Academic literature on the topic 'ಧಾರ್ಮಿಕ'

Create a spot-on reference in APA, MLA, Chicago, Harvard, and other styles

Select a source type:

Consult the lists of relevant articles, books, theses, conference reports, and other scholarly sources on the topic 'ಧಾರ್ಮಿಕ.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Journal articles on the topic "ಧಾರ್ಮಿಕ"

1

ಗಣೇಶ. "ಧರ್ಮ ಮತ್ತು ಅಂಬೇಡ್ಕರ್‌". AKSHARASURYA JOURNAL 06, № 05 (2025): 46 to 53. https://doi.org/10.5281/zenodo.15504212.

Full text
Abstract:
ಅಂಬೇಡ್ಕರ್‌ ಭಾರತದ ಒಬ್ಬ ಶ್ರೇಷ್ಠ ಪ್ರತಿಭಾವಂತ ಬುದ್ಧಿ ಜೀವಿ ಮತ್ತು ಮೇಧಾವಿ. ಪ್ರಪಂಚದ ಅಪ್ರತಿಮ ಚಿಂತಕರ ಸಾಲಿನಲ್ಲಿ ನಿಲ್ಲಬಲ್ಲ, ಮೇರು ವ್ಯಕ್ತಿತ್ವವುಳ್ಳ ಚಿಂತನಶೀಲ ವ್ಯಕ್ತಿ. ಅವರು ಜಗತ್ತಿನ ಎಲ್ಲಾ ಧಾರ್ಮಿಕ ಗ್ರಂಥಗಳನ್ನು ಆಸಕ್ತಿ ಮತ್ತು ಕುತೂಹಲದಿಂದ ಅಮೂಲಾಗ್ರವಾಗಿ ಅಧ್ಯಯನ ಮಾಡಿದ್ದರು. ಧರ್ಮವನ್ನು ಕುರಿತಂತೆ ರಾಬರ್ಟ್ ಸನ್ ಸ್ಮಿತ್ ಅವರ ಪರಿಕಲ್ಪನೆಯನ್ನು ಅಂಬೇಡ್ಕರ್‌ ಹಿಂದೂ ಧರ್ಮದ ತತ್ವಜ್ಞಾವನ್ನು ಕುರಿತ ತಮ್ಮ ಕೃತಿಯಲ್ಲಿ ಹೀಗೆ ಉಲ್ಲೇಖಿಸಿದ್ದಾರೆ. ಧರ್ಮ ಯಾವುದೇ ಕಾರಣಕ್ಕೂ ದುರ್ಬಲರನ್ನು ಶೋಷಿಸುವ ಅಸ್ತ್ರವಾಗಬಾರದು. ಹಿಂದೂ ಧಾರ್ಮಿಕ ವ್ಯವಸ್ಥೆಯಲ್ಲಿ ದೈವಿಕ ಪ್ರಭುತ್ವದ ಲಿಖಿತ ಸಂವಿಧಾನ ಮತ್ತು ಪುರೋಹಿತಶಾಹಿಯ ಅಘೋಷಿತ ಪ್ರಾಬಲ್ಯವನ್ನು ಕಾಪಾಡಿಕೊಂಡು ಬರಲಾಗಿದೆ. ಈ ಧರ್ಮದಲ್ಲಿ ಬಹುಸಂಖ್ಯಾತ ಹಿಂದುಳಿದ
APA, Harvard, Vancouver, ISO, and other styles
2

ಆಯ್., ಬಿ. ಸಾತಿಹಾಳ. "ಪಂಪನ ಕಥಾಸತ್ಯ ಮತ್ತು ಕಾವ್ಯ ನಿಷ್ಠೆ ಹಾಗೂ ಕಾಮವಾಸನೆ: ಆದಿ ಪುರಾಣವನ್ನು ಅನುಲಕ್ಷಿಸಿ." AKSHARASURYA 03, № 06 (2024): 97 to 109. https://doi.org/10.5281/zenodo.11127143.

