To see the other types of publications on this topic, follow the link: ದಲಿತರು.

Journal articles on the topic 'ದಲಿತರು'

Create a spot-on reference in APA, MLA, Chicago, Harvard, and other styles

Select a source type:

Consult the top 36 journal articles for your research on the topic 'ದಲಿತರು.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Browse journal articles on a wide variety of disciplines and organise your bibliography correctly.

1

ಎಸ್., ಎಸ್. ಹಿರೇಮಠ, та ಭೈರಪ್ಪ ಎಂ. "ಕರ್ನಾಟಕದಲ್ಲಿ ದಲಿತರು". AKSHARASURYA JOURNAL 04, № 04 (2024): 01 to 44. https://doi.org/10.5281/zenodo.13283983.

Full text
Abstract:
<strong>ನೆಲಮೂಲ ಸಂಸ್ಕೃತಿಯ ಮಹಾಶೋಧಕರಾಗಿ ಪ್ರೊ.ಎಸ್.ಎಸ್.ಹಿರೇಮಠರ ಕಾಯಕ</strong> ನೆಲಮೂಲ ಸಂಸ್ಕೃತಿಯ ಜಾಡಿನಲ್ಲಿ ಸಂಶೋಧನೆಯನ್ನು ಕೈಗೊಂಡು ಬಹುತ್ವ ಭಾರತ ಹಾಗೂ ದಲಿತ ಸಂಸ್ಕೃತಿಯ ವಿರಾಟ್ ಸ್ವರೂಪವನ್ನು ಅನಾವರಣ ಮಾಡಿದ ಮಹಾಶೋಧಕರಲ್ಲಿ ಪ್ರೊ.ಎಸ್.ಎಸ್.ಹಿರೇಮಠ ಅವರು ಪ್ರಾತಃಸ್ಮರಣೀಯರಾಗಿದ್ದಾರೆ. ತಮ್ಮ ಅಧ್ಯಾಪನ ಮತ್ತು ಸಂಘಟನಾ ಕಾಯಕದ ಮೂಲಕ ಜನಪರ ಮನಸುಗಳನ್ನು ರೂಪಿಸಿದ ಕ್ರಾಂತಿಕಾರಿಯೂ ಆಗಿದ್ದ ಹಿರೇಮಠ ಮೇಷ್ಟ್ರು ಸಂಶೋಧನಾ ಕಾಯಕದ ಮೂಲಕ ಸೀಮಿತ ಬೌದ್ಧಿಕ ಹಾಗೂ ಸಾಂಸ್ಕೃತಿಕ ಸೀಮೆಗಳನ್ನು ಬಹುವಾಗಿ ವಿಸ್ತರಿಸಿಕೊಟ್ಟಿದ್ದಾರೆ. ಆದಿಮ ನೆಲೆಯಿಂದ ಹಿಡಿದು ಆಧುನಿಕ ನೆಲೆಯ ಸಾಂಸ್ಕೃತಿಕ ಸಂಗತಿಗಳ ವರೆಗೂ ಆಳವಾದ ಸಂಶೋಧನೆಯನ್ನು ಕೈಗೊಂಡ ಹಿರೇಮಠರು ಲೋಕಮುಖೀ ಒಳಹರವಿನ ಅನೇಕ ಸೂಕ್ಷ್ಮಗಳನ್ನು ನಿಕಷಕ್ಕೆ ಒಡ್ಡಿದ್ದಾರೆ; ನೆಲದರಿವಿನ ಸೀಮ
APA, Harvard, Vancouver, ISO, and other styles
2

ವಿಜಯಲಕ್ಷ್ಮಿ, ದತ್ತಾತ್ರೇಯ ದೊಡ್ಡಮನಿ. "ಯಾಜ್ಞಸೇನಿಯ ಆತ್ಮಕಥನ: ದಲಿತತ್ವದ ನೆಲೆಗಳು". AKSHARASURYA JOURNAL 04, № 06 (2024): 135 to 142. https://doi.org/10.5281/zenodo.13725621.

Full text
Abstract:
ದಲಿತರು ಎಂದರೆ ಶೋಷಿತರು ಎನ್ನುವುದು ಕೇವಲ ಹಾಳೆಗಳಲ್ಲಿ, ಅಕ್ಷರ ರೂಪದಲ್ಲಿ ಮಾತ್ರ ಉಳಿದುಕೊಂಡಿದೆ. ಸಮಾಜದಲ್ಲಿ ಅದು ರೂಢಿಗೆ ಬಂದೇ ಇಲ್ಲ. ದಲಿತ ಎಂದರೆ ಕೇವಲ ಜಾತಿ ಸೂಚಕ ಪದವಾಗಿ ಮಾತ್ರ ಬಳಕೆಯಲ್ಲಿದೆ. ಎಲ್ಲಾ ವಿದ್ವಾಂಸರ ಹೇಳಿಕೆ ಗಳನ್ನು ಆಧಾರವಾಗಿಟ್ಟುಕೊಂಡು, ಯಾವುದೇ ವರ್ಗದ ಶೋಷಿತ ಮಹಿಳೆಯನ್ನು ದಲಿತ ಮಹಿಳೆ ಎಂದು ಗುರುತಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿಯೇ ಮಹಾಭಾರತದಲ್ಲಿ ಮುಖ್ಯ ಪಾತ್ರವಾಗಿ ಕಾಣುವ ದ್ರೌಪದಿಯು ಮಾನಸಿಕವಾಗಿ, ಕೆಲವೊಮ್ಮೆ ದೈಹಿಕವಾಗಿ ನಿರಂತರವಾಗಿ ಶೋಷಣೆಗೆ ಒಳಗಾಗಿದ್ದಾಳೆ. ಆದ್ದರಿಂದಲೇ ಈ ಲೇಖನದಲ್ಲಿ ಯಾಜ್ಞಸೇನೆಯನ್ನು ದಲಿತ ಸ್ತ್ರೀ ಎಂದು, ಅವಳ ಪ್ರಜ್ಞಾಪೂರ್ವಕವಾದ ವ್ಯವಸ್ಥೆಯ ವಿರುದ್ಧವಾದ ಧ್ವನಿಯನ್ನು ದಲಿತತ್ವದ ಧ್ವನಿಯಾಗಿ ಗುರುತಿಕೊಂಡು ಈ ಲೇಖನದಲ್ಲಿ ಚರ್ಚಿಸಿಲಾಗಿದೆ.
APA, Harvard, Vancouver, ISO, and other styles
3

ಪೃಥ್ವಿರಾಜ್, ಬಿ. "ಕನ್ನಡ ಸಾಹಿತ್ಯದಲ್ಲಿ ಅಂಬೇಡ್ಕರ್‌ ಚಿಂತನೆ". AKSHARASURYA JOURNAL 06, № 05 (2025): 151 to 156. https://doi.org/10.5281/zenodo.15504462.

Full text
Abstract:
ಅಂಬೇಡ್ಕರ್&zwnj; ಸಿದ್ದಾಂತದ ಪ್ರಭಾವವಾಗಿ ಇಡೀ ಭಾರತ ಸೇರಿದಂತೆ ಈ ನಾಡಿನ ಅಸ್ಪೃಶ್ಯ ಅಕ್ಷರಸ್ಥ ಸಮುದಾಯದ ಎದೆಯಾಳದಲ್ಲಿ ಹುಟ್ಟಿದ ಹೋರಾಟವನ್ನು ದಲಿತ ಹೋರಾಟ ಎಂದು ಕರೆಯಲಾಗಿದೆ. ನಂತರ ಕರ್ನಾಟಕದಲ್ಲಿ ದಲಿತ ಚಳುವಳಿ ಮುಂದುವರೆಯಲು ಕಾರಣವಾಯಿತು. ಈ ದಲಿತ ಚಳುವಳಿ ಯಶಸ್ವಿಯಾಗಲು ದಲಿತ ಸಾಹಿತ್ಯವೂ ಕಾರಣವಾಯಿತು. ಈ ದಲಿತ ಸಾಹಿತ್ಯವೂ ದಲಿತರ ವರ್ತಮಾನದ ಬದುಕಿನ ಕರಾಳತೆಯನ್ನು ಶೋಧಿಸಿದವು ಅವುಗಳಲ್ಲಿದ್ದ ಅಸಮಾನತೆ ಮತ್ತು ಅನ್ಯಾಯದ ನೆಲೆಗಳನ್ನು ಗುರುತಿಸಿದವು, ಅದನ್ನು ಹೋಗಲಾಡಿಸುವ ದಾರಿಗಳ ಬಗ್ಗೆ ಅಲೋಚಿಸಿದವು.&nbsp;ಕನ್ನಡ ಸಾಹಿತ್ಯದಲ್ಲಿ ಬಸವ, ಬುದ್ದ, ಮಾರ್ಕ್ಸರಂತಹ ಚಿಂತನೆಗಳ ಪ್ರೇರಕ ಶಕ್ತಿಯಾಗಿ ಕೆಲಸ ಮಾಡಿದ ಹಾಗೇ ಅಂಬೇಡ್ಕರ್&zwnj; ಚಿಂತನೆಗಳು ಕನ್ನಡ ಸಾಹಿತ್ಯದ ಮೇಲೆ ಹೆಚ್ಚು ಪ್ರಭಾವ ಬೀರಿದೆ.&nbsp;
APA, Harvard, Vancouver, ISO, and other styles
4

ಸುಚಿತ್ರಾ, ಟಿ., та ಕೆ.ಎಸ್. ಗಿರಿಜಾ. "ಡಾ. ಬಿ.ಆರ್. ಅಂಬೇಡ್ಕರ್‌ ಅವರ ಜಾತಿ ನಿರ್ಮೂಲನೆ: ಒಂದು ವಿಶ್ಲೇಷಣೆ". AKSHARASURYA JOURNAL 06, № 05 (2025): 226 to 232. https://doi.org/10.5281/zenodo.15504688.

Full text
Abstract:
ಡಾ. ಬಿ.ಆರ್. ಅಂಬೇಡ್ಕರ್ ಅವರ ಜಾತಿ ನಿರ್ಮೂಲನೆ (Annihilation of Caste) ಕೃತಿ ಭಾರತೀಯ ಜಾತಿ ವ್ಯವಸ್ಥೆಯ ವಿರುದ್ಧ ನೀಡಿದ ಅತ್ಯಂತ ಪ್ರಬಲ ವಿಮರ್ಶೆಗಳಲ್ಲಿ ಒಂದಾಗಿದೆ. 1936ರಲ್ಲಿ ಜಾತ್ ಪಾತ್ ತೋಡಕ್ ಮಂಡಳಿಗೆ ಈ ಭಾಷಣವನ್ನು ನೀಡಲು ಉದ್ದೇಶಿಸಲಾಗಿತ್ತಾದರೂ, ಸಂಘಟಕರು ಅದರ ವಿಷಯವನ್ನು ತೀವ್ರವಾದದ್ದು ಎಂದು ಪರಿಗಣಿಸಿ ಅದನ್ನು ನಿರಾಕರಿಸಿದರು. ನಂತರ ಅಂಬೇಡ್ಕರ್ ಅವರು ಈ ಭಾಷಣವನ್ನು ಸ್ವತಃ ಪುಸ್ತಕ ರೂಪದಲ್ಲಿ ಪ್ರಕಟಿಸಿದರು. ಈ ಪ್ರಬಂಧದಲ್ಲಿ ಅಂಬೇಡ್ಕರ್ ಅವರ ಜಾತಿ ಸಂಬಂಧಿತ ಆಲೋಚನೆಗಳ ವಿಶ್ಲೇಷಣೆ, ಹಾಗೂ ಜಾತಿ ನಿರ್ಮೂಲನೆಗಾಗಿ ಅವರು ನೀಡಿದ ಸಂವಿಧಾನಾತ್ಮಕ ಕೊಡುಗೆಗಳನ್ನು ವಿಮರ್ಶಾತ್ಮಕವಾಗಿ ಚರ್ಚಿಸಲಾಗಿದೆ. ಜೊತೆಗೆ, ಈ ಕೃತಿಯ ಪ್ರಸ್ತುತತೆ ಮತ್ತು ಸಮಕಾಲೀನ ಜಾತಿ ರಾಜಕೀಯದ ಮೇಲೆ ಇದರ ಪರಿಣಾಮವನ್ನೂ ಅವಲೋಕಿಸಲಾಗುತ್ತದೆ.
APA, Harvard, Vancouver, ISO, and other styles
5

ಸುನೀತಾ, ಮಹೇಶ್ವರಿ. "ಬಸವಣ್ಣನವರ ದೃಷ್ಟಿಯಲ್ಲಿ ಅಸ್ಪೃಶ್ಯತೆ". AKSHARASURYA 05, № 01 (2024): 134 to 138. https://doi.org/10.5281/zenodo.13871042.

