To see the other types of publications on this topic, follow the link: ವ್ಯವಸ್ಥೆ.

Journal articles on the topic 'ವ್ಯವಸ್ಥೆ'

Create a spot-on reference in APA, MLA, Chicago, Harvard, and other styles

Select a source type:

Consult the top 50 journal articles for your research on the topic 'ವ್ಯವಸ್ಥೆ.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Browse journal articles on a wide variety of disciplines and organise your bibliography correctly.

1

ಅಶ್ವಿನಿ, ಎಂ. ಎಸ್. "ಬಾಬಾ ಸಾಹೇಬ್ ಅಂಬೇಡ್ಕರ್‌: ಸಾಮಾಜಿಕ ನ್ಯಾಯದ ರೂವಾರಿ". AKSHARASURYA JOURNAL 06, № 05 (2025): 10 to 16. https://doi.org/10.5281/zenodo.15504125.

Full text
Abstract:
ಭಾರತ ಕಂಡ ಅತ್ಯಂತ ಶ್ರೇಷ್ಠ ಪ್ರತಿಭೆಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ ಅವರು ಅಗ್ರಮಾನ್ಯರು. ಅವರು ರಾಜಕೀಯ ತಜ್ಞರು, ಕಾನೂನು ತಜ್ಞರು, ಆರ್ಥಿಕ ಚಿಂತಕರು, ಸಾಮಾಜಿಕ ನ್ಯಾಯದ ಹೋರಾಟಗಾರರು, ತತ್ವಜ್ಞಾನಿಗಳು, ಲೇಖಕರು, ಬಹುಭಾಷ ವಿದ್ವಾಂಸರು, ಭಾರತ ರಾಷ್ಟ್ರದ ಮಹಾನ್ ನೇತಾರ, ಭಾರತದ ಶ್ರೇಷ್ಠ ಮಾನವತಾವಾದಿ, ಪ್ರಜಾತಂತ್ರ ಕಾರಣಿ ಮತ್ತು ಸಾಮಾಜಿಕ ಕ್ರಾಂತಿಕಾರಿ, ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ಮಹಾಜ್ಞಾನಿ ಹಾಗೂ ಭಾರತದ ಸಂವಿಧಾನ ರಚನ ಕರಡು ಸಮಿತಿಯ ಅಧ್ಯಕ್ಷರು. ಹೀಗೆ ಇವರ ಶ್ರೇಷ್ಠತೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಂಥ ಶ್ರೇಷ್ಠ ವ್ಯಕ್ತಿ ಭಾರತದಲ್ಲಿದ್ದ ವರ್ಣ ವ್ಯವಸ್ಥೆಯ ವಿರುದ್ಧ ಹೋರಾಡಿ, ತಾನೇ ಸಂವಿಧಾನವನ್ನು ರಚಿಸಿ ಸಾಮಾಜಿಕ ನ್ಯಾಯವನ್ನು ನೀಡಿದ ಸಾಮಾಜಿಕ ಚ
APA, Harvard, Vancouver, ISO, and other styles
2

ಪಂಕಜ, ಹೆಚ್. ಪಿ. "ಸಂಸತ್ತಿನ ಪ್ರಶ್ನಾವಳಿ". AKSHARASURYA 04, № 03 (2024): 133 to 137. https://doi.org/10.5281/zenodo.12672909.

Full text
Abstract:
ಭಾರತದ ಸಂವಿಧಾನ ವಿಶ್ವದ ಅತ್ಯಂತ ಬೃಹತ್ ಸಂವಿಧಾನ ಮತ್ತು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಆಡಳಿತದ ಅನುಕೂಲಕ್ಕಾಗಿ ದ್ವಿಸದನಗಳನ್ನೊಳಗೊಂಡ ಸಂಸತ್ ವ್ಯವಸ್ಥೆ ರಚನೆಯಾಗಿದೆ. ಪಾರ್ಲಿಮೆಂಟ್‌ನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯ ರ ಅಧಿಕಾರ ದುರುಪಯೋಗ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಂಬಂಧ ಎಲ್ಲಾ ಸದಸ್ಯರು ಸಾರ್ವಜನಿಕ ಮಸೂದೆಯಾಗಲಿ ಖಾಸಗಿ ಮಸೂದೆಯಾಗಲಿ ವಿಷಯಕ್ಕೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪಾರ್ಲಿಮೆಂಟ್ ನಲ್ಲಿ ಸಭೆಯ ನಿರ್ಣಯಗಳನ್ನು ಗೌರವಿಸುವ ಉದ್ದೇಶ ಹಾಗೂ ವ್ಯವಸ್ಥಿತ ರೀತಿಯಲ್ಲಿ ಸಭೆಯ ನಡಾವಳಿಗಳನ್ನು ಪಾಲಿಸಬೇಕು ಎಂಬ ಉದ್ದೇಶದಿಂದ ಪ್ರಶ್ನೆ ಕೇಳುವ ಅವಕಾಶ ಮತ್ತು ಉತ್ತರ ನೀಡಲು ಬೇಕಾಗುವ ಸುವ್ಯವಸ್ಥಿತ ಕ್ರಿಯೆಯಾಗಿದೆ.
APA, Harvard, Vancouver, ISO, and other styles
3

ಕಾಂತರಾಜ, ಯಾದವ್ ಸಿ. "ದಲಿತ ಆತ್ಮಕತೆಗಳಲ್ಲಿ ಬಾಲ್ಯ ಮತ್ತು ಶಾಲಾ ಶಿಕ್ಷಣದ ನಿರೂಪಣೆಗಳು". AKSHARASURYA 06, № 02 (2025): 84 to 91. https://doi.org/10.5281/zenodo.15124072.

Full text
Abstract:
ಮನುಷ್ಯನ ಬದುಕಿನಲ್ಲಿ ಬಾಲ್ಯದ ಅನುಭವವು ತುಂಬಾ ಮುಖ್ಯವಾದದ್ದು. ಬಾಲ್ಯದ ಬದುಕು ಎಲ್ಲರಿಗೂ ಒಂದೇ ರೀತಿಯದಾಗಿರುವುದಿಲ್ಲ. ಆ ವಯಸ್ಸಿನ ಶಿಕ್ಷಣವೂ ಕೂಡ ಬಾಲ್ಯದ ಅನುಭವವಗಳನ್ನು ದಟ್ಟವಾಗಿ ಆವರಿಸಿಕೊಂಡಿರುತ್ತದೆ. ಜಾತಿಯಾಧಾರಿತ ಸಾಮಾಜಿಕ ವ್ಯವಸ್ಥೆಯೂ ಕೂಡ ಈ ಬಾಲ್ಯದ ಮೇಲೆ ಪ್ರಭಾವವನ್ನು ಬೀರುತ್ತದೆ. ಮೇಲ್ಜಾತಿ, ಮಧ್ಯಮ ಜಾತಿಗಳು ಮೂಲಭೂತ ಸೌಕರ್ಯಗಳು ಮತ್ತು ಶಿಕ್ಷಣದ ಕುರಿತಂತೆ ಎಚ್ಚರಿಕೆಯಿಂದಿದ್ದರೆ, ತಳ ಸಮುದಾಯಗಳು ಮತ್ತು ಶ್ರಮಿಕ ವರ್ಗ ಮೂಲಭೂತ ಸೌಕರ್ಯಗಳಿಗಾಗಿಯೇ ಹೋರಾಟ ನಡೆಸುತ್ತಿರುವುದನ್ನು ಕಾಣಬಹುದು. ಈ ಸಂಧರ್ಭದಲ್ಲಿ ಶಿಕ್ಷಣದ ಕುರಿತ ಮಾತು ಕನಸಿನ ಪಯಣವೇ ಸರಿ. ಹಸಿವು ಮತ್ತು ಅವಮಾನಗಳಾಚೆಗಿನ ಬದುಕನ್ನು ದಲಿತ ಆತ್ಮಕಥೆಗಳಲ್ಲಿ ಕಾಣಬಹುದು. ಶಾಲೆಯ ಕುರಿತಂತೆ, ಶಿಕ್ಷಕರ ಕುರಿತಂತೆ ದಲಿತ ಆತ್ಮಕತೆಗಳು ಚಿತ್ರಿಸುವ ಸೂಕ್ಷ್ಮ ಪ
APA, Harvard, Vancouver, ISO, and other styles
4

ಮಾದಪ್ಪ, ಜಿ. "'ತಮಂಧದ ಕೇಡು' ಕಥೆಯಲ್ಲಿ ಚಿತ್ರಣಗೊಂಡಿರುವ ಸಾಮಾಜಿಕ ವ್ಯವಸ್ಥೆ". AKSHARASURYA JOURNAL 05, № 03 Special Issue (2024): 45 to 52. https://doi.org/10.5281/zenodo.14246486.

Full text
Abstract:
ಭಾರತೀಯ ಸಾಮಾಜಿಕ ವ್ಯವಸ್ಥೆಯು ಬಹುತ್ವದ ನೆಲೆಯಿಂದ ಕೂಡಿದೆ. ಶೋಷಣೆಗೊಳಗಾದವರ ನೋವು, ಆಕ್ರೋಶ, ಸಂವೇದನೆಗಳನ್ನು ಪ್ರತಿಭಟನೆ, ಹೋರಾಟದ ಮೂಲಕ ಅಭಿವ್ಯಕ್ತಿಸುವ ಬಂಡಾಯ ಸಾಹಿತ್ಯ ಪಂಥದ ಆರಂಭಿಕ ಕಥೆಗಳು ಸಿಟ್ಟು, ಅವಮಾನ, ಹತಾಶೆ, ಆಕ್ರೋಶಗಳನ್ನು ರೋಷಾವೇಶದ ಭಾಷೆಯಲ್ಲಿಯೇ ಹೊರಹಾಕಿದೆ. ಈ ಕಾಲಘಟ್ಟದಲ್ಲಿ ಕಂಡುಬರುವ ಅಮರೇಶ ನುಗಡೋಣಿ ತಮ್ಮ ಕಥೆಗಳಲ್ಲಿ ಸಾಮಾಜಿಕ ಕಳಕಳಿ, ರಾಜಕೀಯಪ್ರಜ್ಞೆ ಹಾಗೂ ಪ್ರತಿಭಟನೆಯ ಮೂಲಕ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದ್ದಾರೆ. ಹಾಗೂ ತಮ್ಮ ಕಥೆಗಳಲ್ಲಿ 12ನೇ ಶತಮಾನದ ಬಸವಣ್ಣನ ಕಾಯಕ ವೃತ್ತಿಯ ಸಮಸಮಾಜದ ಕನಸಿನ ಸಮಾಜವನ್ನು ಮರುನಿರ್ಮಾಣ ಮಾಡಲು ಪ್ರಯತ್ನಿಸಿದ್ದಾರೆ. ದೇವನೂರು ಮಹಾದೇವ ಅವರ ಕಥೆಗಳನ್ನು ನೆನಪಿಸುವ ಇವರ ಕಥೆಗಳು ಅಲ್ಲಿನ ಪಾತ್ರಗಳಂತೆ ತಾತ್ವಿಕವಾಗಿ ಪ್ರತಿಭಟಿಸುವುದಿಲ್ಲ; ಮೃದುಧೋರಣೆಯಲ್ಲಿ ಸಾತ್
APA, Harvard, Vancouver, ISO, and other styles
5

ರಂಗಸ್ವಾಮಿ та ಧರ್ಮೇಗೌಡ ಎಚ್.ಎಂ. "ಡಾ. ಬಿ.ಆರ್. ಅಂಬೇಡ್ಕರ್‌ ಅವರ ರಾಷ್ಟ್ರೀಯತೆಯ ಪರಿಕಲ್ಪನೆ: ಒಂದು ವಿಶ್ಲೇಷಣಾತ್ಮಕ ಅಧ್ಯಯನ". AKSHARASURYA JOURNAL 06, № 05 (2025): 157 to 168. https://doi.org/10.5281/zenodo.15504498.

Full text
Abstract:
ವೇದಗಳ ಕಾಲದಿಂದಲೂ ಉಳಿಸಿಕೊಂಡು ಬಂದಿದ್ದ ಹಿಂದೂ ಸಾಮಾಜಿಕ ವ್ಯವಸ್ಥೆ ತೀವ್ರವಾದ ಆಘಾತಕ್ಕೆ ಒಳಗಾಗಿದ್ದು ಭಾರತ ವಸಾಹತು ಯಾಜಮಾನ್ಯಕ್ಕೆ ಒಳಪಟ್ಟ ಮೇಲೆ ತೀವ್ರವಾದ ಸಾಮಾಜಿಕ ಬದಲಾವಣೆಗಳನ್ನು ಕಂಡಿತು. ವಸಾಹತು ಯಾಜಮಾನ್ಯ ಹೊತ್ತುತಂದ ಅನ್ಯಧರ್ಮ, ಅನ್ಯ ಸಂಸ್ಕೃತಿಗಳಿಗೆ ದೇಸಿ ಸಂಸ್ಕೃತಿಗಳು ಹಲವು ಬಗೆಯಲ್ಲಿ ಪ್ರತಿಕ್ರಿಯಿಸಿದವು. ದೇಸಿ ಸಮಾಜದ ಪಾರಂಪರಿಕ ಹಿಂಸೆಗಳನ್ನು ಅನುಭವಿಸಿಕೊಂಡು ಬಂದಿದ್ದ ತಳಸಮುದಾಯಗಳಿಗೆ ವಸಾಹತೀಕರಣ ಬಿಡುಗಡೆಯ ಹಾದಿಯಾಗಿ ಕಂಡುಬಂದಿತು. ಅಂಬೇಡ್ಕರ್‌ ಅವರು ವಸಾಹತು ಮೂಲದ ಆಧುನಿಕ ಶಿಕ್ಷಣ, ಇಂಗ್ಲಿಷ್ ಭಾಷೆ, ಪ್ರಜಾಪ್ರಭುತ್ವವಾದಿ, ರಾಜಕೀಯ ವ್ಯವಸ್ಥೆಯ ಸ್ಥಾಪನೆ ಮಾಡುವುದರ ಮೂಲಕ ದಲಿತರ ಬಿಡುಗಡೆಯ ಹಾದಿಯನ್ನು ಕಂಡುಕೊಂಡರು. ಅಂಬೇಡ್ಕರ್‌ ಅವರ ಈ ಬಗೆಯ ಹೋರಾಟ ಮತ್ತು ಚಿಂತನೆಗಳಿಗೆ ಅನೇಕ ಸಮಕಾಲೀನ ಚಿಂ
APA, Harvard, Vancouver, ISO, and other styles
6

ಲೋಕೇಶ, ಆರ್. "ಮೈಸೂರು ಅರಸರ ಕಾಲದ ಸಮ-ತತ್ತ್ವದ ಶಿಕ್ಷಣದ ವ್ಯವಸ್ಥೆ". AKSHARASURYA JOURNAL 03, № 04. SPECIAL ISSUE. (2024): 74 to 82. https://doi.org/10.5281/zenodo.10929729.

Full text
Abstract:
ನಮ್ಮ ನಾಡಿನ ಪ್ರಾಚಿನ ಪರಂಪರೆ ಹಾಗೂ ಸನಾತನವೆನಿಸಿದ ಭಾರತೀಯ ಜ್ಞಾನ ಸಂಪತ್ತು ಮತ್ತು ಚಿಂತನಶೀಲತೆ ರಾಷ್ಟ್ರೀಯ ಶಿಕ್ಷಣ ನೀತಿಯ ದಾರಿದೀಪವಾಗಿದೆ. ಜ್ಞಾನ, ವಿವೇಕ ಹಾಗೂ ಸತ್ಯ ಭಾರತೀಯ ದಾರ್ಶನಿಕ ಚಿಂತನೆಯ ಅತ್ಯುನ್ನತ ಸಾಧನೆಯ ಗುರಿಗಳಾಗಿದ್ದವು. ಆತ್ಮಸಾಕ್ಷಾತ್ಕಾರ ಮತ್ತು ಆತ್ಮವಿಮೋಚನೆ ಶಿಕ್ಷಣದ ಗುರಿಯಾಗಿತ್ತು. ಅತ್ಯುತ್ತಮ ಮಟ್ಟದ ಬಹುಶಿಸ್ತೀಯ ಅಧ್ಯಯನಗಳು ಜ್ಞಾನದ ಗಡಿಗಳನ್ನು ವಿಸ್ತರಿಸಿ ಎಲ್ಲೆಡೆಯಿಂದಲೂ ಜ್ಞಾನ ಸ್ವೀಕಾರ ಕಾರ್ಯ ನಡೆಯುತ್ತಲೇ ಇತ್ತು. ಇದು ಕನ್ನಡ ನಾಡಿಗೂ ಮಾದರಿಯಾಗಿ ಕನ್ನಡ ನಾಡು ಕೂಡ ಯಾವುದಕ್ಕೂ ಹಿಂದೆ ಬೀಳದೆ ತನ್ನದೇ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳುತ್ತಲೇ ಮಾದರಿ ರಾಜ್ಯವಾಗಿ ಚರಿತ್ರೆಯಲ್ಲಿ ಗುರುತಾಗತೊಡಗಿತು. ಭಾರತೀಯ ಭವ್ಯ ಪರಂಪರೆಯಲ್ಲಿ ಕನ್ನಡ ನಾಡಿನ ಹಿರಿಮೆ ದೇಸೀ ತನದಿಂದಲೇ ಹೆಸರಾದುದು. ಅದು ಬ
APA, Harvard, Vancouver, ISO, and other styles
7

., ಪೂರ್ಣಿಮಾ ವಿ. "ಮೈಸೂರು ಸಂಸ್ಥಾನದ ಒಡೆಯರ ಆಳ್ವಿಕೆಯ ಶಿಕ್ಷಣ ವ್ಯವಸ್ಥೆ–ಒಂದು ಪರಿವೀಕ್ಷಣೆ". International Journal of Kannada Research 4, № 1 (2018): 44–47. http://dx.doi.org/10.22271/24545813.2018.v4.i1a.994.

