To see the other types of publications on this topic, follow the link: ಧಾರ್ಮಿಕ.

Journal articles on the topic 'ಧಾರ್ಮಿಕ'

Create a spot-on reference in APA, MLA, Chicago, Harvard, and other styles

Select a source type:

Consult the top 47 journal articles for your research on the topic 'ಧಾರ್ಮಿಕ.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Browse journal articles on a wide variety of disciplines and organise your bibliography correctly.

1

ಗಣೇಶ. "ಧರ್ಮ ಮತ್ತು ಅಂಬೇಡ್ಕರ್‌". AKSHARASURYA JOURNAL 06, № 05 (2025): 46 to 53. https://doi.org/10.5281/zenodo.15504212.

Full text
Abstract:
ಅಂಬೇಡ್ಕರ್‌ ಭಾರತದ ಒಬ್ಬ ಶ್ರೇಷ್ಠ ಪ್ರತಿಭಾವಂತ ಬುದ್ಧಿ ಜೀವಿ ಮತ್ತು ಮೇಧಾವಿ. ಪ್ರಪಂಚದ ಅಪ್ರತಿಮ ಚಿಂತಕರ ಸಾಲಿನಲ್ಲಿ ನಿಲ್ಲಬಲ್ಲ, ಮೇರು ವ್ಯಕ್ತಿತ್ವವುಳ್ಳ ಚಿಂತನಶೀಲ ವ್ಯಕ್ತಿ. ಅವರು ಜಗತ್ತಿನ ಎಲ್ಲಾ ಧಾರ್ಮಿಕ ಗ್ರಂಥಗಳನ್ನು ಆಸಕ್ತಿ ಮತ್ತು ಕುತೂಹಲದಿಂದ ಅಮೂಲಾಗ್ರವಾಗಿ ಅಧ್ಯಯನ ಮಾಡಿದ್ದರು. ಧರ್ಮವನ್ನು ಕುರಿತಂತೆ ರಾಬರ್ಟ್ ಸನ್ ಸ್ಮಿತ್ ಅವರ ಪರಿಕಲ್ಪನೆಯನ್ನು ಅಂಬೇಡ್ಕರ್‌ ಹಿಂದೂ ಧರ್ಮದ ತತ್ವಜ್ಞಾವನ್ನು ಕುರಿತ ತಮ್ಮ ಕೃತಿಯಲ್ಲಿ ಹೀಗೆ ಉಲ್ಲೇಖಿಸಿದ್ದಾರೆ. ಧರ್ಮ ಯಾವುದೇ ಕಾರಣಕ್ಕೂ ದುರ್ಬಲರನ್ನು ಶೋಷಿಸುವ ಅಸ್ತ್ರವಾಗಬಾರದು. ಹಿಂದೂ ಧಾರ್ಮಿಕ ವ್ಯವಸ್ಥೆಯಲ್ಲಿ ದೈವಿಕ ಪ್ರಭುತ್ವದ ಲಿಖಿತ ಸಂವಿಧಾನ ಮತ್ತು ಪುರೋಹಿತಶಾಹಿಯ ಅಘೋಷಿತ ಪ್ರಾಬಲ್ಯವನ್ನು ಕಾಪಾಡಿಕೊಂಡು ಬರಲಾಗಿದೆ. ಈ ಧರ್ಮದಲ್ಲಿ ಬಹುಸಂಖ್ಯಾತ ಹಿಂದುಳಿದ
APA, Harvard, Vancouver, ISO, and other styles
2

ಆಯ್., ಬಿ. ಸಾತಿಹಾಳ. "ಪಂಪನ ಕಥಾಸತ್ಯ ಮತ್ತು ಕಾವ್ಯ ನಿಷ್ಠೆ ಹಾಗೂ ಕಾಮವಾಸನೆ: ಆದಿ ಪುರಾಣವನ್ನು ಅನುಲಕ್ಷಿಸಿ." AKSHARASURYA 03, № 06 (2024): 97 to 109. https://doi.org/10.5281/zenodo.11127143.

Full text
Abstract:
‘ಜನ್ಮಾಂತರಗಳಲ್ಲಿ ನಂಭಿಕೆಯಿಟ್ಟು ಸ್ಮರತತ್ವವನ್ನು ಸಂಪೂರ್ಣವಾಗಿ ವಿರೋಧಿಸುತ್ತ, ದಕ್ಕಿದ ಭೋಗ-ವೈಭವಗಳನ್ನೆಲ್ಲ ಬದಿಗಿಟ್ಟು, ತಲೆಗೂದಲನ್ನು ಕಿತ್ತು ದೀಕ್ಷೆ ಕೈಕೊಂಡು, ಗತಪ್ರಾಣನಾಗುವುದರಿಂದ ಜೀವನಿಗೆ ಪುನರ್ ಜನ್ಮದಲ್ಲಿ ಅತ್ಯಾನಂತವಾದ ಪದವಿ-ಫಲಗಳು ಸಹಸ್ರಸಾಗರೋಪಮಾನ ಕಾಲದವರೆಗೆ ಸಿಕ್ಕುತ್ತವೆ’ಎನ್ನುವುದು ಜೈನ ಪುರಾಣಗಳ ಪ್ರಬಲವಾದ ನಿಲುವು. ಇದನ್ನು ತನ್ನ ಆದಿಪುರಾಣ ಕಾವ್ಯದಲ್ಲಿ ನಿರೂಪಿಸಲು ಹೊರಟಿರುವ ಪಂಪನಿಗೆ ಇದು ಸುಲಭವಾದ ಕೆಲಸವಾಗಿರಲಿಲ್ಲ. ಬಹುಪ್ರಾಚೀನ ಕಾಲದಿಂದಲೂ ಬೆಳೆದು ಬಂದಿರುವ ಧಾರ್ಮಿಕ ಕಲ್ಪನೆ ಕನ್ನಡ ನಾಡಿನಲ್ಲಿ ಪಂಪನ ಕಾಲಕ್ಕಾಗಲೇ ಪರ-ವಿರೋಧಗಳನ್ನು ಸ್ವೀಕರಿಸುತ್ತ, ಎದುರಿಸುತ್ತ, ಕುಂಟುತ್ತ ಸಾಗಿತ್ತು. ಅಂಥ ಸಂದರ್ಭದಲ್ಲಿ ಪಂಪನು ಧಾರ್ಮಿಕ ಕಲ್ಪನೆಯನ್ನು ಕಾವ್ಯಸತ್ಯವನ್ನಾಗಿಸುವುದರ ಮೂಲಕ ಜೈನಧರ್ಮ
APA, Harvard, Vancouver, ISO, and other styles
3

ಪ್ರಭುದೇವ, ಸಿ., та ಶಬೀನಾ. "ಚಿತ್ರದುರ್ಗ ಜಿಲ್ಲೆಯ ಛಲವಾದಿ ಸಮುದಾಯದ ಧಾರ್ಮಿಕ ಹಾಗೂ ಲೌಕಿಕ ಕಲೆಗಳ ಒಳನೋಟ". Aksharasurya Journal 05, № 05 (2025): 81 to 93. https://doi.org/10.5281/zenodo.14619579.

Full text
Abstract:
ಆಡು ಮುಟ್ಟದ ಸೊಪ್ಪಿಲ್ಲ ಕಲೆಗಳಿಲ್ಲದ ಸಮುದಾಯಗಳಿಲ್ಲ ಎಂಬಂತೆ ಕಲೆ ಎಂಬುದು ಯಾರ ಸ್ವತ್ತಲ್ಲ, ಕಲೆ ಎಲ್ಲರನ್ನು ಕೈಬೀಸಿ ಕರೆಯುತ್ತದೆ ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ ಎಂಬ ಮಾತು ನಿಜ, ಅದರಂತೆ ಸಂಸ್ಕೃತಿಯ ಒಂದು ಭಾಗವಾಗಿರುವ ಕೆಲವು ಕಲೆಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಛಲವಾದಿ ಸಮುದಾಯದವರಿಗೆ ರಕ್ತದಿಂದಲೇ ಬಂದಿವೆ, ಈ ಸಮುದಾಯವು ಕಲಾ ಕ್ಷೇತ್ರದಲ್ಲಿ ವಿಶೇಷ ಛಾಪು ಮೂಡಿಸುತ್ತ ಕಲೆಯನ್ನು ಉಳಿಸಿಕೊಂಡು ಬಂದಿರುವುದು ಗಮನಾರ್ಹ. ಅವುಗಳೆಂದರೆ ಧಾರ್ಮಿಕ, ಲೌಕಿಕ, ಪ್ರದರ್ಶನತ್ಮಕ, ಜನಪದ ವೈದ್ಯ, ಸೋಭಾನೆ ಪದಗಳು ಮತ್ತು ಸಾಹಿತ್ಯಿಕ ಕಲೆಗಳು.
APA, Harvard, Vancouver, ISO, and other styles
4

ಮಾಧವ, ಎಂ. ಕೆ. "ಬಸವಣ್ಣನ ವಚನಗಳಲ್ಲಿ ಸಮ ಸಮಾಜದ ಪ್ರಸ್ತುತತೆ". AKSHARASURYA 04, № 02 (2024): 27 to 32. https://doi.org/10.5281/zenodo.11525708.

Full text
Abstract:
ಕನ್ನಡ ಸಾಹಿತ್ಯದಲ್ಲಿ ೧೨ನೇ ಶತಮಾನವನ್ನು ವಚನಗಳ ಯುಗವೆಂದು ಕರೆಯಲಾಗುತ್ತದೆ. ಬಸವಣ್ಣ ವಚನ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದವನು. ತನ್ನ ವಚನಗಳ ಮೂಲಕ ‘ಕಾಯಕವೇ ಕೈಲಾಸ’ ವೆಂದು ಸಾರಿ, ಜನರಲ್ಲಿ ದುಡಿದು ತಿಂದು ಬದುಕುವ ಮಹತ್ವವನ್ನು ತಿಳಿಸಿದರು. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ತ್ರೀಯರಿಗೆ ಭಾಗವಹಿಸುವ ಸಮಾನ ಅವಕಾಶ ನೀಡುವ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕೊಂದು ಅರ್ಥವನ್ನು ಕಲ್ಪಿಸಿದರು. ಕಲುಷಿತಗೊಂಡಿದ್ದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ದಿಕ್ಕರಿಸಿ, ಘನ ಬದಲಾವಣೆಯನ್ನು ಆರಿಸಿ ಹೊರಟ ದಾರ್ಶನಿಕ ಬಸವಣ್ಣ. ಸಾಮಾಜಿಕ ಬದಲಾವಣೆಗೆ ಹೊಸ ಭಾಷ್ಯ ಬರೆಯುವ ಮೂಲಕ ಉತ್ತಮ ಸಮಾಜ ವ್ಯವಸ್ಥೆಗೆ ನಿಜವಾದ ಅರ್ಥ ಕಲ್ಪಿಸಿ ಕೊಟ್ಟವರು. ಸಮಾಜದ ಕೀಳುಮಟ್ಟದ ಶೋಷಣೆಯಿಂದಾಗಿಯೇ ಸಮಾಜದಲ್ಲಿ ದುಡಿಯುವ ಮತ್ತು
APA, Harvard, Vancouver, ISO, and other styles
5

ಹುಲುಗಯ್ಯ, ನಾಯಕರ್, та ರಾಮಕೃಷ್ಣಯ್ಯ ಕೆ. "ಬಯಲಾಟದಲ್ಲಿನ ಪ್ರಸ್ತುತ ಮಾರ್ಪಾಡುಗಳು". AKSHARASURYA 04, № 01 (2024): 35 to 46. https://doi.org/10.5281/zenodo.11162255.

Full text
Abstract:
ನಮ್ಮ ಕನಾರ್ಟಕದ ಜನಪದ ರಂಗಭೂಮಿಯಲ್ಲಿ ಬಯಲಾಟಕ್ಕೆ ಅತ್ಯಂತ ಪ್ರಮುಖವಾದ ಸ್ಥಾನವಿದೆ. ಬಯಲಾಟದ ರಂಗಸಜ್ಜಿಕೆಯನ್ನು ನೋಡುವುದಾದರೆ ಇದಕ್ಕೆ ಭವ್ಯವಾದ ರಂಗಮಂಟಪ ನಿರ್ಮಿಸುತ್ತಾರೆ. ರಂಗ ಮಂಟಪವನ್ನು ಅಟ್ಟದಂತೆ ನಿರ್ಮಿಸಿ ಮರದ ಹಲಗೆಗಳನ್ಮು ಹಾಕುತ್ತಾರೆ. ಅದಕ್ಕಾಗಿಯೇ ಬಯಲಾಟವನ್ನು ಅಟ್ಟದಾಟವೆಂತಲೂ, ದೊಡ್ಡಾಟವೆಂತಲೂ ಕರೆಯುತ್ತಾರೆ. ರಂಗಮಂಟಪಕ್ಕೆ ಅಟ್ಟ, ಚಪ್ಪರ, ಹಂದರ ಎಂದು ಕರೆಯುತ್ತಾರೆ. ದೇವಸ್ಥಾನಗಳ ಮುಂದಿನ ವಿಶಾಲ ಸ್ಥಳದಲ್ಲಿ ಅಟ್ಟದ ನಿರ್ಮಾಣವಾಗುತ್ತದೆ. ಆಟಕ್ಕಿಂತ ಎರಡು ದಿನ ಮೊದಲು ಮಂಟಪ ನಿರ್ಮಾಣ ಕಾರ್ಯ ಪ್ರಾರಂಭವಾಗುತ್ತದೆ. ಬಯಲಾಟದ ಮೂಲವನ್ನು ಹುಡುಕುತ್ತಾ ಹೋದಾಗ ಅವು ಮೊದಲು ದೇವಸ್ಥಾನದ ಆಶ್ರಯದಲ್ಲಿ ಬೆಳೆದು ನಂತರ ಬೀದಿಗೆ ಬಂದು ಜನಸಾಮಾನ್ಯರ ಮತ್ತು ಊರಿನ ಹಿರಿಯರ ಆಶ್ರಯದಲ್ಲಿ ಬೆಳೆದು ಬಂದಿರುವುದನ್ನು ಅನೇಕ ವಿದ್ವಾಂಸರು ತ
APA, Harvard, Vancouver, ISO, and other styles
6

ನವೀನ್, ಕುಮಾರ್ ಸಿ. "ನವೋದಯ ಸಾಹಿತ್ಯದಲ್ಲಿನ ಪರಂಪರೆಯ ನೋಟ ಹಾಗೂ ಆಧುನಿಕ ಶಿಸ್ತುಗಳ ಮುಖಾಮುಖಿ". AKSHARASURYA JOURNAL 06, № 06 (2025): 61 to 71. https://doi.org/10.5281/zenodo.15581018.

Full text
Abstract:
ನವೋದಯ ಸಾಹಿತ್ಯವು ಕನ್ನಡ ಸಾಹಿತ್ಯದ ಒಂದು ತಿರುವುಬಂದ ಹಂತವಾಗಿದೆ, ಇದು ಪುರಾತನ ಪರಂಪರೆಯೊಂದಿಗೆ ಹೊಸ ಆಧುನಿಕ ಶಿಸ್ತುಗಳನ್ನು ಮುಖಾಮುಖಿ ಮಾಡಿತು. ಈ ಲೇಖನದಲ್ಲಿ ನವೋದಯ ಸಾಹಿತ್ಯದ ಮೂಲ ಚಿಂತನ ಶೈಲಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರಭಾವ, ಮತ್ತು ಆಧುನಿಕತೆಯ ಆತ್ಮಪರ, ಸಮಾಜಪರ ದೃಷ್ಟಿಕೋನಗಳ ನಡುವಿನ ಸಂಪರ್ಕ ಮತ್ತು ವ್ಯತ್ಯಾಸಗಳನ್ನು ವಿಶ್ಲೇಷಿಸಲಾಗಿದೆ. ಸಾಹಿತ್ಯದ ವಿಷಯ, ರೂಪ, ಭಾಷಾ ಬಳಕೆ ಮತ್ತು ಲೇಖಕರ ಆಂತರಿಕ ನಿಲುವುಗಳಲ್ಲಿ ಪರಂಪರೆ ಮತ್ತು ಆಧುನಿಕತೆಯ ನಡುವಿನ ಸಮನ್ವಯದ ಪ್ರಯತ್ನವನ್ನು ಈ ಲೇಖನ ಮುಟ್ಟಿಸುತ್ತದೆ. ಈ ಮುಖಾಮುಖಿಯ ಮೂಲಕ ಕನ್ನಡ ಸಾಹಿತ್ಯವು ಹೇಗೆ ಹೊಸ ಬೆಳವಣಿಗೆಗೆ ದಾರಿ ಮಾಡಿತು ಎಂಬುದನ್ನು ಲೇಖನ ಸ್ಪಷ್ಟಪಡಿಸುತ್ತದೆ. 
APA, Harvard, Vancouver, ISO, and other styles
7

ಸಂತೋಷ್‌, ಕುಮಾರ್‌ ಆರ್‌.ಎಂ. "ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು". AKSHARASURYA JOURNAL 06, № 04 (2025): 78 to 89. https://doi.org/10.5281/zenodo.15490942.

