To see the other types of publications on this topic, follow the link: ದೇವರು.

Journal articles on the topic 'ದೇವರು'

Create a spot-on reference in APA, MLA, Chicago, Harvard, and other styles

Select a source type:

Consult the top 15 journal articles for your research on the topic 'ದೇವರು.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Browse journal articles on a wide variety of disciplines and organise your bibliography correctly.

1

ವಾಣಿ, ಡಿ.ಎಸ್. "ಆಧ್ಯಾತ್ಮಿಕತೆಯ ಹಿನ್ನೆಲೆಯಲ್ಲಿ ನಾಕುತಂತಿ ಕವನದ ವಿಶ್ಲೇಷಣೆ". AKSHARASURYA JOURNAL 06, № 06 (2025): 85 to 96. https://doi.org/10.5281/zenodo.15581057.

Full text
Abstract:
ದ.ರಾ. ಬೇಂದ್ರೆಯವರ ʼನಾಕುತಂತಿʼ ಎಂಬ ಕಾವ್ಯವು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತ್ಯದ ಒಂದು ಮಹತ್ವಪೂರ್ಣ ಕಾವ್ಯವಾಗಿದೆ. ತಮ್ಮ ಭಾಷೆಯ ಮೂಲಕವೇ ಕೋಟ್ಯಂತರ ಸಾಹಿತ್ಯಾಸಕ್ತರನ್ನು ಹೊಂದಿದ್ದು ದ. ರಾ. ಬೇಂದ್ರೆ ನಿಜಕ್ಕೂ ಕನ್ನಡಕ್ಕೆ ದೇವರು ಕರುಣಿಸಿದ “ವರಕವಿ”ಯೇ ಸರಿ. ಆದ್ಯಾತ್ಮ ನೆಲೆಯ ಒಂದು ನಿಗೂಢ ಕವನವಾಗಿದೆ. ಸಮಸ್ತ ವಿಶ್ವವನ್ನು ವೀಣೆಗೆ ಹೋಲಿಸಿ ಅದಕ್ಕಿರುವುದು ನಾನು, ನೀನು, ಆನು, ತಾನು ಎಂಬ ನಾಲ್ಕು ತಂತಿಗಳು ಇದು ನಾಲ್ಕುಭಾಗಗಳಲ್ಲಿ ವಿಂಗಡಿತವಾಗಿದ್ದು ಪ್ರತಿಯೊಂದು ಭಾಗವೂ ಆಧ್ಯಾತ್ಮಿಕ ಮತ್ತು ತಾತ್ವಿಕ ಅರ್ಥಗಳನ್ನು ಒಳಗೊಂಡಿದೆ. ಇವರ ಪ್ರಕಾರ ಸಮಸ್ತ ಸೃಷ್ಟಿಯೇ ಒಂದು ವಿರಾಟ್‌ ವೀಣೆ. 
APA, Harvard, Vancouver, ISO, and other styles
2

ಪುಟ್ಟಸ್ವಾಮಿ. "ಕುವೆಂಪು ಅವರ ವೈಚಾರಿಕತೆ". AKSHARASURYA JOURNAL 05, № 04 (2024): 115 to 125. https://doi.org/10.5281/zenodo.14289937.

Full text
Abstract:
ಕನ್ನಡ ಸಾಹಿತ್ಯ ಸಂದರ್ಭದಲ್ಲಿ ‘ಕುವೆಂಪು’ ಎನ್ನುವ ಹೆಸರೇ ಒಂದು ವಿಶಿಷ್ಟವಾದ ಕಂಪನ್ನ, ಸೊಂಪನ್ನ ಒಳಗೊಂಡಿದೆ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಕೃಷಿ ಮಾಡಿರುವ ಇವರು ಸೀಮಾಪುರುಪರೆನಿಸಿಕೊಂಡಿದ್ದಾರೆ. ಮುಖ್ಯವಾಗಿ ಅವರ ವೈಚಾರಿಕ ನಿಲುವು ವೈಜ್ಞಾನಿಕ ದೃಷ್ಟಿಯಿಂದ ಪ್ರೇರಿತವಾದದ್ದು. ವೈಚಾರಿಕತೆ ಎಂಬುದು ಬುದ್ಧಿ ಮತ್ತು ಭಾವಗಳ ವಿದ್ಯುದಾಲಿಂಗನ. ಸೂಕ್ಷ್ಮವಾದ ವಿವೇಚನಾಶಕ್ತಿ, ಆಲೋಚನಾಶಕ್ತಿಗಳ ಅಭಿವ್ಯಕ್ತಿಯ ಸಂಗಮ. ವಿವೇಕಪೂರ್ಣವಾದ ವಿವೇಚನೆಯೇ ವೈಚಾರಿಕತೆಯ ತಳಹದಿಯಾಗಿದೆ. ವೈಚಾರಿಕತೆ ಎಂಬುದು ಮೂಲಭೂತ ಮೌಲ್ಯಗಳನ್ನು ನಿರಾಕರಿಸಬಾರದು. ಸತ್ಯವನ್ನು ಶೋಧಿಸುವಾಗ ಭೌತಿಕವಾಗಿ ಕಣ್ಣಿಗೆ ಕಾಣುವ ವಸ್ತುವಿನ ವೈಜ್ಞಾನಿಕ ದೃಷ್ಟಿಯೊಂದೆ ನಿಜವಾಗಲಾರದು. ಅದರ ಜೊತೆಗೆ ಆ ವಸ್ತುವಿನ ಅಂತರಾಳದ ಚೈತನ್ಯಾತ್ಮಕ ಭಾವಲಹರಿಯು ಕೂಡ ಮುಖ್ಯ
APA, Harvard, Vancouver, ISO, and other styles
3

ತೇಜಾವತಿ, ಕೆ. "ಕುವೆಂಪುರವರ ಜಲಗಾರ ನಾಟಕ". AKSHARASURYA JOURNAL 05, № 06 (2025): 83 to 91. https://doi.org/10.5281/zenodo.14788756.

