To see the other types of publications on this topic, follow the link: ಸಂಘ.

Journal articles on the topic 'ಸಂಘ'

Create a spot-on reference in APA, MLA, Chicago, Harvard, and other styles

Select a source type:

Consult the top 24 journal articles for your research on the topic 'ಸಂಘ.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Browse journal articles on a wide variety of disciplines and organise your bibliography correctly.

1

ಬಸವರಾಜ, ಬಾರಕೇರ. "ಶತಕಗೈದ ತಡಹಾಳ ಸಹಕಾರಿ ಸಂಘ". AKSHARASURYA 06, № 02 (2025): 155 to 158. https://doi.org/10.5281/zenodo.15124216.

Full text
Abstract:
ಜನರ ಸೇವೆಯೇ ಜನಾರ್ಧನನ ಸೇವೆ ಎಂಬಂತೆ ಪ್ರಾಚೀನ ಕಾಲದಿಂದಲೂ ಭಾರತ ಸೇವೆಯಲ್ಲಿ ಎತ್ತಿದ ಕೈ. ಅಂತೆಯೇ ಕರ್ನಾಟಕದಲ್ಲಿಯೂ ಕೂಡಾ ಸಹಕಾರ ಸಂಘಗಳು ಸ್ವಾತಂತ್ರ್ಯಪೂರ್ವದಿಂದಲೂ ಸೇವೆಗೆ ಸಿದ್ಧವಾಗಿವೆ. ಅನೇಕ ಬಡ ಮತ್ತು ಮಧ್ಯಮ ವರ್ಗದ ಜನರು ಹಾಗೂ ಅಂಚೀಕರಣಗೊಂಡ ಸಮೂಹಗಳು ಇದರ ಲಾಭ ಪಡೆದುಕೊಳ್ಳುತ್ತಿವೆ. ಗದಗ ಜಿಲ್ಲೆಯ ಕಣಗಿನಹಾಳದಲ್ಲಿ ಇಡೀ ಭಾರತದಲ್ಲಿಯೇ ಪ್ರಥಮ ಕೃಷಿಪತ್ತಿನ ಸಹಕಾರಿ ಸಂಘ ಸ್ಥಾಪನೆಯಾಯಿತು. ರೈತರ ಏಳಿಗೆ ಬಯಸಲು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಗ್ರಾಮದಲ್ಲಿ 1922ರಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಸ್ಥಾಪನೆಯಾಯಿತು. ಇಂದು ಅನೇಕ ರೀತಿಯ ಆರ್ಥಿಕ ಸಾಮಾಜಿಕ ಸರಕಾರಿ ಯೋಜನೆಗಳ ಸಹಾಯವನ್ನು ಗ್ರಾಮೀಣ ಜನರಿಗೆ ನೀಡುವಲ್ಲಿ ಯಶಸ್ವಿಯಾದ ಕೃಷಿಪತ್ತಿನ ಸಹಕಾರಿ ಸಂಘದ ಕುರಿತಾದ ಮಾಹಿತಿ ಪ್ರಸ್ತುತ ಲೇಖನದಲ
APA, Harvard, Vancouver, ISO, and other styles
2

ಡಾ., ಬಸವರಾಜ ಯು. "ಬಳ್ಳಾರಿ ಜಿಲ್ಲೆಯಲ್ಲಿ ಒಣಭೂಮಿ ಬೇಸಾಯಗಾರರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳು". International Journal of Advance Research in Multidisciplinary 2, № 4 (2024): 74–78. https://doi.org/10.5281/zenodo.14343817.

Full text
Abstract:
ಮಾನವ ಸಮಾಜದಲ್ಲಿ ಸಂಘ ಜೀವಿಯಾಗಿ ಜೀವನ ನೆಡಸುತ್ತಿದ್ದಾನೆ. ಸಾಮಾಜವನ್ನು ಬಿಟ್ಟು ಬದುಕಲಾರನು. ಈ ಸಮಾಜದಲ್ಲಿ ಗೌರವಯುತವಾಗಿ ಜೀವನ ಮಾಡಲು ಕೆಲವು ಅವಶ್ಯಕವಾದ ಅಂಶಗಳು ಮುಖ್ಯವಾಗುತ್ತವೆ. ಏಕೆಂದರೆ ಇವು ಜೀವನಕ್ಕೆ ಅವಶ್ಯಕವಾಗಿರುವಂತಹ ಸಂಪನ್ಮೂಲಗಳಾಗಿವೆ. ಎಲ್ಲಾ ಸಂಪನ್ಮೂಲಗಳನ್ನು ಒಬ್ಬ ವ್ಯಕ್ತಿಯಿಂದ ಉತ್ಪಾದಿಸಲು ಸಾಧ್ಯವಿಲ್ಲ. ಅದ್ದರಿಂದ ಇತರೆ ಸಮಾಜದಲ್ಲಿನ ವ್ಯಕ್ತಿಗಳು ಕೂಡಿ ಕೆಲಸಮಾಡಿದರೆ ಸಂಪನ್ಮೂಲಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ. ಅದೇ ರೀತಿಯಲ್ಲಿ ಮಾನವ ಅಭಿವೃದ್ಧಿಗೆ ಅವಶ್ಯಕವಾದ ಸುಸ್ಥಿರ ಅಭಿವೃದ್ಧಿ ಗುರಿಗಳಾದ ಬಡತನ ನಿರ್ಮೂಲನೆ, ಹಸಿವುಮುಕ್ತ, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಸ್ವಚ್ಛ ನೀರು, ನೈರ್ಮಲ್ಯ, ಅಗ್ಗವಾದ ಬದುಕು ಶುದ್ಧ ಗೌರವಯುತ ಕೆಲಸ ಮತ್ತು ನೆರವು, ಉದ್ಯಮ, ಆವಿ
APA, Harvard, Vancouver, ISO, and other styles
3

ವೆಂಕೋಬರಾವ್, ಎಂ. ಹೊಸಕೋಟೆ. "ಸಾಹಿತ್ಯ ಸಮ್ಮೇಳನಗಳ ಪರಿಕಲ್ಪನೆ ಬದಲಾಗಬೇಕೆ?" Aksharasurya Journal 05, № 05 (2025): 132 to 137. https://doi.org/10.5281/zenodo.14619685.

Full text
Abstract:
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ನಾಡಿನ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಕರ್ನಾಟಕ, ಕನ್ನಡ, ಕನ್ನಡಿಗ ಇನ್ನಿತರ ನೆಲೆಗಳಲ್ಲಿ ಪ್ರೇರಕಶಕ್ತಿಯಾಗಿ ದುಡಿಯುತ್ತಿದೆ. ನಾಡು ನುಡಿ ಚಿಂತನೆಗಳೊಂದಿಗೆ ಕನ್ನಡಿಗರನ್ನು ಒಂದು ಗೂಡಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ, ಸಾರ್ಥಕವಾದ ತನ್ನ ಅಸ್ತಿತ್ವವನ್ನು ಮೆರೆಸುತ್ತಾ ಬಂದಿದೆ. ಅಂದಿನ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ಸರ್.ಎಂ. ವಿಶ್ವೇಶ್ವರಯ್ಯನವರ ಶ್ರಮದ ಫಲವಾಗಿ ಪರಿಷತ್ತು ಸ್ಥಾಪನೆಗೊಂಡಿತು. ಅನಂತರದಲ್ಲಿ ಮಿರ್ಜಾ ಇಸ್ಮಾಯಿಲ್ ಅವರ ನೆರವಿನಿಂದ ಪುಷ್ಠಿ ಪಡೆಯಿತು. ಸಮ್ಮೇಳನಗಳನ್ನು ನಡೆಸಲು ಮೈಸೂರು ಸಂಸ್ಥಾನವು ಅನುದಾನ ರೂಪದಲ್ಲಿ ಹಣವನ್ನು ಕೊಡುತ್ತಿತ್ತು. ತದನಂತರ ಕರ್ನಾಟಕ ಸರ್ಕಾರವು ಅನುದಾನ ನ
APA, Harvard, Vancouver, ISO, and other styles
4

ಪವಿತ್ರ, ಎಸ್. "ಬೌದ್ಧ ಧಮ್ಮ ಮತ್ತು ಮಹಿಳೆ". AKSHARASURYA JOURNAL 06, № 05 (2025): 133 to 140. https://doi.org/10.5281/zenodo.15504377.

