸ್ವಾಮಿ ಇದು ಕಂಬಾರರ ಸಾಂಸ್ಕೃತಿಕ ಮುಖಮುಖಿಯಾಗಿಸುವ ಈ ಮಣ್ಣಿನ ಸೊಗಡನ್ನು ಚರ್ಚಿಸುವ ಮಹತ್ವದ ಕೃತಿಯಾಗಿದೆ. ಹೆಣ್ಣಿನ ಸಾರ್ಥಕತೆ ಅವಳ ಲೈಂಗಿಕ ಆಸೆ ಆಕಾಂಕ್ಷೆಗಳು ಈಡೇರಿಸುವಲ್ಲಿ ಸಾಂಪ್ರದಾಯಿಕ ಚೌಕಟ್ಟಿನ ಬಂಧಿಯಾಗುವುದು. ಪ್
APA, Harvard, Vancouver, ISO, and other styles
27

ಲೋಕಾಂಬಿಕಾ. "ಭಾಗೀರಥಿ ಹೆಗಡೆ ಅವರ ಹೊಳೆಯ ಹಾದಿ ಕಾದಂಬರಿಯ ಪುರುಷ ಪಾತ್ರಗಳ ವಿಶ್ಲೇಷಣೆ". AKSHARASURYA 05, № 02 (2024): 112 to 122. https://doi.org/10.5281/zenodo.14035334.

Full text
Abstract:
ಸುಮಾರು ಎರಡು ಸಾವಿರ ವರ್ಷಗಳಷ್ಟು ಸುದೀರ್ಘವಾದ ಇತಿಹಾಸವನ್ನು ಹೊಂದಿರುವ ಕನ್ನಡ ಸಾಹಿತ್ಯ ಬಹು ಸಮೃದ್ಧವಾಗಿದ್ದು ಅದರಲ್ಲಿ ಆಧುನಿಕ ಕನ್ನಡ ಸಾಹಿತ್ಯ ಘಟ್ಟವು ಒಂದು. ಈ ಕಾಲಘಟ್ಟ ಒಂದು ರೀತಿಯಲ್ಲಿ ವಿಶೇಷ ಮತ್ತು ವಿಶಿಷ್ಟ. ಕಾರಣ ಆಧುನಿಕ ಕನ್ನಡ ಸಾಹಿತ್ಯವನ್ನು ಅಧ್ಯಯನದ ದೃಷ್ಟಿಯಿಂದ ಅದು ಬೆಳೆದು ಬಂದಿರುವ ಆಧಾರದ ಮೇಲೆ ನವೋದಯ, ನವ್ಯ, ಪ್ರಗತಿಶೀಲ, ದಲಿತ-ಬಂಡಾಯ ಮತ್ತು ಮಹಿಳಾ ಸಾಹಿತ್ಯ ಎಂದು ಅನೇಕ ಭಾಗಗಳಾಗಿ ವಿಂಗಡಿಸಿದ್ದೇವೆ. ಕಥೆ, ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಕಾವ್ಯದಂತಹ ಅನೇಕ ಸಾಹಿತ್ಯ ಪ್ರಕಾರಗಳು ಈ ಕಾಲಘಟ್ಟದಲ್ಲಿ ಬೆಳೆದು ತನ್ನ ಸಾಹಿತ್ಯ ಕ್ಷೇತ್ರವನ್ನು ಹಿಗ್ಗಿಸಿಕೊಂಡಿವೆ. ಆದುದರಿಂದ ಈ ಕಾಲಘಟ್ಟವನ್ನು ಸಾಹಿತ್ಯ ಕ್ಷೇತ್ರದ ಸುಗ್ಗಿಯ ಕಾಲ ಎಂತಲೇ ಕರೆಯಬಹುದು. ಕೇವಲ ಬೆರಳೆಣಿಕೆಯಷ್ಟಿದ್ದ ಮಹಿಳಾ ಲೇಖಕಿಯರು ಹೊಸಗನ
APA, Harvard, Vancouver, ISO, and other styles
28

ಮಂಜುಳಾಕ್ಷಿ, ಎಲ್. "ಮಹಿಳೆ ಸಮಾನತೆ ಮತ್ತು ಡಾ. ಬಿ. ಆರ್. ಅಂಬೇಡ್ಕರ್‌". AKSHARASURYA JOURNAL 06, № 05 (2025): 72 to 83. https://doi.org/10.5281/zenodo.15504265.

