To see the other types of publications on this topic, follow the link: ಬಿ.

Journal articles on the topic 'ಬಿ'

Create a spot-on reference in APA, MLA, Chicago, Harvard, and other styles

Select a source type:

Consult the top 19 journal articles for your research on the topic 'ಬಿ.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Browse journal articles on a wide variety of disciplines and organise your bibliography correctly.

1

ಚಂದ್ರಾವತಿ, ಶೆಟ್ಟಿ. "ಡಾ. ಬಿ.ಆರ್. ಅಂಬೇಡ್ಕರ್‌ ಮತ್ತು ಮಹಿಳಾ ಸಬಲೀಕರಣ". AKSHARASURYA JOURNAL 06, № 05 (2025): 25 to 29. https://doi.org/10.5281/zenodo.15504175.

Full text
Abstract:
ʼಸಂವಿಧಾನ ಶಿಲ್ಪಿ’ ʼಬಾಬಾ ಸಾಹೇಬ್’ ಎಂದು ಜನಪ್ರಿಯರಾಗಿರುವ ಡಾ. ಬಿ. ಆರ್. ಅಂಬೇಡ್ಕರ್‌ರು ಭಾರತ ದೇಶ ಕಂಡ ಬಹುದೊಡ್ಡ ಸಮಾಜ ಸುಧಾರಕ ನ್ಯಾಯಶಾಸ್ತ್ರಜ್ಞರೂ ಅರ್ಥಶಾಸ್ತ್ರಜ್ಞರೂ ಆಗಿರುವ ಬಿ. ಆರ್. ಅಂಬೇಡ್ಕರ್‌ ಅವರು ಮಾಹಾನ್ ಚಿಂತಕರು ಹೌದು. ಶ್ರೇಷ್ಠ ರಾಜಕೀಯ ನಾಯಕರಾಗಿರುವ ಇವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಸಮಾಜದ ಕಲ್ಯಾಣಕ್ಕಾಗಿ ಮಹಿಳೆಯರು ಮತ್ತು ದೀನದಲಿತ ವರ್ಗಕ್ಕಾಗಿ ಕೆಲಸ ಮಾಡಿದರು. ಎಲ್ಲಾ ಸಮಾಜಕ್ಕೂ ದಾರಿದೀಪರಾಗಿರುವ ಬಿ. ಆರ್. ಅಂಬೇಡ್ಕರ್‌ ಅವರು ಕೇವಲ ಒಂದು ವರ್ಗಕ್ಕಾಗಿ ಹೋರಾಟ ಮಾಡಿದ್ದಲ್ಲ. ಕಾರ್ಮಿಕರು, ರೈತರು ಮತ್ತು ಮಹಿಳೆಯರನ್ನು ಒಳಗೊಂಡಿರುವ ʼಅಸಮಾನ ಸಾಮಾಜಿಕ ವ್ಯವಸ್ಥೆ ಮತ್ತು ತುಳಿತಕ್ಕೊಳಗಾದ ವರ್ಗದ ಮಾನವ ಹಕ್ಕುಗಳ ಹೋರಾಟಗಾರರಾಗಿ ಹೋರಾಡಿದವರು ಜಡವಾದ ಸಮಾಜವನ್ನು ಪ
APA, Harvard, Vancouver, ISO, and other styles
2

ಎಲ್ಲಪ್ಪ, ಜಿ. "ಭಾರತದ ಪ್ರಜಾಪ್ರಭುತ್ವದ ಪಿತಾಮಹರಾಗಿ ಡಾ. ಬಿ. ಆರ್. ಅಂಬೇಡ್ಕರ್‌". AKSHARASURYA JOURNAL 06, № 05 (2025): 36 to 45. https://doi.org/10.5281/zenodo.15504196.

Full text
Abstract:
ವಿಸ್ತಾರವಾದ ದೇಶ, ವೈವಿಧ್ಯಮಯವಾದ ಸಂಸ್ಕೃತಿಗಳು, ಸಾವಿರಾರು ಭಾಷೆಗಳು, ಸಾವಿರಾರು ಜಾತಿಗಳು, ವಿಭಿನ್ನ ಮತಗಳು ಈ ಮಣ್ಣಿನಲ್ಲಿ ಜೀವಿಸುತ್ತಿವೆ. ಈ ಎಲ್ಲವುಗಳಿಗೆ ಜೀವ ಕೊಡುವ ತತ್ವ ಯಾವುದು? ಮತ್ತು ಇವುಗಳನ್ನು ಬೆಸೆಯುವ ಸೂತ್ರ ಯಾವುದು? ಎಂಬ ಆಲೋಚನೆಗಳ ಬೆನ್ನ ಹತ್ತಿದಾಗ ಸಿಗುವ ಪೂರಕ ಶಕ್ತಿಗಳ ಬಗ್ಗೆ ಅಧ್ಯಯನಕ್ಕೆ ಪ್ರಜಾಪ್ರಭುತ್ವವೊಂದು ಮುಖ್ಯವಾಗಿ ಮುನ್ನೆಲೆಗೆ ಬರುತ್ತದೆ. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ಇದು ಬೆಳೆದು ಬಂದ ಪರಂಪರೆ, ಅದು ಗಟ್ಟಿಗೊಂಡ ಹಿನ್ನೆಲೆಗಳು ಆಸಕ್ತಿದಾಯಕಗಳಾಗಿವೆ. ಬಾಬಾ ಸಾಹೇಬರು ಪ್ರಜಾಪ್ರಭುತ್ವವನ್ನು ಭಾರತೀಯ ಮಣ್ಣಿನಲ್ಲಿ ಕೃಷಿ ಮಾಡಿದ ಬಗ್ಗೆ ಗಮನಾರ್ಹವಾದದ್ದು. ಎಲ್ಲಾ ಜನರು ಬದುಕಲಿಕ್ಕೆ ಬೇಕಾದ ಜೀವನ ವಿಧಾನ ಮತ್ತು ಆಡಳಿತ ಕ್ರಮವಾಗಿಸುವಲ್ಲಿ ಸಶಕ್ತವಾದ ಸೂತ್ರವೊಂದನ್ನು ಪ
APA, Harvard, Vancouver, ISO, and other styles
3

ಮಂಜುಳಾಕ್ಷಿ, ಎಲ್. "ಮಹಿಳೆ ಸಮಾನತೆ ಮತ್ತು ಡಾ. ಬಿ. ಆರ್. ಅಂಬೇಡ್ಕರ್‌". AKSHARASURYA JOURNAL 06, № 05 (2025): 72 to 83. https://doi.org/10.5281/zenodo.15504265.

