To see the other types of publications on this topic, follow the link: ಹಿಂದೂ.

Journal articles on the topic 'ಹಿಂದೂ'

Create a spot-on reference in APA, MLA, Chicago, Harvard, and other styles

Select a source type:

Consult the top 42 journal articles for your research on the topic 'ಹಿಂದೂ.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Browse journal articles on a wide variety of disciplines and organise your bibliography correctly.

1

ಗಣೇಶ. "ಧರ್ಮ ಮತ್ತು ಅಂಬೇಡ್ಕರ್‌". AKSHARASURYA JOURNAL 06, № 05 (2025): 46 to 53. https://doi.org/10.5281/zenodo.15504212.

Full text
Abstract:
ಅಂಬೇಡ್ಕರ್‌ ಭಾರತದ ಒಬ್ಬ ಶ್ರೇಷ್ಠ ಪ್ರತಿಭಾವಂತ ಬುದ್ಧಿ ಜೀವಿ ಮತ್ತು ಮೇಧಾವಿ. ಪ್ರಪಂಚದ ಅಪ್ರತಿಮ ಚಿಂತಕರ ಸಾಲಿನಲ್ಲಿ ನಿಲ್ಲಬಲ್ಲ, ಮೇರು ವ್ಯಕ್ತಿತ್ವವುಳ್ಳ ಚಿಂತನಶೀಲ ವ್ಯಕ್ತಿ. ಅವರು ಜಗತ್ತಿನ ಎಲ್ಲಾ ಧಾರ್ಮಿಕ ಗ್ರಂಥಗಳನ್ನು ಆಸಕ್ತಿ ಮತ್ತು ಕುತೂಹಲದಿಂದ ಅಮೂಲಾಗ್ರವಾಗಿ ಅಧ್ಯಯನ ಮಾಡಿದ್ದರು. ಧರ್ಮವನ್ನು ಕುರಿತಂತೆ ರಾಬರ್ಟ್ ಸನ್ ಸ್ಮಿತ್ ಅವರ ಪರಿಕಲ್ಪನೆಯನ್ನು ಅಂಬೇಡ್ಕರ್‌ ಹಿಂದೂ ಧರ್ಮದ ತತ್ವಜ್ಞಾವನ್ನು ಕುರಿತ ತಮ್ಮ ಕೃತಿಯಲ್ಲಿ ಹೀಗೆ ಉಲ್ಲೇಖಿಸಿದ್ದಾರೆ. ಧರ್ಮ ಯಾವುದೇ ಕಾರಣಕ್ಕೂ ದುರ್ಬಲರನ್ನು ಶೋಷಿಸುವ ಅಸ್ತ್ರವಾಗಬಾರದು. ಹಿಂದೂ ಧಾರ್ಮಿಕ ವ್ಯವಸ್ಥೆಯಲ್ಲಿ ದೈವಿಕ ಪ್ರಭುತ್ವದ ಲಿಖಿತ ಸಂವಿಧಾನ ಮತ್ತು ಪುರೋಹಿತಶಾಹಿಯ ಅಘೋಷಿತ ಪ್ರಾಬಲ್ಯವನ್ನು ಕಾಪಾಡಿಕೊಂಡು ಬರಲಾಗಿದೆ. ಈ ಧರ್ಮದಲ್ಲಿ ಬಹುಸಂಖ್ಯಾತ ಹಿಂದುಳಿದ
APA, Harvard, Vancouver, ISO, and other styles
2

ರುಕ್ಮಿಣಿ, ವಿ. "ಡಾ. ಬಿ.ಆರ್. ಅಂಬೇಡ್ಕರ್‌ ಅವರ ದೃಷ್ಟಿಯಲ್ಲಿ ಅಸ್ಪೃಶ್ಯತೆ". AKSHARASURYA JOURNAL 06, № 05 (2025): 175 to 185. https://doi.org/10.5281/zenodo.15504614.

Full text
Abstract:
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್‌ ಅವರು ಹಿಂದೂ ಸಮಾಜಕ್ಕೆ ಕಳಂಕವೆನಿಸಿರುವ ಅಸ್ಪೃಶ್ಯತೆಯ ವಿವಿಧ ಆಯಾಮಗಳನ್ನು ವೈಜ್ಞಾನಿಕವಾಗಿ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಭಾರತದಲ್ಲಿ ಮಾತ್ರ ಇದರ ಆಚರಣೆ ಏಕೆ ಮುಂದುವರೆದಿದೆ ಎಂಬುದರ ಬಗ್ಗೆ ವಿಶ್ಲೇಷಣೆ ನೀಡಿದ್ದಾರೆ. ಹಿಂದೂ ಸಮಾಜವನ್ನು ಮಾನವೀಯ ಮೌಲ್ಯಗಳು ಸಮಾನತೆ ಸ್ವಾತಂತ್ರ್ಯ, ನ್ಯಾಯ, ವಿಶ್ವ ಭ್ರಾತೃತ್ವದ ಆಧಾರದ ಮೇಲೆ ಪುನರ್ಘಟಿಸುವ ಪ್ರಯತ್ನವನ್ನು ಅವರ ಸಾಮಾಜಿಕ ಚಿಂತನೆಯಲ್ಲಿ ಕಾಣಬಹುದು. ಸಾಮಾಜಿಕ ಸಂಶೋಧನೆಯ ನೆಲೆಗಟ್ಟಿನಲ್ಲಿ ಅಂಬೇಡ್ಕರ್‌ ಅವರ ಅಸ್ಪೃಶ್ಯತೆಯ ಕುರಿತ ಸಾಮಾಜಿಕ, ರಾಜಕೀಯ, ಧಾರ್ಮಿಕ ವಿಚಾರಗಳು ತುಂಬಾ ಮಹತ್ವವಾಗಿವೆ. ಯುರೋಪಿನ ಚರಿತ್ರೆಯಲ್ಲಿ ಕಂಡುಬರುವ ಅನೇಕ ಅನ್ಯಾಯಗಳನ್ನು ಮೂಢನಂಬಿಕೆಗಳನ್ನು ನಿವಾರಿಸಲಾಗಿದೆ. ಆದರೆ ಭಾರತದಲ್ಲಿ ಹಿಂದೂ ಬ್ರಾಹ್ಮಣ
APA, Harvard, Vancouver, ISO, and other styles
3

ಹೇಮಲತ, ಹೆಚ್. ಆರ್. "ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಮಹಿಳಾ ಸಾಮಾಜಿಕ ನ್ಯಾಯತತ್ವ: ಒಂದು ಅವಲೋಕನ". AKSHARASURYA JOURNAL 03, № 04. SPECIAL ISSUE. (2024): 157 to 169. https://doi.org/10.5281/zenodo.10929989.

Full text
Abstract:
ಹಿಂದೂ ಧರ್ಮದಲ್ಲಿ ಶೂದ್ರ ಮತ್ತು ದಲಿತರ ಶೋಷಣೆ ಆದಷ್ಟೇ ಮಹಿಳೆಯರ ಶೋಷಣೆಯೂ ಆಗಿದೆ. ಹಿಂದೂ ಸಮಾಜದಲ್ಲಿ ಮಹಿಳೆಯು ಅತಿ ಕೀಳು ಮಟ್ಟದ ಸ್ಥಾನವನ್ನುಹೊಂದಿದ್ದಾಳೆ. ಜೀವನದ ಯಾವುದೇ ಕ್ಷೇತ್ರದಲ್ಲೂ ಮಹಿಳೆ ಪ್ರಗತಿ ಹೊಂದಬಾರದೆಂಬ ನಿರ್ಬಂಧನೆಗಳನ್ನು ಹೇರಲಾಗಿತ್ತು. ಮಹಿಳೆಯು ಕೇವಲ ಪುರುಷನ ಆಸೆ ಆಕಾಂಕ್ಷೆಗಳನ್ನು ತೀರಿಸುವ ಒಂದು ಸುಂದರವಾದ ವಸ್ತು ಮತ್ತು ಮಕ್ಕಳನ್ನು ಹೆರುವ ಯಂತ್ರವೆಂದು ಪರಿಗಣಿಸಲಾಗಿತ್ತು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಕೇವಲ ಗುಲಾಮಳಂತೆ ಮನೆಗೆಲಸ ಮಾಡಿ ಕುಟುಂಬದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಅವಳ ಆದ್ಯ ಕರ್ತವ್ಯವೆಂದು ಭಾವಿಸಲಾಗಿತ್ತು. ಯಾವುದೇ ಕಾರಣಕ್ಕೂ ಮಹಿಳೆ ಹೊರಗಿನ ಸಮಾಜದಲ್ಲಿ ಇತರರಂತೆ ಧೈರ್ಯ ಮತ್ತು ಗೌರವದಿಂದ ಭಾಗವಹಿಸುವಂತಿರಲಿಲ್ಲ. ಹಾಗೇನಾದರೂ ಮಾಡಿದಿದ್ದರೆ ಅವಳು ಇಡೀ ಪುರುಷ ವರ್ಗ ಮತ್ತು
APA, Harvard, Vancouver, ISO, and other styles
4

ಪ್ರಕಾಶ, ಬಿ. "ಡಾ. ಬಿ.ಆರ್. ಅಂಬೇಡ್ಕರ್‌ ಮತ್ತು ಗಾಂಧೀಜಿ: ಜಾತಿ, ವರ್ಣ, ಹಿಂದುತ್ವ ಕುರಿತು ಅಭಿಪ್ರಾಯ-ಭಿನ್ನಾಭಿಪ್ರಾಯಗಳು". AKSHARASURYA JOURNAL 06, № 05 (2025): 141 to 150. https://doi.org/10.5281/zenodo.15504412.

Full text
Abstract:
ವರ್ತಮಾನದಲ್ಲಿ ಗಾಂಧೀಜಿ ಮತ್ತು ಡಾ. ಬಿ. ಆರ್, ಅಂಬೇಡ್ಕರ್‌‌ರವರನ್ನು ಅನುಸಂಧಾನ ಮಾಡಿದಾಗ ಇವರಿಬ್ಬರ ನಡುವಿನ ಜಾತಿ, ವರ್ಣ, ಹಿಂದುತ್ವ ಕುರಿತು ಅನೇಕ ಹುಸಿ ಚರ್ಚೆಗಳು, ಪ್ರಚಾರ, ಸೆಮಿನಾರ್‌ಗಳು, ಪತ್ರಿಕೆಗಳ ಮೂಲಕ ಬಿತ್ತರವಾಗುತ್ತಿವೆ. ದೇಶದ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಈ ಅಭಿಪ್ರಾಯ-ಭಿನ್ನಾಭಿಪ್ರಾಯಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ. ಈ ಲೇಖನದ ಮೂಲಕ ನಿಜವನ್ನು ಅರಿಯುವ ಮುಖೇನ ಹೊಸದೊಂದು ತಾತ್ವಿಕತೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಜಾತ್‌ಪತ್ ತೊಡಕ್ ಮಂಡಲಕ್ಕಾಗಿ ಅಂಬೇಡ್ಕರ್‌ ಸಿದ್ದಪಡಿಸಿದ ಜಾತಿ ವಿಷಯ ಉಪನ್ಯಾಸವನ್ನು ಗಮನಿಸಿ ತಮ್ಮ ಹರಿಜನ ಪತ್ರಿಕೆಯಲ್ಲಿ ಗಾಂಧೀಜಿ ಅದನ್ನು ಉಲ್ಲೇಖಿಸುವ ಮೂಲಕ ಅಂಬೇಡ್ಕರ್‌ ರವರನ್ನು ಇದು ಪ್ರಚಾ
APA, Harvard, Vancouver, ISO, and other styles
5

ನೇತ್ರಾವತಿ, ಎಸ್. "ಧರ್ಮದ ಒಳಗಡೆ ಸಿಲುಕಿದ ಮುಸ್ಲಿಂ ಮಹಿಳೆ". AKSHARASURYA 03, № 05 (2024): 114–27. https://doi.org/10.5281/zenodo.10938130.

Full text
Abstract:
ಧರ್ಮ ಎಂದರೆ ಮಾನವೀಯ ಮೌಲ್ಯಗಳನ್ನು, ಅಹಿಂಸೆಯಿಂದ ಕೂಡಿರುವಂತಹದ್ದು, ಎಲ್ಲರನ್ನು ಪ್ರೀತಿಯಿಂದ, ಮಮತೆಯಿಂದ ನೋಡಿಕೊಳ್ಳುವುದನ್ನು ಧರ್ಮ ಎನ್ನಬಹುದು. ಹಾಗೆಯೇ ಯಾವುದೇ ಆಚಾರ-ವಿಚಾರಗಳನ್ನು, ಮಾನವ ಸಂಬಂಧಗಳನ್ನು ಪವಿತ್ರ ಭಾವನೆಯಿಂದ, ಯಾವುದೇ ಜೀವಿಗೂ ತೊಂದರೆಯನ್ನು ನೀಡದೆ ನಡೆಸಿಕೊಳ್ಳುವುದನ್ನು ಧರ್ಮ ಎಂದು ಹೇಳಬಹುದು. ಭಾರತ ಹಲವು ಧರ್ಮಗಳನ್ನು ಒಳಗೊಂಡಿದೆ, ಅದರಲ್ಲಿ ಮುಸ್ಲಿಂ ಧರ್ಮವೂ ಒಂದು. ಹಿಂದೂಗಳಂತೆ ಮುಸ್ಲಿಂ ಧರ್ಮದವರನ್ನು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ಗುರುತಿಸಬಹುದು. ಯಾವುದೇ ಧರ್ಮದಲ್ಲಾದರೂ ಮಹಿಳೆಯರಿಗೆ ಸ್ವಾತಂತ್ರ್ಯ ದೊರೆಯುವುದು ತೀರ ಕಡಿಮೆ ಪ್ರಮಾಣದಲ್ಲಿ. ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ಪ್ರಾಚೀನ ಕಾಲದಲ್ಲಿ ಗೌರವ, ಮನ್ನಣೆ, ತಮ್ಮ ಬದುಕನ್ನು ಅವರೇ ನಿರ್ಮಿಸಿಕೊಳ್ಳುವ ಅವಕಾಶ, ಸ್ವಾತಂತ್ರ್ಯ ಇತ್ತು
APA, Harvard, Vancouver, ISO, and other styles
6

ಡಿ., ಪುರುಷೋತ್ತಮ. "ಟಿಪ್ಪು: ಐತಿಹಾಸಿಕ ವ್ಯಕ್ತಿ ಕುರಿತು ಒಂದು ಅವಲೋಕನ". AKSHARASURYA JOURNAL 03, № 04. SPECIAL ISSUE. (2024): 50 to 58. https://doi.org/10.5281/zenodo.10929686.

