To see the other types of publications on this topic, follow the link: ಶೋಷಣೆ.

Journal articles on the topic 'ಶೋಷಣೆ'

Create a spot-on reference in APA, MLA, Chicago, Harvard, and other styles

Select a source type:

Consult the top 22 journal articles for your research on the topic 'ಶೋಷಣೆ.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Browse journal articles on a wide variety of disciplines and organise your bibliography correctly.

1

ಮೀನಾಕುಮಾರಿ, ಎಂ. "ಟಿ. ವಿ ಮಾಧ್ಯಮದಲ್ಲಿ ಮಹಿಳೆಯರ ಸ್ಥಾನಮಾನ". AKSHARASURYA 04, № 02 (2024): 137 to 144. https://doi.org/10.5281/zenodo.11525979.

Full text
Abstract:
ಟಿ. ವಿ ಮಾಧ್ಯಮದಲ್ಲಿ ಮಹಿಳೆಯ ಸ್ಥಾನಮಾನಗಳ ಕುರಿತು ಅನೇಕ ಚರ್ಚೆಗಳು ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಜನಸಾಮಾನ್ಯರ ಮೇಲೆ ಅತಿ ಹೆಚ್ಚು ಪ್ರಭಾವವನ್ನು ಬೀರುತ್ತಿವೆ. ಸುದ್ದಿಯಾಗಲಿ, ಮನರಂಜನೆಯಾಗಲಿ ಇನ್ನೂ ಮತ್ತಿತರ ವಿಷಯಗಳಾಗಲಿ ದಿನದಿಂದ ದಿನಕ್ಕೆ ಭಿನ್ನತೆಯನ್ನು ಪಡೆದುಕೊಳ್ಳುತ್ತಿವೆ. ಈ ಬೆಳವಣಿಗೆಯಲ್ಲಿ ಮಹಿಳೆಯ ಪಾತ್ರಗಳೂ ಸಹ ಬದಲಾಗುತ್ತಿವೆ. ಮಾಧ್ಯಮಗಳು ಮಹಿಳೆಯನ್ನು ಹೆಚ್ಚು ಹೆಚ್ಚು ಕಡೆ ಪ್ರಬಲೆಯಾಗಿ, ಧೈರ್ಯದ ಮೂರ್ತಿಯಾಗಿ, ಸಧೃಡೆಯಾಗಿ ತೋರಿಸುವ ಪ್ರಯತ್ನಗಳು ನಡೆಯುತ್ತಿವೆ. ಹಾಗೆಯೇ ಅದಕ್ಕೆ ವೈರುಧ್ಯವೆಂಬಂತೆ ಖಳನಾಯಕಿಯಾಗಿ, ಧೂರ್ತೆಯಾಗಿ, ಅಬಲೆಯಾಗಿ ಬಿಂಬಿಸುತ್ತಲೂ ಇವೆ. ಉದ್ಯೋಗಸ್ಥ, ವಿಚಾರವಂತ ಮಹಿಳೆಯರನ್ನು ಗಮನದಲ್ಲಿರಿಸಿಕೊಂಡು ಮಾಧ್ಯಮಗಳು ತಮ್ಮ ಕಾರ್ಯಕ್ರಮಗಳನ್ನು ರೂಪಿಸುವುದು ತೀರಾ ಕಡಿಮೆ. ಹಾಗೆ
APA, Harvard, Vancouver, ISO, and other styles
2

ಪ್ರವೀಣ, ಗುರುಶಾಂತ. "ಗೀತಾ ನಾಗಭೂಷಣ ಅವರ ಸಣ್ಣ ಕಥೆಗಳಲ್ಲಿ ತಾಯ್ತನ". AKSHARASURYA JOURNAL 05, № 03 Special Issue (2024): 33 to 39. https://doi.org/10.5281/zenodo.14246413.

Full text
Abstract:
ಗೀತಾ ನಾಗಭೂಷಣ ಅವರು ಮುಖ್ಯವಾಗಿ ಸ್ತ್ರೀ ನೆಲೆಯಲ್ಲಿ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ಅಸಾಹಯಕತೆ, ಶೋಷಣೆ, ತುಡಿತ, ಅವಮಾನ, ಸಮಸ್ಯೆಗಳನ್ನು ಎದುರಿಸುವ ಧೈರ್ಯ, ಸಾಧಿಸುವ ಛಲ, ಸಂಕಟ, ತಾಯ್ತನದ ಪ್ರೀತಿ ಹೀಗೆ ಅನೇಕ ಬಗೆಯ ಕಥೆಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಅವರ ಮಹಿಳಾ ಪರ ಚಿಂತನೆಗಳು ಅವರ ಕಥೆಗಲ್ಲಿ ವ್ಯಕ್ತವಾಗುತ್ತದೆ.
APA, Harvard, Vancouver, ISO, and other styles
3

ಮಹದೇವಸ್ವಾಮಿ, ಎಂ., та ಪ್ರಭುಸ್ವಾಮಿ ಬಿ. "ಅಡುಗೂಲಜ್ಜಿ: ಸ್ತ್ರೀ ಸಂವೇದನೆಯ ನೆಲೆಯಲ್ಲಿ". AKSHARASURYA 04, № 02 (2024): 71 to 86. https://doi.org/10.5281/zenodo.11525845.

Full text
Abstract:
ನಮ್ಮ ಸಮಾಜವನ್ನು ಮೇಲು-ಕೀಳು, ಬಡವ-ಬಲ್ಲಿದ, ಸ್ತ್ರೀ-ಪುರುಷ ಎಂಬ ಅಸಮಾನತೆಗಳು ಹಿಂದಿನಿಂದಲೂ ಕಾಡುತ್ತಿವೆ. ಇವು ಕಾಲದಿಂದ ಕಾಲಕ್ಕೆ ಬದಲಾಗಿ ಬೇರೆ ಬೇರೆ ರೂಪ ತಾಳಿ ಮುಂದುವರಿಯುತ್ತಿವೆ. ಇವು ನಿರ್ಮೂಲನೆಯಾಗಬೇಕು, ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು. ಅನಾದಿ ಕಾಲದಿಂದಲೂ ನಡೆಯುತ್ತಿರುವ ಸ್ತ್ರೀ ಮೇಲಿನ ಶೋಷಣೆ, ದಬ್ಬಾಳಿಕೆಗಳು ನಿಲ್ಲಬೇಕು. ಸ್ತ್ರೀಯು ಪುರುಷನಷ್ಟೇ ಸಮರ್ಥಳು, ಅವಳನ್ನು ಅವಕಾಶ ವಂಚಿತಳನ್ನಾಗಿ ಮಾಡಬಾರದು. ಸ್ತ್ರೀ ಅಬಲೆಯಲ್ಲ ಸಬಲಳು ಎಂಬುದನ್ನು ಎಚ್. ಡುಂಡಿರಾಜ್ ಅವರು ತಮ್ಮದೇ ಹಾಸ್ಯ ಧಾಟಿಯ ಮೂಲಕ ಅಡುಗೂಲಜ್ಜಿ ನಾಟಕದಲ್ಲಿ ಚಿತ್ರಿಸಿದ್ದಾರೆ. 
APA, Harvard, Vancouver, ISO, and other styles
4

ವಾಣಿ, ಬಿ. ಎನ್. "ನವೋದಯ ಮಹಿಳಾ ಕಥೆಗಳಲ್ಲಿ ಸ್ತ್ರೀನಿಷ್ಟತೆ". AKSHARASURYA JOURNAL 05, № 03 Special Issue (2024): 61 to 67. https://doi.org/10.5281/zenodo.14246534.