Full text
Abstract:
ಕಾಲಾಂತರದಿಂದಲೂ ಮಹಿಳೆ ಸಮಾಜದಲ್ಲಿ ತನ್ನ ಅಸ್ವತ್ವಕ್ಕಾಗಿ ಒಂದಲ್ಲ ಒಂದು ರೀತಿಯಲ್ಲಿ ಧ್ವನಿ ಎತ್ತುತ್ತಲೆ ಬಂದಿದ್ದಾಳೆ. ಇದನ್ನು ನಾವು ಜನಪದ ಹೆಣ್ಣು ಅದರ ಪ್ರಕಾರವಾದ ತ್ರಿಪದಿಯಲ್ಲಿ ತನ್ನ ನೋವನ್ನು ಮತ್ತು ಸಮಾಜದ ಕಟ್ಟುಪಾಡು ಕಂದಾಚಾರಗಳನ್ನು ಮೌನವಾಗಿಯೇ ವಿರೋಧಿಸುತ್ತಾ ಬಂದಿದ್ದಾಳೆ. ಸಾಹಿತ್ಯದಲ್ಲಿ ಅವಳು ತಾಯಿಯಾಗಿ ಅಕ್ಕ-ತಂಗಿ, ನಾದಿನಿ, ಹೆಂಡತಿ, ಅತ್ತೆ ಹೀಗೆ ಅನೇಕ ಪಾತ್ರಗಳಲ್ಲಿ ಪುರುಷನೊಂದಿಗೆ ಜೀವಿಸುತ್ತಾ ಮಾನ್ಯತೆ ಪಡೆದಿದ್ದು ಅವನಿಂದ ದೇವತೆಯಾಗಿ, ಪ್ರಿಯೆಯಾಗಿ, ಕುಟುಂಬದ ಕಣ್ಣಾಗಿ, ಅವನ ಅರ್ಧಾಂಗಿಯಾಗಿದ್ದರೂ ಕೂಡ ಸಮಾಜದಲ್ಲಿ ಅವಳಿಗೆ ಅಂದಲ್ಲ ಇಂದಿಗೂ ಎರಡನೇ ದರ್ಜೆಯ ಸ್ಥಾನವಿದೆ ಅವಳನ್ನು ಪುರುಷ ಸಮಾಜ ತನ್ನ ಬಂಧಿಯಲ್ಲೇ ಬಂಧಿಸಿ ಅವಳ ಮೇಲೆ ಕಟ್ಟುಪಾಡು, ಕಂದಾಚಾರ ಪದ್ಧತಿಗಳನ್ನು ಹೇರುತ್ತಾ ಸಮಾಜದಲ್ಲಿ ಅವಳಿ ಯಾವುದೇ ಸ
APA, Harvard, Vancouver, ISO, and other styles
4

ರಂಗಸ್ವಾಮಿ та ಧರ್ಮೇಗೌಡ ಎಚ್.ಎಂ. "ಡಾ. ಬಿ.ಆರ್. ಅಂಬೇಡ್ಕರ್‌ ಅವರ ರಾಷ್ಟ್ರೀಯತೆಯ ಪರಿಕಲ್ಪನೆ: ಒಂದು ವಿಶ್ಲೇಷಣಾತ್ಮಕ ಅಧ್ಯಯನ". AKSHARASURYA JOURNAL 06, № 05 (2025): 157 to 168. https://doi.org/10.5281/zenodo.15504498.

Full text
Abstract:
ವೇದಗಳ ಕಾಲದಿಂದಲೂ ಉಳಿಸಿಕೊಂಡು ಬಂದಿದ್ದ ಹಿಂದೂ ಸಾಮಾಜಿಕ ವ್ಯವಸ್ಥೆ ತೀವ್ರವಾದ ಆಘಾತಕ್ಕೆ ಒಳಗಾಗಿದ್ದು ಭಾರತ ವಸಾಹತು ಯಾಜಮಾನ್ಯಕ್ಕೆ ಒಳಪಟ್ಟ ಮೇಲೆ ತೀವ್ರವಾದ ಸಾಮಾಜಿಕ ಬದಲಾವಣೆಗಳನ್ನು ಕಂಡಿತು. ವಸಾಹತು ಯಾಜಮಾನ್ಯ ಹೊತ್ತುತಂದ ಅನ್ಯಧರ್ಮ, ಅನ್ಯ ಸಂಸ್ಕೃತಿಗಳಿಗೆ ದೇಸಿ ಸಂಸ್ಕೃತಿಗಳು ಹಲವು ಬಗೆಯಲ್ಲಿ ಪ್ರತಿಕ್ರಿಯಿಸಿದವು. ದೇಸಿ ಸಮಾಜದ ಪಾರಂಪರಿಕ ಹಿಂಸೆಗಳನ್ನು ಅನುಭವಿಸಿಕೊಂಡು ಬಂದಿದ್ದ ತಳಸಮುದಾಯಗಳಿಗೆ ವಸಾಹತೀಕರಣ ಬಿಡುಗಡೆಯ ಹಾದಿಯಾಗಿ ಕಂಡುಬಂದಿತು. ಅಂಬೇಡ್ಕರ್‌ ಅವರು ವಸಾಹತು ಮೂಲದ ಆಧುನಿಕ ಶಿಕ್ಷಣ, ಇಂಗ್ಲಿಷ್ ಭಾಷೆ, ಪ್ರಜಾಪ್ರಭುತ್ವವಾದಿ, ರಾಜಕೀಯ ವ್ಯವಸ್ಥೆಯ ಸ್ಥಾಪನೆ ಮಾಡುವುದರ ಮೂಲಕ ದಲಿತರ ಬಿಡುಗಡೆಯ ಹಾದಿಯನ್ನು ಕಂಡುಕೊಂಡರು. ಅಂಬೇಡ್ಕರ್‌ ಅವರ ಈ ಬಗೆಯ ಹೋರಾಟ ಮತ್ತು ಚಿಂತನೆಗಳಿಗೆ ಅನೇಕ ಸಮಕಾಲೀನ ಚಿಂ
APA, Harvard, Vancouver, ISO, and other styles
5

ನಾಗೇಶ್, ಎನ್. "೨೧ನೆಯ ಶತಮಾನದ ಕನ್ನಡ ನಾಟಕ ಮತ್ತು ರಂಗಭೂಮಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್‌". AKSHARASURYA JOURNAL 06, № 05 (2025): 114 to 120. https://doi.org/10.5281/zenodo.15504329.

