To see the other types of publications on this topic, follow the link: ಜೀವನ.

Journal articles on the topic 'ಜೀವನ'

Create a spot-on reference in APA, MLA, Chicago, Harvard, and other styles

Select a source type:

Consult the top 50 journal articles for your research on the topic 'ಜೀವನ.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Browse journal articles on a wide variety of disciplines and organise your bibliography correctly.

1

ಸುಮಾ, ಆರ್. "ಮೀಮಾಂಸೆ: ಜೀವನ ಮತ್ತು ಕಾವ್ಯ". AKSHARASURYA JOURNAL 06, № 06 (2025): 72 to 79. https://doi.org/10.5281/zenodo.15581023.

Full text
Abstract:
ಮೀಮಾಂಸೆ ಯಾವುದೇ ವಿಷಯದ ವಿಚಾರಪೂರ್ಣ ಚಿಂತನೆ, ತಾರ್ಕಿಕ ತೀರ್ಮಾನ, ವಿಮರ್ಶೆ, ಚರ್ಚೆ, ವಿಶ್ಲೇಷಣೆ ಇತ್ಯಾದಿಯಾಗಿ ಅರ್ಥೈಸಲ್ಪಡುತ್ತದೆ. ಸಹೃದಯ ಓದುಗರಿಗೆ ತಿಳಿದಿರುವಂತೆ ಕಾವ್ಯ ಮೀಮಾಂಸೆ ಚಿರಪರಿಚಿತ. ಆದರೆ ಜೀವನ ಮೀಮಾಂಸೆ.. ಅಂತರ್ಗತ. ಜೀವನವು ಹಲವು ಮುಖಗಳನ್ನು ಹೊಂದಿದ ಜೈವಿಕ ಜಗತ್ತಿನ ವ್ಯಾಪಾರ. ಹುಟ್ಟು-ಸಾವುಗಳ ನಡುವಿನ ಅಭಿವೃದ್ಧಿ ಮತ್ತು ಹೋರಾಟ. ‘ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ, ಮದುವೆಗೊ, ಮಸಣಕೋ ಕರೆದಲ್ಲಿಗೆ ಹೋಗೆಂದ ಮಂಕುತಿಮ್ಮ’, ‘ಇರುವ ಭಾಗ್ಯವ ನೆನೆದು ಬಾರೆನೆನ್ನದಿರು, ಹರುಷಕ್ಕಿದೆ ದಾರಿ’, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ – ಎಂಬುದಾಗಿ ಹೇಳಿ ಜೀವನವನ್ನು ಮೀಮಾಂಸೆಗೆ ಒಳಪಡಿಸಿದ್ದಾರೆ.ಕಾವ್ಯ ಮೀಮಾಂಸೆ ಮತ್ತು ಜೀವನ ಮೀಮಾಂಸೆಯ ನಡುವಿನ ಸಂಬಂಧಗಳ ಬಗ
APA, Harvard, Vancouver, ISO, and other styles
2

ಗೀತಾಲಕ್ಷ್ಮಿ, ಎಸ್.ಎನ್. "ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು". AKSHARASURYA JOURNAL 06, № 04 (2025): 27 to 41. https://doi.org/10.5281/zenodo.15490828.

Full text
Abstract:
ʼʼವಚನಕಾರರು ಮೌಲ್ಯಗಳಿಗಾಗಿಯೇ ಬದುಕಿದವರು”. ನೆಡೆ-ನುಡಿಯ ಸಮನ್ವಯದ ಅಗತ್ಯತೆಯನ್ನು ಸಾರಿದ್ದಾರೆ. ನಮ್ಮ ನುಡಿಯು ಸತ್ಯಶುದ್ಧವಾಗಿರಬೇಕು, ಪಾರದರ್ಶಕವಾಗಿರಬೇಕು, ಪ್ರಕಾಶಮಾನವಾಗಿರಬೇಕು. ಮನವನ್ನು ಮುಟ್ಟುವಂತಿರಬೇಕು. ಸಕಲಜೀವಿಗಳಲ್ಲಿ ಮನುಷ್ಯ ಮಾತ್ರ ಜೀವನ ಮೌಲ್ಯಗಳನ್ನಳವಡಿಸಿಕೊಳ್ಳಲು ಸಾಧ್ಯ. ಮೌಲ್ಯಗಳಿಂದಲೇ ಜೀವನ ಸಾರ್ಥಕವಾಗುತ್ತದೆ. ಈ ಹಿನ್ನಲೆಯಲ್ಲಿ ಮೌಲ್ಯಗಳು, ಬದುಕಿಗೆ ಅನಿವಾರ್ಯವಾಗಿವೆ. ಸತ್ಯ, ಅಹಿಂಸೆ, ನಿಸ್ವಾರ್ಥ, ಪ್ರೀತಿ, ತ್ಯಾಗ, ಸ್ನೇಹ, ಪ್ರಾಮಾಣಿಕತೆ ಇಂತಹ ಅನೇಕ ಜೀವನ ಮೌಲ್ಯಗಳನ್ನು ವಚನಕಾರರಲ್ಲಿ ಕಾಣಬಹುದಾಗಿದೆ. ಕಾಯಕ, ದಾಸೋಹ, ಸಾಮಾಜಿಕನ್ಯಾಯದಂತಹ ಮೌಲ್ಯಗಳನ್ನು ಶರಣರು ಹೊಸದಾಗಿ ಕಟ್ಟಿಕೊಟ್ಟಿದ್ದಾರೆ. ಜೀವ ಎಷ್ಟು ಮುಖ್ಯವೋ ಜೀವನವೂ ಅಷ್ಟೇ ಮುಖ್ಯ, ಜೀವನ ಎಷ್ಟು ಮುಖ್ಯವೋ ಜೀವನ ಮೌಲ್ಯಗಳೂ ಅಷ್ಟೇ ಮುಖ್ಯ
APA, Harvard, Vancouver, ISO, and other styles
3

ಸತ್ಯಮಂಗಲ, ಮಹಾದೇವ. "ವಚನ ಸಾಹಿತ್ಯದಲ್ಲಿ ಜೀವನಕೌಶಲ್ಯದ ಆಯಾಮಗಳು". AKSHARASURYA JOURNAL 05, № 04 (2024): 47 to 53. https://doi.org/10.5281/zenodo.14289637.

Full text
Abstract:
ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಜೀವನ ಕೌಶಲ್ಯಗಳನ್ನು ಬದುಕಿನ ಮೌಲ್ಯಗಳಾಗಿ ಅಳವಡಿಸಿಕೊಂಡು ‘ಅರಿತೆಡೆ ಶರಣ ಮರೆತೆಡೆ ಮಾನವ’ ಎಂಬ ಮಾತನ್ನು ಸಾಕ್ಷೀಕರಿಸುವಂತೆ ಬದುಕಿದವರು ಶಿವಶರಣರು. ವಚನ ರೂಪದಲ್ಲಿ ಬರೆದ ಅವರ ಅನುಭವದ ನುಡಿಗಳು, ಅವುಗಳಲ್ಲಿ ಅಡಗಿರುವ ಜೀವ ಕೌಶಲ್ಯಗಳನ್ನು, ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ 10 ಮುಖ್ಯವಾದ ಜೀವನ ಕೌಶಲ್ಯಗಳನ್ನು ತೌಲನಿಕವಾಗಿ ಅಧ್ಯಯನ ನಡೆಸಿ, ಜೀವನ ಕೌಶಲ್ಯಗಳನ್ನು ಒಳಗೊಂಡಿರುವ ವಚನಗಳನ್ನು ವಿಶ್ಲೇಷಿಸಲಾಗಿದೆ. ವಚನಗಳ ಅರ್ಥ, ವ್ಯಾಪ್ತಿ ಮತ್ತು ದೃಷ್ಟಿಕೋನ ವಿಶಾಲವಾದದ್ದು ಮನೋವೈಜ್ಞಾನಿಕವಾಗಿ ಅಧ್ಯಯನ ನಡೆಸಿದಾಗ ಅದು ಸಮುದ್ರದ ಅಲೆಗಳಂತೆ ಭಿನ್ನವೂ ಮತ್ತು ವೈವಿದ್ಯಪೂರ್ಣವೂ ಆದ ಅರ್ಥವಿವೇಚನೆಯ ಸಾಧ್ಯತೆಗಳನ್ನು ಓದುಗರಿಗೆ ತೆರೆದಿಡುವುದರ ಜೊತೆಗೆ ಇಂದಿನ ಒತ್ತಡಯುಕ್ತ ಬದುಕಿನಲ್ಲಿ ಕೌಶಲ
APA, Harvard, Vancouver, ISO, and other styles
4

ಸಂತೋಷ್‌, ಕುಮಾರ್‌ ಆರ್‌.ಎಂ. "ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು". AKSHARASURYA JOURNAL 06, № 04 (2025): 78 to 89. https://doi.org/10.5281/zenodo.15490942.

Full text
Abstract:
ವಚನ ಸಾಹಿತ್ಯವು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅಮೂಲ್ಯ ಸಂಪತ್ತಾಗಿದೆ. ಇದು 12ನೇ ಶತಮಾನದಲ್ಲಿ ಜನಿಸಿದ ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದ್ದು, ಬಸವಾದಿ ಶರಣರು ಇದನ್ನು ಜನಸಾಮಾನ್ಯರಿಗೆ ತಲುಪುವಂತೆ ಮಾಡಿದರು. ವಚನ ಸಾಹಿತ್ಯವು ಧಾರ್ಮಿಕ, ಸಾಮಾಜಿಕ ಮತ್ತು ದಾರ್ಶನಿಕ ಚಿಂತನೆಗಳನ್ನು ಒಳಗೊಂಡಿದೆ ಮತ್ತು ಭಕ್ತಿ ಚಳವಳಿಯ ಪ್ರಮುಖ ಭಾಗವಾಗವೂ ಆಗಿದೆ. ವಚನ ಸಾಹಿತ್ಯವು ʼಸಮಾನತೆʼ, ʼಶ್ರಮʼ-ʼಕಾಯಕʼ ಮತ್ತು ʼಭಕ್ತಿʼಯ ಮಹತ್ವ, ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಶರಣರು ಜಾತಿ, ಲಿಂಗ, ಆರ್ಥಿಕ ಸ್ಥಿತಿ ಮುಂತಾದ ಬೇಧಭಾವಗಳನ್ನು ತಿರಸ್ಕರಿಸಿದರು. ಅಲ್ಲದೆ ಇವರು ಜಾತಿ-ವರ್ಣಭೇದಗಳ ವಿರೋಧವಾಗಿಯೂ ಮತ್ತು ಸಮಾನತೆಗೆ ಹೆಚ್ಚಿನ ಮನ್ನಣೆಯನ್ನು ನೀಡಿದರು.ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮೊದಲಾದ ಶರಣರು &ldq
APA, Harvard, Vancouver, ISO, and other styles
5

ರೇಣುತಾಕ್ಷಿ. "ಶಿಕ್ಷಣವೆಂದರೆ ಜೀವನಕ್ಕೆ ಸಿದ್ಧತೆಯಲ್ಲ, ಶಿಕ್ಷಣವೇ ಜೀವನ". AKSHARASURYA JOURNAL 06, № 05 (2025): 169 to 174. https://doi.org/10.5281/zenodo.15504563.

Full text
Abstract:
ಡಾ. ಬಿ.ಆರ್. ಅಂಬೇಡ್ಕರ್‌ ಅವರು ಹೇಳಿದಂತೆ, ಶಿಕ್ಷಣ ಜೀವನಕ್ಕೆ ಸಿದ್ಧತೆ ಮಾತ್ರವಲ್ಲ, ಅದು ಜೀವನವೇ ಆಗಿದೆ. ಶಿಕ್ಷಣವು ಕೇವಲ ಉದ್ಯೋಗ ಅಥವಾ ಜೀವನೋದ್ಯಮಕ್ಕೆ ಪೂರಕವಾಗಿರುವುದಷ್ಟೇ ಅಲ್ಲ, ಅದು ವ್ಯಕ್ತಿಯ ಬುದ್ಧಿ, ಚಿಂತನೆ, ವ್ಯಕ್ತಿತ್ವ ಮತ್ತು ಸಮಾಜದ ಪ್ರಗತಿಗೆ ಸಹಾಯಕವಾಗಬೇಕು. ಅಂಬೇಡ್ಕರ್‌ ಅವರ ದೃಷ್ಟಿಯಲ್ಲಿ ಶಿಕ್ಷಣವು ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯವನ್ನು ಸ್ಥಾಪಿಸುವ ಪ್ರಮುಖ ಸಾಧನವಾಗಿದೆ. ವಿದ್ಯಾಭ್ಯಾಸವು ವ್ಯಕ್ತಿಗೆ ಅರ್ಥಪೂರ್ಣ ಬದುಕನ್ನು ಕಟ್ಟಿಕೊಳ್ಳಲು, ಸ್ವತಂತ್ರವಾಗಿ ಚಿಂತಿಸಲು, ಹಾಗೂ ತಾನು ಎದುರಿಸುವ ಸವಾಲುಗಳಿಗೆ ಉತ್ತರಿಸಲು ಶಕ್ತಿಯನ್ನು ನೀಡುತ್ತದೆ. ಸಮೃದ್ಧ ಜೀವನಕ್ಕಾಗಿ ಕೇವಲ ಹಣಕಾಸಿನ ಪ್ರಗತಿಯನ್ನಷ್ಟೇ ಗಮನಿಸುವುದಕ್ಕಿಂತ, ಮಾನವೀಯತೆ, ನೈತಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಕಾಪಾ
APA, Harvard, Vancouver, ISO, and other styles
6

., ನಾಗರಾಜು ಎಂ. "ಜೀವನ ಸಾಕ್ಷಾತ್ಕಾರಕ್ಕೆ ಇರಲಿ ನಂಬಿಕೆಯುಕ್ತ ನಡೆ". International Journal of Kannada Research 11, № 3 (2025): 01–04. https://doi.org/10.22271/24545813.2025.v11.i3a.1129.

Full text
APA, Harvard, Vancouver, ISO, and other styles
7

ವಾಣಿ, ಡಿ. ಎಸ್. "ಮಡಿವಾಳ ಮಾಚಿ ದೇವರವರ ಜೀವನ ಹಾಗೂ ಸಾಧನೆ". AKSHARASURYA JOURNAL 04, № 04 (2024): 144 to 150. https://doi.org/10.5281/zenodo.13284156.

Full text
Abstract:
ಹನ್ನೆರಡನೇ ಶತಮಾನ ಭಾರತೀಯ ಹಾಗೂ ಕರ್ನಾಟಕದ ಇತಿಹಾಸದಲ್ಲಿ ಬಹುಮುಖ್ಯ ಕಾಲಘಟ್ಟ. ಆ ಕಾಲದ ಶಿವಶರಣರು ಜೀವನದ ಹೊಸ ಮೌಲ್ಯಗಳನ್ನು ಎತ್ತಿ ಹಿಡಿದು ವರ್ಣಾಶ್ರಮ, ಧರ್ಮಗಳ ಹಂಗನ್ನು ಕಿತ್ತು ಬಿಸುಟು ಸಮತಾ ತತ್ವದ ತಳಹದಿಯ ಮೇಲೆ ಸಮಾಜವನ್ನು ನಿರ್ಮಿಸಲು ಹೆಣಗಿದವರು. ಸೃಷ್ಟಿಯಲ್ಲಿ ಎಲ್ಲರೂ ಸಮಾನರು ಮೇಲು-ಕೀಳು, ಲಕ್ಷಿತ-ಅಲಕ್ಷಿತ, ಸ್ತ್ರೀ-ಪುರುಷರೆಂಬ ಬೇಧ ಭಾವವಿಲ್ಲ ಎಂಬ ತತ್ವವನ್ನು ಬೋಧಿಸಿ ತಮ್ಮದೇ ಆದ ವಿಶಿಷ್ಟ ಧರ್ಮವನ್ನು ಬಸವಾದಿ ಪ್ರಮಥರು ಸಾಧಿಸಿದರು. ತಮ್ಮ ವೃತ್ತಿಯ ಹಿನ್ನೆಲೆಯಲ್ಲಿ ವರ್ಗ, ವರ್ಣ, ಜಾತಿಗಳಿಲ್ಲದ ಸರ್ವ ಸಮಾನತೆಯ ಹೊಸ ಸಮಾಜದ ನಿರ್ಮಾಣಕ್ಕೆ ಅವರು ಶ್ರಮಿಸಿದರು. ಅಂತಹ ವಚನಕಾರ ಮತ್ತು ಕ್ರಾಂತಿಕಾರರಲ್ಲಿ ಪ್ರಮುಖರಾದವರು ಮಡಿವಾಳ ಮಾಚಿದೇವ. ಇವರು ಬಸವಣ್ಣನಂತಹ ಮಹಾನುಭಾವರೊಂದಿಗೆ ಜೊತೆಗೂಡಿ ಸಮಾಜವನ್ನು ತಿದ್ದುವಂತಹ ಕೆ
APA, Harvard, Vancouver, ISO, and other styles
8

ಆಯ್., ಬಿ. ಸಾತಿಹಾಳ. "ರವೀಂದ್ರನಾಥ ಠಾಗೋರ್: ಜೀವನ, ಸಾಹಿತ್ಯ ಮತ್ತು ಸಂಘರ್ಷ". AKSHARASURYA JOURNAL 04, № 05 Special Issue (2024): 17 to 23. https://doi.org/10.5281/zenodo.13294279.

