To see the other types of publications on this topic, follow the link: ಬದಲಾವಣೆ.

Journal articles on the topic 'ಬದಲಾವಣೆ'

Create a spot-on reference in APA, MLA, Chicago, Harvard, and other styles

Select a source type:

Consult the top 15 journal articles for your research on the topic 'ಬದಲಾವಣೆ.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Browse journal articles on a wide variety of disciplines and organise your bibliography correctly.

1

ಲಕ್ಷ್ಮೀ, ಎಲ್. ಪೂಜಾರಿ. "ವಚನ ಚಳವಳಿ ಮತ್ತು ಮಹಿಳೆ". AKSHARASURYA JOURNAL 06, № 05 (2025): 54 to 59. https://doi.org/10.5281/zenodo.15504231.

Full text
Abstract:
ವಚನ ಸಾಹಿತ್ಯ ಹನ್ನೆರಡನೇ ಶತಮಾನದಲ್ಲಿ ಹುಟ್ಟಿಕೊಂಡಂತಹ ವಿಶಿಷ್ಟ ಸಾಹಿತ್ಯದ ಪ್ರಕಾರ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವುದನ್ನು ಕಾಣುತ್ತೇವೆ. ಈ ಯುಗವನ್ನು ಸಾಮಾಜಿಕ ಪರಿವರ್ತನೆ ಯುಗ ಎಂದು ಕರೆಯುವಷ್ಟರಮಟ್ಟಿಗೆ ಬದಲಾವಣೆ ಆಗಿರುವುದನ್ನು ಕಾಣುತ್ತೇವೆ. ವಚನ ಎಂದರೆ ಮಾತು, ಉಕ್ತಿ ಎಂಬ ಅರ್ಥವನ್ನು ಹೊಂದಿದ್ದು ಗದ್ಯ ಪದ್ಯಗಳ ರೂಪದಲ್ಲಿ ಕಂಡುಬಂದಿದೆ ಮಹಿಳೆಯರ ಸಮಾನತೆಗೆ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ.ಶತಮಾನಗಳಿಂದ ಅಸ್ಪೃಳಾಗಿದ್ಧ ಅದೃಶ್ಯಳಾಗಿದ್ಧ ಹೆಣ್ಣನ್ನು ವಚನಕಾರರು ಮಾನವೀಯ ದೃಷ್ಟಿಯಿಂದ ಕಂಡಿದ್ದಾರೆ. ಪುರುಷನ ಹಾಗೆ ಮಹಿಳೆಗೆ ಸಮಾನವಾದ ಸ್ಥಾನವನ್ನು ನೀಡುವ ಮೂಲಕ 12ನೇ ಶತಮಾನದಲ್ಲಿ ವಚನಕಾರರು ಮಾಡಿದ ಒಂದು ಬೃಹತ್ ಬದಲಾವಣೆ ಇಡೀ ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿದೆ. ಸ್ತ್ರೀಯರ ಸಮಾನತೆಗಾಗಿ ಮಾಡಿದ ಮೊದಲ ಚಳುವ
APA, Harvard, Vancouver, ISO, and other styles
2

ಪ್ರಸನ್ನ. "ಕೊಡಗು ಜಿಲ್ಲೆಯಲ್ಲಿ ಎರವ ಬುಡಕಟ್ಟು ಜನರ ಸ್ಥಿತಿಗತಿ". AKSHARASURYA 03, № 05 (2024): 128–31. https://doi.org/10.5281/zenodo.10938139.

Full text
Abstract:
ಎರವ ಬುಡಕಟ್ಟು ಜನರು ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ ಅವರ ಸಂಖ್ಯೆ ಹೆಚ್ಚಾಗಿ ಇದ್ದು ಪೊನ್ನಂಪೇಟೆ ಬಳಿ ತಿತಿಮತಿ ಗ್ರಾಮಕ್ಕೆ ಹೊಂದಿಕೊಂಡಂತೆ ಎರವರ ಸಾಕಷ್ಟು ಹಾಡಿಗಳು ಇರುತ್ತವೆ. ಈ ಎಲ್ಲಾ ಹಾಡಿಗಳು ತಮ್ಮದೇ ಆದ ಮೂಲ ಸ್ವರೂಪವನ್ನು ಉಳಿಸಿಕೊಂಡು ಸಾಗುತ್ತಿರುವುದು ಕಂಡುಬರುತ್ತದೆ. ಆದರೆ ಇಂದಿಗೆ ಈ ಹಾಡಿಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಳ್ಳುವ ಆತಂಕದಲ್ಲಿವೆ. ಯಾವುದೇ ಬುಡಕಟ್ಟು ಜನರು ಅರಣ್ಯದಲ್ಲಿ ಇದ್ದಷ್ಟು ದಿನ ಅವರುಗಳು ಕಾಡನ್ನು ದೇವರಂತೆ ಪೂಜಿಸುತ್ತಾ ಈ ಮುಲಕ ಕಾಡುಗಳನ್ನು ರಕ್ಷಿಸುವುದರೊಂದಿಗೆ ಕಾಡನ್ನು ಬೆಳೆಸುತ್ತಾರೆ. ಅರಣ್ಯದಲ್ಲಿ ಬುಡಕಟ್ಟು ಜನರು ವಾಸವಿದ್ದಾರೆ ಎಂಬ ಭಯದಿಂದಲೇ ಕಾಡುಗಳ್ಳರ ಹಾವಳಿ ತಪ್ಪುತ್ತದೆ ಮತ್ತು ಅರಣ್ಯದೊಳಗಿರುವ ಔಷಧಿಯ ಗುಣದ ಸ
APA, Harvard, Vancouver, ISO, and other styles
3

ಶುಭಾ, ಮರವಂತೆ. "ಮಹಿಳಾ ಯಕ್ಷಗಾನದ ಸವಾಲುಗಳು ಮತ್ತು ಸಾಧ್ಯತೆ". Aksharasurya Journal 05, № 05 (2025): 48 to 54. https://doi.org/10.5281/zenodo.14619490.

