To see the other types of publications on this topic, follow the link: ಮಹಿಳೆ.

Journal articles on the topic 'ಮಹಿಳೆ'

Create a spot-on reference in APA, MLA, Chicago, Harvard, and other styles

Select a source type:

Consult the top 50 journal articles for your research on the topic 'ಮಹಿಳೆ.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Browse journal articles on a wide variety of disciplines and organise your bibliography correctly.

1

ವನಜಾಕ್ಷಿ, ಆರ್ ಹಳ್ಳಿಯವರ, та ಕುಮಾರ್ ಜೆ. ಪ್ರವೀಣ್. "ಕನ್ನಡ ಸಾಹಿತ್ಯದಲ್ಲಿ ಮಹಿಳೆಯ ಸ್ಥಾನಮಾನ". AKSHARASURYA JOURNAL 04, № 04 (2024): 68 to 75. https://doi.org/10.5281/zenodo.13284039.

Full text
Abstract:
ಕನ್ನಡ ಸಾಹಿತ್ಯಕ್ಕೆ ಮಹಿಳಾ ಸಾಹಿತಿಗಳ ಕೊಡುಗೆ ಅನನ್ಯವಾದುದು. ಚರಿತ್ರೆಯ ಎಲ್ಲಾ ಕಾಲಘಟ್ಟಗಳಲ್ಲೂ‌ ಸಾಹಿತ್ಯದ ಮೂಲಕ ವರ್ತಮಾನದ ತಲ್ಲಣಗಳನ್ನು ವಿಶೇಷವಾಗಿ ಮಹಿಳೆಯ ದುಃಖ ದುಮ್ಮಾನಗಳಿಗೆ ಒತ್ತು ಕೊಟ್ಟು ನೋವುಗಳನ್ನು ಮಹಿಳಾ ಸಾಹಿತಿಗಳು ಹೇಗೆ ಚಿತ್ರಿಸಿದ್ದಾರೆ ಎಂಬುದನ್ನು ಉದಾಹರಣೆಗಳ ಮೂಲಕ ಇಲ್ಲಿ ಚರ್ಚಿಸಲಾಗಿದೆ. ವಚನ ಸಾಹಿತ್ಯದಿಂದ ಹಿಡಿದು ಆಧುನಿಕ ಕನ್ನಡ‌ ಸಾಹಿತ್ಯದ ಉಪಲಬ್ಧವಿರುವ ಮಹಿಳಾ ಸಾಹಿತಿಗಳನ್ನು ಗುರುತಿಸಿ ಪ್ರಾತಿನಿಧಿಕವಾಗಿ ಒಂದು ವಚನವನ್ನು ಮತ್ತು ಆಯ್ದ ಸಾಲುಗಳನ್ನು ಈ ಲೇಖನದಲ್ಲಿ ವಿಮರ್ಶಿಸಲಾಗಿದೆ. ಆ ಮೂಲಕ ಕನ್ನಡ ಸಾಹಿತ್ಯದಿಂದ ಮಹಿಳೆ ಸ್ಥಾನಮಾನವನ್ನು ಅರಿಯುವ ಪ್ರಯತ್ನ ಮಾಡಲಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆ ಸಾಹಿತ್ಯಿಕವಾಗಿ ಎದುರಿಸುತ್ತಿರುವ ಸವಾಲನ್ನು ಕೂಡ ತುಣುಕಾಗಿ ಅರ್ಥೈಸಲಾಗಿದೆ. ಸ
APA, Harvard, Vancouver, ISO, and other styles
2

ಪವಿತ್ರ, ಸಿ. ಎಸ್. "ಮಹಿಳಾ ಸಬಲೀಕರಣ ಮತ್ತು ವೈಷ್ಣವ ಧರ್ಮ". AKSHARASURYA JOURNAL 03, № 04. SPECIAL ISSUE. (2024): 216 to 230. https://doi.org/10.5281/zenodo.10930786.

Full text
Abstract:
ನನ್ನ ಸಂಶೋಧನಾ ಲೇಖನದಲ್ಲಿ ನಾನು “ಮಹಿಳಾ ಸಬಲೀಕರಣ ಮತ್ತು ವೈಷ್ಣವ ಧರ್ಮ” ಎಂಬ ವಿಷಯವನ್ನು ಕುರಿತು ಸಂಶೋಧನಾ ಪ್ರಬಂಧವನ್ನು ಮಂಡಿಸಲು ಪ್ರಯತ್ನಿಸಿರುತ್ತೇನೆ. ಈ ದಿಕ್ಕಿನಲ್ಲಿ ವೈಷ್ಣವ ಧರ್ಮ ಮಹಿಳಾ ಸಬಲೀಕರಣಕ್ಕೆ ಯಾವ ರೀತಿಯ ಕೊಡುಗೆ ನೀಡಿದೆ? ಮಹಿಳೆಯರ ಸ್ಥಾನಮಾನದ ಸುಧಾರಣೆಗೆ ವೈಷ್ಣವ ಧರ್ಮದ ಕೊಡುಗೆ ಏನು? ಎಂಬ ನಿಟ್ಟಿನಲ್ಲಿ ಈ ಕಿರು ಪ್ರಬಂಧವನ್ನು ಸಿದ್ಧಪಡಿಸಿರುತ್ತೇನೆ. ಭಾರತದ ದೇಶದಲ್ಲಿ ಮಹಿಳೆಗೆ ಮಹತ್ವದ ಸ್ಥಾನವಿದೆ ಅಲ್ಲದೆ ಸಾಂಸ್ಕೃತಿಕವಾಗಿ ಮಹಿಳೆಯ ಸ್ಥಾನಮಾನ ಮಹತ್ವಪೂರ್ಣವಾಗಿದೆ. “ಯತ್ರ ನಾರ್ಯಂತು ಪೂಜ್ಯಂತೆ ರಮಂತೆ ತತ್ರ ದೇವತಾ” [ಎಲ್ಲಿ ನಾರಿಯನ್ನು ಪೂಜಿಸಲಾಗುವುದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ] ಎಂದು ನಮ್ಮ ಪುರಾಣಗಳಲ್ಲಿ ಘೋಷಿಸಿವೆ. ಮಹಿಳೆ ಪುರುಷನಿಗೆ ಆಧಾರ ಸ್ಥಂಭದಂತಿದ್ದಳು.
APA, Harvard, Vancouver, ISO, and other styles
3

DEEPA, LAGALI. "ಚಂದ್ರಶೇಖರ ಕಂಬಾರರ ನಾಟಕಗಳಲ್ಲಿನ ಮೇಲ್ವರ್ಗದ ಸ್ತ್ರೀಯರ ಪಾತ್ರ ಚಿತ್ರಣ". AKSHARASURYA JOURNAL 03, № 03 (2024): 71 to 78. https://doi.org/10.5281/zenodo.10775095.

Full text
Abstract:
ಪ್ರಸ್ತುತ ಸಂಶೋಧನಾ ಲೇಖನವು ಕಂಬಾರರ ನಾಟಕಗಳಲ್ಲಿ ಮೇಲ್ವರ್ಗದ ಸ್ತ್ರೀಯರ ಮನದ ಬಯಕೆಗಳನ್ನು ಕುರಿತು ಚರ್ಚಿಸುತ್ತದೆ. ಕಂಬಾರರು ಸ್ತ್ರೀಯನ್ನು ಜೈವಿಕ ಪತ್ರಗಳಾಗಿ ಗಮನಿಸುತ್ತಾರೆಯೇ ಹೊರತು ಸಂಸ್ಕೃತಿಯ ಆಳವಿನ್ಯಾಸದಲ್ಲಿ ಕಾಣಿಸುವ ಸ್ತ್ರೀ ವ್ಯಕ್ತಿತ್ವದ ಮೌಲ್ಯಮಾಪನಕ್ಕೆ ತೊಡಗುವುದಿಲ್ಲ. ಕುಟುಂಬದೊಳಗಿನ ಲೈಂಗಿಕ ಹಿಂಸೆಗಳನ್ನು ಪ್ರತಿಭಟಿಸುವ ನೆಲೆಯಲ್ಲಿ ಅವರ ನಾಟಕಗಳ ಆಶಯಗಳು ಕಾಣಿಸಿಕೊಳ್ಳುತ್ತವೆಯಾದರೂ, ಅಸ್ತಿತ್ವವನ್ನು ಮಾನ್ಯ ಮಾಡುವುದಿಲ್ಲ. ಅದರಲ್ಲೂ ಮೇಲ್ವರ್ಗದ ಸ್ತ್ರೀಯರ ಬದುಕಿನ ಚಿತ್ರಣವನ್ನು ವಿವರವಾಗಿ ಚಿತ್ರಿಸಿದ್ದಾರೆ. ಕಂಬಾರರ ನಾಟಕಗಳಲ್ಲಿ ಮಹಿಳಾ ಪಾತ್ರಗಳು ಪಿತೃಪ್ರಭುತ್ವದ ದಬ್ಬಾಳಿಕೆಯನ್ನು ಬಹಿರಂಗಪಡಿಸಲು ಮತ್ತು ವಿರೋಧಿಸುವಂತೆ ಮಾಡುತ್ತಾರೆ. ಜೋಕುಮಾರಸ್ವಾಮಿಯಲ್ಲಿ ಗೌಡರು ಪ್ರಾಬಲ್ಯದ ರಚನೆಗಳನ್ನು ಉಳಿಸಿಕೊಳ್ಳುವ ಪ
APA, Harvard, Vancouver, ISO, and other styles
4

ನಸ್ರೀನ್, ಬಾನು. "ಕನ್ನಡ ಅನುವಾದಿತ ಮಹಿಳಾ ಆತ್ಮಕಥೆಗಳು: ವಿವಿಧ ಆಯಾಮಗಳು". AKSHARASURYA 05, № 01 (2024): 43 to 49. https://doi.org/10.5281/zenodo.13870664.

Full text
Abstract:
ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದರೆ ಆತ್ಮಕಥೆಗಳನ್ನು ಕಟ್ಟಿಕೊಟ್ಟವರು ಬಹಳ ವಿರಳ. ಒಬ್ಬ ಮಹಿಳೆ ತನಗಿರುವ ಮಿತಿಗಳನ್ನು ಉಲ್ಲಂಘಿಸಿ ಸ್ಥಾಪಿತ ವ್ಯವಸ್ಥೆಯೊಂದು ಒಡ್ಡುವ ಸವಾಲುಗಳಿಗೆ ಎದುರಾಗುತ್ತಲೆ ತನ್ನ ಆತ್ಮವೃತ್ತಾಂತವನ್ನು ಸಾರ್ವಜನಿಕ ನೋಟಕ್ಕೆ ತೆರೆದಿಡುವ ದಿಟ್ಟತನಕ್ಕೆ ಬಹಳ ಸಮಯವೇ ಬೇಕಾಯಿತು. ಹೀಗೆ ಆರಂಭವಾದ ಮಹಿಳಾ ಆತ್ಮಕಥನಗಳೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೆ ಆದ ಛಾಪನ್ನು ಮೂಡಿಸುತ್ತಿವೆ.  ಆತ್ಮಕಥೆ ಎಂದರೆ ತಮ್ಮ ಆತ್ಮ ವೃತ್ತಾಂತವನ್ನು ತಾವೆ ದಾಖಲಿಸುವ ಪ್ರಕ್ರಿಯೆ, ಮಹಿಳಾ ಆತ್ಮಕಥೆಗಳಲ್ಲಿ ಕೆಲವೊಮ್ಮೆ ತಮ್ಮ ಆತ್ಮ ವೃತ್ತಾಂತವನ್ನು ಸ್ವ್ವಗತದ ಮಾದರಿಯಲ್ಲಿ ಬರೆದಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಭಾರತದಂತಹ ಸಂಪ್ರದಾಯಿಕ ಸಮಾಜ ಮಹಿಳೆಗೆ ಕೆಲವು ಚೌಕಟ್ಟುಗಳನ್ನು ನಿರ
APA, Harvard, Vancouver, ISO, and other styles
5

ಡಿ. ಸಿ., ಶಿವಕುಮಾರ, та ಶ್ವೇತಾ ಎಂ. "ಕನ್ನಡ ಮಹಿಳಾ ಕಥಾ ಸಾಹಿತ್ಯದಲ್ಲಿ ಕೌಟುಂಬಿಕ ಸಮಸ್ಯೆಗಳುಹಾಗೂ ಮಹಿಳೆ". Shanlax International Journal of Arts, Science and Humanities 12, S1-Oct (2024): 211–14. https://doi.org/10.34293/sijash.v12is1-oct.8306.

Full text
APA, Harvard, Vancouver, ISO, and other styles
6

ಶುಭಾ, ಮರವಂತೆ. "ಮಹಿಳಾ ಯಕ್ಷಗಾನದ ಸವಾಲುಗಳು ಮತ್ತು ಸಾಧ್ಯತೆ". Aksharasurya Journal 05, № 05 (2025): 48 to 54. https://doi.org/10.5281/zenodo.14619490.

Full text
Abstract:
ಮಹಿಳೆಯರಿಗೆ ಹೊಂದುವ ಕಥಾ ಸಂವಿಧಾನ, ನವೀನ ತಂತ್ರ ಪರಿಕರಗಳನ್ನು ನಾವೇ ಕಂಡುಕೊಳ್ಳುದರ ಮೂಲಕ ಯಕ್ಷರಂಗದಲ್ಲೊಂದು ಮಹಿಳಾ ಲೋಕವನ್ನು ಸೃಷ್ಟಿಸುವ ಸವಾಲು ನಮ್ಮ ಮುಂದಿದೆ. ನಮ್ಮ ನಡೆಯಲ್ಲಿ ಅನನ್ಯತೆಯ ದಾರಿ ಗುರುತುಗಳು ಬೇಕಾಗಿವೆ. ಪ್ರಯೋಗಶೀಲ ಮನಸ್ಸು ಬೆಳೆದರೆ ಯಕ್ಷಗಾನದ ಏಕತಾನತೆಯನ್ನು ಮಹಿಳೆಯರು ಮುರಿದು ಮರು ಕಟ್ಟಲು ಸಾಧ್ಯವಿದೆ. ಮೊದಲು ಮಹಿಳೆಯರು ಯಕ್ಷಗಾನ ನೋಡುವುದೆ ಅಪರಾಧವೆಂದು ಭಾವಿಸುವ ಕಾಲಘಟ್ಟದಿಂದ ಬಹುದೂರ ಬಂದಿದ್ದೇವೆ. ಗಂಡಸೊಬ್ಬನೆ ಕಲಾವಿದನಾಗಿ ಅವನಷ್ಟಕ್ಕೆ ಇದ್ದು ಕುಟುಂಬದಿಂದ ದೂರ ಉಳಿದು ಬದುಕುತ್ತಿದ್ದ ಕಾಲ ಈಗ ಬದಲಾಗಿದೆ. ಹೆಣ್ಣು ಮಕ್ಕಳಿಂದಾಗಿ ಮನೆ ಮನೆಯು ಕಲಾ ಕುಟೀರವಾಗಿದೆ. ಮಹಿಳೆ ತಾನೂ ಕಲಾವಿದೆಯಾಗಿ ಮಕ್ಕಳನ್ನೂ ಆ ದೆಸೆಯಲ್ಲಿ ಪ್ರೋತ್ಸಾಹಿಸುತ್ತಾ ಕುಟುಂಬವನ್ನೆ ಆ ಕಡೆಗೆ ಚಲಿಸುವಂತೆ ಮಾಡುತ್ತಿರುವುದು ವಿಶ್
APA, Harvard, Vancouver, ISO, and other styles
7

ಶೈಲಜ, ಹಿರೇಮಠ, та ಎಂ. ಭೈರಪ್ಪ ಕುಪ್ಪನಹಳ್ಳಿ. "ಬುಡಕಟ್ಟು ಮಹಿಳೆ: ಸ್ಥಾಪಿತ ಗ್ರಹಿಕೆಗಳಿಗೆ ಭಿನ್ನಮತ". AKSHARASURYA 05, № 02 (2024): 01 to 34. https://doi.org/10.5281/zenodo.14035474.

