Academic literature on the topic 'ವರ್ಗ'

Create a spot-on reference in APA, MLA, Chicago, Harvard, and other styles

Select a source type:

Consult the lists of relevant articles, books, theses, conference reports, and other scholarly sources on the topic 'ವರ್ಗ.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Journal articles on the topic "ವರ್ಗ"

1

ಚನ್ನವೀರಯ್ಯ. "ವಚನಗಳಲ್ಲಿನ ಜಾತಿ ಪದ್ಧತಿ ಮತ್ತು ಮೌಢ್ಯಗಳ ವಿಶ್ಲೇಷಣೆ". AKSHARASURYA 05, № 02 (2024): 135 to 142. https://doi.org/10.5281/zenodo.14035388.

Full text
Abstract:
ಹನ್ನೇರಡನೇ ಶತಮಾನವನ್ನು ವಚನ ಸಾಹಿತ್ಯದ ಪರ್ವಕಾಲ ಎಂದು ಕರೆಯಬಹುದು. ಏಕೆಂದರೆ ಜನಸಾಮಾನ್ಯರ ಆಡುಭಾಷೆಯ ಮೂಲಕ ಕನ್ನಡಭಾಷೆಯನ್ನು ಉತ್ತುಂಗಕ್ಕೆ ಏರಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಬಹು ಮುಖ್ಯವಾಗಿ ಜಾತಿ, ಮತ, ವರ್ಗ, ವರ್ಣ, ಮೇಲು, ಕೀಳು ಹಾಗೂ ಸಾಮಾಜಿಕ ಪಿಡುಗುಗಳಾದ ಮೂಢನಂಬಿಕೆಗಳು ಅನಿಷ್ಟಪದ್ದತಿಗಳ ಆಚರಣೆಯಿಂದ ಸಮಾಜದ ಅಭಿವೃದ್ಧಿಗೆ ಮಾರಕವಾದುದು ಎಂಬುದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿ ಸಾಮಾಜಿಕ ಬದಾಲಾವಣೆಗೆ ಮುನ್ನುಡಿ ಬರೆದು ನವಮನ್ವಂತರಕೆ ದಾರಿ ದೀಪವಾದವರು. ಆ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದರು. ಸಾಮಾಜಿಕ ಬದಲಾಣೆಯ ಜೊತೆಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಅಂತಹ ಕೆಲವು ವಚನಕಾರರ ವಚನಗಳ ವಿಶ್ಲೇಷಣೆ ಈ ಲೇಖನದಲ್ಲಿ ಚರ್ಚಿಸಲಾಗಿದೆ.
APA, Harvard, Vancouver, ISO, and other styles
2

ವಾಣಿ, ಡಿ. ಎಸ್. "ಮಡಿವಾಳ ಮಾಚಿ ದೇವರವರ ಜೀವನ ಹಾಗೂ ಸಾಧನೆ". AKSHARASURYA JOURNAL 04, № 04 (2024): 144 to 150. https://doi.org/10.5281/zenodo.13284156.