Full text
Abstract:
ರಾಷ್ಟ್ರಕವಿ ಕುವೆಂಪುರವರು ಕನ್ನಡದ ಮೇರು ಕವಿ, ಅಗ್ರಮಾನ್ಯ ಕವಿ, ಕಾದಂಬರಿಕಾರ, ವಿಮರ್ಶಕ, ಉತ್ತಮ ಚಿಂತಕರೂ ಆಗಿದ್ದರು. ಇವರು ಅನೇಕ ನಾಟಕಗಳನ್ನು ಬರೆದಿದ್ದಾರೆ. 20ನೇಯ ಶತಮಾನದ ಶ್ರೇಷ್ಠಕವಿ, ವರಕವಿ ಬೇಂದ್ರೆಯವರಿಂದ “ಯುಗದಕವಿ ಜಗದಕವಿ” ಎನಿಸಿಕೊಂಡವರು. ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದವರು ಕುವೆಂಪುರವರು.ಜಲಗಾರ ನಾಟಕ ಆರಂಭಗೊಳ್ಳುವುದು ಆಗಷ್ಟೇ ಸೂರ್ಯ ಮೂಡುವ ಹೊತ್ತಿನಲ್ಲಿ ಇನ್ನೂ ರಂಗದ ಮೇಲೆಲ್ಲಾ ಮಬ್ಬು ಮಬ್ಬು ಕತ್ತಲು, “ಮೂಡಿ ಬಾ, ಮೂಡಿ ಬಾ, ಜಗದ ಕಣ್ಣೆ ಬಾ, ಬಾ” ಎಂದು ಬೆಳಗನ್ನು ಸ್ವಾಗತಿಸುವ ಹಾಡಿನ ಮೂಲಕ ನಾಟಕ ಆರಂಭಗೊಳ್ಳುತ್ತದೆ. ಜಲಗಾರ ನಾಟಕದಲ್ಲಿ ಇರುವುದು ಎರಡು ದೃಶ್ಯಗಳು. ಮೊದಲನೆಯದು “ದೇವಸ್ಥಾನಕ್ಕೆ ಜನರು ಹೋಗುತ್ತಿರುವುದು” ಎರಡನೆಯದು “ದೇವಸ್ಥಾನದಿಂ
APA, Harvard, Vancouver, ISO, and other styles
4

GEETHA, A. C. "`ಅಮ್ಮ'ನವರ ಆರಾಧನೆಯಲ್ಲಿನ ಸಾಂಸ್ಕೃತಿಕ ಅನನ್ಯತೆ". AKSHARASURYA JOURNAL 03, № 03 (2024): 63 to 70. https://doi.org/10.5281/zenodo.10775087.

Full text
Abstract:
ಜನಪದರಲ್ಲಿ ಆರಾಧನೆ ಎಂಬುದು ಬದುಕಿನ ಅವಿಭಾಜ್ಯ ಅಂಗವಾಗಿದೆ. ಆಚಾರ-ವಿಚಾರ, ನಂಬಿಕೆಗಳಿಂದ ಕೂಡಿರುವ ಆರಾಧನೆಯು ಇಷ್ಟಾರ್ಥ ಸಿದ್ಧಿಯ ನೆಲೆಯಲ್ಲಿ ಮಹತ್ವವನ್ನು ಪಡೆಯುತ್ತದೆ. ಭಯದಿಂದ ಮುಕ್ತವಾಗಲು ಕಷ್ಟ ಪರಿಹಾರವಾಗಲು ದೇವರುಗಳ ಮೊರೆ ಹೋಗುವುದು ಜನಪದರ ಬಹುಮುಖ್ಯ ಚಟುವಟಿಕೆ. ತಮಗೆ ಎದುರಾದ ಕಷ್ಟಗಳನ್ನು ರೋಗರುಜಿನಗಳನ್ನು ನಂಬಿಕೆ, ವಿಶ್ವಾಸಕ್ಕೆ ಪಾತ್ರರಾಗಿರುವ ಪ್ರೀತಿಯ ವ್ಯಕ್ತಿಗಳಲ್ಲಿ ಹೇಳಿಕೊಂಡು ಮನೋಭಾರವನ್ನು ಕಳೆದುಕೊಳ್ಳಲು ಸಾಧ್ಯವಾಗುವುದಿಲ್ಲ. ತಮ್ಮತಮ್ಮಲ್ಲೇ ಎಷ್ಟೇ ಕಷ್ಟಗಳನ್ನು ತೋಡಿಕೊಂಡರೂ ಸಮಾಧಾನ ಅನ್ನಿಸುವುದಿಲ್ಲ. ಅಂದರೆ ಮನುಷ್ಯರ ಶಕ್ತಿಗೆ ಒಂದು ಮಿತಿ ಎನ್ನುವುದು ಇದೆ. ಎಲ್ಲವೂ ಮನುಷ್ಯರ ಕೈಯಿಂದ ಅಸಾಧ್ಯ ಎಂಬ ವಿಚಾರವನ್ನು ಜನಪದರು ನಂಬಿದ್ದಾರೆ. ಮಾನವನ ಶಕ್ತಿಗಿಂತ ಮಿಗಿಲಾದ ಶಕ್ತಿ ಇದೆ ಎಂದು ನಂಬುವ ಜನಪದರು, ಆ ಶ
APA, Harvard, Vancouver, ISO, and other styles
5

