Academic literature on the topic 'ಧರ್ಮ'

Create a spot-on reference in APA, MLA, Chicago, Harvard, and other styles

Select a source type:

Consult the lists of relevant articles, books, theses, conference reports, and other scholarly sources on the topic 'ಧರ್ಮ.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Journal articles on the topic "ಧರ್ಮ"

1

ನೇತ್ರಾವತಿ, ಎಸ್. "ಧರ್ಮದ ಒಳಗಡೆ ಸಿಲುಕಿದ ಮುಸ್ಲಿಂ ಮಹಿಳೆ". AKSHARASURYA 03, № 05 (2024): 114–27. https://doi.org/10.5281/zenodo.10938130.

Full text
Abstract:
ಧರ್ಮ ಎಂದರೆ ಮಾನವೀಯ ಮೌಲ್ಯಗಳನ್ನು, ಅಹಿಂಸೆಯಿಂದ ಕೂಡಿರುವಂತಹದ್ದು, ಎಲ್ಲರನ್ನು ಪ್ರೀತಿಯಿಂದ, ಮಮತೆಯಿಂದ ನೋಡಿಕೊಳ್ಳುವುದನ್ನು ಧರ್ಮ ಎನ್ನಬಹುದು. ಹಾಗೆಯೇ ಯಾವುದೇ ಆಚಾರ-ವಿಚಾರಗಳನ್ನು, ಮಾನವ ಸಂಬಂಧಗಳನ್ನು ಪವಿತ್ರ ಭಾವನೆಯಿಂದ, ಯಾವುದೇ ಜೀವಿಗೂ ತೊಂದರೆಯನ್ನು ನೀಡದೆ ನಡೆಸಿಕೊಳ್ಳುವುದನ್ನು ಧರ್ಮ ಎಂದು ಹೇಳಬಹುದು. ಭಾರತ ಹಲವು ಧರ್ಮಗಳನ್ನು ಒಳಗೊಂಡಿದೆ, ಅದರಲ್ಲಿ ಮುಸ್ಲಿಂ ಧರ್ಮವೂ ಒಂದು. ಹಿಂದೂಗಳಂತೆ ಮುಸ್ಲಿಂ ಧರ್ಮದವರನ್ನು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ಗುರುತಿಸಬಹುದು. ಯಾವುದೇ ಧರ್ಮದಲ್ಲಾದರೂ ಮಹಿಳೆಯರಿಗೆ ಸ್ವಾತಂತ್ರ್ಯ ದೊರೆಯುವುದು ತೀರ ಕಡಿಮೆ ಪ್ರಮಾಣದಲ್ಲಿ. ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ಪ್ರಾಚೀನ ಕಾಲದಲ್ಲಿ ಗೌರವ, ಮನ್ನಣೆ, ತಮ್ಮ ಬದುಕನ್ನು ಅವರೇ ನಿರ್ಮಿಸಿಕೊಳ್ಳುವ ಅವಕಾಶ, ಸ್ವಾತಂತ್ರ್ಯ ಇತ್ತು
APA, Harvard, Vancouver, ISO, and other styles
2

ಪವಿತ್ರ, ಸಿ. ಎಸ್. "ಮಹಿಳಾ ಸಬಲೀಕರಣ ಮತ್ತು ವೈಷ್ಣವ ಧರ್ಮ". AKSHARASURYA JOURNAL 03, № 04. SPECIAL ISSUE. (2024): 216 to 230. https://doi.org/10.5281/zenodo.10930786.