Full text
Abstract:
ಮಹಿಳೆಯರಿಗೆ ಹೊಂದುವ ಕಥಾ ಸಂವಿಧಾನ, ನವೀನ ತಂತ್ರ ಪರಿಕರಗಳನ್ನು ನಾವೇ ಕಂಡುಕೊಳ್ಳುದರ ಮೂಲಕ ಯಕ್ಷರಂಗದಲ್ಲೊಂದು ಮಹಿಳಾ ಲೋಕವನ್ನು ಸೃಷ್ಟಿಸುವ ಸವಾಲು ನಮ್ಮ ಮುಂದಿದೆ. ನಮ್ಮ ನಡೆಯಲ್ಲಿ ಅನನ್ಯತೆಯ ದಾರಿ ಗುರುತುಗಳು ಬೇಕಾಗಿವೆ. ಪ್ರಯೋಗಶೀಲ ಮನಸ್ಸು ಬೆಳೆದರೆ ಯಕ್ಷಗಾನದ ಏಕತಾನತೆಯನ್ನು ಮಹಿಳೆಯರು ಮುರಿದು ಮರು ಕಟ್ಟಲು ಸಾಧ್ಯವಿದೆ. ಮೊದಲು ಮಹಿಳೆಯರು ಯಕ್ಷಗಾನ ನೋಡುವುದೆ ಅಪರಾಧವೆಂದು ಭಾವಿಸುವ ಕಾಲಘಟ್ಟದಿಂದ ಬಹುದೂರ ಬಂದಿದ್ದೇವೆ. ಗಂಡಸೊಬ್ಬನೆ ಕಲಾವಿದನಾಗಿ ಅವನಷ್ಟಕ್ಕೆ ಇದ್ದು ಕುಟುಂಬದಿಂದ ದೂರ ಉಳಿದು ಬದುಕುತ್ತಿದ್ದ ಕಾಲ ಈಗ ಬದಲಾಗಿದೆ. ಹೆಣ್ಣು ಮಕ್ಕಳಿಂದಾಗಿ ಮನೆ ಮನೆಯು ಕಲಾ ಕುಟೀರವಾಗಿದೆ. ಮಹಿಳೆ ತಾನೂ ಕಲಾವಿದೆಯಾಗಿ ಮಕ್ಕಳನ್ನೂ ಆ ದೆಸೆಯಲ್ಲಿ ಪ್ರೋತ್ಸಾಹಿಸುತ್ತಾ ಕುಟುಂಬವನ್ನೆ ಆ ಕಡೆಗೆ ಚಲಿಸುವಂತೆ ಮಾಡುತ್ತಿರುವುದು ವಿಶ್
APA, Harvard, Vancouver, ISO, and other styles
4

GEETHA, A. C. "`ಅಮ್ಮ'ನವರ ಆರಾಧನೆಯಲ್ಲಿನ ಸಾಂಸ್ಕೃತಿಕ ಅನನ್ಯತೆ". AKSHARASURYA JOURNAL 03, № 03 (2024): 63 to 70. https://doi.org/10.5281/zenodo.10775087.

Full text
Abstract:
ಜನಪದರಲ್ಲಿ ಆರಾಧನೆ ಎಂಬುದು ಬದುಕಿನ ಅವಿಭಾಜ್ಯ ಅಂಗವಾಗಿದೆ. ಆಚಾರ-ವಿಚಾರ, ನಂಬಿಕೆಗಳಿಂದ ಕೂಡಿರುವ ಆರಾಧನೆಯು ಇಷ್ಟಾರ್ಥ ಸಿದ್ಧಿಯ ನೆಲೆಯಲ್ಲಿ ಮಹತ್ವವನ್ನು ಪಡೆಯುತ್ತದೆ. ಭಯದಿಂದ ಮುಕ್ತವಾಗಲು ಕಷ್ಟ ಪರಿಹಾರವಾಗಲು ದೇವರುಗಳ ಮೊರೆ ಹೋಗುವುದು ಜನಪದರ ಬಹುಮುಖ್ಯ ಚಟುವಟಿಕೆ. ತಮಗೆ ಎದುರಾದ ಕಷ್ಟಗಳನ್ನು ರೋಗರುಜಿನಗಳನ್ನು ನಂಬಿಕೆ, ವಿಶ್ವಾಸಕ್ಕೆ ಪಾತ್ರರಾಗಿರುವ ಪ್ರೀತಿಯ ವ್ಯಕ್ತಿಗಳಲ್ಲಿ ಹೇಳಿಕೊಂಡು ಮನೋಭಾರವನ್ನು ಕಳೆದುಕೊಳ್ಳಲು ಸಾಧ್ಯವಾಗುವುದಿಲ್ಲ. ತಮ್ಮತಮ್ಮಲ್ಲೇ ಎಷ್ಟೇ ಕಷ್ಟಗಳನ್ನು ತೋಡಿಕೊಂಡರೂ ಸಮಾಧಾನ ಅನ್ನಿಸುವುದಿಲ್ಲ. ಅಂದರೆ ಮನುಷ್ಯರ ಶಕ್ತಿಗೆ ಒಂದು ಮಿತಿ ಎನ್ನುವುದು ಇದೆ. ಎಲ್ಲವೂ ಮನುಷ್ಯರ ಕೈಯಿಂದ ಅಸಾಧ್ಯ ಎಂಬ ವಿಚಾರವನ್ನು ಜನಪದರು ನಂಬಿದ್ದಾರೆ. ಮಾನವನ ಶಕ್ತಿಗಿಂತ ಮಿಗಿಲಾದ ಶಕ್ತಿ ಇದೆ ಎಂದು ನಂಬುವ ಜನಪದರು, ಆ ಶ
APA, Harvard, Vancouver, ISO, and other styles
5