Full text
Abstract:
ನವೋದಯ ಕಾಲಘಟ್ಟದ ಪ್ರಮುಖ ಲೇಖಕಿಯರಾದ ಕೊಡಗಿನ ಗೌರಮ್ಮ, ಕಲ್ಯಾಣಮ್ಮ, ಸರಸ್ವತಿ ಬಾಯಿ ರಾಜವಾಡೆ(ಗಿರಿಬಾಲೆ), ಶ್ಯಾಮಲಾ ಬೆಳಗಾವಂಕರ ಮೊದಲಾದ ಲೇಖಕಿಯರ ಕತೆಗಳಲ್ಲಿ ವ್ಯಕ್ತವಾಗಿರುವ ಸ್ತ್ರೀಪರ ನಿಲುವುಗಳನ್ನು ಕುರಿತಿದೆ. ಗೌರಮ್ಮ ಅವರ ಪುರ್ನವಿವಾಹ ಕತೆಯ ನಾಯಕಿ ರಾಜಿಯ ಮನಸ್ಸಿನಲ್ಲಿರು ಪುರುಷ ನಡವಳಿಕೆಯ ಬಗೆಗಿನ ಅಸಹನೆ, ʼವಾಣಿಯ ಸಮಸ್ಯೆʼ ಕತೆಯಲ್ಲಿ ಇಂದುವಿಯ ನೈತಿಕ ಚೌಕಟ್ಟು, ಹೋಗಿಯೇ ಬಿಟ್ಟಿದ್ದ ಕತೆಯಲ್ಲಿನ ಅಂರ್ತಧರ್ಮೀಯ ಪ್ರೇಮದ ಕರಾಳತೆ, ಗಿರಿಬಾಲೆ ಅವರ ʼಅವಳ ಉದ್ದಾರʼ ಕತೆಯಲ್ಲಿ ಹೆಣ್ಣಿನ ಕೌಟುಂಬಿಕ ಹಾಗೂ ಸಾಮಾಜಿಕ ಶೋಷಣೆ ಪರಿ, ಕಲ್ಯಾಣಮ್ಮ ಅವರ ʼನನ್ನ ಧನವ ನನಗೆ ತಾʼ ಕತೆಯಲ್ಲಿನ ಮಾತೃ ವಾತ್ಸಲ್ಯ, ʼಒಲ್ಲದ ಹೆಂಡತಿʼ ಕತೆಯಲ್ಲಿ ಮಕ್ಕಳ್ಳನ್ನು ಬೆಳೆಸುವಲ್ಲಿ ತಾಯಿಯ ಹೊಣೆ ಎಷ್ಟು ಮುಖ್ಯವಾದದ್ದು, ಶ್ಯಾಮಲಾ ಅವರ ʼಕಂತಿಯ ದೇಶಾಂತ
APA, Harvard, Vancouver, ISO, and other styles
5

ರಾಘವೇಂದ್ರ, ಬಿ. ಎ. ದ್ರಾಕ್ಷಿ, та ಹೆಚ್‌. ವಿಶ್ವಮಾನವ ವಿಜಯಕುಮಾರ. "ಚೆನ್ನಣ್ಣ ವಾಲೀಕಾರ ಅವರ ಕಥೆಗಳಲ್ಲಿ ಪ್ರತಿರೋಧದ ನೆಲೆ". AKSHARASURYA 04, № 02 (2024): 98 to 112. https://doi.org/10.5281/zenodo.11525890.

Full text
Abstract:
ಕಥೆ ಹೇಳುವುದು ಮತ್ತು ಕೇಳುವುದು ಮನುಷ್ಯನ ಆಸಕ್ತಿ ಮತ್ತು ಹವ್ಯಾಸಿ ಎರಡು ಹೌದು. ಕೆಲವು ವರ್ಷಗಳ ಹಿಂದೆ ದೂರದರ್ಶದನಂತಹ ಮಾಧ್ಯಮಗಳು ಬರುವುದಕ್ಕೆ ಮುಂಚೆ ಭಾರತದಂತಹ, ಕರ್ನಾಟಕದಂತಹ ಹಳ್ಳಿಗಳಲ್ಲಿ ಹಿರಿಯರು ಹೇಳುವ ಕತೆಗಳೇ ಮನರಂಜನೆಯ ತಾಣಗಳು ಆಗಿದ್ದವು. ನನಗೆ ನೆನಪಿರುವ ಹಾಗೆ ಚಿಕ್ಕವನಿರುವಾಗ ನಮ್ಮ ಅಜ್ಜಿಯೂ ಹಲವೂ ಕಥೆಗಳನ್ನು ಹೇಳಿ ಕಥೆ ಎಂದರೆ ಏನು ಎಂಬುದನ್ನು ಪರಿಚಯಿಸಿದ್ದಳು. ಅಷ್ಟೇ ಅಲ್ಲದೆ ಅವರು ಹೇಳುವ ಕಥೆಗಳಲ್ಲಿ ಜೀವನದ ಬದುಕಿನ ಅನುಭವದ ಸತ್ಯಾಸತ್ಯಗಳನ್ನು ಒಳಗೊಂಡಿರುವಂತಹ ಮೌಲ್ಯಯುತವಾದ, ನೀತಿಯುತವಾದ ಸಂದೇಶಗಳನ್ನು ಸಾರುವ ಕಥೆಗಳಾಗಿದ್ದವು. ಇಂತಹ ಕಥೆಗಳನ್ನು ಹಿರಿಯರಿಂದ ಕೇಳಿ ಆಧುನಿಕ ಕಥಾ ಸಾಹಿತ್ಯದಲ್ಲಿ ಹಲವಾರು ಕಥೆಗಳನ್ನು ಬರೆದ ಕಥೆಗಾರರು ಕನ್ನಡ ಸಾಹಿತ್ಯದಲ್ಲಿ ಕಂಡು ಬರುತ್ತಾರೆ. ಅವರಲ್ಲಿ ಚೆನ್ನಣ್ಣ ವಾಲೀಕಾರರು
APA, Harvard, Vancouver, ISO, and other styles
6

ನಾಗೇಂದ್ರಪ್ಪ, ಶಿವಶರಣಪ್ಪ. "ಕನ್ನಡ ಕಾವ್ಯಕ್ಕೆ ಬಂಜಗೆರೆ ಜಯಪ್ರಕಾಶರವರ ಕೊಡುಗೆ". AKSHARASURYA JOURNAL 05, № 04 (2024): 108 to 114. https://doi.org/10.5281/zenodo.14289922.

Full text
Abstract:
ಬಂಜಗೆರೆ ಜಯಪ್ರಕಾಶರವರು ಕರ್ನಾಟಕದ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರೇ ಹೇಳಿದಾಗೆ ಬಿ.ಎ. ತರಗತಿಯಿಂದಲೇ ಕಾವ್ಯ ಕ್ವೇತ್ರದಲ್ಲಿ ಕಾವ್ಯಾಸಕ್ತಿ ಬೆಳೆಸಿಕೊಂಡವರು. ತಾವು ಕವಿತೆ ಬರೆಯುತ್ತ ಇನ್ನೊಬ್ಬರನ್ನು ಬರೆಯುವುದಕ್ಕೆ ಪ್ರೇರಣೆ ನೀಡಿದ ಕವಿ. ಕನ್ನಡ ಸಾಹಿತ್ಯದ ಸಾರಸ್ವತ ಲೋಕದಲ್ಲಿ ಅನೇಕ ಕವಿಗಳು ಆಯಾ ಕಾಲಘಟ್ಟದಲ್ಲಿ ಕಾವ್ಯಗಳ ಮೂಲಕ ಹೆಸರುವಾಸಿಯಾಗಿದ್ದರೆ. ಎಪ್ಪತ್ತರ ದಶಕದ ಕಾಲಘಟ್ಟದ ವಸ್ತುವಿನ ನಿರ್ಮಾಣದಲ್ಲಿ ಸ್ವತಂತ್ರವಾದ ಚಿಂತನೆಗಳು ವಾಸ್ತವ ನೆಲೆಯಲ್ಲಿ ಜೀವಧ್ವನಿಯಾಗಿ ಮಿಡಿದಿರುವುದು ಕಾಣುತ್ತೇವೆ. ಈ ಮಿಡಿಯುವಿಕೆಯಲ್ಲಿ ಸಾಮಾಜಿಕ ನ್ಯಾಯದ ಭಾವನೆಗಳನ್ನು ಹೊರಹಾಕಲು ಪರಿಪಕ್ವತೆಯ ಕಾಲವೆಂದು ಗಮನಿಸುವ ಅಗತ್ಯತೆಯಿದೆ. ಒಬ್ಬ ಕವಿ ಅಥವಾ ಲೇಖಕ ತನ್ನ ಬದುಕಿನ ಮೈಲುಗಲ್ಲುಗಳನ್ನು ದಾಟಬೇಕಾದರೆ ಆತನಿಗೆ ತಾನು ತಲುಪಬೇಕಾದ ಮಾರ್ಗದ ಕಡೆ
APA, Harvard, Vancouver, ISO, and other styles
7