Full text
Abstract:
ಹನ್ನೆರಡನೇ ಶತಮಾನ ಭಾರತೀಯ ಹಾಗೂ ಕರ್ನಾಟಕದ ಇತಿಹಾಸದಲ್ಲಿ ಬಹುಮುಖ್ಯ ಕಾಲಘಟ್ಟ. ಆ ಕಾಲದ ಶಿವಶರಣರು ಜೀವನದ ಹೊಸ ಮೌಲ್ಯಗಳನ್ನು ಎತ್ತಿ ಹಿಡಿದು ವರ್ಣಾಶ್ರಮ, ಧರ್ಮಗಳ ಹಂಗನ್ನು ಕಿತ್ತು ಬಿಸುಟು ಸಮತಾ ತತ್ವದ ತಳಹದಿಯ ಮೇಲೆ ಸಮಾಜವನ್ನು ನಿರ್ಮಿಸಲು ಹೆಣಗಿದವರು. ಸೃಷ್ಟಿಯಲ್ಲಿ ಎಲ್ಲರೂ ಸಮಾನರು ಮೇಲು-ಕೀಳು, ಲಕ್ಷಿತ-ಅಲಕ್ಷಿತ, ಸ್ತ್ರೀ-ಪುರುಷರೆಂಬ ಬೇಧ ಭಾವವಿಲ್ಲ ಎಂಬ ತತ್ವವನ್ನು ಬೋಧಿಸಿ ತಮ್ಮದೇ ಆದ ವಿಶಿಷ್ಟ ಧರ್ಮವನ್ನು ಬಸವಾದಿ ಪ್ರಮಥರು ಸಾಧಿಸಿದರು. ತಮ್ಮ ವೃತ್ತಿಯ ಹಿನ್ನೆಲೆಯಲ್ಲಿ ವರ್ಗ, ವರ್ಣ, ಜಾತಿಗಳಿಲ್ಲದ ಸರ್ವ ಸಮಾನತೆಯ ಹೊಸ ಸಮಾಜದ ನಿರ್ಮಾಣಕ್ಕೆ ಅವರು ಶ್ರಮಿಸಿದರು. ಅಂತಹ ವಚನಕಾರ ಮತ್ತು ಕ್ರಾಂತಿಕಾರರಲ್ಲಿ ಪ್ರಮುಖರಾದವರು ಮಡಿವಾಳ ಮಾಚಿದೇವ. ಇವರು ಬಸವಣ್ಣನಂತಹ ಮಹಾನುಭಾವರೊಂದಿಗೆ ಜೊತೆಗೂಡಿ ಸಮಾಜವನ್ನು ತಿದ್ದುವಂತಹ ಕೆ
APA, Harvard, Vancouver, ISO, and other styles
3

ಶರಣಪ್ಪ, ಆಡಕಾರ. "ವರ್ಗ ಸಂಘರ್ಷದ ನೆಲೆಯಲ್ಲಿ ಚಂದ್ರಶೇಖರ ಕಂಬಾರರ ನಾಯೀಕತೆ". AKSHARASURYA JOURNAL 06, № 01 (2025): 56 to 63. https://doi.org/10.5281/zenodo.14961420.

Full text
Abstract:
ಚಂದ್ರಶೇಖರ ಕಂಬಾರ ಅವರ ನಾಟಕಗಳು ಗ್ರಾಮೀಣ ಪ್ರದೇಶದಲ್ಲಿ ಕಂಡುಬರುವ ಜಮೀನ್ದಾರಿ ವ್ಯವಸ್ಥೆಯಲ್ಲಿನ ಕ್ರೌರ್ಯ, ಪೊಳ್ಳುವ್ಯಕ್ತಿತ್ವ, ಗೌಡನ ನೀರ್ವಿರ್ಯತನವನ್ನು ಹೆಚ್ಚು ಅನಾವರಣಗೊಳ್ಳಿಸುತ್ತವೆ. ಶ್ರೀಮಂತಿಕೆಯ ಸೊಕ್ಕಿನಲ್ಲಿರುವ ಗೌಡ ಊರಿನಲ್ಲಿನ ಹೆಣ್ಣುಮಕ್ಕಳನ್ನು ಅನುಭವಿಸುವೆ ಎಂಬ ಭ್ರಮಾ ಲೋಕದಲ್ಲಿ ಬದುಕು ಸಾಗಿಸುವಂತವನು. ಅಂತಹ ಗೌಡ ಶಾರಿಯಂತಹ ಹೆಣ್ಣನ್ನು ಭೋಗಿಸಬೇಕೆಂದು ಮನೆಗೆ ಕರೆ ತಂದು ಅವಳು ಆ ಮನೆಯ ಆಳು ಮಗನೊಟ್ಟಿಗೆ ಓಡಿ ಹೋಗುವ ವಿಷಯವನ್ನು ಕಂಬಾರರ ನಾಯಿಕತೆ ಚಿತ್ರಿಸುತ್ತದೆ. ಇಲ್ಲಿ ಸೋಮಣ್ಣನು ಕಾಲಿನಿಂದ ತೋರಿಸಿದ ಕೆಲಸವನ್ನು ತಲೆ ಮೇಲೆ ಹೊತ್ತು ಮಾಡುತ್ತಿದ್ದ ನಾಯಿಮಗ, ಶಾರಿಯ ಮಾತಿಗಳಿಂದ ಪ್ರೇರಣೆ ಪಡೆದು ಅವಳನ್ನು ಕಾಪಾಡುವ ನೆಪದಲ್ಲಿ ಸೋಮಣ್ಣನಿಂದ ಸ್ವಾತಂತ್ರ್ಯ ಪಡೆದುಕೊಳ್ಳುತ್ತಾನೆ. ಶಾರಿ ಇಲ್ಲಿ ಒಂದು ಸಮುದಾಯದ ಉದ
APA, Harvard, Vancouver, ISO, and other styles
4

