Academic literature on the topic 'ಸಾಮಾಜಿಕ'

Create a spot-on reference in APA, MLA, Chicago, Harvard, and other styles

Select a source type:

Consult the lists of relevant articles, books, theses, conference reports, and other scholarly sources on the topic 'ಸಾಮಾಜಿಕ.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Journal articles on the topic "ಸಾಮಾಜಿಕ"

1

ಸಂತೋಷ್, ಕುಮಾರ್ ಆರ್.ಎಂ. "ಜನಮಾಧ್ಯಮವಾಗಿ ಸಾಮಾಜಿಕ ಜಾಲತಾಣ". AKSHARASURYA JOURNAL 06, № 05 (2025): 186 to 200. https://doi.org/10.5281/zenodo.15504635.

Full text
Abstract:
ಇತ್ತೀಚಿನ ತಂತ್ರಜ್ಞಾನ ವಿಕಾಸದೊಂದಿಗೆ ಸಾಮಾಜಿಕ ಜಾಲತಾಣಗಳು ಜನಮಾಧ್ಯಮದ ಪ್ರಮುಖ ಅಂಗವಾಗಿ ಪ್ರಭಾವ ಬೀರುತ್ತಿವೆ. ಮಾಹಿತಿಯ ತ್ವರಿತ ಹರಡುವಿಕೆ, ವ್ಯಾಪಕ ಪ್ರಭಾವ ಮತ್ತು ಸಮುದಾಯಗಳ ರೂಪುಗೊಳಿಸುವಿಕೆ ಎಂಬ ಅಂಶಗಳಿಂದ ಇವು ಪ್ರಬಲ ಮಾಧ್ಯಮವಾಗಿ ಪರಿಣಮಿಸಿವೆ. ಇವು ವೈಯಕ್ತಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ಸಾಮಾಜಿಕ ಜಾಲತಾಣಗಳ ಅಸ್ತಿತ್ವವು ಸಂವಹನದಲ್ಲಿ ಹೊಸ ಯುಗವನ್ನು ಆರಂಭಿಸಿದ್ದು, ಲೋಕದ ಎಲ್ಲೆಡೆಯ ಜನರನ್ನು ಪರಸ್ಪರ ಸಂಪರ್ಕಿಸುವ ಸಾಮರ್ಥ್ಯವನ್ನು ಹೊಂದಿದೆ. ಇವು ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶ ನೀಡುವುದರೊಂದಿಗೆ, ಸುದ್ದಿಗಳನ್ನು ಹರಡುವ ಪ್ರಮುಖ ವೇದಿಕೆಯಾಗಿಯೂ ಕಾರ್ಯನಿರ್ವಹಿಸುತ್ತವೆ. ಜನಪ್ರಿಯತೆಯನ್ನು ಗಳಿಸಲು ಹಾಗೂ ಬುದ್ಧಿವಂತ ಸಮಾಜವನ್ನು ರೂಪಿಸಲ
APA, Harvard, Vancouver, ISO, and other styles
2

ಶ್ರೀನಿವಾಸ, ಎಸ್.ಜಿ. "ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆಗಳು". AKSHARASURYA JOURNAL 06, № 04 (2025): 01 to 10. https://doi.org/10.5281/zenodo.15490768.