Full text
Abstract:
ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ಏಷ್ಯಾ ಖಂಡದ ಮೊದಲ ಕವಿ ರವೀಂದ್ರನಾಥ ಠಾಗೋರ್. ಗುರುದೇವ್ ಎಂಬ ಅಂಕಿತ ನಾಮದೇಯರಾದ ಇವರು ಬಂಗಾಳಿಯ ಮಹಾ ವಿದ್ವಾಂಸ ಕವಿ, ಕಾದಂಬರಿಕಾರ, ಸಂಗೀತಕಾರ ಮತ್ತು ಪ್ರಗತಿಪರ ನಾಟಕಕಾರರಾಗಿದ್ದಾರೆ. ಇವರು 19-20ನೇ ಶತಮಾನಗಳ ಸಂಧಿಕಾಲದಲ್ಲಿ ಬಂಗಾಳಿ ಸಾಹಿತ್ಯ ಮತ್ತು ಸಂಗೀತಕ್ಕೆ ಹೊಸ ರೂಪವನ್ನು ತಂದು ಕೊಟ್ಟವರಾಗಿದ್ದಾರೆ. ಇವರು ರಚಿಸಿದ ಕವನಗಳು, ಸಣ್ಣ ಕಥೆಗಳು ಮತ್ತು ಕಾದಂಬರಿಗಳು ಸಾಹಿತ್ಯಕ್ಕೆ, ಆಡುಮಾತಿನ ಪ್ರಯೋಗಕ್ಕೆ, ವಿಚಾರಶೀಲತೆಗೆ, ವಾಸ್ತವಿಕತೆಗೆ ಮತ್ತು ತತ್ವಶಾಸ್ತ್ರದ ಅವಲೋಕನಕ್ಕೆ ಸಾಣೆಯಂತಿವೆ. ಇವರು ರಚಿಸಿದ ಎರಡು ಗೀತೆಗಳು ಭಾರತ ಮತ್ತು ಬಾಂಗ್ಲಾ ದೇಶಗಳ ರಾಷ್ಟ್ರಗೀತೆಗಳಾಗಿವೆ. ಬಂಗಾಳಿ ಕಲಾ ಪ್ರಕಾರಕ್ಕೆ ಹೊಸ ಮೆರಗು ನೀಡಿದ ಠಾಗೋರ್ ಅವರ ಕಾದಂಬರಿಗಳು, ಸಣ್ಣ ಕಥೆಗಳು, ಕವನಗಳು, ನೃತ್ಯ-ನಾಟಕಗಳ
APA, Harvard, Vancouver, ISO, and other styles
9

ಬೋರಯ್ಯ, ಪಿ. ಕೆ. "ತತ್ವಪದಕಾರ ಕುರುಬರ ಲಿಂಗಯ್ಯನವರ ಜೀವನ ಮತ್ತು ಸಾಧನೆ". Aksharasurya Journal 05, № 05 (2025): 63 to 70. https://doi.org/10.5281/zenodo.14619536.

Full text
Abstract:
ಚಿತ್ರದುರ್ಗ ಜಿಲ್ಲೆ ಹಾಗೂ ತಾಲ್ಲೂಕಿನ ತುರುವನೂರು ಗ್ರಾಮದಲ್ಲಿ ವೀರಪ್ಪ ಮತ್ತು ಮಲ್ಲಮ್ಮ ಎಂಬ ಇಬ್ಬರು ದಂಪತಿಗಳಿಗೆ ಮಗನಾಗಿ ಹುಟ್ಟಿ, ಬಾಲ್ಯದಿಂದಲೂ ಕುತೂಹಲಕಾರಿಯಗಿ ಬೆಳೆದ ಕುರುಬರ ಲಿಂಗಯ್ಯನವರು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ “ಮಾರೀಜಾತ್ರೆ” ಎಂಬ ಕೃತಿಯನ್ನು ಬರೆಯುವುದರ ಮೂಲಕ ಸಾಮಾಜಿಕ ಕ್ರಾಂತಿಯನ್ನುಂಟು ಮಾಡಿದ್ದಾರೆ. ಆಗಿನ ಕಾಲದಲ್ಲಿ ಕೆ.ಎಲ್.ಎಸ್. ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಶ್ರೇಣಿಗಳಿಸಿ ಜಿಲ್ಲಾ ವಿದ್ಯಾಧಿಕಾರಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾದರು. ಸರ್ಕಾರಿ ಕೆಲಸವನ್ನು ಗಿಟ್ಟಿಸಿಕೊಂಡು ಸಾಹಿತ್ಯದ ಮೇಲೆ ಒಲವು ಇಟ್ಟುಕೊಂಡು ಅನೇಕ ಗ್ರಂಥಗಳನ್ನು ಓದಿಕೊಂಡು ತಮ್ಮದೇ ಆದ ಶೈಲಿಯಲ್ಲಿ ಕತೆ, ನಾಟಕ, ಷಟ್ಪದಿ, ರಗಳೆ, ಶತಕ, ತ್ರಿಪದಿ, ಕಂದ ಪದ್ಯಗಳು, ತತ್ವಪದಗಳು, ಜೀವನ ಚರಿ
APA, Harvard, Vancouver, ISO, and other styles
10

ಡಾ., ಸ್ವಾಮಿ. "ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ರಚನೆ ಮತ್ತು ಕಾರ್ಯ ವಿಧಾನಗಳು". International Journal of Advance Research in Multidisciplinary 2, № 3 (2024): 269–73. https://doi.org/10.5281/zenodo.13293895.

Full text
Abstract:
ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮವು ಶೋಷಿತ ಸಮುದಾಯಗಳಲ್ಲಿ ಸಾಮಾಜಿಕ ಅಸಮಾನತೆಯಿಂದ ಬಳಲುತ್ತಿರುವ ಸಮುದಾಯಗಳ ಅಭಿವೃದ್ಧಿಗಾಗಿ ಮತ್ತು ಅವರನ್ನು ಸಾಮಾಜಿಕ ಸಮಾನತೆಯ ಕಡೆ ಕೊಂಡೊಯ್ಯಲು ಹಲವು ಯೋಜನೆಗಳ ಮೂಲಕ ಶ್ರಮಿಸುತ್ತಿದೆ. ಅ ಮೂಲಕ ಫಲಾನುಭವಿಗಳ ಜೀವನ ಕ್ರಮದ ಬದಲಾವಣೆಯ ಉದ್ದೇಶವನ್ನು ಹೊಂದಿದೆ. ಪರಿಶಿಷ್ಟ ಜಾತಿಲ್ಲಿ ಬಡತನದ ರೇಖೆಗಿಂತ ಕೆಳಗಿರುವ ಉಪಜಾತಿಗಳನ್ನು ಈ ಯೋಜನೆಗಳಿಗೆ ಸಿಗುವಂತೆ ಮಾಡಲಾಗಿ. ಇದರಿಂದ ಅವರ ಆರ್ಥಿಕ ಸುಧಾರಣೆ, ಮಕ್ಕಳ ಶೈಕ್ಷಣಿಕ ಉನ್ನತಿ, ನಿರುದ್ಯೋಗ ನಿವಾರಣೆ ಮಾಡಲು, ಸಮುದಾಯದ ಯುವಕ ಮತ್ತು ಯುವತಿಯರನ್ನು ಸಬಲರನ್ನಾಗಿಸಲು ನಿಗಮವು ಹಲವಾರು ಯೋಜನೆಗಳನ್ನು ರೂಪಿಸಿದೆ. ಮಹಿಳಾ ಸಬಲೀಕರಣ ಯೋಜನೆಗಳ ಮೂಲಕ ಮಹಿಳೆಯು ಆರ್ಥಿಕ ಸಬಲತೆಯನ್ನು ಹೊಂದಬೇಕು, ಉದ್ಯೋಗ ಪಡೆಯಬೇಕು, ಸಮಾಜದ ಕಟ್ಟಳೆ ಮತ್ತು ದೌರ್ಜನ್ಯಗಳ
APA, Harvard, Vancouver, ISO, and other styles
11

ಎಂ., ಮಹಾದೇವಪ್ರಭು. "ತಿರುಕ ಅವರ ಜೀವನ ಮತ್ತು ಸಾಹಿತ್ಯ: ಒಂದು ಪಕ್ಷಿನೋಟ". AKSHARASURYA JOURNAL 03, № 04. SPECIAL ISSUE. (2024): 106 to 114. https://doi.org/10.5281/zenodo.10929831.

Full text
Abstract:
ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು ಮೂಲತಃ ವ್ಯಾಯಾಮ ಶಿಕ್ಷಕರು, ಅವರು ತಿರುಕ ಎಂಬ ಕಾವ್ಯನಾಮದಿಂದ ಕನ್ನಡ ಸಾಹಿತ್ಯ ವಲಯದಲ್ಲಿ ಪ್ರಸಿದ್ಧರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮಲ್ಲಾಡಿಹಳ್ಳಿಯಲ್ಲಿ ಶಿಕ್ಷಣ, ವೈದ್ಯಕೀಯ, ವ್ಯಾಯಾಮ, ಗ್ರಂಥಾಲಯ, ವಾಚನಾಲಯ, ವಿದ್ಯಾರ್ಥಿ ನಿಲಯಗಳಿಂದ ಕೂಡಿದ ಅನಾಥ ಸೇವಾಶ್ರಮ ವಿಶ್ವಸ್ಥ ಸಮಿತಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಸುತ್ತಮುತ್ತಲ ಹಳ್ಳಿಗಳ ವಿದ್ಯಾರ್ಥಿಗಳಿಗೆ ವಿದ್ಯಾದೀಪಕರಾಗಿದ್ದಾರೆ. ಆಯುರ್ವೇದ, ಯೋಗ ಮತ್ತು ಸಾಹಿತ್ಯವಲಯದ ವಿದ್ವಾಂಸರನ್ನು ಮಲ್ಲಾಡಿ ಹಳ್ಳಿಗೆ ಕರೆಸಿ ವಿದ್ಯಾರ್ಥಿಳಿಗೆ ಉಪನ್ಯಾಸಗಳನ್ನು ಕೊಡಿಸುವುದಲ್ಲದೆ, ಜನರಿಗೆ ಹರಿಕಥೆ, ಕೀರ್ತನೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಸಿದ್ಧರಾಗಿರುವರು. ಶ್ರೀಯುತರು 53 ಕೃತಿಗಳನ್ನು ಬರೆದಿದ್ದರೂ ಕೂಡ ಆಧುನಿಕ ಜನಮಾನಸಕ್ಕೆ ಅಪರಿಚ
APA, Harvard, Vancouver, ISO, and other styles
12

ಡಾ., ಬಸವರಾಜ ಯು. "ಬಳ್ಳಾರಿ ಜಿಲ್ಲೆಯಲ್ಲಿ ಒಣಭೂಮಿ ಬೇಸಾಯಗಾರರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳು". International Journal of Advance Research in Multidisciplinary 2, № 4 (2024): 74–78. https://doi.org/10.5281/zenodo.14343817.

Full text
Abstract:
ಮಾನವ ಸಮಾಜದಲ್ಲಿ ಸಂಘ ಜೀವಿಯಾಗಿ ಜೀವನ ನೆಡಸುತ್ತಿದ್ದಾನೆ. ಸಾಮಾಜವನ್ನು ಬಿಟ್ಟು ಬದುಕಲಾರನು. ಈ ಸಮಾಜದಲ್ಲಿ ಗೌರವಯುತವಾಗಿ ಜೀವನ ಮಾಡಲು ಕೆಲವು ಅವಶ್ಯಕವಾದ ಅಂಶಗಳು ಮುಖ್ಯವಾಗುತ್ತವೆ. ಏಕೆಂದರೆ ಇವು ಜೀವನಕ್ಕೆ ಅವಶ್ಯಕವಾಗಿರುವಂತಹ ಸಂಪನ್ಮೂಲಗಳಾಗಿವೆ. ಎಲ್ಲಾ ಸಂಪನ್ಮೂಲಗಳನ್ನು ಒಬ್ಬ ವ್ಯಕ್ತಿಯಿಂದ ಉತ್ಪಾದಿಸಲು ಸಾಧ್ಯವಿಲ್ಲ. ಅದ್ದರಿಂದ ಇತರೆ ಸಮಾಜದಲ್ಲಿನ ವ್ಯಕ್ತಿಗಳು ಕೂಡಿ ಕೆಲಸಮಾಡಿದರೆ ಸಂಪನ್ಮೂಲಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ. ಅದೇ ರೀತಿಯಲ್ಲಿ ಮಾನವ ಅಭಿವೃದ್ಧಿಗೆ ಅವಶ್ಯಕವಾದ ಸುಸ್ಥಿರ ಅಭಿವೃದ್ಧಿ ಗುರಿಗಳಾದ ಬಡತನ ನಿರ್ಮೂಲನೆ, ಹಸಿವುಮುಕ್ತ, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಸ್ವಚ್ಛ ನೀರು, ನೈರ್ಮಲ್ಯ, ಅಗ್ಗವಾದ ಬದುಕು ಶುದ್ಧ ಗೌರವಯುತ ಕೆಲಸ ಮತ್ತು ನೆರವು, ಉದ್ಯಮ, ಆವಿ
APA, Harvard, Vancouver, ISO, and other styles
13

ಅಜೀತ, ಪಾತ್ರೋಟ, та ರುಮ್ಮಾ ಶಿವಗಂಗಾ. "'ವೀಸಾದ ನಿರೀಕ್ಷಣೆಯಲ್ಲಿ ಆತ್ಮಕಥನ': ಡಾ.ಬಿ.ಆರ್. ಅಂಬೇಡ್ಕರರ ಜೀವನ ಮತ್ತು ಪ್ರಯೋಗಗಳು." AKSHARASURYA 04, № 03 (2024): 78 to 87. https://doi.org/10.5281/zenodo.12672742.

Full text
Abstract:
ಆತ್ಮಕಥೆ ಬರೆದುಕೊಳ್ಳುವುದು ಮನುಷ್ಯ ಬದುಕಿನ ಪ್ರಮುಖ ಬೆಳವಣಿಗೆಯಾಗಿದೆ. ಈ ಕಾರಣವಾಗಿಯೆ ಮನುಷ್ಯ ತನ್ನ ಸರಿ ತಪ್ಪುಗಳನ್ನು ನಿವೇದಿಸಿಕೊಂಡು ಬದುಕಿನ ವಿಕಾಸದತ್ತ ದಾಪುಗಾಲಿಡುವುದು ಕಾಣಬಹುದು. ಮಾನವ ಬೆಳವಣಿಗೆ ಮತ್ತು ವಿಕಾಸ ಕ್ರಮದಲ್ಲಿ ತನ್ನ ಬದುಕಿನ ಅನುಭವಗಳನ್ನು ಮನೆ, ಸಮಾಜ, ಪರಿಸರ, ಸಂಸ್ಕೃತಿಗಳಿಂದ ರೂಪುಗೊಂಡಿವೆ. ಅವುಗಳು ಮನುಷ್ಯ ಒಳ ಹೊರಗನ್ನು ಅರಿತುಕೊಳ್ಳಲು ಸಹಾಯ ಮಾಡುತ್ತವೆ. ಇಲ್ಲಿ ಪ್ರಮುಖವಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಬದುಕಿನುದ್ದಕ್ಕೂ ಅನುಭವಿಸಿದ ದುಖಃ ದುಮ್ಮಾನಗಳು, ಸಂಕಟಗಳು ಮತ್ತು ಅವುಗಳಿಂದ ಬಿಡುಗಡೆಗೆ ಹಾತೋರೆಯುವ ಮನಸ್ಥಿತಿ ಪ್ರಕಟಗೊಳ್ಳುತ್ತದೆ. ಅಲ್ಲದೆ ಅವರು ಕಂಡುಕೊಳ್ಳುವ ಪರಿಹಾರೋಪಾಯಗಳು ಎಲ್ಲವೂ ಒಂದೊಂದು ಹೊಸ ಪ್ರಯೋಗದಂತೆ ಗೋಚರಿಸುತ್ತದೆ. ಅಲ್ಲದೆ ಅವು ಓದುಗರಿಗೆ ಸಂದೇಶಗಳಾಗಿ ಮಾರ್ಪಡುತ್
APA, Harvard, Vancouver, ISO, and other styles
14

ರಾಜಕುಮಾರ, ಎಂ. ಸಿಂಧೆ. "ಡಾ. ಬಿ. ಆರ್. ಅಂಬೇಡ್ಕರ್‌ ಅವರ ಬದುಕಿನಿಂದ ಕಲಿಯಬೇಕಾದ ಸಂದೇಶ". AKSHARASURYA JOURNAL 06, № 01 (2025): 12 to 21. https://doi.org/10.5281/zenodo.14961338.

