To see the other types of publications on this topic, follow the link: ಬಸವಣ್ಣ.

Journal articles on the topic 'ಬಸವಣ್ಣ'

Create a spot-on reference in APA, MLA, Chicago, Harvard, and other styles

Select a source type:

Consult the top 18 journal articles for your research on the topic 'ಬಸವಣ್ಣ.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Browse journal articles on a wide variety of disciplines and organise your bibliography correctly.

1

ಮಹಾಲಿಂಗಪ್ರಭು. "ಬಸವಣ್ಣನ ಅವೈದಿಕ ಪ್ರಜ್ಞೆ: ಕನ್ನಡ ಬಸವ ಕಥನ & ವಚನಗಳಲ್ಲಿ". AKSHARASURYA JOURNAL 06, № 04 (2025): 64 to 71. https://doi.org/10.5281/zenodo.15490921.

Full text
Abstract:
ಕನ್ನಡ ಬಸವ ಕಥನಗಳು ವಚನಗಳೊಂದಿಗೆ ಹೊಂದಿರುವ ಅಂತರ್‌ ಸಂಬಂಧವನ್ನು ಜಪತಪ ತೀರ್ಥಕ್ಷೇತ್ರ, ಕರ್ಮ-ಪುನರ್ಜನ್ಯ, ಶಕುನಗಳು ಮೊದಲಾದ ತಾತ್ವಿಕ ಅಂಶಗಳ ಹಿನ್ನೆಲೆಯಲ್ಲಿ ವಿವಿಧ ನಿದರ್ಶನಗಳ ಆಧಾರದ ಮೇಲೆ ಪ್ರಸ್ತುತ ಲೇಖನದಲ್ಲಿ ಚರ್ಚಿಸಲಾಗಿದೆ. ಬಸವಣ್ಣ ಸಮಕಾಲೀನದಿಂದ ಟೀಕೆ-ವಿಮರ್ಶೆಗಳು ಎದುರಾದಾಗ ಬಸವಣ್ಣ ತನ್ನ ಲೋಪಗಳನ್ನು ಸರಿಪಡಿಸಿಕೊಂಡ ರೀತಿಯನ್ನೊಳಗೊಂಡ ಕನ್ನಡ ಬಸವ ಕಥನಗಳಲ್ಲಿ ಉಕ್ತವಾದ ಆತ್ಮಶೋಧನೆಯ ಪ್ರಸಂಗಗಳು-ವಚನಗಳು ಈ ರೀತಿಯಾಗಿ ಬಸವಣ್ಣನ ತಾತ್ವಿಕತೆ ಹಾಗೂ ವ್ಯಕ್ತಿಚಿತ್ರಣ ಎರಡೂ ವಿಷಯಗಳಿಗೆ ಸಂಬಂಧಿಸಿದ ಅಂಶಗಳನ್ನು ಈ ಲೇಖನದಲ್ಲು ವಿವಿಧ ಆಯಾಮಗಳಲ್ಲಿ ಪರಿಶೀಲಿಸಿವ ಕಾರ್ಯವನ್ನು ಮಾಡಲಾಗಿದೆ.
APA, Harvard, Vancouver, ISO, and other styles
2

ಮಾಧವ, ಎಂ. ಕೆ. "ಬಸವಣ್ಣನ ವಚನಗಳಲ್ಲಿ ಸಮ ಸಮಾಜದ ಪ್ರಸ್ತುತತೆ". AKSHARASURYA 04, № 02 (2024): 27 to 32. https://doi.org/10.5281/zenodo.11525708.

Full text
Abstract:
ಕನ್ನಡ ಸಾಹಿತ್ಯದಲ್ಲಿ ೧೨ನೇ ಶತಮಾನವನ್ನು ವಚನಗಳ ಯುಗವೆಂದು ಕರೆಯಲಾಗುತ್ತದೆ. ಬಸವಣ್ಣ ವಚನ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದವನು. ತನ್ನ ವಚನಗಳ ಮೂಲಕ ‘ಕಾಯಕವೇ ಕೈಲಾಸ’ ವೆಂದು ಸಾರಿ, ಜನರಲ್ಲಿ ದುಡಿದು ತಿಂದು ಬದುಕುವ ಮಹತ್ವವನ್ನು ತಿಳಿಸಿದರು. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ತ್ರೀಯರಿಗೆ ಭಾಗವಹಿಸುವ ಸಮಾನ ಅವಕಾಶ ನೀಡುವ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕೊಂದು ಅರ್ಥವನ್ನು ಕಲ್ಪಿಸಿದರು. ಕಲುಷಿತಗೊಂಡಿದ್ದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ದಿಕ್ಕರಿಸಿ, ಘನ ಬದಲಾವಣೆಯನ್ನು ಆರಿಸಿ ಹೊರಟ ದಾರ್ಶನಿಕ ಬಸವಣ್ಣ. ಸಾಮಾಜಿಕ ಬದಲಾವಣೆಗೆ ಹೊಸ ಭಾಷ್ಯ ಬರೆಯುವ ಮೂಲಕ ಉತ್ತಮ ಸಮಾಜ ವ್ಯವಸ್ಥೆಗೆ ನಿಜವಾದ ಅರ್ಥ ಕಲ್ಪಿಸಿ ಕೊಟ್ಟವರು. ಸಮಾಜದ ಕೀಳುಮಟ್ಟದ ಶೋಷಣೆಯಿಂದಾಗಿಯೇ ಸಮಾಜದಲ್ಲಿ ದುಡಿಯುವ ಮತ್ತು
APA, Harvard, Vancouver, ISO, and other styles
3

ತ್ರಿವೇಣಿ. "ಸಾಮಾಜಿಕ ಹರಿಕಾರ ಬಸವಣ್ಣ". AKSHARASURYA JOURNAL 04, № 04 (2024): 139 to 143. https://doi.org/10.5281/zenodo.13284139.

