To see the other types of publications on this topic, follow the link: ಸತಿ.

Journal articles on the topic 'ಸತಿ'

Create a spot-on reference in APA, MLA, Chicago, Harvard, and other styles

Select a source type:

Consult the top 31 journal articles for your research on the topic 'ಸತಿ.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Browse journal articles on a wide variety of disciplines and organise your bibliography correctly.

1

ಲಕ್ಷ್ಮೀ, ಎಲ್. ಪೂಜಾರಿ. "ವಚನ ಚಳವಳಿ ಮತ್ತು ಮಹಿಳೆ". AKSHARASURYA JOURNAL 06, № 05 (2025): 54 to 59. https://doi.org/10.5281/zenodo.15504231.

Full text
Abstract:
ವಚನ ಸಾಹಿತ್ಯ ಹನ್ನೆರಡನೇ ಶತಮಾನದಲ್ಲಿ ಹುಟ್ಟಿಕೊಂಡಂತಹ ವಿಶಿಷ್ಟ ಸಾಹಿತ್ಯದ ಪ್ರಕಾರ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವುದನ್ನು ಕಾಣುತ್ತೇವೆ. ಈ ಯುಗವನ್ನು ಸಾಮಾಜಿಕ ಪರಿವರ್ತನೆ ಯುಗ ಎಂದು ಕರೆಯುವಷ್ಟರಮಟ್ಟಿಗೆ ಬದಲಾವಣೆ ಆಗಿರುವುದನ್ನು ಕಾಣುತ್ತೇವೆ. ವಚನ ಎಂದರೆ ಮಾತು, ಉಕ್ತಿ ಎಂಬ ಅರ್ಥವನ್ನು ಹೊಂದಿದ್ದು ಗದ್ಯ ಪದ್ಯಗಳ ರೂಪದಲ್ಲಿ ಕಂಡುಬಂದಿದೆ ಮಹಿಳೆಯರ ಸಮಾನತೆಗೆ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ.ಶತಮಾನಗಳಿಂದ ಅಸ್ಪೃಳಾಗಿದ್ಧ ಅದೃಶ್ಯಳಾಗಿದ್ಧ ಹೆಣ್ಣನ್ನು ವಚನಕಾರರು ಮಾನವೀಯ ದೃಷ್ಟಿಯಿಂದ ಕಂಡಿದ್ದಾರೆ. ಪುರುಷನ ಹಾಗೆ ಮಹಿಳೆಗೆ ಸಮಾನವಾದ ಸ್ಥಾನವನ್ನು ನೀಡುವ ಮೂಲಕ 12ನೇ ಶತಮಾನದಲ್ಲಿ ವಚನಕಾರರು ಮಾಡಿದ ಒಂದು ಬೃಹತ್ ಬದಲಾವಣೆ ಇಡೀ ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿದೆ. ಸ್ತ್ರೀಯರ ಸಮಾನತೆಗಾಗಿ ಮಾಡಿದ ಮೊದಲ ಚಳುವ
APA, Harvard, Vancouver, ISO, and other styles
2

Pinto, Melwyn. "ಸತಾಚೊ ಸೊಧ್ ಆನಿ ಸತಾಚ್ಯಾ ಸ್ಥಾಪನಾ ಮಧೆಂ ಸಂಸೊಧ್". MJES Journal of Amar Konkani 2, № 2 (2023): 4–7. https://doi.org/10.69852/aloy.mjesjak.2.2/17945/.

Full text
Abstract:
ಕನ್ನಡಾಚೊ ವಿಮರ್ಶಕ್, ಸಂಸೊಧ್ಕಾ.ರ್ ಆನಿ ತುಮಕೂರು ವಿಶ್ವವಿದ್ಯಾಲಯಾಚ್ಯಾ ಕನ್ನಡ ವಿಭಾಗಾಚೊ ಪ್ರೊಫೆಸರ್ ಡಾ| ನಿತ್ಯಾನಂದ ಶೆಟ್ಟಿನ್ ಆಯ್ಲೆವಾರ್ ಲಿಕ್ಲ್ಲೆಂ ಪುಸ್ತಕ್ ಮಾರ್ಗಾನ್ವೇಷಣೆ: ಸಾಹಿತ್ಯ ಸಂಶೋಧನೆಯ ರೀತಿ ನೀತಿ. ಹ್ಯಾ ಪುಸ್ತಕಾಂತ್ ಸಂಸೊಧಾವಿಶಿಂ ತಾಣೆಂ ಸಾಂಗ್ಚೊ ಏಕ್ ಪ್ರಮುಕ್ ವಿಚಾರ್ ಅಸೊ ಆಸಾ. ದೋನ್ ರಿತಿಂಚೆ ಸಂಸೊಧ್ ಸಾಧ್ಯ್ ಆಸಾತ್: ಪಯ್ಲೊ ಸತಾಚೆಂ ಸ್ಥಾಪನ್ (ಸತ್ಯ ಸ್ಥಾಪನೆ) ಕರ್ಚೊ ವಯ್ವಾಟಿ ‘ಸಂಸೊಧ್’ ಆನಿ ದುಸ್ರೊ ಸತಾಚೊ ಸೊಧ್ (ಸತ್ಯ ಶೋಧನೆ) ಕರ್ಚೊ ವಸ್ತುನಿಷ್ಟ್ ಸಂಸೊಧ್. ಹ್ಯಾ ದೊನಾಂ ಮಧೆಂ ವಿಶೇಸ್ ಫರಕ್ ಆಸಾ. ಸತಾಚೆಂ ಸ್ಥಾಪನ್ ಕರ್ಚೆಂ ಬೋವ್ ಸಲೀಸ್. ಮ್ಹಜ್ಯೆಲಾಗಿಂ ಥೊಡಿಂ ಪೂರ್ವ್ಪೀ್ಡಿತ್ ಕಲ್ಪನಾಂ ಆಸಾತ್. ಸಮಾಜ್ಯೆ ವಿಶಿಂ, ಹೆರ್ ಜಾತಿ ಧರ್ಮಾ ವಿಶಿಂ, ವಾ ಮ್ಹಾಕಾ ಜಾಯ್ನಾತ್ಲ್ಲ್ಯಾಂ ವಿಶಿಂ ಮ್ಹಜ್ಯೊ ಥೊ
APA, Harvard, Vancouver, ISO, and other styles
3

Pinto, Joachim. "ಅಸ್ಮಿತಾಯ್: ಕೊಂಕಣಿ ಅಸ್ಮಿತಾಯೆಚೆಂ ವಿಸಂಗತ್ ಪ್ರತಿಬಿಂಬ್?" MJES Journal of Amar Konkani 3, № 1 (2023): 41–73. https://doi.org/10.69852/aloy.mjesjak.3.1/18031/.

Full text
Abstract:
ಇತಿಹಾಸೀಕ್ ಸಿನೆಮಾಂ ವಿವಾದಾತ್ಮಕ್ ಜಾಂವ್ಚಿ ಅನಿವಾರ್ಯ್ ಘಡ್ಣೂಕ್ ಭೂತ್ಕಾ ಳಾಕ್ ವಿಶ್ಲೇಷಣ್ ಕರ್ನ್ ಪಡ್ದ್ಯಾಚೆರ್ ದಾಕಂವ್ಚ್ಯಾ ಸಂಕೀರ್ಣಾತೆಚೆರ್ ರೊಂಬೊನ್ ಆಸಾ. ಇತಿಹಾಸಾಚೊ ವಿಂಚ್ಣಾರ್ ಭಾಗ್ ಘೆವ್ನ್ ಫಿಲ್ಮ್ ತಯಾರ್ ಕರ್ತಾನಾ ನಿರ್ದೇಶಕ್ ವೀಕ್ಷಕಾಕ್ ಮನೋರಂಜನ್ ದಿಂವ್ಚೆಂ ಆನಿ ಆಪ್ಣಾಚೆಂ ರಚನ್ ಕಲಾತ್ಮಕ್ ಜಾಯ್ಶೆಂ ಪಳೆಂವ್ಚೆಂ - ಹ್ಯಾ ದೋನ್ ಧ್ಯೇಯಾಂ ಮಧೆಂ ಸಮತೋಲನ್ ರಾಕೊನ್ ವ್ಹರ್ಚ್ಯಾ ಧ್ವಂದ್ವಾಂತ್ ಸಾಂಪ್ಡಾತಾ. ಮನ್ ಭುಲೊಂವ್ಚೆಂ ನಿರೂಪಣ್ ಆನಿ ವೀಕ್ಷಕಾಕ್ ನಾಟಕೀಯ್ ಅನ್ಭೊಗ್ ದಿಜೆ ಮ್ಹಳ್ಳ್ಯಾ ಉದ್ದೇಶಾನ್ ಚಲ್ಚ್ಯಾ ಹ್ಯೆ ವಿಂಚವ್ಣೆ ಪಾಸತ್ ಅಕ್ಷರಶಃ ಇತಿಹಾಸೀಕ್ ನಿಖರತೆ ಥಾವ್ನ್ ಪಯ್ಸ್ ಸರ್ಚ್ಯಾಕ್‌ ನಿರ್ದೇಶಕಾನ್ ಕಲಾತ್ಮಕ್ ಸ್ವಾತಂತ್ರಾಚೊ ವಾಪಾರ್ ಕರಿಜೆ ಪಡ್ತಾ. ಇತಿಹಾಸಾಚೆರ್ ಹೊಂದ್ವೊನ್ ಕಾಡ್ಚಿಂ, ಗುಂಡಾಯೆಚ್ಯಾ ಅರ್ಥ
APA, Harvard, Vancouver, ISO, and other styles
4

ಅಜೀತ, ಪಾತ್ರೋಟ, та ರುಮ್ಮಾ ಶಿವಗಂಗಾ. "'ವೀಸಾದ ನಿರೀಕ್ಷಣೆಯಲ್ಲಿ ಆತ್ಮಕಥನ': ಡಾ.ಬಿ.ಆರ್. ಅಂಬೇಡ್ಕರರ ಜೀವನ ಮತ್ತು ಪ್ರಯೋಗಗಳು." AKSHARASURYA 04, № 03 (2024): 78 to 87. https://doi.org/10.5281/zenodo.12672742.

