To see the other types of publications on this topic, follow the link: ದಾಸಿ.

Journal articles on the topic 'ದಾಸಿ'

Create a spot-on reference in APA, MLA, Chicago, Harvard, and other styles

Select a source type:

Consult the top 27 journal articles for your research on the topic 'ದಾಸಿ.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Browse journal articles on a wide variety of disciplines and organise your bibliography correctly.

1

ರಮೇಶ್. "ಯಯಾತಿ ನಾಟಕದಲ್ಲಿ ಸಾಮಾಜಿಕ ಸಂಘರ್ಷ". AKSHARASURYA JOURNAL 06, № 03 (2025): 41 to 51. https://doi.org/10.5281/zenodo.15343867.

Full text
Abstract:
ಗಿರೀಶ್ ಕಾರ್ನಾಡರು ಬಹುಮುಖ ವ್ಯಕ್ತಿತ್ವವುಳ್ಳವರು ನಾಟಕಕಾರ ನಿರ್ದೇಶಕ ನಟ ಪ್ರಾಧ್ಯಾಪಕರಾಗಿ ಹಲವು ಕ್ಷೇತ್ರಗಳಲ್ಲಿ ದುಡಿದವರು ಪದ್ಮಶ್ರೀ, ಪದ್ಮಭೂಷಣ, ಕರ್ನಾಟಕ ನಾಟಕ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಜ್ಞಾನಪೀಠ ಪ್ರಶಸ್ತಿ ವಿಜೇತರು ನಾನಾ ಕ್ಷೇತ್ರಗಳಲ್ಲಿ ಪಾಂಡಿತ್ಯ ಪಡೆದವರು ನಾಗಮಂಡಲ, ತುಘಲಕ್, ಹಯವದನ, ಹಿಟ್ಟಿನ ಹುಂಜ, ತಲೆದಂಡ ಯಯಾತಿ ನಾಟಕಗಳನ್ನು ರಚಿಸಿದ್ದಾರೆ. ಕನ್ನಡಕ್ಕೆ ವಿಶ್ವ ಮಾನ್ಯತೆಯನ್ನು ತಂದುಕೊಟ್ಟವರು.  ಯಯಾತಿ ಪೌರಾಣಿಕ ವ್ಯಕ್ತಿ, ಪಾಂಡವರ ಪೂರ್ವಜರಲ್ಲಿ ಒಬ್ಬ ನಹುಷನ ಮಗ ಅವನಿಗೆ ಇಬ್ಬರು ಹೆಂಡತಿಯರು, ಶರ್ಮಿಷ್ಠೆ ಮತ್ತು ದೇವಯಾನಿ ಶರ್ಮಿಷ್ಠೆ ರಾಕ್ಷಸರಾಜನ ಮಗಳು, ದೇವಯಾನಿ ಅಸುರರ ಗುರು ಶುಕ್ರಾಚಾರ್ಯರ ಮಗಳು ಪುರಾಣಗಳಲ್ಲಿ ಬರುವ ಯಯಾತಿ ಬದುಕನ್ನು ಆಯ್ಕೆ ಮಾಡಿಕೊಂಡು ದೇವಯಾನಿ ಮದುವೆಯ ನಂತರದ ಕಥೆಯ
APA, Harvard, Vancouver, ISO, and other styles
2

ASHOKA, N. S. "ಮರಾಠಿ ದಲಿತ ಕಾವ್ಯ ನಡೆದುಬಂದ ದಾರಿ". AKSHARASURYA JOURNAL 03, № 03 (2024): 79 to 86. https://doi.org/10.5281/zenodo.10775141.

Full text
Abstract:
ಪ್ರಸ್ತುತ ಸಂಶೋಧನಾ ಲೇಖನವು ಮರಾಠಿ ದಲಿತ ಕಾವ್ಯ ಬೆಳೆದುಬಂದ ಹಾದಿಯನ್ನು ಕುರಿತು ಚರ್ಚಿಸುತ್ತದೆ. ಮಹಾರಾಷ್ಟ್ರದಲ್ಲಿ ದಲಿತ ಸಾಹಿತ್ಯ ಹುಟ್ಟುಪಡೆಯಲು ದೊರೆತ ಸ್ಫೂರ್ತಿ ಹಾಗೂ ಪ್ರೇರಣೆಗಳ ಹುಡುಕಾಟದ ನೆಲೆಯನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಲಾಗಿದೆ. ಮರಾಠಿ ದಲಿತ ಸಾಹಿತ್ಯ ಇಡೀ ಭಾರತೀಯ ಇತರೆ ಭಾಷೆಗಳ ದಲಿತ ಸಾಹಿತ್ಯಗಳಿಗಿಂತ ಹೆಚ್ಚು ಪ್ರಬಲವಾಗಿ ರೂಪುಗೊಳ್ಳಲು ಕಾರಣವಾದ ಐತಿಹಾಸಿಕ ಮೈಲಿಗಲ್ಲುಗಳನ್ನು ಗುರುತಿಸಲಾಗಿದೆ. ಮರಾಠಿ ದಲಿತ ಸಾಹಿತ್ಯ 1970 ರಿಂದೀಚೆಗೆ ಬಹಳಷ್ಟು ಪ್ರಚಲಿತಕ್ಕೆ ಬಂದಿದ್ದರೂ, ಅದರ ಮೂಲ ಬೇರುಗಳು ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಜ್ಯೋತಿ ಬಾಪುಲೆ ಹಾಗೂ ಅಕ್ಷರದವ್ವ ಸಾವಿತ್ರಿ ಬಾಪುಲೆ ಅವರ ಚಳುವಳಿಗೆ ಹೋಗುತ್ತದೆ. ಮರಾಠಿ ದಲಿತ ಸಾಹಿತ್ಯಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬಹುದೊಡ್ಡ ನಿಧಿಯ ಆಗರವಾಗಿ
APA, Harvard, Vancouver, ISO, and other styles
3

ತಾರಾ, ಬಿ. ಎನ್. "ಬುದ್ಧ ನಡೆದು ಬಂದ ದಾರಿ: ಒಂದು ಅವಲೋಕನ". AKSHARASURYA JOURNAL 04, № 06 (2024): 74 to 79. https://doi.org/10.5281/zenodo.13724803.

Full text
Abstract:
ಅರಿವಿನ ದಾರಿ ಕಾಣದೆ ಜನ ನರಳಾಡುವಾಗ ಅರಿತ ದಾರಿ ತೋರುವ ಮಹಾಪುರುಷರ ಅವತಾರವಾಗುತ್ತದೆ ಎಂಬುವುದು ಜನಾಭಿಪ್ರಾಯ. “ಯದಾ ಯದಾಹಿ ಧರ್ಮಶ್ಯ ಗ್ಲಾನಿರ್ಭವತಿ ಭಾರತ” ಎಂಬುದಕ್ಕೆ ಸಾಕ್ಷಿಯಾಗಿದ್ದೇ ಕ್ರಿ.ಪೂ. 6ನೇ ಶತಮಾನ. ಜಗತ್ತಿನಾದ್ಯಂತ ಅನೇಕ ಮಹಾಪುರುಷರ ಜನನವಾಗಿದ್ದು. ಅವರಲ್ಲಿ ಬೌದ್ಧ ಧರ್ಮದ ಪ್ರವರ್ತಕ ಗೌತಮ ಬುದ್ಧನೂ ಒಬ್ಬ. ಅಂತಹ ಬುದ್ಧ ನಡೆದು ಬಂದ ದಾರಿಯ ಅವಲೋಕನ ಈ ಸಂಶೋಧನಾ ಲೇಖನದ ಉದ್ದೇಶ.
APA, Harvard, Vancouver, ISO, and other styles
4

ಚನ್ನವೀರಯ್ಯ. "ವಚನಗಳಲ್ಲಿನ ಜಾತಿ ಪದ್ಧತಿ ಮತ್ತು ಮೌಢ್ಯಗಳ ವಿಶ್ಲೇಷಣೆ". AKSHARASURYA 05, № 02 (2024): 135 to 142. https://doi.org/10.5281/zenodo.14035388.