Full text
Abstract:
ಕಾಲಾಂತರದಿಂದಲೂ ಮಹಿಳೆ ಸಮಾಜದಲ್ಲಿ ತನ್ನ ಅಸ್ವತ್ವಕ್ಕಾಗಿ ಒಂದಲ್ಲ ಒಂದು ರೀತಿಯಲ್ಲಿ ಧ್ವನಿ ಎತ್ತುತ್ತಲೆ ಬಂದಿದ್ದಾಳೆ. ಇದನ್ನು ನಾವು ಜನಪದ ಹೆಣ್ಣು ಅದರ ಪ್ರಕಾರವಾದ ತ್ರಿಪದಿಯಲ್ಲಿ ತನ್ನ ನೋವನ್ನು ಮತ್ತು ಸಮಾಜದ ಕಟ್ಟುಪಾಡು ಕಂದಾಚಾರಗಳನ್ನು ಮೌನವಾಗಿಯೇ ವಿರೋಧಿಸುತ್ತಾ ಬಂದಿದ್ದಾಳೆ. ಸಾಹಿತ್ಯದಲ್ಲಿ ಅವಳು ತಾಯಿಯಾಗಿ ಅಕ್ಕ-ತಂಗಿ, ನಾದಿನಿ, ಹೆಂಡತಿ, ಅತ್ತೆ ಹೀಗೆ ಅನೇಕ ಪಾತ್ರಗಳಲ್ಲಿ ಪುರುಷನೊಂದಿಗೆ ಜೀವಿಸುತ್ತಾ ಮಾನ್ಯತೆ ಪಡೆದಿದ್ದು ಅವನಿಂದ ದೇವತೆಯಾಗಿ, ಪ್ರಿಯೆಯಾಗಿ, ಕುಟುಂಬದ ಕಣ್ಣಾಗಿ, ಅವನ ಅರ್ಧಾಂಗಿಯಾಗಿದ್ದರೂ ಕೂಡ ಸಮಾಜದಲ್ಲಿ ಅವಳಿಗೆ ಅಂದಲ್ಲ ಇಂದಿಗೂ ಎರಡನೇ ದರ್ಜೆಯ ಸ್ಥಾನವಿದೆ ಅವಳನ್ನು ಪುರುಷ ಸಮಾಜ ತನ್ನ ಬಂಧಿಯಲ್ಲೇ ಬಂಧಿಸಿ ಅವಳ ಮೇಲೆ ಕಟ್ಟುಪಾಡು, ಕಂದಾಚಾರ ಪದ್ಧತಿಗಳನ್ನು ಹೇರುತ್ತಾ ಸಮಾಜದಲ್ಲಿ ಅವಳಿ ಯಾವುದೇ ಸ
APA, Harvard, Vancouver, ISO, and other styles
29

ಸುಮಾ, ವಸಂತ ಸಾವಂತ. "ಚಾಜ ನಾಟಕದಲ್ಲಿ ಮಹಿಳಾ ಸಂವೇದನೆ". AKSHARASURYA 05, № 02 (2024): 123 to 130. https://doi.org/10.5281/zenodo.14035359.

Full text
Abstract:
ಆಧುನಿಕ ಸಾಹಿತ್ಯದ ಸಂದರ್ಭದಲ್ಲಿ ಮಹಿಳೆಯರು ಕಥೆ-ಕಾದಂಬರಿ ಪ್ರಕಾರಗಳಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಆದರೆ ರಂಗಭೂಮಿಯಲ್ಲಿ ನಾಟಕರಚನೆಗೆ ಸಂಬಂಧಿಸಿದಂತೆ ಅಂತಹ ದೊಡ್ಡಸಾಧನೆ ಕಾಣಿಸುವುದಿಲ್ಲ. ಆದರೆ ಇತ್ತೀಚಿನ ದಶಕಗಳಲ್ಲಿ ಮಹಿಳೆ ಅನೇಕ ಮಹತ್ವದ ನಾಟಕ ಕೃತಿಗಳನ್ನು ಕೊಟ್ಟಿದ್ದಾಳೆ. ಅಂತಹ ನಾಟಕಗಳಲ್ಲಿ ಚಾಜ ನಾಟಕವು ಒಂದಾಗಿದೆ. ಹಿಂದಿನ ಕಾಲದಿಂದಲೂ ಪುರುಷ ಪ್ರಧಾನತೆ, ಸಾಮ್ರಾಜ್ಯಶಾಹಿಗಳು, ಮತ್ತು ಪುರೋಹಿತಶಾಹಿತ್ವಗಳು ಎಲ್ಲವೂ ಒಟ್ಟಾಗಿಯೇ ಮಹಿಳೆಯರ ಮೇಲೆ ಹಲವಾರು ಕಟ್ಟುಪಾಡುಗಳನ್ನು ಹೊರಿಸಿವೆ. ಹೆಣ್ಣು ಭೋಗದ ವಸ್ತು ಎಂದು ಪುರುಷಪ್ರಧಾನ ವ್ಯವಸ್ಥೆಯು ಭಾವಿಸುತ್ತದೆ. ಪುರುಷನ ಅಧಿಕಾರತ್ವದಿಂದ ಅವನೇ ಹುಟ್ಟು ಹಾಕಿದ ಧರ್ಮ, ನಿಯಮಗಳು, ಗೊಡ್ಡು ಸಂಪ್ರದಾಯಗಳು, ಕಟ್ಟುಪಾಡುಗಳು ಹೆಣ್ಣನ್ನು ನಿರ್ದಾಕ್ಷಿಣ್ಯವಾಗಿ ನಡೆಸಿಕೊಳ್ಳುತ್ತವೆ.
APA, Harvard, Vancouver, ISO, and other styles
30

ಪ್ರವೀಣ, ಗುರುಶಾಂತ. "ಗೀತಾ ನಾಗಭೂಷಣ ಅವರ ಸಣ್ಣ ಕಥೆಗಳಲ್ಲಿ ತಾಯ್ತನ". AKSHARASURYA JOURNAL 05, № 03 Special Issue (2024): 33 to 39. https://doi.org/10.5281/zenodo.14246413.