Full text
Abstract:
ಆತ್ಮಕಥೆ ಬರೆದುಕೊಳ್ಳುವುದು ಮನುಷ್ಯ ಬದುಕಿನ ಪ್ರಮುಖ ಬೆಳವಣಿಗೆಯಾಗಿದೆ. ಈ ಕಾರಣವಾಗಿಯೆ ಮನುಷ್ಯ ತನ್ನ ಸರಿ ತಪ್ಪುಗಳನ್ನು ನಿವೇದಿಸಿಕೊಂಡು ಬದುಕಿನ ವಿಕಾಸದತ್ತ ದಾಪುಗಾಲಿಡುವುದು ಕಾಣಬಹುದು. ಮಾನವ ಬೆಳವಣಿಗೆ ಮತ್ತು ವಿಕಾಸ ಕ್ರಮದಲ್ಲಿ ತನ್ನ ಬದುಕಿನ ಅನುಭವಗಳನ್ನು ಮನೆ, ಸಮಾಜ, ಪರಿಸರ, ಸಂಸ್ಕೃತಿಗಳಿಂದ ರೂಪುಗೊಂಡಿವೆ. ಅವುಗಳು ಮನುಷ್ಯ ಒಳ ಹೊರಗನ್ನು ಅರಿತುಕೊಳ್ಳಲು ಸಹಾಯ ಮಾಡುತ್ತವೆ. ಇಲ್ಲಿ ಪ್ರಮುಖವಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಬದುಕಿನುದ್ದಕ್ಕೂ ಅನುಭವಿಸಿದ ದುಖಃ ದುಮ್ಮಾನಗಳು, ಸಂಕಟಗಳು ಮತ್ತು ಅವುಗಳಿಂದ ಬಿಡುಗಡೆಗೆ ಹಾತೋರೆಯುವ ಮನಸ್ಥಿತಿ ಪ್ರಕಟಗೊಳ್ಳುತ್ತದೆ. ಅಲ್ಲದೆ ಅವರು ಕಂಡುಕೊಳ್ಳುವ ಪರಿಹಾರೋಪಾಯಗಳು ಎಲ್ಲವೂ ಒಂದೊಂದು ಹೊಸ ಪ್ರಯೋಗದಂತೆ ಗೋಚರಿಸುತ್ತದೆ. ಅಲ್ಲದೆ ಅವು ಓದುಗರಿಗೆ ಸಂದೇಶಗಳಾಗಿ ಮಾರ್ಪಡುತ್
APA, Harvard, Vancouver, ISO, and other styles
5

ವಾಣಿ, ಡಿ.ಎಸ್. "ಆಧ್ಯಾತ್ಮಿಕತೆಯ ಹಿನ್ನೆಲೆಯಲ್ಲಿ ನಾಕುತಂತಿ ಕವನದ ವಿಶ್ಲೇಷಣೆ". AKSHARASURYA JOURNAL 06, № 06 (2025): 85 to 96. https://doi.org/10.5281/zenodo.15581057.

Full text
Abstract:
ದ.ರಾ. ಬೇಂದ್ರೆಯವರ ʼನಾಕುತಂತಿʼ ಎಂಬ ಕಾವ್ಯವು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತ್ಯದ ಒಂದು ಮಹತ್ವಪೂರ್ಣ ಕಾವ್ಯವಾಗಿದೆ. ತಮ್ಮ ಭಾಷೆಯ ಮೂಲಕವೇ ಕೋಟ್ಯಂತರ ಸಾಹಿತ್ಯಾಸಕ್ತರನ್ನು ಹೊಂದಿದ್ದು ದ. ರಾ. ಬೇಂದ್ರೆ ನಿಜಕ್ಕೂ ಕನ್ನಡಕ್ಕೆ ದೇವರು ಕರುಣಿಸಿದ “ವರಕವಿ”ಯೇ ಸರಿ. ಆದ್ಯಾತ್ಮ ನೆಲೆಯ ಒಂದು ನಿಗೂಢ ಕವನವಾಗಿದೆ. ಸಮಸ್ತ ವಿಶ್ವವನ್ನು ವೀಣೆಗೆ ಹೋಲಿಸಿ ಅದಕ್ಕಿರುವುದು ನಾನು, ನೀನು, ಆನು, ತಾನು ಎಂಬ ನಾಲ್ಕು ತಂತಿಗಳು ಇದು ನಾಲ್ಕುಭಾಗಗಳಲ್ಲಿ ವಿಂಗಡಿತವಾಗಿದ್ದು ಪ್ರತಿಯೊಂದು ಭಾಗವೂ ಆಧ್ಯಾತ್ಮಿಕ ಮತ್ತು ತಾತ್ವಿಕ ಅರ್ಥಗಳನ್ನು ಒಳಗೊಂಡಿದೆ. ಇವರ ಪ್ರಕಾರ ಸಮಸ್ತ ಸೃಷ್ಟಿಯೇ ಒಂದು ವಿರಾಟ್‌ ವೀಣೆ. 
APA, Harvard, Vancouver, ISO, and other styles
6

ಮಾನಸ, ಎಂ. "ಗ್ರಂಥಸಂಪಾದನಾ ಕ್ಷೇತ್ರಕ್ಕೆ ವೈ. ಸಿ. ಭಾನುಮತಿಯವರ ಜನಪದೀಯ ಕೊಡುಗೆ". AKSHARASURYA JOURNAL 04, № 04 (2024): 63 to 67. https://doi.org/10.5281/zenodo.13284031.

Full text
Abstract:
ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸೃಜನಶೀಲ ಸಾಹಿತ್ಯಕ್ಕೆ ಹೆಚ್ಚು ಒತ್ತುಕೊಡುವ ಕಾಲದಲ್ಲಿ ಗ್ರಂಥಸಂಪಾದನ ಕ್ಷೇತ್ರದ ಆಲಸ್ಯ ಕಾಣಬಹುದು. ಇಂತಹ ಆಲಸ್ಯತನಕ್ಕೆ ಈಡಾಗಬಹುದಾದಂತಹ ಗ್ರಂಥಸಂಪಾದನಾ ಕ್ಷೇತ್ರದಲ್ಲಿ ಸೃಜನಶೀಲ ಸಾಹಿತ್ಯಕ್ಕಿಂತ ಗ್ರಂಥಸಂಪಾದನಾ ಕ್ಷೇತ್ರ ಮುಖ್ಯವೆಂದು ಭಾವಿಸಿ ಹಲವಾರು ಪ್ರಾಚೀನ ಹಳಗನ್ನಡ ಕೃತಿಗಳನ್ನು ಸಂಗ್ರಹಿಸಿ, ಸಂಪಾದಿಸಿ, ಪರಿಷ್ಕರಿಸಿ, ಪ್ರಕಟಣೆ ಮಾಡಿದಂತಹ ಹಲವಾರು ವಿದ್ವಾಂಸರ ಪಟ್ಟಿ ಇದೆ. ಇಂತಹ ವಿದ್ವಾಂಸರಲ್ಲಿ ಅದರಲ್ಲೂ ಮಹಿಳಾ ಗ್ರಂಥಸಂಪಾದಕರ ಸಾಲಿನಲ್ಲಿ ವೈ.ಸಿ. ಭಾನುಮತಿ ಅವರು ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ಭಾನುಮತಿಯವರು ಹಳಗನ್ನಡ ಗ್ರಂಥಸಂಪಾದನೆಗೆ ಸಂಬಂಧಿಸಿದಂತೆ ಹಾಗೂ ಸಂಶೋಧನೆಗೆ ಸಂಬಂಧಿಸಿದಂತೆ ಒಟ್ಟು 50ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಭಾನುಮತಿಯವರ ಆಸಕ್ತಿ ಜನಪದ ಕ್ಷೇತ್
APA, Harvard, Vancouver, ISO, and other styles
7

ಕಾಂತರಾಜ, ಯಾದವ್ ಸಿ. "ದಲಿತ ಆತ್ಮಕತೆಗಳಲ್ಲಿ ಬಾಲ್ಯ ಮತ್ತು ಶಾಲಾ ಶಿಕ್ಷಣದ ನಿರೂಪಣೆಗಳು". AKSHARASURYA 06, № 02 (2025): 84 to 91. https://doi.org/10.5281/zenodo.15124072.

Full text
Abstract:
ಮನುಷ್ಯನ ಬದುಕಿನಲ್ಲಿ ಬಾಲ್ಯದ ಅನುಭವವು ತುಂಬಾ ಮುಖ್ಯವಾದದ್ದು. ಬಾಲ್ಯದ ಬದುಕು ಎಲ್ಲರಿಗೂ ಒಂದೇ ರೀತಿಯದಾಗಿರುವುದಿಲ್ಲ. ಆ ವಯಸ್ಸಿನ ಶಿಕ್ಷಣವೂ ಕೂಡ ಬಾಲ್ಯದ ಅನುಭವವಗಳನ್ನು ದಟ್ಟವಾಗಿ ಆವರಿಸಿಕೊಂಡಿರುತ್ತದೆ. ಜಾತಿಯಾಧಾರಿತ ಸಾಮಾಜಿಕ ವ್ಯವಸ್ಥೆಯೂ ಕೂಡ ಈ ಬಾಲ್ಯದ ಮೇಲೆ ಪ್ರಭಾವವನ್ನು ಬೀರುತ್ತದೆ. ಮೇಲ್ಜಾತಿ, ಮಧ್ಯಮ ಜಾತಿಗಳು ಮೂಲಭೂತ ಸೌಕರ್ಯಗಳು ಮತ್ತು ಶಿಕ್ಷಣದ ಕುರಿತಂತೆ ಎಚ್ಚರಿಕೆಯಿಂದಿದ್ದರೆ, ತಳ ಸಮುದಾಯಗಳು ಮತ್ತು ಶ್ರಮಿಕ ವರ್ಗ ಮೂಲಭೂತ ಸೌಕರ್ಯಗಳಿಗಾಗಿಯೇ ಹೋರಾಟ ನಡೆಸುತ್ತಿರುವುದನ್ನು ಕಾಣಬಹುದು. ಈ ಸಂಧರ್ಭದಲ್ಲಿ ಶಿಕ್ಷಣದ ಕುರಿತ ಮಾತು ಕನಸಿನ ಪಯಣವೇ ಸರಿ. ಹಸಿವು ಮತ್ತು ಅವಮಾನಗಳಾಚೆಗಿನ ಬದುಕನ್ನು ದಲಿತ ಆತ್ಮಕಥೆಗಳಲ್ಲಿ ಕಾಣಬಹುದು. ಶಾಲೆಯ ಕುರಿತಂತೆ, ಶಿಕ್ಷಕರ ಕುರಿತಂತೆ ದಲಿತ ಆತ್ಮಕತೆಗಳು ಚಿತ್ರಿಸುವ ಸೂಕ್ಷ್ಮ ಪ
APA, Harvard, Vancouver, ISO, and other styles
8

ಸುನೀತಾ, ಮಹೇಶ್ವರಿ. "ಬಸವಣ್ಣನವರ ದೃಷ್ಟಿಯಲ್ಲಿ ಅಸ್ಪೃಶ್ಯತೆ". AKSHARASURYA 05, № 01 (2024): 134 to 138. https://doi.org/10.5281/zenodo.13871042.