Full text
Abstract:
ʼಕಾಯಕವೇ ಕೈಲಾಸʼ ವೆಂದು ಸಾರಿ, ಜನರಲ್ಲಿ ದುಡಿದು ತಿಂದು ಬದುಕುವ ಮಹತ್ವವನ್ನು ತಿಳಿಸಿದ್ದು ವಚನ ಸಾಹಿತ್ಯ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳಲ್ಲಿ ಸ್ತ್ರೀಯರಿಗೆ ಭಾಗವಹಿಸುವ ಸಮಾನ ಅವಕಾಶ ನೀಡುವ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕೊಂದು ಅರ್ಥವನ್ನು ಕಲ್ಪಿಸಿದರು. ಕಲುಷಿತಗೊಂಡಿದ್ದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ದಿಕ್ಕರಿಸಿ, ಘನ ಬದಲಾವಣೆಯನ್ನು ಗುರಿಯಿಟ್ಟು ನಡೆದ ದಾರ್ಶನಿಕ ಚಳುವಳಿ ವಚನ ಸಾಹಿತ್ಯ. ಸಾಮಾಜಿಕ ಬದಲಾವಣೆಗೆ ಹೊಸ ಭಾಷ್ಯ ಬರೆಯುವ ಮೂಲಕ ಉತ್ತಮ ಸಮಾಜ ವ್ಯವಸ್ಥೆಗೆ ನಿಜವಾದ ಅರ್ಥ ಕಲ್ಪಿಸಿ ಕೊಟ್ಟವರು. ಸಮಾಜದ ಕೀಳುಮಟ್ಟದ ಶೋಷಣೆಯಿಂದಾಗಿಯೇ ಸಮಾಜದಲ್ಲಿ ದುಡಿಯುವ ಮತ್ತು ಕೂತು ಉಣ್ಣುವ ವರ್ಗಗಳು ನಿರ್ಮಾಣವಾಗುವುದಕ್ಕೆ ಕಾರಣವಾಗಿರಬೇಕು, ಸಮಾಜದಲ್ಲಿ ಮೇಲ್ವರ್ಗವೆಂದು ಕರೆಸಿಕೊಂಡ ಜನರು ಸಮಾಜದ ಇತರರನ್ನು
APA, Harvard, Vancouver, ISO, and other styles
3

ತ್ರಿವೇಣಿ. "ಸಾಮಾಜಿಕ ಹರಿಕಾರ ಬಸವಣ್ಣ". AKSHARASURYA JOURNAL 04, № 04 (2024): 139 to 143. https://doi.org/10.5281/zenodo.13284139.

Full text
Abstract:
ಪ್ರಭುತ್ವದ ಮೇಲಾಟಕ್ಕೆ ಪರ್ಯಾಯವಾಗಿ ಜನಶಕ್ತಿ ರೂಪುಗೊಳ್ಳಬೇಕೆಂದು ಬಯಸುತ್ತಿದ್ದ ಬಸವಣ್ಣನವರು ಕಾಯಕ-ದಾಸೋಹಗಳ ಮುಖೇನ ಅದನ್ನು ಸಾಧಿಸುವ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಕಾಳಜಿಯುಳ್ಳ ಸಮಾನ ಮನಸ್ಕರ ಸಂಘಟನೆಯಿಂದ ಮಾತ್ರ ಇಂಥದ್ದನ್ನು ಸಾಧಿಸಲು ಸಾಧ್ಯವೆಂಬ ನಿಲುವಿನಲ್ಲಿ, ಜಾತಿ, ವರ್ಣ, ವರ್ಗಗಳೇ ಮೊದಲಾದ ಎಲ್ಲ ಬಂಧನಗಳನ್ನು ಮೀರಿದ ‘ಅನುಭವ ಮಂಟಪ’ ಎಂಬ ಒಂದು ಅದ್ಭುತ ವೇದಿಕೆಯನ್ನು ರೂಪಿಸಿದರು. ಅನುಭವಮಂಟಪದಲ್ಲಿ ಎಲ್ಲರೂ ಸಮಾನಭಾವದಲ್ಲಿ ಸಾಮಾಜಿಕ ಒಳಿತಿನ ಉದ್ದೇಶದಿಂದ ಸೇರಿ ಪರಸ್ಪರ ಚರ್ಚೆ ಮಾಡಿದರು. ಆ ಮೂಲಕ ಅಂದೇ ಪ್ರಜಾಪ್ರಭುತ್ವಕ್ಕೆ ಅಡಿಗಲ್ಲನ್ನು ಹಾಕಿದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇನ್ನಿಲ್ಲದ ಮಹತ್ವ ನೀಡಿದ ಅನುಭವ ಮಂಟಪವು ಶರಣ ಶರಣೆಯರೆಲ್ಲ ಲಿಂಗ-ಜಾತಿಬೇಧಗಳಿಲ್ಲದಂತೆ ಒಗ್ಗೂಡಲು ಇಂಬು ನೀಡಿತು. ಇಂ
APA, Harvard, Vancouver, ISO, and other styles
4