Full text
Abstract:
ಗೀತಾ ನಾಗಭೂಷಣ ಅವರು ಮುಖ್ಯವಾಗಿ ಸ್ತ್ರೀ ನೆಲೆಯಲ್ಲಿ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ಅಸಾಹಯಕತೆ, ಶೋಷಣೆ, ತುಡಿತ, ಅವಮಾನ, ಸಮಸ್ಯೆಗಳನ್ನು ಎದುರಿಸುವ ಧೈರ್ಯ, ಸಾಧಿಸುವ ಛಲ, ಸಂಕಟ, ತಾಯ್ತನದ ಪ್ರೀತಿ ಹೀಗೆ ಅನೇಕ ಬಗೆಯ ಕಥೆಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಅವರ ಮಹಿಳಾ ಪರ ಚಿಂತನೆಗಳು ಅವರ ಕಥೆಗಲ್ಲಿ ವ್ಯಕ್ತವಾಗುತ್ತದೆ.
APA, Harvard, Vancouver, ISO, and other styles
31

ಸುಮಾ, ವಸಂತ ಸಾವಂತ. "ಡಾ. ಅರ್ಜುನ ಗೊಳಸಂಗಿಯವರ ಕವಿತೆಗಳಲ್ಲಿ ಹೆಣ್ಣಿನ ಭಿನ್ನ ನೆಲೆಗಳು". AKSHARASURYA 04, № 03 (2024): 103 to 108. https://doi.org/10.5281/zenodo.12672812.

Full text
Abstract:
ಎಪ್ಪತ್ತನೆಯ ದಶಕದಲ್ಲಿ ಕನ್ನಡದಲ್ಲಿ ಆರಂಭವಾದ ದಲಿತ ಮತ್ತು ಬಂಡಾಯ ಸಾಹಿತ್ಯ ಪಂಥ ನೊಂದವರ ದನಿಯಾಗಿ ಮೂಡಿ ಬಂದವು. ಆರಂಭದಲ್ಲಿ ‘ಇಕ್ರಲಾ ಒದಿರಲ’ ಎಂಬಂತಹ ಆಕ್ರೋಶ ಭರಿತ ಮಾತುಗಳನ್ನು ಆಡುತ್ತಲೇ ತನ್ನ ಸುತ್ತಲಿನವರು ತನ್ನ ಮೇಲೆ ಶತಮಾನಗಳ ಕಾಲ ಮಾಡುತ್ತಾ ಬಂದ ಅನ್ಯಾಯವನ್ನು ಜಾತಿ ವ್ಯವಸ್ಥೆಯ ಹೆಸರಿನಲ್ಲಿ ಮಾಡಿದ ಶೋಷಣೆಯನ್ನೂ ವಿರೋದಿಸಲೆಂದೇ ಈ ಸಾಹಿತ್ಯ ಪಂಥಗಳು ಮೂಡಿ ಬಂದವು. ನಂತರದಲ್ಲಿ ಆಕ್ರೋಶ ತುಸು ಕಡಿಮೆಯಾದಂತೆನಿಸಿದರೂ ಅದರ ಸ್ವರೂಪ ಬದಲಾಯಿತೇ ಹೊರತು ಆಳದ ಅಕ್ರೋಶ ಹೋಗಲಿಲ್ಲ.  ದಲಿತ ಸಾಹಿತ್ಯದ ಎರಡನೆಯ ತಲೆಮಾರಿನಲ್ಲಿ ಬಂದ ಲೇಖಕರು ಆಕ್ರೋಶಕ್ಕಿಂತ ಬದುಕನ್ನು ನಿರುಮ್ಮಳವಾಗಿ ಆದರೆ ಒಂದು ಅಭಿಮಾನ ತುಂಬಿದ ದನಿಯಲ್ಲಿ ಬಿತ್ತರಿಸಿದರು. ಅವರ ಸಾಲಿನಲ್ಲಿ ಬಂದ ಪ್ರಮುಖ ಕವಿ ಡಾ. ಅರ್ಜುನ ಗೊಳಸಂಗಿಯವರು. ಕರ್ನಾಟ
APA, Harvard, Vancouver, ISO, and other styles
32

ಕಮಲಾ, ಹಂಪನಾ, та ಎಂ. ಭೈರಪ್ಪ ಕುಪ್ಪನಹಳ್ಳಿ. "ಜೈನ ದೃಷ್ಟಿಯಲ್ಲಿ ಸ್ತ್ರೀ". AKSHARASURYA 03, № 06 (2024): 01 to 18. https://doi.org/10.5281/zenodo.11126790.

