To see the other types of publications on this topic, follow the link: ಸಾಮಾಜಿಕ.

Journal articles on the topic 'ಸಾಮಾಜಿಕ'

Create a spot-on reference in APA, MLA, Chicago, Harvard, and other styles

Select a source type:

Consult the top 50 journal articles for your research on the topic 'ಸಾಮಾಜಿಕ.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Browse journal articles on a wide variety of disciplines and organise your bibliography correctly.

1

ಸಂತೋಷ್, ಕುಮಾರ್ ಆರ್.ಎಂ. "ಜನಮಾಧ್ಯಮವಾಗಿ ಸಾಮಾಜಿಕ ಜಾಲತಾಣ". AKSHARASURYA JOURNAL 06, № 05 (2025): 186 to 200. https://doi.org/10.5281/zenodo.15504635.

Full text
Abstract:
ಇತ್ತೀಚಿನ ತಂತ್ರಜ್ಞಾನ ವಿಕಾಸದೊಂದಿಗೆ ಸಾಮಾಜಿಕ ಜಾಲತಾಣಗಳು ಜನಮಾಧ್ಯಮದ ಪ್ರಮುಖ ಅಂಗವಾಗಿ ಪ್ರಭಾವ ಬೀರುತ್ತಿವೆ. ಮಾಹಿತಿಯ ತ್ವರಿತ ಹರಡುವಿಕೆ, ವ್ಯಾಪಕ ಪ್ರಭಾವ ಮತ್ತು ಸಮುದಾಯಗಳ ರೂಪುಗೊಳಿಸುವಿಕೆ ಎಂಬ ಅಂಶಗಳಿಂದ ಇವು ಪ್ರಬಲ ಮಾಧ್ಯಮವಾಗಿ ಪರಿಣಮಿಸಿವೆ. ಇವು ವೈಯಕ್ತಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ಸಾಮಾಜಿಕ ಜಾಲತಾಣಗಳ ಅಸ್ತಿತ್ವವು ಸಂವಹನದಲ್ಲಿ ಹೊಸ ಯುಗವನ್ನು ಆರಂಭಿಸಿದ್ದು, ಲೋಕದ ಎಲ್ಲೆಡೆಯ ಜನರನ್ನು ಪರಸ್ಪರ ಸಂಪರ್ಕಿಸುವ ಸಾಮರ್ಥ್ಯವನ್ನು ಹೊಂದಿದೆ. ಇವು ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶ ನೀಡುವುದರೊಂದಿಗೆ, ಸುದ್ದಿಗಳನ್ನು ಹರಡುವ ಪ್ರಮುಖ ವೇದಿಕೆಯಾಗಿಯೂ ಕಾರ್ಯನಿರ್ವಹಿಸುತ್ತವೆ. ಜನಪ್ರಿಯತೆಯನ್ನು ಗಳಿಸಲು ಹಾಗೂ ಬುದ್ಧಿವಂತ ಸಮಾಜವನ್ನು ರೂಪಿಸಲು ಸಾಮಾಜಿಕ ಜಾಲತಾಣಗಳು ಬಹುಪಾಲು ಸಹಾಯ ಮಾಡುತ್ತವೆ. ಇದನ್ನು ಶಿಕ್ಷಕರು, ವಿದ್ವಾಂಸರು ಮತ್ತು ವ್ಯಾವಹಾರಿಕ ಕ್ಷೇತ್ರದ ತಜ್ಞರು ತಮ್ಮ ಕಾರ್ಯಕ್ಷೇತ್ರದ ಅಭಿವೃದ್ಧಿಗಾಗಿ, ಜ್ಞಾನಾರ್ಜನೆಗಾಗಿ ಬಳಸುತ್ತಿದ್ದಾರೆ. ಇವಲ್ಲದೆ, ಈ ಜಾಲತಾಣಗಳ ದುರ್ಬಳಕೆಯು ತಪ್ಪು ಮಾಹಿತಿಯ ವಿಸ್ತರಣೆ, ಗೌಪ್ಯತೆ ಉಲ್ಲಂಘನೆ ಹಾಗೂ ಸಾಮಾಜಿಕ ಬದಲಾಗುವಿಕೆ ಉಂಟುಮಾಡುವ ಸಾಧ್ಯತೆಯನ್ನೂ ಹೊಂದಿದೆ. ಸುಳ್ಳು ಸುದ್ಧಿ ಹರಡುವಿಕೆ, ಸೈಬರ್ ಅಪರಾಧಗಳು ಹಾಗೂ ಮಾನಸಿಕ ಒತ್ತಡವನ್ನೂ ಇದರಿಂದ ಎದುರಿಸಬೇಕಾಗಿದೆ. ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಜಾಗೃತಿಯಿಂದ ನಡೆದುಕೊಳ್ಳುವುದು ಹಾಗೂ ಮಾಹಿತಿ ಪರಿಶೀಲನೆಗೆ ಹೆಚ್ಚಿನ ಗಮನ ನೀಡುವುದು ಪ್ರಮುಖ ಹಾಗೂ ಅತ್ಯವಶ್ಯಕವಾಗಿದೆ. ಸಾಮಾಜಿಕ ಜಾಲತಾಣಗಳು ವ್ಯಾಪಾರದ ಕ್ಷೇತ್ರದಲ್ಲಿಯೂ ದೊಡ್ಡ ಕ್ರಾಂತಿಯನ್ನು ಉಂಟುಮಾಡಿವೆ. ಡಿಜಿಟಲ್ ಮಾರ್ಕೆಟಿಂಗ್, ಆನ್‌ಲೈನ್ ವ್ಯಾಪಾರ, ಸಣ್ಣ ಹಾಗೂ ದೊಡ್ಡ ಉದ್ಯಮಗಳಿಗೆ ಪ್ರಚಾರ ನೀಡುವಂತೆ ಇದು ಹೊಸ ಆಯಾಮವನ್ನು ಸೃಷ್ಟಿಸಿದೆ. ಉದ್ಯೋಗ ಅವಕಾಶಗಳು, ಹೊಸ ವೃತ್ತಿಪರ ನೆಟ್‌ವರ್ಕಿಂಗ್ ಸಾಧನೆ ಮತ್ತು ಉದ್ಯೋಗ ಹುಡುಕುವ ಪ್ರಕ್ರಿಯೆಗೂ ಇದು ಸಹಾಯ ಮಾಡುತ್ತಿದೆ. ಭವಿಷ್ಯದಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ ಇನ್ನಷ್ಟು ಹೆಚ್ಚಾಗಲಿದ್ದು, ಪರಿಣಾಮಕಾರಿಯಾದ ಬಳಕೆ ಮತ್ತು ನಿಯಂತ್ರಣ ಅನಿವಾರ್ಯವಾಗಿದೆ. ಶಿಕ್ಷಣ, ಸಂಶೋಧನೆ, ಉದ್ಯೋಗ, ಉದ್ಯಮ ಮತ್ತು ಸಾಮಾಜಿಕ ಹಿತಾಸಕ್ತಿ ಸಂಘಟನೆಗಳಿಗೆ ಇದು ಹೊಸ ತಲೆಮಾರು ತರಬೇತಿಯಂತಾಗಬಹುದು. ಜಾಲತಾಣವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿದರೆ, ಸಾಮಾಜಿಕ ಜಾಲತಾಣಗಳು ಆಧುನಿಕ ಯುಗದ ಪರಿಣಾಮಕಾರಿಯಾದ ಮಾಧ್ಯಮವೆಂಬುದರಲ್ಲಿ ಸಂಶಯವಿಲ್ಲ. ಆದರೆ, ದುರಪಯೋಗವನ್ನು ತಡೆಗಟ್ಟಲು ಮತ್ತು ಮಾಹಿತಿಯ ಮೌಲ್ಯವನ್ನು ಹೆಚ್ಚಿಸಲು ಸರ್ಕಾರದ ಸೈಬರ್ ನಿಯಂತ್ರಿತ ವಿಭಾಗಗಳು ಮತ್ತು ವ್ಯಕ್ತಿಯು ಜವಾಬ್ದಾರಿಯುತ ಬಳಕೆ ಅಗತ್ಯವಾಗಿದೆ. 
APA, Harvard, Vancouver, ISO, and other styles
2

ಶ್ರೀನಿವಾಸ, ಎಸ್.ಜಿ. "ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆಗಳು". AKSHARASURYA JOURNAL 06, № 04 (2025): 01 to 10. https://doi.org/10.5281/zenodo.15490768.

Full text
Abstract:
ʼಕಾಯಕವೇ ಕೈಲಾಸʼ ವೆಂದು ಸಾರಿ, ಜನರಲ್ಲಿ ದುಡಿದು ತಿಂದು ಬದುಕುವ ಮಹತ್ವವನ್ನು ತಿಳಿಸಿದ್ದು ವಚನ ಸಾಹಿತ್ಯ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳಲ್ಲಿ ಸ್ತ್ರೀಯರಿಗೆ ಭಾಗವಹಿಸುವ ಸಮಾನ ಅವಕಾಶ ನೀಡುವ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕೊಂದು ಅರ್ಥವನ್ನು ಕಲ್ಪಿಸಿದರು. ಕಲುಷಿತಗೊಂಡಿದ್ದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ದಿಕ್ಕರಿಸಿ, ಘನ ಬದಲಾವಣೆಯನ್ನು ಗುರಿಯಿಟ್ಟು ನಡೆದ ದಾರ್ಶನಿಕ ಚಳುವಳಿ ವಚನ ಸಾಹಿತ್ಯ. ಸಾಮಾಜಿಕ ಬದಲಾವಣೆಗೆ ಹೊಸ ಭಾಷ್ಯ ಬರೆಯುವ ಮೂಲಕ ಉತ್ತಮ ಸಮಾಜ ವ್ಯವಸ್ಥೆಗೆ ನಿಜವಾದ ಅರ್ಥ ಕಲ್ಪಿಸಿ ಕೊಟ್ಟವರು. ಸಮಾಜದ ಕೀಳುಮಟ್ಟದ ಶೋಷಣೆಯಿಂದಾಗಿಯೇ ಸಮಾಜದಲ್ಲಿ ದುಡಿಯುವ ಮತ್ತು ಕೂತು ಉಣ್ಣುವ ವರ್ಗಗಳು ನಿರ್ಮಾಣವಾಗುವುದಕ್ಕೆ ಕಾರಣವಾಗಿರಬೇಕು, ಸಮಾಜದಲ್ಲಿ ಮೇಲ್ವರ್ಗವೆಂದು ಕರೆಸಿಕೊಂಡ ಜನರು ಸಮಾಜದ ಇತರರನ್ನು ಕೀಳಾಗಿ ಕಾಣುತ್ತಿದ್ದ ಸಂದರ್ಭಗಳು ಶರಣರು ತಮ್ಮ ಚಿಕಿತ್ಸಕ ದೃಷ್ಟಿಯಿಂದ ನೋಡಿದಾಗ ಸಾಮಾಜಿಕ ಅಸಮಾನತೆಯೆಂಬ ಸಾಮಾಜಿಕ ರೋಗಗಳಿಗೆ ಮದ್ದು ಅರೆದದುರ ಪರಿಣಾಮದಿಂದಲೇ ಅವರ ಮನಸ್ಸಿನ ವಿಚಾರಗಳೆಲ್ಲ ವಚನಗಳಾಗಿ ಮಾರ್ಪಟ್ಟವಾಗಿರಬೇಕು. ಅಂದಿನಿಂದಲೇ ಬಸವಣ್ಣನವರ ನೇತೃತ್ವದಲ್ಲಿ ಶರಣರು ಸಾಮಾಜಿಕ ಬದಲಾವಣೆಗೆ ಕ್ರಾಂತಿಕಾರಿ ಹೆಜ್ಜೆ ಇಟ್ಟರೆಂದು ಕಾಣಿಸುತ್ತದೆ. ಅವರ ವಚನಗಳ ಮೂಲಕ ಸಾಮಾಜಿಕ ವ್ಯವಸ್ಥೆಯ ಅಂಕುಡೊಂಕುಗಳನ್ನು ತಿದ್ದಿ, ಸಮ ಸಮಾಜ ವ್ಯವಸ್ಥೆಯನ್ನು ಸರಿಪಡಿಸುವ ಕಾಯಕಕ್ಕೆ ಮುಂದಾದರು. ಒಂದಷ್ಟು ಸಮಾಜ ವ್ಯವಸ್ಥೆಯನ್ನು ಬದಲಿಸಲು ಪಟ್ಟ ಪ್ರಯತ್ನ ಇಂದಿಗೂ ಮುಂದಿಗೂ ಮಾದರಿಯಾಗುವಂತಿದೆ. ಸಮಾಜದ ಬಗೆಗೆ ಅವರಿಗಿದ್ದ ಕಾಳಜಿಯಿಂದಾಗಿಯೇ ಸಮಾಜ ಬದಲಾಣೆ ಕಾಣಲು ಸಾಧ್ಯವಾಯಿತು.  ಕಾಯಕ ಜೀವಿಗಳ ಹೋರಾಟವಾಗಿ ರೂಪುಗೊಂಡ ವಚನ ಚಳವಳಿಯಲ್ಲಿ ಮಹಿಳಾ ಸಮಾನತೆಯ ಆಶಯಗಳು ಸಹಜವಾಗಿಯೇ ಅಡಕವಾಗಿದ್ದವು. ಸಾಮಾಜಿಕ ಸಮಾನತೆ ಆಶಯವೇ ಪ್ರಮುಖವಾದ ವಚನ ಚಳವಳಿ ಮಹಿಳಾ ಸಮಾನತೆಯನ್ನು ಪ್ರತ್ಯೇಕಿಸಿ ನೋಡಲಿಲ್ಲ. ಕ್ರಾಂತಿಯೊಳಗಿನ ಕ್ರಾಂತಿ ಎಂಬಂತೆ ನಡೆಯಿತು. ಪರ್ಯಾಯ ಚಿಂತನೆ, ಪರ್ಯಾಯ ಸಂಸ್ಕೃತಿ ಅಶಯವೂ ಸೇರ್ಪಡೆಗೊಂಡಿತ್ತು, ಶ್ರಮಸಂಸ್ಕೃತಿ ರೂಪುಗೊಳ್ಳುವುದು ಹೆಣ್ಣಿನ ಶ್ರಮದಿಂದ ಎಂದು 12ನೇ ಶತಮಾತನದ ವಚನಕಾರ್ತಿಯರು ಪ್ರತಿಪಾದಿಸಿದ್ದರು. ಹೀಗಾಗಿ ವಚನ ಚಳವಳಿಯಲ್ಲಿ ಮಹಿಳಾ ಸಮಾನತೆ ಅಂತರ್ಗತವಾಗಿತ್ತು. ಹೀಗಾಗಿಯೇ ವಚನಗಳಲ್ಲಿ ಮಹಿಳಾ ಸಮಾನತೆಯ ಆಶಯ ಚಳವಳಿಯ ಜತೆಜತೆಗೇ ಸಾಗಿತು. ಅಗ್ರಹಾರ ಶ್ರೇಷ್ಠ ಎನ್ನುವ ಸಂದರ್ಭದಲ್ಲೇ ಕಾಯಕ ಶ್ರೇಷ್ಠ ಎನ್ನುವ ಸಾಮಾಜಿಕ ಸಮಾನತೆಯ ಆಶಯವನ್ನು ವಚನ ಚಳವಳಿ ಪ್ರಕಟಿಸಿತು ಅರಮನೆ, ದೇವಾಲಯ ಸಂಸ್ಕೃತಿಗಳನ್ನು ವಚನ ಚಳವಳಿ ವಿರೋಧಿಸಿತು. ದೇವರು, ಅರಮನೆ, ಧರ್ಮದ ಸಂಕೋಲೆಯಿಂದ ಬಿಡಿಸಿ ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನ ಮಾಡಿದರು.  ಭಾರತೀಯ ಸಾಹಿತ್ಯದಲ್ಲಷ್ಟೇ ಅಲ್ಲದೆ ಜಾಗತಿಕ ಸಾಹಿತ್ಯದಲ್ಲಿ ವಚನಕಾರರ ಧ್ವನಿ ವಿಶಿಷ್ಟ ವಿಸ್ತರವಾದುದು ತಾವು ತುಳಿದು ಬಂದ ತಾತ್ವಿಕ ಪರಂಪರೆಯನ್ನೇ ವಿಮರ್ಶಿಸಿ ವಿರೋಧಿಸಿ ಹೊಸ ತಾತ್ವಿಕ ಪರಂಪರೆಯನ್ನು ನಿರ್ಮಿಸಲು/ಕಟ್ಟಲು ಯತ್ನಿಸಿದರು ʼನಾ ಭೂತೋ ನಾ ಭವಿಷ್ಯತಿʼ ಎನ್ನುವಂತಹ ಕ್ರಾಂತಿಕಾರಿ ಚಿಂತನಧಾರೆ ಒಂದನ್ನು ನಿರ್ಮಿಸಿಕೊಟ್ಟರು ʼಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯʼ ಎಂಬುದನ್ನು ಮಹಾಮಂಟಪ ಅನುಭವಮಂಟಪ ವಾಗಿಸಿಕೊಂಡವರು ಹಿಂದಿನ ಪರಂಪರೆಗಳು ʼಎಲ್ಲೂ ಸಲ್ಲದʼವರನ್ನಾಗಿಸಿದವರನ್ನು, ಇಲ್ಲಿಯೂ ಎಲ್ಲೆಲ್ಲಿಯೂ ಸಲ್ಲುವಂತೆ ಮಾಡಿದರು. ಅವರು ವಿಶ್ವ ಶಿವಶರಣ ದೊಳಗೆ ʼವಿಶ್ವಮಾನವʼರನ್ನಾಗಿ ರೂಪಿಸಿದರು ಸಮಸ್ತ ಜೀವ ರಾಶಿಯಲ್ಲೂ ದೈವಿಪ್ರಭೆ ಹುಡುಕಲು ಯತ್ನಿಸಿದ ಉಪನಿಷತ್ತುಗಳಲ್ಲಿನ ಬೋಧನೆಗಳು ಕಟ್ಟಕಡೆಯ ಮಾನವರನ್ನು ತಲುಪದೆ ಅವರು ತಿರಸ್ಕೃತರಾದದುಕ್ಕೆ ಕಾರಣವಾದ ತಂತು ಯಾವುದು? ಸಂಕುಚಿತ ಆಚಾರಗಳು ಕ್ಷುದ್ರ ಚಿಂತನೆಗಳು, ಧರ್ಮದ ಹೆಸರಲ್ಲಿ ಹೇಗೆ ನುಸುಳಿದವು? ಅರಮನೆಗಳು ಗುರುಮನೆಗಳಾಗದೆ ಉಳಿಯಲು ಕಾರಣವೇನು? ಧರ್ಮ ದಯೆ ಇಲ್ಲದಂತೆ ಆಗಲು ಕಾರಣವಾದ ಅಧರ್ಮದ ತಿರುಳಾವುದು? ಮುಂತಾದ ಮುಖ್ಯ ಪ್ರಶ್ನೆಗಳನ್ನು ಚಿಕಿತ್ಸಕ ದೃಷ್ಟಿಯಿಂದ ಎತ್ತಿದ್ದಷ್ಟೇ ಅಲ್ಲದೆ ಸಾಮಾಜಿಕ ಚಿಕಿತ್ಸೆಗಳನ್ನೂ ಮಾಡಲತ್ನಿಸಿದವರು ವಚನಕಾರರು ಇವರ ಸಾಮಾಜಿಕ ಚಿಂತನ ಕ್ರಮಗಳು ಅಗ್ರಗಣ್ಯವೆನಿಸಿವೆ.  ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆಗಳು ಎಂಬ ಈ ಲೇಖನವನ್ನು ಈ ಕೆಳಗಿನ ಪ್ರಮುಖ ಮುಖ್ಯಾಂಶಗಳಲ್ಲಿ ವಿಸ್ತರಿಸಲಾಗಿದೆ.   
APA, Harvard, Vancouver, ISO, and other styles
3

ತ್ರಿವೇಣಿ. "ಸಾಮಾಜಿಕ ಹರಿಕಾರ ಬಸವಣ್ಣ". AKSHARASURYA JOURNAL 04, № 04 (2024): 139 to 143. https://doi.org/10.5281/zenodo.13284139.

Full text
Abstract:
ಪ್ರಭುತ್ವದ ಮೇಲಾಟಕ್ಕೆ ಪರ್ಯಾಯವಾಗಿ ಜನಶಕ್ತಿ ರೂಪುಗೊಳ್ಳಬೇಕೆಂದು ಬಯಸುತ್ತಿದ್ದ ಬಸವಣ್ಣನವರು ಕಾಯಕ-ದಾಸೋಹಗಳ ಮುಖೇನ ಅದನ್ನು ಸಾಧಿಸುವ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಕಾಳಜಿಯುಳ್ಳ ಸಮಾನ ಮನಸ್ಕರ ಸಂಘಟನೆಯಿಂದ ಮಾತ್ರ ಇಂಥದ್ದನ್ನು ಸಾಧಿಸಲು ಸಾಧ್ಯವೆಂಬ ನಿಲುವಿನಲ್ಲಿ, ಜಾತಿ, ವರ್ಣ, ವರ್ಗಗಳೇ ಮೊದಲಾದ ಎಲ್ಲ ಬಂಧನಗಳನ್ನು ಮೀರಿದ ‘ಅನುಭವ ಮಂಟಪ’ ಎಂಬ ಒಂದು ಅದ್ಭುತ ವೇದಿಕೆಯನ್ನು ರೂಪಿಸಿದರು. ಅನುಭವಮಂಟಪದಲ್ಲಿ ಎಲ್ಲರೂ ಸಮಾನಭಾವದಲ್ಲಿ ಸಾಮಾಜಿಕ ಒಳಿತಿನ ಉದ್ದೇಶದಿಂದ ಸೇರಿ ಪರಸ್ಪರ ಚರ್ಚೆ ಮಾಡಿದರು. ಆ ಮೂಲಕ ಅಂದೇ ಪ್ರಜಾಪ್ರಭುತ್ವಕ್ಕೆ ಅಡಿಗಲ್ಲನ್ನು ಹಾಕಿದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇನ್ನಿಲ್ಲದ ಮಹತ್ವ ನೀಡಿದ ಅನುಭವ ಮಂಟಪವು ಶರಣ ಶರಣೆಯರೆಲ್ಲ ಲಿಂಗ-ಜಾತಿಬೇಧಗಳಿಲ್ಲದಂತೆ ಒಗ್ಗೂಡಲು ಇಂಬು ನೀಡಿತು. ಇಂಥ ಹತ್ತು ಹಲವು ವಿಭಿನ್ನ ಪ್ರಯೋಗಗಳ ಅಸ್ಪೃಶ್ಯತೆಯ ಕೊಳಕಿನಿಂದ ಸಮಾಜವನ್ನು ಮುಕ್ತಗೊಳಿಸಿ, ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ, ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು’ ಎಂಬ ಅರಿವನ್ನು ಮೂಡಿಸಿದರು. ಮರ್ತ್ಯದೊಳಗೆ ಬದುಕಬೇಕಾದರೆ ಆ ಹೊತ್ತಿನಲ್ಲಿ ಬಾಳ್ವಿಕೆ ಶುದ್ಧತೆಯೇ ಮುಖ್ಯ ಎಂಬುದನ್ನು ಬಸವಣ್ಣನವರು ಇನ್ನಿಲ್ಲದಷ್ಟು ತೀವ್ರ ನೆಲೆಯಲ್ಲಿ ಪ್ರತಿಪಾದಿಸಿದರು. ಜ್ಞಾನ ಮತ್ತು ಕ್ರಿಯೆಗಳಿಂದ ಕೂಡಿದ ಜೀವಕೇಂದ್ರಿತ ಪ್ರಜ್ಞೆ ಎಲ್ಲರಲ್ಲಿ ರೂಪುಗೊಳ್ಳಬೇಕೆಂದು ಬಸವಣ್ಣನವರು ಸದಾ ಹಂಬಲಿಸಿದರು.
APA, Harvard, Vancouver, ISO, and other styles
4

ಪ್ರಸನ್ನಕುಮಾರ್, ಕೆ. "ಅಂಬೇಡ್ಕರ್‌ರವರ ಸಾಮಾಜಿಕ ಚಿಂತನೆಗಳು". AKSHARASURYA JOURNAL 05, № 06 (2025): 110 to 116. https://doi.org/10.5281/zenodo.14788784.

Full text
Abstract:
ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿ ಎಂದು ಕರೆಸಿಕೊಂಡ ಮಹಾನ್ ವ್ಯಕ್ತಿ. ಇವರು ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಇವರು ದೇಶಕ್ಕಾಗಿ ಮಾಡಿದ ಹೋರಾಟಗಳು ಎಂತಹ ದುರ್ಬಲ ವ್ಯಕ್ತಿಗಳನ್ನೂ ಸಹ ಎಚ್ಚರಿಸುತ್ತದೆ. ಇವರ ಕೊಡುಗೆಯನ್ನು ಭಾರತೀಯ ಜನತೆ ಎಂದಿಗೂ ಮರೆಯುವುದಿಲ್ಲ. ಸಂವಿಧಾನ ರಚನೆಗೆ ಮಾತ್ರವಲ್ಲದೇ ಅವರ ಸೇವೆ ಜನತೆಯನ್ನು ಜಾಗೃತರಾಗಿ ಮಾಡುವ ಸಾಧನವಾಗಿದೆ ಎನ್ನಬಹುದು. ಅಂಬೇಡ್ಕರ್ ಅವರು ವೈಚಾರಿಕತೆಯ ನೆಲೆಯಲ್ಲಿ ಈ ದೇಶವನ್ನು ಮುಂದೆ ತೆಗೆದುಕೊಂಡು ಹೋಗಬೇಕೆಂಬ ಮಹದಾಶಯವನ್ನು ಹೊಂದಿರುವ ಅಪರೂಪ ವ್ಯಕ್ತಿ. ಈ ಹಿನ್ನಲೆಯಲ್ಲಿಯೇ ಅವರು “ಈ ದೇಶದಲ್ಲಿ ಗುಡಿ-ಗೋಪುರಗಳಿಗಿಂತ ಶಾಲೆಗಳು ತೆರೆದರೆ, ಆ ದೇಶ ಉದ್ದಾರವಾಗುತ್ತದೆ” ಎಂಬ ನಿಲುವನ್ನು ತಾಳಿದ್ದರು. ಅಂಬೇಡ್ಕರ್ ಅವರ ಆಲೋಚನೆಗಳು, ಜೀವನ ಮೌಲ್ಯಗಳು ಸಾಹಿತ್ಯ ಕ್ಷೇತ್ರದಲ್ಲೂ ವಸ್ತುವಾಗುತ್ತಿದೆ ಎಂದರೆ; ಆ ವ್ಯಕ್ತಿಯ ಅನನ್ಯತೆಯ ಬಗ್ಗೆ ಅವಲೋಕನ ಮಾಡಬೇಕಾದದ್ದೇ ಸರಿ. ಅವರ ನಡೆ, ನುಡಿಗಳ ಜಾಡನ್ನಿಡಿದರೆ ನಾವು ಎಂತಹ ಅಸಮಾನತೆಯನ್ನಾಗಲೀ, ಕಷ್ಟಕರವಾದ ಯಾವುದೇ ಕೆಲಸವಾಗಲೀ ಅಂತಹವುಗಳಿಂದ ನಾವು ಸುಲಭವಾಗಿ ತಪ್ಪಿಸಿಕೊಳ್ಳಬಹುದೆಂಬ ಅರಿವು ಮನದಟ್ಟಾಗುತ್ತದೆ.
APA, Harvard, Vancouver, ISO, and other styles
5

ಅಶ್ವಿನಿ, ಎಂ. ಎಸ್. "ಬಾಬಾ ಸಾಹೇಬ್ ಅಂಬೇಡ್ಕರ್‌: ಸಾಮಾಜಿಕ ನ್ಯಾಯದ ರೂವಾರಿ". AKSHARASURYA JOURNAL 06, № 05 (2025): 10 to 16. https://doi.org/10.5281/zenodo.15504125.