Full text
Abstract:
ಪ್ರಭುತ್ವದ ಮೇಲಾಟಕ್ಕೆ ಪರ್ಯಾಯವಾಗಿ ಜನಶಕ್ತಿ ರೂಪುಗೊಳ್ಳಬೇಕೆಂದು ಬಯಸುತ್ತಿದ್ದ ಬಸವಣ್ಣನವರು ಕಾಯಕ-ದಾಸೋಹಗಳ ಮುಖೇನ ಅದನ್ನು ಸಾಧಿಸುವ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಕಾಳಜಿಯುಳ್ಳ ಸಮಾನ ಮನಸ್ಕರ ಸಂಘಟನೆಯಿಂದ ಮಾತ್ರ ಇಂಥದ್ದನ್ನು ಸಾಧಿಸಲು ಸಾಧ್ಯವೆಂಬ ನಿಲುವಿನಲ್ಲಿ, ಜಾತಿ, ವರ್ಣ, ವರ್ಗಗಳೇ ಮೊದಲಾದ ಎಲ್ಲ ಬಂಧನಗಳನ್ನು ಮೀರಿದ ‘ಅನುಭವ ಮಂಟಪ’ ಎಂಬ ಒಂದು ಅದ್ಭುತ ವೇದಿಕೆಯನ್ನು ರೂಪಿಸಿದರು. ಅನುಭವಮಂಟಪದಲ್ಲಿ ಎಲ್ಲರೂ ಸಮಾನಭಾವದಲ್ಲಿ ಸಾಮಾಜಿಕ ಒಳಿತಿನ ಉದ್ದೇಶದಿಂದ ಸೇರಿ ಪರಸ್ಪರ ಚರ್ಚೆ ಮಾಡಿದರು. ಆ ಮೂಲಕ ಅಂದೇ ಪ್ರಜಾಪ್ರಭುತ್ವಕ್ಕೆ ಅಡಿಗಲ್ಲನ್ನು ಹಾಕಿದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇನ್ನಿಲ್ಲದ ಮಹತ್ವ ನೀಡಿದ ಅನುಭವ ಮಂಟಪವು ಶರಣ ಶರಣೆಯರೆಲ್ಲ ಲಿಂಗ-ಜಾತಿಬೇಧಗಳಿಲ್ಲದಂತೆ ಒಗ್ಗೂಡಲು ಇಂಬು ನೀಡಿತು. ಇಂ
APA, Harvard, Vancouver, ISO, and other styles
4

ಗಾಯತ್ರಿ, ಉಪ್ಪಾರ. "ಸಮಾನತೆಯ ಹರಿಕಾರ ಬಸವಣ್ಣ". AKSHARASURYA JOURNAL 04, № 05 Special Issue (2024): 70 to 74. https://doi.org/10.5281/zenodo.13294390.

Full text
Abstract:
ಬಸವಣ್ಣ 12ನೇಯ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ಮನುಕುಲದ ಉದ್ಧಾರಕ್ಕಾಗಿ ಎಲ್ಲ ರಂಗದಲ್ಲಿಯೂ ಕ್ರಾಂತಿಗೈದ ಮಹಾನ್ ಪುರುಷ, ಕ್ರಾಂತಿಕಾರಿ. ಸಮಾಜದಲ್ಲಿನ ಅನಿಷ್ಟಗಳನ್ನು ತೆಗೆದುಹಾಕಲು ಶ್ರಮಿಸಿದರು. ವಚನಗಳ ಮುಖಾಂತರ ಸಮಾಜದ ಮಧ್ಯದಲ್ಲಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಲು ಜನರ ಮಧ್ಯ ದುಮುಕಿ ಜನಸಾಮಾನ್ಯರಿಗೆ ತಿಳಿಯುವ ಭಾಷೆಯಲ್ಲಿ ವಚನಗಳ ಮೂಲಕ ಸಮಾಜದ ಅಂಕು, ಡೊಂಕುಗಳನ್ನು, ಢಾಂಬಿಕತೆಗಳನ್ನು ಎಳೆ ಎಳೆಯಾಗಿ ಬಿಡಿಸಿ ತಿಳಿಗನ್ನಡ ವಚನಗಳ ಮೂಲಕ ನಿರೂಪಿಸಿದ ಮಹಾನ ನೇತಾರ. ಸದ್ಗುಣ ಸದಾಚಾರಗಳು ಯಾವುದೇ ಜಾತಿಗೆ ಮೀಸಲಾದವುಗಳಲ್ಲ ಇಲ್ಲವೆ ಹುಟ್ಟಿನಿಂದ ಬಂದವುಗಳೂ ಅಲ್ಲ. ಈ ಅಸ್ಪೃಶ್ಯತಾ ಭಾವನೆಯನ್ನು ಬಸವಣ್ಣನವರು ಸಂಪೂರ್ಣವಾಗಿ ತೆಗೆದುಹಾಕಿ ಸಮಾನತೆಯನ್ನು ತಮ್ಮ ಜೀವನದಲ್ಲಿ ಆಚರಣೆಗೆ ತಂದರು.
APA, Harvard, Vancouver, ISO, and other styles
5

ಸುನೀತಾ, ಮಹೇಶ್ವರಿ. "ಬಸವಣ್ಣನವರ ದೃಷ್ಟಿಯಲ್ಲಿ ಅಸ್ಪೃಶ್ಯತೆ". AKSHARASURYA 05, № 01 (2024): 134 to 138. https://doi.org/10.5281/zenodo.13871042.

Full text
Abstract:
೧೨ನೇ ಶತಮಾನದ ಆಂದೋಲನದ ನಾಯಕ ಮತ್ತು ಕೇಂದ್ರ ವ್ಯಕ್ತಿ ಆದ ಬಸವಣ್ಣ ಸಾಹಿತ್ಯದೃಷ್ಟಿಯಿಂದ ನೋಡಿದಾಗ ಆತ ಒಬ್ಬ ಅತ್ಯುತ್ತಮ ಕೃತಿಕಾರ ಸಮಾನತೆಯ ತತ್ವವನ್ನು ಸಾರಿದ ಹರಿಕಾರ ಎಂದು ಹೇಳುವುದು ಆಕಸ್ಮಿಕವೇ ಸರಿ. ಆತ ಹುಟ್ಟಿದ್ದು ಬಿಜಾಪುರ್ ಜಿಲ್ಲೆಯ ಬಸವನಬಾಗೇವಾಡಿ ಅಗ್ರಹಾರ ಎಂಬ ಊರಲ್ಲಿ ೧೧೩೪ಲ್ಲಿ ಜನನವಾಯಿತು. ತಂದೆ ಮಾದರಸ ತಾಯಿ ಮಾದಲಾಂಬಿಕೆ. ಇವರು ಬಾಲ್ಯದಿಂದಲೇ ವೈದಿಕ ಸಂಸ್ಕೃತಿಯ ವಿರೋಧಿಗಳಾಗಿದ್ದರು. ಇವರು ಹುಟ್ಟಿದ್ದು ಉತ್ತಮ ಬ್ರಾಹ್ಮಣ ಮನೆತನದಲ್ಲಿ ಆದರು ದಲಿತ ವರ್ಗದ ಜೊತೆ ಬೆರೆತು ಅವರಿಗಾಗಿ ತನ್ನ ಜೀವನದುದ್ದಕ್ಕೂ ಹೋರಾಡಿದನೆಂದು ತಿಳಿದು ಬರುತ್ತದೆ. ಹೊಸ ಹೊಸ ಬಗೆಯ ಅನೇಕ ಸುಧಾರಣೆಗಳನ್ನು ಜಾರಿಗೆ ತಂದು ನಮ್ಮ ಆಡಳಿತವನ್ನು ಸರಳಗೊಳಿಸಿದರು. ಎಲ್ಲಾ ಶರಣರನ್ನು ಕೂಡಿಸಿ ಎಲ್ಲಾ ಜಾತಿಯವರೊಡನೆ ತಮ್ಮನ್ನು ತಾವು ತೊಡಗಿಸಿಕೊಂಡು ಸ
APA, Harvard, Vancouver, ISO, and other styles
6