Full text
Abstract:
ಈ ಲೇಖನದಲ್ಲಿ ಬುದ್ದನ ಮೇಲಿನ ಕೆಲವು ಆರೋಪಗಳಿಗೆ ಉತ್ತರವನ್ನು ಹುಡುಕುವ ಪ್ರಯತ್ನ ಮಾಡಲಾಗಿದೆ. ಅದಕ್ಕೆ ಅಂಬೇಡ್ಕರ್‌ ಅವರು ತಮ್ಮ ಬರಹ ಮತ್ತು ಭಾಷಣಗಳಲ್ಲಿ ಆರೋಪಗಳಿಗೆ ವಿವರಣೆ ನೀಡಿದ್ದಾರೆ. ಅದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಬುದ್ದ ತನ್ನ ಹೆಂಡತಿಯಾದ ಯಶೋಧರೆಯ ಅನುಮತಿ ಕೇಳದೆ ತೊರೆದು ಬಂದ, ಮಗನ ಮುಖವನ್ನು ಸಹ ನೋಡಲಿಲ್ಲ. ಬುದ್ದ ತನ್ನ ಸಂಘದಲ್ಲಿ ಮಹಿಳೆಯರಿಗೆ ಪ್ರವೇಶ ನೀಡಲಿಲ್ಲ. ಬುದ್ದ ತನ್ನ ಸಂಘದವರಿಗೆ ಮಹಿಳೆಯರ ವಿಷಯದಲ್ಲಿ ಸದಾ ಜಾಗ್ರತೆ ವಹಿಸಬೇಕು ಎಂದು ಹೇಳುತ್ತಿದ್ದ ಎಂಬುದು ಬುದ್ದನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಕಾರಣವಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ವೈದಿಕ ಧರ್ಮ ಪ್ರಣೀತ ಮನುಸ್ಮೃತಿ, ರಾಮಾಯಣ ಮತ್ತು ಮಹಾಭಾರತ ಕೃತಿಗಳು ಮಹಿಳೆಯರನ್ನು ಹೇಗೆ ಚಿತ್ರಿಸಿವೆ, ಅದರಲ್ಲಿ ಮಹಿಳೆಯರ ಸ್ಥಾನಮಾನಗಳೇನು
APA, Harvard, Vancouver, ISO, and other styles
5

ಮ.ಸು.ಕೃಷ್ಣಮೂರ್ತಿ. "ಔತ್ತರೇಯ ಸಂತರ ಮೇಲೆ ವೀರಶೈವ ಪ್ರಭಾವ". AKSHARASURYA 04, № 03 (2024): 01 to 36. https://doi.org/10.5281/zenodo.12701300.

Full text
Abstract:
ಬಹುಸಾಂಸ್ಕೃತಿಕ ಸಂಬಂಧಗಳ ಸಂಶೋಧಕ-ಸಾಧಕರು ಮ.ಸು.ಕೃಷ್ಣಮೂರ್ತಿ ಮನುಕುಲವನ್ನು ಇಡಿಯಾಗಿ ಕಾಣುವ ಮನಸ್ಸು, ಕನ್ನಡ-ಹಿಂದಿ ಭಾಷೆ-ಸಾಹಿತ್ಯಗಳ ಸೇತುವೆ, ಎರಡು ಭಾಷೆಗಳಲ್ಲೂ ಬರೆದ ಸವ್ಯಸಾಚಿ, ಬಹುಪ್ರಕಾರಗಳ ಸಾಹಿತ್ಯಕೃಷಿಕ, ಭಾರತೀಯ ಅಧ್ಯಾತ್ಮ ಪರಂಪರೆಯ ಮಹಾಶೋಧಕ ಮೊದಲಾದ ಪ್ರಸಿದ್ಧಿಗೆ ಭಾಜನರಾದ ಸಾಹಿತಿ ಮ.ಸು.ಕೃಷ್ಣಮೂರ್ತಿ ಅವರು. ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಶ್ರೀಯುತರ ಒಂದೊಂದು ಪುಸ್ತಕವೂ ಇವರ ಆಳವಾದ ವಿದ್ವತ್ತಿಗೆ ಸಾಕ್ಷಿಯಾಗಿವೆ. ಕಾದಂಬರಿ, ಕವಿತೆ, ಜೀವನ ಚರಿತ್ರೆ, ಸಣ್ಣಕಥೆ, ನಾಟಕ, ಲಲಿತ ಪ್ರಬಂಧ, ವಚನಗಳು, ಮಕ್ಕಳ ಸಾಹಿತ್ಯ, ಸಂಪಾದನೆ, ಸಂಶೋಧನೆ - ಈ ಎಲ್ಲ ಕ್ಷೇತ್ರಗಳನ್ನು ಸಮೃದ್ಧಗೊಳಿಸುವುದರ ಜೊತೆಗೆ ಎಂ.ಎಸ್.ಕೆ.. ಅವರು ಹಿಂದಿಯಿಂದ ಹಾಗೂ ಇಂಗ್ಲಿಷ್‌ನಿಂದ ಕನ್ನಡಕ್ಕೆ ವಿಪುಲವಾಗಿ ಅನುವಾದಿಸಿದ್ದಾರೆ;
APA, Harvard, Vancouver, ISO, and other styles
6

ರಾಘವೇಂದ್ರ, ಬಿ. ಎ. ದ್ರಾಕ್ಷಿ, та ಹೆಚ್‌. ವಿಶ್ವಮಾನವ ವಿಜಯಕುಮಾರ. "ಚೆನ್ನಣ್ಣ ವಾಲೀಕಾರ ಅವರ ಕಥೆಗಳಲ್ಲಿ ಪ್ರತಿರೋಧದ ನೆಲೆ". AKSHARASURYA 04, № 02 (2024): 98 to 112. https://doi.org/10.5281/zenodo.11525890.

Full text
Abstract:
ಕಥೆ ಹೇಳುವುದು ಮತ್ತು ಕೇಳುವುದು ಮನುಷ್ಯನ ಆಸಕ್ತಿ ಮತ್ತು ಹವ್ಯಾಸಿ ಎರಡು ಹೌದು. ಕೆಲವು ವರ್ಷಗಳ ಹಿಂದೆ ದೂರದರ್ಶದನಂತಹ ಮಾಧ್ಯಮಗಳು ಬರುವುದಕ್ಕೆ ಮುಂಚೆ ಭಾರತದಂತಹ, ಕರ್ನಾಟಕದಂತಹ ಹಳ್ಳಿಗಳಲ್ಲಿ ಹಿರಿಯರು ಹೇಳುವ ಕತೆಗಳೇ ಮನರಂಜನೆಯ ತಾಣಗಳು ಆಗಿದ್ದವು. ನನಗೆ ನೆನಪಿರುವ ಹಾಗೆ ಚಿಕ್ಕವನಿರುವಾಗ ನಮ್ಮ ಅಜ್ಜಿಯೂ ಹಲವೂ ಕಥೆಗಳನ್ನು ಹೇಳಿ ಕಥೆ ಎಂದರೆ ಏನು ಎಂಬುದನ್ನು ಪರಿಚಯಿಸಿದ್ದಳು. ಅಷ್ಟೇ ಅಲ್ಲದೆ ಅವರು ಹೇಳುವ ಕಥೆಗಳಲ್ಲಿ ಜೀವನದ ಬದುಕಿನ ಅನುಭವದ ಸತ್ಯಾಸತ್ಯಗಳನ್ನು ಒಳಗೊಂಡಿರುವಂತಹ ಮೌಲ್ಯಯುತವಾದ, ನೀತಿಯುತವಾದ ಸಂದೇಶಗಳನ್ನು ಸಾರುವ ಕಥೆಗಳಾಗಿದ್ದವು. ಇಂತಹ ಕಥೆಗಳನ್ನು ಹಿರಿಯರಿಂದ ಕೇಳಿ ಆಧುನಿಕ ಕಥಾ ಸಾಹಿತ್ಯದಲ್ಲಿ ಹಲವಾರು ಕಥೆಗಳನ್ನು ಬರೆದ ಕಥೆಗಾರರು ಕನ್ನಡ ಸಾಹಿತ್ಯದಲ್ಲಿ ಕಂಡು ಬರುತ್ತಾರೆ. ಅವರಲ್ಲಿ ಚೆನ್ನಣ್ಣ ವಾಲೀಕಾರರು
APA, Harvard, Vancouver, ISO, and other styles
7

ಎಂ., ಎಂ. ಕಲಬುರ್ಗಿ. "ನನ್ನಿಯೊಳಿನತನಯಂ". AKSHARASURYA 03, № 05 (2024): 01–13. https://doi.org/10.5281/zenodo.10937959.