Full text
Abstract:
‘ಜನ್ಮಾಂತರಗಳಲ್ಲಿ ನಂಭಿಕೆಯಿಟ್ಟು ಸ್ಮರತತ್ವವನ್ನು ಸಂಪೂರ್ಣವಾಗಿ ವಿರೋಧಿಸುತ್ತ, ದಕ್ಕಿದ ಭೋಗ-ವೈಭವಗಳನ್ನೆಲ್ಲ ಬದಿಗಿಟ್ಟು, ತಲೆಗೂದಲನ್ನು ಕಿತ್ತು ದೀಕ್ಷೆ ಕೈಕೊಂಡು, ಗತಪ್ರಾಣನಾಗುವುದರಿಂದ ಜೀವನಿಗೆ ಪುನರ್ ಜನ್ಮದಲ್ಲಿ ಅತ್ಯಾನಂತವಾದ ಪದವಿ-ಫಲಗಳು ಸಹಸ್ರಸಾಗರೋಪಮಾನ ಕಾಲದವರೆಗೆ ಸಿಕ್ಕುತ್ತವೆ’ಎನ್ನುವುದು ಜೈನ ಪುರಾಣಗಳ ಪ್ರಬಲವಾದ ನಿಲುವು. ಇದನ್ನು ತನ್ನ ಆದಿಪುರಾಣ ಕಾವ್ಯದಲ್ಲಿ ನಿರೂಪಿಸಲು ಹೊರಟಿರುವ ಪಂಪನಿಗೆ ಇದು ಸುಲಭವಾದ ಕೆಲಸವಾಗಿರಲಿಲ್ಲ. ಬಹುಪ್ರಾಚೀನ ಕಾಲದಿಂದಲೂ ಬೆಳೆದು ಬಂದಿರುವ ಧಾರ್ಮಿಕ ಕಲ್ಪನೆ ಕನ್ನಡ ನಾಡಿನಲ್ಲಿ ಪಂಪನ ಕಾಲಕ್ಕಾಗಲೇ ಪರ-ವಿರೋಧಗಳನ್ನು ಸ್ವೀಕರಿಸುತ್ತ, ಎದುರಿಸುತ್ತ, ಕುಂಟುತ್ತ ಸಾಗಿತ್ತು. ಅಂಥ ಸಂದರ್ಭದಲ್ಲಿ ಪಂಪನು ಧಾರ್ಮಿಕ ಕಲ್ಪನೆಯನ್ನು ಕಾವ್ಯಸತ್ಯವನ್ನಾಗಿಸುವುದರ ಮೂಲಕ ಜೈನಧರ್ಮ
APA, Harvard, Vancouver, ISO, and other styles
3

ಪ್ರಭುದೇವ, ಸಿ., та ಶಬೀನಾ. "ಚಿತ್ರದುರ್ಗ ಜಿಲ್ಲೆಯ ಛಲವಾದಿ ಸಮುದಾಯದ ಧಾರ್ಮಿಕ ಹಾಗೂ ಲೌಕಿಕ ಕಲೆಗಳ ಒಳನೋಟ". Aksharasurya Journal 05, № 05 (2025): 81 to 93. https://doi.org/10.5281/zenodo.14619579.

Full text
Abstract:
ಆಡು ಮುಟ್ಟದ ಸೊಪ್ಪಿಲ್ಲ ಕಲೆಗಳಿಲ್ಲದ ಸಮುದಾಯಗಳಿಲ್ಲ ಎಂಬಂತೆ ಕಲೆ ಎಂಬುದು ಯಾರ ಸ್ವತ್ತಲ್ಲ, ಕಲೆ ಎಲ್ಲರನ್ನು ಕೈಬೀಸಿ ಕರೆಯುತ್ತದೆ ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ ಎಂಬ ಮಾತು ನಿಜ, ಅದರಂತೆ ಸಂಸ್ಕೃತಿಯ ಒಂದು ಭಾಗವಾಗಿರುವ ಕೆಲವು ಕಲೆಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಛಲವಾದಿ ಸಮುದಾಯದವರಿಗೆ ರಕ್ತದಿಂದಲೇ ಬಂದಿವೆ, ಈ ಸಮುದಾಯವು ಕಲಾ ಕ್ಷೇತ್ರದಲ್ಲಿ ವಿಶೇಷ ಛಾಪು ಮೂಡಿಸುತ್ತ ಕಲೆಯನ್ನು ಉಳಿಸಿಕೊಂಡು ಬಂದಿರುವುದು ಗಮನಾರ್ಹ. ಅವುಗಳೆಂದರೆ ಧಾರ್ಮಿಕ, ಲೌಕಿಕ, ಪ್ರದರ್ಶನತ್ಮಕ, ಜನಪದ ವೈದ್ಯ, ಸೋಭಾನೆ ಪದಗಳು ಮತ್ತು ಸಾಹಿತ್ಯಿಕ ಕಲೆಗಳು.
APA, Harvard, Vancouver, ISO, and other styles
4