Full text
Abstract:
ಹನ್ನೇರಡನೇ ಶತಮಾನವನ್ನು ವಚನ ಸಾಹಿತ್ಯದ ಪರ್ವಕಾಲ ಎಂದು ಕರೆಯಬಹುದು. ಏಕೆಂದರೆ ಜನಸಾಮಾನ್ಯರ ಆಡುಭಾಷೆಯ ಮೂಲಕ ಕನ್ನಡಭಾಷೆಯನ್ನು ಉತ್ತುಂಗಕ್ಕೆ ಏರಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಬಹು ಮುಖ್ಯವಾಗಿ ಜಾತಿ, ಮತ, ವರ್ಗ, ವರ್ಣ, ಮೇಲು, ಕೀಳು ಹಾಗೂ ಸಾಮಾಜಿಕ ಪಿಡುಗುಗಳಾದ ಮೂಢನಂಬಿಕೆಗಳು ಅನಿಷ್ಟಪದ್ದತಿಗಳ ಆಚರಣೆಯಿಂದ ಸಮಾಜದ ಅಭಿವೃದ್ಧಿಗೆ ಮಾರಕವಾದುದು ಎಂಬುದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿ ಸಾಮಾಜಿಕ ಬದಾಲಾವಣೆಗೆ ಮುನ್ನುಡಿ ಬರೆದು ನವಮನ್ವಂತರಕೆ ದಾರಿ ದೀಪವಾದವರು. ಆ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದರು. ಸಾಮಾಜಿಕ ಬದಲಾಣೆಯ ಜೊತೆಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಅಂತಹ ಕೆಲವು ವಚನಕಾರರ ವಚನಗಳ ವಿಶ್ಲೇಷಣೆ ಈ ಲೇಖನದಲ್ಲಿ ಚರ್ಚಿಸಲಾಗಿದೆ.
APA, Harvard, Vancouver, ISO, and other styles
5

ವಿಜಯ. "ಸ್ವಾತಂತ್ರ್ಯ ಹೋರಾಟ ಸಂದರ್ಭದ ನವೋದಯ ಕವನಗಳಲ್ಲಿ ಗಾಂಧೀಜಿ ಚಿತ್ರಣ". AKSHARASURYA JOURNAL 04, № 05 Special Issue (2024): 60 to 69. https://doi.org/10.5281/zenodo.13294388.

Full text
Abstract:
ಸಾವಿರ ಸಾವಿರ ಸಾಮಾನ್ಯರ ನಡುವೆ ಸಾವಿರ ಅಸಾಧಾರಣರು ಅಲ್ಲಿ ಇಲ್ಲಿ ಬಂದು ಹೋಗುತ್ತಾರೆ. ಅಂತಹ ಜನರು ಜಗತ್ತಿನಲ್ಲಿ ತಮ್ಮ ಹೆಸರನ್ನು ದಾಖಲಿಸುತ್ತಾರೆ. ಮನುಕುಲದ ಇತಿಹಾಸದಲ್ಲಿ ಎಲ್ಲರೂ ಬುದ್ಧನಂತೆ ಶಾಶ್ವತ ವೈಭವಕ್ಕೆ ಅರ್ಹರಾಗುವುದಿಲ್ಲ! ಎಲ್ಲರೂ ಬಸವಣ್ಣನವರಂತೆ ತಮ್ಮ ಗುರುತು ಬಿಡುವುದಿಲ್ಲ! ಎಲ್ಲರೂ ಮಹಾತ್ಮರಲ್ಲ! ತಮ್ಮ ವ್ಯಕ್ತಿತ್ವ ಹಾಗೂ ವಿಚಾರಧಾರೆಯಿಂದ ಇಡೀ ಜಗತ್ತಿನ ಜನರನ್ನು ಸೆಳೆದ ಮಹಾನ್ ಚೇತನ. ಮೋಹನ್ ದಾಸ್ ಕರಮಚಂದ್ ಗಾಂಧಿ, ಅಂತಹ ಅಪರಿಮಿತ ಪ್ರಭಾವದಲ್ಲಿ ಅನನ್ಯ. ಕನ್ನಡ ಕವಿಗಳು ಮಹಾತ್ಮಾ ಗಾಂಧಿಯನ್ನು ಅಪರೂಪದ ವ್ಯಕ್ತಿ ಎಂದು ಕರೆಯುತ್ತಾರೆ. ಅದರಲ್ಲೂ ಸ್ವಾತಂತ್ರ್ಯಪೂರ್ವದ ನವೋದಯ ಕವಿಗಳು ಹೇಗೆ ಬಣ್ಣಿಸಿದರು ಎಂಬುದನ್ನು ದಾಖಲಿಸುವ ಸಣ್ಣ ಪ್ರಯತ್ನ ಈ ಬರಹ.
APA, Harvard, Vancouver, ISO, and other styles
6

ನವೀನ್, ಕುಮಾರ್ ಸಿ. "ನವೋದಯ ಸಾಹಿತ್ಯದಲ್ಲಿನ ಪರಂಪರೆಯ ನೋಟ ಹಾಗೂ ಆಧುನಿಕ ಶಿಸ್ತುಗಳ ಮುಖಾಮುಖಿ". AKSHARASURYA JOURNAL 06, № 06 (2025): 61 to 71. https://doi.org/10.5281/zenodo.15581018.

Full text
Abstract:
ನವೋದಯ ಸಾಹಿತ್ಯವು ಕನ್ನಡ ಸಾಹಿತ್ಯದ ಒಂದು ತಿರುವುಬಂದ ಹಂತವಾಗಿದೆ, ಇದು ಪುರಾತನ ಪರಂಪರೆಯೊಂದಿಗೆ ಹೊಸ ಆಧುನಿಕ ಶಿಸ್ತುಗಳನ್ನು ಮುಖಾಮುಖಿ ಮಾಡಿತು. ಈ ಲೇಖನದಲ್ಲಿ ನವೋದಯ ಸಾಹಿತ್ಯದ ಮೂಲ ಚಿಂತನ ಶೈಲಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರಭಾವ, ಮತ್ತು ಆಧುನಿಕತೆಯ ಆತ್ಮಪರ, ಸಮಾಜಪರ ದೃಷ್ಟಿಕೋನಗಳ ನಡುವಿನ ಸಂಪರ್ಕ ಮತ್ತು ವ್ಯತ್ಯಾಸಗಳನ್ನು ವಿಶ್ಲೇಷಿಸಲಾಗಿದೆ. ಸಾಹಿತ್ಯದ ವಿಷಯ, ರೂಪ, ಭಾಷಾ ಬಳಕೆ ಮತ್ತು ಲೇಖಕರ ಆಂತರಿಕ ನಿಲುವುಗಳಲ್ಲಿ ಪರಂಪರೆ ಮತ್ತು ಆಧುನಿಕತೆಯ ನಡುವಿನ ಸಮನ್ವಯದ ಪ್ರಯತ್ನವನ್ನು ಈ ಲೇಖನ ಮುಟ್ಟಿಸುತ್ತದೆ. ಈ ಮುಖಾಮುಖಿಯ ಮೂಲಕ ಕನ್ನಡ ಸಾಹಿತ್ಯವು ಹೇಗೆ ಹೊಸ ಬೆಳವಣಿಗೆಗೆ ದಾರಿ ಮಾಡಿತು ಎಂಬುದನ್ನು ಲೇಖನ ಸ್ಪಷ್ಟಪಡಿಸುತ್ತದೆ. 
APA, Harvard, Vancouver, ISO, and other styles
7

ಶ್ರೀದೇವಿ та ಕುಂಬ್ಳೆ ಧನಂಜಯ. "ಶ್ರೀ ದೇವೀ ಮಹಾತ್ಮೆ ಮತ್ತು ಭಕ್ತಿ ಪರಂಪರೆ". AKSHARASURYA JOURNAL 04, № 04 (2024): 53 to 62. https://doi.org/10.5281/zenodo.13284021.

Full text
Abstract:
ನಮ್ಮ ಸಂಸ್ಕೃತಿಯಲ್ಲಿ ಹಲವು ರೂಪಗಳೊಂದಿಗೆ, ಹಲವು ಮಾರ್ಪಾಡುಗಳೊಂದಿಗೆ ಭಕ್ತಿ ಪರಂಪರೆಯು ನಾಡಿನಾದ್ಯಂತ ಹಬ್ಬಿಕೊಂಡು ಬಂದಿದೆ. ಸಾಹಿತ್ಯಕವಾಗಿಯೂ, ಸಾಂಸ್ಕೃತಿಕವಾಗಿಯೂ ಭಕ್ತಿ ಪರಂಪರೆಯು ಹಲವು ಆಯಾಮಗಳಲ್ಲಿ ಬಹುಮುಖ್ಯ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಇದರಿಂದಾಗಿ ಜನಸಾಮಾನ್ಯರಲ್ಲಿರುವ ಭಕ್ತಿಯ ಭಾವ ಹಲವಾರು ವಿಧಾನಗಳ ಮೂಲಕ ಪ್ರಕಟಗೊಳ್ಳುತ್ತದೆ. ದೇವರನ್ನು ಪ್ರೀತಿಯಿಂದ, ಶ್ರದ್ಧಾ-ಭಕ್ತಿಯಿಂದ, ಆತ ನಮ್ಮವನೇ ಎಂಬ ಸಲಿಗೆಯಿಂದ, ಸಮರ್ಪಣಾ ಭಾವದಿಂದ ಹಲವರು ಹಲವು ರೀತಿಯಲ್ಲಿ ಒಲಿಸಿಕೊಳ್ಳುವ, ಸಾಕ್ಷಾತ್ಕರಿಸಿಕೊಳ್ಳುವ ಪ್ರಯತ್ನ ಭಕ್ತಿ ಪರಂಪರೆಯ ಪ್ರಾಮುಖ್ಯತೆ ಎಷ್ಟಿದೆ ಎಂಬುದನ್ನು ಹೇಳುತ್ತದೆ. ದೇವರ ಅನುಗ್ರಹಕ್ಕಾಗಿ ಜನರು ಇಂತಹ ವಿವಿಧ ಭಕ್ತಿ ಮಾರ್ಗದ ಮೂಲಕ ಪ್ರಯತ್ನಿಸುವುದೇ ಭಕ್ತಿ ಪರಂಪರೆಯ ವೈಶಿಷ್ಟ್ಯತೆ.ಭಕ್ತಿ ಪರಂಪರೆ ಎಂದಾಕ್ಷಣ
APA, Harvard, Vancouver, ISO, and other styles
8

Mallya, Chandrika. "ಗೌಡಸಾರಸ್ವತ ಬ್ರಾಹ್ಮಣಾಂಚೆ ಲೊಕವೆದ್". MJES Journal of Amar Konkani 75, № 2 (2021): 5–21. https://doi.org/10.69852/aloy.mjesjak.75.2/17714/.