Full text
Abstract:
ಭಾರತ ಕಂಡ ಅತ್ಯಂತ ಶ್ರೇಷ್ಠ ಪ್ರತಿಭೆಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ ಅವರು ಅಗ್ರಮಾನ್ಯರು. ಅವರು ರಾಜಕೀಯ ತಜ್ಞರು, ಕಾನೂನು ತಜ್ಞರು, ಆರ್ಥಿಕ ಚಿಂತಕರು, ಸಾಮಾಜಿಕ ನ್ಯಾಯದ ಹೋರಾಟಗಾರರು, ತತ್ವಜ್ಞಾನಿಗಳು, ಲೇಖಕರು, ಬಹುಭಾಷ ವಿದ್ವಾಂಸರು, ಭಾರತ ರಾಷ್ಟ್ರದ ಮಹಾನ್ ನೇತಾರ, ಭಾರತದ ಶ್ರೇಷ್ಠ ಮಾನವತಾವಾದಿ, ಪ್ರಜಾತಂತ್ರ ಕಾರಣಿ ಮತ್ತು ಸಾಮಾಜಿಕ ಕ್ರಾಂತಿಕಾರಿ, ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ಮಹಾಜ್ಞಾನಿ ಹಾಗೂ ಭಾರತದ ಸಂವಿಧಾನ ರಚನ ಕರಡು ಸಮಿತಿಯ ಅಧ್ಯಕ್ಷರು. ಹೀಗೆ ಇವರ ಶ್ರೇಷ್ಠತೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಂಥ ಶ್ರೇಷ್ಠ ವ್ಯಕ್ತಿ ಭಾರತದಲ್ಲಿದ್ದ ವರ್ಣ ವ್ಯವಸ್ಥೆಯ ವಿರುದ್ಧ ಹೋರಾಡಿ, ತಾನೇ ಸಂವಿಧಾನವನ್ನು ರಚಿಸಿ ಸಾಮಾಜಿಕ ನ್ಯಾಯವನ್ನು ನೀಡಿದ ಸಾಮಾಜಿಕ ಚಿಂತಕ ಎಂದರೆ ತಪ್ಪಾಗಲಾರದು. ಭಾರತದಲ್ಲಿ ಮೊದಲು ವರ್ಣ ವ್ಯವಸ್ಥೆ ರೂಡಿಯಲ್ಲಿತ್ತು. ಅದು ಯಾವಾಗ ಯಾವ ಕಾರಣಗಳಿಂದ ಆರಂಭಗೊಂಡಿತು ಎಂದು ಹೇಳುವುದು ಕಷ್ಟ. ಏಕೆಂದರೆ ಯಾವುದೇ ಸಾಮಾಜಿಕ ವ್ಯವಸ್ಥೆಯ ಉಗಮದ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲವಾದರೂ, ವೇದಗಳಿಂದಲೇ ವರ್ಣವಸ್ಥೆ ಆರಂಭವಾಗಿದೆ ಎನ್ನುವುದು ಬಹುಜನ ಒಪ್ಪಿತವಾದ. ಚಾತುರ್ವಣ ಎಂಬುದು ಹಿಂದೂ ಧರ್ಮದ ಒಂದು ಸಾಮಾಜಿಕ ವಿಭಜನಾ ವ್ಯವಸ್ಥೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಈ ವರ್ಣ ವ್ಯವಸ್ಥೆಯು ಪ್ರಾಚೀನ ಸಮಾಜದಲ್ಲಿ ಶ್ರಮ ವಿಭಜನೆ ತತ್ವದಲ್ಲಿ ರೂಪಿತವಾಗಿದೆ. ಅಧ್ಯಯನ ಅಧ್ಯಾಪನ ಯಜ್ಞ ಯಾಗಾದಿಗಳ ಕಾರಣದಿಂದ ಬ್ರಾಹ್ಮಣ, ರಾಜ ಆಡಳಿತ, ರಾಜ್ಯ ಸುಭಿಕ್ಷತೆಯ ಕಾರಣದಿಂದ ಕ್ಷತ್ರಿಯ, ವ್ಯಾಪಾರ ವ್ಯವಹಾರಗಳ ಕಾರಣದಿಂದ ವೈಶ್ಯ, ಕೃಷಿ ಮತ್ತು ಕೂಲಿಕಾರ್ಯಗಳು ಕಾರಣದಿಂದ ಶೂದ್ರ ಎಂದು ನಿರ್ವಹಿಸಿರುವ ಬಗೆಯನ್ನು ಕಾಣಬಹುದು. ಓದುವ ಕಾರಣದಿಂದ ಬ್ರಾಹ್ಮಣ ಮೇಲ್ವರ್ಗದವರಾಗಿ, ಕಾಯಕದ ಕಾರಣದಿಂದ ಶೂದ್ರ ಕೆಳ ವರ್ಗದವನಾಗಿ ಗುರುತಿಸಲ್ಪಡುತ್ತಿರುವುದು ದುರಾದೃಷ್ಟಕರ. 
APA, Harvard, Vancouver, ISO, and other styles
6

ಮಲ್ಲಯ್ಯ, ಸಂಡೂರು. "ಆಧುನಿಕ ಕನ್ನಡ ಸಾಮಾಜಿಕ ನಾಟಕಗಳು: ವಾಸ್ತವಿಕ ಪ್ರಜ್ಞೆಯ ನೆಲೆಗಳು". AKSHARASURYA 05, № 01 (2024): 59 to 66. https://doi.org/10.5281/zenodo.13870729.

Full text
Abstract:
ಉತ್ತರ ಕನ್ನಡ ಜಿಲ್ಲೆಯ ಪ್ರಾದೇಶಿಕತೆಯ ಕಥಾಹಂದರವನ್ನು ಒಳಗೊಂಡಿರುವ ‘ಇಗ್ಗಪ್ಪ ಹೆಗ್ಗಡೆಯ ಪ್ರಹಸನ’ (1887) ನಾಟಕ ವಾಸ್ತವಿಕತೆಯನ್ನು ಕುರಿತು ಚರ್ಚಿಸುವಾಗ ಮುನ್ನೆಲೆಗೆ ಬರುತ್ತದೆ. ಉತ್ತರ ಕನ್ನಡದ ಜನರ ಸಾಮಾಜಿಕ ಹಿನ್ನೆಲೆಯಲ್ಲಿ ರಚಿತವಾದ ಈ ನಾಟಕವನ್ನು ವಾಸ್ತವಿಕ ರಂಗಭೂಮಿಯ ಪ್ರಪ್ರಥಮ ಸ್ವತಂತ್ರ ಕೃತಿ ಎನ್ನುವುದುಂಟು. ಇಳಿಯ ವಯಸ್ಸಿನ ಹವ್ಯಕ ಬ್ರಾಹ್ಮಣ ಇಗ್ಗಪ್ಪ ಹೆಗಡೆಯ ವಿಷಮ ವಿವಾಹ, ಅದರ ದುರಂತತೆ ಈ ನಾಟಕದ ವಸ್ತು. ಸ್ವತಂತ್ರವಾದ ಸಾಮಾಜಿಕ ವಸ್ತುವನ್ನು ಒಳಗೊಂಡು, ಅಪ್ಪಟ ಆಡುಮಾತನ್ನೇ ಬಳಸಿಕೊಂಡು ಬರೆದ ಈ ನಾಟಕ ಒಂದು ನೈಜವಾದ ಸಾಮಾಜಿಕ ಚಿತ್ರಣದಿಂದ ಕೂಡಿದೆ.  ಕನ್ನಡ ನಾಟಕದಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಿ ಹೊಸ ಯುಗವನ್ನೇ ಸೃಷ್ಟಿಸಿದ ಕೀರ್ತಿ ಟಿ. ಪಿ. ಕೈಲಾಸ ಹಾಗೂ ಶ್ರೀರಂಗರಿಗೆ ಸಲ್ಲುತ್ತದೆ. ಇದಕ್ಕಿಂತ ಮೊದಲು ಮಾಡಿದ್ದರೂ ಹೆಚ್ಚು ಪ್ರಚುರಕ್ಕೆ ಬಂದದ್ದು ಈ ಇಬ್ಬರೂ ನಾಟಕಗಳಿಂದ ಎನ್ನಬಹುದು. ಇಗ್ಗಪ್ಪ ಹೆಗಡೆ ಪ್ರಹಸನದಂತೆ ಇವರ ನಾಟಕಗಳೂ ಸಮಾಜ ಸುಧಾರಣೆಯ ಪ್ರವಚನವನ್ನೇ ಉಕ್ಕಿಸುವುದರಿಂದ ಅವು ಹೆಚ್ಚು ಕಲಾತ್ಮಕತೆ ಸಾಧಿಸಲಿಲ್ಲ. ಪತಿತೋದ್ಧಾರದ ರಚನೆ ತೀರಾ ಜಾಳಾಗಿದ್ದು, ಅತಿಮುಗ್ಧ ಕಲ್ಪನೆಯಿಂದ ಕೂಡಿದೆ. ನಾಟಕದ ವಸ್ತು ಹೊಸತಾದರೂ ಅದರ ವಿನ್ಯಾಸದಲ್ಲಿ ನಾಟಕಕಾರ ಹೆಚ್ಚು  ಸ್ಪಷ್ಟವಾದ ನವೀನತೆಯನ್ನಾಗಲೀ ಆತ್ಮಪ್ರತ್ಯಯವನ್ನಾಗಲೀ ಸಾಮಾಜಿಕ ಕಾಳಜಿಯನ್ನಾಗಲೀ ತೋರುವಂತೆ ಕಾಣುವುದಿಲ್ಲ. ಆದರೆ ನಿಜವಾದ ಸಾಮಾಜಿಕ ಅರಿವನ್ನು ನಾವು ಗುರುತಿಸುವುದು ಕೈಲಾಸಂ ಹಾಗೂ ಶ್ರೀರಂಗರ ನಾಟಕಗಳಲ್ಲಿ. ಇಬ್ಬರೂ ಪ್ರೌಢ ಶಿಕ್ಷಣದ ಸಲುವಾಗಿ ಕಡಲಾಚೆ ಪ್ರವಾಸ ನಡೆಸಿದಾಗ ಪಾಶ್ಚಾತ್ಯ ರಂಗಭೂಮಿಯ ಹಾಗೂ ಹೊಸ ಕಾಲದ ಜೀವನದ ಪ್ರಭಾವಗಳಿಗೆ ಮನವೊಡ್ಡಿ, ಅಲ್ಲಿ ಮೊಗೆದು ತಂದ ಸಂವೇದನೆ, ಪರಿಣತಿಗಳನ್ನು ಕನ್ನಡ ನಾಟಕಕ್ಕೆ ತುಂಬಿಸಿಕೊಟ್ಟರು. ಆಗ ಇಂಗ್ಲೆಂಡಿನಲ್ಲಿ, ಇಬ್ಸೆನ್ನನ ನಾಟಕದಿಂದ ಪ್ರೇರಿತರಾಗಿದ್ದ ಷಾ, ಗಾಲ್ಸ್ ಅಂತಹವರ ಪ್ರಭಾವ ಕೈಲಾಸಂ, ಶ್ರೀರಂಗರ ಮೇಲೂ ಬೀರಿರಬೇಕು. ಆದರೆ ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯ ಪಡೆದ ಅವರಿಬ್ಬರೂ ನಾಡಿನ ಪರಂಪರೆಯನ್ನು ಗಮನವಿಟ್ಟುಕೊಂಡೇ ನಾಟಕ ಬರೆದರು. ಹೊಸ ಪ್ರಭಾವ, ಅಂತರ್ಗತವಾದ ಪ್ರತಿಭೆಯೊಡನೆ ಸೇರಿ ಕನ್ನಡ ನಾಟಕ ಸಾಹಿತ್ಯದಲ್ಲಿ ಹೊಸ ಮನ್ವಂತರಕ್ಕೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ಆಧುನಿಕ ಕನ್ನಡ ಸಾಮಾಜಿಕ ನಾಟಕಗಳಲ್ಲಿ ವಾಸ್ತವಿಕ ಪ್ರಜ್ಞೆಯ ನೆಲೆಗಳನ್ನು ಶೋಧಿಸಲು ಈ ಲೇಖನದಲ್ಲಿ ಪ್ರಯತ್ನಿಸಲಾಗಿದೆ.
APA, Harvard, Vancouver, ISO, and other styles
7

ಮಾಧವ, ಎಂ. ಕೆ. "ಬಸವಣ್ಣನ ವಚನಗಳಲ್ಲಿ ಸಮ ಸಮಾಜದ ಪ್ರಸ್ತುತತೆ". AKSHARASURYA 04, № 02 (2024): 27 to 32. https://doi.org/10.5281/zenodo.11525708.

Full text
Abstract:
ಕನ್ನಡ ಸಾಹಿತ್ಯದಲ್ಲಿ ೧೨ನೇ ಶತಮಾನವನ್ನು ವಚನಗಳ ಯುಗವೆಂದು ಕರೆಯಲಾಗುತ್ತದೆ. ಬಸವಣ್ಣ ವಚನ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದವನು. ತನ್ನ ವಚನಗಳ ಮೂಲಕ ‘ಕಾಯಕವೇ ಕೈಲಾಸ’ ವೆಂದು ಸಾರಿ, ಜನರಲ್ಲಿ ದುಡಿದು ತಿಂದು ಬದುಕುವ ಮಹತ್ವವನ್ನು ತಿಳಿಸಿದರು. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ತ್ರೀಯರಿಗೆ ಭಾಗವಹಿಸುವ ಸಮಾನ ಅವಕಾಶ ನೀಡುವ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕೊಂದು ಅರ್ಥವನ್ನು ಕಲ್ಪಿಸಿದರು. ಕಲುಷಿತಗೊಂಡಿದ್ದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ದಿಕ್ಕರಿಸಿ, ಘನ ಬದಲಾವಣೆಯನ್ನು ಆರಿಸಿ ಹೊರಟ ದಾರ್ಶನಿಕ ಬಸವಣ್ಣ. ಸಾಮಾಜಿಕ ಬದಲಾವಣೆಗೆ ಹೊಸ ಭಾಷ್ಯ ಬರೆಯುವ ಮೂಲಕ ಉತ್ತಮ ಸಮಾಜ ವ್ಯವಸ್ಥೆಗೆ ನಿಜವಾದ ಅರ್ಥ ಕಲ್ಪಿಸಿ ಕೊಟ್ಟವರು. ಸಮಾಜದ ಕೀಳುಮಟ್ಟದ ಶೋಷಣೆಯಿಂದಾಗಿಯೇ ಸಮಾಜದಲ್ಲಿ ದುಡಿಯುವ ಮತ್ತು ಕೂತು ಉಣ್ಣುವ ವರ್ಗಗಳು ನಿರ್ಮಾಣವಾಗುವುದಕ್ಕೆ ಕಾರಣವಾಗಿರಬೇಕು, ಸಮಾಜದಲ್ಲಿ ಮೇಲ್ವರ್ಗವೆಂದು ಕರೆಸಿಕೊಂಡ ಜನರು ಸಮಾಜದ ಇತರರನ್ನು ಕೀಳಾಗಿ ಕಾಣುತ್ತಿದ್ದ ಸಂದರ್ಭಗಳು ಬಸವಣ್ಣನ ಮನಸ್ಸನ್ನು ಬಹಳವಾಗಿ ಕಾಡಿದ್ದರ ಪರಿಣಾಮದಿಂದಲೇ ಅವರ ಮನಸ್ಸಿನ ವಿಚಾರಗಳೆಲ್ಲ ವಚನಗಳಾಗಿ ಮಾರ್ಪಟ್ಟವಾಗಿರಬೇಕು. ಅಂದಿನಿಂದಲೇ ಬಸವಣ್ಣನವರು ಸಾಮಾಜಿಕ ಬದಲಾವಣೆಗೆ ಕ್ರಾಂತಿಕಾರಿ ಹೆಜ್ಜೆ ಇಟ್ಟರೆಂದು ಕಾಣಿಸುತ್ತದೆ. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ವ್ಯವಸ್ಥೆಯ ಅಂಕುಡೊಂಕುಗಳನ್ನು ತಿದ್ದಿ, ಸಮ ಸಮಾಜ ವ್ಯವಸ್ಥೆಯನ್ನು ಸರಿಪಡಿಸುವ ಕಾಯಕಕ್ಕೆ ಮುಂದಾದರು. ಒಂದಷ್ಟು ಸಮಾಜ ವ್ಯವಸ್ಥೆಯನ್ನು ಬದಲಿಸಲು ಪಟ್ಟ ಪ್ರಯತ್ನ ಇಂದಿಗೂ ಮುಂದಿಗೂ ಮಾದರಿಯಾಗುವಂತಿದೆ. ಸಮಾಜದ ಬಗೆಗೆ ಬಸವಣ್ಣನಿಗಿದ್ದ ಕಾಳಜಿಯಿಂದಾಗಿಯೇ ಮತ್ತಷ್ಟು ಅವರ ಹಾದಿಯಲ್ಲಿ ಮುಂದುವರಿದರು. 
APA, Harvard, Vancouver, ISO, and other styles
8

ಹೇಮಲತ, ಪಿ. ಎನ್. "ಸಾಮರಸ್ಯದ ತಾಣಗಳಾಗಿ ಶಿಂಷಾ ಮಾರಮ್ಮ ದೇಗುಲ ಹಾಗೂ ಹಜರತ್ ಮರ್ದಾನಿ ಗೈಬ್ ದರ್ಗಾ". AKSHARASURYA JOURNAL 05, № 04 (2024): 34 to 40. https://doi.org/10.5281/zenodo.14289565.

Full text
Abstract:
ಕನ್ನಡ ನಾಡಿನಲ್ಲಿ ಪ್ರಾಚೀನ ಕಾಲದಿಂದಲೂ ಸಾಮರಸ್ಯವನ್ನು ಪ್ರತಿಬಿಂಬಿಸುವ ಅನೇಕ ಘಟನೆಗಳು ನಡೆಯುತ್ತಾ ಬಂದಿವೆ; ಅನೇಕ ಸ್ಥಳಗಳು ರೂಪುಗೊಂಡಿವೆ. ಸಂತ ಸಮುದಾಯವು ಸಾಮಾಜಿಕ ಸಾಮರಸ್ಯಕ್ಕಾಗಿ ಬೋಧಿಸುತ್ತಾ ನಡೆದು ಕನ್ನಡ ಸಂಸ್ಕೃತಿಯಲ್ಲಿ ಬಹುದೊಡ್ಡ ಕ್ರಾಂತಿಯನ್ನುಂಟುಮಾಡಿರುವುದು ಚಾರಿತ್ರಿಕ ಸಂಗತಿಯಾಗಿದೆ. ಕರ್ನಾಟಕದ ಅನೇಕ ಸಂತರೂ ಮತ್ತು ಅವರ ಶಿಷ್ಯಂದಿರ ಸೇವಾಕಾರ್ಯದ ಪ್ರಭಾವದಿಂದಾಗಿ ಸಾಮಾಜಿಕ ಸ್ವಾಸ್ಥ್ಯವೂ ಸಾಮರಸ್ಯವೂ ಸಾಧಿತಗೊಂಡು ಇಂದಿಗೂ ಜನಸಮುದಾಯಗಳು ಒಕ್ಕಲಾಗಿ ನಡೆದುಕೊಳ್ಳುತ್ತಿದ್ದಾರೆ. ಕಾವೇರಿ ನದಿಯ ಉಪನದಿಯಾದ ಶಿಂಷಾ ಹರಿವಿನ ಮಾರ್ಗದಲ್ಲಿ ರೂಪುಗೊಂಡಿರುವ ಶಿಂಷಾ ಮಾರಮ್ಮ ದೇವಾಲಯ, ಶಿವನಸಮುದ್ರ ದರ್ಗಾ ಅಥವಾ ದರ್ಗಾ ಹಜರತ್ ಮರ್ದಾನಿ ಗೈಬ್ ತಾಣಗಳು ಸಾಮಾಜಿಕ ಸಾಮರಸ್ಯಕ್ಕೆ ಹೆಸರುವಾಸಿಯಾಗಿವೆ.
APA, Harvard, Vancouver, ISO, and other styles
9

ಚನ್ನವೀರಯ್ಯ. "ವಚನಗಳಲ್ಲಿನ ಜಾತಿ ಪದ್ಧತಿ ಮತ್ತು ಮೌಢ್ಯಗಳ ವಿಶ್ಲೇಷಣೆ". AKSHARASURYA 05, № 02 (2024): 135 to 142. https://doi.org/10.5281/zenodo.14035388.

Full text
Abstract:
ಹನ್ನೇರಡನೇ ಶತಮಾನವನ್ನು ವಚನ ಸಾಹಿತ್ಯದ ಪರ್ವಕಾಲ ಎಂದು ಕರೆಯಬಹುದು. ಏಕೆಂದರೆ ಜನಸಾಮಾನ್ಯರ ಆಡುಭಾಷೆಯ ಮೂಲಕ ಕನ್ನಡಭಾಷೆಯನ್ನು ಉತ್ತುಂಗಕ್ಕೆ ಏರಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಬಹು ಮುಖ್ಯವಾಗಿ ಜಾತಿ, ಮತ, ವರ್ಗ, ವರ್ಣ, ಮೇಲು, ಕೀಳು ಹಾಗೂ ಸಾಮಾಜಿಕ ಪಿಡುಗುಗಳಾದ ಮೂಢನಂಬಿಕೆಗಳು ಅನಿಷ್ಟಪದ್ದತಿಗಳ ಆಚರಣೆಯಿಂದ ಸಮಾಜದ ಅಭಿವೃದ್ಧಿಗೆ ಮಾರಕವಾದುದು ಎಂಬುದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿ ಸಾಮಾಜಿಕ ಬದಾಲಾವಣೆಗೆ ಮುನ್ನುಡಿ ಬರೆದು ನವಮನ್ವಂತರಕೆ ದಾರಿ ದೀಪವಾದವರು. ಆ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದರು. ಸಾಮಾಜಿಕ ಬದಲಾಣೆಯ ಜೊತೆಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಅಂತಹ ಕೆಲವು ವಚನಕಾರರ ವಚನಗಳ ವಿಶ್ಲೇಷಣೆ ಈ ಲೇಖನದಲ್ಲಿ ಚರ್ಚಿಸಲಾಗಿದೆ.
APA, Harvard, Vancouver, ISO, and other styles
10

ನರಸಿಂಹಪ್ಪ, ಜೆ. "ಮೊದಲನೇ ತಲೆಮಾರಿನ ಸವಾಲುಗಳು: ಕರೋನಾ ಹಿನ್ನೆಲೆಯಲ್ಲಿ". AKSHARASURYA 06, № 02 (2025): 148 to 154. https://doi.org/10.5281/zenodo.15124196.

Full text
Abstract:
ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಪ್ರಮುಖ ಆಶಯವೇ ಅಸಮಾನತೆ ನಿವಾರಿಸಿ ಎಲ್ಲರಿಗೂ ಸಾಮಾಜಿಕ ಆರ್ಥಿಕ ರಾಜಕೀಯ ಪ್ರಕ್ರಿಯೆಗಳಲ್ಲಿ ಸಮಾನ ಅವಕಾಶ ಒದಗಿಸುವುದು. ಹೀಗಾಗಿ ಕರೋನಾ ತಂದ ಬಿಕ್ಕಟ್ಟುಗಳನ್ನು ವಿವಿದ ಆಯಾಮಗಳನ್ನು ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ಚರ್ಚಿಸುವ ಅಗತ್ಯವಿದೆ. ಕರೋನಾ ಸನ್ನಿವೇಶದಲ್ಲಿ ಶ್ರೀಸಾಮಾನ್ಯರ ಹಕ್ಕುಗಳನ್ನು ಮರೆಮಾಚಲಾಗುತ್ತಿದೆ. ಈ ಸಾಂಕ್ರಾಮಿಕವು ಹರಡುವಲ್ಲಿ ಯಾವುದೇ ಆರ್ಥಿಕ ತಾರತಮ್ಯ ಮಾಡುತ್ತಿಲ್ಲ ಆದರೆ, ಇದರಿಂದ ಮುಕ್ತಿ ಪಡೆಯಲು ದೊರೆಯುವ ಆರೋಗ್ಯ ಸೌಲಭ್ಯಗಳು ಶ್ರೇಣಿಕೃತವಾಗಿವೆ. ಈ ಮೂಲಕ ಸಮ ಸಮಾಜವನ್ನು ನಿರ್ಮಾಣ ಮಾಡಲು ಬೇಕಾಗುವ ಪರಿಭಾಷೆಗಳ ಮುಖಾಂತರ ಅರ್ಥೈಸಿಕೊಳ್ಳುವ ಜರೂರು ಇದೆ. ಕೇಂದ್ರದಿಂದ ಅಂಚೆಗೆ ತಳ್ಳಲ್ಪಟ್ಟ ಶೋಷಿತ ಸಮುದಾಯಗಳ ಸವಾಲುಗಳನ್ನು ಮರು ಚಿಂತನೆಗೆ ಒಳಪಡಿಸಲಾಗಿದೆ. 
APA, Harvard, Vancouver, ISO, and other styles
11

ರಮೇಶ್. "ಯಯಾತಿ ನಾಟಕದಲ್ಲಿ ಸಾಮಾಜಿಕ ಸಂಘರ್ಷ". AKSHARASURYA JOURNAL 06, № 03 (2025): 41 to 51. https://doi.org/10.5281/zenodo.15343867.

Full text
Abstract:
ಗಿರೀಶ್ ಕಾರ್ನಾಡರು ಬಹುಮುಖ ವ್ಯಕ್ತಿತ್ವವುಳ್ಳವರು ನಾಟಕಕಾರ ನಿರ್ದೇಶಕ ನಟ ಪ್ರಾಧ್ಯಾಪಕರಾಗಿ ಹಲವು ಕ್ಷೇತ್ರಗಳಲ್ಲಿ ದುಡಿದವರು ಪದ್ಮಶ್ರೀ, ಪದ್ಮಭೂಷಣ, ಕರ್ನಾಟಕ ನಾಟಕ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಜ್ಞಾನಪೀಠ ಪ್ರಶಸ್ತಿ ವಿಜೇತರು ನಾನಾ ಕ್ಷೇತ್ರಗಳಲ್ಲಿ ಪಾಂಡಿತ್ಯ ಪಡೆದವರು ನಾಗಮಂಡಲ, ತುಘಲಕ್, ಹಯವದನ, ಹಿಟ್ಟಿನ ಹುಂಜ, ತಲೆದಂಡ ಯಯಾತಿ ನಾಟಕಗಳನ್ನು ರಚಿಸಿದ್ದಾರೆ. ಕನ್ನಡಕ್ಕೆ ವಿಶ್ವ ಮಾನ್ಯತೆಯನ್ನು ತಂದುಕೊಟ್ಟವರು.  ಯಯಾತಿ ಪೌರಾಣಿಕ ವ್ಯಕ್ತಿ, ಪಾಂಡವರ ಪೂರ್ವಜರಲ್ಲಿ ಒಬ್ಬ ನಹುಷನ ಮಗ ಅವನಿಗೆ ಇಬ್ಬರು ಹೆಂಡತಿಯರು, ಶರ್ಮಿಷ್ಠೆ ಮತ್ತು ದೇವಯಾನಿ ಶರ್ಮಿಷ್ಠೆ ರಾಕ್ಷಸರಾಜನ ಮಗಳು, ದೇವಯಾನಿ ಅಸುರರ ಗುರು ಶುಕ್ರಾಚಾರ್ಯರ ಮಗಳು ಪುರಾಣಗಳಲ್ಲಿ ಬರುವ ಯಯಾತಿ ಬದುಕನ್ನು ಆಯ್ಕೆ ಮಾಡಿಕೊಂಡು ದೇವಯಾನಿ ಮದುವೆಯ ನಂತರದ ಕಥೆಯ ಆಧಾರದ ಮೇಲೆ ನಾಟಕವನ್ನು ರಚಿಸಿದ್ದಾರೆ. ಮೂಲ ಯಯಾತಿ ಕತೆಯಲ್ಲಿ ಇಲ್ಲದಿರುವ ಚಿತ್ರಲೇಖೆ ಎಂಬ ಪುರುವಿನ ಹೆಂಡತಿ ಪಾತ್ರವನ್ನು ಸೃಷ್ಟಿಸಿ ಹೊಸ ದೃಷ್ಟಿಕೋನದಿಂದ ಯಯಾತಿ ನಾಟಕ ರಚಿಸಿದ್ದಾರೆ. ಸ್ವರ್ಣಲತೆ ಎಂಬ ದಾಸಿ ಪಾತ್ರವನ್ನು ಹೊಸದಾಗಿ ಹುಟ್ಟು ಹಾಕಿದ್ದಾರೆ. ಇಲ್ಲಿ ಪುರು ಆಧುನಿಕ ಯುವಜನಾಂಗದ ಪ್ರತಿನಿಧಿಯಂತೆ ಕಂಡುಬರುತ್ತಾರೆ. ಯಯಾತಿ, ಪುರು, ದೇವಿಯಾನಿ, ಶರ್ಮಿಷ್ಠೆ, ಸ್ವರ್ಣಲತೆ, ಚಿತ್ರಲೇಖೆ ಪಾತ್ರಗಳಲ್ಲದೆ ಕಚ, ಶುಕ್ರಾಚಾರ್ಯ, ಪುರುವಿನ ತಾಯಿ ಪಾತ್ರಗಳ ಪ್ರಸ್ತಾಪವಿದೆ. 
APA, Harvard, Vancouver, ISO, and other styles
12

ಮನುಕುಮಾ‌ರ್, ಎಸ್.ವಿ. "ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆ". AKSHARASURYA JOURNAL 06, № 04 (2025): 49 to 55. https://doi.org/10.5281/zenodo.15490876.