ಶ್ರೀಧರ್, ಆರ್. "ಸಿದ್ಧಲಿಂಗಯ್ಯನವರ ಕಾವ್ಯ: ಸಾಮಾಜಿಕ ಕ್ರೋಧದ ನೆಲೆಯಿಂದ ಆಧ್ಯಾತ್ಮಿಕ ಅನ್ವೇಷಣೆಯ ಕಡೆಗೆ". AKSHARASURYA JOURNAL 05, № 06 (2025): 01 to 07. https://doi.org/10.5281/zenodo.14788682.

Full text
Abstract:
ಕವಿ ಸಿದ್ಧಲಿಂಗಯ್ಯನವರ ಮೊದಲ ʼಹೊಲೆಮಾದಿಗರ ಹಾಡುʼ ಕವನ ಸಂಕಲನದಿಂದ ಅವರ ಕಡೆಯ ʼಬೋಧಿವೃಕ್ಷದ ಕೆಳಗೆʼ ಸಮಗ್ರ ಕಾವ್ಯದ ಶೀರ್ಷಿಕೆಗಳನ್ನು ರೂಪಕದಂತೆ ಪರಿಭಾವಿಸುವುದಾದರೆ, ಸಮಾಜದಲ್ಲಿನ ಶೋಷಣೆ, ತಾರತಮ್ಯ, ಅಸಮಾನತೆಯಿಂದ ಕನಲಿ ಸಂಘರ್ಷದ ಪ್ರತಿಕ್ರಿಯೆ ಹಾಗೂ ಕೀಳರಿಮೆಯಿಂದ ನರಳುತ್ತಿದ್ದ ವಿಸರ್ಜಿತ ಲೋಕದಿಂದ ಹುಟ್ಟಿದ ಬಂಡಾಯದಂತೆ ಸ್ಫೋಟಿಸಿದ ಅವರ ಕವಿತೆಗಳು ಸಮ ಸಮಾಜದ ಹಂಬಲವಾದ ಸಾಮರಸ್ಯದ ಕಡೆಗೆ ಸಾಗಿರುವ ಸೃಜನಶೀಲ ಪಯಣದ ವಿಕಾಸ ಎಂದು ವ್ಯಾಖ್ಯಾನಿಸಬಹುದು. ಇಲ್ಲಿ ಆತ್ಯಂತಿಕ ತೀವ್ರತೆಯಿಂದ ಹುಟ್ಟಿದ ಬಂಡಾಯ ಸಮುದಾಯದಲ್ಲಿ ಸ್ವಾಭಿಮಾನ ಹಾಗೂ ಮಾನವ ಘನತೆಯನ್ನು ಮೂಡಿಸುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ಸಮಷ್ಟಿ ಬದುಕನ್ನು ಕುರಿತ ಗಾಢ ವಿಷಾದ ಈ ಅನ್ಯಾಯದ ವ್ಯವಸ್ಥೆ ಬದಲಾಗಬೇಕೆಂಬ ಹಂಬಲ ಇಲ್ಲಿನ ಕವಿತೆಗಳು ಪ್ರತಿಪಾದಿಸುವ ನಿಲುವು.ಸ
APA, Harvard, Vancouver, ISO, and other styles
8

ಹೇಮಲತ, ಹೆಚ್. ಆರ್. "ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಮಹಿಳಾ ಸಾಮಾಜಿಕ ನ್ಯಾಯತತ್ವ: ಒಂದು ಅವಲೋಕನ". AKSHARASURYA JOURNAL 03, № 04. SPECIAL ISSUE. (2024): 157 to 169. https://doi.org/10.5281/zenodo.10929989.

Full text
Abstract:
ಹಿಂದೂ ಧರ್ಮದಲ್ಲಿ ಶೂದ್ರ ಮತ್ತು ದಲಿತರ ಶೋಷಣೆ ಆದಷ್ಟೇ ಮಹಿಳೆಯರ ಶೋಷಣೆಯೂ ಆಗಿದೆ. ಹಿಂದೂ ಸಮಾಜದಲ್ಲಿ ಮಹಿಳೆಯು ಅತಿ ಕೀಳು ಮಟ್ಟದ ಸ್ಥಾನವನ್ನುಹೊಂದಿದ್ದಾಳೆ. ಜೀವನದ ಯಾವುದೇ ಕ್ಷೇತ್ರದಲ್ಲೂ ಮಹಿಳೆ ಪ್ರಗತಿ ಹೊಂದಬಾರದೆಂಬ ನಿರ್ಬಂಧನೆಗಳನ್ನು ಹೇರಲಾಗಿತ್ತು. ಮಹಿಳೆಯು ಕೇವಲ ಪುರುಷನ ಆಸೆ ಆಕಾಂಕ್ಷೆಗಳನ್ನು ತೀರಿಸುವ ಒಂದು ಸುಂದರವಾದ ವಸ್ತು ಮತ್ತು ಮಕ್ಕಳನ್ನು ಹೆರುವ ಯಂತ್ರವೆಂದು ಪರಿಗಣಿಸಲಾಗಿತ್ತು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಕೇವಲ ಗುಲಾಮಳಂತೆ ಮನೆಗೆಲಸ ಮಾಡಿ ಕುಟುಂಬದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಅವಳ ಆದ್ಯ ಕರ್ತವ್ಯವೆಂದು ಭಾವಿಸಲಾಗಿತ್ತು. ಯಾವುದೇ ಕಾರಣಕ್ಕೂ ಮಹಿಳೆ ಹೊರಗಿನ ಸಮಾಜದಲ್ಲಿ ಇತರರಂತೆ ಧೈರ್ಯ ಮತ್ತು ಗೌರವದಿಂದ ಭಾಗವಹಿಸುವಂತಿರಲಿಲ್ಲ. ಹಾಗೇನಾದರೂ ಮಾಡಿದಿದ್ದರೆ ಅವಳು ಇಡೀ ಪುರುಷ ವರ್ಗ ಮತ್ತು
APA, Harvard, Vancouver, ISO, and other styles
9

ನಸ್ರೀನ್, ಬಾನು. "ಕನ್ನಡ ಅನುವಾದಿತ ಮಹಿಳಾ ಆತ್ಮಕಥೆಗಳು: ವಿವಿಧ ಆಯಾಮಗಳು". AKSHARASURYA 05, № 01 (2024): 43 to 49. https://doi.org/10.5281/zenodo.13870664.