Full text
Abstract:
ನನ್ನ ಸಂಶೋಧನಾ ಲೇಖನದಲ್ಲಿ ನಾನು “ಮಹಿಳಾ ಸಬಲೀಕರಣ ಮತ್ತು ವೈಷ್ಣವ ಧರ್ಮ” ಎಂಬ ವಿಷಯವನ್ನು ಕುರಿತು ಸಂಶೋಧನಾ ಪ್ರಬಂಧವನ್ನು ಮಂಡಿಸಲು ಪ್ರಯತ್ನಿಸಿರುತ್ತೇನೆ. ಈ ದಿಕ್ಕಿನಲ್ಲಿ ವೈಷ್ಣವ ಧರ್ಮ ಮಹಿಳಾ ಸಬಲೀಕರಣಕ್ಕೆ ಯಾವ ರೀತಿಯ ಕೊಡುಗೆ ನೀಡಿದೆ? ಮಹಿಳೆಯರ ಸ್ಥಾನಮಾನದ ಸುಧಾರಣೆಗೆ ವೈಷ್ಣವ ಧರ್ಮದ ಕೊಡುಗೆ ಏನು? ಎಂಬ ನಿಟ್ಟಿನಲ್ಲಿ ಈ ಕಿರು ಪ್ರಬಂಧವನ್ನು ಸಿದ್ಧಪಡಿಸಿರುತ್ತೇನೆ. ಭಾರತದ ದೇಶದಲ್ಲಿ ಮಹಿಳೆಗೆ ಮಹತ್ವದ ಸ್ಥಾನವಿದೆ ಅಲ್ಲದೆ ಸಾಂಸ್ಕೃತಿಕವಾಗಿ ಮಹಿಳೆಯ ಸ್ಥಾನಮಾನ ಮಹತ್ವಪೂರ್ಣವಾಗಿದೆ. “ಯತ್ರ ನಾರ್ಯಂತು ಪೂಜ್ಯಂತೆ ರಮಂತೆ ತತ್ರ ದೇವತಾ” [ಎಲ್ಲಿ ನಾರಿಯನ್ನು ಪೂಜಿಸಲಾಗುವುದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ] ಎಂದು ನಮ್ಮ ಪುರಾಣಗಳಲ್ಲಿ ಘೋಷಿಸಿವೆ. ಮಹಿಳೆ ಪುರುಷನಿಗೆ ಆಧಾರ ಸ್ಥಂಭದಂತಿದ್ದಳು.
APA, Harvard, Vancouver, ISO, and other styles
3

ಗಣೇಶ. "ಧರ್ಮ ಮತ್ತು ಅಂಬೇಡ್ಕರ್‌". AKSHARASURYA JOURNAL 06, № 05 (2025): 46 to 53. https://doi.org/10.5281/zenodo.15504212.

Full text
Abstract:
ಅಂಬೇಡ್ಕರ್‌ ಭಾರತದ ಒಬ್ಬ ಶ್ರೇಷ್ಠ ಪ್ರತಿಭಾವಂತ ಬುದ್ಧಿ ಜೀವಿ ಮತ್ತು ಮೇಧಾವಿ. ಪ್ರಪಂಚದ ಅಪ್ರತಿಮ ಚಿಂತಕರ ಸಾಲಿನಲ್ಲಿ ನಿಲ್ಲಬಲ್ಲ, ಮೇರು ವ್ಯಕ್ತಿತ್ವವುಳ್ಳ ಚಿಂತನಶೀಲ ವ್ಯಕ್ತಿ. ಅವರು ಜಗತ್ತಿನ ಎಲ್ಲಾ ಧಾರ್ಮಿಕ ಗ್ರಂಥಗಳನ್ನು ಆಸಕ್ತಿ ಮತ್ತು ಕುತೂಹಲದಿಂದ ಅಮೂಲಾಗ್ರವಾಗಿ ಅಧ್ಯಯನ ಮಾಡಿದ್ದರು. ಧರ್ಮವನ್ನು ಕುರಿತಂತೆ ರಾಬರ್ಟ್ ಸನ್ ಸ್ಮಿತ್ ಅವರ ಪರಿಕಲ್ಪನೆಯನ್ನು ಅಂಬೇಡ್ಕರ್‌ ಹಿಂದೂ ಧರ್ಮದ ತತ್ವಜ್ಞಾವನ್ನು ಕುರಿತ ತಮ್ಮ ಕೃತಿಯಲ್ಲಿ ಹೀಗೆ ಉಲ್ಲೇಖಿಸಿದ್ದಾರೆ. ಧರ್ಮ ಯಾವುದೇ ಕಾರಣಕ್ಕೂ ದುರ್ಬಲರನ್ನು ಶೋಷಿಸುವ ಅಸ್ತ್ರವಾಗಬಾರದು. ಹಿಂದೂ ಧಾರ್ಮಿಕ ವ್ಯವಸ್ಥೆಯಲ್ಲಿ ದೈವಿಕ ಪ್ರಭುತ್ವದ ಲಿಖಿತ ಸಂವಿಧಾನ ಮತ್ತು ಪುರೋಹಿತಶಾಹಿಯ ಅಘೋಷಿತ ಪ್ರಾಬಲ್ಯವನ್ನು ಕಾಪಾಡಿಕೊಂಡು ಬರಲಾಗಿದೆ. ಈ ಧರ್ಮದಲ್ಲಿ ಬಹುಸಂಖ್ಯಾತ ಹಿಂದುಳಿದ
APA, Harvard, Vancouver, ISO, and other styles
4