Full text
Abstract:
ಭಾರತವು ರಾಜ ಮಹಾ ರಾಜರಿಂದ ಅನುಭವಿಸಿದ ಪ್ರಭುತ್ವದ ಕಲ್ಪನೆ, ಬ್ರಿಟೀಷರಿಂದ ಕಲಿತ ಪ್ರಭುತ್ವದ ಪಾಠ, ಸ್ವಾತಂತ್ರ್ಯ ನಂತರ ನಾವು ಅನುಭವಿಸುತ್ತಿರುವ ಪ್ರಜಾಪ್ರಭುತ್ವದ ಕಲ್ಪನೆಗಳಲ್ಲಿ ಬಹಳ ವೈರುಧ್ಯ ಮತ್ತು ವ್ಯತ್ಯಾಸಗಳು ಇವೆ. ಪ್ರಜಾಪ್ರಭುತ್ವದ ದೃಷ್ಟಿಯಿಂದ ಇತಿಹಾಸವನ್ನು ನೋಡಿದರೆ ಬ್ರಿಟೀಷರು, ಇಲ್ಲಿಯ ರಾಜ ಮಹಾರಾಜರುಗಳೆಲ್ಲರೂ ಪ್ರಜಾಪ್ರಭುತ್ವದ ವಿರೋಧಿಗಳೆಂದೇ ಬರೆಯಬೇಕಾಗುತ್ತದೆ. ಏಕೆಂದರೆ ಅವರುಗಳು ಯಾರು ಇಂದಿನ ಸಂವಿಧಾನ ದತ್ತವಾದ ಪ್ರಭುತ್ವನ್ನು ನಡೆಸಿಲ್ಲ. ಪ್ರಜಾಪ್ರಭುತ್ವ ಕಲ್ಪನೆಯಿಂದ ಇತಿಹಾಸ ನೋಡುವುದು ಕೂಡ ತಪ್ಪು. ಏಕೆಂದರೆ ಆ ಕಾಲದ ಚರಿತೆಯಲ್ಲಿ ಇಲ್ಲದನ್ನು ಕಾಣ ಬಯಸಿದರೆ ಅದು ಸಿಗುವುದಿಲ್ಲ. ಇದರಿಂದ ನಮ್ಮ ಪ್ರಭುತ್ವ ಒಪ್ಪುವ ಚರಿತ್ರೆ ನಮಗೆ ಲಬ್ಧವಾಗುವುದಿಲ್ಲ. ಕಾಲ ಪ್ರಜ್ಞೆ ಇರದೆ, ಚಾರಿತ್ರರಿಕ ದೃಷ್ಟಿ ಇರದೆ ಬರೆದ
APA, Harvard, Vancouver, ISO, and other styles
7

ರಂಗಸ್ವಾಮಿ та ಧರ್ಮೇಗೌಡ ಎಚ್.ಎಂ. "ಡಾ. ಬಿ.ಆರ್. ಅಂಬೇಡ್ಕರ್‌ ಅವರ ರಾಷ್ಟ್ರೀಯತೆಯ ಪರಿಕಲ್ಪನೆ: ಒಂದು ವಿಶ್ಲೇಷಣಾತ್ಮಕ ಅಧ್ಯಯನ". AKSHARASURYA JOURNAL 06, № 05 (2025): 157 to 168. https://doi.org/10.5281/zenodo.15504498.

Full text
Abstract:
ವೇದಗಳ ಕಾಲದಿಂದಲೂ ಉಳಿಸಿಕೊಂಡು ಬಂದಿದ್ದ ಹಿಂದೂ ಸಾಮಾಜಿಕ ವ್ಯವಸ್ಥೆ ತೀವ್ರವಾದ ಆಘಾತಕ್ಕೆ ಒಳಗಾಗಿದ್ದು ಭಾರತ ವಸಾಹತು ಯಾಜಮಾನ್ಯಕ್ಕೆ ಒಳಪಟ್ಟ ಮೇಲೆ ತೀವ್ರವಾದ ಸಾಮಾಜಿಕ ಬದಲಾವಣೆಗಳನ್ನು ಕಂಡಿತು. ವಸಾಹತು ಯಾಜಮಾನ್ಯ ಹೊತ್ತುತಂದ ಅನ್ಯಧರ್ಮ, ಅನ್ಯ ಸಂಸ್ಕೃತಿಗಳಿಗೆ ದೇಸಿ ಸಂಸ್ಕೃತಿಗಳು ಹಲವು ಬಗೆಯಲ್ಲಿ ಪ್ರತಿಕ್ರಿಯಿಸಿದವು. ದೇಸಿ ಸಮಾಜದ ಪಾರಂಪರಿಕ ಹಿಂಸೆಗಳನ್ನು ಅನುಭವಿಸಿಕೊಂಡು ಬಂದಿದ್ದ ತಳಸಮುದಾಯಗಳಿಗೆ ವಸಾಹತೀಕರಣ ಬಿಡುಗಡೆಯ ಹಾದಿಯಾಗಿ ಕಂಡುಬಂದಿತು. ಅಂಬೇಡ್ಕರ್‌ ಅವರು ವಸಾಹತು ಮೂಲದ ಆಧುನಿಕ ಶಿಕ್ಷಣ, ಇಂಗ್ಲಿಷ್ ಭಾಷೆ, ಪ್ರಜಾಪ್ರಭುತ್ವವಾದಿ, ರಾಜಕೀಯ ವ್ಯವಸ್ಥೆಯ ಸ್ಥಾಪನೆ ಮಾಡುವುದರ ಮೂಲಕ ದಲಿತರ ಬಿಡುಗಡೆಯ ಹಾದಿಯನ್ನು ಕಂಡುಕೊಂಡರು. ಅಂಬೇಡ್ಕರ್‌ ಅವರ ಈ ಬಗೆಯ ಹೋರಾಟ ಮತ್ತು ಚಿಂತನೆಗಳಿಗೆ ಅನೇಕ ಸಮಕಾಲೀನ ಚಿಂ
APA, Harvard, Vancouver, ISO, and other styles
8

ದಿನೇಶ, ಎನ್.ಎನ್. "ಮಲಬಾರ್ ಮಾಪಿಳ್ಳೆ ಬಂಡಾಯಗಳು: ಧರ್ಮ, ಭೂಮಿ ಮತ್ತು ಹಕ್ಕುಗಳಿಗಾಗಿ ಹೋರಾಟ". AKSHARASURYA 06, № 02 (2025): 105 to 116. https://doi.org/10.5281/zenodo.15124098.

Full text
Abstract:
19ನೆಯ ಶತಮಾನದಾದ್ಯಂತ ಸ್ಫೋಟಗೊಂಡು 20ನೇಯ ಶತಮಾನದ ಮೊದಲ ಭಾಗವು ಉಗ್ರ ಹೋರಾಟದೊಂದಿಗೆ ಅಳಿದುಹೋದವು. ಕೇರಳದ ಮಲಬಾರ್ ಪ್ರದೇಶದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಪ್ರತಿರೋಧವಾಗಿ ಪ್ರಾರಂಭವಾಯಿತು. ಮಲೆಯಾಳಿ ಸಮಾಜದ ಜೊತೆಗಿನ ಅರಬರ ವ್ಯಾಪಾರೀ ಸಂಬಂಧದ ಚರಿತ್ರೆ ಸುಮಾರು 9ನೇ ಶತಮಾನದಷ್ಟು ಹಿಂದಿನಿಂದ ಪ್ರಾರಂಭವಾಗುತ್ತದೆ. ಕರಾವಳಿ ಪ್ರಾಂತ್ಯದಲ್ಲಿದ್ದ ಹಿಂದೂ ಮುಖಂಡರುಗಳಿಗೆ ಶ್ರೀಮಂತ ಅರಬ ವ್ಯಾಪಾರಿಗಳ ಬೆಂಬಲ ಯಾವಾಗಲೂ ಬೇಕಾಗುತ್ತಿತ್ತು. ಮಲಬಾರಿನಲ್ಲೇ ಕ್ರಮೇಣ ಉಳಿದುಕೊಂಡ ಅರಬ ವ್ಯಾಪಾರಿಗಳು ಪ್ರಮುಖವಾಗಿ ನಾಯರ್ ಮತ್ತು ತಿಯಾ ಜಾತಿಯ ಹೆಂಗಸರನ್ನೇ ಮದುವೆಯಾದರು. ಕಾಲಾಂತರದಲ್ಲಿ ಇವರೇ ಮಾಪಿಳ್ಳೆಗಳಾದರು. ಮತಾಂತರಗೊಂಡು ಹೊಸದಾಗಿ ಸೇರ್ಪಡೆಗೊಳ್ಳುವ ಪ್ರತಿಯೊಬ್ಬ ಸದಸ್ಯನನ್ನು ಮಾಪಿಳ್ಳೆಗಳು ಸಂತೋಷದಿಂದ ಸ್ವೀಕರಿಸಿದರೂ ಮ
APA, Harvard, Vancouver, ISO, and other styles
9

ಅಶ್ವಿನಿ, ಎಂ. ಎಸ್. "ಬಾಬಾ ಸಾಹೇಬ್ ಅಂಬೇಡ್ಕರ್‌: ಸಾಮಾಜಿಕ ನ್ಯಾಯದ ರೂವಾರಿ". AKSHARASURYA JOURNAL 06, № 05 (2025): 10 to 16. https://doi.org/10.5281/zenodo.15504125.

Full text
Abstract:
ಭಾರತ ಕಂಡ ಅತ್ಯಂತ ಶ್ರೇಷ್ಠ ಪ್ರತಿಭೆಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ ಅವರು ಅಗ್ರಮಾನ್ಯರು. ಅವರು ರಾಜಕೀಯ ತಜ್ಞರು, ಕಾನೂನು ತಜ್ಞರು, ಆರ್ಥಿಕ ಚಿಂತಕರು, ಸಾಮಾಜಿಕ ನ್ಯಾಯದ ಹೋರಾಟಗಾರರು, ತತ್ವಜ್ಞಾನಿಗಳು, ಲೇಖಕರು, ಬಹುಭಾಷ ವಿದ್ವಾಂಸರು, ಭಾರತ ರಾಷ್ಟ್ರದ ಮಹಾನ್ ನೇತಾರ, ಭಾರತದ ಶ್ರೇಷ್ಠ ಮಾನವತಾವಾದಿ, ಪ್ರಜಾತಂತ್ರ ಕಾರಣಿ ಮತ್ತು ಸಾಮಾಜಿಕ ಕ್ರಾಂತಿಕಾರಿ, ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ಮಹಾಜ್ಞಾನಿ ಹಾಗೂ ಭಾರತದ ಸಂವಿಧಾನ ರಚನ ಕರಡು ಸಮಿತಿಯ ಅಧ್ಯಕ್ಷರು. ಹೀಗೆ ಇವರ ಶ್ರೇಷ್ಠತೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಂಥ ಶ್ರೇಷ್ಠ ವ್ಯಕ್ತಿ ಭಾರತದಲ್ಲಿದ್ದ ವರ್ಣ ವ್ಯವಸ್ಥೆಯ ವಿರುದ್ಧ ಹೋರಾಡಿ, ತಾನೇ ಸಂವಿಧಾನವನ್ನು ರಚಿಸಿ ಸಾಮಾಜಿಕ ನ್ಯಾಯವನ್ನು ನೀಡಿದ ಸಾಮಾಜಿಕ ಚ
APA, Harvard, Vancouver, ISO, and other styles
10

ರಮೇಶ್. "ನಿರಂಜನರ ಬರವಣಿಗೆಯಲ್ಲಿ ಮಾರ್ಕ್ಸ್‌ವಾದ". AKSHARASURYA 06, № 02 (2025): 75 to 83. https://doi.org/10.5281/zenodo.15124060.

Full text
Abstract:
ನಿರಂಜನರು ಸಾಹಿತ್ಯವಲಯದಲ್ಲಿ ಉಂಟುಮಾಡಿದ ಸಾಮಾಜಿಕ ಹೋರಾಟ ಬಹಳ ಮುಖ್ಯವಾದುದು. ಸಾಹಿತ್ಯ ಮತ್ತು ಬದುಕನ್ನು ಏಕ ರೀತಿಯಲ್ಲಿ ಕಂಡುಕೊಂಡವರು. ಸಾಮಾಜಿಕ ಬದ್ಧತೆಯನ್ನು ಕೊನೆಯವರೆಗೂ ಉಳಿಸಿಕೊಂಡವರು. ಬಾಲ್ಯದಲ್ಲಿ ಗಾಂಧಿವಾದಕ್ಕೆ ಮನಸೋತು, ಅನಂತರ ಸಮಾಜವಾದದತ್ತ ಒಲವು ಬೆಳಸಿಕೊಂಡರು. ಹರೆಯದಲ್ಲಿ ಸಮತಾವಾದದ ಸಿದ್ದಾಂತಗಳಿಂದ ಪ್ರಭಾವಿತರಾಗಿ ಮಾರ್ಕ್ಸ್‌ವಾದಿಯಾಗಿ ಕಮ್ಯೂನಿಸ್ಟ್ ಪಕ್ಷದ ಸಕ್ರಿಯ ಸದಸ್ಯರಾಗಿ ದುಡಿದವರು ನಿರಂಜನರು. ʼಸ್ವಾತಂತ್ರ್ಯ ಚಳವಳಿ, ಏಕೀಕರಣ ಚಳವಳಿ, ಹಿಂದೂ ಸಾಂಸ್ಕೃತಿಕ ಪುನರುಜ್ಜೀವನ ಚಳವಳಿಗಳು ಸೊಕ್ಕೇರಿ ಒಟ್ಟಿಗೆ ಕ್ರಿಯಾನಿರತವಾಗಿದ್ದಾಗ, ಮಾರ್ಕ್ಸ್‌ವಾದದಿಂದ ಆಕರ್ಷಿತವಾಗಿ, ಅಖಿಲಭಾರತ ಚಳವಳಿಯ ಒಂದು ಭಾಗವಾಗಿ ಕನ್ನಡ ಪ್ರಗತಿಶೀಲ ಚಳವಳಿಯು ಹುಟ್ಟಿಕೊಂಡಿತು. ಶಿವರಾಯರು ಬೆಳೆಬೆಳೆಯುತ್ತಾ ಗಾಂಧೀ ಪ
APA, Harvard, Vancouver, ISO, and other styles
11

ನಾಗನಗೌಡ, ಗೌಡ್ರ. "ಡಾ. ಬಿ. ಆರ್. ಅಂಬೇಡ್ಕರ್‌‌ ಅವರ ಸಾಮಾಜಿಕ ನ್ಯಾಯದ ಚಿಂತನೆಗಳು". AKSHARASURYA JOURNAL 06, № 05 (2025): 94 to 104. https://doi.org/10.5281/zenodo.15504293.

Full text
Abstract:
ಡಾ. ಬಿ.ಆರ್. ಅಂಬೇಡ್ಕರ್‌ ಒಬ್ಬ ಭಾರತೀಯ ಶ್ರೇಷ್ಠ ರಾಜಕೀಯ ನಾಯಕ, ತತ್ವಜ್ಞಾನಿ, ಸಾಮಾಜಿಕ ಚಿಂತಕ, ಇತಿಹಾಸ ಸಂಶೋಧಕ, ಆರ್ಥಿಕ ತಜ್ಞ, ಶ್ರೇಷ್ಠ ಬರಹಗಾರ, ಮಹಿಳಾ ಸಮಾನತೆಯ ಹರಿಕಾರ, ದಲಿತರ ಸೂರ್ಯ, ಕಾರ್ಮಿಕ ಬಂಧು, ಕಾನೂನು ತಜ್ಞ, ಸಂವಿಧಾನ ಶಿಲ್ಪಿ ಎಂದೆಲ್ಲಾ ಪ್ರಖ್ಯಾತರಾಗಿದ್ದಾರೆ. ಭಾರತೀಯ ಸಮಾಜವು ಶತ ಶತಮಾನಗಳಿಂದಲೂ ವರ್ಣ, ಜಾತಿಯ ಹೆಸರಿನಲ್ಲಿ ವರ್ಗೀಕರಣಗೊಂಡು ಇಡೀ ಮಾನವ ಸಂಬಂಧಗಳ ಮೌಲ್ಯವನ್ನೇ ಹಾಳು ಮಾಡಿದೆ. ಸಮಾಜದ ಬಹುಪಾಲು ಜನಾಂಗ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬಲಿಷ್ಠವಾಗಿರುವ ಜಾತಿ, ವರ್ಗಗಳ ತುಳಿತಕ್ಕೆ ಸಿಲುಕಿ ನಲುಗಿವೆ. ಅಂಬೇಡ್ಕರ್‌‌ರವರು ಬಾಲ್ಯದಿಂದಲೂ ಕಂಡುಂಡ ಅಸ್ಪೃಶ್ಯತೆಯ ನೋವು ಅಪಮಾನಗಳು ಅವರನ್ನು ಸಾಮಾಜಿಕ ಚಿಂತನೆಡೆಗೆ ಮುಖ ಮಾಡುವಂತೆ ಪೇರೆಪಿಸಿದವು. ಅವರು ಶಿಕ್ಷಣ-ಸಂಘಟನೆ-ಹೋರಾಟ ಎಂಬ ತತ
APA, Harvard, Vancouver, ISO, and other styles
12

ಚಂದ್ರಾವತಿ, ಶೆಟ್ಟಿ. "ಡಾ. ಬಿ.ಆರ್. ಅಂಬೇಡ್ಕರ್‌ ಮತ್ತು ಮಹಿಳಾ ಸಬಲೀಕರಣ". AKSHARASURYA JOURNAL 06, № 05 (2025): 25 to 29. https://doi.org/10.5281/zenodo.15504175.