ಮುಕ್ತಾ, ಪೈ., та ಶಂಕರ್ ಜ್ಯೋತಿ. "ವಚನ ಚಳುವಳಿ ಮತ್ತು ಸಮಾಜ ಪರಿವರ್ತನೆ". AKSHARASURYA JOURNAL 06, № 05 (2025): 84 to 93. https://doi.org/10.5281/zenodo.15504282.

Full text
Abstract:
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯಕ್ಕೊಂದು ವಿಶಿಷ್ಟವಾದ ಸ್ಥಾನವಿದೆ. ಇದು ಎಲ್ಲಾ ವರ್ಗ, ವರ್ಣದ ಜನಸಾಮಾನ್ಯರು ತಮ್ಮ ಮನಸ್ಸಿನಲ್ಲಿದ್ದ ಭಾವನೆಗಳನ್ನು ವ್ಯಕ್ತಪಡಿಸಿದ ಅದ್ಭುತವಾದ ಭಕ್ತಿ ಸಾಹಿತ್ಯ. ಮೇಲು-ಕೀಳು, ಜಾತಿ-ಮತ, ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರೂ ಸಾಮೂಹಿಕವಾಗಿ ಪಾಲ್ಗೊಂಡ ಸಾಹಿತ್ಯ ಜಗತ್ತಿನ ಇತಿಹಾಸದಲ್ಲಿಯೇ ವಿರಳವಾಗಿದೆ. ಶರಣ ಧರ್ಮದ ವಿಶಿಷ್ಟತೆ ಎಂದರೆ ಪೂಜೆ ಪುನಸ್ಕಾರಗಳಿಗೆ, ಯಜ್ಞ ಯಾಗಾದಿಗಳಿಗೆ, ಆಚರಣೆಗಳಿಗೆ ಅವಕಾಶ ನೀಡಲಿಲ್ಲ. ವಚನಾಕಾರರು 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಹೀಗೆ ಹಲವು ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ತಂದು ಸಮಾಜದಲ್ಲಿ ನಿರ್ಲಕ್ಷಕ್ಕೆ ಒಳಗಾದ ಜನ ಸಮೂಹವನ್ನು ಒಂದೆಡೆ ಸೇರಿಸುವ ಕಾರ್ಯವನ್ನು ಮಾಡಿದರು. ವಚನ ಚಳುವಳಿಯ ದೀಪವನ್ನು ನೂರಾರು ವಚನಕಾರರು ಹಚ
APA, Harvard, Vancouver, ISO, and other styles
7

ಕುಮಾರ, ಹೆಚ್.ಸಿ. "ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು". AKSHARASURYA JOURNAL 06, № 04 (2025): 19 to 26. https://doi.org/10.5281/zenodo.15490817.

Full text
Abstract:
ವಚನ ಸಾಹಿತ್ಯವು ಕನ್ನಡ ಸಾಹಿತ್ಯದ ವಿಶಿಷ್ಟ ಮಾದರಿಯ ಸಾಹಿತ್ಯ ಪ್ರಕಾರವಾಗಿದ್ದು, ಕಾಯಕಕ್ಕೆ, ಮಾನವೀಯ ಸಂಬಂಧಗಳಿಗೆ ಹಾಗೂ ಸೃಜನಶೀಲತೆಗೆ ಪ್ರಮುಖ ಸ್ಥಾನವನ್ನು ನೀಡಿ ಗೌರವಿಸಿದೆ. ಶಿವಶರಣರು ತಮ್ಮ ದಿನನಿತ್ಯದ ನಡೆನುಡಿಗಳನ್ನೇ ವಚನಗಳೆಂಬ ಹಾಡುಗಬ್ಬವಾಗಿ ರಚಿಸಿದರು. ಬಸವಣ್ಣ, ಅಕ್ಕ, ಅಲ್ಲಮ ದಾಸಿಮಯ್ಯ, ಸಿದ್ದರಾಮರಂಥಹ ಅನೇಕ ವಚನಕಾರರರು ಕಾಯಕಕ್ಕೆ ಮಹತ್ವ ಕೊಟ್ಟು ಜನರಲ್ಲಿದ್ದ ಕೆಟ್ಟ ಆಲೋಚನೆಗಳನ್ನು ದೂರ ಮಾಡಿ ಹೊಸ ವಿಶ್ವಾಸದ ಹಾದಿಯನ್ನು ತೋರಿಸಿದರು.ಲಿಂಗ ತಾರತಮ್ಯ, ವರ್ಗ ಸಂಘರ್ಷ, ಜಾತಿ ಪದ್ಧತಿ ಅಸಮಾನತೆ ಮುಂತಾದ ವ್ಯವಸ್ಥೆಗಳ ವಿರುದ್ಧ ಹೋರಾಡಿ ಸಭ್ಯ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿ, ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆದರು. ನಡೆ ನುಡಿ ಶುದ್ಧವಾಗಿರಬೇಕು. ಮನುಷ್ಯನಿಗೆ, ಗಾಳಿ, ನೀರು, ಊಟ ಎಷ್ಟು ಮುಖ್ಯವೋ ಅಷ್ಟೇ
APA, Harvard, Vancouver, ISO, and other styles
8

ಜ್ಯೋತಿ, ಎನ್. ಭಟ್. "ಮಾನವೀಯ ಸಮಾಜ ರೂಪಿಸುವಲ್ಲಿ ವಚನಗಳ ಪಾತ್ರ". AKSHARASURYA JOURNAL 06, № 04 (2025): 97 to 106. https://doi.org/10.5281/zenodo.15490983.