ದೊಡ್ಡನಾಯ್ಕ, ಹೆಚ್. "ಅಂಬೇಡ್ಕರ್‌: ಮೀಸಲಾತಿ". AKSHARASURYA JOURNAL 06, № 05 (2025): 30 to 35. https://doi.org/10.5281/zenodo.15504187.

Full text
Abstract:
ಬಾಬಾ ಸಾಹೇಬ್ ಅಂಬೇಡ್ಕರ್‌ ಭಾರತ ಕಂಡ ಮಹಾನ್ ಮಾನವತವಾದಿ. ಭಾರತದಲ್ಲಿದ್ದ ವರ್ಣ, ವರ್ಗ ಮತ್ತು ಜಾತಿ ವ್ಯವಸ್ಥೆಯನ್ನು ಬುಡ ಸಮೇತ ನಾಶ ಮಾಡದ ಹೊರತು, ಭಾರತದ ಸಮಾಜ ಸುಧಾರಣೆಗೊಳ್ಳಲು ಸಾಧ್ಯವಿಲ್ಲವೆಂದು ಹೇಳಿದ ಸಮಾಜ ಸುಧಾರಕರು. ಸಾಮಾಜಿಕ ಸ್ತರಗಳ ಮೂಲಕ ಇದ್ದ ತಾರತಮ್ಯವನ್ನು ಹೋಗಲಾಡಿಸಲು ಜನಸಾಮಾನ್ಯರಲ್ಲಿ ವಿಚಾರಧಾರೆಗಳನ್ನು ಕಟ್ಟಿಕೊಟ್ಟ ಮಹಾನ್ ವಿಚಾರವಾದಿ. ಹೀಗಾಗಿಯೇ ಬಾಬಾ ಸಾಹೇಬರು ಭಾರತೀಯ ಸಮಾಜದ ಪ್ರಗತಿಯು ಸಮಾನತೆಯಲ್ಲಿ ಅಡಗಿದೆ ಎಂದು ಬಲವಾಗಿ ನಂಬಿದ್ದರು. ವರ್ಣಗಳು ಪುರುಷನಿಂದ, ಮನುವಿನಿಂದ, ಪ್ರಜಾಪತಿಯಿಂದ, ವಾರ್ತ್ ನಿಂದ ಮತ್ತು ಸೋಮನಿಂದ ಹುಟ್ಟಿವೆ ಎಂದು ವೇದಗಳು ಪ್ರತಿಪಾದಿಸುತ್ತವೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳು ಋಗ್ವೇದದಲ್ಲಿ ಪ್ರತಿಪಾದಿತವಾಗಿದೆ. ವರ್ಣ ವ್ಯವಸ್ಥೆಯ ಹುಟ್ಟಿನ ಕ
APA, Harvard, Vancouver, ISO, and other styles
5

ವಸುಂಧರಿ, ಎನ್. "ವಚನ ಚಳುವಳಿ ಮತ್ತು ಸಮಾಜ ಪರಿವರ್ತನೆ". AKSHARASURYA JOURNAL 06, № 05 (2025): 233 to 240. https://doi.org/10.5281/zenodo.15504705.