Full text
Abstract:
೧೨ನೇ ಶತಮಾನದ ಆಂದೋಲನದ ನಾಯಕ ಮತ್ತು ಕೇಂದ್ರ ವ್ಯಕ್ತಿ ಆದ ಬಸವಣ್ಣ ಸಾಹಿತ್ಯದೃಷ್ಟಿಯಿಂದ ನೋಡಿದಾಗ ಆತ ಒಬ್ಬ ಅತ್ಯುತ್ತಮ ಕೃತಿಕಾರ ಸಮಾನತೆಯ ತತ್ವವನ್ನು ಸಾರಿದ ಹರಿಕಾರ ಎಂದು ಹೇಳುವುದು ಆಕಸ್ಮಿಕವೇ ಸರಿ. ಆತ ಹುಟ್ಟಿದ್ದು ಬಿಜಾಪುರ್ ಜಿಲ್ಲೆಯ ಬಸವನಬಾಗೇವಾಡಿ ಅಗ್ರಹಾರ ಎಂಬ ಊರಲ್ಲಿ ೧೧೩೪ಲ್ಲಿ ಜನನವಾಯಿತು. ತಂದೆ ಮಾದರಸ ತಾಯಿ ಮಾದಲಾಂಬಿಕೆ. ಇವರು ಬಾಲ್ಯದಿಂದಲೇ ವೈದಿಕ ಸಂಸ್ಕೃತಿಯ ವಿರೋಧಿಗಳಾಗಿದ್ದರು. ಇವರು ಹುಟ್ಟಿದ್ದು ಉತ್ತಮ ಬ್ರಾಹ್ಮಣ ಮನೆತನದಲ್ಲಿ ಆದರು ದಲಿತ ವರ್ಗದ ಜೊತೆ ಬೆರೆತು ಅವರಿಗಾಗಿ ತನ್ನ ಜೀವನದುದ್ದಕ್ಕೂ ಹೋರಾಡಿದನೆಂದು ತಿಳಿದು ಬರುತ್ತದೆ. ಹೊಸ ಹೊಸ ಬಗೆಯ ಅನೇಕ ಸುಧಾರಣೆಗಳನ್ನು ಜಾರಿಗೆ ತಂದು ನಮ್ಮ ಆಡಳಿತವನ್ನು ಸರಳಗೊಳಿಸಿದರು. ಎಲ್ಲಾ ಶರಣರನ್ನು ಕೂಡಿಸಿ ಎಲ್ಲಾ ಜಾತಿಯವರೊಡನೆ ತಮ್ಮನ್ನು ತಾವು ತೊಡಗಿಸಿಕೊಂಡು ಸ
APA, Harvard, Vancouver, ISO, and other styles
6

ಶೋಭಾ, ಸುರೇಶ್. "ಡಾ. ಅಂಬೇಡ್ಕರ್‌‌ರವರ ಸಾಮಾಜಿಕ ಆಲೋಚನೆಗಳು ಅಸ್ಪೃಶ್ಯರ ವಿಮೋಚನೆ". AKSHARASURYA JOURNAL 06, № 05 (2025): 207 to 219. https://doi.org/10.5281/zenodo.15504651.

Full text
Abstract:
ಸ್ವತಂತ್ರ್ಯಪೂರ್ವ ಭಾರತದ ಜಾತಿ ವ್ಯವಸ್ಥೆಯ ಕರಾಳತೆ ಕಹಿ ಅನುಭವಗಳೊಂದಿಗೆ ಡಾ|| ಬಿ. ಆರ್. ಅಂಬೇಡ್ಕರ್&zwnj;&zwnj;ರವರು ಅಸ್ಪೃಶ್ಯರಿಗೆ ಮೀಸಲಾತಿ ದೊರಕುವಂತೆ ಮಾಡಿದ ಹೋರಾಟದಲ್ಲಿ ಯಶಸ್ಸನ್ನು ಕಾಣುತ್ತಾರೆ. ತಮ್ಮ ಪ್ರತಿಭೆ ಹಾಗೂ ಪರಿಶ್ರಮದಿಂದ ಬದುಕಿನಲ್ಲಿ ಯಶಸ್ಸನ್ನು ಕಂಡರು. ಜಾತಿಯ ಕಾರಣದಿಂದ ಅನೇಕ ಸಂಕಷ್ಟಗಳಿಗೆ ಅವಮಾನಕ್ಕೆ ಗುರಿಯಾಗುತ್ತಾರೆ. ಬದುಕಿನುದ್ದಕ್ಕೂ ಕೆಳವರ್ಗದ ಜನರಿಗಾಗಿ ಹೋರಾಡಿ ಮೀಸಲಾತಿಯ ಮೂಲಕ ಹಿಂದುಳಿದವರನ್ನು ಮುಖ್ಯವಾಹಿನಿಗೆ ತಂದು ಈ ಸೌಲಭ್ಯ ಪಡೆದವರು ತಮ್ಮ ವರ್ಗದವರ ಏಳಿಗೆಗಾಗಿ ಪ್ರಯತ್ನಪಡಬೇಕು ಎಂಬ ಆಶಯವನ್ನು ಹೊಂದಿದ ಅಂಬೇಡ್ಕರ್&zwnj;&zwnj;ರವರಿಗೆ ತೀವ್ರ ನಿರಾಸೆಯಾಗುತ್ತದೆ. ಕೆಳ ಸಮುದಾಯಗಳಲ್ಲಿಯೇ ಪರಸ್ಪರ ಆಂತರಿಕ ಭಿನ್ನಾಭಿಪ್ರಾಯಗಳು, ಅಸಮಾನತೆಗಳು, ತಾರತಮ್ಯಗಳ ಕಾರಣಗಳಿಂದ ಪ್ರಬಲ ಜಾತಿಯವರ ದೌ
APA, Harvard, Vancouver, ISO, and other styles
7

ಅಶ್ವಿನಿ, ಎಂ. ಎಸ್. "ಬಾಬಾ ಸಾಹೇಬ್ ಅಂಬೇಡ್ಕರ್‌: ಸಾಮಾಜಿಕ ನ್ಯಾಯದ ರೂವಾರಿ". AKSHARASURYA JOURNAL 06, № 05 (2025): 10 to 16. https://doi.org/10.5281/zenodo.15504125.

Full text
Abstract:
ಭಾರತ ಕಂಡ ಅತ್ಯಂತ ಶ್ರೇಷ್ಠ ಪ್ರತಿಭೆಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್&zwnj; ಅವರು ಅಗ್ರಮಾನ್ಯರು. ಅವರು ರಾಜಕೀಯ ತಜ್ಞರು, ಕಾನೂನು ತಜ್ಞರು, ಆರ್ಥಿಕ ಚಿಂತಕರು, ಸಾಮಾಜಿಕ ನ್ಯಾಯದ ಹೋರಾಟಗಾರರು, ತತ್ವಜ್ಞಾನಿಗಳು, ಲೇಖಕರು, ಬಹುಭಾಷ ವಿದ್ವಾಂಸರು, ಭಾರತ ರಾಷ್ಟ್ರದ ಮಹಾನ್ ನೇತಾರ, ಭಾರತದ ಶ್ರೇಷ್ಠ ಮಾನವತಾವಾದಿ, ಪ್ರಜಾತಂತ್ರ ಕಾರಣಿ ಮತ್ತು ಸಾಮಾಜಿಕ ಕ್ರಾಂತಿಕಾರಿ, ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ಮಹಾಜ್ಞಾನಿ ಹಾಗೂ ಭಾರತದ ಸಂವಿಧಾನ ರಚನ ಕರಡು ಸಮಿತಿಯ ಅಧ್ಯಕ್ಷರು. ಹೀಗೆ ಇವರ ಶ್ರೇಷ್ಠತೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಂಥ ಶ್ರೇಷ್ಠ ವ್ಯಕ್ತಿ ಭಾರತದಲ್ಲಿದ್ದ ವರ್ಣ ವ್ಯವಸ್ಥೆಯ ವಿರುದ್ಧ ಹೋರಾಡಿ, ತಾನೇ ಸಂವಿಧಾನವನ್ನು ರಚಿಸಿ ಸಾಮಾಜಿಕ ನ್ಯಾಯವನ್ನು ನೀಡಿದ ಸಾಮಾಜಿಕ ಚ
APA, Harvard, Vancouver, ISO, and other styles
8

ಸಿದ್ಧಲಿಂಗಯ್ಯ та ಆರ್. ಶ್ರೀಧರ್. "ಕವಿಯನ್ನು ರೂಪಿಸಿದ ಪರಿಸರ... (The Environment Which Shaped Poet...)". AKSHARASURYA JOURNAL 05, № 04 (2024): 30 to 33. https://doi.org/10.5281/zenodo.14289519.

Full text
Abstract:
&ldquo;ನನ್ನ ಬದುಕಿನ ಹಿನ್ನೆಲೆಯನ್ನು ನೆನೆಸಿಕೊಂಡರೆ ನಾನು ಯಾರೋ ಭೂಮಾಲೀಕರ ಮನೆಯ ಜೀತಗಾರನಾಗಿಯೋ, ಬೆಂಗಳೂರಿನ ಯಾವುದಾದರೂ ಗಿರಣಿಯ ಕಾರ್ಮಿಕನಾಗಿಯೋ ಇರಬೇಕಾಗಿತ್ತು. ಆದರೆ ಕೂದಲೆಳೆಯ ಅಂತರದಲ್ಲಿ ಪಾರಾದ ನಾನು ಅನೇಕರ ಸಹಾನುಭೂತಿ, ಪ್ರೀತಿ, ಕರುಣೆಯಿಂದ ಕವಿಯಾಗಿದ್ದೇನೆ, ಲೇಖಕನಾಗಿದ್ದೇನೆ. ನಾನು ನನ್ನ ಹಿನ್ನೆಲೆಯನ್ನು ಮರೆಯದೆ ಜೀತಗಾರರು, ಕೂಲಿಕಾರರು, ರೈತರು, ಕಾರ್ಮಿಕರು ಮತ್ತು ಜಾತೀಯತೆ, ಅಸ್ಪೃಶ್ಯತೆಯ ಕಾರಣದಿಂದ ನೊಂದ ಜೀವಿಗಳ ಪರವಾದ ನಿಲುವನ್ನು ರೂಢಿಸಿಕೊಂಡೆ. ಆದ್ದರಿಂದ ನನ್ನ ಸಾಹಿತ್ಯ ವಿಭಿನ್ನ ಮಾರ್ಗದಲ್ಲಿ ಮುನ್ನಡೆಯಲು ಕಾರಣವಾಯಿತು.&rdquo; ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಗೊಂಡಿರುವ &lsquo;ಡಾ. ಸಿದ್ಧಲಿಂಗಯ್ಯ: ಸಮಗ್ರ ಸಾಹಿತ್ಯ&rsquo; ಸಂಪುಟಗಳ (2018) ಲೇಖಕರ ಮಾತಿನಲ್ಲಿ ಈ ಸಾಲುಗಳನ್ನು ಓದುಗರು ಗಮನಿಸ
APA, Harvard, Vancouver, ISO, and other styles
9

ASHOKA, N. S. "ಮರಾಠಿ ದಲಿತ ಕಾವ್ಯ ನಡೆದುಬಂದ ದಾರಿ". AKSHARASURYA JOURNAL 03, № 03 (2024): 79 to 86. https://doi.org/10.5281/zenodo.10775141.

Full text
Abstract:
ಪ್ರಸ್ತುತ ಸಂಶೋಧನಾ ಲೇಖನವು ಮರಾಠಿ ದಲಿತ ಕಾವ್ಯ ಬೆಳೆದುಬಂದ ಹಾದಿಯನ್ನು ಕುರಿತು ಚರ್ಚಿಸುತ್ತದೆ. ಮಹಾರಾಷ್ಟ್ರದಲ್ಲಿ ದಲಿತ ಸಾಹಿತ್ಯ ಹುಟ್ಟುಪಡೆಯಲು ದೊರೆತ ಸ್ಫೂರ್ತಿ ಹಾಗೂ ಪ್ರೇರಣೆಗಳ ಹುಡುಕಾಟದ ನೆಲೆಯನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಲಾಗಿದೆ. ಮರಾಠಿ ದಲಿತ ಸಾಹಿತ್ಯ ಇಡೀ ಭಾರತೀಯ ಇತರೆ ಭಾಷೆಗಳ ದಲಿತ ಸಾಹಿತ್ಯಗಳಿಗಿಂತ ಹೆಚ್ಚು ಪ್ರಬಲವಾಗಿ ರೂಪುಗೊಳ್ಳಲು ಕಾರಣವಾದ ಐತಿಹಾಸಿಕ ಮೈಲಿಗಲ್ಲುಗಳನ್ನು ಗುರುತಿಸಲಾಗಿದೆ. ಮರಾಠಿ ದಲಿತ ಸಾಹಿತ್ಯ 1970 ರಿಂದೀಚೆಗೆ ಬಹಳಷ್ಟು ಪ್ರಚಲಿತಕ್ಕೆ ಬಂದಿದ್ದರೂ, ಅದರ ಮೂಲ ಬೇರುಗಳು ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಜ್ಯೋತಿ ಬಾಪುಲೆ ಹಾಗೂ ಅಕ್ಷರದವ್ವ ಸಾವಿತ್ರಿ ಬಾಪುಲೆ ಅವರ ಚಳುವಳಿಗೆ ಹೋಗುತ್ತದೆ. ಮರಾಠಿ ದಲಿತ ಸಾಹಿತ್ಯಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬಹುದೊಡ್ಡ ನಿಧಿಯ ಆಗರವಾಗಿ
APA, Harvard, Vancouver, ISO, and other styles
10

ಮಹಾದೇವಿ, ಹುಣಶೀಬೀಜ. "ಮಹಾರಾಷ್ಟ್ರ್ರದಲ್ಲಿ ದಲಿತ ಚಳುವಳಿ: ಮಹಿಳಾ ಪ್ರತಿನಿಧೀಕರಣ". AKSHARASURYA JOURNAL 06, № 05 (2025): 60 to 71. https://doi.org/10.5281/zenodo.15504245.