Full text
Abstract:
ವಚನ ಸಾಹಿತ್ಯವು 12ನೇ ಶತಮಾನದ ಕನ್ನಡದ ವಿಶಿಷ್ಟ ಸಾಹಿತ್ಯಪ್ರಕಾರವಾಗಿದೆ. ಇದನ್ನು ಪಂಡಿತರಿಗೆ ಮೀಸಲಾಗಿದ್ದ ಸಾಹಿತ್ಯದ ಮೀರೆದು, ಸಾಮಾನ್ಯ ಜನರ ಬದುಕು, ಅನುಭವ, ತತ್ವಗಳನ್ನು ಸರಳವಾದ ಭಾಷೆಯಲ್ಲಿ ವ್ಯಾಖ್ಯಾನಿಸಿ ಸಮಾಜದಲ್ಲಿ ಜಾಗೃತಿ ತರಲು ಶರಣರು ಬಳಸಿದರು. ಮಾತನ್ನು ಮತಿಸಿದಾಗ ಮಾತ್ರ ವಚನವಾಗುವುದು ಎಂಬ ತತ್ವದೊಂದಿಗೆ, ವಚನಗಳು ಅನುಭವದ ಭಾವಗೀತೆಗಳಾಗಿವೆ. ಇದರಲ್ಲಿ ಧರ್ಮ, ನೀತಿ, ಜ್ಞಾನ, ಶ್ರಮ, ಸಮಾನತೆ, ಕಾಯಕ ಮತ್ತು ದಾಸೋಹದಂತಹ ಮಾನವ ಮೌಲ್ಯಗಳು ಸೊಗಸಾಗಿ ಪ್ರತಿಬಿಂಬಿಸುತ್ತವೆ. ಜಾತಿ, ಲಿಂಗ, ಧರ್ಮಗಳ ಭೇದವನ್ನು ತಿರಸ್ಕರಿಸಿ ಎಲ್ಲರಿಗೂ ಸಮಾನ ಸ್ಥಾನವಿರಬೇಕು ಎಂಬ ಸಂದೇಶ ನೀಡುತ್ತವೆ. ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮಪ್ರಭು, ಚನ್ನಬಸವಣ್ಣನಂತಹ ಶರಣರು ಸಮಾಜ ಸುಧಾರಣೆಗೆ ಮುಂಚೂಣಿಯಲ್ಲಿದ್ದರು. ಅವರು ಪುರಾಣಕಥೆಗಳನ್ನು ಬಳಸದೆ, ತ
APA, Harvard, Vancouver, ISO, and other styles
9

ನಾಗೇಶ್, ಎನ್. "೨೧ನೆಯ ಶತಮಾನದ ಕನ್ನಡ ನಾಟಕ ಮತ್ತು ರಂಗಭೂಮಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್‌". AKSHARASURYA JOURNAL 06, № 05 (2025): 114 to 120. https://doi.org/10.5281/zenodo.15504329.

Full text
Abstract:
ರಂಗಭೂಮಿಯೊಂದು ಜಾಗತೀಕ ಕಲಾಭಿವ್ಯಕ್ತಿ ಮಾಧ್ಯಮವಾಗಿದೆ, ನಾಟಕವು ಜಗತ್ತಿನ ಸಾಂಸ್ಕೃತಿಕ ಸೃಜನಶೀಲತೆಯ ಅಸ್ಮಿತೆಯ ಭಾಗವಾಗಿ ಲೋಕದರ್ಶನವನ್ನು ಒಡಮೂಡಿಸುವಲ್ಲಿ ಪ್ರಮುಖ ಸಾಹಿತ್ಯ ಪ್ರಕಾರವಾಗಿದೆ. ಶ್ರೇಷ್ಠ ದಾರ್ಶನಿಕರಾದ ಬುದ್ಧ, ಬಸವಣ್ಣ, ಡಾ. ಬಿ. ಆರ್. ಅಂಬೇಡ್ಕರ್‌, ಜ್ಯೋತಿ ಬಾ ಪುಲೆ, ಪೆರಿಯಾರ್, ನಾರಾಯಣಗುರುಗಳಂತಹ ಆದರ್ಶಪ್ರಾಯರಾದವರ ಜೀವನ ಆಧಾರಿತ ನಾಟಕಗಳನ್ನು ರಂಗರೂಪಕ್ಕೆ ತಂದು ಸಮುದಾಯಗಳತ್ತ ತೆಗೆದುಕೊಂಡು ಹೋಗುವ ಅನಿವಾರ್ಯತೆ ಈ ನಾಡಿಗಿದೆ. ಅಂಬೇಡ್ಕರ್‌ ಅವರು ʼತಳಸಮುದಾಯಗಳಿಗೆ ಮಾತ್ರವಲ್ಲದೆ ಎಲ್ಲ ಸಮುದಾಯಗಳಿಗೂ ಅಕ್ಷರದ ಮೂಲಕ ವಿಮೋಚನೆ ಸಾಧ್ಯ’ ಎಂಬುದನ್ನು ತಿಳಿಸಿಕೊಟ್ಟರು. ಇವರ ಬದುಕು, ಬರಹ ಮತ್ತು ಭಾಷಣಗಳಲ್ಲಿನ ಚಿಂತನಾಧಾರೆಗಳನ್ನು ಕನ್ನಡ ನಾಟಕ ಮತ್ತು ರಂಗಭೂಮಿಗೆ ಅಳವಡಿಕೊಳ್ಳುವುದರ ತುರ್ತು
APA, Harvard, Vancouver, ISO, and other styles
10

ವಸುಂಧರಿ, ಎನ್. "ವಚನ ಚಳುವಳಿ ಮತ್ತು ಸಮಾಜ ಪರಿವರ್ತನೆ". AKSHARASURYA JOURNAL 06, № 05 (2025): 233 to 240. https://doi.org/10.5281/zenodo.15504705.