ಪ್ರಸನ್ನಕುಮಾರ್, ಕೆ. "ಅಂಬೇಡ್ಕರ್‌ರವರ ಸಾಮಾಜಿಕ ಚಿಂತನೆಗಳು". AKSHARASURYA JOURNAL 05, № 06 (2025): 110 to 116. https://doi.org/10.5281/zenodo.14788784.

Full text
Abstract:
ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿ ಎಂದು ಕರೆಸಿಕೊಂಡ ಮಹಾನ್ ವ್ಯಕ್ತಿ. ಇವರು ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಇವರು ದೇಶಕ್ಕಾಗಿ ಮಾಡಿದ ಹೋರಾಟಗಳು ಎಂತಹ ದುರ್ಬಲ ವ್ಯಕ್ತಿಗಳನ್ನೂ ಸಹ ಎಚ್ಚರಿಸುತ್ತದೆ. ಇವರ ಕೊಡುಗೆಯನ್ನು ಭಾರತೀಯ ಜನತೆ ಎಂದಿಗೂ ಮರೆಯುವುದಿಲ್ಲ. ಸಂವಿಧಾನ ರಚನೆಗೆ ಮಾತ್ರವಲ್ಲದೇ ಅವರ ಸೇವೆ ಜನತೆಯನ್ನು ಜಾಗೃತರಾಗಿ ಮಾಡುವ ಸಾಧನವಾಗಿದೆ ಎನ್ನಬಹುದು. ಅಂಬೇಡ್ಕರ್ ಅವರು ವೈಚಾರಿಕತೆಯ ನೆಲೆಯಲ್ಲಿ ಈ ದೇಶವನ್ನು ಮುಂದೆ ತೆಗೆದುಕೊಂಡು ಹೋಗಬೇಕೆಂಬ ಮಹದಾಶಯವನ್ನು ಹೊಂದಿರುವ ಅಪರೂಪ ವ್ಯಕ್ತಿ. ಈ ಹಿನ್ನಲೆಯಲ್ಲಿಯೇ ಅವರು “ಈ ದೇಶದಲ್ಲಿ ಗುಡಿ-ಗೋಪುರಗಳಿಗಿಂತ ಶಾಲೆಗಳು ತೆರೆದರೆ, ಆ ದೇಶ ಉದ್ದಾರವಾಗುತ್ತದೆ” ಎಂಬ ನಿಲುವನ್ನು ತ
APA, Harvard, Vancouver, ISO, and other styles
5

ಅಶ್ವಿನಿ, ಎಂ. ಎಸ್. "ಬಾಬಾ ಸಾಹೇಬ್ ಅಂಬೇಡ್ಕರ್‌: ಸಾಮಾಜಿಕ ನ್ಯಾಯದ ರೂವಾರಿ". AKSHARASURYA JOURNAL 06, № 05 (2025): 10 to 16. https://doi.org/10.5281/zenodo.15504125.