ಮಾಧವ, ಎಂ. ಕೆ. "ಬಸವಣ್ಣನ ವಚನಗಳಲ್ಲಿ ಸಮ ಸಮಾಜದ ಪ್ರಸ್ತುತತೆ". AKSHARASURYA 04, № 02 (2024): 27 to 32. https://doi.org/10.5281/zenodo.11525708.

Full text
Abstract:
ಕನ್ನಡ ಸಾಹಿತ್ಯದಲ್ಲಿ ೧೨ನೇ ಶತಮಾನವನ್ನು ವಚನಗಳ ಯುಗವೆಂದು ಕರೆಯಲಾಗುತ್ತದೆ. ಬಸವಣ್ಣ ವಚನ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದವನು. ತನ್ನ ವಚನಗಳ ಮೂಲಕ ‘ಕಾಯಕವೇ ಕೈಲಾಸ’ ವೆಂದು ಸಾರಿ, ಜನರಲ್ಲಿ ದುಡಿದು ತಿಂದು ಬದುಕುವ ಮಹತ್ವವನ್ನು ತಿಳಿಸಿದರು. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ತ್ರೀಯರಿಗೆ ಭಾಗವಹಿಸುವ ಸಮಾನ ಅವಕಾಶ ನೀಡುವ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕೊಂದು ಅರ್ಥವನ್ನು ಕಲ್ಪಿಸಿದರು. ಕಲುಷಿತಗೊಂಡಿದ್ದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ದಿಕ್ಕರಿಸಿ, ಘನ ಬದಲಾವಣೆಯನ್ನು ಆರಿಸಿ ಹೊರಟ ದಾರ್ಶನಿಕ ಬಸವಣ್ಣ. ಸಾಮಾಜಿಕ ಬದಲಾವಣೆಗೆ ಹೊಸ ಭಾಷ್ಯ ಬರೆಯುವ ಮೂಲಕ ಉತ್ತಮ ಸಮಾಜ ವ್ಯವಸ್ಥೆಗೆ ನಿಜವಾದ ಅರ್ಥ ಕಲ್ಪಿಸಿ ಕೊಟ್ಟವರು. ಸಮಾಜದ ಕೀಳುಮಟ್ಟದ ಶೋಷಣೆಯಿಂದಾಗಿಯೇ ಸಮಾಜದಲ್ಲಿ ದುಡಿಯುವ ಮತ್ತು
APA, Harvard, Vancouver, ISO, and other styles
5

ಹುಲುಗಯ್ಯ, ನಾಯಕರ್, та ರಾಮಕೃಷ್ಣಯ್ಯ ಕೆ. "ಬಯಲಾಟದಲ್ಲಿನ ಪ್ರಸ್ತುತ ಮಾರ್ಪಾಡುಗಳು". AKSHARASURYA 04, № 01 (2024): 35 to 46. https://doi.org/10.5281/zenodo.11162255.