Full text
Abstract:
ವಚನ ಸಾಹಿತ್ಯವು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅಮೂಲ್ಯ ಸಂಪತ್ತಾಗಿದೆ. ಇದು 12ನೇ ಶತಮಾನದಲ್ಲಿ ಜನಿಸಿದ ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದ್ದು, ಬಸವಾದಿ ಶರಣರು ಇದನ್ನು ಜನಸಾಮಾನ್ಯರಿಗೆ ತಲುಪುವಂತೆ ಮಾಡಿದರು. ವಚನ ಸಾಹಿತ್ಯವು ಧಾರ್ಮಿಕ, ಸಾಮಾಜಿಕ ಮತ್ತು ದಾರ್ಶನಿಕ ಚಿಂತನೆಗಳನ್ನು ಒಳಗೊಂಡಿದೆ ಮತ್ತು ಭಕ್ತಿ ಚಳವಳಿಯ ಪ್ರಮುಖ ಭಾಗವಾಗವೂ ಆಗಿದೆ. ವಚನ ಸಾಹಿತ್ಯವು ʼಸಮಾನತೆʼ, ʼಶ್ರಮʼ-ʼಕಾಯಕʼ ಮತ್ತು ʼಭಕ್ತಿʼಯ ಮಹತ್ವ, ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಶರಣರು ಜಾತಿ, ಲಿಂಗ, ಆರ್ಥಿಕ ಸ್ಥಿತಿ ಮುಂತಾದ ಬೇಧಭಾವಗಳನ್ನು ತಿರಸ್ಕರಿಸಿದರು. ಅಲ್ಲದೆ ಇವರು ಜಾತಿ-ವರ್ಣಭೇದಗಳ ವಿರೋಧವಾಗಿಯೂ ಮತ್ತು ಸಮಾನತೆಗೆ ಹೆಚ್ಚಿನ ಮನ್ನಣೆಯನ್ನು ನೀಡಿದರು.ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮೊದಲಾದ ಶರಣರು &ldq
APA, Harvard, Vancouver, ISO, and other styles
8

ನಿಕಿತಾ, ರಮೇಶ ಚನ್ನಾಳೆ, та ಚಿಂತಾಮಣಿ ಮಹೇಶ. "ಕನ್ನಡ ಲಲಿತ ಪ್ರಬಂಧಗಳಲ್ಲಿ ಮಾನವೀಯ ಮೌಲ್ಯಗಳು". Aksharasurya Journal 05, № 05 (2025): 121 to 127. https://doi.org/10.5281/zenodo.14619654.

Full text
Abstract:
ಕನ್ನಡ ಸಾಹಿತ್ಯದ ಅನೇಕ ಬರಹಗಳು ಸಮಾನತೆ, ಸ್ತ್ರೀವಾದ, ವಾಸ್ತವತೆ, ಸಮಾಜಿಕ ದೃಷ್ಟಿಕೋನ, ಕಲ್ಪನೆ ಹೀಗೆ ಅನೇಕ ವಿಷಯಗಳ ಬಗೆಗೆ ಬೆಳಕು ಚಲ್ಲಿವೆ. ಅದೇ ರೀತಿಯಲ್ಲಿ ಲಲಿತ ಪ್ರಬಂಧಗಳು ಕೂಡ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮವನ್ನು ತಂದುಕೊಟ್ಟಿವೆ. ಲಲಿತ ಪ್ರಬಂಧಗಳು ಕೂಡ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿವೆ. ಮೌಲ್ಯಗಳಿಲ್ಲದೆ ಇದ್ದರೆ ಅದು ಸಾಹಿತ್ಯವಲ್ಲ. ಹಾಗಾಗಿ ಯಾವುದೇ ಸಾಹಿತ್ಯ ಮಾನವೀಯ ಮೌಲ್ಯಗಳು ಪ್ರಮುಖವಾಗಿ ಒಳಗೊಂಡಿರಲೇಬೇಕು. ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ ಎ.ಎನ್. ಮೂರ್ತಿರಾವ್ ಅವರ ಪ್ರಬಂಧಗಳು ಮತ್ತು ಭುವನೇಶ್ವರಿ ಹೆಗಡೆಯವರ ಲಲಿತ ಪ್ರಬಂಧಗಳು ಮಾನವೀಯ ಮೌಲ್ಯಗಳನ್ನು ಬಿತ್ತರಿಸಿವೆ. ಧಾರ್ಮಿಕ, ಸಮಾಜಿಕ, ಮಾನವೀಯ ಮೌಲ್ಯಗಳು ಬದುಕಿನ ಮೆಟ್ಟಿಲೇರಲು ಮೌಲ್ಯಗಳು ಪ್ರಮುಖವಾಗಿವೆ. ಮೌಲ್ಯಗಳು ಉತ್ತಮ ಸಮಾಜವನ
APA, Harvard, Vancouver, ISO, and other styles
9

ಪವಾಡೆಪ್ಪ, ವಿ. ಮನಗೂಳಿ. "ಮುಳುಗಡೆ ಗ್ರಾಮಗಳಲ್ಲಿನ ಕೃಷಿ ಸಂಬಂಧಿ ಆಚರಣೆಗಳು". AKSHARASURYA 05, № 02 (2024): 73 to 84. https://doi.org/10.5281/zenodo.14035247.

Full text
Abstract:
ಮನುಷ್ಯನಿಗೆ ಉಸಿರಾಡಲು ಗಾಳಿ ಎಷ್ಟು ಮುಖ್ಯವೋ ಜೀವಿಸಲು ನೀರು ಕೂಡ ಮುಖ್ಯ. ಪ್ರಾಚೀನ ಕಾಲದಿಂದಲೂ ಮನುಷ್ಯ ತಾನು ಬದುಕಲು, ತನಗೆ ಬೇಕಾದ ಆಹಾರ ಪದಾರ್ಥಗಳನ್ನು ಬೆಳೆಯಲು ನದಿ ಮೂಲಗಳನ್ನೇ ಅವಲಂಬಿಸಿರುವುದನ್ನು ಕಾಣುತ್ತೇವೆ. ಹಾಗಾಗಿಯೇ ಜಗತ್ತಿನ ಎಲ್ಲಾ ನಾಗರಿಕತೆಗಳು ನದಿ ಬಯಲು ಪ್ರದೇಶಗಳಲ್ಲಿಯೇ ಬೆಳೆದು ಬಂದಿವೆ. ನದಿಗಳು ಕೇವಲ ಹರಿಯುವ ಜಲರಾಶಿ ಮಾತ್ರವಲ್ಲದೆ ಸಜೀವ ಶಕ್ತಿವಾಹಿನಿಗಳಾಗಿ ನಮ್ಮ ಮುಂದಿವೆ. ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿ ಒಂದು ಕಾಲಕ್ಕೆ ಮನುಷ್ಯನ ಧಾರ್ಮಿಕ ಹಾಗೂ ಸಾಂಸ್ಕೃತಿಕತೆ ಬೆಳವಣಿಗೆಗೆ ಕಾರಣವಾಗಿದ್ದ ನದಿಗಳು ಇಂದು ಆರ್ಥಿಕ ಅಭಿವೃದ್ದಿ ದೃಷ್ಟಿಯಿಂದ ವಿವಿಧೋದ್ದೇಶ ನೀರಾವರಿ ಯೋಜನೆಗಳಿಗೆ ಆವಾಸ ಸ್ಥಾನಗಳಾಗಿವೆ. ಈ ನಿಟ್ಟಿನಲ್ಲಿ ಭಾರತದ ಪ್ರಮುಖ ನದಿಗಳಲ್ಲಿ ಒಂದಾದ ಕೃಷ್ಣಾ ನದಿಯ ನೀರನ್ನು ಉಪಯೋಗಿಸಿಕೊಳ್ಳುವ ಸ
APA, Harvard, Vancouver, ISO, and other styles
10

ಮುಕ್ತಾ, ಪೈ., та ಶಂಕರ್ ಜ್ಯೋತಿ. "ವಚನ ಚಳುವಳಿ ಮತ್ತು ಸಮಾಜ ಪರಿವರ್ತನೆ". AKSHARASURYA JOURNAL 06, № 05 (2025): 84 to 93. https://doi.org/10.5281/zenodo.15504282.

Full text
Abstract:
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯಕ್ಕೊಂದು ವಿಶಿಷ್ಟವಾದ ಸ್ಥಾನವಿದೆ. ಇದು ಎಲ್ಲಾ ವರ್ಗ, ವರ್ಣದ ಜನಸಾಮಾನ್ಯರು ತಮ್ಮ ಮನಸ್ಸಿನಲ್ಲಿದ್ದ ಭಾವನೆಗಳನ್ನು ವ್ಯಕ್ತಪಡಿಸಿದ ಅದ್ಭುತವಾದ ಭಕ್ತಿ ಸಾಹಿತ್ಯ. ಮೇಲು-ಕೀಳು, ಜಾತಿ-ಮತ, ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರೂ ಸಾಮೂಹಿಕವಾಗಿ ಪಾಲ್ಗೊಂಡ ಸಾಹಿತ್ಯ ಜಗತ್ತಿನ ಇತಿಹಾಸದಲ್ಲಿಯೇ ವಿರಳವಾಗಿದೆ. ಶರಣ ಧರ್ಮದ ವಿಶಿಷ್ಟತೆ ಎಂದರೆ ಪೂಜೆ ಪುನಸ್ಕಾರಗಳಿಗೆ, ಯಜ್ಞ ಯಾಗಾದಿಗಳಿಗೆ, ಆಚರಣೆಗಳಿಗೆ ಅವಕಾಶ ನೀಡಲಿಲ್ಲ. ವಚನಾಕಾರರು 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಹೀಗೆ ಹಲವು ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ತಂದು ಸಮಾಜದಲ್ಲಿ ನಿರ್ಲಕ್ಷಕ್ಕೆ ಒಳಗಾದ ಜನ ಸಮೂಹವನ್ನು ಒಂದೆಡೆ ಸೇರಿಸುವ ಕಾರ್ಯವನ್ನು ಮಾಡಿದರು. ವಚನ ಚಳುವಳಿಯ ದೀಪವನ್ನು ನೂರಾರು ವಚನಕಾರರು ಹಚ
APA, Harvard, Vancouver, ISO, and other styles
11

ರವಿ, ಎನ್. ಸಿ. "ರಂಗಕಲಾವಿದೆಯರು ಮತ್ತು ಚಳವಳಿಗಳು (ಮೈಸೂರು ಸಂಸ್ಥಾನ ಮತ್ತು ಅಖಂಡ ಕರ್ನಾಟಕವನ್ನು ಅನುಲಕ್ಷಿಸಿ)". AKSHARASURYA JOURNAL 04, № 05 Special Issue (2024): 43 to 52. https://doi.org/10.5281/zenodo.13294375.

Full text
Abstract:
ಅನೇಕ ರಂಗಕಲಾವಿದೆಯರು ಬದುಕಿನ ಅನಿವಾರ್ಯತೆಗಾಗಿ, ಮತ್ತೆ ಕೆಲವರು ಅಭಿವ್ಯಕ್ತಿಯ ತುಡಿತದಿಂದಾಗಿ ರಂಗಭೂಮಿಗೆ ಪ್ರವೇಶಿಸಿದವರು. ಕಲಾದೃಷ್ಟಿಯಿಂದ ತಮ್ಮ ವೃತ್ತಿಯಲ್ಲಿ ಅಮೋಘವಾದದ್ದನ್ನು ಸಾಧಿಸಿದ್ದಾರೆ. ಕೆಲವರು ಬದುಕಿನ ಅನಿವಾರ್ಯತೆಯಿಂದ ಉಪಜೀವನಕ್ಕಾಗಿ ಎಂಬಂತೆ ಇದನ್ನು ಆರಂಭದಲ್ಲಿ ಆಶ್ರಯಿಸಬೇಕೆಂಬ ಹಂಬಲದಿಂದ ಬಂದವರು ಕೂಡ ವೃತ್ತಿ ರಂಗಭೂಮಿಯ ಹಿನ್ನೆಲೆಯಲ್ಲಿ ಇವರು ಸಾಧಿಸಿದ್ದ ಕಲಾಸಾದನೆ ಬೆಟ್ಟದಷ್ಟು ಎಂಬುವುದನ್ನು ಮರೆಯಬಾರದು. ಅನೇಕರು ಬಣ್ಣ ಬಳಿದು ಕಲೆಯೆಂಬ ಸಾಧನಾ ಪಥದಲ್ಲಿ ಸಿದ್ಧಿ ಕಾಣಬೇಕೆಂಬ ಅಪೇಕ್ಷೆಯಿಲ್ಲದೆ ರಂಗಭೂಮಿಗೆ ಪ್ರವೇಶಿಸಿದರೂ ಕೂಡ ನಂತರ ತಮ್ಮ ಬದುಕಿನ ದಡ ಮುಟ್ಟಲು ತಡಕಾಡಿದರೂ ಕೂಡ ಅವರಿಗರಿವಿಲ್ಲದೆ ಕಲಾಲೋಕದಲ್ಲಿ, ತಾವಾರಿಸಿಕೊಂಡ ಬಣ್ಣದ ಲೋಕದ ಕಲಾ ಪ್ರಪಂಚದಲ್ಲಿ ಗುರುತರವಾದ ಹೆಜ್ಜೆಗುರುತುಗಳನ್ನು ಮೂಡಿಸಿದ್ದ
APA, Harvard, Vancouver, ISO, and other styles
12

ಸಂದೇಶ್, ಎ. ಎಸ್. "'ಅವಳ ಪಥ' ಒಂದು ನೋಟ". AKSHARASURYA 03, № 05 (2024): 75–87. https://doi.org/10.5281/zenodo.10938082.

Full text
Abstract:
ಜನಪದ ಸಾಹಿತ್ಯದಿಂದ ಇಂದಿನವರೆಗಿನ ಮಹಿಳಾ ಪಯಣವನ್ನು ಈ ಲೇಖನ ದಾಖಲಿಸುತ್ತದೆ. ಮಾತೃಪ್ರಧಾನ ಸಂಸ್ಕೃತಿಯಿಂದ, ಪಿತೃಪ್ರಧಾನ ಸಂಸ್ಕೃತಿಯವರೆಗಿನ ಚಲನೆಯನ್ನು ಸಾಮಾಜಿಕ, ಆರ್ಥಿಕ, ಕೌಟುಂಬಿಕ, ಧಾರ್ಮಿಕ ನೆಲೆಯ ಹಿನ್ನೆಲೆಯಲ್ಲಿ ಶೋಧಿಸಿದೆ. ಪ್ರಸ್ತುತ ಕೃತಿಯು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಸ್ತ್ರೀ ಪರ ಆಲೋಚನಾ ಕ್ರಮಗಳ ವಿಕಾಸವನ್ನು ಗುರುತಿಸುತ್ತದೆ. ಜನಪದ ಸಾಹಿತ್ಯ ಹಾಗೂ ಹಳಗನ್ನಡ ಕಾವ್ಯಗಳಿಂದ ಹಿಡಿದು ಮಹಿಳೆಯರ ಪ್ರಸ್ತುತ ಸಾಹಿತ್ಯಾಭಿವ್ಯಕ್ತಿಯನ್ನು ರೂಪಿಸುತ್ತಿರುವ ಬೌದ್ಧಿಕ ದ್ರವ್ಯ ಯಾವುದೆಂಬುದು ಇಲ್ಲಿ ಶೋಧಿತವಾಗಿದೆ. ವಚನಕಾರ್ತಿಯರ ದೇಸಿ ಮಾದರಿಯಿಂದ ತೊಡಗಿ, ಈ ಕಾಲದ ಪ್ರಮುಖ ತಾತ್ವಿಕತೆಯಾದ ಸ್ತ್ರೀವಾದಿ ಸಿದ್ಧಾಂತಗಳವರೆಗೆ ಇಲ್ಲಿನ ಚರ್ಚೆಯ ಹರಹಿದೆ. ನವೋದಯ ಸಾಹಿತ್ಯದ ಸಾಮಾಜಿಕ ಅರಿವು, ಪ್ರಗತಿಶೀಲ ಸಾಹಿತ್ಯದ ವೈಚಾರಿಕ ನಿಲುವ
APA, Harvard, Vancouver, ISO, and other styles
13

ಸಾವಿತ್ರಿ, ಮಠ. "ವಚನ ಚಳುವಳಿ ಮತ್ತು ಮಹಿಳಾ ಸಮಾನತೆ". AKSHARASURYA JOURNAL 06, № 05 (2025): 201 to 206. https://doi.org/10.5281/zenodo.15504642.