Full text
Abstract:
ʼಸಂವಿಧಾನ ಶಿಲ್ಪಿ’ ʼಬಾಬಾ ಸಾಹೇಬ್’ ಎಂದು ಜನಪ್ರಿಯರಾಗಿರುವ ಡಾ. ಬಿ. ಆರ್. ಅಂಬೇಡ್ಕರ್‌ರು ಭಾರತ ದೇಶ ಕಂಡ ಬಹುದೊಡ್ಡ ಸಮಾಜ ಸುಧಾರಕ ನ್ಯಾಯಶಾಸ್ತ್ರಜ್ಞರೂ ಅರ್ಥಶಾಸ್ತ್ರಜ್ಞರೂ ಆಗಿರುವ ಬಿ. ಆರ್. ಅಂಬೇಡ್ಕರ್‌ ಅವರು ಮಾಹಾನ್ ಚಿಂತಕರು ಹೌದು. ಶ್ರೇಷ್ಠ ರಾಜಕೀಯ ನಾಯಕರಾಗಿರುವ ಇವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಸಮಾಜದ ಕಲ್ಯಾಣಕ್ಕಾಗಿ ಮಹಿಳೆಯರು ಮತ್ತು ದೀನದಲಿತ ವರ್ಗಕ್ಕಾಗಿ ಕೆಲಸ ಮಾಡಿದರು. ಎಲ್ಲಾ ಸಮಾಜಕ್ಕೂ ದಾರಿದೀಪರಾಗಿರುವ ಬಿ. ಆರ್. ಅಂಬೇಡ್ಕರ್‌ ಅವರು ಕೇವಲ ಒಂದು ವರ್ಗಕ್ಕಾಗಿ ಹೋರಾಟ ಮಾಡಿದ್ದಲ್ಲ. ಕಾರ್ಮಿಕರು, ರೈತರು ಮತ್ತು ಮಹಿಳೆಯರನ್ನು ಒಳಗೊಂಡಿರುವ ʼಅಸಮಾನ ಸಾಮಾಜಿಕ ವ್ಯವಸ್ಥೆ ಮತ್ತು ತುಳಿತಕ್ಕೊಳಗಾದ ವರ್ಗದ ಮಾನವ ಹಕ್ಕುಗಳ ಹೋರಾಟಗಾರರಾಗಿ ಹೋರಾಡಿದವರು ಜಡವಾದ ಸಮಾಜವನ್ನು ಪ
APA, Harvard, Vancouver, ISO, and other styles
13

ಮ.ಸು.ಕೃಷ್ಣಮೂರ್ತಿ. "ಔತ್ತರೇಯ ಸಂತರ ಮೇಲೆ ವೀರಶೈವ ಪ್ರಭಾವ". AKSHARASURYA 04, № 03 (2024): 01 to 36. https://doi.org/10.5281/zenodo.12701300.

Full text
Abstract:
ಬಹುಸಾಂಸ್ಕೃತಿಕ ಸಂಬಂಧಗಳ ಸಂಶೋಧಕ-ಸಾಧಕರು ಮ.ಸು.ಕೃಷ್ಣಮೂರ್ತಿ ಮನುಕುಲವನ್ನು ಇಡಿಯಾಗಿ ಕಾಣುವ ಮನಸ್ಸು, ಕನ್ನಡ-ಹಿಂದಿ ಭಾಷೆ-ಸಾಹಿತ್ಯಗಳ ಸೇತುವೆ, ಎರಡು ಭಾಷೆಗಳಲ್ಲೂ ಬರೆದ ಸವ್ಯಸಾಚಿ, ಬಹುಪ್ರಕಾರಗಳ ಸಾಹಿತ್ಯಕೃಷಿಕ, ಭಾರತೀಯ ಅಧ್ಯಾತ್ಮ ಪರಂಪರೆಯ ಮಹಾಶೋಧಕ ಮೊದಲಾದ ಪ್ರಸಿದ್ಧಿಗೆ ಭಾಜನರಾದ ಸಾಹಿತಿ ಮ.ಸು.ಕೃಷ್ಣಮೂರ್ತಿ ಅವರು. ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಶ್ರೀಯುತರ ಒಂದೊಂದು ಪುಸ್ತಕವೂ ಇವರ ಆಳವಾದ ವಿದ್ವತ್ತಿಗೆ ಸಾಕ್ಷಿಯಾಗಿವೆ. ಕಾದಂಬರಿ, ಕವಿತೆ, ಜೀವನ ಚರಿತ್ರೆ, ಸಣ್ಣಕಥೆ, ನಾಟಕ, ಲಲಿತ ಪ್ರಬಂಧ, ವಚನಗಳು, ಮಕ್ಕಳ ಸಾಹಿತ್ಯ, ಸಂಪಾದನೆ, ಸಂಶೋಧನೆ - ಈ ಎಲ್ಲ ಕ್ಷೇತ್ರಗಳನ್ನು ಸಮೃದ್ಧಗೊಳಿಸುವುದರ ಜೊತೆಗೆ ಎಂ.ಎಸ್.ಕೆ.. ಅವರು ಹಿಂದಿಯಿಂದ ಹಾಗೂ ಇಂಗ್ಲಿಷ್‌ನಿಂದ ಕನ್ನಡಕ್ಕೆ ವಿಪುಲವಾಗಿ ಅನುವಾದಿಸಿದ್ದಾರೆ;
APA, Harvard, Vancouver, ISO, and other styles
14

V., Shivananda. "ಔತ್ತರೇಯ ಭಾರತೀಯ ಭಾಷೆ-ಕೃತಿಗಳಲ್ಲಿ ಕರ್ನಾಟಕ ಸಂಸ್ಕೃತಿಯ ಕೆಲವು ಉಲ್ಲೇಖಗಳು". ಔತ್ತರೇಯ ಭಾರತೀಯ ಭಾಷೆ-ಕೃತಿಗಳಲ್ಲಿ ಕರ್ನಾಟಕ ಸಂಸ್ಕೃತಿಯ ಕೆಲವು ಉಲ್ಲೇಖಗಳು 03, № 02 (2024): 1–18. https://doi.org/10.5281/zenodo.10656661.

Full text
Abstract:
ಕನ್ನಡ ಸಾರಸ್ವತ ಲೋಕದಲ್ಲಿ ಎಲೆಮರೆಯ ಕಾಯಿಯಂತಿದ್ದು ಕನ್ನಡ ಸಂಶೋಧನ ಕ್ಷೇತ್ರವನ್ನು ಮತ್ತಷ್ಟು ಗಟ್ಟಿಯಾಗಿ ವಿಸ್ತರಿಸಿದ ಹಾಗೂ ಶ್ರೀಮಂತಗೊಳಿಸಿದ ವಿದ್ವಾಂಸರಲ್ಲಿ ಡಾ.ವಿ.ಶಿವಾನಂದ ಅವರು ಪ್ರಮುಖರು. ಅತ್ಯುತ್ತಮ ಕನ್ನಡ ಪ್ರಾಧ್ಯಾಪಕರಾಗಿ, ನಿರಂತರ ಅಧ್ಯಯನಶೀಲ ವಿದ್ವಾಂಸರಾಗಿ, ಪ್ರಥಮಶ್ರೇಣಿಯ ಸಂಶೋಧಕರಾಗಿ, ಶ್ರೇಷ್ಠ ಭಾಷಾವಿಜ್ಞಾನಿಯಾಗಿ ಅವರು ತಮ್ಮ ವಿದ್ವತ್ ಪ್ರತಿಭೆಯನ್ನು ಬೋಧನೆ ಮತ್ತು ಬರಹಗಳಲ್ಲಿ ಧಾರೆಯೆರೆದು ಕನ್ನಡ ಸಾರಸ್ವತ ಪ್ರಪಂಚವನ್ನು ಶ್ರೀಮಂತಗೊಳಿಸಿದವರು. ಶ್ರೀಯುತರು ಮೂಲತಃ ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಕನಮಡಿ ಗ್ರಾಮದವರು. ತಂದೆ ಗುರುಪಾದಯ್ಯ, ತಾಯಿ ರಾಚಮ್ಮ. ಹುಟ್ಟಿದ್ದು 1-5-1941. ಪ್ರಾಥಮಿಕ ಶಿಕ್ಷಣವನ್ನು ಕನಮಡಿಯಲ್ಲಿ, ನಂತರ ಶ್ರೀ ಶರಣಬಸವೇಶ್ವರ ಹೈಸ್ಕೂಲ್‌ನಲ್ಲಿ ಹಾಗೂ ಶ್ರೀಶರಣಬಸವೇಶ್ವರ ಕಲ
APA, Harvard, Vancouver, ISO, and other styles
15

Pinto, Melwyn. "ಕುಡ್ಮಿ, ಗೌಡ್ ಸಾರಸ್ವತ್ ಆನಿ ಕಥೊಲಿಕ್ ಕಾಜಾರಾಂನಿ ಸಮಾನ್ ರಿತಿ ರಿವಾಜಿ: ಏಕ್ ಅಧ್ಯಯನ್". MJES Journal of Amar Konkani 1, № 2 (2021): 34–52. https://doi.org/10.69852/aloy.mjesjak.1.2/17853/.

Full text
Abstract:
ಭಾರತಾಂತ್ ಲಗ್ನಾಬಾಂಧ್ ಮ್ಹಳ್ಯಾರ್ ಫಕತ್ ದಾದ್ಲ್ಯಾ ಆನಿ ಸ್ತ್ರೀಯೆ ಮದ್ಲೊ ಕಾನೂನ್ಬೊದ್ಧ್ ಲೈಂಗಿಕ್ ಎಕ್ವಟ್ ಮಾತ್ರ್ ನ್ಹಯ್, ಬಗಾರ್ ಸಮಾಜೆನ್ ಒಪುನ್ ಘೆತ್ಲ್ಲೊತ ಏಕ್ ಸಾಮಾಜಿಕ್ ಬಾಂಧ್. ದೆಕುನ್ ಭಾರತಾಂತ್ ಲಗ್ನ್ ದೊಗಾಂ ವೆಕ್ತಿಮಧೆಂ ನ್ಹಯ್, ಕಾಜಾರ್ ಜಾತೆಲ್ಯಾ ದೊಗಾಂ ವ್ಯಕ್ತಿಚ್ಯಾ ಕುಟ್ಮಾಂಚೆಂ ಮಿಲನ್ ಅಶೆಂ ಲೆಕ್ತಾತ್. ಹಾಕಾ ಲಾಗೊನ್ ಕಾಜಾರಾ ಕಾರ್ಯಾಂತ್ ಸಯ್ರಿಂ, ಸೆಜಾರ್ ಆನಿ ಸಮಾಜ್ಚ್್ ಮೆತೆರ್ ಜಾತಾ. ಸಾಮಾನ್ಯ್ ಜಾವ್ನ್ ಎಕಾ ಧರ್ಮಾಚ್ಯಾ ವಿವಿದ್ ಜಾತಿಂ ಮಧೆಂ ಕಾಜಾರಾ ಕಾರ್ಯಾಚ್ಯಾ ರಿತಿ-ರಿವಾಜಿಂನಿ ಚಡ್ ಫರಕ್ ದಿಸಾನಾ ತರೀ ವಿವಿಧ್ ಧರ್ಮಾಂ ಮಧೆಂ ಸಮಾನ್ ರಿತಿ ರಿವಾಜಿ ಆಸ್ಚ್ಯೊ ಅಪ್ರೂಬ್. ಪುಣ್ ಕುಡ್ಮಿ ಆನಿ ಜಿಎಸ್ಬಿರ ಲೋಕ್ ಹಿಂದು ಜಾವ್ನಾಸ್ಲ್ಯಾರೀ ಕ್ರಿಸ್ತಾಂವಾಂಚ್ಯಾ ಕಾಜಾರಾಂನಿ ಪಳೆಂವ್ಚ್ಯೊ ಜಾಯ್ತ್ಯೊ ರಿವಾಜಿ ತಾಂ
APA, Harvard, Vancouver, ISO, and other styles
16

ಪಂಪಾಪತಿ, ವಿ. "ಅನೈತಿಕ ವ್ಯವಹಾರ ಅಧಿನಿಯಮ ೧೯೫೬: ಒಂದು ವಿಮರ್ಶೆ". International Journal of Advance Research in Multidisciplinary 1, № 2 (2023): 327–29. https://doi.org/10.5281/zenodo.13320859.

Full text
Abstract:
ಅನೈತಿಕ ವ್ಯವಹಾರ ಅಧಿನಿಯಮ ೧೯೫೬ ಭಾರತ ಸರ್ಕಾರ ವೇಶ್ಯಾ ಸಮಸ್ಯೆಯನ್ನು ನಿರ್ಮೂಲನೆಗೊಳಿಸಲು ಮಾಡಿದ ಕಾನೂನಾಗಿದೆ. ೧೯೮೭ರಲ್ಲಿ ಈ ಅಧಿನಿಯಮಕ್ಕೆ ತಿದ್ದುಪಡಿ ತಂದು ಪ್ರಿವೆನ್ನನ್ ಆಫ್ ಇಮ್ಮಾರಲ್ ಟ್ರಾಫಿಕ್ ಆಕ್ಟ್ ೧೯೫೬ ಎಂಬುದಾಗಿ ಮಾರ್ಪಡಿಸಿ ಇನ್ನಷ್ಟು ಬಲಗೊಳಿಸಲಾಗಿದೆ. ಈ ಕಾಯಿದೆಯನ್ನು ಮಹಿಳೆಯರು ಎದುರಿಸುತ್ತಿರುವ ವೇಶ್ಯಾಸಮಸ್ಯೆಯ ನಿವಾರಣಾ ಉದ್ದೇಶವಿಟ್ಟುಕೊಂಡು ರಚಿಸಲಾಗಿದೆ. ವಯಸ್ಸಿಗೆ ಬಂದ ಯುವತಿಯರು ವೇಶ್ಯೆಯರಾಗಬಾರದು. ವಯಸ್ಸಿಗೆ ಬಂದ ಹುಡುಗರು ವಿಟರಾಗಬಾರದು ಮತ್ತು ಬದುಕಲು ಹೆಣ್ಣಾಗಲಿ, ಗಂಡಾಗಲಿ ವೇಶ್ಯಾವೃತ್ತಿಯನ್ನು ಅವಲಂಬಿಸಬಾರದು. ವೇಶ್ಯಾವೃತ್ತಿ ಮಾಡುವವಳು ಹೆಣ್ಣಾದರು ಅವಳ ಹಿಂದೆ ಇರುವ ದಲ್ಲಾಳಿಗಳು, ಏಜೆಂಟರು, ತಲೆಹಿಡುಕರು, ವೇಶ್ಯಾ ಗೃಹಗಳ ಮಾಲೀಕರು ಈ ವೃತ್ತಿಯನ್ನು ಅತ್ಯಂತ ಜೀವಂತವಾಗಿಟ್ಟುಕೊಂಡು ತಮ್ಮ ಬೆಳವಣಿಗ
APA, Harvard, Vancouver, ISO, and other styles
17

Nayak, Chandrakala. "ಚಪ್ಟೇಕಾರ್ ಸಾರಸ್ವತ್ ಬ್ರಾಹ್ಮಣ್ ಸಮುದಾಯ್ ಆನಿ ತಾಂಚೆಂ ಆಚರಣ್ – `ಗೋಂದೋಳು’". MJES Journal of Amar Konkani 1, № 2 (2021): 21–33. https://doi.org/10.69852/aloy.mjesjak.1.2/17844/.