Full text
APA, Harvard, Vancouver, ISO, and other styles
8

., ಡಾ ಎಸ್ ಕೆ ದೇವೇಗೌಡ. "ಹೆಗ್ಗಡದೇವಕೋಟೆ ತಾಲೂಕು ಶಾಸನಗಳ ಹಿನ್ನೆಲೆಯಲ್ಲಿ ಆಡಳಿತ ವ್ಯವಸ್ಥೆ ಕುರಿತ ಅಧ್ಯಯನ". International Journal of Kannada Research 2, № 4 (2016): 50–53. http://dx.doi.org/10.22271/24545813.2016.v2.i4a.887.

Full text
APA, Harvard, Vancouver, ISO, and other styles
9

ಅರುಣಾ, .ಬಿ. "ಪೋಷಣೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳಿಗೆ ಆಸಾಂಸ್ಥಿಕ ವ್ಯವಸ್ಥೆಗಳು". International Journal of Advance and Applied Research 12, № 1 (2023): 227–34. https://doi.org/10.5281/zenodo.14203499.

Full text
Abstract:
ಮಕ್ಕಳ ನ್ಯಾಯಕಾಯ್ದೆ -2015, ತಿದ್ದುಪಡಿ2021  ಮತ್ತು ಮಾದರಿ ನಿಯಮಗಳ 2016 ಮತ್ತು ತಿದ್ದುಪಡಿ 2021 ಅಡಿಯಲ್ಲಿ ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳಿಗೆ ಸಾಂಸ್ಥಿಕ ಮತ್ತು ಅಸಾಂಸ್ಥಿಕ ಆರೈಕೆಮಾಡಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಾಂಸ್ಥಿಕ ಆರೈಕೆಗೆ ಸರ್ಕಾರ ಬಾಲಮಂದಿಗಳು ಮತ್ತು ಸರ್ಕಾರೇತರ ಮಕ್ಕಳ ಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ ಅಸಾಂಸ್ಥಿಕ ವ್ಯವಸ್ಥೆ ನೀಡಲು ಮಕ್ಕಳಿಗಾಗಿ ಅನೇಕ ಕಾರ್ಯಕ್ರಮಗಳು, ಸಮಾಜಿಕ ಭದ್ರತಾ ಯೋಜನೆಗಳನ್ನು ಮಿಷನ್‌ ವಾತ್ಸಲ್ಯ ಮೂಲಕ ರೂಪಿಸಲಾಗಿದೆ.2021 -2022 ನೇ ಸಾಲಿನಲ್ಲಿ ಐ,ಸಿ,ಪಿ,ಎಸ್‌ ಹೆಸರಿನ ಬದಲಾಗಿ ಮಿಷನ್‌ ವಾತ್ಸಲ್ಯ ಹೆಸರಿನಲ್ಲಿ ಪೋರ್ಟಲ್‌ ಆರಂಭಿಸಿ ಮಕ್ಕಳಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ
APA, Harvard, Vancouver, ISO, and other styles
10

ಸಿ., ಬಿ. ಹೊನ್ನುಸಿದ್ಧಾರ್ಥ. "ನಿರಂಜನ 'ವಿಮೋಚನೆ' ಕಾದಂಬರಿ: ನಗರ ಬದುಕಿನ ವಾಸ್ತವ ಚಿತ್ರಣದ ಜೀವನ ವೃತ್ತಾಂತದ ಅನಾವರಣ". AKSHARASURYA 05, № 01 (2024): 33 to 42. https://doi.org/10.5281/zenodo.13870631.

Full text
Abstract:
ಮಾರ್ಕ್ಸ್‌ವಾದಿ ಸಿದ್ಧಾಂತದಿಂದ ಪ್ರಭಾವಿತರಾದ ನಿರಂಜನರು ವೈಚಾರಿಕ ಚಿಂತನೆಯುಳ್ಳವರಾಗಿದ್ದರು. ಅವರ ಮೊದಲ ಕಾದಂಬರಿಯಾದ ‘ವಿಮೋಚನೆ’ಯೂ ವರ್ತಮಾನದಲ್ಲಿ ನಿಂತು ಭೂತವನ್ನು ಕೆಣಕುತ್ತಾ ಹೋಗುವ ನಿರೂಪಣಾ ತಂತ್ರಗಾರಿಕೆಯ ಮೂಲಕ ಕಾದಂಬರಿಯ ಉದ್ದಕ್ಕೂ ನೀತಿಯಿಂದ ಕೂಡಿದ ಸಾಮಾಜಿಕ ವ್ಯವಸ್ಥೆಯನ್ನು ವ್ಯಂಗ್ಯಭರಿತ ದಾಟಿಯಲ್ಲಿ ಕುಟುಕಿದ್ದಾರೆ. ಬಾಲ್ಯದಿಂದಲೂ ಕಡುಬಡತನದ ಬದುಕು ನಡೆಸಿದ್ದ ಕಥಾನಾಯಕ ಚಂದ್ರಶೇಖರನಿಗೆ ತನ್ನ ಬದುಕಿನಲ್ಲಿ ಉಂಟಾದ ದುರ್ಘಟನೆಗಳು ದೊಡ್ಡ ಹೊಡೆತವನ್ನು ನೀಡುತ್ತವೆ. ಅವನು ಇಟ್ಟ ಪ್ರೀತಿ, ವಿಶ್ವಾಸ, ನಂಬಿಕೆಗಳೇ ಅವನಿಗೆ ಮುಳುವಾಗಿ ಸಾಮಾಜಿಕ ವ್ಯವಸ್ಥೆ ಅವನ ಬಡತನವನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡು ಅವನನ್ನು  ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಜೈಲು ಶಿಕ್ಷೆಗೆ ಒಳಗಾದ ಚಂದ್ರಶೇಖರ ತಾನು
APA, Harvard, Vancouver, ISO, and other styles
11

ಬಸೀರಾಬಾನು, ನಿಡಗುಂದಿ. "ಆಯಗಾರಿಕೆ ಮತ್ತು ಹರಿಜನರು (ಛಲವಾದಿಗರು): ವಿಜಯಪುರ ಜಿಲ್ಲೆ ಅನುಲಕ್ಷಿಸಿ". AKSHARASURYA JOURNAL 06, № 05 (2025): 17 to 24. https://doi.org/10.5281/zenodo.15504155.

Full text
Abstract:
ಕೃಷಿ ಭಾರತೀಯ ಗ್ರಾಮಗಳ ಪ್ರಧಾನ ವೃತ್ತಿಯಾಗಿದ್ದು, ಜನಸಂಖ್ಯೆಯ ಬಹುತೇಕ ಭಾಗ ವರ್ಷವಿಡೀ ಕೃಷಿಯಲ್ಲಿಯೇ ತೊಡಗಿರುತ್ತದೆ. ಗ್ರಾಮ ಜೀವನವು ಪರಸ್ಪರಾವಲಂಬಿಯಾಗಿ, ಹಲವಾರು ವಿಶಿಷ್ಟ ಸೇವಾ, ವಿನಿಮಯ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳ ಸಂಗಮವಾಗಿದೆ. ರೈತರು ಒಕ್ಕಲುತನದ ಜೊತೆಗೆ-ಬಡಿಗೇರರು ಬಡಗಿತನ, ಕಮ್ಮಾರರು ಕಮ್ಮಾರಿಕೆ, ಕುಂಬಾರರು ಕುಂಬಾರಿಕೆ, ನೇಕಾರರು ನೇಕಾರಿಕೆ, ಮಡಿವಾಳರು ಬಟ್ಟೆಗಳನ್ನು ಶುಚಿಮಾಡಿಕೊಡುವುದು, ಚಮ್ಮಾರರು ಚಮ್ಮಾರಿಕೆ ಇಂತಹ ವಿವಿಧ ಕಾಯಕಗಳಲ್ಲಿ ನಿರತರಾಗಿದ್ದಾರೆ. ಹಣದ ಚಲಾವಣೆ ಅಧಿಕೃತವಾಗಿ ಆರಂಭವಾದ ಸಂದರ್ಭದಲ್ಲಿಯೂ ಸಹ, ಕೃಷಿಕರು ಬೆಳೆಯುವ ದವಸಧಾನ್ಯಗಳು ತಮಗೆ ಬೇಕಾದ ಬಟ್ಟೆ-ಬರೆ, ಪಾತ್ರೆ ಪಗಡೆ ಮತ್ತು ಸೇವೆಗೆ ಪ್ರತಿಫಲವಾಗಿ ನೀಡುವ ಪರಿಪಾಟ ಗ್ರಾಮೀಣ ಪ್ರದೇಶದಲ್ಲಿ ಬೆಳೆದುಬಂದಿದೆ. ಅಂತಹ ವಿಶಿಷ್ಟ ಸೇವೆಗಳನ್ನು ಸ
APA, Harvard, Vancouver, ISO, and other styles
12

ರಂಗನಾಥ, ಕಂಟನಕುಂಟೆ. "ನುಡಿಗಳ ಅಳಿವು: ಬೇರೆ ದಿಕ್ಕಿನ ನೋಟ". Aksharasurya Journal 05, № 05 (2025): 38 to 47. https://doi.org/10.5281/zenodo.14619463.

Full text
Abstract:
‘ನುಡಿಗಳ ಅಳಿವು: ಬೇರೆ ದಿಕ್ಕಿನ ನೋಟ’ ಕೃತಿಯನ್ನು ಓದಿಕೊಳ್ಳುವಾಗ ಇರಬೇಕಾದ ಎಚ್ಚರವೆಂದರೆ ಈ ಕೃತಿ ಅಳಿವಿನ ಅಂಚಿನಲ್ಲಿರುವ ನುಡಿಗಳ ಬಗೆಗೆ ಇದುವರೆಗೆ ಕಟ್ಟಿಕೊಂಡಿರುವ ತಿಳಿವಿನಲ್ಲಿರುವ ಸಮಸ್ಯೆಯನ್ನು ಹೇಗೆ ಗುರುತಿಸಿದೆ ಎಂಬುದನ್ನು ಗಮನಿಸಬೇಕು. ನಂತರ ಆ ಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಹೇಗೆ ಬದಲಿ ದಾರಿಗಳನ್ನು ಕಂಡುಕೊಳ್ಳಬೇಕಿದೆ ಎಂಬುದರತ್ತ ಗಮನಹರಿಸಬೇಕಿದೆ. ಇಲ್ಲವಾದಲ್ಲಿ ಇದನ್ನು ಯಥಾಸ್ಥಿತಿವಾದಿಗಳು, ಪ್ರಭುತ್ವಗಳು, ಬಂಡವಾಳಶಾಹಿ ವ್ಯವಸ್ಥೆ, ಸಾಮಾಜಿಕ ಡಾರ್ವಿನ್ ವಾದಿಗಳು, ಮತ್ತು ಸದ್ಯ ಭಾಷಿಕ ಸಾಮ್ರಾಜ್ಯಶಾಹಿಗಳು ಅವರಿಗೆ ಬೇಕಾದಂತೆ ಓದಿಕೊಳ್ಳುವ ಸಾಧ್ಯತೆಯೂ ಇದೆ. ಅವರಿಗೆ ಅನುಕೂಲ ಮಾಡಿಕೊಡುವ ವಾದದಂತೆ ಕಾಣಬಹುದು. ಅಂತಹ ಉದ್ದೇಶ ಈ ಕೃತಿಯದಲ್ಲ. ಅದು ಅಳಿವಿನ ಅಂಚಿನಲ್ಲಿರುವ ನುಡಿಗಳ ಬಗೆಗೆ ಆಳವಾದ ಆಸಕ್
APA, Harvard, Vancouver, ISO, and other styles
13

ಚಂದ್ರಾವತಿ, ಶೆಟ್ಟಿ. "ಡಾ. ಬಿ.ಆರ್. ಅಂಬೇಡ್ಕರ್‌ ಮತ್ತು ಮಹಿಳಾ ಸಬಲೀಕರಣ". AKSHARASURYA JOURNAL 06, № 05 (2025): 25 to 29. https://doi.org/10.5281/zenodo.15504175.

Full text
Abstract:
ʼಸಂವಿಧಾನ ಶಿಲ್ಪಿ’ ʼಬಾಬಾ ಸಾಹೇಬ್’ ಎಂದು ಜನಪ್ರಿಯರಾಗಿರುವ ಡಾ. ಬಿ. ಆರ್. ಅಂಬೇಡ್ಕರ್‌ರು ಭಾರತ ದೇಶ ಕಂಡ ಬಹುದೊಡ್ಡ ಸಮಾಜ ಸುಧಾರಕ ನ್ಯಾಯಶಾಸ್ತ್ರಜ್ಞರೂ ಅರ್ಥಶಾಸ್ತ್ರಜ್ಞರೂ ಆಗಿರುವ ಬಿ. ಆರ್. ಅಂಬೇಡ್ಕರ್‌ ಅವರು ಮಾಹಾನ್ ಚಿಂತಕರು ಹೌದು. ಶ್ರೇಷ್ಠ ರಾಜಕೀಯ ನಾಯಕರಾಗಿರುವ ಇವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಸಮಾಜದ ಕಲ್ಯಾಣಕ್ಕಾಗಿ ಮಹಿಳೆಯರು ಮತ್ತು ದೀನದಲಿತ ವರ್ಗಕ್ಕಾಗಿ ಕೆಲಸ ಮಾಡಿದರು. ಎಲ್ಲಾ ಸಮಾಜಕ್ಕೂ ದಾರಿದೀಪರಾಗಿರುವ ಬಿ. ಆರ್. ಅಂಬೇಡ್ಕರ್‌ ಅವರು ಕೇವಲ ಒಂದು ವರ್ಗಕ್ಕಾಗಿ ಹೋರಾಟ ಮಾಡಿದ್ದಲ್ಲ. ಕಾರ್ಮಿಕರು, ರೈತರು ಮತ್ತು ಮಹಿಳೆಯರನ್ನು ಒಳಗೊಂಡಿರುವ ʼಅಸಮಾನ ಸಾಮಾಜಿಕ ವ್ಯವಸ್ಥೆ ಮತ್ತು ತುಳಿತಕ್ಕೊಳಗಾದ ವರ್ಗದ ಮಾನವ ಹಕ್ಕುಗಳ ಹೋರಾಟಗಾರರಾಗಿ ಹೋರಾಡಿದವರು ಜಡವಾದ ಸಮಾಜವನ್ನು ಪ
APA, Harvard, Vancouver, ISO, and other styles
14

ವಿನಯ, ಕುಮಾರ್, та ಗೌಡ ಆರ್. ನಾಗಪ್ಪ. "ಮಾತಿಲ್ಲದ ಸಮುದಾಯಕ್ಕೆ ಮಾತಾದ ಕವಿ: ಡಾ. ಸಿದ್ಧಲಿಂಗಯ್ಯ". AKSHARASURYA 03, № 05 (2024): 52–60. https://doi.org/10.5281/zenodo.10938039.

Full text
Abstract:
ಸಾಮಾಜಿಕ ಶ್ರೇಣೀಕರಣ ಭಾರತದ ಸಮಾಜದ ಬಹುಮುಖ್ಯವಾದ ಲಕ್ಷಣ. ಅಂದರೆ ಅದು ಜಾತಿಯ ಆಧಾರದ ಮೇಲೆ ನಿರ್ಧರಿತವಾಗುತ್ತದೆ. ಈ ಶ್ರೇಣೀಕರಣದ ವ್ಯವಸ್ಥೆಯು ಒಂದಿಷ್ಟು ವರ್ಗಗಳನ್ನು ಅಧೀನವಾಗಿಸಿಕೊಳ್ಳುವ ಮೇಲ್ವರ್ಗದ ಉತ್ಪನ್ನವಾಗಿದೆ. ಈ ವರ್ಗವು ಇಲ್ಲಿನ ಕೆಲವು ಸಮುದಾಯಗಳನ್ನು ಹೀನವೆಂದು ಗುರುತಿಸಿಕೊಂಡು ಶತಮಾನಗಳಿಂದ ಶೋಷಣೆಯನ್ನು ಮಾಡಿಕೊಂಡು ಬಂದಿತ್ತು. ಈ ಕೆಳಜಾತಿಗಳಿಗೆ ಯಾವುದೇ ಹಕ್ಕುಗಳು ಇಲ್ಲದೇ ಮೆಲ್ವರ್ಗದ ಜೀತಕ್ಕಷ್ಟೇ ಸೀಮಿತವಾಗಿಸಲಾಗಿತ್ತು. ಶಿಕ್ಷಣ, ಧಾರ್ಮಿಕತೆ, ಸಾಮಾಜಿಕ ಜೀವನ, ಸಮಾನತೆ ಮೊದಲಾದವುಗಳು ಇವರಿಗೆ ಪರಿಚಯವೇ ಇರಲಿಲ್ಲ. ಇವರನ್ನು ಸಂಪೂರ್ಣವಾಗಿ ಗುಲಾಮರನ್ನಾಗಿ ಮಾಡಲಾಗಿತ್ತು. ಭಾರತಕ್ಕೆ ಬ್ರಿಟಿಷರು ಬಂದ ನಂತರ ಅವರು ಇಲ್ಲಿ ಎಲ್ಲರಿಗೂ ಶಿಕ್ಷಣ ನೀಡಿದ್ದರಿಂದಾಗಿ ದಲಿತರಲ್ಲಿ ಹೊಸ ಆಶಾಕಿರಣ ಮೂಡಿತು. ಮುಂದೆ ಅಂಬೇಡ್ಕರ್ ಅ
APA, Harvard, Vancouver, ISO, and other styles
15

ರಶ್ಮಿ, ಪಿ. "ಗೊರೂರರ 'ವೈಯ್ಯಾರಿ' ಕಥಾಸಂಕಲನದಲ್ಲಿನ ಮಹಿಳಾ ಪಾತ್ರಗಳು". AKSHARASURYA JOURNAL 05, № 03 Special Issue (2024): 76 to 83. https://doi.org/10.5281/zenodo.14246574.

