Academic literature on the topic 'ವಚನ ಚಳವಳಿ'

Create a spot-on reference in APA, MLA, Chicago, Harvard, and other styles

Select a source type:

Consult the lists of relevant articles, books, theses, conference reports, and other scholarly sources on the topic 'ವಚನ ಚಳವಳಿ.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Journal articles on the topic "ವಚನ ಚಳವಳಿ"

1

ಲಕ್ಷ್ಮೀ, ಎಲ್. ಪೂಜಾರಿ. "ವಚನ ಚಳವಳಿ ಮತ್ತು ಮಹಿಳೆ". AKSHARASURYA JOURNAL 06, № 05 (2025): 54 to 59. https://doi.org/10.5281/zenodo.15504231.

Full text
Abstract:
ವಚನ ಸಾಹಿತ್ಯ ಹನ್ನೆರಡನೇ ಶತಮಾನದಲ್ಲಿ ಹುಟ್ಟಿಕೊಂಡಂತಹ ವಿಶಿಷ್ಟ ಸಾಹಿತ್ಯದ ಪ್ರಕಾರ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವುದನ್ನು ಕಾಣುತ್ತೇವೆ. ಈ ಯುಗವನ್ನು ಸಾಮಾಜಿಕ ಪರಿವರ್ತನೆ ಯುಗ ಎಂದು ಕರೆಯುವಷ್ಟರಮಟ್ಟಿಗೆ ಬದಲಾವಣೆ ಆಗಿರುವುದನ್ನು ಕಾಣುತ್ತೇವೆ. ವಚನ ಎಂದರೆ ಮಾತು, ಉಕ್ತಿ ಎಂಬ ಅರ್ಥವನ್ನು ಹೊಂದಿದ್ದು ಗದ್ಯ ಪದ್ಯಗಳ ರೂಪದಲ್ಲಿ ಕಂಡುಬಂದಿದೆ ಮಹಿಳೆಯರ ಸಮಾನತೆಗೆ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ.ಶತಮಾನಗಳಿಂದ ಅಸ್ಪೃಳಾಗಿದ್ಧ ಅದೃಶ್ಯಳಾಗಿದ್ಧ ಹೆಣ್ಣನ್ನು ವಚನಕಾರರು ಮಾನವೀಯ ದೃಷ್ಟಿಯಿಂದ ಕಂಡಿದ್ದಾರೆ. ಪುರುಷನ ಹಾಗೆ ಮಹಿಳೆಗೆ ಸಮಾನವಾದ ಸ್ಥಾನವನ್ನು ನೀಡುವ ಮೂಲಕ 12ನೇ ಶತಮಾನದಲ್ಲಿ ವಚನಕಾರರು ಮಾಡಿದ ಒಂದು ಬೃಹತ್ ಬದಲಾವಣೆ ಇಡೀ ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿದೆ. ಸ್ತ್ರೀಯರ ಸಮಾನತೆಗಾಗಿ ಮಾಡಿದ ಮೊದಲ ಚಳುವಳಿ ವಚನ ಚಳುವಳಿ ಎಂದು ಹಲವಾರು ಆಧಾರಗಳಿಂದ ತಿಳಿದು ಬಂದಿದೆ. ಸಮಾಜದಲ್ಲಿ ವರ್ಣ-ವರ್ಗಗಳ ಅಸಮಾನತೆಯಿಂದ ಜನರು ಶೋಷಣೆಗೊಳಗಾಗಿದ್ದರೆ; ಲಿಂಗ ತಾರತಮ್ಯದಿಂದ ಮಹಿಳೆ ಶೊಷಣೆಗೊಳಗಾಗಿದ್ದಾಳೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಇಂತಹ ತಾರತಮ್ಯವನ್ನು ಸಹಿಸದೇ ವಿರೋಧಿಸಿದರು. ಹೆಣ್ಣನ್ನು ಭೋಗದ ವಸ್ತು ರಕ್ಕಸಿ, ಅಪಶಕುನ, ಮತ್ತು ಮಕ್ಕಳನ್ನು ಹೆರುವ ಯಂತ್ರ ಅವಳು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದು ಯಾವುದೇ ರೀತಿಯ ಸ್ವಾತಂತ್ರಯಿಲ್ಲದಂತಹ ಕಾಲದಲ್ಲಿ ಮೊಟ್ಟ ಮೊದಲು ಹೋರಾಟ ನಡೆಸಿದವರು ವಚನಕಾರರು. ಈ ಚಳುವಳಿಯೇ ವಚನ ವಚನಚಳುವಳಿಯಾಗಿದೆ. 
APA, Harvard, Vancouver, ISO, and other styles
2