Full text
Abstract:
ಜೆರಾಲ್ ರಿತಿನ್ ಆರ್ಎಡಸ್ಬಿದ ಮ್ಹಣ್ ಒಳ್ಕೊಂಚೆ ರಾಜ್ಪುಕರಿ ಸಾರಸ್ವತ್ ಬ್ರಾಹ್ಮಣ್, ಸಾರಸ್ವತ್ ಬ್ರಾಹ್ಮಣ್ ಸಮುದಾಯಾಚೊ ಏಕ್ ವಾಂಟೊ ಜಾವ್ನಾಸಾತ್. ಹಾಂಚಿ ಮಾಂಯ್ ಭಾಸ್ ಕೊಂಕಣಿ. ಪುಡ್ತುಗೆಜಾಂಚ್ಯಾ ಕಾಳಾರ್ ಇಂಕ್ವಿಜಿಸಾಂವಾಕ್ ಲಾಗೊನ್ ಗೊಂಯ್ ಸಾಂಡುನ್ ಕರ್ನಾಟಕ್ ಕರಾವಳಿ ಆನಿ ಕೇರಳ ಕರಾವಳಿಕ್ ಆಯ್ಲೆಲ್ಯಾ ಸಾರಸ್ವತಾಂ ಪಯ್ಕಿ, ಚಪ್ಟೇಕರ್ ಸಾರಸ್ವತ್ ಬ್ರಾಹ್ಮಣಾಂಚೊ ಸಮುದಾಯ್ ದಕ್ಷಿಣ್ ಕನ್ನಡ್, ಕಾಸರ್ಗೋಲಡ್ ಆನಿ ಉಡುಪಿ ಜಿಲ್ಲೆಂತ್ ಶಿಂಪಡ್ಲಾ. ಹೊ ಸಮುದಾಯ್ ಹಿಂದು ಧರ್ಮಾಚಿಂ ಚಡ್ತಾವ್ ಸರ್ವ್ ಫೆಸ್ತಾಂ ಆಚರಣ್ ಕರ್ತಾತ್ ತರೀ `ಗೋಂದೋಳು' ಮ್ಹಳ್ಳೆಂ ಏಕ್ ಆಚರಣ್ ಹ್ಯಾ ಸಮುದಾಯಾಚಿ ವಿಶಿಶ್ಟತಾ. ಹ್ಯಾ ಆಚರಣಾವಿಶಿಂ ಯೆದೊಳ್ ಕೊಣೆಂಯ್ ಸೊಧ್ ವಾವ್ರ್ ಕರ್ನ್ ಬರಯಿಲ್ಲೆಂ ವಾ ಛಾಪ್ಲ್ಲ್ಯಾ ಚೊ ದಾಖ್ಲೊ ನಾ. ಕೊಂಕಣಿ ಪದ್ಯುತ್ತರ್ ಡಿಪ್ಲೊಮಾ ವಿ
APA, Harvard, Vancouver, ISO, and other styles
18

ಚವ್ಹಾಣ, ಡಾ. ರಮೇಶ ಶಂಕರ್. "ರಾಮಾಯಣದ ಆದಿಕವಿ ಶ್ರೀ. ಮಹರ್ಷಿ ವಾಲ್ಮೀಕಿ". Journal of Research & Development 10, № 10 (2024): 166–69. https://doi.org/10.5281/zenodo.14729346.

Full text
Abstract:
<strong>सारांश:-</strong> ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕರ್ನಾಟಕದ ಇತಿಹಾಸ, ಸಂಸ್ಕೃತಿ ಮತ್ತು ಕರ್ನಾಟಕವನ್ನು ಆಳಿದ ವಿವಿದ ರಾಜಮನೆತನಗಳ ಹೆಸರು ಇತಿಹಾಸದುದ್ದಕ್ಕೂ ಪ್ರಸಿದ್ಧವಾಗಿದೆ. ಭಾರತದಲ್ಲಿ ರಾಮಾಯಣ ಮತ್ತು ಮಹಾಭಾರತ ಇವೆರಡು ಪ್ರಮುಖ ಕಾವ್ಯಗಳಾಗಿದ್ದು, ಭಾರತೀಯರ ಅಖಂಡತೆರ ಸಂಸ್ಕೃತಿಕ ಹಿರಿಮೆ ಗರಿಮೆಗಳು ಇಲ್ಲಿನ ಸಂಪ್ರದಾಯಜನ ಸಾಮಾನ್ಯರ ಜನಜೀವನ ಕುರಿತಾದ ಜಾನಪದೀಯ ಅಂಶಗಳಿವು ಇವೆರಡು ಕಾವ್ಯ ಪ್ರಕಾರಗಳಲ್ಲಿ ಮೇಳೈಸಿಕೊಂಡಿವೆ. ಕ್ರಿಸ್ತ ಪೂರ್ವದ ಸುಮಾರು ಮೂರ ಸಾವಿರ ವರ್ಷಗಳ ಹಿಂದೆ ಸಂಸ್ಕೃತ ಭಾಷೆಯ ಚತುರ್ವೇದಗಳು ಉದಯಿಸಿದವು ಹೊಸ ಆಗಮನಗಳು ಆವಿರ್ಭವಿಸಿದವು ಅವುಗಳನ್ನು ಹಿಂಬಾಲಿಸಿ, ಅವುಗಳಲ್ಲಿಯೂ ಕೆಲವು ಉಲ್ಲೇಖಿತ ಸಮಾಜದ ಕಟ್ಟಳೆಗಳಿಗೆ ಅನುಗುಣವಾಗಿ, ಸಂಪ್ರದಾಯಸ್ಥ ಭಾರತೀಯ ಜನರು ಜಪ, ತಪ, ಹೋಮ, ಹವನ ಇತ್ಯಾದಿಗಳೆಲ್ಲ
APA, Harvard, Vancouver, ISO, and other styles
19

ಗೀತಾ, ಎ.ಸಿ. "ಅಕ್ಕಮಹಾದೇವಿಯ ವಚನಗಳಲ್ಲಿ ಸ್ತ್ರೀ ಚಿಂತನೆಗಳು". AKSHARASURYA JOURNAL 06, № 04 (2025): 42 to 48. https://doi.org/10.5281/zenodo.15490848.

Full text
Abstract:
ಹನ್ನೆರಡನೆಯ ಶತಮಾನವೆಂದರೆ; ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಸಾಹಿತ್ಯಿಕ ಕ್ಷೇತ್ರದಲ್ಲಿ ಬದಲಾವಣೆಗೊಂಡ ಕಾಲ. ಅದನ್ನು ಕ್ರಾಂತಿ ಎಂದೇ ಕರೆಯಬೇಕಾಗುತ್ತದೆ. ಹಿಂದೆ ಸಮಾಜದಲ್ಲ್ಲಿದ್ದ ಅಸಮಾನತೆ, ಶೋಷಣೆಗಳನ್ನು ಕಂಡು ಅನುಭವಿಸಿದ್ದ ಶರಣ, ಶರಣೆಯರು ಮೇಲು-ಕೀಳು ಸ್ತ್ರೀ-ಪುರುಷ ಇತ್ಯಾದಿ ಭೇದ ರಹಿತವಾದ ವರ್ಗರಹಿತವಾದ ಸಮಾಜವನ್ನು ಕಟ್ಟಲು ಪ್ರಯತ್ನಿಸಿದರು. 12ನೇ ಶತಮಾನದ ಪ್ರಸಿದ್ಧ ವಚನಕಾರ್ತಿ ಅಕ್ಕಮಹಾದೇವಿ. ಬಸವಣ್ಣನವರ ಸಮಕಾಲೀನಳಾಗಿ ಬದುಕಿದಳು. ಈಕೆ ಶಿವಶರಣೆಯಾಗಿ, ವಚನಕಾರ್ತಿಯಾಗಿ, ಚೆನ್ನಮಲ್ಲಿಕಾರ್ಜುನನ ಭಕ್ತೆಯಾಗಿ ಪ್ರಸಿದ್ಧಳಾದವಳು. ಈಕೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿ ಎಂಬ ಗ್ರಾಮದಲ್ಲಿ ನಿರ್ಮಲ ಮತ್ತು ಸುಮತಿಯರ ಮಗಳಾಗಿ ಜನಿಸಿದಳು. ಬಾಲ್ಯದಲ್ಲೇ ಶಿವಭಕ್ತಿಯನ್ನು ಹೊಂದಿದ್ದ ಈಕೆಗೆ ಶಿವಪೂಜೆ ಶಿವಧ್ಯಾನಗಳೇ
APA, Harvard, Vancouver, ISO, and other styles
20

ಲೋಕೇಶ, ಆರ್. "ಮೈಸೂರು ಅರಸರ ಕಾಲದ ಸಮ-ತತ್ತ್ವದ ಶಿಕ್ಷಣದ ವ್ಯವಸ್ಥೆ". AKSHARASURYA JOURNAL 03, № 04. SPECIAL ISSUE. (2024): 74 to 82. https://doi.org/10.5281/zenodo.10929729.

Full text
Abstract:
ನಮ್ಮ ನಾಡಿನ ಪ್ರಾಚಿನ ಪರಂಪರೆ ಹಾಗೂ ಸನಾತನವೆನಿಸಿದ ಭಾರತೀಯ ಜ್ಞಾನ ಸಂಪತ್ತು ಮತ್ತು ಚಿಂತನಶೀಲತೆ ರಾಷ್ಟ್ರೀಯ ಶಿಕ್ಷಣ ನೀತಿಯ ದಾರಿದೀಪವಾಗಿದೆ. ಜ್ಞಾನ, ವಿವೇಕ ಹಾಗೂ ಸತ್ಯ ಭಾರತೀಯ ದಾರ್ಶನಿಕ ಚಿಂತನೆಯ ಅತ್ಯುನ್ನತ ಸಾಧನೆಯ ಗುರಿಗಳಾಗಿದ್ದವು. ಆತ್ಮಸಾಕ್ಷಾತ್ಕಾರ ಮತ್ತು ಆತ್ಮವಿಮೋಚನೆ ಶಿಕ್ಷಣದ ಗುರಿಯಾಗಿತ್ತು. ಅತ್ಯುತ್ತಮ ಮಟ್ಟದ ಬಹುಶಿಸ್ತೀಯ ಅಧ್ಯಯನಗಳು ಜ್ಞಾನದ ಗಡಿಗಳನ್ನು ವಿಸ್ತರಿಸಿ ಎಲ್ಲೆಡೆಯಿಂದಲೂ ಜ್ಞಾನ ಸ್ವೀಕಾರ ಕಾರ್ಯ ನಡೆಯುತ್ತಲೇ ಇತ್ತು. ಇದು ಕನ್ನಡ ನಾಡಿಗೂ ಮಾದರಿಯಾಗಿ ಕನ್ನಡ ನಾಡು ಕೂಡ ಯಾವುದಕ್ಕೂ ಹಿಂದೆ ಬೀಳದೆ ತನ್ನದೇ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳುತ್ತಲೇ ಮಾದರಿ ರಾಜ್ಯವಾಗಿ ಚರಿತ್ರೆಯಲ್ಲಿ ಗುರುತಾಗತೊಡಗಿತು. ಭಾರತೀಯ ಭವ್ಯ ಪರಂಪರೆಯಲ್ಲಿ ಕನ್ನಡ ನಾಡಿನ ಹಿರಿಮೆ ದೇಸೀ ತನದಿಂದಲೇ ಹೆಸರಾದುದು. ಅದು ಬ
APA, Harvard, Vancouver, ISO, and other styles
21

ರಾಘವೇಂದ್ರ, ಬಿ. ಎ. ದ್ರಾಕ್ಷಿ, та ಹೆಚ್‌. ವಿಶ್ವಮಾನವ ವಿಜಯಕುಮಾರ. "ಚೆನ್ನಣ್ಣ ವಾಲೀಕಾರ ಅವರ ಕಥೆಗಳಲ್ಲಿ ಪ್ರತಿರೋಧದ ನೆಲೆ". AKSHARASURYA 04, № 02 (2024): 98 to 112. https://doi.org/10.5281/zenodo.11525890.

Full text
Abstract:
ಕಥೆ ಹೇಳುವುದು ಮತ್ತು ಕೇಳುವುದು ಮನುಷ್ಯನ ಆಸಕ್ತಿ ಮತ್ತು ಹವ್ಯಾಸಿ ಎರಡು ಹೌದು. ಕೆಲವು ವರ್ಷಗಳ ಹಿಂದೆ ದೂರದರ್ಶದನಂತಹ ಮಾಧ್ಯಮಗಳು ಬರುವುದಕ್ಕೆ ಮುಂಚೆ ಭಾರತದಂತಹ, ಕರ್ನಾಟಕದಂತಹ ಹಳ್ಳಿಗಳಲ್ಲಿ ಹಿರಿಯರು ಹೇಳುವ ಕತೆಗಳೇ ಮನರಂಜನೆಯ ತಾಣಗಳು ಆಗಿದ್ದವು. ನನಗೆ ನೆನಪಿರುವ ಹಾಗೆ ಚಿಕ್ಕವನಿರುವಾಗ ನಮ್ಮ ಅಜ್ಜಿಯೂ ಹಲವೂ ಕಥೆಗಳನ್ನು ಹೇಳಿ ಕಥೆ ಎಂದರೆ ಏನು ಎಂಬುದನ್ನು ಪರಿಚಯಿಸಿದ್ದಳು. ಅಷ್ಟೇ ಅಲ್ಲದೆ ಅವರು ಹೇಳುವ ಕಥೆಗಳಲ್ಲಿ ಜೀವನದ ಬದುಕಿನ ಅನುಭವದ ಸತ್ಯಾಸತ್ಯಗಳನ್ನು ಒಳಗೊಂಡಿರುವಂತಹ ಮೌಲ್ಯಯುತವಾದ, ನೀತಿಯುತವಾದ ಸಂದೇಶಗಳನ್ನು ಸಾರುವ ಕಥೆಗಳಾಗಿದ್ದವು. ಇಂತಹ ಕಥೆಗಳನ್ನು ಹಿರಿಯರಿಂದ ಕೇಳಿ ಆಧುನಿಕ ಕಥಾ ಸಾಹಿತ್ಯದಲ್ಲಿ ಹಲವಾರು ಕಥೆಗಳನ್ನು ಬರೆದ ಕಥೆಗಾರರು ಕನ್ನಡ ಸಾಹಿತ್ಯದಲ್ಲಿ ಕಂಡು ಬರುತ್ತಾರೆ. ಅವರಲ್ಲಿ ಚೆನ್ನಣ್ಣ ವಾಲೀಕಾರರು
APA, Harvard, Vancouver, ISO, and other styles
22

ಗಿರಿಯಪ್ಪ, ಎನ್. ಜಿ. "ಕುಲಕ್ಕೆ ತಿಲಕ ನಮ್ಮ ಮಾದರ ಚೆನ್ನಯ್ಯ". AKSHARASURYA 04, № 03 (2024): 109 to 116. https://doi.org/10.5281/zenodo.12672850.