Full text
Abstract:
ಹನ್ನೆರಡನೆಯ ಶತಮಾನದಲ್ಲಿ ವಚನಗಳ ಮೂಲಕ ಸಾಮಾಜಿಕ ಚಿಂತನೆ, ವೈಚಾರಿಕತೆ, ಧಾರ್ಮಿಕ ಓರೆಕೋರೆಗಳ ವಿಶ್ಲೇಷಣೆ ಕಾಯಕ ಶ್ರದ್ಧೆಯೊಂದಿಗೆ ಮಹಿಳೆಯರಿಗೆ ಸ್ವಾತಂತ್ರ್ಯ ಸಮಾನತೆ ನೀಡಿ ಅವರಲ್ಲಿ ವಿಶ್ವಾಸವನ್ನು ಮೂಡಿಸಿದವರು ಶಿವಶರಣರು. ತಮ್ಮ ವಚನಗಳಲ್ಲಿ ಲಿಂಗಾತೀತ ನೆಲೆಯನ್ನು ಪುರಸ್ಕರಿಸಿ, ಲಿಂಗತಾರತಮ್ಯದ ಸಮಾಜದಲ್ಲಿ ವಿಚಾರ, ವಿಮರ್ಶೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು ವಚನ ಚಳುವಳಿ. ಹೆಣ್ಣನ್ನು ʻಮಾಯೆʼ ಎಂದು ಹೀಗಳೆಯುತ್ತಿದ್ದ ಪುರುಷ ಪ್ರಧಾನ ಮನೋಧೋರಣೆಗೆ ತಡೆಹಾಕಿ ಹೆಣ್ಣನ್ನು ಹತ್ತಿಕ್ಕುವ ಸಮಾಜದ ಕೌರ್ಯವನ್ನು ಖಂಡಿಸಿ ಸ್ತ್ರೀಸಂವೇದನೆಗೆ ಹೊಸ ಆಯಾಮವನ್ನು ತಂದುಕೊಟ್ಟವರು ವಚನಕಾರರು. ಇದರಿಂದ ಸಮಾಜದಲ್ಲಿ ಮಹಿಳೆಯರಿಗೆ ಸಾಕಷ್ಟು ಅವಕಾಶಗಳು ದೊರೆತು ಅನುಭವ ಮಂಟಪದಲ್ಲಿ ಪುರುಷರ ಸಮಾನವಾಗಿ ಚರ್ಚೆ ಮಾಡಿ ಸಮಾಜಕ್ಕೆ ಮಹಿಳೆಯರ ಕೊಡುಗೆ ಏನೆಂಬು
APA, Harvard, Vancouver, ISO, and other styles
14

ಶಂಭುಲಿಂಗ, ಹುಬ್ಬಳ್ಳಿ. "ಶಿವಶರಣರ ದೃಷ್ಟಿಯಲ್ಲಿ ಆರ್ಥಿಕ ಸಿದ್ಧಾಂತ". AKSHARASURYA 03, № 06 (2024): 137 to 142. https://doi.org/10.5281/zenodo.11127274.

Full text
Abstract:
12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಅಂದಿನ ಸಮಾಜದ ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದಂತಹ ಸುಧಾರಣೆಯನ್ನು ತರಲು ಬಯಸಿದರು. ಪ್ರತಿಯೊಬ್ಬ ವ್ಯಕ್ತಿಯೂ ಕಾಯಕದಲ್ಲಿ ತೊಡಗಬೇಕು. ಆ ಕಾಯಕದಿಂದ ಬಂದ ಹಣದಿಂದ ತನ್ನ ಅಗತ್ಯತೆಗಳನ್ನು ಪೂರೈಸಿಕೊಂಡು ಉಳಿದ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಸದ್ವಿನಿಯೋಗ ಮಾಡಬೇಕು ಎಂಬುದು ಶರಣರ ಆಲೋಚನೆಯಾಗಿತ್ತು. ಜೊತೆಗೆ ಸಮಾಜದಲ್ಲಿನ ಸಂಪತ್ತು ಎಲ್ಲ ಜನರಿಗೆ ಸಮಾನವಾಗಿ ಹಂಚಿಕೆ ಆಗಬೇಕು ಎಂಬ ಪರಿಕಲ್ಪನೆಯನ್ನು ಹೊಂದಿದ್ದರು. ಅಂತೆಯೆ ‘ಶಿವಶರಣರ ದೃಷ್ಟಿಕೋನದಲ್ಲಿ ಆರ್ಥಿಕ ಸಿದ್ದಾಂತ’ ಎಂಬ ಈ ಲೇಖನದಲ್ಲಿ ಅರ್ಥಶಾಸ್ತ್ರದ ಪರಿಕಲ್ಪನೆಗಳಾದ ಕೃಷಿ, ಉದ್ಯೋಗ, ಉತ್ಪಾದನೆ, ವಿತರಣೆ, ಆದಾಯ, ಅನುಭೋಗ, ಉಳಿತಾಯ ಮುಂತಾದ ಅಂಶಗಳ ಬಗ್ಗೆ ಬೆಳಕನ್ನು ಚೆಲ್ಲಲಾಗಿದೆ. ಉ
APA, Harvard, Vancouver, ISO, and other styles
15

ಶ್ರೀನಿವಾಸ, ಎಸ್.ಜಿ. "ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆಗಳು". AKSHARASURYA JOURNAL 06, № 04 (2025): 01 to 10. https://doi.org/10.5281/zenodo.15490768.

Full text
Abstract:
ʼಕಾಯಕವೇ ಕೈಲಾಸʼ ವೆಂದು ಸಾರಿ, ಜನರಲ್ಲಿ ದುಡಿದು ತಿಂದು ಬದುಕುವ ಮಹತ್ವವನ್ನು ತಿಳಿಸಿದ್ದು ವಚನ ಸಾಹಿತ್ಯ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳಲ್ಲಿ ಸ್ತ್ರೀಯರಿಗೆ ಭಾಗವಹಿಸುವ ಸಮಾನ ಅವಕಾಶ ನೀಡುವ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕೊಂದು ಅರ್ಥವನ್ನು ಕಲ್ಪಿಸಿದರು. ಕಲುಷಿತಗೊಂಡಿದ್ದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ದಿಕ್ಕರಿಸಿ, ಘನ ಬದಲಾವಣೆಯನ್ನು ಗುರಿಯಿಟ್ಟು ನಡೆದ ದಾರ್ಶನಿಕ ಚಳುವಳಿ ವಚನ ಸಾಹಿತ್ಯ. ಸಾಮಾಜಿಕ ಬದಲಾವಣೆಗೆ ಹೊಸ ಭಾಷ್ಯ ಬರೆಯುವ ಮೂಲಕ ಉತ್ತಮ ಸಮಾಜ ವ್ಯವಸ್ಥೆಗೆ ನಿಜವಾದ ಅರ್ಥ ಕಲ್ಪಿಸಿ ಕೊಟ್ಟವರು. ಸಮಾಜದ ಕೀಳುಮಟ್ಟದ ಶೋಷಣೆಯಿಂದಾಗಿಯೇ ಸಮಾಜದಲ್ಲಿ ದುಡಿಯುವ ಮತ್ತು ಕೂತು ಉಣ್ಣುವ ವರ್ಗಗಳು ನಿರ್ಮಾಣವಾಗುವುದಕ್ಕೆ ಕಾರಣವಾಗಿರಬೇಕು, ಸಮಾಜದಲ್ಲಿ ಮೇಲ್ವರ್ಗವೆಂದು ಕರೆಸಿಕೊಂಡ ಜನರು ಸಮಾಜದ ಇತರರನ್ನು
APA, Harvard, Vancouver, ISO, and other styles
16

ತಾರಾಮಣಿ, ಆರ್. "ಗಿರೀಶ್ ಕಾರ್ನಾಡರ ನಾಗಮಂಡಲ ನಾಟಕ: ಸಂಕೇತಗಳ ಪರಾಮರ್ಶೆ". AKSHARASURYA 04, № 02 (2024): 113 to 124. https://doi.org/10.5281/zenodo.11525902.

Full text
Abstract:
ಪ್ರಮುಖ ಚಿಂತಕರಲ್ಲಿ ಒಬ್ಬರಾದ ಎ ಕೆ ರಾಮಾನುಜನ್‌ ಅವರು ಹೇಳಿದ ಜನಪದ ಕಥೆಯನ್ನು ಆಧರಿಸಿ ನಾಟಕ ಕ್ಷೇತ್ರದ ಧೀಮಂತ ಪ್ರತಿಭೆಗಳಾದ ಗಿರೀಶ್‌ ಕಾರ್ನಾಡರು ನಾಗಮಂಡಲ ನಾಟಕವನ್ನೂ, ಕಂಬಾರರು ಸಿರಿಸಂಪಿಗೆ ನಾಟಕವನ್ನೂ ರಚಿಸಿದ್ದಾರೆ. ಎರಡು ನಾಟಕಗಳ ವಸ್ತು ಒಂದೇ ಆದರೂ ನಿರೂಪಣಾ ಶೈಲಿ, ನಾಟಕದ ತಂತ್ರಗಾರಿಕೆ ಹಾಗೂ ಧೋರಣೆಗಳು ಭಿನ್ನವಾಗಿವೆ. ನಾಟಕಗಳು ಮೇಲ್ನೋಟಕ್ಕೆ ಸರಳವಾದ ವಸ್ತುವನ್ನು ಒಳಗೊಂಡಂತೆ ಕಂಡರೂ ಓದುಗರಿಗೆ ಒಂದು ಸುಂದರವಾದ, ಅದ್ಭುತವಾದ ಸತ್ಯದ ಅನಾವರಣ ಮಾಡಿಸುತ್ತದೆ. ನಾಗಮಂಡಲ ನಾಟಕವು ಸಾಂಸ್ಕೃತಿಕ, ಧಾರ್ಮಿಕ, ಮಾನಸಿಕ ಮತ್ತು ಸಾಮಾಜಿಕ ಜೀವನವನ್ನು ಸಂಕೇತಗಳ ಬಳಕೆಯ ಮೂಲಕ ಪ್ರತಿಬಿಂಬಿಸುತ್ತದೆ. ನಾಟಕವು ಪಿತೃಪ್ರಧಾನ ವ್ಯವಸ್ಥೆಯಲ್ಲಿನ ಪುರುಷನ ನ್ಯೂನ್ಯತೆಗಳನ್ನು, ವರ್ತನೆಯ ರೀತಿಯನ್ನು ಹಾಗೂ ಪುರಾತನ ಸಾಂಪ್ರದಾಯಿಕ
APA, Harvard, Vancouver, ISO, and other styles
17

ಡಿ., ಪುರುಷೋತ್ತಮ. "ಟಿಪ್ಪು: ಐತಿಹಾಸಿಕ ವ್ಯಕ್ತಿ ಕುರಿತು ಒಂದು ಅವಲೋಕನ". AKSHARASURYA JOURNAL 03, № 04. SPECIAL ISSUE. (2024): 50 to 58. https://doi.org/10.5281/zenodo.10929686.

Full text
Abstract:
ಭಾರತವು ರಾಜ ಮಹಾ ರಾಜರಿಂದ ಅನುಭವಿಸಿದ ಪ್ರಭುತ್ವದ ಕಲ್ಪನೆ, ಬ್ರಿಟೀಷರಿಂದ ಕಲಿತ ಪ್ರಭುತ್ವದ ಪಾಠ, ಸ್ವಾತಂತ್ರ್ಯ ನಂತರ ನಾವು ಅನುಭವಿಸುತ್ತಿರುವ ಪ್ರಜಾಪ್ರಭುತ್ವದ ಕಲ್ಪನೆಗಳಲ್ಲಿ ಬಹಳ ವೈರುಧ್ಯ ಮತ್ತು ವ್ಯತ್ಯಾಸಗಳು ಇವೆ. ಪ್ರಜಾಪ್ರಭುತ್ವದ ದೃಷ್ಟಿಯಿಂದ ಇತಿಹಾಸವನ್ನು ನೋಡಿದರೆ ಬ್ರಿಟೀಷರು, ಇಲ್ಲಿಯ ರಾಜ ಮಹಾರಾಜರುಗಳೆಲ್ಲರೂ ಪ್ರಜಾಪ್ರಭುತ್ವದ ವಿರೋಧಿಗಳೆಂದೇ ಬರೆಯಬೇಕಾಗುತ್ತದೆ. ಏಕೆಂದರೆ ಅವರುಗಳು ಯಾರು ಇಂದಿನ ಸಂವಿಧಾನ ದತ್ತವಾದ ಪ್ರಭುತ್ವನ್ನು ನಡೆಸಿಲ್ಲ. ಪ್ರಜಾಪ್ರಭುತ್ವ ಕಲ್ಪನೆಯಿಂದ ಇತಿಹಾಸ ನೋಡುವುದು ಕೂಡ ತಪ್ಪು. ಏಕೆಂದರೆ ಆ ಕಾಲದ ಚರಿತೆಯಲ್ಲಿ ಇಲ್ಲದನ್ನು ಕಾಣ ಬಯಸಿದರೆ ಅದು ಸಿಗುವುದಿಲ್ಲ. ಇದರಿಂದ ನಮ್ಮ ಪ್ರಭುತ್ವ ಒಪ್ಪುವ ಚರಿತ್ರೆ ನಮಗೆ ಲಬ್ಧವಾಗುವುದಿಲ್ಲ. ಕಾಲ ಪ್ರಜ್ಞೆ ಇರದೆ, ಚಾರಿತ್ರರಿಕ ದೃಷ್ಟಿ ಇರದೆ ಬರೆದ
APA, Harvard, Vancouver, ISO, and other styles
18

ಜ್ಯೋತಿ, ಎನ್. ಭಟ್. "ಮಾನವೀಯ ಸಮಾಜ ರೂಪಿಸುವಲ್ಲಿ ವಚನಗಳ ಪಾತ್ರ". AKSHARASURYA JOURNAL 06, № 04 (2025): 97 to 106. https://doi.org/10.5281/zenodo.15490983.

Full text
Abstract:
ವಚನ ಸಾಹಿತ್ಯವು 12ನೇ ಶತಮಾನದ ಕನ್ನಡದ ವಿಶಿಷ್ಟ ಸಾಹಿತ್ಯಪ್ರಕಾರವಾಗಿದೆ. ಇದನ್ನು ಪಂಡಿತರಿಗೆ ಮೀಸಲಾಗಿದ್ದ ಸಾಹಿತ್ಯದ ಮೀರೆದು, ಸಾಮಾನ್ಯ ಜನರ ಬದುಕು, ಅನುಭವ, ತತ್ವಗಳನ್ನು ಸರಳವಾದ ಭಾಷೆಯಲ್ಲಿ ವ್ಯಾಖ್ಯಾನಿಸಿ ಸಮಾಜದಲ್ಲಿ ಜಾಗೃತಿ ತರಲು ಶರಣರು ಬಳಸಿದರು. ಮಾತನ್ನು ಮತಿಸಿದಾಗ ಮಾತ್ರ ವಚನವಾಗುವುದು ಎಂಬ ತತ್ವದೊಂದಿಗೆ, ವಚನಗಳು ಅನುಭವದ ಭಾವಗೀತೆಗಳಾಗಿವೆ. ಇದರಲ್ಲಿ ಧರ್ಮ, ನೀತಿ, ಜ್ಞಾನ, ಶ್ರಮ, ಸಮಾನತೆ, ಕಾಯಕ ಮತ್ತು ದಾಸೋಹದಂತಹ ಮಾನವ ಮೌಲ್ಯಗಳು ಸೊಗಸಾಗಿ ಪ್ರತಿಬಿಂಬಿಸುತ್ತವೆ. ಜಾತಿ, ಲಿಂಗ, ಧರ್ಮಗಳ ಭೇದವನ್ನು ತಿರಸ್ಕರಿಸಿ ಎಲ್ಲರಿಗೂ ಸಮಾನ ಸ್ಥಾನವಿರಬೇಕು ಎಂಬ ಸಂದೇಶ ನೀಡುತ್ತವೆ. ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮಪ್ರಭು, ಚನ್ನಬಸವಣ್ಣನಂತಹ ಶರಣರು ಸಮಾಜ ಸುಧಾರಣೆಗೆ ಮುಂಚೂಣಿಯಲ್ಲಿದ್ದರು. ಅವರು ಪುರಾಣಕಥೆಗಳನ್ನು ಬಳಸದೆ, ತ
APA, Harvard, Vancouver, ISO, and other styles
19

ಡಾ.ನಾಗರಾಜ, ತಳವಾರ. "'ಹಿರೇಕೆರೂರ ಪ್ರದೇಶದಲ್ಲಿ ಸರದಾರ ವೀರನಗೌಡ ಪಾಟೀಲರ ಸ್ವಾತಂತ್ರ್ಯ ಹೋರಾಟ'". Journal of Research & Development 15, № 17 (2023): 152–56. https://doi.org/10.5281/zenodo.10021276.