ಶ್ರೀನಿವಾಸ, ಎಸ್.ಜಿ. "ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆಗಳು". AKSHARASURYA JOURNAL 06, № 04 (2025): 01 to 10. https://doi.org/10.5281/zenodo.15490768.

Full text
Abstract:
ʼಕಾಯಕವೇ ಕೈಲಾಸʼ ವೆಂದು ಸಾರಿ, ಜನರಲ್ಲಿ ದುಡಿದು ತಿಂದು ಬದುಕುವ ಮಹತ್ವವನ್ನು ತಿಳಿಸಿದ್ದು ವಚನ ಸಾಹಿತ್ಯ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳಲ್ಲಿ ಸ್ತ್ರೀಯರಿಗೆ ಭಾಗವಹಿಸುವ ಸಮಾನ ಅವಕಾಶ ನೀಡುವ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕೊಂದು ಅರ್ಥವನ್ನು ಕಲ್ಪಿಸಿದರು. ಕಲುಷಿತಗೊಂಡಿದ್ದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ದಿಕ್ಕರಿಸಿ, ಘನ ಬದಲಾವಣೆಯನ್ನು ಗುರಿಯಿಟ್ಟು ನಡೆದ ದಾರ್ಶನಿಕ ಚಳುವಳಿ ವಚನ ಸಾಹಿತ್ಯ. ಸಾಮಾಜಿಕ ಬದಲಾವಣೆಗೆ ಹೊಸ ಭಾಷ್ಯ ಬರೆಯುವ ಮೂಲಕ ಉತ್ತಮ ಸಮಾಜ ವ್ಯವಸ್ಥೆಗೆ ನಿಜವಾದ ಅರ್ಥ ಕಲ್ಪಿಸಿ ಕೊಟ್ಟವರು. ಸಮಾಜದ ಕೀಳುಮಟ್ಟದ ಶೋಷಣೆಯಿಂದಾಗಿಯೇ ಸಮಾಜದಲ್ಲಿ ದುಡಿಯುವ ಮತ್ತು ಕೂತು ಉಣ್ಣುವ ವರ್ಗಗಳು ನಿರ್ಮಾಣವಾಗುವುದಕ್ಕೆ ಕಾರಣವಾಗಿರಬೇಕು, ಸಮಾಜದಲ್ಲಿ ಮೇಲ್ವರ್ಗವೆಂದು ಕರೆಸಿಕೊಂಡ ಜನರು ಸಮಾಜದ ಇತರರನ್ನು ಕೀಳಾಗಿ ಕಾಣುತ್ತಿದ್ದ ಸಂದರ್ಭಗಳು ಶರಣರು ತಮ್ಮ ಚಿಕಿತ್ಸಕ ದೃಷ್ಟಿಯಿಂದ ನೋಡಿದಾಗ ಸಾಮಾಜಿಕ ಅಸಮಾನತೆಯೆಂಬ ಸಾಮಾಜಿಕ ರೋಗಗಳಿಗೆ ಮದ್ದು ಅರೆದದುರ ಪರಿಣಾಮದಿಂದಲೇ ಅವರ ಮನಸ್ಸಿನ ವಿಚಾರಗಳೆಲ್ಲ ವಚನಗಳಾಗಿ ಮಾರ್ಪಟ್ಟವಾಗಿರಬೇಕು. ಅಂದಿನಿಂದಲೇ ಬಸವಣ್ಣನವರ ನೇತೃತ್ವದಲ್ಲಿ ಶರಣರು ಸಾಮಾಜಿಕ ಬದಲಾವಣೆಗೆ ಕ್ರಾಂತಿಕಾರಿ ಹೆಜ್ಜೆ ಇಟ್ಟರೆಂದು ಕಾಣಿಸುತ್ತದೆ. ಅವರ ವಚನಗಳ ಮೂಲಕ ಸಾಮಾಜಿಕ ವ್ಯವಸ್ಥೆಯ ಅಂಕುಡೊಂಕುಗಳನ್ನು ತಿದ್ದಿ, ಸಮ ಸಮಾಜ ವ್ಯವಸ್ಥೆಯನ್ನು ಸರಿಪಡಿಸುವ ಕಾಯಕಕ್ಕೆ ಮುಂದಾದರು. ಒಂದಷ್ಟು ಸಮಾಜ ವ್ಯವಸ್ಥೆಯನ್ನು ಬದಲಿಸಲು ಪಟ್ಟ ಪ್ರಯತ್ನ ಇಂದಿಗೂ ಮುಂದಿಗೂ ಮಾದರಿಯಾಗುವಂತಿದೆ. ಸಮಾಜದ ಬಗೆಗೆ ಅವರಿಗಿದ್ದ ಕಾಳಜಿಯಿಂದಾಗಿಯೇ ಸಮಾಜ ಬದಲಾಣೆ ಕಾಣಲು ಸಾಧ್ಯವಾಯಿತು.  ಕಾಯಕ ಜೀವಿಗಳ ಹೋರಾಟವಾಗಿ ರೂಪುಗೊಂಡ ವಚನ ಚಳವಳಿಯಲ್ಲಿ ಮಹಿಳಾ ಸಮಾನತೆಯ ಆಶಯಗಳು ಸಹಜವಾಗಿಯೇ ಅಡಕವಾಗಿದ್ದವು. ಸಾಮಾಜಿಕ ಸಮಾನತೆ ಆಶಯವೇ ಪ್ರಮುಖವಾದ ವಚನ ಚಳವಳಿ ಮಹಿಳಾ ಸಮಾನತೆಯನ್ನು ಪ್ರತ್ಯೇಕಿಸಿ ನೋಡಲಿಲ್ಲ. ಕ್ರಾಂತಿಯೊಳಗಿನ ಕ್ರಾಂತಿ ಎಂಬಂತೆ ನಡೆಯಿತು. ಪರ್ಯಾಯ ಚಿಂತನೆ, ಪರ್ಯಾಯ ಸಂಸ್ಕೃತಿ ಅಶಯವೂ ಸೇರ್ಪಡೆಗೊಂಡಿತ್ತು, ಶ್ರಮಸಂಸ್ಕೃತಿ ರೂಪುಗೊಳ್ಳುವುದು ಹೆಣ್ಣಿನ ಶ್ರಮದಿಂದ ಎಂದು 12ನೇ ಶತಮಾತನದ ವಚನಕಾರ್ತಿಯರು ಪ್ರತಿಪಾದಿಸಿದ್ದರು. ಹೀಗಾಗಿ ವಚನ ಚಳವಳಿಯಲ್ಲಿ ಮಹಿಳಾ ಸಮಾನತೆ ಅಂತರ್ಗತವಾಗಿತ್ತು. ಹೀಗಾಗಿಯೇ ವಚನಗಳಲ್ಲಿ ಮಹಿಳಾ ಸಮಾನತೆಯ ಆಶಯ ಚಳವಳಿಯ ಜತೆಜತೆಗೇ ಸಾಗಿತು. ಅಗ್ರಹಾರ ಶ್ರೇಷ್ಠ ಎನ್ನುವ ಸಂದರ್ಭದಲ್ಲೇ ಕಾಯಕ ಶ್ರೇಷ್ಠ ಎನ್ನುವ ಸಾಮಾಜಿಕ ಸಮಾನತೆಯ ಆಶಯವನ್ನು ವಚನ ಚಳವಳಿ ಪ್ರಕಟಿಸಿತು ಅರಮನೆ, ದೇವಾಲಯ ಸಂಸ್ಕೃತಿಗಳನ್ನು ವಚನ ಚಳವಳಿ ವಿರೋಧಿಸಿತು. ದೇವರು, ಅರಮನೆ, ಧರ್ಮದ ಸಂಕೋಲೆಯಿಂದ ಬಿಡಿಸಿ ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನ ಮಾಡಿದರು.  