Academic literature on the topic 'ಪ್ರಗತಿ'

Create a spot-on reference in APA, MLA, Chicago, Harvard, and other styles

Select a source type:

Consult the lists of relevant articles, books, theses, conference reports, and other scholarly sources on the topic 'ಪ್ರಗತಿ.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Journal articles on the topic "ಪ್ರಗತಿ"

1

ರೇಣುತಾಕ್ಷಿ. "ಶಿಕ್ಷಣವೆಂದರೆ ಜೀವನಕ್ಕೆ ಸಿದ್ಧತೆಯಲ್ಲ, ಶಿಕ್ಷಣವೇ ಜೀವನ". AKSHARASURYA JOURNAL 06, № 05 (2025): 169 to 174. https://doi.org/10.5281/zenodo.15504563.

Full text
Abstract:
ಡಾ. ಬಿ.ಆರ್. ಅಂಬೇಡ್ಕರ್‌ ಅವರು ಹೇಳಿದಂತೆ, ಶಿಕ್ಷಣ ಜೀವನಕ್ಕೆ ಸಿದ್ಧತೆ ಮಾತ್ರವಲ್ಲ, ಅದು ಜೀವನವೇ ಆಗಿದೆ. ಶಿಕ್ಷಣವು ಕೇವಲ ಉದ್ಯೋಗ ಅಥವಾ ಜೀವನೋದ್ಯಮಕ್ಕೆ ಪೂರಕವಾಗಿರುವುದಷ್ಟೇ ಅಲ್ಲ, ಅದು ವ್ಯಕ್ತಿಯ ಬುದ್ಧಿ, ಚಿಂತನೆ, ವ್ಯಕ್ತಿತ್ವ ಮತ್ತು ಸಮಾಜದ ಪ್ರಗತಿಗೆ ಸಹಾಯಕವಾಗಬೇಕು. ಅಂಬೇಡ್ಕರ್‌ ಅವರ ದೃಷ್ಟಿಯಲ್ಲಿ ಶಿಕ್ಷಣವು ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯವನ್ನು ಸ್ಥಾಪಿಸುವ ಪ್ರಮುಖ ಸಾಧನವಾಗಿದೆ. ವಿದ್ಯಾಭ್ಯಾಸವು ವ್ಯಕ್ತಿಗೆ ಅರ್ಥಪೂರ್ಣ ಬದುಕನ್ನು ಕಟ್ಟಿಕೊಳ್ಳಲು, ಸ್ವತಂತ್ರವಾಗಿ ಚಿಂತಿಸಲು, ಹಾಗೂ ತಾನು ಎದುರಿಸುವ ಸವಾಲುಗಳಿಗೆ ಉತ್ತರಿಸಲು ಶಕ್ತಿಯನ್ನು ನೀಡುತ್ತದೆ. ಸಮೃದ್ಧ ಜೀವನಕ್ಕಾಗಿ ಕೇವಲ ಹಣಕಾಸಿನ ಪ್ರಗತಿಯನ್ನಷ್ಟೇ ಗಮನಿಸುವುದಕ್ಕಿಂತ, ಮಾನವೀಯತೆ, ನೈತಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಕಾಪಾ
APA, Harvard, Vancouver, ISO, and other styles
2

ಹೇಮಲತ, ಹೆಚ್. ಆರ್. "ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಮಹಿಳಾ ಸಾಮಾಜಿಕ ನ್ಯಾಯತತ್ವ: ಒಂದು ಅವಲೋಕನ". AKSHARASURYA JOURNAL 03, № 04. SPECIAL ISSUE. (2024): 157 to 169. https://doi.org/10.5281/zenodo.10929989.