Full text
Abstract:
ಕೌಟುಂಬಿಕ ಜವಾಬ್ದಾರಿಗಳಲ್ಲಿ ಮುಳುಗಿ ಹೋಗಿರುವ ಮಹಿಳೆ ಎಲ್ಲಾ ಅಡೆತಡೆಗಳನ್ನು ಮೀರಿ ಸಾರ್ವಜನಿಕ ಹೋರಾಟ, ರಾಜಕಾರಣ, ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡರೂ ಎಲೆ ಮರೆಯ ಕಾಯಿಯಂತೆ ಇರಬೇಕಾಗುತ್ತದೆ. ಹೀಗಿರುವಾಗಲೇ ಮಹಾರಾಷ್ಟ್ರ್ರದ ಸಾರ್ವಜನಿಕ ಹೋರಾಟಗಳಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದನ್ನು ಕಾಣಬಹುದು. ಅಂಬೇಡ್ಕರ್&zwnj;ರ ಜೊತೆಗೆ ನಿಮ್ನ ವರ್ಗಗಳ ಮಹಾವಿಮೋಚನಾ ಚಳುವಳಿಯಲ್ಲಿ ಸಾವಿರಾರು ಮಹಿಳೆಯರು ಪಾಲ್ಗೊಂಡರು. ಭಾರತ ರಾಜಕೀಯ ಸ್ವಾತಂತ್ರ್ಯ ಪಡೆಯುವ ಹವಣಿಕೆಯಲ್ಲಿದ್ದಾಗ ಅಂಬೇಡ್ಕರ್&zwnj;ರು ಸಮಾಜದ ಅಂಚಿಗೆ ದೂಡಲ್ಪಟ್ಟವರ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದರು. ದಲಿತ ಸಂಘಟನೆ, ಹೋರಾಟ, ಚಳುವಳಿ, ದಲಿತ ಪತ್ರಿಕೆಗಳ ಪ್ರಕಟಣೆ, ಎದುರಿಸಿದ ಚುನಾವಣೆ, ಬೌದ್ಧ ಧರ್ಮ ಮತಾಂತರ ಹೀಗೆ ಅವರು ಕೈಗೊಂಡ ಮಹತ್ವದ ಕಾರ್ಯಗಳಲ್
APA, Harvard, Vancouver, ISO, and other styles
11

ರಾಘವೇಂದ್ರ, ಕುಪ್ಪೇಲೂರ. "ಹರಿಶ್ಚಂದ್ರಚಾರಿತ್ರದ ಹೊಲತಿಯರ ಪ್ರಸಂಗ: ದಲಿತ ಪ್ರಜ್ಞೆಯ ಟಿಪ್ಪಣಿ". AKSHARASURYA JOURNAL 06, № 03 (2025): 29 to 40. https://doi.org/10.5281/zenodo.15343806.

Full text
Abstract:
ಈ ಲೇಖನದಲ್ಲಿನ &lsquo;ದಲಿತ ಪ್ರಜ್ಞೆ&rsquo; ಎಂಬುದನ್ನು ಆಧುನಿಕ ದಲಿತ ಲೋಕಮೀಮಾಂಸೆಯ ಅರಿವಿನ ಹಿನ್ನೆಲೆಯಲ್ಲಿ ಪ್ರಯೋಗಿಸಲಾಗಿದೆ. ಅರವಿಂದ ಮಾಲಗತ್ತಿ ಅವರು &lsquo;ದಲಿತ ಪ್ರಜ್ಞೆ&rsquo;ಯನ್ನು ಕುರಿತು ಹೀಗೆ ಹೇಳುತ್ತಾರೆ: ʼಪ್ರಜ್ಞೆ ಎಂಬ ಪದ - ಭೂತ &ndash; ವರ್ತಮಾನ - ಭವಿಷತ್ಕಾಲಗಳನ್ನು ಒಳಗೊಂಡು ಅವುಗಳನ್ನು ಒಂದು ಸರಣಿಯಲ್ಲಿರಿಸಿ ಪರಿಸರದ ಸ್ಥಿತಿಯನ್ನು ಗ್ರಹಿಸಿ ಆ ಸ್ಥಿತಿಗೆ ಚಾಲನೆ ನೀಡುವ ಶಕ್ತಿʼ ಎನ್ನುತ್ತಾರೆ. ಪ್ರಸ್ತುತ ಈ ಲೇಖನದ ವ್ಯಾಪ್ತಿಯು ಅಧ್ಯಯನದ ದೃಷ್ಟಿಯಿಂದ ಮಧ್ಯಕಾಲೀನ ಸಂದರ್ಭದ ಕವಿ ರಾಘವಾಂಕನ ಹರಿಶ್ಚಂದ್ರ ಚಾರಿತ್ರ ಕಾವ್ಯದ ಹೊಲತಿಯ ಪ್ರಸಂಗವನ್ನು ಕೇಂದ್ರಿಕರಿಸಿದೆ. ಇಲ್ಲಿ ವಿಶ್ವಾಮಿತ್ರ, ಹೊಲತಿಯರು, ಹರಿಶ್ಚಂದ್ರ ಮತ್ತು ಕವಿಯ ನೆಲೆಯಂದ ಹೀಗೆ ನಾಲ್ಕು ಪಾರ್ಶ್ವಗಳಲ್ಲಿ ದಲಿತ ಪ್ರಜ್ಞೆಯ ಕಣ್ಣೋಟವನ್ನು
APA, Harvard, Vancouver, ISO, and other styles
12

ರಂಗಸ್ವಾಮಿ та ಧರ್ಮೇಗೌಡ ಎಚ್.ಎಂ. "ಡಾ. ಬಿ.ಆರ್. ಅಂಬೇಡ್ಕರ್‌ ಅವರ ರಾಷ್ಟ್ರೀಯತೆಯ ಪರಿಕಲ್ಪನೆ: ಒಂದು ವಿಶ್ಲೇಷಣಾತ್ಮಕ ಅಧ್ಯಯನ". AKSHARASURYA JOURNAL 06, № 05 (2025): 157 to 168. https://doi.org/10.5281/zenodo.15504498.

Full text
Abstract:
ವೇದಗಳ ಕಾಲದಿಂದಲೂ ಉಳಿಸಿಕೊಂಡು ಬಂದಿದ್ದ ಹಿಂದೂ ಸಾಮಾಜಿಕ ವ್ಯವಸ್ಥೆ ತೀವ್ರವಾದ ಆಘಾತಕ್ಕೆ ಒಳಗಾಗಿದ್ದು ಭಾರತ ವಸಾಹತು ಯಾಜಮಾನ್ಯಕ್ಕೆ ಒಳಪಟ್ಟ ಮೇಲೆ ತೀವ್ರವಾದ ಸಾಮಾಜಿಕ ಬದಲಾವಣೆಗಳನ್ನು ಕಂಡಿತು. ವಸಾಹತು ಯಾಜಮಾನ್ಯ ಹೊತ್ತುತಂದ ಅನ್ಯಧರ್ಮ, ಅನ್ಯ ಸಂಸ್ಕೃತಿಗಳಿಗೆ ದೇಸಿ ಸಂಸ್ಕೃತಿಗಳು ಹಲವು ಬಗೆಯಲ್ಲಿ ಪ್ರತಿಕ್ರಿಯಿಸಿದವು. ದೇಸಿ ಸಮಾಜದ ಪಾರಂಪರಿಕ ಹಿಂಸೆಗಳನ್ನು ಅನುಭವಿಸಿಕೊಂಡು ಬಂದಿದ್ದ ತಳಸಮುದಾಯಗಳಿಗೆ ವಸಾಹತೀಕರಣ ಬಿಡುಗಡೆಯ ಹಾದಿಯಾಗಿ ಕಂಡುಬಂದಿತು. ಅಂಬೇಡ್ಕರ್&zwnj; ಅವರು ವಸಾಹತು ಮೂಲದ ಆಧುನಿಕ ಶಿಕ್ಷಣ, ಇಂಗ್ಲಿಷ್ ಭಾಷೆ, ಪ್ರಜಾಪ್ರಭುತ್ವವಾದಿ, ರಾಜಕೀಯ ವ್ಯವಸ್ಥೆಯ ಸ್ಥಾಪನೆ ಮಾಡುವುದರ ಮೂಲಕ ದಲಿತರ ಬಿಡುಗಡೆಯ ಹಾದಿಯನ್ನು ಕಂಡುಕೊಂಡರು. ಅಂಬೇಡ್ಕರ್&zwnj; ಅವರ ಈ ಬಗೆಯ ಹೋರಾಟ ಮತ್ತು ಚಿಂತನೆಗಳಿಗೆ ಅನೇಕ ಸಮಕಾಲೀನ ಚಿಂ
APA, Harvard, Vancouver, ISO, and other styles
13

ಸುಮಾ, ವಸಂತ ಸಾವಂತ. "ಡಾ. ಅರ್ಜುನ ಗೊಳಸಂಗಿಯವರ ಕವಿತೆಗಳಲ್ಲಿ ಹೆಣ್ಣಿನ ಭಿನ್ನ ನೆಲೆಗಳು". AKSHARASURYA 04, № 03 (2024): 103 to 108. https://doi.org/10.5281/zenodo.12672812.

Full text
Abstract:
ಎಪ್ಪತ್ತನೆಯ ದಶಕದಲ್ಲಿ ಕನ್ನಡದಲ್ಲಿ ಆರಂಭವಾದ ದಲಿತ ಮತ್ತು ಬಂಡಾಯ ಸಾಹಿತ್ಯ ಪಂಥ ನೊಂದವರ ದನಿಯಾಗಿ ಮೂಡಿ ಬಂದವು. ಆರಂಭದಲ್ಲಿ &lsquo;ಇಕ್ರಲಾ ಒದಿರಲ&rsquo; ಎಂಬಂತಹ ಆಕ್ರೋಶ ಭರಿತ ಮಾತುಗಳನ್ನು ಆಡುತ್ತಲೇ ತನ್ನ ಸುತ್ತಲಿನವರು ತನ್ನ ಮೇಲೆ ಶತಮಾನಗಳ ಕಾಲ ಮಾಡುತ್ತಾ ಬಂದ ಅನ್ಯಾಯವನ್ನು ಜಾತಿ ವ್ಯವಸ್ಥೆಯ ಹೆಸರಿನಲ್ಲಿ ಮಾಡಿದ ಶೋಷಣೆಯನ್ನೂ ವಿರೋದಿಸಲೆಂದೇ ಈ ಸಾಹಿತ್ಯ ಪಂಥಗಳು ಮೂಡಿ ಬಂದವು. ನಂತರದಲ್ಲಿ ಆಕ್ರೋಶ ತುಸು ಕಡಿಮೆಯಾದಂತೆನಿಸಿದರೂ ಅದರ ಸ್ವರೂಪ ಬದಲಾಯಿತೇ ಹೊರತು ಆಳದ ಅಕ್ರೋಶ ಹೋಗಲಿಲ್ಲ.&nbsp; ದಲಿತ ಸಾಹಿತ್ಯದ ಎರಡನೆಯ ತಲೆಮಾರಿನಲ್ಲಿ ಬಂದ ಲೇಖಕರು ಆಕ್ರೋಶಕ್ಕಿಂತ ಬದುಕನ್ನು ನಿರುಮ್ಮಳವಾಗಿ ಆದರೆ ಒಂದು ಅಭಿಮಾನ ತುಂಬಿದ ದನಿಯಲ್ಲಿ ಬಿತ್ತರಿಸಿದರು. ಅವರ ಸಾಲಿನಲ್ಲಿ ಬಂದ ಪ್ರಮುಖ ಕವಿ ಡಾ. ಅರ್ಜುನ ಗೊಳಸಂಗಿಯವರು. ಕರ್ನಾಟ
APA, Harvard, Vancouver, ISO, and other styles
14

ಹೇಮಲತ, ಹೆಚ್. ಆರ್. "ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಮಹಿಳಾ ಸಾಮಾಜಿಕ ನ್ಯಾಯತತ್ವ: ಒಂದು ಅವಲೋಕನ". AKSHARASURYA JOURNAL 03, № 04. SPECIAL ISSUE. (2024): 157 to 169. https://doi.org/10.5281/zenodo.10929989.