Full text
Abstract:
ಪ್ರಸ್ತುತ ಸಂದರ್ಭದಲ್ಲಿ ವಿಶಾಲಾರ್ಥ ದೃಷ್ಟಿಕೋನದ ಬರಹಗಾರರಾಗುವುದೆಂದರೆ, ಸಮಾಜದಲ್ಲಿನ ಜಾತಿ, ಪ್ರದೇಶ, ಬುಡಕಟ್ಟು, ಆದಿವಾಸಿ ಮತ್ತು ಜಂಡರ್ ಆಧಾರಿತ ಶ್ರೇಣೀಕರಣವನ್ನು ಮೀರುವುದೇ ಆಗಿದೆ; ಹಾಗಿದ್ದರೂ ಅಸಮಾನತೆಗೆ ಬುನಾದಿಯೊದಗಿಸುವ ಶ್ರೇಣೀಕರಣವನ್ನು ಅಸ್ಮಿತೆಯಾಗಿ, ಅನನ್ಯತೆಯಾಗಿ ಚಿಂತಕರು ನಿರೂಪಿಸಿದ್ದರ ಪರಿಣಾಮದಿಂದಾಗಿ, ಅಸಮಾನತೆಯನ್ನು ಸಮರ್ಥಿಸುವ ನಿರೂಪಣೆಗಳು ಸಾಹಿತ್ಯ ಲೋಕದಲ್ಲೂ ನಿರಾತಂಕವಾಗಿ ಮುಂದುವರೆದಿವೆ. ಬರಹಲೋಕದೊಳಗಿನ ಇಂತಹ ನಿರೂಪಣೆಯ ರಾಜಕಾರಣವೇ ಸತ್ಯವನ್ನು ಸೃಷ್ಟಿಸುತ್ತ, ಅದನ್ನು ಒಪ್ಪುವಂತೆ ಜ್ಞಾನದ ಅಧಿಕಾರದ ನೆಲೆಯಲ್ಲಿ ಒತ್ತಾಯಿಸುತ್ತದೆ; ಅಧ್ಯಯನದೊಳಗಿನ ಬರಹಗಾರರ ಉದ್ದೇಶದ ಭಾಗವಾಗಿ ನಿರೂಪಣೆಗೊಂಡ ನಿಲುವುಗಳನ್ನು ಸಮಸ್ಯೀಕರಿಸಿಕೊಂಡು ಮರುವಿಶ್ಲೇಷಣೆಗೆ ಒಳಪಡಿಸಬೇಕಿದೆ. ಈ ಉದ್ದೇಶದ ಹಿನ್ನೆಲೆಯಲ್ಲಿಯೇ ಮಹಿಳೆ
APA, Harvard, Vancouver, ISO, and other styles
8

ಪ್ರವೀಣ್, ಕುಮಾರ ಎಂ. ಬಿ. "ಮಿಡಿಗೇಶಿಯ ಇತಿಹಾಸ ರಚನೆಯಲ್ಲಿ ಮಹಿಳೆಯರ ಪಾತ್ರ". AKSHARASURYA JOURNAL 03, № 04. SPECIAL ISSUE. (2024): 83 to 93. https://doi.org/10.5281/zenodo.10929751.

Full text
Abstract:
ಮಿಡಿಗೇಶಿಯ ಇತಿಹಾಸವನ್ನು ಸಮಗ್ರವಾಗಿ ನೋಡಿದಾಗ ಮಿಡಿಗೇಶಿಯು ಹಲವು ಪಾಳೆಪಟ್ಟುಗಳ ಆಡಳಿತಕ್ಕೆ ಒಳಪಟ್ಟಿರುವುದನ್ನು ಕಾಣಬಹುದಾಗಿದೆ. ಇಂತಹ ಮಿಡಿಗೇಶಿಯ ಇತಿಹಾಸವನ್ನು ಸಂಶೋಧನಾ ವಿಷಯವನ್ನಾಗಿ ನೋಡಿದಾಗ ಇದಕ್ಕೆ ಮಿಡಿಗೇಶಿ ಎಂದು ಹೆಸರು ಬರಲು ಪ್ರಮುಖ ಕಾರಣ ಒರ್ವ ಮಹಿಳೆ ಎಂದು ಅನೇಕ ದಾಖಲೆಗಳಲ್ಲಿ ಪ್ರಕಟವಾಗಿರುವುದನ್ನು ಕಾಣಬಹುದಾಗಿದೆ. ಈ ದಾಖಲೆಗಳ ಅನುಸಾರ ಮಿಡಿಗೇಶಿ ಎಂಬ ಹೆಸರಿನ ಐತಿಹ್ಯ. ಆಕೆಯ ಜೊತೆಗಿನ ಸಂಭಾಷಣೆಯು ಯುದ್ಧಕ್ಕೆ ಕಾರಣವಾಗಿ ಸಂಸ್ಥಾಪಕನ ಸಾವದ ಬಗೆಗಿನ ವಿವರಣೆಯನ್ನು ಗಮನಿಸಬಹುದಾಗಿದೆ. ಮಿಡಿಗೇಶಿ ಬೆಟ್ಟದ ಮೇಲಿರುವ ಬೃಹತ್ ಬಂಡೆಯ ಮೇಲೆ ಕೆತ್ತಲಾಗಿರುವ ಹೆಣ್ಣಿನ ಮೂರ್ತಿಯು ಸತಿಸಹಗಮನ ಮಾಡಿದ ಬಗೆಗಿನ ಉಲ್ಲೇಖಗಳನ್ನು ಐತಿಹ್ಯಗಳನ್ನು ಗಮನಿಸಬಹುದಾಗಿದೆ. ಪಾಳೇಗಾರರ ಆಡಳಿತದಲ್ಲಿ ಮಹಿಳೆಯ ಪಾತ್ರ. ಅವರಿಗಿದ್ದ ಸ್ಥಾನಮಾನಗಳ
APA, Harvard, Vancouver, ISO, and other styles
9

ನಾಗೇಂದ್ರಪ್ಪ, ಶಿವಶರಣಪ್ಪ. "ವಿಜಯಶ್ರೀ ಸಬರದರವರ ಕಾವ್ಯಗಳಲ್ಲಿ ಮಹೀಳಾ ಚಿಂತನೆ". Aksharasurya Journal 05, № 05 (2025): 77 to 80. https://doi.org/10.5281/zenodo.14619562.

Full text
Abstract:
ಆಧುನಿಕ ಕಾವ್ಯಗಳನ್ನು ಅವಲೋಕಿಸಿದಾಗ ವಿಜಯಶ್ರೀ ಸಬರದರವರ ಕಾವ್ಯಗಳಲ್ಲಿ ಮಹಿಳಾ ಪರ ಚಿಂತನೆಗಳನ್ನು ಕಾಣುತ್ತೇವೆ. ಮಹಿಳೆಯನ್ನು ಪುರುಷ ಪ್ರಧಾನವಾದ ವ್ಯವಸ್ಥೆಯಲ್ಲಿ ಎರಡನೆಯ ದರ್ಜೆಯ ಪ್ರಜೆ ಎಂದು ಪರಿಗಣಿಸಿ ಆಕೆಯನ್ನು ವಿದ್ಯೆಯಿಂದ, ಅಸ್ತಿಯಿಂದ, ಸ್ವಾತಂತ್ರ್ಯದಿಂದ ದೂರವಿಡಲಾಗಿತ್ತು. ಆಕೆಗೆ ಸ್ವಾತಂತ್ರ್ಯವನ್ನು ಕೊಡಬಾರದು ಎಂದು ಈ ದೇಶದ ಧರ್ಮ ಗ್ರಂಥಗಳು ಹೇಳುತ್ತವೆ. ಆಕೆ ಮೈಲಿಗೆ, ಮಾಯೆ, ಚಂಚಲೆ, ಎಂದು ಕರೆಯುವುದರ ಮೂಲಕ ಅತ್ಯಂತ ಕೀಳಾಗಿ ಕಾಣುತ್ತಿದ್ದರು. ಮಹಿಳೆ ಜೀವನ ಪರ್ಯಂತ ಅಸ್ಪೃಶ್ಯಳಾಗಿ ಬದುಕುವಂತಹ ಅನಿವಾರ್ಯ ಪದ್ಧತಿ ಈ ದೇಶದ ಚರಿತ್ರೆಯಲ್ಲಿತ್ತು. ವೇದಗಳಲ್ಲಿ ಆಕೆಯನ್ನು ತುಂಬಾ ಹೀನಾಯವಾಗಿ ನೋಡುತ್ತಾರೆ. ಮಹಿಳೆಗೆ ಬುದ್ಧಿ ಕಡಿಮೆ ಇದೆ, ಅವಳ ಹೃದಯ ಕಿರುಬನಿಗಿಂತಲೂ ಕ್ರೂರವಾದುದು ಎಂದು ಹೇಳುತ್ತಾರೆ. ದೇಶದ ಪುರಾಣ, ಇತಿಹಾ
APA, Harvard, Vancouver, ISO, and other styles
10

ಮಂಜುಳಾಕ್ಷಿ, ಎಲ್. "ಮಹಿಳೆ ಸಮಾನತೆ ಮತ್ತು ಡಾ. ಬಿ. ಆರ್. ಅಂಬೇಡ್ಕರ್‌". AKSHARASURYA JOURNAL 06, № 05 (2025): 72 to 83. https://doi.org/10.5281/zenodo.15504265.

Full text
Abstract:
ಕಾಲಾಂತರದಿಂದಲೂ ಮಹಿಳೆ ಸಮಾಜದಲ್ಲಿ ತನ್ನ ಅಸ್ವತ್ವಕ್ಕಾಗಿ ಒಂದಲ್ಲ ಒಂದು ರೀತಿಯಲ್ಲಿ ಧ್ವನಿ ಎತ್ತುತ್ತಲೆ ಬಂದಿದ್ದಾಳೆ. ಇದನ್ನು ನಾವು ಜನಪದ ಹೆಣ್ಣು ಅದರ ಪ್ರಕಾರವಾದ ತ್ರಿಪದಿಯಲ್ಲಿ ತನ್ನ ನೋವನ್ನು ಮತ್ತು ಸಮಾಜದ ಕಟ್ಟುಪಾಡು ಕಂದಾಚಾರಗಳನ್ನು ಮೌನವಾಗಿಯೇ ವಿರೋಧಿಸುತ್ತಾ ಬಂದಿದ್ದಾಳೆ. ಸಾಹಿತ್ಯದಲ್ಲಿ ಅವಳು ತಾಯಿಯಾಗಿ ಅಕ್ಕ-ತಂಗಿ, ನಾದಿನಿ, ಹೆಂಡತಿ, ಅತ್ತೆ ಹೀಗೆ ಅನೇಕ ಪಾತ್ರಗಳಲ್ಲಿ ಪುರುಷನೊಂದಿಗೆ ಜೀವಿಸುತ್ತಾ ಮಾನ್ಯತೆ ಪಡೆದಿದ್ದು ಅವನಿಂದ ದೇವತೆಯಾಗಿ, ಪ್ರಿಯೆಯಾಗಿ, ಕುಟುಂಬದ ಕಣ್ಣಾಗಿ, ಅವನ ಅರ್ಧಾಂಗಿಯಾಗಿದ್ದರೂ ಕೂಡ ಸಮಾಜದಲ್ಲಿ ಅವಳಿಗೆ ಅಂದಲ್ಲ ಇಂದಿಗೂ ಎರಡನೇ ದರ್ಜೆಯ ಸ್ಥಾನವಿದೆ ಅವಳನ್ನು ಪುರುಷ ಸಮಾಜ ತನ್ನ ಬಂಧಿಯಲ್ಲೇ ಬಂಧಿಸಿ ಅವಳ ಮೇಲೆ ಕಟ್ಟುಪಾಡು, ಕಂದಾಚಾರ ಪದ್ಧತಿಗಳನ್ನು ಹೇರುತ್ತಾ ಸಮಾಜದಲ್ಲಿ ಅವಳಿ ಯಾವುದೇ ಸ
APA, Harvard, Vancouver, ISO, and other styles
11

ಷಾಕಿರಾ, ಖಾನಂ. "ಕನ್ನಡ ಚಿತ್ರರಂಗದಲ್ಲಿ ಮಹಿಳೆ". AKSHARASURYA 05, № 01 (2024): 124 to 127. https://doi.org/10.5281/zenodo.13870982.

Full text
Abstract:
ಸಿನಿಮಾ ವಿವಿಧ ಮಜಲುಗಳನ್ನು ದಾಟುತ್ತಾ ಸಮಾಜದ ವಿವಿಧ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ಸಾಮಾಜಿಕ ಪರಿವರ್ತನೆ ಮಾಡುವ ಉದ್ದೇಶದಿಂದ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿತಾದರೂ ಬರು ಬರುತ್ತಾ ಅದರ ಗುರಿ ಮನೋರಂಜನೆಯತ್ತ ತಿರುಗಿ ಮಹಿಳೆಯನ್ನು ಒಂದು ವಸ್ತುವನ್ನಾಗಿಸಿ ಮಹಿಳೆಯ ಚಾರಿತ್ರ್ಯವನ್ನೇ ಬಂಡವಾಳವನ್ನಾಗಿಸಿ ಮಹಿಳೆಯ ಸ್ಥಾನಮಾನಕ್ಕೆ ಚ್ಯುತಿ ಬರುವಂತೆ ಮಾಡಿತು.
APA, Harvard, Vancouver, ISO, and other styles
12

ಅಣ್ಣಮ್ಮ. "ಅಡಿಗರ ಕಾವ್ಯದಲ್ಲಿ ಮಹಿಳೆ". AKSHARASURYA 05, № 02 (2024): 35 to 41. https://doi.org/10.5281/zenodo.14034854.