Full text
Abstract:
ಆಧುನಿಕ ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದಲ್ಲಿ ಕಥಾಪ್ರಕಾರದಲ್ಲಿ ಸಾಧನೆ ಮಾಡಿದ ಹಿರಿಯ ಕಥೆಗಾರರ ಪೈಕಿ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ರವರು ಒಬ್ಬರು. ಇವರ 140ಕ್ಕೂ ಹೆಚ್ಚಿನ ಕಥೆಗಳು ಆರು ಕಥಾ ಸಂಕಲನಗಳಲ್ಲಿ ಹರಡಿಕೊಂಡಿವೆ. ಇವರ ‘ವೈಯ್ಯಾರಿ’ ಕಥಾ ಸಂಕಲನದಲ್ಲಿನ ‘ಭೂತಯ್ಯನ ಮಗ ಅಯ್ಯು’, ‘ಗಂಡುಬೀರಿ ಹೊಸಬಿ’, ‘ಪುಟ್ಟ ಮಲ್ಲಿಗೆ’, ‘ಈಡಿಗರ ಹೆಣ್ಣು’, ‘ಲಕ್ಕಿಯ ಗಂಡಂದಿರು’ ಎಂಬ ಕಥೆಗಳ ವ್ಯಾಪ್ತಿಯಲ್ಲಿ ಬರುವ ಮಹಿಳಾ ಪಾತ್ರಗಳನ್ನು ವಿವೇಚನೆ ಮಾಡುವುದು ಪ್ರಸ್ತುತ ಲೇಖನದ ಉದ್ದೇಶ. ಕೌಟುಂಬಿಕ ಜೀವನದಲ್ಲಿ ತಾಯಿಯಾಗಿ, ಸೊಸೆಯಾಗಿ, ಮಗಳಾಗಿ ಎಲ್ಲಾ ಅವಸ್ಥೆಗಳಲ್ಲಿ ತನ್ನ ಅಸ್ಮಿತೆಯ ಮುದ್ರೆಯನ್ನು ಒತ್ತುವ ಮಹಿಳೆ ಸಮಾಜದಲ್ಲಿ ತನ್ನ ಸ್ವಾತಂತ್ರ್
APA, Harvard, Vancouver, ISO, and other styles
16

ಶ್ರೀಧರ್, ಆರ್. "ಸಿದ್ಧಲಿಂಗಯ್ಯನವರ ಕಾವ್ಯ: ಸಾಮಾಜಿಕ ಕ್ರೋಧದ ನೆಲೆಯಿಂದ ಆಧ್ಯಾತ್ಮಿಕ ಅನ್ವೇಷಣೆಯ ಕಡೆಗೆ". AKSHARASURYA JOURNAL 05, № 06 (2025): 01 to 07. https://doi.org/10.5281/zenodo.14788682.

Full text
Abstract:
ಕವಿ ಸಿದ್ಧಲಿಂಗಯ್ಯನವರ ಮೊದಲ ʼಹೊಲೆಮಾದಿಗರ ಹಾಡುʼ ಕವನ ಸಂಕಲನದಿಂದ ಅವರ ಕಡೆಯ ʼಬೋಧಿವೃಕ್ಷದ ಕೆಳಗೆʼ ಸಮಗ್ರ ಕಾವ್ಯದ ಶೀರ್ಷಿಕೆಗಳನ್ನು ರೂಪಕದಂತೆ ಪರಿಭಾವಿಸುವುದಾದರೆ, ಸಮಾಜದಲ್ಲಿನ ಶೋಷಣೆ, ತಾರತಮ್ಯ, ಅಸಮಾನತೆಯಿಂದ ಕನಲಿ ಸಂಘರ್ಷದ ಪ್ರತಿಕ್ರಿಯೆ ಹಾಗೂ ಕೀಳರಿಮೆಯಿಂದ ನರಳುತ್ತಿದ್ದ ವಿಸರ್ಜಿತ ಲೋಕದಿಂದ ಹುಟ್ಟಿದ ಬಂಡಾಯದಂತೆ ಸ್ಫೋಟಿಸಿದ ಅವರ ಕವಿತೆಗಳು ಸಮ ಸಮಾಜದ ಹಂಬಲವಾದ ಸಾಮರಸ್ಯದ ಕಡೆಗೆ ಸಾಗಿರುವ ಸೃಜನಶೀಲ ಪಯಣದ ವಿಕಾಸ ಎಂದು ವ್ಯಾಖ್ಯಾನಿಸಬಹುದು. ಇಲ್ಲಿ ಆತ್ಯಂತಿಕ ತೀವ್ರತೆಯಿಂದ ಹುಟ್ಟಿದ ಬಂಡಾಯ ಸಮುದಾಯದಲ್ಲಿ ಸ್ವಾಭಿಮಾನ ಹಾಗೂ ಮಾನವ ಘನತೆಯನ್ನು ಮೂಡಿಸುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ಸಮಷ್ಟಿ ಬದುಕನ್ನು ಕುರಿತ ಗಾಢ ವಿಷಾದ ಈ ಅನ್ಯಾಯದ ವ್ಯವಸ್ಥೆ ಬದಲಾಗಬೇಕೆಂಬ ಹಂಬಲ ಇಲ್ಲಿನ ಕವಿತೆಗಳು ಪ್ರತಿಪಾದಿಸುವ ನಿಲುವು.ಸ
APA, Harvard, Vancouver, ISO, and other styles
17

ದೀಪಿಕ, ಬಿ. "ಆಫ್ರಿಕನ್ ಮತ್ತು ಕನ್ನಡ ಸಾಹಿತ್ಯದಲ್ಲಿ ವಸಾಹತುಶಾಹಿ ಸಂಘರ್ಷದ ನೆಲೆಗಳು". AKSHARASURYA JOURNAL 05, № 06 (2025): 17 to 27. https://doi.org/10.5281/zenodo.14788702.

Full text
Abstract:
ಯಾವುದೇ ʼಅನ್ಯ ಆಡಳಿತ ಸಂಸ್ಥೆʼ ಅಥವಾ ʼಅನ್ಯ ಸಂಸ್ಕೃತಿʼ ಹಲವು ವರ್ಷಗಳ ಕಾಲ ದೇಸೀ ಸಮಾಜವನ್ನು ಪ್ರಭಾವಿಸಿ, ಹಲವು ಸುಧಾರಣೆಗಳಿಗೆ ಹಾಗೂ ವಿಘಟನೆಗಳಿಗೆ ಕಾರಣವಾಗಿ ತದನಂತರ ಆ ಸಮಾಜದಿಂದ ಹೊರಟಿದೆ ಎಂದ ಮಾತ್ರಕ್ಕೆ ಆ ದೇಶವು ಮೂಲಸಂಸ್ಕೃತಿಗೆ ಬಂದಿತೆಂದಾಗಲಿ, ಅನ್ಯತೆಯಿಂದ ಮುಕ್ತವಾಯಿತೆಂದಾಗಲಿ ಗೆರೆಯೆಳೆದು ಹೇಳಲು ಬರುವುದಿಲ್ಲ. ಏಕೆಂದರೆ ಇದುವರೆವಿಗೂ ಪಶ್ಚಿಮ ಕಟ್ಟಿಕೊಟ್ಟ ಆಡಳಿತ, ಶಿಕ್ಷಣ, ನ್ಯಾಯ, ಅಧಿಕಾರ ಮತ್ತು ಬೌದ್ಧಿಕ ಚಿಂತನ ಕ್ರಮಗಳು ಸ್ಥಳೀಯ ನಂಬಿಕೆ, ಆಡಳಿತ ವ್ಯವಸ್ಥೆ, ಬದುಕು, ಸಂಬಂಧ, ಕಸುಬುಗಳನ್ನು ಪ್ರಭಾವಿಸಿರುತ್ತವೆ. ಆ ಮೂಲಕ ದೇಸೀ ಸಮಾಜದ ಭೌತಿಕ ಹಾಗೂ ಬೌದ್ಧಿಕ ರಚನೆಯೊಳಗೆ ʼಸಾಂಸ್ಕೃತಿಕ ಅನನ್ಯತೆʼಯನ್ನು ಸ್ವೀಕರಿಸುವ, ನಿರಾಕರಿಸುವ ಮತ್ತು ಅನುಸಂಧಾನ ಮಾಡಿಕೊಳ್ಳುವ ಹಂತಗಳಲ್ಲಿ ಸಂಘರ್ಷವನ್ನ ಏರ್ಪಡಿಸುತ್ತಿರುತ್ತದೆ
APA, Harvard, Vancouver, ISO, and other styles
18

ಲಕ್ಷ್ಮೀರಂಗಯ್ಯ, ಕೆ. "ಮೈಸೂರು ಸಂಸ್ಥಾನದಲ್ಲಿ ಇನ್‌ಫ್ಲುಯೆಂಜಾ ಸಾಂಕ್ರಾಮಿಕ ರೋಗ ಮತ್ತು ಸರ್ಕಾರ ಕೈಗೊಂಡ ಕ್ರಮಗಳು: ಒಂದು ಅವಲೋಕನ". AKSHARASURYA JOURNAL 03, № 04. SPECIAL ISSUE. (2024): 24 to 37. https://doi.org/10.5281/zenodo.10929628.

Full text
Abstract:
ಪ್ರಸ್ತುತ ಸಂಶೋಧನಾ ಲೇಖನವು ಮೊದಲ ಮಹಾಯುದ್ಧದ ಅಂತ್ಯದಲ್ಲಿ ವಿಶ್ವದಾದ್ಯಂತ ಹರಡಿದ್ದ ಇನ್‌ಫ್ಲುಯೆಂಜಾ ಸಾಂಕ್ರಾಮಿಕರೋಗವು ಸೈನಿಕರು ಮತ್ತು ವರ್ತಕರ ಮೂಲಕ ಕಲ್ಕತ್ತ ಮತ್ತು ಬಾಂಬೆಗೆ ಬಂದು ನಂತರ ದೇಶದಾದ್ಯಂತ ಹಬ್ಬಿ ಮೈಸೂರು ಸಂಸ್ಥಾನದ ಬೆಂಗಳೂರು ಮತ್ತು ಮೈಸೂರುಗಳಲ್ಲಿ ಹರಡಿ ಹೇಗೆ ಇಡೀ ಸಂಸ್ಥಾನದಾದ್ಯಂತ ಜನತೆಯನ್ನು ಬಾಧಿಸಿತು, ಜನರು ಅನುಭವಿಸಿದ ಸಾವು-ನೋವುಗಳು, ಸರ್ಕಾರ ರೋಗ ನಿವಾರಣೆಗೆ ಕೈಗೊಂಡ ಚಿಕಿತ್ಸೆ ಮತ್ತು ಪರಿಹಾರಕಾರ್ಯಗಳು ಮಹಾರಾಜರ ಆಡಳಿತ ವ್ಯವಸ್ಥೆ ನಗರಗಳಿಂದ ಹಳ್ಳಿಗಳವರೆವಿಗೆ ಸಾಂಕ್ರಾಮಿಕರೋಗ ನಿವಾರಣೆಗೆ ಶ್ರಮಿಸಿದ ರೀತಿ, ಸ್ಥಳೀಯ ಆಡಳಿತ ಘಟಕಗಳು, ಸಂಘಸಂಸ್ಥೆಗಳು, ಪ್ರಜಾಪ್ರಮುಖರು, ಸ್ವಯಂ ಸೇವಕರು, ವೈದ್ಯಕೀಯ ಸಿಬ್ಬಂದಿ, ನೈರ್ಮಲ್ಯ ಇಲಾಖೆ, ವಿದ್ಯಾರ್ಥಿ ಸ್ವಯಂ ಸೇವಕರು ನಿರ್ವಹಿಸಿದ ಪಾತ್ರ ಇವೇ ಮೊದಲಾದವುಗ
APA, Harvard, Vancouver, ISO, and other styles
19

ಗಾಯತ್ರಿ, ಉಪ್ಪಾರ. "ಸಮಾನತೆಯ ಹರಿಕಾರ ಬಸವಣ್ಣ". AKSHARASURYA JOURNAL 04, № 05 Special Issue (2024): 70 to 74. https://doi.org/10.5281/zenodo.13294390.

Full text
Abstract:
ಬಸವಣ್ಣ 12ನೇಯ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ಮನುಕುಲದ ಉದ್ಧಾರಕ್ಕಾಗಿ ಎಲ್ಲ ರಂಗದಲ್ಲಿಯೂ ಕ್ರಾಂತಿಗೈದ ಮಹಾನ್ ಪುರುಷ, ಕ್ರಾಂತಿಕಾರಿ. ಸಮಾಜದಲ್ಲಿನ ಅನಿಷ್ಟಗಳನ್ನು ತೆಗೆದುಹಾಕಲು ಶ್ರಮಿಸಿದರು. ವಚನಗಳ ಮುಖಾಂತರ ಸಮಾಜದ ಮಧ್ಯದಲ್ಲಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಲು ಜನರ ಮಧ್ಯ ದುಮುಕಿ ಜನಸಾಮಾನ್ಯರಿಗೆ ತಿಳಿಯುವ ಭಾಷೆಯಲ್ಲಿ ವಚನಗಳ ಮೂಲಕ ಸಮಾಜದ ಅಂಕು, ಡೊಂಕುಗಳನ್ನು, ಢಾಂಬಿಕತೆಗಳನ್ನು ಎಳೆ ಎಳೆಯಾಗಿ ಬಿಡಿಸಿ ತಿಳಿಗನ್ನಡ ವಚನಗಳ ಮೂಲಕ ನಿರೂಪಿಸಿದ ಮಹಾನ ನೇತಾರ. ಸದ್ಗುಣ ಸದಾಚಾರಗಳು ಯಾವುದೇ ಜಾತಿಗೆ ಮೀಸಲಾದವುಗಳಲ್ಲ ಇಲ್ಲವೆ ಹುಟ್ಟಿನಿಂದ ಬಂದವುಗಳೂ ಅಲ್ಲ. ಈ ಅಸ್ಪೃಶ್ಯತಾ ಭಾವನೆಯನ್ನು ಬಸವಣ್ಣನವರು ಸಂಪೂರ್ಣವಾಗಿ ತೆಗೆದುಹಾಕಿ ಸಮಾನತೆಯನ್ನು ತಮ್ಮ ಜೀವನದಲ್ಲಿ ಆಚರಣೆಗೆ ತಂದರು.
APA, Harvard, Vancouver, ISO, and other styles
20

ಮಂಜುಳಾಕ್ಷಿ, ಎಲ್. "ಮಹಿಳೆ ಸಮಾನತೆ ಮತ್ತು ಡಾ. ಬಿ. ಆರ್. ಅಂಬೇಡ್ಕರ್‌". AKSHARASURYA JOURNAL 06, № 05 (2025): 72 to 83. https://doi.org/10.5281/zenodo.15504265.

Full text
Abstract:
ಕಾಲಾಂತರದಿಂದಲೂ ಮಹಿಳೆ ಸಮಾಜದಲ್ಲಿ ತನ್ನ ಅಸ್ವತ್ವಕ್ಕಾಗಿ ಒಂದಲ್ಲ ಒಂದು ರೀತಿಯಲ್ಲಿ ಧ್ವನಿ ಎತ್ತುತ್ತಲೆ ಬಂದಿದ್ದಾಳೆ. ಇದನ್ನು ನಾವು ಜನಪದ ಹೆಣ್ಣು ಅದರ ಪ್ರಕಾರವಾದ ತ್ರಿಪದಿಯಲ್ಲಿ ತನ್ನ ನೋವನ್ನು ಮತ್ತು ಸಮಾಜದ ಕಟ್ಟುಪಾಡು ಕಂದಾಚಾರಗಳನ್ನು ಮೌನವಾಗಿಯೇ ವಿರೋಧಿಸುತ್ತಾ ಬಂದಿದ್ದಾಳೆ. ಸಾಹಿತ್ಯದಲ್ಲಿ ಅವಳು ತಾಯಿಯಾಗಿ ಅಕ್ಕ-ತಂಗಿ, ನಾದಿನಿ, ಹೆಂಡತಿ, ಅತ್ತೆ ಹೀಗೆ ಅನೇಕ ಪಾತ್ರಗಳಲ್ಲಿ ಪುರುಷನೊಂದಿಗೆ ಜೀವಿಸುತ್ತಾ ಮಾನ್ಯತೆ ಪಡೆದಿದ್ದು ಅವನಿಂದ ದೇವತೆಯಾಗಿ, ಪ್ರಿಯೆಯಾಗಿ, ಕುಟುಂಬದ ಕಣ್ಣಾಗಿ, ಅವನ ಅರ್ಧಾಂಗಿಯಾಗಿದ್ದರೂ ಕೂಡ ಸಮಾಜದಲ್ಲಿ ಅವಳಿಗೆ ಅಂದಲ್ಲ ಇಂದಿಗೂ ಎರಡನೇ ದರ್ಜೆಯ ಸ್ಥಾನವಿದೆ ಅವಳನ್ನು ಪುರುಷ ಸಮಾಜ ತನ್ನ ಬಂಧಿಯಲ್ಲೇ ಬಂಧಿಸಿ ಅವಳ ಮೇಲೆ ಕಟ್ಟುಪಾಡು, ಕಂದಾಚಾರ ಪದ್ಧತಿಗಳನ್ನು ಹೇರುತ್ತಾ ಸಮಾಜದಲ್ಲಿ ಅವಳಿ ಯಾವುದೇ ಸ
APA, Harvard, Vancouver, ISO, and other styles
21

ದಿನೇಶ, ಎನ್.ಎನ್. "ಮಲಬಾರ್ ಮಾಪಿಳ್ಳೆ ಬಂಡಾಯಗಳು: ಧರ್ಮ, ಭೂಮಿ ಮತ್ತು ಹಕ್ಕುಗಳಿಗಾಗಿ ಹೋರಾಟ". AKSHARASURYA 06, № 02 (2025): 105 to 116. https://doi.org/10.5281/zenodo.15124098.