Full text
Abstract:
ಕಲಿಕೆ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿದೆ. ಅದು ನಿತ್ಯ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಹುಟ್ಟಿನಿಂದ ಸಾವಿನವರೆಗೂ ಜೀವನುದ್ದಕ್ಕೂ ವಿವಿಧ ಜ್ಞಾನಶಾಖೆಗಳ ಮೂಲಕ ಜೀವನಾನುಭವ ಪಡೆಯುತ್ತ, ಹಳೆ ಬೇರು ಹೊಸ ಚಿಗುರು ಎಂಬಂತೆ ಗುರುಹಿರಿಯರ ನಡೆ-ನುಡಿ, ಆಚಾರ ವಿಚಾರಗಳನ್ನು ಅನುಲಕ್ಷಿಸುತ್ತ, ಭವಿಷ್ಯದ ಬದುಕಿನ ಅಗತ್ಯತೆಗಳನ್ನು ಕಲ್ಪಿಸಿಕೊಳ್ಳುತ್ತ ಹಳೆಯ ಮತ್ತು ಹೊಸದರ ಸಮ್ಮಿಶ್ರಣದೊಂದಿಗೆ ಸುಂದರ ಬದುಕು ಕಟ್ಟಿಕೊಳ್ಳಲು ‘ಕಲಿಕೆ’ ಎಂಬ ಪ್ರಕ್ರಿಯೆ ನಡೆಯುತ್ತಲೇ ಸಾಗುತ್ತದೆ.‘ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ’ ಯಿಂದ ಆರಂಭವಾಗಿ ಕಲಿಕೆ ಮುಂದುವರೆಯುತ್ತದೆ. ‘ದೇಶ ಸುತ್ತು ಇಲ್ಲವೇ ಕೋಶ ಓದು’ ಎಂಬಂತೆ ಸಾಹಿತ್ಯ, ಕಾವ್ಯ, ಪುರಾಣ, ಶಾಸ್ತ್ರ, ಕಲೆ ಹೀಗೆ ನೂರಾರು ಪ್ರಕಾರದ ಗ್ರಂಥಗಳ ಅಧ್ಯ
APA, Harvard, Vancouver, ISO, and other styles
15

ವಿನಯ, ಕುಮಾರ್, та ಗೌಡ ಆರ್. ನಾಗಪ್ಪ. "ಮಾತಿಲ್ಲದ ಸಮುದಾಯಕ್ಕೆ ಮಾತಾದ ಕವಿ: ಡಾ. ಸಿದ್ಧಲಿಂಗಯ್ಯ". AKSHARASURYA 03, № 05 (2024): 52–60. https://doi.org/10.5281/zenodo.10938039.

Full text
Abstract:
ಸಾಮಾಜಿಕ ಶ್ರೇಣೀಕರಣ ಭಾರತದ ಸಮಾಜದ ಬಹುಮುಖ್ಯವಾದ ಲಕ್ಷಣ. ಅಂದರೆ ಅದು ಜಾತಿಯ ಆಧಾರದ ಮೇಲೆ ನಿರ್ಧರಿತವಾಗುತ್ತದೆ. ಈ ಶ್ರೇಣೀಕರಣದ ವ್ಯವಸ್ಥೆಯು ಒಂದಿಷ್ಟು ವರ್ಗಗಳನ್ನು ಅಧೀನವಾಗಿಸಿಕೊಳ್ಳುವ ಮೇಲ್ವರ್ಗದ ಉತ್ಪನ್ನವಾಗಿದೆ. ಈ ವರ್ಗವು ಇಲ್ಲಿನ ಕೆಲವು ಸಮುದಾಯಗಳನ್ನು ಹೀನವೆಂದು ಗುರುತಿಸಿಕೊಂಡು ಶತಮಾನಗಳಿಂದ ಶೋಷಣೆಯನ್ನು ಮಾಡಿಕೊಂಡು ಬಂದಿತ್ತು. ಈ ಕೆಳಜಾತಿಗಳಿಗೆ ಯಾವುದೇ ಹಕ್ಕುಗಳು ಇಲ್ಲದೇ ಮೆಲ್ವರ್ಗದ ಜೀತಕ್ಕಷ್ಟೇ ಸೀಮಿತವಾಗಿಸಲಾಗಿತ್ತು. ಶಿಕ್ಷಣ, ಧಾರ್ಮಿಕತೆ, ಸಾಮಾಜಿಕ ಜೀವನ, ಸಮಾನತೆ ಮೊದಲಾದವುಗಳು ಇವರಿಗೆ ಪರಿಚಯವೇ ಇರಲಿಲ್ಲ. ಇವರನ್ನು ಸಂಪೂರ್ಣವಾಗಿ ಗುಲಾಮರನ್ನಾಗಿ ಮಾಡಲಾಗಿತ್ತು. ಭಾರತಕ್ಕೆ ಬ್ರಿಟಿಷರು ಬಂದ ನಂತರ ಅವರು ಇಲ್ಲಿ ಎಲ್ಲರಿಗೂ ಶಿಕ್ಷಣ ನೀಡಿದ್ದರಿಂದಾಗಿ ದಲಿತರಲ್ಲಿ ಹೊಸ ಆಶಾಕಿರಣ ಮೂಡಿತು. ಮುಂದೆ ಅಂಬೇಡ್ಕರ್ ಅ
APA, Harvard, Vancouver, ISO, and other styles
16

ಗೌಡ., ಎಂ.ಟಿ. "ವಚನ ಸಾಹಿತ್ಯ: ಮಾನವ ಮೌಲ್ಯಗಳ ಪ್ರತಿಬಿಂಬ". AKSHARASURYA JOURNAL 06, № 04 (2025): 90 to 96. https://doi.org/10.5281/zenodo.15490961.

Full text
Abstract:
ವಚನವೆಂಬುದು ಕೇವಲ ಸಾಹಿತ್ಯ ಪ್ರಕಾರವಲ್ಲ ಅದು ಒಂದು ಚಳುವಳಿ ಕೂಡ ಆಗಿದೆ. ಅದನ್ನು ಸಮಾಜೋ ಧಾಶ್ರಮಿಕ ಚಳುವಳಿ, ಕಾಯಕ ಜೀವಿಗಳ, ಚಳುವಳಿ ಪರಿಪೂರ್ಣ ಚಳುವಳಿ ಎಂದು ಬಗೆಬಗೆಯಾಗಿ ಕನ್ನಡ ವಿದ್ವಾಂಸರು ಅದರ ಸ್ವರೂಪ ಮಹಿಮೆಯನ್ನು ಬಣ್ಣಿಸಿದ್ದಾರೆ. ವಚನ ಸಾಹಿತ್ಯ ಇಡೀ ಭಾರತೀಯ ಭಾಷೆಗಳಲ್ಲಿಯೇ ವಿಶಿಷ್ಟವಾದುದು. ಕನ್ನಡ ಸಾಹಿತ್ಯವು ವಿಶ್ವ ಸಾಹಿತ್ಯಕ್ಕೆ ನೀಡಿದ ಕೊಡುಗೆ ಆದಾಗಿದೆ ಎಂದರೂ ನಡೆಯುತ್ತದೆ. ಮಾನವ ಕುಲದ ಸರ್ವಾಂಗೀಣ ವಿಕಾಸಕ್ಕಾಗಿ ಶ್ರಮಿಸಿದ ಮಹಾತ್ಮರಾದ ಶಿವಶರಣರು ಅನನ್ಯ ಕೊಡುಗೆ ನೀಡಿರುವ ಜಗತ್ತಿನ ಅಪರೂಪದ ಸಾಹಿತ್ಯ ವಚನಗಳು. ವಚನಗಳು ಎಂದಾಕ್ಷಣ ನೆನಪಾಗುವುದೇ ಶಿವಶರಣರು. ಶರಣ ಪಂಥಕ್ಕೆ ಭಕ್ತಿಯ ಶಕ್ತಿಯೇ ಕೇಂದ್ರ ಬಿಂದು. ವಚನ ಸಾಹಿತ್ಯವು ಸವಿಸ್ತಾರವಾದ ಸಮುದ್ರದ ಆಳದಲ್ಲಿನ ಮುತ್ತು, ರತ್ನಗಳನ್ನು ಹೆಕ್ಕಿ ಅಳೆದು, ತೂಗಿ ಸ
APA, Harvard, Vancouver, ISO, and other styles
17

ಸಿ., ಬಿ. ಹೊನ್ನುಸಿದ್ಧಾರ್ಥ. "ನಿರಂಜನ 'ವಿಮೋಚನೆ' ಕಾದಂಬರಿ: ನಗರ ಬದುಕಿನ ವಾಸ್ತವ ಚಿತ್ರಣದ ಜೀವನ ವೃತ್ತಾಂತದ ಅನಾವರಣ". AKSHARASURYA 05, № 01 (2024): 33 to 42. https://doi.org/10.5281/zenodo.13870631.

Full text
Abstract:
ಮಾರ್ಕ್ಸ್‌ವಾದಿ ಸಿದ್ಧಾಂತದಿಂದ ಪ್ರಭಾವಿತರಾದ ನಿರಂಜನರು ವೈಚಾರಿಕ ಚಿಂತನೆಯುಳ್ಳವರಾಗಿದ್ದರು. ಅವರ ಮೊದಲ ಕಾದಂಬರಿಯಾದ ‘ವಿಮೋಚನೆ’ಯೂ ವರ್ತಮಾನದಲ್ಲಿ ನಿಂತು ಭೂತವನ್ನು ಕೆಣಕುತ್ತಾ ಹೋಗುವ ನಿರೂಪಣಾ ತಂತ್ರಗಾರಿಕೆಯ ಮೂಲಕ ಕಾದಂಬರಿಯ ಉದ್ದಕ್ಕೂ ನೀತಿಯಿಂದ ಕೂಡಿದ ಸಾಮಾಜಿಕ ವ್ಯವಸ್ಥೆಯನ್ನು ವ್ಯಂಗ್ಯಭರಿತ ದಾಟಿಯಲ್ಲಿ ಕುಟುಕಿದ್ದಾರೆ. ಬಾಲ್ಯದಿಂದಲೂ ಕಡುಬಡತನದ ಬದುಕು ನಡೆಸಿದ್ದ ಕಥಾನಾಯಕ ಚಂದ್ರಶೇಖರನಿಗೆ ತನ್ನ ಬದುಕಿನಲ್ಲಿ ಉಂಟಾದ ದುರ್ಘಟನೆಗಳು ದೊಡ್ಡ ಹೊಡೆತವನ್ನು ನೀಡುತ್ತವೆ. ಅವನು ಇಟ್ಟ ಪ್ರೀತಿ, ವಿಶ್ವಾಸ, ನಂಬಿಕೆಗಳೇ ಅವನಿಗೆ ಮುಳುವಾಗಿ ಸಾಮಾಜಿಕ ವ್ಯವಸ್ಥೆ ಅವನ ಬಡತನವನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡು ಅವನನ್ನು  ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಜೈಲು ಶಿಕ್ಷೆಗೆ ಒಳಗಾದ ಚಂದ್ರಶೇಖರ ತಾನು
APA, Harvard, Vancouver, ISO, and other styles
18

ಎಲ್ಲಪ್ಪ, ಜಿ. "ಭಾರತದ ಪ್ರಜಾಪ್ರಭುತ್ವದ ಪಿತಾಮಹರಾಗಿ ಡಾ. ಬಿ. ಆರ್. ಅಂಬೇಡ್ಕರ್‌". AKSHARASURYA JOURNAL 06, № 05 (2025): 36 to 45. https://doi.org/10.5281/zenodo.15504196.

Full text
Abstract:
ವಿಸ್ತಾರವಾದ ದೇಶ, ವೈವಿಧ್ಯಮಯವಾದ ಸಂಸ್ಕೃತಿಗಳು, ಸಾವಿರಾರು ಭಾಷೆಗಳು, ಸಾವಿರಾರು ಜಾತಿಗಳು, ವಿಭಿನ್ನ ಮತಗಳು ಈ ಮಣ್ಣಿನಲ್ಲಿ ಜೀವಿಸುತ್ತಿವೆ. ಈ ಎಲ್ಲವುಗಳಿಗೆ ಜೀವ ಕೊಡುವ ತತ್ವ ಯಾವುದು? ಮತ್ತು ಇವುಗಳನ್ನು ಬೆಸೆಯುವ ಸೂತ್ರ ಯಾವುದು? ಎಂಬ ಆಲೋಚನೆಗಳ ಬೆನ್ನ ಹತ್ತಿದಾಗ ಸಿಗುವ ಪೂರಕ ಶಕ್ತಿಗಳ ಬಗ್ಗೆ ಅಧ್ಯಯನಕ್ಕೆ ಪ್ರಜಾಪ್ರಭುತ್ವವೊಂದು ಮುಖ್ಯವಾಗಿ ಮುನ್ನೆಲೆಗೆ ಬರುತ್ತದೆ. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ಇದು ಬೆಳೆದು ಬಂದ ಪರಂಪರೆ, ಅದು ಗಟ್ಟಿಗೊಂಡ ಹಿನ್ನೆಲೆಗಳು ಆಸಕ್ತಿದಾಯಕಗಳಾಗಿವೆ. ಬಾಬಾ ಸಾಹೇಬರು ಪ್ರಜಾಪ್ರಭುತ್ವವನ್ನು ಭಾರತೀಯ ಮಣ್ಣಿನಲ್ಲಿ ಕೃಷಿ ಮಾಡಿದ ಬಗ್ಗೆ ಗಮನಾರ್ಹವಾದದ್ದು. ಎಲ್ಲಾ ಜನರು ಬದುಕಲಿಕ್ಕೆ ಬೇಕಾದ ಜೀವನ ವಿಧಾನ ಮತ್ತು ಆಡಳಿತ ಕ್ರಮವಾಗಿಸುವಲ್ಲಿ ಸಶಕ್ತವಾದ ಸೂತ್ರವೊಂದನ್ನು ಪ
APA, Harvard, Vancouver, ISO, and other styles
19

ರುದ್ರಮುನಿ, ಎಚ್. "ತಾಳಗುಂದ ಶಾಸನ ಮತ್ತು ಸಂಸ್ಕೃತಿ". AKSHARASURYA 03, № 06 (2024): 55 to 61. https://doi.org/10.5281/zenodo.11126992.

Full text
Abstract:
ತಾಳಗುಂದ ಶಾಸನವು ಕದಂಬರ ಪ್ರಮುಖ ಐತಿಹಾಸಿಕ ಶಾಸನವಾಗಿದೆ. ಕನ್ನಡ ಸಾಹಿತ್ಯ, ಶಾಸನ, ಕಲೆ, ಸಂಸ್ಕೃತಿ ಹಾಗೂ ಆ ಕಾಲದ ಜನರ ಜೀವನ ಕ್ರಮಗಳು ಈ ಶಾಸನದಲ್ಲಿ ಕಂಡುಬಂದಿವೆ. ವಿದ್ಯೆ ಕಲಿಯಲು ಹೋದ ಕನ್ನಡಿಗನಿಗೆ ಆದ ಅಪಮಾನದಿಂದ ಸಿಡಿದೆದ್ದು ಕನ್ನಡದ ಮೊದಲ ಸಾಮ್ರಾಜ್ಯ ನಿರ್ಮಾಣಕ್ಕೆ ಕಾರಣವಾದ ವಿವರ ಈ ಶಾಸನದಲ್ಲಿದೆ. ಕರ್ನಾಟಕದ ಮೊದಲ ಕೆರೆ ಹಾಗೂ ದೇವಾಲಯಗಳ ಸ್ಥಾಪನೆ, ಕನ್ನಡದ ರಾಜಮನೆತನವೊಂದು ಆ ಕಾಲಕ್ಕಾಗಲೇ ಉತ್ತರ ಭಾರತ ಹಾಗೂ ದಕ್ಷಿಣ ಭಾರತಗಳ ನಡುವೆ ವೈವಾಹಿಕ ಸಂಬಂಧ ಬೆಳೆಸಿಕೊಂಡಿತ್ತು ಎಂಬ ವಿವರ ಈ ಶಾಸನದಲ್ಲಿದೆ. ಕನ್ನಡಿಗರ ಸ್ವಾಭಿಮಾನ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ದೃಷ್ಟಿಯಿಂದ ತಾಳಗುಂದ ಶಾಸನ ಮಹತ್ವದ್ದಾಗಿದೆ. ಇತ್ತೀಚಿನ ಸಂಶೋಧನೆಗಳಿಂದ ಕರ್ನಾಟಕದ ಮೊದಲ ಪ್ರಾಚೀನ ಶಾಸನ ಎಂಬ ಹಿರಿಮೆಗೆ ಪಾತ್ರವಾಗಿದೆ.
APA, Harvard, Vancouver, ISO, and other styles
20

ನಾಗೇಂದ್ರಪ್ಪ, ಶಿವಶರಣಪ್ಪ. "ವಿಜಯಶ್ರೀ ಸಬರದರವರ ಕಾವ್ಯಗಳಲ್ಲಿ ಮಹೀಳಾ ಚಿಂತನೆ". Aksharasurya Journal 05, № 05 (2025): 77 to 80. https://doi.org/10.5281/zenodo.14619562.