ಅನುಷ. "ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆಗಳು". AKSHARASURYA JOURNAL 06, № 04 (2025): 72 to 77. https://doi.org/10.5281/zenodo.15490928.

Full text
Abstract:
ಪ್ರಸ್ತುತ ಲೇಖನದಲ್ಲಿ ಹನ್ನೆರಡನೇಯ ಶತಮಾನದಲ್ಲಿದ್ದ ವಚನ ಸಾಹಿತ್ಯದ ಸಾಮಾಜಿಕ ಚಿಂತನೆಗಳು ವ್ಯಕ್ತವಾಗಿವೆ. ಆ ಕಾಲದಲ್ಲಿದ್ದ ಸಾಮಾಜಿಕ ಮೌಲ್ಯ ಪರಿವರ್ತನೆ ವಚನಕಾರರು ಸಮಾನ ನಾಯಕತ್ವವನ್ನು ಅನುಸರಿಸಿದ್ದು, ಜಾತಿ - ಧರ್ಮ, ಲಿಂಗ ತಾರತಮ್ಯ, ಮೇಲು - ಕೀಳು, ವಿಗ್ರಹಾರಾಧನೆ ದೇವಸ್ಥಾನಗಳ ನಿರ್ಮಾಣವನ್ನು ಖಂಡಿಸಿದರು ಹಾಗೂ ಇದಕ್ಕೆಲ್ಲ ವಿರೋಧಿಯಾಗಿದ್ದರು. ವೀರಶೈವ ಧರ್ಮದ ಪಂಚ ಸೂತ್ರಗಳು ಕಾಯಕದ ಮಹತ್ವವನ್ನು ತಿಳಿಸಿರುವುದು ಎಲ್ಲರಲ್ಲಿಯೂ ಸಮಾನತೆಯ ಭಾವ ಅಂದಿನ ಕಾಲಕ್ಕೆ ಹೇಗಿತ್ತು. ವಚನಕಾರರಾದ ಬಸವಣ್ಣನವರು ಮತ್ತು ಅಕ್ಕಮಹಾದೇವಿಯವರ ವಚನಗಳ ಗ್ರಹಿಕೆ, ವಚನ ಸಾಹಿತ್ಯ ಇಂದಿನ ಸಮಾಜಕ್ಕೆ ಏಕೆ ಪ್ರಸ್ತುತ ಹಾಗೂ ಸಣ್ಣದೊಂದು ಪದ್ಯವನ್ನು ವಿಷಯದ ಕುರಿತು ಒಳಗೊಂಡಿದೆ. 
APA, Harvard, Vancouver, ISO, and other styles
5

ದಿನೇಶ, ಎನ್.ಎನ್. "ಮಲಬಾರ್ ಮಾಪಿಳ್ಳೆ ಬಂಡಾಯಗಳು: ಧರ್ಮ, ಭೂಮಿ ಮತ್ತು ಹಕ್ಕುಗಳಿಗಾಗಿ ಹೋರಾಟ". AKSHARASURYA 06, № 02 (2025): 105 to 116. https://doi.org/10.5281/zenodo.15124098.