ಮಂಜುಳಾಕ್ಷಿ, ಎಲ್. "ಮಹಿಳೆ ಸಮಾನತೆ ಮತ್ತು ಡಾ. ಬಿ. ಆರ್. ಅಂಬೇಡ್ಕರ್‌". AKSHARASURYA JOURNAL 06, № 05 (2025): 72 to 83. https://doi.org/10.5281/zenodo.15504265.

Full text
Abstract:
ಕಾಲಾಂತರದಿಂದಲೂ ಮಹಿಳೆ ಸಮಾಜದಲ್ಲಿ ತನ್ನ ಅಸ್ವತ್ವಕ್ಕಾಗಿ ಒಂದಲ್ಲ ಒಂದು ರೀತಿಯಲ್ಲಿ ಧ್ವನಿ ಎತ್ತುತ್ತಲೆ ಬಂದಿದ್ದಾಳೆ. ಇದನ್ನು ನಾವು ಜನಪದ ಹೆಣ್ಣು ಅದರ ಪ್ರಕಾರವಾದ ತ್ರಿಪದಿಯಲ್ಲಿ ತನ್ನ ನೋವನ್ನು ಮತ್ತು ಸಮಾಜದ ಕಟ್ಟುಪಾಡು ಕಂದಾಚಾರಗಳನ್ನು ಮೌನವಾಗಿಯೇ ವಿರೋಧಿಸುತ್ತಾ ಬಂದಿದ್ದಾಳೆ. ಸಾಹಿತ್ಯದಲ್ಲಿ ಅವಳು ತಾಯಿಯಾಗಿ ಅಕ್ಕ-ತಂಗಿ, ನಾದಿನಿ, ಹೆಂಡತಿ, ಅತ್ತೆ ಹೀಗೆ ಅನೇಕ ಪಾತ್ರಗಳಲ್ಲಿ ಪುರುಷನೊಂದಿಗೆ ಜೀವಿಸುತ್ತಾ ಮಾನ್ಯತೆ ಪಡೆದಿದ್ದು ಅವನಿಂದ ದೇವತೆಯಾಗಿ, ಪ್ರಿಯೆಯಾಗಿ, ಕುಟುಂಬದ ಕಣ್ಣಾಗಿ, ಅವನ ಅರ್ಧಾಂಗಿಯಾಗಿದ್ದರೂ ಕೂಡ ಸಮಾಜದಲ್ಲಿ ಅವಳಿಗೆ ಅಂದಲ್ಲ ಇಂದಿಗೂ ಎರಡನೇ ದರ್ಜೆಯ ಸ್ಥಾನವಿದೆ ಅವಳನ್ನು ಪುರುಷ ಸಮಾಜ ತನ್ನ ಬಂಧಿಯಲ್ಲೇ ಬಂಧಿಸಿ ಅವಳ ಮೇಲೆ ಕಟ್ಟುಪಾಡು, ಕಂದಾಚಾರ ಪದ್ಧತಿಗಳನ್ನು ಹೇರುತ್ತಾ ಸಮಾಜದಲ್ಲಿ ಅವಳಿ ಯಾವುದೇ ಸ
APA, Harvard, Vancouver, ISO, and other styles
6

ಸಂತೋಷ್, ಕುಮಾರ್ ಆರ್.ಎಂ. "ಜನಮಾಧ್ಯಮವಾಗಿ ಸಾಮಾಜಿಕ ಜಾಲತಾಣ". AKSHARASURYA JOURNAL 06, № 05 (2025): 186 to 200. https://doi.org/10.5281/zenodo.15504635.