ಗಣೇಶ, (ಚಿಕ್ಕಮಗಳೂರು ಗಣೇಶ). "ಹಿಂದುಳಿದ ವರ್ಗಗಳ ಚಳವಳಿ: ಚಾರಿತ್ರಿಕ ಹಿನ್ನೆಲೆ, ಸ್ವರೂಪ ಹಾಗೂ ಮಹತ್ವ". AKSHARASURYA JOURNAL 03, № 04. SPECIAL ISSUE. (2024): 38 to 49. https://doi.org/10.5281/zenodo.10929675.

Full text
Abstract:
ಕನ್ನಡ ನೆಲದಲ್ಲಿ ಬಸವಣ್ಣನ ಸಾಂಸ್ಕೃತಿಕ ನಾಯಕತ್ವದಲ್ಲಿ ವಚನ ಸಾಹಿತ್ಯಾಭಿವ್ಯಕ್ತಿಯ ಮೂಲಕ ಜರುಗಿದ ಸಮಾನತೆಯ ಚಿಂತನೆಯ ಹೋರಾಟ ಚರಿತ್ರೆಯಲ್ಲಿ ಮಹತ್ವದ್ದಾಗಿದೆ. ಅದು ಸಂಭವಿಸಿದ ಕಾಲ 12ನೆಯ ಶತಮಾನ. ಅದರ ತರುವಾಯ 19ನೆಯ ಶತಮಾನದಲ್ಲಿ ‘ಬ್ರಾಹ್ಮಣ್ಯ ಆಡಳಿತಶಾಹಿ ಯಜಮಾನಿಕೆ’ ವಿರುದ್ಧ ಹಿಂದುಳಿದ ವರ್ಗಗಳನ್ನು ಜಾಗೃತಿಗೊಳಿಸಲು ಕೆಳಕಾಣಿಸಿದ ಹೋರಾಟಗಳು ಮಹತ್ವದ ಪಾತ್ರ ವಹಿಸಿದವು. ಮಹಾರಾಷ್ಟ್ರದ ಜೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿಗಳು ‘ಸತ್ಯಶೋಧಕ ಸಮಾಜ’ದ ಮುಖಾಂತರ, ಬ್ರಾಹ್ಮಣ್ಯ ಪ್ರಾಬಲ್ಯದ ವಿರೋಧ-ಶೂದ್ರ ದಲಿತರಿಗೆ ಸಮಾನತೆಯ ಹಕ್ಕು-ಮಹಿಳೆಯರ ಶಿಕ್ಷಣದ ಸಲುವಾಗಿ ಹಗಲಿರುಳು ಹೋರಾಡಿದರು. ಶಾಹು ಮಹಾರಾಜರು ತಮ್ಮ ಸಂಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ಬ್ರಾಹ್ಮಣೇತರರಿಗೆ ಅವಕಾಶ ನೀಡುವ ಉದ್ದೇಶದಿಂದ ಉದ
APA, Harvard, Vancouver, ISO, and other styles
6

ಪ್ರಕಾಶ, ಬಿ. "ಡಾ. ಬಿ.ಆರ್. ಅಂಬೇಡ್ಕರ್‌ ಮತ್ತು ಗಾಂಧೀಜಿ: ಜಾತಿ, ವರ್ಣ, ಹಿಂದುತ್ವ ಕುರಿತು ಅಭಿಪ್ರಾಯ-ಭಿನ್ನಾಭಿಪ್ರಾಯಗಳು". AKSHARASURYA JOURNAL 06, № 05 (2025): 141 to 150. https://doi.org/10.5281/zenodo.15504412.

Full text
Abstract:
ವರ್ತಮಾನದಲ್ಲಿ ಗಾಂಧೀಜಿ ಮತ್ತು ಡಾ. ಬಿ. ಆರ್, ಅಂಬೇಡ್ಕರ್‌‌ರವರನ್ನು ಅನುಸಂಧಾನ ಮಾಡಿದಾಗ ಇವರಿಬ್ಬರ ನಡುವಿನ ಜಾತಿ, ವರ್ಣ, ಹಿಂದುತ್ವ ಕುರಿತು ಅನೇಕ ಹುಸಿ ಚರ್ಚೆಗಳು, ಪ್ರಚಾರ, ಸೆಮಿನಾರ್‌ಗಳು, ಪತ್ರಿಕೆಗಳ ಮೂಲಕ ಬಿತ್ತರವಾಗುತ್ತಿವೆ. ದೇಶದ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಈ ಅಭಿಪ್ರಾಯ-ಭಿನ್ನಾಭಿಪ್ರಾಯಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ. ಈ ಲೇಖನದ ಮೂಲಕ ನಿಜವನ್ನು ಅರಿಯುವ ಮುಖೇನ ಹೊಸದೊಂದು ತಾತ್ವಿಕತೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಜಾತ್‌ಪತ್ ತೊಡಕ್ ಮಂಡಲಕ್ಕಾಗಿ ಅಂಬೇಡ್ಕರ್‌ ಸಿದ್ದಪಡಿಸಿದ ಜಾತಿ ವಿಷಯ ಉಪನ್ಯಾಸವನ್ನು ಗಮನಿಸಿ ತಮ್ಮ ಹರಿಜನ ಪತ್ರಿಕೆಯಲ್ಲಿ ಗಾಂಧೀಜಿ ಅದನ್ನು ಉಲ್ಲೇಖಿಸುವ ಮೂಲಕ ಅಂಬೇಡ್ಕರ್‌ ರವರನ್ನು ಇದು ಪ್ರಚಾ
APA, Harvard, Vancouver, ISO, and other styles
7