Full text
Abstract:
19ನೆಯ ಶತಮಾನದಾದ್ಯಂತ ಸ್ಫೋಟಗೊಂಡು 20ನೇಯ ಶತಮಾನದ ಮೊದಲ ಭಾಗವು ಉಗ್ರ ಹೋರಾಟದೊಂದಿಗೆ ಅಳಿದುಹೋದವು. ಕೇರಳದ ಮಲಬಾರ್ ಪ್ರದೇಶದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಪ್ರತಿರೋಧವಾಗಿ ಪ್ರಾರಂಭವಾಯಿತು. ಮಲೆಯಾಳಿ ಸಮಾಜದ ಜೊತೆಗಿನ ಅರಬರ ವ್ಯಾಪಾರೀ ಸಂಬಂಧದ ಚರಿತ್ರೆ ಸುಮಾರು 9ನೇ ಶತಮಾನದಷ್ಟು ಹಿಂದಿನಿಂದ ಪ್ರಾರಂಭವಾಗುತ್ತದೆ. ಕರಾವಳಿ ಪ್ರಾಂತ್ಯದಲ್ಲಿದ್ದ ಹಿಂದೂ ಮುಖಂಡರುಗಳಿಗೆ ಶ್ರೀಮಂತ ಅರಬ ವ್ಯಾಪಾರಿಗಳ ಬೆಂಬಲ ಯಾವಾಗಲೂ ಬೇಕಾಗುತ್ತಿತ್ತು. ಮಲಬಾರಿನಲ್ಲೇ ಕ್ರಮೇಣ ಉಳಿದುಕೊಂಡ ಅರಬ ವ್ಯಾಪಾರಿಗಳು ಪ್ರಮುಖವಾಗಿ ನಾಯರ್ ಮತ್ತು ತಿಯಾ ಜಾತಿಯ ಹೆಂಗಸರನ್ನೇ ಮದುವೆಯಾದರು. ಕಾಲಾಂತರದಲ್ಲಿ ಇವರೇ ಮಾಪಿಳ್ಳೆಗಳಾದರು. ಮತಾಂತರಗೊಂಡು ಹೊಸದಾಗಿ ಸೇರ್ಪಡೆಗೊಳ್ಳುವ ಪ್ರತಿಯೊಬ್ಬ ಸದಸ್ಯನನ್ನು ಮಾಪಿಳ್ಳೆಗಳು ಸಂತೋಷದಿಂದ ಸ್ವೀಕರಿಸಿದರೂ ಮ
APA, Harvard, Vancouver, ISO, and other styles
22

ನವೀನ್, ಕುಮಾರ ಎ. ಜಿ. "ಅಂಬೇಡ್ಕರ್‌: ಅಸ್ಪೃಶ್ಯರ ಆರ್ಥಿಕ ಸ್ವಾವಲಂಬನೆಗಾಗಿ ನಡೆಸಿದ ಚಿಂತನೆಗಳು". AKSHARASURYA JOURNAL 06, № 05 (2025): 121 to 132. https://doi.org/10.5281/zenodo.15504345.

Full text
Abstract:
ಇಂದು ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗಗಳ ಏಳಿಗೆಯು ಒಂದು ರಾಷ್ಟ್ರೀಯ ಸಮಸ್ಯೆಯಾಗಿ ಉಳಿಯುತ್ತ ಬಂದಿದೆ. ಕಳೆದ ನಲವತ್ತು ವರ್ಷಗಳಿಂದ ಅಂದರೆ 1991 ರಿಂದ ಮಾಹಿತಿ ತಂತ್ರಜ್ಞಾನದಿಂದ ಪ್ರಾರಂಭವಾಗಿ 2018ರ ಮೇಕಿಂಗ್ ಇಂಡಿಯಾ ವರೆಗೆ ಅನೇಕ ಯೋಜನೆಗಳು ಹತ್ತಾರು ಭಾಗ್ಯಗಳು ಅಪಾರ ಪ್ರಮಾಣದ ಆರ್ಥಿಕ ನೆರವು ನೀಡಲಾಗಿದೆ. ಆದರೂ ಸಮಾಜದಲ್ಲಿ ಆರ್ಥಿಕ ದುರ್ಬಲ ವರ್ಗ ಸಮಾಜಿಕವಾಗಿ ಮುಖ್ಯವಾಹಿನಿಯಲ್ಲಿ ಬಂದು ಮಹತ್ತರವಾದ ಸಾಧನೆ ಮಾಡುವಲ್ಲಿ ವಿಫಲವಾಗಿದೆ. ಬಡತನ ನಿರ್ಮೂಲನೆ ಅಸಾಧ್ಯವೇನೋ ಅನಿಸುವಷ್ಟರ ಮಟ್ಟಕ್ಕೆ ಬಂದು ನಿಂತಿದೆ. ದೌರ್ಜನ್ಯ, ದಬ್ಬಾಳಿಕೆ, ಕೊಲೆ, ಸುಲಿಗೆ, ಮೋಸ, ಸಂಪತ್ತಿನ ಕ್ರೋಢಿಕರಣಕ್ಕಾಗಿ ನಡೆಯುತ್ತ ಕಾನೂನೆ ಭಯಪಡುವ ಮಟ್ಟಕ್ಕೆ ನಡೆಯುತ್ತಿವೆ. ಇದರ ಪರಿಣಾಮ ಜನ ಅನ್ಯ ಧರ್ಮಕ್ಕೆ ಮತಾಂತರ ಹೊಂದುತ್ತ ಅಲ್ಲಿಯೂ ನೆಮ್ಮದಿ ಕಾಣದ
APA, Harvard, Vancouver, ISO, and other styles
23

ಮಾಧವ, ಎಂ. ಕೆ. "ಬಸವಣ್ಣನ ವಚನಗಳಲ್ಲಿ ಸಮ ಸಮಾಜದ ಪ್ರಸ್ತುತತೆ". AKSHARASURYA 04, № 02 (2024): 27 to 32. https://doi.org/10.5281/zenodo.11525708.

Full text
Abstract:
ಕನ್ನಡ ಸಾಹಿತ್ಯದಲ್ಲಿ ೧೨ನೇ ಶತಮಾನವನ್ನು ವಚನಗಳ ಯುಗವೆಂದು ಕರೆಯಲಾಗುತ್ತದೆ. ಬಸವಣ್ಣ ವಚನ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದವನು. ತನ್ನ ವಚನಗಳ ಮೂಲಕ ‘ಕಾಯಕವೇ ಕೈಲಾಸ’ ವೆಂದು ಸಾರಿ, ಜನರಲ್ಲಿ ದುಡಿದು ತಿಂದು ಬದುಕುವ ಮಹತ್ವವನ್ನು ತಿಳಿಸಿದರು. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ತ್ರೀಯರಿಗೆ ಭಾಗವಹಿಸುವ ಸಮಾನ ಅವಕಾಶ ನೀಡುವ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕೊಂದು ಅರ್ಥವನ್ನು ಕಲ್ಪಿಸಿದರು. ಕಲುಷಿತಗೊಂಡಿದ್ದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ದಿಕ್ಕರಿಸಿ, ಘನ ಬದಲಾವಣೆಯನ್ನು ಆರಿಸಿ ಹೊರಟ ದಾರ್ಶನಿಕ ಬಸವಣ್ಣ. ಸಾಮಾಜಿಕ ಬದಲಾವಣೆಗೆ ಹೊಸ ಭಾಷ್ಯ ಬರೆಯುವ ಮೂಲಕ ಉತ್ತಮ ಸಮಾಜ ವ್ಯವಸ್ಥೆಗೆ ನಿಜವಾದ ಅರ್ಥ ಕಲ್ಪಿಸಿ ಕೊಟ್ಟವರು. ಸಮಾಜದ ಕೀಳುಮಟ್ಟದ ಶೋಷಣೆಯಿಂದಾಗಿಯೇ ಸಮಾಜದಲ್ಲಿ ದುಡಿಯುವ ಮತ್ತು
APA, Harvard, Vancouver, ISO, and other styles
24

ಸತೀಶ್, ಪಿ. "ಶ್ರೀರಂಗಪಟ್ಟಣ ತಾಲ್ಲೂಕಿನ ಪ್ರಮುಖ ದೇವಿ ಶಿಲ್ಪಗಳು". AKSHARASURYA JOURNAL 04, № 05 Special Issue (2024): 53 to 59. https://doi.org/10.5281/zenodo.13294383.

Full text
Abstract:
ಶ್ರೀ ರಂಗಪಟ್ಟಣವು ಮಂಡ್ಯ ಜಿಲ್ಲೆಯ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಇದು ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿ ರಾಜಧಾನಿಯಾಗಿತ್ತು. ಈ ತಾಣವು ಬೇಸಿಗೆಯ ಅರಮನೆ, ಕೋಟೆ, ಶ್ರೀ ರಂಗನಾಥ ದೇವಸ್ಥಾನ, ಗುಂಬಜ್, ಪಕ್ಷಿಧಾಮ ಮತ್ತು ಪ್ರವಾಸೋದ್ಯಮ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಆ ಪ್ರದೇಶದಲ್ಲಿ ಕಾವೇರಿ ನದಿಯ ದಡದಲ್ಲಿರುವ ಅನೇಕ ಪ್ರಸಿದ್ಧ ದೇವಿ ದೇವಾಲಯಗಳು ಸೂಕ್ತವಾಗಿವೆ. ಗೌತಮೆ ಮಹರ್ಷಿ ಮಹಾವಿಷ್ಣುವನ್ನು ಒರಗಿರುವ ಭಂಗಿಯಲ್ಲಿ ವೀಕ್ಷಿಸಲು ಈ ಸ್ಥಳದಲ್ಲಿ ಕಠಿಣ ತಪಸ್ಸು ಮಾಡಿದ್ದರು. ಈ ಸ್ಥಳದಲ್ಲಿ ವಿಷ್ಣುವು ತನ್ನನ್ನು ರಂಗನಾಥ ಸ್ವಾಮಿಯಾಗಿ ಚಿತ್ರಿಸಿಕೊಂಡಿದ್ದಾನೆ. ಗೌತಮ ಮಹರ್ಷಿಯು ಅವರನ್ನು ಶಾಶ್ವತವಾಗಿ ಇಲ್ಲಿಯೇ ಇರುವಂತೆ ಕೇಳಿಕೊಂಡರು. ಆದ್ದರಿಂದ ಮುಂಬರುವ ಯುಗಗಳಲ್ಲಿ ಭಕ್ತರು ಈ ಭಗವಂತನನ್ನು ಪ್ರರ್ಥಿಸುತ್ತಾರೆ. ಶ್ರೀ ರಂಗ
APA, Harvard, Vancouver, ISO, and other styles
25

ಅಂಜಿನಪ್ಪ, ಎಲ್.ಟಿ. "ಕನ್ನಡದಲ್ಲಿ ಮೀಸಲಾತಿ ಚಳವಳಿಯ ಇತಿಹಾಸ: ಒಂದು ಅವಲೋಕನ". AKSHARASURYA JOURNAL 06, № 06 (2025): 01 to 10. https://doi.org/10.5281/zenodo.15580870.

Full text
Abstract:
ಪ್ರಸ್ತುತ ಈ ಲೇಖನದಲ್ಲಿ ಭಾರತದಲ್ಲಿನ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆ ಶೂದ್ರರು ಅನುಭವಿಸಿದ ಯಾತನೆಗಳು, ಹನ್ನೆರಡನೇ ಶತಮಾನದಲ್ಲಿ ಆದ ಸಾಮಾಜಿಕ ಕ್ರಾಂತಿಗಳು, ಸ್ವಾತಂತ್ರ ಪೂರ್ವದಲ್ಲಿನ ಮೀಸಲಾತಿ ಕ್ರಮಗಳು ನಂತರದ ಬೆಳವಣಿಗೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಕೊಲ್ಲಾಪುರದ ಶಾಹುಮಹಾರಾಜರು ಹಿಂದುಳಿದವರಿಗೆ ಶೇಕಡ 50ರಷ್ಟು ಮೀಸಲಾತಿಯನ್ನು ಜಾರಿಗೆ ತಂದ ಮೊದಲ ಭಾರತೀಯ ರಾಜ ಎಂಬ ಹೆಗ್ಗಳಿಕೆ ಪಾತ್ರವಾದ ರೀತಿ ಹಾಗೂ ಅವರ ಕೈಗೊಂಡ ಕಾರ್ಯವೈಖರಿಗಳನ್ನು ಇಲ್ಲಿ ತಿಳಿಸಲಾಗಿದೆ. ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರು ಹಿಂದುಳಿದವರಿಗೆ ನೀಡಿದ ಕೊಡುಗೆಗಳು ಅವರ ಅಧಿಕಾರವಧಿಯಲ್ಲಿ ಜಾರಿಗೆ ತಂದ ಮಿಲ್ಲರ್ ಆಯೋಗ, ಮಿಲ್ಲರ್ ಆಯೋಗವು ಆ ಸಂದರ್ಭದಲ್ಲಿ ಅಧಿಕಾರಿಗಳಿಗೆ ನೀಡುತ್ತಿದ್ದ ತಾರತಮ್ಯ ಸಂಬಳದ ಸೌಲತ್ತುಗಳು ಇತರ ಸೌಲತ್ತುಗಳು ಹಾಗೂ ಆಯೋಗ ಕ
APA, Harvard, Vancouver, ISO, and other styles
26

ಶ್ರೀನಿವಾಸ, ಎಸ್.ಜಿ. "ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆಗಳು". AKSHARASURYA JOURNAL 06, № 04 (2025): 01 to 10. https://doi.org/10.5281/zenodo.15490768.

Full text
Abstract:
ʼಕಾಯಕವೇ ಕೈಲಾಸʼ ವೆಂದು ಸಾರಿ, ಜನರಲ್ಲಿ ದುಡಿದು ತಿಂದು ಬದುಕುವ ಮಹತ್ವವನ್ನು ತಿಳಿಸಿದ್ದು ವಚನ ಸಾಹಿತ್ಯ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳಲ್ಲಿ ಸ್ತ್ರೀಯರಿಗೆ ಭಾಗವಹಿಸುವ ಸಮಾನ ಅವಕಾಶ ನೀಡುವ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕೊಂದು ಅರ್ಥವನ್ನು ಕಲ್ಪಿಸಿದರು. ಕಲುಷಿತಗೊಂಡಿದ್ದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ದಿಕ್ಕರಿಸಿ, ಘನ ಬದಲಾವಣೆಯನ್ನು ಗುರಿಯಿಟ್ಟು ನಡೆದ ದಾರ್ಶನಿಕ ಚಳುವಳಿ ವಚನ ಸಾಹಿತ್ಯ. ಸಾಮಾಜಿಕ ಬದಲಾವಣೆಗೆ ಹೊಸ ಭಾಷ್ಯ ಬರೆಯುವ ಮೂಲಕ ಉತ್ತಮ ಸಮಾಜ ವ್ಯವಸ್ಥೆಗೆ ನಿಜವಾದ ಅರ್ಥ ಕಲ್ಪಿಸಿ ಕೊಟ್ಟವರು. ಸಮಾಜದ ಕೀಳುಮಟ್ಟದ ಶೋಷಣೆಯಿಂದಾಗಿಯೇ ಸಮಾಜದಲ್ಲಿ ದುಡಿಯುವ ಮತ್ತು ಕೂತು ಉಣ್ಣುವ ವರ್ಗಗಳು ನಿರ್ಮಾಣವಾಗುವುದಕ್ಕೆ ಕಾರಣವಾಗಿರಬೇಕು, ಸಮಾಜದಲ್ಲಿ ಮೇಲ್ವರ್ಗವೆಂದು ಕರೆಸಿಕೊಂಡ ಜನರು ಸಮಾಜದ ಇತರರನ್ನು
APA, Harvard, Vancouver, ISO, and other styles
27

ವಸುಂಧರಿ, ಎನ್. "ಜನಪದ ಕಥೆಗಳಲ್ಲಿ ಪ್ರತಿನಿಧೀಕರಣಗೊಂಡ ಸಾಂಸ್ಕೃತಿಕ ಮೌಲ್ಯಗಳು". AKSHARASURYA JOURNAL 05, № 03 Special Issue (2024): 68 to 75. https://doi.org/10.5281/zenodo.14246552.