Full text
Abstract:
<strong>ಪ್ರಸ್ತಾವನೆ:</strong>&nbsp; &nbsp; &nbsp; &nbsp; ಭಾರತಕ್ಕೆ&nbsp;ವ್ಯಾಪಾರಕ್ಕಾಗಿ&nbsp;ಬಂದ&nbsp;ಬ್ರಿಟಿಷರು&nbsp;ತದನಂತರ&nbsp;ದೇಶದ&nbsp; ಆಡಳಿತ&nbsp;ಚುಕ್ಕಾಣಿ&nbsp;ಹಿಡಿದು&nbsp;ಭಾರತೀಯರನ್ನು&nbsp;ಗುಲಾಮರನ್ನಾಗಿ&nbsp;ಮಾಡಿಕೊಂಡು&nbsp;ಒಡೆದು&nbsp;ಆಳುವ&nbsp;ನೀತಿಯನ್ನು&nbsp;ಪಾಲಿಸಿ&nbsp;ಶೋಷಣೆಗೆ&nbsp;ಗುರಿಮಾಡಿದರು.&nbsp;ಇದನ್ನು&nbsp;ಕಂಡ&nbsp;ಭಾರತೀಯ&nbsp;ವಿಚಾರವಂತರು&nbsp;ಗುಲಾಮಗಿರಿ&nbsp;ಆಡಳಿತದಿಂದ&nbsp;ಮುಕ್ತರಾಗಲು&nbsp;ಹೋರಾಟ&nbsp;ನಡೆಸಿ&nbsp;ತ್ಯಾಗ-ಬಲಿದಾನಗಳಿಂದ&nbsp;ನಾಡಿಗೆ&nbsp;ಸ್ವಾತಂತ್ರ್ಯ&nbsp;ತಂದುಕೊಡುವಲ್ಲಿ&nbsp;ಕಾರಣೀಕರ್ತರಾದರು.&nbsp;ಇವರಲ್ಲಿ&nbsp;ಕರ್ನಾಟಕದವರ&nbsp;ಪಾತ್ರವು&nbsp;ಸಹ&nbsp;ಸುವರ್ಣಾಕ್ಷರದಲ್ಲಿ&nbsp;ಬರೆದಿಡುವಂತದ್ದು.&n
APA, Harvard, Vancouver, ISO, and other styles
20

ಭವ್ಯ, ಆರ್. "ಚಾರಿತ್ರಿಕ ಹಿನ್ನೆಲೆಯಲ್ಲಿ ಪ್ರಭುತ್ವ: ಕರ್ನಾಟಕ ಮತ್ತು ಕನ್ನಡ ಭಾಷೆ". AKSHARASURYA JOURNAL 03, № 04. SPECIAL ISSUE. (2024): 59 to 68. https://doi.org/10.5281/zenodo.10929698.

Full text
Abstract:
ಭಾಷೆ ಮತ್ತು ಸಂಸ್ಕೃತಿ ಅಂತಃಸಂಬಂಧಿತವಾಗಿ ಏರ್ಪಟ್ಟ ರೂಪಕತೆಯಾಗಿದೆ. ಒಂದು ಪ್ರಾದೇಶಿಕ ಸಂಸ್ಕೃತಿ ರೂಪಿತವಾಗಲು ಅಲ್ಲಿಯ ಭಾಷೆಯೇ ಬಹುಮುಖ್ಯವಾದ ಅಂಶವಾಗಿರತ್ತದೆ. ಭಾಷೆ ಇರದೇ ಜಗತ್ತಿನ ಯಾವ ವ್ಯಾಪರವೂ ಇಲ್ಲ. ಜಗತ್ತಿನ ಚರಿತ್ರೆಯನ್ನು ಗಮನಿಸಿದರೆ ನಮಗೆ ವೇದ್ಯವಾಗುವ ಸತ್ಯ ಒಂದಿದೆ. ಯಾವ ಭಾಷೆಯು ಶ್ರೇಷ್ಠವಲ್ಲ, ಅದೇ ರೀತಿ ಯಾವ ಭಾಷೆಯೂ ಕನಿಷ್ಠವೂ ಅಲ್ಲ. ಜಗತ್ತಿನ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವ ರೂಪಿತವಾಗಬೇಕಾದರೆ ಅದು ಕೇವಲ ಸಾಮಾಜಿಕ ಸಂಬಂಧಗಳಿಂದ, ರಾಜಕೀಯ ಪ್ರಭುತ್ವದಿಂದ ಮತ್ತು ಧಾರ್ಮಿಕ ಶ್ರೇಷ್ಠತೆಯ ಅಮಲಿನಿಂದ ಮಾತ್ರ ಆ ಪರಿಸ್ಥಿತಿ ನಿರ್ಮಾಣವಾಗಲು ಸಾಧ್ಯ. ಭಾಷೆಗಳನ್ನು ಆಡುವ ಸಮುದಾಯಗಳು ಚರಿತ್ರೆಯಲ್ಲಿ ಅನುಭವಿಸಿದ ಏರುಪೇರುಗಳು ಆಯಾ ಭಾಷೆಗಳ ಮೇಲೂ ಪರಿಣಾಮ ಬೀರಿರುತ್ತವೆ. ಪ್ರಬಲ ಪ್ರಭುತ್ವ ಅಧಿಕಾರವುಳ್ಳ ಸಮುದಾಯದ ಭಾಷೆಗ
APA, Harvard, Vancouver, ISO, and other styles
21

ದಿನೇಶ್, ಕೆ. ಎಸ್. "ರಾಜಾರಾವ್ ಅವರ ಕಾಂತಾಪುರ: ಒಂದು ಅಧ್ಯಯನ". AKSHARASURYA JOURNAL 03, № 04. SPECIAL ISSUE. (2024): 115 to 125. https://doi.org/10.5281/zenodo.10929855.

Full text
Abstract:
ರಾಜಾರಾವ್ ಅವರ ಕಾಂತಪುರ ಕಾದಂಬರಿಯು ವಸಾಹತು ಕಾಲದ ಗ್ರಾಮಭಾರತವನ್ನು ಚಿತ್ರಿಸುವ ಒಂದು ವಿಶಿಷ್ಟ ಕೃತಿಯಾಗಿದ್ದು, ಶತ ಶತಮಾನಗಳಿಂದ ಮಲಗಿದ್ದ ಭಾರತದ ಹಳ್ಳಿಗಳು ಸ್ವಾತಾಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರ ಅಹಿಂಸಾತ್ಮಕ, ಅಸಹಕಾರ ಚಳವಳಿಯಿಂದಾಗಿ ಇದ್ದಕ್ಕಿದ್ದಂತೆ ಹೇಗೆ ಜೀವ ತಳೆದು ಸ್ವಾತಂತ್ರ್ಯಹೋರಾಟದಲ್ಲಿ ಪಾಲ್ಗೊಂಡವು ಎಂಬುದನ್ನು ವಿವರಿಸುತ್ತದೆ. 1919 ರಿಂದ 1930 ರವರೆಗಿನ ದಿನಗಳಲ್ಲಿ ಭಾರತದಾದ್ಯಂತ, ಲಕ್ಷಗಟ್ಟಲೆ ಭಾರತೀಯ ಹಳ್ಳಿಗಳಲ್ಲಿ ಗಾಂಧಿಯವರು ತಮ್ಮ ಒಂದೇ ಜೀವಿತಾವಧಿಯಲ್ಲಿ ಇಡೀ ರಾಷ್ಟ್ರದ ಜನತೆಯನ್ನು ಶಿಸ್ತಿನ ಮತ್ತು ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟಗಾರರ ಸೈನ್ಯವನ್ನಾಗಿ ಪರಿವರ್ತಿಸಿದ ಬಗೆಯನ್ನು ಕಾದಂಬರಿ ವಾಸ್ತವಿಕ ಹಿನ್ನೆಲೆಯಲ್ಲಿ ಚಿತ್ರಿಸುತ್ತದೆ. ಗಾಂಧೀಜಿಯವರ ಚಳವಳಿಯಲ್ಲಿ ಹೆಣೆದುಕೊಂಡಿದ್ದ ಮ
APA, Harvard, Vancouver, ISO, and other styles
22

ಸಂಗೀತಂ, ಬಿ.ಜಿ., та ಕುಮಾರ್ ಸತೀಶ್. "ಗಿರೀಶ್ ಕಾಸರವಳ್ಳಿ ಸಿನೇಮಾಗಳಲ್ಲಿ ಜನಪದ ಕಲೆಗಳು: ಒಂದು ವಿಶ್ಲೇಷಣಾತ್ಮಕ ಅಧ್ಯಯನ". AKSHARASURYA 06, № 02 (2025): 45 to 60. https://doi.org/10.5281/zenodo.15123985.

Full text
Abstract:
ಪ್ರಸ್ತುತ ಲೇಖನದಲ್ಲಿ ಭಾರತೀಯ ಚಿತ್ರರಂಗದ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಎರಡು ಪ್ರಸಿದ್ಧ ಸಿನೇಮಾಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಜನಪದ ಕಲೆಗಳನ್ನು ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ತಿತ್ಯಂತರಗಳ ಮೂಲಕ ಅವರು ಹೇಗೆ ಬಿಂಬಿಸಿದ್ದಾರೆ ಮತ್ತು ಆಳವಾಗಿ ಬೇರೂರಿರುವ ಮಲೆನಾಡಿನ ಗ್ರಾಮೀಣ ಬದುಕಿನ ಸನ್ನಿವೇಶಗಳನ್ನು ಸಿನೇಮಾದ ಮೂಲಕ ಗಿರೀಶ್ ಕಾಸರವಳ್ಳಿ ಹೇಗೆ ಚಿತ್ರಿಸಿದ್ದಾರೆ ಎಂಬುದನ್ನು ಅಧ್ಯಯನ ಮಾಡಲಾಗಿದೆ. ಅವರ ಬಣ್ಣದ ವೇಷ ಮತ್ತು ದ್ವೀಪ ಚಿತ್ರಗಳು ಜನಪದ ಕಲೆಗಳ ಸಾರವನ್ನು ಮತ್ತು ಸಮಕಾಲೀನ ಸಮಸ್ಯೆಗಳೊಂದಿಗೆ ಅವುಗಳ ಪರಸ್ಪರ ಕ್ರಿಯೆಯನ್ನು ಸ್ಪಷ್ಟವಾಗಿ ಸಂಯೋಜಿಸುವ ಮಾದರಿ ಸಿನೇಮಾಗಳಾಗಿವೆ. ಬಣ್ಣದ ವೇಷ ಸಿನೇಮಾ ಮಲೆನಾಡಿನಲ್ಲಿನ ಯಕ್ಷಗಾನದ ಧಾರ್ಮಿಕ ಸಂಪ್ರದಾಯಗಳನ್ನು ನೈಜವಾಗಿ ತೋರಿಸುತ್ತದೆ. ಇದು ಒಂದ
APA, Harvard, Vancouver, ISO, and other styles
23

ಮನೋಹರ, ಕೆ. ಜಿ. "ಶಾಸ್ತ್ರೀಯ ಭಾಷಾ ಸ್ಥಾನಮಾನದ ಚಾರಿತ್ರಿಕ ಹಿನ್ನೋಟ". AKSHARASURYA 03, № 05 (2024): 94–106. https://doi.org/10.5281/zenodo.10938108.

Full text
Abstract:
ಅತ್ಯಂತ ಪ್ರಾಚೀನವೂ ಸ್ವತಂತ್ರವೂ ಸುದೀರ್ಘ ಸಮೃದ್ಧ ಸಾಹಿತ್ಯ ಪರಂಪರೆಯನ್ನು ಉಳ್ಳದ್ದು ಮತ್ತು ಹೆಚ್ಚು ಜನಬಳಕೆಯಲ್ಲ್ಲಿದ್ದ ಭಾಷೆಯನ್ನು ಶಾಸ್ತ್ರೀಯ ಭಾಷೆ ಎಂದು ಕರೆಯುತ್ತಾರೆ. ಶಾಸ್ತ್ರೀಯ ಎನ್ನುವುದಕ್ಕೆ ಸನಾತನ, ಪ್ರಾಚೀನ, ಪಾರಂಪರಿಕ, ಶಾಸ್ತ್ರ ಸಮ್ಮತವಾದ ಎಂಬರ್ಥಗಳಿವೆ. ಪ್ರಪಂಚದ ಅತಿ ಪ್ರಾಚೀನ ಮತ್ತು ಸಮೃದ್ಧವಾದ ಭಾಷೆಗಳನ್ನು ಕ್ಲಾಸಿಕಲ್ ಭಾಷೆಗಳೆಂದು, ಶಾಸ್ತ್ರೀಯ ಭಾಷೆಗಳೆಂದು ಕರೆಯುತ್ತಾರೆ. ಪ್ರಪಂಚದಲ್ಲಿರುವ ಶಾಸ್ತ್ರೀಯ (ಕ್ಲಾಸಿಕಲ್) ಭಾಷೆಗಳನ್ನು ಯುನೆಸ್ಕೋ ಮೂರು ವರ್ಗದಲ್ಲಿ ಗುರುತಿಸಿದೆ. ಅವುಗಳೆಂದರೆ: ಇಂಡೋ ಯುರೋಪಿಯನ್ ಭಾಷೆಗಳು - ಕ್ಲಾಸಿಕಲ್ ಗ್ರೀಕ್, ಲ್ಯಾಟಿನ್, ಸಂಸ್ಕೃತ, ಕ್ಲಾಸಿಕಲ್, ಪರ್ಷಿಯನ್.ಆಪ್ರೊ ಏಷಿಯಾಟಿಕ್ ಭಾಷೆಗಳು - ಕ್ಲಾಸಿಕಲ್ ಅರೇಬಿಕ್, ಹೀಬ್ರೂ.ಸಿನೋ ಟಿಬೇಟಿಯನ್ ಭಾಷೆಗಳು - ಕ್ಲಾಸಿಕಲ್ ಚೈನೀಸ್.&
APA, Harvard, Vancouver, ISO, and other styles
24

ರುಕ್ಮಿಣಿ, ವಿ. "ಡಾ. ಬಿ.ಆರ್. ಅಂಬೇಡ್ಕರ್‌ ಅವರ ದೃಷ್ಟಿಯಲ್ಲಿ ಅಸ್ಪೃಶ್ಯತೆ". AKSHARASURYA JOURNAL 06, № 05 (2025): 175 to 185. https://doi.org/10.5281/zenodo.15504614.

Full text
Abstract:
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್&zwnj; ಅವರು ಹಿಂದೂ ಸಮಾಜಕ್ಕೆ ಕಳಂಕವೆನಿಸಿರುವ ಅಸ್ಪೃಶ್ಯತೆಯ ವಿವಿಧ ಆಯಾಮಗಳನ್ನು ವೈಜ್ಞಾನಿಕವಾಗಿ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಭಾರತದಲ್ಲಿ ಮಾತ್ರ ಇದರ ಆಚರಣೆ ಏಕೆ ಮುಂದುವರೆದಿದೆ ಎಂಬುದರ ಬಗ್ಗೆ ವಿಶ್ಲೇಷಣೆ ನೀಡಿದ್ದಾರೆ. ಹಿಂದೂ ಸಮಾಜವನ್ನು ಮಾನವೀಯ ಮೌಲ್ಯಗಳು ಸಮಾನತೆ ಸ್ವಾತಂತ್ರ್ಯ, ನ್ಯಾಯ, ವಿಶ್ವ ಭ್ರಾತೃತ್ವದ ಆಧಾರದ ಮೇಲೆ ಪುನರ್ಘಟಿಸುವ ಪ್ರಯತ್ನವನ್ನು ಅವರ ಸಾಮಾಜಿಕ ಚಿಂತನೆಯಲ್ಲಿ ಕಾಣಬಹುದು. ಸಾಮಾಜಿಕ ಸಂಶೋಧನೆಯ ನೆಲೆಗಟ್ಟಿನಲ್ಲಿ ಅಂಬೇಡ್ಕರ್&zwnj; ಅವರ ಅಸ್ಪೃಶ್ಯತೆಯ ಕುರಿತ ಸಾಮಾಜಿಕ, ರಾಜಕೀಯ, ಧಾರ್ಮಿಕ ವಿಚಾರಗಳು ತುಂಬಾ ಮಹತ್ವವಾಗಿವೆ. ಯುರೋಪಿನ ಚರಿತ್ರೆಯಲ್ಲಿ ಕಂಡುಬರುವ ಅನೇಕ ಅನ್ಯಾಯಗಳನ್ನು ಮೂಢನಂಬಿಕೆಗಳನ್ನು ನಿವಾರಿಸಲಾಗಿದೆ. ಆದರೆ ಭಾರತದಲ್ಲಿ ಹಿಂದೂ ಬ್ರಾಹ್ಮಣ
APA, Harvard, Vancouver, ISO, and other styles
25

ಮಂಜುಳಾಕ್ಷಿ, ಎಲ್. "ಮಹಿಳೆ ಸಮಾನತೆ ಮತ್ತು ಡಾ. ಬಿ. ಆರ್. ಅಂಬೇಡ್ಕರ್‌". AKSHARASURYA JOURNAL 06, № 05 (2025): 72 to 83. https://doi.org/10.5281/zenodo.15504265.