Full text
Abstract:
ಇತ್ತೀಚಿನ ತಂತ್ರಜ್ಞಾನ ವಿಕಾಸದೊಂದಿಗೆ ಸಾಮಾಜಿಕ ಜಾಲತಾಣಗಳು ಜನಮಾಧ್ಯಮದ ಪ್ರಮುಖ ಅಂಗವಾಗಿ ಪ್ರಭಾವ ಬೀರುತ್ತಿವೆ. ಮಾಹಿತಿಯ ತ್ವರಿತ ಹರಡುವಿಕೆ, ವ್ಯಾಪಕ ಪ್ರಭಾವ ಮತ್ತು ಸಮುದಾಯಗಳ ರೂಪುಗೊಳಿಸುವಿಕೆ ಎಂಬ ಅಂಶಗಳಿಂದ ಇವು ಪ್ರಬಲ ಮಾಧ್ಯಮವಾಗಿ ಪರಿಣಮಿಸಿವೆ. ಇವು ವೈಯಕ್ತಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ಸಾಮಾಜಿಕ ಜಾಲತಾಣಗಳ ಅಸ್ತಿತ್ವವು ಸಂವಹನದಲ್ಲಿ ಹೊಸ ಯುಗವನ್ನು ಆರಂಭಿಸಿದ್ದು, ಲೋಕದ ಎಲ್ಲೆಡೆಯ ಜನರನ್ನು ಪರಸ್ಪರ ಸಂಪರ್ಕಿಸುವ ಸಾಮರ್ಥ್ಯವನ್ನು ಹೊಂದಿದೆ. ಇವು ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶ ನೀಡುವುದರೊಂದಿಗೆ, ಸುದ್ದಿಗಳನ್ನು ಹರಡುವ ಪ್ರಮುಖ ವೇದಿಕೆಯಾಗಿಯೂ ಕಾರ್ಯನಿರ್ವಹಿಸುತ್ತವೆ. ಜನಪ್ರಿಯತೆಯನ್ನು ಗಳಿಸಲು ಹಾಗೂ ಬುದ್ಧಿವಂತ ಸಮಾಜವನ್ನು ರೂಪಿಸಲ
APA, Harvard, Vancouver, ISO, and other styles
7

ಶ್ರೀನಿವಾಸ, ಎಸ್.ಜಿ. "ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆಗಳು". AKSHARASURYA JOURNAL 06, № 04 (2025): 01 to 10. https://doi.org/10.5281/zenodo.15490768.

Full text
Abstract:
ʼಕಾಯಕವೇ ಕೈಲಾಸʼ ವೆಂದು ಸಾರಿ, ಜನರಲ್ಲಿ ದುಡಿದು ತಿಂದು ಬದುಕುವ ಮಹತ್ವವನ್ನು ತಿಳಿಸಿದ್ದು ವಚನ ಸಾಹಿತ್ಯ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳಲ್ಲಿ ಸ್ತ್ರೀಯರಿಗೆ ಭಾಗವಹಿಸುವ ಸಮಾನ ಅವಕಾಶ ನೀಡುವ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕೊಂದು ಅರ್ಥವನ್ನು ಕಲ್ಪಿಸಿದರು. ಕಲುಷಿತಗೊಂಡಿದ್ದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ದಿಕ್ಕರಿಸಿ, ಘನ ಬದಲಾವಣೆಯನ್ನು ಗುರಿಯಿಟ್ಟು ನಡೆದ ದಾರ್ಶನಿಕ ಚಳುವಳಿ ವಚನ ಸಾಹಿತ್ಯ. ಸಾಮಾಜಿಕ ಬದಲಾವಣೆಗೆ ಹೊಸ ಭಾಷ್ಯ ಬರೆಯುವ ಮೂಲಕ ಉತ್ತಮ ಸಮಾಜ ವ್ಯವಸ್ಥೆಗೆ ನಿಜವಾದ ಅರ್ಥ ಕಲ್ಪಿಸಿ ಕೊಟ್ಟವರು. ಸಮಾಜದ ಕೀಳುಮಟ್ಟದ ಶೋಷಣೆಯಿಂದಾಗಿಯೇ ಸಮಾಜದಲ್ಲಿ ದುಡಿಯುವ ಮತ್ತು ಕೂತು ಉಣ್ಣುವ ವರ್ಗಗಳು ನಿರ್ಮಾಣವಾಗುವುದಕ್ಕೆ ಕಾರಣವಾಗಿರಬೇಕು, ಸಮಾಜದಲ್ಲಿ ಮೇಲ್ವರ್ಗವೆಂದು ಕರೆಸಿಕೊಂಡ ಜನರು ಸಮಾಜದ ಇತರರನ್ನು
APA, Harvard, Vancouver, ISO, and other styles
8

ಡಾ., ಸ್ವಾಮಿ. "ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ರಚನೆ ಮತ್ತು ಕಾರ್ಯ ವಿಧಾನಗಳು". International Journal of Advance Research in Multidisciplinary 2, № 3 (2024): 269–73. https://doi.org/10.5281/zenodo.13293895.