Full text
Abstract:
ಸರಳವಾದ, ಸುಲಲಿತವಾದ, ಸುಮಾಧುರ್ಯತೆಯ ಕಂಪನ್ನು ಸೂಸಿದ ವೈಶಿಷ್ಟ್ಯಪೂರ್ಣವಾದ ಸಾಹಿತ್ಯವೇ “ವಚನ ಸಾಹಿತ್ಯ”  ಶಿವಶರಣರ ಅಂತರ್ಗತ ಅನುಭವದ ನಿರ್ಭಯವಾದ ನೀತಿ, ಮತ, ತತ್ವಭೋಧನೆಯ ಸಾರವಾಗಿದೆ.  ವಚನ ಸಾಹಿತ್ಯ ಒಂದು ಅನನ್ಯ ಮತ್ತು ಪ್ರಬಲ ಸಾಹಿತ್ಯ ಪ್ರಕಾರವಾಗಿದ್ದು ಈ ಸಾಹಿತ್ಯವು ಆಧ್ಯಾತ್ಮಿಕತೆ, ಸಮಾಜದ ಸುಧಾರಣೆ ಮತ್ತು ಅನುಭವ ಶ್ರದ್ಧೆಯ ಬಗೆಗಿನ ಆಳವಾದ ಚಿಂತನೆಗಳನ್ನು ಪ್ರತಿಬಿಂಬಿಸುತ್ತದೆ.  ವಚನ ಸಾಹಿತ್ಯ ಮುಖ್ಯ ಉದ್ದೇಶ ಸಮಾಜ ಸುಧಾರಣೆ. ರಾಜಕೀಯವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಆಂತರೀಕ ಪರಿಶುದ್ಧಿಗೆ ಮತ್ತು ದೈವೀಕ ಏಕತೆಗೆ ಮಹತ್ವ ನೀಡುವುದಾಗಿದೆ. ಸಮಾಜದಲ್ಲಿ ಜಾತಿ, ವರ್ಣ ಮತ್ತು ಲಿಂಗಭೇದಗಳನ್ನು ವಿರೋದಿಸಿ ಸಮಾನತೆಯ ಮತ್ತು ಜಾತಿ ರಹಿತ ಸಮಾಜದ ಸುಧಾರಣೇ ಮೂಡಿಸುವ ಉದ್ದೇಶವಾಗಿದೆ. ವಚನಕಾರರು ತಮ್ಮ ತಮ್ಮ ವಚನಗಳ ಮೂಲಕ ಒಂದು ಕ್ರಾಂತಿಮೂಡಿಸುವುದು 12ನೇ ಶತಮಾನ ವರವಾಗಿದೆ ಕಾಯಕ, ಭಕ್ತಿ ಕೆಲಸ ಮತ್ತು ಭಕ್ತಿಯ ಮೂಲಕ ವ್ಯಕ್ತಿಯ ಆತ್ಮವನ್ನು ಶದ್ಧಿಗೊಳಿಸುವ ಹಾಗು ಜೀವನದ ಉದ್ದೇಶವನ್ನು ತಿಳಿಸುವ ಸಂದೇಶವನ್ನು ನೀಡುತ್ತವೆ. 
APA, Harvard, Vancouver, ISO, and other styles
13

ಅನುಷ. "ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆಗಳು". AKSHARASURYA JOURNAL 06, № 04 (2025): 72 to 77. https://doi.org/10.5281/zenodo.15490928.

Full text
Abstract:
ಪ್ರಸ್ತುತ ಲೇಖನದಲ್ಲಿ ಹನ್ನೆರಡನೇಯ ಶತಮಾನದಲ್ಲಿದ್ದ ವಚನ ಸಾಹಿತ್ಯದ ಸಾಮಾಜಿಕ ಚಿಂತನೆಗಳು ವ್ಯಕ್ತವಾಗಿವೆ. ಆ ಕಾಲದಲ್ಲಿದ್ದ ಸಾಮಾಜಿಕ ಮೌಲ್ಯ ಪರಿವರ್ತನೆ ವಚನಕಾರರು ಸಮಾನ ನಾಯಕತ್ವವನ್ನು ಅನುಸರಿಸಿದ್ದು, ಜಾತಿ - ಧರ್ಮ, ಲಿಂಗ ತಾರತಮ್ಯ, ಮೇಲು - ಕೀಳು, ವಿಗ್ರಹಾರಾಧನೆ ದೇವಸ್ಥಾನಗಳ ನಿರ್ಮಾಣವನ್ನು ಖಂಡಿಸಿದರು ಹಾಗೂ ಇದಕ್ಕೆಲ್ಲ ವಿರೋಧಿಯಾಗಿದ್ದರು. ವೀರಶೈವ ಧರ್ಮದ ಪಂಚ ಸೂತ್ರಗಳು ಕಾಯಕದ ಮಹತ್ವವನ್ನು ತಿಳಿಸಿರುವುದು ಎಲ್ಲರಲ್ಲಿಯೂ ಸಮಾನತೆಯ ಭಾವ ಅಂದಿನ ಕಾಲಕ್ಕೆ ಹೇಗಿತ್ತು. ವಚನಕಾರರಾದ ಬಸವಣ್ಣನವರು ಮತ್ತು ಅಕ್ಕಮಹಾದೇವಿಯವರ ವಚನಗಳ ಗ್ರಹಿಕೆ, ವಚನ ಸಾಹಿತ್ಯ ಇಂದಿನ ಸಮಾಜಕ್ಕೆ ಏಕೆ ಪ್ರಸ್ತುತ ಹಾಗೂ ಸಣ್ಣದೊಂದು ಪದ್ಯವನ್ನು ವಿಷಯದ ಕುರಿತು ಒಳಗೊಂಡಿದೆ. 
APA, Harvard, Vancouver, ISO, and other styles
14

ನಾಗನಗೌಡ, ಗೌಡ್ರ. "ಡಾ. ಬಿ. ಆರ್. ಅಂಬೇಡ್ಕರ್‌‌ ಅವರ ಸಾಮಾಜಿಕ ನ್ಯಾಯದ ಚಿಂತನೆಗಳು". AKSHARASURYA JOURNAL 06, № 05 (2025): 94 to 104. https://doi.org/10.5281/zenodo.15504293.

Full text
Abstract:
ಡಾ. ಬಿ.ಆರ್. ಅಂಬೇಡ್ಕರ್‌ ಒಬ್ಬ ಭಾರತೀಯ ಶ್ರೇಷ್ಠ ರಾಜಕೀಯ ನಾಯಕ, ತತ್ವಜ್ಞಾನಿ, ಸಾಮಾಜಿಕ ಚಿಂತಕ, ಇತಿಹಾಸ ಸಂಶೋಧಕ, ಆರ್ಥಿಕ ತಜ್ಞ, ಶ್ರೇಷ್ಠ ಬರಹಗಾರ, ಮಹಿಳಾ ಸಮಾನತೆಯ ಹರಿಕಾರ, ದಲಿತರ ಸೂರ್ಯ, ಕಾರ್ಮಿಕ ಬಂಧು, ಕಾನೂನು ತಜ್ಞ, ಸಂವಿಧಾನ ಶಿಲ್ಪಿ ಎಂದೆಲ್ಲಾ ಪ್ರಖ್ಯಾತರಾಗಿದ್ದಾರೆ. ಭಾರತೀಯ ಸಮಾಜವು ಶತ ಶತಮಾನಗಳಿಂದಲೂ ವರ್ಣ, ಜಾತಿಯ ಹೆಸರಿನಲ್ಲಿ ವರ್ಗೀಕರಣಗೊಂಡು ಇಡೀ ಮಾನವ ಸಂಬಂಧಗಳ ಮೌಲ್ಯವನ್ನೇ ಹಾಳು ಮಾಡಿದೆ. ಸಮಾಜದ ಬಹುಪಾಲು ಜನಾಂಗ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬಲಿಷ್ಠವಾಗಿರುವ ಜಾತಿ, ವರ್ಗಗಳ ತುಳಿತಕ್ಕೆ ಸಿಲುಕಿ ನಲುಗಿವೆ. ಅಂಬೇಡ್ಕರ್‌‌ರವರು ಬಾಲ್ಯದಿಂದಲೂ ಕಂಡುಂಡ ಅಸ್ಪೃಶ್ಯತೆಯ ನೋವು ಅಪಮಾನಗಳು ಅವರನ್ನು ಸಾಮಾಜಿಕ ಚಿಂತನೆಡೆಗೆ ಮುಖ ಮಾಡುವಂತೆ ಪೇರೆಪಿಸಿದವು. ಅವರು ಶಿಕ್ಷಣ-ಸಂಘಟನೆ-ಹೋರಾಟ ಎಂಬ ತತ್ವಗಳನ್ನು ಪ್ರತಿಪಾದಿಸುವುದಷ್ಟೇ ಅಲ್ಲ ಅನುಷ್ಟಾನಗೊಳಿಸಿದ್ದಾರೆ. ಮೂಖನಾಯಕ, ಸಮತಾ, ಬಹಿಷ್ಕೃತ ಭಾರತ ಎಂಬ ಪತ್ರಿಕೆಗಳ ಮೂಲಕ ದಮನಿತರನ್ನು ಜಾಗೃತರಾಗಿಸಿದರು. 1924ರಲ್ಲಿ ʼಬಹಿಷ್ಕೃತ ಹಿತಕಾರಿಣಿ ಸಭಾ’ ಸಂಸ್ಥೆಯನ್ನು ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕೆ ಸ್ಥಾಪಿಸಿದರು. ʼಚೌಡಾರ್ ಕೆರೆ’ ನೀರಿನ ಸತ್ಯಾಗ್ರಹ ಮತ್ತು ಕಾಲಾರಾಮ ದೇವಾಲಯ ಪ್ರವೇಶಕ್ಕಾಗಿ ಹೋರಾಟ ನಡೆಸಿ ಯಶಸ್ವಿಯಾದರು. ದುಂಡುಮೇಜಿನ ಸಮ್ಮೇಳನದಲ್ಲಿ ಅಸ್ಪೃಶ್ಯರ ಪ್ರತಿನಿಧಿಯಾಗಿ ಭಾಗವಹಿಸಿ ತಾರ್ಕಿಕ ವಾದ ಮಂಡಿಸಿ ಶಾಸನ ಸಭೆಗಳಲ್ಲಿ ಅಸ್ಪೃಶ್ಯರ ಮೀಸಲಾತಿಗಾಗಿ ಹೋರಾಡಿದರು. ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಸಾಂವಿಧಾನಿಕ ಕಾನೂನಿನ ಚೌಕಟ್ಟಿನಲ್ಲಿ ದಲಿತರಿಗೆ, ಹಿಂದುಳಿದವರಿಗೆ, ಮಹಿಳೆಯರಿಗೆ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಸೂಕ್ತ ಮೀಸಲಾತಿ ಸೌಲಭ್ಯ, ಸಮಾನತೆಯ ಹಕ್ಕು(ವಿಧಿ-14), ಅಸ್ಪೃಶ್ಯತೆ ನಿಷೇಧ(ವಿಧಿ-17), ಗೌರವದಿಂದ ಬದುಕುವ ಹಕ್ಕು(ವಿಧಿ-21) ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ್ದಾರೆ. ಅಂಬೇಡ್ಕರ್‌‌ರವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಸತ್ತಿನಲ್ಲಿ, ರಾಜ್ಯ ಶಾಸನಸಭೆಯಲ್ಲಿ ತಕ್ಕ ಪಾತಿನಿಧ್ಯವನ್ನು ಗಳಿಸಿಕೊಟ್ಟರು. ಕಾನೂನು ಮಂತ್ರಿಯಾಗಿ ಹಿಂದೂ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಕಲ್ಪಿಸುವುದಕ್ಕಾಗಿ ʼಹಿಂದೂ ಕೋಡ್ ಬಿಲ್’ನ್ನು ತಯಾರಿಸಿ ಸಂಸತ್ತಿನಲ್ಲಿ ಮಂಡಿಸಿ ಶತಾಯಗತಾಯ ಪ್ರಯತ್ನಿಸಿದಾಗ್ಯೂ ಒಪ್ಪಿತವಾಗದ ಕಾರಣ ತಮ್ಮ ಮಂತ್ರಿ ಸ್ಥಾನಕ್ಕೆ 1951 ಸೆಪ್ಟಂಬರ್ 27 ರಂದು ರಾಜಿನಾಮೆ ನೀಡಿದರು. ಸಾಮಾಜಿಕ ನ್ಯಾಯವನ್ನು ಭಾರತ ಸಂವಿಧಾನದ ಆಧಾರ ಮತ್ತು ಸ್ಪೂರ್ತಿಯಾಗಿಸಿದ್ದಾರೆ. ಅವರು ನಡೆಸಿದ ಹೋರಾಟಗಳಲ್ಲಿ, ಮಾಡಿದ ಭಾಷಣಗಳಲ್ಲಿ, ರಚಿಸಿದ ಕೃತಿಗಳಲ್ಲಿ ಅವರ ಸಾಮಾಜಿಕ ನ್ಯಾಯದ ಚಿಂತನೆಗಳನ್ನು ಕಾಣಬಹುದು. ಈ ಲೇಖನದಲ್ಲಿ ಅವರು ಸಾಮಾಜಿಕ ನ್ಯಾಯಕ್ಕಾಗಿ ನಡೆಸಿದ ಹೋರಾಟ ಮತ್ತು ಚಿಂತನೆಗಳನ್ನು ವಿಶ್ಲೇಷಿಸುವ ಪ್ರಯತ್ನ ಮಾಡಲಾಗಿದೆ. 
APA, Harvard, Vancouver, ISO, and other styles
15

ಗಣೇಶ та ಹೆಚ್. ಎಸ್. ನಿಂಗರಾಜು. "ಆಧುನಿಕ ಕನ್ನಡ ಸಾಮಾಜಿಕ ನಾಟಕಗಳಲ್ಲಿ ಪ್ರತಿಯಜಮಾನಿಕೆಯ ಸ್ವರೂಪ". AKSHARASURYA JOURNAL 04, № 06 (2024): 63 to 73. https://doi.org/10.5281/zenodo.13724751.

Full text
Abstract:
ಭಾರತದಂತಹ ದೇಶವು ಸಂಕೀರ್ಣವಾದ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿದೆ.  ಅಂತಹ ಪ್ರಾಬಲ್ಯಗಳ ಆಧಾರವು ಸಂಕೀರ್ಣ ಸ್ವರೂಪವನ್ನು ಹೊಂದಿದೆ.  ಭಾರತದ ವರ್ಣ ಆಧಾರಿತ ಸಾಮಾಜಿಕ ವ್ಯವಸ್ಥೆಯಲ್ಲಿ, ವರ್ಣಾಸ್‌ನ ಮೇಲಿನ ಸ್ತರಗಳಲ್ಲಿ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಪ್ರಾಬಲ್ಯ ವ್ಯವಸ್ಥೆಗಳು ಛಿದ್ರಗೊಳ್ಳುತ್ತಿವೆ.  ಸಬಾಲ್ಟರ್ನ್ ಅಡಿಯಲ್ಲಿ ಬರುವ ನಾಲ್ಕನೇ ವರ್ಣಾ, ಶೂದ್ರವರ್ಣ,  ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಭಾಗವಹಿಸುವಿಕೆಯಿಂದ ವಂಚಿತವಾಗಿದೆ. ಸಾಂಪ್ರದಾಯಿಕವಾಗಿ ಮೇಲ್ವರ್ಗದ  ಪ್ರಾಬಲ್ಯಗಳು ಕಠಿಣ ಅಭ್ಯಾಸಗಳನ್ನು ನಿರ್ಮಿಸುವ ಮೂಲಕ ಅಧೀನ ವರ್ಗವನ್ನು ಬಳಸಿಕೊಳ್ಳುತ್ತವೆ. ಈ ಅಧೀನ ನೆಲೆಗಳು ಮೇಲ್ಮಟ್ಟದ ಪ್ರಾಬಲ್ಯಗಳ ವಿರುದ್ಧ ಹೆಚ್ಚು ಸಹನೆ ಮತ್ತು ಮೂಕತನದಿಂದ ಪ್ರತಿಭಟಿಸಲು ಸಾಧ್ಯವಾಗುತ್ತಿಲ್ಲ. ಅವರ ನೋವು ಮತ್ತು ಸಂಕಟಗಳನ್ನು ಹೊತ್ತುಕೊಂಡು.  ಆದರೆ ಅವರ ನೋವು ಮತ್ತು ಸಂಕಟಗಳನ್ನು ಬ್ರಿಟಿಷ್ ವಸಾಹತುಶಾಹಿ ಒದಗಿಸಿದ ಶಿಕ್ಷಣ ವ್ಯವಸ್ಥೆಯಿಂದ ಧ್ವನಿಸಲಾಯಿತು.  ಸುಧಾರಣಾ ಚಳುವಳಿ, ಸ್ವಾತಂತ್ರ್ಯ ಚಳುವಳಿ, ಸಾಮಾಜಿಕ ಚಳುವಳಿಗಳು, ಸ್ತ್ರೀವಾದ ಮತ್ತು ರಾಷ್ಟ್ರೀಯತೆಯ ಪ್ರಭಾವವು ತೀವ್ರವಾಗಿತ್ತು.  ಬದುಕುವ ಹಕ್ಕನ್ನು ತಿಳಿದಿಲ್ಲದ ವರ್ಗ, ಅವರು ಸ್ವಾಭಿಮಾನದ ಜೀವನವನ್ನು ಕಲಿಯಲು ಪ್ರಾರಂಭಿಸಿದರು.  ಈ ನಿಟ್ಟಿನಲ್ಲಿ, ನೈತಿಕ ದೀನದಲಿತ ವರ್ಗಗಳು ಹಳೆಯ ಪ್ರಾಬಲ್ಯವನ್ನು ಸಿಲುಕಿಸಲು ‘ಪ್ರತಿ-ಆಧಿಪತ್ಯ’ವನ್ನು ನಿರ್ಮಿಸಲು ಪ್ರಾರಂಭಿಸಿದವು. ಪ್ರತಿ-ಆಧಿಪತ್ಯವು ಚಾಲ್ತಿಯಲ್ಲಿರುವ ಪ್ರಾಬಲ್ಯಕ್ಕೆ ವಿರುದ್ಧವಾದ ಅರ್ಥವಲ್ಲ.  ಆಂಟೋನಿಯೊ ಗ್ರಾಮ್ಸಿ ಪ್ರಕಾರ, ಪ್ರತಿ-ಆಧಿಪತ್ಯವನ್ನು ನಿರ್ಮಿಸುವುದು ಎಂದರೆ ಪ್ರತಿ ಆಡಳಿತವನ್ನು ಅಭಿವೃದ್ಧಿಪಡಿಸುವುದು ಎಂದರ್ಥವಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ಅಸ್ತಿತ್ವದಲ್ಲಿರುವ ಸ್ಥಿತಿ ಮತ್ತು ರಾಜಕೀಯದಲ್ಲಿ ಅದರ ನ್ಯಾಯಸಮ್ಮತತೆಗೆ ಮುಖಾಮುಖಿ ಅಥವಾ ವಿರೋಧವಾಗಿದೆ. ಆದರೆ ಜೀವನದ ವಿವಿಧ ಕ್ಷೇತ್ರಗಳಲ್ಲಿಯೂ ಸಹ ಇದನ್ನು ಗಮನಿಸಬಹುದು. ಮೇಲಾಗಿ ಇದು ಸಮಾಜವಾದದ ಉದ್ದೇಶವೂ ಅಲ್ಲ. ಇದು ದೈನಂದಿನ ಜೀವನದಲ್ಲಿ ಸಾಂಪ್ರದಾಯಿಕ ಸರ್ವಾಧಿಕಾರಿ ಮೌಲ್ಯಗಳ ಪ್ರಭಾವವನ್ನು ಕರಗಿಸುವುದು ಮತ್ತು ಸಮಾನ ಸಾಮುದಾಯಿಕ ಜೀವನದ ಮೌಲ್ಯಗಳನ್ನು ಜನರು ಕಂಡುಕೊಳ್ಳುವ ವಾತಾವರಣವನ್ನು ಸೃಷ್ಟಿಸುವುದು. ಪ್ರತಿ-ಆಧಿಪತ್ಯದ ಧ್ಯೇಯವೆಂದರೆ ಶೋಷಣೆಯ ಪ್ರಾಬಲ್ಯ ಮತ್ತು ಅದರ ಮೌಲ್ಯಗಳನ್ನು ಕಿತ್ತೊಗೆಯುವುದು ಮತ್ತು ಸಮಾನತೆಯ ಜೀವನವನ್ನು ಸೃಷ್ಟಿಸುವುದು.  ಇಲ್ಲದಿದ್ದರೆ, ಮತ್ತೊಂದು ರೀತಿಯ ಪ್ರಾಬಲ್ಯ ವ್ಯವಸ್ಥೆಯು ಶೋಷಣೆಗೆ ಉದ್ಭವಿಸಬಹುದು.  ಆಧುನಿಕ ಕನ್ನಡ ನಾಟಕಗಳು ಇಂತಹ ಪ್ರತಿ-ಆಧಿಪತ್ಯವನ್ನು ಪ್ರತಿಪಾದಿಸಿವೆ ಮತ್ತು ಅಧೀನ ವರ್ಗಗಳು ಕೈಗೊಳ್ಳುವ ಪ್ರತಿಭಟನೆಯ ವಿವಿಧ ಸ್ವರೂಪಗಳನ್ನು ಚಿತ್ರಿಸುತ್ತದೆ.
APA, Harvard, Vancouver, ISO, and other styles
16

ಜೆ., ರಾಜ ಗುಂಡಾಪುರ. "ಸಾಮಾಜಿಕ ಸುಧಾರಣೆಯಲ್ಲಿ ಕುವೆಂಪುರವರ ಕವಿತೆಗಳ ಪಾತ್ರ". AKSHARASURYA JOURNAL 04, № 04 (2024): 76 to 83. https://doi.org/10.5281/zenodo.13284050.

Full text
Abstract:
ಹೊಸಗನ್ನಡ ಸಾಹಿತ್ಯದ ಮಹತ್ವದ ಕವಿ, ರಾಷ್ಟ್ರಕವಿ, ವಿಶ್ವಮಾನವ ಪ್ರಜ್ಞೆ ಬೆಳೆಸಿಕೊಂಡು ನಾಡಿಗೆಲ್ಲಾ ಹಬ್ಬಿದ ಕವಿ ಕುವೆಂಪು. 20ನೆಯ ಶತಮಾನದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಬೆಳಗಿದ ಮಹಾಕವಿ. ಹೊಸ ಸಾಂಸ್ಕೃತಿಕ ಸ್ಥಿತ್ಯಂತರದಲ್ಲಿ ವಸಾಹತು ಅನುಭವದೊಟ್ಟಿಗೆ ಬೆಳೆಯುತ್ತಲೇ ಕನ್ನಡ ನಾಡು-ನುಡಿಯ ಪುನಶ್ಚೇತನಕ್ಕೆ ಕಾರಣರಾದ ಮಹಾಚೇತನ ಕುವೆಂಪು.ಕುವೆಂಪು ಕುಪ್ಪಳ್ಳಿಯಲ್ಲಿ ಹುಟ್ಟಿ ವಿಶ್ವಮಾನವರಾದ ಚರಿತೆ ಬಹಳ ದೊಡ್ಡದು. ಮಲೆನಾಡಿನ ದಟ್ಟ ಕಾಡಿನ ಮಧ್ಯದ ಊರಿನಿಂದ ಕುವೆಂಪುರವರ ಚಿಂತನೆಯು ಜಿಗಿದು ಅನಿಕೇತನವಾಗುವ, ನಿರಂಕುಶ ಮತಿಯಾಗುವ ಹಾದಿ ಸಾಧನೆಯ ಹಾದಿಯದು. ಕುವೆಂಪುರವರು ನಮ್ಮ ಸಂಸ್ಕೃತಿ, ಆಚಾರ ವಿಚಾರ, ಪುರಾಣ, ವೇದ ಉಪನಿಷತ್ತುಗಳ ಆಳಕ್ಕೆ ಬೇರಿಳಿಸಿ ಸೋಸಿ ಇವತ್ತಿಗೂ ಅವಶ್ಯವಿರುವ ಮಾನವರ ಚಿಂತನೆಗಳನ್ನು ಹೀರಿ, ಪಾಶ್ಚತ್ಯ ಜ್ಞಾನ, ವಿಜ್ಞಾನ, ಸಾಹಿತ್ಯ, ತತ್ವಜ್ಞಾನದ ತಿಳುವಳಿಯನ್ನು ಮೈತುಂಬಿಕೊಂಡು ವೈಚಾರಿಕ ವ್ಯಕ್ತಿತ್ವವನ್ನು ರೂಪಿಸಿಕೊಂಡಿರುವವರು. ಪ್ರಾದೇಶಿಕತೆಯ ವಿಶಿಷ್ಟತೆಯೊಂದಿಗೆ ಜಾಗತಿಕವಾಗಬಲ್ಲ ಕೃತಿಗಳನ್ನು ರಚಿಸಿದರು. ಅವರು ರೂಪಿಸಿಕೊಟ್ಟ ಸರ್ವೋದಯ, ಸಮನ್ವಯ, ಮನಜಮತ ವಿಶ್ವಪಥ, ಪೂರ್ಣ ದೃಷ್ಟಿ ಎಂಬ ತಾತ್ವಿಕ ಚಿಂತನೆಗಳು ಕಲಾತೀತ ಮೌಲ್ಯಗಳಾಗಿವೆ. ಆತ್ಮಶ್ರೀಗಾಗಿ ನಿರಂಕುಶ ಮಿತಿಗಾಗಿ ಎಂದು ಯುವಕರಿಗೆ ಕರೆ ನೀಡುತ್ತಾ ಕುವೆಂಪುರವರು ನೀಡಿದ ವಿಚಾರ ಕ್ರಾಂತಿಗೆ ಆಹ್ವಾನ ಎಂಬುದು ಅಂದಿಗೆ ಸಾಂಸ್ಕೃತಿಕ ಕ್ರಾಂತಿಯೇ ಆಯಿತು. ಜೀವ ಜಗದೊಡನೆ ಮಾನವ ಜನಾಂಗವನ್ನು ಒಳಗೊಳ್ಳುವ ಕುವೆಂಪುರವರ ಚಿಂತನೆಗಳು ವೈಚಾರಿಕತೆಯಿಂದ ಪ್ರಗತಿಪರವಾಗಿವೆ. 
APA, Harvard, Vancouver, ISO, and other styles
17

ಮಾದಪ್ಪ, ಜಿ. "'ತಮಂಧದ ಕೇಡು' ಕಥೆಯಲ್ಲಿ ಚಿತ್ರಣಗೊಂಡಿರುವ ಸಾಮಾಜಿಕ ವ್ಯವಸ್ಥೆ". AKSHARASURYA JOURNAL 05, № 03 Special Issue (2024): 45 to 52. https://doi.org/10.5281/zenodo.14246486.

Full text
Abstract:
ಭಾರತೀಯ ಸಾಮಾಜಿಕ ವ್ಯವಸ್ಥೆಯು ಬಹುತ್ವದ ನೆಲೆಯಿಂದ ಕೂಡಿದೆ. ಶೋಷಣೆಗೊಳಗಾದವರ ನೋವು, ಆಕ್ರೋಶ, ಸಂವೇದನೆಗಳನ್ನು ಪ್ರತಿಭಟನೆ, ಹೋರಾಟದ ಮೂಲಕ ಅಭಿವ್ಯಕ್ತಿಸುವ ಬಂಡಾಯ ಸಾಹಿತ್ಯ ಪಂಥದ ಆರಂಭಿಕ ಕಥೆಗಳು ಸಿಟ್ಟು, ಅವಮಾನ, ಹತಾಶೆ, ಆಕ್ರೋಶಗಳನ್ನು ರೋಷಾವೇಶದ ಭಾಷೆಯಲ್ಲಿಯೇ ಹೊರಹಾಕಿದೆ. ಈ ಕಾಲಘಟ್ಟದಲ್ಲಿ ಕಂಡುಬರುವ ಅಮರೇಶ ನುಗಡೋಣಿ ತಮ್ಮ ಕಥೆಗಳಲ್ಲಿ ಸಾಮಾಜಿಕ ಕಳಕಳಿ, ರಾಜಕೀಯಪ್ರಜ್ಞೆ ಹಾಗೂ ಪ್ರತಿಭಟನೆಯ ಮೂಲಕ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದ್ದಾರೆ. ಹಾಗೂ ತಮ್ಮ ಕಥೆಗಳಲ್ಲಿ 12ನೇ ಶತಮಾನದ ಬಸವಣ್ಣನ ಕಾಯಕ ವೃತ್ತಿಯ ಸಮಸಮಾಜದ ಕನಸಿನ ಸಮಾಜವನ್ನು ಮರುನಿರ್ಮಾಣ ಮಾಡಲು ಪ್ರಯತ್ನಿಸಿದ್ದಾರೆ. ದೇವನೂರು ಮಹಾದೇವ ಅವರ ಕಥೆಗಳನ್ನು ನೆನಪಿಸುವ ಇವರ ಕಥೆಗಳು ಅಲ್ಲಿನ ಪಾತ್ರಗಳಂತೆ ತಾತ್ವಿಕವಾಗಿ ಪ್ರತಿಭಟಿಸುವುದಿಲ್ಲ; ಮೃದುಧೋರಣೆಯಲ್ಲಿ ಸಾತ್ವಿಕವಾಗಿ ಸಾಗುತ್ತ ಶೋಷಣೆಯನ್ನು ಪರಂಪರಾಗತ ಸಂಪ್ರದಾಯ ಎನ್ನುವಂತೆ ಒಪ್ಪಿಕೊಂಡಿವೆ. ‘ತಮಂಧದ ಕೇಡು’ ಕಥೆಯ ನಾಯಕ ಚೆನ್ನಮಲ್ಲಯ್ಯ ಉರುಫ್ ಚೆನ್ನ. ಕಥಾನಾಯಕಿ ಅಕ್ಕಮಹಾದೇವಿ ಉರುಫ್ ‘ಅಕ್ಕ’. ಈ ಎರಡು ಹೆಸರುಗಳು, ಕಥೆಗಾರರು ದೇಮ ಅವರಿಂದ ಪ್ರೇರಿತವಾಗಿರುವುದನ್ನು ಹಾಗೂ 12ನೇ ಶತಮಾನದ ಶರಣ ಚಳವಳಿಯಿಂದ ಪ್ರಭಾವಿತರಾಗಿರುವುದನ್ನು ಕಂಡರಿಸುತ್ತವೆ. ಪ್ರತಿಭಟನಾತ್ಮಕ ಸಂಘರ್ಷ ಮತ್ತು ಸಾತ್ವಿಕ ಸಿಟ್ಟನ್ನು ಇಡೀ ಕಥೆಯಲ್ಲಿ ತರುವ ಮೂಲಕ ಅಮರೇಶ ನುಗಡೋಣಿ ದಲಿತ ಮತ್ತು ಲಿಂಗಾಯತ ಸಮುದಾಯದ ಸಾಮರಸ್ಯವನ್ನು ದುರುಗಾ ಮತ್ತು ಶಾಂತಗೌಡ ಪಾತ್ರಗಳ ಮೂಲಕ ಕಟ್ಟಿಕೊಡುತ್ತಲೇ ಚೆನ್ನ ಮತ್ತು ಅಕ್ಕಮಹಾದೇವಿ ಪಾತ್ರಗಳ ಮೂಲಕ ಜಾತಿ ವಿನಾಶದಂತ ಕ್ರಾಂತಿಯನ್ನು ಆಹ್ವಾನಿಸಿರುವುದು ಕಥೆಯನ್ನು ಗಟ್ಟಿಗೊಳಿಸುತ್ತದೆ.
APA, Harvard, Vancouver, ISO, and other styles
18

ವಾಣಿ, ಬಿ. ಎನ್. "ನವೋದಯ ಮಹಿಳಾ ಕಥೆಗಳಲ್ಲಿ ಸ್ತ್ರೀನಿಷ್ಟತೆ". AKSHARASURYA JOURNAL 05, № 03 Special Issue (2024): 61 to 67. https://doi.org/10.5281/zenodo.14246534.