Full text
Abstract:
ನಮ್ಮ ಕನಾರ್ಟಕದ ಜನಪದ ರಂಗಭೂಮಿಯಲ್ಲಿ ಬಯಲಾಟಕ್ಕೆ ಅತ್ಯಂತ ಪ್ರಮುಖವಾದ ಸ್ಥಾನವಿದೆ. ಬಯಲಾಟದ ರಂಗಸಜ್ಜಿಕೆಯನ್ನು ನೋಡುವುದಾದರೆ ಇದಕ್ಕೆ ಭವ್ಯವಾದ ರಂಗಮಂಟಪ ನಿರ್ಮಿಸುತ್ತಾರೆ. ರಂಗ ಮಂಟಪವನ್ನು ಅಟ್ಟದಂತೆ ನಿರ್ಮಿಸಿ ಮರದ ಹಲಗೆಗಳನ್ಮು ಹಾಕುತ್ತಾರೆ. ಅದಕ್ಕಾಗಿಯೇ ಬಯಲಾಟವನ್ನು ಅಟ್ಟದಾಟವೆಂತಲೂ, ದೊಡ್ಡಾಟವೆಂತಲೂ ಕರೆಯುತ್ತಾರೆ. ರಂಗಮಂಟಪಕ್ಕೆ ಅಟ್ಟ, ಚಪ್ಪರ, ಹಂದರ ಎಂದು ಕರೆಯುತ್ತಾರೆ. ದೇವಸ್ಥಾನಗಳ ಮುಂದಿನ ವಿಶಾಲ ಸ್ಥಳದಲ್ಲಿ ಅಟ್ಟದ ನಿರ್ಮಾಣವಾಗುತ್ತದೆ. ಆಟಕ್ಕಿಂತ ಎರಡು ದಿನ ಮೊದಲು ಮಂಟಪ ನಿರ್ಮಾಣ ಕಾರ್ಯ ಪ್ರಾರಂಭವಾಗುತ್ತದೆ. ಬಯಲಾಟದ ಮೂಲವನ್ನು ಹುಡುಕುತ್ತಾ ಹೋದಾಗ ಅವು ಮೊದಲು ದೇವಸ್ಥಾನದ ಆಶ್ರಯದಲ್ಲಿ ಬೆಳೆದು ನಂತರ ಬೀದಿಗೆ ಬಂದು ಜನಸಾಮಾನ್ಯರ ಮತ್ತು ಊರಿನ ಹಿರಿಯರ ಆಶ್ರಯದಲ್ಲಿ ಬೆಳೆದು ಬಂದಿರುವುದನ್ನು ಅನೇಕ ವಿದ್ವಾಂಸರು ತ
APA, Harvard, Vancouver, ISO, and other styles
6

ನವೀನ್, ಕುಮಾರ್ ಸಿ. "ನವೋದಯ ಸಾಹಿತ್ಯದಲ್ಲಿನ ಪರಂಪರೆಯ ನೋಟ ಹಾಗೂ ಆಧುನಿಕ ಶಿಸ್ತುಗಳ ಮುಖಾಮುಖಿ". AKSHARASURYA JOURNAL 06, № 06 (2025): 61 to 71. https://doi.org/10.5281/zenodo.15581018.