ಭಾರತೀಯ ಸಾಹಿತ್ಯದಲ್ಲಷ್ಟೇ ಅಲ್ಲದೆ ಜಾಗತಿಕ ಸಾಹಿತ್ಯದಲ್ಲಿ ವಚನಕಾರರ ಧ್ವನಿ ವಿಶಿಷ್ಟ ವಿಸ್ತರವಾದುದು ತಾವು ತುಳಿದು ಬಂದ ತಾತ್ವಿಕ ಪರಂಪರೆಯನ್ನೇ ವಿಮರ್ಶಿಸಿ ವಿರೋಧಿಸಿ ಹೊಸ ತಾತ್ವಿಕ ಪರಂಪರೆಯನ್ನು ನಿರ್ಮಿಸಲು/ಕಟ್ಟಲು ಯತ್ನಿಸಿದರು ʼನಾ ಭೂತೋ ನಾ ಭವಿಷ್ಯತಿʼ ಎನ್ನುವಂತಹ ಕ್ರಾಂತಿಕಾರಿ ಚಿಂತನಧಾರೆ ಒಂದನ್ನು ನಿರ್ಮಿಸಿಕೊಟ್ಟರು ʼಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯʼ ಎಂಬುದನ್ನು ಮಹಾಮಂಟಪ ಅನುಭವಮಂಟಪ ವಾಗಿಸಿಕೊಂಡವರು ಹಿಂದಿನ ಪರಂಪರೆಗಳು ʼಎಲ್ಲೂ ಸಲ್ಲದʼವರನ್ನಾಗಿಸಿದವರನ್ನು, ಇಲ್ಲಿಯೂ ಎಲ್ಲೆಲ್ಲಿಯೂ ಸಲ್ಲುವಂತೆ ಮಾಡಿದರು. ಅವರು ವಿಶ್ವ ಶಿವಶರಣ ದೊಳಗೆ ʼವಿಶ್ವಮಾನವʼರನ್ನಾಗಿ ರೂಪಿಸಿದರು ಸಮಸ್ತ ಜೀವ ರಾಶಿಯಲ್ಲೂ ದೈವಿಪ್ರಭೆ ಹುಡುಕಲು ಯತ್ನಿಸಿದ ಉಪನಿಷತ್ತುಗಳಲ್ಲಿನ ಬೋಧನೆಗಳು ಕಟ್ಟಕಡೆಯ ಮಾನವರನ್ನು ತಲುಪದೆ ಅವರು ತಿರಸ್ಕೃತರಾದದುಕ್ಕೆ ಕಾರಣವಾದ ತಂತು ಯಾವುದು? ಸಂಕುಚಿತ ಆಚಾರಗಳು ಕ್ಷುದ್ರ ಚಿಂತನೆಗಳು, ಧರ್ಮದ ಹೆಸರಲ್ಲಿ ಹೇಗೆ ನುಸುಳಿದವು? ಅರಮನೆಗಳು ಗುರುಮನೆಗಳಾಗದೆ ಉಳಿಯಲು ಕಾರಣವೇನು? ಧರ್ಮ ದಯೆ ಇಲ್ಲದಂತೆ ಆಗಲು ಕಾರಣವಾದ ಅಧರ್ಮದ ತಿರುಳಾವುದು? ಮುಂತಾದ ಮುಖ್ಯ ಪ್ರಶ್ನೆಗಳನ್ನು ಚಿಕಿತ್ಸಕ ದೃಷ್ಟಿಯಿಂದ ಎತ್ತಿದ್ದಷ್ಟೇ ಅಲ್ಲದೆ ಸಾಮಾಜಿಕ ಚಿಕಿತ್ಸೆಗಳನ್ನೂ ಮಾಡಲತ್ನಿಸಿದವರು ವಚನಕಾರರು ಇವರ ಸಾಮಾಜಿಕ ಚಿಂತನ ಕ್ರಮಗಳು ಅಗ್ರಗಣ್ಯವೆನಿಸಿವೆ.  ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆಗಳು ಎಂಬ ಈ ಲೇಖನವನ್ನು ಈ ಕೆಳಗಿನ ಪ್ರಮುಖ ಮುಖ್ಯಾಂಶಗಳಲ್ಲಿ ವಿಸ್ತರಿಸಲಾಗಿದೆ.   
APA, Harvard, Vancouver, ISO, and other styles
3