Full text
Abstract:
“ಸಂಶೋಧನೆಯೆನ್ನುವುದು ಅಲ್ಪ ವಿರಾಮ, ಅರ್ಧವಿರಾಮಗಳ ಮೂಲಕ ಪೂರ್ಣವಿರಾಮಕ್ಕೆ ಸಾಗುವ ಕ್ರಿಯೆಯಾಗಿದೆ... ಸಂಶೋಧನೆ ಎನ್ನುವುದು ಸುಳ್ಳು ಇತಿಹಾಸದ ಮೂಲಕ ವರ್ತಮಾನದಲ್ಲಿ ಹುಟ್ಟುಹಾಕುತ್ತಲಿರುವ ಶೋಷಣೆಯನ್ನು ಹತ್ತಿಕ್ಕಲು, ನಿಜ ಇತಿಹಾಸವನ್ನು ಶೋಧಿಸಿಕೊಡುವುದು ಸಂಶೋಧಕನ ಕರ್ತವ್ಯವಾಗಿದೆ. ಅಂದರೆ ಸಂಶೋಧನೆಯೆಂಬುದು ಕೇವಲ ಇತಿಹಾಸದ ಶೋಧವಲ್ಲ. ಸುಳ್ಳು ಇತಿಹಾಸವನ್ನು ಮುಂದುಮಾಡಿಕೊಂಡು ವರ್ತಮಾನವನ್ನು ದುರುಪಯೋಗ ಮಾಡಿಕೊಳ್ಳುವವರೊಂದಿಗೆ ನಡೆಸುವ ಹೋರಾಟವೂ ಆಗಿದೆ. ಸತ್ಯವೆಂಬ ಭೂತಕಾಲದ ಬಲದಿಂದ ಅಸತ್ಯವೆಂಬ ವರ್ತಮಾನ ಕಾಲವನ್ನು ಸರಿಪಡಿಸುವುದಾಗಿದೆ...” ಎನ್ನುವ ಮೂಲಕ ಸತ್ಯಶೋಧಕರೂ ಸಮಗ್ರ ಸಂಶೋಧಕರೂ ಎಂದು ಪ್ರಸಿದ್ಧರಾದ ಡಾ.ಎಂ.ಎಂ.ಕಲಬುರ್ಗಿ ಅವರು ಈ ನಾಡು ಕಂಡ ಶ್ರೇಷ್ಠ ಚಿಂತಕರು. ಅವರ ಅಧ್ಯಯನ ಮತ್ತು ಕೊಡುಗೆಗಳು ಶಾಸನಶಾಸ್ತ್
APA, Harvard, Vancouver, ISO, and other styles
8

ಸಂಪತ್, ಬೆಟ್ಟಗೆರೆ. "ತೇಜಸ್ವಿ: ಪ್ರೀತಿ, ಜಾತಿ ಇತ್ಯಾದಿ". AKSHARASURYA JOURNAL 05, № 04 (2024): 69 to 93. https://doi.org/10.5281/zenodo.14289855.

Full text
Abstract:
ತೇಜಸ್ವಿಯವರ ಸಾಹಿತ್ಯ ಕುರಿತು ಒಂದು ನಿಟ್ಟಿನಿಂದ ತಮಾಷೆಯಾಗಿ ಅದರಲ್ಲಿ ಬರುವ ಬೈಗುಳಗಳನ್ನು ಸೀಮಿತ ದೃಷ್ಟಿಕೋನದಿಂದ ನೋಡುವ ಒಂದು ನೋಟ. ಅದರಂತೆ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ತೇಜಸ್ವಿ ಎಂಬ ಜಾತ್ಯಾತೀತವಾದಿ ನಿಲುವಿನ ವ್ಯಕ್ತಿತ್ವವನ್ನೇ ಜಾತಿವಾದಿ ವ್ಯಕ್ತಿಯಾಗಿ ಒಂದೇ ದೃಷ್ಟಿಕೋನದಿಂದ ಏಕಮುಖಿ ಗ್ರಹಿಕೆಯಲ್ಲಿ ಕಂಡುಕೊಂಡಿರುವುದಕ್ಕೆ ಒಂದು ಪ್ರತಿಕ್ರಿಯಾತ್ಮಕ ವಿವೇಚನೆಯಾಗಿ ಈ ಲೇಖನ ನಿರೂಪಿತವಾಗಿದೆ.  ಉದಾಹರಣೆಗೆ ತೇಜಸ್ವಿಯವರ ಪರಿಸರದ ಕತೆ ಪುಸ್ತಕದಲ್ಲಿನ ಪಾತ್ರ ಕರಿಯಪ್ಪ ಮೇಲು ಜಾತಿಯ ಒಕ್ಕಲಿಗರ ಗೌಡ ಸಮುದಾಯದವನಾದುದರಿಂದ ಕೆಳವರ್ಗವೊಂದರ ಸಮುದಾಯದ ಪಾತ್ರವಾದ ಎಂಗ್ಟನನ್ನು ಬೈಗುಳದಲ್ಲಿ ಕೆಟ್ಟಪದಗಳನ್ನು ಬಳಸಿ ನಿಂದಿಸಿದ್ದಾನೆ; ಇದರಲ್ಲಿ ಹುಟ್ಟಿನ ಜಾತಿಯಿಂದ ಕರಿಯಪ್ಪನನ್ನೇ ಪ್ರತಿನಿಧಿಸುವ ತೇಜಸ್ವಿಯವರ ಒಕ್ಕಲಿಗ ಗೌಡ ಜ
APA, Harvard, Vancouver, ISO, and other styles
9

ASHOKA, N. S. "ಮರಾಠಿ ದಲಿತ ಕಾವ್ಯ ನಡೆದುಬಂದ ದಾರಿ". AKSHARASURYA JOURNAL 03, № 03 (2024): 79 to 86. https://doi.org/10.5281/zenodo.10775141.

Full text
Abstract:
ಪ್ರಸ್ತುತ ಸಂಶೋಧನಾ ಲೇಖನವು ಮರಾಠಿ ದಲಿತ ಕಾವ್ಯ ಬೆಳೆದುಬಂದ ಹಾದಿಯನ್ನು ಕುರಿತು ಚರ್ಚಿಸುತ್ತದೆ. ಮಹಾರಾಷ್ಟ್ರದಲ್ಲಿ ದಲಿತ ಸಾಹಿತ್ಯ ಹುಟ್ಟುಪಡೆಯಲು ದೊರೆತ ಸ್ಫೂರ್ತಿ ಹಾಗೂ ಪ್ರೇರಣೆಗಳ ಹುಡುಕಾಟದ ನೆಲೆಯನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಲಾಗಿದೆ. ಮರಾಠಿ ದಲಿತ ಸಾಹಿತ್ಯ ಇಡೀ ಭಾರತೀಯ ಇತರೆ ಭಾಷೆಗಳ ದಲಿತ ಸಾಹಿತ್ಯಗಳಿಗಿಂತ ಹೆಚ್ಚು ಪ್ರಬಲವಾಗಿ ರೂಪುಗೊಳ್ಳಲು ಕಾರಣವಾದ ಐತಿಹಾಸಿಕ ಮೈಲಿಗಲ್ಲುಗಳನ್ನು ಗುರುತಿಸಲಾಗಿದೆ. ಮರಾಠಿ ದಲಿತ ಸಾಹಿತ್ಯ 1970 ರಿಂದೀಚೆಗೆ ಬಹಳಷ್ಟು ಪ್ರಚಲಿತಕ್ಕೆ ಬಂದಿದ್ದರೂ, ಅದರ ಮೂಲ ಬೇರುಗಳು ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಜ್ಯೋತಿ ಬಾಪುಲೆ ಹಾಗೂ ಅಕ್ಷರದವ್ವ ಸಾವಿತ್ರಿ ಬಾಪುಲೆ ಅವರ ಚಳುವಳಿಗೆ ಹೋಗುತ್ತದೆ. ಮರಾಠಿ ದಲಿತ ಸಾಹಿತ್ಯಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬಹುದೊಡ್ಡ ನಿಧಿಯ ಆಗರವಾಗಿ
APA, Harvard, Vancouver, ISO, and other styles
10

ಹೇಮಲತ, ಪಿ. ಎನ್. "ಸಾಮರಸ್ಯದ ತಾಣಗಳಾಗಿ ಶಿಂಷಾ ಮಾರಮ್ಮ ದೇಗುಲ ಹಾಗೂ ಹಜರತ್ ಮರ್ದಾನಿ ಗೈಬ್ ದರ್ಗಾ". AKSHARASURYA JOURNAL 05, № 04 (2024): 34 to 40. https://doi.org/10.5281/zenodo.14289565.