Full text
Abstract:
ಆತ್ಮಾನುಭಾವದ ಚೈತನ್ಯ ಮತ್ತು ಸಮಾಜಕಲ್ಯಾಣದ ತೀವ್ರಕಾಳಜಿಯೊಂದಿಗೆ ಮೂಢನಂಬಿಕೆ, ಕಂದಾಚಾರಗಳಿಂದ ಜಡವಾಗಿದ್ದ ಸಮಾಜವನ್ನು ಪರಿವರ್ತಿಸುವ ಸಂಕಲ್ಪದಿಂದ ಅವರು ಒಂದು ವಿನೂತನ ಚಳುವಳಿಯನ್ನೇ ಪ್ರಾರಂಭಿಸಿದರು. ಮೇಲು-ಕೀಳು ಎಂಬ ವರ್ಣ ಅಸಮಾನತೆ;ಬಡವ ಬಲ್ಲಿದ ಎಂಬ ವರ್ಗ ತಾರತಮ್ಯ;ಹೆಣ್ಣು-ಗಂಡು ಎಂಬ ಲಿಂಗಭೇದ ಇವೆಲ್ಲ ತರತಮ ವ್ಯವಸ್ಥೆಯನ್ನು ಹೋಗಲಾಡಿಸಿ ಸಮಾನತೆಯ ಆಧಾರದ ಮೇಲೆ ಹೊಸ ಸಮಾಜವನ್ನು ಅವರು ಕಟ್ಟಬಯಸಿದರು. ಇದಕ್ಕಾಗಿ ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪನೆಯಾಯಿತು. ಬಸವಣ್ಣ ಸಂಚಾಲಕನಾಗಿ ಮುಂದೆ ನಿಂತ. ಮಹಾನುಭಾವಿ ಅಲ್ಲಮಪ್ರಭುವಿನ ಮಾರ್ಗದರ್ಶನ ದೊರೆಯಿತು. ಚೆನ್ನಬಸವ, ಅಕ್ಕನಾಗಮ್ಮ, ಹಡಪದ ಅಪ್ಪಣ್ಣ, ಮಡಿವಾಳ ಮಾಚಯ್ಯ ಮೊದಲಾದ ನೂರಾರು ವಚನಕಾರರು ಕಾರ್ಯಕರ್ತರಾಗಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡರು. ಬಸವಾದಿ ಶರಣರು ಕಲ್ಯಾಣದಲ್ಲಿ ಹೊ
APA, Harvard, Vancouver, ISO, and other styles
6

ನವೀನ್, ಕುಮಾರ ಎ. ಜಿ. "ಅಂಬೇಡ್ಕರ್‌: ಅಸ್ಪೃಶ್ಯರ ಆರ್ಥಿಕ ಸ್ವಾವಲಂಬನೆಗಾಗಿ ನಡೆಸಿದ ಚಿಂತನೆಗಳು". AKSHARASURYA JOURNAL 06, № 05 (2025): 121 to 132. https://doi.org/10.5281/zenodo.15504345.

Full text
Abstract:
ಇಂದು ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗಗಳ ಏಳಿಗೆಯು ಒಂದು ರಾಷ್ಟ್ರೀಯ ಸಮಸ್ಯೆಯಾಗಿ ಉಳಿಯುತ್ತ ಬಂದಿದೆ. ಕಳೆದ ನಲವತ್ತು ವರ್ಷಗಳಿಂದ ಅಂದರೆ 1991 ರಿಂದ ಮಾಹಿತಿ ತಂತ್ರಜ್ಞಾನದಿಂದ ಪ್ರಾರಂಭವಾಗಿ 2018ರ ಮೇಕಿಂಗ್ ಇಂಡಿಯಾ ವರೆಗೆ ಅನೇಕ ಯೋಜನೆಗಳು ಹತ್ತಾರು ಭಾಗ್ಯಗಳು ಅಪಾರ ಪ್ರಮಾಣದ ಆರ್ಥಿಕ ನೆರವು ನೀಡಲಾಗಿದೆ. ಆದರೂ ಸಮಾಜದಲ್ಲಿ ಆರ್ಥಿಕ ದುರ್ಬಲ ವರ್ಗ ಸಮಾಜಿಕವಾಗಿ ಮುಖ್ಯವಾಹಿನಿಯಲ್ಲಿ ಬಂದು ಮಹತ್ತರವಾದ ಸಾಧನೆ ಮಾಡುವಲ್ಲಿ ವಿಫಲವಾಗಿದೆ. ಬಡತನ ನಿರ್ಮೂಲನೆ ಅಸಾಧ್ಯವೇನೋ ಅನಿಸುವಷ್ಟರ ಮಟ್ಟಕ್ಕೆ ಬಂದು ನಿಂತಿದೆ. ದೌರ್ಜನ್ಯ, ದಬ್ಬಾಳಿಕೆ, ಕೊಲೆ, ಸುಲಿಗೆ, ಮೋಸ, ಸಂಪತ್ತಿನ ಕ್ರೋಢಿಕರಣಕ್ಕಾಗಿ ನಡೆಯುತ್ತ ಕಾನೂನೆ ಭಯಪಡುವ ಮಟ್ಟಕ್ಕೆ ನಡೆಯುತ್ತಿವೆ. ಇದರ ಪರಿಣಾಮ ಜನ ಅನ್ಯ ಧರ್ಮಕ್ಕೆ ಮತಾಂತರ ಹೊಂದುತ್ತ ಅಲ್ಲಿಯೂ ನೆಮ್ಮದಿ ಕಾಣದ
APA, Harvard, Vancouver, ISO, and other styles
7