ಶ್ರೀನಿವಾಸ, ಎಸ್.ಜಿ. "ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆಗಳು". AKSHARASURYA JOURNAL 06, № 04 (2025): 01 to 10. https://doi.org/10.5281/zenodo.15490768.

Full text
Abstract:
ʼಕಾಯಕವೇ ಕೈಲಾಸʼ ವೆಂದು ಸಾರಿ, ಜನರಲ್ಲಿ ದುಡಿದು ತಿಂದು ಬದುಕುವ ಮಹತ್ವವನ್ನು ತಿಳಿಸಿದ್ದು ವಚನ ಸಾಹಿತ್ಯ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳಲ್ಲಿ ಸ್ತ್ರೀಯರಿಗೆ ಭಾಗವಹಿಸುವ ಸಮಾನ ಅವಕಾಶ ನೀಡುವ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕೊಂದು ಅರ್ಥವನ್ನು ಕಲ್ಪಿಸಿದರು. ಕಲುಷಿತಗೊಂಡಿದ್ದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ದಿಕ್ಕರಿಸಿ, ಘನ ಬದಲಾವಣೆಯನ್ನು ಗುರಿಯಿಟ್ಟು ನಡೆದ ದಾರ್ಶನಿಕ ಚಳುವಳಿ ವಚನ ಸಾಹಿತ್ಯ. ಸಾಮಾಜಿಕ ಬದಲಾವಣೆಗೆ ಹೊಸ ಭಾಷ್ಯ ಬರೆಯುವ ಮೂಲಕ ಉತ್ತಮ ಸಮಾಜ ವ್ಯವಸ್ಥೆಗೆ ನಿಜವಾದ ಅರ್ಥ ಕಲ್ಪಿಸಿ ಕೊಟ್ಟವರು. ಸಮಾಜದ ಕೀಳುಮಟ್ಟದ ಶೋಷಣೆಯಿಂದಾಗಿಯೇ ಸಮಾಜದಲ್ಲಿ ದುಡಿಯುವ ಮತ್ತು ಕೂತು ಉಣ್ಣುವ ವರ್ಗಗಳು ನಿರ್ಮಾಣವಾಗುವುದಕ್ಕೆ ಕಾರಣವಾಗಿರಬೇಕು, ಸಮಾಜದಲ್ಲಿ ಮೇಲ್ವರ್ಗವೆಂದು ಕರೆಸಿಕೊಂಡ ಜನರು ಸಮಾಜದ ಇತರರನ್ನು
APA, Harvard, Vancouver, ISO, and other styles
8

ಶ್ರೀದೇವಿ та ಕುಂಬ್ಳೆ ಧನಂಜಯ. "'ಶ್ರೀ ದೇವೀ ಮಹಾತ್ಮೆ' ಯಕ್ಷಗಾನ ಪ್ರಸಂಗದಲ್ಲಿ ಹಾಸ್ಯ". AKSHARASURYA JOURNAL 04, № 06 (2024): 45 to 54. https://doi.org/10.5281/zenodo.13724594.

Full text
Abstract:
ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನವು ವೈಶಿಷ್ಟ್ಯಪೂರ್ಣ ರಂಗಸ್ಥಳ, ಚೌಕಿ ಮತ್ತು ವೈವಿಧ್ಯಪೂರ್ಣ ಕುಣಿತ, ವೇಷಭೂಷಣ, ರಂಗಪ್ರಕ್ರಿಯೆಗಳಿಂದಾಗಿ ವಿಶ್ವದಾದ್ಯಂತ ವಿಶಿಷ್ಟ ಕಲೆಯಾಗಿ ಗುರುತಿಸಿಕೊಂಡಿದೆ. ಇಂತಹ ಯಕ್ಷಗಾನದಲ್ಲಿ ಪ್ರಮುಖ ಪಾತ್ರ ಅಥವಾ ಪಾತ್ರಧಾರಿ ಹಾಸ್ಯಗಾರರು. ಯಕ್ಷಗಾನದಲ್ಲಿ ನಿರ್ದೇಶಕನೆಂದೇ ಗುರುತಿಸಿಕೊಂಡಿರುವ ಭಾಗವತನ ನಂತರದ ಪ್ರಮುಖ ಸ್ಥಾನವನ್ನು ಹಾಸ್ಯಗಾರನು ಪಡೆದುಕೊಳ್ಳುತ್ತಾನೆ. ಚೌಕಿಯಲ್ಲಿ ದೇವರ ಪೀಠವನ್ನು ಇರಿಸಿದ್ದಕ್ಕೆ ಸಮಾನಾಂತರವಾಗಿ ಇನ್ನೊಂದು ಮೂಲೆಯಲ್ಲಿ ಹಾಸ್ಯಗಾರನು ಕುಳಿತುಕೊಳ್ಳುತ್ತಾನೆ. ಭಾಗವತರು ರಂಗದಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದರೆ, ಹಾಸ್ಯಗಾರರು ಚೌಕಿ ನಿರ್ವಹಣೆ ಮಾಡುತ್ತಾರೆ. ಹಾಸ್ಯಗಾರನಿಗೆ ಪ್ರತೀ ಪ್ರಸಂಗವು ರಂಗದಲ್ಲಿ ಯಾವ ರೀತಿ ಬಳಕೆಯಾಗಬೇಕೆಂಬ ಅರಿವು ಇರಬೇಕು.  ಯಕ್ಷಗಾನದಲ್ಲಿ
APA, Harvard, Vancouver, ISO, and other styles
9