Full text
Abstract:
ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದರೆ ಆತ್ಮಕಥೆಗಳನ್ನು ಕಟ್ಟಿಕೊಟ್ಟವರು ಬಹಳ ವಿರಳ. ಒಬ್ಬ ಮಹಿಳೆ ತನಗಿರುವ ಮಿತಿಗಳನ್ನು ಉಲ್ಲಂಘಿಸಿ ಸ್ಥಾಪಿತ ವ್ಯವಸ್ಥೆಯೊಂದು ಒಡ್ಡುವ ಸವಾಲುಗಳಿಗೆ ಎದುರಾಗುತ್ತಲೆ ತನ್ನ ಆತ್ಮವೃತ್ತಾಂತವನ್ನು ಸಾರ್ವಜನಿಕ ನೋಟಕ್ಕೆ ತೆರೆದಿಡುವ ದಿಟ್ಟತನಕ್ಕೆ ಬಹಳ ಸಮಯವೇ ಬೇಕಾಯಿತು. ಹೀಗೆ ಆರಂಭವಾದ ಮಹಿಳಾ ಆತ್ಮಕಥನಗಳೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೆ ಆದ ಛಾಪನ್ನು ಮೂಡಿಸುತ್ತಿವೆ.  ಆತ್ಮಕಥೆ ಎಂದರೆ ತಮ್ಮ ಆತ್ಮ ವೃತ್ತಾಂತವನ್ನು ತಾವೆ ದಾಖಲಿಸುವ ಪ್ರಕ್ರಿಯೆ, ಮಹಿಳಾ ಆತ್ಮಕಥೆಗಳಲ್ಲಿ ಕೆಲವೊಮ್ಮೆ ತಮ್ಮ ಆತ್ಮ ವೃತ್ತಾಂತವನ್ನು ಸ್ವ್ವಗತದ ಮಾದರಿಯಲ್ಲಿ ಬರೆದಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಭಾರತದಂತಹ ಸಂಪ್ರದಾಯಿಕ ಸಮಾಜ ಮಹಿಳೆಗೆ ಕೆಲವು ಚೌಕಟ್ಟುಗಳನ್ನು ನಿರ
APA, Harvard, Vancouver, ISO, and other styles
10

ಚಂದ್ರಕಲಾ, ಹೆಚ್. ಆರ್. "ಹಿಜ್ರಾ ಸಮುದಾಯದ ರೇವತಿ ಆತ್ಮಕಥೆಯ ನೆರಳುಗಳ ಜಾಡು". AKSHARASURYA JOURNAL 03, № 04. SPECIAL ISSUE. (2024): 148 to 156. https://doi.org/10.5281/zenodo.10929908.

Full text
Abstract:
ಕನ್ನಡದಲ್ಲಿ ಈಗೀಗ ಅನುವಾದಿತ ಆತ್ಮಕಥನಗಳ ಸಂಖ್ಯೆ ಹೆಚ್ಚುತ್ತಿವೆ. ಕನ್ನಡದ ಆತ್ಮಕಥನಗಳ ಮಾದರಿಗೆ ಇದೊಂದು ವಿಶಿಷ್ಟ ಸೇರ್ಪಡೆ ಏಕೆಂದರೆ ಬಹುಪಾಲು ಆತ್ಮಕಥನಗಳಿಗೆ ಆತ್ಮವಿರದೆ, ಆತ್ಮವಂಚನೆಯಿಂದ ಕೂಡಿರುತ್ತವೆ. ರೇವತಿಯ ಆತ್ಮಕಥೆ ‘ಬದುಕು ಬಯಲು’ ಕೃತಿಯಲ್ಲಿ ಬಾಲ್ಯದ ಅನುಭವಗಳ ಗಟ್ಟಿತನ ಮತ್ತು ಪ್ರಾಮಾಣಿಕತೆ ಬೆಳೆಯುತ್ತಾ ಪಕ್ವವಾಗುತ್ತಾ ಸಾಗಿ ಈ ಲೋಕವನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಿ ರೇವತಿಯ ಆತ್ಮಘನತೆಯನ್ನು ಹೆಚ್ಚಿಸುತ್ತದೆ. ಪರಮಾತ್ಮನನ್ನು ದರ್ಶಿಸುತ್ತದೆ. ದೇಹದ ಅಂಗಾಂಗಗಳ ಮೂಲಕ ಗಂಡು, ಹೆಣ್ಣು ಎಂದು ಗುರುತಿಸಲಾಗುತ್ತದೆ. ಬದುಕು ಗಂಡು-ಹೆಣ್ಣೆಂಬ ದ್ವಿಲಿಂಗದ ಸುತ್ತವೇ ಹೆಣೆದುಕೊಂಡಿದೆ. ಆದರೆ ಗಂಡಿನೊಳಗಿರುವ ಹೆಣ್ಣಿನ ಭಾವನೆ, ನಡವಳಿಕೆಯನ್ನು ಗುರುತಿಸುವುದು ಹೇಗೆಂಬ ಪ್ರಶ್ನೆಗೆ ಈ ಕೃತಿ ಉತ್ತರದಾಯಿಯಾಗಿದೆ.
APA, Harvard, Vancouver, ISO, and other styles
11

ರಮೇಶ್. "ನಿರಂಜನರ ಬರವಣಿಗೆಯಲ್ಲಿ ಮಾರ್ಕ್ಸ್‌ವಾದ". AKSHARASURYA 06, № 02 (2025): 75 to 83. https://doi.org/10.5281/zenodo.15124060.

Full text
Abstract:
ನಿರಂಜನರು ಸಾಹಿತ್ಯವಲಯದಲ್ಲಿ ಉಂಟುಮಾಡಿದ ಸಾಮಾಜಿಕ ಹೋರಾಟ ಬಹಳ ಮುಖ್ಯವಾದುದು. ಸಾಹಿತ್ಯ ಮತ್ತು ಬದುಕನ್ನು ಏಕ ರೀತಿಯಲ್ಲಿ ಕಂಡುಕೊಂಡವರು. ಸಾಮಾಜಿಕ ಬದ್ಧತೆಯನ್ನು ಕೊನೆಯವರೆಗೂ ಉಳಿಸಿಕೊಂಡವರು. ಬಾಲ್ಯದಲ್ಲಿ ಗಾಂಧಿವಾದಕ್ಕೆ ಮನಸೋತು, ಅನಂತರ ಸಮಾಜವಾದದತ್ತ ಒಲವು ಬೆಳಸಿಕೊಂಡರು. ಹರೆಯದಲ್ಲಿ ಸಮತಾವಾದದ ಸಿದ್ದಾಂತಗಳಿಂದ ಪ್ರಭಾವಿತರಾಗಿ ಮಾರ್ಕ್ಸ್‌ವಾದಿಯಾಗಿ ಕಮ್ಯೂನಿಸ್ಟ್ ಪಕ್ಷದ ಸಕ್ರಿಯ ಸದಸ್ಯರಾಗಿ ದುಡಿದವರು ನಿರಂಜನರು. ʼಸ್ವಾತಂತ್ರ್ಯ ಚಳವಳಿ, ಏಕೀಕರಣ ಚಳವಳಿ, ಹಿಂದೂ ಸಾಂಸ್ಕೃತಿಕ ಪುನರುಜ್ಜೀವನ ಚಳವಳಿಗಳು ಸೊಕ್ಕೇರಿ ಒಟ್ಟಿಗೆ ಕ್ರಿಯಾನಿರತವಾಗಿದ್ದಾಗ, ಮಾರ್ಕ್ಸ್‌ವಾದದಿಂದ ಆಕರ್ಷಿತವಾಗಿ, ಅಖಿಲಭಾರತ ಚಳವಳಿಯ ಒಂದು ಭಾಗವಾಗಿ ಕನ್ನಡ ಪ್ರಗತಿಶೀಲ ಚಳವಳಿಯು ಹುಟ್ಟಿಕೊಂಡಿತು. ಶಿವರಾಯರು ಬೆಳೆಬೆಳೆಯುತ್ತಾ ಗಾಂಧೀ ಪ
APA, Harvard, Vancouver, ISO, and other styles
12

ಶಿವಾನಂದ, ಹಂಚಿನಾಳ. "ಜೋಕುಮಾರ ಸ್ವಾಮಿ: ಹೆಣ್ಣುತನದ ಸಾರ್ಥಕತೆಯ ನೀರಿಕ್ಷೆಯಲ್ಲಿ". AKSHARASURYA JOURNAL 05, № 06 (2025): 105 to 109. https://doi.org/10.5281/zenodo.14788766.