Full text
Abstract:
ಕನ್ನಡ ನಾಡಿನಲ್ಲಿ ಪ್ರಾಚೀನ ಕಾಲದಿಂದಲೂ ಸಾಮರಸ್ಯವನ್ನು ಪ್ರತಿಬಿಂಬಿಸುವ ಅನೇಕ ಘಟನೆಗಳು ನಡೆಯುತ್ತಾ ಬಂದಿವೆ; ಅನೇಕ ಸ್ಥಳಗಳು ರೂಪುಗೊಂಡಿವೆ. ಸಂತ ಸಮುದಾಯವು ಸಾಮಾಜಿಕ ಸಾಮರಸ್ಯಕ್ಕಾಗಿ ಬೋಧಿಸುತ್ತಾ ನಡೆದು ಕನ್ನಡ ಸಂಸ್ಕೃತಿಯಲ್ಲಿ ಬಹುದೊಡ್ಡ ಕ್ರಾಂತಿಯನ್ನುಂಟುಮಾಡಿರುವುದು ಚಾರಿತ್ರಿಕ ಸಂಗತಿಯಾಗಿದೆ. ಕರ್ನಾಟಕದ ಅನೇಕ ಸಂತರೂ ಮತ್ತು ಅವರ ಶಿಷ್ಯಂದಿರ ಸೇವಾಕಾರ್ಯದ ಪ್ರಭಾವದಿಂದಾಗಿ ಸಾಮಾಜಿಕ ಸ್ವಾಸ್ಥ್ಯವೂ ಸಾಮರಸ್ಯವೂ ಸಾಧಿತಗೊಂಡು ಇಂದಿಗೂ ಜನಸಮುದಾಯಗಳು ಒಕ್ಕಲಾಗಿ ನಡೆದುಕೊಳ್ಳುತ್ತಿದ್ದಾರೆ. ಕಾವೇರಿ ನದಿಯ ಉಪನದಿಯಾದ ಶಿಂಷಾ ಹರಿವಿನ ಮಾರ್ಗದಲ್ಲಿ ರೂಪುಗೊಂಡಿರುವ ಶಿಂಷಾ ಮಾರಮ್ಮ ದೇವಾಲಯ, ಶಿವನಸಮುದ್ರ ದರ್ಗಾ ಅಥವಾ ದರ್ಗಾ ಹಜರತ್ ಮರ್ದಾನಿ ಗೈಬ್ ತಾಣಗಳು ಸಾಮಾಜಿಕ ಸಾಮರಸ್ಯಕ್ಕೆ ಹೆಸರುವಾಸಿಯಾಗಿವೆ.
APA, Harvard, Vancouver, ISO, and other styles
11

ಹೇಮಲತ, ಪಿ. ಎನ್. "ಮತ-ಮತಿಗಳ ಸಾಮರಸ್ಯದ ತಾಣವಾಗಿ 'ಮುತ್ತತ್ತಿ'". AKSHARASURYA JOURNAL 04, № 04 (2024): 45 to 52. https://doi.org/10.5281/zenodo.13284003.

Full text
Abstract:
ಪ್ರಾಚೀನ ಕಾಲದಿಂದಲೂ ಕನ್ನಡ ನಾಡಿನಲ್ಲಿ ಸಾಮರಸ್ಯವನ್ನು ಪ್ರತಿಬಿಂಬಿಸುವ ಅನೇಕ ಘಟನೆಗಳು ನಡೆಯುತ್ತಾ ಬಂದಿವೆ; ಅನೇಕ ಸ್ಥಳಗಳು ರೂಪುಗೊಂಡಿವೆ. ಸಂತ ಸಮುದಾಯವು ಸಾಮಾಜಿಕ ಸಾಮರಸ್ಯಕ್ಕಾಗಿ ಬೋಧಿಸುತ್ತಾ ನಡೆದು ಕನ್ನಡ ಸಂಸ್ಕೃತಿಯಲ್ಲಿ ಬಹುದೊಡ್ಡ ಕ್ರಾಂತಿಯನ್ನುಂಟುಮಾಡಿರುವುದು ಚಾರಿತ್ರಿಕ ಸಂಗತಿಯಾಗಿದೆ. ದಕ್ಷಿಣ ಕರ್ನಾಟಕದ ಮೇರುಸಂತರೂ ಧರೆಗೆ ದೊಡ್ಡವರೂ ಆದ ಶ್ರೀಮಂಟೇಸ್ವಾಮಿ ಅವರ ಪ್ರಭಾವದಿಂದಾಗಿ ಸಾಮಾಜಿಕ ಸ್ವಾಸ್ಥ್ಯವೂ ಸಾಮರಸ್ಯವೂ ಸಾಧಿತಗೊಂಡು ಇಂದಿಗೂ ಜನಸಮುದಾಯಗಳು ಒಕ್ಕಲಾಗಿ ನಡೆದುಕೊಳ್ಳುತ್ತಿದ್ದಾರೆ. ಮಂಟೇಸ್ವಾಮಿ ಪರಂಪರೆಯು ಮೂಲತಃ ಶೈವಮೂಲದ್ದಾದರೂ ವೈಷ್ಣವಮೂಲದ ಮುತ್ತತ್ತಿರಾಯನೊಂದಿಗೆ ಏರ್ಪಟ್ಟ ಸಾಮರಸ್ಯವು ಮಹೋನ್ನತವಾದುದು. ಇದರೊಂದಿಗೆ ಪ್ರಾಕೃತಿಕವಾದ ಶ್ರೀಮಂತ ಸೊಬಗನ್ನು ಹೊಂದಿರುವ ಮುತ್ತತ್ತಿ ತಾಣವು ಮತ-ಮತಿಗಳ ಸಾಮರಸ
APA, Harvard, Vancouver, ISO, and other styles
12

ನಾಗಪ್ಪ, ಬಾರಕೇರ. "ತತ್ವಪದಗಳ ಪ್ರಾಯೋಗಿಕ ನೆಲೆಗಳು". AKSHARASURYA 06, № 02 (2025): 117 to 123. https://doi.org/10.5281/zenodo.15124122.

Full text
Abstract:
ಕನ್ನಡ ಸಾಹಿತ್ಯದಲ್ಲಿ ತತ್ವಪದ ಸಾಹಿತ್ಯವು ಒಂದಾಗಿದ್ದು, 18 ಮತ್ತು 19 ನೇ ಶತಮಾನದ ಕಾಲಾವಧಿಯನ್ನು ʼತತ್ವಪದ ಸಾಹಿತ್ಯದ ಸುವರ್ಣಯುಗ’ವೆಂದು ಕರೆಯಲಾಗಿದೆ. ನಿಜಗುಣ ಶಿವಯೋಗಿ, ಸರ್ಪಭೂಷಣ, ಸಂತ ಶಿಶುನಾಳ ಶರೀಫ, ಕಡಕೋಳ ಮಡಿವಾಳಪ್ಪನಂತವರು ತತ್ವಪದ ಸಾಹಿತ್ಯವನ್ನು ಬೆಳಸಿಕೊಂಡು ಬಂದಿದ್ದಾರೆ. ಇದೊಂದು ನಡೆ-ನುಡಿಯ ಪರಂಪರೆಯಾಗಿದೆ. ಇಲ್ಲಿನ ತತ್ವಪದಗಳು ಏಕತಾರಿ, ಭಜನೆ, ಜಾನಪದ ಹಾಗೂ ಸಂಗೀತದ ಮಾದರಿಯಲ್ಲಿ ಹಾರ್ಮೋನಿಯಂ, ತಾಳ, ಡಗ್ಗಾ, ತಬಲ, ದಮ್ಮಡಿ ಮುಂತಾದ ವಾದ್ಯ ಪರಿಕರಗಳಿಂದ ತತ್ವಪದಗಳು ಪ್ರಯೋಗಗೊಳ್ಳುತ್ತಾ ಬಂದಿವೆ. ಪ್ರಸ್ತುತ ಲೇಖನದಲ್ಲಿ ತತ್ವಪದಗಳು ಏಕತಾರಿ ಹಾಡು, ಭಜನಾಪದಗಳಾಗಿ ವೃತ್ತಿ ಕಲಾವಿದರು ಮತ್ತು ಹವ್ಯಾಸಿ ಕಲಾವಿದರ ಮೂಲಕ ಪ್ರಯೋಗಗೊಳ್ಳುವ ಬಗೆಯ ಕುರಿತಾಗಿ ಪ್ರಸ್ತುತಪಡಿಸಲಾಗಿದೆ. 
APA, Harvard, Vancouver, ISO, and other styles
13

ವಿಜಯಲಕ್ಷ್ಮೀ, ಸುಬ್ಬರಾವ್, та ಎಂ. ಭೈರಪ್ಪ ಕುಪ್ಪನಹಳ್ಳಿ. "ಗೀತನಾಟಕ ಪ್ರವೇಶ: ಸಂಸ್ಕೃತ ನಾಟಕ ಮತ್ತು ನಾಟಕದಲ್ಲಿ ಸಂಗೀತ". AKSHARASURYA 05, № 01 (2024): 01 to 32. https://doi.org/10.5281/zenodo.13870268.