Full text
Abstract:
ರಂಗಭೂಮಿಯೊಂದು ಜಾಗತೀಕ ಕಲಾಭಿವ್ಯಕ್ತಿ ಮಾಧ್ಯಮವಾಗಿದೆ, ನಾಟಕವು ಜಗತ್ತಿನ ಸಾಂಸ್ಕೃತಿಕ ಸೃಜನಶೀಲತೆಯ ಅಸ್ಮಿತೆಯ ಭಾಗವಾಗಿ ಲೋಕದರ್ಶನವನ್ನು ಒಡಮೂಡಿಸುವಲ್ಲಿ ಪ್ರಮುಖ ಸಾಹಿತ್ಯ ಪ್ರಕಾರವಾಗಿದೆ. ಶ್ರೇಷ್ಠ ದಾರ್ಶನಿಕರಾದ ಬುದ್ಧ, ಬಸವಣ್ಣ, ಡಾ. ಬಿ. ಆರ್. ಅಂಬೇಡ್ಕರ್‌, ಜ್ಯೋತಿ ಬಾ ಪುಲೆ, ಪೆರಿಯಾರ್, ನಾರಾಯಣಗುರುಗಳಂತಹ ಆದರ್ಶಪ್ರಾಯರಾದವರ ಜೀವನ ಆಧಾರಿತ ನಾಟಕಗಳನ್ನು ರಂಗರೂಪಕ್ಕೆ ತಂದು ಸಮುದಾಯಗಳತ್ತ ತೆಗೆದುಕೊಂಡು ಹೋಗುವ ಅನಿವಾರ್ಯತೆ ಈ ನಾಡಿಗಿದೆ. ಅಂಬೇಡ್ಕರ್‌ ಅವರು ʼತಳಸಮುದಾಯಗಳಿಗೆ ಮಾತ್ರವಲ್ಲದೆ ಎಲ್ಲ ಸಮುದಾಯಗಳಿಗೂ ಅಕ್ಷರದ ಮೂಲಕ ವಿಮೋಚನೆ ಸಾಧ್ಯ’ ಎಂಬುದನ್ನು ತಿಳಿಸಿಕೊಟ್ಟರು. ಇವರ ಬದುಕು, ಬರಹ ಮತ್ತು ಭಾಷಣಗಳಲ್ಲಿನ ಚಿಂತನಾಧಾರೆಗಳನ್ನು ಕನ್ನಡ ನಾಟಕ ಮತ್ತು ರಂಗಭೂಮಿಗೆ ಅಳವಡಿಕೊಳ್ಳುವುದರ ತುರ್ತು
APA, Harvard, Vancouver, ISO, and other styles
6

ಡಾ., ಸ್ವಾಮಿ. "ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಯೋಜನೆಗಳ ಪರಿಚಯ". International Journal of Advance Research in Multidisciplinary 2, № 3 (2024): 258–61. https://doi.org/10.5281/zenodo.13292327.

Full text
Abstract:
ಭಾರತದ ಪ್ರತಿಯೊಂದು ರಾಜ್ಯಗಳು ಸಹ ವಿವಿಧ ಹೆಸರಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿಗಾಗಿ ಪ್ರತ್ಯೇಕವಾದ ನಿಗಮವನ್ನು ಸ್ಥಾಪಿಸಿವೆ. ಅಂಥ ನಿಗಮಗಳು ರಾಜ್ಯ ಸರ್ಕಾರಗಳ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟಿದ್ದು, ಕೇಂದ್ರ ಸರ್ಕಾರದ ಯೋಜನೆಗಳನ್ನು ಸಹ ಅಳವಡಿಸಿಕೊಂಡು ಅವುಗಳ ಅನುಷ್ಠಾನಕ್ಕಾಗಿ ಕಾರ್ಯಯೋಜನೆಗಳನ್ನು ರೂಪಿಸಿಕೊಂಡು ಬರುತ್ತಿವೆ. ಕರ್ನಾಟಕ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಯ ಜನರ ಸರ್ವತೋಮುಖ ಅಭಿವೃದ್ಧಿಗೆÀ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮವನ್ನು ೨೦-೦೩-೧೯೭೫ರಂದು ಸ್ಥಾಪಿಸಲಾಗಿದೆ. ದಿನಾಂಕ ೧೬-೦೮-೨೦೦೫ ರಂದು ‘ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ’ ಎಂದು ಮರುನಾಮಕರಣ ಮಾಡಲ್ಪಟ್ಟಿದೆ. ಸಮಾಜ ಕಲ್ಯಾಣ ಇಲಾಖೆಯ ಅಂಗ ಸಂಸ್ಥೆಯಾಗಿ ಡಾ.ಬಿ.ಆರ್.ಅಂಬೇ
APA, Harvard, Vancouver, ISO, and other styles
7

ರಾಜಕುಮಾರ, ಎಂ. ಸಿಂಧೆ. "ಡಾ. ಬಿ. ಆರ್. ಅಂಬೇಡ್ಕರ್‌ ಅವರ ಬದುಕಿನಿಂದ ಕಲಿಯಬೇಕಾದ ಸಂದೇಶ". AKSHARASURYA JOURNAL 06, № 01 (2025): 12 to 21. https://doi.org/10.5281/zenodo.14961338.

Full text
Abstract:
ಕಲಿಕೆ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿದೆ. ಅದು ನಿತ್ಯ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಹುಟ್ಟಿನಿಂದ ಸಾವಿನವರೆಗೂ ಜೀವನುದ್ದಕ್ಕೂ ವಿವಿಧ ಜ್ಞಾನಶಾಖೆಗಳ ಮೂಲಕ ಜೀವನಾನುಭವ ಪಡೆಯುತ್ತ, ಹಳೆ ಬೇರು ಹೊಸ ಚಿಗುರು ಎಂಬಂತೆ ಗುರುಹಿರಿಯರ ನಡೆ-ನುಡಿ, ಆಚಾರ ವಿಚಾರಗಳನ್ನು ಅನುಲಕ್ಷಿಸುತ್ತ, ಭವಿಷ್ಯದ ಬದುಕಿನ ಅಗತ್ಯತೆಗಳನ್ನು ಕಲ್ಪಿಸಿಕೊಳ್ಳುತ್ತ ಹಳೆಯ ಮತ್ತು ಹೊಸದರ ಸಮ್ಮಿಶ್ರಣದೊಂದಿಗೆ ಸುಂದರ ಬದುಕು ಕಟ್ಟಿಕೊಳ್ಳಲು ‘ಕಲಿಕೆ’ ಎಂಬ ಪ್ರಕ್ರಿಯೆ ನಡೆಯುತ್ತಲೇ ಸಾಗುತ್ತದೆ.‘ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ’ ಯಿಂದ ಆರಂಭವಾಗಿ ಕಲಿಕೆ ಮುಂದುವರೆಯುತ್ತದೆ. ‘ದೇಶ ಸುತ್ತು ಇಲ್ಲವೇ ಕೋಶ ಓದು’ ಎಂಬಂತೆ ಸಾಹಿತ್ಯ, ಕಾವ್ಯ, ಪುರಾಣ, ಶಾಸ್ತ್ರ, ಕಲೆ ಹೀಗೆ ನೂರಾರು ಪ್ರಕಾರದ ಗ್ರಂಥಗಳ ಅಧ್ಯ
APA, Harvard, Vancouver, ISO, and other styles
8

ಅರುಣ್‌ಕುಮಾರ್, ಬಿ., та ರಾಮಕೃಷ್ಣಯ್ಯ ಕೆ. "ಆಧುನಿಕ ಕನ್ನಡ ರಂಗಭೂಮಿಯಲ್ಲಿ ರಂಗನಿರ್ದೇಶಕರಾಗಿ ಬಿ. ವಿ. ಕಾರಂತರ ಕೊಡುಗೆ". AKSHARASURYA JOURNAL 06, № 03 (2025): 01 to 10. https://doi.org/10.5281/zenodo.15343656.