Full text
Abstract:
ನವೋದಯದ ಜಾಡಿನಲ್ಲೇ ಮೊದಲ ಮೂರು ಸಂಕಲನ (ಭಾವತರಂಗ, ಕಟ್ಟುವೆವು ನಾವು, ನಡೆದು ಬಂದ ದಾರಿ) ಬರೆದ ಗೋಪಾಲಕೃಷ್ಣ ಅಡಿಗರು, ಈ ಮೂರು ಸಂಕಲನದಲ್ಲಿ ಮಹಿಳೆಯನ್ನು ಕುರಿತು ಅನೇಕ ಕವಿತೆಗಳನ್ನು ಬರೆಯುತ್ತಾರೆ. ರೊಮ್ಯಾಂಟಿಕ್ ಸಂಪ್ರದಾಯದಲ್ಲಿ ಕಂಡುಬರುವ ಅತಿಭಾವುಕತೆ, ಸೌಂದರ್ಯೋಪಾಸನೆ, ನಿಸ್ಸತ್ವವಾದ ಭಾಷೆ ತ್ಯಜಿಸಿ ವಾಸ್ತವಿಕ ಜೀವನಕ್ಕೆ ಸ್ಪಂದಿಸಿ ಕವಿತೆ ರಚಿಸುವ ಪ್ರಯೋಗಕ್ಕೆ ಕೈ ಹಚ್ಚಿದ್ದು ನಂತರ ಕಂಡು ಬರುತ್ತೆ. 1938ರಿಂದ 1942ರ ವರೆಗೆ ಅನೇಕ ಕವಿತೆಗಳನ್ನು ಬರೆದ ಅಡಿಗರು ‘ಜೀವನಸಖಿ’ ‘ನಗು ನನ್ನ ನಲ್ಲೆ’ ‘ಮುಗುದೆ ಇವಳು’ ‘ನನ್ನವಳೀ ಹೆಣ್ಣು’ ‘ನನ್ನ ಮೋಹದ ಮೂರ್ತಿ’ ‘ಒಡೆದು ಬಿದ್ದ ಕೊಳಲು’ ‘ಹೆಣ್ಣು: 1’ ‘ಹೆಣ್ಣು: 2&rsquo
APA, Harvard, Vancouver, ISO, and other styles
13

ಎಮ್., ಶೆಲ್ವಿ ಬಾಲಕೃಷ್ಣನ್‌. "ಕಥಾ ಸಾಹಿತ್ಯದಲ್ಲಿ ಮಹಿಳೆ". AKSHARASURYA JOURNAL 05, № 03 Special Issue (2024): 84 to 89. https://doi.org/10.5281/zenodo.14246600.

Full text
Abstract:
ಸಾಹಿತ್ಯ ಪ್ರಪಂಚದಲ್ಲಿ ಕಥನ ಸಾಹಿತ್ಯ ತನ್ನದೇ ಆದ ವಿಶಿಷ್ಟ ಸ್ಧಾನಮಾನವನ್ನು ಹೊಂದಿದೆ. ಇದು ಬಹಳಷ್ಟು ಜನಪ್ರಿಯವಾದ ಮಾಧ್ಯಮ ಎಂದು ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಅದರಲ್ಲಿ ವಿಶೇಷವಾಗಿ ನಾವುಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಕಥಾಸಾಹಿತ್ಯವು ಒಂದಾಗಿದೆ. ಮಹಿಳಾ ಸಾಹಿತ್ಯವನ್ನು ಗಮನಿಸಿದಾಗ ಆಯಾಕಾಲಕ್ಕೆಅನುಗುಣವಾಗಿ ತಮ್ಮ ಅನುಭವಗಳನ್ನು,ಭಾವನೆಗಳನ್ನು ಅವಮಾನಗಳನ್ನು ಅಭಿವ್ಯಕ್ತ ಪಡಿಸಿರುವುದು ಕಂಡು ಬರುತ್ತದೆ. ಕಥಾ ಸಾಹಿತ್ಯದಲ್ಲಿ ಮಹಿಳೆಯರು ಬಹಳ ಪ್ರಮುಖವಾಗಿ ತಮ್ಮ ನೋವು-ದುಃಖ ದುಮ್ಮಾನಗಳನ್ನು ಹೇಳಿಕೊಳ್ಳುವ ಸಲುವಾಗಿ ಕಥನ ಸಾಹಿತ್ಯವನ್ನು ಮಾಧ್ಯವಾಗಿಸಿಕೊಂಡಿದ್ದಾರೆ. ಈ ಪ್ರಪಂಚವನ್ನು ನೋಡುವ ದೃಷ್ಟಿಯಲ್ಲಿ ಸ್ತ್ರೀ ಪುರುಷರ ನಡುವೆ ಆಳವಾದ ಮೂಲಭೂತವಾದ ಅಂತರವಿರುವುದನ್ನು ಕಾಣಬಹುದಾಗಿದೆ.
APA, Harvard, Vancouver, ISO, and other styles
14

ಮೀನಾಕುಮಾರಿ, ಎಂ. "ಟಿ. ವಿ ಮಾಧ್ಯಮದಲ್ಲಿ ಮಹಿಳೆಯರ ಸ್ಥಾನಮಾನ". AKSHARASURYA 04, № 02 (2024): 137 to 144. https://doi.org/10.5281/zenodo.11525979.

Full text
Abstract:
ಟಿ. ವಿ ಮಾಧ್ಯಮದಲ್ಲಿ ಮಹಿಳೆಯ ಸ್ಥಾನಮಾನಗಳ ಕುರಿತು ಅನೇಕ ಚರ್ಚೆಗಳು ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಜನಸಾಮಾನ್ಯರ ಮೇಲೆ ಅತಿ ಹೆಚ್ಚು ಪ್ರಭಾವವನ್ನು ಬೀರುತ್ತಿವೆ. ಸುದ್ದಿಯಾಗಲಿ, ಮನರಂಜನೆಯಾಗಲಿ ಇನ್ನೂ ಮತ್ತಿತರ ವಿಷಯಗಳಾಗಲಿ ದಿನದಿಂದ ದಿನಕ್ಕೆ ಭಿನ್ನತೆಯನ್ನು ಪಡೆದುಕೊಳ್ಳುತ್ತಿವೆ. ಈ ಬೆಳವಣಿಗೆಯಲ್ಲಿ ಮಹಿಳೆಯ ಪಾತ್ರಗಳೂ ಸಹ ಬದಲಾಗುತ್ತಿವೆ. ಮಾಧ್ಯಮಗಳು ಮಹಿಳೆಯನ್ನು ಹೆಚ್ಚು ಹೆಚ್ಚು ಕಡೆ ಪ್ರಬಲೆಯಾಗಿ, ಧೈರ್ಯದ ಮೂರ್ತಿಯಾಗಿ, ಸಧೃಡೆಯಾಗಿ ತೋರಿಸುವ ಪ್ರಯತ್ನಗಳು ನಡೆಯುತ್ತಿವೆ. ಹಾಗೆಯೇ ಅದಕ್ಕೆ ವೈರುಧ್ಯವೆಂಬಂತೆ ಖಳನಾಯಕಿಯಾಗಿ, ಧೂರ್ತೆಯಾಗಿ, ಅಬಲೆಯಾಗಿ ಬಿಂಬಿಸುತ್ತಲೂ ಇವೆ. ಉದ್ಯೋಗಸ್ಥ, ವಿಚಾರವಂತ ಮಹಿಳೆಯರನ್ನು ಗಮನದಲ್ಲಿರಿಸಿಕೊಂಡು ಮಾಧ್ಯಮಗಳು ತಮ್ಮ ಕಾರ್ಯಕ್ರಮಗಳನ್ನು ರೂಪಿಸುವುದು ತೀರಾ ಕಡಿಮೆ. ಹಾಗೆ
APA, Harvard, Vancouver, ISO, and other styles
15

ಲಕ್ಷ್ಮೀ, ಎಲ್. ಪೂಜಾರಿ. "ವಚನ ಚಳವಳಿ ಮತ್ತು ಮಹಿಳೆ". AKSHARASURYA JOURNAL 06, № 05 (2025): 54 to 59. https://doi.org/10.5281/zenodo.15504231.

Full text
Abstract:
ವಚನ ಸಾಹಿತ್ಯ ಹನ್ನೆರಡನೇ ಶತಮಾನದಲ್ಲಿ ಹುಟ್ಟಿಕೊಂಡಂತಹ ವಿಶಿಷ್ಟ ಸಾಹಿತ್ಯದ ಪ್ರಕಾರ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವುದನ್ನು ಕಾಣುತ್ತೇವೆ. ಈ ಯುಗವನ್ನು ಸಾಮಾಜಿಕ ಪರಿವರ್ತನೆ ಯುಗ ಎಂದು ಕರೆಯುವಷ್ಟರಮಟ್ಟಿಗೆ ಬದಲಾವಣೆ ಆಗಿರುವುದನ್ನು ಕಾಣುತ್ತೇವೆ. ವಚನ ಎಂದರೆ ಮಾತು, ಉಕ್ತಿ ಎಂಬ ಅರ್ಥವನ್ನು ಹೊಂದಿದ್ದು ಗದ್ಯ ಪದ್ಯಗಳ ರೂಪದಲ್ಲಿ ಕಂಡುಬಂದಿದೆ ಮಹಿಳೆಯರ ಸಮಾನತೆಗೆ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ.ಶತಮಾನಗಳಿಂದ ಅಸ್ಪೃಳಾಗಿದ್ಧ ಅದೃಶ್ಯಳಾಗಿದ್ಧ ಹೆಣ್ಣನ್ನು ವಚನಕಾರರು ಮಾನವೀಯ ದೃಷ್ಟಿಯಿಂದ ಕಂಡಿದ್ದಾರೆ. ಪುರುಷನ ಹಾಗೆ ಮಹಿಳೆಗೆ ಸಮಾನವಾದ ಸ್ಥಾನವನ್ನು ನೀಡುವ ಮೂಲಕ 12ನೇ ಶತಮಾನದಲ್ಲಿ ವಚನಕಾರರು ಮಾಡಿದ ಒಂದು ಬೃಹತ್ ಬದಲಾವಣೆ ಇಡೀ ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿದೆ. ಸ್ತ್ರೀಯರ ಸಮಾನತೆಗಾಗಿ ಮಾಡಿದ ಮೊದಲ ಚಳುವ
APA, Harvard, Vancouver, ISO, and other styles
16

ಪವಿತ್ರ, ಎಸ್. "ಬೌದ್ಧ ಧಮ್ಮ ಮತ್ತು ಮಹಿಳೆ". AKSHARASURYA JOURNAL 06, № 05 (2025): 133 to 140. https://doi.org/10.5281/zenodo.15504377.

Full text
Abstract:
ಈ ಲೇಖನದಲ್ಲಿ ಬುದ್ದನ ಮೇಲಿನ ಕೆಲವು ಆರೋಪಗಳಿಗೆ ಉತ್ತರವನ್ನು ಹುಡುಕುವ ಪ್ರಯತ್ನ ಮಾಡಲಾಗಿದೆ. ಅದಕ್ಕೆ ಅಂಬೇಡ್ಕರ್‌ ಅವರು ತಮ್ಮ ಬರಹ ಮತ್ತು ಭಾಷಣಗಳಲ್ಲಿ ಆರೋಪಗಳಿಗೆ ವಿವರಣೆ ನೀಡಿದ್ದಾರೆ. ಅದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಬುದ್ದ ತನ್ನ ಹೆಂಡತಿಯಾದ ಯಶೋಧರೆಯ ಅನುಮತಿ ಕೇಳದೆ ತೊರೆದು ಬಂದ, ಮಗನ ಮುಖವನ್ನು ಸಹ ನೋಡಲಿಲ್ಲ. ಬುದ್ದ ತನ್ನ ಸಂಘದಲ್ಲಿ ಮಹಿಳೆಯರಿಗೆ ಪ್ರವೇಶ ನೀಡಲಿಲ್ಲ. ಬುದ್ದ ತನ್ನ ಸಂಘದವರಿಗೆ ಮಹಿಳೆಯರ ವಿಷಯದಲ್ಲಿ ಸದಾ ಜಾಗ್ರತೆ ವಹಿಸಬೇಕು ಎಂದು ಹೇಳುತ್ತಿದ್ದ ಎಂಬುದು ಬುದ್ದನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಕಾರಣವಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ವೈದಿಕ ಧರ್ಮ ಪ್ರಣೀತ ಮನುಸ್ಮೃತಿ, ರಾಮಾಯಣ ಮತ್ತು ಮಹಾಭಾರತ ಕೃತಿಗಳು ಮಹಿಳೆಯರನ್ನು ಹೇಗೆ ಚಿತ್ರಿಸಿವೆ, ಅದರಲ್ಲಿ ಮಹಿಳೆಯರ ಸ್ಥಾನಮಾನಗಳೇನು
APA, Harvard, Vancouver, ISO, and other styles
17

ರಶ್ಮಿ, ಪಿ. "ಗೊರೂರರ 'ವೈಯ್ಯಾರಿ' ಕಥಾಸಂಕಲನದಲ್ಲಿನ ಮಹಿಳಾ ಪಾತ್ರಗಳು". AKSHARASURYA JOURNAL 05, № 03 Special Issue (2024): 76 to 83. https://doi.org/10.5281/zenodo.14246574.

Full text
Abstract:
ಆಧುನಿಕ ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದಲ್ಲಿ ಕಥಾಪ್ರಕಾರದಲ್ಲಿ ಸಾಧನೆ ಮಾಡಿದ ಹಿರಿಯ ಕಥೆಗಾರರ ಪೈಕಿ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ರವರು ಒಬ್ಬರು. ಇವರ 140ಕ್ಕೂ ಹೆಚ್ಚಿನ ಕಥೆಗಳು ಆರು ಕಥಾ ಸಂಕಲನಗಳಲ್ಲಿ ಹರಡಿಕೊಂಡಿವೆ. ಇವರ ‘ವೈಯ್ಯಾರಿ’ ಕಥಾ ಸಂಕಲನದಲ್ಲಿನ ‘ಭೂತಯ್ಯನ ಮಗ ಅಯ್ಯು’, ‘ಗಂಡುಬೀರಿ ಹೊಸಬಿ’, ‘ಪುಟ್ಟ ಮಲ್ಲಿಗೆ’, ‘ಈಡಿಗರ ಹೆಣ್ಣು’, ‘ಲಕ್ಕಿಯ ಗಂಡಂದಿರು’ ಎಂಬ ಕಥೆಗಳ ವ್ಯಾಪ್ತಿಯಲ್ಲಿ ಬರುವ ಮಹಿಳಾ ಪಾತ್ರಗಳನ್ನು ವಿವೇಚನೆ ಮಾಡುವುದು ಪ್ರಸ್ತುತ ಲೇಖನದ ಉದ್ದೇಶ. ಕೌಟುಂಬಿಕ ಜೀವನದಲ್ಲಿ ತಾಯಿಯಾಗಿ, ಸೊಸೆಯಾಗಿ, ಮಗಳಾಗಿ ಎಲ್ಲಾ ಅವಸ್ಥೆಗಳಲ್ಲಿ ತನ್ನ ಅಸ್ಮಿತೆಯ ಮುದ್ರೆಯನ್ನು ಒತ್ತುವ ಮಹಿಳೆ ಸಮಾಜದಲ್ಲಿ ತನ್ನ ಸ್ವಾತಂತ್ರ್
APA, Harvard, Vancouver, ISO, and other styles
18

ಸುಂದರಿ, ಡಿ. "ವಚನ ಚಳುವಳಿ ಮತ್ತು ಸಶಕ್ತ ಮಹಿಳೆ". International Journal of Kannada Research 3, № 4 (2017): 44–46. https://doi.org/10.22271/24545813.2017.v3.i4a.1072.