Full text
Abstract:
ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮವು ಶೋಷಿತ ಸಮುದಾಯಗಳಲ್ಲಿ ಸಾಮಾಜಿಕ ಅಸಮಾನತೆಯಿಂದ ಬಳಲುತ್ತಿರುವ ಸಮುದಾಯಗಳ ಅಭಿವೃದ್ಧಿಗಾಗಿ ಮತ್ತು ಅವರನ್ನು ಸಾಮಾಜಿಕ ಸಮಾನತೆಯ ಕಡೆ ಕೊಂಡೊಯ್ಯಲು ಹಲವು ಯೋಜನೆಗಳ ಮೂಲಕ ಶ್ರಮಿಸುತ್ತಿದೆ. ಅ ಮೂಲಕ ಫಲಾನುಭವಿಗಳ ಜೀವನ ಕ್ರಮದ ಬದಲಾವಣೆಯ ಉದ್ದೇಶವನ್ನು ಹೊಂದಿದೆ. ಪರಿಶಿಷ್ಟ ಜಾತಿಲ್ಲಿ ಬಡತನದ ರೇಖೆಗಿಂತ ಕೆಳಗಿರುವ ಉಪಜಾತಿಗಳನ್ನು ಈ ಯೋಜನೆಗಳಿಗೆ ಸಿಗುವಂತೆ ಮಾಡಲಾಗಿ. ಇದರಿಂದ ಅವರ ಆರ್ಥಿಕ ಸುಧಾರಣೆ, ಮಕ್ಕಳ ಶೈಕ್ಷಣಿಕ ಉನ್ನತಿ, ನಿರುದ್ಯೋಗ ನಿವಾರಣೆ ಮಾಡಲು, ಸಮುದಾಯದ ಯುವಕ ಮತ್ತು ಯುವತಿಯರನ್ನು ಸಬಲರನ್ನಾಗಿಸಲು ನಿಗಮವು ಹಲವಾರು ಯೋಜನೆಗಳನ್ನು ರೂಪಿಸಿದೆ. ಮಹಿಳಾ ಸಬಲೀಕರಣ ಯೋಜನೆಗಳ ಮೂಲಕ ಮಹಿಳೆಯು ಆರ್ಥಿಕ ಸಬಲತೆಯನ್ನು ಹೊಂದಬೇಕು, ಉದ್ಯೋಗ ಪಡೆಯಬೇಕು, ಸಮಾಜದ ಕಟ್ಟಳೆ ಮತ್ತು ದೌರ್ಜನ್ಯಗಳ
APA, Harvard, Vancouver, ISO, and other styles
9

ಮಾಧವ, ಎಂ. ಕೆ. "ಬಸವಣ್ಣನ ವಚನಗಳಲ್ಲಿ ಸಮ ಸಮಾಜದ ಪ್ರಸ್ತುತತೆ". AKSHARASURYA 04, № 02 (2024): 27 to 32. https://doi.org/10.5281/zenodo.11525708.

Full text
Abstract:
ಕನ್ನಡ ಸಾಹಿತ್ಯದಲ್ಲಿ ೧೨ನೇ ಶತಮಾನವನ್ನು ವಚನಗಳ ಯುಗವೆಂದು ಕರೆಯಲಾಗುತ್ತದೆ. ಬಸವಣ್ಣ ವಚನ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದವನು. ತನ್ನ ವಚನಗಳ ಮೂಲಕ ‘ಕಾಯಕವೇ ಕೈಲಾಸ’ ವೆಂದು ಸಾರಿ, ಜನರಲ್ಲಿ ದುಡಿದು ತಿಂದು ಬದುಕುವ ಮಹತ್ವವನ್ನು ತಿಳಿಸಿದರು. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ತ್ರೀಯರಿಗೆ ಭಾಗವಹಿಸುವ ಸಮಾನ ಅವಕಾಶ ನೀಡುವ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕೊಂದು ಅರ್ಥವನ್ನು ಕಲ್ಪಿಸಿದರು. ಕಲುಷಿತಗೊಂಡಿದ್ದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ದಿಕ್ಕರಿಸಿ, ಘನ ಬದಲಾವಣೆಯನ್ನು ಆರಿಸಿ ಹೊರಟ ದಾರ್ಶನಿಕ ಬಸವಣ್ಣ. ಸಾಮಾಜಿಕ ಬದಲಾವಣೆಗೆ ಹೊಸ ಭಾಷ್ಯ ಬರೆಯುವ ಮೂಲಕ ಉತ್ತಮ ಸಮಾಜ ವ್ಯವಸ್ಥೆಗೆ ನಿಜವಾದ ಅರ್ಥ ಕಲ್ಪಿಸಿ ಕೊಟ್ಟವರು. ಸಮಾಜದ ಕೀಳುಮಟ್ಟದ ಶೋಷಣೆಯಿಂದಾಗಿಯೇ ಸಮಾಜದಲ್ಲಿ ದುಡಿಯುವ ಮತ್ತು
APA, Harvard, Vancouver, ISO, and other styles
10

ಚನ್ನವೀರಯ್ಯ. "ವಚನಗಳಲ್ಲಿನ ಜಾತಿ ಪದ್ಧತಿ ಮತ್ತು ಮೌಢ್ಯಗಳ ವಿಶ್ಲೇಷಣೆ". AKSHARASURYA 05, № 02 (2024): 135 to 142. https://doi.org/10.5281/zenodo.14035388.