Full text
Abstract:
ಆಧುನಿಕ ಕಾವ್ಯಗಳನ್ನು ಅವಲೋಕಿಸಿದಾಗ ವಿಜಯಶ್ರೀ ಸಬರದರವರ ಕಾವ್ಯಗಳಲ್ಲಿ ಮಹಿಳಾ ಪರ ಚಿಂತನೆಗಳನ್ನು ಕಾಣುತ್ತೇವೆ. ಮಹಿಳೆಯನ್ನು ಪುರುಷ ಪ್ರಧಾನವಾದ ವ್ಯವಸ್ಥೆಯಲ್ಲಿ ಎರಡನೆಯ ದರ್ಜೆಯ ಪ್ರಜೆ ಎಂದು ಪರಿಗಣಿಸಿ ಆಕೆಯನ್ನು ವಿದ್ಯೆಯಿಂದ, ಅಸ್ತಿಯಿಂದ, ಸ್ವಾತಂತ್ರ್ಯದಿಂದ ದೂರವಿಡಲಾಗಿತ್ತು. ಆಕೆಗೆ ಸ್ವಾತಂತ್ರ್ಯವನ್ನು ಕೊಡಬಾರದು ಎಂದು ಈ ದೇಶದ ಧರ್ಮ ಗ್ರಂಥಗಳು ಹೇಳುತ್ತವೆ. ಆಕೆ ಮೈಲಿಗೆ, ಮಾಯೆ, ಚಂಚಲೆ, ಎಂದು ಕರೆಯುವುದರ ಮೂಲಕ ಅತ್ಯಂತ ಕೀಳಾಗಿ ಕಾಣುತ್ತಿದ್ದರು. ಮಹಿಳೆ ಜೀವನ ಪರ್ಯಂತ ಅಸ್ಪೃಶ್ಯಳಾಗಿ ಬದುಕುವಂತಹ ಅನಿವಾರ್ಯ ಪದ್ಧತಿ ಈ ದೇಶದ ಚರಿತ್ರೆಯಲ್ಲಿತ್ತು. ವೇದಗಳಲ್ಲಿ ಆಕೆಯನ್ನು ತುಂಬಾ ಹೀನಾಯವಾಗಿ ನೋಡುತ್ತಾರೆ. ಮಹಿಳೆಗೆ ಬುದ್ಧಿ ಕಡಿಮೆ ಇದೆ, ಅವಳ ಹೃದಯ ಕಿರುಬನಿಗಿಂತಲೂ ಕ್ರೂರವಾದುದು ಎಂದು ಹೇಳುತ್ತಾರೆ. ದೇಶದ ಪುರಾಣ, ಇತಿಹಾ
APA, Harvard, Vancouver, ISO, and other styles
21

ಬೋರಯ್ಯ, ಪಿ. ಕೆ. "ತತ್ವಪದಕಾರ ಲಿಂಗಯ್ಯನವರ ತತ್ವಪದಗಳ ಜೀವಾಳ". AKSHARASURYA 05, № 02 (2024): 42 to 49. https://doi.org/10.5281/zenodo.14034913.

Full text
Abstract:
ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಹಾಗೂ ವೇದ ಉಪನಿಷತ್ತುಗಳಿಂದ ಪ್ರಭಾವಿತರಾದ ಲಿಂಗಯ್ಯನವರು ತತ್ವಪದಕಾರರಾಗಿ, ವೇದಾಂತಿಗಳಾಗಿ, ಒಬ್ಬ ಆದರ್ಶ ಶಿಕ್ಷಕರಾಗಿ, ಕವಿಗಳಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಆಧ್ಯಾತ್ಮಿಕ ಕಥೆಗಳು, ನಾಟಕ, ಜೀವನ ಚರಿತ್ರೆ, ಸಾವಿರಾರು ತತ್ವಪದಗಳನ್ನು ಬರೆದು, ಸಾಮಾಜಿಕ ವ್ಯವಸ್ಥೆಯಲ್ಲಿ ಬಡವರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಟವನ್ನು ಮಾಡುವುದರ ಮೂಲಕ ಜನರಲ್ಲಿ, ಶಾಂತಿ ಸಾಮರಸ್ಯದ ಬೆಳಕನ್ನು ಚೆಲ್ಲವುದರ ಕಡೆಗೆ ಮುಖ ಮಾಡಿ ಚಲಿಸಿದ್ದೆ ಅಪಾರ. ವೈದಿಕರನ್ನು ಮತ್ತು ವೈದಿಕತೆಯನ್ನು ತನ್ನ ಅಂತರಂಗದಿಂದಲೇ ಗ್ರಹಿಸಿ, ಅವರ ಆಚರಣೆಗಳನ್ನು ಪ್ರಶ್ನಿಸಿ, ಅವರು ತಮ್ಮ ತತ್ವಪದಗಳಲ್ಲಿ ವಿಶ್ಲೇಷಿಸಿರುವುದು ಗಮನಾರ್ಹ. ಹಾಗೆಯೇ ಸಮಾಜದಲ್ಲಿ ಅನೇಕ ರೀತಿಯ ಆಚರಣೆಗಳಲ್ಲಿ ಜಾತಿ, ಮತ, ಮಡಿ-
APA, Harvard, Vancouver, ISO, and other styles
22

ಪಂಪಾಪತಿ, ವಿ. "ಮಾರಾಟದ ಸರಕಾಗಿರುವ ಹೆಣ್ಣಿನ ದೇಹ: ವೇಶ್ಯಾವಾಟಿಕೆಯ ಹಿನ್ನೆಲೆ". International Journal of Advance Research in Multidisciplinary 2, № 3 (2024): 310–14. https://doi.org/10.5281/zenodo.13318294.

Full text
Abstract:
ಸಾವಿರಾರು ವರ್ಷಗಳಿಂದ ಗಂಡಸರು ಹೆಣ್ಣಿನ ಬದುಕನ್ನು ಹತ್ತಿಕ್ಕುತ್ತಲೇ ಬಂದಿದ್ದಾರೆ. ಮಕ್ಕಳನ್ನು ಹೆರಲು ಹೆಂಡತಿ ಬೇಕು, ದೈಹಿಕ ಸುಖ ಪಡೆಯಲು ವ್ಯಭಿಚಾರಿಣಿ ಬೇಕು, ಆಧ್ಯಾತ್ಮಿಕ ಸುಖ ಪಡೆಯಲು ಸ್ತ್ರೀ ಕಲಾವಿದೆ ಬೇಕು. ಪುರುಷನ ಜೀವನದಲ್ಲಿ ಮಹಿಳೆಯ ಸ್ಥಾನದ ಸಂದರ್ಭದಲ್ಲಿ ಇದು ವ್ಯಕ್ತವಾಗುತ್ತದೆ. ದೈಹಿಕ ಸುಖದ ತೃಪ್ತಿಗಾಗಿ ಹೆಣ್ಣನ್ನು ಮಾರಾಟದ ವಸ್ತುವನ್ನಾಗಿ ಪರಿವರ್ತಿಸುವ ಆಲೋಚನೆಯು ಸೋಮಾರಿ, ಸೋಮಾರಿ ಮತ್ತು ಭೋಗವಾದಿ ಸಮಾಜದ ಫಲವತ್ತಾದ ಮನಸ್ಸಿನಿಂದ ಬರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಸುಖಕರ, ನಿರ್ಮಲ ಜೀವನ ಸಾಧ್ಯವಾದರೆ ವೈವಾಹಿಕ ನೈತಿಕತೆಯಂತಹ ನಿರ್ಬಂಧಗಳನ್ನು ಹೇರಲಾಗುತ್ತಿತ್ತು. ನಂತರ, ಸೋಮಾರಿತನ ಮತ್ತು ಅವಲಂಬನೆಯ ಜೀವನದಲ್ಲಿ ಉದ್ಭವಿಸಿದ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಈ ಕೃತಕ ನಿರ್ಬಂಧಗಳನ್ನು ರಚಿಸಲಾಯಿತು, ಆದರೆ ನಂತ
APA, Harvard, Vancouver, ISO, and other styles
23

ಕವಿತಾ, ಆರ್., та ಜಮದಂಡಿ ರಾಜಶೇಖರ. "ಹಾಸ್ಯ ಲೋಕ ಸ್ವರ್ಗ ಸುಖ (ನಕ್ಕರೆ ಅದೇ ಸ್ವರ್ಗ)". International Journal of Philosophy and Languages (IJPL) 2, № 1 (2023): 48–52. https://doi.org/10.5281/zenodo.8170677.

Full text
Abstract:
<strong>ಉದ್ದೇಶ</strong>: <em>ಹಾಸ್ಯ ಬರೀ ಸಂತಸವನ್ನು ನೀಡುವುದಲ್ಲ. ಹಾಸ್ಯ ಪರಸ್ಪರ ಆತ್ಮೀಯತೆಯನ್ನು ಆಸ್ವಾದಿಸುವುದಕ್ಕೆ ಇರುವ ಒಂದು ಶಕ್ತಿ. ಹಣದಿಂದ ಒಬ್ಬ ವ್ಯಕ್ತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಹಾಸ್ಯದಿಂದ / ನಗುವಿನಿಂದ ವ್ಯಕ್ತಿಯನ್ನು ಗೆಲ್ಲಲು ಸಾಧ್ಯ ಮತ್ತು ದೃಢವಾಗಿ ನಿಲ್ಲಲು ಸಾಧ್ಯ.</em> <em>ಪ್ರೀತಿ </em><em>ಮತ್ತು</em> <em>ನಗು ಎಷ್ಟು ಚಿಕ್ಕ ಪದ. ಆದರೆ ಆ ಪದಗಳಿಗೆ ಇಡೀ ಜಗತ್ತನ್ನು ಗೆಲ್ಲುವ ಶಕ್ತಿ ಇದೆ. ನಗು ಇರುವ ಕಡೆ ಪ್ರೀತಿ ಬೆಳೆಯುತ್ತೆ. ಪ್ರೀತಿ ಬೆಳೆದ ಕಡೆ ನಗು ತುಂಬಿರುತ್ತೆ.</em> <em>ಹಾಸ್ಯ ಪ್ರಜ್ಞೆಯನ್ನು ಎಲ್ಲರನ್ನು ಮೂಡಿಸಿ ನಗು-ನಗುತ್ತಾ ಇರುವಂತೆ ಮಾಡುವುದೇ ಇದರ ಉದ್ದೇಶ. ಅಷ್ಟೇ ಅಲ್ಲ ಇತರರ ಗಮನವನ್ನು ಆಕರ್ಷಿಸುವುದು. ಸಾಮರಸ್ಯವನ್ನು ಸೃಷ್ಟಿಸುವುದು. ಸಂದೇಶವನ್ನು ಸ್ಮರಣಾರ್ಹವಾ
APA, Harvard, Vancouver, ISO, and other styles
24

ಲೋಹಿತ್, ಪಿ. "ಕನ್ನಡ ಸಾಹಿತ್ಯ ಪರಂಪರೆ ಮತ್ತು ಜನಪರ ಆಲೋಚನ ಕ್ರಮಗಳು". AKSHARASURYA JOURNAL 05, № 03 Special Issue (2024): 24 to 32. https://doi.org/10.5281/zenodo.14246380.

Full text
Abstract:
ಕನ್ನಡ ಸಾಹಿತ್ಯ ಚರಿತ್ರೆಗೆ ತನ್ನದೇ ಆದ ಶ್ರೇಷ್ಠತಮವಾದ ಸಾಹಿತ್ಯ ಪರಂಪರೆಯಿದೆ. ಜನಪರ ಆಲೋಚನಾ ಕ್ರಮಗಳನ್ನು ಹೊಂದಿದ್ದು ಜೀವನಾನುಭವದ ಗಟ್ಟಿ ಸೆಲೆಯೊಂದಿಗೆ ಈ ಮಣ್ಣಿನ ನಾಡಿಮಿಡಿತವನ್ನು ಅರಿಯುವ ಶಕ್ತಿ ಇದೆ. ಯಾವುದೇ ಭಾಷೆಯ ಸಾಹಿತ್ಯ ಚರಿತ್ರೆಗೆ ತನ್ನದೇ ಆದ ಸ್ವರೂಪ, ಸಂಸ್ಕೃತಿಯ ಮನೋಹಿರಿಮೆ ಹಾಗೂ ಜನಪರ ಆಲೋಚನ ಪರಂಪರೆ ಮತ್ತು ಚಹರೆಗಳಿರುವಂತೆ ಕನ್ನಡ ಸಾಹಿತ್ಯಕ್ಕೂ ಕೂಡ ತನ್ನದೇ ಸಾಮಾಜಿಕ ಆಯಾಮಗಳಿವೆ. ಒಂದು ನಾಗರಿಕತೆಯ ಪರಂಪರೆಯ ಪ್ರಭಾವಳಿಯಲ್ಲಿ ಬೆಳೆದ ಸಾಹಿತ್ಯ ತನ್ನ ಸಮಾಜದ ನಾಡಿಮಿಡಿತದೊಂದಿಗೆ ಅಗಾಧವಾದ ಜೀವನ ರಸಗಂಗೆಯೊಂದಿಗೆ ಅನಂತಕಾಲ ಪಯಣಿಸಿ; ಹಲವು ಕಾಲಘಟ್ಟದಲ್ಲಿ ಅನಂತ ಬದುಕಿಗೆ ಮಾರ್ಗದರ್ಶಿಯಾಗಿ ತನ್ನೊಡಲನ್ನು ತೆರೆದಿಡುವ ಕೆಲಸ ಮಾಡುತ್ತದೆ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಅಖಂಡ ಪರಂಪರೆ ಇದೆ. ವಿವಿಧ ಕಾಲ ಘಟ್ಟಗಳ
APA, Harvard, Vancouver, ISO, and other styles
25

ಬಸೀರಾಬಾನು, ನಿಡಗುಂದಿ. "ಆಯಗಾರಿಕೆ ಮತ್ತು ಹರಿಜನರು (ಛಲವಾದಿಗರು): ವಿಜಯಪುರ ಜಿಲ್ಲೆ ಅನುಲಕ್ಷಿಸಿ". AKSHARASURYA JOURNAL 06, № 05 (2025): 17 to 24. https://doi.org/10.5281/zenodo.15504155.

Full text
Abstract:
ಕೃಷಿ ಭಾರತೀಯ ಗ್ರಾಮಗಳ ಪ್ರಧಾನ ವೃತ್ತಿಯಾಗಿದ್ದು, ಜನಸಂಖ್ಯೆಯ ಬಹುತೇಕ ಭಾಗ ವರ್ಷವಿಡೀ ಕೃಷಿಯಲ್ಲಿಯೇ ತೊಡಗಿರುತ್ತದೆ. ಗ್ರಾಮ ಜೀವನವು ಪರಸ್ಪರಾವಲಂಬಿಯಾಗಿ, ಹಲವಾರು ವಿಶಿಷ್ಟ ಸೇವಾ, ವಿನಿಮಯ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳ ಸಂಗಮವಾಗಿದೆ. ರೈತರು ಒಕ್ಕಲುತನದ ಜೊತೆಗೆ-ಬಡಿಗೇರರು ಬಡಗಿತನ, ಕಮ್ಮಾರರು ಕಮ್ಮಾರಿಕೆ, ಕುಂಬಾರರು ಕುಂಬಾರಿಕೆ, ನೇಕಾರರು ನೇಕಾರಿಕೆ, ಮಡಿವಾಳರು ಬಟ್ಟೆಗಳನ್ನು ಶುಚಿಮಾಡಿಕೊಡುವುದು, ಚಮ್ಮಾರರು ಚಮ್ಮಾರಿಕೆ ಇಂತಹ ವಿವಿಧ ಕಾಯಕಗಳಲ್ಲಿ ನಿರತರಾಗಿದ್ದಾರೆ. ಹಣದ ಚಲಾವಣೆ ಅಧಿಕೃತವಾಗಿ ಆರಂಭವಾದ ಸಂದರ್ಭದಲ್ಲಿಯೂ ಸಹ, ಕೃಷಿಕರು ಬೆಳೆಯುವ ದವಸಧಾನ್ಯಗಳು ತಮಗೆ ಬೇಕಾದ ಬಟ್ಟೆ-ಬರೆ, ಪಾತ್ರೆ ಪಗಡೆ ಮತ್ತು ಸೇವೆಗೆ ಪ್ರತಿಫಲವಾಗಿ ನೀಡುವ ಪರಿಪಾಟ ಗ್ರಾಮೀಣ ಪ್ರದೇಶದಲ್ಲಿ ಬೆಳೆದುಬಂದಿದೆ. ಅಂತಹ ವಿಶಿಷ್ಟ ಸೇವೆಗಳನ್ನು ಸ
APA, Harvard, Vancouver, ISO, and other styles
26

ಪ್ರಸನ್ನಕುಮಾರ್, ಕೆ. "ಅಂಬೇಡ್ಕರ್‌ರವರ ಸಾಮಾಜಿಕ ಚಿಂತನೆಗಳು". AKSHARASURYA JOURNAL 05, № 06 (2025): 110 to 116. https://doi.org/10.5281/zenodo.14788784.