Full text
Abstract:
ಕಾಲಾಂತರದಿಂದಲೂ ಮಹಿಳೆ ಸಮಾಜದಲ್ಲಿ ತನ್ನ ಅಸ್ವತ್ವಕ್ಕಾಗಿ ಒಂದಲ್ಲ ಒಂದು ರೀತಿಯಲ್ಲಿ ಧ್ವನಿ ಎತ್ತುತ್ತಲೆ ಬಂದಿದ್ದಾಳೆ. ಇದನ್ನು ನಾವು ಜನಪದ ಹೆಣ್ಣು ಅದರ ಪ್ರಕಾರವಾದ ತ್ರಿಪದಿಯಲ್ಲಿ ತನ್ನ ನೋವನ್ನು ಮತ್ತು ಸಮಾಜದ ಕಟ್ಟುಪಾಡು ಕಂದಾಚಾರಗಳನ್ನು ಮೌನವಾಗಿಯೇ ವಿರೋಧಿಸುತ್ತಾ ಬಂದಿದ್ದಾಳೆ. ಸಾಹಿತ್ಯದಲ್ಲಿ ಅವಳು ತಾಯಿಯಾಗಿ ಅಕ್ಕ-ತಂಗಿ, ನಾದಿನಿ, ಹೆಂಡತಿ, ಅತ್ತೆ ಹೀಗೆ ಅನೇಕ ಪಾತ್ರಗಳಲ್ಲಿ ಪುರುಷನೊಂದಿಗೆ ಜೀವಿಸುತ್ತಾ ಮಾನ್ಯತೆ ಪಡೆದಿದ್ದು ಅವನಿಂದ ದೇವತೆಯಾಗಿ, ಪ್ರಿಯೆಯಾಗಿ, ಕುಟುಂಬದ ಕಣ್ಣಾಗಿ, ಅವನ ಅರ್ಧಾಂಗಿಯಾಗಿದ್ದರೂ ಕೂಡ ಸಮಾಜದಲ್ಲಿ ಅವಳಿಗೆ ಅಂದಲ್ಲ ಇಂದಿಗೂ ಎರಡನೇ ದರ್ಜೆಯ ಸ್ಥಾನವಿದೆ ಅವಳನ್ನು ಪುರುಷ ಸಮಾಜ ತನ್ನ ಬಂಧಿಯಲ್ಲೇ ಬಂಧಿಸಿ ಅವಳ ಮೇಲೆ ಕಟ್ಟುಪಾಡು, ಕಂದಾಚಾರ ಪದ್ಧತಿಗಳನ್ನು ಹೇರುತ್ತಾ ಸಮಾಜದಲ್ಲಿ ಅವಳಿ ಯಾವುದೇ ಸ
APA, Harvard, Vancouver, ISO, and other styles
26

ಶರಣಪ್ಪ, ಬಸಪ್ಪ ಜಗ್ಗಲ. "ಬೆಳ್ವೊಲನಾಡಿನ ರಾಷ್ಟ್ರಕೂಟರ ಕಾಲದ ಶಾಸನೋಕ್ತ ಜೈನ ಮುನಿಗಳು". AKSHARASURYA JOURNAL 04, № 06 (2024): 143 to 151. https://doi.org/10.5281/zenodo.13725641.

Full text
Abstract:
&ldquo;ಪೂರ್ಣತ್ವ ಸಂಪಾದನೆ ಜೀವನದ ಗುರಿ. ಜೀವವು ಆತ್ಮವಿಕಾಸದ ಮಹಾ ಕಮ್ಮಟವೆನಿಸಿದುದು. ಪರಿಪೂರ್ಣದೆಡೆಗೆ ಸಾಗಲು ಜೈನಧರ್ಮ ಆನಂದಮಯವಾಗಿದೆ, ಆಶಾವಾದಿಯಾಗಿದೆ&rdquo;. ಇಲ್ಲಿ ಮನುಷ್ಯ ಸ್ವಪ್ರಯತ್ನದಿಂದ ಜೀವನವನ್ನು ಉತ್ತಮಗೊಳಿಸಿಕೊಂಡು, ಮಹೋನ್ನತವಾದುದನ್ನು ಸಾಧಿಸುತ್ತಾನೆ. ಇದೇ ಜೈನಧರ್ಮ ತತ್ವದಂತೆ ಕರ್ಮಬಂಧನಕ್ಕೊಳಗಾದ ಜೀವಾತ್ಮನು ಅನೇಕ ಭವಗಳನ್ನು ದಾಟುತ್ತ ಬಂದು, ಕರ್ಮಬಂಧವನ್ನು ಕಿತ್ತೊಗೆದು, ಭವಬಂಧನದಿಂದ ಮುಕ್ತಗೊಂಡು ಸಿದ್ದನಾಗುತ್ತಾನೆ. ತನ್ನಂತೆ ಇನ್ನುಳಿದ ಜೀವಾತ್ಮರೂ ಮುಕ್ತರಾಗಬೇಕೆಂಬ ಸದುದ್ದೇಶದಿಂದ ತಾನು ಕಂಡುಂಡ, ಅರಿತುಕೊಂಡ ಜ್ಞಾನದ ಹಿನ್ನೆಲೆಯಲ್ಲಿ ಈ ಜೀವಾಜೀವಗಳ ಸೃಷ್ಟಿ, ಸಂಸಾರದ ಕಲ್ಪನೆಯನ್ನು ಉಪದೇಶಿಸಿಸುವನು. ಜೀವಾತ್ಮನು ಬಯಸುವ ಅನಂತ ಸುಖವಾದ ಮುಕ್ತಿ ಪ್ರಾಪ್ತವಾಗಲು ಕಾಲಲಬ್ಬಿಗಿಂತ ಮೊದಲು ಸಮ್ಯಕ್ತ್ವಲಭಿಸಬ
APA, Harvard, Vancouver, ISO, and other styles
27

ರಾಜಕುಮಾರ, ಎಂ. ಸಿಂಧೆ. "ಡಾ. ಬಿ. ಆರ್. ಅಂಬೇಡ್ಕರ್‌ ಅವರ ಬದುಕಿನಿಂದ ಕಲಿಯಬೇಕಾದ ಸಂದೇಶ". AKSHARASURYA JOURNAL 06, № 01 (2025): 12 to 21. https://doi.org/10.5281/zenodo.14961338.

Full text
Abstract:
ಕಲಿಕೆ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿದೆ. ಅದು ನಿತ್ಯ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಹುಟ್ಟಿನಿಂದ ಸಾವಿನವರೆಗೂ ಜೀವನುದ್ದಕ್ಕೂ ವಿವಿಧ ಜ್ಞಾನಶಾಖೆಗಳ ಮೂಲಕ ಜೀವನಾನುಭವ ಪಡೆಯುತ್ತ, ಹಳೆ ಬೇರು ಹೊಸ ಚಿಗುರು ಎಂಬಂತೆ ಗುರುಹಿರಿಯರ ನಡೆ-ನುಡಿ, ಆಚಾರ ವಿಚಾರಗಳನ್ನು ಅನುಲಕ್ಷಿಸುತ್ತ, ಭವಿಷ್ಯದ ಬದುಕಿನ ಅಗತ್ಯತೆಗಳನ್ನು ಕಲ್ಪಿಸಿಕೊಳ್ಳುತ್ತ ಹಳೆಯ ಮತ್ತು ಹೊಸದರ ಸಮ್ಮಿಶ್ರಣದೊಂದಿಗೆ ಸುಂದರ ಬದುಕು ಕಟ್ಟಿಕೊಳ್ಳಲು &lsquo;ಕಲಿಕೆ&rsquo; ಎಂಬ ಪ್ರಕ್ರಿಯೆ ನಡೆಯುತ್ತಲೇ ಸಾಗುತ್ತದೆ.&lsquo;ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ&rsquo; ಯಿಂದ ಆರಂಭವಾಗಿ ಕಲಿಕೆ ಮುಂದುವರೆಯುತ್ತದೆ. &lsquo;ದೇಶ ಸುತ್ತು ಇಲ್ಲವೇ ಕೋಶ ಓದು&rsquo; ಎಂಬಂತೆ ಸಾಹಿತ್ಯ, ಕಾವ್ಯ, ಪುರಾಣ, ಶಾಸ್ತ್ರ, ಕಲೆ ಹೀಗೆ ನೂರಾರು ಪ್ರಕಾರದ ಗ್ರಂಥಗಳ ಅಧ್ಯ
APA, Harvard, Vancouver, ISO, and other styles
28

ವೆಂಕಟೇಶ, ಪಿ. "ರಾಘವೇಂದ್ರ ಪಾಟೀಲರ 'ತೇರು' ಕಾದಂಬರಿಯ ಮೌಲ್ಯಯುತ ವಿವೇಚನೆ". AKSHARASURYA JOURNAL 06, № 06 (2025): 97 to 103. https://doi.org/10.5281/zenodo.15581066.

Full text
Abstract:
ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರಾದ ರಾಘವೇಂದ್ರ ಪಾಟೀಲರು ಅಪ್ಪಟ ಗ್ರಾಮೀಣ ಪ್ರತಿಭೆ. ಗ್ರಾಮ ಬದುಕಿನ ಅನನ್ಯ ಅನುಭವಗಳಿಗೆ ಸಾಹಿತ್ಯದ ಆಧುನಿಕ ಚಿಂತನಾ ಮಾರ್ಗಗಳನ್ನು ಬೆಸೆದವರು. ಇವರು ವೃತ್ತಿಯಿಂದ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರಾಗಿದ್ದರೂ ತಮ್ಮ ಮೂಲ ಸಾಹಿತ್ಯಿಕ ಪ್ರವೃತ್ತಿಯನ್ನು ಉಳಿಸಿ ಬೆಳೆಸಿಕೊಂಡು ಬಂದು ಅದರಲ್ಲಿ ಅತ್ಯುಚ್ಚ ಸಾಧನೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಾವ್ಯ ರಚನೆಯ ಕ್ಷೇತ್ರದಲ್ಲಿ ಕೈ ಆಡಿಸಿದರೂ, ಕಥೆ-ಕಾದಂಬರಿಗಳ ಕ್ಷೇತ್ರವನ್ನು ಆಪ್ತವಾಗಿ ಅಪ್ಪಿಕೊಂಡ ಅವರು ಕನ್ನಡ ನಾಡಿನ ಪ್ರಮುಖ ಕಥೆಗಾರರಾಗಿ, ಕಾದಂಬರಿಕಾರರಾಗಿ ಮನ್ನಣೆಯನ್ನು ಪಡೆದುಕೊಂಡಿದ್ದಾರೆ. ವಸ್ತು ವೈವಿಧ್ಯ ಮತ್ತು ಭಾಷಿಕ ವೈಶಿಷ್ಯಗಳಿಂದ ಒಂದು ರೀತಿಯ ಅನನ್ಯತೆಯನ್ನು ಮೆರೆದಿದ್ದಾರೆ. ಪಾಟೀಲರ ಸೃಜನಶೀಲ ಸಂವೇದನೆಯ ಮುಪ್ಪುರಿಗೊಂಡು ವಿಶಿಷ್ಟ ರೀತ
APA, Harvard, Vancouver, ISO, and other styles
29

ಅನಂತಕುಮಾರ та ವಿ. ಬೆಟ್ಟಕೋಟೆ ನಾಗೇಶ್. "ಶಿರಹಟ್ಟಿ ವೆಂಕೋಬರಾಯರ ಕನಸಿನ ಮಂಡಳಿ". AKSHARASURYA 04, № 01 (2024): 52 to 60. https://doi.org/10.5281/zenodo.11162432.

Full text
Abstract:
ರಂಗಭೂಮಿಯು ಎಲ್ಲರನ್ನೂ ಒಂದುಗೂಡಿಸುವ ವಿಶೇಷವಾದ ಗುಣ-ಹೊಂದಿರುವ ಮಾಧ್ಯಮವಾಗಿದೆ. ನಾಟಕಗಳು ಇಂದು ಸಮಾಜದ ವಿವಿದ ಕ್ಷೇತ್ರಗಳಲ್ಲಿ ಅರಿವು ವಿಸ್ತರಿಸುವ ತರಬೇತಿ ನೀಡುವ ಮಾಧ್ಯಮವಾಗಿದೆ. ಕನ್ನಡ ವೃತ್ತಿ ರಂಗಭೂಮಿಯಲ್ಲಿ ವಿಜೃಂಭಣೆಯಿಂದ ಮೆರೆದ ರಂಗಭೂಮಿಯ ರಂಗ ಚಟುವಟಿಕೆಗಳ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯಿಸುವುದು, ಅನೇಕ ರಂಗ ಕಲಾವಿದರ, ರಂಗ ಸಂಶೋಧಕರ, ರಂಗಕರ್ಮಿಗಳ ಕೈಯಲ್ಲಿದೆ. ಈ ನಮ್ಮ ಕನ್ನಡ ರಂಗಭೂಮಿಯಲ್ಲಿ ಅನೇಕ ಕಲಾವಿದರು ಎಲೆ ಮರಿ ಕಾಯಿಯ ಹಾಗೆ ರಂಗಭೂಮಿಯಲ್ಲಿ ತೊಡಗಿಸಿಕೊಂಡು ರಂಗಭೂಮಿನೇ ನನ್ನ ಉಸಿರು ಅಂತ ಬದುಕ್ತಾ ಇರೋರು ಸಾಕಷ್ಡು ಜನ ರಂಗಭೂಮಿಗಾಗಿ ತಮ್ಮ ಜೀವನವನ್ನೇ ಸವಿಸಿದಂತವರು ಇದ್ದಾರೆ ಎಂಬುದನ್ನು ತಿಳಿಸುವುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ. ಪರಂಪರಾಗತವಾದ ಧಾರ್ಮಿಕ ಆಚರಣೆಗಳ ಮೂಲಕ ಹುಟ್ಟಿದ ಎಷ್ಟೋ ಜನಪದ ಕಲೆಗಳು,
APA, Harvard, Vancouver, ISO, and other styles
30

Pinto, Joachim. "‘ಮೊಂತಿ ಫೆಸ್ತಾ’ಚ್ಯಾ ಇತಿಹಾಸಾ ಭೊಂವಾರಿಂ..." MJES Journal of Amar Konkani 75, № 2 (2021): 34–65. https://doi.org/10.69852/aloy.mjesjak.75.2/17732/.