Full text
Abstract:
ನವೋದಯ ಕಾಲಘಟ್ಟದ ಪ್ರಮುಖ ಲೇಖಕಿಯರಾದ ಕೊಡಗಿನ ಗೌರಮ್ಮ, ಕಲ್ಯಾಣಮ್ಮ, ಸರಸ್ವತಿ ಬಾಯಿ ರಾಜವಾಡೆ(ಗಿರಿಬಾಲೆ), ಶ್ಯಾಮಲಾ ಬೆಳಗಾವಂಕರ ಮೊದಲಾದ ಲೇಖಕಿಯರ ಕತೆಗಳಲ್ಲಿ ವ್ಯಕ್ತವಾಗಿರುವ ಸ್ತ್ರೀಪರ ನಿಲುವುಗಳನ್ನು ಕುರಿತಿದೆ. ಗೌರಮ್ಮ ಅವರ ಪುರ್ನವಿವಾಹ ಕತೆಯ ನಾಯಕಿ ರಾಜಿಯ ಮನಸ್ಸಿನಲ್ಲಿರು ಪುರುಷ ನಡವಳಿಕೆಯ ಬಗೆಗಿನ ಅಸಹನೆ, ʼವಾಣಿಯ ಸಮಸ್ಯೆʼ ಕತೆಯಲ್ಲಿ ಇಂದುವಿಯ ನೈತಿಕ ಚೌಕಟ್ಟು, ಹೋಗಿಯೇ ಬಿಟ್ಟಿದ್ದ ಕತೆಯಲ್ಲಿನ ಅಂರ್ತಧರ್ಮೀಯ ಪ್ರೇಮದ ಕರಾಳತೆ, ಗಿರಿಬಾಲೆ ಅವರ ʼಅವಳ ಉದ್ದಾರʼ ಕತೆಯಲ್ಲಿ ಹೆಣ್ಣಿನ ಕೌಟುಂಬಿಕ ಹಾಗೂ ಸಾಮಾಜಿಕ ಶೋಷಣೆ ಪರಿ, ಕಲ್ಯಾಣಮ್ಮ ಅವರ ʼನನ್ನ ಧನವ ನನಗೆ ತಾʼ ಕತೆಯಲ್ಲಿನ ಮಾತೃ ವಾತ್ಸಲ್ಯ, ʼಒಲ್ಲದ ಹೆಂಡತಿʼ ಕತೆಯಲ್ಲಿ ಮಕ್ಕಳ್ಳನ್ನು ಬೆಳೆಸುವಲ್ಲಿ ತಾಯಿಯ ಹೊಣೆ ಎಷ್ಟು ಮುಖ್ಯವಾದದ್ದು, ಶ್ಯಾಮಲಾ ಅವರ ʼಕಂತಿಯ ದೇಶಾಂತರʼ ಕತೆಯಲ್ಲಿ ಹೆಣ್ಣಿನ ದೈರ್ಯ ಹೀಗೆ ಇವರ ಕಥಾ ಸಾಹಿತ್ಯವು ಮಹಿಳೆಯರ ಅಭಿವ್ಯಕ್ತಿಯ ನೆಲೆಗಳಾಗಿವೆ. ಸಾಮಾಜಿಕ ಸಮಸ್ಯೆಗಳ ಕುರಿತ ಚಿಂತನೆ, ಮಹಿಳಾ ಸಂವೇದನೆಯನ್ನು ಪ್ರಸ್ತುತ ಪಡಿಸುವಲ್ಲಿ ಇವರ ಕಥೆಗಳು ಮಹತ್ವದ್ದಾಗಿವೆ. ಇವರು ಅಸ್ಪೃಷ್ಯತೆ, ವಿಧವಾ ಸಮಸ್ಯೆ, ವರದಕ್ಷಿಣೆ ಕಿರುಕುಳ, ವೇಶ್ಯಾಸಮಸ್ಯೆ ಮೊದಲಾದ ಸಾಮಾಜಿಕ ಹಾಗೂ ಕೌಟುಂಬಿಕವಾದ ಸವಾಲುಗಳ ಬಗೆಗೆ ದೃತಿಗೆಡದೆ ಬರೆದಿದ್ದಾರೆ. ಪ್ರಸ್ತುತ ಲೇಖನದಲ್ಲಿ ಮೇಲಿನ ಕಥೆಗಳಲ್ಲಿ ಮೂಡಿಬಂದಿರುವ ಸ್ತ್ರೀಪರವಾದ ನಿಲುವುಗಳನ್ನ ವಿಮರ್ಶಾತ್ಮಕವಾಗಿ ಅಭಿವ್ಯಕ್ತಿಸಿದ್ದೇನೆ.
APA, Harvard, Vancouver, ISO, and other styles
19

ಬೋರಯ್ಯ, ಪಿ. ಕೆ. "ತತ್ವಪದಕಾರ ಕುರುಬರ ಲಿಂಗಯ್ಯನವರ ಜೀವನ ಮತ್ತು ಸಾಧನೆ". Aksharasurya Journal 05, № 05 (2025): 63 to 70. https://doi.org/10.5281/zenodo.14619536.

Full text
Abstract:
ಚಿತ್ರದುರ್ಗ ಜಿಲ್ಲೆ ಹಾಗೂ ತಾಲ್ಲೂಕಿನ ತುರುವನೂರು ಗ್ರಾಮದಲ್ಲಿ ವೀರಪ್ಪ ಮತ್ತು ಮಲ್ಲಮ್ಮ ಎಂಬ ಇಬ್ಬರು ದಂಪತಿಗಳಿಗೆ ಮಗನಾಗಿ ಹುಟ್ಟಿ, ಬಾಲ್ಯದಿಂದಲೂ ಕುತೂಹಲಕಾರಿಯಗಿ ಬೆಳೆದ ಕುರುಬರ ಲಿಂಗಯ್ಯನವರು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ “ಮಾರೀಜಾತ್ರೆ” ಎಂಬ ಕೃತಿಯನ್ನು ಬರೆಯುವುದರ ಮೂಲಕ ಸಾಮಾಜಿಕ ಕ್ರಾಂತಿಯನ್ನುಂಟು ಮಾಡಿದ್ದಾರೆ. ಆಗಿನ ಕಾಲದಲ್ಲಿ ಕೆ.ಎಲ್.ಎಸ್. ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಶ್ರೇಣಿಗಳಿಸಿ ಜಿಲ್ಲಾ ವಿದ್ಯಾಧಿಕಾರಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾದರು. ಸರ್ಕಾರಿ ಕೆಲಸವನ್ನು ಗಿಟ್ಟಿಸಿಕೊಂಡು ಸಾಹಿತ್ಯದ ಮೇಲೆ ಒಲವು ಇಟ್ಟುಕೊಂಡು ಅನೇಕ ಗ್ರಂಥಗಳನ್ನು ಓದಿಕೊಂಡು ತಮ್ಮದೇ ಆದ ಶೈಲಿಯಲ್ಲಿ ಕತೆ, ನಾಟಕ, ಷಟ್ಪದಿ, ರಗಳೆ, ಶತಕ, ತ್ರಿಪದಿ, ಕಂದ ಪದ್ಯಗಳು, ತತ್ವಪದಗಳು, ಜೀವನ ಚರಿತ್ರೆ, ಅನುವಾದ ಮೊದಲಾದ ಪ್ರಕಾರಗಳಲ್ಲಿ ತಮ್ಮ ಬರವಣಿಗೆಯಲ್ಲಿ ರೂಪಿಸಿದ್ದಾರೆ. ಅವರು ಇಡೀ ಭಾರತೀಯ ಪರಂಪರೆಯಲ್ಲೆ ಅತೀ ಹೆಚ್ಚು ತತ್ವಪದಗಳನ್ನು ಬರೆದಿರುವವರ ಸಾಲಿನಲ್ಲಿ ಲಿಂಗಯ್ಯನವರು ಒಬ್ಬರೇ ಎಂದರೆ ಅತಿಶಯೋಕ್ತಿಯಾಗಲಾರದು. ಇದರ ಜೊತೆಗೆ ಸಂಸಾರ, ಶಿಕ್ಷಣ, ಸಾಮಾಜಿಕ ಹೋರಾಟಗಳನ್ನು ಮೈಗೂಡಿಸಿಕೊಂಡಿದ್ದರು. ವಿಶೇಷವಾಗಿ ಇವರ ತತ್ವಪದಗಳನ್ನು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರು ಕುರುಬರ ಲಿಂಗಯ್ಯನವರ ತತ್ವಪದಗಳನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿದೆ. ಒಟ್ಟಾರೆಯಾಗಿ ಸಾಮಾಜಿಕ ಸಮಸ್ಯೆಗಳನ್ನು ಇವರು ತಮ್ಮ ತತ್ವಪದಗಳ ಮೂಲಕ ಟೀಕಿಸಿರುವುದು ವಿಶೇಷವಾಗಿದೆ. 
APA, Harvard, Vancouver, ISO, and other styles
20

ರುಕ್ಮಿಣಿ, ವಿ. "ಡಾ. ಬಿ.ಆರ್. ಅಂಬೇಡ್ಕರ್‌ ಅವರ ದೃಷ್ಟಿಯಲ್ಲಿ ಅಸ್ಪೃಶ್ಯತೆ". AKSHARASURYA JOURNAL 06, № 05 (2025): 175 to 185. https://doi.org/10.5281/zenodo.15504614.

Full text
Abstract:
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್‌ ಅವರು ಹಿಂದೂ ಸಮಾಜಕ್ಕೆ ಕಳಂಕವೆನಿಸಿರುವ ಅಸ್ಪೃಶ್ಯತೆಯ ವಿವಿಧ ಆಯಾಮಗಳನ್ನು ವೈಜ್ಞಾನಿಕವಾಗಿ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಭಾರತದಲ್ಲಿ ಮಾತ್ರ ಇದರ ಆಚರಣೆ ಏಕೆ ಮುಂದುವರೆದಿದೆ ಎಂಬುದರ ಬಗ್ಗೆ ವಿಶ್ಲೇಷಣೆ ನೀಡಿದ್ದಾರೆ. ಹಿಂದೂ ಸಮಾಜವನ್ನು ಮಾನವೀಯ ಮೌಲ್ಯಗಳು ಸಮಾನತೆ ಸ್ವಾತಂತ್ರ್ಯ, ನ್ಯಾಯ, ವಿಶ್ವ ಭ್ರಾತೃತ್ವದ ಆಧಾರದ ಮೇಲೆ ಪುನರ್ಘಟಿಸುವ ಪ್ರಯತ್ನವನ್ನು ಅವರ ಸಾಮಾಜಿಕ ಚಿಂತನೆಯಲ್ಲಿ ಕಾಣಬಹುದು. ಸಾಮಾಜಿಕ ಸಂಶೋಧನೆಯ ನೆಲೆಗಟ್ಟಿನಲ್ಲಿ ಅಂಬೇಡ್ಕರ್‌ ಅವರ ಅಸ್ಪೃಶ್ಯತೆಯ ಕುರಿತ ಸಾಮಾಜಿಕ, ರಾಜಕೀಯ, ಧಾರ್ಮಿಕ ವಿಚಾರಗಳು ತುಂಬಾ ಮಹತ್ವವಾಗಿವೆ. ಯುರೋಪಿನ ಚರಿತ್ರೆಯಲ್ಲಿ ಕಂಡುಬರುವ ಅನೇಕ ಅನ್ಯಾಯಗಳನ್ನು ಮೂಢನಂಬಿಕೆಗಳನ್ನು ನಿವಾರಿಸಲಾಗಿದೆ. ಆದರೆ ಭಾರತದಲ್ಲಿ ಹಿಂದೂ ಬ್ರಾಹ್ಮಣರು ಅಸ್ಪಶ್ಯತೆಯ ನಂಬಿಕೆಯಿಂದ ಮುಕ್ತವಾಗಿರುವುದು ನಿರೀಕ್ಷಿತ ಪ್ರಮಾಣದಲ್ಲಿ ಕಂಡು ಬರುತ್ತಿಲ್ಲ. ಹಿಂದುಗಳು ಅಸ್ಪೃಶ್ಯತೆ ವಿಷಯದಲ್ಲಿ ಸ್ವಹಿತಾಸಕ್ತಿ ಹೊಂದಿರುವುದು ಮೇಲ್ನೋಟಕ್ಕೆ ಗೋಚರಿಸುವ ಸಂಗತಿಯಾಗಿದೆ. ಧರ್ಮದ ತಳಹದಿಯನ್ನು ಹೊಂದಿರುವ ಅಸ್ಪೃಶ್ಯತೆಯು ಹಿಂದುಗಳ ನಡುವೆ ನ್ಯಾಯ ಸ್ಥಾಪಿಸಲು ಅಸಮರ್ಥವಾಗಿದೆ. ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಅಸ್ಪೃಶ್ಯರು ಜ್ಞಾನ ಮತ್ತು ಶಿಕ್ಷಣವನ್ನು ಪಡೆದುಕೊಳ್ಳುವುದರ ಮೂಲಕ ಅನ್ಯಾಯ ಅನರ್ಥ ಅಥವಾ ಅನಾಚಾರಗಳನ್ನು ವಿರೋಧಿಸಬಹುದು ಎಂಬುದು ಅಂಬೇಡ್ಕರ್‌ ಅವರ ಪ್ರಬಲವಾದ ನಂಬಿಕೆಯಾಗಿತ್ತು. ಜಗತ್ತಿನ ಇತರ ದೇಶಗಳಲ್ಲಿ ಅಸ್ತಿತ್ವದಲ್ಲಿದ್ದ ದಾಸ್ಯ ಪ್ರವೃತ್ತಿಗೂ ಅವುಗಳ ತಳಹದಿಗೂ ಭಾರತದಲ್ಲಿನ ಅಸ್ಪೃಶ್ಯತೆಯ ತಳಹದಿಗೂ ಇರುವ ಸ್ಪಷ್ಟ ವ್ಯತ್ಯಾಸವನ್ನು ಅಂಬೇಡ್ಕರ್‌ ಗುರುತಿಸಿದ್ದರು. ಮಾನವ ಇತಿಹಾಸದಲ್ಲಿ ಅತ್ಯಂತ ನಿಕೃಷ್ಟ ಆಚರಣೆ ಅಸ್ಪೃಶ್ಯತೆ ಎಂಬುದು ಅಂಬೇಡ್ಕರ್‌ ಅಭಿಪ್ರಾಯವಾಗಿತ್ತು. ಜಾತಿ ಪದ್ಧತಿ ಹಾಗೂ ಅಸ್ಪೃಶ್ಯತೆಯ ನಿವಾರಣೆ ಕುರಿತು ಹಿಂದುಗಳ ಹಾಗೂ ಅಸ್ಪೃಶ್ಯರ ನಡುವೆ ಘರ್ಷಣೆ ಅನಿವಾರ್ಯ ಎಂಬುದನ್ನು ಮನಗಂಡಿದ್ದರು. ಸಂವಿಧಾನದ ಆರ್ಟಿಕಲ್ 17ರಲ್ಲಿ ಅಸ್ಪೃಶ್ಯತೆ ನಿವಾರಣೆಯ ಕಾಯ್ದೆಯನ್ನು ಜಾರಿಗೆ ತಂದಿದ್ದರೂ ಅಂಬೇಡ್ಕರ್‌ರ ಅಸ್ಪೃಶ್ಯತೆಯ ನಿವಾರಣೆಯ ಕನಸು ಇನ್ನು ಪೂರ್ಣವಾಗಿ ಸಾಕಾರಗೊಂಡಿಲ್ಲವೆಂದು ಹೇಳಬಹುದು. ಧರ್ಮದ ಬೆಂಬಲವಿರುವ ಒಂದು ಸಾಮಾಜಿಕ ಆಚರಣೆಯ ನಿವಾರಣೆ ಎಷ್ಟು ಕಷ್ಟ ಸಾಧ್ಯ ಎಂಬುದನ್ನು ಅಂಬೇಡ್ಕರ್‌ ಮನಗಂಡಿದ್ದರು. 
APA, Harvard, Vancouver, ISO, and other styles
21

ಹೇಮಲತ, ಪಿ. ಎನ್. "ಮತ-ಮತಿಗಳ ಸಾಮರಸ್ಯದ ತಾಣವಾಗಿ 'ಮುತ್ತತ್ತಿ'". AKSHARASURYA JOURNAL 04, № 04 (2024): 45 to 52. https://doi.org/10.5281/zenodo.13284003.

Full text
Abstract:
ಪ್ರಾಚೀನ ಕಾಲದಿಂದಲೂ ಕನ್ನಡ ನಾಡಿನಲ್ಲಿ ಸಾಮರಸ್ಯವನ್ನು ಪ್ರತಿಬಿಂಬಿಸುವ ಅನೇಕ ಘಟನೆಗಳು ನಡೆಯುತ್ತಾ ಬಂದಿವೆ; ಅನೇಕ ಸ್ಥಳಗಳು ರೂಪುಗೊಂಡಿವೆ. ಸಂತ ಸಮುದಾಯವು ಸಾಮಾಜಿಕ ಸಾಮರಸ್ಯಕ್ಕಾಗಿ ಬೋಧಿಸುತ್ತಾ ನಡೆದು ಕನ್ನಡ ಸಂಸ್ಕೃತಿಯಲ್ಲಿ ಬಹುದೊಡ್ಡ ಕ್ರಾಂತಿಯನ್ನುಂಟುಮಾಡಿರುವುದು ಚಾರಿತ್ರಿಕ ಸಂಗತಿಯಾಗಿದೆ. ದಕ್ಷಿಣ ಕರ್ನಾಟಕದ ಮೇರುಸಂತರೂ ಧರೆಗೆ ದೊಡ್ಡವರೂ ಆದ ಶ್ರೀಮಂಟೇಸ್ವಾಮಿ ಅವರ ಪ್ರಭಾವದಿಂದಾಗಿ ಸಾಮಾಜಿಕ ಸ್ವಾಸ್ಥ್ಯವೂ ಸಾಮರಸ್ಯವೂ ಸಾಧಿತಗೊಂಡು ಇಂದಿಗೂ ಜನಸಮುದಾಯಗಳು ಒಕ್ಕಲಾಗಿ ನಡೆದುಕೊಳ್ಳುತ್ತಿದ್ದಾರೆ. ಮಂಟೇಸ್ವಾಮಿ ಪರಂಪರೆಯು ಮೂಲತಃ ಶೈವಮೂಲದ್ದಾದರೂ ವೈಷ್ಣವಮೂಲದ ಮುತ್ತತ್ತಿರಾಯನೊಂದಿಗೆ ಏರ್ಪಟ್ಟ ಸಾಮರಸ್ಯವು ಮಹೋನ್ನತವಾದುದು. ಇದರೊಂದಿಗೆ ಪ್ರಾಕೃತಿಕವಾದ ಶ್ರೀಮಂತ ಸೊಬಗನ್ನು ಹೊಂದಿರುವ ಮುತ್ತತ್ತಿ ತಾಣವು ಮತ-ಮತಿಗಳ ಸಾಮರಸ್ಯದ ನೆಲೆಯಾಗಿ ಇಂದಿಗೂ ಬಹುಜನರನ್ನು ನಿರಂತರವಾಗಿ ಆಕರ್ಷಿಸುತ್ತಿರುವುದು ಕನ್ನಡ ನೆಲದ ಹೆಮ್ಮೆಯಾಗಿದೆ.
APA, Harvard, Vancouver, ISO, and other styles
22

ಚಿಕ್ಕಣ್ಣ, ಡಾ ಎಂ. "ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಮತ್ತು ಆಧುನಿಕ ಮೌಲ್ಯಗಳು". International Journal of Kannada Research 9, № 4 (2023): 182–84. http://dx.doi.org/10.22271/24545813.2023.v9.i4c.916.

Full text
APA, Harvard, Vancouver, ISO, and other styles
23

ಉತ್ತಂಗಿ, ವೀರೇಶ. "ಎಸ್. ಶಾಂತನಾಯ್ಕ ಅವರ ಕಥೆಗಳಲ್ಲಿ ಸಾಮಾಜಿಕ ಪ್ರಜ್ಞೆ". AKSHARASURYA JOURNAL 04, № 04 (2024): 123 to 130. https://doi.org/10.5281/zenodo.13284113.

Full text
Abstract:
ಎಸ್. ಶಾಂತನಾಯ್ಕ ಅವರು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಂಗ್ಲೀಷ್ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಕಥೆ, ಕವನ, ಕಾದಂಬರಿ ನಾಟಕ ಕ್ಷೇತ್ರಗಳಲ್ಲಿ ತಮ್ಮನ್ನು ದುಡಿಸಿಕೊಳ್ಳುತ್ತಿದ್ದಾರೆ. ಸಮಕಾಲೀನ ಸಂದರ್ಭದಲ್ಲಿ ಲಂಬಾಣಿ ಬುಡಕಟ್ಟು ಜನರ ಕುಂದುಕೊರತೆಗಳನ್ನು ತಮ್ಮ ಸಾಹಿತ್ಯದ ಮೂಲಕ ಅನಾವರಣಗೊಳಿಸುವ ಸಾಹಸ ಮಾಡುತ್ತಿದ್ದಾರೆ. “ಕಲ್ಲೇ ಕಲ್ಲೇ ಕಥೆ ಹೇಳು” ಕಥಾ ಸಂಕಲನವು ಅವಕಾಶ ವಂಚಿತ ಹಳ್ಳಿಗರ ಬದುಕು ಕುರಿತು ಚಿತ್ರಿಸುತ್ತದೆ.
APA, Harvard, Vancouver, ISO, and other styles
24

ರಂಗಲಕ್ಷ್ಮಿ, ಪಿ. ಎ. "ಕುವೆಂಪುರವರ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ: ಒಂದು ಚಿಂತನೆ". AKSHARASURYA 05, № 01 (2024): 128 to 133. https://doi.org/10.5281/zenodo.13871017.

Full text
Abstract:
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕುವೆಂಪು ಎಂಬ ಹೆಸರಿನಲ್ಲಿ ಪ್ರಸಿದ್ದವಾಗಿರುವ ಕವಿ. ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಕೆಲಸ ನಿರ್ವಹಿಸಿದ್ದಾರೆ. ಈ ಲೇಖನದಲ್ಲಿ ಕವಿ ಕುವೆಂಪು ಅವರ ಸಾಹಿತ್ಯದಲ್ಲಿ ಕಂಡು ಬಂದಿರುವ ಸಾಮಾಜಿಕ ಕಳಕಳಿ ಹೇಗೆ ಮೂಡಿಬಂದಿದೆ ಎಂದು ಕೆಲವು ಪದ್ಯಗಳ ಉದಾಹರಣೆಯನ್ನು ತೆಗೆದುಕೊಂಡು ವಿವರಿಸಲಾಗಿದೆ. ಸುಂದರವಾದ ಮಲೆನಾಡಿನ ಕುಪ್ಪಳ್ಳಿಯಲ್ಲಿ ಕವಿ ಕುವೆಂಪು ಅವರ ಜನನ 1904 ನೇ ಇಸವಿ ಡಿಸೆಂಬರ್ 29 ರಂದು ಆಯಿತು. ಆ ಕಾಲದ ಮಲೆನಾಡು ಈಗಿನಂತೆ ತೆಳ್ಳಗಿರಲಿಲ್ಲ. ಸಹ್ಯಾದ್ರಿ ಶ್ರೇಣಿ ಎಂದು ಕರೆಯುವ ಪ್ರದೇಶದಲ್ಲಿ ದಟ್ಟವಾದ ಅರಣ್ಯವಿತ್ತು. ಇಂಥಹ ಮಲೆನಾಡಿನ ಗರ್ಭದಲ್ಲಿ ಜನ್ಮತಾಳಿದ ಕವಿ ಕುವೆಂಪುವಿಗೆ ಪೂರ್ವ ಜನ್ಮದ ಪುಣ್ಯವೇ ಮೈವೆತ್ತಂತೆ ಅನಿಸಿತು. ಚಿಕ್ಕವಯಸ್ಸಿನಿಂದಲೂ ಪ್ರಕೃತಿಯ ಜೊತೆಯಲ್ಲಿಯೇ ಬೆಳೆದ ಕವಿಗೆ ನಿತ್ಯವೂ ಹೊಸದಾಗಿಯೇ ಗೋಚರಿಸುವ ದೃಷ್ಯಗಳು. ಕುವೆಂಪು ಅವರ ವೈಚಾರಿಕತೆಯು ಅವರ ಸಾಹಿತ್ಯದಲ್ಲಿ ಮೂಡಿಬಂದಿದೆ. 
APA, Harvard, Vancouver, ISO, and other styles
25

ರಾಜೇಂದ್ರಕುಮಾರ್, ಕೆ ಮುದ್ನಾಳ್. "ಚಂದ್ರಕಾಂತ ಕುಸನೂರರ ಕಥೆಗಳಲ್ಲಿ ಸಾಮಾಜಿಕ ಮೌಲ್ಯಗಳ ಪರಿಶೋಧ". AKSHARASURYA JOURNAL 05, № 03 Special Issue (2024): 01 TO 05. https://doi.org/10.5281/zenodo.14246283.