Full text
Abstract:
ಆಧುನಿಕ ಕನ್ನಡ ರಂಗಭೂಮಿಯ ನಿರ್ದೇಶಕರಾಗಿರುವ ಬಿ. ವಿ. ಕಾರಂತ ಅವರು ಬಾಲ್ಯದಲ್ಲಿ ಬೆಳೆದದ್ದು ಕನ್ನಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಅವರ ಕಣ್ಣುಗಳು, ಮತ್ತು ಕಿವಿಗಳು ಯಕ್ಷಗಾನ, ಜಾತ್ರೆ, ಕೋಲ, ರಥೋತ್ಸವ, ಪದ-ದಾನಗಳು ಮತ್ತು ವಿವಿಧ ಸಂಗೀತ ವಾದ್ಯಗಳ ಧ್ವನಿ ವಿನ್ಯಾಸಗಳಿಗೆ ತೆರೆದುಕೊಂಡವು. ಇವರು ಪ್ರಸಿದ್ಧ ಗುಬ್ಬಿ ವೀರಣ್ಣ ಕಂಪನಿಯವರು ಪುತ್ತೂರಿನಲ್ಲಿ ಬೀಡುಬಿಟ್ಟಾಗ ಅಲ್ಲಿ ‘ಕೃಷ್ಣಲೀಲಾ’ ನಾಟಕವನ್ನು ನೋಡಿ ನಾಟಕದ ಕಡೆಗೆ ಆಸಕ್ತರಾದರು. ನಂತರ ಅವರು ಗುಬ್ಬಿ ಕಂಪನಿಗೆ ಸೇರಿಕೊಂಡರು. ಅವರು ಡಾ. ರಾಜಕುಮಾರರಂತಹ ಹಿರಿಯರ ನಟರ ಜೊತೆಗೆ ಅಭಿನಯವನ್ನು ಮಾಡಿದರು. ಗುಬ್ಬಿ ವೀರಣ್ಣನವರು ಕಾರಂತರನ್ನು ಸ್ನಾತಕೋತ್ತರ ಪದವಿ ಅಭ್ಯಾಸಕ್ಕೆ ಬನಾರಸ್ ವಿಶ್ವವಿದ್ಯಾಲಯಕ್ಕೆ ಕಳುಹಿಸಿದರು. ಅಲ್ಲಿ ಅವರು ಹಿಂದೂಸ್ತಾನಿ ಸಂಗೀತವನ್ನು ಕಲಿತ
APA, Harvard, Vancouver, ISO, and other styles
9

ನಾಗನಗೌಡ, ಗೌಡ್ರ. "ಡಾ. ಬಿ. ಆರ್. ಅಂಬೇಡ್ಕರ್‌‌ ಅವರ ಸಾಮಾಜಿಕ ನ್ಯಾಯದ ಚಿಂತನೆಗಳು". AKSHARASURYA JOURNAL 06, № 05 (2025): 94 to 104. https://doi.org/10.5281/zenodo.15504293.

Full text
Abstract:
ಡಾ. ಬಿ.ಆರ್. ಅಂಬೇಡ್ಕರ್‌ ಒಬ್ಬ ಭಾರತೀಯ ಶ್ರೇಷ್ಠ ರಾಜಕೀಯ ನಾಯಕ, ತತ್ವಜ್ಞಾನಿ, ಸಾಮಾಜಿಕ ಚಿಂತಕ, ಇತಿಹಾಸ ಸಂಶೋಧಕ, ಆರ್ಥಿಕ ತಜ್ಞ, ಶ್ರೇಷ್ಠ ಬರಹಗಾರ, ಮಹಿಳಾ ಸಮಾನತೆಯ ಹರಿಕಾರ, ದಲಿತರ ಸೂರ್ಯ, ಕಾರ್ಮಿಕ ಬಂಧು, ಕಾನೂನು ತಜ್ಞ, ಸಂವಿಧಾನ ಶಿಲ್ಪಿ ಎಂದೆಲ್ಲಾ ಪ್ರಖ್ಯಾತರಾಗಿದ್ದಾರೆ. ಭಾರತೀಯ ಸಮಾಜವು ಶತ ಶತಮಾನಗಳಿಂದಲೂ ವರ್ಣ, ಜಾತಿಯ ಹೆಸರಿನಲ್ಲಿ ವರ್ಗೀಕರಣಗೊಂಡು ಇಡೀ ಮಾನವ ಸಂಬಂಧಗಳ ಮೌಲ್ಯವನ್ನೇ ಹಾಳು ಮಾಡಿದೆ. ಸಮಾಜದ ಬಹುಪಾಲು ಜನಾಂಗ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬಲಿಷ್ಠವಾಗಿರುವ ಜಾತಿ, ವರ್ಗಗಳ ತುಳಿತಕ್ಕೆ ಸಿಲುಕಿ ನಲುಗಿವೆ. ಅಂಬೇಡ್ಕರ್‌‌ರವರು ಬಾಲ್ಯದಿಂದಲೂ ಕಂಡುಂಡ ಅಸ್ಪೃಶ್ಯತೆಯ ನೋವು ಅಪಮಾನಗಳು ಅವರನ್ನು ಸಾಮಾಜಿಕ ಚಿಂತನೆಡೆಗೆ ಮುಖ ಮಾಡುವಂತೆ ಪೇರೆಪಿಸಿದವು. ಅವರು ಶಿಕ್ಷಣ-ಸಂಘಟನೆ-ಹೋರಾಟ ಎಂಬ ತತ
APA, Harvard, Vancouver, ISO, and other styles
10

ಹೇಮಲತ, ಹೆಚ್. ಆರ್. "ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಮಹಿಳಾ ಸಾಮಾಜಿಕ ನ್ಯಾಯತತ್ವ: ಒಂದು ಅವಲೋಕನ". AKSHARASURYA JOURNAL 03, № 04. SPECIAL ISSUE. (2024): 157 to 169. https://doi.org/10.5281/zenodo.10929989.