Full text
Abstract:
ಆತ್ಮಾನುಭಾವದ ಚೈತನ್ಯ ಮತ್ತು ಸಮಾಜಕಲ್ಯಾಣದ ತೀವ್ರಕಾಳಜಿಯೊಂದಿಗೆ ಮೂಢನಂಬಿಕೆ, ಕಂದಾಚಾರಗಳಿಂದ ಜಡವಾಗಿದ್ದ ಸಮಾಜವನ್ನು ಪರಿವರ್ತಿಸುವ ಸಂಕಲ್ಪದಿಂದ ಅವರು ಒಂದು ವಿನೂತನ ಚಳುವಳಿಯನ್ನೇ ಪ್ರಾರಂಭಿಸಿದರು. ಮೇಲು-ಕೀಳು ಎಂಬ ವರ್ಣ ಅಸಮಾನತೆ;ಬಡವ ಬಲ್ಲಿದ ಎಂಬ ವರ್ಗ ತಾರತಮ್ಯ;ಹೆಣ್ಣು-ಗಂಡು ಎಂಬ ಲಿಂಗಭೇದ ಇವೆಲ್ಲ ತರತಮ ವ್ಯವಸ್ಥೆಯನ್ನು ಹೋಗಲಾಡಿಸಿ ಸಮಾನತೆಯ ಆಧಾರದ ಮೇಲೆ ಹೊಸ ಸಮಾಜವನ್ನು ಅವರು ಕಟ್ಟಬಯಸಿದರು. ಇದಕ್ಕಾಗಿ ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪನೆಯಾಯಿತು. ಬಸವಣ್ಣ ಸಂಚಾಲಕನಾಗಿ ಮುಂದೆ ನಿಂತ. ಮಹಾನುಭಾವಿ ಅಲ್ಲಮಪ್ರಭುವಿನ ಮಾರ್ಗದರ್ಶನ ದೊರೆಯಿತು. ಚೆನ್ನಬಸವ, ಅಕ್ಕನಾಗಮ್ಮ, ಹಡಪದ ಅಪ್ಪಣ್ಣ, ಮಡಿವಾಳ ಮಾಚಯ್ಯ ಮೊದಲಾದ ನೂರಾರು ವಚನಕಾರರು ಕಾರ್ಯಕರ್ತರಾಗಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡರು. ಬಸವಾದಿ ಶರಣರು ಕಲ್ಯಾಣದಲ್ಲಿ ಹೊ
APA, Harvard, Vancouver, ISO, and other styles
11

ಗೌಡ., ಎಂ.ಟಿ. "ವಚನ ಸಾಹಿತ್ಯ: ಮಾನವ ಮೌಲ್ಯಗಳ ಪ್ರತಿಬಿಂಬ". AKSHARASURYA JOURNAL 06, № 04 (2025): 90 to 96. https://doi.org/10.5281/zenodo.15490961.

Full text
Abstract:
ವಚನವೆಂಬುದು ಕೇವಲ ಸಾಹಿತ್ಯ ಪ್ರಕಾರವಲ್ಲ ಅದು ಒಂದು ಚಳುವಳಿ ಕೂಡ ಆಗಿದೆ. ಅದನ್ನು ಸಮಾಜೋ ಧಾಶ್ರಮಿಕ ಚಳುವಳಿ, ಕಾಯಕ ಜೀವಿಗಳ, ಚಳುವಳಿ ಪರಿಪೂರ್ಣ ಚಳುವಳಿ ಎಂದು ಬಗೆಬಗೆಯಾಗಿ ಕನ್ನಡ ವಿದ್ವಾಂಸರು ಅದರ ಸ್ವರೂಪ ಮಹಿಮೆಯನ್ನು ಬಣ್ಣಿಸಿದ್ದಾರೆ. ವಚನ ಸಾಹಿತ್ಯ ಇಡೀ ಭಾರತೀಯ ಭಾಷೆಗಳಲ್ಲಿಯೇ ವಿಶಿಷ್ಟವಾದುದು. ಕನ್ನಡ ಸಾಹಿತ್ಯವು ವಿಶ್ವ ಸಾಹಿತ್ಯಕ್ಕೆ ನೀಡಿದ ಕೊಡುಗೆ ಆದಾಗಿದೆ ಎಂದರೂ ನಡೆಯುತ್ತದೆ. ಮಾನವ ಕುಲದ ಸರ್ವಾಂಗೀಣ ವಿಕಾಸಕ್ಕಾಗಿ ಶ್ರಮಿಸಿದ ಮಹಾತ್ಮರಾದ ಶಿವಶರಣರು ಅನನ್ಯ ಕೊಡುಗೆ ನೀಡಿರುವ ಜಗತ್ತಿನ ಅಪರೂಪದ ಸಾಹಿತ್ಯ ವಚನಗಳು. ವಚನಗಳು ಎಂದಾಕ್ಷಣ ನೆನಪಾಗುವುದೇ ಶಿವಶರಣರು. ಶರಣ ಪಂಥಕ್ಕೆ ಭಕ್ತಿಯ ಶಕ್ತಿಯೇ ಕೇಂದ್ರ ಬಿಂದು. ವಚನ ಸಾಹಿತ್ಯವು ಸವಿಸ್ತಾರವಾದ ಸಮುದ್ರದ ಆಳದಲ್ಲಿನ ಮುತ್ತು, ರತ್ನಗಳನ್ನು ಹೆಕ್ಕಿ ಅಳೆದು, ತೂಗಿ ಸ
APA, Harvard, Vancouver, ISO, and other styles
12

ಗಿರಿಯಪ್ಪ, ಎನ್. ಜಿ. "ಕುಲಕ್ಕೆ ತಿಲಕ ನಮ್ಮ ಮಾದರ ಚೆನ್ನಯ್ಯ". AKSHARASURYA 04, № 03 (2024): 109 to 116. https://doi.org/10.5281/zenodo.12672850.