Full text
Abstract:
ಹಿಂದೂ ಧರ್ಮದಲ್ಲಿ ಶೂದ್ರ ಮತ್ತು ದಲಿತರ ಶೋಷಣೆ ಆದಷ್ಟೇ ಮಹಿಳೆಯರ ಶೋಷಣೆಯೂ ಆಗಿದೆ. ಹಿಂದೂ ಸಮಾಜದಲ್ಲಿ ಮಹಿಳೆಯು ಅತಿ ಕೀಳು ಮಟ್ಟದ ಸ್ಥಾನವನ್ನುಹೊಂದಿದ್ದಾಳೆ. ಜೀವನದ ಯಾವುದೇ ಕ್ಷೇತ್ರದಲ್ಲೂ ಮಹಿಳೆ ಪ್ರಗತಿ ಹೊಂದಬಾರದೆಂಬ ನಿರ್ಬಂಧನೆಗಳನ್ನು ಹೇರಲಾಗಿತ್ತು. ಮಹಿಳೆಯು ಕೇವಲ ಪುರುಷನ ಆಸೆ ಆಕಾಂಕ್ಷೆಗಳನ್ನು ತೀರಿಸುವ ಒಂದು ಸುಂದರವಾದ ವಸ್ತು ಮತ್ತು ಮಕ್ಕಳನ್ನು ಹೆರುವ ಯಂತ್ರವೆಂದು ಪರಿಗಣಿಸಲಾಗಿತ್ತು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಕೇವಲ ಗುಲಾಮಳಂತೆ ಮನೆಗೆಲಸ ಮಾಡಿ ಕುಟುಂಬದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಅವಳ ಆದ್ಯ ಕರ್ತವ್ಯವೆಂದು ಭಾವಿಸಲಾಗಿತ್ತು. ಯಾವುದೇ ಕಾರಣಕ್ಕೂ ಮಹಿಳೆ ಹೊರಗಿನ ಸಮಾಜದಲ್ಲಿ ಇತರರಂತೆ ಧೈರ್ಯ ಮತ್ತು ಗೌರವದಿಂದ ಭಾಗವಹಿಸುವಂತಿರಲಿಲ್ಲ. ಹಾಗೇನಾದರೂ ಮಾಡಿದಿದ್ದರೆ ಅವಳು ಇಡೀ ಪುರುಷ ವರ್ಗ ಮತ್ತು
APA, Harvard, Vancouver, ISO, and other styles
3

ಸಂಪತ್, ಬೆಟ್ಟಗೆರೆ. "ತೇಜಸ್ವಿ: ಪ್ರೀತಿ, ಜಾತಿ ಇತ್ಯಾದಿ". AKSHARASURYA JOURNAL 05, № 04 (2024): 69 to 93. https://doi.org/10.5281/zenodo.14289855.

Full text
Abstract:
ತೇಜಸ್ವಿಯವರ ಸಾಹಿತ್ಯ ಕುರಿತು ಒಂದು ನಿಟ್ಟಿನಿಂದ ತಮಾಷೆಯಾಗಿ ಅದರಲ್ಲಿ ಬರುವ ಬೈಗುಳಗಳನ್ನು ಸೀಮಿತ ದೃಷ್ಟಿಕೋನದಿಂದ ನೋಡುವ ಒಂದು ನೋಟ. ಅದರಂತೆ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ತೇಜಸ್ವಿ ಎಂಬ ಜಾತ್ಯಾತೀತವಾದಿ ನಿಲುವಿನ ವ್ಯಕ್ತಿತ್ವವನ್ನೇ ಜಾತಿವಾದಿ ವ್ಯಕ್ತಿಯಾಗಿ ಒಂದೇ ದೃಷ್ಟಿಕೋನದಿಂದ ಏಕಮುಖಿ ಗ್ರಹಿಕೆಯಲ್ಲಿ ಕಂಡುಕೊಂಡಿರುವುದಕ್ಕೆ ಒಂದು ಪ್ರತಿಕ್ರಿಯಾತ್ಮಕ ವಿವೇಚನೆಯಾಗಿ ಈ ಲೇಖನ ನಿರೂಪಿತವಾಗಿದೆ.  ಉದಾಹರಣೆಗೆ ತೇಜಸ್ವಿಯವರ ಪರಿಸರದ ಕತೆ ಪುಸ್ತಕದಲ್ಲಿನ ಪಾತ್ರ ಕರಿಯಪ್ಪ ಮೇಲು ಜಾತಿಯ ಒಕ್ಕಲಿಗರ ಗೌಡ ಸಮುದಾಯದವನಾದುದರಿಂದ ಕೆಳವರ್ಗವೊಂದರ ಸಮುದಾಯದ ಪಾತ್ರವಾದ ಎಂಗ್ಟನನ್ನು ಬೈಗುಳದಲ್ಲಿ ಕೆಟ್ಟಪದಗಳನ್ನು ಬಳಸಿ ನಿಂದಿಸಿದ್ದಾನೆ; ಇದರಲ್ಲಿ ಹುಟ್ಟಿನ ಜಾತಿಯಿಂದ ಕರಿಯಪ್ಪನನ್ನೇ ಪ್ರತಿನಿಧಿಸುವ ತೇಜಸ್ವಿಯವರ ಒಕ್ಕಲಿಗ ಗೌಡ ಜ
APA, Harvard, Vancouver, ISO, and other styles
4