Full text
Abstract:
ಜನಪದ ಸಾಹಿತ್ಯ ಸಂಸ್ಕೃತಿಯ ಒಂದು ಅಂಗವಾಗಿದ್ದು, ಇದು ಕೇವಲ ಸಾಹಿತ್ಯಿಕವಾಗಿ ಮಹತ್ವದ್ದಾಗದೆ ಅದನ್ನು ಮೀರಿದ ಸಾಂಸ್ಕೃತಿಕ ಮಹತ್ವಉಳ್ಳದ್ದು. ಇದು ವ್ಯವಸ್ಥೆಯ ಮೌಲ್ಯವನ್ನು ಹೇಳುತ್ತದೆ, ಅನಿಸಿಕೆಗಳನ್ನು ಅಭಿವ್ಯಕ್ತಿಸುತ್ತದೆ, ಅಲ್ಲಿನ ಬದುಕನ್ನು ಪ್ರತಿಬಿಂಬಿಸುತ್ತದೆ. ಈ ನೆಲೆಯಲ್ಲಿ ಜನಪದ ಕತೆ ಇತರ ಸಾಹಿತ್ಯ ಪ್ರಕಾರಗಳಿಗಿಂತ ಹೆಚ್ಚು ಉಪಯುಕ್ತವಾಗಿದೆ. ಸಂಸ್ಕೃತಿಯ ಅನೇಕ ವಿವರಗಳನ್ನು ಒಳಗೊಂಡಿರುವ ಕತೆಯ ಇಂತಹ ಅಧ್ಯಯನ ಮಾನವನ ಸಾಂಸ್ಕೃತಿಕ ಚರಿತ್ರೆಯನ್ನು ತಿಳಿಯುವಲ್ಲಿ ಅತ್ಯಂತ ಸಹಕಾರಿಯಾಗಬಲ್ಲದು.
APA, Harvard, Vancouver, ISO, and other styles
28

ದೊಡ್ಡನಾಯ್ಕ, ಹೆಚ್. "ಅಂಬೇಡ್ಕರ್‌: ಮೀಸಲಾತಿ". AKSHARASURYA JOURNAL 06, № 05 (2025): 30 to 35. https://doi.org/10.5281/zenodo.15504187.

Full text
Abstract:
ಬಾಬಾ ಸಾಹೇಬ್ ಅಂಬೇಡ್ಕರ್‌ ಭಾರತ ಕಂಡ ಮಹಾನ್ ಮಾನವತವಾದಿ. ಭಾರತದಲ್ಲಿದ್ದ ವರ್ಣ, ವರ್ಗ ಮತ್ತು ಜಾತಿ ವ್ಯವಸ್ಥೆಯನ್ನು ಬುಡ ಸಮೇತ ನಾಶ ಮಾಡದ ಹೊರತು, ಭಾರತದ ಸಮಾಜ ಸುಧಾರಣೆಗೊಳ್ಳಲು ಸಾಧ್ಯವಿಲ್ಲವೆಂದು ಹೇಳಿದ ಸಮಾಜ ಸುಧಾರಕರು. ಸಾಮಾಜಿಕ ಸ್ತರಗಳ ಮೂಲಕ ಇದ್ದ ತಾರತಮ್ಯವನ್ನು ಹೋಗಲಾಡಿಸಲು ಜನಸಾಮಾನ್ಯರಲ್ಲಿ ವಿಚಾರಧಾರೆಗಳನ್ನು ಕಟ್ಟಿಕೊಟ್ಟ ಮಹಾನ್ ವಿಚಾರವಾದಿ. ಹೀಗಾಗಿಯೇ ಬಾಬಾ ಸಾಹೇಬರು ಭಾರತೀಯ ಸಮಾಜದ ಪ್ರಗತಿಯು ಸಮಾನತೆಯಲ್ಲಿ ಅಡಗಿದೆ ಎಂದು ಬಲವಾಗಿ ನಂಬಿದ್ದರು. ವರ್ಣಗಳು ಪುರುಷನಿಂದ, ಮನುವಿನಿಂದ, ಪ್ರಜಾಪತಿಯಿಂದ, ವಾರ್ತ್ ನಿಂದ ಮತ್ತು ಸೋಮನಿಂದ ಹುಟ್ಟಿವೆ ಎಂದು ವೇದಗಳು ಪ್ರತಿಪಾದಿಸುತ್ತವೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳು ಋಗ್ವೇದದಲ್ಲಿ ಪ್ರತಿಪಾದಿತವಾಗಿದೆ. ವರ್ಣ ವ್ಯವಸ್ಥೆಯ ಹುಟ್ಟಿನ ಕ
APA, Harvard, Vancouver, ISO, and other styles
29

ನಾಗನಗೌಡ, ಗೌಡ್ರ. "ಡಾ. ಬಿ. ಆರ್. ಅಂಬೇಡ್ಕರ್‌‌ ಅವರ ಸಾಮಾಜಿಕ ನ್ಯಾಯದ ಚಿಂತನೆಗಳು". AKSHARASURYA JOURNAL 06, № 05 (2025): 94 to 104. https://doi.org/10.5281/zenodo.15504293.

Full text
Abstract:
ಡಾ. ಬಿ.ಆರ್. ಅಂಬೇಡ್ಕರ್‌ ಒಬ್ಬ ಭಾರತೀಯ ಶ್ರೇಷ್ಠ ರಾಜಕೀಯ ನಾಯಕ, ತತ್ವಜ್ಞಾನಿ, ಸಾಮಾಜಿಕ ಚಿಂತಕ, ಇತಿಹಾಸ ಸಂಶೋಧಕ, ಆರ್ಥಿಕ ತಜ್ಞ, ಶ್ರೇಷ್ಠ ಬರಹಗಾರ, ಮಹಿಳಾ ಸಮಾನತೆಯ ಹರಿಕಾರ, ದಲಿತರ ಸೂರ್ಯ, ಕಾರ್ಮಿಕ ಬಂಧು, ಕಾನೂನು ತಜ್ಞ, ಸಂವಿಧಾನ ಶಿಲ್ಪಿ ಎಂದೆಲ್ಲಾ ಪ್ರಖ್ಯಾತರಾಗಿದ್ದಾರೆ. ಭಾರತೀಯ ಸಮಾಜವು ಶತ ಶತಮಾನಗಳಿಂದಲೂ ವರ್ಣ, ಜಾತಿಯ ಹೆಸರಿನಲ್ಲಿ ವರ್ಗೀಕರಣಗೊಂಡು ಇಡೀ ಮಾನವ ಸಂಬಂಧಗಳ ಮೌಲ್ಯವನ್ನೇ ಹಾಳು ಮಾಡಿದೆ. ಸಮಾಜದ ಬಹುಪಾಲು ಜನಾಂಗ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬಲಿಷ್ಠವಾಗಿರುವ ಜಾತಿ, ವರ್ಗಗಳ ತುಳಿತಕ್ಕೆ ಸಿಲುಕಿ ನಲುಗಿವೆ. ಅಂಬೇಡ್ಕರ್‌‌ರವರು ಬಾಲ್ಯದಿಂದಲೂ ಕಂಡುಂಡ ಅಸ್ಪೃಶ್ಯತೆಯ ನೋವು ಅಪಮಾನಗಳು ಅವರನ್ನು ಸಾಮಾಜಿಕ ಚಿಂತನೆಡೆಗೆ ಮುಖ ಮಾಡುವಂತೆ ಪೇರೆಪಿಸಿದವು. ಅವರು ಶಿಕ್ಷಣ-ಸಂಘಟನೆ-ಹೋರಾಟ ಎಂಬ ತತ
APA, Harvard, Vancouver, ISO, and other styles
30

ವಿಜಯಲಕ್ಷ್ಮಿ, ದತ್ತಾತ್ರೇಯ ದೊಡ್ಡಮನಿ. "ಯಾಜ್ಞಸೇನಿಯ ಆತ್ಮಕಥನ: ದಲಿತತ್ವದ ನೆಲೆಗಳು". AKSHARASURYA JOURNAL 04, № 06 (2024): 135 to 142. https://doi.org/10.5281/zenodo.13725621.

Full text
Abstract:
ದಲಿತರು ಎಂದರೆ ಶೋಷಿತರು ಎನ್ನುವುದು ಕೇವಲ ಹಾಳೆಗಳಲ್ಲಿ, ಅಕ್ಷರ ರೂಪದಲ್ಲಿ ಮಾತ್ರ ಉಳಿದುಕೊಂಡಿದೆ. ಸಮಾಜದಲ್ಲಿ ಅದು ರೂಢಿಗೆ ಬಂದೇ ಇಲ್ಲ. ದಲಿತ ಎಂದರೆ ಕೇವಲ ಜಾತಿ ಸೂಚಕ ಪದವಾಗಿ ಮಾತ್ರ ಬಳಕೆಯಲ್ಲಿದೆ. ಎಲ್ಲಾ ವಿದ್ವಾಂಸರ ಹೇಳಿಕೆ ಗಳನ್ನು ಆಧಾರವಾಗಿಟ್ಟುಕೊಂಡು, ಯಾವುದೇ ವರ್ಗದ ಶೋಷಿತ ಮಹಿಳೆಯನ್ನು ದಲಿತ ಮಹಿಳೆ ಎಂದು ಗುರುತಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿಯೇ ಮಹಾಭಾರತದಲ್ಲಿ ಮುಖ್ಯ ಪಾತ್ರವಾಗಿ ಕಾಣುವ ದ್ರೌಪದಿಯು ಮಾನಸಿಕವಾಗಿ, ಕೆಲವೊಮ್ಮೆ ದೈಹಿಕವಾಗಿ ನಿರಂತರವಾಗಿ ಶೋಷಣೆಗೆ ಒಳಗಾಗಿದ್ದಾಳೆ. ಆದ್ದರಿಂದಲೇ ಈ ಲೇಖನದಲ್ಲಿ ಯಾಜ್ಞಸೇನೆಯನ್ನು ದಲಿತ ಸ್ತ್ರೀ ಎಂದು, ಅವಳ ಪ್ರಜ್ಞಾಪೂರ್ವಕವಾದ ವ್ಯವಸ್ಥೆಯ ವಿರುದ್ಧವಾದ ಧ್ವನಿಯನ್ನು ದಲಿತತ್ವದ ಧ್ವನಿಯಾಗಿ ಗುರುತಿಕೊಂಡು ಈ ಲೇಖನದಲ್ಲಿ ಚರ್ಚಿಸಿಲಾಗಿದೆ.
APA, Harvard, Vancouver, ISO, and other styles
31

ಸುಚಿತ್ರಾ, ಟಿ., та ಕೆ.ಎಸ್. ಗಿರಿಜಾ. "ಡಾ. ಬಿ.ಆರ್. ಅಂಬೇಡ್ಕರ್‌ ಅವರ ಜಾತಿ ನಿರ್ಮೂಲನೆ: ಒಂದು ವಿಶ್ಲೇಷಣೆ". AKSHARASURYA JOURNAL 06, № 05 (2025): 226 to 232. https://doi.org/10.5281/zenodo.15504688.

Full text
Abstract:
ಡಾ. ಬಿ.ಆರ್. ಅಂಬೇಡ್ಕರ್ ಅವರ ಜಾತಿ ನಿರ್ಮೂಲನೆ (Annihilation of Caste) ಕೃತಿ ಭಾರತೀಯ ಜಾತಿ ವ್ಯವಸ್ಥೆಯ ವಿರುದ್ಧ ನೀಡಿದ ಅತ್ಯಂತ ಪ್ರಬಲ ವಿಮರ್ಶೆಗಳಲ್ಲಿ ಒಂದಾಗಿದೆ. 1936ರಲ್ಲಿ ಜಾತ್ ಪಾತ್ ತೋಡಕ್ ಮಂಡಳಿಗೆ ಈ ಭಾಷಣವನ್ನು ನೀಡಲು ಉದ್ದೇಶಿಸಲಾಗಿತ್ತಾದರೂ, ಸಂಘಟಕರು ಅದರ ವಿಷಯವನ್ನು ತೀವ್ರವಾದದ್ದು ಎಂದು ಪರಿಗಣಿಸಿ ಅದನ್ನು ನಿರಾಕರಿಸಿದರು. ನಂತರ ಅಂಬೇಡ್ಕರ್ ಅವರು ಈ ಭಾಷಣವನ್ನು ಸ್ವತಃ ಪುಸ್ತಕ ರೂಪದಲ್ಲಿ ಪ್ರಕಟಿಸಿದರು. ಈ ಪ್ರಬಂಧದಲ್ಲಿ ಅಂಬೇಡ್ಕರ್ ಅವರ ಜಾತಿ ಸಂಬಂಧಿತ ಆಲೋಚನೆಗಳ ವಿಶ್ಲೇಷಣೆ, ಹಾಗೂ ಜಾತಿ ನಿರ್ಮೂಲನೆಗಾಗಿ ಅವರು ನೀಡಿದ ಸಂವಿಧಾನಾತ್ಮಕ ಕೊಡುಗೆಗಳನ್ನು ವಿಮರ್ಶಾತ್ಮಕವಾಗಿ ಚರ್ಚಿಸಲಾಗಿದೆ. ಜೊತೆಗೆ, ಈ ಕೃತಿಯ ಪ್ರಸ್ತುತತೆ ಮತ್ತು ಸಮಕಾಲೀನ ಜಾತಿ ರಾಜಕೀಯದ ಮೇಲೆ ಇದರ ಪರಿಣಾಮವನ್ನೂ ಅವಲೋಕಿಸಲಾಗುತ್ತದೆ.
APA, Harvard, Vancouver, ISO, and other styles
32

ಶೋಭಾ, ಸುರೇಶ್. "ಡಾ. ಅಂಬೇಡ್ಕರ್‌‌ರವರ ಸಾಮಾಜಿಕ ಆಲೋಚನೆಗಳು ಅಸ್ಪೃಶ್ಯರ ವಿಮೋಚನೆ". AKSHARASURYA JOURNAL 06, № 05 (2025): 207 to 219. https://doi.org/10.5281/zenodo.15504651.

Full text
Abstract:
ಸ್ವತಂತ್ರ್ಯಪೂರ್ವ ಭಾರತದ ಜಾತಿ ವ್ಯವಸ್ಥೆಯ ಕರಾಳತೆ ಕಹಿ ಅನುಭವಗಳೊಂದಿಗೆ ಡಾ|| ಬಿ. ಆರ್. ಅಂಬೇಡ್ಕರ್‌‌ರವರು ಅಸ್ಪೃಶ್ಯರಿಗೆ ಮೀಸಲಾತಿ ದೊರಕುವಂತೆ ಮಾಡಿದ ಹೋರಾಟದಲ್ಲಿ ಯಶಸ್ಸನ್ನು ಕಾಣುತ್ತಾರೆ. ತಮ್ಮ ಪ್ರತಿಭೆ ಹಾಗೂ ಪರಿಶ್ರಮದಿಂದ ಬದುಕಿನಲ್ಲಿ ಯಶಸ್ಸನ್ನು ಕಂಡರು. ಜಾತಿಯ ಕಾರಣದಿಂದ ಅನೇಕ ಸಂಕಷ್ಟಗಳಿಗೆ ಅವಮಾನಕ್ಕೆ ಗುರಿಯಾಗುತ್ತಾರೆ. ಬದುಕಿನುದ್ದಕ್ಕೂ ಕೆಳವರ್ಗದ ಜನರಿಗಾಗಿ ಹೋರಾಡಿ ಮೀಸಲಾತಿಯ ಮೂಲಕ ಹಿಂದುಳಿದವರನ್ನು ಮುಖ್ಯವಾಹಿನಿಗೆ ತಂದು ಈ ಸೌಲಭ್ಯ ಪಡೆದವರು ತಮ್ಮ ವರ್ಗದವರ ಏಳಿಗೆಗಾಗಿ ಪ್ರಯತ್ನಪಡಬೇಕು ಎಂಬ ಆಶಯವನ್ನು ಹೊಂದಿದ ಅಂಬೇಡ್ಕರ್‌‌ರವರಿಗೆ ತೀವ್ರ ನಿರಾಸೆಯಾಗುತ್ತದೆ. ಕೆಳ ಸಮುದಾಯಗಳಲ್ಲಿಯೇ ಪರಸ್ಪರ ಆಂತರಿಕ ಭಿನ್ನಾಭಿಪ್ರಾಯಗಳು, ಅಸಮಾನತೆಗಳು, ತಾರತಮ್ಯಗಳ ಕಾರಣಗಳಿಂದ ಪ್ರಬಲ ಜಾತಿಯವರ ದೌ
APA, Harvard, Vancouver, ISO, and other styles
33

ಸುಮಾ, ವಸಂತ ಸಾವಂತ. "ಡಾ. ಅರ್ಜುನ ಗೊಳಸಂಗಿಯವರ ಕವಿತೆಗಳಲ್ಲಿ ಹೆಣ್ಣಿನ ಭಿನ್ನ ನೆಲೆಗಳು". AKSHARASURYA 04, № 03 (2024): 103 to 108. https://doi.org/10.5281/zenodo.12672812.