ಪ್ರತಿಮಾ, ಕೆ. ಪಿ. "ಕುವೆಂಪು ಕವಿತೆಗಳಲ್ಲಿ ಸಂಧ್ಯಾ ಸೊಬಗು". AKSHARASURYA 04, № 03 (2024): 138 to 143. https://doi.org/10.5281/zenodo.12672939.

Full text
Abstract:
ಕವಿ ಎಂದರೆ ಕಲ್ಪನಾ ವಿಹಾರಿ. ಮನುಷ್ಯ ಭಾವನೆಗಳನ್ನು ವ್ಯಕ್ತಪಡಿಸುವ ಪರಿಯೇ ಕವಿತ್ವ. ಮನಸ್ಸು ಪ್ರಶಾಂತವಾಗಿ ಇರುವಲ್ಲಿ ಸಾಹಿತ್ಯ ಉತ್ತಮವಾಗಿ ಹೊರಹೊಮ್ಮುತ್ತದೆ. ನೈಸರ್ಗಿಕವಾಗಿ ಇರುವ ಪ್ರಕೃತಿಯ ಸೊಬಗನ್ನು ಆದಿಕವಿಗಳಿಂದ ಹಿಡಿದು ಇತ್ತೀಚಿನವರೆಗೆ ಬರಹಗಾರರು ವೈಭವದಿಂದ ಬಣ್ಣಿಸಿದ್ದಾರೆ. ಅದರಲ್ಲಿ ಕುವೆಂಪುರವರು ಪ್ರಮುಖರು. ಮಲೆನಾಡಿನಲ್ಲಿ ಹುಟ್ಟಿ ಬೆಳೆದ ರಸಋಷಿ ತಮ್ಮ ಸಾಹಿತ್ಯ ಚಟುವಟಿಕೆಗಳಲ್ಲಿ ಪ್ರಕೃತಿಯ ಚಿತ್ರಣವನ್ನು ಬಿಂಬಿಸಿದ್ದಾರೆ. ಮಲೆನಾಡಿನ ಗಿರಿಶಿಖರಗಳು, ಸಾಲು ಸಾಲು ಮರಗಳು, ಬೆಟ್ಟಗುಡ್ಡಗಳು, ಕವಿಶೈಲ, ಸಹ್ಯಾದ್ರಿಯ ತಪ್ಪಲು ಎಲ್ಲವೂ ಒಳಗೊಂಡಂತೆ ರಮಣೀಯ ನೊಟದ ಪರಿಸರವನ್ನು ಶ್ರೀಯುತರು ಕಾವ್ಯದಲ್ಲಿ ಹರಡಿದ್ದಾರೆ. ‘ಸೂರ್ಯೋದಯ, ಚಂದ್ರೋದಯ ದೇವರ ದಯ ಕಾಣೋ’ ಎಂದು ಹೇಳುತ್ತಾ, ಸೂರ್ಯೋದಯದ ಜೊತೆಗೆ, ಸೂರ್ಯಾಸ್
APA, Harvard, Vancouver, ISO, and other styles
10

ಮುಕ್ತಾ, ಪೈ., та ಶಂಕರ್ ಜ್ಯೋತಿ. "ವಚನ ಚಳುವಳಿ ಮತ್ತು ಸಮಾಜ ಪರಿವರ್ತನೆ". AKSHARASURYA JOURNAL 06, № 05 (2025): 84 to 93. https://doi.org/10.5281/zenodo.15504282.