Full text
Abstract:
ಹಿಂದೂ ಧರ್ಮದಲ್ಲಿ ಶೂದ್ರ ಮತ್ತು ದಲಿತರ ಶೋಷಣೆ ಆದಷ್ಟೇ ಮಹಿಳೆಯರ ಶೋಷಣೆಯೂ ಆಗಿದೆ. ಹಿಂದೂ ಸಮಾಜದಲ್ಲಿ ಮಹಿಳೆಯು ಅತಿ ಕೀಳು ಮಟ್ಟದ ಸ್ಥಾನವನ್ನುಹೊಂದಿದ್ದಾಳೆ. ಜೀವನದ ಯಾವುದೇ ಕ್ಷೇತ್ರದಲ್ಲೂ ಮಹಿಳೆ ಪ್ರಗತಿ ಹೊಂದಬಾರದೆಂಬ ನಿರ್ಬಂಧನೆಗಳನ್ನು ಹೇರಲಾಗಿತ್ತು. ಮಹಿಳೆಯು ಕೇವಲ ಪುರುಷನ ಆಸೆ ಆಕಾಂಕ್ಷೆಗಳನ್ನು ತೀರಿಸುವ ಒಂದು ಸುಂದರವಾದ ವಸ್ತು ಮತ್ತು ಮಕ್ಕಳನ್ನು ಹೆರುವ ಯಂತ್ರವೆಂದು ಪರಿಗಣಿಸಲಾಗಿತ್ತು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಕೇವಲ ಗುಲಾಮಳಂತೆ ಮನೆಗೆಲಸ ಮಾಡಿ ಕುಟುಂಬದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಅವಳ ಆದ್ಯ ಕರ್ತವ್ಯವೆಂದು ಭಾವಿಸಲಾಗಿತ್ತು. ಯಾವುದೇ ಕಾರಣಕ್ಕೂ ಮಹಿಳೆ ಹೊರಗಿನ ಸಮಾಜದಲ್ಲಿ ಇತರರಂತೆ ಧೈರ್ಯ ಮತ್ತು ಗೌರವದಿಂದ ಭಾಗವಹಿಸುವಂತಿರಲಿಲ್ಲ. ಹಾಗೇನಾದರೂ ಮಾಡಿದಿದ್ದರೆ ಅವಳು ಇಡೀ ಪುರುಷ ವರ್ಗ ಮತ್ತು
APA, Harvard, Vancouver, ISO, and other styles
15

ಕೆ., ಅನಂತ. "ಕನ್ನಡ ಅನುವಾದಿತ ಆಫ್ರಿಕನ್ ಕಥಾ ಸಾಹಿತ್ಯ". AKSHARASURYA JOURNAL 05, № 03 Special Issue (2024): 40 to 44. https://doi.org/10.5281/zenodo.14246451.

Full text
Abstract:
ಕಥೆಗಾರರು ಕಥೆಗಳನ್ನು ಬರೆಯುತ್ತಿದ್ದದ್ದು ಮತ್ತು ಓದುಗರು ಅವುಗಳನ್ನು ಓದುತ್ತಿದ್ದದ್ದು ಕಾಲಕಳೆಯುವ ಸಲುವಾಗಿ ಮತ್ತು ಮನೋರಂಜನೆಯ ಮುಖ್ಯ ಉದ್ದೇಶದಿಂದಾಗಿ. ಹಾಗಿದ್ದಾಗ್ಯೂ ಅತಿದೊಡ್ಡ ಸಾಹಿತ್ಯ ವಿಮರ್ಶೆಗಳು ಬಂದದ್ದೂ ಕೂಡ ಇಂತಹ ಕಥಾಸಾಹಿತ್ಯದ ಹಿನ್ನಲೆಯಲ್ಲಿಯೇ ಎಂಬುದು ಗಮನಾರ್ಹ. ಕೆಲವು ಬಾರಿ ಇಂತಹ ಸಾಹಿತ್ಯಗಳು ಸಾಮಾಜಿಕ ದೃಷ್ಟಿಕೋನವನ್ನೇ ಬದಲಾಯಿಸಿಬಿಡಬಹುದು. ಮರಾಠಿ ದಲಿತ ಆತ್ಮಕಥೆಗಳು ಇದಕ್ಕೆ ಒಳ್ಳೆಯ ಉದಾಹರಣೆಯಾಗಬಹುದು. ಆಫ್ರಿಕಾದ ಸಾಹಿತ್ಯವು ಕನ್ನಡಕ್ಕೆ ಅನುವಾದವಾಗುವಾಗ ದಲಿತ ಮತ್ತು ಬಂಡಾಯ ಸಾಹಿತ್ಯದ ಮತ್ತು ಅಂತಹ ಸಾಹಿತ್ಯಾಸಕ್ತರ ಅಗತ್ಯಗಳಿಗಾಗಿ ಬಂದವು ಎಂಬ ವಾದ ಸಾಹಿತಿಗಳಲ್ಲಿ ಮತ್ತು ವಿಮರ್ಶಕರಲ್ಲಿ ಇದೆ. ಬಹುಶಃ ಅದು ಹಾಗಿರಲಿಕ್ಕು ಸಾಕು. ಆದರೆ ಕನ್ನಡಕ್ಕೆ ಅನುವಾದಗೊಂಡ ಆಫ್ರಿಕಾ ಮೂಲದ ಎಲ್ಲಾ ಸಾಹಿತ್ಯವೂ ಈ ಅಗತ್ಯಗ
APA, Harvard, Vancouver, ISO, and other styles
16

ಕಾಂತರಾಜ, ಯಾದವ್ ಸಿ. "ದಲಿತ ಆತ್ಮಕತೆಗಳಲ್ಲಿ ಬಾಲ್ಯ ಮತ್ತು ಶಾಲಾ ಶಿಕ್ಷಣದ ನಿರೂಪಣೆಗಳು". AKSHARASURYA 06, № 02 (2025): 84 to 91. https://doi.org/10.5281/zenodo.15124072.

Full text
Abstract:
ಮನುಷ್ಯನ ಬದುಕಿನಲ್ಲಿ ಬಾಲ್ಯದ ಅನುಭವವು ತುಂಬಾ ಮುಖ್ಯವಾದದ್ದು. ಬಾಲ್ಯದ ಬದುಕು ಎಲ್ಲರಿಗೂ ಒಂದೇ ರೀತಿಯದಾಗಿರುವುದಿಲ್ಲ. ಆ ವಯಸ್ಸಿನ ಶಿಕ್ಷಣವೂ ಕೂಡ ಬಾಲ್ಯದ ಅನುಭವವಗಳನ್ನು ದಟ್ಟವಾಗಿ ಆವರಿಸಿಕೊಂಡಿರುತ್ತದೆ. ಜಾತಿಯಾಧಾರಿತ ಸಾಮಾಜಿಕ ವ್ಯವಸ್ಥೆಯೂ ಕೂಡ ಈ ಬಾಲ್ಯದ ಮೇಲೆ ಪ್ರಭಾವವನ್ನು ಬೀರುತ್ತದೆ. ಮೇಲ್ಜಾತಿ, ಮಧ್ಯಮ ಜಾತಿಗಳು ಮೂಲಭೂತ ಸೌಕರ್ಯಗಳು ಮತ್ತು ಶಿಕ್ಷಣದ ಕುರಿತಂತೆ ಎಚ್ಚರಿಕೆಯಿಂದಿದ್ದರೆ, ತಳ ಸಮುದಾಯಗಳು ಮತ್ತು ಶ್ರಮಿಕ ವರ್ಗ ಮೂಲಭೂತ ಸೌಕರ್ಯಗಳಿಗಾಗಿಯೇ ಹೋರಾಟ ನಡೆಸುತ್ತಿರುವುದನ್ನು ಕಾಣಬಹುದು. ಈ ಸಂಧರ್ಭದಲ್ಲಿ ಶಿಕ್ಷಣದ ಕುರಿತ ಮಾತು ಕನಸಿನ ಪಯಣವೇ ಸರಿ. ಹಸಿವು ಮತ್ತು ಅವಮಾನಗಳಾಚೆಗಿನ ಬದುಕನ್ನು ದಲಿತ ಆತ್ಮಕಥೆಗಳಲ್ಲಿ ಕಾಣಬಹುದು. ಶಾಲೆಯ ಕುರಿತಂತೆ, ಶಿಕ್ಷಕರ ಕುರಿತಂತೆ ದಲಿತ ಆತ್ಮಕತೆಗಳು ಚಿತ್ರಿಸುವ ಸೂಕ್ಷ್ಮ ಪ
APA, Harvard, Vancouver, ISO, and other styles
17

ರಾಘವೇಂದ್ರ, ಬಿ. ಎ. ದ್ರಾಕ್ಷಿ, та ಹೆಚ್‌. ವಿಶ್ವಮಾನವ ವಿಜಯಕುಮಾರ. "ಚೆನ್ನಣ್ಣ ವಾಲೀಕಾರ ಅವರ ಕಥೆಗಳಲ್ಲಿ ಪ್ರತಿರೋಧದ ನೆಲೆ". AKSHARASURYA 04, № 02 (2024): 98 to 112. https://doi.org/10.5281/zenodo.11525890.

Full text
Abstract:
ಕಥೆ ಹೇಳುವುದು ಮತ್ತು ಕೇಳುವುದು ಮನುಷ್ಯನ ಆಸಕ್ತಿ ಮತ್ತು ಹವ್ಯಾಸಿ ಎರಡು ಹೌದು. ಕೆಲವು ವರ್ಷಗಳ ಹಿಂದೆ ದೂರದರ್ಶದನಂತಹ ಮಾಧ್ಯಮಗಳು ಬರುವುದಕ್ಕೆ ಮುಂಚೆ ಭಾರತದಂತಹ, ಕರ್ನಾಟಕದಂತಹ ಹಳ್ಳಿಗಳಲ್ಲಿ ಹಿರಿಯರು ಹೇಳುವ ಕತೆಗಳೇ ಮನರಂಜನೆಯ ತಾಣಗಳು ಆಗಿದ್ದವು. ನನಗೆ ನೆನಪಿರುವ ಹಾಗೆ ಚಿಕ್ಕವನಿರುವಾಗ ನಮ್ಮ ಅಜ್ಜಿಯೂ ಹಲವೂ ಕಥೆಗಳನ್ನು ಹೇಳಿ ಕಥೆ ಎಂದರೆ ಏನು ಎಂಬುದನ್ನು ಪರಿಚಯಿಸಿದ್ದಳು. ಅಷ್ಟೇ ಅಲ್ಲದೆ ಅವರು ಹೇಳುವ ಕಥೆಗಳಲ್ಲಿ ಜೀವನದ ಬದುಕಿನ ಅನುಭವದ ಸತ್ಯಾಸತ್ಯಗಳನ್ನು ಒಳಗೊಂಡಿರುವಂತಹ ಮೌಲ್ಯಯುತವಾದ, ನೀತಿಯುತವಾದ ಸಂದೇಶಗಳನ್ನು ಸಾರುವ ಕಥೆಗಳಾಗಿದ್ದವು. ಇಂತಹ ಕಥೆಗಳನ್ನು ಹಿರಿಯರಿಂದ ಕೇಳಿ ಆಧುನಿಕ ಕಥಾ ಸಾಹಿತ್ಯದಲ್ಲಿ ಹಲವಾರು ಕಥೆಗಳನ್ನು ಬರೆದ ಕಥೆಗಾರರು ಕನ್ನಡ ಸಾಹಿತ್ಯದಲ್ಲಿ ಕಂಡು ಬರುತ್ತಾರೆ. ಅವರಲ್ಲಿ ಚೆನ್ನಣ್ಣ ವಾಲೀಕಾರರು
APA, Harvard, Vancouver, ISO, and other styles
18

ನಾಗೇಂದ್ರಪ್ಪ, ಶಿವಶರಣಪ್ಪ. "ಕನ್ನಡ ಕಾವ್ಯಕ್ಕೆ ಬಂಜಗೆರೆ ಜಯಪ್ರಕಾಶರವರ ಕೊಡುಗೆ". AKSHARASURYA JOURNAL 05, № 04 (2024): 108 to 114. https://doi.org/10.5281/zenodo.14289922.

Full text
Abstract:
ಬಂಜಗೆರೆ ಜಯಪ್ರಕಾಶರವರು ಕರ್ನಾಟಕದ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರೇ ಹೇಳಿದಾಗೆ ಬಿ.ಎ. ತರಗತಿಯಿಂದಲೇ ಕಾವ್ಯ ಕ್ವೇತ್ರದಲ್ಲಿ ಕಾವ್ಯಾಸಕ್ತಿ ಬೆಳೆಸಿಕೊಂಡವರು. ತಾವು ಕವಿತೆ ಬರೆಯುತ್ತ ಇನ್ನೊಬ್ಬರನ್ನು ಬರೆಯುವುದಕ್ಕೆ ಪ್ರೇರಣೆ ನೀಡಿದ ಕವಿ. ಕನ್ನಡ ಸಾಹಿತ್ಯದ ಸಾರಸ್ವತ ಲೋಕದಲ್ಲಿ ಅನೇಕ ಕವಿಗಳು ಆಯಾ ಕಾಲಘಟ್ಟದಲ್ಲಿ ಕಾವ್ಯಗಳ ಮೂಲಕ ಹೆಸರುವಾಸಿಯಾಗಿದ್ದರೆ. ಎಪ್ಪತ್ತರ ದಶಕದ ಕಾಲಘಟ್ಟದ ವಸ್ತುವಿನ ನಿರ್ಮಾಣದಲ್ಲಿ ಸ್ವತಂತ್ರವಾದ ಚಿಂತನೆಗಳು ವಾಸ್ತವ ನೆಲೆಯಲ್ಲಿ ಜೀವಧ್ವನಿಯಾಗಿ ಮಿಡಿದಿರುವುದು ಕಾಣುತ್ತೇವೆ. ಈ ಮಿಡಿಯುವಿಕೆಯಲ್ಲಿ ಸಾಮಾಜಿಕ ನ್ಯಾಯದ ಭಾವನೆಗಳನ್ನು ಹೊರಹಾಕಲು ಪರಿಪಕ್ವತೆಯ ಕಾಲವೆಂದು ಗಮನಿಸುವ ಅಗತ್ಯತೆಯಿದೆ. ಒಬ್ಬ ಕವಿ ಅಥವಾ ಲೇಖಕ ತನ್ನ ಬದುಕಿನ ಮೈಲುಗಲ್ಲುಗಳನ್ನು ದಾಟಬೇಕಾದರೆ ಆತನಿಗೆ ತಾನು ತಲುಪಬೇಕಾದ ಮಾರ್ಗದ ಕಡೆ
APA, Harvard, Vancouver, ISO, and other styles
19

ಶ್ರೀಧರ್, ಆರ್. "ಸಿದ್ಧಲಿಂಗಯ್ಯನವರ ಕಾವ್ಯ: ಸಾಮಾಜಿಕ ಕ್ರೋಧದ ನೆಲೆಯಿಂದ ಆಧ್ಯಾತ್ಮಿಕ ಅನ್ವೇಷಣೆಯ ಕಡೆಗೆ". AKSHARASURYA JOURNAL 05, № 06 (2025): 01 to 07. https://doi.org/10.5281/zenodo.14788682.