Full text
Abstract:
೧೨ನೇ ಶತಮಾನದ ಆಂದೋಲನದ ನಾಯಕ ಮತ್ತು ಕೇಂದ್ರ ವ್ಯಕ್ತಿ ಆದ ಬಸವಣ್ಣ ಸಾಹಿತ್ಯದೃಷ್ಟಿಯಿಂದ ನೋಡಿದಾಗ ಆತ ಒಬ್ಬ ಅತ್ಯುತ್ತಮ ಕೃತಿಕಾರ ಸಮಾನತೆಯ ತತ್ವವನ್ನು ಸಾರಿದ ಹರಿಕಾರ ಎಂದು ಹೇಳುವುದು ಆಕಸ್ಮಿಕವೇ ಸರಿ. ಆತ ಹುಟ್ಟಿದ್ದು ಬಿಜಾಪುರ್ ಜಿಲ್ಲೆಯ ಬಸವನಬಾಗೇವಾಡಿ ಅಗ್ರಹಾರ ಎಂಬ ಊರಲ್ಲಿ ೧೧೩೪ಲ್ಲಿ ಜನನವಾಯಿತು. ತಂದೆ ಮಾದರಸ ತಾಯಿ ಮಾದಲಾಂಬಿಕೆ. ಇವರು ಬಾಲ್ಯದಿಂದಲೇ ವೈದಿಕ ಸಂಸ್ಕೃತಿಯ ವಿರೋಧಿಗಳಾಗಿದ್ದರು. ಇವರು ಹುಟ್ಟಿದ್ದು ಉತ್ತಮ ಬ್ರಾಹ್ಮಣ ಮನೆತನದಲ್ಲಿ ಆದರು ದಲಿತ ವರ್ಗದ ಜೊತೆ ಬೆರೆತು ಅವರಿಗಾಗಿ ತನ್ನ ಜೀವನದುದ್ದಕ್ಕೂ ಹೋರಾಡಿದನೆಂದು ತಿಳಿದು ಬರುತ್ತದೆ. ಹೊಸ ಹೊಸ ಬಗೆಯ ಅನೇಕ ಸುಧಾರಣೆಗಳನ್ನು ಜಾರಿಗೆ ತಂದು ನಮ್ಮ ಆಡಳಿತವನ್ನು ಸರಳಗೊಳಿಸಿದರು. ಎಲ್ಲಾ ಶರಣರನ್ನು ಕೂಡಿಸಿ ಎಲ್ಲಾ ಜಾತಿಯವರೊಡನೆ ತಮ್ಮನ್ನು ತಾವು ತೊಡಗಿಸಿಕೊಂಡು ಸ
APA, Harvard, Vancouver, ISO, and other styles
9

ಶೋಭಾ, ಸುರೇಶ್. "ಡಾ. ಅಂಬೇಡ್ಕರ್‌‌ರವರ ಸಾಮಾಜಿಕ ಆಲೋಚನೆಗಳು ಅಸ್ಪೃಶ್ಯರ ವಿಮೋಚನೆ". AKSHARASURYA JOURNAL 06, № 05 (2025): 207 to 219. https://doi.org/10.5281/zenodo.15504651.

Full text
Abstract:
ಸ್ವತಂತ್ರ್ಯಪೂರ್ವ ಭಾರತದ ಜಾತಿ ವ್ಯವಸ್ಥೆಯ ಕರಾಳತೆ ಕಹಿ ಅನುಭವಗಳೊಂದಿಗೆ ಡಾ|| ಬಿ. ಆರ್. ಅಂಬೇಡ್ಕರ್‌‌ರವರು ಅಸ್ಪೃಶ್ಯರಿಗೆ ಮೀಸಲಾತಿ ದೊರಕುವಂತೆ ಮಾಡಿದ ಹೋರಾಟದಲ್ಲಿ ಯಶಸ್ಸನ್ನು ಕಾಣುತ್ತಾರೆ. ತಮ್ಮ ಪ್ರತಿಭೆ ಹಾಗೂ ಪರಿಶ್ರಮದಿಂದ ಬದುಕಿನಲ್ಲಿ ಯಶಸ್ಸನ್ನು ಕಂಡರು. ಜಾತಿಯ ಕಾರಣದಿಂದ ಅನೇಕ ಸಂಕಷ್ಟಗಳಿಗೆ ಅವಮಾನಕ್ಕೆ ಗುರಿಯಾಗುತ್ತಾರೆ. ಬದುಕಿನುದ್ದಕ್ಕೂ ಕೆಳವರ್ಗದ ಜನರಿಗಾಗಿ ಹೋರಾಡಿ ಮೀಸಲಾತಿಯ ಮೂಲಕ ಹಿಂದುಳಿದವರನ್ನು ಮುಖ್ಯವಾಹಿನಿಗೆ ತಂದು ಈ ಸೌಲಭ್ಯ ಪಡೆದವರು ತಮ್ಮ ವರ್ಗದವರ ಏಳಿಗೆಗಾಗಿ ಪ್ರಯತ್ನಪಡಬೇಕು ಎಂಬ ಆಶಯವನ್ನು ಹೊಂದಿದ ಅಂಬೇಡ್ಕರ್‌‌ರವರಿಗೆ ತೀವ್ರ ನಿರಾಸೆಯಾಗುತ್ತದೆ. ಕೆಳ ಸಮುದಾಯಗಳಲ್ಲಿಯೇ ಪರಸ್ಪರ ಆಂತರಿಕ ಭಿನ್ನಾಭಿಪ್ರಾಯಗಳು, ಅಸಮಾನತೆಗಳು, ತಾರತಮ್ಯಗಳ ಕಾರಣಗಳಿಂದ ಪ್ರಬಲ ಜಾತಿಯವರ ದೌ
APA, Harvard, Vancouver, ISO, and other styles
10

ಪ್ರಸನ್ನಕುಮಾರ್, ಕೆ. "ಅಂಬೇಡ್ಕರ್‌ರವರ ಸಾಮಾಜಿಕ ಚಿಂತನೆಗಳು". AKSHARASURYA JOURNAL 05, № 06 (2025): 110 to 116. https://doi.org/10.5281/zenodo.14788784.

Full text
Abstract:
ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿ ಎಂದು ಕರೆಸಿಕೊಂಡ ಮಹಾನ್ ವ್ಯಕ್ತಿ. ಇವರು ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಇವರು ದೇಶಕ್ಕಾಗಿ ಮಾಡಿದ ಹೋರಾಟಗಳು ಎಂತಹ ದುರ್ಬಲ ವ್ಯಕ್ತಿಗಳನ್ನೂ ಸಹ ಎಚ್ಚರಿಸುತ್ತದೆ. ಇವರ ಕೊಡುಗೆಯನ್ನು ಭಾರತೀಯ ಜನತೆ ಎಂದಿಗೂ ಮರೆಯುವುದಿಲ್ಲ. ಸಂವಿಧಾನ ರಚನೆಗೆ ಮಾತ್ರವಲ್ಲದೇ ಅವರ ಸೇವೆ ಜನತೆಯನ್ನು ಜಾಗೃತರಾಗಿ ಮಾಡುವ ಸಾಧನವಾಗಿದೆ ಎನ್ನಬಹುದು. ಅಂಬೇಡ್ಕರ್ ಅವರು ವೈಚಾರಿಕತೆಯ ನೆಲೆಯಲ್ಲಿ ಈ ದೇಶವನ್ನು ಮುಂದೆ ತೆಗೆದುಕೊಂಡು ಹೋಗಬೇಕೆಂಬ ಮಹದಾಶಯವನ್ನು ಹೊಂದಿರುವ ಅಪರೂಪ ವ್ಯಕ್ತಿ. ಈ ಹಿನ್ನಲೆಯಲ್ಲಿಯೇ ಅವರು “ಈ ದೇಶದಲ್ಲಿ ಗುಡಿ-ಗೋಪುರಗಳಿಗಿಂತ ಶಾಲೆಗಳು ತೆರೆದರೆ, ಆ ದೇಶ ಉದ್ದಾರವಾಗುತ್ತದೆ” ಎಂಬ ನಿಲುವನ್ನು ತ
APA, Harvard, Vancouver, ISO, and other styles
11

D'Souza, Joseph Cyril. "ಎಡ್ವಿನ್ ಜೆ. ಎಫ್ ಡಿ ಸೋಜಾಚ್ಯಾ ಉಣ್ಯಾ ಭಾವಾಡ್ತಾಚೆ ದೊಳ್ಯಾಂನಿ ಕೊಡಿಯಾಳ್ ಪರಿಸರ್ ಆನಿ ಸಂಸ್ಕೃತಿ". MJES Journal of Amar Konkani 3, № 2 (2024): 51–67. http://dx.doi.org/10.69852/aloy.mjesjak.3.2/16343.

Full text
Abstract:
ಖಾಣ್-ಜೆವಣ್, ನ್ಹೆಸಣ್ ಆನಿ ದಿಸ್ಪಡ್ತೆಂ ಜಿವಿತ್ - ಹೆ ಖಂಚ್ಯಾಯ್ ಸಂಸ್ಕೃತಿಚೆ ಮಹತ್ವಾಚೆ ಆನಿ ಮುಳಾವೆ ಘಟಕ್ ಜಾವ್ನಾಸೊನ್, ಸಾಹಿತ್ಯಾಂತ್ಲ್ಯಾ ಸಾಂಕೇತಿಕತಾ ಆನಿ ಅರ್ಥಾಚೆ ಗಿರೆಸ್ತ್ ಮೂಳ್ ಜಾವ್ನಾಸಾತ್. ಪಾತ್ರಾಂಚೆಂ ಪ್ರೇರಣ್, ಪಾತ್ರಾಂ ಮಧ್ಲೊ ಸಂಘರ್ಶ್, ವಿಶ್ವ್ ದಿಶ್ಟಿಕೋನ್ ರೂಪಿತ್ ಕರ್ಚ್ಯಾಕ್ ಧರ್ಮ್ ಆನಿ ಪಾತ್ಯೆಣಿ ಗೂಂಡ್ ಪಾತ್ರ್ ಖೆಳ್ತಾತ್. ಹ್ಯಾ ಲೇಖನಾಂತ್ ಎಡ್ವಿನ್ ಜೆ. ಎಫ್ ಡಿ'ಸೋಜಾಚ್ಯಾ ಉಣ್ಯಾ ಭಾವಾಡ್ತಾಚೆ ಕಾದಂಬರಿಂತ್ ಕೊಡಿಯಾಳ್ ಆನಿ ಭೊಂವ್ತಿಚೆಂ ಪರಿಸರ್ ಆನಿ ಸಂಸ್ಕೃತಿ ಕಶಿ ಚಿತ್ರಿತ್ ಜಾಲ್ಯಾ, ಕಾದಂಬರಿಂತ್ ದಾಖಯಿಲ್ಲೊ ಧರ್ಮಿಕ್ ಆನಿ ಆಧ್ಯಾತ್ಮಿಕ್ ಅಂಶ್ ಪಾತ್ರಾಂಚ್ಯಾ ಬಳ್ವಂತ್ ಚಿತ್ರೀಕರಣಾಕ್ ಕಸೊ ಪೂರಕ್ ಆನಿ ಕಾದಂಬರಿಂತ್ಲ್ಯಾ ಪಾತ್ರಾಂನಿ ಸಂದರ್ಭಾಕ್ ಸರಿ ಜಾವ್ನ್ ಘೆಂವ್ಚ್ಯಾ ನಿರ್ಣಯಾಂಚೆರ್ ಆನಿ ಸಂವಾದಾ
APA, Harvard, Vancouver, ISO, and other styles
12

ವಿಜಯಲಕ್ಷ್ಮಿ, ದತ್ತಾತ್ರೇಯ ದೊಡ್ಡಮನಿ. "ವೀಸಾದ ನಿರೀಕ್ಷೆಯಲ್ಲಿನ ನೆನಪುಗಳ ಸುರುಳಿ". AKSHARASURYA JOURNAL 06, № 05 (2025): 241 to 248. https://doi.org/10.5281/zenodo.15504724.