ಗಣೇಶ та ಹೆಚ್. ಎಸ್. ನಿಂಗರಾಜು. "ಆಧುನಿಕ ಕನ್ನಡ ಸಾಮಾಜಿಕ ನಾಟಕಗಳಲ್ಲಿ ಪ್ರತಿಯಜಮಾನಿಕೆಯ ಸ್ವರೂಪ". AKSHARASURYA JOURNAL 04, № 06 (2024): 63 to 73. https://doi.org/10.5281/zenodo.13724751.

Full text
Abstract:
ಭಾರತದಂತಹ ದೇಶವು ಸಂಕೀರ್ಣವಾದ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿದೆ.  ಅಂತಹ ಪ್ರಾಬಲ್ಯಗಳ ಆಧಾರವು ಸಂಕೀರ್ಣ ಸ್ವರೂಪವನ್ನು ಹೊಂದಿದೆ.  ಭಾರತದ ವರ್ಣ ಆಧಾರಿತ ಸಾಮಾಜಿಕ ವ್ಯವಸ್ಥೆಯಲ್ಲಿ, ವರ್ಣಾಸ್‌ನ ಮೇಲಿನ ಸ್ತರಗಳಲ್ಲಿ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಪ್ರಾಬಲ್ಯ ವ್ಯವಸ್ಥೆಗಳು ಛಿದ್ರಗೊಳ್ಳುತ್ತಿವೆ.  ಸಬಾಲ್ಟರ್ನ್ ಅಡಿಯಲ್ಲಿ ಬರುವ ನಾಲ್ಕನೇ ವರ್ಣಾ, ಶೂದ್ರವರ್ಣ,  ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಭಾಗವಹಿಸುವಿಕೆಯಿಂದ ವಂಚಿತವಾಗಿದೆ. ಸಾಂಪ್ರದಾಯಿಕವಾಗಿ ಮೇಲ್ವರ್ಗದ  ಪ್ರಾಬಲ್ಯಗಳು ಕಠಿಣ ಅಭ್ಯಾಸಗಳನ್ನು ನಿರ್ಮಿಸುವ ಮೂಲಕ ಅಧೀನ ವರ್ಗವನ್ನು ಬಳಸಿಕೊಳ್ಳುತ್ತವೆ. ಈ ಅಧೀನ ನೆಲೆಗಳು ಮೇಲ್ಮಟ್ಟದ ಪ್ರಾಬಲ್ಯಗಳ ವಿರುದ್ಧ ಹೆಚ್ಚು ಸಹನೆ ಮತ್ತು ಮೂಕತನದಿಂದ ಪ್ರತಿಭಟಿಸಲು ಸಾಧ್ಯವಾಗುತ್ತಿಲ್ಲ. ಅವರ ನ
APA, Harvard, Vancouver, ISO, and other styles
5

GEETHA, A. C. "`ಅಮ್ಮ'ನವರ ಆರಾಧನೆಯಲ್ಲಿನ ಸಾಂಸ್ಕೃತಿಕ ಅನನ್ಯತೆ". AKSHARASURYA JOURNAL 03, № 03 (2024): 63 to 70. https://doi.org/10.5281/zenodo.10775087.