Full text
Abstract:
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕಥೆಗಳಿಗೆ ತನ್ನದೇ ಆದ ವಾಸ್ತವಿಕ ಚಿತ್ರಣಗಳಿವೆ. ಈ ಚಿತ್ರಣಗಳು ಸಾಂಸ್ಕೃತಿಕ ಲೋಕದ ತಲ್ಲಣಗಳನ್ನು ವಿವರಿಸುತ್ತವೆ. ಸಮುದಾಯದಲ್ಲಿರುವ ಸಾಮಾಜಿಕ ಮೌಲ್ಯ ಅಪಮೌಲ್ಯಗಳ ಕುರಿತು ಚರ್ಚೆ ನಡೆಸುತ್ತವೆ. ಬೇಕು ಬೇಡುಗಳ ಇತ್ಯರ್ಥವನ್ನು ಸಿದ್ಧಪಡಿಸುತ್ತವೆ. ಒಂದು ಆಯಾಮಕ್ಕಿಂತ ವಿಭಿನ್ನ ಆಯಾಮಗಳ ಚಿತ್ರಣವೇ ಕಥೆಗಳ ಮೊದಲ ಆದ್ಯತೆ. ಅದು ಕಥೆಗಳ ಮೌಲ್ಯವು ಹೌದು, ಜವಾಬ್ದಾರಿಯು ಹೌದು. ಒಬ್ಬ ಕಥೆಗಾರ ಚಿತ್ರಿಸುವ ಪಾತ್ರಗಳು ಸಮಾಜಕ್ಕೆ ಸಾಣೆ ಹಿಡಿಯುತ್ತವೆ. ಚಂದ್ರಕಾಂತ ಕುಸನೂರರ ಕಥೆಗಳು ವೈಯಕ್ತಿಕ ನೆಲೆಯಲ್ಲಿ ಚರ್ಚಿಸಿದರೂ ಕೂಡ ಅದು ಸಮಷ್ಟಿ ಪ್ರಜ್ಞೆಯನ್ನು ಒಳಗೊಂಡಿರುತ್ತದೆ ಎಂಬುದನ್ನು ಪಾತ್ರಗಳ ಮೂಲಕ ಗ್ರಹಿಸುವ ಸಾಧ್ಯತೆಗಳಿವೆ. ಈ ಸಂಶೋಧನಾ ಲೇಖನವು ಕುಸನೂರರ ‘ಅಸಹಜ’ ಮತ್ತು ‘ಎಲ್ಲಿಗೆ’ ಕಥೆಗಳಲ್ಲಿನ ಸಾಮಾಜಿಕ ಮೌಲ್ಯಗಳನ್ನು ಪರಿಶೋಧಿಸುವುದು. ಇಲ್ಲಿನ ಪಾತ್ರಗಳು ಹೇಗೆ ಸಮಾಜಕ್ಕೆ ಸ್ಪಂದಿಸುತ್ತವೆಯೋ ಅಥವಾ ಇಲ್ಲವೋ ಎಂಬುದನ್ನು ಗ್ರಹಿಸಬೇಕು.ಕತೆಗಾರರು ಸೃಷ್ಟಿಸುವ ಪಾತ್ರಗಳ ಮನೋಭೂಮಿಕೆಯನ್ನು ಅರಿಯಬೇಕಿದೆ. ಕಥೆಯ ಆರಂಭ ಹಾಗೂ ಅಂತ್ಯ ಕತೆಗಾರರು ನಿರ್ಣಯಿಸುತ್ತಾರೋ ಅಥವಾ ಓದುಗರಿಗೆ ಬಿಡುತ್ತಾರೋ ಅಥವಾ ಪಾತ್ರಗಳಿಗೆ ಬಿಡುತ್ತಾರೋ ಎಂಬ ಕುತೂಹಲ ಇವರ ಕಥೆಗಳಲ್ಲಿ ಕಂಡುಕೊಳ್ಳಬಹುದು. ಕತೆಗಾರರು ‘ಮೌಲ್ಯ’ ಎಂಬ ಪದವನ್ನು ಯಾವ ನಿಟ್ಟಿನಲ್ಲಿ ಪ್ರತಿಪಾದಿಸಲು ಹೊರಟಿದ್ದಾರೆ ಎಂಬುದನ್ನು ಗಮನಿಸಬೇಕಾಗಿದೆ. ಕಥೆಗಳಲ್ಲಿನ ಪಾತ್ರಗಳು ಏಕಮುಖಿಯಾಗಿವೆಯೋ, ಬಹುಮುಖಿಯಾಗಿ ಇವೆಯೋ, ಯಾರಿಂದಲು ಪ್ರೇರಣೆ ಪಡೆದಿವೆಯೋ, ಸ್ವ ಚಿಂತನೆಗೆ ಒಳಗಾಗಿದಿಯೋ ಎಂಬುದನ್ನು ವಿವರಿಸುವುದು ಲೇಖನದ ಮೂಲ ಉದ್ದೇಶ.
APA, Harvard, Vancouver, ISO, and other styles
26

ಶೋಭಾ, ಸುರೇಶ್. "ಡಾ. ಅಂಬೇಡ್ಕರ್‌‌ರವರ ಸಾಮಾಜಿಕ ಆಲೋಚನೆಗಳು ಅಸ್ಪೃಶ್ಯರ ವಿಮೋಚನೆ". AKSHARASURYA JOURNAL 06, № 05 (2025): 207 to 219. https://doi.org/10.5281/zenodo.15504651.

Full text
Abstract:
ಸ್ವತಂತ್ರ್ಯಪೂರ್ವ ಭಾರತದ ಜಾತಿ ವ್ಯವಸ್ಥೆಯ ಕರಾಳತೆ ಕಹಿ ಅನುಭವಗಳೊಂದಿಗೆ ಡಾ|| ಬಿ. ಆರ್. ಅಂಬೇಡ್ಕರ್‌‌ರವರು ಅಸ್ಪೃಶ್ಯರಿಗೆ ಮೀಸಲಾತಿ ದೊರಕುವಂತೆ ಮಾಡಿದ ಹೋರಾಟದಲ್ಲಿ ಯಶಸ್ಸನ್ನು ಕಾಣುತ್ತಾರೆ. ತಮ್ಮ ಪ್ರತಿಭೆ ಹಾಗೂ ಪರಿಶ್ರಮದಿಂದ ಬದುಕಿನಲ್ಲಿ ಯಶಸ್ಸನ್ನು ಕಂಡರು. ಜಾತಿಯ ಕಾರಣದಿಂದ ಅನೇಕ ಸಂಕಷ್ಟಗಳಿಗೆ ಅವಮಾನಕ್ಕೆ ಗುರಿಯಾಗುತ್ತಾರೆ. ಬದುಕಿನುದ್ದಕ್ಕೂ ಕೆಳವರ್ಗದ ಜನರಿಗಾಗಿ ಹೋರಾಡಿ ಮೀಸಲಾತಿಯ ಮೂಲಕ ಹಿಂದುಳಿದವರನ್ನು ಮುಖ್ಯವಾಹಿನಿಗೆ ತಂದು ಈ ಸೌಲಭ್ಯ ಪಡೆದವರು ತಮ್ಮ ವರ್ಗದವರ ಏಳಿಗೆಗಾಗಿ ಪ್ರಯತ್ನಪಡಬೇಕು ಎಂಬ ಆಶಯವನ್ನು ಹೊಂದಿದ ಅಂಬೇಡ್ಕರ್‌‌ರವರಿಗೆ ತೀವ್ರ ನಿರಾಸೆಯಾಗುತ್ತದೆ. ಕೆಳ ಸಮುದಾಯಗಳಲ್ಲಿಯೇ ಪರಸ್ಪರ ಆಂತರಿಕ ಭಿನ್ನಾಭಿಪ್ರಾಯಗಳು, ಅಸಮಾನತೆಗಳು, ತಾರತಮ್ಯಗಳ ಕಾರಣಗಳಿಂದ ಪ್ರಬಲ ಜಾತಿಯವರ ದೌರ್ಜನ್ಯದ ವಿರುದ್ಧ ಸಂಘಟಿತರಾಗುವುದು ಸಾಧ್ಯವೇ ಆಗಲಿಲ್ಲವೆಂಬುದು ನಿಜಕ್ಕೂ ದುರಂತವೇ ಸರಿ. ತಮ್ಮ ಜೀವನವನ್ನೇ ಶೋಷಿತ ಜನಾಂಗಗಳ ವಿಮೋಚನೆಗೆ ಧಾರೆ ಎರೆದ ಸಮಾಜಕ್ಕೆ ಮರಳಿ ಸಮಾಜದ ಋಣ ತೀರಿಸಿ ಎಂಬುದು ಅವರ ಕೊನೆಯ ದಿನಗಳ ಹೇಳಿಕೆಯಾಗಿತ್ತು. 
APA, Harvard, Vancouver, ISO, and other styles
27

ವಿನುತ, ಬಿ. "ಸಾಮ್ರಾಟ ಅಶೋಕನ ಕಾಲ ಮತ್ತು ಸಾಮಾಜಿಕ ಕ್ರಾಂತಿ". AKSHARASURYA JOURNAL 06, № 05 (2025): 249 to 255. https://doi.org/10.5281/zenodo.15504751.

Full text
Abstract:
ಇತಿಹಾಸಕಾರ ಹೆಚ್‌.ಜಿ. ವೆಲ್ಸ್‌ “ಇತಿಹಾಸದ ಆಗಸದಲ್ಲಿ ಸಾವಿರಾರು ಜನ ರಾಜ ಮಹಾರಾಜರು ಆಳಿ ಹೋಗಿದ್ದಾರೆ. ಆದರೆ, ಸಾಮ್ರಾಟ ಅಶೋಕ ಮಾತ್ರ ಅಂದಿನಿಂದ, ಇಂದಿನವರೆಗೂ ಪ್ರಕಾಶಮಾನವಾದ ನಕ್ಷತ್ರವಾಗಿ ಪ್ರಜ್ವಲಿಸುತ್ತಿದ್ದಾನೆ” ಎಂದು ಹೇಳಿದ್ದಾರೆ.ಮೌರ್ಯ ಸಾಮ್ರಾಜ್ಯದ ಸ್ಥಾಪಕರಾದ ಚಂದ್ರಗುಪ್ತ ಮೌರ್ಯನ ಮೊಮ್ಮಗ ಹಾಗೂ ರಾಜ ಬಿಂದುಸಾರನ ಮಗನಾದ ಸಾಮ್ರಾಟ ಅಶೋಕ ಕ್ರಿಸ್ತ ಪೂರ್ವ 304 ರಿಂದ ಕ್ರಿ.ಪೂ. 232ರ ವರೆಗೆ ಬದುಕಿದ್ದ. ಕ್ರಿ.ಪೂ. 268 ರಿಂದ 232ರ ವರೆಗೆ ಏಷಿಯಾದ ಅತಿ ದೊಡ್ಡ ಭೂಭಾಗವನ್ನು ಆಳಿದ ದೊರೆ. ಸಾಮ್ರಾಟ ಅಶೋಕನ ಕಾಲ ಮತ್ತು ಆಳ್ವಿಕೆ ಭಾರತದ ಇತಿಹಾಸದ ಗತಿ ಮತ್ತು ಮಾರ್ಗವನ್ನೇ ಬದಲಿಸಿತು. ಅಶೋಕ ಗೌತಮ ಬುದ್ಧನು ಕಾಲವಾಗಿ ಸುಮಾರು 300 ವರ್ಷಗಳ ನಂತರ ಬದುಕಿದ್ದ ರಾಜ. ಗೌತಮ ಬುದ್ಧರ ಪ್ರಜ್ಞೆ, ಶೀಲ, ಕರುಣೆಯ ಧಮ್ಮ ಕ್ರಾಂತಿಯನ್ನು ತನ್ನ ಆಡಳಿತದ ಮಂತ್ರ ಮತ್ತು ಶಾಸನವಾಗಿಸಿ ತನ್ನ ಪ್ರಜೆಗಳನ್ನು ಮತ್ತು ಸಮಾಜವನ್ನು ವೈಚಾರಿಕತೆ, ನೀತಿ ಮತ್ತು ಕರುಣೆಯ ಮಾರ್ಗದಲ್ಲಿ ನಡೆಸಿದ ಆದರ್ಶ ದೊರೆ. ಬುದ್ಧರ ಉಪದೇಶವನ್ನು ಅಫ್ಘಾನಿಸ್ತಾನ ಕನ್ಯಾಕುಮಾರಿಯವರೆಗೆ ಮತ್ತು ಗ್ರೀಸ್, ಈಜಿಪ್ಟ್‌, ಸಿರಿಯಾಗಳಿಗೂ ಹಬ್ಬಿಸಿದ ಧಮ್ಮ ಪೋಷಕ. ಪ್ರಸ್ತುತ ಲೇಖನ ಅಶೋಕನ ಕಾಲದ ಕ್ರಾಂತಿಕಾರಿ ಬದಲಾವಣೆಯನ್ನು ಆತನು ಅನುಸರಿಸಿದ ಸಾಮಾಜಿಕ, ಆರ್ಥಿಕ, ರಾಜಕೀಯ ನೀತಿಗಳನ್ನು ಅಧ್ಯಯನ ಮಾಡಲು ಬಯಸುತ್ತದೆ.
APA, Harvard, Vancouver, ISO, and other styles
28

ವಿನಯ, ಕುಮಾರ್, та ಗೌಡ ಆರ್. ನಾಗಪ್ಪ. "ಮಾತಿಲ್ಲದ ಸಮುದಾಯಕ್ಕೆ ಮಾತಾದ ಕವಿ: ಡಾ. ಸಿದ್ಧಲಿಂಗಯ್ಯ". AKSHARASURYA 03, № 05 (2024): 52–60. https://doi.org/10.5281/zenodo.10938039.

Full text
Abstract:
ಸಾಮಾಜಿಕ ಶ್ರೇಣೀಕರಣ ಭಾರತದ ಸಮಾಜದ ಬಹುಮುಖ್ಯವಾದ ಲಕ್ಷಣ. ಅಂದರೆ ಅದು ಜಾತಿಯ ಆಧಾರದ ಮೇಲೆ ನಿರ್ಧರಿತವಾಗುತ್ತದೆ. ಈ ಶ್ರೇಣೀಕರಣದ ವ್ಯವಸ್ಥೆಯು ಒಂದಿಷ್ಟು ವರ್ಗಗಳನ್ನು ಅಧೀನವಾಗಿಸಿಕೊಳ್ಳುವ ಮೇಲ್ವರ್ಗದ ಉತ್ಪನ್ನವಾಗಿದೆ. ಈ ವರ್ಗವು ಇಲ್ಲಿನ ಕೆಲವು ಸಮುದಾಯಗಳನ್ನು ಹೀನವೆಂದು ಗುರುತಿಸಿಕೊಂಡು ಶತಮಾನಗಳಿಂದ ಶೋಷಣೆಯನ್ನು ಮಾಡಿಕೊಂಡು ಬಂದಿತ್ತು. ಈ ಕೆಳಜಾತಿಗಳಿಗೆ ಯಾವುದೇ ಹಕ್ಕುಗಳು ಇಲ್ಲದೇ ಮೆಲ್ವರ್ಗದ ಜೀತಕ್ಕಷ್ಟೇ ಸೀಮಿತವಾಗಿಸಲಾಗಿತ್ತು. ಶಿಕ್ಷಣ, ಧಾರ್ಮಿಕತೆ, ಸಾಮಾಜಿಕ ಜೀವನ, ಸಮಾನತೆ ಮೊದಲಾದವುಗಳು ಇವರಿಗೆ ಪರಿಚಯವೇ ಇರಲಿಲ್ಲ. ಇವರನ್ನು ಸಂಪೂರ್ಣವಾಗಿ ಗುಲಾಮರನ್ನಾಗಿ ಮಾಡಲಾಗಿತ್ತು. ಭಾರತಕ್ಕೆ ಬ್ರಿಟಿಷರು ಬಂದ ನಂತರ ಅವರು ಇಲ್ಲಿ ಎಲ್ಲರಿಗೂ ಶಿಕ್ಷಣ ನೀಡಿದ್ದರಿಂದಾಗಿ ದಲಿತರಲ್ಲಿ ಹೊಸ ಆಶಾಕಿರಣ ಮೂಡಿತು. ಮುಂದೆ ಅಂಬೇಡ್ಕರ್ ಅವರು ಈ ವರ್ಗಗಳಿಂದ ಬಂದು ಇವರ ಏಳಿಗೆಗಾಗಿ ಶ್ರಮಿಸಿದರು. ಮೂಕವಾಗಿಸಿದ್ದ ಸಮುದಾಯವು ಶಿಕ್ಷಣವನ್ನು ಪಡೆದು ಮಾತನಾಡಲು ಕಾರಣರಾದವರು ಡಾ. ಬಿ. ಆರ್. ಅಂಬೇಡ್ಕರ್. ಮುಂದೇ ಇವರು ಭಾರತದ ಸಂವಿಧಾನದ ಶಿಲ್ಪಿಯಾಗಿ ಎಲ್ಲರಿಗೂ ಸಮಾನತೆ ನೀಡುವ, ಸಾಮಾಜಿಕ ನ್ಯಾಯವನ್ನು ಕೊಡುವ ಸಂವಿಧಾನವನ್ನು ನೀಡಿದರು. ಈ ಕಾರಣದಿಂದಾಗಿ ಇಲ್ಲಿನ ಹಿಂದುಳಿದ ಕೆಳವರ್ಗಗಳು ಮಾತನ್ನು ದಕ್ಕಿಸಿಕೊಂಡವು. ಈ ಎಲ್ಲಾ ಹಿನ್ನಲೆಯಿಂದ ಕನ್ನಡದ ದಲಿತ ಸಾಹಿತ್ಯವನ್ನು ಮತ್ತು ಸಿದ್ಧಲಿಂಗಯ್ಯವರನ್ನು ಕಾಣುವುದು ಹೆಚ್ಚು ಸೂಕ್ತ. ಸಹಜ ಸಜ್ಜನಿಕೆಯ ವ್ಯಕ್ತಿತ್ವವಾದ ಸಿದ್ಧಲಿಂಗಯ್ಯನವರ ಕಾವ್ಯ ಭಾಷೆ ಅಕ್ಷರಶಃ ಬೆಂಕಿಯ ಉಂಡೆಗಳು. ಶತಮಾನಗಳಿಂದ ಸ್ವಾತಂತ್ರ್ಯ, ಶಿಕ್ಷಣ, ಸಮಾನತೆ ಮೊದಲಾದ ಮುಖ್ಯವಾದ ಜೀವನ ಅಗತ್ಯಗಳೇ ಇಲ್ಲದೇ ಬದುಕಿದ ಸಮುದಾಯಕ್ಕೆ ಶಿಕ್ಷಣದೊರೆತಾಗ ಸಹಜವಾಗಿ ಈ ವ್ಯವಸ್ಥೆಯ ವಿರುದ್ಧ ಆಕ್ರೋಶ ಉಂಟಾಗುವಂತದ್ದು. ಈ ಆಕ್ರೋಶವು ಶತಮಾನಗಳ ಶೋಷಣೆಯ ಚರಿತ್ರೆಯನ್ನು ತಿಳಿದುಕೊಂಡು ಪ್ರಜ್ಞಾವಂತರಾಗುತ್ತಿರುವ ಸಂಕೇತವು ಹೌದು. ಈ ದಲಿತ ವಿಚಾರಶೀಲತೆಯ ಪ್ರತೀಕವಾಗಿ ಕವಿ ಸಿದ್ಧಲಿಂಗಯ್ಯನವರ ಸಾಹಿತ್ಯವನ್ನು ವಿವೇಚಿಸಲಾಗಿದೆ.
APA, Harvard, Vancouver, ISO, and other styles
29

ಸವಿತಾ, ಆರ್. ಸ್ವಾಮಿ. "ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ: ಸಾಮಾಜಿಕ ಹಿನ್ನೆಲೆಯಲ್ಲಿ ಒಂದು ನೋಟ". AKSHARASURYA JOURNAL 03, № 04. SPECIAL ISSUE. (2024): 175 to 180. https://doi.org/10.5281/zenodo.10930508.

Full text
Abstract:
ಈ ಭೂಮಿ ಮೇಲೆ ಅತ್ಯಂತ ಬುದ್ಧಿವಂತ ಪ್ರಾಣಿ ಮನುಷ್ಯನಾಗಿರುತ್ತಾನೆ. ಅವನು ಅನೇಕ ಶೋಧಗಳ ಫಲವಾಗಿ ಅವನು ಮಂಗನಿಂದ ಮಾನವ ಎನಿಸಿಕೊಂಡಿರುತ್ತಾನೆ. ಅನೇಕ ಸೌಲತ್ತುಗಳಿಗಾಗಿ ವಿಜ್ಞಾನದ ಆವಿಷ್ಕಾರಗಳು ಮಾಡುತ್ತಾ ಮುಂದುವರೆದು. ಯಾಂತ್ರಿಕವಾದ ಮನುಷ್ಯನನ್ನು ಸೃಷ್ಟಿಸುವಷ್ಟು. ಅನೇಕ ವೈಜ್ಞಾನಿಕ ನೆಲೆಯಲ್ಲಿ ಮನುಷ್ಯನ ಊಹೆಗೂ ಮೀರಿದ ಆವಿಷ್ಕಾರಗಳು ಕಂಡುಕೊಂಡಿದ್ದಾನೆ. ಆದರೆ ಇತ್ತೀಚಿಗೆ ಹೆಚ್ಚಾಗಿ ಪ್ರಚಲಿತದಲ್ಲಿರುವ ವಿಷಯ ಏನೆಂದರೆ. ಮನುಷ್ಯನ ಆಲೋಚನೆ ಅವನ ಮನಸ್ಸು ಅವನ ನರನಾಡಿಗಳಲ್ಲಿ ಆಗುವ ಅಂಶಗಳು ಕೂಡ ಸೆರೆಹಿಡಿದು ಕೃತಕ ಬುದ್ಧಿಮತ್ತೆ (AI) “ಆರ್ಟಿಫಿಶಿಯಲ್ ಇಂಟಲಿಜೆನ್ಸ್” ತಂತ್ರಜ್ಞಾನವು ಕಂಡುಹಿಡಿಯಲಾಗಿದೆ. ಇದು ಮನುಷ್ಯನಿಂದ ಹುಟ್ಟಿ ಮನುಷ್ಯನನ್ನೇ ಮೀರಿಸುವ ರೀತಿಯಲ್ಲಿ ಬೆಳೆಯುತ್ತಿದೆ. ಮುಂಬರುವ ದಿನಗಳಲ್ಲಿ ಇದರ ಸಾಧಕ-ಭಾದಕಗಳಿಂದ ನಮ್ಮ ಸಾಮಾಜಿಕ ನೆಲೆಯಲ್ಲಿ ಒಂದು ಸಂಚಲನ ಮೂಡಿಸುವುದಂತು ಖಚಿತವಾಗಿದೆ. ಈ ಲೇಖನದ ಅಧ್ಯಯನದ ಉದ್ದೇಶ ಸಾಮಾಜಿಕ ನೆಲೆಯಲ್ಲಿ ಮನುಷ್ಯ ಕಟ್ಟ ಕಡೆಯ ಬುದ್ಧಿವಂತನು. ಆದರೆ ತಂತ್ರಜ್ಞಾನದಿಂದ ಮನುಷ್ಯ ತನ್ನ ಆಲೋಚನೆ ಸಾಮರ್ಥ್ಯ ಆರೋಗ್ಯದ ದೃಷ್ಟಿಯಲ್ಲಿ ಎದುರಿಸುವ ಸಂಗತಿಗಳು. ಈ ಲೇಖನದಲ್ಲಿ ಚರ್ಚಿಸುವ ಪ್ರಯತ್ನ ಮಾಡಿರುತ್ತೇನೆ.
APA, Harvard, Vancouver, ISO, and other styles
30

ಡಾ., ಸ್ವಾಮಿ. "ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ರಚನೆ ಮತ್ತು ಕಾರ್ಯ ವಿಧಾನಗಳು". International Journal of Advance Research in Multidisciplinary 2, № 3 (2024): 269–73. https://doi.org/10.5281/zenodo.13293895.

Full text
Abstract:
ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮವು ಶೋಷಿತ ಸಮುದಾಯಗಳಲ್ಲಿ ಸಾಮಾಜಿಕ ಅಸಮಾನತೆಯಿಂದ ಬಳಲುತ್ತಿರುವ ಸಮುದಾಯಗಳ ಅಭಿವೃದ್ಧಿಗಾಗಿ ಮತ್ತು ಅವರನ್ನು ಸಾಮಾಜಿಕ ಸಮಾನತೆಯ ಕಡೆ ಕೊಂಡೊಯ್ಯಲು ಹಲವು ಯೋಜನೆಗಳ ಮೂಲಕ ಶ್ರಮಿಸುತ್ತಿದೆ. ಅ ಮೂಲಕ ಫಲಾನುಭವಿಗಳ ಜೀವನ ಕ್ರಮದ ಬದಲಾವಣೆಯ ಉದ್ದೇಶವನ್ನು ಹೊಂದಿದೆ. ಪರಿಶಿಷ್ಟ ಜಾತಿಲ್ಲಿ ಬಡತನದ ರೇಖೆಗಿಂತ ಕೆಳಗಿರುವ ಉಪಜಾತಿಗಳನ್ನು ಈ ಯೋಜನೆಗಳಿಗೆ ಸಿಗುವಂತೆ ಮಾಡಲಾಗಿ. ಇದರಿಂದ ಅವರ ಆರ್ಥಿಕ ಸುಧಾರಣೆ, ಮಕ್ಕಳ ಶೈಕ್ಷಣಿಕ ಉನ್ನತಿ, ನಿರುದ್ಯೋಗ ನಿವಾರಣೆ ಮಾಡಲು, ಸಮುದಾಯದ ಯುವಕ ಮತ್ತು ಯುವತಿಯರನ್ನು ಸಬಲರನ್ನಾಗಿಸಲು ನಿಗಮವು ಹಲವಾರು ಯೋಜನೆಗಳನ್ನು ರೂಪಿಸಿದೆ. ಮಹಿಳಾ ಸಬಲೀಕರಣ ಯೋಜನೆಗಳ ಮೂಲಕ ಮಹಿಳೆಯು ಆರ್ಥಿಕ ಸಬಲತೆಯನ್ನು ಹೊಂದಬೇಕು, ಉದ್ಯೋಗ ಪಡೆಯಬೇಕು, ಸಮಾಜದ ಕಟ್ಟಳೆ ಮತ್ತು ದೌರ್ಜನ್ಯಗಳಿಂದ ತನ್ನನ್ನು ತಾನು ಕಾಪಾಡಿಕೊಳ್ಳಬೇಕು. ಸ್ವತಂತ್ರವಾಗಿ ಅವರು ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.
APA, Harvard, Vancouver, ISO, and other styles
31

ಸುಜಾತ. "ಕೋವಿಡ್ ಸಂದರ್ಭದಲ್ಲಿ ಚಿಂಚೋಳಿ ತಾಲೂಕಿನ ಮಹಿಳಾ ವಲಸೆ ಕಾರ್ಮಿಕರ ಮೇಲೆ MGNREGA ದ ಪಾತ್ರ". AKSHARASURYA 04, № 03 (2024): 68 to 77. https://doi.org/10.5281/zenodo.12672719.

Full text
Abstract:
COVID-19 ಸಾಂಕ್ರಾಮಿಕವು ಸಮಾಜಗಳಲ್ಲಿ ಅಭೂತಪೂರ್ವ ಬದಲಾವಣೆಯನ್ನು ತಂದಿದೆ ಮತ್ತು ಅನೇಕ ಸಾಮಾಜಿಕ-ಆರ್ಥಿಕ ಬಿಕ್ಕಟ್ಟುಗಳನ್ನು ವರ್ಧಿಸಿದೆ. ಭಾರತವು ವಲಸೆ ಕಾರ್ಮಿಕರ ನಡುವೆ ಭಾರಿ ಬಿಕ್ಕಟ್ಟಿಗೆ ಸಾಕ್ಷಿಯಾಗಿದೆ. ಇದರ ಪರಿಣಾಮವಾಗಿ ಲಕ್ಷಾಂತರ ವಲಸೆ ಕಾರ್ಮಿಕರ ಜೀವನೋಪಾಯಕ್ಕೆ ವಿಶೇಷವಾಗಿ ಮಹಿಳಾ ವಲಸೆ ಕಾರ್ಮಿಕರಿಗೆ ತೀವ್ರ ಹೊಡೆತ ಬಿದ್ದಿದೆ. ಈ ಸಾಂಕ್ರಾಮಿಕ ರೋಗದಿಂದ ಹೊರಹೊಮ್ಮುತ್ತಿರುವ ಪುರಾವೆಗಳು ಮತ್ತು ಹಿಂದಿನ ರೋಗದ ಏಕಾಏಕಿ ಅನುಭವದಿಂದ ಉಂಟಾಗುವ ಸಾಮಾಜಿಕ-ಆರ್ಥಿಕ ಸಂಕಷ್ಟಗಳನ್ನು ಅಸಮಾನವಾಗಿ ಅನುಭವಿಸಿರುವವರು ಮಹಿಳೆಯರು ಎಂದು ತೋರಿಸುತ್ತದೆ. UN 2019ರ ಅಂದಾಜಿನ ಪ್ರಕಾರ, 90% ಮಹಿಳಾ ಉದ್ಯೋಗಿಗಳು ಅನೌಪಚಾರಿಕ ವಲಯ ಮತ್ತು ವಲಸೆ ಕಾರ್ಮಿಕರ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಕೋವಿಡ್‌ ಸಂದರ್ಭದಲ್ಲಿ ಚಿಂಚೋಳಿ ತಾಲೂಕಿನ ವಲಸೆ ಕಾರ್ಮಿಕರ ಮೇಲೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (MGNREGA) ಯ ಪಾತ್ರವನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ.
APA, Harvard, Vancouver, ISO, and other styles
32

ಸಿ., ಬಿ. ಹೊನ್ನುಸಿದ್ಧಾರ್ಥ. "ನಿರಂಜನ 'ವಿಮೋಚನೆ' ಕಾದಂಬರಿ: ನಗರ ಬದುಕಿನ ವಾಸ್ತವ ಚಿತ್ರಣದ ಜೀವನ ವೃತ್ತಾಂತದ ಅನಾವರಣ". AKSHARASURYA 05, № 01 (2024): 33 to 42. https://doi.org/10.5281/zenodo.13870631.