Full text
Abstract:
ಬಹುಮುಖ ಪ್ರತಿಭೆಯ ಡಾ.ವಿಜಯಾ ಸುಬ್ಬರಾಜ್ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಾಯಿ ಲಕ್ಷ್ಮಿ, ಹಾಗೂ ತಂದೆ ಸೀತಾರಾಂ ಅವರು. ಓದಿದ್ದು ಬೆಂಗಳೂರಿನಲ್ಲೇ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಎಂ.ಎ ಮತ್ತು ಎಲ್.ಎಲ್.ಬಿ. ಪದವೀಧರೆಯಾದವರು. ಫ್ರೆಂಚ್ ಭಾಷೆಯ ಡಿಪ್ಲೊಮ ಪದವಿಯನ್ನೂ ಹಿಂದಿ ಸಾಹಿತ್ಯರತ್ನ ಪದವಿಯನ್ನೂ ಅಧ್ಯಯನ ಮಾಡಿದವರು. ಎಂ.ಇ.ಎಸ್. ಕಾಲೇಜಿನಲ್ಲಿ ಸುದೀರ್ಘ ಕಾಲ ಪ್ರಾಧ್ಯಾಪಕ ಹುದ್ದೆ ನಿರ್ವಹಿಸುತ್ತಲೇ ನಿರಂತರವಾಗಿ ಹಲವು ಮಾಧ್ಯಮಗಳಲ್ಲಿ ತಮ್ಮ ಪ್ರಯೋಗಶೀಲತೆಯನ್ನು ದುಡಿಸಿಕೊಂಡವರು, ಕಥೆ, ಕವಿತೆ, ನಾಟಕ, ಕಾದಂಬರಿ, ಪ್ರವಾಸ ಕಥನ, ಅನುವಾದ, ವೈಚಾರಿಕ ಬರೆಹ, ವಿಮರ್ಶೆ, ಸಂಶೊಧನೆ ಮುಂತಾದ ವಿಭಿನ್ನ ಪ್ರಕಾರಗಳಲ್ಲಿ ಅವರ ಶಕ್ತಿ, ಪ್ರತಿಭೆಗಳು ಬೆಳಗಿವೆ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಓದುವ ಬರೆಯುವ ಹವ್ಯಾಸ ರೂಢಿಸಿಕ
APA, Harvard, Vancouver, ISO, and other styles
14

ಮಾನಸ, ಎಂ. "ದೇಸಿ ಸಾಹಿತ್ಯ ಸಂಪಾದನೆಯಲ್ಲಿ ವೈ.ಸಿ. ಭಾನುಮತಿ ಅವರ ಹೆಜ್ಜೆ ಗುರುತು". AKSHARASURYA JOURNAL 05, № 04 (2024): 126 to 131. https://doi.org/10.5281/zenodo.14289950.

Full text
Abstract:
ವೈ.ಸಿ. ಭಾನುಮತಿ ಅವರು ಹಸ್ತಪ್ರತಿ ಗ್ರಂಥ ಸಂಪಾದನಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಇವರ ಕೃತಿಗಳ ಮೂಲಕ ಅವಲೋಕಿಸಲಾಗಿದೆ. ಹಸ್ತಪ್ರತಿ ಹಾಗೂ ಗ್ರಂಥ ಸಂಪಾದನಾ ಕ್ಷೇತ್ರವು ಶ್ರಮದಾಯಕವಾಗಿರುವಂತಹದ್ದು, ಈ ಶ್ರಮದಾಯಕ ಕ್ಷೇತ್ರವನ್ನು ವೃತ್ತಿಯಾಗಿ ಸ್ವೀಕರಿಸಿ, ಅನೇಕ ಗ್ರಂಥ ಸಂಪಾದಕ ವಿದ್ವಾಂಸರ ಹಾದಿಯಲ್ಲಿ ವೈ.ಸಿ. ಭಾನುಮತಿಯವರು ಸಹ ಪ್ರಮುಖರಾಗಿರುತ್ತಾರೆ. ಭಾನುಮತಿ ಅವರು ಇದುವರೆಗೂ ಹಲವಾರು ಪ್ರಾಚೀನ ಹಳೆಗನ್ನಡ ಕೃತಿಗಳನ್ನು ಸಂಪಾದಿಸಿ, ಪರಿಷ್ಕರಿಸಿ ಪ್ರಕಟಿಸಿದ್ದಾರೆ. ಇವರ ಕೃತಿಗಳನ್ನು ಮಾರ್ಗ-ದೇಶಿ-ಮೌಖಿಕ ಎಂದು ವಿಭಾಗಿಸಿಕೊಂಡು ಆಯ್ದ ಕೆಲವು ಕೃತಿಗಳ ಸಂಪಾದನೆ, ವೈಧಾನಿಕತೆಯ ಕುರಿತು ಪ್ರಸ್ತುತ ಬರಹದಲ್ಲಿ ನೀಡಲಾಗಿದೆ. ಇವರ ಮಾರ್ಗ-ದೇಶಿ ಕೃತಿಗಳ ಸಂಪಾದನೆಯಲ್ಲಿ ಕನ್ನಡನಾಡಿನ ಚರಿತ್ರೆ ತಿಳಿಯುವಂತಹ ಚಾರಿತ್ರಿಕ ಅಂಶಗಳು, ಸಾಮಾ
APA, Harvard, Vancouver, ISO, and other styles
15

ಕಮಲಾ, ಹಂಪನಾ, та ಎಂ. ಭೈರಪ್ಪ ಕುಪ್ಪನಹಳ್ಳಿ. "ಜೈನ ದೃಷ್ಟಿಯಲ್ಲಿ ಸ್ತ್ರೀ". AKSHARASURYA 03, № 06 (2024): 01 to 18. https://doi.org/10.5281/zenodo.11126790.

Full text
Abstract:
ಕನ್ನಡ ಮಹಿಳಾ ಸಾಹಿತ್ಯ ಜಗತ್ತಿನಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದವರಲ್ಲಿ ಡಾ.ಕಮಲಾ ಹಂಪನಾ ಅವರು ಪ್ರಮುಖರಾಗಿದ್ದಾರೆ. ಕಥೆ, ಕಾವ್ಯ, ನಾಟಕ, ಕಾದಂಬರಿ ಕ್ಷೇತ್ರಗಳಲ್ಲಿ ಗಣನೀಯ ಕೃಷಿ ಮಾಡಿರುವ ಹಲವಾರು ಲೇಖಕಿಯರು ನಮಗೆ ಸಿಗುತ್ತಾರೆ. ಆದರೆ ಸಂಶೋಧನೆ, ಸಂಪಾದನೆಯಂಥ ವಿದ್ವತ್ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಮಹತ್ತರವಾದ ಕಾಣ್ಕೆಯನ್ನು ನೀಡಿದ ಲೇಖಕಿಯರು ಅಪರೂಪ. ಅಂತಹ ಅಪರೂಪದ ಸಂಶೋಧಕಿಯರಲ್ಲಿ ಕಮಲಾ ಹಂಪನಾ ಅವರು ಅಗ್ರಗಣ್ಯರಾಗಿ ಕಾಣುತ್ತಾರೆ. ಸಾಮಾಜಿಕ ತಾರತಮ್ಮ ಹಾಗೂ ಲಿಂಗ ತಾರತಮ್ಯಗಳ ನಡುವೆ ಹಲವಾರು ಸವಾಲುಗಳನ್ನು ದಾಟಿಕೊಂಡು ಅಧ್ಯಯನ ನಡೆಸಿ, ಬೋಧನೆ-ಸಂಶೋಧನೆಯ ಬೇಸಾಯದಲ್ಲಿ ಗುರುತರವಾದ ಸಾಧನೆಗೈದು ಮಾದರಿ ಮಹಿಳೆ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಡಾ.ಕಮಲಾ ಹಂಪನಾ ಅವರು ಬೆಂಗಳೂರು ಜಿಲ್ಲೆ ದೇವನಹಳ್ಳಿಯಲ್ಲಿ ೧
APA, Harvard, Vancouver, ISO, and other styles
16

ಲೋಹಿತ್, ಪಿ. "ಬಂಜಾರರ ಸಾಂಪ್ರದಾಯಿಕ ಸ್ಥಿತ್ಯಂತರ". AKSHARASURYA JOURNAL 05, № 04 (2024): 60 to 68. https://doi.org/10.5281/zenodo.14289830.