Full text
Abstract:
ಹಿಂದೂ ಧರ್ಮದಲ್ಲಿ ಶೂದ್ರ ಮತ್ತು ದಲಿತರ ಶೋಷಣೆ ಆದಷ್ಟೇ ಮಹಿಳೆಯರ ಶೋಷಣೆಯೂ ಆಗಿದೆ. ಹಿಂದೂ ಸಮಾಜದಲ್ಲಿ ಮಹಿಳೆಯು ಅತಿ ಕೀಳು ಮಟ್ಟದ ಸ್ಥಾನವನ್ನುಹೊಂದಿದ್ದಾಳೆ. ಜೀವನದ ಯಾವುದೇ ಕ್ಷೇತ್ರದಲ್ಲೂ ಮಹಿಳೆ ಪ್ರಗತಿ ಹೊಂದಬಾರದೆಂಬ ನಿರ್ಬಂಧನೆಗಳನ್ನು ಹೇರಲಾಗಿತ್ತು. ಮಹಿಳೆಯು ಕೇವಲ ಪುರುಷನ ಆಸೆ ಆಕಾಂಕ್ಷೆಗಳನ್ನು ತೀರಿಸುವ ಒಂದು ಸುಂದರವಾದ ವಸ್ತು ಮತ್ತು ಮಕ್ಕಳನ್ನು ಹೆರುವ ಯಂತ್ರವೆಂದು ಪರಿಗಣಿಸಲಾಗಿತ್ತು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಕೇವಲ ಗುಲಾಮಳಂತೆ ಮನೆಗೆಲಸ ಮಾಡಿ ಕುಟುಂಬದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಅವಳ ಆದ್ಯ ಕರ್ತವ್ಯವೆಂದು ಭಾವಿಸಲಾಗಿತ್ತು. ಯಾವುದೇ ಕಾರಣಕ್ಕೂ ಮಹಿಳೆ ಹೊರಗಿನ ಸಮಾಜದಲ್ಲಿ ಇತರರಂತೆ ಧೈರ್ಯ ಮತ್ತು ಗೌರವದಿಂದ ಭಾಗವಹಿಸುವಂತಿರಲಿಲ್ಲ. ಹಾಗೇನಾದರೂ ಮಾಡಿದಿದ್ದರೆ ಅವಳು ಇಡೀ ಪುರುಷ ವರ್ಗ ಮತ್ತು
APA, Harvard, Vancouver, ISO, and other styles
11

ಡಾ., ಸ್ವಾಮಿ. "ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ರಚನೆ ಮತ್ತು ಕಾರ್ಯ ವಿಧಾನಗಳು". International Journal of Advance Research in Multidisciplinary 2, № 3 (2024): 269–73. https://doi.org/10.5281/zenodo.13293895.

Full text
Abstract:
ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮವು ಶೋಷಿತ ಸಮುದಾಯಗಳಲ್ಲಿ ಸಾಮಾಜಿಕ ಅಸಮಾನತೆಯಿಂದ ಬಳಲುತ್ತಿರುವ ಸಮುದಾಯಗಳ ಅಭಿವೃದ್ಧಿಗಾಗಿ ಮತ್ತು ಅವರನ್ನು ಸಾಮಾಜಿಕ ಸಮಾನತೆಯ ಕಡೆ ಕೊಂಡೊಯ್ಯಲು ಹಲವು ಯೋಜನೆಗಳ ಮೂಲಕ ಶ್ರಮಿಸುತ್ತಿದೆ. ಅ ಮೂಲಕ ಫಲಾನುಭವಿಗಳ ಜೀವನ ಕ್ರಮದ ಬದಲಾವಣೆಯ ಉದ್ದೇಶವನ್ನು ಹೊಂದಿದೆ. ಪರಿಶಿಷ್ಟ ಜಾತಿಲ್ಲಿ ಬಡತನದ ರೇಖೆಗಿಂತ ಕೆಳಗಿರುವ ಉಪಜಾತಿಗಳನ್ನು ಈ ಯೋಜನೆಗಳಿಗೆ ಸಿಗುವಂತೆ ಮಾಡಲಾಗಿ. ಇದರಿಂದ ಅವರ ಆರ್ಥಿಕ ಸುಧಾರಣೆ, ಮಕ್ಕಳ ಶೈಕ್ಷಣಿಕ ಉನ್ನತಿ, ನಿರುದ್ಯೋಗ ನಿವಾರಣೆ ಮಾಡಲು, ಸಮುದಾಯದ ಯುವಕ ಮತ್ತು ಯುವತಿಯರನ್ನು ಸಬಲರನ್ನಾಗಿಸಲು ನಿಗಮವು ಹಲವಾರು ಯೋಜನೆಗಳನ್ನು ರೂಪಿಸಿದೆ. ಮಹಿಳಾ ಸಬಲೀಕರಣ ಯೋಜನೆಗಳ ಮೂಲಕ ಮಹಿಳೆಯು ಆರ್ಥಿಕ ಸಬಲತೆಯನ್ನು ಹೊಂದಬೇಕು, ಉದ್ಯೋಗ ಪಡೆಯಬೇಕು, ಸಮಾಜದ ಕಟ್ಟಳೆ ಮತ್ತು ದೌರ್ಜನ್ಯಗಳ
APA, Harvard, Vancouver, ISO, and other styles
12

ಶೋಭಾ, ಸುರೇಶ್. "ಡಾ. ಅಂಬೇಡ್ಕರ್‌‌ರವರ ಸಾಮಾಜಿಕ ಆಲೋಚನೆಗಳು ಅಸ್ಪೃಶ್ಯರ ವಿಮೋಚನೆ". AKSHARASURYA JOURNAL 06, № 05 (2025): 207 to 219. https://doi.org/10.5281/zenodo.15504651.

Full text
Abstract:
ಸ್ವತಂತ್ರ್ಯಪೂರ್ವ ಭಾರತದ ಜಾತಿ ವ್ಯವಸ್ಥೆಯ ಕರಾಳತೆ ಕಹಿ ಅನುಭವಗಳೊಂದಿಗೆ ಡಾ|| ಬಿ. ಆರ್. ಅಂಬೇಡ್ಕರ್‌‌ರವರು ಅಸ್ಪೃಶ್ಯರಿಗೆ ಮೀಸಲಾತಿ ದೊರಕುವಂತೆ ಮಾಡಿದ ಹೋರಾಟದಲ್ಲಿ ಯಶಸ್ಸನ್ನು ಕಾಣುತ್ತಾರೆ. ತಮ್ಮ ಪ್ರತಿಭೆ ಹಾಗೂ ಪರಿಶ್ರಮದಿಂದ ಬದುಕಿನಲ್ಲಿ ಯಶಸ್ಸನ್ನು ಕಂಡರು. ಜಾತಿಯ ಕಾರಣದಿಂದ ಅನೇಕ ಸಂಕಷ್ಟಗಳಿಗೆ ಅವಮಾನಕ್ಕೆ ಗುರಿಯಾಗುತ್ತಾರೆ. ಬದುಕಿನುದ್ದಕ್ಕೂ ಕೆಳವರ್ಗದ ಜನರಿಗಾಗಿ ಹೋರಾಡಿ ಮೀಸಲಾತಿಯ ಮೂಲಕ ಹಿಂದುಳಿದವರನ್ನು ಮುಖ್ಯವಾಹಿನಿಗೆ ತಂದು ಈ ಸೌಲಭ್ಯ ಪಡೆದವರು ತಮ್ಮ ವರ್ಗದವರ ಏಳಿಗೆಗಾಗಿ ಪ್ರಯತ್ನಪಡಬೇಕು ಎಂಬ ಆಶಯವನ್ನು ಹೊಂದಿದ ಅಂಬೇಡ್ಕರ್‌‌ರವರಿಗೆ ತೀವ್ರ ನಿರಾಸೆಯಾಗುತ್ತದೆ. ಕೆಳ ಸಮುದಾಯಗಳಲ್ಲಿಯೇ ಪರಸ್ಪರ ಆಂತರಿಕ ಭಿನ್ನಾಭಿಪ್ರಾಯಗಳು, ಅಸಮಾನತೆಗಳು, ತಾರತಮ್ಯಗಳ ಕಾರಣಗಳಿಂದ ಪ್ರಬಲ ಜಾತಿಯವರ ದೌ
APA, Harvard, Vancouver, ISO, and other styles
13