Full text
APA, Harvard, Vancouver, ISO, and other styles
19

ನೇತ್ರಾವತಿ, ಎಸ್. "ಧರ್ಮದ ಒಳಗಡೆ ಸಿಲುಕಿದ ಮುಸ್ಲಿಂ ಮಹಿಳೆ". AKSHARASURYA 03, № 05 (2024): 114–27. https://doi.org/10.5281/zenodo.10938130.

Full text
Abstract:
ಧರ್ಮ ಎಂದರೆ ಮಾನವೀಯ ಮೌಲ್ಯಗಳನ್ನು, ಅಹಿಂಸೆಯಿಂದ ಕೂಡಿರುವಂತಹದ್ದು, ಎಲ್ಲರನ್ನು ಪ್ರೀತಿಯಿಂದ, ಮಮತೆಯಿಂದ ನೋಡಿಕೊಳ್ಳುವುದನ್ನು ಧರ್ಮ ಎನ್ನಬಹುದು. ಹಾಗೆಯೇ ಯಾವುದೇ ಆಚಾರ-ವಿಚಾರಗಳನ್ನು, ಮಾನವ ಸಂಬಂಧಗಳನ್ನು ಪವಿತ್ರ ಭಾವನೆಯಿಂದ, ಯಾವುದೇ ಜೀವಿಗೂ ತೊಂದರೆಯನ್ನು ನೀಡದೆ ನಡೆಸಿಕೊಳ್ಳುವುದನ್ನು ಧರ್ಮ ಎಂದು ಹೇಳಬಹುದು. ಭಾರತ ಹಲವು ಧರ್ಮಗಳನ್ನು ಒಳಗೊಂಡಿದೆ, ಅದರಲ್ಲಿ ಮುಸ್ಲಿಂ ಧರ್ಮವೂ ಒಂದು. ಹಿಂದೂಗಳಂತೆ ಮುಸ್ಲಿಂ ಧರ್ಮದವರನ್ನು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ಗುರುತಿಸಬಹುದು. ಯಾವುದೇ ಧರ್ಮದಲ್ಲಾದರೂ ಮಹಿಳೆಯರಿಗೆ ಸ್ವಾತಂತ್ರ್ಯ ದೊರೆಯುವುದು ತೀರ ಕಡಿಮೆ ಪ್ರಮಾಣದಲ್ಲಿ. ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ಪ್ರಾಚೀನ ಕಾಲದಲ್ಲಿ ಗೌರವ, ಮನ್ನಣೆ, ತಮ್ಮ ಬದುಕನ್ನು ಅವರೇ ನಿರ್ಮಿಸಿಕೊಳ್ಳುವ ಅವಕಾಶ, ಸ್ವಾತಂತ್ರ್ಯ ಇತ್ತು
APA, Harvard, Vancouver, ISO, and other styles
20

ಸೀತಾ, ಹೆಚ್. ಎನ್. "ಕ್ರೀಡಾ ಮಹಿಳೆ : ಸಮಸ್ಯೆ ಮತ್ತು ಸವಾಲುಗಳು". AKSHARASURYA 03, № 06 (2024): 129 to 136. https://doi.org/10.5281/zenodo.11127245.

Full text
Abstract:
 ‘ಆಗದಾಗದು ಏನು ನನ್ನಿಂದ’ ಎನ್ನುವ ಬದಲು ಏನಾದಿತೋ ನೋಡೋಣ ಸಾಧ್ಯವಾದಷ್ಟು ಪ್ರಯತ್ನಿಸೋಣ ಎನ್ನುವ ನಿರ್ಧಾರ ಬದುಕಿನ ಹೊಲದಲ್ಲಿ ಬಂಗಾರದ ಬೀಜ ನೆಡುತ್ತದೆ. ಸಾಧಕನ ಹಾದಿಯಲ್ಲಿ ಇದೊಂದು ಮಹತ್ತರ ಹೆಜ್ಜೆ. ಯಾರೇ ಆಗಲಿ ಒಂದು ಹೆಜ್ಜೆ ಮುಂದಿಡದಿದ್ದರೆ ಪಯಣವಾದರೂ ಸಾಗುವುದೆಂತು? ಪಯಣ ಪ್ರಾರಂಭವಾಗುವುದೇ ಮುಂದೆ ಹೋಗಬೇಕೆಂಬ ಮನೋಬಲದ ಕ್ರಿಯೆಯಿಂದ, ಆಚರಣೆಯಿಂದ. ಹೀಗಿಲ್ಲದ ಮನುಜರ ಅದೆಷ್ಟೋ ಚಿಂತನೆಗಳು ಎಂದು ರೆಕ್ಕೆ ಹೊತ್ತಿ ಹಾರುವುದೇ ಇಲ್ಲ. ಮುಂದೆ ಕಾರಣವೆಂದರೆ ನನಸಾಗುವ ಸಾಮರ್ಥ್ಯ ಸಿದ್ಧಿಸಬೇಕಾದರೆ ಅನುಷ್ಠಾನದಲ್ಲಿ ಅಚಲ ನಂಬಿಕೆ ಇರಬೇಕು. ಸಾಧಿಸುವ ಅದಮ್ಯ ಉತ್ಸಾಹ ಪುಟಿಯುತ್ತಿರಬೇಕು. ಇಂಥ ಅದಮ್ಯ ಉತ್ಸಾಹವನ್ನಿರಿಸಿಕೊಂಡು ಕ್ರೀಡಾರಂಗದಲ್ಲಿ ಸಾಧನೆ ಮಾಡುತ್ತಿರುವ ಶರ್ಮಿಳಾನಿಕೋಲೇಟ್. ದೀಪಿಕಾಪಲ್ಲಿಕಲ್ ಸೈನಾನೆಹ್ವಾಲ
APA, Harvard, Vancouver, ISO, and other styles
21

ಲಕ್ಷ್ಮಿ, ಎಸ್. ಎಸ್. "ವೃತ್ತಿ ಹಾಗೂ ಕುಟುಂಬ ನಿರ್ವಹಣೆ: ಆಧುನಿಕ ಭಾರತೀಯ ಮಹಿಳೆಯ ಸವಾಲುಗಳು". AKSHARASURYA JOURNAL 03, № 04. SPECIAL ISSUE. (2024): 231 to 242. https://doi.org/10.5281/zenodo.10930824.

Full text
Abstract:
ಭಾರತ ದೇಶವು ತನ್ನ ಶ್ರೀಮಂತ ಸಂಸ್ಕೃತಿ ಮೌಲ್ಯಗಳು ಹಾಗೂ ಪರಂಪರೆಗೆ ವಿಶ್ವದಲ್ಲಿಯೇ ಪ್ರಸಿದ್ಧವಾಗಿದೆ. ಭಾರತೀಯ ಮಹಿಳೆಯು ಅನಾದಿ ಕಾಲದಿಂದಲೂ ಪತ್ನಿಯಾಗಿ, ಮಗಳಾಗಿ, ತಾಯಿಯಾಗಿ, ಕುಟುಂಬದ ಪೋಷಕಿಯಾಗಿ ಹಲವಾರು ಪಾತ್ರಗಳನ್ನು ಬಹಳ ಗೌರವಯುತವಾಗಿ ನಿರ್ವಹಿಸುತ್ತಾ ಬಂದಿದ್ದಾಳೆ. ಭಾರತದ ನೆಲದಲ್ಲಿ ಮಹಿಳೆಗೆ ವಿಶೇಷವಾದ ಮಹತ್ವದ ಸ್ಥಾನ ಇದೆ. ದೇವರ ಸ್ಥಾನದಲ್ಲಿಯೂ ಪೂಜಿಸಲ್ಪಡುತ್ತಾಳೆ. ಆದರೆ 21ನೆಯ ಶತಮಾನದಲ್ಲಿ ಜಾಗತಿಕರಣದ ಹಿನ್ನಲೆಯಲ್ಲಿ ಭಾರತೀಯ ಮಹಿಳೆಯು ಕುಟುಂಬವಷ್ಟೆ ಅಲ್ಲದೆ ಮನೆಯ ಹೊರಗಿನ ಕೆಲಸ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾಳೆ. ಕೇವಲ ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗಿರದೆ ಆಕೆಯ ವೃತಿ ಬದುಕಿನಲ್ಲಿಯೂ ಕೂಡ ಯಶಸ್ಸನ್ನು ಕಾಣುತ್ತಿದ್ದಾಳೆ. ಕುಟುಂಬದ ಆರ್ಥಿಕ ಸ್ಥಿತಿಗಳನ್ನು ಸುಧಾರಿಸಲು ಆಕೆಯ ಕೊಡುಗೆ ಮಹ
APA, Harvard, Vancouver, ISO, and other styles
22

ಮಂಜುಳ, ಎ. ಸಿ. "ಮಹಿಳಾ ಪತ್ರಿಕೋದ್ಯಮಿ ಎಂ. ಆರ್. ಲಕ್ಷಮ್ಮ". AKSHARASURYA JOURNAL 03, № 04. SPECIAL ISSUE. (2024): 243 to 253. https://doi.org/10.5281/zenodo.10930849.

Full text
Abstract:
ಭಾರತ ದೇಶವು ತನ್ನ ಶ್ರೀಮಂತ ಸಂಸ್ಕೃತಿ ಮೌಲ್ಯಗಳು ಹಾಗೂ ಪರಂಪರೆಗೆ ವಿಶ್ವದಲ್ಲಿಯೇ ಪ್ರಸಿದ್ಧವಾಗಿದೆ. ಭಾರತೀಯ ಮಹಿಳೆಯು ಅನಾದಿ ಕಾಲದಿಂದಲೂ ಪತ್ನಿಯಾಗಿ, ಮಗಳಾಗಿ, ತಾಯಿಯಾಗಿ, ಕುಟುಂಬದ ಪೋಷಕಿಯಾಗಿ ಹಲವಾರು ಪಾತ್ರಗಳನ್ನು ಬಹಳ ಗೌರವಯುತವಾಗಿ ನಿರ್ವಹಿಸುತ್ತಾ ಬಂದಿದ್ದಾಳೆ. ಭಾರತದ ನೆಲದಲ್ಲಿ ಮಹಿಳೆಗೆ ವಿಶೇಷವಾದ ಮಹತ್ವದ ಸ್ಥಾನ ಇದೆ. ದೇವರ ಸ್ಥಾನದಲ್ಲಿಯೂ ಪೂಜಿಸಲ್ಪಡುತ್ತಾಳೆ. ಆದರೆ 21ನೆಯ ಶತಮಾನದಲ್ಲಿ ಜಾಗತಿಕರಣದ ಹಿನ್ನಲೆಯಲ್ಲಿ ಭಾರತೀಯ ಮಹಿಳೆಯು ಕುಟುಂಬವಷ್ಟೆ ಅಲ್ಲದೆ ಮನೆಯ ಹೊರಗಿನ ಕೆಲಸ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾಳೆ. ಕೇವಲ ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗಿರದೆ ಆಕೆಯ ವೃತಿ ಬದುಕಿನಲ್ಲಿಯೂ ಕೂಡ ಯಶಸ್ಸನ್ನು ಕಾಣುತ್ತಿದ್ದಾಳೆ. ಕುಟುಂಬದ ಆರ್ಥಿಕ ಸ್ಥಿತಿಗಳನ್ನು ಸುಧಾರಿಸಲು ಆಕೆಯ ಕೊಡುಗೆ ಮಹ
APA, Harvard, Vancouver, ISO, and other styles
23

ಗೋವಿಂದರಾಜು, ಎನ್. "ಅತ್ತಿಮಬ್ಬೆಯ ಲಕ್ಕುಂಡಿ ಶಾಸನದ ವೈಶಿಷ್ಟ್ಯತೆ". AKSHARASURYA 03, № 06 (2024): 33 to 40. https://doi.org/10.5281/zenodo.11126881.

Full text
Abstract:
ಈ ಶಾಸನ ಮುಖ್ಯವಾಗಿ ಅತ್ತಿಮಬ್ಬೆ ಕಟ್ಟಿಸಿದ ಒಂದು ಬಸದಿಯ ವಿವರವನ್ನು ಮತ್ತು ಅದಕ್ಕೆ ದತ್ತಿ ಬಿಟ್ಟ ವಿವರವನ್ನು ತಿಳಿಸುತ್ತದೆ. ಇವುಗಳ ಜೊತೆಗೆ ಅವಳ ಮನೆತನದ ವೀರ ಪರಂಪರೆಯ ವಿವರ ತಿಳಿದುಬರುತ್ತದೆ. ಶಾಸನವು ಒಟ್ಟು ಎಂಬತ್ತೆಂಟು ಸಾಲುಗಳನ್ನು ಹೊಂದಿದೆ. ಸಂಸ್ಕೃತದ ಪ್ರಭಾವ ಶಾಸನದ ಮೇಲೆ ದಟ್ಟವಾಗಿದೆ. ಹಲವು ವೃತ್ತಗಳಲ್ಲಿ ರಚಿತವಾಗಿರುವ ಈ ಶಾಸನ ಸುಂದರ ಶೈಲಿಯಲ್ಲಿದ್ದು, ಇದರಲ್ಲಿ ಬಳಕೆಯಾಗಿರುವ ಹಲವಾರು ಬಿರುದು, ಉಪಮೆಗಳು, ರನ್ನನ ಕಾವ್ಯದಲ್ಲಿ ಇರುವುದರಿಂದ ತೀ.ನಂ.ಶ್ರೀಯವರು ರನ್ನನೇ ಈ ಶಾಸನವನ್ನು ಬರೆದಿರಬಹುದೆಂದು ಊಹಿಸುತ್ತಾರೆ. ಒಬ್ಬ ಮಹಿಳೆಯನ್ನು ಇಷ್ಟೊಂದು ಹೊಗಳುವ ಶಾಸನ ಕರ್ನಾಟಕದಲ್ಲಿ ಮತ್ತೊಂದಿಲ್ಲ. ಬೇರೆ ಪ್ರಕಾರಗಳಲ್ಲಿ ಇಷ್ಟೊಂದು ಹೊಗಳಿಸಿಕೊಂಡ ಮಹಿಳೆ ಮತ್ತೊಬ್ಬಳಿಲ್ಲ. ಗದಗ ಬಳಿಯ ಲಕ್ಕುಂಡಿ ಗ್ರಾಮದಲ್ಲಿ ದೊರೆಯುವ ಈ ಶ
APA, Harvard, Vancouver, ISO, and other styles
24

ಹೇಮಲತ, ಹೆಚ್. ಆರ್. "ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಮಹಿಳಾ ಸಾಮಾಜಿಕ ನ್ಯಾಯತತ್ವ: ಒಂದು ಅವಲೋಕನ". AKSHARASURYA JOURNAL 03, № 04. SPECIAL ISSUE. (2024): 157 to 169. https://doi.org/10.5281/zenodo.10929989.