ಕಾಂತರಾಜ, ಯಾದವ್ ಸಿ. "ದಲಿತ ಆತ್ಮಕತೆಗಳಲ್ಲಿ ಬಾಲ್ಯ ಮತ್ತು ಶಾಲಾ ಶಿಕ್ಷಣದ ನಿರೂಪಣೆಗಳು". AKSHARASURYA 06, № 02 (2025): 84 to 91. https://doi.org/10.5281/zenodo.15124072.

Full text
Abstract:
ಮನುಷ್ಯನ ಬದುಕಿನಲ್ಲಿ ಬಾಲ್ಯದ ಅನುಭವವು ತುಂಬಾ ಮುಖ್ಯವಾದದ್ದು. ಬಾಲ್ಯದ ಬದುಕು ಎಲ್ಲರಿಗೂ ಒಂದೇ ರೀತಿಯದಾಗಿರುವುದಿಲ್ಲ. ಆ ವಯಸ್ಸಿನ ಶಿಕ್ಷಣವೂ ಕೂಡ ಬಾಲ್ಯದ ಅನುಭವವಗಳನ್ನು ದಟ್ಟವಾಗಿ ಆವರಿಸಿಕೊಂಡಿರುತ್ತದೆ. ಜಾತಿಯಾಧಾರಿತ ಸಾಮಾಜಿಕ ವ್ಯವಸ್ಥೆಯೂ ಕೂಡ ಈ ಬಾಲ್ಯದ ಮೇಲೆ ಪ್ರಭಾವವನ್ನು ಬೀರುತ್ತದೆ. ಮೇಲ್ಜಾತಿ, ಮಧ್ಯಮ ಜಾತಿಗಳು ಮೂಲಭೂತ ಸೌಕರ್ಯಗಳು ಮತ್ತು ಶಿಕ್ಷಣದ ಕುರಿತಂತೆ ಎಚ್ಚರಿಕೆಯಿಂದಿದ್ದರೆ, ತಳ ಸಮುದಾಯಗಳು ಮತ್ತು ಶ್ರಮಿಕ ವರ್ಗ ಮೂಲಭೂತ ಸೌಕರ್ಯಗಳಿಗಾಗಿಯೇ ಹೋರಾಟ ನಡೆಸುತ್ತಿರುವುದನ್ನು ಕಾಣಬಹುದು. ಈ ಸಂಧರ್ಭದಲ್ಲಿ ಶಿಕ್ಷಣದ ಕುರಿತ ಮಾತು ಕನಸಿನ ಪಯಣವೇ ಸರಿ. ಹಸಿವು ಮತ್ತು ಅವಮಾನಗಳಾಚೆಗಿನ ಬದುಕನ್ನು ದಲಿತ ಆತ್ಮಕಥೆಗಳಲ್ಲಿ ಕಾಣಬಹುದು. ಶಾಲೆಯ ಕುರಿತಂತೆ, ಶಿಕ್ಷಕರ ಕುರಿತಂತೆ ದಲಿತ ಆತ್ಮಕತೆಗಳು ಚಿತ್ರಿಸುವ ಸೂಕ್ಷ್ಮ ಪ
APA, Harvard, Vancouver, ISO, and other styles
8