Full text
Abstract:
ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿ ಎಂದು ಕರೆಸಿಕೊಂಡ ಮಹಾನ್ ವ್ಯಕ್ತಿ. ಇವರು ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಇವರು ದೇಶಕ್ಕಾಗಿ ಮಾಡಿದ ಹೋರಾಟಗಳು ಎಂತಹ ದುರ್ಬಲ ವ್ಯಕ್ತಿಗಳನ್ನೂ ಸಹ ಎಚ್ಚರಿಸುತ್ತದೆ. ಇವರ ಕೊಡುಗೆಯನ್ನು ಭಾರತೀಯ ಜನತೆ ಎಂದಿಗೂ ಮರೆಯುವುದಿಲ್ಲ. ಸಂವಿಧಾನ ರಚನೆಗೆ ಮಾತ್ರವಲ್ಲದೇ ಅವರ ಸೇವೆ ಜನತೆಯನ್ನು ಜಾಗೃತರಾಗಿ ಮಾಡುವ ಸಾಧನವಾಗಿದೆ ಎನ್ನಬಹುದು.&nbsp;ಅಂಬೇಡ್ಕರ್ ಅವರು ವೈಚಾರಿಕತೆಯ ನೆಲೆಯಲ್ಲಿ ಈ ದೇಶವನ್ನು ಮುಂದೆ ತೆಗೆದುಕೊಂಡು ಹೋಗಬೇಕೆಂಬ ಮಹದಾಶಯವನ್ನು ಹೊಂದಿರುವ ಅಪರೂಪ ವ್ಯಕ್ತಿ. ಈ ಹಿನ್ನಲೆಯಲ್ಲಿಯೇ ಅವರು &ldquo;ಈ ದೇಶದಲ್ಲಿ ಗುಡಿ-ಗೋಪುರಗಳಿಗಿಂತ ಶಾಲೆಗಳು ತೆರೆದರೆ, ಆ ದೇಶ ಉದ್ದಾರವಾಗುತ್ತದೆ&rdquo; ಎಂಬ ನಿಲುವನ್ನು ತ
APA, Harvard, Vancouver, ISO, and other styles
27

ಡಾ., ಕೆ.ಎಲ್.ಎನ.ಮೂರ್ತಿ. "ಜೈನಮುನಿ ಏಲಾಚಾರ್ಯ ೧೦೮ ಶ್ರೀ ವಿದ್ಯಾನಂದರು". International Journal of Advance and Applied Research 4, № 31 (2023): 44–47. https://doi.org/10.5281/zenodo.8365708.

Full text
Abstract:
<strong>ಬಾಲ್ಯ</strong> <strong>ಜೀವನ</strong> <strong>;</strong> ಆಚಾರ್ಯ ಶಾಂತಿಸಾಗರರು ಹಾಗೂ ದೇಶಭೂಷಣರ ತರುವಾಯದಲ್ಲಿ ಜೈನ ಸಮಾಜಕ್ಕೆ ಹೊಸ ಆಯಾಮ ತಂದುಕೊಟ್ಟವರಲ್ಲಿ ಇವರು ಪ್ರಥಮ ಪಂಕ್ತಿಯಲ್ಲಿ ಕಾಣಿಸಿಕೊಳ್ಳುವುದುಂಟು. ಆಚಾರ್ಯ ವಿದ್ಯಾನಂದರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿಗೆ ಸೇರಿದ ಶೇಡಬಾಳ ಗ್ರಾಮದವರು. ತಂದೆ ಕಾಳಪ್ಪ ಜಿನಮಂದಿರದ ಅರ್ಚಕರು, ತಾಯಿ ಶ್ರೀಮತಿ ಸರಸ್ವತಿ. ಇವರ ಉದರದಿಂದ ೧೯೨೫ ಏಪ್ರಿಲ್ ೨೨ ರಂದು ಸಂಜೆ ೬.೪೫ ಕ್ಕೆ ತಾಯಿಯ ತವರುಮನೆ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿಗೆ ಸೇರಿದ &#39;ದಾನವಾಡ&#39;ದಲ್ಲಿ ಜನಿಸಿದರು. ಪಂಡಿತ ಮನೆತನವಾದುದರಿಂದ ಬಾಲಕನಿಗೆ ಶಾಸ್ತೊ&ccedil;&Atilde;ಕ್ತವಾಗಿ ಸುರೇಂದ್ರನೆAದು ನಾಮಕರಣ ಮಾಡಲಾಯಿತು. ಶೇಡಬಾಳದಲ್ಲಿ ಸದಾ ತ್ಯಾಗಿಗಳು ವಾಸ್ತವ್ಯದಲ್ಲಿರುತ್ತಿದ್ದರು. ದಿನಾಲು
APA, Harvard, Vancouver, ISO, and other styles
28

ಕುಮಾರ, ಹೆಚ್.ಸಿ. "ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು". AKSHARASURYA JOURNAL 06, № 04 (2025): 19 to 26. https://doi.org/10.5281/zenodo.15490817.

Full text
Abstract:
ವಚನ ಸಾಹಿತ್ಯವು ಕನ್ನಡ ಸಾಹಿತ್ಯದ ವಿಶಿಷ್ಟ ಮಾದರಿಯ ಸಾಹಿತ್ಯ ಪ್ರಕಾರವಾಗಿದ್ದು, ಕಾಯಕಕ್ಕೆ, ಮಾನವೀಯ ಸಂಬಂಧಗಳಿಗೆ ಹಾಗೂ ಸೃಜನಶೀಲತೆಗೆ ಪ್ರಮುಖ ಸ್ಥಾನವನ್ನು ನೀಡಿ ಗೌರವಿಸಿದೆ. ಶಿವಶರಣರು ತಮ್ಮ ದಿನನಿತ್ಯದ ನಡೆನುಡಿಗಳನ್ನೇ ವಚನಗಳೆಂಬ ಹಾಡುಗಬ್ಬವಾಗಿ ರಚಿಸಿದರು. ಬಸವಣ್ಣ, ಅಕ್ಕ, ಅಲ್ಲಮ ದಾಸಿಮಯ್ಯ, ಸಿದ್ದರಾಮರಂಥಹ ಅನೇಕ ವಚನಕಾರರರು ಕಾಯಕಕ್ಕೆ ಮಹತ್ವ ಕೊಟ್ಟು ಜನರಲ್ಲಿದ್ದ ಕೆಟ್ಟ ಆಲೋಚನೆಗಳನ್ನು ದೂರ ಮಾಡಿ ಹೊಸ ವಿಶ್ವಾಸದ ಹಾದಿಯನ್ನು ತೋರಿಸಿದರು.ಲಿಂಗ ತಾರತಮ್ಯ, ವರ್ಗ ಸಂಘರ್ಷ, ಜಾತಿ ಪದ್ಧತಿ ಅಸಮಾನತೆ ಮುಂತಾದ ವ್ಯವಸ್ಥೆಗಳ ವಿರುದ್ಧ ಹೋರಾಡಿ ಸಭ್ಯ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿ, ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆದರು. ನಡೆ ನುಡಿ ಶುದ್ಧವಾಗಿರಬೇಕು. ಮನುಷ್ಯನಿಗೆ, ಗಾಳಿ, ನೀರು, ಊಟ ಎಷ್ಟು ಮುಖ್ಯವೋ ಅಷ್ಟೇ
APA, Harvard, Vancouver, ISO, and other styles
29

ಪ್ರಕಾಶ. "ವಚನಕಾರ್ತಿಯರಲ್ಲಿ ಬಂಡಾಯದ ನೆಲೆಗಳು". AKSHARASURYA JOURNAL 06, № 04 (2025): 56 to 63. https://doi.org/10.5281/zenodo.15490899.

Full text
Abstract:
೧೨ನೇ ಶತಮಾನದ ವಚನಚಳವಳಿಯೇ ಚಾರಿತ್ರಿಕವಾಗಿ ಬಹುದೊಡ್ಡ ಪ್ರಮಾಣದ ಬಂಡಾಯಕ್ಕೆ ನೂತನ ಅಯಾಸವನ್ನು ನೀಡಿತು. ಸುಮಾರು ಮೂವತ್ತೆರಡು ಜನ ಶರಣೆಯರು ವಚನಗಳನ್ನು ರಚಿಸಿ ಶ್ರೇಷ್ಠ ಚಿಂತಕಿಯರಾದರು ಅವರು ಸಮಾಜದ ಡಾಂಭಿಕತೆಯ ವಿರುದ್ಧ ಪ್ರತಿಭಿಟಿಸಿದ ರೀತಿ ಅಗಮ್ಯವಾದುದು. ಲಿಂಗಭೇದ ನಿರಾಕರಣೆ, ಮನೋಪ್ರವೃತ್ತಿಗಳ ವಿರುದ್ಧ ಪ್ರತಿಭಟನೆ ಮಾಡಿರುವುದು ಅವರ ಜ್ಞಾನ, ಆತ್ಮಸ್ಥೈರ್ಯ ಹಾಗೂ ಅವರ ಒಳಗಿನ ಬಂಡಾಯ ಗುಣಕ್ಕೆ ಸಾಕ್ಷಿಯಾಗಿದೆ.ಪುರುಷ ಪ್ರಧಾನ ಸಮಾಜವು ತನ್ನ ಹಿತಾಶಕ್ತಿಯನ್ನು ಕಾಯ್ದುಕೊಂಡು ಮಹಿಳೆಯನ್ನು ಕತ್ತಲೆಯ ಕೂಪಕ್ಕೆ ತಳ್ಳಿತ್ತು ೧೨ನೇಯ ಶತಮಾನದ ಬಸವಾದಿ ಶರಣರು ಮಹಿಳೆಯರ ಬದುಕಿನಲ್ಲಿದ್ದ ಕತ್ತಲೆಯನ್ನು ಸರಿಸಿ ಬೆಳಕಿನ ಮಾರ್ಗವನ್ನು ದರ್ಶಿಸಿದರು ಮನುಷ್ಯನ ಸಣ್ಣತನವನ್ನು ಶಮನಗೊಳಿಸಿ ಸಮಾನತೆಯ ತಳಹದಿಯ ಮೇಲೆ ಮಾನವೀಯವಾದ ಸಮಸಂಸ್ಕೃತಿಯ ಸಮಾಜ
APA, Harvard, Vancouver, ISO, and other styles
30

ಜ್ಯೋತಿ, ಎನ್. ಭಟ್. "ಮಾನವೀಯ ಸಮಾಜ ರೂಪಿಸುವಲ್ಲಿ ವಚನಗಳ ಪಾತ್ರ". AKSHARASURYA JOURNAL 06, № 04 (2025): 97 to 106. https://doi.org/10.5281/zenodo.15490983.

Full text
Abstract:
ವಚನ ಸಾಹಿತ್ಯವು 12ನೇ ಶತಮಾನದ ಕನ್ನಡದ ವಿಶಿಷ್ಟ ಸಾಹಿತ್ಯಪ್ರಕಾರವಾಗಿದೆ. ಇದನ್ನು ಪಂಡಿತರಿಗೆ ಮೀಸಲಾಗಿದ್ದ ಸಾಹಿತ್ಯದ ಮೀರೆದು, ಸಾಮಾನ್ಯ ಜನರ ಬದುಕು, ಅನುಭವ, ತತ್ವಗಳನ್ನು ಸರಳವಾದ ಭಾಷೆಯಲ್ಲಿ ವ್ಯಾಖ್ಯಾನಿಸಿ ಸಮಾಜದಲ್ಲಿ ಜಾಗೃತಿ ತರಲು ಶರಣರು ಬಳಸಿದರು. ಮಾತನ್ನು ಮತಿಸಿದಾಗ ಮಾತ್ರ ವಚನವಾಗುವುದು ಎಂಬ ತತ್ವದೊಂದಿಗೆ, ವಚನಗಳು ಅನುಭವದ ಭಾವಗೀತೆಗಳಾಗಿವೆ. ಇದರಲ್ಲಿ ಧರ್ಮ, ನೀತಿ, ಜ್ಞಾನ, ಶ್ರಮ, ಸಮಾನತೆ, ಕಾಯಕ ಮತ್ತು ದಾಸೋಹದಂತಹ ಮಾನವ ಮೌಲ್ಯಗಳು ಸೊಗಸಾಗಿ ಪ್ರತಿಬಿಂಬಿಸುತ್ತವೆ. ಜಾತಿ, ಲಿಂಗ, ಧರ್ಮಗಳ ಭೇದವನ್ನು ತಿರಸ್ಕರಿಸಿ ಎಲ್ಲರಿಗೂ ಸಮಾನ ಸ್ಥಾನವಿರಬೇಕು ಎಂಬ ಸಂದೇಶ ನೀಡುತ್ತವೆ. ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮಪ್ರಭು, ಚನ್ನಬಸವಣ್ಣನಂತಹ ಶರಣರು ಸಮಾಜ ಸುಧಾರಣೆಗೆ ಮುಂಚೂಣಿಯಲ್ಲಿದ್ದರು. ಅವರು ಪುರಾಣಕಥೆಗಳನ್ನು ಬಳಸದೆ, ತ
APA, Harvard, Vancouver, ISO, and other styles
31

ಯಲ್ಲಪ್ಪ, ಬಸಪ್ಪ ಕಡಕೋಳ. "ಗಣ್ಯರು ಕಂಡಂತೆ ತಲ್ಲೂರು ರಾಯನಗೌಡರು". AKSHARASURYA 03, № 06 (2024): 143 to 152. https://doi.org/10.5281/zenodo.11127295.

Full text
Abstract:
&ldquo;ತಲ್ಲೂರು ರಾಯನಗೌಡರು ಸಮಗ್ರ ಅಧ್ಯಯನ&rdquo; ಬಹುಮುಖಿಯಾಗಿ ನಡೆಯುವಂತದ್ದು. ರಾಯನಗೌಡರು ಬಹುಮುಖ ವ್ಯಕ್ತಿತ್ವ ಹೊಂದಿದವರಾಗಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯಾ ನಂತರ ಕರ್ನಾಟಕ ಏಕೀಕರಣ ಜೊತೆಗೆ ಸಾಹಿತ್ಯ ಸಂಶೋಧನೆಯಲ್ಲಿ ಅವರ ವ್ಯಕ್ತಿತ್ವವನ್ನು ದಾಖಲೆಗಳ ಮೂಲಕ ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಅವರ ನಿಧನ 30-9-1982 ರ ನಂತರ ಅವರ ಅಳಿಯ ಅಂದರೆ ರಾಯನಗೌಡರ ಮಗಳಾದ ದೇವಿಕಾರಾಣಿಯವರ (ಸದ್ಯ ಬೆಂಗಳೂರಿನಲ್ಲಿ ಇದ್ದಾರೆ) ಅವರ ಪತಿ ದಿವಂಗತ ಪ್ರೊ. ಬಸನಗೌಡ. ಆರ್. ಪಾಟೀಲರು ತಮ್ಮ ಮಾವನವರ ವ್ಯಕ್ತಿತ್ವ ಕುರಿತು ಅಗ್ರಗಣ್ಯ ಸ್ವಾತಂತ್ರ್ಯ ಯೋಧ ತಲ್ಲೂರು ರಾಮನಗೌಡರು ಜೀವನ ದರ್ಶನ ಗ್ರಂಥ ಪ್ರಕಟಣೆಯ ಯೋಜನೆ ಹಾಕಿಕೊಂಡ ಸಂದರ್ಭದಲ್ಲಿ, ಅವರು ರಾಯನಗೌಡರ ಅತ್ಯಂತ ನಿಕಟವರ್ತಿಗಳನ್ನು ಭೇಟಿಯಾದರು. ಅವರಲ್ಲಿ ಬಹುತೇಕರು ಇಂ
APA, Harvard, Vancouver, ISO, and other styles
32

ನಾಗೇಶ್, ಎನ್. "೨೧ನೆಯ ಶತಮಾನದ ಕನ್ನಡ ನಾಟಕ ಮತ್ತು ರಂಗಭೂಮಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್‌". AKSHARASURYA JOURNAL 06, № 05 (2025): 114 to 120. https://doi.org/10.5281/zenodo.15504329.