Full text
Abstract:
ಆತ್ಮಕಥೆ ಕನ್ನಡ ಸಾಹಿತ್ಯದ ಒಂದು ಸಾಹಿತ್ಯ ಪ್ರಕಾರವಾಗಿ ಬೆಳೆದು ಬಂದಿರುವುದನ್ನು ನೋಡುತ್ತೇವೆ. ಮನುಷ್ಯನ ಸುತ್ತಲೂ ನಡೆಯುವ ಮತ್ತು ಅವರ ಅಂತರಾಳದಲ್ಲಿರುವ ಹೂರಣಗಳನ್ನು ಹೊರ ಹಾಕುವ ಒಂದು ಪ್ರಕಾರವಾಗಿ ಕಾಣುತ್ತೇವೆ. ಒಬ್ಬ ಮನುಷ್ಯನ ಇಡೀ ಬದುಕಿನಲ್ಲಿ ನಡೆದಂತಹ ತಪ್ಪು-ಸರಿ, ಸಿಹಿ-ಕಹಿ ಘಟನೆಗಳಿಗೆ ಅಕ್ಷರ ರೂಪವನ್ನು ನೀಡುತ್ತಾನೆ. ತಮ್ಮ ಅಂತರಾಳದ ತಮುಲಗಳನ್ನು ಸ್ವವಿಮರ್ಶೆಗೆ ಒಳಪಡಿಸಿಕೊಳ್ಳಲಾಗುತ್ತದೆ. ಆದರೆ ಬಾಬಾ ಸಾಹೇಬರು ಬರೆದ ಅವರ ಆತ್ಮಕಥೆಯಲ್ಲಿ ಅವರ ಬದುಕಿನ ಕಹಿ ಘಟನೆಗಳು ಹೇಗೆ ಮುಂದೆ ಅವರು ಇಡೀ ಸಮಾಜದ ಏಳಿಗೆಗಾಗಿ ಅವುಗಳನ್ನೆ ಆಧಾರವಾಗಿ ಬಳಸಿಕೊಂಡರು ಎನ್ನುವುದನ್ನು ಅವರ ಬದುಕೆ ನಮಗೆ ತೋರಿಸಿಕೊಡುತ್ತದೆ. ʼವೀಸಾದ ನಿರೀಕ್ಷೆಯಲ್ಲಿನ ನೆನಪುಗಳ ಸುರುಳಿ’ ಇದು ಡಾ. ಬಿ.ಆರ್. ಅಂಬೇಡ್ಕರ್‌ ಅವರು ಬರೆದಿರುವ ಆತ್ಮಕಥ
APA, Harvard, Vancouver, ISO, and other styles
13

ಅರುಣಾ, .ಬಿ. "ಪೋಷಣೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳಿಗೆ ಆಸಾಂಸ್ಥಿಕ ವ್ಯವಸ್ಥೆಗಳು". International Journal of Advance and Applied Research 12, № 1 (2023): 227–34. https://doi.org/10.5281/zenodo.14203499.

Full text
Abstract:
ಮಕ್ಕಳ ನ್ಯಾಯಕಾಯ್ದೆ -2015, ತಿದ್ದುಪಡಿ2021  ಮತ್ತು ಮಾದರಿ ನಿಯಮಗಳ 2016 ಮತ್ತು ತಿದ್ದುಪಡಿ 2021 ಅಡಿಯಲ್ಲಿ ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳಿಗೆ ಸಾಂಸ್ಥಿಕ ಮತ್ತು ಅಸಾಂಸ್ಥಿಕ ಆರೈಕೆಮಾಡಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಾಂಸ್ಥಿಕ ಆರೈಕೆಗೆ ಸರ್ಕಾರ ಬಾಲಮಂದಿಗಳು ಮತ್ತು ಸರ್ಕಾರೇತರ ಮಕ್ಕಳ ಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ ಅಸಾಂಸ್ಥಿಕ ವ್ಯವಸ್ಥೆ ನೀಡಲು ಮಕ್ಕಳಿಗಾಗಿ ಅನೇಕ ಕಾರ್ಯಕ್ರಮಗಳು, ಸಮಾಜಿಕ ಭದ್ರತಾ ಯೋಜನೆಗಳನ್ನು ಮಿಷನ್‌ ವಾತ್ಸಲ್ಯ ಮೂಲಕ ರೂಪಿಸಲಾಗಿದೆ.2021 -2022 ನೇ ಸಾಲಿನಲ್ಲಿ ಐ,ಸಿ,ಪಿ,ಎಸ್‌ ಹೆಸರಿನ ಬದಲಾಗಿ ಮಿಷನ್‌ ವಾತ್ಸಲ್ಯ ಹೆಸರಿನಲ್ಲಿ ಪೋರ್ಟಲ್‌ ಆರಂಭಿಸಿ ಮಕ್ಕಳಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ
APA, Harvard, Vancouver, ISO, and other styles
14

ಸಂಗನಗೌಡ, ಶಿವನಗೌಡ, та ವಿಜಯಲಕ್ಷ್ಮೀಕಟ್ಟಿ. "ಭಾರತದಲ್ಲಿ ನಿರುದ್ಯೋಗ ಒಂದು ಅವಲೋಕನ". AKSHARASURYA 05, № 02 (2024): 143 to 147. https://doi.org/10.5281/zenodo.14035418.

Full text
Abstract:
ನಿರುದ್ಯೋಗವು ಸಾರ್ವತ್ರಿಕವಾಗಿದ್ದರೂ ಭಾರತದಲ್ಲಿ ಅದು ಹೆಚ್ಚು ಗುರುತಿಸಲ್ಪಟ್ಟಿದೆ. ಕನಿಷ್ಠ ಮೆಟ್ರಿಕ್ಯುಲೇಷನ್ ವಿದ್ಯಾರ್ಹತೆ ಹೊಂದಿರುವ ಒಟ್ಟು ನಿರುದ್ಯೋಗಿ ಯುವಕರ ಸಂಖ್ಯೆ ಸುಮಾರು ಐದು ಮಿಲಿಯನ್‌ ಎಂದು ಹೇಳಲಾಗಿದೆ. ಇದರಲ್ಲಿ ಸುಮಾರು 1.5 ಮಿಲಿಯನ್ ನಿರುದ್ಯೋಗಿ ಪದವೀಧರರು ಸೇರಿದ್ದಾರೆ. ಉದ್ಯೋಗ ವಿನಿಮಯ ನಿರ್ದೇಶನಾಲಯದ ಮಾನವ ಶಕ್ತಿ ವಿಭಾಗವು ಕೈಗೊಂಡ ಅಧ್ಯಯನದ ಪ್ರಕಾರ ಉದ್ಯೋಗ ಬಯಸುವ ನಿರುದ್ಯೋಗಿ ಪದವೀಧರರಲ್ಲಿ 93 ಪ್ರತಿಶತ ಪುರುಷರು ಮತ್ತು 7 ಪ್ರತಿಶತ ಮಹಿಳೆಯರು. 48.5 ಪ್ರತಿಶತ ನಿರುದ್ಯೋಗ ಪದವೀಧರರು ಬಿ.ಎ. 22.7, ಬಿ.ಎಸ್‌ಸಿ ಮತ್ತು 12.8 ಪ್ರತಿಶತ ಬಿ.ಕಾಂ. ನಿರುದ್ಯೋಗವು ವೃತ್ತಿಪರವಾಗಿ ತರಬೇತಿ ಪಡೆದ ಎಂಜಿನಿಯರ್‌ಗಳು, ವೈದ್ಯರು ಮತ್ತು ಇತರ ತಾಂತ್ರಿಕವಾಗಿ ಅರ್ಹತೆ ಹೊಂದಿರುವ ಜನರಲ್ಲಿ ವ್ಯಾಪಕವಾ
APA, Harvard, Vancouver, ISO, and other styles
15

ಲಕ್ಷ್ಮಿದೇವಿ, ಎನ್‌. "ಬಾಚಿಕಾಯಕದ ಕಾಳವ್ವೆಯ ವಚನದಲ್ಲಿ ಕಾಯಕ, ಮಾತು ಮತ್ತು ವ್ರತ ಪ್ರಜ್ಞೆ". AKSHARASURYA 04, № 03 (2024): 117 to 124. https://doi.org/10.5281/zenodo.12672873.

Full text
Abstract:
ವಚನಗಳಲ್ಲಿ ನಾವು ವಿಚಾರ ಸ್ವಾತಂತ್ರ್ಯದ ಪರಾಕಾಷ್ಟೆಯನ್ನು ಕಾಣುತ್ತೇವೆ. “ಉದರ ನಿಮಿತ್ತಂ ಬಹುಕೃತ ವೇಷಂ” ಎಂಬ ಮಾತೊಂದಿದೆ. ಹೊಟ್ಟೆ ಹೊರೆಯುವುದಕ್ಕಾಗಿ ಮಾನವ ಅನೇಕ ವೇಷಗಳನ್ನು ಕೈಗೊಳ್ಳುತ್ತಾನೆ. ಆದರೆ ಶರಣರು ಹೊಟ್ಟೆ ಹೊರೆಯುವ ಕಾಯಕದ ಮೂಲಕ ದಾಸೋಹ ಸಿದ್ಧಾಂತವನ್ನು ಅನುಭಾವದ ಮೂಲಕ ಸಮಾಜಕ್ಕೆ ಸಾರಿದವರು. ಅಸಮಾನತೆಯ ಸಮಾಜದಲ್ಲಿ ಶೂದ್ರರಿಗೆ, ಅಸ್ಪೃಶ್ಯರಿಗೆ, ಹೆಣ್ಣಿಗೆ ಸಮಾನ ಸ್ಥಾನಮಾನವನ್ನು ತಂದುಕೊಟ್ಟ ಕೀರ್ತಿ ಬಸವಣ್ಣನರಿಗೆ ಸಲ್ಲುತ್ತದೆ. ೧೨ನೇ ಶತಮಾನದ ಸಮಾಜದಲ್ಲಿ ಅಕ್ಷರ ಕ್ರಾಂತಿಯ ಮೂಲಕ ಸ್ತ್ರೀ-ಪುರುಷ ಸಮಾನತೆಯನ್ನು ಪಡೆದದ್ದು ಪವಾಡವೇ ಸರಿ. ಅದರಲ್ಲೂ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಮಹಿಳೆ ಅನುಭವ ಮಂಟಪದ ಗೋಷ್ಠಿಯಲ್ಲಿ ಪುರುಷನಷ್ಟೇ ಸಮಾನತೆಯನ್ನು ಕೈಗೊಂಡಿದ್ದು ಸಮಾಜಿಕ ಕ್ರಾಂತಿ ಎನ್ನಬಹುದು. ಅವರಲ್ಲಿ
APA, Harvard, Vancouver, ISO, and other styles
16

ಮಂಜುನಾಥ, ಆರ್. ಪಿ., та ವಿ. ಬೆಟ್ಟಕೋಟೆ ನಾಗೇಶ್. "ಕನ್ನಡ ರಂಗಭೂಮಿಗೆ ನಾಟ್ಯ ಕಲಾಪ್ರಪೂರ್ಣ 'ಬಳ್ಳಾರಿ ರಾಘವ'ರ ಕೊಡುಗೆ". AKSHARASURYA 04, № 01 (2024): 18 to 28. https://doi.org/10.5281/zenodo.11162107.