Full text
Abstract:
ಹನ್ನೇರಡನೇ ಶತಮಾನವನ್ನು ವಚನ ಸಾಹಿತ್ಯದ ಪರ್ವಕಾಲ ಎಂದು ಕರೆಯಬಹುದು. ಏಕೆಂದರೆ ಜನಸಾಮಾನ್ಯರ ಆಡುಭಾಷೆಯ ಮೂಲಕ ಕನ್ನಡಭಾಷೆಯನ್ನು ಉತ್ತುಂಗಕ್ಕೆ ಏರಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಬಹು ಮುಖ್ಯವಾಗಿ ಜಾತಿ, ಮತ, ವರ್ಗ, ವರ್ಣ, ಮೇಲು, ಕೀಳು ಹಾಗೂ ಸಾಮಾಜಿಕ ಪಿಡುಗುಗಳಾದ ಮೂಢನಂಬಿಕೆಗಳು ಅನಿಷ್ಟಪದ್ದತಿಗಳ ಆಚರಣೆಯಿಂದ ಸಮಾಜದ ಅಭಿವೃದ್ಧಿಗೆ ಮಾರಕವಾದುದು ಎಂಬುದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿ ಸಾಮಾಜಿಕ ಬದಾಲಾವಣೆಗೆ ಮುನ್ನುಡಿ ಬರೆದು ನವಮನ್ವಂತರಕೆ ದಾರಿ ದೀಪವಾದವರು. ಆ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದರು. ಸಾಮಾಜಿಕ ಬದಲಾಣೆಯ ಜೊತೆಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಅಂತಹ ಕೆಲವು ವಚನಕಾರರ ವಚನಗಳ ವಿಶ್ಲೇಷಣೆ ಈ ಲೇಖನದಲ್ಲಿ ಚರ್ಚಿಸಲಾಗಿದೆ.
APA, Harvard, Vancouver, ISO, and other styles
11

ಮುಕ್ತಾ, ಪೈ., та ಶಂಕರ್ ಜ್ಯೋತಿ. "ವಚನ ಚಳುವಳಿ ಮತ್ತು ಸಮಾಜ ಪರಿವರ್ತನೆ". AKSHARASURYA JOURNAL 06, № 05 (2025): 84 to 93. https://doi.org/10.5281/zenodo.15504282.

Full text
Abstract:
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯಕ್ಕೊಂದು ವಿಶಿಷ್ಟವಾದ ಸ್ಥಾನವಿದೆ. ಇದು ಎಲ್ಲಾ ವರ್ಗ, ವರ್ಣದ ಜನಸಾಮಾನ್ಯರು ತಮ್ಮ ಮನಸ್ಸಿನಲ್ಲಿದ್ದ ಭಾವನೆಗಳನ್ನು ವ್ಯಕ್ತಪಡಿಸಿದ ಅದ್ಭುತವಾದ ಭಕ್ತಿ ಸಾಹಿತ್ಯ. ಮೇಲು-ಕೀಳು, ಜಾತಿ-ಮತ, ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರೂ ಸಾಮೂಹಿಕವಾಗಿ ಪಾಲ್ಗೊಂಡ ಸಾಹಿತ್ಯ ಜಗತ್ತಿನ ಇತಿಹಾಸದಲ್ಲಿಯೇ ವಿರಳವಾಗಿದೆ. ಶರಣ ಧರ್ಮದ ವಿಶಿಷ್ಟತೆ ಎಂದರೆ ಪೂಜೆ ಪುನಸ್ಕಾರಗಳಿಗೆ, ಯಜ್ಞ ಯಾಗಾದಿಗಳಿಗೆ, ಆಚರಣೆಗಳಿಗೆ ಅವಕಾಶ ನೀಡಲಿಲ್ಲ. ವಚನಾಕಾರರು 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಹೀಗೆ ಹಲವು ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ತಂದು ಸಮಾಜದಲ್ಲಿ ನಿರ್ಲಕ್ಷಕ್ಕೆ ಒಳಗಾದ ಜನ ಸಮೂಹವನ್ನು ಒಂದೆಡೆ ಸೇರಿಸುವ ಕಾರ್ಯವನ್ನು ಮಾಡಿದರು. ವಚನ ಚಳುವಳಿಯ ದೀಪವನ್ನು ನೂರಾರು ವಚನಕಾರರು ಹಚ
APA, Harvard, Vancouver, ISO, and other styles
12

ದಿವಾಕರ, ಜೆ., та ಎಸ್. ಶಿವಣ್ಣ. "ಆಲಿಸುವ ಕೌಶಲವರ್ಧನೆಯಲ್ಲಿ ನಾಟಕಕಲೆ". AKSHARASURYA 04, № 01 (2024): 09 to 17. https://doi.org/10.5281/zenodo.11162027.