Full text
Abstract:
ರಂಗಭೂಮಿಯೊಂದು ಜಾಗತೀಕ ಕಲಾಭಿವ್ಯಕ್ತಿ ಮಾಧ್ಯಮವಾಗಿದೆ, ನಾಟಕವು ಜಗತ್ತಿನ ಸಾಂಸ್ಕೃತಿಕ ಸೃಜನಶೀಲತೆಯ ಅಸ್ಮಿತೆಯ ಭಾಗವಾಗಿ ಲೋಕದರ್ಶನವನ್ನು ಒಡಮೂಡಿಸುವಲ್ಲಿ ಪ್ರಮುಖ ಸಾಹಿತ್ಯ ಪ್ರಕಾರವಾಗಿದೆ. ಶ್ರೇಷ್ಠ ದಾರ್ಶನಿಕರಾದ ಬುದ್ಧ, ಬಸವಣ್ಣ, ಡಾ. ಬಿ. ಆರ್. ಅಂಬೇಡ್ಕರ್&zwnj;, ಜ್ಯೋತಿ ಬಾ ಪುಲೆ, ಪೆರಿಯಾರ್, ನಾರಾಯಣಗುರುಗಳಂತಹ ಆದರ್ಶಪ್ರಾಯರಾದವರ ಜೀವನ ಆಧಾರಿತ ನಾಟಕಗಳನ್ನು ರಂಗರೂಪಕ್ಕೆ ತಂದು ಸಮುದಾಯಗಳತ್ತ ತೆಗೆದುಕೊಂಡು ಹೋಗುವ ಅನಿವಾರ್ಯತೆ ಈ ನಾಡಿಗಿದೆ.&nbsp;ಅಂಬೇಡ್ಕರ್&zwnj; ಅವರು ʼತಳಸಮುದಾಯಗಳಿಗೆ ಮಾತ್ರವಲ್ಲದೆ ಎಲ್ಲ ಸಮುದಾಯಗಳಿಗೂ ಅಕ್ಷರದ ಮೂಲಕ ವಿಮೋಚನೆ ಸಾಧ್ಯ&rsquo; ಎಂಬುದನ್ನು ತಿಳಿಸಿಕೊಟ್ಟರು. ಇವರ ಬದುಕು, ಬರಹ ಮತ್ತು ಭಾಷಣಗಳಲ್ಲಿನ ಚಿಂತನಾಧಾರೆಗಳನ್ನು ಕನ್ನಡ ನಾಟಕ ಮತ್ತು ರಂಗಭೂಮಿಗೆ ಅಳವಡಿಕೊಳ್ಳುವುದರ ತುರ್ತು
APA, Harvard, Vancouver, ISO, and other styles
33

ಸಿ., ನಾಗಭೂಷಣ. "ಗುಮ್ಮಳಾಪುರದ ಸಿದ್ಧಲಿಂಗ ಯತಿಗಳ ಶೂನ್ಯ ಸಂಪಾದನೆ: ಕೆಲವು ಟಿಪ್ಪಣಿಗಳು". AKSHARASURYA 06, № 02 (2025): 01 to 19. https://doi.org/10.5281/zenodo.15123743.

Full text
Abstract:
ಅಭಿನವ ಅಲ್ಲಮರೆಂದು ಖ್ಯಾತರಾದ ತೋಂಟದ ಸಿದ್ಧಲಿಂಗಯತಿಗಳು, ತಮ್ಮ ಶಿಷ್ಯ-ಪ್ರಶಿಷ್ಯ ಪರಂಪರೆಯ ಮೂಲಕ, ಗ್ರಂಥಸಂಪಾದನೆಯ ವಿಧಿವಿಧಾನಗಳನ್ನು ಅನ್ವಯಿಸಿ ವಚನಗಳನ್ನು ಸಂಕಲಿಸುವ ವ್ಯಾಖ್ಯಾನಿಸುವಂತಹ ಸಾಹಿತ್ಯಕ ಚಟುವಟಿಕೆಗಳನ್ನು ಕೈಗೊಂಡಿರುವುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ವಿಶಿಷ್ಟವಾದುದಾಗಿದೆ. ವಚನ ರಚನೆ ಹಾಗೂ ವಚನ ರಕ್ಷಣೆ, ವ್ಯಾಖ್ಯಾನ ಎರಡರಲ್ಲಿಯೂ ಸ್ಥಾನ ಪಡೆದಿದ್ದಾರೆ. ವಚನಗಳನ್ನು ಸಂಕಲಿಸುವ, ವ್ಯಾಖ್ಯಾನಿಸುವಂತಹ ಸಾಹಿತ್ಯಕ ಚಟುವಟಿಕೆಗಳನ್ನು ತಮ್ಮ ಶಿಷ್ಯ ಪ್ರಶಿಷ್ಯ ಪರಂಪರೆಯ ಮೂಲಕ ಅನುಷ್ಠಾನಗೊಳಿಸಿದರು. &ldquo;ಕಲ್ಯಾಣ ಕ್ರಾಂತಿಯ ವಿಪ್ಲವದ ನಂತರ ಅಳಿದುಳಿದ ವಚನ ಸಾಹಿತ್ಯವನ್ನು ಸಂರಕ್ಷಿಸುವ ಶೋಧಿಸುವ, ಸಂಕಲಿಸುವ, ವ್ಯಾಖ್ಯಾನಿಸುವ ಮೂಲಕ ಕಾಪಾಡಿಕೊಂಡು ಬರಲು 15 ಮತ್ತು 16 ನೇ ಶತಮಾನದ ಸಂಕಲನಕಾರರು ಕಾರಣರಾಗಿದ್ದಾರೆ.
APA, Harvard, Vancouver, ISO, and other styles
34

ರಾಮಕೃಷ್ಣಯ್ಯ, ಎಂ. "ಜನಪದ ಕಥೆಗಳಲ್ಲಿ ಮಹಿಳಾಲೋಕ". AKSHARASURYA 04, № 02 (2024): 33 to 41. https://doi.org/10.5281/zenodo.11525737.

Full text
Abstract:
ಜನಪದ ಕಥೆಗಳಲ್ಲಿ ಮಹಿಳಾ ಲೋಕ ತಲೆಮಾರಿನಿಂದ ತಲೆಮಾರಿಗೆ ಮೌಖಿಕವಾಗಿ ಹರಿದು ಬಂದಿರುವ ಕಥೆಯನ್ನು ನಮ್ಮಲ್ಲಿ &lsquo;ಅಜ್ಜಿಯ ಕಥೆ&rsquo;, &lsquo;ಅಡುಗೋಲಜ್ಜಿಯ&rsquo; ಕಥೆಯಂತಲೂ ಕರೆಯುವುದುಂಟು. ಕಥೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವಲ್ಲಿ ಪ್ರಧಾನ ಪಾತ್ರ ಅಜ್ಜಿಯರದೇ ಆಗಿರುತ್ತದೆ. ವಾಚಕ ಪರಂಪರೆಯ ಈ ಕಥೆಗಳು ಹರಿದು ಬರುವಾಗ ಸಾಹಿತ್ಯ ಪರಂಪರೆಗೆ ಹೋಗಿರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಕಥೆಗಳು ತಮ್ಮ ವಸ್ತುವಿನಲ್ಲಿ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸಗೊಳ್ಳಬಹುದು. ಆದರೆ ಒಂದೇ ಬಗೆಯ ಸಾಮಾಜಿಕ ಮತ್ತು ವೈಯಕ್ತಿಕ ಅಗತ್ಯಗಳು ಎಲ್ಲಾ ಕಡೆ ಇದ್ದೇ ಇರುತ್ತವೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿಯೂ ಹೆಣ್ಣು ಕೀಳು, ಅವಲಂಬಿತಳು, ಪುರುಷನಿಲ್ಲದೆ ಅವಳ ಜೀವನ ನಿರರ್ಥಕ ಎಂದೆಲ್ಲಾ ಭಾವಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಜನ
APA, Harvard, Vancouver, ISO, and other styles
35

ಮಲ್ಲಿಕಾರ್ಜುನ, ಎಂ.ಸಿ. "ಕೃಷಿ ವಿಜ್ಞಾನ ಸಾಹಿತ್ಯದ ಬೆಳವಣಿಗೆಯ ವಿಶ್ಲೇಷಣಾತ್ಮಕ ಅಧ್ಯಯನ". AKSHARASURYA JOURNAL 06, № 06 (2025): 32 to 46. https://doi.org/10.5281/zenodo.15580933.

Full text
Abstract:
ಕೃಷಿ ಸಾಹಿತ್ಯ ಬರಹಗಾರರನ್ನು ಹೇಗೆ ಗುರುತಿಸಿಕೊಳ್ಳುವುದಾದರೂ ಹೇಗೆ? ಕೃಷಿಯಲ್ಲಿ ತೊಡಗಿಸಿಕೊಂಡು ತಾನು ಕಂಡುಂಡ ಸತ್ಯವನ್ನು ಬರಹದಲ್ಲಿ ರೂಪದಲ್ಲಿ ಪ್ರಕಟಿಸಿದ ಸಾಹಿತ್ಯವನ್ನು ನೆಚ್ಚಬೇಕೇ? ಅಥವಾ ಭಾವನಾತ್ಮಕವಾಗಿ ಬರೆಯುವ ಬರವಣಿಗೆಯನ್ನು ನೆಚ್ಚಬೇಕೇ? ಕೃಷಿ ವಿಜ್ಞಾನಿಗಳು ಬರೆದ ಸಲಹೆ, ಮಾರ್ಗದರ್ಶನದ ಆಧುನಿಕ ಕೃಷಿ ಮಾಹಿತಿಯನ್ನೇ? ಸಂದೇಶಗಳ ಮಾದರಿಯಲ್ಲಿರುವ ಬರವಣಿಗೆಯನ್ನೇ? ನಾವು ಎಂತಹ ಕೃಷಿ ಸಾಹಿತ್ಯವನ್ನು ನಿರೀಕ್ಷಿಸಬಹುದು. ಇಂತಹ ಜಿಜ್ಞಾಸೆ ನಮ್ಮ ಮುಂದೆ ಕಾಡುತ್ತದೆ. ಕೃಷಿಕ ಬರೆದ ಬರವಣಿಗೆಯನ್ನೇ, ಕೃಷಿಯಲ್ಲಿ ಆಸಕ್ತಿ ಹೊಂದಿ ಆಳವಾಗಿ ಅಧ್ಯಯನ ನಿರತರಾದ ಬರಹಗಾರರನ್ನೇ, ಕೃಷಿ ಅನುವಾದಗಳನ್ನೇ, ಕೃಷಿಯೇತರರು ಬರೆದ ಬರವಣಿಗೆಯನ್ನೇ, ಕೃಷಿ ವಿಜ್ಞಾನಿಗಳು ಬರೆದ ಬರವಣಿಗೆಯನ್ನೇ, ಸಾಂಸ್ಥಿಕ ಪ್ರಕಟಣೆಗಳನ್ನೇ ಇವುಗಳಲ್ಲಿ ನಾವು ಯಾವುದನ್ನ
APA, Harvard, Vancouver, ISO, and other styles
36

ಹನುಮಂತಪ್ಪ, ಬ್ಯಾಡಗಿ. "ಬ್ಯಾಡಗಿ ತಾಲೂಕಿನ ಕೃಷಿ ಆಚರಣೆಗಳು". AKSHARASURYA 05, № 01 (2024): 50 to 58. https://doi.org/10.5281/zenodo.13870704.

Full text
Abstract:
ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಆದಿಮಾನವನು ಆರಂಭದಲ್ಲಿ ಗಡ್ಡೆ -ಗೆಣಸುಗಳನ್ನು ತಿನ್ನುತ್ತಾ ಒಂದೆಡೆ ನೆಲೆ ನಿಂತು ಕೃಷಿ ಆರಂಭಿಸಿದ. ಇದನ್ನು ಅನಾದಿಕಾಲದಿಂದಲೂ ನಮ್ಮ ಜನಪದರು ಮಾಡಿಕೊಂಡು ಬರುತ್ತಿದ್ದಾರೆ. ಕೃಷಿಯನ್ನು ನಮ್ಮ ಜನಪದರು ಹಬ್ಬದ ರೀತಿ ಆಚರಣೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಕೃಷಿಯನ್ನು ಮಾಡಲು ಅವಶ್ಯಕವಾಗಿ ಮಳೆಬೇಕು. ಮಳೆಯನ್ನು ಸಹ ಒಂದು ಆಚರಣೆಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಆಚರಣೆಯಲ್ಲಿ ನಮ್ಮ ಜನಪದರು ಮನೆಗಳಿಗೆ ಹೋಗಿ ಭಿಕ್ಷಾಟನೆ ಮಾಡಿಕೊಂಡು ಮಳೆ ಬರಲು ದೈವಕ್ಕೆ ಬೇಡಿಕೊಳ್ಳುತ್ತಾರೆ. ಅದೇ ರೀತಿ ಭಾದ್ರಪದ ಶುದ್ಧ ಅಷ್ಟಮಿಯಂದು ಜೋಕುಮಾರಸ್ವಾಮಿ ಹಬ್ಬವನ್ನು ಆಚರಿಸಿ ಮಳೆ ಬರಲು ಬೇಡಿಕೊಳ್ಳುತ್ತಾರೆ. ಭಾರತ ಸುಸಂಸೃತ ರಾಷ್ಟ್ರ. ಹಾಗಾಗಿ ಭಾರತೀಯರಿಗೆ ಪಂಚಾಂಗದ ಪ್ರಕಾರ ಹೊಸ ವರ್ಷ ಮಾರ್ಚ್-ಏಪ್ರಿಲ್ ತಿಂಗ
APA, Harvard, Vancouver, ISO, and other styles
37

ಲೋಹಿತ್, ಪಿ. "ಬಂಜಾರರ ಸಾಂಪ್ರದಾಯಿಕ ಸ್ಥಿತ್ಯಂತರ". AKSHARASURYA JOURNAL 05, № 04 (2024): 60 to 68. https://doi.org/10.5281/zenodo.14289830.

Full text
Abstract:
ಜನಪದ ಸಾಹಿತ್ಯವೂ ಆಕಾಶದಷ್ಟೇ ವಿಶಾಲ, ಸಾಗರದಷ್ಟೇ ಆಳ. ಅದರಲ್ಲಿ ಹಲವು ಪ್ರಕಾರಗಳಿವೆ. ಗಾದೆ, ಒಗಟು, ಒಡಪು, ಕಥೆ, ಲಾವಣಿ, ಕಥನಗೀತೆ ಪ್ರಮುಖವಾಗಿವೆ. ಇಡೀ ಜಗತ್ತಿನಲ್ಲಿ ಸಾಹಿತ್ಯದ ಮೂಲವನ್ನೇಲ್ಲಾ ಜನಪದ ಸಾಹಿತ್ಯದಲ್ಲಿ ಕಾಣಬಹುದು. ಹೀಗಾಗಿ ಬಿ.ಎಂ.ಶ್ರೀರವರು ಜನಪದ ಸಾಹಿತ್ಯವನ್ನು &lsquo;ಜನವಾಣಿ ಬೇರು, ಕವಿವಾಣಿ ಹೂವು&rsquo; ಎಂದುಕರೆದಿದ್ದಾರೆ. ಈ ನಾಡಿನ ಶ್ರಮ ಸಂಸ್ಕೃತಿಯ ಪ್ರತೀಕವಾದ ಬುಡಕಟ್ಟು ಸಮುದಾಯಕ್ಕೆ ಸೇರಿದ ಲಂಬಾಣಿಗರು ನಂಬಿಕೆಗೆ ಹೆಸರಾದವರು. ನಂಬಿದವರ ಪಾಲಿನ ಅಂಗರಕ್ಷಕರಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಾದರೂ, ಮತ್ತೊಬ್ಬರನ್ನು ಕಾಪಾಡುವ ಗುಣವನ್ನು ಹೊಂದಿದವರು. ತಮ್ಮ ಪ್ರಾಮಾಣಿಕತೆಯಿಂದ ಬದುಕುವ ಇವರು ಸಾಹಸಿಗಳು. ಏಕೆಂದರೆ ಇದೊಂದು ಅಖಿಲ ಭಾರತ ವ್ಯಾಪ್ತಿಯ ಅಲೆಮಾರಿ ಗುಂಪು. ಭಾರತದಲ್ಲಿ ಸುಮಾರು ೮೩೦ ಬುಡಕಟ್ಟುಗಳ
APA, Harvard, Vancouver, ISO, and other styles
38

ಲಕ್ಷ್ಮಿದೇವಿ, ಎನ್‌. "ಬಾಚಿಕಾಯಕದ ಕಾಳವ್ವೆಯ ವಚನದಲ್ಲಿ ಕಾಯಕ, ಮಾತು ಮತ್ತು ವ್ರತ ಪ್ರಜ್ಞೆ". AKSHARASURYA 04, № 03 (2024): 117 to 124. https://doi.org/10.5281/zenodo.12672873.