Full text
Abstract:
ಬಳ್ಳಾರಿಯ ರಾಘವರು ಈ ನಾಡು ನುಡಿ ಕಂಡ ಅದ್ಭುತವಾದ ಪ್ರತಿಭೆ. ಅವರು ಎರಡು ರಾಜ್ಯಗಳ ಸಾಂಸ್ಕೃತಿಕ ಲೋಕದ ಸಂಪತ್ತು ಎನಿಸಿದ್ದಾರೆ. ಕೇವಲ ತಮ್ಮ ಅಭೂತಪೂರ್ವ ಅಭಿನಯ ಚಾತುರ್ಯದ ಮೂಲಕವೇ ಇಡೀ ವಿಶ್ವದ ಗಮನ ಸೆಳೆದ ಧೀಮಂತ ಕಲಾ ಚೇತನ. ಇಂತಹ ಅಗಮ್ಯ ಚೇತನವೊಂದು ನಮ್ಮ ಈ ಗಡಿ ಭಾಗದಲ್ಲಿ ಆಗು ಹೋಗಿರುವುದು ನಮ್ಮೆಲ್ಲರ ಸುದೈವವೇ ಸರಿ. ಹುಟ್ಟಿದ್ದು ಅನಂತಪುರ ಜಿಲ್ಲೆಯ ತಾಡಪತ್ರಿಯಲ್ಲಾದರೂ ತಮ್ಮ ಬೆಳವಣಿಗೆಯನ್ನು ಕಂಡು ಕೊಂಡಿದ್ದೆಲ್ಲಾ ಬಳ್ಳಾರಿಯ ತಮ್ಮ ಮಾವನಾವರಾದ ಖ್ಯಾತ ವಕೀಲ, ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಾಮಾಚಾರ್ಯರ ಒಡನಾಟದಲ್ಲಿಯೇ ಸಾಗಿತು. ಮೊದ ಮೊದಲು ವಕೀಲ ವೃತ್ತಿಯಲ್ಲಿ ಪಾಂಡಿತ್ಯಗಳಿಸಲು ಬಳ್ಳಾರಿಗೆ ಬಂದು ನಾಟಕ ಕಲೆಯಲ್ಲಿ ನೈಪುಣ್ಯತೆಯನ್ನು ಗಳಸಿದರು. ಇದಕ್ಕೆ ಮೂಲ ಪ್ರೇರಣೆ ಮಾವನವರಾದ ಧರ್ಮಾವರಂ ರಾಮಕೃಷ್ಣಮಾಚಾರ್ಯರು ಹಾ
APA, Harvard, Vancouver, ISO, and other styles
17

ಎಲ್ಲಪ್ಪ, ಜಿ. "ಭಾರತದ ಪ್ರಜಾಪ್ರಭುತ್ವದ ಪಿತಾಮಹರಾಗಿ ಡಾ. ಬಿ. ಆರ್. ಅಂಬೇಡ್ಕರ್‌". AKSHARASURYA JOURNAL 06, № 05 (2025): 36 to 45. https://doi.org/10.5281/zenodo.15504196.

Full text
Abstract:
ವಿಸ್ತಾರವಾದ ದೇಶ, ವೈವಿಧ್ಯಮಯವಾದ ಸಂಸ್ಕೃತಿಗಳು, ಸಾವಿರಾರು ಭಾಷೆಗಳು, ಸಾವಿರಾರು ಜಾತಿಗಳು, ವಿಭಿನ್ನ ಮತಗಳು ಈ ಮಣ್ಣಿನಲ್ಲಿ ಜೀವಿಸುತ್ತಿವೆ. ಈ ಎಲ್ಲವುಗಳಿಗೆ ಜೀವ ಕೊಡುವ ತತ್ವ ಯಾವುದು? ಮತ್ತು ಇವುಗಳನ್ನು ಬೆಸೆಯುವ ಸೂತ್ರ ಯಾವುದು? ಎಂಬ ಆಲೋಚನೆಗಳ ಬೆನ್ನ ಹತ್ತಿದಾಗ ಸಿಗುವ ಪೂರಕ ಶಕ್ತಿಗಳ ಬಗ್ಗೆ ಅಧ್ಯಯನಕ್ಕೆ ಪ್ರಜಾಪ್ರಭುತ್ವವೊಂದು ಮುಖ್ಯವಾಗಿ ಮುನ್ನೆಲೆಗೆ ಬರುತ್ತದೆ. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ಇದು ಬೆಳೆದು ಬಂದ ಪರಂಪರೆ, ಅದು ಗಟ್ಟಿಗೊಂಡ ಹಿನ್ನೆಲೆಗಳು ಆಸಕ್ತಿದಾಯಕಗಳಾಗಿವೆ. ಬಾಬಾ ಸಾಹೇಬರು ಪ್ರಜಾಪ್ರಭುತ್ವವನ್ನು ಭಾರತೀಯ ಮಣ್ಣಿನಲ್ಲಿ ಕೃಷಿ ಮಾಡಿದ ಬಗ್ಗೆ ಗಮನಾರ್ಹವಾದದ್ದು. ಎಲ್ಲಾ ಜನರು ಬದುಕಲಿಕ್ಕೆ ಬೇಕಾದ ಜೀವನ ವಿಧಾನ ಮತ್ತು ಆಡಳಿತ ಕ್ರಮವಾಗಿಸುವಲ್ಲಿ ಸಶಕ್ತವಾದ ಸೂತ್ರವೊಂದನ್ನು ಪ
APA, Harvard, Vancouver, ISO, and other styles
18

PRITHVIRAJ, B. "ಕುವೆಂಪು ಮತ್ತು ಕಂಬಾರರ ನಾಟಕಗಳು ಮುಂದಿಡುವ ರಂಗಕಲ್ಪನೆ". AKSHARASURYA JOURNAL 03, № 03 (2024): 111 to 121. https://doi.org/10.5281/zenodo.10775182.

Full text
Abstract:
ಪ್ರಸುತ್ತ ಸಂಶೋಧಾನ ಲೇಖನವು ಕುವೆಂಪು ಮತ್ತು ಕಂಬಾರರ ಕೃತಿಗಳಲ್ಲಿ ಹೊಸತನು ಹುಡುಕುವ ಪ್ರಯತ್ನವನ್ನು ಮಾಡಲಾಗಿದೆ. ಕುಂವೆಪು ಅವರಲ್ಲಿ ನವೋದಯ ಪ್ರಜ್ಞೆ ಕಾಣಿಸಿದ್ದರೆ ಕಂಬಾರರಲ್ಲಿ ದಲಿತರ ಪರ ಪ್ರಜ್ಞೆ ಕಾಣಿಸಿಕೊಂಡಿದೆ. ಈ ಲೇಖನವನ್ನು ವೀರೆಶ್ ಬಡೀಗಾರ್‌ರವರ ‘ಕನ್ನಡ ಸಾಹಿತ್ಯ ಪರಂಪರೆ ಮತ್ತು ಕಂಬಾರರು’ & ಉತ್ಥಾನಭಾರೀಘಾಟ್‌ಅವರ ‘ಕುವೆಂಪು ನಾಟಕಗಳು ಮುಂದಿಡುವ ರಂಗಕಲ್ಪನೆ’ ಎಂಬ ಪುಸ್ತಕಗಳ ಹಿನ್ನಲೆಯಲ್ಲಿ ಬರೆಯಲಾಗಿದೆ. ಇದುವರೆಗೂ ಸಾಹಿತ್ಯ ವಲಯದಲ್ಲಿ ಕಂಬಾರರನ್ನು ಕೇವಲ ಅವರ ಸೃಜನಶೀಲ ಕಲಾಕೃತಿಗಳ ಮೂಲಕವಷ್ಟೇ ಹೆಚ್ಚು ಚರ್ಚಿಸಿದ್ದು ಕಾಣುತ್ತದೆ. ಕಂಬಾರರ ಸೃಜನಶೀಲ ಬರಹಗಳ ಜಗತ್ತು ಒಂದು ಕಡೆಯಾದರೆ, ಸಂಶೋದನೆ, ಜಾನಪದ, ಸಂಪಾದನೆ ಹಾಗೂ ವೈಚಾರಿಕತೆಗೆ ಸಂಬಂಧಿಸಿದ ಸೃಜನೇತರ ಬರಹ ಇನ್ನೊಂದು
APA, Harvard, Vancouver, ISO, and other styles
19

ಸಂಪತ್, ಬೆಟ್ಟಗೆರೆ. "ತೇಜಸ್ವಿ: ಪ್ರೀತಿ, ಜಾತಿ ಇತ್ಯಾದಿ". AKSHARASURYA JOURNAL 05, № 04 (2024): 69 to 93. https://doi.org/10.5281/zenodo.14289855.

Full text
Abstract:
ತೇಜಸ್ವಿಯವರ ಸಾಹಿತ್ಯ ಕುರಿತು ಒಂದು ನಿಟ್ಟಿನಿಂದ ತಮಾಷೆಯಾಗಿ ಅದರಲ್ಲಿ ಬರುವ ಬೈಗುಳಗಳನ್ನು ಸೀಮಿತ ದೃಷ್ಟಿಕೋನದಿಂದ ನೋಡುವ ಒಂದು ನೋಟ. ಅದರಂತೆ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ತೇಜಸ್ವಿ ಎಂಬ ಜಾತ್ಯಾತೀತವಾದಿ ನಿಲುವಿನ ವ್ಯಕ್ತಿತ್ವವನ್ನೇ ಜಾತಿವಾದಿ ವ್ಯಕ್ತಿಯಾಗಿ ಒಂದೇ ದೃಷ್ಟಿಕೋನದಿಂದ ಏಕಮುಖಿ ಗ್ರಹಿಕೆಯಲ್ಲಿ ಕಂಡುಕೊಂಡಿರುವುದಕ್ಕೆ ಒಂದು ಪ್ರತಿಕ್ರಿಯಾತ್ಮಕ ವಿವೇಚನೆಯಾಗಿ ಈ ಲೇಖನ ನಿರೂಪಿತವಾಗಿದೆ.  ಉದಾಹರಣೆಗೆ ತೇಜಸ್ವಿಯವರ ಪರಿಸರದ ಕತೆ ಪುಸ್ತಕದಲ್ಲಿನ ಪಾತ್ರ ಕರಿಯಪ್ಪ ಮೇಲು ಜಾತಿಯ ಒಕ್ಕಲಿಗರ ಗೌಡ ಸಮುದಾಯದವನಾದುದರಿಂದ ಕೆಳವರ್ಗವೊಂದರ ಸಮುದಾಯದ ಪಾತ್ರವಾದ ಎಂಗ್ಟನನ್ನು ಬೈಗುಳದಲ್ಲಿ ಕೆಟ್ಟಪದಗಳನ್ನು ಬಳಸಿ ನಿಂದಿಸಿದ್ದಾನೆ; ಇದರಲ್ಲಿ ಹುಟ್ಟಿನ ಜಾತಿಯಿಂದ ಕರಿಯಪ್ಪನನ್ನೇ ಪ್ರತಿನಿಧಿಸುವ ತೇಜಸ್ವಿಯವರ ಒಕ್ಕಲಿಗ ಗೌಡ ಜ
APA, Harvard, Vancouver, ISO, and other styles
20

Pinto, Melwyn. "ಕೊಂಕ್ಣಿ ಸಂಸ್ಥ್ಯಾಂತ್ ಸಂಸೊಧಾಚಿಂ ಸಭಾರ್ ಕಾಮಾಂ ಜಾವ್ನ್ಂಚ್ ಆಸಾತ್". MJES Journal of Amar Konkani 1, № 1 (2021): 3–4. https://doi.org/10.69852/aloy.mjesjak.1.1/17765/.