Full text
Abstract:
ಮಾದರ ಚೆನ್ನಯ್ಯ 12ನೇ ಶತಮಾನಕ್ಕಿಂತಲೂ ಹಿಂದೆ ಜೀವಿಸಿದ್ದವನು. ಮಾದರ ಚೆನ್ನಯ್ಯನು ಹಲವಾರು ವಚನಗಳನ್ನು ರಚಿಸಿದ್ದಿರಬಹುದು ಆದರೆ ಚೆನ್ನಯ್ಯನು ಬರೆದ ವಚನಗಳಲ್ಲಿ ಸದ್ಯಕ್ಕೆ 10 ವಚನಗಳು ದೊರೆತಿರುತ್ತವೆ. “ಕೈಯುಳಿ ಕತ್ತಿ ಅಡಿಗೂಟಕ್ಕಡಿಯಾಗಬೇಡ” ಎಂಬುದು ಚೆನ್ನಯ್ಯನ ವಚನಗಳ ಅಂಕಿತವಾಗಿದೆ. ಚೆನ್ನಯ್ಯನು ಚೋಳ ರಾಜನ ಆಸ್ಥಾನದಲ್ಲಿ ಲಾಯದ ಕುದುರೆಗಳಿಗೆ ಹುಲ್ಲು ತರುವ ಕೆಲಸ ಮಾಡುತ್ತಿದ್ದನು. ಚೆನ್ನಯ್ಯ ಗುಪ್ತ ಶಿವಭಕ್ತನಾಗಿದ್ದನು. ಅದೇ ರೀತಿ ಚೋಳರಾಜನು ಮಹಾಶಿವ ಭಕ್ತನಾಗಿದ್ದನು. ಪ್ರತಿದಿನ ಚೋಳ ರಾಜನ ಮನೆಯಲ್ಲಿ ದಿವ್ಯವಾದ ಅನ್ನವನ್ನು ಶಿವನುಂಡು ತೃಪ್ತ ನಾಗುವವರೆಗೂ ಕಾದಿರುತ್ತಿದ್ದನು. ಒಮ್ಮೆ ಚೋಳನ ಮನೆಗೆ ಶಿವನು ಊಟ ಸವಿಯಲು ಬಂದಿರುವುದಿಲ್ಲ. ಅಂದು ಶಿವನು ಚೆನ್ನಯ್ಯನ ಮನೆಯಲ್ಲಿ ಅಂಬಲಿ ರುಚಿಸವಿದು ಸಂತೃಪ್ತನಾಗಿರುತ್
APA, Harvard, Vancouver, ISO, and other styles
13

ಶೀಲಾದೇವಿ, ಎಸ್. ಬಿರಾದಾರ. "ವೀರಾಂಗಿಣಿ ಅಕ್ಕಮಹಾದೇವಿ". AKSHARASURYA JOURNAL 04, № 06 (2024): 152 to 156. https://doi.org/10.5281/zenodo.13725661.

Full text
Abstract:
ಹಳೆಗನ್ನಡ ಸಾಹಿತ್ಯವು ರಾಜ್ಯಾಶ್ರಯದಲ್ಲಿಯೇ ಪಂಡಿತ ಪಾಮರರಿಗೆ ಮಾತ್ರ ಸಿಮಿತವಾಗಿತ್ತು. ಹನ್ನೆರಡನೆ ಶತಮಾನದಲ್ಲಿ ವಚನ ಸಾಹಿತ್ಯಯೂ ತೀರಾ ಸರಳ ಸಹಜವಾಗಿ ತಾವು ಬೋದಿಸುವುದು ಸಾಮಾನ್ಯನಿಗೂ ತಲುಪಬೇಕು ಎಂಬ ಆಶಯ ಹೊಂದಿದವರು. ಶಿವಶರಣರು ಶಿವಶರಣೆಯರ ಆಲೋಚನೆಗಳನ್ನು ಅನುಭವಗಳನ್ನು ವಿಚಾರಧಾರೆಗಳೆ ವಚನ. ಜನಸಾಮಾನ್ಯರ ಭಾಷೆಯಲ್ಲಿಯೆ ತಮ್ಮ ಭಾವನೆಗಳನ್ನು ಅನಿಸಿಕೆಗಳನ್ನು ತತ್ವಗಳನ್ನು ಹಾಗೂ ಅವರ ಆತ್ಮಾನುಭವಗಳೇ ವಚನರೂಪದಲ್ಲಿ ವ್ಯಕ್ತಪಡಿಸಿದ್ದು ವಚನ ಸಾಹಿತ್ಯ. ವಚನ ಸಾಹಿತ್ಯ ವಿಶ್ವಕ್ಕೆ ಕೊಡುಗೆಯಾಗಿ ನೀಡಿರುವುದು ಕನ್ನಡ ಸಾಹಿತ್ಯದ ಹೆಮ್ಮೆಯಾಗಿದೆ. ವಚನ ಸಾಹಿತ್ಯದಲ್ಲಿ ಕಾಣಿಸುವ ವಿಶಿಷ್ಟ ಪ್ರತಿಭೆಯ ಮಹಿಳೆ ಅಕ್ಕಮಹಾದೇವಿ. ಕನ್ನಡ ಸಾಹಿತ್ಯದ ಮೊದಲ ಕವಿಯತ್ರಿ ಮತ್ತು ವಚನಗಾರ್ತಿ, 12 ನೆಯ ಶತಮಾನದ ಪ್ರಪ್ರಥಮವಾಗಿ ಪುರುಷರಿಗೆ ಸಮಾನವಾಗಿ ನಿಂ
APA, Harvard, Vancouver, ISO, and other styles
14

ಮಾದಪ್ಪ, ಜಿ. "'ತಮಂಧದ ಕೇಡು' ಕಥೆಯಲ್ಲಿ ಚಿತ್ರಣಗೊಂಡಿರುವ ಸಾಮಾಜಿಕ ವ್ಯವಸ್ಥೆ". AKSHARASURYA JOURNAL 05, № 03 Special Issue (2024): 45 to 52. https://doi.org/10.5281/zenodo.14246486.

Full text
Abstract:
ಭಾರತೀಯ ಸಾಮಾಜಿಕ ವ್ಯವಸ್ಥೆಯು ಬಹುತ್ವದ ನೆಲೆಯಿಂದ ಕೂಡಿದೆ. ಶೋಷಣೆಗೊಳಗಾದವರ ನೋವು, ಆಕ್ರೋಶ, ಸಂವೇದನೆಗಳನ್ನು ಪ್ರತಿಭಟನೆ, ಹೋರಾಟದ ಮೂಲಕ ಅಭಿವ್ಯಕ್ತಿಸುವ ಬಂಡಾಯ ಸಾಹಿತ್ಯ ಪಂಥದ ಆರಂಭಿಕ ಕಥೆಗಳು ಸಿಟ್ಟು, ಅವಮಾನ, ಹತಾಶೆ, ಆಕ್ರೋಶಗಳನ್ನು ರೋಷಾವೇಶದ ಭಾಷೆಯಲ್ಲಿಯೇ ಹೊರಹಾಕಿದೆ. ಈ ಕಾಲಘಟ್ಟದಲ್ಲಿ ಕಂಡುಬರುವ ಅಮರೇಶ ನುಗಡೋಣಿ ತಮ್ಮ ಕಥೆಗಳಲ್ಲಿ ಸಾಮಾಜಿಕ ಕಳಕಳಿ, ರಾಜಕೀಯಪ್ರಜ್ಞೆ ಹಾಗೂ ಪ್ರತಿಭಟನೆಯ ಮೂಲಕ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದ್ದಾರೆ. ಹಾಗೂ ತಮ್ಮ ಕಥೆಗಳಲ್ಲಿ 12ನೇ ಶತಮಾನದ ಬಸವಣ್ಣನ ಕಾಯಕ ವೃತ್ತಿಯ ಸಮಸಮಾಜದ ಕನಸಿನ ಸಮಾಜವನ್ನು ಮರುನಿರ್ಮಾಣ ಮಾಡಲು ಪ್ರಯತ್ನಿಸಿದ್ದಾರೆ. ದೇವನೂರು ಮಹಾದೇವ ಅವರ ಕಥೆಗಳನ್ನು ನೆನಪಿಸುವ ಇವರ ಕಥೆಗಳು ಅಲ್ಲಿನ ಪಾತ್ರಗಳಂತೆ ತಾತ್ವಿಕವಾಗಿ ಪ್ರತಿಭಟಿಸುವುದಿಲ್ಲ; ಮೃದುಧೋರಣೆಯಲ್ಲಿ ಸಾತ್
APA, Harvard, Vancouver, ISO, and other styles
15