Full text
Abstract:
ಚಂದ್ರಶೇಖರ ಕಂಬಾರರು ನವ್ಯ ಸಾಹಿತ್ಯ ಸಂದರ್ಭದಲ್ಲಿ ಒಬ್ಬ ಮುಖ್ಯ ಕವಿಯಾಗಿ, ನಾಟಕಕಾರರಾಗಿ ಒಟ್ಟಿನಲ್ಲಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡವರು. ಕನ್ನಡಕ್ಕೆ 8ನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹಿರಿಮೆ ಇವರದು. ಸಿರಿಸಂಪಿಗೆ ನಾಟಕಕ್ಕೆ 1990ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಇವರು ಕರಿಮಾಯಿ, ಜಿಕೆ ಮಾಸ್ತರ್ ಅವರ ಪ್ರಣಯ ಪ್ರಸಂಗ, ಸಿಂಗಾರವ ಮತ್ತು ಅರಮನೆ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ಚಾಳೇಶ್, ನಾಯಿಕತೆ, ಕಾಡು ಕುದುರೆ ಇದು ಚಲನಚಿತ್ರವಾಗಿ ಪ್ರಸಿದ್ಧಿ ಪಡೆದಿದೆ. ಜೋಕುಮಾರಸ್ವಾಮಿ ಇದು ಕಂಬಾರರ ಸಾಂಸ್ಕೃತಿಕ ಮುಖಮುಖಿಯಾಗಿಸುವ ಈ ಮಣ್ಣಿನ ಸೊಗಡನ್ನು ಚರ್ಚಿಸುವ ಮಹತ್ವದ ಕೃತಿಯಾಗಿದೆ. ಹೆಣ್ಣಿನ ಸಾರ್ಥಕತೆ ಅವಳ ಲೈಂಗಿಕ ಆಸೆ ಆಕಾಂಕ್ಷೆಗಳು ಈಡೇರಿಸುವಲ್ಲಿ ಸಾಂಪ್ರದಾಯಿಕ ಚೌಕಟ್ಟಿನ ಬಂಧಿಯಾಗುವುದು. ಪ್
APA, Harvard, Vancouver, ISO, and other styles
13

ಸುಚಿತ್ರಾ, ಟಿ., та ಕೆ.ಎಸ್. ಗಿರಿಜಾ. "ಡಾ. ಬಿ.ಆರ್. ಅಂಬೇಡ್ಕರ್‌ ಅವರ ಜಾತಿ ನಿರ್ಮೂಲನೆ: ಒಂದು ವಿಶ್ಲೇಷಣೆ". AKSHARASURYA JOURNAL 06, № 05 (2025): 226 to 232. https://doi.org/10.5281/zenodo.15504688.

Full text
Abstract:
ಡಾ. ಬಿ.ಆರ್. ಅಂಬೇಡ್ಕರ್ ಅವರ ಜಾತಿ ನಿರ್ಮೂಲನೆ (Annihilation of Caste) ಕೃತಿ ಭಾರತೀಯ ಜಾತಿ ವ್ಯವಸ್ಥೆಯ ವಿರುದ್ಧ ನೀಡಿದ ಅತ್ಯಂತ ಪ್ರಬಲ ವಿಮರ್ಶೆಗಳಲ್ಲಿ ಒಂದಾಗಿದೆ. 1936ರಲ್ಲಿ ಜಾತ್ ಪಾತ್ ತೋಡಕ್ ಮಂಡಳಿಗೆ ಈ ಭಾಷಣವನ್ನು ನೀಡಲು ಉದ್ದೇಶಿಸಲಾಗಿತ್ತಾದರೂ, ಸಂಘಟಕರು ಅದರ ವಿಷಯವನ್ನು ತೀವ್ರವಾದದ್ದು ಎಂದು ಪರಿಗಣಿಸಿ ಅದನ್ನು ನಿರಾಕರಿಸಿದರು. ನಂತರ ಅಂಬೇಡ್ಕರ್ ಅವರು ಈ ಭಾಷಣವನ್ನು ಸ್ವತಃ ಪುಸ್ತಕ ರೂಪದಲ್ಲಿ ಪ್ರಕಟಿಸಿದರು. ಈ ಪ್ರಬಂಧದಲ್ಲಿ ಅಂಬೇಡ್ಕರ್ ಅವರ ಜಾತಿ ಸಂಬಂಧಿತ ಆಲೋಚನೆಗಳ ವಿಶ್ಲೇಷಣೆ, ಹಾಗೂ ಜಾತಿ ನಿರ್ಮೂಲನೆಗಾಗಿ ಅವರು ನೀಡಿದ ಸಂವಿಧಾನಾತ್ಮಕ ಕೊಡುಗೆಗಳನ್ನು ವಿಮರ್ಶಾತ್ಮಕವಾಗಿ ಚರ್ಚಿಸಲಾಗಿದೆ. ಜೊತೆಗೆ, ಈ ಕೃತಿಯ ಪ್ರಸ್ತುತತೆ ಮತ್ತು ಸಮಕಾಲೀನ ಜಾತಿ ರಾಜಕೀಯದ ಮೇಲೆ ಇದರ ಪರಿಣಾಮವನ್ನೂ ಅವಲೋಕಿಸಲಾಗುತ್ತದೆ.
APA, Harvard, Vancouver, ISO, and other styles
14

ಗಣೇಶ. "ಧರ್ಮ ಮತ್ತು ಅಂಬೇಡ್ಕರ್‌". AKSHARASURYA JOURNAL 06, № 05 (2025): 46 to 53. https://doi.org/10.5281/zenodo.15504212.

Full text
Abstract:
ಅಂಬೇಡ್ಕರ್‌ ಭಾರತದ ಒಬ್ಬ ಶ್ರೇಷ್ಠ ಪ್ರತಿಭಾವಂತ ಬುದ್ಧಿ ಜೀವಿ ಮತ್ತು ಮೇಧಾವಿ. ಪ್ರಪಂಚದ ಅಪ್ರತಿಮ ಚಿಂತಕರ ಸಾಲಿನಲ್ಲಿ ನಿಲ್ಲಬಲ್ಲ, ಮೇರು ವ್ಯಕ್ತಿತ್ವವುಳ್ಳ ಚಿಂತನಶೀಲ ವ್ಯಕ್ತಿ. ಅವರು ಜಗತ್ತಿನ ಎಲ್ಲಾ ಧಾರ್ಮಿಕ ಗ್ರಂಥಗಳನ್ನು ಆಸಕ್ತಿ ಮತ್ತು ಕುತೂಹಲದಿಂದ ಅಮೂಲಾಗ್ರವಾಗಿ ಅಧ್ಯಯನ ಮಾಡಿದ್ದರು. ಧರ್ಮವನ್ನು ಕುರಿತಂತೆ ರಾಬರ್ಟ್ ಸನ್ ಸ್ಮಿತ್ ಅವರ ಪರಿಕಲ್ಪನೆಯನ್ನು ಅಂಬೇಡ್ಕರ್‌ ಹಿಂದೂ ಧರ್ಮದ ತತ್ವಜ್ಞಾವನ್ನು ಕುರಿತ ತಮ್ಮ ಕೃತಿಯಲ್ಲಿ ಹೀಗೆ ಉಲ್ಲೇಖಿಸಿದ್ದಾರೆ. ಧರ್ಮ ಯಾವುದೇ ಕಾರಣಕ್ಕೂ ದುರ್ಬಲರನ್ನು ಶೋಷಿಸುವ ಅಸ್ತ್ರವಾಗಬಾರದು. ಹಿಂದೂ ಧಾರ್ಮಿಕ ವ್ಯವಸ್ಥೆಯಲ್ಲಿ ದೈವಿಕ ಪ್ರಭುತ್ವದ ಲಿಖಿತ ಸಂವಿಧಾನ ಮತ್ತು ಪುರೋಹಿತಶಾಹಿಯ ಅಘೋಷಿತ ಪ್ರಾಬಲ್ಯವನ್ನು ಕಾಪಾಡಿಕೊಂಡು ಬರಲಾಗಿದೆ. ಈ ಧರ್ಮದಲ್ಲಿ ಬಹುಸಂಖ್ಯಾತ ಹಿಂದುಳಿದ
APA, Harvard, Vancouver, ISO, and other styles
15

ಲಕ್ಷ್ಮೀ, ಎಲ್. ಪೂಜಾರಿ. "ವಚನ ಚಳವಳಿ ಮತ್ತು ಮಹಿಳೆ". AKSHARASURYA JOURNAL 06, № 05 (2025): 54 to 59. https://doi.org/10.5281/zenodo.15504231.