Full text
Abstract:
ಜಿಎಸ್ಬಿಖ ವಾ ಗೌಡಸಾರಸ್ವತ ಬ್ರಾಹ್ಮಣ್ ಸಮುದಾಯಾಚೊ ಉಲ್ಲೇಕ್ ಋಗ್ವೇದಾಂತ್ ಆಸೊನ್, ಶತಮಾನಾಂ ಆದಿಂ ಆಳ್ವೊನ್ ಗೆಲ್ಲ್ಯಾ ಸರಸ್ವತಿ ನ್ಹಂಯ್ ತಡಿ (ಆತಾಂಚೊ ಪಂಜಾಬ್, ರಾಜಸ್ಥಾನ, ಪಾಕಿಸ್ತಾನ ಪ್ರದೇಶ್) ಥಾವ್ನ್ ವಿವಿದ್ ಕಾರಣಾಂಕ್ ಲಾಗೊನ್ ಭಾರತಾಚ್ಯಾ ದಕ್ಷಿಣಾಕ್ ಯೇವ್ನ್ ವಸ್ತೆಕ್ ಲಾಗ್ಲೊ. ಕರ್ನಾಟಕಾಕ್ ಆಯ್ಲೆಲ್ಯಾಂ ಪಯ್ಕಿ ಥೊಡೊ ಲೋಕ್ ಶಿವಮೊಗ್ಗ, ಉತ್ತರ್ ಕನ್ನಡ ಆನಿ ಹೆರ್ ಥೊಡೊ ದಕ್ಷಿಣ್ ಕನ್ನಡಾಂತ್ ಥಿರ್ ಜಾಲೊ. ಉಪ್ರಾಂತ್ಲ್ಯಾ ವರ್ಸಾಂನಿ ಗೊಂಯಾಂಥಾವ್ನ್ ದೆಶಾಂತರ್ ಆಯಿಲ್ಲೊ ಜಿಎಸ್ಬಿಆ ಸಮುದಾಯಾಚೊ ಲೋಕ್ಯಿಡ ಹಾಂಚೆ ಸಂಗಿಂ ಮೆಳೊನ್, ಪ್ರಸ್ತುತ್, ರಾಜ್ಯ್ ತಶೆಂ ದೆಶಾಚ್ಯಾ ದುಡ್ವಾ ಆನಿ ಹೆರ್ ವೆವ್ಹಾರಾಂತ್ ಭೊವ್ಚ್ೊ ನಾಂವಾಡ್ದೀಕ್ ಆಸಾ. ಹ್ಯಾ ಲೊಕಾಚ್ಯಾ ಗಿರೇಸ್ತ್ ಲೋಕ್ವೇ ದಾಚಿ ಮಟ್ವಿ ಪರಿಚಯ್ ಹ್ಯಾ ಲೇಖನಾಂತ್ ದಿಲ್ಯಾ.
APA, Harvard, Vancouver, ISO, and other styles
9

ವನಜಾಕ್ಷಿ, ಆರ್ ಹಳ್ಳಿಯವರ, та ಕುಮಾರ್ ಜೆ. ಪ್ರವೀಣ್. "ಕನ್ನಡ ಸಾಹಿತ್ಯದಲ್ಲಿ ಮಹಿಳೆಯ ಸ್ಥಾನಮಾನ". AKSHARASURYA JOURNAL 04, № 04 (2024): 68 to 75. https://doi.org/10.5281/zenodo.13284039.

Full text
Abstract:
ಕನ್ನಡ ಸಾಹಿತ್ಯಕ್ಕೆ ಮಹಿಳಾ ಸಾಹಿತಿಗಳ ಕೊಡುಗೆ ಅನನ್ಯವಾದುದು. ಚರಿತ್ರೆಯ ಎಲ್ಲಾ ಕಾಲಘಟ್ಟಗಳಲ್ಲೂ‌ ಸಾಹಿತ್ಯದ ಮೂಲಕ ವರ್ತಮಾನದ ತಲ್ಲಣಗಳನ್ನು ವಿಶೇಷವಾಗಿ ಮಹಿಳೆಯ ದುಃಖ ದುಮ್ಮಾನಗಳಿಗೆ ಒತ್ತು ಕೊಟ್ಟು ನೋವುಗಳನ್ನು ಮಹಿಳಾ ಸಾಹಿತಿಗಳು ಹೇಗೆ ಚಿತ್ರಿಸಿದ್ದಾರೆ ಎಂಬುದನ್ನು ಉದಾಹರಣೆಗಳ ಮೂಲಕ ಇಲ್ಲಿ ಚರ್ಚಿಸಲಾಗಿದೆ. ವಚನ ಸಾಹಿತ್ಯದಿಂದ ಹಿಡಿದು ಆಧುನಿಕ ಕನ್ನಡ‌ ಸಾಹಿತ್ಯದ ಉಪಲಬ್ಧವಿರುವ ಮಹಿಳಾ ಸಾಹಿತಿಗಳನ್ನು ಗುರುತಿಸಿ ಪ್ರಾತಿನಿಧಿಕವಾಗಿ ಒಂದು ವಚನವನ್ನು ಮತ್ತು ಆಯ್ದ ಸಾಲುಗಳನ್ನು ಈ ಲೇಖನದಲ್ಲಿ ವಿಮರ್ಶಿಸಲಾಗಿದೆ. ಆ ಮೂಲಕ ಕನ್ನಡ ಸಾಹಿತ್ಯದಿಂದ ಮಹಿಳೆ ಸ್ಥಾನಮಾನವನ್ನು ಅರಿಯುವ ಪ್ರಯತ್ನ ಮಾಡಲಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆ ಸಾಹಿತ್ಯಿಕವಾಗಿ ಎದುರಿಸುತ್ತಿರುವ ಸವಾಲನ್ನು ಕೂಡ ತುಣುಕಾಗಿ ಅರ್ಥೈಸಲಾಗಿದೆ. ಸ
APA, Harvard, Vancouver, ISO, and other styles
10

ಗುಂಡಣ್ಣ, ಪಿ. "ಬೌದ್ಧ ಬಿಕ್ಕು ಮತ್ತು ದೇವರಗುಡ್ಡರ ದೀಕ್ಷೆಯ ವಿಧಾನಗಳ ಅವಲೋಕನ". AKSHARASURYA JOURNAL 06, № 03 (2025): 68 to 78. https://doi.org/10.5281/zenodo.15344335.

Full text
Abstract:
ಯಾವುದೇ ಒಂದು ಮತ, ಧರ್ಮದ ಅಸ್ತಿತ್ವ ಉಳಿದಿರುವುದು ಅದನ್ನು ಅನುಸರಿಸುವ ಪರಂಪರೆಯಿಂದ ಪರಂಪರೆಗೆ ಸಾಗಿಸುವ ಅನುಯಾಯಿಗಳ ಮೇಲೆ. ಇವರ ಬಗ್ಗೆ ತಿಳಿದುಕೊಳ್ಳದೆ ಮತ, ಧರ್ಮಗಳ ಸತ್ವವನ್ನು ಗ್ರಹಿಸಲಾಗುವುದಿಲ್ಲ. ಮೌಖಿಕ ಪರಂಪರೆಯಲ್ಲಿ ಸಾಗಿ ಬಂದಿರುವ ಕಥನ, ಕಾವ್ಯ, ಲಾವಣಿ ಮೊದಲಾದವುಗಳು ಕಾಲಾನಂತರದಲ್ಲಿ ಭಿನ್ನ ಪ್ರದೇಶ, ಸಂದರ್ಭಗಳಲ್ಲಿ ಮಾರ್ಪಾಟುಗೊಂಡು ಮೂಲದಲ್ಲಿ ಇಲ್ಲದ ವಿಷಯಾಂಶಗಳನ್ನು, ಘಟನೆಗಳನ್ನು ಸೇರಿಸಿ ರೂಪುಗೊಂಡಿರುವ ಸಾಧ್ಯತೆ ದಟ್ಟವಾಗಿದೆ. ಆದರೆ ನಿಯಮ, ಆಚರಣೆಗಳು ಎಷ್ಟೇ ತಲೆಮಾರುಗಳು ದಾಟಿ ಬಂದರು ಹೆಚ್ಚು ಬದಲಾವಣೆಗೊಳಿಸದೆ ಅನುಸರಿಸಲಾಗಿರುತ್ತದೆ. ಮಂಟೇಸ್ವಾಮಿ, ಸಿದ್ದಪ್ಪಾಜಿ ಜಾತ್ರೆಗಳಲ್ಲಿ ಮಾಂಸಹಾರ, ಭಂಗಿ ಸೇವನೆಯ ಪದ್ದತಿ ಇದೆ. ಮಲೆಯ ಮಾದಯ್ಯನ ನೆಲೆಯಲ್ಲಿ ಹೆಣ್ಣು ಗಂಡಿನ ಸಂಬಂಧಕ್ಕಾಗಲಿ, ಮಾಂಸ-ಮದ್ಯಗಳ ಸೇವನೆಗಾಗಲಿ ಅವ
APA, Harvard, Vancouver, ISO, and other styles
11

ಅಣ್ಣಮ್ಮ. "ಅಡಿಗರ ಕಾವ್ಯದಲ್ಲಿ ಮಹಿಳೆ". AKSHARASURYA 05, № 02 (2024): 35 to 41. https://doi.org/10.5281/zenodo.14034854.