ಗಣೇಶ, (ಚಿಕ್ಕಮಗಳೂರು ಗಣೇಶ). "ಹಿಂದುಳಿದ ವರ್ಗಗಳ ಚಳವಳಿ: ಚಾರಿತ್ರಿಕ ಹಿನ್ನೆಲೆ, ಸ್ವರೂಪ ಹಾಗೂ ಮಹತ್ವ". AKSHARASURYA JOURNAL 03, № 04. SPECIAL ISSUE. (2024): 38 to 49. https://doi.org/10.5281/zenodo.10929675.

Full text
Abstract:
ಕನ್ನಡ ನೆಲದಲ್ಲಿ ಬಸವಣ್ಣನ ಸಾಂಸ್ಕೃತಿಕ ನಾಯಕತ್ವದಲ್ಲಿ ವಚನ ಸಾಹಿತ್ಯಾಭಿವ್ಯಕ್ತಿಯ ಮೂಲಕ ಜರುಗಿದ ಸಮಾನತೆಯ ಚಿಂತನೆಯ ಹೋರಾಟ ಚರಿತ್ರೆಯಲ್ಲಿ ಮಹತ್ವದ್ದಾಗಿದೆ. ಅದು ಸಂಭವಿಸಿದ ಕಾಲ 12ನೆಯ ಶತಮಾನ. ಅದರ ತರುವಾಯ 19ನೆಯ ಶತಮಾನದಲ್ಲಿ ‘ಬ್ರಾಹ್ಮಣ್ಯ ಆಡಳಿತಶಾಹಿ ಯಜಮಾನಿಕೆ’ ವಿರುದ್ಧ ಹಿಂದುಳಿದ ವರ್ಗಗಳನ್ನು ಜಾಗೃತಿಗೊಳಿಸಲು ಕೆಳಕಾಣಿಸಿದ ಹೋರಾಟಗಳು ಮಹತ್ವದ ಪಾತ್ರ ವಹಿಸಿದವು. ಮಹಾರಾಷ್ಟ್ರದ ಜೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿಗಳು ‘ಸತ್ಯಶೋಧಕ ಸಮಾಜ’ದ ಮುಖಾಂತರ, ಬ್ರಾಹ್ಮಣ್ಯ ಪ್ರಾಬಲ್ಯದ ವಿರೋಧ-ಶೂದ್ರ ದಲಿತರಿಗೆ ಸಮಾನತೆಯ ಹಕ್ಕು-ಮಹಿಳೆಯರ ಶಿಕ್ಷಣದ ಸಲುವಾಗಿ ಹಗಲಿರುಳು ಹೋರಾಡಿದರು. ಶಾಹು ಮಹಾರಾಜರು ತಮ್ಮ ಸಂಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ಬ್ರಾಹ್ಮಣೇತರರಿಗೆ ಅವಕಾಶ ನೀಡುವ ಉದ್ದೇಶದಿಂದ ಉದ
APA, Harvard, Vancouver, ISO, and other styles
16

ರಮೇಶ್. "ನಿರಂಜನರ ಬರವಣಿಗೆಯಲ್ಲಿ ಮಾರ್ಕ್ಸ್‌ವಾದ". AKSHARASURYA 06, № 02 (2025): 75 to 83. https://doi.org/10.5281/zenodo.15124060.

Full text
Abstract:
ನಿರಂಜನರು ಸಾಹಿತ್ಯವಲಯದಲ್ಲಿ ಉಂಟುಮಾಡಿದ ಸಾಮಾಜಿಕ ಹೋರಾಟ ಬಹಳ ಮುಖ್ಯವಾದುದು. ಸಾಹಿತ್ಯ ಮತ್ತು ಬದುಕನ್ನು ಏಕ ರೀತಿಯಲ್ಲಿ ಕಂಡುಕೊಂಡವರು. ಸಾಮಾಜಿಕ ಬದ್ಧತೆಯನ್ನು ಕೊನೆಯವರೆಗೂ ಉಳಿಸಿಕೊಂಡವರು. ಬಾಲ್ಯದಲ್ಲಿ ಗಾಂಧಿವಾದಕ್ಕೆ ಮನಸೋತು, ಅನಂತರ ಸಮಾಜವಾದದತ್ತ ಒಲವು ಬೆಳಸಿಕೊಂಡರು. ಹರೆಯದಲ್ಲಿ ಸಮತಾವಾದದ ಸಿದ್ದಾಂತಗಳಿಂದ ಪ್ರಭಾವಿತರಾಗಿ ಮಾರ್ಕ್ಸ್‌ವಾದಿಯಾಗಿ ಕಮ್ಯೂನಿಸ್ಟ್ ಪಕ್ಷದ ಸಕ್ರಿಯ ಸದಸ್ಯರಾಗಿ ದುಡಿದವರು ನಿರಂಜನರು. ʼಸ್ವಾತಂತ್ರ್ಯ ಚಳವಳಿ, ಏಕೀಕರಣ ಚಳವಳಿ, ಹಿಂದೂ ಸಾಂಸ್ಕೃತಿಕ ಪುನರುಜ್ಜೀವನ ಚಳವಳಿಗಳು ಸೊಕ್ಕೇರಿ ಒಟ್ಟಿಗೆ ಕ್ರಿಯಾನಿರತವಾಗಿದ್ದಾಗ, ಮಾರ್ಕ್ಸ್‌ವಾದದಿಂದ ಆಕರ್ಷಿತವಾಗಿ, ಅಖಿಲಭಾರತ ಚಳವಳಿಯ ಒಂದು ಭಾಗವಾಗಿ ಕನ್ನಡ ಪ್ರಗತಿಶೀಲ ಚಳವಳಿಯು ಹುಟ್ಟಿಕೊಂಡಿತು. ಶಿವರಾಯರು ಬೆಳೆಬೆಳೆಯುತ್ತಾ ಗಾಂಧೀ ಪ
APA, Harvard, Vancouver, ISO, and other styles
17

ರಾಗೌ, (ರಾಮೇಗೌಡ), та ಭೈರಪ್ಪ ಎಂ. "ಗಾದೆ". AKSHARASURYA JOURNAL 04, № 06 (2024): 01 to 34. https://doi.org/10.5281/zenodo.13724358.