Full text
Abstract:
19ನೆಯ ಶತಮಾನದಾದ್ಯಂತ ಸ್ಫೋಟಗೊಂಡು 20ನೇಯ ಶತಮಾನದ ಮೊದಲ ಭಾಗವು ಉಗ್ರ ಹೋರಾಟದೊಂದಿಗೆ ಅಳಿದುಹೋದವು. ಕೇರಳದ ಮಲಬಾರ್ ಪ್ರದೇಶದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಪ್ರತಿರೋಧವಾಗಿ ಪ್ರಾರಂಭವಾಯಿತು. ಮಲೆಯಾಳಿ ಸಮಾಜದ ಜೊತೆಗಿನ ಅರಬರ ವ್ಯಾಪಾರೀ ಸಂಬಂಧದ ಚರಿತ್ರೆ ಸುಮಾರು 9ನೇ ಶತಮಾನದಷ್ಟು ಹಿಂದಿನಿಂದ ಪ್ರಾರಂಭವಾಗುತ್ತದೆ. ಕರಾವಳಿ ಪ್ರಾಂತ್ಯದಲ್ಲಿದ್ದ ಹಿಂದೂ ಮುಖಂಡರುಗಳಿಗೆ ಶ್ರೀಮಂತ ಅರಬ ವ್ಯಾಪಾರಿಗಳ ಬೆಂಬಲ ಯಾವಾಗಲೂ ಬೇಕಾಗುತ್ತಿತ್ತು. ಮಲಬಾರಿನಲ್ಲೇ ಕ್ರಮೇಣ ಉಳಿದುಕೊಂಡ ಅರಬ ವ್ಯಾಪಾರಿಗಳು ಪ್ರಮುಖವಾಗಿ ನಾಯರ್ ಮತ್ತು ತಿಯಾ ಜಾತಿಯ ಹೆಂಗಸರನ್ನೇ ಮದುವೆಯಾದರು. ಕಾಲಾಂತರದಲ್ಲಿ ಇವರೇ ಮಾಪಿಳ್ಳೆಗಳಾದರು. ಮತಾಂತರಗೊಂಡು ಹೊಸದಾಗಿ ಸೇರ್ಪಡೆಗೊಳ್ಳುವ ಪ್ರತಿಯೊಬ್ಬ ಸದಸ್ಯನನ್ನು ಮಾಪಿಳ್ಳೆಗಳು ಸಂತೋಷದಿಂದ ಸ್ವೀಕರಿಸಿದರೂ ಮ
APA, Harvard, Vancouver, ISO, and other styles
6

ಸುಪ್ರಿಯಾ, ಮಲಶೆಟ್ಟಿ. "ವಚನಗಳಲ್ಲಿ ಖಗೋಳ ವಿಜ್ಞಾನ". AKSHARASURYA JOURNAL 04, № 04 (2024): 84 to 91. https://doi.org/10.5281/zenodo.13284072.

Full text
Abstract:
ವಿಜ್ಞಾನ ಮತ್ತು ಆಧ್ಯಾತ್ಮಿಕತೆಯು ಒಂದೇ ಸತ್ಯವನ್ನು ಎರಡು ರೀತಿಯಲ್ಲಿ ಕಾಣುವುದು. ಬ್ರಹ್ಮಾಂಡ ಮತ್ತು ಪಿಂಡಾಂಡ, ಬಾಹ್ಯ ಜಗತ್ತು ಮತ್ತು ಆಂತರಿಕ ಜಗತ್ತು ಎಂಬ ಎರಡು ಜಗತ್ತುಗಳಿವೆ. ಅನುಭವದಿಂದ ಈ ಎರಡು ಕ್ಷೇತ್ರಗಳಿಂದಲೂ ನಮಗೆ ಸತ್ಯ ದೊರಕುವುದು. ಆಂತರಿಕ ಅನುಭವದಿಂದ ಸಂಗ್ರಹಿಸಿರುವುದೇ ಮನಶಾಸ್ತ್ರ , ತತ್ವಶಾಸ್ತ್ರ ಮತ್ತು ಧರ್ಮ. ಬಾಹ್ಯ ಜಗತ್ತಿನಿಂದ ನಮಗೆ ಭೌತವಿಜ್ಞಾನಗಳು ದೊರಕುವವು. ಪೂರ್ಣವಾದ ಸತ್ಯವು ಎರಡು ಕ್ಷೇತ್ರಗಳಿಂದ ಬರುವ ಅನುಭವಗಳಿಗೆ ವಿರೋಧವಿಲ್ಲದೆ ಇರಬೇಕು. ಪಿಂಡಾಂಡವು ಬ್ರಹ್ಮಾಂಡಕ್ಕೆ ಪ್ರಮಾಣವಾಗಿರಬೇಕು. ಸತ್ಯವು ಯಾವ ಕ್ಷೇತ್ರಕ್ಕೆ ಸೇರಿದ್ದರು ಪರಸ್ಪರ ವಿರೋಧಗಳಿರುವುದಿಲ್ಲ ಆಂತರಿಕ ಸತ್ಯಕ್ಕೂ ಬಾಹ್ಯ ಸತ್ಯಕ್ಕೂ ಪರಸ್ಪರ ವಿರೋಧವಿಲ್ಲ. 
APA, Harvard, Vancouver, ISO, and other styles
7