Full text
Abstract:
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯಕ್ಕೊಂದು ವಿಶಿಷ್ಟವಾದ ಸ್ಥಾನವಿದೆ. ಇದು ಎಲ್ಲಾ ವರ್ಗ, ವರ್ಣದ ಜನಸಾಮಾನ್ಯರು ತಮ್ಮ ಮನಸ್ಸಿನಲ್ಲಿದ್ದ ಭಾವನೆಗಳನ್ನು ವ್ಯಕ್ತಪಡಿಸಿದ ಅದ್ಭುತವಾದ ಭಕ್ತಿ ಸಾಹಿತ್ಯ. ಮೇಲು-ಕೀಳು, ಜಾತಿ-ಮತ, ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರೂ ಸಾಮೂಹಿಕವಾಗಿ ಪಾಲ್ಗೊಂಡ ಸಾಹಿತ್ಯ ಜಗತ್ತಿನ ಇತಿಹಾಸದಲ್ಲಿಯೇ ವಿರಳವಾಗಿದೆ. ಶರಣ ಧರ್ಮದ ವಿಶಿಷ್ಟತೆ ಎಂದರೆ ಪೂಜೆ ಪುನಸ್ಕಾರಗಳಿಗೆ, ಯಜ್ಞ ಯಾಗಾದಿಗಳಿಗೆ, ಆಚರಣೆಗಳಿಗೆ ಅವಕಾಶ ನೀಡಲಿಲ್ಲ. ವಚನಾಕಾರರು 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಹೀಗೆ ಹಲವು ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ತಂದು ಸಮಾಜದಲ್ಲಿ ನಿರ್ಲಕ್ಷಕ್ಕೆ ಒಳಗಾದ ಜನ ಸಮೂಹವನ್ನು ಒಂದೆಡೆ ಸೇರಿಸುವ ಕಾರ್ಯವನ್ನು ಮಾಡಿದರು. ವಚನ ಚಳುವಳಿಯ ದೀಪವನ್ನು ನೂರಾರು ವಚನಕಾರರು ಹಚ
APA, Harvard, Vancouver, ISO, and other styles
11

ಪಂಪಾಪತಿ, ವಿ. "ಸವದತ್ತಿ ಎಲ್ಲಮ್ಮ: ಹೆಣ್ಣು ಮಕ್ಕಳ ಅರ್ಪಣೆಯ ಹಿನ್ನೆಲೆ". International Journal of Advance Research in Multidisciplinary 2, № 1 (2024): 361–65. https://doi.org/10.5281/zenodo.13320387.

Full text
Abstract:
ದೇವಾಲಯಗಳಿಗೆ ಸೇವೆ ಸಲ್ಲಿಸುವ ಆಚರಣೆಯು ಬಹುಹಿಂದಿನಿಂದಲೂ ಬೆಳೆದುಬಂದಿತ್ತು. ಪೆನ್ಸರ್ ಉಲ್ಲೇಖಿಸುವಂತೆ ಗುಜರಾತ್ ಪ್ರಾಂತ್ಯದಲ್ಲಿ 20 ಸಾವಿರ ಹೆಣ್ಣು ಮಕ್ಕಳು ಬೌದ್ಧ ದೇವಾಲಯಗಳಿದ್ದು ಬುದ್ಧ ವಿಗ್ರಹಕ್ಕೆ ನೈವೇದ್ಯ ಹಾಗೂ ಪುಷ್ಪಗಳನ್ನು ಏರಿಸುವ ಹೊತ್ತಿನಲ್ಲಿ ಹಾಡಬೇಕಾಗಿತ್ತು. ಈ ಮಧ್ಯೆ ಇವೆಲ್ಲದರಿಂದ ಬೇರೆಯಾದ ಸಂದರ್ಭ ಒಂದಿದೆ. ಮೊಗಲ್ ಸಾಮ್ರಾಜ್ಯದ ಔರಂಗಜೇಬನಿಗೆ ಕಲಾಶಕ್ತಿ ಇಲ್ಲದ ಕಾರಣ ಒಂದು ಅನುಕೂಲವಾಯಿತು. ಅರಸ ಒಂದು ಸನ್ನದು ಹೊರಡಿಸಿ ಹೆಣ್ಣು ಮಕ್ಕಳು ಹಾಡಿ ನರ್ತಿಸುವುದನ್ನು ನಿಷೇಧಿಸಿದನಲ್ಲದೆ, ಅಂತಹ ಹೆಣ್ಣು ಮಕ್ಕಳಿಗೆ ಮದುವೆಯಾಗಬೇಕೆಂದು ಶಿಕ್ಷೆ ವಿಧಿಸಿದ್ದನಂತೆ! ತಪ್ಪಿದರೆ ಸಾಮ್ರಾಜ್ಯದಿಂದ ಹೊರ ಹೋಗಬೇಕೆಂದು ಸಾರಿದನಂತೆ. ಪೂರ್ವ ಭಾರತದಲ್ಲಿ ಒರಿಸ್ಸಾದ ಜಗನ್ನಾಥ ದೇವಾಲಯದಲ್ಲಿ ಸುಮಾರು 9ನೇ ಶತಮಾನದ ಹೊತ್ತಿಗೆ ದೇವರೆದ
APA, Harvard, Vancouver, ISO, and other styles
12

ಗೀತಾ, ಎ.ಸಿ. "ಅಕ್ಕಮಹಾದೇವಿಯ ವಚನಗಳಲ್ಲಿ ಸ್ತ್ರೀ ಚಿಂತನೆಗಳು". AKSHARASURYA JOURNAL 06, № 04 (2025): 42 to 48. https://doi.org/10.5281/zenodo.15490848.