Full text
Abstract:
ಸಮಚಿತ್ತತೆಯ ಶೋಧಕ-ಸಾಧಕರಾಗಿ ಡಾ.ರಾಗೌ (ರಾಮೇಗೌಡ)    ಡಾ.ರಾಗೌ(ರಾಮೇಗೌಡ) ಅವರು ಕನ್ನಡ ನವೋತ್ತರ ಯುಗದ ಪ್ರಮುಖ ಕವಿಯಾಗಿ, ವಿಮರ್ಶಕರಾಗಿ, ಸಂಶೋಧಕರಾಗಿ, ಶಾಸ್ತ್ರೀಯ ಮತ್ತು ಜಾನಪದ ವಿದ್ವಾಂಸರಾಗಿ ಹೊಮ್ಮಿದ ವಿಶಿಷ್ಟ ಲೇಖಕರು. ಕಾವ್ಯ, ವಿಮರ್ಶೆ, ಜಾನಪದ ಅಧ್ಯಯನ, ಚಾರಿತ್ರಿಕ ಮತ್ತು ಸಾಂಸ್ಕೃತಿಕ ಸಂಶೋಧನೆ ಮೊದಲಾದ ಕ್ಷೇತ್ರಗಳಲ್ಲಿ ರಾಗೌ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯಕಯಾನವನ್ನು ವಿಕಾಸಪಡಿಸಿಕೊಂಡವರು. ಸದಾ ಸಂಕ್ರಮಣಶೀಲವಾದ ಆಧುನಿಕ ಕನ್ನಡ ಸಾಹಿತ್ಯದ ಬಾನಂಗಳವನ್ನು ತನ್ನದೇ ನೆಲೆಯಲ್ಲಿ ನಿಂತು ನಿಟ್ಟಿಸುತ್ತಾ ತಮ್ಮ ಸಾಧನೆಯ ಸಾಮರ್ಥ್ಯವನ್ನು ತೋಡಿಸಿಕೊಂಡವರು ರಾಗೌ, ತಮ್ಮ ಅವಲೋಕನದಲ್ಲೂ ಕ್ರಿಯಾಶೀಲತೆಯಲ್ಲೂ ಇಂತಹುದೊಂದು ದೂರವನ್ನು, ನಿರ್ಲಿಪ್ತತೆಯನ್ನು ಅಂತರ್ಗತಗೊಳಿಸಿಕೊಂಡು ಬರೆಯುತ್ತಾ ಬಂದುದರಿಂದ ಅವರು ಒಂದು
APA, Harvard, Vancouver, ISO, and other styles
18

ಭಟ್, ಮೈತ್ರಿ. "ಬಸವಣ್ಣನವರ ವಚನಗಳೂ... ಮನೋವಿಜ್ಞಾನವೂ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 1 березня 2024, 17–21. http://dx.doi.org/10.59176/kjksp.v3i1.2333.

Full text
Abstract:
ಕನ್ನಡದ ಅನನ್ಯ ಸಾಹಿತ್ಯ ಪ್ರಕಾರವಾದ ವಚನವು ಅಂತರಂಗದ ಉತ್ಕಟ ಅವಸ್ಥೆಯಿಂದ ಹೊರಬಂದ ಶಬ್ದರೂಪವಾಗಿದ್ದು, ಅತ್ತ ಪದ್ಯವೂ ಅಲ್ಲದ ಇತ್ತ ಗದ್ಯವೂ ಅಲ್ಲದ ಈ ವಿಶಿಷ್ಟ ಲಯಬದ್ಧ ಗೀತೆಯು ಗಾತ್ರದಲ್ಲಿ ಕಿರಿದಾದರೂ ಜೀವ ವಿಕಾಸದ ಹಾದಿಯಲ್ಲಿ ಹಿರಿದಾದುದೇ ಆಗಿದೆ. ಇಂತಹ ವಚನಗಳು ಅಂತರಂಗದ ನಿವೇದನೆಗಳಾಗಿ, ಆತ್ಮಗತ ಸಂಭಾಷಣೆಗಳಾಗಿ ಹೊರಹೊಮ್ಮಿವೆ. ವಿವಿಧ ಕಾಯಕಗಳಲ್ಲಿ ತೊಡಗಿದ್ದ ನಾನಾ ಜಾತಿಮತಗಳ ಜನರು ತಮ್ಮ ಅಂತಃಪ್ರೇರಣೆಯ ತುಡಿತಕ್ಕೆ ಸ್ಪಂದಿಸಿ, ತಮ್ಮ ಮನದಾಳದ ಚಿಂತನೆಗಳನ್ನು ಜನಮಾನಸಕ್ಕೆ ತಲುಪಿಸಲು ಆಡುನುಡಿಯನ್ನು ಬಳಸಿಕೊಂಡರು. ಶುದ್ಧ ದೇಸೀ ಮನೋಭೂಮಿಕೆಯಲ್ಲಿ ಹುಟ್ಟಿದ ಇವು ಗದ್ಯದ ನಿರರ್ಗಳತೆಯಿಲ್ಲದಿದ್ದರೂ ಸರಳತೆಯಿಂದ, ಪದ್ಯದ ಕ್ರಮಬದ್ಧ ಛಂದೋಗತಿ ಇಲ್ಲದಿದ್ದರೂ ಅದರ ಲಯದಿಂದ ಕೂಡಿ ಸ್ವಚ್ಛಂದ ಲಯದಲ್ಲಿ ಮಿಂದೇಳುತ್ತವೆ. ಬಿಡಿಯಾಗಿ ನೋಡಿದರ
APA, Harvard, Vancouver, ISO, and other styles
We offer discounts on all premium plans for authors whose works are included in thematic literature selections. Contact us to get a unique promo code!