Full text
Abstract:
ಕವಿ ಸಿದ್ಧಲಿಂಗಯ್ಯನವರ ಮೊದಲ ʼಹೊಲೆಮಾದಿಗರ ಹಾಡುʼ ಕವನ ಸಂಕಲನದಿಂದ ಅವರ ಕಡೆಯ ʼಬೋಧಿವೃಕ್ಷದ ಕೆಳಗೆʼ ಸಮಗ್ರ ಕಾವ್ಯದ ಶೀರ್ಷಿಕೆಗಳನ್ನು ರೂಪಕದಂತೆ ಪರಿಭಾವಿಸುವುದಾದರೆ, ಸಮಾಜದಲ್ಲಿನ ಶೋಷಣೆ, ತಾರತಮ್ಯ, ಅಸಮಾನತೆಯಿಂದ ಕನಲಿ ಸಂಘರ್ಷದ ಪ್ರತಿಕ್ರಿಯೆ ಹಾಗೂ ಕೀಳರಿಮೆಯಿಂದ ನರಳುತ್ತಿದ್ದ ವಿಸರ್ಜಿತ ಲೋಕದಿಂದ ಹುಟ್ಟಿದ ಬಂಡಾಯದಂತೆ ಸ್ಫೋಟಿಸಿದ ಅವರ ಕವಿತೆಗಳು ಸಮ ಸಮಾಜದ ಹಂಬಲವಾದ ಸಾಮರಸ್ಯದ ಕಡೆಗೆ ಸಾಗಿರುವ ಸೃಜನಶೀಲ ಪಯಣದ ವಿಕಾಸ ಎಂದು ವ್ಯಾಖ್ಯಾನಿಸಬಹುದು. ಇಲ್ಲಿ ಆತ್ಯಂತಿಕ ತೀವ್ರತೆಯಿಂದ ಹುಟ್ಟಿದ ಬಂಡಾಯ ಸಮುದಾಯದಲ್ಲಿ ಸ್ವಾಭಿಮಾನ ಹಾಗೂ ಮಾನವ ಘನತೆಯನ್ನು ಮೂಡಿಸುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ಸಮಷ್ಟಿ ಬದುಕನ್ನು ಕುರಿತ ಗಾಢ ವಿಷಾದ ಈ ಅನ್ಯಾಯದ ವ್ಯವಸ್ಥೆ ಬದಲಾಗಬೇಕೆಂಬ ಹಂಬಲ ಇಲ್ಲಿನ ಕವಿತೆಗಳು ಪ್ರತಿಪಾದಿಸುವ ನಿಲುವು.ಸ
APA, Harvard, Vancouver, ISO, and other styles
20

ನಾಗನಗೌಡ, ಗೌಡ್ರ. "ಡಾ. ಬಿ. ಆರ್. ಅಂಬೇಡ್ಕರ್‌‌ ಅವರ ಸಾಮಾಜಿಕ ನ್ಯಾಯದ ಚಿಂತನೆಗಳು". AKSHARASURYA JOURNAL 06, № 05 (2025): 94 to 104. https://doi.org/10.5281/zenodo.15504293.

Full text
Abstract:
ಡಾ. ಬಿ.ಆರ್. ಅಂಬೇಡ್ಕರ್&zwnj; ಒಬ್ಬ ಭಾರತೀಯ ಶ್ರೇಷ್ಠ ರಾಜಕೀಯ ನಾಯಕ, ತತ್ವಜ್ಞಾನಿ, ಸಾಮಾಜಿಕ ಚಿಂತಕ, ಇತಿಹಾಸ ಸಂಶೋಧಕ, ಆರ್ಥಿಕ ತಜ್ಞ, ಶ್ರೇಷ್ಠ ಬರಹಗಾರ, ಮಹಿಳಾ ಸಮಾನತೆಯ ಹರಿಕಾರ, ದಲಿತರ ಸೂರ್ಯ, ಕಾರ್ಮಿಕ ಬಂಧು, ಕಾನೂನು ತಜ್ಞ, ಸಂವಿಧಾನ ಶಿಲ್ಪಿ ಎಂದೆಲ್ಲಾ ಪ್ರಖ್ಯಾತರಾಗಿದ್ದಾರೆ. ಭಾರತೀಯ ಸಮಾಜವು ಶತ ಶತಮಾನಗಳಿಂದಲೂ ವರ್ಣ, ಜಾತಿಯ ಹೆಸರಿನಲ್ಲಿ ವರ್ಗೀಕರಣಗೊಂಡು ಇಡೀ ಮಾನವ ಸಂಬಂಧಗಳ ಮೌಲ್ಯವನ್ನೇ ಹಾಳು ಮಾಡಿದೆ. ಸಮಾಜದ ಬಹುಪಾಲು ಜನಾಂಗ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬಲಿಷ್ಠವಾಗಿರುವ ಜಾತಿ, ವರ್ಗಗಳ ತುಳಿತಕ್ಕೆ ಸಿಲುಕಿ ನಲುಗಿವೆ. ಅಂಬೇಡ್ಕರ್&zwnj;&zwnj;ರವರು ಬಾಲ್ಯದಿಂದಲೂ ಕಂಡುಂಡ ಅಸ್ಪೃಶ್ಯತೆಯ ನೋವು ಅಪಮಾನಗಳು ಅವರನ್ನು ಸಾಮಾಜಿಕ ಚಿಂತನೆಡೆಗೆ ಮುಖ ಮಾಡುವಂತೆ ಪೇರೆಪಿಸಿದವು. ಅವರು ಶಿಕ್ಷಣ-ಸಂಘಟನೆ-ಹೋರಾಟ ಎಂಬ ತತ
APA, Harvard, Vancouver, ISO, and other styles
21

ವಿನಯ, ಕುಮಾರ್, та ಗೌಡ ಆರ್. ನಾಗಪ್ಪ. "ಮಾತಿಲ್ಲದ ಸಮುದಾಯಕ್ಕೆ ಮಾತಾದ ಕವಿ: ಡಾ. ಸಿದ್ಧಲಿಂಗಯ್ಯ". AKSHARASURYA 03, № 05 (2024): 52–60. https://doi.org/10.5281/zenodo.10938039.

Full text
Abstract:
ಸಾಮಾಜಿಕ ಶ್ರೇಣೀಕರಣ ಭಾರತದ ಸಮಾಜದ ಬಹುಮುಖ್ಯವಾದ ಲಕ್ಷಣ. ಅಂದರೆ ಅದು ಜಾತಿಯ ಆಧಾರದ ಮೇಲೆ ನಿರ್ಧರಿತವಾಗುತ್ತದೆ. ಈ ಶ್ರೇಣೀಕರಣದ ವ್ಯವಸ್ಥೆಯು ಒಂದಿಷ್ಟು ವರ್ಗಗಳನ್ನು ಅಧೀನವಾಗಿಸಿಕೊಳ್ಳುವ ಮೇಲ್ವರ್ಗದ ಉತ್ಪನ್ನವಾಗಿದೆ. ಈ ವರ್ಗವು ಇಲ್ಲಿನ ಕೆಲವು ಸಮುದಾಯಗಳನ್ನು ಹೀನವೆಂದು ಗುರುತಿಸಿಕೊಂಡು ಶತಮಾನಗಳಿಂದ ಶೋಷಣೆಯನ್ನು ಮಾಡಿಕೊಂಡು ಬಂದಿತ್ತು. ಈ ಕೆಳಜಾತಿಗಳಿಗೆ ಯಾವುದೇ ಹಕ್ಕುಗಳು ಇಲ್ಲದೇ ಮೆಲ್ವರ್ಗದ ಜೀತಕ್ಕಷ್ಟೇ ಸೀಮಿತವಾಗಿಸಲಾಗಿತ್ತು. ಶಿಕ್ಷಣ, ಧಾರ್ಮಿಕತೆ, ಸಾಮಾಜಿಕ ಜೀವನ, ಸಮಾನತೆ ಮೊದಲಾದವುಗಳು ಇವರಿಗೆ ಪರಿಚಯವೇ ಇರಲಿಲ್ಲ. ಇವರನ್ನು ಸಂಪೂರ್ಣವಾಗಿ ಗುಲಾಮರನ್ನಾಗಿ ಮಾಡಲಾಗಿತ್ತು. ಭಾರತಕ್ಕೆ ಬ್ರಿಟಿಷರು ಬಂದ ನಂತರ ಅವರು ಇಲ್ಲಿ ಎಲ್ಲರಿಗೂ ಶಿಕ್ಷಣ ನೀಡಿದ್ದರಿಂದಾಗಿ ದಲಿತರಲ್ಲಿ ಹೊಸ ಆಶಾಕಿರಣ ಮೂಡಿತು. ಮುಂದೆ ಅಂಬೇಡ್ಕರ್ ಅ
APA, Harvard, Vancouver, ISO, and other styles
22

PRITHVIRAJ, B. "ಕುವೆಂಪು ಮತ್ತು ಕಂಬಾರರ ನಾಟಕಗಳು ಮುಂದಿಡುವ ರಂಗಕಲ್ಪನೆ". AKSHARASURYA JOURNAL 03, № 03 (2024): 111 to 121. https://doi.org/10.5281/zenodo.10775182.

Full text
Abstract:
ಪ್ರಸುತ್ತ ಸಂಶೋಧಾನ ಲೇಖನವು ಕುವೆಂಪು ಮತ್ತು ಕಂಬಾರರ ಕೃತಿಗಳಲ್ಲಿ ಹೊಸತನು ಹುಡುಕುವ ಪ್ರಯತ್ನವನ್ನು ಮಾಡಲಾಗಿದೆ. ಕುಂವೆಪು ಅವರಲ್ಲಿ ನವೋದಯ ಪ್ರಜ್ಞೆ ಕಾಣಿಸಿದ್ದರೆ ಕಂಬಾರರಲ್ಲಿ ದಲಿತರ ಪರ ಪ್ರಜ್ಞೆ ಕಾಣಿಸಿಕೊಂಡಿದೆ. ಈ ಲೇಖನವನ್ನು ವೀರೆಶ್ ಬಡೀಗಾರ್&zwnj;ರವರ &lsquo;ಕನ್ನಡ ಸಾಹಿತ್ಯ ಪರಂಪರೆ ಮತ್ತು ಕಂಬಾರರು&rsquo; &amp; ಉತ್ಥಾನಭಾರೀಘಾಟ್&zwnj;ಅವರ &lsquo;ಕುವೆಂಪು ನಾಟಕಗಳು ಮುಂದಿಡುವ ರಂಗಕಲ್ಪನೆ&rsquo; ಎಂಬ ಪುಸ್ತಕಗಳ ಹಿನ್ನಲೆಯಲ್ಲಿ ಬರೆಯಲಾಗಿದೆ. ಇದುವರೆಗೂ ಸಾಹಿತ್ಯ ವಲಯದಲ್ಲಿ ಕಂಬಾರರನ್ನು ಕೇವಲ ಅವರ ಸೃಜನಶೀಲ ಕಲಾಕೃತಿಗಳ ಮೂಲಕವಷ್ಟೇ ಹೆಚ್ಚು ಚರ್ಚಿಸಿದ್ದು ಕಾಣುತ್ತದೆ. ಕಂಬಾರರ ಸೃಜನಶೀಲ ಬರಹಗಳ ಜಗತ್ತು ಒಂದು ಕಡೆಯಾದರೆ, ಸಂಶೋದನೆ, ಜಾನಪದ, ಸಂಪಾದನೆ ಹಾಗೂ ವೈಚಾರಿಕತೆಗೆ ಸಂಬಂಧಿಸಿದ ಸೃಜನೇತರ ಬರಹ ಇನ್ನೊಂದು
APA, Harvard, Vancouver, ISO, and other styles
23

ಪ್ರವೀಣ್, ಕುಮಾರ್ ಎಸ್. "ಹೊಸಗನ್ನಡದ ಆರಂಭಿಕ ಕತೆಗಳು". AKSHARASURYA 03, № 05 (2024): 68–74. https://doi.org/10.5281/zenodo.10938075.