Full text
Abstract:
ರಂಗಭೂಮಿಯ ಪ್ರಮುಖ ಕಲೆಯಾದ ನಾಟಕ ಕಲೆಯು ಮಕ್ಕಳಾದಿಯಾಗಿ ದೊಡ್ಡವರಿಗೂ ಕೂಡ ಶಿಕ್ಷಣ, ಮಾಹಿತಿ, ಮನರಂಜನೆಯನ್ನು ನೀಡುತ್ತದೆ. ಈ ನಾಟಕ ಕಲೆಯಲ್ಲಿ ಪಾಲ್ಗೊಂಡ ವ್ಯಕ್ತಿಯ ಮಾತೃ ಭಾಷೆಯ ಪ್ರಯೋಗವು ಸೂಕ್ತವಾಗಿರುತ್ತದೆ. ಇದಕ್ಕೆ ಕಾರಣ ಅವರಲ್ಲಿ ಆಗಿರುವ ಭಾಷೆಯ ವಿಕಾಸ ಮತ್ತು ಬೆಳವಣಿಗೆ ಹಾಗೂ ಭಾಷೆಯ ಕೌಶಲಗಳು. ಈ ಕೌಶಲಗಳನ್ನು ನಾಟಕ ಕಲೆ ಹೇಗೆ ಕಲಿಸುತ್ತದೆ? ಎಂಬ ಪ್ರಶ್ನೆ ಮುಖೇನ ಉತ್ತರ ಹುಡುಕಲು ಈ ಲೇಖನ ಪ್ರಯತ್ನಿಸುತ್ತದೆ. ಕನ್ನಡ ಭಾಷಾ ಕೌಶಲಗಳ ಕಲಿಕೆಯಲ್ಲಿ ನಾಟಕ ಕಲೆ. ಭಾಷೆ ಕಲಿಕೆಯೆಂಬುದು ಮೂಲತಃ ಭಾಷಾ ಕೌಶಲಗಳ ಕಲಿಕೆಯೇ ಆಗಿದೆ. ಭಾಷೆಯ ಪ್ರಬುದ್ಧತೆ ಸಿದ್ದಿಸುವುದು ಹಾಗೂ ಭಾಷಾ ಕೌಶಲಗಳು ಲಭಿಸುವುದು ಭಾಷಾಂಶಗಳ ಪರಿಣಿತಿಯಿಂದ ಮಾತ್ರ. ಭಾಷಾಕಲಿಕೆಯ ಪ್ರಕ್ರಿಯೆಯಲ್ಲಿ ಆಲಿಸುವುದು, ನೋಡುವುದು, ಮಾತನಾಡುವುದು, ಓದುವುದು, ಬರೆಯುವುದು ಮತ
APA, Harvard, Vancouver, ISO, and other styles
13

ಪ್ರಕಾಶ, ಬಿ. "ಡಾ. ಬಿ.ಆರ್. ಅಂಬೇಡ್ಕರ್‌ ಮತ್ತು ಗಾಂಧೀಜಿ: ಜಾತಿ, ವರ್ಣ, ಹಿಂದುತ್ವ ಕುರಿತು ಅಭಿಪ್ರಾಯ-ಭಿನ್ನಾಭಿಪ್ರಾಯಗಳು". AKSHARASURYA JOURNAL 06, № 05 (2025): 141 to 150. https://doi.org/10.5281/zenodo.15504412.

Full text
Abstract:
ವರ್ತಮಾನದಲ್ಲಿ ಗಾಂಧೀಜಿ ಮತ್ತು ಡಾ. ಬಿ. ಆರ್, ಅಂಬೇಡ್ಕರ್‌‌ರವರನ್ನು ಅನುಸಂಧಾನ ಮಾಡಿದಾಗ ಇವರಿಬ್ಬರ ನಡುವಿನ ಜಾತಿ, ವರ್ಣ, ಹಿಂದುತ್ವ ಕುರಿತು ಅನೇಕ ಹುಸಿ ಚರ್ಚೆಗಳು, ಪ್ರಚಾರ, ಸೆಮಿನಾರ್‌ಗಳು, ಪತ್ರಿಕೆಗಳ ಮೂಲಕ ಬಿತ್ತರವಾಗುತ್ತಿವೆ. ದೇಶದ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಈ ಅಭಿಪ್ರಾಯ-ಭಿನ್ನಾಭಿಪ್ರಾಯಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ. ಈ ಲೇಖನದ ಮೂಲಕ ನಿಜವನ್ನು ಅರಿಯುವ ಮುಖೇನ ಹೊಸದೊಂದು ತಾತ್ವಿಕತೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಜಾತ್‌ಪತ್ ತೊಡಕ್ ಮಂಡಲಕ್ಕಾಗಿ ಅಂಬೇಡ್ಕರ್‌ ಸಿದ್ದಪಡಿಸಿದ ಜಾತಿ ವಿಷಯ ಉಪನ್ಯಾಸವನ್ನು ಗಮನಿಸಿ ತಮ್ಮ ಹರಿಜನ ಪತ್ರಿಕೆಯಲ್ಲಿ ಗಾಂಧೀಜಿ ಅದನ್ನು ಉಲ್ಲೇಖಿಸುವ ಮೂಲಕ ಅಂಬೇಡ್ಕರ್‌ ರವರನ್ನು ಇದು ಪ್ರಚಾ
APA, Harvard, Vancouver, ISO, and other styles
14

Dalwai, Kasturevva Basappa. "ಚಂದ್ರಗಿರಿಯ ತೀರದಲ್ಲಿ ಸ್ತ್ರೀ ಮತ್ತು ಸಾಮಾಜಿಕ ಸಂವೇದನೆಗಳು". ShodhKosh: Journal of Visual and Performing Arts 5, № 7 (2024). https://doi.org/10.29121/shodhkosh.v5.i7.2024.5451.