Full text
Abstract:
ಮಂಗ್ಳುರಿ ಕೊಂಕ್ಣಿ ಕಥೊಲಿಕಾಂಚ್ಯಾ ಅಸ್ಮಿತಾಯೆಚೊ ಗುರ್ತ್ ತಶೆಂ ಆಚರಣ್ ಕರ್ಚೆಂ `ಮೊಂತಿ ಫೆಸ್ತ್’ ಖಂಯ್ಸರ್ ಸುರ್ವಾತ್ಲೆಂ ಮ್ಹಳ್ಳೆಂ ಪಾಟ್ಲ್ಯಾ ಧಾ-ಬಾರಾ ವರ್ಸಾಂಥಾವ್ನ್ ಮಾದ್ಯಮಾಂನಿ ಚರ್ಚೆಚೊ ವಿಷಯ್ ಜಾಲಾ. ಮಂಗ್ಳುರಾಂತ್ ಆತಾಂ ಆಚರಣ್ ಕರ್ಚ್ಯಾ ಮೊಂತಿ ಫೆಸ್ತಾಕ್ ಆನಿ ಗೊಯಾಂತ್ ಸುರ್ವಾತಿಲ್ಲೆಂ ಮ್ಹಣ್ಚ್ಯಾ `ಮೊಂತಿ ಫೆಸ್ತಾ'ಚ್ಯಾ ಧಾರ್ಮಿಕ್ ರಿತಿ-ರಿವಾಂಜಿ ಮಧೆಂ ತಶೆಂಚ್ ಸಮಾಜಿಕ್ ಸಂಪ್ರದಾಯಾಂ ಮಧೆಂ ಎಕಾಮೆಕಾ ತಾಳ್ ಪಡಾನಾತ್ಲ್ಲೊ ಫರಕ್ ಆಸಾ ಮ್ಹಣ್ತೆಚ್ ಮೊಂತಿ ಫೆಸ್ತಾಚೆಂ ಮೂಳ್ ಕಳಾಜೆ ತರ್ ಆನಿಕ್ಯಿಯ ಗೂಂಡ್ ಸೊಧ್ನಾಂಚಿ ಗರ್ಜ್ ಆಸಾ. ತರೀ, ಯೆದೊಳ್ ಮೆಳ್ಳೆಲ್ಯಾ ದಾಖ್ಲ್ಯಾಂ ಮಾರಿಫಾತ್ ಮೊಂತಿ ಫೆಸ್ತಾಚ್ಯಾ ಮುಳಾವಿಶಿಂ ಎಕಾ ನಿರ್ಧಾರಾಕ್ ಯೆಂವ್ಚೆಂ ಪ್ರೇತನ್ ಹ್ಯಾ ಲೇಕನಾಂತ್ ಕೆಲಾಂ.
APA, Harvard, Vancouver, ISO, and other styles
31

SAILUS, VINOD S. "ಭಾರತಾಂತ್ಲ್ಯಾ ಅಂತರ್-ಧರ್ಮ್ ಸಂವಾದಾಚಿ ಸುರ್ವಿಲಿ ದೇಖ್ ಜಾವ್ನ್ ಫಾ. ಥೊಮಸ್ ಸ್ಟೀಫನ್ಸ್ ಹಾಂಚೆಂ ‘ಕ್ರಿಸ್ತಪುರಾಣ್’". MJES Journal of Amar Konkani 4, № 2 (2025): 48–65. https://doi.org/10.69852/aloy.mjesjak.4.2/18614.

Full text
Abstract:
ಹೆಂ ಲೇಖನ್ ಫಾ| ಥೊಮಸ್ ಸ್ಟೀಫನ್ಸ್ ಹಾಂಚೆಂ ಕ್ರಿಸ್ತಪುರಾಣ್ ಭಾರತಾಂತ್ ಅಂತರ್ಧರ್ಮ್ ಸಂವಾದಾಚಿ ಸುರ್ವಿಲಿ ದೇಖ್ ಜಾವ್ನ್ ಘೆವ್ನ್ ಸಮಕಾಲೀನ್ ಮಿಶೊನರಿ ವಾವ್ರಾಕ್ ತಾಚಿ ಪ್ರಾಸಂಗಿಕತಾ ಕಿತ್ಲಿ ಮ್ಹಳ್ಳ್ಯಾಚೆರ್ ಧ್ಯಾನ್ ಕೇಂದ್ರಿತ್ ಕರ್ತಾ. ಕ್ರಿಸ್ತಿ ಸಂದೇಶ್ ಪ್ರಭಾವಿಕ್ಪಣಾನ್ ಕಳಂವ್ಕ್ ಸ್ಟೀಫನ್ಸ್ ಹಾಣೆಂ ಥಳೀಯ್ ಭಾಸ್, ಸಾಂಸ್ಕೃತಿಕ್ ಅಂಶ್ ಆನಿ ಭಕ್ತಿಚೆ ಸಂಪ್ರದಾಯ್ ಉದ್ದೇಶ್ಪೂರ್ವಕಿಂ ವಾಪಾರ್ಲಲೆ ದಾಕವ್ನ್ ದಿತಾ. ಹ್ಯಾ ಲೇಖನಾಂತ್ ಸಾಂಸ್ಕೃತಿಕ್ ಸಂವೇದನಶೀಲತಾಯ್ (cultural sensitivity), ಭಾಶೀಕ್ ಅನುಕೂಲನ್ (linguistic adaptation/ಭಾಶೆಚೆಂ ರೂಪಾಂತರಣ್) ಆನಿ ಆಧುನಿಕ್ ಮಿಸಾಂವಾಂತ್ ಥಳೀಯ್ ಸಂಪ್ರದಾಯಾಂಕ್ ದೀಜೆ ಜಾಲ್ಲೊ ಗೌರವ್ (ದೇಶಿ ಪರಂಪರೆಕ್ ಮಾನ್)- ಹ್ಯಾ ವಿಷಯಾಂಚೆರ್ ಭೊರ್ ದಿಲಾ. ಹೆ ಅಭ್ಯಾಸ್ ಆಪ್ಣಾಂವ್ಚೆ ಮಾರಿಫ
APA, Harvard, Vancouver, ISO, and other styles
32

ಎಂ., ಎಂ. ಕಲಬುರ್ಗಿ. "ನನ್ನಿಯೊಳಿನತನಯಂ". AKSHARASURYA 03, № 05 (2024): 01–13. https://doi.org/10.5281/zenodo.10937959.

Full text
Abstract:
&ldquo;ಸಂಶೋಧನೆಯೆನ್ನುವುದು ಅಲ್ಪ ವಿರಾಮ, ಅರ್ಧವಿರಾಮಗಳ ಮೂಲಕ ಪೂರ್ಣವಿರಾಮಕ್ಕೆ ಸಾಗುವ ಕ್ರಿಯೆಯಾಗಿದೆ... ಸಂಶೋಧನೆ ಎನ್ನುವುದು ಸುಳ್ಳು ಇತಿಹಾಸದ ಮೂಲಕ ವರ್ತಮಾನದಲ್ಲಿ ಹುಟ್ಟುಹಾಕುತ್ತಲಿರುವ ಶೋಷಣೆಯನ್ನು ಹತ್ತಿಕ್ಕಲು, ನಿಜ ಇತಿಹಾಸವನ್ನು ಶೋಧಿಸಿಕೊಡುವುದು ಸಂಶೋಧಕನ ಕರ್ತವ್ಯವಾಗಿದೆ. ಅಂದರೆ ಸಂಶೋಧನೆಯೆಂಬುದು ಕೇವಲ ಇತಿಹಾಸದ ಶೋಧವಲ್ಲ. ಸುಳ್ಳು ಇತಿಹಾಸವನ್ನು ಮುಂದುಮಾಡಿಕೊಂಡು ವರ್ತಮಾನವನ್ನು ದುರುಪಯೋಗ ಮಾಡಿಕೊಳ್ಳುವವರೊಂದಿಗೆ ನಡೆಸುವ ಹೋರಾಟವೂ ಆಗಿದೆ. ಸತ್ಯವೆಂಬ ಭೂತಕಾಲದ ಬಲದಿಂದ ಅಸತ್ಯವೆಂಬ ವರ್ತಮಾನ ಕಾಲವನ್ನು ಸರಿಪಡಿಸುವುದಾಗಿದೆ...&rdquo; ಎನ್ನುವ ಮೂಲಕ ಸತ್ಯಶೋಧಕರೂ ಸಮಗ್ರ ಸಂಶೋಧಕರೂ ಎಂದು ಪ್ರಸಿದ್ಧರಾದ ಡಾ.ಎಂ.ಎಂ.ಕಲಬುರ್ಗಿ ಅವರು ಈ ನಾಡು ಕಂಡ ಶ್ರೇಷ್ಠ ಚಿಂತಕರು. ಅವರ ಅಧ್ಯಯನ ಮತ್ತು ಕೊಡುಗೆಗಳು ಶಾಸನಶಾಸ್ತ್
APA, Harvard, Vancouver, ISO, and other styles
33

ಚೆಲುವರಾಜು. "ಮಂಟೇಸ್ವಾಮಿ ಮತ್ತು ಅನನ್ಯ ಭಕ್ತಿ ಭಾವದ ದೊಡ್ಡಮ್ಮ ತಾಯಿ". AKSHARASURYA JOURNAL 03, № 04. SPECIAL ISSUE. (2024): 139 to 147. https://doi.org/10.5281/zenodo.10929889.

Full text
Abstract:
ಶಿಕ್ಷಣವಿಲ್ಲದ ನಮ್ಮ ಗ್ರಾಮೀಣ ಜನಸಾಮಾನ್ಯರ ಮಾತೇ ಜನಪದ ಎನ್ನಬಹುದಾದರೂ ಈ ಪದ ಇನ್ನೂ ವಿಶಾಲವಾದ ಅರ್ಥವನ್ನು ಹೊಂದಿದೆ. ಮನುಕುಲದ ಮೊದಲ ಇತಿಹಾಸವೇ ಜನಪದ. ಗ್ರಾಮೀಣ ಜನತೆಯ ಮಾತುಕತೆ, ನಡವಳಿಕೆಗಳು, ಆಚಾರ ವಿಚಾರ, ಪದ್ಧತಿಗಳು, ನಂಬಿಕೆ, ಸಂಪ್ರದಾಯ, ಧಾರ್ಮಿಕತೆ, ತಾತ್ವಿಕ ಸಂಗತಿಗಳು ಮೊದಲಾದವುಗಳನ್ನು ಜನಪದ ಒಳಗೊಂಡು ಜಾನಪದವಾದರೆ, ಈ ಎಲ್ಲ ಸಮಸ್ತವನ್ನು ಒಳಗೊಂಡದ್ದು ಜಾನಪದ. ಜನಪದ ಮಹಾಕಾವ್ಯವು ಮೌಖಿಕ ಪರಂಪರೆಯಾಗಿದ್ದು ಸಾಂಸ್ಕೃತಿಕ ಪುರಾಣವೂ ಆಗಿದೆ. ಒಂದು ವಿಶಿಷ್ಟ ಭೂ ಪ್ರದೇಶ ಅಥವಾ ಬುಡಕಟ್ಟು ಪರಂಪರೆಯಲ್ಲಿ ಸೃಷ್ಟಿಯಾದ ಅನೇಕ ಕಥಾನಕಗಳಲ್ಲಿ ಮಂಟೇಸ್ವಾಮಿ ಜನಪದ ಕಾವ್ಯವು ತುಂಬಾ ಮಹತ್ವದ್ದು. ಜನಪದ ಸಾಹಿತ್ಯ ಪ್ರಕಾರಗಳಲ್ಲಿ ಜನಪದ ಕಾವ್ಯಗಳೂ ಒಂದು. ಜನಪದ ಮಹಾಕಾವ್ಯ ಆಯಾ ಕಾಲಘಟ್ಟ ಮನೋಧರ್ಮಗಳ ಹಿನ್ನೆಲೆಯಲ್ಲಿ ಹುಟ್ಟುತ್ತವೆ. ಜನಪದ
APA, Harvard, Vancouver, ISO, and other styles
34

ವಿಜಯಲಕ್ಷ್ಮೀ, ಸುಬ್ಬರಾವ್, та ಎಂ. ಭೈರಪ್ಪ ಕುಪ್ಪನಹಳ್ಳಿ. "ಗೀತನಾಟಕ ಪ್ರವೇಶ: ಸಂಸ್ಕೃತ ನಾಟಕ ಮತ್ತು ನಾಟಕದಲ್ಲಿ ಸಂಗೀತ". AKSHARASURYA 05, № 01 (2024): 01 to 32. https://doi.org/10.5281/zenodo.13870268.

Full text
Abstract:
ಬಹುಮುಖ ಪ್ರತಿಭೆಯ ಡಾ.ವಿಜಯಾ ಸುಬ್ಬರಾಜ್ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಾಯಿ ಲಕ್ಷ್ಮಿ, ಹಾಗೂ ತಂದೆ ಸೀತಾರಾಂ ಅವರು. ಓದಿದ್ದು ಬೆಂಗಳೂರಿನಲ್ಲೇ. ಕನ್ನಡ ಮತ್ತು ಇಂಗ್ಲಿಷ್&zwnj;ನಲ್ಲಿ ಎಂ.ಎ ಮತ್ತು ಎಲ್.ಎಲ್.ಬಿ. ಪದವೀಧರೆಯಾದವರು. ಫ್ರೆಂಚ್ ಭಾಷೆಯ ಡಿಪ್ಲೊಮ ಪದವಿಯನ್ನೂ ಹಿಂದಿ ಸಾಹಿತ್ಯರತ್ನ ಪದವಿಯನ್ನೂ ಅಧ್ಯಯನ ಮಾಡಿದವರು. ಎಂ.ಇ.ಎಸ್. ಕಾಲೇಜಿನಲ್ಲಿ ಸುದೀರ್ಘ ಕಾಲ ಪ್ರಾಧ್ಯಾಪಕ ಹುದ್ದೆ ನಿರ್ವಹಿಸುತ್ತಲೇ ನಿರಂತರವಾಗಿ ಹಲವು ಮಾಧ್ಯಮಗಳಲ್ಲಿ ತಮ್ಮ ಪ್ರಯೋಗಶೀಲತೆಯನ್ನು ದುಡಿಸಿಕೊಂಡವರು, ಕಥೆ, ಕವಿತೆ, ನಾಟಕ, ಕಾದಂಬರಿ, ಪ್ರವಾಸ ಕಥನ, ಅನುವಾದ, ವೈಚಾರಿಕ ಬರೆಹ, ವಿಮರ್ಶೆ, ಸಂಶೊಧನೆ ಮುಂತಾದ ವಿಭಿನ್ನ ಪ್ರಕಾರಗಳಲ್ಲಿ ಅವರ ಶಕ್ತಿ, ಪ್ರತಿಭೆಗಳು ಬೆಳಗಿವೆ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಓದುವ ಬರೆಯುವ ಹವ್ಯಾಸ ರೂಢಿಸಿಕ
APA, Harvard, Vancouver, ISO, and other styles
35

ಪ್ರಕಾಶ, ಬಿ. "ಡಾ. ಬಿ.ಆರ್. ಅಂಬೇಡ್ಕರ್‌ ಮತ್ತು ಗಾಂಧೀಜಿ: ಜಾತಿ, ವರ್ಣ, ಹಿಂದುತ್ವ ಕುರಿತು ಅಭಿಪ್ರಾಯ-ಭಿನ್ನಾಭಿಪ್ರಾಯಗಳು". AKSHARASURYA JOURNAL 06, № 05 (2025): 141 to 150. https://doi.org/10.5281/zenodo.15504412.

Full text
Abstract:
ವರ್ತಮಾನದಲ್ಲಿ ಗಾಂಧೀಜಿ ಮತ್ತು ಡಾ. ಬಿ. ಆರ್, ಅಂಬೇಡ್ಕರ್&zwnj;&zwnj;ರವರನ್ನು ಅನುಸಂಧಾನ ಮಾಡಿದಾಗ ಇವರಿಬ್ಬರ ನಡುವಿನ ಜಾತಿ, ವರ್ಣ, ಹಿಂದುತ್ವ ಕುರಿತು ಅನೇಕ ಹುಸಿ ಚರ್ಚೆಗಳು, ಪ್ರಚಾರ, ಸೆಮಿನಾರ್&zwnj;ಗಳು, ಪತ್ರಿಕೆಗಳ ಮೂಲಕ ಬಿತ್ತರವಾಗುತ್ತಿವೆ. ದೇಶದ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಈ ಅಭಿಪ್ರಾಯ-ಭಿನ್ನಾಭಿಪ್ರಾಯಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ. ಈ ಲೇಖನದ ಮೂಲಕ ನಿಜವನ್ನು ಅರಿಯುವ ಮುಖೇನ ಹೊಸದೊಂದು ತಾತ್ವಿಕತೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.&nbsp;ಜಾತ್&zwnj;ಪತ್ ತೊಡಕ್ ಮಂಡಲಕ್ಕಾಗಿ ಅಂಬೇಡ್ಕರ್&zwnj; ಸಿದ್ದಪಡಿಸಿದ ಜಾತಿ ವಿಷಯ ಉಪನ್ಯಾಸವನ್ನು ಗಮನಿಸಿ ತಮ್ಮ ಹರಿಜನ ಪತ್ರಿಕೆಯಲ್ಲಿ ಗಾಂಧೀಜಿ ಅದನ್ನು ಉಲ್ಲೇಖಿಸುವ ಮೂಲಕ ಅಂಬೇಡ್ಕರ್&zwnj; ರವರನ್ನು ಇದು ಪ್ರಚಾ
APA, Harvard, Vancouver, ISO, and other styles
36

ಕಾಂತರಾಜ, ಯಾದವ್ ಸಿ. "ಲಂಕೇಶರ ಕಣ್ಣಲ್ಲಿ ಗಾಂಧೀಜಿ". AKSHARASURYA 05, № 02 (2024): 50 to 60. https://doi.org/10.5281/zenodo.14035140.