Full text
Abstract:
ಮಾರ್ಕ್ಸ್‌ವಾದಿ ಸಿದ್ಧಾಂತದಿಂದ ಪ್ರಭಾವಿತರಾದ ನಿರಂಜನರು ವೈಚಾರಿಕ ಚಿಂತನೆಯುಳ್ಳವರಾಗಿದ್ದರು. ಅವರ ಮೊದಲ ಕಾದಂಬರಿಯಾದ ‘ವಿಮೋಚನೆ’ಯೂ ವರ್ತಮಾನದಲ್ಲಿ ನಿಂತು ಭೂತವನ್ನು ಕೆಣಕುತ್ತಾ ಹೋಗುವ ನಿರೂಪಣಾ ತಂತ್ರಗಾರಿಕೆಯ ಮೂಲಕ ಕಾದಂಬರಿಯ ಉದ್ದಕ್ಕೂ ನೀತಿಯಿಂದ ಕೂಡಿದ ಸಾಮಾಜಿಕ ವ್ಯವಸ್ಥೆಯನ್ನು ವ್ಯಂಗ್ಯಭರಿತ ದಾಟಿಯಲ್ಲಿ ಕುಟುಕಿದ್ದಾರೆ. ಬಾಲ್ಯದಿಂದಲೂ ಕಡುಬಡತನದ ಬದುಕು ನಡೆಸಿದ್ದ ಕಥಾನಾಯಕ ಚಂದ್ರಶೇಖರನಿಗೆ ತನ್ನ ಬದುಕಿನಲ್ಲಿ ಉಂಟಾದ ದುರ್ಘಟನೆಗಳು ದೊಡ್ಡ ಹೊಡೆತವನ್ನು ನೀಡುತ್ತವೆ. ಅವನು ಇಟ್ಟ ಪ್ರೀತಿ, ವಿಶ್ವಾಸ, ನಂಬಿಕೆಗಳೇ ಅವನಿಗೆ ಮುಳುವಾಗಿ ಸಾಮಾಜಿಕ ವ್ಯವಸ್ಥೆ ಅವನ ಬಡತನವನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡು ಅವನನ್ನು  ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಜೈಲು ಶಿಕ್ಷೆಗೆ ಒಳಗಾದ ಚಂದ್ರಶೇಖರ ತಾನು ನಿರಪರಾಧಿ ಎಂದು ಸಮಾಜಕ್ಕೆ ತಿಳಿಸಲು ಬರವಣಿಗೆಯ ಮಾರ್ಗವನ್ನು ಆಯ್ಕೆ ಮಾಡಿಕೊಂಡು ತನ್ನ ‘ಆತ್ಮಕಥೆ’ಯನ್ನು ಬರೆಯುವ ಮೂಲಕ ಜನತಾ ನ್ಯಾಯಾಲಯದಲ್ಲಿ ಕಳಂಕ ರಹಿತ ವ್ಯಕ್ತಿಯೆಂದು ‘ವಿಮೋಚನೆ’ ಪಡೆಯುವ ಹಂಬಲವನ್ನು ವ್ಯಕ್ತಪಡಿಸುತ್ತಾನೆ.
APA, Harvard, Vancouver, ISO, and other styles
33

ರೇಣುತಾಕ್ಷಿ. "ಶಿಕ್ಷಣವೆಂದರೆ ಜೀವನಕ್ಕೆ ಸಿದ್ಧತೆಯಲ್ಲ, ಶಿಕ್ಷಣವೇ ಜೀವನ". AKSHARASURYA JOURNAL 06, № 05 (2025): 169 to 174. https://doi.org/10.5281/zenodo.15504563.

Full text
Abstract:
ಡಾ. ಬಿ.ಆರ್. ಅಂಬೇಡ್ಕರ್‌ ಅವರು ಹೇಳಿದಂತೆ, ಶಿಕ್ಷಣ ಜೀವನಕ್ಕೆ ಸಿದ್ಧತೆ ಮಾತ್ರವಲ್ಲ, ಅದು ಜೀವನವೇ ಆಗಿದೆ. ಶಿಕ್ಷಣವು ಕೇವಲ ಉದ್ಯೋಗ ಅಥವಾ ಜೀವನೋದ್ಯಮಕ್ಕೆ ಪೂರಕವಾಗಿರುವುದಷ್ಟೇ ಅಲ್ಲ, ಅದು ವ್ಯಕ್ತಿಯ ಬುದ್ಧಿ, ಚಿಂತನೆ, ವ್ಯಕ್ತಿತ್ವ ಮತ್ತು ಸಮಾಜದ ಪ್ರಗತಿಗೆ ಸಹಾಯಕವಾಗಬೇಕು. ಅಂಬೇಡ್ಕರ್‌ ಅವರ ದೃಷ್ಟಿಯಲ್ಲಿ ಶಿಕ್ಷಣವು ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯವನ್ನು ಸ್ಥಾಪಿಸುವ ಪ್ರಮುಖ ಸಾಧನವಾಗಿದೆ. ವಿದ್ಯಾಭ್ಯಾಸವು ವ್ಯಕ್ತಿಗೆ ಅರ್ಥಪೂರ್ಣ ಬದುಕನ್ನು ಕಟ್ಟಿಕೊಳ್ಳಲು, ಸ್ವತಂತ್ರವಾಗಿ ಚಿಂತಿಸಲು, ಹಾಗೂ ತಾನು ಎದುರಿಸುವ ಸವಾಲುಗಳಿಗೆ ಉತ್ತರಿಸಲು ಶಕ್ತಿಯನ್ನು ನೀಡುತ್ತದೆ. ಸಮೃದ್ಧ ಜೀವನಕ್ಕಾಗಿ ಕೇವಲ ಹಣಕಾಸಿನ ಪ್ರಗತಿಯನ್ನಷ್ಟೇ ಗಮನಿಸುವುದಕ್ಕಿಂತ, ಮಾನವೀಯತೆ, ನೈತಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಕಾಪಾಡುವುದು ಶಿಕ್ಷಣದ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ, ಶಿಕ್ಷಣವೇ ಜೀವನವೆಂದರೆ, ಅದು ವ್ಯಕ್ತಿಯ ಸಾಂಸ್ಕೃತಿಕ, ಬೌದ್ಧಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ನಿರಂತರವಾಗಿ ನಡೆಸುವ ಪ್ರಕ್ರಿಯೆಯಾಗಿರಬೇಕು. ಈ ಸತ್ಯವನ್ನು ಅರಿತುಕೊಂಡಾಗಲೇ ನಾವು ಒಂದು ಪ್ರಬುದ್ಧ, ಪ್ರಗತಿಪರ ಸಮಾಜವನ್ನು ನಿರ್ಮಿಸಬಹುದು. 
APA, Harvard, Vancouver, ISO, and other styles
34

ಕೆ.ಜಿ., ಚವಾಣ. "ಸುಧಾಮೂರ್ತಿ ಕಾದಂಬರಿಗಳಲ್ಲಿ ಸ್ತ್ರೀವಾದಿ ಪರಿಕಲ್ಪನೆಗಳು". AKSHARASURYA 03, № 06 (2024): 41 to 54. https://doi.org/10.5281/zenodo.11126906.

Full text
Abstract:
ಸುಧಾಮೂರ್ತಿಯವರು ಕನ್ನಡ ನಾಡಿನ ಪ್ರಮುಖ ಬರಹಗಾರರು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಲೇಖಕಿ, ಸರಳ ಸಜ್ಜನಿಕೆಯ ವ್ಯಕ್ತಿ, ಉತ್ತಮ ವಾಗ್ಮಿ, ಸದಾ ಕ್ರೀಯಾಶೀಲರು, ಸಮಾಜಕ್ಕೆ ಸ್ಪೂರ್ತಿ ನೀಡುವ ಶಕ್ತಿಯಾಗಿ, ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದಾರೆ. ಕನ್ನಡ ಮಾತ್ರವಲ್ಲದೆ ಇಂಗ್ಲೀಷ್ ಭಾಷೆಯಲ್ಲಿಯೂ ಹಲವು ಕೃತಿಗಳನ್ನು ಬರೆದು ಪ್ರಸ್ತುತದಲ್ಲಿ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದು, ಬಿಲ್‌ಗೇಟ್ಸ್ ಪ್ರತಿಷ್ಠಾನದ ಸಾರ್ವಜನಿಕ ಆರೋಗ್ಯ ಉಪಕ್ರಮಗಳ ಸದಸ್ಯರೂ ಆಗಿದ್ದಾರೆ. ಮಹಿಳೆಯರ ಜ್ಞಾನ ಸಂಪಾದನೆ, ಸಂಸ್ಕೃತಿ ಸಂಪನ್ನತೆಯನ್ನು ಹೆಚ್ಚಿಸಲು ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ, ಸಾಮಾಜಿಕ ಉನ್ನತಿಗೂ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ಬಿಡುವು ಮಾಡಿಕೊಂಡು ಕಥೆ, ಕಾದಂಬರಿಗಳನ್ನು, ಮಕ್ಕಳ ಸಾಹಿತ್ಯವನ್ನು ಬರೆಯುತ್ತಿದ್ದಾರೆ. ದೇಶಪಾಂಡೆ ಪೌಂಡೇಷನ್ ಹಾಗೂ ಇನ್ಪೋಸಿಸ್ ಪೌಂಡೇಷನ್ ಸ್ಥಾಪನೆಗೆ ಕಾರಣೀಕರ್ತರಾಗಿದ್ದು ‘ಡಾಲರ್ ಸೊಸೆ’ ಹಾಗೂ ‘ಮಹಾಶ್ವೇತೆ’ ಕಾದಂಬರಿಗಳು ಸುಧಾಮೂರ್ತಿಯವರ ಸಾಮಾಜಿಕ ಕಾದಂಬರಿಗಳಾಗಿದ್ದು ಬದುಕಿನ ಓರೆ ಕೋರೆಗಳನ್ನು ತಿದ್ದುವ, ಭಾವನೆಗಳನ್ನು ಅರ್ಥೈಸುವ, ಮನ ಮಿಡಿಯುವ ಸಂಸ್ಕೃತಿಯನ್ನು ಅನುಸರಿಸುವ ದೇಶ ದೇಶಗಳ ನಡುವಿನ ಸ್ತ್ರೀವಾದಿ ಸಾಮಾಜಿಕ ಪರಿಕಲ್ಪನೆಗಳು ರೂಪಾಯಿಯ ಮೇಲೆ ಡಾಲರಿನ ಪ್ರಭಾವವನ್ನು ಕಾದಂಬರಿಯ ಕಥಾನಾಯಕಿಯಾದ ಗೌರಮ್ಮ ತನ್ನ ಸೊಸೆಯರಾದ ಜಮುನಾ ಹಾಗೂ ವಿನುತಾರಿಗೆ ನೋಡುವ ದೃಷ್ಠಿಕೋನ ಬೇರೆ ಬೇರೆಯೇ ಇದೆ. ‘ಜಮುನಾ ಡಾಲರ್ ಸೊಸೆಯಾದರೆ, ವಿನುತಾ ರೂಪಾಯಿ ಸೊಸೆ. ಗೌರಮ್ಮ ಹಾಗೂ ಶಾಮಣ್ಣನವರದು ಸುಖಿ ಕುಟುಂಬ. ಇವರಿಗೆ ಒಂದು ಹೆಣ್ಣು ಸುರಭಿ ಹಾಗೂ ಎರಡು ಗಂಡು ಮಕ್ಕಳು. ಚಂದ್ರು ಮತ್ತು ಆತನ ಹೆಂಡತಿ ಜಮುನಾ ಇವರಿಗೆ ಒಂದು ಮಗು ಮಾನಸಿ ಅಮೇರಿಕೆಯಲ್ಲಿರುತ್ತಾರೆ. ಹಾಗೂ ಗಿರೀಶ್ ಮತ್ತು ವಿನುತಾ ಭಾರತದಲ್ಲಿರುತ್ತಾರೆ. ಇವರಿಗೆ ಒಂದು ಮಗು ಹರ್ಷ. ಮಹಾಶ್ವೇತೆ ಕಾದಂಬರಿಯ ಅನುಪಮಾ ಬಿಳುಪಿನ (ತೊನ್ನು ರೋಗ) ರೋಗದವಳಾಗಿದ್ದು ಸಮಾಜದಲ್ಲಿರುವ ಜನ ಸಾಮಾನ್ಯರು ನಿಕೃಷ್ಠವಾಗಿ ನೋಡುವ, ತಾತ್ಸಾರ ಪಡುವುದನ್ನು ಬಿಟ್ಟು ಮಾನವೀಯತೆಯಿಂದ ನೋಡಬೇಕೆಂಬ ಸಂದೇಶವನ್ನು ನೀಡುತ್ತದೆ.
APA, Harvard, Vancouver, ISO, and other styles
35

ಕೆ., ಕುಮಾರ್. "ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕೌಶಲ್ಯಗಳ ವೃದ್ಧಿಗೆ ಸಹಪಠ್ಯ ಚಟುವಟಿಕೆಗಳ ಪಾತ್ರ". International Journal of Kannada Research 10, № 1 (2024): 113–22. http://dx.doi.org/10.22271/24545813.2024.v10.i1b.947.

Full text
APA, Harvard, Vancouver, ISO, and other styles
36

ಆಶಾಲತಾ, ಪಿ. "ಭಾರತದ ಪ್ರಜಾತಂತ್ರ: ಡಾ. ಬಿ.ಆರ್. ಅಂಬೇಡ್ಕರ್‌ ಚಿಂತನೆಗಳು". AKSHARASURYA JOURNAL 06, № 05 (2025): 01 to 09. https://doi.org/10.5281/zenodo.15504104.

Full text
Abstract:
ಭಾರತದಲ್ಲಿ ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯ, ಮಹಿಳಾ ಹಕ್ಕುಗಳ ಬಗೆಗೆ ತೀವ್ರವಾಗಿ ಚಿಂತಿಸಿ, ಆ ಸಾಮಾಜಿಕ ಸುಧಾರಣೆಗಳಿಗೆ ಕಾನೂನಿನ ಚೌಕಟ್ಟು ಅವಶ್ಯವೆಂದು, ಭಾರತದ ಸಂವಿಧಾನದಲ್ಲಿ ಆ ಮೌಲ್ಯಗಳನ್ನು ಹಲವಾರು ವಿಧಿಗಳ ರೂಪದಲ್ಲಿ ಕ್ರೋಢೀಕರಿಸಿ, ಶೋಷಿತ ಸಮುದಾಯಗಳಲ್ಲಿ ಸ್ವಾಭಿಮಾನ, ಆತ್ಮಗೌರವ ಮತ್ತು ಅನ್ಯಾಯಗಳ ವಿರುದ್ಧ ಹೋರಾಟದ ಮನೋಭಾವವನ್ನು ಮೂಡಿಸಿದ ಮಹಾನ್ ಮಾನವತಾವಾದಿ, ಸಂವಿಧಾನಶಿಲ್ಪಿ, ಅರ್ಥಶಾಸ್ತ್ರಜ್ಞ, ಕಾನೂನು ತಜ್ಞ ಡಾ. ಬಾಬಾಸಾಹೇಬ್ ಅಂಬೇಡ್ಕರ್‌‌ರವರು. ಮೂಲತ ಅಂಬೇಡ್ಕರ್‌‌ರವರು, ಬೆಳೆದು ಬಂದ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳು, ಅಸ್ಪೃಶ್ಯತೆ, ಬಡತನ, ದೌರ್ಜನ್ಯ ಈ ಎಲ್ಲಾ ಜಾತಿಯ ಅಸಮಾನತೆಗಳ ಭೀತಿಗಳನ್ನು, ಒಳಗೊಂಡ ಸಮಾಜವಾಗಿತ್ತು. ಹಾಗಾಗಿ ಸಹಜವಾಗಿಯೇ ಶೋಷಿತ ಸಮುದಾಯಗಳ ಶೋಷಣೆಯ ವಿವಿಧ ಸ್ವರೂಪಗಳು ಅವರ ಹೋರಾಟಗಳಲ್ಲಿ ಪ್ರತಿಫಲನಗೊಂಡಿವೆ. ಈ ಮೂಲಭೂತವಾದ ವಿಚಾರಗಳನ್ನು ಪ್ರಧಾನವಾಗಿಟ್ಟುಕೊಂಡು, ಒಬ್ಬ ರಾಜ್ಯಶಾಸ್ತ್ರದ ವಿದ್ಯಾರ್ಥಿಯಾಗಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್‌‌ರವರ ಆಯ್ದ ಬರಹಗಳು, ಹೋರಾಟಗಳು, ಮತ್ತು ಹೋರಾಟದ ಭಾಗವಾಗಿ ಎತ್ತಿರುವ ಮೂಲಭೂತ ಪ್ರಶ್ನೆಗಳನ್ನು ಈ ಸಂಶೋಧನಾ ಬರಹದಲ್ಲಿ ವಿಶ್ಲೇಷಣೆ ಮಾಡಲಾಗಿದೆ. ಮುಂದುವರಿದು, ಅಂಬೇಡ್ಕರ್‌‌ರವರು ದಲಿತ ವಿಮೋಚಕ, ಸಂವಿಧಾನ ಶಿಲ್ಪಿ, ಮೀಸಲಾತಿ ಕಾನೂನುಬದ್ಧಗೊಳಿಸಿದ ದಲಿತ ಹೋರಾಟಗಾರ; ಈ ಸೀಮಿತ ಚೌಕಟ್ಟನ್ನು ಮೀರಿ ಅವರ ಬದುಕು ಮತ್ತು ಹೋರಾಟಗಳನ್ನು ಗುರುತಿಸುವ ಪ್ರಯತ್ನ, ಅವರ ಬರವಣಿಗೆಗಳಲ್ಲಿ ಅಭಿವ್ಯಕ್ತಗೊಂಡಿರುವ ಸಮಾಜಮುಖಿ ಚಿಂತನೆಗಳು, ಮತ್ತು ಭಾರತದ ಪ್ರಜಾತಂತ್ರ ವ್ಯವಸ್ಥೆಯ ಸ್ಥಾಪಕರಾಗಿ ಮತ್ತು ಪ್ರತಿಪಾದಕರಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರ್‌‌ರವರ ವಿಚಾರಧಾರೆಗಳು, ಪ್ರಸ್ತುತ ಭಾರತ ಎದುರಿಸುತ್ತಿರುವ ಸವಾಲುಗಳ ನೆಲೆಯಲ್ಲಿ ಅವರ ಚಿಂತನೆಗಳ ಪ್ರಸ್ತುತತೆ ಈ ಮೂಲಭೂತವಾದ ವಿಚಾರಗಳನ್ನು ಪ್ರಧಾನವಾಗಿ ಚರ್ಚೆ ಮಾಡಲಾಗಿದೆ. ಅಂತಿಮವಾಗಿ, ಈ ಸಂಶೋಧನಾ ಬರಹ, ಎಲ್ಲಾ ತಾರತಮ್ಯಗಳನ್ನು ಮೀರಿದ ಮಾನವತಾ ಸಮಾಜ, ಎಲ್ಲರನ್ನು ಒಳಗೊಳ್ಳುವ, ಎಲ್ಲರ ಅಭಿವೃದ್ಧಿಗೆ ಶ್ರಮಿಸುವ ದೌರ್ಜನ್ಯ ಮುಕ್ತ ಸಮಾಜವಾಗಿ, ರೂಪಿಸುವ ಮತ್ತು ಧ್ವನಿಯಿಲ್ಲದ ಸಮುದಾಯಗಳಿಗೆ ಧ್ವನಿಯಾಗುವ ಮಹತ್ವಪೂರ್ಣ ಸಾಂವಿಧಾನಿಕ ಜವಾಬ್ದಾರಿಗಳ ಭಾಗವಾಗಿ ಅಂಬೇಡ್ಕರ್‌ ಚಿಂತನೆಗಳು ಪ್ರಸ್ತುತವೆಂದು, ಖಾತರಿಪಡಿಸುತ್ತದೆ. 
APA, Harvard, Vancouver, ISO, and other styles
37

ಸಂದೇಶ್, ಎ. ಎಸ್. "'ಅವಳ ಪಥ' ಒಂದು ನೋಟ". AKSHARASURYA 03, № 05 (2024): 75–87. https://doi.org/10.5281/zenodo.10938082.

Full text
Abstract:
ಜನಪದ ಸಾಹಿತ್ಯದಿಂದ ಇಂದಿನವರೆಗಿನ ಮಹಿಳಾ ಪಯಣವನ್ನು ಈ ಲೇಖನ ದಾಖಲಿಸುತ್ತದೆ. ಮಾತೃಪ್ರಧಾನ ಸಂಸ್ಕೃತಿಯಿಂದ, ಪಿತೃಪ್ರಧಾನ ಸಂಸ್ಕೃತಿಯವರೆಗಿನ ಚಲನೆಯನ್ನು ಸಾಮಾಜಿಕ, ಆರ್ಥಿಕ, ಕೌಟುಂಬಿಕ, ಧಾರ್ಮಿಕ ನೆಲೆಯ ಹಿನ್ನೆಲೆಯಲ್ಲಿ ಶೋಧಿಸಿದೆ. ಪ್ರಸ್ತುತ ಕೃತಿಯು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಸ್ತ್ರೀ ಪರ ಆಲೋಚನಾ ಕ್ರಮಗಳ ವಿಕಾಸವನ್ನು ಗುರುತಿಸುತ್ತದೆ. ಜನಪದ ಸಾಹಿತ್ಯ ಹಾಗೂ ಹಳಗನ್ನಡ ಕಾವ್ಯಗಳಿಂದ ಹಿಡಿದು ಮಹಿಳೆಯರ ಪ್ರಸ್ತುತ ಸಾಹಿತ್ಯಾಭಿವ್ಯಕ್ತಿಯನ್ನು ರೂಪಿಸುತ್ತಿರುವ ಬೌದ್ಧಿಕ ದ್ರವ್ಯ ಯಾವುದೆಂಬುದು ಇಲ್ಲಿ ಶೋಧಿತವಾಗಿದೆ. ವಚನಕಾರ್ತಿಯರ ದೇಸಿ ಮಾದರಿಯಿಂದ ತೊಡಗಿ, ಈ ಕಾಲದ ಪ್ರಮುಖ ತಾತ್ವಿಕತೆಯಾದ ಸ್ತ್ರೀವಾದಿ ಸಿದ್ಧಾಂತಗಳವರೆಗೆ ಇಲ್ಲಿನ ಚರ್ಚೆಯ ಹರಹಿದೆ. ನವೋದಯ ಸಾಹಿತ್ಯದ ಸಾಮಾಜಿಕ ಅರಿವು, ಪ್ರಗತಿಶೀಲ ಸಾಹಿತ್ಯದ ವೈಚಾರಿಕ ನಿಲುವು, ನವ್ಯದ ಅಂತರಂಗ ಜಗತ್ತಿನ ಒಳಮುಖಿ ಚಲನೆ, ದಲಿತ-ಬಂಡಾಯ ಕಾಲದಲ್ಲಾದ ರಾಜಕೀಯ ಪ್ರಜ್ಞೆಯ ವಿಕಾಸ, ಪ್ರತಿರೋಧ ಹಾಗೂ ಹಕ್ಕು ಪ್ರತಿಪಾದನೆಗಳ ಹೊಸ ಚಲನೆ, ಸ್ತ್ರೀ ಸಂವೇದನೆಯ ಸೂಕ್ಷ್ಮ ಸ್ತರಗಳ ಅರಿವುಗಳನ್ನು ಇಲ್ಲಿ ಗುರುತಿಸಲಾಗಿದ್ದು, ಮಹಿಳಾ ಕಥಾ ಸಾಹಿತ್ಯದ ಚಲನಶೀಲತೆಯನ್ನು ಸಮಗ್ರವಾಗಿ ಹಿಡಿದಿಡಲಾಗಿದೆ. ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಹೆಣ್ಣು ನಡೆಸುವ ಹೋರಾಟ, ತನ್ನತನದ ಹುಡುಕಾಟ ಈ ಲೇಖನ ಒಂದೇ ಸೂತ್ರದಲ್ಲಿ ಹಿಡಿದಿಡುತ್ತದೆ.
APA, Harvard, Vancouver, ISO, and other styles
38

HEMAVATHI. "ಪ್ರಭಾಕರ ನೀರ್ಮಾರ್ಗರ 'ತಿಲ್ಲಾನ' ಕಾದಂಬರಿಯಲ್ಲಿ ಭೂತಾರಾಧನೆಯ ಮುಂದಿರುವ ತಲ್ಲಣಗಳು". AKSHARASURYA JOURNAL 03, № 03 (2024): 46 to 55. https://doi.org/10.5281/zenodo.10775051.

Full text
Abstract:
ಪ್ರಭಾಕರ ನೀರ್ಮಾರ್ಗರ ‘ತಿಲ್ಲಾನ’ ಕಾದಂಬರಿಯು ಕರಾವಳಿಯ ಭೂತಾರಾಧನೆಯ ಸ್ವರೂಪದ ಹಿನ್ನೆಲೆಯನ್ನು ಕುರಿತ ಕಥನವಾಗಿದೆ. ಭೂತಾರಾಧನೆಯಲ್ಲಿ ಹಿಂದಿನಿಂದಲೂ ನರ್ತಕರಾಗಿ ವೇಷಧಾರಿಗಳಾಗಿ ಭಾಗವಹಿಸಿ, ಭೂತ ಮಾಧ್ಯಮಗಳಾಗಿ ಭಾಗವಹಿಸಿ ದುಡಿಯುತ್ತಿರುವ ನಲಿಕೆ ಜನಾಂಗದ ಸಾಮಾಜಿಕ, ಸಾಂಸ್ಕೃತಿಕ ಬದುಕನ್ನು ಅನಾವರಣಗೊಳಿಸುವ ಕಾದಂಬರಿ ಇದಾಗಿದೆ. ಭೂತಾರಾಧನೆಗೆ ಸಂಬಂಧಿಸಿದ ತಮ್ಮ ಕುಲಕಸುಬನ್ನು ಆಧುನಿಕ ಕಾಲಘಟ್ಟದಲ್ಲಿ ಮುಂದುವರಿಸಿಕೊಂಡು ಹೋಗುವ ಸಂದರ್ಭದಲ್ಲಿ ಆ ಸಮುದಾಯದವರು ಎದುರಿಸುವ ಸವಾಲುಗಳ ಕುರಿತಂತೆ ಈ ಕಾದಂಬರಿ ಕೆಲವು ಮಹತ್ವದ ಒಳನೋಟಗಳನ್ನು ಪರಿಚಯಿಸುತ್ತದೆ. ಭೂತಾರಾಧನೆಯ ಪಠ್ಯ ಮತ್ತು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಈವರೆಗೆ ಶೈಕ್ಷಣಿಕ ನೆಲೆಯಲ್ಲಿ ನಡೆದ ಕ್ಷೇತ್ರಕಾರ್ಯ, ಅಧ್ಯಯನ ಮತ್ತು ಸಂಶೋಧನೆಯ ಕುರಿತಂತೆ ಕೆಲಸಗಳು ಈ ಆರಾಧನಾ ಪ್ರಕಾರದ ಉಳಿವಿಗೆ ಯಾವ ನೆಲೆಯಲ್ಲಿ ನೆರವಾಗಿದೆ ಎಂಬುದು ಈ ಕಾದಂಬರಿ ಎತ್ತುವ ಒಂದು ಮಹತ್ವದ ಪ್ರಶ್ನೆಯಾಗಿದೆ. ಅಂತೆಯೆ ಈ ಮಾದರಿಯ ಅಧ್ಯಯನಗಳ ಪರಿಣಾಮವಾಗಿ ಭೂತಾರಾಧನೆಯಲ್ಲಿ ತಮ್ಮ ಬದುಕನ್ನೇ ಅರ್ಪಿಸಿಕೊಂಡ ಕಲಾವಿದರಿಗೆ ಸಿಗಬಹುದಾದ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಮನ್ನಣೆ ಎಂತಹದ್ದು ಎಂಬುದು ಕಾದಂಬರಿ ಎದುರುಗೊಳ್ಳುವ ಇನ್ನೊಂದು ಮಹತ್ವದ ಸವಾಲು ಸಹ ಹೌದು. ಈ ಬಗೆಯ ಮಹತ್ವದ ಸವಾಲುಗಳ ಜತೆಯಲ್ಲಿಯೇ ಕಾದಂಬರಿ ತನ್ನನ್ನು ತಾನು ಮತ್ತೆ ಪರಿಚಯಿಸಿಕೊಳ್ಳುತ್ತದೆ.
APA, Harvard, Vancouver, ISO, and other styles
39

ರಶ್ಮಿ, ಪಿ. "ಗೊರೂರರ 'ವೈಯ್ಯಾರಿ' ಕಥಾಸಂಕಲನದಲ್ಲಿನ ಮಹಿಳಾ ಪಾತ್ರಗಳು". AKSHARASURYA JOURNAL 05, № 03 Special Issue (2024): 76 to 83. https://doi.org/10.5281/zenodo.14246574.