Full text
Abstract:
ಜನಪದ ಸಾಹಿತ್ಯವೂ ಆಕಾಶದಷ್ಟೇ ವಿಶಾಲ, ಸಾಗರದಷ್ಟೇ ಆಳ. ಅದರಲ್ಲಿ ಹಲವು ಪ್ರಕಾರಗಳಿವೆ. ಗಾದೆ, ಒಗಟು, ಒಡಪು, ಕಥೆ, ಲಾವಣಿ, ಕಥನಗೀತೆ ಪ್ರಮುಖವಾಗಿವೆ. ಇಡೀ ಜಗತ್ತಿನಲ್ಲಿ ಸಾಹಿತ್ಯದ ಮೂಲವನ್ನೇಲ್ಲಾ ಜನಪದ ಸಾಹಿತ್ಯದಲ್ಲಿ ಕಾಣಬಹುದು. ಹೀಗಾಗಿ ಬಿ.ಎಂ.ಶ್ರೀರವರು ಜನಪದ ಸಾಹಿತ್ಯವನ್ನು ‘ಜನವಾಣಿ ಬೇರು, ಕವಿವಾಣಿ ಹೂವು’ ಎಂದುಕರೆದಿದ್ದಾರೆ. ಈ ನಾಡಿನ ಶ್ರಮ ಸಂಸ್ಕೃತಿಯ ಪ್ರತೀಕವಾದ ಬುಡಕಟ್ಟು ಸಮುದಾಯಕ್ಕೆ ಸೇರಿದ ಲಂಬಾಣಿಗರು ನಂಬಿಕೆಗೆ ಹೆಸರಾದವರು. ನಂಬಿದವರ ಪಾಲಿನ ಅಂಗರಕ್ಷಕರಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಾದರೂ, ಮತ್ತೊಬ್ಬರನ್ನು ಕಾಪಾಡುವ ಗುಣವನ್ನು ಹೊಂದಿದವರು. ತಮ್ಮ ಪ್ರಾಮಾಣಿಕತೆಯಿಂದ ಬದುಕುವ ಇವರು ಸಾಹಸಿಗಳು. ಏಕೆಂದರೆ ಇದೊಂದು ಅಖಿಲ ಭಾರತ ವ್ಯಾಪ್ತಿಯ ಅಲೆಮಾರಿ ಗುಂಪು. ಭಾರತದಲ್ಲಿ ಸುಮಾರು ೮೩೦ ಬುಡಕಟ್ಟುಗಳ
APA, Harvard, Vancouver, ISO, and other styles
17

ಬಿ., ಅರುಣಕುಮಾರ್, та ರಾಮಕೃಷ್ಣಯ್ಯ ಕೆ. "ಆಧುನಿಕ ರಂಗಭೂಮಿಯಲ್ಲಿ ನಿರ್ದೇಶಕರ ಪಾತ್ರ". AKSHARASURYA 04, № 01 (2024): 01 to 08. https://doi.org/10.5281/zenodo.11161946.

Full text
Abstract:
‘ನಿರ್ದೇಶನ’ ಎಂಬ ಕಲ್ಪನೆಯು ಖಚಿತವಾಗಿ ರೂಪಗೊಂಡಿದ್ದು ೧೯ನೇ ಶತಮಾನದ ದ್ವಿತೀಯಾರ್ಧದಲ್ಲಿ ಯುರೋಪಿನಲ್ಲಿ. ಆಕಾಲದ ಯೂರೋಪಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಜರಗುತ್ತಿದ್ದ ವೈಜ್ಞಾನಿಕ ಸಂಘಟನೆಗಳಿಗೆ ಸಮಾನಾಂತರವಾಗಿ ಜರ್ಮನಿಯ ಎರಡನೇ ಜಾರ್ಜ್(೧೮೨೯ -೧೯೧೪) ಎಂಬಾತ ರಂಗ ನಿರ್ಮಿತಿಯ ಕೆಲಸವನ್ನು ಒಂದು ಶಾಸ್ತ್ರವಾಗಿ ರೂಪಿಸಿದ. ಅದಕ್ಕಾಗಿಯೇ ಆತನಿಗೆ ಪಶ್ಚಿಮದ ರಂಗ ಇತಿಹಾಸದಲ್ಲಿ ಮೊದಲ ನಿರ್ದೇಶಕ ಎಂಬ ಬಿರುದು ಲಭಿಸಿದೆ. ನಟನಿಗಿಂತ ನಾಟಕ ಕೃತಿಯೇ ಮುಖ್ಯವೆಂಬ ಕಲ್ಪನೆ ಮೂಡಿ ಬಂದ ಮೇಲೆ, ನಾಟಕಕ್ಕೆ ಯಾವ ರೀತಿ ರಂಗವನ್ನು ಸಜ್ಜುಗೊಳಿಸಬೇಕು, ನಾಟಕದ ಪಾತ್ರಗಳಿಗೆ ನಟರನ್ನು ಆಯ್ಕೆ ಮಾಡಿ ಅವರಿಗೆ ಯಾವ ರೀತಿ ಸೂಚನೆಗಳನ್ನು ಕೊಡಬೇಕು ಎಂಬ ಸಮಸ್ಯೆಗಳು ಕರ್ನಾಟಕದ ಕಲಾಪೋಷಕ ವಿಳಾಸಗಳಲ್ಲಿ ಉದ್ಭವಿಸಿದವು. ರಂಗಭೂಮಿಯ ಚಟುವಟಿಕೆಗಳಲ್ಲಿ ಸಂ
APA, Harvard, Vancouver, ISO, and other styles
18

ಶೈಲಜ, ಹಿರೇಮಠ, та ಎಂ. ಭೈರಪ್ಪ ಕುಪ್ಪನಹಳ್ಳಿ. "ಬುಡಕಟ್ಟು ಮಹಿಳೆ: ಸ್ಥಾಪಿತ ಗ್ರಹಿಕೆಗಳಿಗೆ ಭಿನ್ನಮತ". AKSHARASURYA 05, № 02 (2024): 01 to 34. https://doi.org/10.5281/zenodo.14035474.