Full text
Abstract:
ಕನ್ನಡ ಮಹಿಳಾ ಸಾಹಿತ್ಯ ಜಗತ್ತಿನಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದವರಲ್ಲಿ ಡಾ.ಕಮಲಾ ಹಂಪನಾ ಅವರು ಪ್ರಮುಖರಾಗಿದ್ದಾರೆ. ಕಥೆ, ಕಾವ್ಯ, ನಾಟಕ, ಕಾದಂಬರಿ ಕ್ಷೇತ್ರಗಳಲ್ಲಿ ಗಣನೀಯ ಕೃಷಿ ಮಾಡಿರುವ ಹಲವಾರು ಲೇಖಕಿಯರು ನಮಗೆ ಸಿಗುತ್ತಾರೆ. ಆದರೆ ಸಂಶೋಧನೆ, ಸಂಪಾದನೆಯಂಥ ವಿದ್ವತ್ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಮಹತ್ತರವಾದ ಕಾಣ್ಕೆಯನ್ನು ನೀಡಿದ ಲೇಖಕಿಯರು ಅಪರೂಪ. ಅಂತಹ ಅಪರೂಪದ ಸಂಶೋಧಕಿಯರಲ್ಲಿ ಕಮಲಾ ಹಂಪನಾ ಅವರು ಅಗ್ರಗಣ್ಯರಾಗಿ ಕಾಣುತ್ತಾರೆ. ಸಾಮಾಜಿಕ ತಾರತಮ್ಮ ಹಾಗೂ ಲಿಂಗ ತಾರತಮ್ಯಗಳ ನಡುವೆ ಹಲವಾರು ಸವಾಲುಗಳನ್ನು ದಾಟಿಕೊಂಡು ಅಧ್ಯಯನ ನಡೆಸಿ, ಬೋಧನೆ-ಸಂಶೋಧನೆಯ ಬೇಸಾಯದಲ್ಲಿ ಗುರುತರವಾದ ಸಾಧನೆಗೈದು ಮಾದರಿ ಮಹಿಳೆ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಡಾ.ಕಮಲಾ ಹಂಪನಾ ಅವರು ಬೆಂಗಳೂರು ಜಿಲ್ಲೆ ದೇವನಹಳ್ಳಿಯಲ್ಲಿ ೧
APA, Harvard, Vancouver, ISO, and other styles
33

ತೀ.ನಂ., ಶ್ರೀಕಂಠಯ್ಯ, та ಕುಪ್ಪನಹಳ್ಳಿ ಎಂ. ಭೈರಪ್ಪ ಸಂಯೋಜನೆ:. "ಕನ್ನಡದಲ್ಲಿ ಕಾವ್ಯಲಕ್ಷಣ ಗ್ರಂಥಗಳು". Aksharasurya Journal 05, № 05 (2025): 01 to 37. https://doi.org/10.5281/zenodo.14619428.

Full text
Abstract:
<strong>ದೇಶಭಾಷಾ ವಿದ್ವದ್ವಲಯದ ಮೇರುವಿದ್ವಾಂಸರು ಪ್ರೊ.ತೀ.ನಂ.ಶ್ರೀ</strong>&lsquo;ಭಾರತೀಯ ಕಾವ್ಯ ಮೀಮಾಂಸೆ&rsquo; ಎಂಬ ಮಹೋನ್ನತ ಕಾವ್ಯ-ಶಾಸ್ತ್ರ ಗ್ರಂಥದ ಮೂಲಕ ಕನ್ನಡ ದೇಶಭಾಷಾ ವಿದ್ವದ್ವಲಯದ ವಿಶ್ವಾತ್ಮಕತೆಯನ್ನು ಸಾಕಾರಗೊಳಿಸಿದ ಮೇರುವಿದ್ವಾಂಸರು ಪ್ರೊ.ತೀ.ನಂ.ಶ್ರೀ ಅವರು. ಆಚಾರ್ಯ ಬಿ.ಎಂ.ಶ್ರೀ. ಅವರ ಪರಂಪರೆಯಲ್ಲಿ ಅವರ ಉತ್ತರಾಧಿಕಾರಿ ಎಂಬಂತೆ ನಡೆದು ಜನಪ್ರಿಯ ಅಧ್ಯಾಪಕರೂ ಸಂಮೋಹಕ ಭಾಷಣಕಾರರೂ ಆಗಿ ಪ್ರಸಿದ್ಧರಾದವರು; ಕನ್ನಡದ ವಿಶ್ವವಿದ್ಯಾನಿಲಯಗಳಲ್ಲಿ ಭಾಷಾಶಾಸ್ತ್ರದ ಅಧ್ಯಯನಕ್ಕೆ ಬುನಾದಿಯನ್ನು ಹಾಕಿದವರು; ಆಧುನಿಕ ಕನ್ನಡ ನಿಘಂಟಿನ ರಚನೆಗಾಗಿ ತಮ್ಮ ಸಮಯ, ಶಕ್ತಿ ಸಾಮರ್ಥ್ಯಗಳನ್ನೂ, ವಿದ್ವತ್ತನ್ನೂ ವಿನಿಯೋಗಿಸಿದ ದಿಗ್ಗಜರಲ್ಲಿ ಒಬ್ಬರು. ಅವರನ್ನು ಸಮಕಾಲೀನರು ಕಂಡಂತೆ ಅವರ ಬೋಧಿಸತ್ವ ಸನ್ನಿಭ ಮನೋಹರ ವ್ಯಕ್ತಿತ್ವವನ್
APA, Harvard, Vancouver, ISO, and other styles
34

ಕೆ., ಪುಷ್ಪಲತ. "ಮಹಿಳಾ ಕಾದಂಬರಿ: ದಿಟ್ಟ ಮಹಿಳಾ ಪಾತ್ರಗಳ ವಿಶ್ಲೇಷಣೆ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 1 березня 2024, 99–105. http://dx.doi.org/10.59176/kjksp.v3i1.2343.