ನಾಗೇಂದ್ರಪ್ಪ, ಶಿವಶರಣಪ್ಪ. "ವಿಜಯಶ್ರೀ ಸಬರದರವರ ಕಾವ್ಯಗಳಲ್ಲಿ ಮಹೀಳಾ ಚಿಂತನೆ". Aksharasurya Journal 05, № 05 (2025): 77 to 80. https://doi.org/10.5281/zenodo.14619562.

Full text
Abstract:
ಆಧುನಿಕ ಕಾವ್ಯಗಳನ್ನು ಅವಲೋಕಿಸಿದಾಗ ವಿಜಯಶ್ರೀ ಸಬರದರವರ ಕಾವ್ಯಗಳಲ್ಲಿ ಮಹಿಳಾ ಪರ ಚಿಂತನೆಗಳನ್ನು ಕಾಣುತ್ತೇವೆ. ಮಹಿಳೆಯನ್ನು ಪುರುಷ ಪ್ರಧಾನವಾದ ವ್ಯವಸ್ಥೆಯಲ್ಲಿ ಎರಡನೆಯ ದರ್ಜೆಯ ಪ್ರಜೆ ಎಂದು ಪರಿಗಣಿಸಿ ಆಕೆಯನ್ನು ವಿದ್ಯೆಯಿಂದ, ಅಸ್ತಿಯಿಂದ, ಸ್ವಾತಂತ್ರ್ಯದಿಂದ ದೂರವಿಡಲಾಗಿತ್ತು. ಆಕೆಗೆ ಸ್ವಾತಂತ್ರ್ಯವನ್ನು ಕೊಡಬಾರದು ಎಂದು ಈ ದೇಶದ ಧರ್ಮ ಗ್ರಂಥಗಳು ಹೇಳುತ್ತವೆ. ಆಕೆ ಮೈಲಿಗೆ, ಮಾಯೆ, ಚಂಚಲೆ, ಎಂದು ಕರೆಯುವುದರ ಮೂಲಕ ಅತ್ಯಂತ ಕೀಳಾಗಿ ಕಾಣುತ್ತಿದ್ದರು. ಮಹಿಳೆ ಜೀವನ ಪರ್ಯಂತ ಅಸ್ಪೃಶ್ಯಳಾಗಿ ಬದುಕುವಂತಹ ಅನಿವಾರ್ಯ ಪದ್ಧತಿ ಈ ದೇಶದ ಚರಿತ್ರೆಯಲ್ಲಿತ್ತು. ವೇದಗಳಲ್ಲಿ ಆಕೆಯನ್ನು ತುಂಬಾ ಹೀನಾಯವಾಗಿ ನೋಡುತ್ತಾರೆ. ಮಹಿಳೆಗೆ ಬುದ್ಧಿ ಕಡಿಮೆ ಇದೆ, ಅವಳ ಹೃದಯ ಕಿರುಬನಿಗಿಂತಲೂ ಕ್ರೂರವಾದುದು ಎಂದು ಹೇಳುತ್ತಾರೆ. ದೇಶದ ಪುರಾಣ, ಇತಿಹಾ
APA, Harvard, Vancouver, ISO, and other styles
8

ಪುಟ್ಟಸ್ವಾಮಿ. "ಕುವೆಂಪು ಅವರ ವೈಚಾರಿಕತೆ". AKSHARASURYA JOURNAL 05, № 04 (2024): 115 to 125. https://doi.org/10.5281/zenodo.14289937.