Full text
Abstract:
ಕನ್ನಡ ಸಾಹಿತ್ಯ ಲೋಕ ಹಲವಾರು ಪ್ರಕಾರಗಳ ಮೂಲಕ ಮಹತ್ವವನ್ನು ಪಡೆದಿದೆ. ಪ್ರಸ್ತುತ ಲೇಖನವು ನವೋದಯ ಪೂರ್ವ, ನವೋದಯ, ಪ್ರಗತಿಶೀಲ, ನವ್ಯ, ದಲಿತ, ಬಂಡಾಯ ಎಲ್ಲಾ ಕಾಲಘಟ್ಟಗಳಲ್ಲಿಯೂ ಕನ್ನಡದ ಕತೆಗಾರರು ತಮ್ಮ ಕಥಾಬರವಣಿಗೆಯ ಮೂಲಕ ಕಥಾಲೋಕವನ್ನು ಹಾಗೂ ಸಾಹಿತ್ಯಲೋಕವನ್ನು ವಿಸ್ತರಿಸಿದ್ದಾರೆ. ಆದರೆ, ಹೊಸಗನ್ನಡದ ಆರಂಭಿಕ ಬರಹಗಾರರ ಕಥೆಗಳ ವಸ್ತು ಆಲೋಚನ ಕ್ರಮ ಹಾಗೂ ಉದ್ದೆಶಗಳನ್ನು ಅರ್ಥೈಸಿಕೊಳ್ಳದೆ ನಂತರದ ಕಥೆಗಳನ್ನು ಅಭ್ಯಾಸ ಮಾಡಿದರೆ ಕನ್ನಡ ಕಥಾ ಸಾಹಿತ್ಯದ ಸಂಪೂರ್ಣ ಅರಿವು ಆಗುವುದಿಲ್ಲ. ಹಾಗಾಗಿ, ಈ ಲೇಖನದಲ್ಲಿ ಪ್ರಾರಂಭದ ಕಥೆಗಾರರ ಕೆಲವು ಕಥೆಗಳ ಚರ್ಚೆಯನ್ನು ಮಾಡಲಾಗಿದೆ.
APA, Harvard, Vancouver, ISO, and other styles
24

ಆಶಾಲತಾ, ಪಿ. "ಭಾರತದ ಪ್ರಜಾತಂತ್ರ: ಡಾ. ಬಿ.ಆರ್. ಅಂಬೇಡ್ಕರ್‌ ಚಿಂತನೆಗಳು". AKSHARASURYA JOURNAL 06, № 05 (2025): 01 to 09. https://doi.org/10.5281/zenodo.15504104.

Full text
Abstract:
ಭಾರತದಲ್ಲಿ ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯ, ಮಹಿಳಾ ಹಕ್ಕುಗಳ ಬಗೆಗೆ ತೀವ್ರವಾಗಿ ಚಿಂತಿಸಿ, ಆ ಸಾಮಾಜಿಕ ಸುಧಾರಣೆಗಳಿಗೆ ಕಾನೂನಿನ ಚೌಕಟ್ಟು ಅವಶ್ಯವೆಂದು, ಭಾರತದ ಸಂವಿಧಾನದಲ್ಲಿ ಆ ಮೌಲ್ಯಗಳನ್ನು ಹಲವಾರು ವಿಧಿಗಳ ರೂಪದಲ್ಲಿ ಕ್ರೋಢೀಕರಿಸಿ, ಶೋಷಿತ ಸಮುದಾಯಗಳಲ್ಲಿ ಸ್ವಾಭಿಮಾನ, ಆತ್ಮಗೌರವ ಮತ್ತು ಅನ್ಯಾಯಗಳ ವಿರುದ್ಧ ಹೋರಾಟದ ಮನೋಭಾವವನ್ನು ಮೂಡಿಸಿದ ಮಹಾನ್ ಮಾನವತಾವಾದಿ, ಸಂವಿಧಾನಶಿಲ್ಪಿ, ಅರ್ಥಶಾಸ್ತ್ರಜ್ಞ, ಕಾನೂನು ತಜ್ಞ ಡಾ. ಬಾಬಾಸಾಹೇಬ್ ಅಂಬೇಡ್ಕರ್&zwnj;&zwnj;ರವರು. ಮೂಲತ ಅಂಬೇಡ್ಕರ್&zwnj;&zwnj;ರವರು, ಬೆಳೆದು ಬಂದ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳು, ಅಸ್ಪೃಶ್ಯತೆ, ಬಡತನ, ದೌರ್ಜನ್ಯ ಈ ಎಲ್ಲಾ ಜಾತಿಯ ಅಸಮಾನತೆಗಳ ಭೀತಿಗಳನ್ನು, ಒಳಗೊಂಡ ಸಮಾಜವಾಗಿತ್ತು. ಹಾಗಾಗಿ ಸಹಜವಾಗಿಯೇ ಶೋಷಿತ ಸಮುದಾಯಗಳ ಶೋಷಣೆಯ ವಿವಿಧ ಸ್ವರೂಪಗಳ
APA, Harvard, Vancouver, ISO, and other styles
25

ಸಂದೇಶ್, ಎ. ಎಸ್. "'ಅವಳ ಪಥ' ಒಂದು ನೋಟ". AKSHARASURYA 03, № 05 (2024): 75–87. https://doi.org/10.5281/zenodo.10938082.

Full text
Abstract:
ಜನಪದ ಸಾಹಿತ್ಯದಿಂದ ಇಂದಿನವರೆಗಿನ ಮಹಿಳಾ ಪಯಣವನ್ನು ಈ ಲೇಖನ ದಾಖಲಿಸುತ್ತದೆ. ಮಾತೃಪ್ರಧಾನ ಸಂಸ್ಕೃತಿಯಿಂದ, ಪಿತೃಪ್ರಧಾನ ಸಂಸ್ಕೃತಿಯವರೆಗಿನ ಚಲನೆಯನ್ನು ಸಾಮಾಜಿಕ, ಆರ್ಥಿಕ, ಕೌಟುಂಬಿಕ, ಧಾರ್ಮಿಕ ನೆಲೆಯ ಹಿನ್ನೆಲೆಯಲ್ಲಿ ಶೋಧಿಸಿದೆ. ಪ್ರಸ್ತುತ ಕೃತಿಯು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಸ್ತ್ರೀ ಪರ ಆಲೋಚನಾ ಕ್ರಮಗಳ ವಿಕಾಸವನ್ನು ಗುರುತಿಸುತ್ತದೆ. ಜನಪದ ಸಾಹಿತ್ಯ ಹಾಗೂ ಹಳಗನ್ನಡ ಕಾವ್ಯಗಳಿಂದ ಹಿಡಿದು ಮಹಿಳೆಯರ ಪ್ರಸ್ತುತ ಸಾಹಿತ್ಯಾಭಿವ್ಯಕ್ತಿಯನ್ನು ರೂಪಿಸುತ್ತಿರುವ ಬೌದ್ಧಿಕ ದ್ರವ್ಯ ಯಾವುದೆಂಬುದು ಇಲ್ಲಿ ಶೋಧಿತವಾಗಿದೆ. ವಚನಕಾರ್ತಿಯರ ದೇಸಿ ಮಾದರಿಯಿಂದ ತೊಡಗಿ, ಈ ಕಾಲದ ಪ್ರಮುಖ ತಾತ್ವಿಕತೆಯಾದ ಸ್ತ್ರೀವಾದಿ ಸಿದ್ಧಾಂತಗಳವರೆಗೆ ಇಲ್ಲಿನ ಚರ್ಚೆಯ ಹರಹಿದೆ. ನವೋದಯ ಸಾಹಿತ್ಯದ ಸಾಮಾಜಿಕ ಅರಿವು, ಪ್ರಗತಿಶೀಲ ಸಾಹಿತ್ಯದ ವೈಚಾರಿಕ ನಿಲುವ
APA, Harvard, Vancouver, ISO, and other styles
26

ಉಮಾದೇವಿ, ಜಿ. ಟಿ. "ಮಕ್ಕಳ ಕಥಾ ಸಾಹಿತ್ಯ". AKSHARASURYA JOURNAL 05, № 03 Special Issue (2024): 15 to 23. https://doi.org/10.5281/zenodo.14246361.

Full text
Abstract:
ನಮ್ಮ ಕನ್ನಡ ಸಾಹಿತ್ಯಕ್ಕೆ ಸುದೀರ್ಘವಾದ ಇತಿಹಾಸವಿದೆ. ಪೂರ್ವದ ಹಳೆಗನ್ನಡ, ಹಳೆಗನ್ನಡ, ನಡುಗನ್ನಡ, ಹೊಸಗನ್ನಡ, ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ ಸಾಹಿತ್ಯ ಎಂಬ ಕಾಲಘಟ್ಟದಲ್ಲಿ ಇಂದು ಹೆಮ್ಮರವಾಗಿ ಬೆಳೆದು ನಿಂತಿರುವುದನ್ನು ನಾವು ಕಾಣಬಹುದು. ಇಪ್ಪತ್ತನೆಯ ಶತಮಾನ ʼಅತ್ಯಂತ ವಿಶಿಷ್ಟವಾದ&rsquo; ಯುಗ ಎಂದು ಪರಿಗಣಿತವಾಗಿದ್ದು, ಈ ಕಾಲಘಟ್ಟದಲ್ಲಿ ಮಹಾಕಾವ್ಯ, ಭಾವಗೀತೆ, ಸಣ್ಣಕಥೆ, ಕಾದಂಬರಿ, ಪ್ರಬಂಧ, ನಾಟಕ, ಪ್ರವಾಸ ಸಾಹಿತ್ಯ, ವಿಚಾರಸಾಹಿತ್ಯ ಆತ್ಮಕಥೆ, ಜೀವನಚರಿತ್ರೆ ಇತ್ಯಾದಿ ಪ್ರಕಾರಗಳೆಲ್ಲವನ್ನು ಮೈಗೂಡಿಸಿಕೊಂಡು ಸಮೃದ್ಧವಾಗಿ ಬೆಳೆಯುತ್ತಿದೆ. ಇವುಗಳಲ್ಲಿ &ldquo;ಮಕ್ಕಳ ಸಾಹಿತ್ಯ&rdquo;ವೂ ಒಂದು. ಕನ್ನಡ ಸಾಹಿತ್ಯದಲ್ಲಿ ʼಮಕ್ಕಳ ಸಾಹಿತ್ಯದ&rsquo; ಬೇರನ್ನು ಜಾನಪದ ಪರಂಪರೆಯಲ್ಲಿಯೇ ಕಾಣಬಹುದಾದರೂ ʼಮಕ್ಕಳ ಸಾಹಿತ್ಯ&r
APA, Harvard, Vancouver, ISO, and other styles
27

HONNARAJU, S. V. "ಕುವೆಂಪು ಮತ್ತು ಬಿ.ಟಿ. ಲಲಿತ ನಾಯಕ್ ಅವರ ಕಾವ್ಯಗಳ ತೌಲನಿಕ ವಿಶ್ಲೇಷಣೆ". AKSHARASURYA JOURNAL 03, № 03 (2024): 87 to 99. https://doi.org/10.5281/zenodo.10775151.

Full text
Abstract:
ಕುವೆಂಪು ಮತ್ತು ಬಿ.ಟಿ. ಲಲಿತನಾಯಕ್ ರವರು ಕನ್ನಡದ ಶ್ರೇಷ್ಠ ಸಾಹಿತಿಗಳಾಗಿದ್ದಾರೆ. ಕುವೆಂಪುರವರು ಕನ್ನಡ ನವೋದಯ ಕಾಲದವರಾದರೆ, ಬಿ.ಟಿ. ಲಲಿತನಾಯಕ್ ಅವರು ದಲಿತ-ಬಂಡಾಯ ಪಂಥದವರಾಗಿದ್ದಾರೆ. ಇವರೀರ್ವರ ಕಾವ್ಯದೃಷ್ಟಿ ಹಾಗೂ ಕಾವ್ಯ ಸೃಷ್ಠಿಯಲ್ಲಿ ಅಪಾರವಾದ ಭಿನ್ನತೆ ಇದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪರಿಸರದ ನಿರ್ಮಿತಿಯಾಗಿರುತ್ತಾನೆ. ಮೇಲಿನ ಈರ್ವರೂ ಸಾಹಿತಿಗಳೂ ತಮ್ಮದೇ ಪರಿಸರದ ನಿರ್ಮಿತಿಯಾಗಿರುತ್ತಾರೆ. ಅವರ ಕಾವ್ಯದ ಅಧ್ಯಯನವು ಈ ಕಾವ್ಯ ದಿಗ್ಗಜಗಳ ಮೇಲಿನ ಪರಿಸರದ ಪ್ರಭಾವವನ್ನು ವ್ಯಕ್ತಪಡಿಸುತ್ತದೆ.&nbsp; ಬಿ.ಟಿ. ಲಲಿತನಾಯಕ್ ಅವರ ಕಾವ್ಯದಲ್ಲಿ ಸರಳತೆ ಎದ್ದು ಕಾಣುವುದು. ಕುವೆಂಪುರವರ ಕಾವ್ಯದಲ್ಲಿ ಕ್ಲಿಷ್ಟ ಪದಪುಂಜಗಳು ಸಾಮಾನ್ಯ. ಬಿ.ಟಿ. ಲಲಿತನಾಯಕ್ ಅವರಲ್ಲಿ ದೇಸೀಪದಗಳೇ ಜಾಸ್ತಿ; ಕುವೆಂಪು ಕಾವ್ಯದಲ್ಲಿ ಸಂಸ್ಕೃತ ಹಾಗೂ ಹ
APA, Harvard, Vancouver, ISO, and other styles
28

ಮಾದಪ್ಪ, ಜಿ. "'ತಮಂಧದ ಕೇಡು' ಕಥೆಯಲ್ಲಿ ಚಿತ್ರಣಗೊಂಡಿರುವ ಸಾಮಾಜಿಕ ವ್ಯವಸ್ಥೆ". AKSHARASURYA JOURNAL 05, № 03 Special Issue (2024): 45 to 52. https://doi.org/10.5281/zenodo.14246486.