Full text
Abstract:
ಸಾಹಿತ್ಯವನ್ನು ಗಂಡು ಕಾಣುವ ರೀತಿ ಒಂದು ಬಗೆಯದಾದರೆ ಹೆಣ್ಣು ಕಾಣುವ ಬಗೆ ಇನ್ನೂ ಭಿನ್ನ. ಮಹಿಳೆಯನ್ನು ಕುರಿತು ಗಂಡು ಹಲವು ರೀತಿಯ ಬರವಣಿಗೆ ಮಾಡಿದ್ದರೂ ಸಹ ಹೆಣ್ಣಿನ ಬರವಣಿಗೆಗೆ ತೂಕ ಹೆಚ್ಚು. ಕಾರಣ ಗಂಡು ಹೆಣ್ಣಿನ ವಿಚಾರವಾಗಿ ತಾನು ಕಂಡದ್ದನ್ನು ಬರೆದರೆ, ಹೆಣ್ಣು ಕಂಡದ್ದರ ಜೊತೆಗೆ ತಾನು ಅನುಭವಿಸಿದ್ದನ್ನು ರಚಿಸುತ್ತಾಳೆ. ಹಾಗಾಗಿ ಮಹಿಳಾ ಸಾಹಿತ್ಯವೆಂಬುದು ಅನುಭವಗಳ ಕಡಲು. ಇಲ್ಲಿ ಲೇಖಕಿಯರು ಸಮಾಜದ ಕುರಿತಾದ ತಮ್ಮ ಮಾತುಗಳನ್ನು ತಾವು ರಚಿಸಿದ ಕೃತಿ ಮತ್ತು ಅದರ ಪಾತ್ರಗಳ ಮೂಲಕ ಆಡಿಸುತ್ತಾರೆ. ಅಂತಹ ಪಾತ್ರಗಳಲ್ಲಿ ಕೆಲವು ವಿಭಿನ್ನವಾಗಿ ನಿಲ್ಲುವಂತದ್ದಾಗಿದ್ದು, ಮಹತ್ವಪೂರ್ಣದ್ದಾಗಿರುತ್ತದೆ. ಅವು ಕೆಲವೊಮ್ಮೆ ಕಾದಂಬರಿಯಲ್ಲಿ ಪ್ರಧಾನಪಾತ್ರಗಳು ಆಗಿರದಿದ್ದರೂ ತಮ್ಮ ವ್ಯಕ್ತಿಗುಣದ ಮೂಲಕ ಪ್ರಧಾನವಾಗುತ್ತದೆ ಹಾಗೂ ಪಾತ್ರದ ಮೂಲಕವೇ ಸ
APA, Harvard, Vancouver, ISO, and other styles
35

ಬಾಯ್. ಯು., ಡಾ ಶೈಲಾ. "ಮಹಿಳೆ-ಪುರಾಣ: ಸೃಜನಾತ್ಮಕತೆ-‘ಮಾಧವಿ’". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 30 вересня 2023, 9–21. http://dx.doi.org/10.59176/kjksp.v2i2.2298.

Full text
Abstract:
ಮಹಾಭಾರತ, ರಾಮಾಯಣದಂಥ ಪುರಾಣಗಳಲ್ಲಿ ಬಂದಿರುವ ಸ್ತ್ರೀಪಾತ್ರಗಳೆಲ್ಲ ಪುರುಷಪ್ರಧಾನ ಚಿಂತನೆಯ ಹಿನ್ನೆಲೆಯಲ್ಲೇ ರೂಪುಗೊಂಡಿರುವಂಥವು. ಕಪ್ಪು ಕಿವಿಯ ಬಿಳಿಯ ಕುದುರೆಗಳು: ಮಹಿಳಾ ಶೋಷಣೆಯ ಹಲವು ಮುಖಗಳ ಅನಾವರಣ ಈ ಭಾಗದಲ್ಲಿ ಹಲವು ಸ್ತ್ರೀಪಾತ್ರಗಳು ಕಾದಂಬರಿಯಲ್ಲಿ ಚಿತ್ರಿತವಾದ ಬಗೆಯನ್ನು ಪರಂಪರಾಗತ ನೆಲೆ ಎಂಬ ಉಪಶೀರ್ಷಿಕೆಯಲ್ಲಿ ಚರ್ಚಿಸಲಾಗಿದೆ. ಗಂಡು-ಹೆಣ್ಣು: ‘ಸ್ನೇಹ’ದ ನೆಲೆ ಎಂಬ ಉಪಶೀರ್ಷಿಕೆಯಲ್ಲಿ ಕಾದಂಬರಿಯ ನಾಯಕಿ ‘ಮಾಧವಿ’ ಹಾಗೂ ಆಕೆಯ ಬಾಲ್ಯದ ಸಖ ‘ಆದಿಮ’ರ ಪಾತ್ರಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಗಂಡು-ಹೆಣ್ಣು: ‘ಸ್ನೇಹ’ಕ್ಕೆ ಹೊಸಭಾಷ್ಯ ಎಂಬ ಭಾಗದಲ್ಲಿ ಅವರಿಬ್ಬರ ಸ್ನೇಹವನ್ನು ಸಮಾಜ ಸ್ವೀಕರಿಸಬೇಕಾದ ‘ಸ್ವಸ್ಥ ಮನೋಭಾವ’ದ ನಿರ್ಮಾಣದ ಅಗತ್ಯದ ಕುರಿತ ಚಿಂತನೆಯನ್ನು ಒಳಗೊಳಿಸಲಾಗಿದೆ. ದೈಹಿಕವಾದ ಕಾರಣಕ್ಕೆ ‘ಅಬಲೆ’ ಎಂದು ಸ
APA, Harvard, Vancouver, ISO, and other styles
36