Full text
Abstract:
ವಚನಗಳಲ್ಲಿ ನಾವು ವಿಚಾರ ಸ್ವಾತಂತ್ರ್ಯದ ಪರಾಕಾಷ್ಟೆಯನ್ನು ಕಾಣುತ್ತೇವೆ. &ldquo;ಉದರ ನಿಮಿತ್ತಂ ಬಹುಕೃತ ವೇಷಂ&rdquo; ಎಂಬ ಮಾತೊಂದಿದೆ. ಹೊಟ್ಟೆ ಹೊರೆಯುವುದಕ್ಕಾಗಿ ಮಾನವ ಅನೇಕ ವೇಷಗಳನ್ನು ಕೈಗೊಳ್ಳುತ್ತಾನೆ. ಆದರೆ ಶರಣರು ಹೊಟ್ಟೆ ಹೊರೆಯುವ ಕಾಯಕದ ಮೂಲಕ ದಾಸೋಹ ಸಿದ್ಧಾಂತವನ್ನು ಅನುಭಾವದ ಮೂಲಕ ಸಮಾಜಕ್ಕೆ ಸಾರಿದವರು. ಅಸಮಾನತೆಯ ಸಮಾಜದಲ್ಲಿ ಶೂದ್ರರಿಗೆ, ಅಸ್ಪೃಶ್ಯರಿಗೆ, ಹೆಣ್ಣಿಗೆ ಸಮಾನ ಸ್ಥಾನಮಾನವನ್ನು ತಂದುಕೊಟ್ಟ ಕೀರ್ತಿ ಬಸವಣ್ಣನರಿಗೆ ಸಲ್ಲುತ್ತದೆ. ೧೨ನೇ ಶತಮಾನದ ಸಮಾಜದಲ್ಲಿ ಅಕ್ಷರ ಕ್ರಾಂತಿಯ ಮೂಲಕ ಸ್ತ್ರೀ-ಪುರುಷ ಸಮಾನತೆಯನ್ನು ಪಡೆದದ್ದು ಪವಾಡವೇ ಸರಿ. ಅದರಲ್ಲೂ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಮಹಿಳೆ ಅನುಭವ ಮಂಟಪದ ಗೋಷ್ಠಿಯಲ್ಲಿ ಪುರುಷನಷ್ಟೇ ಸಮಾನತೆಯನ್ನು ಕೈಗೊಂಡಿದ್ದು ಸಮಾಜಿಕ ಕ್ರಾಂತಿ ಎನ್ನಬಹುದು. ಅವರಲ್ಲಿ
APA, Harvard, Vancouver, ISO, and other styles
39

ಮಲರ್‌, ವಿಳಿ ಕೆ. "ಸಂಗಂ ಸಾಹಿತ್ಯ-ನಟ್ರಿಣೈ ಕೃತಿಯ ವಾಸ್ತವತೆಯ ಪರಿ". AKSHARASURYA JOURNAL 06, № 01 (2025): 01 to 11. https://doi.org/10.5281/zenodo.14961255.

Full text
Abstract:
ಸಂಗಂ ಸಾಹಿತ್ಯವು ಭಾರತೀಯ ಸಾಹಿತ್ಯ ಚರಿತ್ರೆಯಲ್ಲಿ ಪ್ರಾಚೀನತೆಯ ದೃಷ್ಟಿಯಿಂದ ಪ್ರಮುಖ ಹಾಗೂ ಅದ್ವಿತೀಯವಾಗಿದೆ. (ಅಗಂ) ಆಂತರಿಕ (ಪುಱಂ) ಬಾಹ್ಯ ವಿಷಯಗಳಿಗೆ ಸಂಬಂಧಿಸಿದಂತೆ ರಚಿತವಾಗಿರುವ ಈ ಕಾವ್ಯ (ಹಾಡು)ಗಳನ್ನು ಆ ಕಾಲದಲ್ಲಿದ್ದ ವಿವಿಧ ಕವಿಗಳು ತೊಲ್ಕಾಪ್ಪಿಯಂ ಕೃತಿಯಲ್ಲಿ ಸೂಚಿಸಿದ ನಿಯಮಗಳಿಗನುಸಾರವಾಗಿ ರಚಿಸಿದ್ದಾರೆ. ಪ್ರೇಮ, ವಿರಹ, ಕಾತುರ, ರಸಿಕತೆ, ದಾನಧರ್ಮ, ವೀರ, ಶೌರ್ಯ, ಮುಂತಾದ ವಿಷಯಗಳನ್ನೊಳಗೊಂಡಿವೆ.ಸಂಗಂ ಕಾವ್ಯಗಳೆಲ್ಲ ಮನುಷ್ಯನನ್ನೇ ಕೇಂದ್ರವಾಗಿಟ್ಟುಕೊಂಡು ರಚನೆಯಾಗಿವೆ. ಎರಡು ಸಾವಿರ ವರ್ಷಗಳ ಹಿಂದೆ ನಾಗರಿಕತೆಯ ಪ್ರಭಾವ ಅಷ್ಟಾಗಿ ಇಲ್ಲದ ಪ್ರಾರಂಭ ಕಾಲದಲ್ಲಿ ಹಸಿವು, ಕಾಮ, ವಿರಹ, ನಿಯಮ, ದಾನ, ಧರ್ಮ, ಮಾನವೀಯತೆ ಹಾಗೂ ಜೀವನವನ್ನು ಕಂಡ ಅನುಭವಿಸಿದ, ಅರಿತುಕೊಂಡ ವಿಚಾರಗಳೊಂದಿಗೆ ಆತನ ಕಲ್ಪನೆ, ಜೀವನ ಪ್ರೀತಿ, ಶ್ರದ್
APA, Harvard, Vancouver, ISO, and other styles
40

ರಮೇಶ್. "ನಿರಂಜನರ ಬರವಣಿಗೆಯಲ್ಲಿ ಮಾರ್ಕ್ಸ್‌ವಾದ". AKSHARASURYA 06, № 02 (2025): 75 to 83. https://doi.org/10.5281/zenodo.15124060.

Full text
Abstract:
ನಿರಂಜನರು ಸಾಹಿತ್ಯವಲಯದಲ್ಲಿ ಉಂಟುಮಾಡಿದ ಸಾಮಾಜಿಕ ಹೋರಾಟ ಬಹಳ ಮುಖ್ಯವಾದುದು. ಸಾಹಿತ್ಯ ಮತ್ತು ಬದುಕನ್ನು ಏಕ ರೀತಿಯಲ್ಲಿ ಕಂಡುಕೊಂಡವರು. ಸಾಮಾಜಿಕ ಬದ್ಧತೆಯನ್ನು ಕೊನೆಯವರೆಗೂ ಉಳಿಸಿಕೊಂಡವರು. ಬಾಲ್ಯದಲ್ಲಿ ಗಾಂಧಿವಾದಕ್ಕೆ ಮನಸೋತು, ಅನಂತರ ಸಮಾಜವಾದದತ್ತ ಒಲವು ಬೆಳಸಿಕೊಂಡರು. ಹರೆಯದಲ್ಲಿ ಸಮತಾವಾದದ ಸಿದ್ದಾಂತಗಳಿಂದ ಪ್ರಭಾವಿತರಾಗಿ ಮಾರ್ಕ್ಸ್&zwnj;ವಾದಿಯಾಗಿ ಕಮ್ಯೂನಿಸ್ಟ್ ಪಕ್ಷದ ಸಕ್ರಿಯ ಸದಸ್ಯರಾಗಿ ದುಡಿದವರು ನಿರಂಜನರು. ʼಸ್ವಾತಂತ್ರ್ಯ ಚಳವಳಿ, ಏಕೀಕರಣ ಚಳವಳಿ, ಹಿಂದೂ ಸಾಂಸ್ಕೃತಿಕ ಪುನರುಜ್ಜೀವನ ಚಳವಳಿಗಳು ಸೊಕ್ಕೇರಿ ಒಟ್ಟಿಗೆ ಕ್ರಿಯಾನಿರತವಾಗಿದ್ದಾಗ, ಮಾರ್ಕ್ಸ್&zwnj;ವಾದದಿಂದ ಆಕರ್ಷಿತವಾಗಿ, ಅಖಿಲಭಾರತ ಚಳವಳಿಯ ಒಂದು ಭಾಗವಾಗಿ ಕನ್ನಡ ಪ್ರಗತಿಶೀಲ ಚಳವಳಿಯು ಹುಟ್ಟಿಕೊಂಡಿತು.&nbsp;ಶಿವರಾಯರು ಬೆಳೆಬೆಳೆಯುತ್ತಾ ಗಾಂಧೀ ಪ
APA, Harvard, Vancouver, ISO, and other styles
41

ಮಂಜುಳಾಕ್ಷಿ, ಎಲ್. "ಮಹಿಳೆ ಸಮಾನತೆ ಮತ್ತು ಡಾ. ಬಿ. ಆರ್. ಅಂಬೇಡ್ಕರ್‌". AKSHARASURYA JOURNAL 06, № 05 (2025): 72 to 83. https://doi.org/10.5281/zenodo.15504265.

Full text
Abstract:
ಕಾಲಾಂತರದಿಂದಲೂ ಮಹಿಳೆ ಸಮಾಜದಲ್ಲಿ ತನ್ನ ಅಸ್ವತ್ವಕ್ಕಾಗಿ ಒಂದಲ್ಲ ಒಂದು ರೀತಿಯಲ್ಲಿ ಧ್ವನಿ ಎತ್ತುತ್ತಲೆ ಬಂದಿದ್ದಾಳೆ. ಇದನ್ನು ನಾವು ಜನಪದ ಹೆಣ್ಣು ಅದರ ಪ್ರಕಾರವಾದ ತ್ರಿಪದಿಯಲ್ಲಿ ತನ್ನ ನೋವನ್ನು ಮತ್ತು ಸಮಾಜದ ಕಟ್ಟುಪಾಡು ಕಂದಾಚಾರಗಳನ್ನು ಮೌನವಾಗಿಯೇ ವಿರೋಧಿಸುತ್ತಾ ಬಂದಿದ್ದಾಳೆ. ಸಾಹಿತ್ಯದಲ್ಲಿ ಅವಳು ತಾಯಿಯಾಗಿ ಅಕ್ಕ-ತಂಗಿ, ನಾದಿನಿ, ಹೆಂಡತಿ, ಅತ್ತೆ ಹೀಗೆ ಅನೇಕ ಪಾತ್ರಗಳಲ್ಲಿ ಪುರುಷನೊಂದಿಗೆ ಜೀವಿಸುತ್ತಾ ಮಾನ್ಯತೆ ಪಡೆದಿದ್ದು ಅವನಿಂದ ದೇವತೆಯಾಗಿ, ಪ್ರಿಯೆಯಾಗಿ, ಕುಟುಂಬದ ಕಣ್ಣಾಗಿ, ಅವನ ಅರ್ಧಾಂಗಿಯಾಗಿದ್ದರೂ ಕೂಡ ಸಮಾಜದಲ್ಲಿ ಅವಳಿಗೆ ಅಂದಲ್ಲ ಇಂದಿಗೂ ಎರಡನೇ ದರ್ಜೆಯ ಸ್ಥಾನವಿದೆ ಅವಳನ್ನು ಪುರುಷ ಸಮಾಜ ತನ್ನ ಬಂಧಿಯಲ್ಲೇ ಬಂಧಿಸಿ ಅವಳ ಮೇಲೆ ಕಟ್ಟುಪಾಡು, ಕಂದಾಚಾರ ಪದ್ಧತಿಗಳನ್ನು ಹೇರುತ್ತಾ ಸಮಾಜದಲ್ಲಿ ಅವಳಿ ಯಾವುದೇ ಸ
APA, Harvard, Vancouver, ISO, and other styles
42

ಗೀತಾ, ಎ.ಸಿ. "ಅಕ್ಕಮಹಾದೇವಿಯ ವಚನಗಳಲ್ಲಿ ಸ್ತ್ರೀ ಚಿಂತನೆಗಳು". AKSHARASURYA JOURNAL 06, № 04 (2025): 42 to 48. https://doi.org/10.5281/zenodo.15490848.

Full text
Abstract:
ಹನ್ನೆರಡನೆಯ ಶತಮಾನವೆಂದರೆ; ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಸಾಹಿತ್ಯಿಕ ಕ್ಷೇತ್ರದಲ್ಲಿ ಬದಲಾವಣೆಗೊಂಡ ಕಾಲ. ಅದನ್ನು ಕ್ರಾಂತಿ ಎಂದೇ ಕರೆಯಬೇಕಾಗುತ್ತದೆ. ಹಿಂದೆ ಸಮಾಜದಲ್ಲ್ಲಿದ್ದ ಅಸಮಾನತೆ, ಶೋಷಣೆಗಳನ್ನು ಕಂಡು ಅನುಭವಿಸಿದ್ದ ಶರಣ, ಶರಣೆಯರು ಮೇಲು-ಕೀಳು ಸ್ತ್ರೀ-ಪುರುಷ ಇತ್ಯಾದಿ ಭೇದ ರಹಿತವಾದ ವರ್ಗರಹಿತವಾದ ಸಮಾಜವನ್ನು ಕಟ್ಟಲು ಪ್ರಯತ್ನಿಸಿದರು. 12ನೇ ಶತಮಾನದ ಪ್ರಸಿದ್ಧ ವಚನಕಾರ್ತಿ ಅಕ್ಕಮಹಾದೇವಿ. ಬಸವಣ್ಣನವರ ಸಮಕಾಲೀನಳಾಗಿ ಬದುಕಿದಳು. ಈಕೆ ಶಿವಶರಣೆಯಾಗಿ, ವಚನಕಾರ್ತಿಯಾಗಿ, ಚೆನ್ನಮಲ್ಲಿಕಾರ್ಜುನನ ಭಕ್ತೆಯಾಗಿ ಪ್ರಸಿದ್ಧಳಾದವಳು. ಈಕೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿ ಎಂಬ ಗ್ರಾಮದಲ್ಲಿ ನಿರ್ಮಲ ಮತ್ತು ಸುಮತಿಯರ ಮಗಳಾಗಿ ಜನಿಸಿದಳು. ಬಾಲ್ಯದಲ್ಲೇ ಶಿವಭಕ್ತಿಯನ್ನು ಹೊಂದಿದ್ದ ಈಕೆಗೆ ಶಿವಪೂಜೆ ಶಿವಧ್ಯಾನಗಳೇ
APA, Harvard, Vancouver, ISO, and other styles
43

ಕಿರಣ, ವಲ್ಲೇಪುರೆ. "ಶಂಭುಲಿಂಗ ವಾಲ್ದೊಡ್ಡಿ ಹಾಯಿಕುಗಳು: ಸಹಬಾಳ್ವೆಯ ಆಶಯ". AKSHARASURYA JOURNAL 06, № 03 (2025): 23 to 28. https://doi.org/10.5281/zenodo.15343783.

Full text
Abstract:
ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಜಪಾನಿ ಮೂಲಕ ಕನ್ನಡಕ್ಕೆ ಪರಿಚಯವಾದ &lsquo;ಹಾಯಿಕು&rsquo; ಕನ್ನಡದ ಪ್ರಮುಖ ಕಾವ್ಯ ಪ್ರಕಾರವಾಗಿ ಬೆಳೆದು ಬರುತ್ತಿದೆ. ಕನ್ನಡದ ತ್ರಿಪದಿಯಂತೆಯೆ &lsquo;ಹಾಯಿಕು&rsquo; ಮೂರು ಸಾಲಿನ ಪದ್ಯವಾಗಿದೆ. ಕನ್ನಡದ ಹಿರಿಯ ಲೇಖಕರಾದ ಶಂಭುಲಿಂಗ ವಾಲ್ದೊಡ್ಡಿ ಅವರು &lsquo;ಹೊಂಗನಸಿನ ಹಾಯಿಕುಗಳು&rsquo;, &lsquo;ಹೊಸ ದಿಗಂತದ ಹಾಯಿಕುಗಳು&rsquo;, &lsquo;ವೈಶಾಖದ ಹಾಯಿಕುಗಳು&rsquo; ಎಂಬ ಹಾಯಿಕು ಸಂಕಲನಗಳನ್ನು ರಚಿಸಿದ್ದಾರೆ. ಪ್ರಸ್ತುತ ಲೇಖನದಲ್ಲಿ ಸಂಭುಲಿಂಗ ವಾಲ್ದೊಡ್ಡಿ ಅವರ ಹಾಯಿಕುಗಳಲ್ಲಿ ವ್ಯಕ್ತಗೊಂಡ ಸಹಬಾಳ್ವೆಯ ಆಶಯವನ್ನು ವಿಶ್ಲೇಷಿಸಲಾಗಿದೆ.&nbsp;
APA, Harvard, Vancouver, ISO, and other styles
44

ಚಿಕ್ಕಮಗಳೂರು, ಗಣೇಶ. "ವರ್ತಮಾನದ ಕನ್ನಡಿಯಲ್ಲಿ ಕನಕ ದರ್ಶನ". AKSHARASURYA JOURNAL 04, № 05 Special Issue (2024): 06 to 16. https://doi.org/10.5281/zenodo.13294272.