Full text
Abstract:
ನವೋದಯದ ಜಾಡಿನಲ್ಲೇ ಮೊದಲ ಮೂರು ಸಂಕಲನ (ಭಾವತರಂಗ, ಕಟ್ಟುವೆವು ನಾವು, ನಡೆದು ಬಂದ ದಾರಿ) ಬರೆದ ಗೋಪಾಲಕೃಷ್ಣ ಅಡಿಗರು, ಈ ಮೂರು ಸಂಕಲನದಲ್ಲಿ ಮಹಿಳೆಯನ್ನು ಕುರಿತು ಅನೇಕ ಕವಿತೆಗಳನ್ನು ಬರೆಯುತ್ತಾರೆ. ರೊಮ್ಯಾಂಟಿಕ್ ಸಂಪ್ರದಾಯದಲ್ಲಿ ಕಂಡುಬರುವ ಅತಿಭಾವುಕತೆ, ಸೌಂದರ್ಯೋಪಾಸನೆ, ನಿಸ್ಸತ್ವವಾದ ಭಾಷೆ ತ್ಯಜಿಸಿ ವಾಸ್ತವಿಕ ಜೀವನಕ್ಕೆ ಸ್ಪಂದಿಸಿ ಕವಿತೆ ರಚಿಸುವ ಪ್ರಯೋಗಕ್ಕೆ ಕೈ ಹಚ್ಚಿದ್ದು ನಂತರ ಕಂಡು ಬರುತ್ತೆ. 1938ರಿಂದ 1942ರ ವರೆಗೆ ಅನೇಕ ಕವಿತೆಗಳನ್ನು ಬರೆದ ಅಡಿಗರು ‘ಜೀವನಸಖಿ’ ‘ನಗು ನನ್ನ ನಲ್ಲೆ’ ‘ಮುಗುದೆ ಇವಳು’ ‘ನನ್ನವಳೀ ಹೆಣ್ಣು’ ‘ನನ್ನ ಮೋಹದ ಮೂರ್ತಿ’ ‘ಒಡೆದು ಬಿದ್ದ ಕೊಳಲು’ ‘ಹೆಣ್ಣು: 1’ ‘ಹೆಣ್ಣು: 2&rsquo
APA, Harvard, Vancouver, ISO, and other styles
12

ಯಲ್ಲಮ್ಮ, ಕೆ. "ಮೇಹರ್‌ಜಾನ್‌‌ಳ ದುರಂತ ಪ್ರೇಮಕಥೆ". AKSHARASURYA JOURNAL 05, № 06 (2025): 28 to 40. https://doi.org/10.5281/zenodo.14788710.

Full text
Abstract:
ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಮೆಚ್ಚಿನ ಪತ್ನಿ ʼಮಮ್ತಾಜ್ ಮಹಲ್ʼಳ ನೆನಪಿಗಾಗಿ ಕಟ್ಟಿಸಿದ ʼತಾಜ್ ಮಹಲ್ʼ ಪ್ರೇಮಸೌಧ, ಹಾಗೂ ಮುಹಮ್ಮದ್ ಆದಿಲ್‌ಷಾನು ತನ್ನ ʼರಂಭಾʼ ಎನ್ನುವ ದಾಸಿಯ ಮೇಲಿನ ಉತ್ಕಟ ಪ್ರೀತಿಯ ಕುರುಹಾಗಿ ʼಗೋಲ್ ಗುಂಬಜ್ʼ ಸ್ಮಾರಕ ಲೋಕವಿಖ್ಯಾತಿಯನ್ನು ಪಡೆದಿರುವಂತೆ; ʼಮೆಹರ್‌ಜಾನ್ʼಳ ದುರಂತ ಪ್ರೇಮಕತೆಯು ದಕ್ಷಿಣ ಭಾರತದ ಬಹುದೊಡ್ಡದೆನಿಸಿದ ವಿಜಯನಗರ ಸಾಮ್ರಾಜ್ಯದ ಅವನತಿಯ ಹಿನ್ನಲೆಯ ಮುಖ್ಯ ಕಾರ್ಯಕಾರಣ ಸಂಬಂಧವನ್ನು ತಿಳಿಯುವುದು. ರಾಮರಾಯನ ಪ್ರೇಮ ನಿವೇದನೆಯನ್ನು ನಿಷ್ಕಲ್ಮಶ ಜೀವ-ಭಾವದಿ ಒಪ್ಪಿ-ಅಪ್ಪಿ, ಒಲಿದು ಬಂದ ಹೆಣ್ಣಿಗೆ ಪ್ರೀತಿಯ ರಸದೂಟವನ್ನುಣಬಡಿಸಿ ಒಡಲು ಮಡಿಲು ತುಂಬಿಸಿ, ಕೃಷ್ಣದೇವರಾಯನ ಮೆಚ್ಚುಗೆ, ರಾಣಿ ತಿರುಮಲಾಂಬಳೊಂದಿಗೆ ವಿವಾಹ, ಸಿಂಹಾಸನದ ಮೇಲಿನ ವ್ಯಾಮೋಹ ಇದೆಲ್ಲವನ್ನೂ ಮಹತ್ವಾಕಾಂಕ
APA, Harvard, Vancouver, ISO, and other styles
13

ಬೋರಯ್ಯ, ಪಿ. ಕೆ. "ತತ್ವಪದಕಾರ ಲಿಂಗಯ್ಯನವರ ತತ್ವಪದಗಳ ಜೀವಾಳ". AKSHARASURYA 05, № 02 (2024): 42 to 49. https://doi.org/10.5281/zenodo.14034913.

Full text
Abstract:
ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಹಾಗೂ ವೇದ ಉಪನಿಷತ್ತುಗಳಿಂದ ಪ್ರಭಾವಿತರಾದ ಲಿಂಗಯ್ಯನವರು ತತ್ವಪದಕಾರರಾಗಿ, ವೇದಾಂತಿಗಳಾಗಿ, ಒಬ್ಬ ಆದರ್ಶ ಶಿಕ್ಷಕರಾಗಿ, ಕವಿಗಳಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಆಧ್ಯಾತ್ಮಿಕ ಕಥೆಗಳು, ನಾಟಕ, ಜೀವನ ಚರಿತ್ರೆ, ಸಾವಿರಾರು ತತ್ವಪದಗಳನ್ನು ಬರೆದು, ಸಾಮಾಜಿಕ ವ್ಯವಸ್ಥೆಯಲ್ಲಿ ಬಡವರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಟವನ್ನು ಮಾಡುವುದರ ಮೂಲಕ ಜನರಲ್ಲಿ, ಶಾಂತಿ ಸಾಮರಸ್ಯದ ಬೆಳಕನ್ನು ಚೆಲ್ಲವುದರ ಕಡೆಗೆ ಮುಖ ಮಾಡಿ ಚಲಿಸಿದ್ದೆ ಅಪಾರ. ವೈದಿಕರನ್ನು ಮತ್ತು ವೈದಿಕತೆಯನ್ನು ತನ್ನ ಅಂತರಂಗದಿಂದಲೇ ಗ್ರಹಿಸಿ, ಅವರ ಆಚರಣೆಗಳನ್ನು ಪ್ರಶ್ನಿಸಿ, ಅವರು ತಮ್ಮ ತತ್ವಪದಗಳಲ್ಲಿ ವಿಶ್ಲೇಷಿಸಿರುವುದು ಗಮನಾರ್ಹ. ಹಾಗೆಯೇ ಸಮಾಜದಲ್ಲಿ ಅನೇಕ ರೀತಿಯ ಆಚರಣೆಗಳಲ್ಲಿ ಜಾತಿ, ಮತ, ಮಡಿ-
APA, Harvard, Vancouver, ISO, and other styles
14

ಭವ್ಯ, ಆರ್. "ಚಾರಿತ್ರಿಕ ಹಿನ್ನೆಲೆಯಲ್ಲಿ ಕನ್ನಡ ಭಾಷೆ ಮತ್ತು ಲಿಪಿಯ ಹುಟ್ಟು". AKSHARASURYA JOURNAL 04, № 05 Special Issue (2024): 75 to 84. https://doi.org/10.5281/zenodo.13294394.