Gowda, Harisha. "ಚಂದನ ವಾಹಿನಿಯಲ್ಲಿ ಸೌಂದರ್ಯ ಮತ್ತು ಮಹಿಳೆ". ShodhKosh: Journal of Visual and Performing Arts 4, № 2 (2023). https://doi.org/10.29121/shodhkosh.v4.i2.2023.3985.

Full text
Abstract:
ಕಮಲಾ ಹಂಪನಾ ಸೌಂದರ್ಯದ ಕುರಿತು ಹೀಗೆ ಹೇಳುತ್ತಾರೆ “ಗಂಡು ಹೆಣ್ಣಿನ ಸೃಷ್ಟಿಯಾದ ದಿನದಿಂದಲೇ ಅವರಿಬ್ಬರ ಪರಸ್ಪರ ಆರ್ಕಷಣೆ ಪ್ರಾರಂಭವಾಯಿತು. ಗಂಡು ತನ್ನ ಗಂಡಸುತನ, ಪೌರುಷತ್ವಕ್ಕೆ ಹೆಸರಾದಂತೆ ಹೆಣ್ಣು ತನ್ನ ಲಜ್ಜೆ, ಕೋಮಲತ್ವ, ಸೌಂದರ್ಯಕ್ಕೆ ಹೆಸರುವಾಸಿಯಾದಳು. ಹೆಣ್ಣು ಗಂಡಿನೊAದಿಗೆ ರಹಸ್ಯದ ಬೀಡು, ಕನಸಿನ ಗೂಡು, ಆಕೆಯನ್ನು ಅನೇಕ ವಿಧಗಳಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ ಪುರುಷನಿಗೆ ಅವಳೊಂದು ಸವಾಲೇ ಆದಳು, ಮೀನಿನ ಹೆಜ್ಜೆಯನ್ನು ಗುರುತಿಸಿದ, ನಕ್ಷತ್ರಗಳನ್ನು ಎಣಿಸಿದ ಮಾನವನಿಗೆ ಹೆಣ್ಣಿನ ಮನಸ್ಸನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಕಟ್ಟಕಡೆಗೆ ಆತ ಆಕೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ ಪರಿ ಮುಖಸುತ್ತಿಯಿಂದ ಎಂದು ಆತ ಹೆಣ್ಣಿನ ಬಹಿರಂಗ ಅಂತರAಗಗಳನ್ನು ಹೊಗಳಲು ಬಾಯಿತೆರೆದನೋ ಅಂದಿನಿAದ ಇಂದಿನವರೆಗೂ ತನ್ನ ಬಾಯ
APA, Harvard, Vancouver, ISO, and other styles
37

ಕೆ. ವಿ., ಡಾ ರಾಕೇಶ್ಶರ್ಮ. "ಸವರ್ಣಿಯ ಕುಟುಂಬದ ಕಣ್ಣು-ದಲಿತ ಹೆಣ್ಣು : ‘ರಕ್ತವರ್ಣೆ’ನಾಟಕ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 30 вересня 2023, 104–13. http://dx.doi.org/10.59176/kjksp.v2i2.2306.

Full text
Abstract:
ಸಾಮಾಜಿಕ ಚಿಂತನೆ, ವೈಚಾರಿಕ ದೃಷ್ಟಿಕೋನದ ಮೂಲಕ ಸಮಾಜವನ್ನು ಕಟ್ಟಲು ಪ್ರಯತ್ನಿಸಿದವರು ದಾಸರು. ದಾಸರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ದಾಸರು ಕೀರ್ತನೆಗಳ ಮೂಲಕ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದವರು ದಾಸರು. ದಾಸರು ತಮ್ಮ ಹರಿತವಾದ ಮಾತುಗಳಿಂದ ಸಮಾಜದ ಕುಂದುಕೊರತೆಗಳನ್ನು ಮುಚ್ಚುಮರೆಯಿಲ್ಲದೆ ಖಂಡಿಸುತ್ತಾರೆ. ದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಕಳಕಳಿ, ಮಾನವೀಯ ಮಿಡಿತಗಳಿವೆ. ದಾಸರ ಕೀರ್ತನೆಗಳು ಸಾಮಾಜಿಕ ಪರಿವರ್ತನೆಗೆ ದಾರಿ ದೀಪಗಳು. ಕೀರ್ತನೆಗಳು ಅಂದಿಗೆ ಮಾತ್ರ ಸೀಮಿತವಲ್ಲ. ಇವತ್ತು ಕೂಡಾ ಪ್ರಸ್ತುತವಾಗಿವೆ. ದಾಸರ ಕೀರ್ತನೆಗಳ ಮರ್ಮವನ್ನು ಅರಿತುಕೊಳ್ಳುವುದು ಅಗತ್ಯವಾಗಿದೆ.
APA, Harvard, Vancouver, ISO, and other styles
38