Full text
Abstract:
ನವೋದಯ ಸಾಹಿತ್ಯವು ಕನ್ನಡ ಸಾಹಿತ್ಯದ ಒಂದು ತಿರುವುಬಂದ ಹಂತವಾಗಿದೆ, ಇದು ಪುರಾತನ ಪರಂಪರೆಯೊಂದಿಗೆ ಹೊಸ ಆಧುನಿಕ ಶಿಸ್ತುಗಳನ್ನು ಮುಖಾಮುಖಿ ಮಾಡಿತು. ಈ ಲೇಖನದಲ್ಲಿ ನವೋದಯ ಸಾಹಿತ್ಯದ ಮೂಲ ಚಿಂತನ ಶೈಲಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರಭಾವ, ಮತ್ತು ಆಧುನಿಕತೆಯ ಆತ್ಮಪರ, ಸಮಾಜಪರ ದೃಷ್ಟಿಕೋನಗಳ ನಡುವಿನ ಸಂಪರ್ಕ ಮತ್ತು ವ್ಯತ್ಯಾಸಗಳನ್ನು ವಿಶ್ಲೇಷಿಸಲಾಗಿದೆ. ಸಾಹಿತ್ಯದ ವಿಷಯ, ರೂಪ, ಭಾಷಾ ಬಳಕೆ ಮತ್ತು ಲೇಖಕರ ಆಂತರಿಕ ನಿಲುವುಗಳಲ್ಲಿ ಪರಂಪರೆ ಮತ್ತು ಆಧುನಿಕತೆಯ ನಡುವಿನ ಸಮನ್ವಯದ ಪ್ರಯತ್ನವನ್ನು ಈ ಲೇಖನ ಮುಟ್ಟಿಸುತ್ತದೆ. ಈ ಮುಖಾಮುಖಿಯ ಮೂಲಕ ಕನ್ನಡ ಸಾಹಿತ್ಯವು ಹೇಗೆ ಹೊಸ ಬೆಳವಣಿಗೆಗೆ ದಾರಿ ಮಾಡಿತು ಎಂಬುದನ್ನು ಲೇಖನ ಸ್ಪಷ್ಟಪಡಿಸುತ್ತದೆ. 
APA, Harvard, Vancouver, ISO, and other styles
7

ಸಂತೋಷ್‌, ಕುಮಾರ್‌ ಆರ್‌.ಎಂ. "ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು". AKSHARASURYA JOURNAL 06, № 04 (2025): 78 to 89. https://doi.org/10.5281/zenodo.15490942.

Full text
Abstract:
ವಚನ ಸಾಹಿತ್ಯವು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅಮೂಲ್ಯ ಸಂಪತ್ತಾಗಿದೆ. ಇದು 12ನೇ ಶತಮಾನದಲ್ಲಿ ಜನಿಸಿದ ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದ್ದು, ಬಸವಾದಿ ಶರಣರು ಇದನ್ನು ಜನಸಾಮಾನ್ಯರಿಗೆ ತಲುಪುವಂತೆ ಮಾಡಿದರು. ವಚನ ಸಾಹಿತ್ಯವು ಧಾರ್ಮಿಕ, ಸಾಮಾಜಿಕ ಮತ್ತು ದಾರ್ಶನಿಕ ಚಿಂತನೆಗಳನ್ನು ಒಳಗೊಂಡಿದೆ ಮತ್ತು ಭಕ್ತಿ ಚಳವಳಿಯ ಪ್ರಮುಖ ಭಾಗವಾಗವೂ ಆಗಿದೆ. ವಚನ ಸಾಹಿತ್ಯವು ʼಸಮಾನತೆʼ, ʼಶ್ರಮʼ-ʼಕಾಯಕʼ ಮತ್ತು ʼಭಕ್ತಿʼಯ ಮಹತ್ವ, ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಶರಣರು ಜಾತಿ, ಲಿಂಗ, ಆರ್ಥಿಕ ಸ್ಥಿತಿ ಮುಂತಾದ ಬೇಧಭಾವಗಳನ್ನು ತಿರಸ್ಕರಿಸಿದರು. ಅಲ್ಲದೆ ಇವರು ಜಾತಿ-ವರ್ಣಭೇದಗಳ ವಿರೋಧವಾಗಿಯೂ ಮತ್ತು ಸಮಾನತೆಗೆ ಹೆಚ್ಚಿನ ಮನ್ನಣೆಯನ್ನು ನೀಡಿದರು.ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮೊದಲಾದ ಶರಣರು &ldq
APA, Harvard, Vancouver, ISO, and other styles
8

ನಿಕಿತಾ, ರಮೇಶ ಚನ್ನಾಳೆ, та ಚಿಂತಾಮಣಿ ಮಹೇಶ. "ಕನ್ನಡ ಲಲಿತ ಪ್ರಬಂಧಗಳಲ್ಲಿ ಮಾನವೀಯ ಮೌಲ್ಯಗಳು". Aksharasurya Journal 05, № 05 (2025): 121 to 127. https://doi.org/10.5281/zenodo.14619654.