Full text
Abstract:
ಕನ್ನಡ ಭಾಷೆಗೆ ಪ್ರಭುತ್ವದ ಹಿನ್ನೆಲೆ ಲಭಿಸಿದ ಕಾರಣದಿಂದಲೇ ಅದು ಆಡಳಿತ ಭಾಷೆಯಾಗಿ ರೂಪ ಪಡೆಯಲು ಅನೇಕ ಮಜಲುಗಳನ್ನು ದಾಟಿ ತನ್ನ ಸಾಂಸ್ಕೃತಿವಾದ ಹಿನ್ನೆಲೆಯ ಜೊತೆಗೆ ಮೇಳೈಸಿಕೊಂಡು ಲಿಪಿ ಸಹಿತ ಭಾಷೆಯಾಗಿ ಬಳಕೆಗೆ ಬರಬೇಕಾದರೆ ಸಾವಿರಾರು ವರ್ಷಗಳ ಬೆಳವಣಿಗೆಯನ್ನು ತನ್ನ ಒಡಲೊಳಗೆ ಹೊಂದಿರುತ್ತದೆ. ಪುನ್ನಾಟ, ಕದಂಬರು ಮತ್ತು ಗಂಗರು ಸಂಸ್ಕೃತ ಮತ್ತು ಕನ್ನಡ ಭಾಷೆಯನ್ನು ಬಳಸುವಲ್ಲಿ ಮಿಶ್ರ ರೂಪಿನ ಬಳಕೆಯನ್ನು ರೂಢಿಗೆ ತಂದರು. ಇಂದಿನ ನಗರ ವಾಸಿ ಜನ ಮಾತಿನಲ್ಲಿ ಕನ್ನಡ ಇಂಗ್ಲೀಷ್‌ ಬೆರಸಿ ಮಾತನಾಡುವಂತೆ ಅಂದಿನ ರಾಜ ಪ್ರಭುತ್ವದ ಭಾಷೆಯಲ್ಲಿ ಬರವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಕೃತ ಪದಗಳ ಮಿಶ್ರಣಗೊಂಡು ರಚಿತವಾದ ಭಾಷೆಗಳನ್ನು ಗಮನಿಸಬಹುದು. ಆ ಕಾಲಕ್ಕಾಗಲೇ ಪ್ರಾಕೃತದ ಪ್ರಭಾವ ಕುಗ್ಗಿ ಅದರ ಸ್ಥಾನವನ್ನು ಸಂಸ್ಕೃತ ಪಡೆದುಕೊಳ್ಳುವ ಸರಿಸು
APA, Harvard, Vancouver, ISO, and other styles
15

ಶುಭಾ, ಮರವಂತೆ. "ಮಹಿಳಾ ಯಕ್ಷಗಾನದ ಸವಾಲುಗಳು ಮತ್ತು ಸಾಧ್ಯತೆ". Aksharasurya Journal 05, № 05 (2025): 48 to 54. https://doi.org/10.5281/zenodo.14619490.

Full text
Abstract:
ಮಹಿಳೆಯರಿಗೆ ಹೊಂದುವ ಕಥಾ ಸಂವಿಧಾನ, ನವೀನ ತಂತ್ರ ಪರಿಕರಗಳನ್ನು ನಾವೇ ಕಂಡುಕೊಳ್ಳುದರ ಮೂಲಕ ಯಕ್ಷರಂಗದಲ್ಲೊಂದು ಮಹಿಳಾ ಲೋಕವನ್ನು ಸೃಷ್ಟಿಸುವ ಸವಾಲು ನಮ್ಮ ಮುಂದಿದೆ. ನಮ್ಮ ನಡೆಯಲ್ಲಿ ಅನನ್ಯತೆಯ ದಾರಿ ಗುರುತುಗಳು ಬೇಕಾಗಿವೆ. ಪ್ರಯೋಗಶೀಲ ಮನಸ್ಸು ಬೆಳೆದರೆ ಯಕ್ಷಗಾನದ ಏಕತಾನತೆಯನ್ನು ಮಹಿಳೆಯರು ಮುರಿದು ಮರು ಕಟ್ಟಲು ಸಾಧ್ಯವಿದೆ. ಮೊದಲು ಮಹಿಳೆಯರು ಯಕ್ಷಗಾನ ನೋಡುವುದೆ ಅಪರಾಧವೆಂದು ಭಾವಿಸುವ ಕಾಲಘಟ್ಟದಿಂದ ಬಹುದೂರ ಬಂದಿದ್ದೇವೆ. ಗಂಡಸೊಬ್ಬನೆ ಕಲಾವಿದನಾಗಿ ಅವನಷ್ಟಕ್ಕೆ ಇದ್ದು ಕುಟುಂಬದಿಂದ ದೂರ ಉಳಿದು ಬದುಕುತ್ತಿದ್ದ ಕಾಲ ಈಗ ಬದಲಾಗಿದೆ. ಹೆಣ್ಣು ಮಕ್ಕಳಿಂದಾಗಿ ಮನೆ ಮನೆಯು ಕಲಾ ಕುಟೀರವಾಗಿದೆ. ಮಹಿಳೆ ತಾನೂ ಕಲಾವಿದೆಯಾಗಿ ಮಕ್ಕಳನ್ನೂ ಆ ದೆಸೆಯಲ್ಲಿ ಪ್ರೋತ್ಸಾಹಿಸುತ್ತಾ ಕುಟುಂಬವನ್ನೆ ಆ ಕಡೆಗೆ ಚಲಿಸುವಂತೆ ಮಾಡುತ್ತಿರುವುದು ವಿಶ್
APA, Harvard, Vancouver, ISO, and other styles
16

ಗಿರಿಯಪ್ಪ, ಎನ್. ಜಿ. "ಕುಲಕ್ಕೆ ತಿಲಕ ನಮ್ಮ ಮಾದರ ಚೆನ್ನಯ್ಯ". AKSHARASURYA 04, № 03 (2024): 109 to 116. https://doi.org/10.5281/zenodo.12672850.

Full text
Abstract:
ಮಾದರ ಚೆನ್ನಯ್ಯ 12ನೇ ಶತಮಾನಕ್ಕಿಂತಲೂ ಹಿಂದೆ ಜೀವಿಸಿದ್ದವನು. ಮಾದರ ಚೆನ್ನಯ್ಯನು ಹಲವಾರು ವಚನಗಳನ್ನು ರಚಿಸಿದ್ದಿರಬಹುದು ಆದರೆ ಚೆನ್ನಯ್ಯನು ಬರೆದ ವಚನಗಳಲ್ಲಿ ಸದ್ಯಕ್ಕೆ 10 ವಚನಗಳು ದೊರೆತಿರುತ್ತವೆ. “ಕೈಯುಳಿ ಕತ್ತಿ ಅಡಿಗೂಟಕ್ಕಡಿಯಾಗಬೇಡ” ಎಂಬುದು ಚೆನ್ನಯ್ಯನ ವಚನಗಳ ಅಂಕಿತವಾಗಿದೆ. ಚೆನ್ನಯ್ಯನು ಚೋಳ ರಾಜನ ಆಸ್ಥಾನದಲ್ಲಿ ಲಾಯದ ಕುದುರೆಗಳಿಗೆ ಹುಲ್ಲು ತರುವ ಕೆಲಸ ಮಾಡುತ್ತಿದ್ದನು. ಚೆನ್ನಯ್ಯ ಗುಪ್ತ ಶಿವಭಕ್ತನಾಗಿದ್ದನು. ಅದೇ ರೀತಿ ಚೋಳರಾಜನು ಮಹಾಶಿವ ಭಕ್ತನಾಗಿದ್ದನು. ಪ್ರತಿದಿನ ಚೋಳ ರಾಜನ ಮನೆಯಲ್ಲಿ ದಿವ್ಯವಾದ ಅನ್ನವನ್ನು ಶಿವನುಂಡು ತೃಪ್ತ ನಾಗುವವರೆಗೂ ಕಾದಿರುತ್ತಿದ್ದನು. ಒಮ್ಮೆ ಚೋಳನ ಮನೆಗೆ ಶಿವನು ಊಟ ಸವಿಯಲು ಬಂದಿರುವುದಿಲ್ಲ. ಅಂದು ಶಿವನು ಚೆನ್ನಯ್ಯನ ಮನೆಯಲ್ಲಿ ಅಂಬಲಿ ರುಚಿಸವಿದು ಸಂತೃಪ್ತನಾಗಿರುತ್
APA, Harvard, Vancouver, ISO, and other styles
17

ಸುಮಾ, ಆರ್. "ಮೀಮಾಂಸೆ: ಜೀವನ ಮತ್ತು ಕಾವ್ಯ". AKSHARASURYA JOURNAL 06, № 06 (2025): 72 to 79. https://doi.org/10.5281/zenodo.15581023.