Full text
Abstract:
ಗಾಂಧೀಜಿಯವರು ಹುಟ್ಟಿ 156 ವರ್ಷಗಳಾಗಿವೆ. ಅವರ ಬದುಕಿನ ಬಗೆಗೆ ಚರ್ಚೆ, ಬರಹ, ಸ್ಮರಣೆ-ಸ್ತುತಿ ನಡೆಯುತ್ತಲೇ ಇವೆ. ಭಾರತದ ಇತರೆ ವ್ಯಕ್ತಿಗಳು ಜಾತಿ, ಧರ್ಮ, ಪಂಥಗಳಿಗೆ ಒಳಗಾದಂತೆ ಮಹಾತ್ಮಗಾಂಧಿಯವರು ಸುಲಭಕ್ಕೆ ಒಳಗಾಗದೆ ಇರುವುದು ಅವರ ಬದುಕಿನ ರೀತಿಯನ್ನು ಬಿಂಬಿಸುವಂತದ್ದು. ದೀರ್ಘಕಾಲ ಭಾರತದ ರಾಜಕೀಯ, ಸಾಮಾಜಿಕ ಬದುಕಿನಲ್ಲಿದ್ದ ಗಾಂಧೀಜಿಯವರು ಇಂದಿಗೂ ʼಅನ್ಯʼರಾಗಿಯೇ ಇರುವಂತಾಗಿದೆ. ಅನ್ಯ ನಂತೆ ಕಂಡರೂ ಕೂಡ ಪ್ರಸ್ತುತದಲ್ಲಿಯೂ ಒಂದಲ್ಲಾ ಒಂದುರೀತಿಯಲ್ಲಿ ಪ್ರಸ್ತುತರಾಗುತ್ತಲೇ ಇದ್ಧಾರೆ. ಗಾಂಧೀಜಿಯವರ ಸತ್ಯಾಗ್ರಹ, ಉಪವಾಸ, ಶ್ರಮದ ಬದುಕು, ಅಸ್ಪೃಶ್ಯತೆಯ ನಿವಾರಣೆ, ಬ್ರಹ್ಮಚರ್ಯ, ಟ್ರಸ್ಟೀಶಿಪ್&zwnj; ಹೀಗೆ ಹಲವು ನೆಲೆಗಳಲ್ಲಿ ಬದುಕಿದ್ಧ ಗಾಂಧೀಜಿಯವರ ಬದುಕು ಪರ-ವಿರೋಧ ಚರ್ಚೆಗಳಿಗೆ ಒಳಗಾಗುತ್ತಲೇ, ಪ್ರಸ್ತುತಕ್ಕೆ ಮುಖಾಮುಖಿಯಾಗುತ್
APA, Harvard, Vancouver, ISO, and other styles
37

ವಿನಯ, ಕುಮಾರ್, та ಗೌಡ ಆರ್. ನಾಗಪ್ಪ. "ಮಾತಿಲ್ಲದ ಸಮುದಾಯಕ್ಕೆ ಮಾತಾದ ಕವಿ: ಡಾ. ಸಿದ್ಧಲಿಂಗಯ್ಯ". AKSHARASURYA 03, № 05 (2024): 52–60. https://doi.org/10.5281/zenodo.10938039.

Full text
Abstract:
ಸಾಮಾಜಿಕ ಶ್ರೇಣೀಕರಣ ಭಾರತದ ಸಮಾಜದ ಬಹುಮುಖ್ಯವಾದ ಲಕ್ಷಣ. ಅಂದರೆ ಅದು ಜಾತಿಯ ಆಧಾರದ ಮೇಲೆ ನಿರ್ಧರಿತವಾಗುತ್ತದೆ. ಈ ಶ್ರೇಣೀಕರಣದ ವ್ಯವಸ್ಥೆಯು ಒಂದಿಷ್ಟು ವರ್ಗಗಳನ್ನು ಅಧೀನವಾಗಿಸಿಕೊಳ್ಳುವ ಮೇಲ್ವರ್ಗದ ಉತ್ಪನ್ನವಾಗಿದೆ. ಈ ವರ್ಗವು ಇಲ್ಲಿನ ಕೆಲವು ಸಮುದಾಯಗಳನ್ನು ಹೀನವೆಂದು ಗುರುತಿಸಿಕೊಂಡು ಶತಮಾನಗಳಿಂದ ಶೋಷಣೆಯನ್ನು ಮಾಡಿಕೊಂಡು ಬಂದಿತ್ತು. ಈ ಕೆಳಜಾತಿಗಳಿಗೆ ಯಾವುದೇ ಹಕ್ಕುಗಳು ಇಲ್ಲದೇ ಮೆಲ್ವರ್ಗದ ಜೀತಕ್ಕಷ್ಟೇ ಸೀಮಿತವಾಗಿಸಲಾಗಿತ್ತು. ಶಿಕ್ಷಣ, ಧಾರ್ಮಿಕತೆ, ಸಾಮಾಜಿಕ ಜೀವನ, ಸಮಾನತೆ ಮೊದಲಾದವುಗಳು ಇವರಿಗೆ ಪರಿಚಯವೇ ಇರಲಿಲ್ಲ. ಇವರನ್ನು ಸಂಪೂರ್ಣವಾಗಿ ಗುಲಾಮರನ್ನಾಗಿ ಮಾಡಲಾಗಿತ್ತು. ಭಾರತಕ್ಕೆ ಬ್ರಿಟಿಷರು ಬಂದ ನಂತರ ಅವರು ಇಲ್ಲಿ ಎಲ್ಲರಿಗೂ ಶಿಕ್ಷಣ ನೀಡಿದ್ದರಿಂದಾಗಿ ದಲಿತರಲ್ಲಿ ಹೊಸ ಆಶಾಕಿರಣ ಮೂಡಿತು. ಮುಂದೆ ಅಂಬೇಡ್ಕರ್ ಅ
APA, Harvard, Vancouver, ISO, and other styles
38

Pinto, Melwyn. "ಸತಾಚೊ ಸೊಧ್ ಆನಿ ಸತಾಚ್ಯಾ ಸ್ಥಾಪನಾ ಮಧೆಂ ಸಂಸೊಧ್". MJES Journal of Amar Konkani 2, № 2 (2023): 4–7. https://doi.org/10.69852/aloy.mjesjak.2.2/17945/.

Full text
Abstract:
ಕನ್ನಡಾಚೊ ವಿಮರ್ಶಕ್, ಸಂಸೊಧ್ಕಾ.ರ್ ಆನಿ ತುಮಕೂರು ವಿಶ್ವವಿದ್ಯಾಲಯಾಚ್ಯಾ ಕನ್ನಡ ವಿಭಾಗಾಚೊ ಪ್ರೊಫೆಸರ್ ಡಾ| ನಿತ್ಯಾನಂದ ಶೆಟ್ಟಿನ್ ಆಯ್ಲೆವಾರ್ ಲಿಕ್ಲ್ಲೆಂ ಪುಸ್ತಕ್ ಮಾರ್ಗಾನ್ವೇಷಣೆ: ಸಾಹಿತ್ಯ ಸಂಶೋಧನೆಯ ರೀತಿ ನೀತಿ. ಹ್ಯಾ ಪುಸ್ತಕಾಂತ್ ಸಂಸೊಧಾವಿಶಿಂ ತಾಣೆಂ ಸಾಂಗ್ಚೊ ಏಕ್ ಪ್ರಮುಕ್ ವಿಚಾರ್ ಅಸೊ ಆಸಾ. ದೋನ್ ರಿತಿಂಚೆ ಸಂಸೊಧ್ ಸಾಧ್ಯ್ ಆಸಾತ್: ಪಯ್ಲೊ ಸತಾಚೆಂ ಸ್ಥಾಪನ್ (ಸತ್ಯ ಸ್ಥಾಪನೆ) ಕರ್ಚೊ ವಯ್ವಾಟಿ ‘ಸಂಸೊಧ್’ ಆನಿ ದುಸ್ರೊ ಸತಾಚೊ ಸೊಧ್ (ಸತ್ಯ ಶೋಧನೆ) ಕರ್ಚೊ ವಸ್ತುನಿಷ್ಟ್ ಸಂಸೊಧ್. ಹ್ಯಾ ದೊನಾಂ ಮಧೆಂ ವಿಶೇಸ್ ಫರಕ್ ಆಸಾ. ಸತಾಚೆಂ ಸ್ಥಾಪನ್ ಕರ್ಚೆಂ ಬೋವ್ ಸಲೀಸ್. ಮ್ಹಜ್ಯೆಲಾಗಿಂ ಥೊಡಿಂ ಪೂರ್ವ್ಪೀ್ಡಿತ್ ಕಲ್ಪನಾಂ ಆಸಾತ್. ಸಮಾಜ್ಯೆ ವಿಶಿಂ, ಹೆರ್ ಜಾತಿ ಧರ್ಮಾ ವಿಶಿಂ, ವಾ ಮ್ಹಾಕಾ ಜಾಯ್ನಾತ್ಲ್ಲ್ಯಾಂ ವಿಶಿಂ ಮ್ಹಜ್ಯೊ ಥೊ
APA, Harvard, Vancouver, ISO, and other styles
39

Bharati sangappa Gaddi. "ಕನ್ನಡದಲ್ಲಿ ಪೌರಾಣಿಕ ನಾಟಕಗಳಲ್ಲಿ ಜೀವನ ಮೌಲ್ಯಗಳು". ShodhKosh: Journal of Visual and Performing Arts 3, № 2 (2022). https://doi.org/10.29121/shodhkosh.v3.i2.2022.5618.

Full text
Abstract:
ಪೌರಾಣಿಕ ನಾಟಕ ಎಂದರೆ ಪುರಾಣಗಳಲ್ಲಿನ ಕಥೆಗಳು, ಪಾತ್ರಗಳು ಮತ್ತು ಘಟನೆಗಳನ್ನು ಆಧರಿಸಿ ರಚಿತವಾದ ನಾಟಕ. ಇದು ಸಾಮಾನ್ಯವಾಗಿ ಧಾರ್ಮಿಕ, ನೈತಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬಿಂಬಿಸುತ್ತದೆ ಮತ್ತು ಪ್ರೇಕ್ಷಕರಿಗೆ ಆದರ್ಶ ಜೀವನ ಮಾರ್ಗವನ್ನು ತೋರಿಸುತ್ತದೆ.
APA, Harvard, Vancouver, ISO, and other styles
40

ಮುಯಿನ್, ಸೈಯದ್. "ಬೆಂಗಳೂರು ಭಾಗದ ಮೊಹರಂ ಆಚರಣೆ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 30 вересня 2023, 95–103. http://dx.doi.org/10.59176/kjksp.v2i2.2305.

Full text
Abstract:
ಬೆಂಗಳೂರು ಕರ್ನಾಟಕದ ಪ್ರಾಚೀನ ಊರುಗಳಲ್ಲಿ ಒಂದಾಗಿದೆ. ಇಲ್ಲಿ ಧಾರ್ಮಿಕ ಸಮನ್ವಯದ ವಾತಾವರಣವನ್ನು ಹೊಂದಿದ್ದAತಹ ನಾಡು. ಇಲ್ಲಿ ಸುಮಾರು ಶತಮಾನಗಳಿಂದ ವಾಸಿಸುತ್ತಿರುವ ಇಸ್ಲಾಂ ಧರ್ಮದ ಅನುಯಾಯಿಗಳ ಆಚರಣೆಗಳು ಸ್ಥಳೀಯ ಸಾಂಸ್ಕೃತಿಕ ಪರಿವೇಷದಲ್ಲಿ ತಳುಕು ಹಾಕಿಕೊಂಡು ಧಾರ್ಮಿಕ ಸಮನ್ವಯತೆಯನ್ನು ಮೆರೆದಿರುವುದಕ್ಕೆ ಇಂದಿಗೂ ಸಾಕ್ಷ್ಯಗಳು ದೊರೆಯುತ್ತವೆ. ಮೊಹರಂ ಆಚರಣೆ ಮತ್ತು ಕರಗ ಉತ್ಸವ ಇದಕ್ಕೆ ಉತ್ತಮ ನಿದರ್ಶನವಾಗಿದೆ. ನಗರ ಜಾನಪದವೆಂದು ಗುರುತಿಸಬಹುದಾದ ಮೊಹರಂ ಆಚರಣೆಯು ಸುಮಾರು ೨೫೦ ವರ್ಷಗಳಿಂದಲೂ ಹಳೆಯ ಬೆಂಗಳೂರಿನ ಭಾಗದಲ್ಲಿ ಸಾಂಗವಾಗಿ ನಡೆದುಕೊಂಡು ಬರುತ್ತಿರುವುದಕ್ಕೆ ಸಾಕಷ್ಟು ಪುರಾವೆಗಳನ್ನು ಒದಗಿಸಬಹುದಾಗಿದೆ. ಇಲ್ಲಿ ನೆಲೆಸಿದ ಸೂಫಿ ಸಂತರ ಆಶ್ರಯದಲ್ಲಿ ಜರುಗುತ್ತಿದ್ದ ಮೊಹರಂ ಆಚರಣೆ, ಉರುಸುಗಳು ದೀರ್ಘ ಇತಿಹಾಸವನ್ನು ಹೊಂದಿದೆ.
APA, Harvard, Vancouver, ISO, and other styles
41

ಮುಯಿನ್, ಡಾ ಸೈಯದ್. "ಆಯ್ದ ಪುರಾಣ ಕಾವ್ಯಗಳಲ್ಲಿ ಪುರುಷ ಭಾವಗಳ ಒಳನೋಟ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 30 березня 2022, 48–60. http://dx.doi.org/10.59176/kjksp.v1i1.2178.

Full text
Abstract:
ಈ ಸಂಶೋಧನ ನಿಬಂಧಕ್ಕೆ ಜಗತ್ತಿನ ಪ್ರಸಿದ್ಧ ಪುರಾಣ ಮತ್ತು ಧಾರ್ಮಿಕ ಗ್ರಂಥಗಳಲ್ಲಿ ಬರುವ ಪುರುಷ ಶೋಕದ ಸಂದರ್ಭಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಲಿಂಗ ಭೇದವಿರುವುದಕ್ಕೆ ಮುಖ್ಯ ಕಾರಣ ಸಾಮಾಜಿಕ-ಸಾಂಸ್ಕೃತಿಕ ವ್ಯವಸ್ಥೆಯೊಂದಿಗೆ ದೇಹ ರಚನೆ, ನರಮಂಡಲ ವಿನ್ಯಾಸವೂ ಆಗಿದೆ ಎಂಬುದನ್ನು ಕುರಿತು ಇಲ್ಲಿ ಚರ್ಚೆ ಮಾಡಲಾಗಿದೆ. ಪುರಾಣಗಳಲ್ಲಿ ಬರುವ ಪುರುಷ ಶೋಕ ಪ್ರಧಾನ ಪ್ರಸಂಗಗಳನ್ನು ತೌಲನಿಕ ವಿಧಾನ ಮತ್ತು ವಿವರಣಾತ್ಮಕ ವಿಧಾನದ ಮೂಲಕ ಅಧ್ಯಯನ ಮಾಡಲಾಗಿದೆ.
APA, Harvard, Vancouver, ISO, and other styles
42

ಎನ್., ಚಂದ್ರಶೇಖರ್. "ಛಲವಾದಿ ಸಮುದಾಯದ ಪಾರಂಪರಿಕ ಹಿನ್ನೋಟ ಹಾಗೂ ವಾಸ್ತವ ಸ್ಥಿತಿ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 30 вересня 2022, 1–10. http://dx.doi.org/10.59176/kjksp.v1i2.2210.