Full text
Abstract:
ಹಿಂದೂ ಧರ್ಮದಲ್ಲಿ ಶೂದ್ರ ಮತ್ತು ದಲಿತರ ಶೋಷಣೆ ಆದಷ್ಟೇ ಮಹಿಳೆಯರ ಶೋಷಣೆಯೂ ಆಗಿದೆ. ಹಿಂದೂ ಸಮಾಜದಲ್ಲಿ ಮಹಿಳೆಯು ಅತಿ ಕೀಳು ಮಟ್ಟದ ಸ್ಥಾನವನ್ನುಹೊಂದಿದ್ದಾಳೆ. ಜೀವನದ ಯಾವುದೇ ಕ್ಷೇತ್ರದಲ್ಲೂ ಮಹಿಳೆ ಪ್ರಗತಿ ಹೊಂದಬಾರದೆಂಬ ನಿರ್ಬಂಧನೆಗಳನ್ನು ಹೇರಲಾಗಿತ್ತು. ಮಹಿಳೆಯು ಕೇವಲ ಪುರುಷನ ಆಸೆ ಆಕಾಂಕ್ಷೆಗಳನ್ನು ತೀರಿಸುವ ಒಂದು ಸುಂದರವಾದ ವಸ್ತು ಮತ್ತು ಮಕ್ಕಳನ್ನು ಹೆರುವ ಯಂತ್ರವೆಂದು ಪರಿಗಣಿಸಲಾಗಿತ್ತು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಕೇವಲ ಗುಲಾಮಳಂತೆ ಮನೆಗೆಲಸ ಮಾಡಿ ಕುಟುಂಬದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಅವಳ ಆದ್ಯ ಕರ್ತವ್ಯವೆಂದು ಭಾವಿಸಲಾಗಿತ್ತು. ಯಾವುದೇ ಕಾರಣಕ್ಕೂ ಮಹಿಳೆ ಹೊರಗಿನ ಸಮಾಜದಲ್ಲಿ ಇತರರಂತೆ ಧೈರ್ಯ ಮತ್ತು ಗೌರವದಿಂದ ಭಾಗವಹಿಸುವಂತಿರಲಿಲ್ಲ. ಹಾಗೇನಾದರೂ ಮಾಡಿದಿದ್ದರೆ ಅವಳು ಇಡೀ ಪುರುಷ ವರ್ಗ ಮತ್ತು
APA, Harvard, Vancouver, ISO, and other styles
25

ಮಾನಸ, ಪ್ರಿಯದರ್ಶಿನಿ ಹೆಚ್. ಬಿ. "ಸುನಂದಾ ಕಡಮೆ ಅವರ ಕಥೆಗಳಲ್ಲಿ ಮಹಿಳೆ ಮತ್ತು ವೈಚಾರಿಕ ಪ್ರಜ್ಞೆ". AKSHARASURYA JOURNAL 05, № 03 Special Issue (2024): 53 to 60. https://doi.org/10.5281/zenodo.14246514.

Full text
Abstract:
ಸುನಂದಾ ಪ್ರಕಾಶ ಕಡಮೆ ಅವರ ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಕಂಬಗಳ ಮರೆಯಲ್ಲಿ ಹಾಗೂ ತುದಿ ಮಡಚಿಟ್ಟ ಪುಟ-ಕಥಾ ಸಂಕಲನಗಳ ಕಥೆಗಳಲ್ಲಿ ಕಂಡುಬರುವ ಸಂಪ್ರದಾಯ, ಆಚರಣೆ, ವೈಚಾರಿಕತೆ ಇವುಗಳನ್ನು ಈ ಲೇಖನದಲ್ಲಿ ವಿವರಣಾತ್ಮಕವಾಗಿ ವಿಶ್ಲೇಷಿಸಲಾಗಿದೆ. ಸುನಂದಾ ಪ್ರಕಾಶ ಕಡಮೆ ಅವರ ಬಹುತೇಕ ಕತೆಗಳ ಧಾತು ಕುಟುಂಬ ಮತ್ತು ಸಮಾಜದೊಳಗೆ ಗಿರಕಿ ಹೊಡೆಯುತ್ತದೆ. ಕುಟುಂಬದೊಳಗೆ ಹುಟ್ಟುವ ಕಥೆ ಸಾಮಾಜಿಕ ಆಯಾಮ ಪಡೆದುಕೊಳ್ಳುತ್ತಾ ಸಮಕಾಲೀನ ಸಮಾಜ, ಮಾನವೀಯ ಸಂಬಂಧಗಳನ್ನು ಕುರಿತು ಚಿಂತಿಸುತ್ತದೆ. ಹಾಗಾಗಿ ಕಥನ ಲೋಕದ ವಿಸ್ತಾರವನ್ನು ತೆರೆದಿಡುವ ಸುನಂದಾ ಪ್ರಕಾಶ ಕಡಮೆ ಅವರ ಕತೆಗಳಲ್ಲಿ ಬಲವಾದ ಆತ್ಮವಿಶ್ವಾಸ ಮತ್ತು ಪ್ರಬುದ್ಧಗೊಂಡ ಕಥನ ಕೌಶಲ್ಯ ಕಾಣುತ್ತದೆ. ಸಂಸಾರ ನಿತ್ಯದ ವಿವರಗಳೇ ಸುನಂದಾ ಅವರ ಬಹುಪಾಲು ಕತೆಗಳ ಇಟ್ಟಿಗೆ, ಮಣ್ಣು, ಗಾರೆ ಇತ
APA, Harvard, Vancouver, ISO, and other styles
26

ವಿಜಯಲಕ್ಷ್ಮಿ, ದತ್ತಾತ್ರೇಯ ದೊಡ್ಡಮನಿ. "ಯಾಜ್ಞಸೇನಿಯ ಆತ್ಮಕಥನ: ದಲಿತತ್ವದ ನೆಲೆಗಳು". AKSHARASURYA JOURNAL 04, № 06 (2024): 135 to 142. https://doi.org/10.5281/zenodo.13725621.

Full text
Abstract:
ದಲಿತರು ಎಂದರೆ ಶೋಷಿತರು ಎನ್ನುವುದು ಕೇವಲ ಹಾಳೆಗಳಲ್ಲಿ, ಅಕ್ಷರ ರೂಪದಲ್ಲಿ ಮಾತ್ರ ಉಳಿದುಕೊಂಡಿದೆ. ಸಮಾಜದಲ್ಲಿ ಅದು ರೂಢಿಗೆ ಬಂದೇ ಇಲ್ಲ. ದಲಿತ ಎಂದರೆ ಕೇವಲ ಜಾತಿ ಸೂಚಕ ಪದವಾಗಿ ಮಾತ್ರ ಬಳಕೆಯಲ್ಲಿದೆ. ಎಲ್ಲಾ ವಿದ್ವಾಂಸರ ಹೇಳಿಕೆ ಗಳನ್ನು ಆಧಾರವಾಗಿಟ್ಟುಕೊಂಡು, ಯಾವುದೇ ವರ್ಗದ ಶೋಷಿತ ಮಹಿಳೆಯನ್ನು ದಲಿತ ಮಹಿಳೆ ಎಂದು ಗುರುತಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿಯೇ ಮಹಾಭಾರತದಲ್ಲಿ ಮುಖ್ಯ ಪಾತ್ರವಾಗಿ ಕಾಣುವ ದ್ರೌಪದಿಯು ಮಾನಸಿಕವಾಗಿ, ಕೆಲವೊಮ್ಮೆ ದೈಹಿಕವಾಗಿ ನಿರಂತರವಾಗಿ ಶೋಷಣೆಗೆ ಒಳಗಾಗಿದ್ದಾಳೆ. ಆದ್ದರಿಂದಲೇ ಈ ಲೇಖನದಲ್ಲಿ ಯಾಜ್ಞಸೇನೆಯನ್ನು ದಲಿತ ಸ್ತ್ರೀ ಎಂದು, ಅವಳ ಪ್ರಜ್ಞಾಪೂರ್ವಕವಾದ ವ್ಯವಸ್ಥೆಯ ವಿರುದ್ಧವಾದ ಧ್ವನಿಯನ್ನು ದಲಿತತ್ವದ ಧ್ವನಿಯಾಗಿ ಗುರುತಿಕೊಂಡು ಈ ಲೇಖನದಲ್ಲಿ ಚರ್ಚಿಸಿಲಾಗಿದೆ.
APA, Harvard, Vancouver, ISO, and other styles
27

ಸುಮಾ, ವಸಂತ ಸಾವಂತ. "ಚಾಜ ನಾಟಕದಲ್ಲಿ ಮಹಿಳಾ ಸಂವೇದನೆ". AKSHARASURYA 05, № 02 (2024): 123 to 130. https://doi.org/10.5281/zenodo.14035359.

Full text
Abstract:
ಆಧುನಿಕ ಸಾಹಿತ್ಯದ ಸಂದರ್ಭದಲ್ಲಿ ಮಹಿಳೆಯರು ಕಥೆ-ಕಾದಂಬರಿ ಪ್ರಕಾರಗಳಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಆದರೆ ರಂಗಭೂಮಿಯಲ್ಲಿ ನಾಟಕರಚನೆಗೆ ಸಂಬಂಧಿಸಿದಂತೆ ಅಂತಹ ದೊಡ್ಡಸಾಧನೆ ಕಾಣಿಸುವುದಿಲ್ಲ. ಆದರೆ ಇತ್ತೀಚಿನ ದಶಕಗಳಲ್ಲಿ ಮಹಿಳೆ ಅನೇಕ ಮಹತ್ವದ ನಾಟಕ ಕೃತಿಗಳನ್ನು ಕೊಟ್ಟಿದ್ದಾಳೆ. ಅಂತಹ ನಾಟಕಗಳಲ್ಲಿ ಚಾಜ ನಾಟಕವು ಒಂದಾಗಿದೆ. ಹಿಂದಿನ ಕಾಲದಿಂದಲೂ ಪುರುಷ ಪ್ರಧಾನತೆ, ಸಾಮ್ರಾಜ್ಯಶಾಹಿಗಳು, ಮತ್ತು ಪುರೋಹಿತಶಾಹಿತ್ವಗಳು ಎಲ್ಲವೂ ಒಟ್ಟಾಗಿಯೇ ಮಹಿಳೆಯರ ಮೇಲೆ ಹಲವಾರು ಕಟ್ಟುಪಾಡುಗಳನ್ನು ಹೊರಿಸಿವೆ. ಹೆಣ್ಣು ಭೋಗದ ವಸ್ತು ಎಂದು ಪುರುಷಪ್ರಧಾನ ವ್ಯವಸ್ಥೆಯು ಭಾವಿಸುತ್ತದೆ. ಪುರುಷನ ಅಧಿಕಾರತ್ವದಿಂದ ಅವನೇ ಹುಟ್ಟು ಹಾಕಿದ ಧರ್ಮ, ನಿಯಮಗಳು, ಗೊಡ್ಡು ಸಂಪ್ರದಾಯಗಳು, ಕಟ್ಟುಪಾಡುಗಳು ಹೆಣ್ಣನ್ನು ನಿರ್ದಾಕ್ಷಿಣ್ಯವಾಗಿ ನಡೆಸಿಕೊಳ್ಳುತ್ತವೆ.
APA, Harvard, Vancouver, ISO, and other styles
28

ಸಾವಿತ್ರಿ, ಮಠ. "ವಚನ ಚಳುವಳಿ ಮತ್ತು ಮಹಿಳಾ ಸಮಾನತೆ". AKSHARASURYA JOURNAL 06, № 05 (2025): 201 to 206. https://doi.org/10.5281/zenodo.15504642.

Full text
Abstract:
ಹನ್ನೆರಡನೆಯ ಶತಮಾನದಲ್ಲಿ ವಚನಗಳ ಮೂಲಕ ಸಾಮಾಜಿಕ ಚಿಂತನೆ, ವೈಚಾರಿಕತೆ, ಧಾರ್ಮಿಕ ಓರೆಕೋರೆಗಳ ವಿಶ್ಲೇಷಣೆ ಕಾಯಕ ಶ್ರದ್ಧೆಯೊಂದಿಗೆ ಮಹಿಳೆಯರಿಗೆ ಸ್ವಾತಂತ್ರ್ಯ ಸಮಾನತೆ ನೀಡಿ ಅವರಲ್ಲಿ ವಿಶ್ವಾಸವನ್ನು ಮೂಡಿಸಿದವರು ಶಿವಶರಣರು. ತಮ್ಮ ವಚನಗಳಲ್ಲಿ ಲಿಂಗಾತೀತ ನೆಲೆಯನ್ನು ಪುರಸ್ಕರಿಸಿ, ಲಿಂಗತಾರತಮ್ಯದ ಸಮಾಜದಲ್ಲಿ ವಿಚಾರ, ವಿಮರ್ಶೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು ವಚನ ಚಳುವಳಿ. ಹೆಣ್ಣನ್ನು ʻಮಾಯೆʼ ಎಂದು ಹೀಗಳೆಯುತ್ತಿದ್ದ ಪುರುಷ ಪ್ರಧಾನ ಮನೋಧೋರಣೆಗೆ ತಡೆಹಾಕಿ ಹೆಣ್ಣನ್ನು ಹತ್ತಿಕ್ಕುವ ಸಮಾಜದ ಕೌರ್ಯವನ್ನು ಖಂಡಿಸಿ ಸ್ತ್ರೀಸಂವೇದನೆಗೆ ಹೊಸ ಆಯಾಮವನ್ನು ತಂದುಕೊಟ್ಟವರು ವಚನಕಾರರು. ಇದರಿಂದ ಸಮಾಜದಲ್ಲಿ ಮಹಿಳೆಯರಿಗೆ ಸಾಕಷ್ಟು ಅವಕಾಶಗಳು ದೊರೆತು ಅನುಭವ ಮಂಟಪದಲ್ಲಿ ಪುರುಷರ ಸಮಾನವಾಗಿ ಚರ್ಚೆ ಮಾಡಿ ಸಮಾಜಕ್ಕೆ ಮಹಿಳೆಯರ ಕೊಡುಗೆ ಏನೆಂಬು
APA, Harvard, Vancouver, ISO, and other styles
29

ಮಹಾದೇವಿ, ಹುಣಶೀಬೀಜ. "ಮಹಾರಾಷ್ಟ್ರ್ರದಲ್ಲಿ ದಲಿತ ಚಳುವಳಿ: ಮಹಿಳಾ ಪ್ರತಿನಿಧೀಕರಣ". AKSHARASURYA JOURNAL 06, № 05 (2025): 60 to 71. https://doi.org/10.5281/zenodo.15504245.