Full text
Abstract:
ಮೀಮಾಂಸೆ ಯಾವುದೇ ವಿಷಯದ ವಿಚಾರಪೂರ್ಣ ಚಿಂತನೆ, ತಾರ್ಕಿಕ ತೀರ್ಮಾನ, ವಿಮರ್ಶೆ, ಚರ್ಚೆ, ವಿಶ್ಲೇಷಣೆ ಇತ್ಯಾದಿಯಾಗಿ ಅರ್ಥೈಸಲ್ಪಡುತ್ತದೆ. ಸಹೃದಯ ಓದುಗರಿಗೆ ತಿಳಿದಿರುವಂತೆ ಕಾವ್ಯ ಮೀಮಾಂಸೆ ಚಿರಪರಿಚಿತ. ಆದರೆ ಜೀವನ ಮೀಮಾಂಸೆ.. ಅಂತರ್ಗತ. ಜೀವನವು ಹಲವು ಮುಖಗಳನ್ನು ಹೊಂದಿದ ಜೈವಿಕ ಜಗತ್ತಿನ ವ್ಯಾಪಾರ. ಹುಟ್ಟು-ಸಾವುಗಳ ನಡುವಿನ ಅಭಿವೃದ್ಧಿ ಮತ್ತು ಹೋರಾಟ. ‘ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ, ಮದುವೆಗೊ, ಮಸಣಕೋ ಕರೆದಲ್ಲಿಗೆ ಹೋಗೆಂದ ಮಂಕುತಿಮ್ಮ’, ‘ಇರುವ ಭಾಗ್ಯವ ನೆನೆದು ಬಾರೆನೆನ್ನದಿರು, ಹರುಷಕ್ಕಿದೆ ದಾರಿ’, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ – ಎಂಬುದಾಗಿ ಹೇಳಿ ಜೀವನವನ್ನು ಮೀಮಾಂಸೆಗೆ ಒಳಪಡಿಸಿದ್ದಾರೆ.ಕಾವ್ಯ ಮೀಮಾಂಸೆ ಮತ್ತು ಜೀವನ ಮೀಮಾಂಸೆಯ ನಡುವಿನ ಸಂಬಂಧಗಳ ಬಗ
APA, Harvard, Vancouver, ISO, and other styles
18

GEETHA, A. C. "`ಅಮ್ಮ'ನವರ ಆರಾಧನೆಯಲ್ಲಿನ ಸಾಂಸ್ಕೃತಿಕ ಅನನ್ಯತೆ". AKSHARASURYA JOURNAL 03, № 03 (2024): 63 to 70. https://doi.org/10.5281/zenodo.10775087.

Full text
Abstract:
ಜನಪದರಲ್ಲಿ ಆರಾಧನೆ ಎಂಬುದು ಬದುಕಿನ ಅವಿಭಾಜ್ಯ ಅಂಗವಾಗಿದೆ. ಆಚಾರ-ವಿಚಾರ, ನಂಬಿಕೆಗಳಿಂದ ಕೂಡಿರುವ ಆರಾಧನೆಯು ಇಷ್ಟಾರ್ಥ ಸಿದ್ಧಿಯ ನೆಲೆಯಲ್ಲಿ ಮಹತ್ವವನ್ನು ಪಡೆಯುತ್ತದೆ. ಭಯದಿಂದ ಮುಕ್ತವಾಗಲು ಕಷ್ಟ ಪರಿಹಾರವಾಗಲು ದೇವರುಗಳ ಮೊರೆ ಹೋಗುವುದು ಜನಪದರ ಬಹುಮುಖ್ಯ ಚಟುವಟಿಕೆ. ತಮಗೆ ಎದುರಾದ ಕಷ್ಟಗಳನ್ನು ರೋಗರುಜಿನಗಳನ್ನು ನಂಬಿಕೆ, ವಿಶ್ವಾಸಕ್ಕೆ ಪಾತ್ರರಾಗಿರುವ ಪ್ರೀತಿಯ ವ್ಯಕ್ತಿಗಳಲ್ಲಿ ಹೇಳಿಕೊಂಡು ಮನೋಭಾರವನ್ನು ಕಳೆದುಕೊಳ್ಳಲು ಸಾಧ್ಯವಾಗುವುದಿಲ್ಲ. ತಮ್ಮತಮ್ಮಲ್ಲೇ ಎಷ್ಟೇ ಕಷ್ಟಗಳನ್ನು ತೋಡಿಕೊಂಡರೂ ಸಮಾಧಾನ ಅನ್ನಿಸುವುದಿಲ್ಲ. ಅಂದರೆ ಮನುಷ್ಯರ ಶಕ್ತಿಗೆ ಒಂದು ಮಿತಿ ಎನ್ನುವುದು ಇದೆ. ಎಲ್ಲವೂ ಮನುಷ್ಯರ ಕೈಯಿಂದ ಅಸಾಧ್ಯ ಎಂಬ ವಿಚಾರವನ್ನು ಜನಪದರು ನಂಬಿದ್ದಾರೆ. ಮಾನವನ ಶಕ್ತಿಗಿಂತ ಮಿಗಿಲಾದ ಶಕ್ತಿ ಇದೆ ಎಂದು ನಂಬುವ ಜನಪದರು, ಆ ಶ
APA, Harvard, Vancouver, ISO, and other styles
19

PRITHVIRAJ, B. "ಕುವೆಂಪು ಮತ್ತು ಕಂಬಾರರ ನಾಟಕಗಳು ಮುಂದಿಡುವ ರಂಗಕಲ್ಪನೆ". AKSHARASURYA JOURNAL 03, № 03 (2024): 111 to 121. https://doi.org/10.5281/zenodo.10775182.

Full text
Abstract:
ಪ್ರಸುತ್ತ ಸಂಶೋಧಾನ ಲೇಖನವು ಕುವೆಂಪು ಮತ್ತು ಕಂಬಾರರ ಕೃತಿಗಳಲ್ಲಿ ಹೊಸತನು ಹುಡುಕುವ ಪ್ರಯತ್ನವನ್ನು ಮಾಡಲಾಗಿದೆ. ಕುಂವೆಪು ಅವರಲ್ಲಿ ನವೋದಯ ಪ್ರಜ್ಞೆ ಕಾಣಿಸಿದ್ದರೆ ಕಂಬಾರರಲ್ಲಿ ದಲಿತರ ಪರ ಪ್ರಜ್ಞೆ ಕಾಣಿಸಿಕೊಂಡಿದೆ. ಈ ಲೇಖನವನ್ನು ವೀರೆಶ್ ಬಡೀಗಾರ್‌ರವರ ‘ಕನ್ನಡ ಸಾಹಿತ್ಯ ಪರಂಪರೆ ಮತ್ತು ಕಂಬಾರರು’ & ಉತ್ಥಾನಭಾರೀಘಾಟ್‌ಅವರ ‘ಕುವೆಂಪು ನಾಟಕಗಳು ಮುಂದಿಡುವ ರಂಗಕಲ್ಪನೆ’ ಎಂಬ ಪುಸ್ತಕಗಳ ಹಿನ್ನಲೆಯಲ್ಲಿ ಬರೆಯಲಾಗಿದೆ. ಇದುವರೆಗೂ ಸಾಹಿತ್ಯ ವಲಯದಲ್ಲಿ ಕಂಬಾರರನ್ನು ಕೇವಲ ಅವರ ಸೃಜನಶೀಲ ಕಲಾಕೃತಿಗಳ ಮೂಲಕವಷ್ಟೇ ಹೆಚ್ಚು ಚರ್ಚಿಸಿದ್ದು ಕಾಣುತ್ತದೆ. ಕಂಬಾರರ ಸೃಜನಶೀಲ ಬರಹಗಳ ಜಗತ್ತು ಒಂದು ಕಡೆಯಾದರೆ, ಸಂಶೋದನೆ, ಜಾನಪದ, ಸಂಪಾದನೆ ಹಾಗೂ ವೈಚಾರಿಕತೆಗೆ ಸಂಬಂಧಿಸಿದ ಸೃಜನೇತರ ಬರಹ ಇನ್ನೊಂದು
APA, Harvard, Vancouver, ISO, and other styles
20

ಸರಿತ, ಮಬೆನ್, ಜಮದಂಡಿ ರಾಜಶೇಖರ та ಜಿ ಶಿವರಾಜ್. "ಕನ್ನಡ ಸಾಹಿತ್ಯಕ್ಕೆ ಹರ್ಮನ್ ಫೆಡ್ರಿಕ್ ಮೋಗ್ಲಿಂಗ್ ಕೊಡುಗೆ". International Journal of Philosophy and Languages (IJPL) 2, № 1 (2023): 53–57. https://doi.org/10.5281/zenodo.8170706.

Full text
Abstract:
<strong>ಉದ್ದೇಶ</strong>: <em>ಬಾಸೆಲ್ ಮಿಶನ್ನಿನ ಒಬ್ಬ ಪ್ರಮುಖ ಮಿಶನೆರಿಯೇ ಹೆರ್ಮನ್ </em><em>ಮೋಗ್ಲಿಂಗ್&zwnj;</em><em>, </em><em>ಇವರು </em><em>1836</em><em>ರಲ್ಲಿ ಬಾಸೆಲ್ ಸಮಿತಿಯ ಅನುಮತಿಯೊಂದಿಗೆ ಭಾರತಕ್ಕೆ ಬಂದರು</em><em>. </em><em>ಸರಳ ಜೀವಿಯಾಗಿದ್ದ ಇವರು ಪ್ರಾರಂಭದಲ್ಲಿ ಬೆಳಿಗ್ಗೆ ೩ ಗಂಟೆಯಿಂದ ಸಾಯಂಕಾಲದವರೆಗೆ ಕನ್ನಡ ಕಲಿಯುತ್ತಿದ್ದರು</em><em>. </em><em>ಕನ್ನಡ ಭಾಷೆಯ ಕಲಿಕೆಯ ಕುರಿತು ಇವರೆ ಹೇಳುವಂತೆ</em><em>, </em> <em>&quot;I find the Kanarese language both easy and difficult. I do not find it difficult to understand the written words. But the pronunciation will give me some word time yet of rea... now that I have difficulties with
APA, Harvard, Vancouver, ISO, and other styles
21

ಜಿ., ವೆಂಕಟಸುಬ್ಬಯ್ಯ, та ಭೈರಪ್ಪ ಎಂ. "ಎರಡು ಶಬ್ದಗಳ ನಿಷ್ಪತ್ತಿ ಮತ್ತು ಅರ್ಥವಿಚಾರ". AKSHARASURYA 04, № 02 (2024): 01 to 17. https://doi.org/10.5281/zenodo.11525363.