Full text
Abstract:
ವಚನ ಸಾಹಿತ್ಯ ಹನ್ನೆರಡನೇ ಶತಮಾನದಲ್ಲಿ ಹುಟ್ಟಿಕೊಂಡಂತಹ ವಿಶಿಷ್ಟ ಸಾಹಿತ್ಯದ ಪ್ರಕಾರ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವುದನ್ನು ಕಾಣುತ್ತೇವೆ. ಈ ಯುಗವನ್ನು ಸಾಮಾಜಿಕ ಪರಿವರ್ತನೆ ಯುಗ ಎಂದು ಕರೆಯುವಷ್ಟರಮಟ್ಟಿಗೆ ಬದಲಾವಣೆ ಆಗಿರುವುದನ್ನು ಕಾಣುತ್ತೇವೆ. ವಚನ ಎಂದರೆ ಮಾತು, ಉಕ್ತಿ ಎಂಬ ಅರ್ಥವನ್ನು ಹೊಂದಿದ್ದು ಗದ್ಯ ಪದ್ಯಗಳ ರೂಪದಲ್ಲಿ ಕಂಡುಬಂದಿದೆ ಮಹಿಳೆಯರ ಸಮಾನತೆಗೆ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ.ಶತಮಾನಗಳಿಂದ ಅಸ್ಪೃಳಾಗಿದ್ಧ ಅದೃಶ್ಯಳಾಗಿದ್ಧ ಹೆಣ್ಣನ್ನು ವಚನಕಾರರು ಮಾನವೀಯ ದೃಷ್ಟಿಯಿಂದ ಕಂಡಿದ್ದಾರೆ. ಪುರುಷನ ಹಾಗೆ ಮಹಿಳೆಗೆ ಸಮಾನವಾದ ಸ್ಥಾನವನ್ನು ನೀಡುವ ಮೂಲಕ 12ನೇ ಶತಮಾನದಲ್ಲಿ ವಚನಕಾರರು ಮಾಡಿದ ಒಂದು ಬೃಹತ್ ಬದಲಾವಣೆ ಇಡೀ ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿದೆ. ಸ್ತ್ರೀಯರ ಸಮಾನತೆಗಾಗಿ ಮಾಡಿದ ಮೊದಲ ಚಳುವ
APA, Harvard, Vancouver, ISO, and other styles
16

ಸಿದ್ಧಲಿಂಗಯ್ಯ та ಆರ್. ಶ್ರೀಧರ್. "ಕವಿಯನ್ನು ರೂಪಿಸಿದ ಪರಿಸರ... (The Environment Which Shaped Poet...)". AKSHARASURYA JOURNAL 05, № 04 (2024): 30 to 33. https://doi.org/10.5281/zenodo.14289519.

Full text
Abstract:
“ನನ್ನ ಬದುಕಿನ ಹಿನ್ನೆಲೆಯನ್ನು ನೆನೆಸಿಕೊಂಡರೆ ನಾನು ಯಾರೋ ಭೂಮಾಲೀಕರ ಮನೆಯ ಜೀತಗಾರನಾಗಿಯೋ, ಬೆಂಗಳೂರಿನ ಯಾವುದಾದರೂ ಗಿರಣಿಯ ಕಾರ್ಮಿಕನಾಗಿಯೋ ಇರಬೇಕಾಗಿತ್ತು. ಆದರೆ ಕೂದಲೆಳೆಯ ಅಂತರದಲ್ಲಿ ಪಾರಾದ ನಾನು ಅನೇಕರ ಸಹಾನುಭೂತಿ, ಪ್ರೀತಿ, ಕರುಣೆಯಿಂದ ಕವಿಯಾಗಿದ್ದೇನೆ, ಲೇಖಕನಾಗಿದ್ದೇನೆ. ನಾನು ನನ್ನ ಹಿನ್ನೆಲೆಯನ್ನು ಮರೆಯದೆ ಜೀತಗಾರರು, ಕೂಲಿಕಾರರು, ರೈತರು, ಕಾರ್ಮಿಕರು ಮತ್ತು ಜಾತೀಯತೆ, ಅಸ್ಪೃಶ್ಯತೆಯ ಕಾರಣದಿಂದ ನೊಂದ ಜೀವಿಗಳ ಪರವಾದ ನಿಲುವನ್ನು ರೂಢಿಸಿಕೊಂಡೆ. ಆದ್ದರಿಂದ ನನ್ನ ಸಾಹಿತ್ಯ ವಿಭಿನ್ನ ಮಾರ್ಗದಲ್ಲಿ ಮುನ್ನಡೆಯಲು ಕಾರಣವಾಯಿತು.” ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಗೊಂಡಿರುವ ‘ಡಾ. ಸಿದ್ಧಲಿಂಗಯ್ಯ: ಸಮಗ್ರ ಸಾಹಿತ್ಯ’ ಸಂಪುಟಗಳ (2018) ಲೇಖಕರ ಮಾತಿನಲ್ಲಿ ಈ ಸಾಲುಗಳನ್ನು ಓದುಗರು ಗಮನಿಸ
APA, Harvard, Vancouver, ISO, and other styles
17

ತೇಜಾವತಿ, ಕೆ. "ಕುವೆಂಪುರವರ ಜಲಗಾರ ನಾಟಕ". AKSHARASURYA JOURNAL 05, № 06 (2025): 83 to 91. https://doi.org/10.5281/zenodo.14788756.

Full text
Abstract:
ರಾಷ್ಟ್ರಕವಿ ಕುವೆಂಪುರವರು ಕನ್ನಡದ ಮೇರು ಕವಿ, ಅಗ್ರಮಾನ್ಯ ಕವಿ, ಕಾದಂಬರಿಕಾರ, ವಿಮರ್ಶಕ, ಉತ್ತಮ ಚಿಂತಕರೂ ಆಗಿದ್ದರು. ಇವರು ಅನೇಕ ನಾಟಕಗಳನ್ನು ಬರೆದಿದ್ದಾರೆ. 20ನೇಯ ಶತಮಾನದ ಶ್ರೇಷ್ಠಕವಿ, ವರಕವಿ ಬೇಂದ್ರೆಯವರಿಂದ “ಯುಗದಕವಿ ಜಗದಕವಿ” ಎನಿಸಿಕೊಂಡವರು. ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದವರು ಕುವೆಂಪುರವರು.ಜಲಗಾರ ನಾಟಕ ಆರಂಭಗೊಳ್ಳುವುದು ಆಗಷ್ಟೇ ಸೂರ್ಯ ಮೂಡುವ ಹೊತ್ತಿನಲ್ಲಿ ಇನ್ನೂ ರಂಗದ ಮೇಲೆಲ್ಲಾ ಮಬ್ಬು ಮಬ್ಬು ಕತ್ತಲು, “ಮೂಡಿ ಬಾ, ಮೂಡಿ ಬಾ, ಜಗದ ಕಣ್ಣೆ ಬಾ, ಬಾ” ಎಂದು ಬೆಳಗನ್ನು ಸ್ವಾಗತಿಸುವ ಹಾಡಿನ ಮೂಲಕ ನಾಟಕ ಆರಂಭಗೊಳ್ಳುತ್ತದೆ. ಜಲಗಾರ ನಾಟಕದಲ್ಲಿ ಇರುವುದು ಎರಡು ದೃಶ್ಯಗಳು. ಮೊದಲನೆಯದು “ದೇವಸ್ಥಾನಕ್ಕೆ ಜನರು ಹೋಗುತ್ತಿರುವುದು” ಎರಡನೆಯದು “ದೇವಸ್ಥಾನದಿಂ
APA, Harvard, Vancouver, ISO, and other styles
18

ವಿನಯ, ಕುಮಾರ್, та ಗೌಡ ಆರ್. ನಾಗಪ್ಪ. "ಮಾತಿಲ್ಲದ ಸಮುದಾಯಕ್ಕೆ ಮಾತಾದ ಕವಿ: ಡಾ. ಸಿದ್ಧಲಿಂಗಯ್ಯ". AKSHARASURYA 03, № 05 (2024): 52–60. https://doi.org/10.5281/zenodo.10938039.