Full text
Abstract:
ಭಾರತ ಕಂಡ ಅತ್ಯಂತ ಶ್ರೇಷ್ಠ ಪ್ರತಿಭೆಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ ಅವರು ಅಗ್ರಮಾನ್ಯರು. ಅವರು ರಾಜಕೀಯ ತಜ್ಞರು, ಕಾನೂನು ತಜ್ಞರು, ಆರ್ಥಿಕ ಚಿಂತಕರು, ಸಾಮಾಜಿಕ ನ್ಯಾಯದ ಹೋರಾಟಗಾರರು, ತತ್ವಜ್ಞಾನಿಗಳು, ಲೇಖಕರು, ಬಹುಭಾಷ ವಿದ್ವಾಂಸರು, ಭಾರತ ರಾಷ್ಟ್ರದ ಮಹಾನ್ ನೇತಾರ, ಭಾರತದ ಶ್ರೇಷ್ಠ ಮಾನವತಾವಾದಿ, ಪ್ರಜಾತಂತ್ರ ಕಾರಣಿ ಮತ್ತು ಸಾಮಾಜಿಕ ಕ್ರಾಂತಿಕಾರಿ, ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ಮಹಾಜ್ಞಾನಿ ಹಾಗೂ ಭಾರತದ ಸಂವಿಧಾನ ರಚನ ಕರಡು ಸಮಿತಿಯ ಅಧ್ಯಕ್ಷರು. ಹೀಗೆ ಇವರ ಶ್ರೇಷ್ಠತೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಂಥ ಶ್ರೇಷ್ಠ ವ್ಯಕ್ತಿ ಭಾರತದಲ್ಲಿದ್ದ ವರ್ಣ ವ್ಯವಸ್ಥೆಯ ವಿರುದ್ಧ ಹೋರಾಡಿ, ತಾನೇ ಸಂವಿಧಾನವನ್ನು ರಚಿಸಿ ಸಾಮಾಜಿಕ ನ್ಯಾಯವನ್ನು ನೀಡಿದ ಸಾಮಾಜಿಕ ಚ
APA, Harvard, Vancouver, ISO, and other styles
6

ಮಲ್ಲಯ್ಯ, ಸಂಡೂರು. "ಆಧುನಿಕ ಕನ್ನಡ ಸಾಮಾಜಿಕ ನಾಟಕಗಳು: ವಾಸ್ತವಿಕ ಪ್ರಜ್ಞೆಯ ನೆಲೆಗಳು". AKSHARASURYA 05, № 01 (2024): 59 to 66. https://doi.org/10.5281/zenodo.13870729.

Full text
Abstract:
ಉತ್ತರ ಕನ್ನಡ ಜಿಲ್ಲೆಯ ಪ್ರಾದೇಶಿಕತೆಯ ಕಥಾಹಂದರವನ್ನು ಒಳಗೊಂಡಿರುವ ‘ಇಗ್ಗಪ್ಪ ಹೆಗ್ಗಡೆಯ ಪ್ರಹಸನ’ (1887) ನಾಟಕ ವಾಸ್ತವಿಕತೆಯನ್ನು ಕುರಿತು ಚರ್ಚಿಸುವಾಗ ಮುನ್ನೆಲೆಗೆ ಬರುತ್ತದೆ. ಉತ್ತರ ಕನ್ನಡದ ಜನರ ಸಾಮಾಜಿಕ ಹಿನ್ನೆಲೆಯಲ್ಲಿ ರಚಿತವಾದ ಈ ನಾಟಕವನ್ನು ವಾಸ್ತವಿಕ ರಂಗಭೂಮಿಯ ಪ್ರಪ್ರಥಮ ಸ್ವತಂತ್ರ ಕೃತಿ ಎನ್ನುವುದುಂಟು. ಇಳಿಯ ವಯಸ್ಸಿನ ಹವ್ಯಕ ಬ್ರಾಹ್ಮಣ ಇಗ್ಗಪ್ಪ ಹೆಗಡೆಯ ವಿಷಮ ವಿವಾಹ, ಅದರ ದುರಂತತೆ ಈ ನಾಟಕದ ವಸ್ತು. ಸ್ವತಂತ್ರವಾದ ಸಾಮಾಜಿಕ ವಸ್ತುವನ್ನು ಒಳಗೊಂಡು, ಅಪ್ಪಟ ಆಡುಮಾತನ್ನೇ ಬಳಸಿಕೊಂಡು ಬರೆದ ಈ ನಾಟಕ ಒಂದು ನೈಜವಾದ ಸಾಮಾಜಿಕ ಚಿತ್ರಣದಿಂದ ಕೂಡಿದೆ.  ಕನ್ನಡ ನಾಟಕದಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಿ ಹೊಸ ಯುಗವನ್ನೇ ಸೃಷ್ಟಿಸಿದ ಕೀರ್ತಿ ಟಿ. ಪಿ. ಕೈಲಾಸ ಹಾಗೂ ಶ್ರೀರಂಗರಿಗೆ ಸಲ್ಲುತ್ತದೆ. ಇ
APA, Harvard, Vancouver, ISO, and other styles
7