Full text
Abstract:
ಕನ್ನಡ ಸಾಹಿತ್ಯದ ಅನೇಕ ಬರಹಗಳು ಸಮಾನತೆ, ಸ್ತ್ರೀವಾದ, ವಾಸ್ತವತೆ, ಸಮಾಜಿಕ ದೃಷ್ಟಿಕೋನ, ಕಲ್ಪನೆ ಹೀಗೆ ಅನೇಕ ವಿಷಯಗಳ ಬಗೆಗೆ ಬೆಳಕು ಚಲ್ಲಿವೆ. ಅದೇ ರೀತಿಯಲ್ಲಿ ಲಲಿತ ಪ್ರಬಂಧಗಳು ಕೂಡ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮವನ್ನು ತಂದುಕೊಟ್ಟಿವೆ. ಲಲಿತ ಪ್ರಬಂಧಗಳು ಕೂಡ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿವೆ. ಮೌಲ್ಯಗಳಿಲ್ಲದೆ ಇದ್ದರೆ ಅದು ಸಾಹಿತ್ಯವಲ್ಲ. ಹಾಗಾಗಿ ಯಾವುದೇ ಸಾಹಿತ್ಯ ಮಾನವೀಯ ಮೌಲ್ಯಗಳು ಪ್ರಮುಖವಾಗಿ ಒಳಗೊಂಡಿರಲೇಬೇಕು. ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ ಎ.ಎನ್. ಮೂರ್ತಿರಾವ್ ಅವರ ಪ್ರಬಂಧಗಳು ಮತ್ತು ಭುವನೇಶ್ವರಿ ಹೆಗಡೆಯವರ ಲಲಿತ ಪ್ರಬಂಧಗಳು ಮಾನವೀಯ ಮೌಲ್ಯಗಳನ್ನು ಬಿತ್ತರಿಸಿವೆ. ಧಾರ್ಮಿಕ, ಸಮಾಜಿಕ, ಮಾನವೀಯ ಮೌಲ್ಯಗಳು ಬದುಕಿನ ಮೆಟ್ಟಿಲೇರಲು ಮೌಲ್ಯಗಳು ಪ್ರಮುಖವಾಗಿವೆ. ಮೌಲ್ಯಗಳು ಉತ್ತಮ ಸಮಾಜವನ
APA, Harvard, Vancouver, ISO, and other styles
9

ಪವಾಡೆಪ್ಪ, ವಿ. ಮನಗೂಳಿ. "ಮುಳುಗಡೆ ಗ್ರಾಮಗಳಲ್ಲಿನ ಕೃಷಿ ಸಂಬಂಧಿ ಆಚರಣೆಗಳು". AKSHARASURYA 05, № 02 (2024): 73 to 84. https://doi.org/10.5281/zenodo.14035247.