Full text
Abstract:
ಕೌಟುಂಬಿಕ ಜವಾಬ್ದಾರಿಗಳಲ್ಲಿ ಮುಳುಗಿ ಹೋಗಿರುವ ಮಹಿಳೆ ಎಲ್ಲಾ ಅಡೆತಡೆಗಳನ್ನು ಮೀರಿ ಸಾರ್ವಜನಿಕ ಹೋರಾಟ, ರಾಜಕಾರಣ, ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡರೂ ಎಲೆ ಮರೆಯ ಕಾಯಿಯಂತೆ ಇರಬೇಕಾಗುತ್ತದೆ. ಹೀಗಿರುವಾಗಲೇ ಮಹಾರಾಷ್ಟ್ರ್ರದ ಸಾರ್ವಜನಿಕ ಹೋರಾಟಗಳಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದನ್ನು ಕಾಣಬಹುದು. ಅಂಬೇಡ್ಕರ್‌ರ ಜೊತೆಗೆ ನಿಮ್ನ ವರ್ಗಗಳ ಮಹಾವಿಮೋಚನಾ ಚಳುವಳಿಯಲ್ಲಿ ಸಾವಿರಾರು ಮಹಿಳೆಯರು ಪಾಲ್ಗೊಂಡರು. ಭಾರತ ರಾಜಕೀಯ ಸ್ವಾತಂತ್ರ್ಯ ಪಡೆಯುವ ಹವಣಿಕೆಯಲ್ಲಿದ್ದಾಗ ಅಂಬೇಡ್ಕರ್‌ರು ಸಮಾಜದ ಅಂಚಿಗೆ ದೂಡಲ್ಪಟ್ಟವರ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದರು. ದಲಿತ ಸಂಘಟನೆ, ಹೋರಾಟ, ಚಳುವಳಿ, ದಲಿತ ಪತ್ರಿಕೆಗಳ ಪ್ರಕಟಣೆ, ಎದುರಿಸಿದ ಚುನಾವಣೆ, ಬೌದ್ಧ ಧರ್ಮ ಮತಾಂತರ ಹೀಗೆ ಅವರು ಕೈಗೊಂಡ ಮಹತ್ವದ ಕಾರ್ಯಗಳಲ್
APA, Harvard, Vancouver, ISO, and other styles
30

ಶೀಲಾದೇವಿ, ಎಸ್. ಬಿರಾದಾರ. "ವೀರಾಂಗಿಣಿ ಅಕ್ಕಮಹಾದೇವಿ". AKSHARASURYA JOURNAL 04, № 06 (2024): 152 to 156. https://doi.org/10.5281/zenodo.13725661.

Full text
Abstract:
ಹಳೆಗನ್ನಡ ಸಾಹಿತ್ಯವು ರಾಜ್ಯಾಶ್ರಯದಲ್ಲಿಯೇ ಪಂಡಿತ ಪಾಮರರಿಗೆ ಮಾತ್ರ ಸಿಮಿತವಾಗಿತ್ತು. ಹನ್ನೆರಡನೆ ಶತಮಾನದಲ್ಲಿ ವಚನ ಸಾಹಿತ್ಯಯೂ ತೀರಾ ಸರಳ ಸಹಜವಾಗಿ ತಾವು ಬೋದಿಸುವುದು ಸಾಮಾನ್ಯನಿಗೂ ತಲುಪಬೇಕು ಎಂಬ ಆಶಯ ಹೊಂದಿದವರು. ಶಿವಶರಣರು ಶಿವಶರಣೆಯರ ಆಲೋಚನೆಗಳನ್ನು ಅನುಭವಗಳನ್ನು ವಿಚಾರಧಾರೆಗಳೆ ವಚನ. ಜನಸಾಮಾನ್ಯರ ಭಾಷೆಯಲ್ಲಿಯೆ ತಮ್ಮ ಭಾವನೆಗಳನ್ನು ಅನಿಸಿಕೆಗಳನ್ನು ತತ್ವಗಳನ್ನು ಹಾಗೂ ಅವರ ಆತ್ಮಾನುಭವಗಳೇ ವಚನರೂಪದಲ್ಲಿ ವ್ಯಕ್ತಪಡಿಸಿದ್ದು ವಚನ ಸಾಹಿತ್ಯ. ವಚನ ಸಾಹಿತ್ಯ ವಿಶ್ವಕ್ಕೆ ಕೊಡುಗೆಯಾಗಿ ನೀಡಿರುವುದು ಕನ್ನಡ ಸಾಹಿತ್ಯದ ಹೆಮ್ಮೆಯಾಗಿದೆ. ವಚನ ಸಾಹಿತ್ಯದಲ್ಲಿ ಕಾಣಿಸುವ ವಿಶಿಷ್ಟ ಪ್ರತಿಭೆಯ ಮಹಿಳೆ ಅಕ್ಕಮಹಾದೇವಿ. ಕನ್ನಡ ಸಾಹಿತ್ಯದ ಮೊದಲ ಕವಿಯತ್ರಿ ಮತ್ತು ವಚನಗಾರ್ತಿ, 12 ನೆಯ ಶತಮಾನದ ಪ್ರಪ್ರಥಮವಾಗಿ ಪುರುಷರಿಗೆ ಸಮಾನವಾಗಿ ನಿಂ
APA, Harvard, Vancouver, ISO, and other styles
31

ಚಂದ್ರಾವತಿ, ಶೆಟ್ಟಿ. "ಡಾ. ಬಿ.ಆರ್. ಅಂಬೇಡ್ಕರ್‌ ಮತ್ತು ಮಹಿಳಾ ಸಬಲೀಕರಣ". AKSHARASURYA JOURNAL 06, № 05 (2025): 25 to 29. https://doi.org/10.5281/zenodo.15504175.

Full text
Abstract:
ʼಸಂವಿಧಾನ ಶಿಲ್ಪಿ’ ʼಬಾಬಾ ಸಾಹೇಬ್’ ಎಂದು ಜನಪ್ರಿಯರಾಗಿರುವ ಡಾ. ಬಿ. ಆರ್. ಅಂಬೇಡ್ಕರ್‌ರು ಭಾರತ ದೇಶ ಕಂಡ ಬಹುದೊಡ್ಡ ಸಮಾಜ ಸುಧಾರಕ ನ್ಯಾಯಶಾಸ್ತ್ರಜ್ಞರೂ ಅರ್ಥಶಾಸ್ತ್ರಜ್ಞರೂ ಆಗಿರುವ ಬಿ. ಆರ್. ಅಂಬೇಡ್ಕರ್‌ ಅವರು ಮಾಹಾನ್ ಚಿಂತಕರು ಹೌದು. ಶ್ರೇಷ್ಠ ರಾಜಕೀಯ ನಾಯಕರಾಗಿರುವ ಇವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಸಮಾಜದ ಕಲ್ಯಾಣಕ್ಕಾಗಿ ಮಹಿಳೆಯರು ಮತ್ತು ದೀನದಲಿತ ವರ್ಗಕ್ಕಾಗಿ ಕೆಲಸ ಮಾಡಿದರು. ಎಲ್ಲಾ ಸಮಾಜಕ್ಕೂ ದಾರಿದೀಪರಾಗಿರುವ ಬಿ. ಆರ್. ಅಂಬೇಡ್ಕರ್‌ ಅವರು ಕೇವಲ ಒಂದು ವರ್ಗಕ್ಕಾಗಿ ಹೋರಾಟ ಮಾಡಿದ್ದಲ್ಲ. ಕಾರ್ಮಿಕರು, ರೈತರು ಮತ್ತು ಮಹಿಳೆಯರನ್ನು ಒಳಗೊಂಡಿರುವ ʼಅಸಮಾನ ಸಾಮಾಜಿಕ ವ್ಯವಸ್ಥೆ ಮತ್ತು ತುಳಿತಕ್ಕೊಳಗಾದ ವರ್ಗದ ಮಾನವ ಹಕ್ಕುಗಳ ಹೋರಾಟಗಾರರಾಗಿ ಹೋರಾಡಿದವರು ಜಡವಾದ ಸಮಾಜವನ್ನು ಪ
APA, Harvard, Vancouver, ISO, and other styles
32

ಲಕ್ಷ್ಮಿದೇವಿ, ಎನ್‌. "ಬಾಚಿಕಾಯಕದ ಕಾಳವ್ವೆಯ ವಚನದಲ್ಲಿ ಕಾಯಕ, ಮಾತು ಮತ್ತು ವ್ರತ ಪ್ರಜ್ಞೆ". AKSHARASURYA 04, № 03 (2024): 117 to 124. https://doi.org/10.5281/zenodo.12672873.

Full text
Abstract:
ವಚನಗಳಲ್ಲಿ ನಾವು ವಿಚಾರ ಸ್ವಾತಂತ್ರ್ಯದ ಪರಾಕಾಷ್ಟೆಯನ್ನು ಕಾಣುತ್ತೇವೆ. “ಉದರ ನಿಮಿತ್ತಂ ಬಹುಕೃತ ವೇಷಂ” ಎಂಬ ಮಾತೊಂದಿದೆ. ಹೊಟ್ಟೆ ಹೊರೆಯುವುದಕ್ಕಾಗಿ ಮಾನವ ಅನೇಕ ವೇಷಗಳನ್ನು ಕೈಗೊಳ್ಳುತ್ತಾನೆ. ಆದರೆ ಶರಣರು ಹೊಟ್ಟೆ ಹೊರೆಯುವ ಕಾಯಕದ ಮೂಲಕ ದಾಸೋಹ ಸಿದ್ಧಾಂತವನ್ನು ಅನುಭಾವದ ಮೂಲಕ ಸಮಾಜಕ್ಕೆ ಸಾರಿದವರು. ಅಸಮಾನತೆಯ ಸಮಾಜದಲ್ಲಿ ಶೂದ್ರರಿಗೆ, ಅಸ್ಪೃಶ್ಯರಿಗೆ, ಹೆಣ್ಣಿಗೆ ಸಮಾನ ಸ್ಥಾನಮಾನವನ್ನು ತಂದುಕೊಟ್ಟ ಕೀರ್ತಿ ಬಸವಣ್ಣನರಿಗೆ ಸಲ್ಲುತ್ತದೆ. ೧೨ನೇ ಶತಮಾನದ ಸಮಾಜದಲ್ಲಿ ಅಕ್ಷರ ಕ್ರಾಂತಿಯ ಮೂಲಕ ಸ್ತ್ರೀ-ಪುರುಷ ಸಮಾನತೆಯನ್ನು ಪಡೆದದ್ದು ಪವಾಡವೇ ಸರಿ. ಅದರಲ್ಲೂ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಮಹಿಳೆ ಅನುಭವ ಮಂಟಪದ ಗೋಷ್ಠಿಯಲ್ಲಿ ಪುರುಷನಷ್ಟೇ ಸಮಾನತೆಯನ್ನು ಕೈಗೊಂಡಿದ್ದು ಸಮಾಜಿಕ ಕ್ರಾಂತಿ ಎನ್ನಬಹುದು. ಅವರಲ್ಲಿ
APA, Harvard, Vancouver, ISO, and other styles
33

ವೆಂಕೋಬರಾವ್, ಎಂ. ಹೊಸಕೋಟೆ. "ಸಾಹಿತ್ಯ ಸಮ್ಮೇಳನಗಳ ಪರಿಕಲ್ಪನೆ ಬದಲಾಗಬೇಕೆ?" Aksharasurya Journal 05, № 05 (2025): 132 to 137. https://doi.org/10.5281/zenodo.14619685.

Full text
Abstract:
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ನಾಡಿನ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಕರ್ನಾಟಕ, ಕನ್ನಡ, ಕನ್ನಡಿಗ ಇನ್ನಿತರ ನೆಲೆಗಳಲ್ಲಿ ಪ್ರೇರಕಶಕ್ತಿಯಾಗಿ ದುಡಿಯುತ್ತಿದೆ. ನಾಡು ನುಡಿ ಚಿಂತನೆಗಳೊಂದಿಗೆ ಕನ್ನಡಿಗರನ್ನು ಒಂದು ಗೂಡಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ, ಸಾರ್ಥಕವಾದ ತನ್ನ ಅಸ್ತಿತ್ವವನ್ನು ಮೆರೆಸುತ್ತಾ ಬಂದಿದೆ. ಅಂದಿನ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ಸರ್.ಎಂ. ವಿಶ್ವೇಶ್ವರಯ್ಯನವರ ಶ್ರಮದ ಫಲವಾಗಿ ಪರಿಷತ್ತು ಸ್ಥಾಪನೆಗೊಂಡಿತು. ಅನಂತರದಲ್ಲಿ ಮಿರ್ಜಾ ಇಸ್ಮಾಯಿಲ್ ಅವರ ನೆರವಿನಿಂದ ಪುಷ್ಠಿ ಪಡೆಯಿತು. ಸಮ್ಮೇಳನಗಳನ್ನು ನಡೆಸಲು ಮೈಸೂರು ಸಂಸ್ಥಾನವು ಅನುದಾನ ರೂಪದಲ್ಲಿ ಹಣವನ್ನು ಕೊಡುತ್ತಿತ್ತು. ತದನಂತರ ಕರ್ನಾಟಕ ಸರ್ಕಾರವು ಅನುದಾನ ನ
APA, Harvard, Vancouver, ISO, and other styles
34

ಪ್ರಮಿಳಾ, ಬಾರ್ಕೂರು. "ಮಹಿಳಾ ವಿಮೋಚನೆ: ವಿವಿಧ ಆಯಾಮಗಳು". AKSHARASURYA JOURNAL 05, № 04 (2024): 132 to 141. https://doi.org/10.5281/zenodo.14289978.