Full text
Abstract:
ಪ್ರಸ್ತುತ ಸಂದರ್ಭದಲ್ಲಿ ವಿಶಾಲಾರ್ಥ ದೃಷ್ಟಿಕೋನದ ಬರಹಗಾರರಾಗುವುದೆಂದರೆ, ಸಮಾಜದಲ್ಲಿನ ಜಾತಿ, ಪ್ರದೇಶ, ಬುಡಕಟ್ಟು, ಆದಿವಾಸಿ ಮತ್ತು ಜಂಡರ್ ಆಧಾರಿತ ಶ್ರೇಣೀಕರಣವನ್ನು ಮೀರುವುದೇ ಆಗಿದೆ; ಹಾಗಿದ್ದರೂ ಅಸಮಾನತೆಗೆ ಬುನಾದಿಯೊದಗಿಸುವ ಶ್ರೇಣೀಕರಣವನ್ನು ಅಸ್ಮಿತೆಯಾಗಿ, ಅನನ್ಯತೆಯಾಗಿ ಚಿಂತಕರು ನಿರೂಪಿಸಿದ್ದರ ಪರಿಣಾಮದಿಂದಾಗಿ, ಅಸಮಾನತೆಯನ್ನು ಸಮರ್ಥಿಸುವ ನಿರೂಪಣೆಗಳು ಸಾಹಿತ್ಯ ಲೋಕದಲ್ಲೂ ನಿರಾತಂಕವಾಗಿ ಮುಂದುವರೆದಿವೆ. ಬರಹಲೋಕದೊಳಗಿನ ಇಂತಹ ನಿರೂಪಣೆಯ ರಾಜಕಾರಣವೇ ಸತ್ಯವನ್ನು ಸೃಷ್ಟಿಸುತ್ತ, ಅದನ್ನು ಒಪ್ಪುವಂತೆ ಜ್ಞಾನದ ಅಧಿಕಾರದ ನೆಲೆಯಲ್ಲಿ ಒತ್ತಾಯಿಸುತ್ತದೆ; ಅಧ್ಯಯನದೊಳಗಿನ ಬರಹಗಾರರ ಉದ್ದೇಶದ ಭಾಗವಾಗಿ ನಿರೂಪಣೆಗೊಂಡ ನಿಲುವುಗಳನ್ನು ಸಮಸ್ಯೀಕರಿಸಿಕೊಂಡು ಮರುವಿಶ್ಲೇಷಣೆಗೆ ಒಳಪಡಿಸಬೇಕಿದೆ. ಈ ಉದ್ದೇಶದ ಹಿನ್ನೆಲೆಯಲ್ಲಿಯೇ ಮಹಿಳೆ
APA, Harvard, Vancouver, ISO, and other styles
19

Jagadeesh, Hullal, and Dr.M.B.Dalapati. "Social Reformer Shishunala Sharif Religious Movement." 'Journal of Research & Development' 15, no. 1 (2023): 33–34. https://doi.org/10.5281/zenodo.7593599.

Full text
Abstract:
Shishunala Sharif (Kannada: ಸಂತ ಶಿಶುನಾಳ ಶರೀಫ) was a saint poet, philosopher and social reformer from the state of Karnataka in India. His compositions of tatvapada(moral poems) are in Kannada language. Sharif is recognized as the first ever Muslim poet in Kannada literature. Shishunala Sharif was born on 7 March 1819 in Shishuvinahala, a village in shiggaon taluk at Haveri district, Karnataka. He was the only son and a late born to his parents. Legend has it that Shishunala Sharif was conceived with the blessings of Gods. As a child, Shishunala Sharif was very charming and intelligent. After c
APA, Harvard, Vancouver, ISO, and other styles
20

ಪ್ರಕಾಶ, ಬಿ. "ಡಾ. ಬಿ.ಆರ್. ಅಂಬೇಡ್ಕರ್‌ ಮತ್ತು ಗಾಂಧೀಜಿ: ಜಾತಿ, ವರ್ಣ, ಹಿಂದುತ್ವ ಕುರಿತು ಅಭಿಪ್ರಾಯ-ಭಿನ್ನಾಭಿಪ್ರಾಯಗಳು". AKSHARASURYA JOURNAL 06, № 05 (2025): 141 to 150. https://doi.org/10.5281/zenodo.15504412.

Full text
Abstract:
ವರ್ತಮಾನದಲ್ಲಿ ಗಾಂಧೀಜಿ ಮತ್ತು ಡಾ. ಬಿ. ಆರ್, ಅಂಬೇಡ್ಕರ್‌‌ರವರನ್ನು ಅನುಸಂಧಾನ ಮಾಡಿದಾಗ ಇವರಿಬ್ಬರ ನಡುವಿನ ಜಾತಿ, ವರ್ಣ, ಹಿಂದುತ್ವ ಕುರಿತು ಅನೇಕ ಹುಸಿ ಚರ್ಚೆಗಳು, ಪ್ರಚಾರ, ಸೆಮಿನಾರ್‌ಗಳು, ಪತ್ರಿಕೆಗಳ ಮೂಲಕ ಬಿತ್ತರವಾಗುತ್ತಿವೆ. ದೇಶದ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಈ ಅಭಿಪ್ರಾಯ-ಭಿನ್ನಾಭಿಪ್ರಾಯಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ. ಈ ಲೇಖನದ ಮೂಲಕ ನಿಜವನ್ನು ಅರಿಯುವ ಮುಖೇನ ಹೊಸದೊಂದು ತಾತ್ವಿಕತೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಜಾತ್‌ಪತ್ ತೊಡಕ್ ಮಂಡಲಕ್ಕಾಗಿ ಅಂಬೇಡ್ಕರ್‌ ಸಿದ್ದಪಡಿಸಿದ ಜಾತಿ ವಿಷಯ ಉಪನ್ಯಾಸವನ್ನು ಗಮನಿಸಿ ತಮ್ಮ ಹರಿಜನ ಪತ್ರಿಕೆಯಲ್ಲಿ ಗಾಂಧೀಜಿ ಅದನ್ನು ಉಲ್ಲೇಖಿಸುವ ಮೂಲಕ ಅಂಬೇಡ್ಕರ್‌ ರವರನ್ನು ಇದು ಪ್ರಚಾ
APA, Harvard, Vancouver, ISO, and other styles
21

SHA, SHETTAR. "ಬೌದ್ಧರು ನಿರ್ಮಿಸಿದ ಪ್ರಾಕೃತ ಜಗದ್ವಲಯ". AKSHARASURYA JOURNAL 03, № 03 (2024): 01 to 25. https://doi.org/10.5281/zenodo.10774933.

Full text
Abstract:
ಕನ್ನಡ ಸಾಹಿತ್ಯ, ಸಂಸ್ಕೃತಿ, ಶಾಸನ, ಚರಿತ್ರೆ, ಭಾಷೆಯ ಕುರಿತು ಆಳವಾದ ಸಂಶೋಧನೆ ನಡೆಸಿ ಹೊಸ ತಿಳಿವು ನೀಡುವ ಮೂಲಕ ಕನ್ನಡದ ಮನಸುಗಳನ್ನು ಬೆಳಗಿದ ಸಂಶೋಧಕರಲ್ಲಿ ಪ್ರೊ.ಷ.ಶೆಟ್ಟರ್ ಅವರು ಅಗ್ರಗಣ್ಯರಾಗಿದ್ದಾರೆ. ಪ್ರೊ. ಷಡಕ್ಷರಪ್ಪ ಶೆಟ್ಟರ್ ಅವರು ಜನಿಸಿದ್ದು 11 ಡಿಸೆಂಬರ್ 1935ರಂದು ಬಳ್ಳಾರಿ ಜಿಲ್ಲೆ ಹಡಗಲಿ ತಾಲ್ಲೂಕಿನ ಹಂಪಸಾಗರದಲ್ಲಿ. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್‌ನಲ್ಲಿ ಉನ್ನತ ವ್ಯಾಸಂಗ ಮಾಡಿದ ಇವರು ಸಾಹಿತ್ಯ, ಚರಿತ್ರೆ, ಪ್ರಾಕ್ತನಶಾಸ್ತ್ರ, ಶಾಸನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳಗನ್ನಡ ಕಾವ್ಯ ಕುರಿತು ಸುಮಾರು 30ಕ್ಕೂ ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕುವಲ್ಲಿ ಇವರ ಸಂಶೋಧನೆಗಳ ಕೊಡುಗೆ ಬಹಳ ಇತ್ತು. ಕೇಂಬ್ರಿಜ್, ಹಾರ್ವರ್ಡ್,
APA, Harvard, Vancouver, ISO, and other styles
22

ಜಿ., ವೆಂಕಟಸುಬ್ಬಯ್ಯ, та ಭೈರಪ್ಪ ಎಂ. "ಎರಡು ಶಬ್ದಗಳ ನಿಷ್ಪತ್ತಿ ಮತ್ತು ಅರ್ಥವಿಚಾರ". AKSHARASURYA 04, № 02 (2024): 01 to 17. https://doi.org/10.5281/zenodo.11525363.