Full text
Abstract:
ಮಾದರ ಚೆನ್ನಯ್ಯ 12ನೇ ಶತಮಾನಕ್ಕಿಂತಲೂ ಹಿಂದೆ ಜೀವಿಸಿದ್ದವನು. ಮಾದರ ಚೆನ್ನಯ್ಯನು ಹಲವಾರು ವಚನಗಳನ್ನು ರಚಿಸಿದ್ದಿರಬಹುದು ಆದರೆ ಚೆನ್ನಯ್ಯನು ಬರೆದ ವಚನಗಳಲ್ಲಿ ಸದ್ಯಕ್ಕೆ 10 ವಚನಗಳು ದೊರೆತಿರುತ್ತವೆ. &ldquo;ಕೈಯುಳಿ ಕತ್ತಿ ಅಡಿಗೂಟಕ್ಕಡಿಯಾಗಬೇಡ&rdquo; ಎಂಬುದು ಚೆನ್ನಯ್ಯನ ವಚನಗಳ ಅಂಕಿತವಾಗಿದೆ. ಚೆನ್ನಯ್ಯನು ಚೋಳ ರಾಜನ ಆಸ್ಥಾನದಲ್ಲಿ ಲಾಯದ ಕುದುರೆಗಳಿಗೆ ಹುಲ್ಲು ತರುವ ಕೆಲಸ ಮಾಡುತ್ತಿದ್ದನು. ಚೆನ್ನಯ್ಯ ಗುಪ್ತ ಶಿವಭಕ್ತನಾಗಿದ್ದನು. ಅದೇ ರೀತಿ ಚೋಳರಾಜನು ಮಹಾಶಿವ ಭಕ್ತನಾಗಿದ್ದನು. ಪ್ರತಿದಿನ ಚೋಳ ರಾಜನ ಮನೆಯಲ್ಲಿ ದಿವ್ಯವಾದ ಅನ್ನವನ್ನು ಶಿವನುಂಡು ತೃಪ್ತ ನಾಗುವವರೆಗೂ ಕಾದಿರುತ್ತಿದ್ದನು. ಒಮ್ಮೆ ಚೋಳನ ಮನೆಗೆ ಶಿವನು ಊಟ ಸವಿಯಲು ಬಂದಿರುವುದಿಲ್ಲ. ಅಂದು ಶಿವನು ಚೆನ್ನಯ್ಯನ ಮನೆಯಲ್ಲಿ ಅಂಬಲಿ ರುಚಿಸವಿದು ಸಂತೃಪ್ತನಾಗಿರುತ್
APA, Harvard, Vancouver, ISO, and other styles
23

ಮನೋಹರ, ಕೆ. ಜಿ. "ಶಾಸ್ತ್ರೀಯ ಭಾಷಾ ಸ್ಥಾನಮಾನದ ಚಾರಿತ್ರಿಕ ಹಿನ್ನೋಟ". AKSHARASURYA 03, № 05 (2024): 94–106. https://doi.org/10.5281/zenodo.10938108.

Full text
Abstract:
ಅತ್ಯಂತ ಪ್ರಾಚೀನವೂ ಸ್ವತಂತ್ರವೂ ಸುದೀರ್ಘ ಸಮೃದ್ಧ ಸಾಹಿತ್ಯ ಪರಂಪರೆಯನ್ನು ಉಳ್ಳದ್ದು ಮತ್ತು ಹೆಚ್ಚು ಜನಬಳಕೆಯಲ್ಲ್ಲಿದ್ದ ಭಾಷೆಯನ್ನು ಶಾಸ್ತ್ರೀಯ ಭಾಷೆ ಎಂದು ಕರೆಯುತ್ತಾರೆ. ಶಾಸ್ತ್ರೀಯ ಎನ್ನುವುದಕ್ಕೆ ಸನಾತನ, ಪ್ರಾಚೀನ, ಪಾರಂಪರಿಕ, ಶಾಸ್ತ್ರ ಸಮ್ಮತವಾದ ಎಂಬರ್ಥಗಳಿವೆ. ಪ್ರಪಂಚದ ಅತಿ ಪ್ರಾಚೀನ ಮತ್ತು ಸಮೃದ್ಧವಾದ ಭಾಷೆಗಳನ್ನು ಕ್ಲಾಸಿಕಲ್ ಭಾಷೆಗಳೆಂದು, ಶಾಸ್ತ್ರೀಯ ಭಾಷೆಗಳೆಂದು ಕರೆಯುತ್ತಾರೆ. ಪ್ರಪಂಚದಲ್ಲಿರುವ ಶಾಸ್ತ್ರೀಯ (ಕ್ಲಾಸಿಕಲ್) ಭಾಷೆಗಳನ್ನು ಯುನೆಸ್ಕೋ ಮೂರು ವರ್ಗದಲ್ಲಿ ಗುರುತಿಸಿದೆ. ಅವುಗಳೆಂದರೆ: ಇಂಡೋ ಯುರೋಪಿಯನ್ ಭಾಷೆಗಳು - ಕ್ಲಾಸಿಕಲ್ ಗ್ರೀಕ್, ಲ್ಯಾಟಿನ್, ಸಂಸ್ಕೃತ, ಕ್ಲಾಸಿಕಲ್, ಪರ್ಷಿಯನ್.ಆಪ್ರೊ ಏಷಿಯಾಟಿಕ್ ಭಾಷೆಗಳು - ಕ್ಲಾಸಿಕಲ್ ಅರೇಬಿಕ್, ಹೀಬ್ರೂ.ಸಿನೋ ಟಿಬೇಟಿಯನ್ ಭಾಷೆಗಳು - ಕ್ಲಾಸಿಕಲ್ ಚೈನೀಸ್.&
APA, Harvard, Vancouver, ISO, and other styles
24

ಅನ್ನಪೂರ್ಣ, ಗುಡುದೂರು. "ಎಲ್.ಎಸ್.ಶೇಷಗಿರಿ ರಾವ್ರವರ 'ಕಾದಂಬರಿ ಮತ್ತು ಸಾಮಾನ್ಯ ಮನುಷ್ಯ' ವಿಮರ್ಶಾ ಕೃತಿಯ ಅವಲೋಕನ". AKSHARASURYA 03, № 06 (2024): 86 to 96. https://doi.org/10.5281/zenodo.11127118.

Full text
Abstract:
ಎಲ್.ಎಸ್. ಶೇಷಗಿರಿರಾವ್ ಅವರು ಖ್ಯಾತ ವಿಮರ್ಶಕರೆಂದೇ ಗುರುತಿಸಿಕೊಂಡವರು. ವಿಮರ್ಶಕರಲ್ಲದೆ ಬಹುಮುಖ ಪ್ರತಿಭೆ ಉಳ್ಳವರು ಎಂಬುದು ಇವರ ವಿಭಿನ್ನ ಸಾಹಿತ್ಯ ಕೃತಿಗಳಿಂದ ಗೋಚರವಾಗುತ್ತದೆ. ವಿಮರ್ಶೆಯಲ್ಲಿಯೂ ನಾವು ಇವರನ್ನು ಯಾವುದೇ ಒಂದು ಕಾಲಘಟ್ಟಕ್ಕೆ ಅಥವಾ ಒಂದೇ ಸಾಹಿತ್ಯ ಪ್ರಕಾರದ ವಿಮರ್ಶೆಯೊಳಗೆ ಗುರುತಿಸಲಾಗದು. ಎಲ್ಲ ಕಾಲಘಟ್ಟದ ಸಾಹಿತ್ಯ ಕೃತಿಗಳನ್ನು ವಿಮರ್ಶಿಸಿ ಸಮನ್ವಯ ಸಾಧಿಸಿದ ವಿಮರ್ಶಕರು ಇವರು. ಇಂಗ್ಲಿಷ್ ಸಾಹಿತ್ಯದಲ್ಲಿಯೂ ಇವರ ವಿಮರ್ಶೆ ಹೀಗೆಯೇ ಸಾಗಿದೆ. ಸಾಹಿತ್ಯದ ವಿವಿಧ ಕಾಲಘಟ್ಟಗಳ ಧ್ಯೇಯ ಧೋರಣೆಗಳನ್ನು ಬಲ್ಲವರಾಗಿದ್ದ ಇವರು ಒಂದು ಭಾಷೆಯ ಸಾಹಿತ್ಯದ ಸಮೀಕ್ಷೆಯನ್ನು, ಚರಿತ್ರೆಯನ್ನು ಬರೆದಿದ್ದಾರೆ. ಗ್ರೀಕ್ ರಂಗಭೂಮಿ ಮತ್ತು ನಾಟಕ, ಇಂಗ್ಲಿಷ್ ಸಾಹಿತ್ಯ ಚರಿತ್ರೆ, ಹೊಸಗನ್ನಡ ಸಾಹಿತ್ಯ ಚರಿತ್ರೆ ಬರೆದಿರುವ ಇವರ ಈ ಕೃತಿಗ
APA, Harvard, Vancouver, ISO, and other styles
25

ಮಲರ್‌, ವಿಳಿ ಕೆ. "ಸಂಗಂ ಸಾಹಿತ್ಯ-ನಟ್ರಿಣೈ ಕೃತಿಯ ವಾಸ್ತವತೆಯ ಪರಿ". AKSHARASURYA JOURNAL 06, № 01 (2025): 01 to 11. https://doi.org/10.5281/zenodo.14961255.

Full text
Abstract:
ಸಂಗಂ ಸಾಹಿತ್ಯವು ಭಾರತೀಯ ಸಾಹಿತ್ಯ ಚರಿತ್ರೆಯಲ್ಲಿ ಪ್ರಾಚೀನತೆಯ ದೃಷ್ಟಿಯಿಂದ ಪ್ರಮುಖ ಹಾಗೂ ಅದ್ವಿತೀಯವಾಗಿದೆ. (ಅಗಂ) ಆಂತರಿಕ (ಪುಱಂ) ಬಾಹ್ಯ ವಿಷಯಗಳಿಗೆ ಸಂಬಂಧಿಸಿದಂತೆ ರಚಿತವಾಗಿರುವ ಈ ಕಾವ್ಯ (ಹಾಡು)ಗಳನ್ನು ಆ ಕಾಲದಲ್ಲಿದ್ದ ವಿವಿಧ ಕವಿಗಳು ತೊಲ್ಕಾಪ್ಪಿಯಂ ಕೃತಿಯಲ್ಲಿ ಸೂಚಿಸಿದ ನಿಯಮಗಳಿಗನುಸಾರವಾಗಿ ರಚಿಸಿದ್ದಾರೆ. ಪ್ರೇಮ, ವಿರಹ, ಕಾತುರ, ರಸಿಕತೆ, ದಾನಧರ್ಮ, ವೀರ, ಶೌರ್ಯ, ಮುಂತಾದ ವಿಷಯಗಳನ್ನೊಳಗೊಂಡಿವೆ.ಸಂಗಂ ಕಾವ್ಯಗಳೆಲ್ಲ ಮನುಷ್ಯನನ್ನೇ ಕೇಂದ್ರವಾಗಿಟ್ಟುಕೊಂಡು ರಚನೆಯಾಗಿವೆ. ಎರಡು ಸಾವಿರ ವರ್ಷಗಳ ಹಿಂದೆ ನಾಗರಿಕತೆಯ ಪ್ರಭಾವ ಅಷ್ಟಾಗಿ ಇಲ್ಲದ ಪ್ರಾರಂಭ ಕಾಲದಲ್ಲಿ ಹಸಿವು, ಕಾಮ, ವಿರಹ, ನಿಯಮ, ದಾನ, ಧರ್ಮ, ಮಾನವೀಯತೆ ಹಾಗೂ ಜೀವನವನ್ನು ಕಂಡ ಅನುಭವಿಸಿದ, ಅರಿತುಕೊಂಡ ವಿಚಾರಗಳೊಂದಿಗೆ ಆತನ ಕಲ್ಪನೆ, ಜೀವನ ಪ್ರೀತಿ, ಶ್ರದ್
APA, Harvard, Vancouver, ISO, and other styles
26

ನಾಯಕರ, ಹುಲುಗಪ್ಪ. "ಹುಲಿಗಿಯ ಹುಲಿಗೆಮ್ಮ ದೇವಿ: ಒಂದು ಸಾಂಸ್ಕೃತಿಕ ನಂಬಿಕೆ". AKSHARASURYA JOURNAL 04, № 06 (2024): 80 to 87. https://doi.org/10.5281/zenodo.13724881.

Full text
Abstract:
ತುಂಗಾಭದ್ರ ನದಿಯ ಎಡದಂಡೆಯ ಮೇಲಿರುವ ಕೊಪ್ಪಳ ಜಿಲ್ಲೆಯ, ಕೊಪ್ಪಳ ತಾಲೂಕಿನ ಹಿಟ್ನಾಳ ಹೋಬಳಿಗೆ ಸೇರಿದ ಹುಲಿಗಿ ಗ್ರಾಮವು ಚಿಕ್ಕದಾದರೂ ಸಹ ಅದರ ಹೆಸರು ನೆರೆಯ ರಾಜ್ಯಗಳಿಗೂ ಹರಡಿಕೊಂಡಿದೆ. ಈ ಪ್ರದೇಶದಲ್ಲಿ ತುಂಗಾಭದ್ರ ನದಿ ಇರುವುದರಿಂದ ನೀರಾವರಿ ಸೌಲಭ್ಯದಿಂದಾಗಿ ಸದಾ ಭತ್ತ, ಕಬ್ಬುಗಳನ್ನು ಬೆಳೆಯುತ್ತಾ ಹಸಿರು ಸೀರೆಯುಟ್ಟಂತೆ ಕಂಗೊಳಿಸುತ್ತದೆ. ಹುಲಿಗಿ ಗ್ರಾಮದ ಜನಪದ ಸಂಸ್ಕೃತಿ ಇತಿಹಾಸವು ಕೊಪ್ಪಳ ಜಿಲ್ಲೆಯಿಂದ ಹೊರತಾಗಿರಲಿಲ್ಲ. ಜಿಲ್ಲೆಯ ಒಂದು ಭಾಗವಾಗಿರುವ ಹುಲಿಗಿ ಗ್ರಾಮವು ಅದರೊಂದಿಗೆ ತನ್ನ ಜನಪದ ಸಂಸ್ಕೃತಿ ಇತಿಹಾಸವನ್ನು ರೂಪಿಸಿಕೊಂಡಿದೆ.&nbsp; ಈ ಪ್ರದೇಶದಲ್ಲಿ ಎಲ್ಲಾ ಧರ್ಮಗಳು ಕಂಡುಬರುತ್ತವೆ. ಶೈವ, ಜೈನ, ವೈಷ್ಣವ, ಶಕ್ತ ಪಂಥಗಳು ಈ ಗ್ರಾಮದಲ್ಲಿರುವುದನ್ನು ಅಲ್ಲಿರುವ ದೇವಾಲಯಗಳಲ್ಲಿ ಅವುಗಳನ್ನು ಆರಾಧಿಸುವುದರಿಂದ ಕಾಣಬಹುದ
APA, Harvard, Vancouver, ISO, and other styles
27

ಅರುಣ್‌ಕುಮಾರ್, ಬಿ., та ರಾಮಕೃಷ್ಣಯ್ಯ ಕೆ. "ಆಧುನಿಕ ಕನ್ನಡ ರಂಗಭೂಮಿಯಲ್ಲಿ ರಂಗನಿರ್ದೇಶಕರಾಗಿ ಬಿ. ವಿ. ಕಾರಂತರ ಕೊಡುಗೆ". AKSHARASURYA JOURNAL 06, № 03 (2025): 01 to 10. https://doi.org/10.5281/zenodo.15343656.