Full text
Abstract:
ಆಧುನಿಕ ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದಲ್ಲಿ ಕಥಾಪ್ರಕಾರದಲ್ಲಿ ಸಾಧನೆ ಮಾಡಿದ ಹಿರಿಯ ಕಥೆಗಾರರ ಪೈಕಿ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ರವರು ಒಬ್ಬರು. ಇವರ 140ಕ್ಕೂ ಹೆಚ್ಚಿನ ಕಥೆಗಳು ಆರು ಕಥಾ ಸಂಕಲನಗಳಲ್ಲಿ ಹರಡಿಕೊಂಡಿವೆ. ಇವರ ‘ವೈಯ್ಯಾರಿ’ ಕಥಾ ಸಂಕಲನದಲ್ಲಿನ ‘ಭೂತಯ್ಯನ ಮಗ ಅಯ್ಯು’, ‘ಗಂಡುಬೀರಿ ಹೊಸಬಿ’, ‘ಪುಟ್ಟ ಮಲ್ಲಿಗೆ’, ‘ಈಡಿಗರ ಹೆಣ್ಣು’, ‘ಲಕ್ಕಿಯ ಗಂಡಂದಿರು’ ಎಂಬ ಕಥೆಗಳ ವ್ಯಾಪ್ತಿಯಲ್ಲಿ ಬರುವ ಮಹಿಳಾ ಪಾತ್ರಗಳನ್ನು ವಿವೇಚನೆ ಮಾಡುವುದು ಪ್ರಸ್ತುತ ಲೇಖನದ ಉದ್ದೇಶ. ಕೌಟುಂಬಿಕ ಜೀವನದಲ್ಲಿ ತಾಯಿಯಾಗಿ, ಸೊಸೆಯಾಗಿ, ಮಗಳಾಗಿ ಎಲ್ಲಾ ಅವಸ್ಥೆಗಳಲ್ಲಿ ತನ್ನ ಅಸ್ಮಿತೆಯ ಮುದ್ರೆಯನ್ನು ಒತ್ತುವ ಮಹಿಳೆ ಸಮಾಜದಲ್ಲಿ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡು ಸಾಮಾಜಿಕ ವ್ಯವಸ್ಥೆಯೊಳಗೆ ಪುರುಷನಿಗೆ ದಾಸಳಾಗಿ ಅಸಹಾಯಕತೆಯಲ್ಲಿ ಇರುವುದು ಹೊಸದೇನಲ್ಲ. ಹಾಗೆಯೇ ಪುರುಷ ಪ್ರಧಾನ ವ್ಯವಸ್ಥೆ ಪರಂಪರೆ, ಸಂಪ್ರದಾಯದ ಹೆಸರಿನಲ್ಲಿ ಹೆಣ್ಣನ್ನು ಬಂಧಿಸಿದ್ದರೂ ಸಾಮಾಜಿಕ ಕಟ್ಟುಪಾಡುಗಳಿಗೆ ಸಿಕ್ಕಿಬಿದ್ದು ನಲುಗದೆ ಬಂಡಾಯ ಮನೋಧರ್ಮವನ್ನೊಂದಿರುವುದು ವಿಶಿಷ್ಟವಾಗಿದೆ. ಈ ಮೇಲಿನ ಕಥೆಗಳಲ್ಲಿ ಇಂತಹ ಎರಡೂ ಬಗೆಯ ಪಾತ್ರಗಳನ್ನು ಲೇಖನದ ಮೂಲಕ ವಿವೇಚಿಸುವ ಪ್ರಯತ್ನ ಮಾಡಲಾಗಿದೆ.
APA, Harvard, Vancouver, ISO, and other styles
40

ರಮೇಶ್. "ನಿರಂಜನರ ಬರವಣಿಗೆಯಲ್ಲಿ ಮಾರ್ಕ್ಸ್‌ವಾದ". AKSHARASURYA 06, № 02 (2025): 75 to 83. https://doi.org/10.5281/zenodo.15124060.

Full text
Abstract:
ನಿರಂಜನರು ಸಾಹಿತ್ಯವಲಯದಲ್ಲಿ ಉಂಟುಮಾಡಿದ ಸಾಮಾಜಿಕ ಹೋರಾಟ ಬಹಳ ಮುಖ್ಯವಾದುದು. ಸಾಹಿತ್ಯ ಮತ್ತು ಬದುಕನ್ನು ಏಕ ರೀತಿಯಲ್ಲಿ ಕಂಡುಕೊಂಡವರು. ಸಾಮಾಜಿಕ ಬದ್ಧತೆಯನ್ನು ಕೊನೆಯವರೆಗೂ ಉಳಿಸಿಕೊಂಡವರು. ಬಾಲ್ಯದಲ್ಲಿ ಗಾಂಧಿವಾದಕ್ಕೆ ಮನಸೋತು, ಅನಂತರ ಸಮಾಜವಾದದತ್ತ ಒಲವು ಬೆಳಸಿಕೊಂಡರು. ಹರೆಯದಲ್ಲಿ ಸಮತಾವಾದದ ಸಿದ್ದಾಂತಗಳಿಂದ ಪ್ರಭಾವಿತರಾಗಿ ಮಾರ್ಕ್ಸ್‌ವಾದಿಯಾಗಿ ಕಮ್ಯೂನಿಸ್ಟ್ ಪಕ್ಷದ ಸಕ್ರಿಯ ಸದಸ್ಯರಾಗಿ ದುಡಿದವರು ನಿರಂಜನರು. ʼಸ್ವಾತಂತ್ರ್ಯ ಚಳವಳಿ, ಏಕೀಕರಣ ಚಳವಳಿ, ಹಿಂದೂ ಸಾಂಸ್ಕೃತಿಕ ಪುನರುಜ್ಜೀವನ ಚಳವಳಿಗಳು ಸೊಕ್ಕೇರಿ ಒಟ್ಟಿಗೆ ಕ್ರಿಯಾನಿರತವಾಗಿದ್ದಾಗ, ಮಾರ್ಕ್ಸ್‌ವಾದದಿಂದ ಆಕರ್ಷಿತವಾಗಿ, ಅಖಿಲಭಾರತ ಚಳವಳಿಯ ಒಂದು ಭಾಗವಾಗಿ ಕನ್ನಡ ಪ್ರಗತಿಶೀಲ ಚಳವಳಿಯು ಹುಟ್ಟಿಕೊಂಡಿತು. ಶಿವರಾಯರು ಬೆಳೆಬೆಳೆಯುತ್ತಾ ಗಾಂಧೀ ಪ್ರಭಾವ ಹೆಚ್ಚಾಗ ತೊಡಗಿತ್ತು ಸಾಮ್ರಾಜ್ಯಶಾಹಿಯನ್ನು ಖಂಡಿಸುತ್ತಿದ್ದು ಹರಿಜನ ಕೇರಿಗಳಲ್ಲಿ ನೈಮರ್ಲ್ಯದ ಕೆಲಸವನ್ನು ಕೈಗೊಂಡದ್ದು ಎಲ್ಲೆಡೆ ಧೈರ್ಯದಿಂದ ಬಂಡವಾಳಶಾಹಿ ವಿರುದ್ಥ ಕಿಡಿಕಾರುತ್ತ ಮುನ್ನೆಡೆಯುತ್ತಿದ್ದು ನೀಲೇಶ್ವರ ಮೊದಲ ಬಾರಿಗೆ ಕೇಳಿದ ʼಇಂಕ್ವಿಲಾಬ್ ಜಿಂದಾಬಾದ್’ ಕಾರ್ಮಿಕ ವಿದ್ಯಾರ್ಥಿಗಳನ್ನು ಸಂಘಟಿಸುವ ರೀತಿ ಹೊಸದಾಗಿ ಕಂಡದ್ದು ಗಾಂಧೀವಾದದ ಬಗೆಗಿನ ಮೋಹಕ ಕೊನೆಗೊಂಡು ಬ್ರಿಟಿಷರಿಂದ ಮುಕ್ತಿ ಹೊಂದಿದ ಭಾರತ ದೇಶದಲ್ಲಿ ಹೊಸ ವ್ಯವಸ್ಥೆಯ ನಿರ್ಮಾಣಕ್ಕೆ ಹಾತೊರೆದು ಮಾರ್ಕ್ಸ್‌ವಾದವನ್ನು ಅವಲಂಭಿಸಿದರು. ಮಾರ್ಕ್ಸ್‌ವಾದ ಎಂದರೆ ಮಾನವೀಯತೆ ಶೋಷಣೆ ವಿರುದ್ಧ ಬಂಡೆದ್ದ ನ್ಯಾಯವಾದ ಒಂದು ಪಥ ದುಡಿಯುವ ಕೆಲಸಕ್ಕೆ ಸೂಕ್ತವಾದ ಕೂಲಿ ಕೇಳುವ ಹಕ್ಕು, ಬಸವಣನ ಸಮಾನತಾ ಧರ್ಮ ಸಕಲ ಜೀವಿಗಳಿಗೆ ಲೇಸನೇ ಬಯಸುವ ಮನುಷ್ಯತ್ವ ಎಲ್ಲವನ್ನು ಮಾರ್ಕ್ಸ್‌ವಾದ ಒಳಗೊಂಡಿದೆ. ನಮ್ಮ ಸುತ್ತ ಪ್ರಪಂಚವನ್ನು ಜಾಗೃಕತೆಯಿಂದ ಪರಿಶೀಲಿಸಿದರೆ ಅದರಲ್ಲಿ ಅಡಕವಾಗಿರುವ ಎಲ್ಲಾ ವಸ್ತುಗಳು ಅದರಲ್ಲಿ ಸಂಭವಿಸುವ ಎಲ್ಲ ಇಂದ್ರೀಯ ಗೋಚರ ಘಟನೆಗಳೂ ಭೌತಿಕವಾದವು ಅಥವಾ ಮಾನಸಿಕವಾದವು ಎಂದು ತಿಳಿದುಬರುತ್ತದೆ. ಮಾರ್ಕ್ಸ್‌ವಾದವು ಅರಿವಿನ ವಿಧಾನವನ್ನು ಪ್ರಭಾವಿಸುವ ನಿಯಮವನ್ನು ಸಹ ಪರಿಶೀಲಿಸುತ್ತದೆ. ಸಾಮಾಜಿಕ ಜೀವನದಲ್ಲಿ ಪ್ರಗತಿಪರ ಮತ್ತು ಪ್ರತಿಗಾಮಿ ಶಕ್ತಿಗಳ ಒಂದನ್ನೊಂದು ಸಂಘರ್ಷಿಸುತ್ತಲೇ ಇರುತ್ತವೆ. ಮಾರ್ಕ್ಸ್‌ವಾದ ಎಲ್ಲ ರೀತಿಯ ಸಮಾಜಗಳ ಮೂಲಾಧಾರವಾದ ಅಂದರೆ ಜನರು ತಮ್ಮ ಜೀವನ ಸಾಗಿಸಲು ಕೈಗೊಳ್ಳಬೇಕಾದ ಚಟುವಟಿಕೆಗಳನ್ನು ಪರಿಶೀಲಿಸಿ ಅದರ ಮೂಲಕ ಮಾನವ ಉತ್ಪಾದನಾ ವಿಧಿಯಲ್ಲಿ ಇತರರೊಡನೆ ಯಾವ ರೀತಿಯ ಸಂಬಂಧ ಹೊಂದಿರುತ್ತಾನೆ ಎಂಬುದನ್ನು ಪರಿಶೀಲಿಸುತ್ತದೆ. 
APA, Harvard, Vancouver, ISO, and other styles
41

ಸಂತೋಷ್‌, ಕುಮಾರ್‌ ಆರ್‌.ಎಂ. "ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು". AKSHARASURYA JOURNAL 06, № 04 (2025): 78 to 89. https://doi.org/10.5281/zenodo.15490942.

Full text
Abstract:
ವಚನ ಸಾಹಿತ್ಯವು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅಮೂಲ್ಯ ಸಂಪತ್ತಾಗಿದೆ. ಇದು 12ನೇ ಶತಮಾನದಲ್ಲಿ ಜನಿಸಿದ ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದ್ದು, ಬಸವಾದಿ ಶರಣರು ಇದನ್ನು ಜನಸಾಮಾನ್ಯರಿಗೆ ತಲುಪುವಂತೆ ಮಾಡಿದರು. ವಚನ ಸಾಹಿತ್ಯವು ಧಾರ್ಮಿಕ, ಸಾಮಾಜಿಕ ಮತ್ತು ದಾರ್ಶನಿಕ ಚಿಂತನೆಗಳನ್ನು ಒಳಗೊಂಡಿದೆ ಮತ್ತು ಭಕ್ತಿ ಚಳವಳಿಯ ಪ್ರಮುಖ ಭಾಗವಾಗವೂ ಆಗಿದೆ. ವಚನ ಸಾಹಿತ್ಯವು ʼಸಮಾನತೆʼ, ʼಶ್ರಮʼ-ʼಕಾಯಕʼ ಮತ್ತು ʼಭಕ್ತಿʼಯ ಮಹತ್ವ, ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಶರಣರು ಜಾತಿ, ಲಿಂಗ, ಆರ್ಥಿಕ ಸ್ಥಿತಿ ಮುಂತಾದ ಬೇಧಭಾವಗಳನ್ನು ತಿರಸ್ಕರಿಸಿದರು. ಅಲ್ಲದೆ ಇವರು ಜಾತಿ-ವರ್ಣಭೇದಗಳ ವಿರೋಧವಾಗಿಯೂ ಮತ್ತು ಸಮಾನತೆಗೆ ಹೆಚ್ಚಿನ ಮನ್ನಣೆಯನ್ನು ನೀಡಿದರು.ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮೊದಲಾದ ಶರಣರು “ಕಾಯಕವೇ ಕೈಲಾಸ”, “ದಾಸೋಹದ ತತ್ತ್ವ”, “ಅನುಭವ ಮಂಟಪ”ದ ಪರಿಕಲ್ಪನೆಯ ಮೂಲಕ ಪ್ರಜಾಪ್ರಭುತ್ವದ ನ್ಯಾಯಯುತ ಸಮಾಜದ ನಿರ್ಮಾಣಕ್ಕೆ ಹೇಗೆ ಶ್ರಮಿಸಿದರು ಎಂಬುದನ್ನು ಭಿನ್ನ ವಚನಕಾರರ ಹಿನ್ನೆಲೆಯಲ್ಲಿ ವಿವರಿಸಿ, ವಿಶ್ಲೇಷಿಸುವುದಾಗಿದೆ. ವಚನಗಳಲ್ಲಿ ಪುರುಷ ಮತ್ತು ಮಹಿಳೆಯ ನಡುವಿನ ಭೇದವನ್ನು ಪ್ರಶ್ನಿಸಿ, ಶಿವಶರಣ ಭಕ್ತರ ಸಮುದಾಯದಲ್ಲಿ ಪ್ರತಿಯೊಬ್ಬರಲ್ಲೂ ಸಮಾನತೆಯನ್ನು ಕಾಣುತ್ತಾ ಪ್ರಾಮಾಣಿಕ ಶ್ರಮ ಮತ್ತು ಸಮಾಜ ಸೇವೆಯ ಪ್ರಾಮುಖ್ಯತೆಯನ್ನು ವಿಶ್ಲೇಷಿಸಲಾಗಿದೆ. ಈ ಸಾಹಿತ್ಯ ಪ್ರಕಾರವು ಅಂತರಂಗ ಮತ್ತು ಬಹಿರಂಗದ ಪ್ರಾಮುಖ್ಯತೆ, ಅವು ದೈನಂದಿನ ಜೀವನದಲ್ಲಿ ಹೇಗೆ ದೀರ್ಘಕಾಲಿಕವಾಗಿ ವ್ಯಕ್ತಿಯ ಆಂತರಿಕ ಹಾಗೂ ಬಾಹ್ಯ ಬೆಳವಣಿಗೆಯ ಮೇಲೆ ಪ್ರಭಾವ ಬೀರುವುದು ಎಂಬುದನ್ನು ಚರ್ಚಿಸಲಾಗುವುದು. ವಚನಗಳು ಸತ್ಯ ಮತ್ತು ಚಿತ್ತ ಶುದ್ಧ ಭಕ್ತಿಯ ತತ್ವಗಳ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದ ಬಗೆ ಹೇಗೆ? ಮತ್ತು ಪ್ರಸ್ತುತ ಸಂದರ್ಭಕ್ಕೂ ವಚನ ಸಾಹಿತ್ಯದ ತತ್ತ್ವಗಳು ಸಾಮಾಜಿಕ ನ್ಯಾಯದ ಪರಿಪ್ರೇಕ್ಷ್ಯದಲ್ಲಿ ಅವುಗಳ ಪ್ರಾಧಾನ್ಯತೆಯನ್ನು ಪ್ರಸ್ತುತತೆಯನ್ನು ಕುರಿತು ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ. ಈ ಸಾಹಿತ್ಯವು ಶರಣ ಪರಂಪರೆಯ ಜೀವನ ಶೈಲಿಯನ್ನು ಪ್ರತಿಬಿಂಬಿಸುವುದರೊಂದಿಗೆ, ನೈತಿಕ ಜೀವನ ಮೌಲ್ಯಗಳನ್ನು ಬೋಧಿಸುವ ಪ್ರಭಾವಿ ಮಾಧ್ಯಮವಾಗಿದೆ. ವಚನ ಸಾಹಿತ್ಯವು ಕೇವಲ ಧಾರ್ಮಿಕ ಮತ್ತು ಸಾಹಿತ್ಯಿಕ ಪ್ರಕಾರವಲ್ಲದೆ, ಅದು ಸಾಮಾಜಿಕ ಕ್ರಾಂತಿಯ ಸಂಕೇತವಾಗಿ, ಮಾನವೀಯತೆಯ ಸಿದ್ಧಾಂತಗಳ ಸಾರಥಿಯಾಗಿ ಹೇಗೆ ನಿಲ್ಲಬಲ್ಲದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. 
APA, Harvard, Vancouver, ISO, and other styles
42

ಶಂಭುಲಿಂಗ, ಹುಬ್ಬಳ್ಳಿ. "ಶಿವಶರಣರ ದೃಷ್ಟಿಯಲ್ಲಿ ಆರ್ಥಿಕ ಸಿದ್ಧಾಂತ". AKSHARASURYA 03, № 06 (2024): 137 to 142. https://doi.org/10.5281/zenodo.11127274.

Full text
Abstract:
12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಅಂದಿನ ಸಮಾಜದ ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದಂತಹ ಸುಧಾರಣೆಯನ್ನು ತರಲು ಬಯಸಿದರು. ಪ್ರತಿಯೊಬ್ಬ ವ್ಯಕ್ತಿಯೂ ಕಾಯಕದಲ್ಲಿ ತೊಡಗಬೇಕು. ಆ ಕಾಯಕದಿಂದ ಬಂದ ಹಣದಿಂದ ತನ್ನ ಅಗತ್ಯತೆಗಳನ್ನು ಪೂರೈಸಿಕೊಂಡು ಉಳಿದ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಸದ್ವಿನಿಯೋಗ ಮಾಡಬೇಕು ಎಂಬುದು ಶರಣರ ಆಲೋಚನೆಯಾಗಿತ್ತು. ಜೊತೆಗೆ ಸಮಾಜದಲ್ಲಿನ ಸಂಪತ್ತು ಎಲ್ಲ ಜನರಿಗೆ ಸಮಾನವಾಗಿ ಹಂಚಿಕೆ ಆಗಬೇಕು ಎಂಬ ಪರಿಕಲ್ಪನೆಯನ್ನು ಹೊಂದಿದ್ದರು. ಅಂತೆಯೆ ‘ಶಿವಶರಣರ ದೃಷ್ಟಿಕೋನದಲ್ಲಿ ಆರ್ಥಿಕ ಸಿದ್ದಾಂತ’ ಎಂಬ ಈ ಲೇಖನದಲ್ಲಿ ಅರ್ಥಶಾಸ್ತ್ರದ ಪರಿಕಲ್ಪನೆಗಳಾದ ಕೃಷಿ, ಉದ್ಯೋಗ, ಉತ್ಪಾದನೆ, ವಿತರಣೆ, ಆದಾಯ, ಅನುಭೋಗ, ಉಳಿತಾಯ ಮುಂತಾದ ಅಂಶಗಳ ಬಗ್ಗೆ ಬೆಳಕನ್ನು ಚೆಲ್ಲಲಾಗಿದೆ. ಉತ್ಪಾದನಾ ಸಿದ್ದಾಂತದಲ್ಲಿ ಕಾಯಕವು ಮಹತ್ವದ ಪಾತ್ರವನ್ನು ವಹಿಸುತ್ತದೆ. ‘ಕಾಯಕವೇ ಕೈಲಾಸ’ ಎಂಬ ಶರಣರ ಸಿದ್ದಾಂತವನ್ನು ಅರ್ಥಶಾಸ್ತ್ರ ದೃಷ್ಟಿಕೋನದಿಂದ ನೋಡಲು ಪ್ರಯತ್ನಿಸಲಾಗಿದೆ. ಅಂದರೆ ಸಮಾಜದಲ್ಲಿ ಆರ್ಥಿಕ ಸಮಾನತೆಯು ಸಮಾಜದ ಏಳಿಗೆಗೆ ಭದ್ರ ಬುನಾದಿ ನೀಡುತ್ತದೆ ಎಂಬ ವಿಷಯದ ಬಗ್ಗೆ ವಿವರಿಸಲಾಗಿದೆ. ಪ್ರಸ್ತುತ ಆಧುನಿಕ ಅರ್ಥವ್ಯವಸ್ಥೆ ಮತ್ತು ಶರಣರ ಆರ್ಥಿಕ ಚಿಂತನೆಗಳಲ್ಲಿ ಹಣ ಬದುಕಿನ ಅವಿಭಾಜ್ಯ ಅಂಗ ಎಂಬುದನ್ನು ಅಲ್ಲಗಳೆದು ಸಂಪತ್ತಿನ ಸಂಗ್ರಹವನ್ನು ಸಮಾಜದ ಅಭಿವೃದ್ಧಿಗೆ ತೊಡಗಿಸಿದಲ್ಲಿ ದೇಶದ ಕಲ್ಯಾಣ ಸಾಧ್ಯವೆಂಬ ಅರ್ಥಶಾಸ್ತ್ರದ ತತ್ವ ಸಿದ್ಧಾಂತವನ್ನು ಸ್ಪಷ್ಟವಾಗಿ ವಿಶ್ಲೇಷಿಸಲಾಗಿದೆ.
APA, Harvard, Vancouver, ISO, and other styles
43

ಗೀತಾ, ಎ.ಸಿ. "ಅಕ್ಕಮಹಾದೇವಿಯ ವಚನಗಳಲ್ಲಿ ಸ್ತ್ರೀ ಚಿಂತನೆಗಳು". AKSHARASURYA JOURNAL 06, № 04 (2025): 42 to 48. https://doi.org/10.5281/zenodo.15490848.

Full text
Abstract:
ಹನ್ನೆರಡನೆಯ ಶತಮಾನವೆಂದರೆ; ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಸಾಹಿತ್ಯಿಕ ಕ್ಷೇತ್ರದಲ್ಲಿ ಬದಲಾವಣೆಗೊಂಡ ಕಾಲ. ಅದನ್ನು ಕ್ರಾಂತಿ ಎಂದೇ ಕರೆಯಬೇಕಾಗುತ್ತದೆ. ಹಿಂದೆ ಸಮಾಜದಲ್ಲ್ಲಿದ್ದ ಅಸಮಾನತೆ, ಶೋಷಣೆಗಳನ್ನು ಕಂಡು ಅನುಭವಿಸಿದ್ದ ಶರಣ, ಶರಣೆಯರು ಮೇಲು-ಕೀಳು ಸ್ತ್ರೀ-ಪುರುಷ ಇತ್ಯಾದಿ ಭೇದ ರಹಿತವಾದ ವರ್ಗರಹಿತವಾದ ಸಮಾಜವನ್ನು ಕಟ್ಟಲು ಪ್ರಯತ್ನಿಸಿದರು. 12ನೇ ಶತಮಾನದ ಪ್ರಸಿದ್ಧ ವಚನಕಾರ್ತಿ ಅಕ್ಕಮಹಾದೇವಿ. ಬಸವಣ್ಣನವರ ಸಮಕಾಲೀನಳಾಗಿ ಬದುಕಿದಳು. ಈಕೆ ಶಿವಶರಣೆಯಾಗಿ, ವಚನಕಾರ್ತಿಯಾಗಿ, ಚೆನ್ನಮಲ್ಲಿಕಾರ್ಜುನನ ಭಕ್ತೆಯಾಗಿ ಪ್ರಸಿದ್ಧಳಾದವಳು. ಈಕೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿ ಎಂಬ ಗ್ರಾಮದಲ್ಲಿ ನಿರ್ಮಲ ಮತ್ತು ಸುಮತಿಯರ ಮಗಳಾಗಿ ಜನಿಸಿದಳು. ಬಾಲ್ಯದಲ್ಲೇ ಶಿವಭಕ್ತಿಯನ್ನು ಹೊಂದಿದ್ದ ಈಕೆಗೆ ಶಿವಪೂಜೆ ಶಿವಧ್ಯಾನಗಳೇ ಆಟಗಳಾಗಿದ್ದವು. ಪರಮಾತ್ಮನಾದ ಚೆನ್ನಮಲ್ಲಿಕಾರ್ಜುನನ ಮೇಲೆ ಅತೀವವಾದ ಪ್ರೀತಿ ಇಟ್ಟುಕೊಂಡಿದ್ದ ಈಕೆ ವೈವಾಹಿಕ ಬದುಕನ್ನು ತ್ಯಜಿಸಿ ದೇವರ ಸೇವೆಗೆ ತನ್ನನ್ನು ಅರ್ಪಿಸಿಕೊಂಡಳು. ಇದು ಮಹಿಳೆರ ಆಯ್ಕೆಯ ಸ್ವಾತಂತ್ರ್ಯವನ್ನು ತೋರಿಸುತ್ತದೆ. ಇವರ ವಚನಗಳು ಸಾಮಾಜಿಕ ಸುಧಾರಣೆಗೆ ಪ್ರೇರಣೆಯಾಗಿದ್ದು, ವಿಶೇಷವಾಗಿ ಸ್ತ್ರೀಯರ ಸ್ಥಿತಿ, ಸ್ವಾತಂತ್ರ್ಯ ಮತ್ತು ಅವರ ಮನೋಭಾವನೆಗಳಿಗೆ ಮಹತ್ವವನ್ನು ನೀಡಿವೆ. ಅಕ್ಕಮಹಾದೇವಿ ದೈಹಿಕ ಸೌಂದರ್ಯಕ್ಕೆ ಪ್ರಾಮುಖ್ಯತೆ ನೀಡದೆ, ಅದನ್ನು ಕ್ಷಣಿಕ ಮತ್ತು ವ್ಯರ್ಥವೆಂದು ಪ್ರತಿಪಾದಿಸುತ್ತಾರೆ. ಪುರುಷ ಪ್ರಧಾನ ಸಮಾಜದಲ್ಲಿ ಸಮಾಜ ಕಂಟಕರನ್ನು, ಸ್ತ್ರೀ ಶೋಷಕರನ್ನು ಹತ್ತಿಕ್ಕಿ ಇಲ್ಲ್ಲಿಯೇ ಇದ್ದು ಗೆಲ್ಲಬೇಕೆಂಬ ಆಶಯ ಅಕ್ಕಮಹಾದೇವಿಯದು. 
APA, Harvard, Vancouver, ISO, and other styles
44

ಎನ್, ಡಾ ಗಂಗಾಧರ ರೆಡ್ಡಿ, ಡಾ ಲೋಕೇಶ ಎಂ.ಯು та ಶ್ವೇತಾ ಜಿ. "ಗ್ರಾಮೀಣ ಜನರ ಸಾಮಾಜಿಕ ಜೀವನದ ಮೇಲೆ ಮರಳು ಗಣಿಗಾರಿಕೆಯ ಪ್ರಭಾವ". International Journal of Kannada Research 11, № 2 (2025): 123–31. https://doi.org/10.22271/24545813.2025.v11.i2b.1117.

Full text
APA, Harvard, Vancouver, ISO, and other styles
45

ಡಾ., ಬಸವರಾಜ ಯು. "ಬಳ್ಳಾರಿ ಜಿಲ್ಲೆಯಲ್ಲಿ ಒಣಭೂಮಿ ಬೇಸಾಯಗಾರರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳು". International Journal of Advance Research in Multidisciplinary 2, № 4 (2024): 74–78. https://doi.org/10.5281/zenodo.14343817.