Full text
Abstract:
ಸಾಮಾಜಿಕ ಶ್ರೇಣೀಕರಣ ಭಾರತದ ಸಮಾಜದ ಬಹುಮುಖ್ಯವಾದ ಲಕ್ಷಣ. ಅಂದರೆ ಅದು ಜಾತಿಯ ಆಧಾರದ ಮೇಲೆ ನಿರ್ಧರಿತವಾಗುತ್ತದೆ. ಈ ಶ್ರೇಣೀಕರಣದ ವ್ಯವಸ್ಥೆಯು ಒಂದಿಷ್ಟು ವರ್ಗಗಳನ್ನು ಅಧೀನವಾಗಿಸಿಕೊಳ್ಳುವ ಮೇಲ್ವರ್ಗದ ಉತ್ಪನ್ನವಾಗಿದೆ. ಈ ವರ್ಗವು ಇಲ್ಲಿನ ಕೆಲವು ಸಮುದಾಯಗಳನ್ನು ಹೀನವೆಂದು ಗುರುತಿಸಿಕೊಂಡು ಶತಮಾನಗಳಿಂದ ಶೋಷಣೆಯನ್ನು ಮಾಡಿಕೊಂಡು ಬಂದಿತ್ತು. ಈ ಕೆಳಜಾತಿಗಳಿಗೆ ಯಾವುದೇ ಹಕ್ಕುಗಳು ಇಲ್ಲದೇ ಮೆಲ್ವರ್ಗದ ಜೀತಕ್ಕಷ್ಟೇ ಸೀಮಿತವಾಗಿಸಲಾಗಿತ್ತು. ಶಿಕ್ಷಣ, ಧಾರ್ಮಿಕತೆ, ಸಾಮಾಜಿಕ ಜೀವನ, ಸಮಾನತೆ ಮೊದಲಾದವುಗಳು ಇವರಿಗೆ ಪರಿಚಯವೇ ಇರಲಿಲ್ಲ. ಇವರನ್ನು ಸಂಪೂರ್ಣವಾಗಿ ಗುಲಾಮರನ್ನಾಗಿ ಮಾಡಲಾಗಿತ್ತು. ಭಾರತಕ್ಕೆ ಬ್ರಿಟಿಷರು ಬಂದ ನಂತರ ಅವರು ಇಲ್ಲಿ ಎಲ್ಲರಿಗೂ ಶಿಕ್ಷಣ ನೀಡಿದ್ದರಿಂದಾಗಿ ದಲಿತರಲ್ಲಿ ಹೊಸ ಆಶಾಕಿರಣ ಮೂಡಿತು. ಮುಂದೆ ಅಂಬೇಡ್ಕರ್ ಅ
APA, Harvard, Vancouver, ISO, and other styles
19

ಆಶಾಲತಾ, ಪಿ. "ಭಾರತದ ಪ್ರಜಾತಂತ್ರ: ಡಾ. ಬಿ.ಆರ್. ಅಂಬೇಡ್ಕರ್‌ ಚಿಂತನೆಗಳು". AKSHARASURYA JOURNAL 06, № 05 (2025): 01 to 09. https://doi.org/10.5281/zenodo.15504104.

Full text
Abstract:
ಭಾರತದಲ್ಲಿ ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯ, ಮಹಿಳಾ ಹಕ್ಕುಗಳ ಬಗೆಗೆ ತೀವ್ರವಾಗಿ ಚಿಂತಿಸಿ, ಆ ಸಾಮಾಜಿಕ ಸುಧಾರಣೆಗಳಿಗೆ ಕಾನೂನಿನ ಚೌಕಟ್ಟು ಅವಶ್ಯವೆಂದು, ಭಾರತದ ಸಂವಿಧಾನದಲ್ಲಿ ಆ ಮೌಲ್ಯಗಳನ್ನು ಹಲವಾರು ವಿಧಿಗಳ ರೂಪದಲ್ಲಿ ಕ್ರೋಢೀಕರಿಸಿ, ಶೋಷಿತ ಸಮುದಾಯಗಳಲ್ಲಿ ಸ್ವಾಭಿಮಾನ, ಆತ್ಮಗೌರವ ಮತ್ತು ಅನ್ಯಾಯಗಳ ವಿರುದ್ಧ ಹೋರಾಟದ ಮನೋಭಾವವನ್ನು ಮೂಡಿಸಿದ ಮಹಾನ್ ಮಾನವತಾವಾದಿ, ಸಂವಿಧಾನಶಿಲ್ಪಿ, ಅರ್ಥಶಾಸ್ತ್ರಜ್ಞ, ಕಾನೂನು ತಜ್ಞ ಡಾ. ಬಾಬಾಸಾಹೇಬ್ ಅಂಬೇಡ್ಕರ್‌‌ರವರು. ಮೂಲತ ಅಂಬೇಡ್ಕರ್‌‌ರವರು, ಬೆಳೆದು ಬಂದ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳು, ಅಸ್ಪೃಶ್ಯತೆ, ಬಡತನ, ದೌರ್ಜನ್ಯ ಈ ಎಲ್ಲಾ ಜಾತಿಯ ಅಸಮಾನತೆಗಳ ಭೀತಿಗಳನ್ನು, ಒಳಗೊಂಡ ಸಮಾಜವಾಗಿತ್ತು. ಹಾಗಾಗಿ ಸಹಜವಾಗಿಯೇ ಶೋಷಿತ ಸಮುದಾಯಗಳ ಶೋಷಣೆಯ ವಿವಿಧ ಸ್ವರೂಪಗಳ
APA, Harvard, Vancouver, ISO, and other styles
20

ಗಣೇಶ та ಹೆಚ್. ಎಸ್. ನಿಂಗರಾಜು. "ಆಧುನಿಕ ಕನ್ನಡ ಸಾಮಾಜಿಕ ನಾಟಕಗಳಲ್ಲಿ ಪ್ರತಿಯಜಮಾನಿಕೆಯ ಸ್ವರೂಪ". AKSHARASURYA JOURNAL 04, № 06 (2024): 63 to 73. https://doi.org/10.5281/zenodo.13724751.