Full text
Abstract:
ಕೊರೋನಾ ಆನಿ ಲೋಕ್ಡಾಾವ್ನಾ ನಿಮ್ತಿಂ ಜಾಯ್ ಪುರ್ತೆಂ ಲುಕ್ಸಾಣ್ ಜಾಲಾಂ ಆನಿ ಆಜೂನ್ ಪರಿಗತ್ ವಿಶೇಸ್ ಸುದ್ರೊಂಕ್ ನಾ ಮ್ಹಳ್ಳೆಂ ಸತ್. ತರಿಕೀ ಕೊಂಕ್ಣೆಚ್ಯಾ ಸಂದರ್ಭಿಂ, ಆನಿ ವಿಶೇಸ್ ಕರ್ನ್ ಕೊಂಕ್ಣಿ ಸಾಹಿತ್ಯ್ ಆನಿ ಲಿಕ್ಣೆಚ್ಯಾ ಸಂದರ್ಭಿಂ, ಕೊರೋನಾ ಆನಿ ಲೋಕ್ ಡಾವ್ನ್ ಎಕಾ ರಿತಿಂ ಬೆಸಾಂವಾಚೊ ಕಾಳ್ ಜಾಂವ್ಕ್ ಪಾವ್ಲೊ ಮ್ಹಣ್ ಸಾಂಗ್ಯೆತ್ ಕೊಣ್ಣಾ. ಪಾಟ್ಲ್ಯಾ ಥೊಡ್ಯಾ ಮಹಿನ್ಯಾಂನಿ ಕೊಂಕ್ಣೆಂತ್ ವಿವಿಧ್ ಬೊಲಿಂನಿ ಫಾಯ್ಸ್ ಜಾಲ್ಲೆ ಬೂಕ್ ಪಳೆತಾನಾ ಅಸಲೆಂ ಏಕ್ ಚಿಂತಾಪ್ ಉದೆತಾ. ಹಿ ವಾಡಾವಳ್ ಮುಕಾರುನ್ಂಬಚ್ ವಚೊಂದಿ ಮ್ಹಳ್ಳಿ ಆಪೇಕ್ಷಾ ಆಮ್ಚಿ ಜಾವ್ನಾಸಾ. ಪ್ರಸ್ತುತ್ ‘ಅಮರ್ ಕೊಂಕಣಿ’ ಅಂಕ್ಯಾಂತ್ ತೀನ್ ಉಂಚ್ಲಿಂ ಲೇಕನಾಂ ಆಸಾತ್. ಫಾ. ದೇವದತ್ತ ಕಾಮತ್ ಹಾಣಿಂ ಲಿಕ್ಲ್ಲೆಂ ಕೊಂಕಣಿ ಭಾಸ್ ಆನಿ ವ್ಯಾಕರಣಾ ಲಗ್ತಿ ಏಕ್ ಲೇಕನ್, ಲೇಕಕಾಚೊ ಕೊಂ
APA, Harvard, Vancouver, ISO, and other styles
21

ಸಿ., ನಾಗಭೂಷಣ. "ಗುಮ್ಮಳಾಪುರದ ಸಿದ್ಧಲಿಂಗ ಯತಿಗಳ ಶೂನ್ಯ ಸಂಪಾದನೆ: ಕೆಲವು ಟಿಪ್ಪಣಿಗಳು". AKSHARASURYA 06, № 02 (2025): 01 to 19. https://doi.org/10.5281/zenodo.15123743.

Full text
Abstract:
ಅಭಿನವ ಅಲ್ಲಮರೆಂದು ಖ್ಯಾತರಾದ ತೋಂಟದ ಸಿದ್ಧಲಿಂಗಯತಿಗಳು, ತಮ್ಮ ಶಿಷ್ಯ-ಪ್ರಶಿಷ್ಯ ಪರಂಪರೆಯ ಮೂಲಕ, ಗ್ರಂಥಸಂಪಾದನೆಯ ವಿಧಿವಿಧಾನಗಳನ್ನು ಅನ್ವಯಿಸಿ ವಚನಗಳನ್ನು ಸಂಕಲಿಸುವ ವ್ಯಾಖ್ಯಾನಿಸುವಂತಹ ಸಾಹಿತ್ಯಕ ಚಟುವಟಿಕೆಗಳನ್ನು ಕೈಗೊಂಡಿರುವುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ವಿಶಿಷ್ಟವಾದುದಾಗಿದೆ. ವಚನ ರಚನೆ ಹಾಗೂ ವಚನ ರಕ್ಷಣೆ, ವ್ಯಾಖ್ಯಾನ ಎರಡರಲ್ಲಿಯೂ ಸ್ಥಾನ ಪಡೆದಿದ್ದಾರೆ. ವಚನಗಳನ್ನು ಸಂಕಲಿಸುವ, ವ್ಯಾಖ್ಯಾನಿಸುವಂತಹ ಸಾಹಿತ್ಯಕ ಚಟುವಟಿಕೆಗಳನ್ನು ತಮ್ಮ ಶಿಷ್ಯ ಪ್ರಶಿಷ್ಯ ಪರಂಪರೆಯ ಮೂಲಕ ಅನುಷ್ಠಾನಗೊಳಿಸಿದರು. “ಕಲ್ಯಾಣ ಕ್ರಾಂತಿಯ ವಿಪ್ಲವದ ನಂತರ ಅಳಿದುಳಿದ ವಚನ ಸಾಹಿತ್ಯವನ್ನು ಸಂರಕ್ಷಿಸುವ ಶೋಧಿಸುವ, ಸಂಕಲಿಸುವ, ವ್ಯಾಖ್ಯಾನಿಸುವ ಮೂಲಕ ಕಾಪಾಡಿಕೊಂಡು ಬರಲು 15 ಮತ್ತು 16 ನೇ ಶತಮಾನದ ಸಂಕಲನಕಾರರು ಕಾರಣರಾಗಿದ್ದಾರೆ.
APA, Harvard, Vancouver, ISO, and other styles
22

ರಾಜಕುಮಾರ, ಎಂ. ಸಿಂಧೆ. "ಡಾ. ಬಿ. ಆರ್. ಅಂಬೇಡ್ಕರ್‌ ಅವರ ಬದುಕಿನಿಂದ ಕಲಿಯಬೇಕಾದ ಸಂದೇಶ". AKSHARASURYA JOURNAL 06, № 01 (2025): 12 to 21. https://doi.org/10.5281/zenodo.14961338.

Full text
Abstract:
ಕಲಿಕೆ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿದೆ. ಅದು ನಿತ್ಯ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಹುಟ್ಟಿನಿಂದ ಸಾವಿನವರೆಗೂ ಜೀವನುದ್ದಕ್ಕೂ ವಿವಿಧ ಜ್ಞಾನಶಾಖೆಗಳ ಮೂಲಕ ಜೀವನಾನುಭವ ಪಡೆಯುತ್ತ, ಹಳೆ ಬೇರು ಹೊಸ ಚಿಗುರು ಎಂಬಂತೆ ಗುರುಹಿರಿಯರ ನಡೆ-ನುಡಿ, ಆಚಾರ ವಿಚಾರಗಳನ್ನು ಅನುಲಕ್ಷಿಸುತ್ತ, ಭವಿಷ್ಯದ ಬದುಕಿನ ಅಗತ್ಯತೆಗಳನ್ನು ಕಲ್ಪಿಸಿಕೊಳ್ಳುತ್ತ ಹಳೆಯ ಮತ್ತು ಹೊಸದರ ಸಮ್ಮಿಶ್ರಣದೊಂದಿಗೆ ಸುಂದರ ಬದುಕು ಕಟ್ಟಿಕೊಳ್ಳಲು ‘ಕಲಿಕೆ’ ಎಂಬ ಪ್ರಕ್ರಿಯೆ ನಡೆಯುತ್ತಲೇ ಸಾಗುತ್ತದೆ.‘ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ’ ಯಿಂದ ಆರಂಭವಾಗಿ ಕಲಿಕೆ ಮುಂದುವರೆಯುತ್ತದೆ. ‘ದೇಶ ಸುತ್ತು ಇಲ್ಲವೇ ಕೋಶ ಓದು’ ಎಂಬಂತೆ ಸಾಹಿತ್ಯ, ಕಾವ್ಯ, ಪುರಾಣ, ಶಾಸ್ತ್ರ, ಕಲೆ ಹೀಗೆ ನೂರಾರು ಪ್ರಕಾರದ ಗ್ರಂಥಗಳ ಅಧ್ಯ
APA, Harvard, Vancouver, ISO, and other styles
23

ಮಾನಸ, ಎಂ. "ದೇಸಿ ಸಾಹಿತ್ಯ ಸಂಪಾದನೆಯಲ್ಲಿ ವೈ.ಸಿ. ಭಾನುಮತಿ ಅವರ ಹೆಜ್ಜೆ ಗುರುತು". AKSHARASURYA JOURNAL 05, № 04 (2024): 126 to 131. https://doi.org/10.5281/zenodo.14289950.

Full text
Abstract:
ವೈ.ಸಿ. ಭಾನುಮತಿ ಅವರು ಹಸ್ತಪ್ರತಿ ಗ್ರಂಥ ಸಂಪಾದನಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಇವರ ಕೃತಿಗಳ ಮೂಲಕ ಅವಲೋಕಿಸಲಾಗಿದೆ. ಹಸ್ತಪ್ರತಿ ಹಾಗೂ ಗ್ರಂಥ ಸಂಪಾದನಾ ಕ್ಷೇತ್ರವು ಶ್ರಮದಾಯಕವಾಗಿರುವಂತಹದ್ದು, ಈ ಶ್ರಮದಾಯಕ ಕ್ಷೇತ್ರವನ್ನು ವೃತ್ತಿಯಾಗಿ ಸ್ವೀಕರಿಸಿ, ಅನೇಕ ಗ್ರಂಥ ಸಂಪಾದಕ ವಿದ್ವಾಂಸರ ಹಾದಿಯಲ್ಲಿ ವೈ.ಸಿ. ಭಾನುಮತಿಯವರು ಸಹ ಪ್ರಮುಖರಾಗಿರುತ್ತಾರೆ. ಭಾನುಮತಿ ಅವರು ಇದುವರೆಗೂ ಹಲವಾರು ಪ್ರಾಚೀನ ಹಳೆಗನ್ನಡ ಕೃತಿಗಳನ್ನು ಸಂಪಾದಿಸಿ, ಪರಿಷ್ಕರಿಸಿ ಪ್ರಕಟಿಸಿದ್ದಾರೆ. ಇವರ ಕೃತಿಗಳನ್ನು ಮಾರ್ಗ-ದೇಶಿ-ಮೌಖಿಕ ಎಂದು ವಿಭಾಗಿಸಿಕೊಂಡು ಆಯ್ದ ಕೆಲವು ಕೃತಿಗಳ ಸಂಪಾದನೆ, ವೈಧಾನಿಕತೆಯ ಕುರಿತು ಪ್ರಸ್ತುತ ಬರಹದಲ್ಲಿ ನೀಡಲಾಗಿದೆ. ಇವರ ಮಾರ್ಗ-ದೇಶಿ ಕೃತಿಗಳ ಸಂಪಾದನೆಯಲ್ಲಿ ಕನ್ನಡನಾಡಿನ ಚರಿತ್ರೆ ತಿಳಿಯುವಂತಹ ಚಾರಿತ್ರಿಕ ಅಂಶಗಳು, ಸಾಮಾ
APA, Harvard, Vancouver, ISO, and other styles
24

ಶಶಾಂಕ, ಕೆ. ಎಸ್. "ಸ್ವಾತಂತ್ರ್ಯ ಪೂರ್ವದಲ್ಲಿ ಮಂಡ್ಯ ಜಿಲ್ಲೆಯಲ್ಲಾದ ಸಮಾಜೋ-ರಾಜಕೀಯದ ಸ್ಥಿತ್ಯಂತರ". AKSHARASURYA JOURNAL 03, № 04. SPECIAL ISSUE. (2024): 09 to 23. https://doi.org/10.5281/zenodo.10929613.