ಆನಂದ, ಎಂ ಕಿದೂರು. "ದಿವಾಕರ ಬಲ್ಲಾಳರ 'ಸವೆದ ಹಾದಿಯ ಪಯಣ': ಗಡಿನಾಡ ಪ್ರತಿಭೆಯ ಕನ್ನಡ ಪ್ರಜ್ಞೆಯ ದ್ಯೋತಕ." AKSHARASURYA JOURNAL 06, № 01 (2025): 22 to 29. https://doi.org/10.5281/zenodo.14961362.

Full text
Abstract:
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ಬಹುಭಾಷಾ ಸಂಗಮ ಭೂಮಿ. ತುಳು, ಕನ್ನಡ, ಕೊಂಕಣಿ, ಮರಾಠಿ, ಮಲೆಯಾಳ, ಬ್ಯಾರಿ, ಮಾವಿಲತುಳು, ಹವ್ಯಕ, ಕರಾಡ ಮುಂತಾದ ಅನೇಕ ಭಾಷೆಗಳನ್ನಾಡುವ ಜನರಿದ್ದಾರೆ. ಆದರೆ ಇವರ ಓದಿನ ಭಾಷೆ ಕನ್ನಡ. ಆದ್ದರಿಂದ ಇವರು ಕನ್ನಡ ತಾಯಿಯ ಮಕ್ಕಳು. ಕನ್ನಡ ಭಾಷೆ, ಆಚಾರ, ವಿಚಾರ, ಸಂಸ್ಕೃತಿಗಳಿಗೆ ಹೊಂದಿಕೊಂಡು ಕಾಸರಗೋಡಿನಲ್ಲಿ ತಲೆತಲಾಂತರದಿಂದ ಬಾಳಿ ಬದುಕುತ್ತಾ ಬಂದಿದ್ದಾರೆ. ಇಲ್ಲಿ ಕನ್ನಡ ಮತ್ತು ತುಳು ಭಾಷೆಗಳು ಒಂದೇ ನಾಣ್ಯದ ಎರಡು ಮುಖಗಳಂತಿವೆ. ದಿವಾಕರ ಬಲ್ಲಾಳ್ ಎ. ಬಿ. ಗಡಿನಾಡ ಕನ್ನಡಿಗ. ಕೇರಳ ರಾಜ್ಯದ ಮಂಜೇಶ್ವರ ತಾಲೂಕು ಕುಂಜತ್ತೂರಿನ ಸರಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕ. ವಿದ್ಯಾರ್ಥಿ ಜೀವನದಿಂದಲೇ ನಾಟ್ಯ, ನಾಟಕ, ಗಮಕ, ಗಾಯನ, ಯಕ್ಷಗಾನಗಳಲ್ಲಿ ತೊಡಗಿಸಿಕೊಂಡ ಬಹುಮುಖ ಪ್ರತಿಭೆ. ಇದ
APA, Harvard, Vancouver, ISO, and other styles
14

ವಿನಯ, ಕುಮಾರ್, та ಗೌಡ ಆರ್. ನಾಗಪ್ಪ. "ಮಾತಿಲ್ಲದ ಸಮುದಾಯಕ್ಕೆ ಮಾತಾದ ಕವಿ: ಡಾ. ಸಿದ್ಧಲಿಂಗಯ್ಯ". AKSHARASURYA 03, № 05 (2024): 52–60. https://doi.org/10.5281/zenodo.10938039.

Full text
Abstract:
ಸಾಮಾಜಿಕ ಶ್ರೇಣೀಕರಣ ಭಾರತದ ಸಮಾಜದ ಬಹುಮುಖ್ಯವಾದ ಲಕ್ಷಣ. ಅಂದರೆ ಅದು ಜಾತಿಯ ಆಧಾರದ ಮೇಲೆ ನಿರ್ಧರಿತವಾಗುತ್ತದೆ. ಈ ಶ್ರೇಣೀಕರಣದ ವ್ಯವಸ್ಥೆಯು ಒಂದಿಷ್ಟು ವರ್ಗಗಳನ್ನು ಅಧೀನವಾಗಿಸಿಕೊಳ್ಳುವ ಮೇಲ್ವರ್ಗದ ಉತ್ಪನ್ನವಾಗಿದೆ. ಈ ವರ್ಗವು ಇಲ್ಲಿನ ಕೆಲವು ಸಮುದಾಯಗಳನ್ನು ಹೀನವೆಂದು ಗುರುತಿಸಿಕೊಂಡು ಶತಮಾನಗಳಿಂದ ಶೋಷಣೆಯನ್ನು ಮಾಡಿಕೊಂಡು ಬಂದಿತ್ತು. ಈ ಕೆಳಜಾತಿಗಳಿಗೆ ಯಾವುದೇ ಹಕ್ಕುಗಳು ಇಲ್ಲದೇ ಮೆಲ್ವರ್ಗದ ಜೀತಕ್ಕಷ್ಟೇ ಸೀಮಿತವಾಗಿಸಲಾಗಿತ್ತು. ಶಿಕ್ಷಣ, ಧಾರ್ಮಿಕತೆ, ಸಾಮಾಜಿಕ ಜೀವನ, ಸಮಾನತೆ ಮೊದಲಾದವುಗಳು ಇವರಿಗೆ ಪರಿಚಯವೇ ಇರಲಿಲ್ಲ. ಇವರನ್ನು ಸಂಪೂರ್ಣವಾಗಿ ಗುಲಾಮರನ್ನಾಗಿ ಮಾಡಲಾಗಿತ್ತು. ಭಾರತಕ್ಕೆ ಬ್ರಿಟಿಷರು ಬಂದ ನಂತರ ಅವರು ಇಲ್ಲಿ ಎಲ್ಲರಿಗೂ ಶಿಕ್ಷಣ ನೀಡಿದ್ದರಿಂದಾಗಿ ದಲಿತರಲ್ಲಿ ಹೊಸ ಆಶಾಕಿರಣ ಮೂಡಿತು. ಮುಂದೆ ಅಂಬೇಡ್ಕರ್ ಅ
APA, Harvard, Vancouver, ISO, and other styles
15

ರುಕ್ಮಿಣಿ, ವಿ. "ಡಾ. ಬಿ.ಆರ್. ಅಂಬೇಡ್ಕರ್‌ ಅವರ ದೃಷ್ಟಿಯಲ್ಲಿ ಅಸ್ಪೃಶ್ಯತೆ". AKSHARASURYA JOURNAL 06, № 05 (2025): 175 to 185. https://doi.org/10.5281/zenodo.15504614.