Full text
Abstract:
ಹನ್ನೆರಡನೆಯ ಶತಮಾನವೆಂದರೆ; ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಸಾಹಿತ್ಯಿಕ ಕ್ಷೇತ್ರದಲ್ಲಿ ಬದಲಾವಣೆಗೊಂಡ ಕಾಲ. ಅದನ್ನು ಕ್ರಾಂತಿ ಎಂದೇ ಕರೆಯಬೇಕಾಗುತ್ತದೆ. ಹಿಂದೆ ಸಮಾಜದಲ್ಲ್ಲಿದ್ದ ಅಸಮಾನತೆ, ಶೋಷಣೆಗಳನ್ನು ಕಂಡು ಅನುಭವಿಸಿದ್ದ ಶರಣ, ಶರಣೆಯರು ಮೇಲು-ಕೀಳು ಸ್ತ್ರೀ-ಪುರುಷ ಇತ್ಯಾದಿ ಭೇದ ರಹಿತವಾದ ವರ್ಗರಹಿತವಾದ ಸಮಾಜವನ್ನು ಕಟ್ಟಲು ಪ್ರಯತ್ನಿಸಿದರು. 12ನೇ ಶತಮಾನದ ಪ್ರಸಿದ್ಧ ವಚನಕಾರ್ತಿ ಅಕ್ಕಮಹಾದೇವಿ. ಬಸವಣ್ಣನವರ ಸಮಕಾಲೀನಳಾಗಿ ಬದುಕಿದಳು. ಈಕೆ ಶಿವಶರಣೆಯಾಗಿ, ವಚನಕಾರ್ತಿಯಾಗಿ, ಚೆನ್ನಮಲ್ಲಿಕಾರ್ಜುನನ ಭಕ್ತೆಯಾಗಿ ಪ್ರಸಿದ್ಧಳಾದವಳು. ಈಕೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿ ಎಂಬ ಗ್ರಾಮದಲ್ಲಿ ನಿರ್ಮಲ ಮತ್ತು ಸುಮತಿಯರ ಮಗಳಾಗಿ ಜನಿಸಿದಳು. ಬಾಲ್ಯದಲ್ಲೇ ಶಿವಭಕ್ತಿಯನ್ನು ಹೊಂದಿದ್ದ ಈಕೆಗೆ ಶಿವಪೂಜೆ ಶಿವಧ್ಯಾನಗಳೇ
APA, Harvard, Vancouver, ISO, and other styles
13

ಶ್ರೀದೇವಿ та ಕುಂಬ್ಳೆ ಧನಂಜಯ. "ಶ್ರೀ ದೇವೀ ಮಹಾತ್ಮೆ ಮತ್ತು ಭಕ್ತಿ ಪರಂಪರೆ". AKSHARASURYA JOURNAL 04, № 04 (2024): 53 to 62. https://doi.org/10.5281/zenodo.13284021.

Full text
Abstract:
ನಮ್ಮ ಸಂಸ್ಕೃತಿಯಲ್ಲಿ ಹಲವು ರೂಪಗಳೊಂದಿಗೆ, ಹಲವು ಮಾರ್ಪಾಡುಗಳೊಂದಿಗೆ ಭಕ್ತಿ ಪರಂಪರೆಯು ನಾಡಿನಾದ್ಯಂತ ಹಬ್ಬಿಕೊಂಡು ಬಂದಿದೆ. ಸಾಹಿತ್ಯಕವಾಗಿಯೂ, ಸಾಂಸ್ಕೃತಿಕವಾಗಿಯೂ ಭಕ್ತಿ ಪರಂಪರೆಯು ಹಲವು ಆಯಾಮಗಳಲ್ಲಿ ಬಹುಮುಖ್ಯ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಇದರಿಂದಾಗಿ ಜನಸಾಮಾನ್ಯರಲ್ಲಿರುವ ಭಕ್ತಿಯ ಭಾವ ಹಲವಾರು ವಿಧಾನಗಳ ಮೂಲಕ ಪ್ರಕಟಗೊಳ್ಳುತ್ತದೆ. ದೇವರನ್ನು ಪ್ರೀತಿಯಿಂದ, ಶ್ರದ್ಧಾ-ಭಕ್ತಿಯಿಂದ, ಆತ ನಮ್ಮವನೇ ಎಂಬ ಸಲಿಗೆಯಿಂದ, ಸಮರ್ಪಣಾ ಭಾವದಿಂದ ಹಲವರು ಹಲವು ರೀತಿಯಲ್ಲಿ ಒಲಿಸಿಕೊಳ್ಳುವ, ಸಾಕ್ಷಾತ್ಕರಿಸಿಕೊಳ್ಳುವ ಪ್ರಯತ್ನ ಭಕ್ತಿ ಪರಂಪರೆಯ ಪ್ರಾಮುಖ್ಯತೆ ಎಷ್ಟಿದೆ ಎಂಬುದನ್ನು ಹೇಳುತ್ತದೆ. ದೇವರ ಅನುಗ್ರಹಕ್ಕಾಗಿ ಜನರು ಇಂತಹ ವಿವಿಧ ಭಕ್ತಿ ಮಾರ್ಗದ ಮೂಲಕ ಪ್ರಯತ್ನಿಸುವುದೇ ಭಕ್ತಿ ಪರಂಪರೆಯ ವೈಶಿಷ್ಟ್ಯತೆ.ಭಕ್ತಿ ಪರಂಪರೆ ಎಂದಾಕ್ಷಣ
APA, Harvard, Vancouver, ISO, and other styles
14

ಲಕ್ಷ್ಮಿ, ಎಸ್. ಎಸ್. "ವೃತ್ತಿ ಹಾಗೂ ಕುಟುಂಬ ನಿರ್ವಹಣೆ: ಆಧುನಿಕ ಭಾರತೀಯ ಮಹಿಳೆಯ ಸವಾಲುಗಳು". AKSHARASURYA JOURNAL 03, № 04. SPECIAL ISSUE. (2024): 231 to 242. https://doi.org/10.5281/zenodo.10930824.