ಗಣೇಶ та ಹೆಚ್. ಎಸ್. ನಿಂಗರಾಜು. "ಆಧುನಿಕ ಕನ್ನಡ ಸಾಮಾಜಿಕ ನಾಟಕಗಳಲ್ಲಿ ಪ್ರತಿಯಜಮಾನಿಕೆಯ ಸ್ವರೂಪ". AKSHARASURYA JOURNAL 04, № 06 (2024): 63 to 73. https://doi.org/10.5281/zenodo.13724751.

Full text
Abstract:
ಭಾರತದಂತಹ ದೇಶವು ಸಂಕೀರ್ಣವಾದ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿದೆ.  ಅಂತಹ ಪ್ರಾಬಲ್ಯಗಳ ಆಧಾರವು ಸಂಕೀರ್ಣ ಸ್ವರೂಪವನ್ನು ಹೊಂದಿದೆ.  ಭಾರತದ ವರ್ಣ ಆಧಾರಿತ ಸಾಮಾಜಿಕ ವ್ಯವಸ್ಥೆಯಲ್ಲಿ, ವರ್ಣಾಸ್‌ನ ಮೇಲಿನ ಸ್ತರಗಳಲ್ಲಿ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಪ್ರಾಬಲ್ಯ ವ್ಯವಸ್ಥೆಗಳು ಛಿದ್ರಗೊಳ್ಳುತ್ತಿವೆ.  ಸಬಾಲ್ಟರ್ನ್ ಅಡಿಯಲ್ಲಿ ಬರುವ ನಾಲ್ಕನೇ ವರ್ಣಾ, ಶೂದ್ರವರ್ಣ,  ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಭಾಗವಹಿಸುವಿಕೆಯಿಂದ ವಂಚಿತವಾಗಿದೆ. ಸಾಂಪ್ರದಾಯಿಕವಾಗಿ ಮೇಲ್ವರ್ಗದ  ಪ್ರಾಬಲ್ಯಗಳು ಕಠಿಣ ಅಭ್ಯಾಸಗಳನ್ನು ನಿರ್ಮಿಸುವ ಮೂಲಕ ಅಧೀನ ವರ್ಗವನ್ನು ಬಳಸಿಕೊಳ್ಳುತ್ತವೆ. ಈ ಅಧೀನ ನೆಲೆಗಳು ಮೇಲ್ಮಟ್ಟದ ಪ್ರಾಬಲ್ಯಗಳ ವಿರುದ್ಧ ಹೆಚ್ಚು ಸಹನೆ ಮತ್ತು ಮೂಕತನದಿಂದ ಪ್ರತಿಭಟಿಸಲು ಸಾಧ್ಯವಾಗುತ್ತಿಲ್ಲ. ಅವರ ನ
APA, Harvard, Vancouver, ISO, and other styles
9

ಕುಮಾರಯ್ಯ, ಡಿ.ಎಸ್. "ಬಸವಣ್ಣನವರ ವಚನಗಳಲ್ಲಿ-ಜಾತಿ ನಿರಾಕರಣೆ". AKSHARASURYA JOURNAL 06, № 06 (2025): 26 to 31. https://doi.org/10.5281/zenodo.15580919.