Full text
Abstract:
ಭಾರತೀಯ ಸಾಮಾಜಿಕ ವ್ಯವಸ್ಥೆಯು ಬಹುತ್ವದ ನೆಲೆಯಿಂದ ಕೂಡಿದೆ. ಶೋಷಣೆಗೊಳಗಾದವರ ನೋವು, ಆಕ್ರೋಶ, ಸಂವೇದನೆಗಳನ್ನು ಪ್ರತಿಭಟನೆ, ಹೋರಾಟದ ಮೂಲಕ ಅಭಿವ್ಯಕ್ತಿಸುವ ಬಂಡಾಯ ಸಾಹಿತ್ಯ ಪಂಥದ ಆರಂಭಿಕ ಕಥೆಗಳು ಸಿಟ್ಟು, ಅವಮಾನ, ಹತಾಶೆ, ಆಕ್ರೋಶಗಳನ್ನು ರೋಷಾವೇಶದ ಭಾಷೆಯಲ್ಲಿಯೇ ಹೊರಹಾಕಿದೆ. ಈ ಕಾಲಘಟ್ಟದಲ್ಲಿ ಕಂಡುಬರುವ ಅಮರೇಶ ನುಗಡೋಣಿ ತಮ್ಮ ಕಥೆಗಳಲ್ಲಿ ಸಾಮಾಜಿಕ ಕಳಕಳಿ, ರಾಜಕೀಯಪ್ರಜ್ಞೆ ಹಾಗೂ ಪ್ರತಿಭಟನೆಯ ಮೂಲಕ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದ್ದಾರೆ. ಹಾಗೂ ತಮ್ಮ ಕಥೆಗಳಲ್ಲಿ 12ನೇ ಶತಮಾನದ ಬಸವಣ್ಣನ ಕಾಯಕ ವೃತ್ತಿಯ ಸಮಸಮಾಜದ ಕನಸಿನ ಸಮಾಜವನ್ನು ಮರುನಿರ್ಮಾಣ ಮಾಡಲು ಪ್ರಯತ್ನಿಸಿದ್ದಾರೆ. ದೇವನೂರು ಮಹಾದೇವ ಅವರ ಕಥೆಗಳನ್ನು ನೆನಪಿಸುವ ಇವರ ಕಥೆಗಳು ಅಲ್ಲಿನ ಪಾತ್ರಗಳಂತೆ ತಾತ್ವಿಕವಾಗಿ ಪ್ರತಿಭಟಿಸುವುದಿಲ್ಲ; ಮೃದುಧೋರಣೆಯಲ್ಲಿ ಸಾತ್
APA, Harvard, Vancouver, ISO, and other styles
29

ನಾಗೇಶ್, ಎನ್. "೨೧ನೆಯ ಶತಮಾನದ ಕನ್ನಡ ನಾಟಕ ಮತ್ತು ರಂಗಭೂಮಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್‌". AKSHARASURYA JOURNAL 06, № 05 (2025): 114 to 120. https://doi.org/10.5281/zenodo.15504329.

Full text
Abstract:
ರಂಗಭೂಮಿಯೊಂದು ಜಾಗತೀಕ ಕಲಾಭಿವ್ಯಕ್ತಿ ಮಾಧ್ಯಮವಾಗಿದೆ, ನಾಟಕವು ಜಗತ್ತಿನ ಸಾಂಸ್ಕೃತಿಕ ಸೃಜನಶೀಲತೆಯ ಅಸ್ಮಿತೆಯ ಭಾಗವಾಗಿ ಲೋಕದರ್ಶನವನ್ನು ಒಡಮೂಡಿಸುವಲ್ಲಿ ಪ್ರಮುಖ ಸಾಹಿತ್ಯ ಪ್ರಕಾರವಾಗಿದೆ. ಶ್ರೇಷ್ಠ ದಾರ್ಶನಿಕರಾದ ಬುದ್ಧ, ಬಸವಣ್ಣ, ಡಾ. ಬಿ. ಆರ್. ಅಂಬೇಡ್ಕರ್&zwnj;, ಜ್ಯೋತಿ ಬಾ ಪುಲೆ, ಪೆರಿಯಾರ್, ನಾರಾಯಣಗುರುಗಳಂತಹ ಆದರ್ಶಪ್ರಾಯರಾದವರ ಜೀವನ ಆಧಾರಿತ ನಾಟಕಗಳನ್ನು ರಂಗರೂಪಕ್ಕೆ ತಂದು ಸಮುದಾಯಗಳತ್ತ ತೆಗೆದುಕೊಂಡು ಹೋಗುವ ಅನಿವಾರ್ಯತೆ ಈ ನಾಡಿಗಿದೆ.&nbsp;ಅಂಬೇಡ್ಕರ್&zwnj; ಅವರು ʼತಳಸಮುದಾಯಗಳಿಗೆ ಮಾತ್ರವಲ್ಲದೆ ಎಲ್ಲ ಸಮುದಾಯಗಳಿಗೂ ಅಕ್ಷರದ ಮೂಲಕ ವಿಮೋಚನೆ ಸಾಧ್ಯ&rsquo; ಎಂಬುದನ್ನು ತಿಳಿಸಿಕೊಟ್ಟರು. ಇವರ ಬದುಕು, ಬರಹ ಮತ್ತು ಭಾಷಣಗಳಲ್ಲಿನ ಚಿಂತನಾಧಾರೆಗಳನ್ನು ಕನ್ನಡ ನಾಟಕ ಮತ್ತು ರಂಗಭೂಮಿಗೆ ಅಳವಡಿಕೊಳ್ಳುವುದರ ತುರ್ತು
APA, Harvard, Vancouver, ISO, and other styles
30

ಲೋಕಾಂಬಿಕಾ. "ಭಾಗೀರಥಿ ಹೆಗಡೆ ಅವರ ಹೊಳೆಯ ಹಾದಿ ಕಾದಂಬರಿಯ ಪುರುಷ ಪಾತ್ರಗಳ ವಿಶ್ಲೇಷಣೆ". AKSHARASURYA 05, № 02 (2024): 112 to 122. https://doi.org/10.5281/zenodo.14035334.

Full text
Abstract:
ಸುಮಾರು ಎರಡು ಸಾವಿರ ವರ್ಷಗಳಷ್ಟು ಸುದೀರ್ಘವಾದ ಇತಿಹಾಸವನ್ನು ಹೊಂದಿರುವ ಕನ್ನಡ ಸಾಹಿತ್ಯ ಬಹು ಸಮೃದ್ಧವಾಗಿದ್ದು ಅದರಲ್ಲಿ ಆಧುನಿಕ ಕನ್ನಡ ಸಾಹಿತ್ಯ ಘಟ್ಟವು ಒಂದು. ಈ ಕಾಲಘಟ್ಟ ಒಂದು ರೀತಿಯಲ್ಲಿ ವಿಶೇಷ ಮತ್ತು ವಿಶಿಷ್ಟ. ಕಾರಣ ಆಧುನಿಕ ಕನ್ನಡ ಸಾಹಿತ್ಯವನ್ನು ಅಧ್ಯಯನದ ದೃಷ್ಟಿಯಿಂದ ಅದು ಬೆಳೆದು ಬಂದಿರುವ ಆಧಾರದ ಮೇಲೆ ನವೋದಯ, ನವ್ಯ, ಪ್ರಗತಿಶೀಲ, ದಲಿತ-ಬಂಡಾಯ ಮತ್ತು ಮಹಿಳಾ ಸಾಹಿತ್ಯ ಎಂದು ಅನೇಕ ಭಾಗಗಳಾಗಿ ವಿಂಗಡಿಸಿದ್ದೇವೆ. ಕಥೆ, ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಕಾವ್ಯದಂತಹ ಅನೇಕ ಸಾಹಿತ್ಯ ಪ್ರಕಾರಗಳು ಈ ಕಾಲಘಟ್ಟದಲ್ಲಿ ಬೆಳೆದು ತನ್ನ ಸಾಹಿತ್ಯ ಕ್ಷೇತ್ರವನ್ನು ಹಿಗ್ಗಿಸಿಕೊಂಡಿವೆ. ಆದುದರಿಂದ ಈ ಕಾಲಘಟ್ಟವನ್ನು ಸಾಹಿತ್ಯ ಕ್ಷೇತ್ರದ ಸುಗ್ಗಿಯ ಕಾಲ ಎಂತಲೇ ಕರೆಯಬಹುದು. ಕೇವಲ ಬೆರಳೆಣಿಕೆಯಷ್ಟಿದ್ದ ಮಹಿಳಾ ಲೇಖಕಿಯರು ಹೊಸಗನ
APA, Harvard, Vancouver, ISO, and other styles
31

ಚಿಕ್ಕಮಗಳೂರು, ಗಣೇಶ. "ವರ್ತಮಾನದ ಕನ್ನಡಿಯಲ್ಲಿ ಕನಕ ದರ್ಶನ". AKSHARASURYA JOURNAL 04, № 05 Special Issue (2024): 06 to 16. https://doi.org/10.5281/zenodo.13294272.

Full text
Abstract:
ಭಕ್ತಿಯ ಖಾಸಗಿ ವಿಚಾರಗಳನ್ನು ಸಮಾಜ ಸುಧಾರಣೆಗೆ ಮಾಧ್ಯಮವಾಗಿ ಬಳಸಿಕೊಂಡ ಕನಕದಾಸರು ಕನ್ನಡ ನಾಡಿನ ಅನನ್ಯ ಭಕ್ತಿ ಕವಿ. ಅವರು ವಾಸಿಸುತ್ತಿದ್ದ ಮಧ್ಯಕಾಲೀನ ಅವಧಿಯು ಸಂಕೀರ್ಣವಾಗಿತ್ತು. ಇದು ಧರ್ಮ ಮತ್ತು ಆಡಳಿತದ ನಡುವಿನ ತೀವ್ರ ಸಂಘರ್ಷದ ಅವಧಿ. ಅಲ್ಲಿ ಅವರು ಹರಿದಾಸ ಚಳವಳಿಯ ಮುಖವಾಣಿಯಾಗಿ ನಮ್ಮನ್ನು ಭೇಟಿಯಾಗುತ್ತಾರೆ. ಆ ಚಳವಳಿಯ ತತ್ತ್ವಶಾಸ್ತ್ರವು ಮೇಲ್ನೋಟಕ್ಕೆ ಉದಾರವಾದದ್ದಾಗಿತ್ತು. ಆಂತರಿಕವಾಗಿ ದೋಷಯುಕ್ತ, ತಾರತಮ್ಯ ಮತ್ತು ಅಸಮ ನೆಲ. ಕನಕನೂ ತನ್ನ ಹಿನ್ನಲೆಯಲ್ಲಿ ಇಟ್ಟುಕೊಂಡಿರುವ ಎಲ್ಲ ಸೈದ್ಧಾಂತಿಕ ಗೊಂದಲಗಳಲ್ಲಿ ಸಿಲುಕಿಕೊಳ್ಳುತ್ತಾನೆ. ವ್ಯಾಸಕೂಟ ಮತ್ತು ದಾಸಕೂಟಗಳು ತಾತ್ವಿಕ ಸಂಘರ್ಷದ ನಡುವೆ ತಮ್ಮನ್ನು ತಾವು ಪ್ರತಿಪಾದಿಸಲು ಹೆಣಗಾಡುತ್ತವೆ.&nbsp; ಚಳವಳಿಯ ಪರಿಸರದಲ್ಲೂ ಅಪಾರ ಒಂಟಿತನ ಅನುಭವಿಸಿದ ಕವಿ. ಇದಕ್ಕೆ ಕಾರಣವೆ
APA, Harvard, Vancouver, ISO, and other styles
32

ಶೈಲಜ, ಹಿರೇಮಠ, та ಎಂ. ಭೈರಪ್ಪ ಕುಪ್ಪನಹಳ್ಳಿ. "ಬುಡಕಟ್ಟು ಮಹಿಳೆ: ಸ್ಥಾಪಿತ ಗ್ರಹಿಕೆಗಳಿಗೆ ಭಿನ್ನಮತ". AKSHARASURYA 05, № 02 (2024): 01 to 34. https://doi.org/10.5281/zenodo.14035474.