Full text
Abstract:
ಜನಪದರಲ್ಲಿ ಆರಾಧನೆ ಎಂಬುದು ಬದುಕಿನ ಅವಿಭಾಜ್ಯ ಅಂಗವಾಗಿದೆ. ಆಚಾರ-ವಿಚಾರ, ನಂಬಿಕೆಗಳಿಂದ ಕೂಡಿರುವ ಆರಾಧನೆಯು ಇಷ್ಟಾರ್ಥ ಸಿದ್ಧಿಯ ನೆಲೆಯಲ್ಲಿ ಮಹತ್ವವನ್ನು ಪಡೆಯುತ್ತದೆ. ಭಯದಿಂದ ಮುಕ್ತವಾಗಲು ಕಷ್ಟ ಪರಿಹಾರವಾಗಲು ದೇವರುಗಳ ಮೊರೆ ಹೋಗುವುದು ಜನಪದರ ಬಹುಮುಖ್ಯ ಚಟುವಟಿಕೆ. ತಮಗೆ ಎದುರಾದ ಕಷ್ಟಗಳನ್ನು ರೋಗರುಜಿನಗಳನ್ನು ನಂಬಿಕೆ, ವಿಶ್ವಾಸಕ್ಕೆ ಪಾತ್ರರಾಗಿರುವ ಪ್ರೀತಿಯ ವ್ಯಕ್ತಿಗಳಲ್ಲಿ ಹೇಳಿಕೊಂಡು ಮನೋಭಾರವನ್ನು ಕಳೆದುಕೊಳ್ಳಲು ಸಾಧ್ಯವಾಗುವುದಿಲ್ಲ. ತಮ್ಮತಮ್ಮಲ್ಲೇ ಎಷ್ಟೇ ಕಷ್ಟಗಳನ್ನು ತೋಡಿಕೊಂಡರೂ ಸಮಾಧಾನ ಅನ್ನಿಸುವುದಿಲ್ಲ. ಅಂದರೆ ಮನುಷ್ಯರ ಶಕ್ತಿಗೆ ಒಂದು ಮಿತಿ ಎನ್ನುವುದು ಇದೆ. ಎಲ್ಲವೂ ಮನುಷ್ಯರ ಕೈಯಿಂದ ಅಸಾಧ್ಯ ಎಂಬ ವಿಚಾರವನ್ನು ಜನಪದರು ನಂಬಿದ್ದಾರೆ. ಮಾನವನ ಶಕ್ತಿಗಿಂತ ಮಿಗಿಲಾದ ಶಕ್ತಿ ಇದೆ ಎಂದು ನಂಬುವ ಜನಪದರು, ಆ ಶ
APA, Harvard, Vancouver, ISO, and other styles
6

ಶಂಕರ್, ಜ್ಯೋತಿ, та ಮಮತ ಬಿ ಆರ್. "ಶಿವಶರಣೆಯರ ವಚನಗಳಲ್ಲಿ ಪ್ರಾಣಿ ಪ್ರತಿಮೆ". Shanlax International Journal of Arts, Science and Humanities 12, S1-Oct (2024): 219–23. https://doi.org/10.34293/sijash.v12is1-oct.8308.

Full text
Abstract:
ಜಗತ್ತಿನ ಸಾಂಸ್ಕೃತಿಕ ಇತಿಹಾಸವನ್ನು ಗಮನಿಸಿದರೆ ನಮ್ಮ ಕನ್ನಡ ನಾಡಿನ ಶರಣಸಂಸ್ಕೃತಿಯು ಮಹತ್ತರವಾದುದು. ೧೨ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ಶರಣ ಸಂಸ್ಕೃತಿ ಹಾಗೂ ವಚನ ಸಾಹಿತ್ಯವು ಅಂದಿನ ಸಮಾಜದಲ್ಲಿ ನೆಲೆಯೂರಿದ್ದ ಅನೇಕ ಮೂಢನಂಬಿಕೆಗಳು, ಅಂಧಶ್ರದ್ಧೆಗಳು, ಅಂಧ ಆಚರಣೆಗಳು, ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಲು ಸಹಾಯಕವಾಗಿದ್ದವು. ಬಸವಣ್ಣನವರಿಂದ ಸ್ಥಾಪಿತವಾದ ಅನುಭವ ಮಂಟಪದಲ್ಲಿ ಎಲ್ಲಾ ಶರಣರು ತನ್ನ ಅನುಭವ, ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದರು. ಇದಕ್ಕಾಗಿ ಅವರು ಬಳಸಿಕೊಂಡ ಮಾಧ್ಯಮವೇ ವಚನಗಳು. ಶಿವಶರಣರು ಸಮಾಜದಲ್ಲಿ ಕಂಡ ಅನೇಕ ವಿಷಯಗಳನ್ನು ತಮ್ಮ ಮನದ ಅಂತರಾಳದಲ್ಲಿ ತುಡಿಯುತ್ತಿರುವ ಭಾವನೆಗಳನ್ನು ಸಮರ್ಪಕವಾಗಿ ವ್ಯಕ್ತಪಡಿಸಲು ಅನೇಕ ಪ್ರತಿಮೆಗಳನ್ನು ಬಳಸಿಕೊಂಡರು. ಅವುಗಳಲ್ಲಿ ಪ್ರಾಣಿ ಪ್ರತಿಮೆ ಕೂಡ ಒಂದಾಗಿದೆ.
APA, Harvard, Vancouver, ISO, and other styles
7