Full text
Abstract:
ಮಾನವ ಸಮಾಜದಲ್ಲಿ ಸಂಘ ಜೀವಿಯಾಗಿ ಜೀವನ ನೆಡಸುತ್ತಿದ್ದಾನೆ. ಸಾಮಾಜವನ್ನು ಬಿಟ್ಟು ಬದುಕಲಾರನು. ಈ ಸಮಾಜದಲ್ಲಿ ಗೌರವಯುತವಾಗಿ ಜೀವನ ಮಾಡಲು ಕೆಲವು ಅವಶ್ಯಕವಾದ ಅಂಶಗಳು ಮುಖ್ಯವಾಗುತ್ತವೆ. ಏಕೆಂದರೆ ಇವು ಜೀವನಕ್ಕೆ ಅವಶ್ಯಕವಾಗಿರುವಂತಹ ಸಂಪನ್ಮೂಲಗಳಾಗಿವೆ. ಎಲ್ಲಾ ಸಂಪನ್ಮೂಲಗಳನ್ನು ಒಬ್ಬ ವ್ಯಕ್ತಿಯಿಂದ ಉತ್ಪಾದಿಸಲು ಸಾಧ್ಯವಿಲ್ಲ. ಅದ್ದರಿಂದ ಇತರೆ ಸಮಾಜದಲ್ಲಿನ ವ್ಯಕ್ತಿಗಳು ಕೂಡಿ ಕೆಲಸಮಾಡಿದರೆ ಸಂಪನ್ಮೂಲಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ. ಅದೇ ರೀತಿಯಲ್ಲಿ ಮಾನವ ಅಭಿವೃದ್ಧಿಗೆ ಅವಶ್ಯಕವಾದ ಸುಸ್ಥಿರ ಅಭಿವೃದ್ಧಿ ಗುರಿಗಳಾದ ಬಡತನ ನಿರ್ಮೂಲನೆ, ಹಸಿವುಮುಕ್ತ, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಸ್ವಚ್ಛ ನೀರು, ನೈರ್ಮಲ್ಯ, ಅಗ್ಗವಾದ ಬದುಕು ಶುದ್ಧ ಗೌರವಯುತ ಕೆಲಸ ಮತ್ತು ನೆರವು, ಉದ್ಯಮ, ಆವಿಷ್ಕಾರ ಮತ್ತು ಮೂಲ ಸೌಕರ್ಯಗಳು, ಅಸಮಾನತೆ, ಸುಸ್ಥಿರ ನಗರಗಳು ಮತ್ತು ಸಮುದಾಯಗಳು, ಜವಾಬ್ದಾರಿಯುತ ಬಳಕೆ ಮತ್ತು ಉತ್ಪಾದನೆ, ಹವಾಮಾನದ ಬಗ್ಗೆ ಕ್ರಮ, ಜಲದ ಜೀವರಾಶಿ, ಭೂಮಿ ಮೇಲಿನ ಜೀವರಾಶಿ, ಶಾಂತಿ ನ್ಯಾಯ ಮತ್ತು ಸದೃಡ ಸಂಸ್ಥೆಗಳು, ಗುರಿ ಮುಟ್ಟಲು ಸಹಭಾಗಿತ್ವ, ಇವುಗಳು ಅವಶ್ಯಕವಾದ ಸುಸ್ಥಿರ ಅಭಿವೃದ್ಧಿ ಗುರಿಗಳು ಒಣಭೂಮಿ ಬೇಸಾಯಗಾರರಿಗೆ ದೊರೆತಿರುವುದನ್ನು ಅಧ್ಯಯನ ಮಾಡಲು ಸಾಮಾಜಿಕ, ಅರ್ಥಿಕ, ಸಮಾನತೆಯನ್ನು ಈ ಅಧ್ಯಾಯದಲ್ಲಿ ಒಳಪಡಿಸಿದ್ದು.
APA, Harvard, Vancouver, ISO, and other styles
46

ಶ್ರೀಧರ್, ಆರ್. "ಸಿದ್ಧಲಿಂಗಯ್ಯನವರ ಕಾವ್ಯ: ಸಾಮಾಜಿಕ ಕ್ರೋಧದ ನೆಲೆಯಿಂದ ಆಧ್ಯಾತ್ಮಿಕ ಅನ್ವೇಷಣೆಯ ಕಡೆಗೆ". AKSHARASURYA JOURNAL 05, № 06 (2025): 01 to 07. https://doi.org/10.5281/zenodo.14788682.

Full text
Abstract:
ಕವಿ ಸಿದ್ಧಲಿಂಗಯ್ಯನವರ ಮೊದಲ ʼಹೊಲೆಮಾದಿಗರ ಹಾಡುʼ ಕವನ ಸಂಕಲನದಿಂದ ಅವರ ಕಡೆಯ ʼಬೋಧಿವೃಕ್ಷದ ಕೆಳಗೆʼ ಸಮಗ್ರ ಕಾವ್ಯದ ಶೀರ್ಷಿಕೆಗಳನ್ನು ರೂಪಕದಂತೆ ಪರಿಭಾವಿಸುವುದಾದರೆ, ಸಮಾಜದಲ್ಲಿನ ಶೋಷಣೆ, ತಾರತಮ್ಯ, ಅಸಮಾನತೆಯಿಂದ ಕನಲಿ ಸಂಘರ್ಷದ ಪ್ರತಿಕ್ರಿಯೆ ಹಾಗೂ ಕೀಳರಿಮೆಯಿಂದ ನರಳುತ್ತಿದ್ದ ವಿಸರ್ಜಿತ ಲೋಕದಿಂದ ಹುಟ್ಟಿದ ಬಂಡಾಯದಂತೆ ಸ್ಫೋಟಿಸಿದ ಅವರ ಕವಿತೆಗಳು ಸಮ ಸಮಾಜದ ಹಂಬಲವಾದ ಸಾಮರಸ್ಯದ ಕಡೆಗೆ ಸಾಗಿರುವ ಸೃಜನಶೀಲ ಪಯಣದ ವಿಕಾಸ ಎಂದು ವ್ಯಾಖ್ಯಾನಿಸಬಹುದು. ಇಲ್ಲಿ ಆತ್ಯಂತಿಕ ತೀವ್ರತೆಯಿಂದ ಹುಟ್ಟಿದ ಬಂಡಾಯ ಸಮುದಾಯದಲ್ಲಿ ಸ್ವಾಭಿಮಾನ ಹಾಗೂ ಮಾನವ ಘನತೆಯನ್ನು ಮೂಡಿಸುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ಸಮಷ್ಟಿ ಬದುಕನ್ನು ಕುರಿತ ಗಾಢ ವಿಷಾದ ಈ ಅನ್ಯಾಯದ ವ್ಯವಸ್ಥೆ ಬದಲಾಗಬೇಕೆಂಬ ಹಂಬಲ ಇಲ್ಲಿನ ಕವಿತೆಗಳು ಪ್ರತಿಪಾದಿಸುವ ನಿಲುವು.ಸಿದ್ಧಲಿಂಗಯ್ಯನವರ ಕವಿತೆಗಳಿಗೆ ಮುಖಾಮುಖಿಯಾಗುವುದು ಎಂದರೆ, 1970 ರ ದಶಕದ ಜನಪರ ಚಳವಳಿಗಳು, ಹೋರಾಟಗಳೊಂದಿಗೆ ಮುಖಾಮುಖಿಯಾಗುವುದು ಎಂದರ್ಥ. ಈ ನೆಲದ ಅಸ್ಪೃಶ್ಯರ, ದಮನಿತರ, ಶ್ರಮಿಕರ, ನೊಂದವರ ನಿಟ್ಟುಸಿರು ಅಕ್ಷರದ ಮೂಲಕ ಜೀವತಳೆದಿರುವ ಆದಿಮ ಪರಂಪರೆಯೊಂದಿಗೆ ಅನುಸಂಧಾನ ಮಾಡುವುದು ಎಂದರ್ಥ.‌ ಸಿದ್ಧಲಿಂಗಯ್ಯನವರು ಕನ್ನಡದ ಪ್ರಥಮ ದಲಿತ ಕವಿಯೇ ಅಲ್ಲವೇ ಎನ್ನುವುದು ಚರ್ಚಾಸ್ಪದವಾಗಿರಬಹುದು. ಆದರೆ ದಲಿತ-ಬಂಡಾಯ ಸಾಹಿತ್ಯ ಹಾಗೂ ಚಳವಳಿಗೆ‌ ತಮ್ಮ ಹೋರಾಟದ ಹಾಡುಗಳ ಮೂಲಕ ಸ್ಥಾಪಿತ ಮೌಲ್ಯಗಳು ಹಾಗೂ ಯಾಜಮಾನ್ಯ ಸಂಸ್ಕೃತಿಗೆ ಪ್ರತಿರೋಧವಾಗಿ ಅಲಕ್ಷಿತರ ಸಮಷ್ಟಿ ಪ್ರಜ್ಞೆಯನ್ನು ಹಕ್ಕೊತ್ತಾಯದ ಧಾಟಿಯಲ್ಲಿ ಅಭಿವ್ಯಕ್ತಿಸಿದವರಲ್ಲೊಬ್ಬರು ಎಂಬುದು ನಿರ್ವಿವಾದ. ಪ್ರಸ್ತುತ ಲೇಖನದಲ್ಲಿ ʼಹೊಲೆಮಾದಿಗರ ಕೇರಿಯಿಂದ ಬುದ್ಧನೆಡೆಗೆʼ ಸಾಗಿರುವ ಕವಿ ಸಿದ್ಧಲಿಂಗಯ್ಯನವರ ಸೃಜನಶೀಲ ಕಾವ್ಯಯಾನವನ್ನು ವಿಶ್ಲೇಷಿಸುವ ಪ್ರಯತ್ನ ಮಾಡಲಾಗಿದೆ. 
APA, Harvard, Vancouver, ISO, and other styles
47

ತಾರಾಮಣಿ, ಆರ್. "ಗಿರೀಶ್ ಕಾರ್ನಾಡರ ನಾಗಮಂಡಲ ನಾಟಕ: ಸಂಕೇತಗಳ ಪರಾಮರ್ಶೆ". AKSHARASURYA 04, № 02 (2024): 113 to 124. https://doi.org/10.5281/zenodo.11525902.

Full text
Abstract:
ಪ್ರಮುಖ ಚಿಂತಕರಲ್ಲಿ ಒಬ್ಬರಾದ ಎ ಕೆ ರಾಮಾನುಜನ್‌ ಅವರು ಹೇಳಿದ ಜನಪದ ಕಥೆಯನ್ನು ಆಧರಿಸಿ ನಾಟಕ ಕ್ಷೇತ್ರದ ಧೀಮಂತ ಪ್ರತಿಭೆಗಳಾದ ಗಿರೀಶ್‌ ಕಾರ್ನಾಡರು ನಾಗಮಂಡಲ ನಾಟಕವನ್ನೂ, ಕಂಬಾರರು ಸಿರಿಸಂಪಿಗೆ ನಾಟಕವನ್ನೂ ರಚಿಸಿದ್ದಾರೆ. ಎರಡು ನಾಟಕಗಳ ವಸ್ತು ಒಂದೇ ಆದರೂ ನಿರೂಪಣಾ ಶೈಲಿ, ನಾಟಕದ ತಂತ್ರಗಾರಿಕೆ ಹಾಗೂ ಧೋರಣೆಗಳು ಭಿನ್ನವಾಗಿವೆ. ನಾಟಕಗಳು ಮೇಲ್ನೋಟಕ್ಕೆ ಸರಳವಾದ ವಸ್ತುವನ್ನು ಒಳಗೊಂಡಂತೆ ಕಂಡರೂ ಓದುಗರಿಗೆ ಒಂದು ಸುಂದರವಾದ, ಅದ್ಭುತವಾದ ಸತ್ಯದ ಅನಾವರಣ ಮಾಡಿಸುತ್ತದೆ. ನಾಗಮಂಡಲ ನಾಟಕವು ಸಾಂಸ್ಕೃತಿಕ, ಧಾರ್ಮಿಕ, ಮಾನಸಿಕ ಮತ್ತು ಸಾಮಾಜಿಕ ಜೀವನವನ್ನು ಸಂಕೇತಗಳ ಬಳಕೆಯ ಮೂಲಕ ಪ್ರತಿಬಿಂಬಿಸುತ್ತದೆ. ನಾಟಕವು ಪಿತೃಪ್ರಧಾನ ವ್ಯವಸ್ಥೆಯಲ್ಲಿನ ಪುರುಷನ ನ್ಯೂನ್ಯತೆಗಳನ್ನು, ವರ್ತನೆಯ ರೀತಿಯನ್ನು ಹಾಗೂ ಪುರಾತನ ಸಾಂಪ್ರದಾಯಿಕ ಮೌಲ್ಯಗಳು ಮತ್ತು ನಂಬಿಕೆಗಳ ಬಗೆಗೆ ದೋಷಾರೋಪಣೆ ಮಾಡುತ್ತದೆ. ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಹಲವಾರು ಪರಿಕಲ್ಪನೆಗಳಾದ ಮಹಿಳೆಯರ ಸ್ಥಾನಮಾನ, ಗಂಡು-ಹೆಣ್ಣಿನ ಸಂಬಂಧ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಚಾರಗಳು ಮಹಿಳೆಯರ ಮೇಲೆ ಉಂಟುಮಾಡಬಹುದಾದ ಪರಿಣಾಮ ಮತ್ತು ಪ್ರಭಾವ ಮುಂತಾದ ವಿಚಾರಗಳನ್ನು ನಾಟಕವು ಚರ್ಚಿಸುತ್ತದೆ. ನಾಟಕದಲ್ಲಿ ಬಳಸುವ ಸಾಂಸ್ಕೃತಿಕ ಸಂಕೇತಗಳು, ಮೌಲ್ಯಗಳು, ವರ್ತನೆಗಳು, ನಂಬಿಕೆಗಳು, ಕಲ್ಪನೆಗಳು, ಮೂಢನಂಬಿಕೆಗಳು ಭಾರತೀಯ ಸಂಸ್ಕೃತಿ ಮತ್ತು ಸಮುದಾಯವನ್ನು ಪ್ರತಿಬಿಂಬಿಸುತ್ತವೆ. ಈ ಹಿನ್ನೆಲೆಯಲ್ಲಿ ನಾಟಕದಲ್ಲಿ ಬಳಕೆಯಾಗಿರುವ ಸಂಕೇತಗಳು ನಾಟಕದಲ್ಲಿನ ಮುಖ್ಯ ಪಾತ್ರಗಳ ಬೆಳವಣಿಗೆಗೆ ಸಹಾಯಕವಾಗುವಂತೆ ಮೂಡಿರುವುದು ಕಂಡುಬರುತ್ತದೆ.
APA, Harvard, Vancouver, ISO, and other styles
48

ರಂಗಸ್ವಾಮಿ та ಧರ್ಮೇಗೌಡ ಎಚ್.ಎಂ. "ಡಾ. ಬಿ.ಆರ್. ಅಂಬೇಡ್ಕರ್‌ ಅವರ ರಾಷ್ಟ್ರೀಯತೆಯ ಪರಿಕಲ್ಪನೆ: ಒಂದು ವಿಶ್ಲೇಷಣಾತ್ಮಕ ಅಧ್ಯಯನ". AKSHARASURYA JOURNAL 06, № 05 (2025): 157 to 168. https://doi.org/10.5281/zenodo.15504498.

Full text
Abstract:
ವೇದಗಳ ಕಾಲದಿಂದಲೂ ಉಳಿಸಿಕೊಂಡು ಬಂದಿದ್ದ ಹಿಂದೂ ಸಾಮಾಜಿಕ ವ್ಯವಸ್ಥೆ ತೀವ್ರವಾದ ಆಘಾತಕ್ಕೆ ಒಳಗಾಗಿದ್ದು ಭಾರತ ವಸಾಹತು ಯಾಜಮಾನ್ಯಕ್ಕೆ ಒಳಪಟ್ಟ ಮೇಲೆ ತೀವ್ರವಾದ ಸಾಮಾಜಿಕ ಬದಲಾವಣೆಗಳನ್ನು ಕಂಡಿತು. ವಸಾಹತು ಯಾಜಮಾನ್ಯ ಹೊತ್ತುತಂದ ಅನ್ಯಧರ್ಮ, ಅನ್ಯ ಸಂಸ್ಕೃತಿಗಳಿಗೆ ದೇಸಿ ಸಂಸ್ಕೃತಿಗಳು ಹಲವು ಬಗೆಯಲ್ಲಿ ಪ್ರತಿಕ್ರಿಯಿಸಿದವು. ದೇಸಿ ಸಮಾಜದ ಪಾರಂಪರಿಕ ಹಿಂಸೆಗಳನ್ನು ಅನುಭವಿಸಿಕೊಂಡು ಬಂದಿದ್ದ ತಳಸಮುದಾಯಗಳಿಗೆ ವಸಾಹತೀಕರಣ ಬಿಡುಗಡೆಯ ಹಾದಿಯಾಗಿ ಕಂಡುಬಂದಿತು. ಅಂಬೇಡ್ಕರ್‌ ಅವರು ವಸಾಹತು ಮೂಲದ ಆಧುನಿಕ ಶಿಕ್ಷಣ, ಇಂಗ್ಲಿಷ್ ಭಾಷೆ, ಪ್ರಜಾಪ್ರಭುತ್ವವಾದಿ, ರಾಜಕೀಯ ವ್ಯವಸ್ಥೆಯ ಸ್ಥಾಪನೆ ಮಾಡುವುದರ ಮೂಲಕ ದಲಿತರ ಬಿಡುಗಡೆಯ ಹಾದಿಯನ್ನು ಕಂಡುಕೊಂಡರು. ಅಂಬೇಡ್ಕರ್‌ ಅವರ ಈ ಬಗೆಯ ಹೋರಾಟ ಮತ್ತು ಚಿಂತನೆಗಳಿಗೆ ಅನೇಕ ಸಮಕಾಲೀನ ಚಿಂತಕರು, ಹೋರಾಟಗಾರರು ಕಾರಣೀಭೂತರಾದರು. ಇವರಲ್ಲಿ ಪ್ರಮುಖರಾದಂತಹ ಮಹಾತ್ಮ ಜ್ಯೋತಿರಾವ್ ಫುಲೆ, ಶಾಹುಮಹಾರಾಜ್, ನಾರಾಯಣಗುರು, ಪೆರಿಯಾರ್ ರಾಮಸ್ವಾಮಿ ನಾಯ್ಕರ್, ದೇವರಾಯ ಇಂಗಳೆ, ಸ್ವಾಮಿ ಧರ್ಮತೀರ್ಥ, ರಾಮಮನೋಹರ ಲೋಹಿಯಾ, ಬಿ. ಶ್ಯಾಮಸುಂದರ್ ಅವರ ಆಲೋಚನೆಗಳು ಅಂಬೇಡ್ಕರ್‌ ಚಿಂತನೆಗಳಿಗೆ ಪೂರಕವಾದವುಗಳಾಗಿವೆ. ಡಾ. ಬಿ. ಆರ್. ಅಂಬೇಡ್ಕರ್‌ ಅವರ ರಾಷ್ಟ್ರೀಯತೆಯನ್ನು ನಾವು ಪರ ಮತ್ತು ವಿರುದ್ಧವಾಗಿರುವಂತಹ ಸೈದ್ಧಾಂತಿಕ ನಿಲುವುಗಳ ಆಧಾರದ ಮೇಲೆ ವಿಶ್ಲೇಷಣೆ ಮಾಡಬೇಕಾಗಿದೆ. ಪ್ರಾಚೀನ ಕಾಲದಲ್ಲಿ ನಮ್ಮ ಭಾರತವು ಆಧ್ಯಾತ್ಮಿಕ ರಾಷ್ಟ್ರೀಯತೆಯನ್ನು ಹೊಂದಿತ್ತು ಎಂಬುದು ಕೆಲವು ಭಾರತೀಯ ಲೇಖಕರ ಅಭಿಪ್ರಾಯವಾಗಿದೆ. 
APA, Harvard, Vancouver, ISO, and other styles
49

ಮಂಜುನಾಥ, ಕೆ.ಎಸ್. "ಬತ್ತಾಡ ಜನಾಂಗ-ಒಂದು ಅಧ್ಯಯನ". Aksharasurya Journal 05, № 05 (2025): 71 to 76. https://doi.org/10.5281/zenodo.14619547.

Full text
Abstract:
ಭಾರತದ ಮೇಲೆ ಪ್ರಭುತ್ವ ಸಾಧಿಸಲು ಬಂದ ಬ್ರಿಟಿಷರು ಸಾಮಾಜಿಕ ಕೆಳಸ್ತರದಲ್ಲಿರುವ ಜನರನ್ನು ಮತ್ತು ಅವರ ಜನಜೀವನವನ್ನು ಸಂಶೋಧನ ದೃಷ್ಟಿಯಿಂದ ನೋಡಿದರೆ ವಿನಃ ಈ ಜನರನ್ನು ಮುನ್ನೆಲೆಗೆ ತರುವ ಪ್ರಯತ್ನ ಪಡಲಿಲ್ಲ. ಹಿಂದಿನಿಂದ ಬಂದ ತಾರತಮ್ಯದ ವ್ಯವಸ್ಥೆಯನ್ನು ಹಾಗೆಯೇ ಮುಂದುವರಿಸಿದರು. ಹಾಗಾಗಿ ದೇಶದ ಮಹಾನ್ ನಾಯಕರಾದ ಮಹಾತ್ಮ ಗಾಂಧೀಜಿಯವರು ಬ್ರಿಟಿಷರ ಇಂತಹ ಮನೋಧ್ಯೇಯವನ್ನು ವಿರೋಧಿಸಿದರು. ಸ್ವಾತಂತ್ರ್ಯಪೂರ್ವದಲ್ಲಿ ಇಂಗ್ಲೀಷ್ ಶಿಕ್ಷಣ ಪಡೆದವರಲ್ಲಿ ಆಧುನಿಕ ಪ್ರಜ್ಞೆ ಬೆಳೆಯುತ್ತಿದ್ದ ಕಾಲದಲ್ಲಿ ಬತ್ತಾಡ ಜನ ಸಮುದಾಯಗಳ ಜೀವನದಲ್ಲಿ ಅಂತಹ ಗಮನಾರ್ಹವಾದ ಬದಲಾವಣೆಗಳೇನೂ ಆಗಿರಲಿಲ್ಲ. ಅಂದಿನ ಮುಖ್ಯ ಬೆಳವಣಿಗೆಯೆಂದರೆ ಉದಾರವಾದ ಮಾನವೀಯತೆಯಷ್ಟೇ. ಆದರೆ ದೇಶಕ್ಕೆ ಸ್ವಾತಂತ್ರ್ಯಬಂದ ನಂತರದಲ್ಲಿ ಸಂವಿಧಾನದ ಶಾಸನಗಳಿಂದ ಸಾಮಾಜಿಕ ಚಲನೆ ಕಾಣಿಸಿಕೊಂಡಿದ್ದು ಇತ್ತೀಚೆಗೆ ಸ್ವಲ್ಪಮಟ್ಟಿಗೆ ವ್ಯಕ್ತಿ ಸ್ವಾತಂತ್ರ್ಯದೊರಕಿದೆ. ಈ ಜಾಗತೀಕರಣ, ಆಧುನೀಕರಣ, ಕೈಗಾರೀಕರಣ ಹಾಗೂ ಮಾಹಿತಿ ಸ್ಪೋಟದಿಂದ ಬತ್ತಾಡ ಸಮಾಜವು ಮತ್ತೆ ಹೊಸ ಮಾರ್ಗದಲ್ಲಿ ಚಲಿಸಲು ಪ್ರಾರಂಭಿಸಿದೆ. ಈ ಹೊಸ ಚಲನೆಯಿಂದ ಮತ್ತೆ ಆಗಬಹುದಾದ ಬದಲಾವಣೆಗಳಿಗಿಂತ ಮುಂಚೆಯೇ ಇಂದಿನ ಸಮುದಾಯದ ಸ್ಥಿತಿ-ಗತಿಯನ್ನು ದಾಖಲಾತಿ ಮಾಡುವುದು ಅವಶ್ಯಕವಾಗಿದೆ. ಬತ್ತಾಡ ಸಮಾಜದವರು ಜಿಲ್ಲೆಯಲ್ಲಿ ತನ್ನದೇ ಆದ ಪ್ರಮುಖ ಸ್ಥಾನವನ್ನು ಹೊಂದಿದ್ದಾರೆ. ಅವರಲ್ಲಿನ ಅನೇಕ ಆಚರಣೆಗಳು ಮತ್ತು ಅವರ ಮೌಖಿಕ ಪರಂಪರೆಗಳು ಅವರ ಪ್ರಾಚೀನತೆಯನ್ನು ಸೂಚಿಸುತ್ತದೆ. ಇವರ ಮದುವೆ ಸಂಪ್ರದಾಯ, ಆಹಾರ ಪದ್ಧತಿ, ಬಾಲ್ಯ ವಿವಾಹ, ಅನಕ್ಷರತೆ, ನ್ಯಾಯ ಪಂಚಾಯಿತಿ ಮುಂತಾದವುಗಳ ನಿರ್ವಹಣಾ ವಿಧಾನಗಳು ನನ್ನಲ್ಲಿ ಕುತೂಹಲವನ್ನು ಹೆಚ್ಚಿಸಿದ್ದು ಈ ಅಧ್ಯಯನವನ್ನು ಕೈಗೊಳ್ಳಲು ಪ್ರೇರಕನಾಗಿದ್ದೇನೆ.
APA, Harvard, Vancouver, ISO, and other styles
50

ವೆಂಕೋಬರಾವ್, ಎಂ. ಹೊಸಕೋಟೆ. "ಸಾಹಿತ್ಯ ಸಮ್ಮೇಳನಗಳ ಪರಿಕಲ್ಪನೆ ಬದಲಾಗಬೇಕೆ?" Aksharasurya Journal 05, № 05 (2025): 132 to 137. https://doi.org/10.5281/zenodo.14619685.

Full text
Abstract:
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ನಾಡಿನ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಕರ್ನಾಟಕ, ಕನ್ನಡ, ಕನ್ನಡಿಗ ಇನ್ನಿತರ ನೆಲೆಗಳಲ್ಲಿ ಪ್ರೇರಕಶಕ್ತಿಯಾಗಿ ದುಡಿಯುತ್ತಿದೆ. ನಾಡು ನುಡಿ ಚಿಂತನೆಗಳೊಂದಿಗೆ ಕನ್ನಡಿಗರನ್ನು ಒಂದು ಗೂಡಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ, ಸಾರ್ಥಕವಾದ ತನ್ನ ಅಸ್ತಿತ್ವವನ್ನು ಮೆರೆಸುತ್ತಾ ಬಂದಿದೆ. ಅಂದಿನ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ಸರ್.ಎಂ. ವಿಶ್ವೇಶ್ವರಯ್ಯನವರ ಶ್ರಮದ ಫಲವಾಗಿ ಪರಿಷತ್ತು ಸ್ಥಾಪನೆಗೊಂಡಿತು. ಅನಂತರದಲ್ಲಿ ಮಿರ್ಜಾ ಇಸ್ಮಾಯಿಲ್ ಅವರ ನೆರವಿನಿಂದ ಪುಷ್ಠಿ ಪಡೆಯಿತು. ಸಮ್ಮೇಳನಗಳನ್ನು ನಡೆಸಲು ಮೈಸೂರು ಸಂಸ್ಥಾನವು ಅನುದಾನ ರೂಪದಲ್ಲಿ ಹಣವನ್ನು ಕೊಡುತ್ತಿತ್ತು. ತದನಂತರ ಕರ್ನಾಟಕ ಸರ್ಕಾರವು ಅನುದಾನ ನೀಡುತ್ತಾ ಬರುತ್ತಿದೆ. ಸರ್ಕಾರ, ಸರ್ಕಾರೇತರ ಕನ್ನಡ ಸಂಘ ಸಂಸ್ಥೆಗಳು, ಕನ್ನಡ ಒಳಿತು ಉಳಿಯುವಿಕೆಗಾಗಿ, ಪರಿಷತ್ತಿನ ನೆರವಿಗೆ ಬಂದು ಸಮ್ಮೇಳನಗಳನ್ನು ನಡೆಸಲು ಅನುವು ಮಾಡಿಕೊಡಬೇಕಾಗಿದೆ. ಪರಿಷತ್ತು ಪ್ರಾರಂಭದ ದಿನಗಳಲ್ಲಿ ಒಂದು ಪ್ರಧಾನ ಸಮ್ಮೇಳನವನ್ನು ನಡೆಸುತ್ತಿತ್ತು ಕ್ರಮೇಣ ವಿಚಾರಗೋಷ್ಠಿಗಳು, ಉತ್ಸವಗಳು, ಆರಾಧನೆ, ಮರ್ಯಾದೆ, ಮುಖ್ಯವಾದ ವಾದಗಳು, ತತ್ವಗಳು ಮತ್ತು ಪ್ರಯೋಗಗಳನ್ನು ಆಯಾಕಾಲಮಾನದ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ನಾಡಿನ ಬದಲಾವಣೆಗಳಿಗೆ ಅನುಗುಣವಾಗಿ ನಡೆಸುತ್ತ ಬಂದಿದೆ. ಸಮ್ಮೇಳನಗಳಲ್ಲಿ ಪರಿಷತ್ತು ಮತ್ತು ಸರ್ಕಾರಗಳು ಕರ್ನಾಟಕ, ಕನ್ನಡಿಗ ಮತ್ತು ಕನ್ನಡ, ಶಿಕ್ಷಣ ಹಾಗೂ ಬದುಕಿನ ಇನ್ನಿತರ ಕ್ಷೇತ್ರಗಳಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಆಧುನೀಕತೆಯಲ್ಲಿಂದು ಸಾಹಿತ್ಯ ಸಮ್ಮೇಳನಗಳ ಪರಿಕಲ್ಪನೆಯು ಬದಲಾಗಬೇಕಾದ ಅನಿವಾರ್ಯತೆ ಇದೆ. 
APA, Harvard, Vancouver, ISO, and other styles
We offer discounts on all premium plans for authors whose works are included in thematic literature selections. Contact us to get a unique promo code!