Full text
Abstract:
ಪ್ರಸ್ತುತ ಸಂದರ್ಭದಲ್ಲಿ ವಿಶಾಲಾರ್ಥ ದೃಷ್ಟಿಕೋನದ ಬರಹಗಾರರಾಗುವುದೆಂದರೆ, ಸಮಾಜದಲ್ಲಿನ ಜಾತಿ, ಪ್ರದೇಶ, ಬುಡಕಟ್ಟು, ಆದಿವಾಸಿ ಮತ್ತು ಜಂಡರ್ ಆಧಾರಿತ ಶ್ರೇಣೀಕರಣವನ್ನು ಮೀರುವುದೇ ಆಗಿದೆ; ಹಾಗಿದ್ದರೂ ಅಸಮಾನತೆಗೆ ಬುನಾದಿಯೊದಗಿಸುವ ಶ್ರೇಣೀಕರಣವನ್ನು ಅಸ್ಮಿತೆಯಾಗಿ, ಅನನ್ಯತೆಯಾಗಿ ಚಿಂತಕರು ನಿರೂಪಿಸಿದ್ದರ ಪರಿಣಾಮದಿಂದಾಗಿ, ಅಸಮಾನತೆಯನ್ನು ಸಮರ್ಥಿಸುವ ನಿರೂಪಣೆಗಳು ಸಾಹಿತ್ಯ ಲೋಕದಲ್ಲೂ ನಿರಾತಂಕವಾಗಿ ಮುಂದುವರೆದಿವೆ. ಬರಹಲೋಕದೊಳಗಿನ ಇಂತಹ ನಿರೂಪಣೆಯ ರಾಜಕಾರಣವೇ ಸತ್ಯವನ್ನು ಸೃಷ್ಟಿಸುತ್ತ, ಅದನ್ನು ಒಪ್ಪುವಂತೆ ಜ್ಞಾನದ ಅಧಿಕಾರದ ನೆಲೆಯಲ್ಲಿ ಒತ್ತಾಯಿಸುತ್ತದೆ; ಅಧ್ಯಯನದೊಳಗಿನ ಬರಹಗಾರರ ಉದ್ದೇಶದ ಭಾಗವಾಗಿ ನಿರೂಪಣೆಗೊಂಡ ನಿಲುವುಗಳನ್ನು ಸಮಸ್ಯೀಕರಿಸಿಕೊಂಡು ಮರುವಿಶ್ಲೇಷಣೆಗೆ ಒಳಪಡಿಸಬೇಕಿದೆ. ಈ ಉದ್ದೇಶದ ಹಿನ್ನೆಲೆಯಲ್ಲಿಯೇ ಮಹಿಳೆ
APA, Harvard, Vancouver, ISO, and other styles
33

ಕಮಲಾ, ಹಂಪನಾ, та ಎಂ. ಭೈರಪ್ಪ ಕುಪ್ಪನಹಳ್ಳಿ. "ಜೈನ ದೃಷ್ಟಿಯಲ್ಲಿ ಸ್ತ್ರೀ". AKSHARASURYA 03, № 06 (2024): 01 to 18. https://doi.org/10.5281/zenodo.11126790.

Full text
Abstract:
ಕನ್ನಡ ಮಹಿಳಾ ಸಾಹಿತ್ಯ ಜಗತ್ತಿನಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದವರಲ್ಲಿ ಡಾ.ಕಮಲಾ ಹಂಪನಾ ಅವರು ಪ್ರಮುಖರಾಗಿದ್ದಾರೆ. ಕಥೆ, ಕಾವ್ಯ, ನಾಟಕ, ಕಾದಂಬರಿ ಕ್ಷೇತ್ರಗಳಲ್ಲಿ ಗಣನೀಯ ಕೃಷಿ ಮಾಡಿರುವ ಹಲವಾರು ಲೇಖಕಿಯರು ನಮಗೆ ಸಿಗುತ್ತಾರೆ. ಆದರೆ ಸಂಶೋಧನೆ, ಸಂಪಾದನೆಯಂಥ ವಿದ್ವತ್ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಮಹತ್ತರವಾದ ಕಾಣ್ಕೆಯನ್ನು ನೀಡಿದ ಲೇಖಕಿಯರು ಅಪರೂಪ. ಅಂತಹ ಅಪರೂಪದ ಸಂಶೋಧಕಿಯರಲ್ಲಿ ಕಮಲಾ ಹಂಪನಾ ಅವರು ಅಗ್ರಗಣ್ಯರಾಗಿ ಕಾಣುತ್ತಾರೆ. ಸಾಮಾಜಿಕ ತಾರತಮ್ಮ ಹಾಗೂ ಲಿಂಗ ತಾರತಮ್ಯಗಳ ನಡುವೆ ಹಲವಾರು ಸವಾಲುಗಳನ್ನು ದಾಟಿಕೊಂಡು ಅಧ್ಯಯನ ನಡೆಸಿ, ಬೋಧನೆ-ಸಂಶೋಧನೆಯ ಬೇಸಾಯದಲ್ಲಿ ಗುರುತರವಾದ ಸಾಧನೆಗೈದು ಮಾದರಿ ಮಹಿಳೆ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಡಾ.ಕಮಲಾ ಹಂಪನಾ ಅವರು ಬೆಂಗಳೂರು ಜಿಲ್ಲೆ ದೇವನಹಳ್ಳಿಯಲ್ಲಿ ೧
APA, Harvard, Vancouver, ISO, and other styles
34

ಡಿ.ಆರ್.‌, ನಾಗರಾಜ್, та ಎಂ. ಭೈರಪ್ಪ ಕುಪ್ಪನಹಳ್ಳಿ. "ಅಲ್ಲಮನ ಕಾಯ ಸಿದ್ಧಾಂತ". AKSHARASURYA JOURNAL 05, № 04 (2024): 01 to 29. https://doi.org/10.5281/zenodo.14289448.

Full text
Abstract:
ಡಾ.ಡಿ.ಆರ್.ನಾಗರಾಜ್ ಅವರ ಹೆಸರು ಕೇಳಿದಾಕ್ಷಣ ಕನ್ನಡದ ಶ್ರೇಷ್ಠ ವಿಮರ್ಶಕರು ಎಂಬ ಪ್ರಶಂಸೆಯೇ ಮೊದಲಿಗೆ ನೆನಪಾಗುತ್ತದೆ. ಆದರೆ, ಡಿ.ಆರ್.ಎನ್ ಅವರು ವಿಮರ್ಶೆ ಎಂಬ ಪ್ರಾಕಾರಸೀಮೆಯನ್ನು ದಾಟಿಕೊಂಡು ನಿಸ್ಸೀಮರಾಗಿ ಸೃಜನಶೀಲ ಲೇಖಕರಾಗಿಯೂ ಸಾಂಸ್ಕೃತಿಕ ಸಂಶೋಧಕರಾಗಿಯೂ ಮಹತ್ತರವಾದ ಸಾಧನೆಯನ್ನು ಮಾಡಿದ್ದಾರೆ. ಬೈನರಿ ವಿಭಜನೆಯ ಚಿಂತನಕ್ರಮಗಳಿಂದಾಗಿ ಕನ್ನಡಕ್ಕೆ ಉಂಟಾಗುತ್ತಿರುವ ಧಕ್ಕೆಯನ್ನು ಮನಗಂಡು ಕನ್ನಡ ಪ್ರಜ್ಞಾವಲಯದ ವೈಶಾಲ್ಯತೆಯನ್ನೂ ವೈವಿಧ್ಯತೆಯನ್ನೂ ತನ್ಮೂಲಕ ಕೂಡಲಸಂಗಮಗೊಳಿಸಿದ ಅಪೂರ್ವ ಚಿಂತಕರಾಗಿದ್ದಾರೆ. ಭಾರತದ ಪ್ರಮುಖ ಚಿಂತಕರಲ್ಲಿ ಒಬ್ಬರಾಗುವ ಮಟ್ಟಿಗೆ ಬೆಳೆದ ಡಿ.ಆರ್&zwnj;.ನಾಗರಾಜ್ ಅವರ ಬರವಣಿಗೆಯು ಪ್ರಖರ ಚಿಂತನೆಗೆ ಹೆಸರುವಾಸಿಯಾಗಿದೆ. ನಟರಾಜ್ ಹುಳಿಯಾರ್ ಅವರು ದಾಖಲಿಸುವಂತೆ, &lsquo;ಸಾಹಿತ್ಯ ವಿಮರ್ಶೆ, ಸಂಶೋಧನೆ,
APA, Harvard, Vancouver, ISO, and other styles
35

ಕೆ. ವಿ., ಡಾ ರಾಕೇಶ್ಶರ್ಮ. "ಸವರ್ಣಿಯ ಕುಟುಂಬದ ಕಣ್ಣು-ದಲಿತ ಹೆಣ್ಣು : ‘ರಕ್ತವರ್ಣೆ’ನಾಟಕ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 30 вересня 2023, 104–13. http://dx.doi.org/10.59176/kjksp.v2i2.2306.

Full text
Abstract:
ಸಾಮಾಜಿಕ ಚಿಂತನೆ, ವೈಚಾರಿಕ ದೃಷ್ಟಿಕೋನದ ಮೂಲಕ ಸಮಾಜವನ್ನು ಕಟ್ಟಲು ಪ್ರಯತ್ನಿಸಿದವರು ದಾಸರು. ದಾಸರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ದಾಸರು ಕೀರ್ತನೆಗಳ ಮೂಲಕ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದವರು ದಾಸರು. ದಾಸರು ತಮ್ಮ ಹರಿತವಾದ ಮಾತುಗಳಿಂದ ಸಮಾಜದ ಕುಂದುಕೊರತೆಗಳನ್ನು ಮುಚ್ಚುಮರೆಯಿಲ್ಲದೆ ಖಂಡಿಸುತ್ತಾರೆ. ದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಕಳಕಳಿ, ಮಾನವೀಯ ಮಿಡಿತಗಳಿವೆ. ದಾಸರ ಕೀರ್ತನೆಗಳು ಸಾಮಾಜಿಕ ಪರಿವರ್ತನೆಗೆ ದಾರಿ ದೀಪಗಳು. ಕೀರ್ತನೆಗಳು ಅಂದಿಗೆ ಮಾತ್ರ ಸೀಮಿತವಲ್ಲ. ಇವತ್ತು ಕೂಡಾ ಪ್ರಸ್ತುತವಾಗಿವೆ. ದಾಸರ ಕೀರ್ತನೆಗಳ ಮರ್ಮವನ್ನು ಅರಿತುಕೊಳ್ಳುವುದು ಅಗತ್ಯವಾಗಿದೆ.
APA, Harvard, Vancouver, ISO, and other styles
36

ಎ.ಕೆ., ಡಾ ರವಿಶಂಕರ್. "ಜನಪದ ತ್ರಿಪದಿಗಳಲ್ಲಿ ‘ಗರತಿ’ ಪರಿಕಲ್ಪನೆ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 30 вересня 2023, 42–52. http://dx.doi.org/10.59176/kjksp.v2i2.2301.

Full text
Abstract:
‘ಗರತಿ’ ಎಂಬ ಪದವನ್ನು ಆಧುನಿಕವಾಗಿ ಹೊಸ ಅರ್ಥಗಳೊಂದಿಗೆ ನಿರ್ವಚಿಸಿಕೊಂಡು ಅಧ್ಯಯನಮಾಡಬೇಕಿದೆ. ಭಾರತೀಯ ಸಮಾಜವು ಹೆಣ್ಣನ್ನು ಅರ್ಥೈಸಿಕೊಂಡು ಬಂದಿರುವ ಪರಂಪರೆಯು ಪರಸ್ಪರ ವಿರುದ್ಧವಾಗಿದೆ. ‘ಹೆಣ್ಣು ಸಂಸಾರದ ಕಣ್ಣು’ ಎನ್ನುವಾಗಲೇ ಆಕೆಯನ್ನು ಗೌರವಿಸುವ ಮನೆದೇವತೆ, ಗೃಹಿಣಿ, ಮಹಾಲಕ್ಷ್ಮಿ ಮೊದಲಾದ ಪದಗಳು ಗೃಹದಲ್ಲೇ ಉಳಿಸುತ್ತಾ ಎಲ್ಲಾ ಜವಾಬ್ದಾರಿಯನ್ನು ಆಕೆಯ ಕರ್ತವ್ಯವೆಂಬಂತೆ ಹೊರಿಸಿದ ಅಭಿಮುಖ ಸಿದ್ಧಾಂತಗಳು ಇಂದಿನ ಪ್ರಚಲಿತ ಪ್ರಶ್ನೆಗಳಾಗಿವೆ. ಸಾಹಿತ್ಯದ ಮುಕ್ಕಾಲುಪಾಲು ಅಧ್ಯಯನಗಳು ಹೆಣ್ಣು ಮತ್ತು ದಲಿತ ಶೋಷಣೆಗಳನ್ನು ಅತ್ಯಂತ ಗಂಭೀರವಾಗಿ ಅಧ್ಯಯನಮಾಡುತ್ತಿದೆ. ಇದರ ಬೇರುಗಳನ್ನು ಸರಿಯಾಗಿ ಅಧ್ಯಯನಮಾಡದಿದ್ದರೆ ಹೊಸ ಅರ್ಥಗಳಿಗೆ ಮೌಲ್ಯವಿರುವುದಿಲ್ಲ. ಜನಭಾಷೆಯ ಎಲ್ಲಾ ಸಾಹಿತ್ಯವು ಕ್ರಿ. ಪೂ ಮಿಗಿಲಾಗಿ ನಮ್ಮ ಜನಪದ ಸಾಹಿತ್ಯದಿಂದ ಬಂ
APA, Harvard, Vancouver, ISO, and other styles
We offer discounts on all premium plans for authors whose works are included in thematic literature selections. Contact us to get a unique promo code!