ಮಾಧವ, ಎಂ. ಕೆ. "ಬಸವಣ್ಣನ ವಚನಗಳಲ್ಲಿ ಸಮ ಸಮಾಜದ ಪ್ರಸ್ತುತತೆ". AKSHARASURYA 04, № 02 (2024): 27 to 32. https://doi.org/10.5281/zenodo.11525708.

Full text
Abstract:
ಕನ್ನಡ ಸಾಹಿತ್ಯದಲ್ಲಿ ೧೨ನೇ ಶತಮಾನವನ್ನು ವಚನಗಳ ಯುಗವೆಂದು ಕರೆಯಲಾಗುತ್ತದೆ. ಬಸವಣ್ಣ ವಚನ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದವನು. ತನ್ನ ವಚನಗಳ ಮೂಲಕ ‘ಕಾಯಕವೇ ಕೈಲಾಸ’ ವೆಂದು ಸಾರಿ, ಜನರಲ್ಲಿ ದುಡಿದು ತಿಂದು ಬದುಕುವ ಮಹತ್ವವನ್ನು ತಿಳಿಸಿದರು. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ತ್ರೀಯರಿಗೆ ಭಾಗವಹಿಸುವ ಸಮಾನ ಅವಕಾಶ ನೀಡುವ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕೊಂದು ಅರ್ಥವನ್ನು ಕಲ್ಪಿಸಿದರು. ಕಲುಷಿತಗೊಂಡಿದ್ದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ದಿಕ್ಕರಿಸಿ, ಘನ ಬದಲಾವಣೆಯನ್ನು ಆರಿಸಿ ಹೊರಟ ದಾರ್ಶನಿಕ ಬಸವಣ್ಣ. ಸಾಮಾಜಿಕ ಬದಲಾವಣೆಗೆ ಹೊಸ ಭಾಷ್ಯ ಬರೆಯುವ ಮೂಲಕ ಉತ್ತಮ ಸಮಾಜ ವ್ಯವಸ್ಥೆಗೆ ನಿಜವಾದ ಅರ್ಥ ಕಲ್ಪಿಸಿ ಕೊಟ್ಟವರು. ಸಮಾಜದ ಕೀಳುಮಟ್ಟದ ಶೋಷಣೆಯಿಂದಾಗಿಯೇ ಸಮಾಜದಲ್ಲಿ ದುಡಿಯುವ ಮತ್ತು
APA, Harvard, Vancouver, ISO, and other styles
8

ಹೇಮಲತ, ಪಿ. ಎನ್. "ಸಾಮರಸ್ಯದ ತಾಣಗಳಾಗಿ ಶಿಂಷಾ ಮಾರಮ್ಮ ದೇಗುಲ ಹಾಗೂ ಹಜರತ್ ಮರ್ದಾನಿ ಗೈಬ್ ದರ್ಗಾ". AKSHARASURYA JOURNAL 05, № 04 (2024): 34 to 40. https://doi.org/10.5281/zenodo.14289565.