Full text
Abstract:
ಆಧುನಿಕ ಕನ್ನಡ ರಂಗಭೂಮಿಯ ನಿರ್ದೇಶಕರಾಗಿರುವ ಬಿ. ವಿ. ಕಾರಂತ ಅವರು ಬಾಲ್ಯದಲ್ಲಿ ಬೆಳೆದದ್ದು ಕನ್ನಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಅವರ ಕಣ್ಣುಗಳು, ಮತ್ತು ಕಿವಿಗಳು ಯಕ್ಷಗಾನ, ಜಾತ್ರೆ, ಕೋಲ, ರಥೋತ್ಸವ, ಪದ-ದಾನಗಳು ಮತ್ತು ವಿವಿಧ ಸಂಗೀತ ವಾದ್ಯಗಳ ಧ್ವನಿ ವಿನ್ಯಾಸಗಳಿಗೆ ತೆರೆದುಕೊಂಡವು. ಇವರು ಪ್ರಸಿದ್ಧ ಗುಬ್ಬಿ ವೀರಣ್ಣ ಕಂಪನಿಯವರು ಪುತ್ತೂರಿನಲ್ಲಿ ಬೀಡುಬಿಟ್ಟಾಗ ಅಲ್ಲಿ &lsquo;ಕೃಷ್ಣಲೀಲಾ&rsquo; ನಾಟಕವನ್ನು ನೋಡಿ ನಾಟಕದ ಕಡೆಗೆ ಆಸಕ್ತರಾದರು. ನಂತರ ಅವರು ಗುಬ್ಬಿ ಕಂಪನಿಗೆ ಸೇರಿಕೊಂಡರು. ಅವರು ಡಾ. ರಾಜಕುಮಾರರಂತಹ ಹಿರಿಯರ ನಟರ ಜೊತೆಗೆ ಅಭಿನಯವನ್ನು ಮಾಡಿದರು. ಗುಬ್ಬಿ ವೀರಣ್ಣನವರು ಕಾರಂತರನ್ನು ಸ್ನಾತಕೋತ್ತರ ಪದವಿ ಅಭ್ಯಾಸಕ್ಕೆ ಬನಾರಸ್ ವಿಶ್ವವಿದ್ಯಾಲಯಕ್ಕೆ ಕಳುಹಿಸಿದರು. ಅಲ್ಲಿ ಅವರು ಹಿಂದೂಸ್ತಾನಿ ಸಂಗೀತವನ್ನು ಕಲಿತ
APA, Harvard, Vancouver, ISO, and other styles
28

Pinto, Melwyn. "‘ಎದೆಯ ಹಣತೆ’ (Heart Lamp) ಬುಕರ್ ಪ್ರಶಸ್ತೆ ಸಂದರ್ಭಿಂ ಭಾಶಾಂತರಾ ವಿಶಿಂ ಥೊಡೆ ವಿಚಾರ್". MJES Journal of Amar Konkani 4, № 2 (2025): 5–9. https://doi.org/10.69852/aloy.mjesjak.4.2/18582.

Full text
Abstract:
ಆಯ್ಲೆವಾರ್ ಕನ್ನಡ ಥಾವ್ನ್ ಇಂಗ್ಲಿಷಾಕ್ ಭಾಷಾಂತರ್ ಜಾಲ್ಲ್ಯಾ ಎಕಾ ಮಟ್ವ್ಯಾ ಕಾಣಿಯಾಂಚ್ಯಾ ಬುಕಾಕ್ ಪ್ರತಿಷ್ಟಿತ್ ಬುಕರ್ ಪ್ರಶಸ್ತಿ ಮೆಳ್ಳಿ. ಬುಕರ್ ಪ್ರಶಸ್ತಿ, ಇಂಗ್ಲಿಷ್ ಭಾಶೆಂತ್ ಇಂಗ್ಲೆಂಡ್ ವಾ ಐಯರ್ಲೆಂಡಾಂತ್ ಪ್ರಕಟ್ ಜಾಲ್ಲ್ಯಾ ಎಕಾ ಬುಕಾಕ್ ಮೆಳ್ಚಿ ವಾರ್ಷಿಕ್ ಪ್ರಶಸ್ತಿ. ಥೊಡ್ಯಾ ವರ್ಸಾಂ ಥಾವ್ನ್ ಹಿ ಪ್ರಶಸ್ತಿ ಭಾಶಾಂತರ್ ಜಾಲ್ಲ್ಯೆ ಕೃತಿಯೆಕ್ಯೀ ದಿತಾತ್. ಬಾನು ಮುಷ್ತಾಕ್ ಹಿಚ್ಯಾ ‘ಎದೆಯ ಹಣತೆ’ ಕೃತಿಯೆಚೆಂ ಇಂಗ್ಲಿಷ್ ಭಾಷಾಂತರ್ ‘Heart Lamp’ ಲೇಖಕಿ ದೀಪಾ ಭಸ್ತಿ ಹಿಣೆಂ ಕೆಲ್ಲೆಂ ಆಸೊನ್ ಹ್ಯಾ ಕೃತಿಯೆಕ್ ಹ್ಯೆ ವರ್ಸಾ ಭಾಶಾಂತರಾ ಖಾತಿರ್ ದಿಂವ್ಚಿ ಬುಕರ್ ಪ್ರಶಸ್ತಿ ಮೆಳ್ಳ್ಯಾ. ನಿಜಾಕೀ ಹಿ ಏಕ್ ಅಸಾಮಾನ್ಯ್ ಸಂಗತ್. 2022 ಇಸ್ವೆಂತ್ ಹಿಂದಿ ಭಾಷೆ ಥಾವ್ನ್ ಭಾಶಾಂತರ್ ಜಾಲ್ಲ್ಯಾ ಗೀತಾಂಜಲಿ ಶ್ರೀಚ್ಯಾ ‘Tomb of Sand’ ಹ
APA, Harvard, Vancouver, ISO, and other styles
29

ಹುಲುಗಪ್ಪ, ಎನ್. ಎಚ್. "ಡಾ. ರಾಜಕುಮಾರ್ ಅವರ ಕನ್ನಡ ನಾಡು-ನುಡಿ ಸೇವೆ". AKSHARASURYA 04, № 02 (2024): 125 to 136. https://doi.org/10.5281/zenodo.11525959.

Full text
Abstract:
&lsquo;ತುಂಬಿದ ಕೊಡ ತುಳುಕುವುದಿಲ್ಲ&rsquo; ಎಂಬ ಗಾದೆ ಮಾತಿಗೆ ಡಾ. ರಾಜಕುಮಾರ್ ಅವರು ಸೂಕ್ತ ನಿದರ್ಶನವಾಗಿದ್ದಾರೆ. ಕನ್ನಡ ನಾಡು ಕಂಡ ಉಜ್ವಲ ಕನ್ನಡ ಪ್ರೇಮಿಗಳಲ್ಲಿ ಡಾ. ರಾಜಕುಮಾರ್ ಅವರು ಅಗ್ರಗಣ್ಯರಾಗಿ ನಿಲ್ಲುತ್ತಾರೆ. ಇವರು ಕನ್ನಡ ನಾಡು-ನುಡಿ, ಸಂಸ್ಕೃತಿ ಮೊದಲಾದವುಗಳಿಗೆ ತಮ್ಮ ವಿಶಿಷ್ಟ ವ್ಯಕ್ತಿತ್ವ, ಪ್ರತಿಭೆ ಹಾಗೂ ಐತಿಹಾಸಿಕ ಪಾತ್ರಗಳ ಮೂಲಕ ಸುವರ್ಣ ಅಂಚನ್ನು ಹೊದಿಸಿದ್ದಾರೆ. ರಾಜಕುಮಾರ್ ರವರು ಕೇವಲ ಶ್ರೇಷ್ಠ ನಟರಾಗಿರದೆ, ಕನ್ನಡ ನಾಡಿನ ಅಘೋಷಿತ ಸಾಂಸ್ಕೃತಿಕ ರಾಯಭಾರಿಯಾಗಿದ್ದು, ನೆಲ, ಜಲ, ಭಾಷೆಗೆ ಜನದನಿಯಾಗಿ ನಿಂತವರು. ಕನ್ನಡ ನಾಡು ಹಾಗೂ ಹೊರ ರಾಜ್ಯಗಳಲ್ಲಿನ ಹಲವಾರು ಸಾಮಾಜಿಕ ಅವಘಡಗಳು ನಡೆದಾಗ ರಾಜಕುಮಾರ್ ರವರು ಪಾದಯಾತ್ರೆ ಮಾಡಿ ನಿಧಿ ಸಂಗ್ರಹಿಸಿದರು.&nbsp;ರಾಜಕುಮಾರ್ ರವರು ಸರ್ಕಾರಿ ನೌಕರರಿಗೆ ಕಡ್ಡಾಯ ಕನ್ನ
APA, Harvard, Vancouver, ISO, and other styles
30

ಹುಲುಗಯ್ಯ, ನಾಯಕರ್, та ರಾಮಕೃಷ್ಣಯ್ಯ ಕೆ. "ಬಯಲಾಟದಲ್ಲಿನ ಪ್ರಸ್ತುತ ಮಾರ್ಪಾಡುಗಳು". AKSHARASURYA 04, № 01 (2024): 35 to 46. https://doi.org/10.5281/zenodo.11162255.

Full text
Abstract:
ನಮ್ಮ ಕನಾರ್ಟಕದ ಜನಪದ ರಂಗಭೂಮಿಯಲ್ಲಿ ಬಯಲಾಟಕ್ಕೆ ಅತ್ಯಂತ ಪ್ರಮುಖವಾದ ಸ್ಥಾನವಿದೆ. ಬಯಲಾಟದ ರಂಗಸಜ್ಜಿಕೆಯನ್ನು ನೋಡುವುದಾದರೆ ಇದಕ್ಕೆ ಭವ್ಯವಾದ ರಂಗಮಂಟಪ ನಿರ್ಮಿಸುತ್ತಾರೆ. ರಂಗ ಮಂಟಪವನ್ನು ಅಟ್ಟದಂತೆ ನಿರ್ಮಿಸಿ ಮರದ ಹಲಗೆಗಳನ್ಮು ಹಾಕುತ್ತಾರೆ. ಅದಕ್ಕಾಗಿಯೇ ಬಯಲಾಟವನ್ನು ಅಟ್ಟದಾಟವೆಂತಲೂ, ದೊಡ್ಡಾಟವೆಂತಲೂ ಕರೆಯುತ್ತಾರೆ. ರಂಗಮಂಟಪಕ್ಕೆ ಅಟ್ಟ, ಚಪ್ಪರ, ಹಂದರ ಎಂದು ಕರೆಯುತ್ತಾರೆ. ದೇವಸ್ಥಾನಗಳ ಮುಂದಿನ ವಿಶಾಲ ಸ್ಥಳದಲ್ಲಿ ಅಟ್ಟದ ನಿರ್ಮಾಣವಾಗುತ್ತದೆ. ಆಟಕ್ಕಿಂತ ಎರಡು ದಿನ ಮೊದಲು ಮಂಟಪ ನಿರ್ಮಾಣ ಕಾರ್ಯ ಪ್ರಾರಂಭವಾಗುತ್ತದೆ. ಬಯಲಾಟದ ಮೂಲವನ್ನು ಹುಡುಕುತ್ತಾ ಹೋದಾಗ ಅವು ಮೊದಲು ದೇವಸ್ಥಾನದ ಆಶ್ರಯದಲ್ಲಿ ಬೆಳೆದು ನಂತರ ಬೀದಿಗೆ ಬಂದು ಜನಸಾಮಾನ್ಯರ ಮತ್ತು ಊರಿನ ಹಿರಿಯರ ಆಶ್ರಯದಲ್ಲಿ ಬೆಳೆದು ಬಂದಿರುವುದನ್ನು ಅನೇಕ ವಿದ್ವಾಂಸರು ತ
APA, Harvard, Vancouver, ISO, and other styles
31

ಪರಸಪ್ಪ, ಹೆಚ್., та ಎಂ. ಸೋಮಶೇಖರ. "ಜಿ.ಎಸ್. ಶಿವರುದ್ರಪ್ಪನವರ ಕಾವ್ಯಮೀಮಾಂಸೆಯ ತಾತ್ವಿಕ ಚಿಂತನೆಗಳು". AKSHARASURYA JOURNAL 06, № 01 (2025): 38 to 43. https://doi.org/10.5281/zenodo.14961396.

Full text
Abstract:
ಮೀಮಾಂಸೆ ಎಂದರೆ ಚಿಂತನೆ, ಚರ್ಚೆ ಎಂದರ್ಥ. ಕಾವ್ಯವನ್ನು ಕುರಿತ ಚರ್ಚೆಯನ್ನು ಕಾವ್ಯಮೀಮಾಂಸೆ ಎಂದು ಕರೆಯಲಾಗಿದೆ. ಅಂದರೆ ಕವಿ-ಕಾವ್ಯ-ಸಹೃದಯ ವಿಚಾರಗಳನ್ನು ಕುರಿತ ಚರ್ಚೆ ಕಾವ್ಯದ ಆಸ್ವಾದನೆಯಿಂದ ಉಂಟಾಗುವ ಅನುಭವ ಅದಕ್ಕೆ ಕಾರಣವಾದ ತೃತೀಯ ರೂಪ ಮತ್ತು ಸ್ವರೂಪ ಇವುಗಳನ್ನು ವಿವರಿಸುವ ಶಾಸ್ತ್ರವೇ ಕಾವ್ಯಮೀಮಾಂಸೆ. ಪಾಶ್ಚತ್ಯರಲ್ಲಿ ಮಾತಿನ ವಿವಿಧ ರೀತಿಗಳನ್ನು ಹೇಳುವ ಭಾಷಣ ಮತ್ತು ಲೇಖನಶಾಸ್ತ್ರ ಎಂಬ ಒಂದು ಶಾಸ್ತ್ರವಿದೆ. ಹೀಗೆ ಉಕ್ತಿ ಚಮತ್ಕಾರವನ್ನು ತಿಳಿಸುವ ಶಾಸ್ತ್ರವೇ &lsquo;ಅಲಂಕಾರಶಾಸ್ತ್ರ&rsquo; ಕಾವ್ಯದ ತಿರುಳನ್ನು ಅದರ ನಿರ್ಮಾಣ ಕ್ರಮವನ್ನು ನಿರೂಪಿಸುವದಕ್ಕೆ ಕಾವ್ಯಮೀಮಾಂಸೆ ಮತ್ತೊಂದು ಶಾಸ್ತ್ರ. ಸೌಂದರ್ಯ ಸ್ವರೂಪವನ್ನು ವಿಚಾರಮಾಡುವ ಸೌಂದರ್ಯಮೀಮಾಂಸೆ ಇದು ಮತ್ತೊಂದು ಶಾಸ್ತ್ರ. ಈ ಮೂರು ಶಾಸ್ತ್ರಗಳು ಪಾಶ್ಚಾತ್ಯರಲ್ಲಿ ಪ
APA, Harvard, Vancouver, ISO, and other styles
32

ರಾಜಕುಮಾರ, ಎಂ. ಸಿಂಧೆ. "ಡಾ. ಬಿ. ಆರ್. ಅಂಬೇಡ್ಕರ್‌ ಅವರ ಬದುಕಿನಿಂದ ಕಲಿಯಬೇಕಾದ ಸಂದೇಶ". AKSHARASURYA JOURNAL 06, № 01 (2025): 12 to 21. https://doi.org/10.5281/zenodo.14961338.