Full text
Abstract:
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್‌ ಅವರು ಹಿಂದೂ ಸಮಾಜಕ್ಕೆ ಕಳಂಕವೆನಿಸಿರುವ ಅಸ್ಪೃಶ್ಯತೆಯ ವಿವಿಧ ಆಯಾಮಗಳನ್ನು ವೈಜ್ಞಾನಿಕವಾಗಿ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಭಾರತದಲ್ಲಿ ಮಾತ್ರ ಇದರ ಆಚರಣೆ ಏಕೆ ಮುಂದುವರೆದಿದೆ ಎಂಬುದರ ಬಗ್ಗೆ ವಿಶ್ಲೇಷಣೆ ನೀಡಿದ್ದಾರೆ. ಹಿಂದೂ ಸಮಾಜವನ್ನು ಮಾನವೀಯ ಮೌಲ್ಯಗಳು ಸಮಾನತೆ ಸ್ವಾತಂತ್ರ್ಯ, ನ್ಯಾಯ, ವಿಶ್ವ ಭ್ರಾತೃತ್ವದ ಆಧಾರದ ಮೇಲೆ ಪುನರ್ಘಟಿಸುವ ಪ್ರಯತ್ನವನ್ನು ಅವರ ಸಾಮಾಜಿಕ ಚಿಂತನೆಯಲ್ಲಿ ಕಾಣಬಹುದು. ಸಾಮಾಜಿಕ ಸಂಶೋಧನೆಯ ನೆಲೆಗಟ್ಟಿನಲ್ಲಿ ಅಂಬೇಡ್ಕರ್‌ ಅವರ ಅಸ್ಪೃಶ್ಯತೆಯ ಕುರಿತ ಸಾಮಾಜಿಕ, ರಾಜಕೀಯ, ಧಾರ್ಮಿಕ ವಿಚಾರಗಳು ತುಂಬಾ ಮಹತ್ವವಾಗಿವೆ. ಯುರೋಪಿನ ಚರಿತ್ರೆಯಲ್ಲಿ ಕಂಡುಬರುವ ಅನೇಕ ಅನ್ಯಾಯಗಳನ್ನು ಮೂಢನಂಬಿಕೆಗಳನ್ನು ನಿವಾರಿಸಲಾಗಿದೆ. ಆದರೆ ಭಾರತದಲ್ಲಿ ಹಿಂದೂ ಬ್ರಾಹ್ಮಣ
APA, Harvard, Vancouver, ISO, and other styles
16

ದೊಡ್ಡನಾಯ್ಕ, ಹೆಚ್. "ಅಂಬೇಡ್ಕರ್‌: ಮೀಸಲಾತಿ". AKSHARASURYA JOURNAL 06, № 05 (2025): 30 to 35. https://doi.org/10.5281/zenodo.15504187.

Full text
Abstract:
ಬಾಬಾ ಸಾಹೇಬ್ ಅಂಬೇಡ್ಕರ್‌ ಭಾರತ ಕಂಡ ಮಹಾನ್ ಮಾನವತವಾದಿ. ಭಾರತದಲ್ಲಿದ್ದ ವರ್ಣ, ವರ್ಗ ಮತ್ತು ಜಾತಿ ವ್ಯವಸ್ಥೆಯನ್ನು ಬುಡ ಸಮೇತ ನಾಶ ಮಾಡದ ಹೊರತು, ಭಾರತದ ಸಮಾಜ ಸುಧಾರಣೆಗೊಳ್ಳಲು ಸಾಧ್ಯವಿಲ್ಲವೆಂದು ಹೇಳಿದ ಸಮಾಜ ಸುಧಾರಕರು. ಸಾಮಾಜಿಕ ಸ್ತರಗಳ ಮೂಲಕ ಇದ್ದ ತಾರತಮ್ಯವನ್ನು ಹೋಗಲಾಡಿಸಲು ಜನಸಾಮಾನ್ಯರಲ್ಲಿ ವಿಚಾರಧಾರೆಗಳನ್ನು ಕಟ್ಟಿಕೊಟ್ಟ ಮಹಾನ್ ವಿಚಾರವಾದಿ. ಹೀಗಾಗಿಯೇ ಬಾಬಾ ಸಾಹೇಬರು ಭಾರತೀಯ ಸಮಾಜದ ಪ್ರಗತಿಯು ಸಮಾನತೆಯಲ್ಲಿ ಅಡಗಿದೆ ಎಂದು ಬಲವಾಗಿ ನಂಬಿದ್ದರು. ವರ್ಣಗಳು ಪುರುಷನಿಂದ, ಮನುವಿನಿಂದ, ಪ್ರಜಾಪತಿಯಿಂದ, ವಾರ್ತ್ ನಿಂದ ಮತ್ತು ಸೋಮನಿಂದ ಹುಟ್ಟಿವೆ ಎಂದು ವೇದಗಳು ಪ್ರತಿಪಾದಿಸುತ್ತವೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳು ಋಗ್ವೇದದಲ್ಲಿ ಪ್ರತಿಪಾದಿತವಾಗಿದೆ. ವರ್ಣ ವ್ಯವಸ್ಥೆಯ ಹುಟ್ಟಿನ ಕ
APA, Harvard, Vancouver, ISO, and other styles
17

ಪ್ರಕಾಶ, ಬಿ. "ಡಾ. ಬಿ.ಆರ್. ಅಂಬೇಡ್ಕರ್‌ ಮತ್ತು ಗಾಂಧೀಜಿ: ಜಾತಿ, ವರ್ಣ, ಹಿಂದುತ್ವ ಕುರಿತು ಅಭಿಪ್ರಾಯ-ಭಿನ್ನಾಭಿಪ್ರಾಯಗಳು". AKSHARASURYA JOURNAL 06, № 05 (2025): 141 to 150. https://doi.org/10.5281/zenodo.15504412.