Full text
Abstract:
ರೀತಿ-ನೀತಿಗಳು, ಕಟ್ಟು-ಕಟ್ಟಲೆಗಳು ಬದುಕನ್ನು ಸರಳವಾಗಿಸಬೇಕೇ ವಿನಃ ಕ್ಲಿಷ್ಟಕರವನ್ನಾಗಲ್ಲ. ಸಮುದಾಯದ ರಿವಾಜುಗಳು ಅದೆಷ್ಟು ಪ್ರಭಲವಾಗಿ ಬೇರೂರಿವೆ ಅಂದರೆ; ಅದರಿಂದ ಕಿಂಚಿತ್ತು ಕದಲಿದರೂ ಅದು ಸರ್ವಶಕ್ತನಿಗೆ ವಿರುದ್ಧವಾಗಿ ನಡೆದಂತೆಯೇ ಎಂಬ ತಿಳುವಳಿಕೆಯು ಬದುಕನ್ನು ಜಟಿಲಗೊಳಿಸಿ ಬಿಡುತ್ತದೆ. ಕಾಲಾನುಕಾಲಕ್ಕೆ ಬಾಳುವ ಕ್ರಮದಲ್ಲಿ ಬದಲಾವಣೆಯನ್ನು ಸಮುದಾಯ, ಮತ, ಧರ್ಮಗಳು ಹುಟ್ಟು ಹಾಕಿ ಜೀವಿಸುವ ಉಸಿರಿಗೆ ರಹದಾರಿ ತೋರಬೇಕು. ಜಡ್ಡುಗಟ್ಟಿ ನಿಂತು ಕತ್ತಲಲ್ಲಿ ಕಳೆಯುತ್ತೇನೆ ಎನ್ನುವ ಮನಸ್ಥಿತಿಯಿಂದ ಹೊರ ಬರಬೇಕಾದುದು ಕಾಲದ ತುರ್ತು. ಬದಲಾಗದಿರುವಂತಹ ನಿಯಮಾವಳಿಗಳ ಜೊತೆಗೆ ಬಾಳನ್ನು ಸವೆಯುವ ದರ್ದು ಇರಬಾರದಷ್ಟೇ. ಬದಲಾವಣೆಗಳ ಅಗತ್ಯವಿಲ್ಲವೆಂದು ಅಜ್ಜ ನೆಟ್ಟ ಆಲದ ಮರಕ್ಕೆ ಜೋತು ಬೀಳುವ ಮನಸ್ಥಿಯಿಂದಲೂ ದೂರವಾಗಬೇಕು. ಅಂತಹ ಒಂದು ನಂಬಿಕೆ,
APA, Harvard, Vancouver, ISO, and other styles
15

Sobati, Chandrappa. "ಪ್ರಚಲಿತ ಡೊಳ್ಳಿನ ಹಾಡುಗಳಲ್ಲಿ ಲಿಂಗತಾರತಮ್ಯತೆಯ ವಾಗ್ವಾದಗಳು". ShodhKosh: Journal of Visual and Performing Arts 5, № 4 (2024). https://doi.org/10.29121/shodhkosh.v5.i4.2024.4255.

Full text
Abstract:
ಡೊಳ್ಳುಕಲೆ ಪುರುಷರ ಕಲೆ. ಪುರುಷರು ಮಾತ್ರ ಡೊಳ್ಳು ವಾದ್ಯವನ್ನು ಬಾರಿಸಬೇಕು. ಅಷ್ಟೇ ಏಕೆ? ಪುರುಷರು ಮಾತ್ರ ಈ ವಾದ್ಯವನ್ನು ಮುಟ್ಟಬೇಕು. ಈ ಕಲಾ ಪ್ರದರ್ಶನದಲ್ಲಿ ಭಾಗಿಯಾಗಬೇಕು ಎನ್ನುವ ಪಾರಂಪರಿಕ ನಂಬಿಕೆಗಳು ಮತ್ತು ನಿಷೇಧಗಳು ಒಂದು ಕಾಲದಲ್ಲಿ ಇಲ್ಲಿ ಜೀವಂತವಾಗಿದ್ದವು. ಇವತ್ತು ಮೇಲೆ ಉಲ್ಲೇಖಿತ ಯಾವುದೇ ಪರಿಕಲ್ಪನೆಗಳು ಮತ್ತು ನಿಷೇಧಗಳು ಡೊಳ್ಳುಕಲೆಗೆ ಅನ್ವಯವಾಗುವುದಿಲ್ಲ. ಇದು ಆರೋಗ್ಯಕರ ಬೆಳವಣಿಗೆ. ಏಕೆಂದರೆ, ಈ ಕಲಾಕ್ಷೇತ್ರಕ್ಕೆ ಮಹಿಳೆಯರು ಆಗಮಿಸಿ ಪ್ರದರ್ಶನದ ವೈಶಿಷ್ಟö್ಯತೆಯಲ್ಲಿ ಪುರುಷರಷ್ಟೇ ಪ್ರಾವಿಣ್ಯತೆ ಹಾಗೂ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಪಾರಂಪರಿಕ ಪ್ರದರ್ಶನದ ಸಂದರ್ಭಗಳಲ್ಲಿ ಅಲ್ಲದೆ ಇತರೆ ಸಂದರ್ಭಗಳಲ್ಲೂ ಈ ಕಲೆ ಪ್ರದರ್ಶನವಾಗುತ್ತಿದೆ. ಅದು ರಾಜಕೀಯ ಪ್ರಚಾರದ ಸಂದರ್ಭ, ಮನರಂಜನೆಯ ಸಂದರ್ಭ ಹಾಗೂ ಹಣ ಗಳಿ
APA, Harvard, Vancouver, ISO, and other styles
We offer discounts on all premium plans for authors whose works are included in thematic literature selections. Contact us to get a unique promo code!