Full text
Abstract:
ಎಪ್ಪತ್ತನೆಯ ದಶಕದಲ್ಲಿ ಕನ್ನಡದಲ್ಲಿ ಆರಂಭವಾದ ದಲಿತ ಮತ್ತು ಬಂಡಾಯ ಸಾಹಿತ್ಯ ಪಂಥ ನೊಂದವರ ದನಿಯಾಗಿ ಮೂಡಿ ಬಂದವು. ಆರಂಭದಲ್ಲಿ ‘ಇಕ್ರಲಾ ಒದಿರಲ’ ಎಂಬಂತಹ ಆಕ್ರೋಶ ಭರಿತ ಮಾತುಗಳನ್ನು ಆಡುತ್ತಲೇ ತನ್ನ ಸುತ್ತಲಿನವರು ತನ್ನ ಮೇಲೆ ಶತಮಾನಗಳ ಕಾಲ ಮಾಡುತ್ತಾ ಬಂದ ಅನ್ಯಾಯವನ್ನು ಜಾತಿ ವ್ಯವಸ್ಥೆಯ ಹೆಸರಿನಲ್ಲಿ ಮಾಡಿದ ಶೋಷಣೆಯನ್ನೂ ವಿರೋದಿಸಲೆಂದೇ ಈ ಸಾಹಿತ್ಯ ಪಂಥಗಳು ಮೂಡಿ ಬಂದವು. ನಂತರದಲ್ಲಿ ಆಕ್ರೋಶ ತುಸು ಕಡಿಮೆಯಾದಂತೆನಿಸಿದರೂ ಅದರ ಸ್ವರೂಪ ಬದಲಾಯಿತೇ ಹೊರತು ಆಳದ ಅಕ್ರೋಶ ಹೋಗಲಿಲ್ಲ.  ದಲಿತ ಸಾಹಿತ್ಯದ ಎರಡನೆಯ ತಲೆಮಾರಿನಲ್ಲಿ ಬಂದ ಲೇಖಕರು ಆಕ್ರೋಶಕ್ಕಿಂತ ಬದುಕನ್ನು ನಿರುಮ್ಮಳವಾಗಿ ಆದರೆ ಒಂದು ಅಭಿಮಾನ ತುಂಬಿದ ದನಿಯಲ್ಲಿ ಬಿತ್ತರಿಸಿದರು. ಅವರ ಸಾಲಿನಲ್ಲಿ ಬಂದ ಪ್ರಮುಖ ಕವಿ ಡಾ. ಅರ್ಜುನ ಗೊಳಸಂಗಿಯವರು. ಕರ್ನಾಟ
APA, Harvard, Vancouver, ISO, and other styles
34

ಸುಧಾಕರ್, ಆರ್.ಎನ್. "17 ಮತ್ತು 18 ನೇ ಶತಮಾನದ ಕನ್ನಡ ಇತಿಹಾಸದಲ್ಲಿ ವಸಾಹತುಶಾಹಿಯ ಅರಿಮೆಯ ಹಿಂಸೆ (ಜ್ಞಾನಾತ್ಮಕ ಹಿಂಸೆ)". AKSHARASURYA JOURNAL 06, № 03 (2025): 61 to 67. https://doi.org/10.5281/zenodo.15341373.

Full text
Abstract:
ಈ ಲೇಖನವು 17ನೇ ಮತ್ತು 18ನೇ ಶತಮಾನಗಳಲ್ಲಿ ಕನ್ನಡಿಗರ ಚರಿತ್ರೆಯ ಮೇಲೆ ವಸಾಹತುಶಾಹಿಯು ಹೇರಿದ ಎಪಿಸ್ಟೆಮಿಕ್ (ಜ್ಞಾನಾಧಾರಿತ) ಹಿಂಸೆ ಅಥವಾ ಅರಿಮೆಯ ಹಿಂಸೆಯನ್ನು ವಿವರಿಸುತ್ತದೆ. ವಸಾಹತುಶಾಹಿ ಜ್ಞಾನ ವ್ಯವಸ್ಥೆಗಳು ಕನ್ನಡದ ದೇಸೀ ಜ್ಞಾನ ಪರಂಪರೆಗಳನ್ನು ಮತ್ತು ಇತಿಹಾಸಿಕ ಕಥನಗಳನ್ನು ಹೇಗೆ ಬದಲು ಮಾಡಿವೆ ಎಂಬುದನ್ನು ಇದು ಪರಿಶೀಲಿಸುತ್ತದೆ. ಈ ಮೂಲಕ ವಸಾಹತುಶಾಹಿ ಸಾಮ್ರಾಜ್ಯಾಧಿಕಾರದ ವಿಶಾಲ ಯೋಜನೆಗೆ ಹೇಗೆ ಸಹಕಾರಿಯಾಗಿದೆಯೆಂಬುದನ್ನು ಅನಾವರಣಗೊಳಿಸುತ್ತದೆ. ಇತಿಹಾಸ ದಾಖಲೆಗಳು, ಮಿಷನರಿ ಬರಹಗಳು, ಆಡಳಿತ ದಾಖಲೆಗಳು ಮತ್ತು ಸ್ಥಳೀಯ ಜ್ಞಾನ ವ್ಯವಸ್ಥೆಗಳ ಮರು ರಚನೆ ತೀವ್ರ ವಿಶ್ಲೇಷಣೆಯ ಮೂಲಕ, ಈ ಲೇಖನವು ಕನ್ನಡದ ಸಾಂಸ್ಕೃತಿಕ, ಭಾಷಾ ಮತ್ತು ಬೌದ್ಧಿಕ ಪರಂಪರೆಗಳ ಮೇಲೆ ಹೇರಲಾದ ಅರಿಮೆಯ ಹಿಂಸೆಯ ಬಹುಮಟ್ಟದ ಸ್ವರೂಪಗಳನ್ನು ವಿವರಿಸುತ್ತದ
APA, Harvard, Vancouver, ISO, and other styles
35

ಚಂದ್ರಶೇಖರ್, ಎನ್. "ಬೆಸಗರಹಳ್ಳಿ ರಾಮಣ್ಣ ಅವರ 'ಬೇಲ' ಕಥೆಯಲ್ಲಿನ ಬಹುತ್ವದ ಬೆರಗು". AKSHARASURYA JOURNAL 04, № 06 (2024): 35 to 44. https://doi.org/10.5281/zenodo.13724477.

Full text
Abstract:
ಕನ್ನಡ ಕಥಾ ಜಗತ್ತಿನಲ್ಲಿ ಬೆಸಗರಹಳ್ಳಿ ರಾಮಣ್ಣನವರು ಮೂಡಿಸಿದ ಛಾಪು ಓದುಗ ಲೋಕಕ್ಕೆ ಇಂದಿಗೂ ಆಪ್ತವಾಗಿಯೇ ಇದೆ. ತಮ್ಮ ವೃತ್ತಿ ಹಾಗೂ ಪ್ರವೃತ್ತಿಗಳಲ್ಲಿ ಸಾಮರಸ್ಯವನ್ನು ಕಾಯ್ದುಕೊಂಡು ಅವರು ಮಾಡಿದ ಸಾಹಿತ್ಯ ಕೃಷಿ ವಿಶೇಷವಾದದ್ದು. ತಮ್ಮ ಬರಹಗಳಲ್ಲಿ ಮೂಡಿ ಬಂದಿರುವ ನಿರಾಡಂಬರ ಹಾಗೂ ಸಹಜತೆ ತಮ್ಮ ಬರಹದ ಶಕ್ತಿಯನ್ನು ಹೆಚ್ಚಿಸಿದೆ. ಒಬ್ಬ ಓದುಗನಿಗೆ ಕತೆಗಾರ, ಕಾದಂಬರಿಕಾರ ಕೊಡಮಾಡುವ ಭಾವನಾತ್ಮಕ ಸಾಂತ್ವನ ಇವರ ರಚನೆಗಳಲ್ಲಿ ಅಗಾಧವಾದ ಇಳುವರಿಯನ್ನು ನೀಡಿದೆಯೆಂದರೆ ತಪ್ಪಾಗಲಾರದು. ಇವರು ಸಮಾಜವನ್ನು ಕಂಡ, ಕಟ್ಟಿಕೊಟ್ಟ ನೋಟಕ್ರಮವೇ ಭಿನ್ನವಾದದ್ದು. ಸಾಮಾಜಿಕವಾದ ಹಾವು ಏಣಿಯಾಟದಲ್ಲಿ ಜಮೀನ್ದಾರಿ ಪದ್ದತಿ ಹಾಗೂ ವೇಶ್ಯಾವೃತ್ತಿಯ ಕರಾಳ ಮುಖವನ್ನು ‘ಬೇಲ’ ಕತೆಯಲ್ಲಿ ಅನಾವರಣಗೊಳಿಸಿದ್ದಾರೆ. ವೃತ್ತಿಯಲ್ಲಿ ನರ್ತಕಿಯಾದ ಸ್ಪುರದ್
APA, Harvard, Vancouver, ISO, and other styles
36

ಸೋಮಶೇಖರ, ಎಂ. "ಹರಿಹರನ ರಗಳೆಯಲ್ಲಿ ಶರಣ ಕೆಂಬಾವಿ ಭೋಗಣ್ಣ". AKSHARASURYA 04, № 02 (2024): 145 to 156. https://doi.org/10.5281/zenodo.11525997.

Full text
Abstract:
ವಚನ ಸಾಹಿತ್ಯದ ಮಾತು ಬಂದ ತಕ್ಷಣವೇ ನಮ್ಮಲ್ಲಿ ಬಸವಾದಿ ಶರಣರ ಆಲೋಚನೆಗಳು ಸುಳಿದಾಡುತ್ತವೆ. ವಚನ ಸಾಹಿತ್ಯದ ಮೇಲೆ ಸಾಕಷ್ಟು ಸಂಶೋಧನೆಗಳು ನಡೆದಿದೆ; ನಡೆಯತ್ತಲೇ ಇದೆ. ವಚನ ಸಾಹಿತ್ಯವನ್ನು ಅಧ್ಯಯನದ ದೃಷ್ಟಿಯಿಂದ ಬಸವಪೂರ್ವ ಯುಗ (11ನೇ ಶತಮಾನ), ಬಸವ ಯುಗ (12-13ನೇ ಶತಮಾನ), ಬಸವೋತ್ತರ ಯುಗ (15-19ನೇ ಶತಮಾನ) ಹಾಗೂ ಆಧುನಿಕ ಯುಗ (20ನೇ ಶತಮಾನ) ಎಂದೂ ವಿಭಾಗಿಸಿಕೊಳ್ಳಲಾಗಿದೆ. ಈ ಸಾಹಿತ್ಯ ಸೃಷ್ಟಿಯ ಪ್ರಮುಖ ಕಾರಣ ಹಾಗೂ ಪ್ರೇರಣೆಗಳೆಂದರೆ ಶರಣ ಧರ್ಮದ ತತ್ವಗಳ ಪ್ರಸಾರ ಮಾಡುವುದು ಹಾಗೂ ಅಂದಿನ ಸಮಾಜದಲ್ಲಿನ ಅಸಮಾನತೆಯನ್ನು ಹೊಡೆದೋಡಿಸುವುದು. ಹನ್ನೊಂದನೆಯ ಶತಮಾನದಲ್ಲಿ ಈ ಕಾರ್ಯವನ್ನು ಕೈಗೊಂಡವರು ಕೊಂಡಗುಳಿ ಕೇಶಿರಾಜ, ಕೆಂಬಾವಿ ಭೋಗಣ್ಣ, ಶಂಕರದಾಸಿಮಯ್ಯ, ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಸಕಳೇಶ ಮಾದರಸ, ಜೇಡರದಾಸಿಮಯ್ಯ ಹಾಗೂ ಚಂದ
APA, Harvard, Vancouver, ISO, and other styles
37

ವೆಂಕಟೇಶ್, ಬಿ. ಜಿ. "ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ಕಾರ್ಮಿಕರ ಸಮಸ್ಯೆಗಳು". AKSHARASURYA JOURNAL 03, № 04. SPECIAL ISSUE. (2024): 170 to 174. https://doi.org/10.5281/zenodo.10930259.

Full text
Abstract:
ಕೃಷಿ ಕಾರ್ಮಿಕರು ಕೃಷಿ ಕ್ಷೇತ್ರದಲ್ಲಿ ಬೆಳೆ ನಾಟಿ, ಜಾನುವಾರುಗಳ ಪಾಲನೆ, ಕೊಯ್ಲು ಮತ್ತು ಸಂಸ್ಕರಣೆ ಮುಂತಾದ ಕಾರ್ಯದಲ್ಲಿ ಭಾಗವಹಿಸುತ್ತಾರೆ. ಕೃಷಿ ಚಟುವಟಿಕೆಯಲ್ಲಿ ಮಾನವ ಸಂಪನ್ಮೂಲವು ಅವಶ್ಯಕವಾಗಿ ಅಗತ್ಯವಿರುತ್ತದೆ. ಈ ಹಿನ್ನೆಲೆ ಕೃಷಿ ಕಾರ್ಮಿಕರು ದೀರ್ಘಾವಧಿವರೆಗೆ ವ್ಯವಸಾಯ ಭೂಮಿಯಲ್ಲಿ ದುಡಿಯುತ್ತಿರುತ್ತಾರೆ. ಅವರು ಕಾಲಾವಧಿ ಅಥವಾ ತಾತ್ಕಾಲಿಕ ಅವಧಿಯ ಆಧಾರದ ಮೇಲೆ ಕೆಲಸ ಮಾಡಬಹುದು. ಅಲ್ಲದೆ ಕೃಷಿಕರು ಅಥವಾ ಕೃಷಿ ಸಹಕಾರಿ ಸಂಸ್ಥೆಗಳಲ್ಲಿ ಕಾರ್ಯವನ್ನು ನಿರ್ವಹಿಸಬಹುದು. ಕೃಷಿ ಕಾರ್ಮಿಕರ ಸವಾಲುಗಳು ಮತ್ತು ಅನಿಶ್ಚಿತತೆಯ ಹೊರತಾಗಿಯೂ ಇದು ಜಾಗತಿಕ ಆಹಾರ ಉತ್ಪಾದನೆಯ ನಿರ್ಣಾಯಕ ಅಂಶವಾಗಿದೆ. ಪ್ರಪಂಚದ ಅನೇಕ ಭಾಗಗಳಲ್ಲಿ ಕೃಷಿ ಕಾರ್ಮಿಕರು ಅನೌಪಚಾರಿಕ ಮತ್ತು ಅನಿಯಂತ್ರಿತರಾಗಿದ್ದಾರೆ. ಅವರು ತಮ್ಮ ಹಕ್ಕುಗಳಿಗಾಗಿ ಹೋರಾಟವನ್ನು ನಡೆ
APA, Harvard, Vancouver, ISO, and other styles
38

ಆರತಿ, ಎಸ್. "ಮಲ್ಲಿಕಾ ಘಂಟಿಯವರ 'ಚಾಜ' ನಾಟಕದಲ್ಲಿ ಸಾಂಸ್ಕೃತಿಕ ಸಂಘರ್ಷ". AKSHARASURYA 04, № 03 (2024): 88 to 94. https://doi.org/10.5281/zenodo.12672754.

Full text
Abstract:
ಪುರಾತನ ಕಾಲದಿಂದಲೂ ಸಾಮ್ರಾಜ್ಯಶಾಹಿಗಳು, ಪುರುಷಪ್ರಧಾನತೆ ಮತ್ತು ಪುರೋಹಿತಶಾಹಿತ್ವಗಳು ಒಟ್ಟಾಗಿಯೇ ಮಹಿಳೆಯರ ಮೇಲೆ ನೂರಾರು ಕಟ್ಟುಪಾಡುಗಳನ್ನು ಹೇರಿವೆ. ಹೆಣ್ಣು ಒಂದು ವಸ್ತು ಎಂದು ಪುರುಷಪ್ರಧಾನ ವ್ಯವಸ್ಥೆಯ ಧರ್ಮವು ನಿರ್ವಹಿಸುತ್ತದೆ. ಪುರುಷನ ಅಧಿಕಾರ ಸ್ಥಾಪನೆಯ ಕಾರಣದಿಂದ ಅವನೇ ಹುಟ್ಟು ಹಾಕಿದ ಧರ್ಮ, ಕಾನೂನು, ನಿಯಮಗಳು, ಕಟ್ಟುಪಾಡುಗಳು ಹೆಣ್ಣನ್ನು ನಿರ್ದಾಕ್ಷಿಣ್ಯವಾಗಿ ನಡೆಸಿಕೊಳ್ಳುತ್ತವೆ. ಕುಟುಂಬ, ಆಸ್ತಿ, ಉತ್ಪಾದನೆ ಹೀಗೆ ಎಲ್ಲದರ ಮೇಲೆ ಪುರಷಾಧಿಪತ್ಯವೇ ಇರುತ್ತದೆ. ಈ ಕಾರಣದಿಂದಾಗಿ ಬಾಲ್ಯವಿವಾಹ, ಸತಿಪದ್ಧತಿ, ವಿಧವಾ ಸಮಸ್ಯೆ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆ, ಬಹುಪತ್ನಿತ್ವ, ವರದಕ್ಷಿಣೆ ಮುಂತಾದ ಕ್ರೂರ ಸಂಪ್ರಧಾಯಗಳಿಗೆ ಹೆಣ್ಣನ್ನು ಸಿಲುಕಿಸಿ ಅವಳನ್ನು ನಿರಂತರ ಶೋಷಣೆಗೆ ಒಳಗುಮಾಡಲಾಗಿದೆ. ಮನುಸ್ಮೃತಿ ಮೊದಲಾದ ಕೃತ
APA, Harvard, Vancouver, ISO, and other styles
39

ಕುಮಾರ, ಹೆಚ್.ಸಿ. "ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು". AKSHARASURYA JOURNAL 06, № 04 (2025): 19 to 26. https://doi.org/10.5281/zenodo.15490817.