ಪ್ರವೀಣ, ಗುರುಶಾಂತ. "ಗೀತಾ ನಾಗಭೂಷಣ ಅವರ ಸಣ್ಣ ಕಥೆಗಳಲ್ಲಿ ತಾಯ್ತನ". AKSHARASURYA JOURNAL 05, № 03 Special Issue (2024): 33 to 39. https://doi.org/10.5281/zenodo.14246413.

Full text
Abstract:
ಗೀತಾ ನಾಗಭೂಷಣ ಅವರು ಮುಖ್ಯವಾಗಿ ಸ್ತ್ರೀ ನೆಲೆಯಲ್ಲಿ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ಅಸಾಹಯಕತೆ, ಶೋಷಣೆ, ತುಡಿತ, ಅವಮಾನ, ಸಮಸ್ಯೆಗಳನ್ನು ಎದುರಿಸುವ ಧೈರ್ಯ, ಸಾಧಿಸುವ ಛಲ, ಸಂಕಟ, ತಾಯ್ತನದ ಪ್ರೀತಿ ಹೀಗೆ ಅನೇಕ ಬಗೆಯ ಕಥೆಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಅವರ ಮಹಿಳಾ ಪರ ಚಿಂತನೆಗಳು ಅವರ ಕಥೆಗಲ್ಲಿ ವ್ಯಕ್ತವಾಗುತ್ತದೆ.
APA, Harvard, Vancouver, ISO, and other styles
8

ರಾಜಕುಮಾರ, ಎಂ. ಸಿಂಧೆ. "ಡಾ. ಬಿ. ಆರ್. ಅಂಬೇಡ್ಕರ್‌ ಅವರ ಬದುಕಿನಿಂದ ಕಲಿಯಬೇಕಾದ ಸಂದೇಶ". AKSHARASURYA JOURNAL 06, № 01 (2025): 12 to 21. https://doi.org/10.5281/zenodo.14961338.

Full text
Abstract:
ಕಲಿಕೆ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿದೆ. ಅದು ನಿತ್ಯ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಹುಟ್ಟಿನಿಂದ ಸಾವಿನವರೆಗೂ ಜೀವನುದ್ದಕ್ಕೂ ವಿವಿಧ ಜ್ಞಾನಶಾಖೆಗಳ ಮೂಲಕ ಜೀವನಾನುಭವ ಪಡೆಯುತ್ತ, ಹಳೆ ಬೇರು ಹೊಸ ಚಿಗುರು ಎಂಬಂತೆ ಗುರುಹಿರಿಯರ ನಡೆ-ನುಡಿ, ಆಚಾರ ವಿಚಾರಗಳನ್ನು ಅನುಲಕ್ಷಿಸುತ್ತ, ಭವಿಷ್ಯದ ಬದುಕಿನ ಅಗತ್ಯತೆಗಳನ್ನು ಕಲ್ಪಿಸಿಕೊಳ್ಳುತ್ತ ಹಳೆಯ ಮತ್ತು ಹೊಸದರ ಸಮ್ಮಿಶ್ರಣದೊಂದಿಗೆ ಸುಂದರ ಬದುಕು ಕಟ್ಟಿಕೊಳ್ಳಲು ‘ಕಲಿಕೆ’ ಎಂಬ ಪ್ರಕ್ರಿಯೆ ನಡೆಯುತ್ತಲೇ ಸಾಗುತ್ತದೆ.‘ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ’ ಯಿಂದ ಆರಂಭವಾಗಿ ಕಲಿಕೆ ಮುಂದುವರೆಯುತ್ತದೆ. ‘ದೇಶ ಸುತ್ತು ಇಲ್ಲವೇ ಕೋಶ ಓದು’ ಎಂಬಂತೆ ಸಾಹಿತ್ಯ, ಕಾವ್ಯ, ಪುರಾಣ, ಶಾಸ್ತ್ರ, ಕಲೆ ಹೀಗೆ ನೂರಾರು ಪ್ರಕಾರದ ಗ್ರಂಥಗಳ ಅಧ್ಯ
APA, Harvard, Vancouver, ISO, and other styles
9