Full text
Abstract:
ಕನ್ನಡ ಸಾಹಿತ್ಯ ಸಂದರ್ಭದಲ್ಲಿ ‘ಕುವೆಂಪು’ ಎನ್ನುವ ಹೆಸರೇ ಒಂದು ವಿಶಿಷ್ಟವಾದ ಕಂಪನ್ನ, ಸೊಂಪನ್ನ ಒಳಗೊಂಡಿದೆ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಕೃಷಿ ಮಾಡಿರುವ ಇವರು ಸೀಮಾಪುರುಪರೆನಿಸಿಕೊಂಡಿದ್ದಾರೆ. ಮುಖ್ಯವಾಗಿ ಅವರ ವೈಚಾರಿಕ ನಿಲುವು ವೈಜ್ಞಾನಿಕ ದೃಷ್ಟಿಯಿಂದ ಪ್ರೇರಿತವಾದದ್ದು. ವೈಚಾರಿಕತೆ ಎಂಬುದು ಬುದ್ಧಿ ಮತ್ತು ಭಾವಗಳ ವಿದ್ಯುದಾಲಿಂಗನ. ಸೂಕ್ಷ್ಮವಾದ ವಿವೇಚನಾಶಕ್ತಿ, ಆಲೋಚನಾಶಕ್ತಿಗಳ ಅಭಿವ್ಯಕ್ತಿಯ ಸಂಗಮ. ವಿವೇಕಪೂರ್ಣವಾದ ವಿವೇಚನೆಯೇ ವೈಚಾರಿಕತೆಯ ತಳಹದಿಯಾಗಿದೆ. ವೈಚಾರಿಕತೆ ಎಂಬುದು ಮೂಲಭೂತ ಮೌಲ್ಯಗಳನ್ನು ನಿರಾಕರಿಸಬಾರದು. ಸತ್ಯವನ್ನು ಶೋಧಿಸುವಾಗ ಭೌತಿಕವಾಗಿ ಕಣ್ಣಿಗೆ ಕಾಣುವ ವಸ್ತುವಿನ ವೈಜ್ಞಾನಿಕ ದೃಷ್ಟಿಯೊಂದೆ ನಿಜವಾಗಲಾರದು. ಅದರ ಜೊತೆಗೆ ಆ ವಸ್ತುವಿನ ಅಂತರಾಳದ ಚೈತನ್ಯಾತ್ಮಕ ಭಾವಲಹರಿಯು ಕೂಡ ಮುಖ್ಯ
APA, Harvard, Vancouver, ISO, and other styles
9

ರೇವತಿ, ಬಿ. ಶಿರನಾಳ. "ಅನುಪಮಾ ನಿರಂಜನ ಮತ್ತು ತ್ರಿವೇಣಿಯವರ ಕಥೆಯಲ್ಲಿ ಮಹಿಳೆಯ ಪಾತ್ರ". AKSHARASURYA JOURNAL 05, № 03 Special Issue (2024): 104 to 110. https://doi.org/10.5281/zenodo.14246680.