ಶೀಲಾದೇವಿ, ಎಸ್. ಬಿರಾದಾರ. "ವೀರಾಂಗಿಣಿ ಅಕ್ಕಮಹಾದೇವಿ". AKSHARASURYA JOURNAL 04, № 06 (2024): 152 to 156. https://doi.org/10.5281/zenodo.13725661.

Full text
Abstract:
ಹಳೆಗನ್ನಡ ಸಾಹಿತ್ಯವು ರಾಜ್ಯಾಶ್ರಯದಲ್ಲಿಯೇ ಪಂಡಿತ ಪಾಮರರಿಗೆ ಮಾತ್ರ ಸಿಮಿತವಾಗಿತ್ತು. ಹನ್ನೆರಡನೆ ಶತಮಾನದಲ್ಲಿ ವಚನ ಸಾಹಿತ್ಯಯೂ ತೀರಾ ಸರಳ ಸಹಜವಾಗಿ ತಾವು ಬೋದಿಸುವುದು ಸಾಮಾನ್ಯನಿಗೂ ತಲುಪಬೇಕು ಎಂಬ ಆಶಯ ಹೊಂದಿದವರು. ಶಿವಶರಣರು ಶಿವಶರಣೆಯರ ಆಲೋಚನೆಗಳನ್ನು ಅನುಭವಗಳನ್ನು ವಿಚಾರಧಾರೆಗಳೆ ವಚನ. ಜನಸಾಮಾನ್ಯರ ಭಾಷೆಯಲ್ಲಿಯೆ ತಮ್ಮ ಭಾವನೆಗಳನ್ನು ಅನಿಸಿಕೆಗಳನ್ನು ತತ್ವಗಳನ್ನು ಹಾಗೂ ಅವರ ಆತ್ಮಾನುಭವಗಳೇ ವಚನರೂಪದಲ್ಲಿ ವ್ಯಕ್ತಪಡಿಸಿದ್ದು ವಚನ ಸಾಹಿತ್ಯ. ವಚನ ಸಾಹಿತ್ಯ ವಿಶ್ವಕ್ಕೆ ಕೊಡುಗೆಯಾಗಿ ನೀಡಿರುವುದು ಕನ್ನಡ ಸಾಹಿತ್ಯದ ಹೆಮ್ಮೆಯಾಗಿದೆ. ವಚನ ಸಾಹಿತ್ಯದಲ್ಲಿ ಕಾಣಿಸುವ ವಿಶಿಷ್ಟ ಪ್ರತಿಭೆಯ ಮಹಿಳೆ ಅಕ್ಕಮಹಾದೇವಿ. ಕನ್ನಡ ಸಾಹಿತ್ಯದ ಮೊದಲ ಕವಿಯತ್ರಿ ಮತ್ತು ವಚನಗಾರ್ತಿ, 12 ನೆಯ ಶತಮಾನದ ಪ್ರಪ್ರಥಮವಾಗಿ ಪುರುಷರಿಗೆ ಸಮಾನವಾಗಿ ನಿಂತು ಜ್ಞಾನ, ವೈರಾಗ್ಯ ಭಕ್ತಿ, ನೇರ ದಿಟ್ಟತನದಿಂದ ಅಂದಿನ ಕಾಲದಲ್ಲಿ ಹೆಣ್ಣು ಮನೆಯಿಂದ ಹೊರಬರಲು ಹೆದುರುತ್ತಿದ್ದ ಸಮಯದಲ್ಲಿ ಆಧ್ಯಾತ್ಮ ಲೋಕದ ಕಡೆ ಸಾಗಿದವಳು. ಚನ್ನಮಲ್ಲಿಕಾರ್ಜುನನ್ನು ದರ್ಶನಕಾಗಿ ಎಲ್ಲವು ತೋರೆದು ಕಲ್ಯಾಣ ಪ್ರವೇಶ ಮಾಡಿ ಹಲವು ಪರೀಕ್ಷೆಗಳನ್ನು ಒಡ್ಡಿದರು ಭಯಪಡದೆ ಅಲ್ಲಮಪ್ರಭುವರಿಗೆ ಉತ್ತರಿಸಿದ್ದು ಅಕ್ಕಮಹಾದೇವಿ. ಪುರುಷರಿಗೆ ಸಮಾನವಾಗಿ ಸಾಹಿತ್ಯ ರಚನೆ ಮಾಡಿದ ಕೀರ್ತಿ ಅಕ್ಕಮಹಾದೇವಿಗೆ ಸಲ್ಲುತ್ತದೆ. ಅಕ್ಕನ ಚಿಂತನೆಗಳು ಅವಳಾಡುವ ಮಾತುಗಳು ಇಂದು ನಮ್ಮ ಆಧುನಿಕ ಸಮಾಜಕ್ಕೆ ಅವಶ್ಯಕವಾಗಿದೆ. 12ನೆಯ ಶತಮಾನ ಇಡಿ ವಿಶ್ವಕ್ಕೆ ಮಾದರಿಯಾಗಿರುವುದು ಸಮಾನತೆ ನೆಲೆಯು ಅದಕ್ಕೆ ಸಾಕ್ಷಿಯಾಗಿದೆ. ಕೆಟ್ಟ ಗುಣಗಳು ತುಂಬಿದ ಮನುಷ್ಯ ಕೇವಲ ಮನುಷ್ಯನಾದರೆ ಸಾಲದು ಅವನಲ್ಲಿ ಶಿವಭಕ್ತಿ, ಕರುಣೆ, ದಯ, ಮಾನವೀಯ ಮೌಲ್ಯಗಳು ಹೊಂದಿದವರು ನಿಜವಾದ ಮನುಷ್ಯನಾಗಲು ಸಾಧ್ಯ ಎಂದು ಅಕ್ಕಮಹಾದೇವಿಯ ನಿಲುವಾಗಿತ್ತು. ಅಂದಿನಿಂದ ಮಹಿಳೆಯರಿಗೆ ಸಮಾನವಾಗಿ ಕಂಡವರು ಬಸವಾದಿ ಶರಣರು. ಹೆಣ್ಣು ಕೀಳಲ್ಲ ಅವಳು ಸಾಧನೆ ಮಾಡಬಲ್ಲಳು ಎಂದು ಸಾಧಿಸಿದ್ದು ತೋರಸಿದ್ದು ಅಕ್ಕಳು.
APA, Harvard, Vancouver, ISO, and other styles
4