Full text
Abstract:
ಕಲಿಕೆ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿದೆ. ಅದು ನಿತ್ಯ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಹುಟ್ಟಿನಿಂದ ಸಾವಿನವರೆಗೂ ಜೀವನುದ್ದಕ್ಕೂ ವಿವಿಧ ಜ್ಞಾನಶಾಖೆಗಳ ಮೂಲಕ ಜೀವನಾನುಭವ ಪಡೆಯುತ್ತ, ಹಳೆ ಬೇರು ಹೊಸ ಚಿಗುರು ಎಂಬಂತೆ ಗುರುಹಿರಿಯರ ನಡೆ-ನುಡಿ, ಆಚಾರ ವಿಚಾರಗಳನ್ನು ಅನುಲಕ್ಷಿಸುತ್ತ, ಭವಿಷ್ಯದ ಬದುಕಿನ ಅಗತ್ಯತೆಗಳನ್ನು ಕಲ್ಪಿಸಿಕೊಳ್ಳುತ್ತ ಹಳೆಯ ಮತ್ತು ಹೊಸದರ ಸಮ್ಮಿಶ್ರಣದೊಂದಿಗೆ ಸುಂದರ ಬದುಕು ಕಟ್ಟಿಕೊಳ್ಳಲು &lsquo;ಕಲಿಕೆ&rsquo; ಎಂಬ ಪ್ರಕ್ರಿಯೆ ನಡೆಯುತ್ತಲೇ ಸಾಗುತ್ತದೆ.&lsquo;ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ&rsquo; ಯಿಂದ ಆರಂಭವಾಗಿ ಕಲಿಕೆ ಮುಂದುವರೆಯುತ್ತದೆ. &lsquo;ದೇಶ ಸುತ್ತು ಇಲ್ಲವೇ ಕೋಶ ಓದು&rsquo; ಎಂಬಂತೆ ಸಾಹಿತ್ಯ, ಕಾವ್ಯ, ಪುರಾಣ, ಶಾಸ್ತ್ರ, ಕಲೆ ಹೀಗೆ ನೂರಾರು ಪ್ರಕಾರದ ಗ್ರಂಥಗಳ ಅಧ್ಯ
APA, Harvard, Vancouver, ISO, and other styles
33

ವಿಜಯಲಕ್ಷ್ಮೀ, ಸುಬ್ಬರಾವ್, та ಎಂ. ಭೈರಪ್ಪ ಕುಪ್ಪನಹಳ್ಳಿ. "ಗೀತನಾಟಕ ಪ್ರವೇಶ: ಸಂಸ್ಕೃತ ನಾಟಕ ಮತ್ತು ನಾಟಕದಲ್ಲಿ ಸಂಗೀತ". AKSHARASURYA 05, № 01 (2024): 01 to 32. https://doi.org/10.5281/zenodo.13870268.

Full text
Abstract:
ಬಹುಮುಖ ಪ್ರತಿಭೆಯ ಡಾ.ವಿಜಯಾ ಸುಬ್ಬರಾಜ್ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಾಯಿ ಲಕ್ಷ್ಮಿ, ಹಾಗೂ ತಂದೆ ಸೀತಾರಾಂ ಅವರು. ಓದಿದ್ದು ಬೆಂಗಳೂರಿನಲ್ಲೇ. ಕನ್ನಡ ಮತ್ತು ಇಂಗ್ಲಿಷ್&zwnj;ನಲ್ಲಿ ಎಂ.ಎ ಮತ್ತು ಎಲ್.ಎಲ್.ಬಿ. ಪದವೀಧರೆಯಾದವರು. ಫ್ರೆಂಚ್ ಭಾಷೆಯ ಡಿಪ್ಲೊಮ ಪದವಿಯನ್ನೂ ಹಿಂದಿ ಸಾಹಿತ್ಯರತ್ನ ಪದವಿಯನ್ನೂ ಅಧ್ಯಯನ ಮಾಡಿದವರು. ಎಂ.ಇ.ಎಸ್. ಕಾಲೇಜಿನಲ್ಲಿ ಸುದೀರ್ಘ ಕಾಲ ಪ್ರಾಧ್ಯಾಪಕ ಹುದ್ದೆ ನಿರ್ವಹಿಸುತ್ತಲೇ ನಿರಂತರವಾಗಿ ಹಲವು ಮಾಧ್ಯಮಗಳಲ್ಲಿ ತಮ್ಮ ಪ್ರಯೋಗಶೀಲತೆಯನ್ನು ದುಡಿಸಿಕೊಂಡವರು, ಕಥೆ, ಕವಿತೆ, ನಾಟಕ, ಕಾದಂಬರಿ, ಪ್ರವಾಸ ಕಥನ, ಅನುವಾದ, ವೈಚಾರಿಕ ಬರೆಹ, ವಿಮರ್ಶೆ, ಸಂಶೊಧನೆ ಮುಂತಾದ ವಿಭಿನ್ನ ಪ್ರಕಾರಗಳಲ್ಲಿ ಅವರ ಶಕ್ತಿ, ಪ್ರತಿಭೆಗಳು ಬೆಳಗಿವೆ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಓದುವ ಬರೆಯುವ ಹವ್ಯಾಸ ರೂಢಿಸಿಕ
APA, Harvard, Vancouver, ISO, and other styles
34

ಅನಂತಕುಮಾರ та ವಿ. ಬೆಟ್ಟಕೋಟೆ ನಾಗೇಶ್. "ಶಿರಹಟ್ಟಿ ವೆಂಕೋಬರಾಯರ ಕನಸಿನ ಮಂಡಳಿ". AKSHARASURYA 04, № 01 (2024): 52 to 60. https://doi.org/10.5281/zenodo.11162432.

Full text
Abstract:
ರಂಗಭೂಮಿಯು ಎಲ್ಲರನ್ನೂ ಒಂದುಗೂಡಿಸುವ ವಿಶೇಷವಾದ ಗುಣ-ಹೊಂದಿರುವ ಮಾಧ್ಯಮವಾಗಿದೆ. ನಾಟಕಗಳು ಇಂದು ಸಮಾಜದ ವಿವಿದ ಕ್ಷೇತ್ರಗಳಲ್ಲಿ ಅರಿವು ವಿಸ್ತರಿಸುವ ತರಬೇತಿ ನೀಡುವ ಮಾಧ್ಯಮವಾಗಿದೆ. ಕನ್ನಡ ವೃತ್ತಿ ರಂಗಭೂಮಿಯಲ್ಲಿ ವಿಜೃಂಭಣೆಯಿಂದ ಮೆರೆದ ರಂಗಭೂಮಿಯ ರಂಗ ಚಟುವಟಿಕೆಗಳ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯಿಸುವುದು, ಅನೇಕ ರಂಗ ಕಲಾವಿದರ, ರಂಗ ಸಂಶೋಧಕರ, ರಂಗಕರ್ಮಿಗಳ ಕೈಯಲ್ಲಿದೆ. ಈ ನಮ್ಮ ಕನ್ನಡ ರಂಗಭೂಮಿಯಲ್ಲಿ ಅನೇಕ ಕಲಾವಿದರು ಎಲೆ ಮರಿ ಕಾಯಿಯ ಹಾಗೆ ರಂಗಭೂಮಿಯಲ್ಲಿ ತೊಡಗಿಸಿಕೊಂಡು ರಂಗಭೂಮಿನೇ ನನ್ನ ಉಸಿರು ಅಂತ ಬದುಕ್ತಾ ಇರೋರು ಸಾಕಷ್ಡು ಜನ ರಂಗಭೂಮಿಗಾಗಿ ತಮ್ಮ ಜೀವನವನ್ನೇ ಸವಿಸಿದಂತವರು ಇದ್ದಾರೆ ಎಂಬುದನ್ನು ತಿಳಿಸುವುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ. ಪರಂಪರಾಗತವಾದ ಧಾರ್ಮಿಕ ಆಚರಣೆಗಳ ಮೂಲಕ ಹುಟ್ಟಿದ ಎಷ್ಟೋ ಜನಪದ ಕಲೆಗಳು,
APA, Harvard, Vancouver, ISO, and other styles
35

ಡಿ.ಆರ್.‌, ನಾಗರಾಜ್, та ಎಂ. ಭೈರಪ್ಪ ಕುಪ್ಪನಹಳ್ಳಿ. "ಅಲ್ಲಮನ ಕಾಯ ಸಿದ್ಧಾಂತ". AKSHARASURYA JOURNAL 05, № 04 (2024): 01 to 29. https://doi.org/10.5281/zenodo.14289448.

Full text
Abstract:
ಡಾ.ಡಿ.ಆರ್.ನಾಗರಾಜ್ ಅವರ ಹೆಸರು ಕೇಳಿದಾಕ್ಷಣ ಕನ್ನಡದ ಶ್ರೇಷ್ಠ ವಿಮರ್ಶಕರು ಎಂಬ ಪ್ರಶಂಸೆಯೇ ಮೊದಲಿಗೆ ನೆನಪಾಗುತ್ತದೆ. ಆದರೆ, ಡಿ.ಆರ್.ಎನ್ ಅವರು ವಿಮರ್ಶೆ ಎಂಬ ಪ್ರಾಕಾರಸೀಮೆಯನ್ನು ದಾಟಿಕೊಂಡು ನಿಸ್ಸೀಮರಾಗಿ ಸೃಜನಶೀಲ ಲೇಖಕರಾಗಿಯೂ ಸಾಂಸ್ಕೃತಿಕ ಸಂಶೋಧಕರಾಗಿಯೂ ಮಹತ್ತರವಾದ ಸಾಧನೆಯನ್ನು ಮಾಡಿದ್ದಾರೆ. ಬೈನರಿ ವಿಭಜನೆಯ ಚಿಂತನಕ್ರಮಗಳಿಂದಾಗಿ ಕನ್ನಡಕ್ಕೆ ಉಂಟಾಗುತ್ತಿರುವ ಧಕ್ಕೆಯನ್ನು ಮನಗಂಡು ಕನ್ನಡ ಪ್ರಜ್ಞಾವಲಯದ ವೈಶಾಲ್ಯತೆಯನ್ನೂ ವೈವಿಧ್ಯತೆಯನ್ನೂ ತನ್ಮೂಲಕ ಕೂಡಲಸಂಗಮಗೊಳಿಸಿದ ಅಪೂರ್ವ ಚಿಂತಕರಾಗಿದ್ದಾರೆ. ಭಾರತದ ಪ್ರಮುಖ ಚಿಂತಕರಲ್ಲಿ ಒಬ್ಬರಾಗುವ ಮಟ್ಟಿಗೆ ಬೆಳೆದ ಡಿ.ಆರ್&zwnj;.ನಾಗರಾಜ್ ಅವರ ಬರವಣಿಗೆಯು ಪ್ರಖರ ಚಿಂತನೆಗೆ ಹೆಸರುವಾಸಿಯಾಗಿದೆ. ನಟರಾಜ್ ಹುಳಿಯಾರ್ ಅವರು ದಾಖಲಿಸುವಂತೆ, &lsquo;ಸಾಹಿತ್ಯ ವಿಮರ್ಶೆ, ಸಂಶೋಧನೆ,
APA, Harvard, Vancouver, ISO, and other styles
36

ಜಿ., ವೆಂಕಟಸುಬ್ಬಯ್ಯ, та ಭೈರಪ್ಪ ಎಂ. "ಎರಡು ಶಬ್ದಗಳ ನಿಷ್ಪತ್ತಿ ಮತ್ತು ಅರ್ಥವಿಚಾರ". AKSHARASURYA 04, № 02 (2024): 01 to 17. https://doi.org/10.5281/zenodo.11525363.

Full text
Abstract:
ಜಗಮೆಚ್ಚಿದ ನುಡಿಗಾರುಡಿಗ ಪ್ರೊ.ಜಿ.ವೆಂಕಟಸುಬ್ಬಯ್ಯನವರುಕರುನಾಡು ಕಂಡ ಕನ್ನಡದ ಮೇರು ನಿಘಂಟು ತಜ್ಞ, ನುಡಿ ಗಾರುಡಿಗ, ನುಡಿಬ್ರಹ್ಮ, ಶಬ್ದಬ್ರಹ್ಮ, ಅಕ್ಷರಬ್ರಹ್ಮ, ನಡೆದಾಡುವ ನಿಘಂಟು, ಅಪ್ರತಿಮ ಸಂಶೋಧಕ, ಜಗಮೆಚ್ಚಿದ ಕನ್ನಡ ಪ್ರಾಧ್ಯಾಪಕ ಎಂದೇ ಜನಪ್ರಿಯರಾದವರು ನಾಡೋಜ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು. ನುಡಿಸಾಗರದ ಆಳಕ್ಕೂ ಉದ್ದಗಲಕ್ಕೂ ಮುಳುಗೆದ್ದು ಈಜಾಡಿ &lsquo;ಕನ್ನಡ ನಿಘಂಟು&rsquo;ಗಳೆಂಬ ಮುತ್ತುರತ್ನಗಳನ್ನು ಹೊರತಂದುಕೊಟ್ಟ ಶೋಧನವೀರ ನುಡಿಕಾರರು ಜಿವಿ. ಆಂಗ್ಲಮುಖಿ ಹಾಗೂ ಕಲಾರಾಹಿತ್ಯ ಶಿಕ್ಷಣಯಾನದಲ್ಲಿ ಕನ್ನಡಪ್ರಜ್ಞೆಯನ್ನು ಬೆಳಗುವ ಮೂಲಕ ಅಸಂಖ್ಯ ಕನ್ನಡ ಕಟ್ಟಾಳುಗಳನ್ನು ರೂಪುಗೊಳಿಸುವ ಮೂಲಕ ಈ ನೆಲಕ್ಕೆ ಅಪೂರ್ವ ಕಾಣಿಕೆಯಿತ್ತ ಜಿವಿ ಅವರು ಶ್ರೇಷ್ಠ ಪ್ರಾಧ್ಯಾಪಕರಾಗಿದ್ದಾರೆ. ಸಂಶೋಧಕರಾಗಿ ಹಾಗೂ ಪ್ರಾಧ್ಯಾಪಕರಾಗಿ ಮಾತ್ರವ
APA, Harvard, Vancouver, ISO, and other styles
37

ಶೈಲಜ, ಹಿರೇಮಠ, та ಎಂ. ಭೈರಪ್ಪ ಕುಪ್ಪನಹಳ್ಳಿ. "ಬುಡಕಟ್ಟು ಮಹಿಳೆ: ಸ್ಥಾಪಿತ ಗ್ರಹಿಕೆಗಳಿಗೆ ಭಿನ್ನಮತ". AKSHARASURYA 05, № 02 (2024): 01 to 34. https://doi.org/10.5281/zenodo.14035474.

Full text
Abstract:
ಪ್ರಸ್ತುತ ಸಂದರ್ಭದಲ್ಲಿ ವಿಶಾಲಾರ್ಥ ದೃಷ್ಟಿಕೋನದ ಬರಹಗಾರರಾಗುವುದೆಂದರೆ, ಸಮಾಜದಲ್ಲಿನ ಜಾತಿ, ಪ್ರದೇಶ, ಬುಡಕಟ್ಟು, ಆದಿವಾಸಿ ಮತ್ತು ಜಂಡರ್ ಆಧಾರಿತ ಶ್ರೇಣೀಕರಣವನ್ನು ಮೀರುವುದೇ ಆಗಿದೆ; ಹಾಗಿದ್ದರೂ ಅಸಮಾನತೆಗೆ ಬುನಾದಿಯೊದಗಿಸುವ ಶ್ರೇಣೀಕರಣವನ್ನು ಅಸ್ಮಿತೆಯಾಗಿ, ಅನನ್ಯತೆಯಾಗಿ ಚಿಂತಕರು ನಿರೂಪಿಸಿದ್ದರ ಪರಿಣಾಮದಿಂದಾಗಿ, ಅಸಮಾನತೆಯನ್ನು ಸಮರ್ಥಿಸುವ ನಿರೂಪಣೆಗಳು ಸಾಹಿತ್ಯ ಲೋಕದಲ್ಲೂ ನಿರಾತಂಕವಾಗಿ ಮುಂದುವರೆದಿವೆ. ಬರಹಲೋಕದೊಳಗಿನ ಇಂತಹ ನಿರೂಪಣೆಯ ರಾಜಕಾರಣವೇ ಸತ್ಯವನ್ನು ಸೃಷ್ಟಿಸುತ್ತ, ಅದನ್ನು ಒಪ್ಪುವಂತೆ ಜ್ಞಾನದ ಅಧಿಕಾರದ ನೆಲೆಯಲ್ಲಿ ಒತ್ತಾಯಿಸುತ್ತದೆ; ಅಧ್ಯಯನದೊಳಗಿನ ಬರಹಗಾರರ ಉದ್ದೇಶದ ಭಾಗವಾಗಿ ನಿರೂಪಣೆಗೊಂಡ ನಿಲುವುಗಳನ್ನು ಸಮಸ್ಯೀಕರಿಸಿಕೊಂಡು ಮರುವಿಶ್ಲೇಷಣೆಗೆ ಒಳಪಡಿಸಬೇಕಿದೆ. ಈ ಉದ್ದೇಶದ ಹಿನ್ನೆಲೆಯಲ್ಲಿಯೇ ಮಹಿಳೆ
APA, Harvard, Vancouver, ISO, and other styles
38

Pinto, Melwyn. "ಸತಾಚೊ ಸೊಧ್ ಆನಿ ಸತಾಚ್ಯಾ ಸ್ಥಾಪನಾ ಮಧೆಂ ಸಂಸೊಧ್". MJES Journal of Amar Konkani 2, № 2 (2023): 4–7. https://doi.org/10.69852/aloy.mjesjak.2.2/17945/.