ಹಿಮಾನಂದ್, ರೇಖಾ. "ವಚನಯುಗ - ಲಿಂಗತ್ವ ಪರಿಕಲ್ಪನೆ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 1 березня 2024, 1–8. http://dx.doi.org/10.59176/kjksp.v3i1.2331.

Full text
Abstract:
ಸ್ತ್ರೀ-ಪುರುಷನ ಅಸ್ತಿತ್ವವು ಲಿಂಗ ವ್ಯವಸ್ಥೆಯಿಂದ ನಿರ್ಧರಿಸಲ್ಪಡುತ್ತದೆ. ಲಿಂಗ, ಲಿಂಗತ್ವ, ಲೈಂಗಿಕತೆ ದೃಷ್ಟಿಯಿಂದ ಪುರುಷನಿಗಿಂತ ಸ್ತ್ರೀಯ ಸ್ಥಾನಮಾನಗಳು ನಗಣ್ಯವೇ ಆಗಿವೆ. ಲಿಂಗ ಎನ್ನುವುದು ಸ್ತ್ರೀ ಪುರುಷರ ನಡುವಿನ ಜೈವಿಕ ವ್ಯತ್ಯಾಸಗಳನ್ನು ತಿಳಿಸುವಂತಹ ಪರಿಕಲ್ಪನೆಯಾದರೆ, ಲಿಂಗತ್ವ ಎನ್ನುವುದು ಸಂಸ್ಕೃತಿಯಿಂದ ನಿರ್ಮಿತವಾದ ಒಂದು ಸಾಮಾಜಿಕ ಸೃಷ್ಟಿ. ಬಿನ್ನ ಜೈವಿಕತೆಯ ಕಾರಣದಿಂದಾಗಿ ಸ್ತ್ರೀ ಪುರುಷರು ಮಾಡಬಹುದಾದ ಅಥವಾ ಮಾಡಬಾರದ ಕಾರ್ಯಗಳಲ್ಲಿ ವ್ಯತ್ಯಾಸಗಳಿರಬೇಕೆನ್ನುವುದು ಸಂಸ್ಕೃತಿ ನಿರ್ಮಾಣ ಮಾಡಿ ಪೋಷಿಸಿಕೊಂಡು ಬಂದಿರುವ ಲಿಂಗತ್ವದ ಭಿನ್ನತೆಗಳೆ ಆಗಿವೆ. ಸಂಸ್ಕೃತಿ ನಿರ್ಮಿತಿಯ ಲಿಂಗಾಧಾರಿತ ವ್ಯವಸ್ಥೆಯಲ್ಲಿ ಮಹಿಳೆ ಹೊಂದಿರುವ ಜೈವಿಕ ವೈಶಿಷ್ಟ್ಯತೆಗಳಾದ ಗರ್ಭದಾರಣೆ, ತಾಯ್ತನ, ಮಕ್ಕಳ ಲಾಲನೆ-ಪಾಲನೆಯ ಜವಾಬ್ದಾರಿಗಳನ್ನು ನಿ
APA, Harvard, Vancouver, ISO, and other styles
39

ಎ.ಕೆ., ಡಾ ರವಿಶಂಕರ್. "ಜನಪದ ತ್ರಿಪದಿಗಳಲ್ಲಿ ‘ಗರತಿ’ ಪರಿಕಲ್ಪನೆ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 30 вересня 2023, 42–52. http://dx.doi.org/10.59176/kjksp.v2i2.2301.