ಡಿ., ಪುರುಷೋತ್ತಮ. "ಪೂರ್ಣಚಂದ್ರ ತೇಜಸ್ವಿ ಸಾಹಿತ್ಯದಲ್ಲಿ ಕಾಲ ಮತ್ತು ಪ್ರಕೃತಿ ಪರಿಕಲ್ಪನೆ". ಚಿಂತನ ಬಯಲು 04, № 03 (2016): 29 to 40. https://doi.org/10.5281/zenodo.13357013.

Full text
APA, Harvard, Vancouver, ISO, and other styles
10

ಅಮರನಾಥ್‌, ಎನ್‌. "ಕರಾವಳಿ ಜಾನಪದಕ್ಕೆ ಪುರುಷೊತ್ತಮ ಬಿಳಿಮಲೆಯವರ ಕೊಡುಗೆ". Aksharasurya Journal 05, № 05 (2025): 114 to 120. https://doi.org/10.5281/zenodo.14619640.

Full text
Abstract:
ಪುರುಷೋತ್ತಮ ಬಿಳಿಮಲೆ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಚಿಂತನಶೀಲ ಬರಹಗಾರರಲ್ಲೊಬ್ಬರು. ತಮ್ಮ ಜನಪದ ಸಂಶೋಧನೆ, ವಿಮರ್ಶೆ ಹಾಗೂ ಅಂಕಣ ಬರಹಗಳಲ್ಲಿ ಸಮಾಜದ ಸಂಸ್ಕೃತಿಯನ್ನು ಮತ್ತು ವರ್ತಮಾನದ ನೈಜತೆಯನ್ನು ಹಿಡಿದಿಟ್ಟಿದ್ದಾರೆ. ಇದು ಅವರ ಬರಹದಲ್ಲಿ ಪ್ರತಿ ಹಂತದಲ್ಲೂ ಸ್ಪಷ್ಟವಾಗಿ ತೋರುತ್ತದೆ.   ಬಿಳಿಮಲೆ ಅವರ ಸಂಶೋಧನಾ ಬರಹದಲ್ಲಿ ಕರಾವಳಿ ಮತ್ತು ಸುಳ್ಯ ಪರಿಸರ ಸಮಾಜದ ಬದುಕಿನ ಜನಪದ ಚಿತ್ರಣವನ್ನು ಜನಪದ ಹಿನ್ನೆಲೆಯಲ್ಲಿ ಗುರುತಿಸುವ ಮೂಲಕ ಹೊಸ ಚರ್ಚೆಗೆ ಅನುವು ಮಾಡಿಕೊಡುತ್ತಾರೆ. ಈ ಅಂಶವನ್ನು ಗಮನಿಸುವುದರ ಮೂಲಕ ಲೇಖಕರು ಮಾಡಿದ ಕರಾವಳಿ ಸಂಶೋಧನೆಯನ್ನು ಇಲ್ಲಿ ಚರ್ಚಿಸಿಲಾಗಿದೆ.
APA, Harvard, Vancouver, ISO, and other styles
More sources
We offer discounts on all premium plans for authors whose works are included in thematic literature selections. Contact us to get a unique promo code!