Full text
Abstract:
ಭಾರತದಂತಹ ದೇಶವು ಸಂಕೀರ್ಣವಾದ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿದೆ.  ಅಂತಹ ಪ್ರಾಬಲ್ಯಗಳ ಆಧಾರವು ಸಂಕೀರ್ಣ ಸ್ವರೂಪವನ್ನು ಹೊಂದಿದೆ.  ಭಾರತದ ವರ್ಣ ಆಧಾರಿತ ಸಾಮಾಜಿಕ ವ್ಯವಸ್ಥೆಯಲ್ಲಿ, ವರ್ಣಾಸ್‌ನ ಮೇಲಿನ ಸ್ತರಗಳಲ್ಲಿ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಪ್ರಾಬಲ್ಯ ವ್ಯವಸ್ಥೆಗಳು ಛಿದ್ರಗೊಳ್ಳುತ್ತಿವೆ.  ಸಬಾಲ್ಟರ್ನ್ ಅಡಿಯಲ್ಲಿ ಬರುವ ನಾಲ್ಕನೇ ವರ್ಣಾ, ಶೂದ್ರವರ್ಣ,  ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಭಾಗವಹಿಸುವಿಕೆಯಿಂದ ವಂಚಿತವಾಗಿದೆ. ಸಾಂಪ್ರದಾಯಿಕವಾಗಿ ಮೇಲ್ವರ್ಗದ  ಪ್ರಾಬಲ್ಯಗಳು ಕಠಿಣ ಅಭ್ಯಾಸಗಳನ್ನು ನಿರ್ಮಿಸುವ ಮೂಲಕ ಅಧೀನ ವರ್ಗವನ್ನು ಬಳಸಿಕೊಳ್ಳುತ್ತವೆ. ಈ ಅಧೀನ ನೆಲೆಗಳು ಮೇಲ್ಮಟ್ಟದ ಪ್ರಾಬಲ್ಯಗಳ ವಿರುದ್ಧ ಹೆಚ್ಚು ಸಹನೆ ಮತ್ತು ಮೂಕತನದಿಂದ ಪ್ರತಿಭಟಿಸಲು ಸಾಧ್ಯವಾಗುತ್ತಿಲ್ಲ. ಅವರ ನ
APA, Harvard, Vancouver, ISO, and other styles
21

Bharati sangappa Gaddi. "ಬಸವರಾಜ ಕಟ್ಟೀಮನಿ ಅವರ ಜ್ಞಾಲಾಮುಖಿಯ ಮೇಲೆ ಕಾದಂಬರಿಯಲ್ಲಿ ವರ್ಗ ಸಂಘರ್ಷ". ShodhKosh: Journal of Visual and Performing Arts 4, № 2 (2023). https://doi.org/10.29121/shodhkosh.v4.i2.2023.5619.

Full text
Abstract:
ಜ್ವಾಲಾಮುಖಿಯ ಮೇಲೆ ಪ್ರಗತಿಶೀಲ ಸಾಹಿತ್ಯದ ಒಂದು ಹೆಸರಾಂತ ಕೃತಿ. ಕಾರ್ಮಿಕ ಶೋಷಣೆ, ಪ್ರತಿಭಟನೆಯ ಹಿನ್ನೆಲೆ - ಹುಟ್ಟು, ಅದರ ಪರಿಮಾಣಾತ್ಮಕ ಬೆಳವಣಿಗೆ, ಸಂಘರ್ಷದ ಕ್ರಿಯಾರೂಪವನ್ನು ಸಾಧ್ಯಂತರವಾಗಿ ಸೆರೆ ಹಿಡಿದ ಕೃತಿ. ಗಾಂಧಿವಾದಿಯಾಗಿದ್ದ ಕಾಂಗ್ರೆಸಿಗ ಚಂದ್ರಣ್ಣ ಸಾಮ್ಯವಾದಿಯಾಗಿ ಪರಿವರ್ತನೆಯಾಗುವ ಬಗೆ ಸಂಘರ್ಷದ ಬೆಳವಣಿಗೆ ಸಹ ಆಗಿದೆ.ವರ್ಗ ಸಂಘರ್ಷವೆನ್ನುವುದು ಒಂದು ವೈಯಕ್ತಿಕ ಕ್ರಿಯೆ ಮತ್ತು ಪ್ರತಿಭಟನೆಯಾಗಿರದೆ ಅದರದೇ ಆದ ನಿಯಮದಲ್ಲಿ ಮೂಡಿಬರಬೇಕಾಗುತ್ತದೆ. ಅದರ ಹಿನ್ನೆಲೆ, ಮುನ್ನೆಲೆ, ಚಲನಶೀಲತೆ ಇವೆಲ್ಲ ಇಲ್ಲಿಯ ರಚನೆಯಲ್ಲಿ ಪಡಿಮೂಡಿದೆ.ಸ್ವಾತಂತ್ರ್ಯ ಬಂದರೂ ಹಿಂದೂಸ್ಥಾನದ ಬಹುಸಂಖ್ಯಾತರಿಗೆ ಆರ್ಥಿಕ ' ಸ್ವಾತಂತ್ರ್ಯ ಲಭಿಸಲಿಲ್ಲ. ಅವರ ಕಷ್ಟಪರಂಪರೆ ದೂರವಾಗಿಲ್ಲ. ರೈತ-ಕೂಲಿಕಾರರ ರಾಜ್ಯ ಸ್ಥಾಪಿಸುವುದೇ ಕಾಂಗ್ರೆಸ್ಸಿನ ಗುರಿಯ
APA, Harvard, Vancouver, ISO, and other styles
22

ಬಾಯ್. ಯು., ಡಾ ಶೈಲಾ. "ಮಹಿಳೆ-ಪುರಾಣ: ಸೃಜನಾತ್ಮಕತೆ-‘ಮಾಧವಿ’". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 30 вересня 2023, 9–21. http://dx.doi.org/10.59176/kjksp.v2i2.2298.

Full text
Abstract:
ಮಹಾಭಾರತ, ರಾಮಾಯಣದಂಥ ಪುರಾಣಗಳಲ್ಲಿ ಬಂದಿರುವ ಸ್ತ್ರೀಪಾತ್ರಗಳೆಲ್ಲ ಪುರುಷಪ್ರಧಾನ ಚಿಂತನೆಯ ಹಿನ್ನೆಲೆಯಲ್ಲೇ ರೂಪುಗೊಂಡಿರುವಂಥವು. ಕಪ್ಪು ಕಿವಿಯ ಬಿಳಿಯ ಕುದುರೆಗಳು: ಮಹಿಳಾ ಶೋಷಣೆಯ ಹಲವು ಮುಖಗಳ ಅನಾವರಣ ಈ ಭಾಗದಲ್ಲಿ ಹಲವು ಸ್ತ್ರೀಪಾತ್ರಗಳು ಕಾದಂಬರಿಯಲ್ಲಿ ಚಿತ್ರಿತವಾದ ಬಗೆಯನ್ನು ಪರಂಪರಾಗತ ನೆಲೆ ಎಂಬ ಉಪಶೀರ್ಷಿಕೆಯಲ್ಲಿ ಚರ್ಚಿಸಲಾಗಿದೆ. ಗಂಡು-ಹೆಣ್ಣು: ‘ಸ್ನೇಹ’ದ ನೆಲೆ ಎಂಬ ಉಪಶೀರ್ಷಿಕೆಯಲ್ಲಿ ಕಾದಂಬರಿಯ ನಾಯಕಿ ‘ಮಾಧವಿ’ ಹಾಗೂ ಆಕೆಯ ಬಾಲ್ಯದ ಸಖ ‘ಆದಿಮ’ರ ಪಾತ್ರಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಗಂಡು-ಹೆಣ್ಣು: ‘ಸ್ನೇಹ’ಕ್ಕೆ ಹೊಸಭಾಷ್ಯ ಎಂಬ ಭಾಗದಲ್ಲಿ ಅವರಿಬ್ಬರ ಸ್ನೇಹವನ್ನು ಸಮಾಜ ಸ್ವೀಕರಿಸಬೇಕಾದ ‘ಸ್ವಸ್ಥ ಮನೋಭಾವ’ದ ನಿರ್ಮಾಣದ ಅಗತ್ಯದ ಕುರಿತ ಚಿಂತನೆಯನ್ನು ಒಳಗೊಳಿಸಲಾಗಿದೆ. ದೈಹಿಕವಾದ ಕಾರಣಕ್ಕೆ ‘ಅಬಲೆ’ ಎಂದು ಸ
APA, Harvard, Vancouver, ISO, and other styles
We offer discounts on all premium plans for authors whose works are included in thematic literature selections. Contact us to get a unique promo code!