Full text
Abstract:
‘ಗರತಿ’ ಎಂಬ ಪದವನ್ನು ಆಧುನಿಕವಾಗಿ ಹೊಸ ಅರ್ಥಗಳೊಂದಿಗೆ ನಿರ್ವಚಿಸಿಕೊಂಡು ಅಧ್ಯಯನಮಾಡಬೇಕಿದೆ. ಭಾರತೀಯ ಸಮಾಜವು ಹೆಣ್ಣನ್ನು ಅರ್ಥೈಸಿಕೊಂಡು ಬಂದಿರುವ ಪರಂಪರೆಯು ಪರಸ್ಪರ ವಿರುದ್ಧವಾಗಿದೆ. ‘ಹೆಣ್ಣು ಸಂಸಾರದ ಕಣ್ಣು’ ಎನ್ನುವಾಗಲೇ ಆಕೆಯನ್ನು ಗೌರವಿಸುವ ಮನೆದೇವತೆ, ಗೃಹಿಣಿ, ಮಹಾಲಕ್ಷ್ಮಿ ಮೊದಲಾದ ಪದಗಳು ಗೃಹದಲ್ಲೇ ಉಳಿಸುತ್ತಾ ಎಲ್ಲಾ ಜವಾಬ್ದಾರಿಯನ್ನು ಆಕೆಯ ಕರ್ತವ್ಯವೆಂಬಂತೆ ಹೊರಿಸಿದ ಅಭಿಮುಖ ಸಿದ್ಧಾಂತಗಳು ಇಂದಿನ ಪ್ರಚಲಿತ ಪ್ರಶ್ನೆಗಳಾಗಿವೆ. ಸಾಹಿತ್ಯದ ಮುಕ್ಕಾಲುಪಾಲು ಅಧ್ಯಯನಗಳು ಹೆಣ್ಣು ಮತ್ತು ದಲಿತ ಶೋಷಣೆಗಳನ್ನು ಅತ್ಯಂತ ಗಂಭೀರವಾಗಿ ಅಧ್ಯಯನಮಾಡುತ್ತಿದೆ. ಇದರ ಬೇರುಗಳನ್ನು ಸರಿಯಾಗಿ ಅಧ್ಯಯನಮಾಡದಿದ್ದರೆ ಹೊಸ ಅರ್ಥಗಳಿಗೆ ಮೌಲ್ಯವಿರುವುದಿಲ್ಲ. ಜನಭಾಷೆಯ ಎಲ್ಲಾ ಸಾಹಿತ್ಯವು ಕ್ರಿ. ಪೂ ಮಿಗಿಲಾಗಿ ನಮ್ಮ ಜನಪದ ಸಾಹಿತ್ಯದಿಂದ ಬಂ
APA, Harvard, Vancouver, ISO, and other styles
40

ಹನೂರು, ಪ್ರೊ ಕೃಷ್ಣಮೂರ್ತಿ. "‘ಊರದ ಚೇಳಿನ ಏರದ ಬೇನೆಯಲ್ಲಿ...’ (ಚಾಮರಸನ ಪ್ರಭುಲಿಂಗ ಲೀಲೆ - ಕವಿ-ಕಾವ್ಯ ಅವಲೋಕನ)". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 31 березня 2023, 1–11. http://dx.doi.org/10.59176/kjksp.v2i1.2284.

Full text
Abstract:
ಮನುಷ್ಯ ನಾಗರಿಕತೆಯ ನಂತರ ಬೆಳೆದು ಬೇರುಬಿಟ್ಟಅಧಿಕಾರ ದಾಹದ ರಾಜಕಾರಣ ಅದರೊಂದಿಗೆ ಬೆಸೆದುಕೊಂಡ ಹಲವು ಧರ್ಮಗಳ ಸಂಗಾತದಿAದ ಹುಟ್ಟಿಕೊಂಡ ಕಲಹಗಳು; ಇದೆಲ್ಲದರ ಹಿನ್ನೆಲೆಯಲ್ಲಿ ಶತಶತಮಾನಗಳಲ್ಲಿ ಹಾಸಿಕೊಂಡು ಬಂದ ಮೌಢ್ಯ ಮತ್ತು ಅಜ್ಞಾನವನ್ನೇ ಕಚ್ಚದ ಚೇಳಿನ ಏರದ ಬೇನೆ ಎನ್ನುತ್ತ ಅಲ್ಲಮ ಮತ್ತೊಂದು ಪ್ರಸಿದ್ಧ ವಚನದಲ್ಲಿ ‘ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ, ಹೆಣ್ಣು ಹೊನ್ನು ಮಣ್ಣಿಂಗೆ ಸತ್ತುದು ಕೋಟಿ, ಗುಹೇಶ್ವರ ನಿಮಗಾಗಿ ಸತ್ತವರನಾರನೂ ಕಾಣೆ’ ಎಂದ. ಈಮಾತುಗಳ ಹಿನ್ನೆಲೆಯಲ್ಲಿ ಅಲ್ಲಮನನ್ನು ಕುರಿತಾದ ಪ್ರಸಿದ್ಧ ಓದುಗಬ್ಬ ಚಾಮರಸನ`ಪ್ರಭುಲಿಂಗ ಲೀಲೆ’ಯನ್ನು ಅವಲೋಕಿಸಬಹುದಾಗಿರುತ್ತದೆ. ಸಾಹಿತ್ಯ ಚರಿತ್ರೆಕಾರರು ಅಲ್ಲಮಪ್ರಭುವಿನ ಕಾಲವನ್ನು ಹನ್ನೆರಡನೆಯ ಶತಮಾನದ ಮಧ್ಯಭಾಗವೆಂದೂ, ಚಾಮರಸನ ಕಾಲವನ್ನು ಹದಿನೈದನೆಯ ಶತಮಾನದ ಮಧ್
APA, Harvard, Vancouver, ISO, and other styles
We offer discounts on all premium plans for authors whose works are included in thematic literature selections. Contact us to get a unique promo code!