Full text
Abstract:
ಜಗಮೆಚ್ಚಿದ ನುಡಿಗಾರುಡಿಗ ಪ್ರೊ.ಜಿ.ವೆಂಕಟಸುಬ್ಬಯ್ಯನವರುಕರುನಾಡು ಕಂಡ ಕನ್ನಡದ ಮೇರು ನಿಘಂಟು ತಜ್ಞ, ನುಡಿ ಗಾರುಡಿಗ, ನುಡಿಬ್ರಹ್ಮ, ಶಬ್ದಬ್ರಹ್ಮ, ಅಕ್ಷರಬ್ರಹ್ಮ, ನಡೆದಾಡುವ ನಿಘಂಟು, ಅಪ್ರತಿಮ ಸಂಶೋಧಕ, ಜಗಮೆಚ್ಚಿದ ಕನ್ನಡ ಪ್ರಾಧ್ಯಾಪಕ ಎಂದೇ ಜನಪ್ರಿಯರಾದವರು ನಾಡೋಜ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು. ನುಡಿಸಾಗರದ ಆಳಕ್ಕೂ ಉದ್ದಗಲಕ್ಕೂ ಮುಳುಗೆದ್ದು ಈಜಾಡಿ &lsquo;ಕನ್ನಡ ನಿಘಂಟು&rsquo;ಗಳೆಂಬ ಮುತ್ತುರತ್ನಗಳನ್ನು ಹೊರತಂದುಕೊಟ್ಟ ಶೋಧನವೀರ ನುಡಿಕಾರರು ಜಿವಿ. ಆಂಗ್ಲಮುಖಿ ಹಾಗೂ ಕಲಾರಾಹಿತ್ಯ ಶಿಕ್ಷಣಯಾನದಲ್ಲಿ ಕನ್ನಡಪ್ರಜ್ಞೆಯನ್ನು ಬೆಳಗುವ ಮೂಲಕ ಅಸಂಖ್ಯ ಕನ್ನಡ ಕಟ್ಟಾಳುಗಳನ್ನು ರೂಪುಗೊಳಿಸುವ ಮೂಲಕ ಈ ನೆಲಕ್ಕೆ ಅಪೂರ್ವ ಕಾಣಿಕೆಯಿತ್ತ ಜಿವಿ ಅವರು ಶ್ರೇಷ್ಠ ಪ್ರಾಧ್ಯಾಪಕರಾಗಿದ್ದಾರೆ. ಸಂಶೋಧಕರಾಗಿ ಹಾಗೂ ಪ್ರಾಧ್ಯಾಪಕರಾಗಿ ಮಾತ್ರವ
APA, Harvard, Vancouver, ISO, and other styles
22

ಎಂ., ಎಂ. ಕಲಬುರ್ಗಿ. "ನನ್ನಿಯೊಳಿನತನಯಂ". AKSHARASURYA 03, № 05 (2024): 01–13. https://doi.org/10.5281/zenodo.10937959.

Full text
Abstract:
&ldquo;ಸಂಶೋಧನೆಯೆನ್ನುವುದು ಅಲ್ಪ ವಿರಾಮ, ಅರ್ಧವಿರಾಮಗಳ ಮೂಲಕ ಪೂರ್ಣವಿರಾಮಕ್ಕೆ ಸಾಗುವ ಕ್ರಿಯೆಯಾಗಿದೆ... ಸಂಶೋಧನೆ ಎನ್ನುವುದು ಸುಳ್ಳು ಇತಿಹಾಸದ ಮೂಲಕ ವರ್ತಮಾನದಲ್ಲಿ ಹುಟ್ಟುಹಾಕುತ್ತಲಿರುವ ಶೋಷಣೆಯನ್ನು ಹತ್ತಿಕ್ಕಲು, ನಿಜ ಇತಿಹಾಸವನ್ನು ಶೋಧಿಸಿಕೊಡುವುದು ಸಂಶೋಧಕನ ಕರ್ತವ್ಯವಾಗಿದೆ. ಅಂದರೆ ಸಂಶೋಧನೆಯೆಂಬುದು ಕೇವಲ ಇತಿಹಾಸದ ಶೋಧವಲ್ಲ. ಸುಳ್ಳು ಇತಿಹಾಸವನ್ನು ಮುಂದುಮಾಡಿಕೊಂಡು ವರ್ತಮಾನವನ್ನು ದುರುಪಯೋಗ ಮಾಡಿಕೊಳ್ಳುವವರೊಂದಿಗೆ ನಡೆಸುವ ಹೋರಾಟವೂ ಆಗಿದೆ. ಸತ್ಯವೆಂಬ ಭೂತಕಾಲದ ಬಲದಿಂದ ಅಸತ್ಯವೆಂಬ ವರ್ತಮಾನ ಕಾಲವನ್ನು ಸರಿಪಡಿಸುವುದಾಗಿದೆ...&rdquo; ಎನ್ನುವ ಮೂಲಕ ಸತ್ಯಶೋಧಕರೂ ಸಮಗ್ರ ಸಂಶೋಧಕರೂ ಎಂದು ಪ್ರಸಿದ್ಧರಾದ ಡಾ.ಎಂ.ಎಂ.ಕಲಬುರ್ಗಿ ಅವರು ಈ ನಾಡು ಕಂಡ ಶ್ರೇಷ್ಠ ಚಿಂತಕರು. ಅವರ ಅಧ್ಯಯನ ಮತ್ತು ಕೊಡುಗೆಗಳು ಶಾಸನಶಾಸ್ತ್
APA, Harvard, Vancouver, ISO, and other styles
23

ಪ್ರಕಾಶ, ಬಿ. "ಡಾ. ಬಿ.ಆರ್. ಅಂಬೇಡ್ಕರ್‌ ಮತ್ತು ಗಾಂಧೀಜಿ: ಜಾತಿ, ವರ್ಣ, ಹಿಂದುತ್ವ ಕುರಿತು ಅಭಿಪ್ರಾಯ-ಭಿನ್ನಾಭಿಪ್ರಾಯಗಳು". AKSHARASURYA JOURNAL 06, № 05 (2025): 141 to 150. https://doi.org/10.5281/zenodo.15504412.

Full text
Abstract:
ವರ್ತಮಾನದಲ್ಲಿ ಗಾಂಧೀಜಿ ಮತ್ತು ಡಾ. ಬಿ. ಆರ್, ಅಂಬೇಡ್ಕರ್&zwnj;&zwnj;ರವರನ್ನು ಅನುಸಂಧಾನ ಮಾಡಿದಾಗ ಇವರಿಬ್ಬರ ನಡುವಿನ ಜಾತಿ, ವರ್ಣ, ಹಿಂದುತ್ವ ಕುರಿತು ಅನೇಕ ಹುಸಿ ಚರ್ಚೆಗಳು, ಪ್ರಚಾರ, ಸೆಮಿನಾರ್&zwnj;ಗಳು, ಪತ್ರಿಕೆಗಳ ಮೂಲಕ ಬಿತ್ತರವಾಗುತ್ತಿವೆ. ದೇಶದ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಈ ಅಭಿಪ್ರಾಯ-ಭಿನ್ನಾಭಿಪ್ರಾಯಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ. ಈ ಲೇಖನದ ಮೂಲಕ ನಿಜವನ್ನು ಅರಿಯುವ ಮುಖೇನ ಹೊಸದೊಂದು ತಾತ್ವಿಕತೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.&nbsp;ಜಾತ್&zwnj;ಪತ್ ತೊಡಕ್ ಮಂಡಲಕ್ಕಾಗಿ ಅಂಬೇಡ್ಕರ್&zwnj; ಸಿದ್ದಪಡಿಸಿದ ಜಾತಿ ವಿಷಯ ಉಪನ್ಯಾಸವನ್ನು ಗಮನಿಸಿ ತಮ್ಮ ಹರಿಜನ ಪತ್ರಿಕೆಯಲ್ಲಿ ಗಾಂಧೀಜಿ ಅದನ್ನು ಉಲ್ಲೇಖಿಸುವ ಮೂಲಕ ಅಂಬೇಡ್ಕರ್&zwnj; ರವರನ್ನು ಇದು ಪ್ರಚಾ
APA, Harvard, Vancouver, ISO, and other styles
24

ಶಿವಪ್ಪಾ, ಡಾ ಮಣೂರ ಸುಧಾರಾಣಿ. "ದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಚಿಂತನೆ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 30 вересня 2023, 88–94. http://dx.doi.org/10.59176/kjksp.v2i2.2304.