Full text
Abstract:
ಭಾರತ ದೇಶವು ತನ್ನ ಶ್ರೀಮಂತ ಸಂಸ್ಕೃತಿ ಮೌಲ್ಯಗಳು ಹಾಗೂ ಪರಂಪರೆಗೆ ವಿಶ್ವದಲ್ಲಿಯೇ ಪ್ರಸಿದ್ಧವಾಗಿದೆ. ಭಾರತೀಯ ಮಹಿಳೆಯು ಅನಾದಿ ಕಾಲದಿಂದಲೂ ಪತ್ನಿಯಾಗಿ, ಮಗಳಾಗಿ, ತಾಯಿಯಾಗಿ, ಕುಟುಂಬದ ಪೋಷಕಿಯಾಗಿ ಹಲವಾರು ಪಾತ್ರಗಳನ್ನು ಬಹಳ ಗೌರವಯುತವಾಗಿ ನಿರ್ವಹಿಸುತ್ತಾ ಬಂದಿದ್ದಾಳೆ. ಭಾರತದ ನೆಲದಲ್ಲಿ ಮಹಿಳೆಗೆ ವಿಶೇಷವಾದ ಮಹತ್ವದ ಸ್ಥಾನ ಇದೆ. ದೇವರ ಸ್ಥಾನದಲ್ಲಿಯೂ ಪೂಜಿಸಲ್ಪಡುತ್ತಾಳೆ. ಆದರೆ 21ನೆಯ ಶತಮಾನದಲ್ಲಿ ಜಾಗತಿಕರಣದ ಹಿನ್ನಲೆಯಲ್ಲಿ ಭಾರತೀಯ ಮಹಿಳೆಯು ಕುಟುಂಬವಷ್ಟೆ ಅಲ್ಲದೆ ಮನೆಯ ಹೊರಗಿನ ಕೆಲಸ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾಳೆ. ಕೇವಲ ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗಿರದೆ ಆಕೆಯ ವೃತಿ ಬದುಕಿನಲ್ಲಿಯೂ ಕೂಡ ಯಶಸ್ಸನ್ನು ಕಾಣುತ್ತಿದ್ದಾಳೆ. ಕುಟುಂಬದ ಆರ್ಥಿಕ ಸ್ಥಿತಿಗಳನ್ನು ಸುಧಾರಿಸಲು ಆಕೆಯ ಕೊಡುಗೆ ಮಹ
APA, Harvard, Vancouver, ISO, and other styles
15

ಮಂಜುಳ, ಎ. ಸಿ. "ಮಹಿಳಾ ಪತ್ರಿಕೋದ್ಯಮಿ ಎಂ. ಆರ್. ಲಕ್ಷಮ್ಮ". AKSHARASURYA JOURNAL 03, № 04. SPECIAL ISSUE. (2024): 243 to 253. https://doi.org/10.5281/zenodo.10930849.

Full text
Abstract:
ಭಾರತ ದೇಶವು ತನ್ನ ಶ್ರೀಮಂತ ಸಂಸ್ಕೃತಿ ಮೌಲ್ಯಗಳು ಹಾಗೂ ಪರಂಪರೆಗೆ ವಿಶ್ವದಲ್ಲಿಯೇ ಪ್ರಸಿದ್ಧವಾಗಿದೆ. ಭಾರತೀಯ ಮಹಿಳೆಯು ಅನಾದಿ ಕಾಲದಿಂದಲೂ ಪತ್ನಿಯಾಗಿ, ಮಗಳಾಗಿ, ತಾಯಿಯಾಗಿ, ಕುಟುಂಬದ ಪೋಷಕಿಯಾಗಿ ಹಲವಾರು ಪಾತ್ರಗಳನ್ನು ಬಹಳ ಗೌರವಯುತವಾಗಿ ನಿರ್ವಹಿಸುತ್ತಾ ಬಂದಿದ್ದಾಳೆ. ಭಾರತದ ನೆಲದಲ್ಲಿ ಮಹಿಳೆಗೆ ವಿಶೇಷವಾದ ಮಹತ್ವದ ಸ್ಥಾನ ಇದೆ. ದೇವರ ಸ್ಥಾನದಲ್ಲಿಯೂ ಪೂಜಿಸಲ್ಪಡುತ್ತಾಳೆ. ಆದರೆ 21ನೆಯ ಶತಮಾನದಲ್ಲಿ ಜಾಗತಿಕರಣದ ಹಿನ್ನಲೆಯಲ್ಲಿ ಭಾರತೀಯ ಮಹಿಳೆಯು ಕುಟುಂಬವಷ್ಟೆ ಅಲ್ಲದೆ ಮನೆಯ ಹೊರಗಿನ ಕೆಲಸ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾಳೆ. ಕೇವಲ ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗಿರದೆ ಆಕೆಯ ವೃತಿ ಬದುಕಿನಲ್ಲಿಯೂ ಕೂಡ ಯಶಸ್ಸನ್ನು ಕಾಣುತ್ತಿದ್ದಾಳೆ. ಕುಟುಂಬದ ಆರ್ಥಿಕ ಸ್ಥಿತಿಗಳನ್ನು ಸುಧಾರಿಸಲು ಆಕೆಯ ಕೊಡುಗೆ ಮಹ
APA, Harvard, Vancouver, ISO, and other styles
We offer discounts on all premium plans for authors whose works are included in thematic literature selections. Contact us to get a unique promo code!