Full text
Abstract:
ವಚನ ಸಾಹಿತ್ಯವು ಕನ್ನಡ ಸಾಹಿತ್ಯದ ವಿಶಿಷ್ಟ ಮಾದರಿಯ ಸಾಹಿತ್ಯ ಪ್ರಕಾರವಾಗಿದ್ದು, ಕಾಯಕಕ್ಕೆ, ಮಾನವೀಯ ಸಂಬಂಧಗಳಿಗೆ ಹಾಗೂ ಸೃಜನಶೀಲತೆಗೆ ಪ್ರಮುಖ ಸ್ಥಾನವನ್ನು ನೀಡಿ ಗೌರವಿಸಿದೆ. ಶಿವಶರಣರು ತಮ್ಮ ದಿನನಿತ್ಯದ ನಡೆನುಡಿಗಳನ್ನೇ ವಚನಗಳೆಂಬ ಹಾಡುಗಬ್ಬವಾಗಿ ರಚಿಸಿದರು. ಬಸವಣ್ಣ, ಅಕ್ಕ, ಅಲ್ಲಮ ದಾಸಿಮಯ್ಯ, ಸಿದ್ದರಾಮರಂಥಹ ಅನೇಕ ವಚನಕಾರರರು ಕಾಯಕಕ್ಕೆ ಮಹತ್ವ ಕೊಟ್ಟು ಜನರಲ್ಲಿದ್ದ ಕೆಟ್ಟ ಆಲೋಚನೆಗಳನ್ನು ದೂರ ಮಾಡಿ ಹೊಸ ವಿಶ್ವಾಸದ ಹಾದಿಯನ್ನು ತೋರಿಸಿದರು.ಲಿಂಗ ತಾರತಮ್ಯ, ವರ್ಗ ಸಂಘರ್ಷ, ಜಾತಿ ಪದ್ಧತಿ ಅಸಮಾನತೆ ಮುಂತಾದ ವ್ಯವಸ್ಥೆಗಳ ವಿರುದ್ಧ ಹೋರಾಡಿ ಸಭ್ಯ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿ, ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆದರು. ನಡೆ ನುಡಿ ಶುದ್ಧವಾಗಿರಬೇಕು. ಮನುಷ್ಯನಿಗೆ, ಗಾಳಿ, ನೀರು, ಊಟ ಎಷ್ಟು ಮುಖ್ಯವೋ ಅಷ್ಟೇ
APA, Harvard, Vancouver, ISO, and other styles
40

ಆಶಾಲತಾ, ಪಿ. "ಭಾರತದ ಪ್ರಜಾತಂತ್ರ: ಡಾ. ಬಿ.ಆರ್. ಅಂಬೇಡ್ಕರ್‌ ಚಿಂತನೆಗಳು". AKSHARASURYA JOURNAL 06, № 05 (2025): 01 to 09. https://doi.org/10.5281/zenodo.15504104.

Full text
Abstract:
ಭಾರತದಲ್ಲಿ ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯ, ಮಹಿಳಾ ಹಕ್ಕುಗಳ ಬಗೆಗೆ ತೀವ್ರವಾಗಿ ಚಿಂತಿಸಿ, ಆ ಸಾಮಾಜಿಕ ಸುಧಾರಣೆಗಳಿಗೆ ಕಾನೂನಿನ ಚೌಕಟ್ಟು ಅವಶ್ಯವೆಂದು, ಭಾರತದ ಸಂವಿಧಾನದಲ್ಲಿ ಆ ಮೌಲ್ಯಗಳನ್ನು ಹಲವಾರು ವಿಧಿಗಳ ರೂಪದಲ್ಲಿ ಕ್ರೋಢೀಕರಿಸಿ, ಶೋಷಿತ ಸಮುದಾಯಗಳಲ್ಲಿ ಸ್ವಾಭಿಮಾನ, ಆತ್ಮಗೌರವ ಮತ್ತು ಅನ್ಯಾಯಗಳ ವಿರುದ್ಧ ಹೋರಾಟದ ಮನೋಭಾವವನ್ನು ಮೂಡಿಸಿದ ಮಹಾನ್ ಮಾನವತಾವಾದಿ, ಸಂವಿಧಾನಶಿಲ್ಪಿ, ಅರ್ಥಶಾಸ್ತ್ರಜ್ಞ, ಕಾನೂನು ತಜ್ಞ ಡಾ. ಬಾಬಾಸಾಹೇಬ್ ಅಂಬೇಡ್ಕರ್‌‌ರವರು. ಮೂಲತ ಅಂಬೇಡ್ಕರ್‌‌ರವರು, ಬೆಳೆದು ಬಂದ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳು, ಅಸ್ಪೃಶ್ಯತೆ, ಬಡತನ, ದೌರ್ಜನ್ಯ ಈ ಎಲ್ಲಾ ಜಾತಿಯ ಅಸಮಾನತೆಗಳ ಭೀತಿಗಳನ್ನು, ಒಳಗೊಂಡ ಸಮಾಜವಾಗಿತ್ತು. ಹಾಗಾಗಿ ಸಹಜವಾಗಿಯೇ ಶೋಷಿತ ಸಮುದಾಯಗಳ ಶೋಷಣೆಯ ವಿವಿಧ ಸ್ವರೂಪಗಳ
APA, Harvard, Vancouver, ISO, and other styles
41

ಚಿಕ್ಕಮಗಳೂರು, ಗಣೇಶ. "ವರ್ತಮಾನದ ಕನ್ನಡಿಯಲ್ಲಿ ಕನಕ ದರ್ಶನ". AKSHARASURYA JOURNAL 04, № 05 Special Issue (2024): 06 to 16. https://doi.org/10.5281/zenodo.13294272.

Full text
Abstract:
ಭಕ್ತಿಯ ಖಾಸಗಿ ವಿಚಾರಗಳನ್ನು ಸಮಾಜ ಸುಧಾರಣೆಗೆ ಮಾಧ್ಯಮವಾಗಿ ಬಳಸಿಕೊಂಡ ಕನಕದಾಸರು ಕನ್ನಡ ನಾಡಿನ ಅನನ್ಯ ಭಕ್ತಿ ಕವಿ. ಅವರು ವಾಸಿಸುತ್ತಿದ್ದ ಮಧ್ಯಕಾಲೀನ ಅವಧಿಯು ಸಂಕೀರ್ಣವಾಗಿತ್ತು. ಇದು ಧರ್ಮ ಮತ್ತು ಆಡಳಿತದ ನಡುವಿನ ತೀವ್ರ ಸಂಘರ್ಷದ ಅವಧಿ. ಅಲ್ಲಿ ಅವರು ಹರಿದಾಸ ಚಳವಳಿಯ ಮುಖವಾಣಿಯಾಗಿ ನಮ್ಮನ್ನು ಭೇಟಿಯಾಗುತ್ತಾರೆ. ಆ ಚಳವಳಿಯ ತತ್ತ್ವಶಾಸ್ತ್ರವು ಮೇಲ್ನೋಟಕ್ಕೆ ಉದಾರವಾದದ್ದಾಗಿತ್ತು. ಆಂತರಿಕವಾಗಿ ದೋಷಯುಕ್ತ, ತಾರತಮ್ಯ ಮತ್ತು ಅಸಮ ನೆಲ. ಕನಕನೂ ತನ್ನ ಹಿನ್ನಲೆಯಲ್ಲಿ ಇಟ್ಟುಕೊಂಡಿರುವ ಎಲ್ಲ ಸೈದ್ಧಾಂತಿಕ ಗೊಂದಲಗಳಲ್ಲಿ ಸಿಲುಕಿಕೊಳ್ಳುತ್ತಾನೆ. ವ್ಯಾಸಕೂಟ ಮತ್ತು ದಾಸಕೂಟಗಳು ತಾತ್ವಿಕ ಸಂಘರ್ಷದ ನಡುವೆ ತಮ್ಮನ್ನು ತಾವು ಪ್ರತಿಪಾದಿಸಲು ಹೆಣಗಾಡುತ್ತವೆ.  ಚಳವಳಿಯ ಪರಿಸರದಲ್ಲೂ ಅಪಾರ ಒಂಟಿತನ ಅನುಭವಿಸಿದ ಕವಿ. ಇದಕ್ಕೆ ಕಾರಣವೆ
APA, Harvard, Vancouver, ISO, and other styles
42

ರಮೇಶ್. "ನಿರಂಜನರ ಬರವಣಿಗೆಯಲ್ಲಿ ಮಾರ್ಕ್ಸ್‌ವಾದ". AKSHARASURYA 06, № 02 (2025): 75 to 83. https://doi.org/10.5281/zenodo.15124060.

Full text
Abstract:
ನಿರಂಜನರು ಸಾಹಿತ್ಯವಲಯದಲ್ಲಿ ಉಂಟುಮಾಡಿದ ಸಾಮಾಜಿಕ ಹೋರಾಟ ಬಹಳ ಮುಖ್ಯವಾದುದು. ಸಾಹಿತ್ಯ ಮತ್ತು ಬದುಕನ್ನು ಏಕ ರೀತಿಯಲ್ಲಿ ಕಂಡುಕೊಂಡವರು. ಸಾಮಾಜಿಕ ಬದ್ಧತೆಯನ್ನು ಕೊನೆಯವರೆಗೂ ಉಳಿಸಿಕೊಂಡವರು. ಬಾಲ್ಯದಲ್ಲಿ ಗಾಂಧಿವಾದಕ್ಕೆ ಮನಸೋತು, ಅನಂತರ ಸಮಾಜವಾದದತ್ತ ಒಲವು ಬೆಳಸಿಕೊಂಡರು. ಹರೆಯದಲ್ಲಿ ಸಮತಾವಾದದ ಸಿದ್ದಾಂತಗಳಿಂದ ಪ್ರಭಾವಿತರಾಗಿ ಮಾರ್ಕ್ಸ್‌ವಾದಿಯಾಗಿ ಕಮ್ಯೂನಿಸ್ಟ್ ಪಕ್ಷದ ಸಕ್ರಿಯ ಸದಸ್ಯರಾಗಿ ದುಡಿದವರು ನಿರಂಜನರು. ʼಸ್ವಾತಂತ್ರ್ಯ ಚಳವಳಿ, ಏಕೀಕರಣ ಚಳವಳಿ, ಹಿಂದೂ ಸಾಂಸ್ಕೃತಿಕ ಪುನರುಜ್ಜೀವನ ಚಳವಳಿಗಳು ಸೊಕ್ಕೇರಿ ಒಟ್ಟಿಗೆ ಕ್ರಿಯಾನಿರತವಾಗಿದ್ದಾಗ, ಮಾರ್ಕ್ಸ್‌ವಾದದಿಂದ ಆಕರ್ಷಿತವಾಗಿ, ಅಖಿಲಭಾರತ ಚಳವಳಿಯ ಒಂದು ಭಾಗವಾಗಿ ಕನ್ನಡ ಪ್ರಗತಿಶೀಲ ಚಳವಳಿಯು ಹುಟ್ಟಿಕೊಂಡಿತು. ಶಿವರಾಯರು ಬೆಳೆಬೆಳೆಯುತ್ತಾ ಗಾಂಧೀ ಪ
APA, Harvard, Vancouver, ISO, and other styles
43

ಎಸ್., ಎಸ್. ಹಿರೇಮಠ, та ಭೈರಪ್ಪ ಎಂ. "ಕರ್ನಾಟಕದಲ್ಲಿ ದಲಿತರು". AKSHARASURYA JOURNAL 04, № 04 (2024): 01 to 44. https://doi.org/10.5281/zenodo.13283983.

Full text
Abstract:
<strong>ನೆಲಮೂಲ ಸಂಸ್ಕೃತಿಯ ಮಹಾಶೋಧಕರಾಗಿ ಪ್ರೊ.ಎಸ್.ಎಸ್.ಹಿರೇಮಠರ ಕಾಯಕ</strong> ನೆಲಮೂಲ ಸಂಸ್ಕೃತಿಯ ಜಾಡಿನಲ್ಲಿ ಸಂಶೋಧನೆಯನ್ನು ಕೈಗೊಂಡು ಬಹುತ್ವ ಭಾರತ ಹಾಗೂ ದಲಿತ ಸಂಸ್ಕೃತಿಯ ವಿರಾಟ್ ಸ್ವರೂಪವನ್ನು ಅನಾವರಣ ಮಾಡಿದ ಮಹಾಶೋಧಕರಲ್ಲಿ ಪ್ರೊ.ಎಸ್.ಎಸ್.ಹಿರೇಮಠ ಅವರು ಪ್ರಾತಃಸ್ಮರಣೀಯರಾಗಿದ್ದಾರೆ. ತಮ್ಮ ಅಧ್ಯಾಪನ ಮತ್ತು ಸಂಘಟನಾ ಕಾಯಕದ ಮೂಲಕ ಜನಪರ ಮನಸುಗಳನ್ನು ರೂಪಿಸಿದ ಕ್ರಾಂತಿಕಾರಿಯೂ ಆಗಿದ್ದ ಹಿರೇಮಠ ಮೇಷ್ಟ್ರು ಸಂಶೋಧನಾ ಕಾಯಕದ ಮೂಲಕ ಸೀಮಿತ ಬೌದ್ಧಿಕ ಹಾಗೂ ಸಾಂಸ್ಕೃತಿಕ ಸೀಮೆಗಳನ್ನು ಬಹುವಾಗಿ ವಿಸ್ತರಿಸಿಕೊಟ್ಟಿದ್ದಾರೆ. ಆದಿಮ ನೆಲೆಯಿಂದ ಹಿಡಿದು ಆಧುನಿಕ ನೆಲೆಯ ಸಾಂಸ್ಕೃತಿಕ ಸಂಗತಿಗಳ ವರೆಗೂ ಆಳವಾದ ಸಂಶೋಧನೆಯನ್ನು ಕೈಗೊಂಡ ಹಿರೇಮಠರು ಲೋಕಮುಖೀ ಒಳಹರವಿನ ಅನೇಕ ಸೂಕ್ಷ್ಮಗಳನ್ನು ನಿಕಷಕ್ಕೆ ಒಡ್ಡಿದ್ದಾರೆ; ನೆಲದರಿವಿನ ಸೀಮ
APA, Harvard, Vancouver, ISO, and other styles
44

ಮುತ್ತುರಾಜು, ಕೆ. ವಿ., та ನಾಗಭೂಷಣ. "ಮಲೆಮಹದೇಶ್ವರ ಕಾವ್ಯದ ಮಹಿಳಾ ಪಾತ್ರಗಳ ವಿಶ್ಲೇಷಣೆ". AKSHARASURYA 06, № 02 (2025): 61 to 74. https://doi.org/10.5281/zenodo.15123997.

Full text
Abstract:
ಭಾರತ ಬಹು ಸಂಸ್ಕೃತಿಗಳಿಂದ ಕೂಡಿದೆ. ಭಾರತವನ್ನು ಸಂಸ್ಕೃತಿ ಮತ್ತು ಉಪಸಂಸ್ಕೃತಿಗಳ ನೆಲೆಗಟ್ಟಿನಲ್ಲಿ ಗ್ರಹಿಸುವುದಾದರೆ, ಜನಪದ ಕಥನಗಳು ಉಪಸಂಸ್ಕೃತಿಗಳ ಭಾಗಗಳಾಗಿವೆ. ಇದರ ಭಾಗವಾಗಿ ನಮಗೆ ಕನ್ನಡದಲ್ಲಿ ಮಲೆಮಹದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಮೖಲಾರಲಿಂಗ ಇವರೆಲ್ಲರೂ ಕೂಡ ಮುಖ್ಯವಾಗಿ ಕಾಣುತ್ತಾರೆ. ಮಾತೃಮೂಲ ಸಂಸ್ಕೃತಿಯ ಅನೇಕ ಪಳೆಯುಳಿಕೆಗಳು ಈ ಕಾವ್ಯಗಳಲ್ಲಿ ದಟ್ಟವಾಗಿ ಕಂಡುಬರುತ್ತವೆ. ನನ್ನ ಅಧ್ಯಯನಕ್ಕೆ ಮಲೆಮಹದೇಶ್ವರ ಕಾವ್ಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮಲೆಮಹದೇಶ್ವರ ಕಾವ್ಯದಲ್ಲಿ ಸಂಕಮ್ಮನ ಸಾಲು ಬಹಳ ವಿಶಿಷ್ಟವಾಗಿದೆ. ನನ್ನ ಅನುಪಸ್ಥಿತಿಯಲ್ಲಿ ಪರ ಪುರುಷರಿಗೆ ಒಲಿಯುವುದಿಲ್ಲ ಎಂದು ಬಲಗೖ ಭಾಷೆಯನ್ನು ನೀಡಬೇಕು ಎಂದು ನೀಲಯ್ಯ ಕೇಳಿದಾಗ, ಭಾಷೆ ನೀಡಲು ಒಪ್ಪದ ಸಂಕಮ್ಮ ʼಕೊಟ್ಟಿದ ತೆರವನ್ನು ಹಿಂತೆಗೆದುಕೊಂಡು ನನ್ನನ್ನುಬಿಟ್
APA, Harvard, Vancouver, ISO, and other styles
45

ಗಣೇಶ та ಹೆಚ್. ಎಸ್. ನಿಂಗರಾಜು. "ಆಧುನಿಕ ಕನ್ನಡ ಸಾಮಾಜಿಕ ನಾಟಕಗಳಲ್ಲಿ ಪ್ರತಿಯಜಮಾನಿಕೆಯ ಸ್ವರೂಪ". AKSHARASURYA JOURNAL 04, № 06 (2024): 63 to 73. https://doi.org/10.5281/zenodo.13724751.