Full text
Abstract:
ಸಾಮಾಜಿಕ ಚಿಂತನೆ, ವೈಚಾರಿಕ ದೃಷ್ಟಿಕೋನದ ಮೂಲಕ ಸಮಾಜವನ್ನು ಕಟ್ಟಲು ಪ್ರಯತ್ನಿಸಿದವರು ದಾಸರು. ದಾಸರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ದಾಸರು ಕೀರ್ತನೆಗಳ ಮೂಲಕ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದವರು ದಾಸರು. ದಾಸರು ತಮ್ಮ ಹರಿತವಾದ ಮಾತುಗಳಿಂದ ಸಮಾಜದ ಕುಂದುಕೊರತೆಗಳನ್ನು ಮುಚ್ಚುಮರೆಯಿಲ್ಲದೆ ಖಂಡಿಸುತ್ತಾರೆ. ದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಕಳಕಳಿ, ಮಾನವೀಯ ಮಿಡಿತಗಳಿವೆ. ದಾಸರ ಕೀರ್ತನೆಗಳು ಸಾಮಾಜಿಕ ಪರಿವರ್ತನೆಗೆ ದಾರಿ ದೀಪಗಳು. ಕೀರ್ತನೆಗಳು ಅಂದಿಗೆ ಮಾತ್ರ ಸೀಮಿತವಲ್ಲ. ಇವತ್ತು ಕೂಡಾ ಪ್ರಸ್ತುತವಾಗಿವೆ. ದಾಸರ ಕೀರ್ತನೆಗಳ ಮರ್ಮವನ್ನು ಅರಿತುಕೊಳ್ಳುವುದು ಅಗತ್ಯವಾಗಿದೆ.
APA, Harvard, Vancouver, ISO, and other styles
25

ಕೆ. ವಿ., ಡಾ ರಾಕೇಶ್ಶರ್ಮ. "ಸವರ್ಣಿಯ ಕುಟುಂಬದ ಕಣ್ಣು-ದಲಿತ ಹೆಣ್ಣು : ‘ರಕ್ತವರ್ಣೆ’ನಾಟಕ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 30 вересня 2023, 104–13. http://dx.doi.org/10.59176/kjksp.v2i2.2306.

Full text
Abstract:
ಸಾಮಾಜಿಕ ಚಿಂತನೆ, ವೈಚಾರಿಕ ದೃಷ್ಟಿಕೋನದ ಮೂಲಕ ಸಮಾಜವನ್ನು ಕಟ್ಟಲು ಪ್ರಯತ್ನಿಸಿದವರು ದಾಸರು. ದಾಸರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ದಾಸರು ಕೀರ್ತನೆಗಳ ಮೂಲಕ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದವರು ದಾಸರು. ದಾಸರು ತಮ್ಮ ಹರಿತವಾದ ಮಾತುಗಳಿಂದ ಸಮಾಜದ ಕುಂದುಕೊರತೆಗಳನ್ನು ಮುಚ್ಚುಮರೆಯಿಲ್ಲದೆ ಖಂಡಿಸುತ್ತಾರೆ. ದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಕಳಕಳಿ, ಮಾನವೀಯ ಮಿಡಿತಗಳಿವೆ. ದಾಸರ ಕೀರ್ತನೆಗಳು ಸಾಮಾಜಿಕ ಪರಿವರ್ತನೆಗೆ ದಾರಿ ದೀಪಗಳು. ಕೀರ್ತನೆಗಳು ಅಂದಿಗೆ ಮಾತ್ರ ಸೀಮಿತವಲ್ಲ. ಇವತ್ತು ಕೂಡಾ ಪ್ರಸ್ತುತವಾಗಿವೆ. ದಾಸರ ಕೀರ್ತನೆಗಳ ಮರ್ಮವನ್ನು ಅರಿತುಕೊಳ್ಳುವುದು ಅಗತ್ಯವಾಗಿದೆ.
APA, Harvard, Vancouver, ISO, and other styles
26

ಮಬೆನ್‌, ಸರಿತ, ರಾಜಶೇಖರ ಜಮದಂಡಿ та ಶಿವರಾಜ್‌ ಜಿ. "ಕನ್ನಡ ಸಾಹಿತ್ಯಕ್ಕೆ ಹರ್ಮನ್‌ ಫೆಡ್ರಿಕ್‌ ಮೋಗ್ಲಿಂಗ್‌ ಕೊಡುಗೆ". International Journal of Philosophy and Languages (IJPL), 30 червня 2023, 53–57. http://dx.doi.org/10.47992/ijpl.2583.9934.0014.

Full text
Abstract:
ಉದ್ದೇಶ: ಬಾಸೆಲ್ ಮಿಶನ್ನಿನ ಒಬ್ಬ ಪ್ರಮುಖ ಮಿಶನೆರಿಯೇ ಹೆರ್ಮನ್ ಮೋಗ್ಲಿಂಗ್‌, ಇವರು 1836ರಲ್ಲಿ ಬಾಸೆಲ್ ಸಮಿತಿಯ ಅನುಮತಿಯೊಂದಿಗೆ ಭಾರತಕ್ಕೆ ಬಂದರು. ಸರಳ ಜೀವಿಯಾಗಿದ್ದ ಇವರು ಪ್ರಾರಂಭದಲ್ಲಿ ಬೆಳಿಗ್ಗೆ ೩ ಗಂಟೆಯಿಂದ ಸಾಯಂಕಾಲದವರೆಗೆ ಕನ್ನಡ ಕಲಿಯುತ್ತಿದ್ದರು. ಕನ್ನಡ ಭಾಷೆಯ ಕಲಿಕೆಯ ಕುರಿತು ಇವರೆ ಹೇಳುವಂತೆ, "I find the Kanarese language both easy and difficult. I do not find it difficult to understand the written words. But the pronunciation will give me some word time yet of rea... now that I have difficulties with speaking foreign language I have never noticed the before" ಹೀಗೆ ಅವರಿಗೆ ಓದಿ ಅರ್ಥೈಸುವುದು ಸುಲಭವಾಗಿತ್ತೇ ಹೊರತು ವ್ಯವಹರಿಸುವುದು ಕಷ್ಟವಾಗಿ ತೋ
APA, Harvard, Vancouver, ISO, and other styles
27

ಭಟ್, ಮೈತ್ರಿ. "ಬಸವಣ್ಣನವರ ವಚನಗಳೂ... ಮನೋವಿಜ್ಞಾನವೂ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 1 березня 2024, 17–21. http://dx.doi.org/10.59176/kjksp.v3i1.2333.

Full text
Abstract:
ಕನ್ನಡದ ಅನನ್ಯ ಸಾಹಿತ್ಯ ಪ್ರಕಾರವಾದ ವಚನವು ಅಂತರಂಗದ ಉತ್ಕಟ ಅವಸ್ಥೆಯಿಂದ ಹೊರಬಂದ ಶಬ್ದರೂಪವಾಗಿದ್ದು, ಅತ್ತ ಪದ್ಯವೂ ಅಲ್ಲದ ಇತ್ತ ಗದ್ಯವೂ ಅಲ್ಲದ ಈ ವಿಶಿಷ್ಟ ಲಯಬದ್ಧ ಗೀತೆಯು ಗಾತ್ರದಲ್ಲಿ ಕಿರಿದಾದರೂ ಜೀವ ವಿಕಾಸದ ಹಾದಿಯಲ್ಲಿ ಹಿರಿದಾದುದೇ ಆಗಿದೆ. ಇಂತಹ ವಚನಗಳು ಅಂತರಂಗದ ನಿವೇದನೆಗಳಾಗಿ, ಆತ್ಮಗತ ಸಂಭಾಷಣೆಗಳಾಗಿ ಹೊರಹೊಮ್ಮಿವೆ. ವಿವಿಧ ಕಾಯಕಗಳಲ್ಲಿ ತೊಡಗಿದ್ದ ನಾನಾ ಜಾತಿಮತಗಳ ಜನರು ತಮ್ಮ ಅಂತಃಪ್ರೇರಣೆಯ ತುಡಿತಕ್ಕೆ ಸ್ಪಂದಿಸಿ, ತಮ್ಮ ಮನದಾಳದ ಚಿಂತನೆಗಳನ್ನು ಜನಮಾನಸಕ್ಕೆ ತಲುಪಿಸಲು ಆಡುನುಡಿಯನ್ನು ಬಳಸಿಕೊಂಡರು. ಶುದ್ಧ ದೇಸೀ ಮನೋಭೂಮಿಕೆಯಲ್ಲಿ ಹುಟ್ಟಿದ ಇವು ಗದ್ಯದ ನಿರರ್ಗಳತೆಯಿಲ್ಲದಿದ್ದರೂ ಸರಳತೆಯಿಂದ, ಪದ್ಯದ ಕ್ರಮಬದ್ಧ ಛಂದೋಗತಿ ಇಲ್ಲದಿದ್ದರೂ ಅದರ ಲಯದಿಂದ ಕೂಡಿ ಸ್ವಚ್ಛಂದ ಲಯದಲ್ಲಿ ಮಿಂದೇಳುತ್ತವೆ. ಬಿಡಿಯಾಗಿ ನೋಡಿದರ
APA, Harvard, Vancouver, ISO, and other styles
We offer discounts on all premium plans for authors whose works are included in thematic literature selections. Contact us to get a unique promo code!