Full text
Abstract:
ಪ್ರಜಾಪ್ರಭುತ್ವ ಪರಿಕಲ್ಪನೆಯನ್ನು ಒಳಗೊಂಡ ಭಾರತ ಜಾತಿಗಳಿಂದ ಕೂಡಿದ ಜಾತ್ಯತೀತ ರಾಷ್ಟç. ಇಲ್ಲಿ ಜಾತ್ಯತೀತ ಎಂಬುದು ವಾಸ್ತವವಾಗಿ ಯಾವುದೇ ಒಂದು ಧರ್ಮ, ವರ್ಣ ಮತ್ತು ವರ್ಗದ ಕಟ್ಟುಪಾಡುಗಳಿಗೆ ಅಧೀನವಾಗದ ಸಾರ್ವತ್ರಿಕ ದೃಷ್ಟಿಕೋನವನ್ನು ಹೊಂದಿದ ಸ್ಥಿತಿಯಾಗಿದೆ. ಆದರೆ ಅದಕ್ಕೆ ವ್ಯತಿರಿಕ್ತವೆಂಬAತೆ ಈ ನೆಲದಲ್ಲಿ ನಾವು ಕಂಡುAಡ ವೈವಿಧ್ಯಮಯ ಅನುಭವಗಳು ಚಾರಿತ್ರಿಕ, ಪೌರಾಣಿಕ, ಆಧ್ಯಾತ್ಮಿಕ, ಧಾರ್ಮಿಕ ಸಾಮಾಜಿಕ, ಹಾಗೂ ರಾಜಕೀಯ ಹಿನ್ನೆಲೆಯಿಂದ ಬಹಳ ಭಿನ್ನವಾದದ್ದು ಮತ್ತು ಆಚರಣೆಯ ರೂಪದಲ್ಲಿ ಅಷ್ಟೇ ಜಟಿಲವಾದದ್ದೂ ಆಗಿದೆ ಎಂಬುದರಲ್ಲಿ ಅತಿಶಯೋಕ್ತಿಯಿಲ್ಲ. ಆ ಕಾರಣದಿಂದಲೇ ಇಂದಿಗೂ ಶ್ರೇಷ್ಠತೆಯ ಕುಲಮದದಿಂದ ಹೊರಬರಲಾಗದ ಕೆಲವಾರು ಜಾತಿಗಳು ಬಹುಸಂಖ್ಯಾತರಾದ ಹಲವಾರು ಜಾತಿಗಳ ವಿರುದ್ಧ ತಮ್ಮ ಅಸ್ತಿತ್ವಕ್ಕಾಗಿ ಹಸಿದ ಹೆಬ್ಬಾವುಗಳಂತೆ ಬುಸುಗುಡು
APA, Harvard, Vancouver, ISO, and other styles
43

Sobati, Chandrappa. "ಪ್ರಚಲಿತ ಡೊಳ್ಳಿನ ಹಾಡುಗಳಲ್ಲಿ ಲಿಂಗತಾರತಮ್ಯತೆಯ ವಾಗ್ವಾದಗಳು". ShodhKosh: Journal of Visual and Performing Arts 5, № 4 (2024). https://doi.org/10.29121/shodhkosh.v5.i4.2024.4255.

Full text
Abstract:
ಡೊಳ್ಳುಕಲೆ ಪುರುಷರ ಕಲೆ. ಪುರುಷರು ಮಾತ್ರ ಡೊಳ್ಳು ವಾದ್ಯವನ್ನು ಬಾರಿಸಬೇಕು. ಅಷ್ಟೇ ಏಕೆ? ಪುರುಷರು ಮಾತ್ರ ಈ ವಾದ್ಯವನ್ನು ಮುಟ್ಟಬೇಕು. ಈ ಕಲಾ ಪ್ರದರ್ಶನದಲ್ಲಿ ಭಾಗಿಯಾಗಬೇಕು ಎನ್ನುವ ಪಾರಂಪರಿಕ ನಂಬಿಕೆಗಳು ಮತ್ತು ನಿಷೇಧಗಳು ಒಂದು ಕಾಲದಲ್ಲಿ ಇಲ್ಲಿ ಜೀವಂತವಾಗಿದ್ದವು. ಇವತ್ತು ಮೇಲೆ ಉಲ್ಲೇಖಿತ ಯಾವುದೇ ಪರಿಕಲ್ಪನೆಗಳು ಮತ್ತು ನಿಷೇಧಗಳು ಡೊಳ್ಳುಕಲೆಗೆ ಅನ್ವಯವಾಗುವುದಿಲ್ಲ. ಇದು ಆರೋಗ್ಯಕರ ಬೆಳವಣಿಗೆ. ಏಕೆಂದರೆ, ಈ ಕಲಾಕ್ಷೇತ್ರಕ್ಕೆ ಮಹಿಳೆಯರು ಆಗಮಿಸಿ ಪ್ರದರ್ಶನದ ವೈಶಿಷ್ಟö್ಯತೆಯಲ್ಲಿ ಪುರುಷರಷ್ಟೇ ಪ್ರಾವಿಣ್ಯತೆ ಹಾಗೂ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಪಾರಂಪರಿಕ ಪ್ರದರ್ಶನದ ಸಂದರ್ಭಗಳಲ್ಲಿ ಅಲ್ಲದೆ ಇತರೆ ಸಂದರ್ಭಗಳಲ್ಲೂ ಈ ಕಲೆ ಪ್ರದರ್ಶನವಾಗುತ್ತಿದೆ. ಅದು ರಾಜಕೀಯ ಪ್ರಚಾರದ ಸಂದರ್ಭ, ಮನರಂಜನೆಯ ಸಂದರ್ಭ ಹಾಗೂ ಹಣ ಗಳಿ
APA, Harvard, Vancouver, ISO, and other styles
44

ವಸಂತ, ಡಾ ಗೀತಾ. "ಕರ್ನಾಟಕದ ಅವಧೂತ ಪರಂಪರೆ: ಸಾಂಸ್ಕೃತಿಕ ಶೋಧದ ನೆಲಮೂಲ ನೆಲೆ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 29 вересня 2022, 11–22. http://dx.doi.org/10.59176/kjksp.v1i2.2211.

Full text
Abstract:
ಸಂಸ್ಕೃತಿ ಅಧ್ಯಯನದ ಸಂದರ್ಭದಲ್ಲಿ ಬಹು ಜನರು ಅಭ್ಯಸಿಸಿದ ಮುಖ್ಯಧಾರೆಯನ್ನೇ ಮತ್ತೆ ಮತ್ತೆ ಹಿಂಬಾಲಿಸಿ ಸಿದ್ಧಮಾದರಿಯ ಫಲಿತಗಳಿಗೆ ಬಂದು ತಲುಪುವುದು ಒಂದು ಬಗೆಯಾದರೆ, ಯಾರೂ ತುಳಿಯದ ದಾರಿಯಲ್ಲಿ ನಡೆದು ಕಿರುಧಾರೆಗಳನ್ನು ಗುರುತಿಸುತ್ತ ಹೊಸ ದರ್ಶನವನ್ನೇ ಕಟ್ಟಿಕೊಡುತ್ತ ನಡೆಯುವುದು ಇನ್ನೊಂದು ಬಗೆ. ಸಂಸ್ಕೃತಿಯ ಏಕರೂಪಿ ಮಾದರಿಯಿಂದ ಹೊರಬಂದು ನೆಲಮೂಲ ಸಂಸ್ಕೃತಿಯ ವೈವಿಧ್ಯತೆಯನ್ನು ಶೋಧಿಸುವುದು ಕನ್ನಡ ಸಂಸ್ಕೃತಿ ಶೋಧದ ಮುಂದಿರುವ ಸವಾಲು. ಸಂಸ್ಕೃತಿಯು ಬದುಕಿನ ಹೊರವಲಯವಾದ ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ, ಮನುಷ್ಯನ ಒಳವಲಯದಿಂದ ಹೊರಟ ಭಾಷೆ, ಕಲೆ, ಸಾಹಿತ್ಯ, ಮೀಮಾಂಸೆ ಮುಂತಾದವುಗಳಿಗೂ ಸಂಬAಧಿಸಿದುದಾಗಿದೆ. ಅಷ್ಟೇ ಅಲ್ಲ ಮನುಷ್ಯನ ಪ್ರಜ್ಞೆಯನ್ನೂ ಪ್ರಭಾವಿಸಿ ಆಂತರ್ಯವನ್ನೂ ಅದು ಪ್ರತಿನಿಧಿಸುತ್
APA, Harvard, Vancouver, ISO, and other styles
45

ಹಿಮಾನಂದ್, ರೇಖಾ. "ವಚನಯುಗ - ಲಿಂಗತ್ವ ಪರಿಕಲ್ಪನೆ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 1 березня 2024, 1–8. http://dx.doi.org/10.59176/kjksp.v3i1.2331.

Full text
Abstract:
ಸ್ತ್ರೀ-ಪುರುಷನ ಅಸ್ತಿತ್ವವು ಲಿಂಗ ವ್ಯವಸ್ಥೆಯಿಂದ ನಿರ್ಧರಿಸಲ್ಪಡುತ್ತದೆ. ಲಿಂಗ, ಲಿಂಗತ್ವ, ಲೈಂಗಿಕತೆ ದೃಷ್ಟಿಯಿಂದ ಪುರುಷನಿಗಿಂತ ಸ್ತ್ರೀಯ ಸ್ಥಾನಮಾನಗಳು ನಗಣ್ಯವೇ ಆಗಿವೆ. ಲಿಂಗ ಎನ್ನುವುದು ಸ್ತ್ರೀ ಪುರುಷರ ನಡುವಿನ ಜೈವಿಕ ವ್ಯತ್ಯಾಸಗಳನ್ನು ತಿಳಿಸುವಂತಹ ಪರಿಕಲ್ಪನೆಯಾದರೆ, ಲಿಂಗತ್ವ ಎನ್ನುವುದು ಸಂಸ್ಕೃತಿಯಿಂದ ನಿರ್ಮಿತವಾದ ಒಂದು ಸಾಮಾಜಿಕ ಸೃಷ್ಟಿ. ಬಿನ್ನ ಜೈವಿಕತೆಯ ಕಾರಣದಿಂದಾಗಿ ಸ್ತ್ರೀ ಪುರುಷರು ಮಾಡಬಹುದಾದ ಅಥವಾ ಮಾಡಬಾರದ ಕಾರ್ಯಗಳಲ್ಲಿ ವ್ಯತ್ಯಾಸಗಳಿರಬೇಕೆನ್ನುವುದು ಸಂಸ್ಕೃತಿ ನಿರ್ಮಾಣ ಮಾಡಿ ಪೋಷಿಸಿಕೊಂಡು ಬಂದಿರುವ ಲಿಂಗತ್ವದ ಭಿನ್ನತೆಗಳೆ ಆಗಿವೆ. ಸಂಸ್ಕೃತಿ ನಿರ್ಮಿತಿಯ ಲಿಂಗಾಧಾರಿತ ವ್ಯವಸ್ಥೆಯಲ್ಲಿ ಮಹಿಳೆ ಹೊಂದಿರುವ ಜೈವಿಕ ವೈಶಿಷ್ಟ್ಯತೆಗಳಾದ ಗರ್ಭದಾರಣೆ, ತಾಯ್ತನ, ಮಕ್ಕಳ ಲಾಲನೆ-ಪಾಲನೆಯ ಜವಾಬ್ದಾರಿಗಳನ್ನು ನಿ
APA, Harvard, Vancouver, ISO, and other styles
46

ಕೆ., ರುಜುವಾನ್. "ಚಿತ್ರದುರ್ಗ ಪರಿಸರದ ಚಕ್ಕೆ ಭಜನೆ: ವೈಶಿಷ್ಟ್ಯತೆಗಳು". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 1 березня 2024, 67–73. http://dx.doi.org/10.59176/kjksp.v3i1.2339.

Full text
Abstract:
ಜಾನಪದ ಎನ್ನುವುದು ಕೇವಲ ಹಾಡಲ್ಲ. ಅದರಲ್ಲಿ ದೈವದ ಮೇಲಿನ ಭಕ್ತಿ-ಧ್ಯಾನ, ಚಿಂತನೆಯಷ್ಟೆ ಇರುವುದಿಲ್ಲ. ಅದರೊಡಲಲ್ಲಿ ಧಾರ್ಮಿಕ ಆಚರಣೆ, ಸಾಮಾಜಿಕ ಪ್ರಜ್ಞೆ, ಕಲೆ, ನಡೆ-ನುಡಿ, ಮೊದಲಾದವುಗಳನ್ನೆಲ್ಲಾ ಒಳಗೊಂಡಿರುತ್ತದೆ. ಜನಪದರ ಒಡಲಾಳದಲ್ಲಿ ಹುಟ್ಟಿಕೊಂಡAತಹ ಕಲೆಗಳು, ನಾಗರೀಕತೆಗಳ ಯುಗಮಾನಗಳಷ್ಟೇ ಪುರಾತನವಾದವುಗಳು. ಮನುಷ್ಯನಿಗೆ ಗಾಳಿ, ಬೆಳಕು, ನೀರು, ಆಹಾರಗಳಷ್ಟೇ ಕಲೆಗಳ ಅವಶ್ಯಕತೆ ಹಾಗೂ ಅನಿವಾರ್ಯತೆ ಕಂಡುಬAದಿರಬೇಕು. ಅಂತೆಯೇ ಅನಾದಿಕಾಲದಿಂದಲೂ ಇಂದಿನವರೆಗೂ ಜನಪದಕಲೆಗಳು ಜನಪದರ ಉಸಿರಾಗಿ ಜೀವಂತವಾಗಿ ಉಳಿದುಬಂದಿದೆ. ಈ ದೃಷ್ಟಿಯಿಂದ ಮಾನವನ ಚರಿತ್ರೆಯೆಂದರೆ ಒಂದರ್ಥದಲ್ಲಿ ಅವನು ಉಳಿಸಿ ಬೆಳೆಸಿಕೊಂಡು ಬಂದಿರುವ ಮೌಲಿಕವಾದ ಈ ನಾಡಿನ ಸಾಹಿತ್ಯ, ಸಂಸ್ಕೃತಿ ಕಲೆಗಳ ಇತಿಹಾಸವೇ ಆಗಿದೆ ಎನ್ನಬೇಕು. ಜನಪದ ಕಲೆಗಳು ಒಂದು ನಾಡಿನ ಇಲ್ಲವೆ ಒಂದ
APA, Harvard, Vancouver, ISO, and other styles
47

ಭಟ್, ಮೈತ್ರಿ. "ಬಸವಣ್ಣನವರ ವಚನಗಳೂ... ಮನೋವಿಜ್ಞಾನವೂ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 1 березня 2024, 17–21. http://dx.doi.org/10.59176/kjksp.v3i1.2333.

Full text
Abstract:
ಕನ್ನಡದ ಅನನ್ಯ ಸಾಹಿತ್ಯ ಪ್ರಕಾರವಾದ ವಚನವು ಅಂತರಂಗದ ಉತ್ಕಟ ಅವಸ್ಥೆಯಿಂದ ಹೊರಬಂದ ಶಬ್ದರೂಪವಾಗಿದ್ದು, ಅತ್ತ ಪದ್ಯವೂ ಅಲ್ಲದ ಇತ್ತ ಗದ್ಯವೂ ಅಲ್ಲದ ಈ ವಿಶಿಷ್ಟ ಲಯಬದ್ಧ ಗೀತೆಯು ಗಾತ್ರದಲ್ಲಿ ಕಿರಿದಾದರೂ ಜೀವ ವಿಕಾಸದ ಹಾದಿಯಲ್ಲಿ ಹಿರಿದಾದುದೇ ಆಗಿದೆ. ಇಂತಹ ವಚನಗಳು ಅಂತರಂಗದ ನಿವೇದನೆಗಳಾಗಿ, ಆತ್ಮಗತ ಸಂಭಾಷಣೆಗಳಾಗಿ ಹೊರಹೊಮ್ಮಿವೆ. ವಿವಿಧ ಕಾಯಕಗಳಲ್ಲಿ ತೊಡಗಿದ್ದ ನಾನಾ ಜಾತಿಮತಗಳ ಜನರು ತಮ್ಮ ಅಂತಃಪ್ರೇರಣೆಯ ತುಡಿತಕ್ಕೆ ಸ್ಪಂದಿಸಿ, ತಮ್ಮ ಮನದಾಳದ ಚಿಂತನೆಗಳನ್ನು ಜನಮಾನಸಕ್ಕೆ ತಲುಪಿಸಲು ಆಡುನುಡಿಯನ್ನು ಬಳಸಿಕೊಂಡರು. ಶುದ್ಧ ದೇಸೀ ಮನೋಭೂಮಿಕೆಯಲ್ಲಿ ಹುಟ್ಟಿದ ಇವು ಗದ್ಯದ ನಿರರ್ಗಳತೆಯಿಲ್ಲದಿದ್ದರೂ ಸರಳತೆಯಿಂದ, ಪದ್ಯದ ಕ್ರಮಬದ್ಧ ಛಂದೋಗತಿ ಇಲ್ಲದಿದ್ದರೂ ಅದರ ಲಯದಿಂದ ಕೂಡಿ ಸ್ವಚ್ಛಂದ ಲಯದಲ್ಲಿ ಮಿಂದೇಳುತ್ತವೆ. ಬಿಡಿಯಾಗಿ ನೋಡಿದರ
APA, Harvard, Vancouver, ISO, and other styles
We offer discounts on all premium plans for authors whose works are included in thematic literature selections. Contact us to get a unique promo code!