Full text
Abstract:
ಕನ್ನಡಾಚೊ ವಿಮರ್ಶಕ್, ಸಂಸೊಧ್ಕಾ.ರ್ ಆನಿ ತುಮಕೂರು ವಿಶ್ವವಿದ್ಯಾಲಯಾಚ್ಯಾ ಕನ್ನಡ ವಿಭಾಗಾಚೊ ಪ್ರೊಫೆಸರ್ ಡಾ| ನಿತ್ಯಾನಂದ ಶೆಟ್ಟಿನ್ ಆಯ್ಲೆವಾರ್ ಲಿಕ್ಲ್ಲೆಂ ಪುಸ್ತಕ್ ಮಾರ್ಗಾನ್ವೇಷಣೆ: ಸಾಹಿತ್ಯ ಸಂಶೋಧನೆಯ ರೀತಿ ನೀತಿ. ಹ್ಯಾ ಪುಸ್ತಕಾಂತ್ ಸಂಸೊಧಾವಿಶಿಂ ತಾಣೆಂ ಸಾಂಗ್ಚೊ ಏಕ್ ಪ್ರಮುಕ್ ವಿಚಾರ್ ಅಸೊ ಆಸಾ. ದೋನ್ ರಿತಿಂಚೆ ಸಂಸೊಧ್ ಸಾಧ್ಯ್ ಆಸಾತ್: ಪಯ್ಲೊ ಸತಾಚೆಂ ಸ್ಥಾಪನ್ (ಸತ್ಯ ಸ್ಥಾಪನೆ) ಕರ್ಚೊ ವಯ್ವಾಟಿ ‘ಸಂಸೊಧ್’ ಆನಿ ದುಸ್ರೊ ಸತಾಚೊ ಸೊಧ್ (ಸತ್ಯ ಶೋಧನೆ) ಕರ್ಚೊ ವಸ್ತುನಿಷ್ಟ್ ಸಂಸೊಧ್. ಹ್ಯಾ ದೊನಾಂ ಮಧೆಂ ವಿಶೇಸ್ ಫರಕ್ ಆಸಾ. ಸತಾಚೆಂ ಸ್ಥಾಪನ್ ಕರ್ಚೆಂ ಬೋವ್ ಸಲೀಸ್. ಮ್ಹಜ್ಯೆಲಾಗಿಂ ಥೊಡಿಂ ಪೂರ್ವ್ಪೀ್ಡಿತ್ ಕಲ್ಪನಾಂ ಆಸಾತ್. ಸಮಾಜ್ಯೆ ವಿಶಿಂ, ಹೆರ್ ಜಾತಿ ಧರ್ಮಾ ವಿಶಿಂ, ವಾ ಮ್ಹಾಕಾ ಜಾಯ್ನಾತ್ಲ್ಲ್ಯಾಂ ವಿಶಿಂ ಮ್ಹಜ್ಯೊ ಥೊ
APA, Harvard, Vancouver, ISO, and other styles
39

ಎಸ್., ಎಸ್. ಹಿರೇಮಠ, та ಭೈರಪ್ಪ ಎಂ. "ಕರ್ನಾಟಕದಲ್ಲಿ ದಲಿತರು". AKSHARASURYA JOURNAL 04, № 04 (2024): 01 to 44. https://doi.org/10.5281/zenodo.13283983.

Full text
Abstract:
<strong>ನೆಲಮೂಲ ಸಂಸ್ಕೃತಿಯ ಮಹಾಶೋಧಕರಾಗಿ ಪ್ರೊ.ಎಸ್.ಎಸ್.ಹಿರೇಮಠರ ಕಾಯಕ</strong> ನೆಲಮೂಲ ಸಂಸ್ಕೃತಿಯ ಜಾಡಿನಲ್ಲಿ ಸಂಶೋಧನೆಯನ್ನು ಕೈಗೊಂಡು ಬಹುತ್ವ ಭಾರತ ಹಾಗೂ ದಲಿತ ಸಂಸ್ಕೃತಿಯ ವಿರಾಟ್ ಸ್ವರೂಪವನ್ನು ಅನಾವರಣ ಮಾಡಿದ ಮಹಾಶೋಧಕರಲ್ಲಿ ಪ್ರೊ.ಎಸ್.ಎಸ್.ಹಿರೇಮಠ ಅವರು ಪ್ರಾತಃಸ್ಮರಣೀಯರಾಗಿದ್ದಾರೆ. ತಮ್ಮ ಅಧ್ಯಾಪನ ಮತ್ತು ಸಂಘಟನಾ ಕಾಯಕದ ಮೂಲಕ ಜನಪರ ಮನಸುಗಳನ್ನು ರೂಪಿಸಿದ ಕ್ರಾಂತಿಕಾರಿಯೂ ಆಗಿದ್ದ ಹಿರೇಮಠ ಮೇಷ್ಟ್ರು ಸಂಶೋಧನಾ ಕಾಯಕದ ಮೂಲಕ ಸೀಮಿತ ಬೌದ್ಧಿಕ ಹಾಗೂ ಸಾಂಸ್ಕೃತಿಕ ಸೀಮೆಗಳನ್ನು ಬಹುವಾಗಿ ವಿಸ್ತರಿಸಿಕೊಟ್ಟಿದ್ದಾರೆ. ಆದಿಮ ನೆಲೆಯಿಂದ ಹಿಡಿದು ಆಧುನಿಕ ನೆಲೆಯ ಸಾಂಸ್ಕೃತಿಕ ಸಂಗತಿಗಳ ವರೆಗೂ ಆಳವಾದ ಸಂಶೋಧನೆಯನ್ನು ಕೈಗೊಂಡ ಹಿರೇಮಠರು ಲೋಕಮುಖೀ ಒಳಹರವಿನ ಅನೇಕ ಸೂಕ್ಷ್ಮಗಳನ್ನು ನಿಕಷಕ್ಕೆ ಒಡ್ಡಿದ್ದಾರೆ; ನೆಲದರಿವಿನ ಸೀಮ
APA, Harvard, Vancouver, ISO, and other styles
40

ತೀ.ನಂ., ಶ್ರೀಕಂಠಯ್ಯ, та ಕುಪ್ಪನಹಳ್ಳಿ ಎಂ. ಭೈರಪ್ಪ ಸಂಯೋಜನೆ:. "ಕನ್ನಡದಲ್ಲಿ ಕಾವ್ಯಲಕ್ಷಣ ಗ್ರಂಥಗಳು". Aksharasurya Journal 05, № 05 (2025): 01 to 37. https://doi.org/10.5281/zenodo.14619428.

Full text
Abstract:
<strong>ದೇಶಭಾಷಾ ವಿದ್ವದ್ವಲಯದ ಮೇರುವಿದ್ವಾಂಸರು ಪ್ರೊ.ತೀ.ನಂ.ಶ್ರೀ</strong>&lsquo;ಭಾರತೀಯ ಕಾವ್ಯ ಮೀಮಾಂಸೆ&rsquo; ಎಂಬ ಮಹೋನ್ನತ ಕಾವ್ಯ-ಶಾಸ್ತ್ರ ಗ್ರಂಥದ ಮೂಲಕ ಕನ್ನಡ ದೇಶಭಾಷಾ ವಿದ್ವದ್ವಲಯದ ವಿಶ್ವಾತ್ಮಕತೆಯನ್ನು ಸಾಕಾರಗೊಳಿಸಿದ ಮೇರುವಿದ್ವಾಂಸರು ಪ್ರೊ.ತೀ.ನಂ.ಶ್ರೀ ಅವರು. ಆಚಾರ್ಯ ಬಿ.ಎಂ.ಶ್ರೀ. ಅವರ ಪರಂಪರೆಯಲ್ಲಿ ಅವರ ಉತ್ತರಾಧಿಕಾರಿ ಎಂಬಂತೆ ನಡೆದು ಜನಪ್ರಿಯ ಅಧ್ಯಾಪಕರೂ ಸಂಮೋಹಕ ಭಾಷಣಕಾರರೂ ಆಗಿ ಪ್ರಸಿದ್ಧರಾದವರು; ಕನ್ನಡದ ವಿಶ್ವವಿದ್ಯಾನಿಲಯಗಳಲ್ಲಿ ಭಾಷಾಶಾಸ್ತ್ರದ ಅಧ್ಯಯನಕ್ಕೆ ಬುನಾದಿಯನ್ನು ಹಾಕಿದವರು; ಆಧುನಿಕ ಕನ್ನಡ ನಿಘಂಟಿನ ರಚನೆಗಾಗಿ ತಮ್ಮ ಸಮಯ, ಶಕ್ತಿ ಸಾಮರ್ಥ್ಯಗಳನ್ನೂ, ವಿದ್ವತ್ತನ್ನೂ ವಿನಿಯೋಗಿಸಿದ ದಿಗ್ಗಜರಲ್ಲಿ ಒಬ್ಬರು. ಅವರನ್ನು ಸಮಕಾಲೀನರು ಕಂಡಂತೆ ಅವರ ಬೋಧಿಸತ್ವ ಸನ್ನಿಭ ಮನೋಹರ ವ್ಯಕ್ತಿತ್ವವನ್
APA, Harvard, Vancouver, ISO, and other styles
41

ರಾಗೌ, (ರಾಮೇಗೌಡ), та ಭೈರಪ್ಪ ಎಂ. "ಗಾದೆ". AKSHARASURYA JOURNAL 04, № 06 (2024): 01 to 34. https://doi.org/10.5281/zenodo.13724358.

Full text
Abstract:
ಸಮಚಿತ್ತತೆಯ ಶೋಧಕ-ಸಾಧಕರಾಗಿ ಡಾ.ರಾಗೌ (ರಾಮೇಗೌಡ)&nbsp; &nbsp; ಡಾ.ರಾಗೌ(ರಾಮೇಗೌಡ) ಅವರು ಕನ್ನಡ ನವೋತ್ತರ ಯುಗದ ಪ್ರಮುಖ ಕವಿಯಾಗಿ, ವಿಮರ್ಶಕರಾಗಿ, ಸಂಶೋಧಕರಾಗಿ, ಶಾಸ್ತ್ರೀಯ ಮತ್ತು ಜಾನಪದ ವಿದ್ವಾಂಸರಾಗಿ ಹೊಮ್ಮಿದ ವಿಶಿಷ್ಟ ಲೇಖಕರು. ಕಾವ್ಯ, ವಿಮರ್ಶೆ, ಜಾನಪದ ಅಧ್ಯಯನ, ಚಾರಿತ್ರಿಕ ಮತ್ತು ಸಾಂಸ್ಕೃತಿಕ ಸಂಶೋಧನೆ ಮೊದಲಾದ ಕ್ಷೇತ್ರಗಳಲ್ಲಿ ರಾಗೌ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯಕಯಾನವನ್ನು ವಿಕಾಸಪಡಿಸಿಕೊಂಡವರು. ಸದಾ ಸಂಕ್ರಮಣಶೀಲವಾದ ಆಧುನಿಕ ಕನ್ನಡ ಸಾಹಿತ್ಯದ ಬಾನಂಗಳವನ್ನು ತನ್ನದೇ ನೆಲೆಯಲ್ಲಿ ನಿಂತು ನಿಟ್ಟಿಸುತ್ತಾ ತಮ್ಮ ಸಾಧನೆಯ ಸಾಮರ್ಥ್ಯವನ್ನು ತೋಡಿಸಿಕೊಂಡವರು ರಾಗೌ, ತಮ್ಮ ಅವಲೋಕನದಲ್ಲೂ ಕ್ರಿಯಾಶೀಲತೆಯಲ್ಲೂ ಇಂತಹುದೊಂದು ದೂರವನ್ನು, ನಿರ್ಲಿಪ್ತತೆಯನ್ನು ಅಂತರ್ಗತಗೊಳಿಸಿಕೊಂಡು ಬರೆಯುತ್ತಾ ಬಂದುದರಿಂದ ಅವರು ಒಂದು
APA, Harvard, Vancouver, ISO, and other styles
42

ಕೆ., ಡಾ ಪ್ರೇಮ್‌ ಕುಮಾರ. "ಎಚ್. ಎಸ್. ಶಿವಪ್ರಕಾಶ್ ಅವರ ಆಯ್ದ ಕವಿತೆಗಳಲ್ಲಿನ ಐತಿಹಾಸಿಕ ಪ್ರಜ್ಞೆ". ಕ್ರಿಸ್ತು ಜಯಂತಿ ಕನ್ನಡ ಸಂಶೋಧನ ಪತ್ರಿಕೆ (KRISTU JAYANTI KANNADA SAMSHODHANA PATHRIKE), 30 вересня 2023, 22–33. http://dx.doi.org/10.59176/kjksp.v2i2.2299.

Full text
Abstract:
ಆಧುನಿಕ ಕನ್ನಡ ಸಾಹಿತ್ಯದಲ್ಲಿ ತಮ್ಮ ನಾಟಕ ಮತ್ತು ಕವಿತೆಗಳ ಮೂಲಕ ಪ್ರಸಿದ್ಧಿ ಪಡೆದಿರುವವರು ಎಚ್.ಎಸ್.ಶಿವಪ್ರಕಾಶರು. ಇವರ ಸಾಹಿತ್ಯದ ಹೆಚ್ಚಿನ ಭಾಗ ಪೌರಾಣಿಕ ಹಾಗು ಐತಿಹಾಸಿಕ ಸಂಗತಿಗಳಿಗೆ ತೆರೆದುಕೊಂಡಿವೆ. ಯಾವುದೇ ಕವಿಯೊಬ್ಬ ತನ್ನ ಹಿಂದಣ ಚರಿತ್ರೆಯನ್ನು ಅರಿಯದೆ ಇಂದಿನ ವರ್ತಮಾನದಲ್ಲಿ ನಿಂತು ಮುಂದಣ ಭವಿಷ್ಯಕ್ಕೆ ಯಾವುದೇ ಕೊಡುಗೆಯನ್ನು ನೀಡಲಾರ. ಸಾಹಿತಿಯೊಬ್ಬನಿಗೆ ಐತಿಹಾಸಿಕ ಪ್ರಜ್ಞೆಯೆನ್ನುವುದು ಬಹುಮುಖ್ಯವಾದ ಅಂಶವಾಗಿರುತ್ತದೆ. ಶಿವಪ್ರಕಾಶರ ಕವಿತೆಗಳನ್ನು ನೋಡುವುದಾದರೆ ಅವರು ಚರಿತ್ರೆಯ ಒಂದೊAದು ಸಣ್ಣ ಘಟನೆಗಳನ್ನು ಸಹ ತಮ್ಮ ಕವಿತೆಯಲ್ಲಿ ಸೆರೆಹಿಡಿದು ಅದ್ಭುತ ಚಿತ್ರಣವನ್ನಾಗಿಸುತ್ತಾರೆ. ಜೊತೆಗೆ ಅಂದಿನ ಇತಿಹಾಸದಲ್ಲಿ ಮರೆಮಾಚಲ್ಪಟ್ಟಿರುವ ಹಲವು ವಿಚಾರಗಳನ್ನು ಇಂದಿನ ವರ್ತಮಾನದ ಬದುಕಿಗೆ ಪೂರಕಗೊಳಿಸಿಕೊಳ್ಳುತ್ತಾರೆ. ಸಾಹ
APA, Harvard, Vancouver, ISO, and other styles
We offer discounts on all premium plans for authors whose works are included in thematic literature selections. Contact us to get a unique promo code!