Full text
Abstract:
ನಮ್ಮ ನಾಡು ಸುಸಂಸ್ಕೃತವಾದ ತಾಣ ನಮ್ಮ ಮಹಾಕಾವ್ಯವಾದ “ರಾಮಾಯಣದಲ್ಲಿ” ಒಂದು ಶ್ಲೋಕ ಬರುತ್ತದೆ ಅದು “ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ” ಅಂತ ಸಂಸ್ಕೃತ ಶ್ಲೋಕ ತಾತ್ಪರ್ಯ ನೋಡುವುದಾದರೆ “ತಾಯಿ ಮತ್ತು ಮಾತೃಭೂಮಿ ಸ್ವರ್ಗಕ್ಕಿಂತ ದೊಡ್ಡದು” ಎಂದು ಅರ್ಥ. ಇದನ್ನು ಅರಿತ ಸ್ತ್ರೀ ನಮ್ಮ ಸಮಾಜದಲ್ಲಿ ಪುರುಷರಿಗೆ ಗೌರವಿಸುವುದು. ಒಂದು ಧರ್ಮ ಮತ್ತು ಕರ್ತವ್ಯ. ಹಾಗಾಗಿ ನಮ್ಮ ಸಮಾಜ ಪುರುಷ ಪ್ರಧಾನವಾಗಿ ನೋಡುತ್ತದೆ. ಸಹಜವಾಗಿ ಸ್ತ್ರೀಯು ಕೂಡಾ ಪ್ರಧಾನವಾಗಿ ನೋಡುವುದು ಅವಳ ವಿಶಾಲ ಮನೋಭಾವವಾಗುತ್ತದೆ. ಜೊತೆಗೆ ಕುಟುಂಬವನ್ನು ಜವಾಬ್ದಾರಿಯುತವಾಗಿ ನಿಭಾಯಿಸುವ ಆದ್ಯ ಕರ್ತವ್ಯಗಳನ್ನು ಈ ಕಥೆಗಳಲ್ಲಿ ನಾವು ಕಾಣುತ್ತೇವೆ. ತನ್ನ ಆಸೆ ಆಕಾಂಕ್ಷೆಗಳು ಬದಿಗೆ ಸರಿಸಿ ತನ್ನ ಪರಿವಾರವನ್ನು ಪ್ರೀತಿ, ಮಮತೆ
APA, Harvard, Vancouver, ISO, and other styles
10

ಪವಿತ್ರ, ಎಸ್. "ಬೌದ್ಧ ಧಮ್ಮ ಮತ್ತು ಮಹಿಳೆ". AKSHARASURYA JOURNAL 06, № 05 (2025): 133 to 140. https://doi.org/10.5281/zenodo.15504377.

Full text
Abstract:
ಈ ಲೇಖನದಲ್ಲಿ ಬುದ್ದನ ಮೇಲಿನ ಕೆಲವು ಆರೋಪಗಳಿಗೆ ಉತ್ತರವನ್ನು ಹುಡುಕುವ ಪ್ರಯತ್ನ ಮಾಡಲಾಗಿದೆ. ಅದಕ್ಕೆ ಅಂಬೇಡ್ಕರ್‌ ಅವರು ತಮ್ಮ ಬರಹ ಮತ್ತು ಭಾಷಣಗಳಲ್ಲಿ ಆರೋಪಗಳಿಗೆ ವಿವರಣೆ ನೀಡಿದ್ದಾರೆ. ಅದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಬುದ್ದ ತನ್ನ ಹೆಂಡತಿಯಾದ ಯಶೋಧರೆಯ ಅನುಮತಿ ಕೇಳದೆ ತೊರೆದು ಬಂದ, ಮಗನ ಮುಖವನ್ನು ಸಹ ನೋಡಲಿಲ್ಲ. ಬುದ್ದ ತನ್ನ ಸಂಘದಲ್ಲಿ ಮಹಿಳೆಯರಿಗೆ ಪ್ರವೇಶ ನೀಡಲಿಲ್ಲ. ಬುದ್ದ ತನ್ನ ಸಂಘದವರಿಗೆ ಮಹಿಳೆಯರ ವಿಷಯದಲ್ಲಿ ಸದಾ ಜಾಗ್ರತೆ ವಹಿಸಬೇಕು ಎಂದು ಹೇಳುತ್ತಿದ್ದ ಎಂಬುದು ಬುದ್ದನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಕಾರಣವಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ವೈದಿಕ ಧರ್ಮ ಪ್ರಣೀತ ಮನುಸ್ಮೃತಿ, ರಾಮಾಯಣ ಮತ್ತು ಮಹಾಭಾರತ ಕೃತಿಗಳು ಮಹಿಳೆಯರನ್ನು ಹೇಗೆ ಚಿತ್ರಿಸಿವೆ, ಅದರಲ್ಲಿ ಮಹಿಳೆಯರ ಸ್ಥಾನಮಾನಗಳೇನು
APA, Harvard, Vancouver, ISO, and other styles
More sources
We offer discounts on all premium plans for authors whose works are included in thematic literature selections. Contact us to get a unique promo code!