Full text
Abstract:
ಮನುಷ್ಯ ಮನುಷ್ಯನ ನಡುವಿನ ಅಸಮಾನತೆಯ ಪ್ರಶ್ನೆಯಲ್ಲಿ ಲಿಂಗಾಧರಿತ ಅಸಮಾನತೆ ಅತ್ಯಂತ ಸಂಕೀರ್ಣವಾದುದು ಮತ್ತು ಸೂಕ್ಷ್ಮವಾದುದು. ಹೆಣ್ಣಿನ ದಮನವು ಸಾಮಾಜಿಕ ಹಾಗೂ ಕೌಟುಂಬಿಕ ನೆಲೆಯೆರಡರಲ್ಲೂ ನಡೆಯುವುದರಿಂದ ಶೋಷಕ ವರ್ಗವನ್ನು ಪ್ರತ್ಯೇಕವಾಗಿ ಗುರುತಿಸುವುದು ಅಸಾಧ್ಯ. ಹೆಣ್ಣಿನ ದಮನದ ವಿಚಾರ ಬಹಳ ಸೂಕ್ಷ್ಮವಾದದ್ದು, ಹಾಗಾಗಿ ಲಿಂಗ ತಾರತಮ್ಯದ ಎಲ್ಲ ಹೋರಾಟ ಅಥವಾ ಹೆಣ್ಣಿನ ಬಿಡುಗಡೆಯ ಚರ್ಚೆಯನ್ನು ಕುಟುಂಬದ ನೆಲೆಯಿಂದಲೇ ಪ್ರಾರಂಭಿಸಬೇಕಾಗುತ್ತದೆ. ಅಲ್ಲದೇ ಈ ಹೋರಾಟವನ್ನು ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಹೀಗೆ ಬಹು ಆಯಾಮಗಳಲ್ಲಿ ನಡೆಸಬೇಕಾಗುತ್ತದೆ. ಲಿಂಗ ತಾರತಮ್ಯದ ವ್ಯವಸ್ಥೆಯನ್ನು ಭಂಜನಗೊಳಿಸುವ ಪ್ರಕ್ರಿಯೆಯೇ ಮಹಿಳಾ ವಿಮೋಚನೆ. ಇಂತಹ ಆಶಯದಲ್ಲಿ ಕಟ್ಟುವ ಎಲ್ಲಾ ಚಟುವಟಿಕೆಗಳನ್ನು ವಾಸ್ತವವಾಗಿ ಮಹಿಳಾ ವಿಮೋಚನಾ ಚಳುವಳಿಯಾಗಿಯೇ ಗ್ರಹಿಸಬಹ
APA, Harvard, Vancouver, ISO, and other styles
35

ಟಿ, ಸುಚಿತ್ರಾ. "ಭಾರತದಲ್ಲಿ ಮಹಿಳಾ ಚಳುವಳಿ". International Journal of Kannada Research 9, № 3 (2023): 31–33. http://dx.doi.org/10.22271/24545813.2023.v9.i3a.847.

Full text
APA, Harvard, Vancouver, ISO, and other styles
36

ಲೋಕಾಂಬಿಕಾ. "ಭಾಗೀರಥಿ ಹೆಗಡೆ ಅವರ ಹೊಳೆಯ ಹಾದಿ ಕಾದಂಬರಿಯ ಪುರುಷ ಪಾತ್ರಗಳ ವಿಶ್ಲೇಷಣೆ". AKSHARASURYA 05, № 02 (2024): 112 to 122. https://doi.org/10.5281/zenodo.14035334.

Full text
Abstract:
ಸುಮಾರು ಎರಡು ಸಾವಿರ ವರ್ಷಗಳಷ್ಟು ಸುದೀರ್ಘವಾದ ಇತಿಹಾಸವನ್ನು ಹೊಂದಿರುವ ಕನ್ನಡ ಸಾಹಿತ್ಯ ಬಹು ಸಮೃದ್ಧವಾಗಿದ್ದು ಅದರಲ್ಲಿ ಆಧುನಿಕ ಕನ್ನಡ ಸಾಹಿತ್ಯ ಘಟ್ಟವು ಒಂದು. ಈ ಕಾಲಘಟ್ಟ ಒಂದು ರೀತಿಯಲ್ಲಿ ವಿಶೇಷ ಮತ್ತು ವಿಶಿಷ್ಟ. ಕಾರಣ ಆಧುನಿಕ ಕನ್ನಡ ಸಾಹಿತ್ಯವನ್ನು ಅಧ್ಯಯನದ ದೃಷ್ಟಿಯಿಂದ ಅದು ಬೆಳೆದು ಬಂದಿರುವ ಆಧಾರದ ಮೇಲೆ ನವೋದಯ, ನವ್ಯ, ಪ್ರಗತಿಶೀಲ, ದಲಿತ-ಬಂಡಾಯ ಮತ್ತು ಮಹಿಳಾ ಸಾಹಿತ್ಯ ಎಂದು ಅನೇಕ ಭಾಗಗಳಾಗಿ ವಿಂಗಡಿಸಿದ್ದೇವೆ. ಕಥೆ, ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಕಾವ್ಯದಂತಹ ಅನೇಕ ಸಾಹಿತ್ಯ ಪ್ರಕಾರಗಳು ಈ ಕಾಲಘಟ್ಟದಲ್ಲಿ ಬೆಳೆದು ತನ್ನ ಸಾಹಿತ್ಯ ಕ್ಷೇತ್ರವನ್ನು ಹಿಗ್ಗಿಸಿಕೊಂಡಿವೆ. ಆದುದರಿಂದ ಈ ಕಾಲಘಟ್ಟವನ್ನು ಸಾಹಿತ್ಯ ಕ್ಷೇತ್ರದ ಸುಗ್ಗಿಯ ಕಾಲ ಎಂತಲೇ ಕರೆಯಬಹುದು. ಕೇವಲ ಬೆರಳೆಣಿಕೆಯಷ್ಟಿದ್ದ ಮಹಿಳಾ ಲೇಖಕಿಯರು ಹೊಸಗನ
APA, Harvard, Vancouver, ISO, and other styles
37

., ಡಾ ಸೀತಾ ಹೆಚ್ ಎನ್. "ಎಂ.ಕೆ.ಇಂದಿರಾ ಕಾದಂಬರಿಗಳಲ್ಲಿ ಮಹಿಳಾ ಸಬಲೀಕರಣ". International Journal of Kannada Research 10, № 1 (2024): 20–22. http://dx.doi.org/10.22271/24545813.2024.v10.i1a.925.

Full text
APA, Harvard, Vancouver, ISO, and other styles
38

ಆರ್, ಪುನೀತ್ ಕುಮಾರ್ ಹೆಚ್. "ಕನ್ನಡ ಮಹಿಳಾ ಕಾದಂಬರಿ ನೆಲೆಗಳು". International Journal of Kannada Research 11, № 1 (2025): 169–72. https://doi.org/10.22271/24545813.2025.v11.i1c.1095.

Full text
APA, Harvard, Vancouver, ISO, and other styles
39

ವಾಣಿ, ಬಿ. ಎನ್. "ನವೋದಯ ಮಹಿಳಾ ಕಥೆಗಳಲ್ಲಿ ಸ್ತ್ರೀನಿಷ್ಟತೆ". AKSHARASURYA JOURNAL 05, № 03 Special Issue (2024): 61 to 67. https://doi.org/10.5281/zenodo.14246534.

Full text
Abstract:
ನವೋದಯ ಕಾಲಘಟ್ಟದ ಪ್ರಮುಖ ಲೇಖಕಿಯರಾದ ಕೊಡಗಿನ ಗೌರಮ್ಮ, ಕಲ್ಯಾಣಮ್ಮ, ಸರಸ್ವತಿ ಬಾಯಿ ರಾಜವಾಡೆ(ಗಿರಿಬಾಲೆ), ಶ್ಯಾಮಲಾ ಬೆಳಗಾವಂಕರ ಮೊದಲಾದ ಲೇಖಕಿಯರ ಕತೆಗಳಲ್ಲಿ ವ್ಯಕ್ತವಾಗಿರುವ ಸ್ತ್ರೀಪರ ನಿಲುವುಗಳನ್ನು ಕುರಿತಿದೆ. ಗೌರಮ್ಮ ಅವರ ಪುರ್ನವಿವಾಹ ಕತೆಯ ನಾಯಕಿ ರಾಜಿಯ ಮನಸ್ಸಿನಲ್ಲಿರು ಪುರುಷ ನಡವಳಿಕೆಯ ಬಗೆಗಿನ ಅಸಹನೆ, ʼವಾಣಿಯ ಸಮಸ್ಯೆʼ ಕತೆಯಲ್ಲಿ ಇಂದುವಿಯ ನೈತಿಕ ಚೌಕಟ್ಟು, ಹೋಗಿಯೇ ಬಿಟ್ಟಿದ್ದ ಕತೆಯಲ್ಲಿನ ಅಂರ್ತಧರ್ಮೀಯ ಪ್ರೇಮದ ಕರಾಳತೆ, ಗಿರಿಬಾಲೆ ಅವರ ʼಅವಳ ಉದ್ದಾರʼ ಕತೆಯಲ್ಲಿ ಹೆಣ್ಣಿನ ಕೌಟುಂಬಿಕ ಹಾಗೂ ಸಾಮಾಜಿಕ ಶೋಷಣೆ ಪರಿ, ಕಲ್ಯಾಣಮ್ಮ ಅವರ ʼನನ್ನ ಧನವ ನನಗೆ ತಾʼ ಕತೆಯಲ್ಲಿನ ಮಾತೃ ವಾತ್ಸಲ್ಯ, ʼಒಲ್ಲದ ಹೆಂಡತಿʼ ಕತೆಯಲ್ಲಿ ಮಕ್ಕಳ್ಳನ್ನು ಬೆಳೆಸುವಲ್ಲಿ ತಾಯಿಯ ಹೊಣೆ ಎಷ್ಟು ಮುಖ್ಯವಾದದ್ದು, ಶ್ಯಾಮಲಾ ಅವರ ʼಕಂತಿಯ ದೇಶಾಂತ
APA, Harvard, Vancouver, ISO, and other styles
40

ಆರ್, ಶ್ರೀಮತಿ ಸುಧಾ ಎ. "ವಿಜಯಾದಬ್ಬೆ ಅವರ ಕಾವ್ಯ: ಮಹಿಳಾ ಕಾಳಜಿಗಳು". International Journal of Kannada Research 6, № 2 (2020): 116–19. http://dx.doi.org/10.22271/24545813.2020.v6.i2b.988.

Full text
APA, Harvard, Vancouver, ISO, and other styles
41

ಆರ್, ಸುಧಾ ಎ. "ಮಹಿಳಾ ಸಾಹಿತ್ಯ _ ಹುಟ್ಟು ಮತ್ತು ಬೆಳವಣಿಗೆ". International Journal of Kannada Research 9, № 3 (2023): 189–94. http://dx.doi.org/10.22271/24545813.2023.v9.i3c.977.

Full text
APA, Harvard, Vancouver, ISO, and other styles
42

ಯಸ್, ವೇದಾವತಿ. "ನವ್ಯೋತ್ತರ ಮಹಿಳಾ ಕಾವ್ಯದಲ್ಲಿ ಅಸ್ತಿತ್ವವಾದೀ ಪ್ರಜ್ಞೆ". International Journal of Kannada Research 11, № 2 (2025): 115–19. https://doi.org/10.22271/24545813.2025.v11.i2b.1115.

Full text
APA, Harvard, Vancouver, ISO, and other styles
43

ಸೋಮಶೇಖರ್, ಎಲ್. ಆರ್. "ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಾಹಿತ್ಯದ ಬೆಳವಣಿಗೆ". Aksharasurya Journal 05, № 05 (2025): 128 to 131. https://doi.org/10.5281/zenodo.14619667.

Full text
Abstract:
ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ಕೂಡಗೆ ಅಪಾರವಾದದ್ದು ಜನಪದ ಸಾಹಿತ್ಯದ ಕಾಲದಿಂದಲ್ಲೂ ಮಹಿಳೆಯರು ತಮ್ಮ ಅನುಭವಗಳನ್ನು ತಮ್ಮ ಆತಂಕವನನ್ನು, ತಮ್ಮ ನೋವು ನಲಿವುಗಳನ್ನು ಮೌಖಿಕವಾಗಿ ವ್ಯಕ್ತಪಪಡಿಸುತ್ತಾ ಬಂದಿದ್ದಾರೆ . ಪ್ರಾಚೀನ ಕಾಲದಿಂದಲ್ಲೂ ಮಹಿಳೆಯರು ತಮ್ಮ ಮನನಸ್ಸಿನ ಭಾವನೆಗಳನ್ನು ಅಭಿವ್ಯಕ್ತಿ ಪಡಿಸಲು ಆಯ್ಕೆಮಾಡಿಕೊಂಡ ಮಾರ್ಗವೆ ಬರವಣಿಗೆ, ಈ ಬರವಣಿಗೆಯ ಮೂಲಕ ಮಹಿಳಾಲೋಕದ ಬದುಕಿನ ಚಿತ್ರಣವನ್ನು ಜನರ ಮುಂದಿಡಲು ಬರೆಯಲು ಪ್ರಾರಂಬಿಸುತ್ತಾರೆ ಸಾಹಿತ್ಯದಲ್ಲಿ ಹೆಣ್ಣು ಹೇಗೆ ಬರವಣಿಗೆಯನ್ನು ಪ್ರಾರಂಬಿಸಿ ಮುನ್ನೆಲೆಗೆ ಬಂದಿದ್ದಾರೆ ಅವರ ಪ್ರತಿಭಾಶಕ್ತಿ ಅವರ ಕ್ರೀಯಾಶೀಲತೆ ಬರವಣಿಗೆಯಲ್ಲಿ ವ್ಯಕ್ತವಾಗಿರುವುದನ್ನು ಈ ಲೇಖನದಲ್ಲಿ ಕಾಣಬಹುದಾಗಿದೆ. 
APA, Harvard, Vancouver, ISO, and other styles
44

ಮುತ್ತುರಾಜು, ಕೆ. ವಿ., та ನಾಗಭೂಷಣ. "ಮಲೆಮಹದೇಶ್ವರ ಕಾವ್ಯದ ಮಹಿಳಾ ಪಾತ್ರಗಳ ವಿಶ್ಲೇಷಣೆ". AKSHARASURYA 06, № 02 (2025): 61 to 74. https://doi.org/10.5281/zenodo.15123997.

Full text
Abstract:
ಭಾರತ ಬಹು ಸಂಸ್ಕೃತಿಗಳಿಂದ ಕೂಡಿದೆ. ಭಾರತವನ್ನು ಸಂಸ್ಕೃತಿ ಮತ್ತು ಉಪಸಂಸ್ಕೃತಿಗಳ ನೆಲೆಗಟ್ಟಿನಲ್ಲಿ ಗ್ರಹಿಸುವುದಾದರೆ, ಜನಪದ ಕಥನಗಳು ಉಪಸಂಸ್ಕೃತಿಗಳ ಭಾಗಗಳಾಗಿವೆ. ಇದರ ಭಾಗವಾಗಿ ನಮಗೆ ಕನ್ನಡದಲ್ಲಿ ಮಲೆಮಹದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಮೖಲಾರಲಿಂಗ ಇವರೆಲ್ಲರೂ ಕೂಡ ಮುಖ್ಯವಾಗಿ ಕಾಣುತ್ತಾರೆ. ಮಾತೃಮೂಲ ಸಂಸ್ಕೃತಿಯ ಅನೇಕ ಪಳೆಯುಳಿಕೆಗಳು ಈ ಕಾವ್ಯಗಳಲ್ಲಿ ದಟ್ಟವಾಗಿ ಕಂಡುಬರುತ್ತವೆ. ನನ್ನ ಅಧ್ಯಯನಕ್ಕೆ ಮಲೆಮಹದೇಶ್ವರ ಕಾವ್ಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮಲೆಮಹದೇಶ್ವರ ಕಾವ್ಯದಲ್ಲಿ ಸಂಕಮ್ಮನ ಸಾಲು ಬಹಳ ವಿಶಿಷ್ಟವಾಗಿದೆ. ನನ್ನ ಅನುಪಸ್ಥಿತಿಯಲ್ಲಿ ಪರ ಪುರುಷರಿಗೆ ಒಲಿಯುವುದಿಲ್ಲ ಎಂದು ಬಲಗೖ ಭಾಷೆಯನ್ನು ನೀಡಬೇಕು ಎಂದು ನೀಲಯ್ಯ ಕೇಳಿದಾಗ, ಭಾಷೆ ನೀಡಲು ಒಪ್ಪದ ಸಂಕಮ್ಮ ʼಕೊಟ್ಟಿದ ತೆರವನ್ನು ಹಿಂತೆಗೆದುಕೊಂಡು ನನ್ನನ್ನುಬಿಟ್
APA, Harvard, Vancouver, ISO, and other styles
45

ಪೈ, ಮುಕ್ತಾ. "ಮಹಾಸಾದ್ವಿ ಹೆಳವನಕಟ್ಟೆ ಗಿರಿಯಮ್ಮ". Shanlax International Journal of Arts, Science and Humanities 12, S1-Oct (2024): 208–10. https://doi.org/10.34293/sijash.v12is1-oct.8305.