Full text
Abstract:
ಕನ್ನಡ ನಾಡಿನಲ್ಲಿ ಪ್ರಾಚೀನ ಕಾಲದಿಂದಲೂ ಸಾಮರಸ್ಯವನ್ನು ಪ್ರತಿಬಿಂಬಿಸುವ ಅನೇಕ ಘಟನೆಗಳು ನಡೆಯುತ್ತಾ ಬಂದಿವೆ; ಅನೇಕ ಸ್ಥಳಗಳು ರೂಪುಗೊಂಡಿವೆ. ಸಂತ ಸಮುದಾಯವು ಸಾಮಾಜಿಕ ಸಾಮರಸ್ಯಕ್ಕಾಗಿ ಬೋಧಿಸುತ್ತಾ ನಡೆದು ಕನ್ನಡ ಸಂಸ್ಕೃತಿಯಲ್ಲಿ ಬಹುದೊಡ್ಡ ಕ್ರಾಂತಿಯನ್ನುಂಟುಮಾಡಿರುವುದು ಚಾರಿತ್ರಿಕ ಸಂಗತಿಯಾಗಿದೆ. ಕರ್ನಾಟಕದ ಅನೇಕ ಸಂತರೂ ಮತ್ತು ಅವರ ಶಿಷ್ಯಂದಿರ ಸೇವಾಕಾರ್ಯದ ಪ್ರಭಾವದಿಂದಾಗಿ ಸಾಮಾಜಿಕ ಸ್ವಾಸ್ಥ್ಯವೂ ಸಾಮರಸ್ಯವೂ ಸಾಧಿತಗೊಂಡು ಇಂದಿಗೂ ಜನಸಮುದಾಯಗಳು ಒಕ್ಕಲಾಗಿ ನಡೆದುಕೊಳ್ಳುತ್ತಿದ್ದಾರೆ. ಕಾವೇರಿ ನದಿಯ ಉಪನದಿಯಾದ ಶಿಂಷಾ ಹರಿವಿನ ಮಾರ್ಗದಲ್ಲಿ ರೂಪುಗೊಂಡಿರುವ ಶಿಂಷಾ ಮಾರಮ್ಮ ದೇವಾಲಯ, ಶಿವನಸಮುದ್ರ ದರ್ಗಾ ಅಥವಾ ದರ್ಗಾ ಹಜರತ್ ಮರ್ದಾನಿ ಗೈಬ್ ತಾಣಗಳು ಸಾಮಾಜಿಕ ಸಾಮರಸ್ಯಕ್ಕೆ ಹೆಸರುವಾಸಿಯಾಗಿವೆ.
APA, Harvard, Vancouver, ISO, and other styles
9

ಚನ್ನವೀರಯ್ಯ. "ವಚನಗಳಲ್ಲಿನ ಜಾತಿ ಪದ್ಧತಿ ಮತ್ತು ಮೌಢ್ಯಗಳ ವಿಶ್ಲೇಷಣೆ". AKSHARASURYA 05, № 02 (2024): 135 to 142. https://doi.org/10.5281/zenodo.14035388.

Full text
Abstract:
ಹನ್ನೇರಡನೇ ಶತಮಾನವನ್ನು ವಚನ ಸಾಹಿತ್ಯದ ಪರ್ವಕಾಲ ಎಂದು ಕರೆಯಬಹುದು. ಏಕೆಂದರೆ ಜನಸಾಮಾನ್ಯರ ಆಡುಭಾಷೆಯ ಮೂಲಕ ಕನ್ನಡಭಾಷೆಯನ್ನು ಉತ್ತುಂಗಕ್ಕೆ ಏರಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಬಹು ಮುಖ್ಯವಾಗಿ ಜಾತಿ, ಮತ, ವರ್ಗ, ವರ್ಣ, ಮೇಲು, ಕೀಳು ಹಾಗೂ ಸಾಮಾಜಿಕ ಪಿಡುಗುಗಳಾದ ಮೂಢನಂಬಿಕೆಗಳು ಅನಿಷ್ಟಪದ್ದತಿಗಳ ಆಚರಣೆಯಿಂದ ಸಮಾಜದ ಅಭಿವೃದ್ಧಿಗೆ ಮಾರಕವಾದುದು ಎಂಬುದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿ ಸಾಮಾಜಿಕ ಬದಾಲಾವಣೆಗೆ ಮುನ್ನುಡಿ ಬರೆದು ನವಮನ್ವಂತರಕೆ ದಾರಿ ದೀಪವಾದವರು. ಆ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದರು. ಸಾಮಾಜಿಕ ಬದಲಾಣೆಯ ಜೊತೆಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಅಂತಹ ಕೆಲವು ವಚನಕಾರರ ವಚನಗಳ ವಿಶ್ಲೇಷಣೆ ಈ ಲೇಖನದಲ್ಲಿ ಚರ್ಚಿಸಲಾಗಿದೆ.
APA, Harvard, Vancouver, ISO, and other styles
10