Full text
Abstract:
ಹನ್ನೇರಡನೆ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಶರಣ ಸಮಾಜವು ಕುಲ, ಮತ, ಲಿಂಗ, ವರ್ಣ, ವರ್ಗಇವುಗಳಿಂದ ಮುಕ್ತವಾಗಿತ್ತು. ಬಸವಣ್ಣನವರು ಜಾತಿಯ ವಿಷ ಬೀಜವನ್ನು ಕಿತ್ತು ನವ ಸಮಾಜದಲ್ಲಿ ಹೇಗೆ ಬದುಕಬೇಕೆಂದು ಸಾರಿದರು. ಮನುಧರ್ಮದ ಕರ್ಮಸಿದ್ದಾಂತವನ್ನು ಬಸವಣ್ಣನವರು ಅಲ್ಲಗಳೆದು ಕಾಯಕ ಸಿದ್ಧಾಂತವನ್ನು ಕಾರ್ಯಗತಗೊಳಿಸಿದರು. ಬಸವಣ್ಣನವರ ಚಿಂತನೆಗಳಲ್ಲಿ ಜಾತಿ ನಿರಾಕರಣೆಯೂ ಸಹ ಮಹತ್ವವಾದ ಚಿಂತನೆಯಾಗಿದೆ. ಜಾತಿ ನಿರಾಕರಣೆ ವಿಚಾರದಲ್ಲಿ ಎಲ್ಲರಿಗಿಂತ ಹೆಚ್ಚು ಮಾನಸಿಕ ಸಂಘರ್ಷವನ್ನು ಹೊಂದಿದವನು ಬಸವಣ್ಣನವರು, ಇಲ್ಲದಿದ್ದರೆ ‘ಉತ್ತಮ ಕುಲದಲ್ಲಿ ಹುಟ್ಟಿದನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯ ಎಂದು ಹೇಳುವ ನೋವು ಏಕಿರಬೇಕಿತ್ತು?’ ಉತ್ತಮ ಜಾತಿ ಸಂಕೋಲನೆಯಿಂದ ಬಿಡಿಸಿಕೊಂಡು ಹೊರಬರುವುದಕ್ಕಾಗಿ ತಾನು ಹುಟ್ಟಿದ ಜಾತಿಯನ್ನು ನಿರಾಕ
APA, Harvard, Vancouver, ISO, and other styles
10

ಮುಕ್ತಾ, ಪೈ., та ಶಂಕರ್ ಜ್ಯೋತಿ. "ವಚನ ಚಳುವಳಿ ಮತ್ತು ಸಮಾಜ ಪರಿವರ್ತನೆ". AKSHARASURYA JOURNAL 06, № 05 (2025): 84 to 93. https://doi.org/10.5281/zenodo.15504282.

Full text
Abstract:
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯಕ್ಕೊಂದು ವಿಶಿಷ್ಟವಾದ ಸ್ಥಾನವಿದೆ. ಇದು ಎಲ್ಲಾ ವರ್ಗ, ವರ್ಣದ ಜನಸಾಮಾನ್ಯರು ತಮ್ಮ ಮನಸ್ಸಿನಲ್ಲಿದ್ದ ಭಾವನೆಗಳನ್ನು ವ್ಯಕ್ತಪಡಿಸಿದ ಅದ್ಭುತವಾದ ಭಕ್ತಿ ಸಾಹಿತ್ಯ. ಮೇಲು-ಕೀಳು, ಜಾತಿ-ಮತ, ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರೂ ಸಾಮೂಹಿಕವಾಗಿ ಪಾಲ್ಗೊಂಡ ಸಾಹಿತ್ಯ ಜಗತ್ತಿನ ಇತಿಹಾಸದಲ್ಲಿಯೇ ವಿರಳವಾಗಿದೆ. ಶರಣ ಧರ್ಮದ ವಿಶಿಷ್ಟತೆ ಎಂದರೆ ಪೂಜೆ ಪುನಸ್ಕಾರಗಳಿಗೆ, ಯಜ್ಞ ಯಾಗಾದಿಗಳಿಗೆ, ಆಚರಣೆಗಳಿಗೆ ಅವಕಾಶ ನೀಡಲಿಲ್ಲ. ವಚನಾಕಾರರು 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಹೀಗೆ ಹಲವು ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ತಂದು ಸಮಾಜದಲ್ಲಿ ನಿರ್ಲಕ್ಷಕ್ಕೆ ಒಳಗಾದ ಜನ ಸಮೂಹವನ್ನು ಒಂದೆಡೆ ಸೇರಿಸುವ ಕಾರ್ಯವನ್ನು ಮಾಡಿದರು. ವಚನ ಚಳುವಳಿಯ ದೀಪವನ್ನು ನೂರಾರು ವಚನಕಾರರು ಹಚ
APA, Harvard, Vancouver, ISO, and other styles
More sources
We offer discounts on all premium plans for authors whose works are included in thematic literature selections. Contact us to get a unique promo code!