Full text
Abstract:
ವರ್ತಮಾನದಲ್ಲಿ ಗಾಂಧೀಜಿ ಮತ್ತು ಡಾ. ಬಿ. ಆರ್, ಅಂಬೇಡ್ಕರ್‌‌ರವರನ್ನು ಅನುಸಂಧಾನ ಮಾಡಿದಾಗ ಇವರಿಬ್ಬರ ನಡುವಿನ ಜಾತಿ, ವರ್ಣ, ಹಿಂದುತ್ವ ಕುರಿತು ಅನೇಕ ಹುಸಿ ಚರ್ಚೆಗಳು, ಪ್ರಚಾರ, ಸೆಮಿನಾರ್‌ಗಳು, ಪತ್ರಿಕೆಗಳ ಮೂಲಕ ಬಿತ್ತರವಾಗುತ್ತಿವೆ. ದೇಶದ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಈ ಅಭಿಪ್ರಾಯ-ಭಿನ್ನಾಭಿಪ್ರಾಯಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ. ಈ ಲೇಖನದ ಮೂಲಕ ನಿಜವನ್ನು ಅರಿಯುವ ಮುಖೇನ ಹೊಸದೊಂದು ತಾತ್ವಿಕತೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಜಾತ್‌ಪತ್ ತೊಡಕ್ ಮಂಡಲಕ್ಕಾಗಿ ಅಂಬೇಡ್ಕರ್‌ ಸಿದ್ದಪಡಿಸಿದ ಜಾತಿ ವಿಷಯ ಉಪನ್ಯಾಸವನ್ನು ಗಮನಿಸಿ ತಮ್ಮ ಹರಿಜನ ಪತ್ರಿಕೆಯಲ್ಲಿ ಗಾಂಧೀಜಿ ಅದನ್ನು ಉಲ್ಲೇಖಿಸುವ ಮೂಲಕ ಅಂಬೇಡ್ಕರ್‌ ರವರನ್ನು ಇದು ಪ್ರಚಾ
APA, Harvard, Vancouver, ISO, and other styles
18

ಸತ್ಯನಾರಾಯಣ, ಡಾ ಎಚ್ ಎಸ್. "ಬಿ. ಆರ್. ಲಕ್ಷ್ಮಣರಾವ್ ಅವರ ಸಾಹಿತ್ಯಲೋಕ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 30 березня 2022, 17–24. http://dx.doi.org/10.59176/kjksp.v1i1.2174.

Full text
Abstract:
ನವ್ಯರಲ್ಲಿ ಮುಖ್ಯವಾಗಿ ತೇಜಸ್ವಿ, ಲಂಕೇಶ್, ಅನಂತಮೂರ್ತಿಯAತಹ ಲೇಖಕರು ಸಮಾಜವಾದಿ ವಿಚಾರಗಳ ಸೆಳವಿನಿಂದ ‘ನವ್ಯ’ ಸಾಹಿತ್ಯದಿಂದ ‘ನವ್ಯೋತ್ತರ’ದ ಕಡೆಗೆ ಹೊರಳುವ ಘಟ್ಟದಲ್ಲಿದ್ದರು. ಚಿತ್ತಾಲ, ಶಾಂತಿನಾಥ ದೇಸಾಯಿ, ಕಂಬಾರರAಥ ಅಗ್ರಗಣ್ಯರ ನಡೆ ಕೂಡ ಭಿನ್ನತೆಯ ಹುಡುಕಾಟದಲ್ಲಿತ್ತು. ಬಂಡಾಯ ಸಾಹಿತ್ಯ ಚಳುವಳಿಯು ಬರಹಗಾರರ ಒಕ್ಕೂಟದ ಮೂಲಕ ಮನ್ವಂತರ ಮೂಡಿಸುವ ಉತ್ಸಾಹದಲ್ಲಿತ್ತು. ಎಪ್ಪತ್ತರ ದಶಕದ ಆದಿಯಲ್ಲಿ ಮೂಡಿಬಂದ ಲಕ್ಷ್ಮಣರಾವರಂತಹ ಹೊಸ ಪೀಳಿಗೆಯ ಲೇಖಕರು ತಮ್ಮ ಜೀವನ ವಿಧಾನ, ಆಲೋಚನೆ ಮತ್ತು ಗ್ರಹಿಕೆಯ ಕ್ರಮ ಹಾಗೂ ಅಭಿವ್ಯಕ್ತಿಯ ವಿಧಾನಗಳಲ್ಲಿ ಪ್ರಜ್ಞಾಪೂರ್ವಕ ಸೋಪಜ್ಞತೆಯನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿತ್ತು. ಹೀಗಾಗಿ ಬಿ.ಆರ್. ಲಕ್ಷ್ಮಣರಾವ್ ತುಂಬ ಸಹಜವಾಗಿಯೇ ತಮ್ಮದೇ ಆದ ಭಿನ್ನದಾರಿಯನ್ನು ಆಯ್ದುಕೊಂಡರೆAಬುದು ಗಮನಾರ್ಹ. ಸಾಂಸ
APA, Harvard, Vancouver, ISO, and other styles
19

ಎ. ಕೆ., ಡಾ ರವಿಶಂಕರ. "ಜೈನ ಜನಪದ ಪದ್ಯ ಸಾಹಿತ್ಯ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 30 вересня 2022, 31–40. http://dx.doi.org/10.59176/kjksp.v1i2.2213.

Full text
Abstract:
ಜನವಾಣಿ ಬೇರು; ಕವಿವಾಣಿ ಹೂ’ ಎಂಬ ಬಿ. ಎಂ. ಶ್ರೀಕಂಠಯ್ಯ ಅವರ ನುಡಿಯಂತೆ ಜಾನಪದ ಸಾಹಿತ್ಯವು ಪಠ್ಯಲೋಕದ ಪಾಂಡಿತ್ಯಕ್ಕೆ ತಳಹದಿಯನ್ನು ಸೃಷ್ಠಿಸಿದ ಸಾಹಿತ್ಯವೆಂದು ಕರೆಯಬಹುದು. ಎರಡು ಸಾವಿರದ ಮೇಲೆ ಎರಡು ದಶಕಗಳ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಯಾವುದೇ ಸಾಹಿತ್ಯ ಪಠ್ಯವನ್ನು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ ಆ ಪಠ್ಯವು ಆಯಾ ಪರಿಸರದ ಮೂಲ ಜನಪದರ ಕೂಸಿನಂತೆ ಗೋಚರಿಸುತ್ತದೆ. ಜಾನಪದ ಸಾಹಿತ್ಯವು ವಿಶ್ವಸಾಹಿತ್ಯವಾಗಿದೆ. ಎಲ್ಲಾ ದೇಶಗಳಲ್ಲೂ, ಎಲ್ಲಾ ಧರ್ಮಗಳಲ್ಲೂ ತಾವು ಬದುಕುವ ಪರಿಸರ ಹಾಗೂ ಜೀವನ ವಿಧಾನದ ಕೈಗನ್ನಡಿಯಾಗಿ ರೂಪಿಸಿಕೊಂಡು ಬಂದಿದ್ದಾರೆ. ಮನುಷ್ಯನ ಅನುಭವಗಳೇ ಅನುಭಾವ ಸಾಹಿತ್ಯವಾದ ಪರಿಯು ಜಾನಪದವೆಂಬ ವಿಶಾಲಕ್ಷೇತ್ರವನ್ನು ಆವರಿಸಿದೆ.
APA, Harvard, Vancouver, ISO, and other styles
We offer discounts on all premium plans for authors whose works are included in thematic literature selections. Contact us to get a unique promo code!