Full text
Abstract:
ಮನುಷ್ಯನಿಗೆ ಉಸಿರಾಡಲು ಗಾಳಿ ಎಷ್ಟು ಮುಖ್ಯವೋ ಜೀವಿಸಲು ನೀರು ಕೂಡ ಮುಖ್ಯ. ಪ್ರಾಚೀನ ಕಾಲದಿಂದಲೂ ಮನುಷ್ಯ ತಾನು ಬದುಕಲು, ತನಗೆ ಬೇಕಾದ ಆಹಾರ ಪದಾರ್ಥಗಳನ್ನು ಬೆಳೆಯಲು ನದಿ ಮೂಲಗಳನ್ನೇ ಅವಲಂಬಿಸಿರುವುದನ್ನು ಕಾಣುತ್ತೇವೆ. ಹಾಗಾಗಿಯೇ ಜಗತ್ತಿನ ಎಲ್ಲಾ ನಾಗರಿಕತೆಗಳು ನದಿ ಬಯಲು ಪ್ರದೇಶಗಳಲ್ಲಿಯೇ ಬೆಳೆದು ಬಂದಿವೆ. ನದಿಗಳು ಕೇವಲ ಹರಿಯುವ ಜಲರಾಶಿ ಮಾತ್ರವಲ್ಲದೆ ಸಜೀವ ಶಕ್ತಿವಾಹಿನಿಗಳಾಗಿ ನಮ್ಮ ಮುಂದಿವೆ. ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿ ಒಂದು ಕಾಲಕ್ಕೆ ಮನುಷ್ಯನ ಧಾರ್ಮಿಕ ಹಾಗೂ ಸಾಂಸ್ಕೃತಿಕತೆ ಬೆಳವಣಿಗೆಗೆ ಕಾರಣವಾಗಿದ್ದ ನದಿಗಳು ಇಂದು ಆರ್ಥಿಕ ಅಭಿವೃದ್ದಿ ದೃಷ್ಟಿಯಿಂದ ವಿವಿಧೋದ್ದೇಶ ನೀರಾವರಿ ಯೋಜನೆಗಳಿಗೆ ಆವಾಸ ಸ್ಥಾನಗಳಾಗಿವೆ. ಈ ನಿಟ್ಟಿನಲ್ಲಿ ಭಾರತದ ಪ್ರಮುಖ ನದಿಗಳಲ್ಲಿ ಒಂದಾದ ಕೃಷ್ಣಾ ನದಿಯ ನೀರನ್ನು ಉಪಯೋಗಿಸಿಕೊಳ್ಳುವ ಸ
APA, Harvard, Vancouver, ISO, and other styles
10

ಮುಕ್ತಾ, ಪೈ., та ಶಂಕರ್ ಜ್ಯೋತಿ. "ವಚನ ಚಳುವಳಿ ಮತ್ತು ಸಮಾಜ ಪರಿವರ್ತನೆ". AKSHARASURYA JOURNAL 06, № 05 (2025): 84 to 93. https://doi.org/10.5281/zenodo.15504282.

Full text
Abstract:
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯಕ್ಕೊಂದು ವಿಶಿಷ್ಟವಾದ ಸ್ಥಾನವಿದೆ. ಇದು ಎಲ್ಲಾ ವರ್ಗ, ವರ್ಣದ ಜನಸಾಮಾನ್ಯರು ತಮ್ಮ ಮನಸ್ಸಿನಲ್ಲಿದ್ದ ಭಾವನೆಗಳನ್ನು ವ್ಯಕ್ತಪಡಿಸಿದ ಅದ್ಭುತವಾದ ಭಕ್ತಿ ಸಾಹಿತ್ಯ. ಮೇಲು-ಕೀಳು, ಜಾತಿ-ಮತ, ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರೂ ಸಾಮೂಹಿಕವಾಗಿ ಪಾಲ್ಗೊಂಡ ಸಾಹಿತ್ಯ ಜಗತ್ತಿನ ಇತಿಹಾಸದಲ್ಲಿಯೇ ವಿರಳವಾಗಿದೆ. ಶರಣ ಧರ್ಮದ ವಿಶಿಷ್ಟತೆ ಎಂದರೆ ಪೂಜೆ ಪುನಸ್ಕಾರಗಳಿಗೆ, ಯಜ್ಞ ಯಾಗಾದಿಗಳಿಗೆ, ಆಚರಣೆಗಳಿಗೆ ಅವಕಾಶ ನೀಡಲಿಲ್ಲ. ವಚನಾಕಾರರು 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಹೀಗೆ ಹಲವು ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ತಂದು ಸಮಾಜದಲ್ಲಿ ನಿರ್ಲಕ್ಷಕ್ಕೆ ಒಳಗಾದ ಜನ ಸಮೂಹವನ್ನು ಒಂದೆಡೆ ಸೇರಿಸುವ ಕಾರ್ಯವನ್ನು ಮಾಡಿದರು. ವಚನ ಚಳುವಳಿಯ ದೀಪವನ್ನು ನೂರಾರು ವಚನಕಾರರು ಹಚ
APA, Harvard, Vancouver, ISO, and other styles
More sources
We offer discounts on all premium plans for authors whose works are included in thematic literature selections. Contact us to get a unique promo code!