Full text
Abstract:
ಭಕ್ತಿಯ ಖಾಸಗಿ ವಿಚಾರಗಳನ್ನು ಸಮಾಜ ಸುಧಾರಣೆಗೆ ಮಾಧ್ಯಮವಾಗಿ ಬಳಸಿಕೊಂಡ ಕನಕದಾಸರು ಕನ್ನಡ ನಾಡಿನ ಅನನ್ಯ ಭಕ್ತಿ ಕವಿ. ಅವರು ವಾಸಿಸುತ್ತಿದ್ದ ಮಧ್ಯಕಾಲೀನ ಅವಧಿಯು ಸಂಕೀರ್ಣವಾಗಿತ್ತು. ಇದು ಧರ್ಮ ಮತ್ತು ಆಡಳಿತದ ನಡುವಿನ ತೀವ್ರ ಸಂಘರ್ಷದ ಅವಧಿ. ಅಲ್ಲಿ ಅವರು ಹರಿದಾಸ ಚಳವಳಿಯ ಮುಖವಾಣಿಯಾಗಿ ನಮ್ಮನ್ನು ಭೇಟಿಯಾಗುತ್ತಾರೆ. ಆ ಚಳವಳಿಯ ತತ್ತ್ವಶಾಸ್ತ್ರವು ಮೇಲ್ನೋಟಕ್ಕೆ ಉದಾರವಾದದ್ದಾಗಿತ್ತು. ಆಂತರಿಕವಾಗಿ ದೋಷಯುಕ್ತ, ತಾರತಮ್ಯ ಮತ್ತು ಅಸಮ ನೆಲ. ಕನಕನೂ ತನ್ನ ಹಿನ್ನಲೆಯಲ್ಲಿ ಇಟ್ಟುಕೊಂಡಿರುವ ಎಲ್ಲ ಸೈದ್ಧಾಂತಿಕ ಗೊಂದಲಗಳಲ್ಲಿ ಸಿಲುಕಿಕೊಳ್ಳುತ್ತಾನೆ. ವ್ಯಾಸಕೂಟ ಮತ್ತು ದಾಸಕೂಟಗಳು ತಾತ್ವಿಕ ಸಂಘರ್ಷದ ನಡುವೆ ತಮ್ಮನ್ನು ತಾವು ಪ್ರತಿಪಾದಿಸಲು ಹೆಣಗಾಡುತ್ತವೆ.&nbsp; ಚಳವಳಿಯ ಪರಿಸರದಲ್ಲೂ ಅಪಾರ ಒಂಟಿತನ ಅನುಭವಿಸಿದ ಕವಿ. ಇದಕ್ಕೆ ಕಾರಣವೆ
APA, Harvard, Vancouver, ISO, and other styles
45

ನಿಕಿತಾ, ರಮೇಶ ಚನ್ನಾಳೆ, та ಚಿಂತಾಮಣಿ ಮಹೇಶ. "ಕನ್ನಡ ಲಲಿತ ಪ್ರಬಂಧಗಳಲ್ಲಿ ಮಾನವೀಯ ಮೌಲ್ಯಗಳು". Aksharasurya Journal 05, № 05 (2025): 121 to 127. https://doi.org/10.5281/zenodo.14619654.

Full text
Abstract:
ಕನ್ನಡ ಸಾಹಿತ್ಯದ ಅನೇಕ ಬರಹಗಳು ಸಮಾನತೆ, ಸ್ತ್ರೀವಾದ, ವಾಸ್ತವತೆ, ಸಮಾಜಿಕ ದೃಷ್ಟಿಕೋನ, ಕಲ್ಪನೆ ಹೀಗೆ ಅನೇಕ ವಿಷಯಗಳ ಬಗೆಗೆ ಬೆಳಕು ಚಲ್ಲಿವೆ. ಅದೇ ರೀತಿಯಲ್ಲಿ ಲಲಿತ ಪ್ರಬಂಧಗಳು ಕೂಡ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮವನ್ನು ತಂದುಕೊಟ್ಟಿವೆ. ಲಲಿತ ಪ್ರಬಂಧಗಳು ಕೂಡ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿವೆ. ಮೌಲ್ಯಗಳಿಲ್ಲದೆ ಇದ್ದರೆ ಅದು ಸಾಹಿತ್ಯವಲ್ಲ. ಹಾಗಾಗಿ ಯಾವುದೇ ಸಾಹಿತ್ಯ ಮಾನವೀಯ ಮೌಲ್ಯಗಳು ಪ್ರಮುಖವಾಗಿ ಒಳಗೊಂಡಿರಲೇಬೇಕು. ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ ಎ.ಎನ್. ಮೂರ್ತಿರಾವ್ ಅವರ ಪ್ರಬಂಧಗಳು ಮತ್ತು ಭುವನೇಶ್ವರಿ ಹೆಗಡೆಯವರ ಲಲಿತ ಪ್ರಬಂಧಗಳು ಮಾನವೀಯ ಮೌಲ್ಯಗಳನ್ನು ಬಿತ್ತರಿಸಿವೆ. ಧಾರ್ಮಿಕ, ಸಮಾಜಿಕ, ಮಾನವೀಯ ಮೌಲ್ಯಗಳು ಬದುಕಿನ ಮೆಟ್ಟಿಲೇರಲು ಮೌಲ್ಯಗಳು ಪ್ರಮುಖವಾಗಿವೆ. ಮೌಲ್ಯಗಳು ಉತ್ತಮ ಸಮಾಜವನ
APA, Harvard, Vancouver, ISO, and other styles
46

ಕಮಲಾ, ಹಂಪನಾ, та ಎಂ. ಭೈರಪ್ಪ ಕುಪ್ಪನಹಳ್ಳಿ. "ಜೈನ ದೃಷ್ಟಿಯಲ್ಲಿ ಸ್ತ್ರೀ". AKSHARASURYA 03, № 06 (2024): 01 to 18. https://doi.org/10.5281/zenodo.11126790.

Full text
Abstract:
ಕನ್ನಡ ಮಹಿಳಾ ಸಾಹಿತ್ಯ ಜಗತ್ತಿನಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದವರಲ್ಲಿ ಡಾ.ಕಮಲಾ ಹಂಪನಾ ಅವರು ಪ್ರಮುಖರಾಗಿದ್ದಾರೆ. ಕಥೆ, ಕಾವ್ಯ, ನಾಟಕ, ಕಾದಂಬರಿ ಕ್ಷೇತ್ರಗಳಲ್ಲಿ ಗಣನೀಯ ಕೃಷಿ ಮಾಡಿರುವ ಹಲವಾರು ಲೇಖಕಿಯರು ನಮಗೆ ಸಿಗುತ್ತಾರೆ. ಆದರೆ ಸಂಶೋಧನೆ, ಸಂಪಾದನೆಯಂಥ ವಿದ್ವತ್ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಮಹತ್ತರವಾದ ಕಾಣ್ಕೆಯನ್ನು ನೀಡಿದ ಲೇಖಕಿಯರು ಅಪರೂಪ. ಅಂತಹ ಅಪರೂಪದ ಸಂಶೋಧಕಿಯರಲ್ಲಿ ಕಮಲಾ ಹಂಪನಾ ಅವರು ಅಗ್ರಗಣ್ಯರಾಗಿ ಕಾಣುತ್ತಾರೆ. ಸಾಮಾಜಿಕ ತಾರತಮ್ಮ ಹಾಗೂ ಲಿಂಗ ತಾರತಮ್ಯಗಳ ನಡುವೆ ಹಲವಾರು ಸವಾಲುಗಳನ್ನು ದಾಟಿಕೊಂಡು ಅಧ್ಯಯನ ನಡೆಸಿ, ಬೋಧನೆ-ಸಂಶೋಧನೆಯ ಬೇಸಾಯದಲ್ಲಿ ಗುರುತರವಾದ ಸಾಧನೆಗೈದು ಮಾದರಿ ಮಹಿಳೆ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಡಾ.ಕಮಲಾ ಹಂಪನಾ ಅವರು ಬೆಂಗಳೂರು ಜಿಲ್ಲೆ ದೇವನಹಳ್ಳಿಯಲ್ಲಿ ೧
APA, Harvard, Vancouver, ISO, and other styles
47

ಲೋಕೇಶ, ಆರ್. "ಮೈಸೂರು ಅರಸರ ಕಾಲದ ಸಮ-ತತ್ತ್ವದ ಶಿಕ್ಷಣದ ವ್ಯವಸ್ಥೆ". AKSHARASURYA JOURNAL 03, № 04. SPECIAL ISSUE. (2024): 74 to 82. https://doi.org/10.5281/zenodo.10929729.

Full text
Abstract:
ನಮ್ಮ ನಾಡಿನ ಪ್ರಾಚಿನ ಪರಂಪರೆ ಹಾಗೂ ಸನಾತನವೆನಿಸಿದ ಭಾರತೀಯ ಜ್ಞಾನ ಸಂಪತ್ತು ಮತ್ತು ಚಿಂತನಶೀಲತೆ ರಾಷ್ಟ್ರೀಯ ಶಿಕ್ಷಣ ನೀತಿಯ ದಾರಿದೀಪವಾಗಿದೆ. ಜ್ಞಾನ, ವಿವೇಕ ಹಾಗೂ ಸತ್ಯ ಭಾರತೀಯ ದಾರ್ಶನಿಕ ಚಿಂತನೆಯ ಅತ್ಯುನ್ನತ ಸಾಧನೆಯ ಗುರಿಗಳಾಗಿದ್ದವು. ಆತ್ಮಸಾಕ್ಷಾತ್ಕಾರ ಮತ್ತು ಆತ್ಮವಿಮೋಚನೆ ಶಿಕ್ಷಣದ ಗುರಿಯಾಗಿತ್ತು. ಅತ್ಯುತ್ತಮ ಮಟ್ಟದ ಬಹುಶಿಸ್ತೀಯ ಅಧ್ಯಯನಗಳು ಜ್ಞಾನದ ಗಡಿಗಳನ್ನು ವಿಸ್ತರಿಸಿ ಎಲ್ಲೆಡೆಯಿಂದಲೂ ಜ್ಞಾನ ಸ್ವೀಕಾರ ಕಾರ್ಯ ನಡೆಯುತ್ತಲೇ ಇತ್ತು. ಇದು ಕನ್ನಡ ನಾಡಿಗೂ ಮಾದರಿಯಾಗಿ ಕನ್ನಡ ನಾಡು ಕೂಡ ಯಾವುದಕ್ಕೂ ಹಿಂದೆ ಬೀಳದೆ ತನ್ನದೇ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳುತ್ತಲೇ ಮಾದರಿ ರಾಜ್ಯವಾಗಿ ಚರಿತ್ರೆಯಲ್ಲಿ ಗುರುತಾಗತೊಡಗಿತು. ಭಾರತೀಯ ಭವ್ಯ ಪರಂಪರೆಯಲ್ಲಿ ಕನ್ನಡ ನಾಡಿನ ಹಿರಿಮೆ ದೇಸೀ ತನದಿಂದಲೇ ಹೆಸರಾದುದು. ಅದು ಬ
APA, Harvard, Vancouver, ISO, and other styles
48

ಸಂತೋಷ್‌, ಕುಮಾರ್‌ ಆರ್‌.ಎಂ. "ಮಂಕುತಿಮ್ಮನ ಕಗ್ಗ: ಆದರ್ಶ ಮತ್ತು ನೈತಿಕ ಮೌಲ್ಯಗಳ ಸಮನ್ವಯ". AKSHARASURYA 06, № 02 (2025): 31 to 44. https://doi.org/10.5281/zenodo.15123973.

Full text
Abstract:
ಡಿ.ವಿ.ಜಿ.ಯವರ ʼಮಂಕುತಿಮ್ಮನ ಕಗ್ಗ&rsquo;ವು ಕನ್ನಡ ಸಾಹಿತ್ಯದ ಅನನ್ಯ ಪಂಕ್ತಿಯು, ತತ್ವಪೂರ್ಣವೂ, ಜೀವನಕ್ಕೆ ದಾರಿದೀಪವಾಗಿದೆ. ಡಿ.ವಿ.ಜಿ ಅವರು ರಚಿಸಿದ ಈ ಕೇವಲ ಕಾವ್ಯಕೃತಿಯಲ್ಲ, ಜೀವನದ ಸಾರ್ಥಕತೆಯನ್ನು ಅರಿತುಕೊಳ್ಳಲು ಮಾರ್ಗದರ್ಶನ ನೀಡುವ ತತ್ತ್ವಚಿಂತನೆಯ ಗ್ರಂಥವಾಗಿದೆ. ಮಂಕುತಿಮ್ಮನ ಕಗ್ಗದಲ್ಲಿ ವ್ಯಕ್ತವಾಗಿರುವ ಚಿಂತನಶೀಲತೆ, ತಾತ್ತ್ವಿಕ ದೃಷ್ಟಿಕೋನ ಹಾಗೂ ಆಧ್ಯಾತ್ಮಿಕ ಅರಿವು, ಮಾನವ ಮೌಲ್ಯಗಳನ್ನು ಪ್ರತಿಪಾದಿಸುವ ಸಿದ್ಧಾಂತಗಳಾಗಿವೆ.ಈ ಕಾವ್ಯಕೃತಿಯಲ್ಲಿ ಜೀವನದ ನೈಜತೆಯನ್ನು ಮನಗಾಣಿಸುವಂತೆ ಮಾಡುವ ತತ್ವೋಪದೇಶಗಳು ಸಂಕಲಿತವಾಗಿವೆ. ಜೀವನದಲ್ಲಿ ಏರಿಳಿತಗಳು ಸಹಜ, ಆದರೆ ಮಾನವನ ಹೊಣೆಗಾರಿಕೆ, ಶ್ರದ್ಧೆ, ತಾಳ್ಮೆ ಮತ್ತು ನೈತಿಕತೆ ಅವಶ್ಯಕವೆಂಬ ವಿಚಾರವನ್ನು ಕವಿ ಬಹಳ ಸರಳ ಹಾಗೂ ಗಂಭೀರ ರೀತಿಯಲ್ಲಿ ಪ್ರತಿಪಾದಿಸುತ್ತಾರೆ. ಆಧ್ಯಾ
APA, Harvard, Vancouver, ISO, and other styles
49

ಎನ್, ಡಾ ಗಂಗಾಧರ ರೆಡ್ಡಿ, ಡಾ ಲೋಕೇಶ ಎಂ.ಯು та ಶ್ವೇತಾ ಜಿ. "ಗ್ರಾಮೀಣ ಜನರ ಸಾಮಾಜಿಕ ಜೀವನದ ಮೇಲೆ ಮರಳು ಗಣಿಗಾರಿಕೆಯ ಪ್ರಭಾವ". International Journal of Kannada Research 11, № 2 (2025): 123–31. https://doi.org/10.22271/24545813.2025.v11.i2b.1117.

Full text
APA, Harvard, Vancouver, ISO, and other styles
50

ಭೀಮಣ್ಣ, ಎಚ್. "ಕಾದಂಬರಿ ಸಾಹಿತ್ಯ: ಒಂದು ಅವಲೋಕನ". AKSHARASURYA 05, № 02 (2024): 131 to 134. https://doi.org/10.5281/zenodo.14035373.

Full text
Abstract:
ಇಂಕು, ಕಾಗದ, ಸಾಕಷ್ಟು ವಿರಾಮ ಮತ್ತು ತಾಳ್ಮೆಗಳಿದ್ದರೆ ಯಾರು ಬೇಕಾದರೂ ಕಾದಂಬರಿ ಬರೆಯಬಹುದು ಎಂದು ಅಧ್ಯಯನದಿಂದ ತಿಳಿದು ಬರುತ್ತದೆ. ಕಾದಂಬರಿ ಸಾಹಿತ್ಯವನ್ನು &ldquo;ಕರತಲ ರಂಗಭೂಮಿ&rdquo; ಎಂದು ಹಿಂದಿನ ಕಾಲದಿಂದಲೂ ಕರೆದುಕೊಂಡು ಬರಲಾಗುತ್ತಿದೆ. ಕಾದಂಬರಿಯಲ್ಲಿ ಪಾತ್ರಗಳ ಸಂಭಾಷಣೆ, ಶೈಲಿ, ಜೀವನದ ಬಗೆಗಿನ ಒಂದು ನಿಶ್ಚಿತ ದೃಷ್ಟಿಕೋನ, ಬದುಕಿನ ಹಲವು ಸಮಸ್ಯೆಗಳು ನಿರೂಪಿಸಲ್ಪಟ್ಟಿರುತ್ತವೆ.
APA, Harvard, Vancouver, ISO, and other styles
We offer discounts on all premium plans for authors whose works are included in thematic literature selections. Contact us to get a unique promo code!