Full text
Abstract:
ನಮ್ಮ ಕನ್ನಡನಾಡು ಸಂಗೀತ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಕರ್ನಾಟಕದಲ್ಲಿ ಶಿವಶರಣೆಯರು ತಮ್ಮ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಿದ ಹಾಗೆ ಹರಿದಾಸರು ಕೂಡ ತಮ್ಮ ಸಾಹಿತ್ಯವನ್ನು ರಚನೆ ಮಾಡಿದ್ದಾರೆ. ದಾಸರು ವೈಯುಕ್ತಿಕವಾಗಿ ತಮ್ಮ ಮೋಕ್ಷದ ಸ್ವಾರ್ಥವನ್ನು ಬಯಸದೇ ಇಡೀ ಸಮಾಜವನ್ನು ಮೋಕ್ಷದ ಕಡೆಗೆ ಕರೆದೊಯ್ಯುವ ಪ್ರಯತ್ನವನ್ನು ಮಾಡಿದ್ದಾರೆ. ದಾಸರೆಲ್ಲರೂ ತಮ್ಮ ಇ಼ಷ್ಟದೇವರ ಅಂಕಿತದಿAದ ತಮ್ಮ ಕೀರ್ತನೆಗಳನ್ನು ರಚಿಸಿ, ಪ್ರತಿಯೊಬ್ಬ ಮನುಷ್ಯನಿಗೆ ದೇವರಲ್ಲಿ ನಂಬಿಕೆ ಇರಬೇಕು ಎಂದು ಸಾರಿ ಸಾರಿ ಹೇಳಿದರು. ಇವರ ಕೀರ್ತನೆಗಳಲ್ಲಿ ಹೆಚ್ಚಾಗಿ ಶ್ರೀ ಹರಿಯ ಸ್ತುತಿಗಳನ್ನು ನಾವು ಕಾಣಬಹುದಾಗಿದೆ. ಹರಿದಾಸ ಸಾಹಿತ್ಯದಲ್ಲಿ ಕೆಲವು ಮಹಿಳಾ ಹರಿದಾಸರು ನಕ್ಷತ್ರಗಳಂತೆ ಮಿಂಚಿದ್ದಾರೆ. ಇವರಲ್ಲಿ ಹೆಳವನಕಟ್ಟೆ ಗಿರಿಯಮ್ಮನ ಪಾತ್ರ ಪ್ರಮ
APA, Harvard, Vancouver, ISO, and other styles
46

ಶಶಿಕುಮಾರ್, ಬಿ. ಎಸ್., та ಪಿ. ರಾಜು ಎಲ್. "ಕರ್ನಾಟಕದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರು: ಯಶೋಧರಮ್ಮ ದಾಸಪ್ಪ". AKSHARASURYA JOURNAL 03, № 04. SPECIAL ISSUE. (2024): 188 to 201. https://doi.org/10.5281/zenodo.10930720.

Full text
Abstract:
1857ರ ಮಹಾಕ್ರಾಂತಿಯ ನಂತರ ಭಾರತ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪನೆಯೊಂದಿಗೆ ದೇಶದ ಸ್ವಾತಂತ್ರ್ಯ ಹೋರಾಟ ವಿಧಾನವು ವೇಗಪಡೆದುಕೊಂಡಿತು, ಅದರಲ್ಲೂ ಗಾಂಧೀಜಿಯವರ ಅಹಿಂಸಾತ್ಮಕ ಯುಗದಲ್ಲಿ ಸ್ವಾತಂತ್ರ್ಯ ಹೋರಾಟವಂತು ದೇಶದ ಮೂಲೆ-ಮೂಲೆಗೂ ಪಸರಿಸಿ, ದೇಶದಲ್ಲಿನ ರೈತರು, ಕಾರ್ಮಿಕರು, ವಿಧ್ಯಾರ್ಥಿಗಳು, ಮಧ್ಯಮ ವರ್ಗದವರು, ಮಹಿಳೆಯರು ಮುಂತಾದ ಎಲ್ಲಾ ವರ್ಗದ ಜನರು ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು. ಈ ಕಾಲಾವಧಿಯಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಜ್ವಾಲೆಯಾಗಿ ಹೊರಹೊಮ್ಮಿತು. ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಪುರುಷರೊಂದಿಗೆ ಸ್ತ್ರೀಯರು ಸಹಾ ಸರಿಸಮಾನವಾಗಿ ಭಾಗವಹಿಸಿ, ಅಪಾರ ತ್ಯಾಗ ಮತ್ತು ಕಷ್ಟಸಹಿಷ್ಣುತೆಯೊಂದಿಗೆ ಸ್ವಾತಂತ್ರ್ಯ ಸಾಧನೆಯಲ್ಲಿ ಪುರುಷರೊಂದಿಗೆ ಸಮಾನ ಪಾತ್ರವಹಿಸಿ ವಿಜೃಂಬಿಸಿದ ಮಹಿಳಾ ಸ್ವಾ
APA, Harvard, Vancouver, ISO, and other styles
47

ಸುಜಾತ. "ಕೋವಿಡ್ ಸಂದರ್ಭದಲ್ಲಿ ಚಿಂಚೋಳಿ ತಾಲೂಕಿನ ಮಹಿಳಾ ವಲಸೆ ಕಾರ್ಮಿಕರ ಮೇಲೆ MGNREGA ದ ಪಾತ್ರ". AKSHARASURYA 04, № 03 (2024): 68 to 77. https://doi.org/10.5281/zenodo.12672719.

Full text
Abstract:
COVID-19 ಸಾಂಕ್ರಾಮಿಕವು ಸಮಾಜಗಳಲ್ಲಿ ಅಭೂತಪೂರ್ವ ಬದಲಾವಣೆಯನ್ನು ತಂದಿದೆ ಮತ್ತು ಅನೇಕ ಸಾಮಾಜಿಕ-ಆರ್ಥಿಕ ಬಿಕ್ಕಟ್ಟುಗಳನ್ನು ವರ್ಧಿಸಿದೆ. ಭಾರತವು ವಲಸೆ ಕಾರ್ಮಿಕರ ನಡುವೆ ಭಾರಿ ಬಿಕ್ಕಟ್ಟಿಗೆ ಸಾಕ್ಷಿಯಾಗಿದೆ. ಇದರ ಪರಿಣಾಮವಾಗಿ ಲಕ್ಷಾಂತರ ವಲಸೆ ಕಾರ್ಮಿಕರ ಜೀವನೋಪಾಯಕ್ಕೆ ವಿಶೇಷವಾಗಿ ಮಹಿಳಾ ವಲಸೆ ಕಾರ್ಮಿಕರಿಗೆ ತೀವ್ರ ಹೊಡೆತ ಬಿದ್ದಿದೆ. ಈ ಸಾಂಕ್ರಾಮಿಕ ರೋಗದಿಂದ ಹೊರಹೊಮ್ಮುತ್ತಿರುವ ಪುರಾವೆಗಳು ಮತ್ತು ಹಿಂದಿನ ರೋಗದ ಏಕಾಏಕಿ ಅನುಭವದಿಂದ ಉಂಟಾಗುವ ಸಾಮಾಜಿಕ-ಆರ್ಥಿಕ ಸಂಕಷ್ಟಗಳನ್ನು ಅಸಮಾನವಾಗಿ ಅನುಭವಿಸಿರುವವರು ಮಹಿಳೆಯರು ಎಂದು ತೋರಿಸುತ್ತದೆ. UN 2019ರ ಅಂದಾಜಿನ ಪ್ರಕಾರ, 90% ಮಹಿಳಾ ಉದ್ಯೋಗಿಗಳು ಅನೌಪಚಾರಿಕ ವಲಯ ಮತ್ತು ವಲಸೆ ಕಾರ್ಮಿಕರ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಕೋವಿಡ್‌ ಸಂದರ್ಭದಲ್ಲಿ ಚಿಂ
APA, Harvard, Vancouver, ISO, and other styles
48

ಶ್ರೀನಿವಾಸ, ಎಸ್.ಜಿ. "ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆಗಳು". AKSHARASURYA JOURNAL 06, № 04 (2025): 01 to 10. https://doi.org/10.5281/zenodo.15490768.

Full text
Abstract:
ʼಕಾಯಕವೇ ಕೈಲಾಸʼ ವೆಂದು ಸಾರಿ, ಜನರಲ್ಲಿ ದುಡಿದು ತಿಂದು ಬದುಕುವ ಮಹತ್ವವನ್ನು ತಿಳಿಸಿದ್ದು ವಚನ ಸಾಹಿತ್ಯ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳಲ್ಲಿ ಸ್ತ್ರೀಯರಿಗೆ ಭಾಗವಹಿಸುವ ಸಮಾನ ಅವಕಾಶ ನೀಡುವ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕೊಂದು ಅರ್ಥವನ್ನು ಕಲ್ಪಿಸಿದರು. ಕಲುಷಿತಗೊಂಡಿದ್ದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ದಿಕ್ಕರಿಸಿ, ಘನ ಬದಲಾವಣೆಯನ್ನು ಗುರಿಯಿಟ್ಟು ನಡೆದ ದಾರ್ಶನಿಕ ಚಳುವಳಿ ವಚನ ಸಾಹಿತ್ಯ. ಸಾಮಾಜಿಕ ಬದಲಾವಣೆಗೆ ಹೊಸ ಭಾಷ್ಯ ಬರೆಯುವ ಮೂಲಕ ಉತ್ತಮ ಸಮಾಜ ವ್ಯವಸ್ಥೆಗೆ ನಿಜವಾದ ಅರ್ಥ ಕಲ್ಪಿಸಿ ಕೊಟ್ಟವರು. ಸಮಾಜದ ಕೀಳುಮಟ್ಟದ ಶೋಷಣೆಯಿಂದಾಗಿಯೇ ಸಮಾಜದಲ್ಲಿ ದುಡಿಯುವ ಮತ್ತು ಕೂತು ಉಣ್ಣುವ ವರ್ಗಗಳು ನಿರ್ಮಾಣವಾಗುವುದಕ್ಕೆ ಕಾರಣವಾಗಿರಬೇಕು, ಸಮಾಜದಲ್ಲಿ ಮೇಲ್ವರ್ಗವೆಂದು ಕರೆಸಿಕೊಂಡ ಜನರು ಸಮಾಜದ ಇತರರನ್ನು
APA, Harvard, Vancouver, ISO, and other styles
49

ಮಾಂಗ, ತಾಯವ್ವ. "ಕನ್ನಡ ಮಹಿಳಾ ಅನುವಾದ ಸಾಹಿತ್ಯ ಬೆಳೆದುಬಂದ ಬಗೆ". International Journal of Kannada Research 10, № 4 (2024): 75–79. https://doi.org/10.22271/24545813.2024.v10.i4b.1060.

Full text
APA, Harvard, Vancouver, ISO, and other styles
50

ಸಂದೇಶ್, ಎ. ಎಸ್. "'ಅವಳ ಪಥ' ಒಂದು ನೋಟ". AKSHARASURYA 03, № 05 (2024): 75–87. https://doi.org/10.5281/zenodo.10938082.

Full text
Abstract:
ಜನಪದ ಸಾಹಿತ್ಯದಿಂದ ಇಂದಿನವರೆಗಿನ ಮಹಿಳಾ ಪಯಣವನ್ನು ಈ ಲೇಖನ ದಾಖಲಿಸುತ್ತದೆ. ಮಾತೃಪ್ರಧಾನ ಸಂಸ್ಕೃತಿಯಿಂದ, ಪಿತೃಪ್ರಧಾನ ಸಂಸ್ಕೃತಿಯವರೆಗಿನ ಚಲನೆಯನ್ನು ಸಾಮಾಜಿಕ, ಆರ್ಥಿಕ, ಕೌಟುಂಬಿಕ, ಧಾರ್ಮಿಕ ನೆಲೆಯ ಹಿನ್ನೆಲೆಯಲ್ಲಿ ಶೋಧಿಸಿದೆ. ಪ್ರಸ್ತುತ ಕೃತಿಯು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಸ್ತ್ರೀ ಪರ ಆಲೋಚನಾ ಕ್ರಮಗಳ ವಿಕಾಸವನ್ನು ಗುರುತಿಸುತ್ತದೆ. ಜನಪದ ಸಾಹಿತ್ಯ ಹಾಗೂ ಹಳಗನ್ನಡ ಕಾವ್ಯಗಳಿಂದ ಹಿಡಿದು ಮಹಿಳೆಯರ ಪ್ರಸ್ತುತ ಸಾಹಿತ್ಯಾಭಿವ್ಯಕ್ತಿಯನ್ನು ರೂಪಿಸುತ್ತಿರುವ ಬೌದ್ಧಿಕ ದ್ರವ್ಯ ಯಾವುದೆಂಬುದು ಇಲ್ಲಿ ಶೋಧಿತವಾಗಿದೆ. ವಚನಕಾರ್ತಿಯರ ದೇಸಿ ಮಾದರಿಯಿಂದ ತೊಡಗಿ, ಈ ಕಾಲದ ಪ್ರಮುಖ ತಾತ್ವಿಕತೆಯಾದ ಸ್ತ್ರೀವಾದಿ ಸಿದ್ಧಾಂತಗಳವರೆಗೆ ಇಲ್ಲಿನ ಚರ್ಚೆಯ ಹರಹಿದೆ. ನವೋದಯ ಸಾಹಿತ್ಯದ ಸಾಮಾಜಿಕ ಅರಿವು, ಪ್ರಗತಿಶೀಲ ಸಾಹಿತ್ಯದ ವೈಚಾರಿಕ ನಿಲುವ
APA, Harvard, Vancouver, ISO, and other styles
We offer discounts on all premium plans for authors whose works are included in thematic literature selections. Contact us to get a unique promo code!