Full text
Abstract:
‘ಸಕ್ಕರೆಯ ಸೀಮೆ’ ಎಂದು ಪ್ರಖ್ಯಾತಿ ಪಡೆದುಕೊಂಡಿರುವ ಮಂಡ್ಯ ಜಿಲ್ಲೆ ಇಂದು ರಾಜಕೀಯ, ಸಾಮಾಜಿಕ ಹಾಗೂ ಕೃಷಿ ಕ್ಷೇತ್ರದಲ್ಲಿ ತನ್ನದೆಯಾದ ಮಹತ್ವವನ್ನು ಪಡೆದುಕೊಂಡಿದೆ. ಇದಕ್ಕೆಲ್ಲಾ ಕಾರಣ ಮಂಡ್ಯ ಜಿಲ್ಲೆಯ ಜೀವನಾಡಿ ಕನ್ನಂಬಾಡಿ ಕಟ್ಟೆಯಾಗಿದೆ. ಮೈಸೂರಿನ ಅರಸ ನಾಲ್ವಡಿಯವರನ್ನು ರಾಷ್ಟ್ರಪಿತ ಮಹಾತ್ಮಗಾಂಧಿಯವರು ರಾಜರ್ಷಿಯೆಂದು ಕರೆದರು. ಇದಕ್ಕೆ ನಾಲ್ವಡಿಯವರ ಪ್ರಜಾಹಿತಾತ್ಮಕ ಧೋರಣೆಗಳು. ಸರ್ವಾಧಿಕಾರಿಯೊಬ್ಬ ಪ್ರಜಾಸತ್ತಾತ್ಮಕ ಮನೋಭಾವ ತಳೆಯುವುದು ಜಗತ್ತಿನ ರಾಜಕೀಯ ಇತಿಹಾಸದಲ್ಲಿಯೇ ಅಪರೂಪದ ಸಂಗತಿಯಾಗಿದೆ. ಭಾರತದಲ್ಲಿ ಮಾತ್ರವಲ್ಲದೇ ಏಷ್ಯಾ ಖಂಡದಲ್ಲಿಯೇ ಮೊದಲ ಜಲವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದ ಕೀರ್ತಿ ನಾಲ್ವಡಿಯವರಿಗೆ ಸಲ್ಲುತ್ತದೆ. ಹಾಗೆಯೇ ಮಂಡ್ಯ ಜಿಲ್ಲೆಯಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟನ್ನು ನಿರ್ಮಿಸಿದರು. ಹ
APA, Harvard, Vancouver, ISO, and other styles
25

ಮ.ಸು.ಕೃಷ್ಣಮೂರ್ತಿ. "ಔತ್ತರೇಯ ಸಂತರ ಮೇಲೆ ವೀರಶೈವ ಪ್ರಭಾವ". AKSHARASURYA 04, № 03 (2024): 01 to 36. https://doi.org/10.5281/zenodo.12701300.

Full text
Abstract:
ಬಹುಸಾಂಸ್ಕೃತಿಕ ಸಂಬಂಧಗಳ ಸಂಶೋಧಕ-ಸಾಧಕರು ಮ.ಸು.ಕೃಷ್ಣಮೂರ್ತಿ ಮನುಕುಲವನ್ನು ಇಡಿಯಾಗಿ ಕಾಣುವ ಮನಸ್ಸು, ಕನ್ನಡ-ಹಿಂದಿ ಭಾಷೆ-ಸಾಹಿತ್ಯಗಳ ಸೇತುವೆ, ಎರಡು ಭಾಷೆಗಳಲ್ಲೂ ಬರೆದ ಸವ್ಯಸಾಚಿ, ಬಹುಪ್ರಕಾರಗಳ ಸಾಹಿತ್ಯಕೃಷಿಕ, ಭಾರತೀಯ ಅಧ್ಯಾತ್ಮ ಪರಂಪರೆಯ ಮಹಾಶೋಧಕ ಮೊದಲಾದ ಪ್ರಸಿದ್ಧಿಗೆ ಭಾಜನರಾದ ಸಾಹಿತಿ ಮ.ಸು.ಕೃಷ್ಣಮೂರ್ತಿ ಅವರು. ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಶ್ರೀಯುತರ ಒಂದೊಂದು ಪುಸ್ತಕವೂ ಇವರ ಆಳವಾದ ವಿದ್ವತ್ತಿಗೆ ಸಾಕ್ಷಿಯಾಗಿವೆ. ಕಾದಂಬರಿ, ಕವಿತೆ, ಜೀವನ ಚರಿತ್ರೆ, ಸಣ್ಣಕಥೆ, ನಾಟಕ, ಲಲಿತ ಪ್ರಬಂಧ, ವಚನಗಳು, ಮಕ್ಕಳ ಸಾಹಿತ್ಯ, ಸಂಪಾದನೆ, ಸಂಶೋಧನೆ - ಈ ಎಲ್ಲ ಕ್ಷೇತ್ರಗಳನ್ನು ಸಮೃದ್ಧಗೊಳಿಸುವುದರ ಜೊತೆಗೆ ಎಂ.ಎಸ್.ಕೆ.. ಅವರು ಹಿಂದಿಯಿಂದ ಹಾಗೂ ಇಂಗ್ಲಿಷ್‌ನಿಂದ ಕನ್ನಡಕ್ಕೆ ವಿಪುಲವಾಗಿ ಅನುವಾದಿಸಿದ್ದಾರೆ;
APA, Harvard, Vancouver, ISO, and other styles
26

Pinto, Melwyn. "ಭಾಶೆ ವಾಡಾವಳೆಂತ್ ಸಂಸೊದಾಚಿ ಗರ್ಜ್". MJES Journal of Amar Konkani 2, № 1 (2022): 4–7. https://doi.org/10.69852/aloy.mjesjak.2.1/17877/.

Full text
Abstract:
ಎಕ್ಯೆ ಭಾಶೆಚ್ಯೆ ವಾಡಾವಳೆಂತ್ ಸಂಸೊಧಾಚೊ ಮಹತ್ವ್ ಆನಿ ಪಾತ್ರಾ ವಿಶಿಂ ಸಬಾರ್ ಪಾವ್ಟಿಂ ಸವಾಲಾಂ ಉಬ್ಜಾಲ್ಲಿಂ ಆಸಾತ್. ಎಕ್ಯೆ ಭಾಶೆಚ್ಯಾ ವಾಡಾವಳೆಕ್ ಪ್ರಮುಕ್ ಜಾವ್ನ್ ತಿ ಭಾಸ್ ಉಲೊಂವ್ಚೆ ಮನಿಸ್, ತ್ಯೆ ಭಾಶೆಂತ್ ಸಾಹಿತ್ಯ್ ರಚ್ಚೆ ವ್ಯಕ್ತಿ ಆನಿ ತ್ಯೆ ಭಾಶೆಚ್ಯಾ ವಿವಿಧ್ ಸ್ತರಾಂಚೆರ್ ಸಂಸೊಧ್ ಕರ್ಚೆ ಸಂಸೊಧ್‍ಕಾರ್ ಆಸ್ಲ್ಯಾರ್ ಮಾತ್ರ್ ತಿ ಭಾಸ್ ಜಿವಾಳ್ ಉರ್ತಾ ಮ್ಹಣ್ ಸಾಂಗ್ಯೆತ್. ಹ್ಯಾ ತೀನ್ ಆಯಾಮಾಂಕ್ ಆನ್ಯೇಕ್ ಆಧುನಿಕ್ ಆಯಾಮ್ ಆಮಿ ಸೆರ್ಸಿಜೆ ಪಡ್ತಾ: ಆಜ್ ಏಕ್ ಭಾಸ್ ಡಿಜಿಟಲ್ ಮಾದ್ಯಮಾಂತ್‍ಯೀ ಆಸಾಜೆ ಜಾಲ್ಲಿ ಅನಿವಾರ್ಯತಾ ಆಸಾ ಆನಿ ಅಶೆಂ ಆಸ್ಲ್ಯಾರ್ ಮಾತ್ರ್ ತಿ ಜಿವಾಳ್ ಉರೊಂಕ್ ಸಾಧ್ಯ್. ಆಯ್ಚೆ ಪರಿಸ್ಥಿತೆಂತ್ ಇಂಗ್ಲಿಷಾ ತಸಲಿ ಭಾಸ್ ಸಬಾರ್ ಇತರ್ ಲ್ಹಾನ್ ಲ್ಹಾನ್ ಭಾಸಾಂಕ್ ಗಿಳುನ್ ಆಸಾ ಮ್ಹಳ್ಳೆಂ ಸರ್ವಾಂಕ್ ಕಳಿತ್ ಆಸೊಂಕ
APA, Harvard, Vancouver, ISO, and other styles
27

ಎಸ್., ಎಸ್. ಹಿರೇಮಠ, та ಭೈರಪ್ಪ ಎಂ. "ಕರ್ನಾಟಕದಲ್ಲಿ ದಲಿತರು". AKSHARASURYA JOURNAL 04, № 04 (2024): 01 to 44. https://doi.org/10.5281/zenodo.13283983.

Full text
Abstract:
<strong>ನೆಲಮೂಲ ಸಂಸ್ಕೃತಿಯ ಮಹಾಶೋಧಕರಾಗಿ ಪ್ರೊ.ಎಸ್.ಎಸ್.ಹಿರೇಮಠರ ಕಾಯಕ</strong> ನೆಲಮೂಲ ಸಂಸ್ಕೃತಿಯ ಜಾಡಿನಲ್ಲಿ ಸಂಶೋಧನೆಯನ್ನು ಕೈಗೊಂಡು ಬಹುತ್ವ ಭಾರತ ಹಾಗೂ ದಲಿತ ಸಂಸ್ಕೃತಿಯ ವಿರಾಟ್ ಸ್ವರೂಪವನ್ನು ಅನಾವರಣ ಮಾಡಿದ ಮಹಾಶೋಧಕರಲ್ಲಿ ಪ್ರೊ.ಎಸ್.ಎಸ್.ಹಿರೇಮಠ ಅವರು ಪ್ರಾತಃಸ್ಮರಣೀಯರಾಗಿದ್ದಾರೆ. ತಮ್ಮ ಅಧ್ಯಾಪನ ಮತ್ತು ಸಂಘಟನಾ ಕಾಯಕದ ಮೂಲಕ ಜನಪರ ಮನಸುಗಳನ್ನು ರೂಪಿಸಿದ ಕ್ರಾಂತಿಕಾರಿಯೂ ಆಗಿದ್ದ ಹಿರೇಮಠ ಮೇಷ್ಟ್ರು ಸಂಶೋಧನಾ ಕಾಯಕದ ಮೂಲಕ ಸೀಮಿತ ಬೌದ್ಧಿಕ ಹಾಗೂ ಸಾಂಸ್ಕೃತಿಕ ಸೀಮೆಗಳನ್ನು ಬಹುವಾಗಿ ವಿಸ್ತರಿಸಿಕೊಟ್ಟಿದ್ದಾರೆ. ಆದಿಮ ನೆಲೆಯಿಂದ ಹಿಡಿದು ಆಧುನಿಕ ನೆಲೆಯ ಸಾಂಸ್ಕೃತಿಕ ಸಂಗತಿಗಳ ವರೆಗೂ ಆಳವಾದ ಸಂಶೋಧನೆಯನ್ನು ಕೈಗೊಂಡ ಹಿರೇಮಠರು ಲೋಕಮುಖೀ ಒಳಹರವಿನ ಅನೇಕ ಸೂಕ್ಷ್ಮಗಳನ್ನು ನಿಕಷಕ್ಕೆ ಒಡ್ಡಿದ್ದಾರೆ; ನೆಲದರಿವಿನ ಸೀಮ
APA, Harvard, Vancouver, ISO, and other styles
28

ರಾಗೌ, (ರಾಮೇಗೌಡ), та ಭೈರಪ್ಪ ಎಂ. "ಗಾದೆ". AKSHARASURYA JOURNAL 04, № 06 (2024): 01 to 34. https://doi.org/10.5281/zenodo.13724358.