Full text
Abstract:
ಭಾರತದಂತಹ ದೇಶವು ಸಂಕೀರ್ಣವಾದ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿದೆ. &nbsp;ಅಂತಹ ಪ್ರಾಬಲ್ಯಗಳ ಆಧಾರವು ಸಂಕೀರ್ಣ ಸ್ವರೂಪವನ್ನು ಹೊಂದಿದೆ. &nbsp;ಭಾರತದ ವರ್ಣ ಆಧಾರಿತ ಸಾಮಾಜಿಕ ವ್ಯವಸ್ಥೆಯಲ್ಲಿ, ವರ್ಣಾಸ್&zwnj;ನ ಮೇಲಿನ ಸ್ತರಗಳಲ್ಲಿ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಪ್ರಾಬಲ್ಯ ವ್ಯವಸ್ಥೆಗಳು ಛಿದ್ರಗೊಳ್ಳುತ್ತಿವೆ. &nbsp;ಸಬಾಲ್ಟರ್ನ್ ಅಡಿಯಲ್ಲಿ ಬರುವ ನಾಲ್ಕನೇ ವರ್ಣಾ, ಶೂದ್ರವರ್ಣ, &nbsp;ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಭಾಗವಹಿಸುವಿಕೆಯಿಂದ ವಂಚಿತವಾಗಿದೆ. ಸಾಂಪ್ರದಾಯಿಕವಾಗಿ ಮೇಲ್ವರ್ಗದ &nbsp;ಪ್ರಾಬಲ್ಯಗಳು ಕಠಿಣ ಅಭ್ಯಾಸಗಳನ್ನು ನಿರ್ಮಿಸುವ ಮೂಲಕ ಅಧೀನ ವರ್ಗವನ್ನು ಬಳಸಿಕೊಳ್ಳುತ್ತವೆ. ಈ ಅಧೀನ ನೆಲೆಗಳು ಮೇಲ್ಮಟ್ಟದ ಪ್ರಾಬಲ್ಯಗಳ ವಿರುದ್ಧ ಹೆಚ್ಚು ಸಹನೆ ಮತ್ತು ಮೂಕತನದಿಂದ ಪ್ರತಿಭಟಿಸಲು ಸಾಧ್ಯವಾಗುತ್ತಿಲ್ಲ. ಅವರ ನ
APA, Harvard, Vancouver, ISO, and other styles
46

ಸುಮಾ, ವಸಂತ ಸಾವಂತ. "ಚಾಜ ನಾಟಕದಲ್ಲಿ ಮಹಿಳಾ ಸಂವೇದನೆ". AKSHARASURYA 05, № 02 (2024): 123 to 130. https://doi.org/10.5281/zenodo.14035359.

Full text
Abstract:
ಆಧುನಿಕ ಸಾಹಿತ್ಯದ ಸಂದರ್ಭದಲ್ಲಿ ಮಹಿಳೆಯರು ಕಥೆ-ಕಾದಂಬರಿ ಪ್ರಕಾರಗಳಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಆದರೆ ರಂಗಭೂಮಿಯಲ್ಲಿ ನಾಟಕರಚನೆಗೆ ಸಂಬಂಧಿಸಿದಂತೆ ಅಂತಹ ದೊಡ್ಡಸಾಧನೆ ಕಾಣಿಸುವುದಿಲ್ಲ. ಆದರೆ ಇತ್ತೀಚಿನ ದಶಕಗಳಲ್ಲಿ ಮಹಿಳೆ ಅನೇಕ ಮಹತ್ವದ ನಾಟಕ ಕೃತಿಗಳನ್ನು ಕೊಟ್ಟಿದ್ದಾಳೆ. ಅಂತಹ ನಾಟಕಗಳಲ್ಲಿ ಚಾಜ ನಾಟಕವು ಒಂದಾಗಿದೆ. ಹಿಂದಿನ ಕಾಲದಿಂದಲೂ ಪುರುಷ ಪ್ರಧಾನತೆ, ಸಾಮ್ರಾಜ್ಯಶಾಹಿಗಳು, ಮತ್ತು ಪುರೋಹಿತಶಾಹಿತ್ವಗಳು ಎಲ್ಲವೂ ಒಟ್ಟಾಗಿಯೇ ಮಹಿಳೆಯರ ಮೇಲೆ ಹಲವಾರು ಕಟ್ಟುಪಾಡುಗಳನ್ನು ಹೊರಿಸಿವೆ. ಹೆಣ್ಣು ಭೋಗದ ವಸ್ತು ಎಂದು ಪುರುಷಪ್ರಧಾನ ವ್ಯವಸ್ಥೆಯು ಭಾವಿಸುತ್ತದೆ. ಪುರುಷನ ಅಧಿಕಾರತ್ವದಿಂದ ಅವನೇ ಹುಟ್ಟು ಹಾಕಿದ ಧರ್ಮ, ನಿಯಮಗಳು, ಗೊಡ್ಡು ಸಂಪ್ರದಾಯಗಳು, ಕಟ್ಟುಪಾಡುಗಳು ಹೆಣ್ಣನ್ನು ನಿರ್ದಾಕ್ಷಿಣ್ಯವಾಗಿ ನಡೆಸಿಕೊಳ್ಳುತ್ತವೆ.
APA, Harvard, Vancouver, ISO, and other styles
47

ಎಲ್ಲಪ್ಪ, ಜಿ. "ಭಾರತದ ಪ್ರಜಾಪ್ರಭುತ್ವದ ಪಿತಾಮಹರಾಗಿ ಡಾ. ಬಿ. ಆರ್. ಅಂಬೇಡ್ಕರ್‌". AKSHARASURYA JOURNAL 06, № 05 (2025): 36 to 45. https://doi.org/10.5281/zenodo.15504196.

Full text
Abstract:
ವಿಸ್ತಾರವಾದ ದೇಶ, ವೈವಿಧ್ಯಮಯವಾದ ಸಂಸ್ಕೃತಿಗಳು, ಸಾವಿರಾರು ಭಾಷೆಗಳು, ಸಾವಿರಾರು ಜಾತಿಗಳು, ವಿಭಿನ್ನ ಮತಗಳು ಈ ಮಣ್ಣಿನಲ್ಲಿ ಜೀವಿಸುತ್ತಿವೆ. ಈ ಎಲ್ಲವುಗಳಿಗೆ ಜೀವ ಕೊಡುವ ತತ್ವ ಯಾವುದು? ಮತ್ತು ಇವುಗಳನ್ನು ಬೆಸೆಯುವ ಸೂತ್ರ ಯಾವುದು? ಎಂಬ ಆಲೋಚನೆಗಳ ಬೆನ್ನ ಹತ್ತಿದಾಗ ಸಿಗುವ ಪೂರಕ ಶಕ್ತಿಗಳ ಬಗ್ಗೆ ಅಧ್ಯಯನಕ್ಕೆ ಪ್ರಜಾಪ್ರಭುತ್ವವೊಂದು ಮುಖ್ಯವಾಗಿ ಮುನ್ನೆಲೆಗೆ ಬರುತ್ತದೆ. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ಇದು ಬೆಳೆದು ಬಂದ ಪರಂಪರೆ, ಅದು ಗಟ್ಟಿಗೊಂಡ ಹಿನ್ನೆಲೆಗಳು ಆಸಕ್ತಿದಾಯಕಗಳಾಗಿವೆ.&nbsp;ಬಾಬಾ ಸಾಹೇಬರು ಪ್ರಜಾಪ್ರಭುತ್ವವನ್ನು ಭಾರತೀಯ ಮಣ್ಣಿನಲ್ಲಿ ಕೃಷಿ ಮಾಡಿದ ಬಗ್ಗೆ ಗಮನಾರ್ಹವಾದದ್ದು. ಎಲ್ಲಾ ಜನರು ಬದುಕಲಿಕ್ಕೆ ಬೇಕಾದ ಜೀವನ ವಿಧಾನ ಮತ್ತು ಆಡಳಿತ ಕ್ರಮವಾಗಿಸುವಲ್ಲಿ ಸಶಕ್ತವಾದ ಸೂತ್ರವೊಂದನ್ನು ಪ
APA, Harvard, Vancouver, ISO, and other styles
48

V., Shivananda. "ಔತ್ತರೇಯ ಭಾರತೀಯ ಭಾಷೆ-ಕೃತಿಗಳಲ್ಲಿ ಕರ್ನಾಟಕ ಸಂಸ್ಕೃತಿಯ ಕೆಲವು ಉಲ್ಲೇಖಗಳು". ಔತ್ತರೇಯ ಭಾರತೀಯ ಭಾಷೆ-ಕೃತಿಗಳಲ್ಲಿ ಕರ್ನಾಟಕ ಸಂಸ್ಕೃತಿಯ ಕೆಲವು ಉಲ್ಲೇಖಗಳು 03, № 02 (2024): 1–18. https://doi.org/10.5281/zenodo.10656661.

Full text
Abstract:
ಕನ್ನಡ ಸಾರಸ್ವತ ಲೋಕದಲ್ಲಿ ಎಲೆಮರೆಯ ಕಾಯಿಯಂತಿದ್ದು ಕನ್ನಡ ಸಂಶೋಧನ ಕ್ಷೇತ್ರವನ್ನು ಮತ್ತಷ್ಟು ಗಟ್ಟಿಯಾಗಿ ವಿಸ್ತರಿಸಿದ ಹಾಗೂ ಶ್ರೀಮಂತಗೊಳಿಸಿದ ವಿದ್ವಾಂಸರಲ್ಲಿ ಡಾ.ವಿ.ಶಿವಾನಂದ ಅವರು ಪ್ರಮುಖರು. ಅತ್ಯುತ್ತಮ ಕನ್ನಡ ಪ್ರಾಧ್ಯಾಪಕರಾಗಿ, ನಿರಂತರ ಅಧ್ಯಯನಶೀಲ ವಿದ್ವಾಂಸರಾಗಿ, ಪ್ರಥಮಶ್ರೇಣಿಯ ಸಂಶೋಧಕರಾಗಿ, ಶ್ರೇಷ್ಠ ಭಾಷಾವಿಜ್ಞಾನಿಯಾಗಿ ಅವರು ತಮ್ಮ ವಿದ್ವತ್ ಪ್ರತಿಭೆಯನ್ನು ಬೋಧನೆ ಮತ್ತು ಬರಹಗಳಲ್ಲಿ ಧಾರೆಯೆರೆದು ಕನ್ನಡ ಸಾರಸ್ವತ ಪ್ರಪಂಚವನ್ನು ಶ್ರೀಮಂತಗೊಳಿಸಿದವರು. ಶ್ರೀಯುತರು ಮೂಲತಃ ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಕನಮಡಿ ಗ್ರಾಮದವರು. ತಂದೆ ಗುರುಪಾದಯ್ಯ, ತಾಯಿ ರಾಚಮ್ಮ. ಹುಟ್ಟಿದ್ದು 1-5-1941. ಪ್ರಾಥಮಿಕ ಶಿಕ್ಷಣವನ್ನು ಕನಮಡಿಯಲ್ಲಿ, ನಂತರ ಶ್ರೀ ಶರಣಬಸವೇಶ್ವರ ಹೈಸ್ಕೂಲ್&zwnj;ನಲ್ಲಿ ಹಾಗೂ ಶ್ರೀಶರಣಬಸವೇಶ್ವರ ಕಲ
APA, Harvard, Vancouver, ISO, and other styles
49

ಪ್ರಕಾಶ, ಬಿ. "ಡಾ. ಬಿ.ಆರ್. ಅಂಬೇಡ್ಕರ್‌ ಮತ್ತು ಗಾಂಧೀಜಿ: ಜಾತಿ, ವರ್ಣ, ಹಿಂದುತ್ವ ಕುರಿತು ಅಭಿಪ್ರಾಯ-ಭಿನ್ನಾಭಿಪ್ರಾಯಗಳು". AKSHARASURYA JOURNAL 06, № 05 (2025): 141 to 150. https://doi.org/10.5281/zenodo.15504412.

Full text
Abstract:
ವರ್ತಮಾನದಲ್ಲಿ ಗಾಂಧೀಜಿ ಮತ್ತು ಡಾ. ಬಿ. ಆರ್, ಅಂಬೇಡ್ಕರ್&zwnj;&zwnj;ರವರನ್ನು ಅನುಸಂಧಾನ ಮಾಡಿದಾಗ ಇವರಿಬ್ಬರ ನಡುವಿನ ಜಾತಿ, ವರ್ಣ, ಹಿಂದುತ್ವ ಕುರಿತು ಅನೇಕ ಹುಸಿ ಚರ್ಚೆಗಳು, ಪ್ರಚಾರ, ಸೆಮಿನಾರ್&zwnj;ಗಳು, ಪತ್ರಿಕೆಗಳ ಮೂಲಕ ಬಿತ್ತರವಾಗುತ್ತಿವೆ. ದೇಶದ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಈ ಅಭಿಪ್ರಾಯ-ಭಿನ್ನಾಭಿಪ್ರಾಯಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ. ಈ ಲೇಖನದ ಮೂಲಕ ನಿಜವನ್ನು ಅರಿಯುವ ಮುಖೇನ ಹೊಸದೊಂದು ತಾತ್ವಿಕತೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.&nbsp;ಜಾತ್&zwnj;ಪತ್ ತೊಡಕ್ ಮಂಡಲಕ್ಕಾಗಿ ಅಂಬೇಡ್ಕರ್&zwnj; ಸಿದ್ದಪಡಿಸಿದ ಜಾತಿ ವಿಷಯ ಉಪನ್ಯಾಸವನ್ನು ಗಮನಿಸಿ ತಮ್ಮ ಹರಿಜನ ಪತ್ರಿಕೆಯಲ್ಲಿ ಗಾಂಧೀಜಿ ಅದನ್ನು ಉಲ್ಲೇಖಿಸುವ ಮೂಲಕ ಅಂಬೇಡ್ಕರ್&zwnj; ರವರನ್ನು ಇದು ಪ್ರಚಾ
APA, Harvard, Vancouver, ISO, and other styles
50

ಬಾಯ್. ಯು., ಡಾ ಶೈಲಾ. "ಮಹಿಳೆ-ಪುರಾಣ: ಸೃಜನಾತ್ಮಕತೆ-‘ಮಾಧವಿ’". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 30 вересня 2023, 9–21. http://dx.doi.org/10.59176/kjksp.v2i2.2298.

Full text
Abstract:
ಮಹಾಭಾರತ, ರಾಮಾಯಣದಂಥ ಪುರಾಣಗಳಲ್ಲಿ ಬಂದಿರುವ ಸ್ತ್ರೀಪಾತ್ರಗಳೆಲ್ಲ ಪುರುಷಪ್ರಧಾನ ಚಿಂತನೆಯ ಹಿನ್ನೆಲೆಯಲ್ಲೇ ರೂಪುಗೊಂಡಿರುವಂಥವು. ಕಪ್ಪು ಕಿವಿಯ ಬಿಳಿಯ ಕುದುರೆಗಳು: ಮಹಿಳಾ ಶೋಷಣೆಯ ಹಲವು ಮುಖಗಳ ಅನಾವರಣ ಈ ಭಾಗದಲ್ಲಿ ಹಲವು ಸ್ತ್ರೀಪಾತ್ರಗಳು ಕಾದಂಬರಿಯಲ್ಲಿ ಚಿತ್ರಿತವಾದ ಬಗೆಯನ್ನು ಪರಂಪರಾಗತ ನೆಲೆ ಎಂಬ ಉಪಶೀರ್ಷಿಕೆಯಲ್ಲಿ ಚರ್ಚಿಸಲಾಗಿದೆ. ಗಂಡು-ಹೆಣ್ಣು: ‘ಸ್ನೇಹ’ದ ನೆಲೆ ಎಂಬ ಉಪಶೀರ್ಷಿಕೆಯಲ್ಲಿ ಕಾದಂಬರಿಯ ನಾಯಕಿ ‘ಮಾಧವಿ’ ಹಾಗೂ ಆಕೆಯ ಬಾಲ್ಯದ ಸಖ ‘ಆದಿಮ’ರ ಪಾತ್ರಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಗಂಡು-ಹೆಣ್ಣು: ‘ಸ್ನೇಹ’ಕ್ಕೆ ಹೊಸಭಾಷ್ಯ ಎಂಬ ಭಾಗದಲ್ಲಿ ಅವರಿಬ್ಬರ ಸ್ನೇಹವನ್ನು ಸಮಾಜ ಸ್ವೀಕರಿಸಬೇಕಾದ ‘ಸ್ವಸ್ಥ ಮನೋಭಾವ’ದ ನಿರ್ಮಾಣದ ಅಗತ್ಯದ ಕುರಿತ ಚಿಂತನೆಯನ್ನು ಒಳಗೊಳಿಸಲಾಗಿದೆ. ದೈಹಿಕವಾದ ಕಾರಣಕ್ಕೆ ‘ಅಬಲೆ’ ಎಂದು ಸ
APA, Harvard, Vancouver, ISO, and other styles
We offer discounts on all premium plans for authors whose works are included in thematic literature selections. Contact us to get a unique promo code!