ನರಸಿಂಹಪ್ಪ, ಜೆ. "ಮೊದಲನೇ ತಲೆಮಾರಿನ ಸವಾಲುಗಳು: ಕರೋನಾ ಹಿನ್ನೆಲೆಯಲ್ಲಿ". AKSHARASURYA 06, № 02 (2025): 148 to 154. https://doi.org/10.5281/zenodo.15124196.

Full text
Abstract:
ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಪ್ರಮುಖ ಆಶಯವೇ ಅಸಮಾನತೆ ನಿವಾರಿಸಿ ಎಲ್ಲರಿಗೂ ಸಾಮಾಜಿಕ ಆರ್ಥಿಕ ರಾಜಕೀಯ ಪ್ರಕ್ರಿಯೆಗಳಲ್ಲಿ ಸಮಾನ ಅವಕಾಶ ಒದಗಿಸುವುದು. ಹೀಗಾಗಿ ಕರೋನಾ ತಂದ ಬಿಕ್ಕಟ್ಟುಗಳನ್ನು ವಿವಿದ ಆಯಾಮಗಳನ್ನು ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ಚರ್ಚಿಸುವ ಅಗತ್ಯವಿದೆ. ಕರೋನಾ ಸನ್ನಿವೇಶದಲ್ಲಿ ಶ್ರೀಸಾಮಾನ್ಯರ ಹಕ್ಕುಗಳನ್ನು ಮರೆಮಾಚಲಾಗುತ್ತಿದೆ. ಈ ಸಾಂಕ್ರಾಮಿಕವು ಹರಡುವಲ್ಲಿ ಯಾವುದೇ ಆರ್ಥಿಕ ತಾರತಮ್ಯ ಮಾಡುತ್ತಿಲ್ಲ ಆದರೆ, ಇದರಿಂದ ಮುಕ್ತಿ ಪಡೆಯಲು ದೊರೆಯುವ ಆರೋಗ್ಯ ಸೌಲಭ್ಯಗಳು ಶ್ರೇಣಿಕೃತವಾಗಿವೆ. ಈ ಮೂಲಕ ಸಮ ಸಮಾಜವನ್ನು ನಿರ್ಮಾಣ ಮಾಡಲು ಬೇಕಾಗುವ ಪರಿಭಾಷೆಗಳ ಮುಖಾಂತರ ಅರ್ಥೈಸಿಕೊಳ್ಳುವ ಜರೂರು ಇದೆ. ಕೇಂದ್ರದಿಂದ ಅಂಚೆಗೆ ತಳ್ಳಲ್ಪಟ್ಟ ಶೋಷಿತ ಸಮುದಾಯಗಳ ಸವಾಲುಗಳನ್ನು ಮರು ಚಿಂತನೆಗೆ ಒಳಪಡಿಸಲಾಗಿದೆ. 
APA, Harvard, Vancouver, ISO, and other styles
More sources
We offer discounts on all premium plans for authors whose works are included in thematic literature selections. Contact us to get a unique promo code!