Full text
Abstract:
ಸಮಚಿತ್ತತೆಯ ಶೋಧಕ-ಸಾಧಕರಾಗಿ ಡಾ.ರಾಗೌ (ರಾಮೇಗೌಡ)&nbsp; &nbsp; ಡಾ.ರಾಗೌ(ರಾಮೇಗೌಡ) ಅವರು ಕನ್ನಡ ನವೋತ್ತರ ಯುಗದ ಪ್ರಮುಖ ಕವಿಯಾಗಿ, ವಿಮರ್ಶಕರಾಗಿ, ಸಂಶೋಧಕರಾಗಿ, ಶಾಸ್ತ್ರೀಯ ಮತ್ತು ಜಾನಪದ ವಿದ್ವಾಂಸರಾಗಿ ಹೊಮ್ಮಿದ ವಿಶಿಷ್ಟ ಲೇಖಕರು. ಕಾವ್ಯ, ವಿಮರ್ಶೆ, ಜಾನಪದ ಅಧ್ಯಯನ, ಚಾರಿತ್ರಿಕ ಮತ್ತು ಸಾಂಸ್ಕೃತಿಕ ಸಂಶೋಧನೆ ಮೊದಲಾದ ಕ್ಷೇತ್ರಗಳಲ್ಲಿ ರಾಗೌ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯಕಯಾನವನ್ನು ವಿಕಾಸಪಡಿಸಿಕೊಂಡವರು. ಸದಾ ಸಂಕ್ರಮಣಶೀಲವಾದ ಆಧುನಿಕ ಕನ್ನಡ ಸಾಹಿತ್ಯದ ಬಾನಂಗಳವನ್ನು ತನ್ನದೇ ನೆಲೆಯಲ್ಲಿ ನಿಂತು ನಿಟ್ಟಿಸುತ್ತಾ ತಮ್ಮ ಸಾಧನೆಯ ಸಾಮರ್ಥ್ಯವನ್ನು ತೋಡಿಸಿಕೊಂಡವರು ರಾಗೌ, ತಮ್ಮ ಅವಲೋಕನದಲ್ಲೂ ಕ್ರಿಯಾಶೀಲತೆಯಲ್ಲೂ ಇಂತಹುದೊಂದು ದೂರವನ್ನು, ನಿರ್ಲಿಪ್ತತೆಯನ್ನು ಅಂತರ್ಗತಗೊಳಿಸಿಕೊಂಡು ಬರೆಯುತ್ತಾ ಬಂದುದರಿಂದ ಅವರು ಒಂದು
APA, Harvard, Vancouver, ISO, and other styles
29

Lohit, P. "ಸ್ತ್ರೀ ಜಾತಿಗೆ ದಾರಿದೀಪ ಮಹಾದೆೀವಿ". IJIRMPS Volume 6, Issue 6 (2018). https://doi.org/10.5281/zenodo.1490566.

Full text
Abstract:
ಅಕ್ಕಮಹಾದೇವಿ ಪರಮ ಶಿವಭಕ್ತೆ. ಆಕೆ ಶಿವನೊಂದಿಗೆ ಸತಿ-ಪತಿ ಭಾವ ಹೊಂದಿದ್ದ ಭಕ್ತ ಶಿರೋಮಣಿ. ಈ ಕಾರಣದಿಂದ ಲೌಕಿಕವಾಗಿ ವಿವಾಹಬಂಧನಕ್ಕೆ ಒಳಪಡುವ ಆಸೆ ಆಕೆಗಿರಲಿಲ್ಲ. ಆದರೆ ಬಲವಂತ ಮಾಘಸ್ನಾನ ಆಕೆಯ ಧೃತಿ ಕೆಡಿಸಿತು. ಈ ನಿಮಿತ್ತವಾಗಿ ಅಕ್ಕ ಮಹಾದೇವಿಯು ಸ್ವಗೃಹವನ್ನು ತ್ಯಜಿಸಿ ಶ್ರೀಶೈಲವನ್ನು ಸೇರಿ ಪರಶಿವನಲ್ಲಿ ಐಕ್ಯವಾದಳು. ಈ ಪರಮ ಸಾಧ್ವಿ ಅನುಕರಣೀಯ ವ್ಯಕ್ತಿ.
APA, Harvard, Vancouver, ISO, and other styles
30

Belale, Kumar, та K. Chandrakath. "ಸಿದ್ಧರಾಮನನಿಜವಚನಗಳಲ್ಲಿ ಲಿಂಗ ವಿಕಳಾವಸ್ಥೆಯ ಭಾವ". ShodhKosh: Journal of Visual and Performing Arts 5, № 1 (2024). https://doi.org/10.29121/shodhkosh.v5.i1.2024.3597.

Full text
Abstract:
ಹನ್ನೆರಡನೆಯ ಶತಮಾನದಲ್ಲಿ ಶಿವಶರಣ ಶರಣೆಯರು ತಮ್ಮ ಆದರ್ಶ ದಾಂಪತ್ಯ ಜೀವನವನ್ನು ನಡೆಸಿ ತಾವು ತಮ್ಮ ತಮ್ಮ ಆರಾಧ್ಯ ದೈವವನ್ನು ದರ್ಶಿಸಿ ಮುಂದಿನವರಿಗೆ ಮಾರ್ಗದರ್ಶಿಗಳಾಗಿದ್ದಾರೆ. ವೀರಶೈವ ಭಕ್ತರಲ್ಲಿ “ಶರಣ ಸತಿ ಲಿಂಗ ಪತಿ’ ಭಾವ ಮೊದಲಿನಿಂದಲೂ ಆಚರಣೆಯಲ್ಲಿದ್ದುದು ಕಂಡು ಬರುತ್ತದೆ. ವಚನ ಸಾಹಿತ್ಯ ಇದಕ್ಕೆ ಸಾಕ್ಷಿಯಾಗಿ ನಿಂತಿದೆ. ಲೌಖಿಕ ಭೂಮಿಕೆಯಿಂದ ಅಧ್ಯಾತ್ಮಿಕತೆಯ ಕಡೆಗೆ ಒಲಿದಿರುವುದು ಶರಣರ ಜೀವನದಿಂದ ತಿಳಿದು ಬರುವ ಅಂಶ. ಅವರು ಉಂಡು ಉಪವಾಸಿಗಳು, ಮದುವೆಯಾಗಿಯೂ ಬ್ರಹ್ಮಚಾರಿಗಳು ಎಂಬ ಮಾತಿಗೆ ಉದಾಹರಣೆಯಾಗಿ ನಮ್ಮ ಮುಂದೆ ಇದ್ದಾರೆ. ಶಿವಶರಣರಲ್ಲಿ ಬಹು ಪ್ರಮುಖರಾದ ಸಿದ್ಧರಾಮರು ಸಹ ಈ ವಿಷಯದ ಬಗೆಗೆ ಪ್ರಸ್ತಾಪಿಸಿದ್ದಾರೆ.ಸತಿ-ಪತಿ ಭಾವದ ವಚನಗಳುಸಿದ್ದರಾಮನಲ್ಲಿ ವಿಶೇಷವಾಗಿವೆ. ಸಿದ್ದರಾಮ ತನ್ನನ್ನು ಹೆಣ್ಣಾಗಿಯೂ ಕಪಿಲಸಿದ್ಧಮಲ್ಲಿ
APA, Harvard, Vancouver, ISO, and other styles
31

Sobati, Chandrappa. "ಪ್ರಚಲಿತ ಡೊಳ್ಳಿನ ಹಾಡುಗಳಲ್ಲಿ ಲಿಂಗತಾರತಮ್ಯತೆಯ ವಾಗ್ವಾದಗಳು". ShodhKosh: Journal of Visual and Performing Arts 5, № 4 (2024). https://doi.org/10.29121/shodhkosh.v5.i4.2024.4255.

Full text
Abstract:
ಡೊಳ್ಳುಕಲೆ ಪುರುಷರ ಕಲೆ. ಪುರುಷರು ಮಾತ್ರ ಡೊಳ್ಳು ವಾದ್ಯವನ್ನು ಬಾರಿಸಬೇಕು. ಅಷ್ಟೇ ಏಕೆ? ಪುರುಷರು ಮಾತ್ರ ಈ ವಾದ್ಯವನ್ನು ಮುಟ್ಟಬೇಕು. ಈ ಕಲಾ ಪ್ರದರ್ಶನದಲ್ಲಿ ಭಾಗಿಯಾಗಬೇಕು ಎನ್ನುವ ಪಾರಂಪರಿಕ ನಂಬಿಕೆಗಳು ಮತ್ತು ನಿಷೇಧಗಳು ಒಂದು ಕಾಲದಲ್ಲಿ ಇಲ್ಲಿ ಜೀವಂತವಾಗಿದ್ದವು. ಇವತ್ತು ಮೇಲೆ ಉಲ್ಲೇಖಿತ ಯಾವುದೇ ಪರಿಕಲ್ಪನೆಗಳು ಮತ್ತು ನಿಷೇಧಗಳು ಡೊಳ್ಳುಕಲೆಗೆ ಅನ್ವಯವಾಗುವುದಿಲ್ಲ. ಇದು ಆರೋಗ್ಯಕರ ಬೆಳವಣಿಗೆ. ಏಕೆಂದರೆ, ಈ ಕಲಾಕ್ಷೇತ್ರಕ್ಕೆ ಮಹಿಳೆಯರು ಆಗಮಿಸಿ ಪ್ರದರ್ಶನದ ವೈಶಿಷ್ಟö್ಯತೆಯಲ್ಲಿ ಪುರುಷರಷ್ಟೇ ಪ್ರಾವಿಣ್ಯತೆ ಹಾಗೂ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಪಾರಂಪರಿಕ ಪ್ರದರ್ಶನದ ಸಂದರ್ಭಗಳಲ್ಲಿ ಅಲ್ಲದೆ ಇತರೆ ಸಂದರ್ಭಗಳಲ್ಲೂ ಈ ಕಲೆ ಪ್ರದರ್ಶನವಾಗುತ್ತಿದೆ. ಅದು ರಾಜಕೀಯ ಪ್ರಚಾರದ ಸಂದರ್ಭ, ಮನರಂಜನೆಯ ಸಂದರ್ಭ ಹಾಗೂ ಹಣ ಗಳಿ
APA, Harvard, Vancouver, ISO, and other styles
We offer discounts on all premium plans for authors whose works are included in thematic literature selections. Contact us to get a unique promo code!