Full text
Abstract:
ಜಗಮೆಚ್ಚಿದ ನುಡಿಗಾರುಡಿಗ ಪ್ರೊ.ಜಿ.ವೆಂಕಟಸುಬ್ಬಯ್ಯನವರುಕರುನಾಡು ಕಂಡ ಕನ್ನಡದ ಮೇರು ನಿಘಂಟು ತಜ್ಞ, ನುಡಿ ಗಾರುಡಿಗ, ನುಡಿಬ್ರಹ್ಮ, ಶಬ್ದಬ್ರಹ್ಮ, ಅಕ್ಷರಬ್ರಹ್ಮ, ನಡೆದಾಡುವ ನಿಘಂಟು, ಅಪ್ರತಿಮ ಸಂಶೋಧಕ, ಜಗಮೆಚ್ಚಿದ ಕನ್ನಡ ಪ್ರಾಧ್ಯಾಪಕ ಎಂದೇ ಜನಪ್ರಿಯರಾದವರು ನಾಡೋಜ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು. ನುಡಿಸಾಗರದ ಆಳಕ್ಕೂ ಉದ್ದಗಲಕ್ಕೂ ಮುಳುಗೆದ್ದು ಈಜಾಡಿ ‘ಕನ್ನಡ ನಿಘಂಟು’ಗಳೆಂಬ ಮುತ್ತುರತ್ನಗಳನ್ನು ಹೊರತಂದುಕೊಟ್ಟ ಶೋಧನವೀರ ನುಡಿಕಾರರು ಜಿವಿ. ಆಂಗ್ಲಮುಖಿ ಹಾಗೂ ಕಲಾರಾಹಿತ್ಯ ಶಿಕ್ಷಣಯಾನದಲ್ಲಿ ಕನ್ನಡಪ್ರಜ್ಞೆಯನ್ನು ಬೆಳಗುವ ಮೂಲಕ ಅಸಂಖ್ಯ ಕನ್ನಡ ಕಟ್ಟಾಳುಗಳನ್ನು ರೂಪುಗೊಳಿಸುವ ಮೂಲಕ ಈ ನೆಲಕ್ಕೆ ಅಪೂರ್ವ ಕಾಣಿಕೆಯಿತ್ತ ಜಿವಿ ಅವರು ಶ್ರೇಷ್ಠ ಪ್ರಾಧ್ಯಾಪಕರಾಗಿದ್ದಾರೆ. ಸಂಶೋಧಕರಾಗಿ ಹಾಗೂ ಪ್ರಾಧ್ಯಾಪಕರಾಗಿ ಮಾತ್ರವ
APA, Harvard, Vancouver, ISO, and other styles
23

ಭೈರಪ್ಪ, ಡಾ ಎಂ. "ಲೋಕಧ್ಯಾನದಲ್ಲಿ ‘ಸಂಭೋಳಿ’ ಕಂಡ ಸತ್ಯ-ಮಿಥ್ಯಗಳ ಸಂ-ದರ್ಶನ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 31 березня 2023, 33–40. http://dx.doi.org/10.59176/kjksp.v2i1.2288.

Full text
Abstract:
ಲೋಕಸಂಸ್ಕೃತಿಯ ಪ್ರಜ್ಞಾಪರಂಪರೆಯಲ್ಲಿ ಜೀವನಧ್ಯಾನದಿಂದ ಮೂಡಿದ ಅರಿವು ಕಾಲಕಾಲಗಳನ್ನೂ ದಾಟಿಕೊಂಡು ಬಂದು ಈ ಹೊತ್ತಿಗೂ ಯಾವೊತ್ತಿಗೂ ದೀಪಧಾರಿಯಾಗಿ ಕಂಗೊಳಿಸುತ್ತಿದೆ. ಜೀವನಧ್ಯಾನಿಗಳು ತಮ್ಮೊಳಗೆ ಲೋಕವನ್ನೂ, ಲೋಕದೊಳಗೆ ತಮ್ಮನ್ನೂ ಕನ್ನಡಿಯಾಗಿಸಿಕೊಂಡು ನಿತ್ಯಬೆಳಗುವ ಸತ್ಯ-ಮಿಥ್ಯಗಳ ಸಂ-ದರ್ಶನ ಮಾಡುತ್ತಾರೆ. ಮೌನ-ಮಾತುಗಳ ನಡುವಿನ ಮಧ್ಯಮದೀವಿಗೆ ಹಿಡಿದು ಬೆಳಕಿನ ಬೀಜಗಳನ್ನು ಚೆಲ್ಲ್ಲುತ್ತಾ ನಡೆಯುತ್ತಾರೆ. ಇಂಥ ಧ್ಯಾನಿಗಳ ಸಾಲಿನಲ್ಲಿ ಅಪರಿಮಿತ ಸಂವೇದನಾಶೀಲರ ವಿಸ್ತರಣೆಯಂತೆ ಕಾಣುವ, ಅಭಿವ್ಯಕ್ತಿ ಪರಂಪರೆಯಲ್ಲಿ ಅನನ್ಯತೆ ಸಾಧಿಸಿಕೊಂಡಿರುವ ಸಾಹಿತ್ಯಚೇತನರೂ ಅಸಂಖ್ಯ. ಲೋಕವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ನುಂಗಿನೊಣೆಯುತ್ತಿರುವ ಕಾರ್ಗತ್ತÀ್ತಲೊಳಗೆ ಕರಗಿಹೋಗದೆ, ಅಲ್ಲಮನು ಹೇಳುವಂತೆ ‘ಅಪರಿಮಿತದ ಕತ್ತಲೆಯೊಳಗೆ ವಿಪರೀತ ಬೆಳಕನಿತ್ತವ
APA, Harvard, Vancouver, ISO, and other styles
24

ಹನೂರು, ಪ್ರೊ ಕೃಷ್ಣಮೂರ್ತಿ. "‘ಊರದ ಚೇಳಿನ ಏರದ ಬೇನೆಯಲ್ಲಿ...’ (ಚಾಮರಸನ ಪ್ರಭುಲಿಂಗ ಲೀಲೆ - ಕವಿ-ಕಾವ್ಯ ಅವಲೋಕನ)". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 31 березня 2023, 1–11. http://dx.doi.org/10.59176/kjksp.v2i1.2284.

Full text
Abstract:
ಮನುಷ್ಯ ನಾಗರಿಕತೆಯ ನಂತರ ಬೆಳೆದು ಬೇರುಬಿಟ್ಟಅಧಿಕಾರ ದಾಹದ ರಾಜಕಾರಣ ಅದರೊಂದಿಗೆ ಬೆಸೆದುಕೊಂಡ ಹಲವು ಧರ್ಮಗಳ ಸಂಗಾತದಿAದ ಹುಟ್ಟಿಕೊಂಡ ಕಲಹಗಳು; ಇದೆಲ್ಲದರ ಹಿನ್ನೆಲೆಯಲ್ಲಿ ಶತಶತಮಾನಗಳಲ್ಲಿ ಹಾಸಿಕೊಂಡು ಬಂದ ಮೌಢ್ಯ ಮತ್ತು ಅಜ್ಞಾನವನ್ನೇ ಕಚ್ಚದ ಚೇಳಿನ ಏರದ ಬೇನೆ ಎನ್ನುತ್ತ ಅಲ್ಲಮ ಮತ್ತೊಂದು ಪ್ರಸಿದ್ಧ ವಚನದಲ್ಲಿ ‘ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ, ಹೆಣ್ಣು ಹೊನ್ನು ಮಣ್ಣಿಂಗೆ ಸತ್ತುದು ಕೋಟಿ, ಗುಹೇಶ್ವರ ನಿಮಗಾಗಿ ಸತ್ತವರನಾರನೂ ಕಾಣೆ’ ಎಂದ. ಈಮಾತುಗಳ ಹಿನ್ನೆಲೆಯಲ್ಲಿ ಅಲ್ಲಮನನ್ನು ಕುರಿತಾದ ಪ್ರಸಿದ್ಧ ಓದುಗಬ್ಬ ಚಾಮರಸನ`ಪ್ರಭುಲಿಂಗ ಲೀಲೆ’ಯನ್ನು ಅವಲೋಕಿಸಬಹುದಾಗಿರುತ್ತದೆ. ಸಾಹಿತ್ಯ ಚರಿತ್ರೆಕಾರರು ಅಲ್ಲಮಪ್ರಭುವಿನ ಕಾಲವನ್ನು ಹನ್ನೆರಡನೆಯ ಶತಮಾನದ ಮಧ್ಯಭಾಗವೆಂದೂ, ಚಾಮರಸನ ಕಾಲವನ್ನು ಹದಿನೈದನೆಯ ಶತಮಾನದ ಮಧ್
APA, Harvard, Vancouver, ISO, and other styles
We offer discounts on all premium plans for authors whose works are included in thematic literature selections. Contact us to get a unique promo code!