ಸಂತೋಷ್‌, ಕುಮಾರ್‌ ಆರ್‌.ಎಂ. "ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು". AKSHARASURYA JOURNAL 06, № 04 (2025): 78 to 89. https://doi.org/10.5281/zenodo.15490942.

Full text
Abstract:
ವಚನ ಸಾಹಿತ್ಯವು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅಮೂಲ್ಯ ಸಂಪತ್ತಾಗಿದೆ. ಇದು 12ನೇ ಶತಮಾನದಲ್ಲಿ ಜನಿಸಿದ ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದ್ದು, ಬಸವಾದಿ ಶರಣರು ಇದನ್ನು ಜನಸಾಮಾನ್ಯರಿಗೆ ತಲುಪುವಂತೆ ಮಾಡಿದರು. ವಚನ ಸಾಹಿತ್ಯವು ಧಾರ್ಮಿಕ, ಸಾಮಾಜಿಕ ಮತ್ತು ದಾರ್ಶನಿಕ ಚಿಂತನೆಗಳನ್ನು ಒಳಗೊಂಡಿದೆ ಮತ್ತು ಭಕ್ತಿ ಚಳವಳಿಯ ಪ್ರಮುಖ ಭಾಗವಾಗವೂ ಆಗಿದೆ. ವಚನ ಸಾಹಿತ್ಯವು ʼಸಮಾನತೆʼ, ʼಶ್ರಮʼ-ʼಕಾಯಕʼ ಮತ್ತು ʼಭಕ್ತಿʼಯ ಮಹತ್ವ, ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಶರಣರು ಜಾತಿ, ಲಿಂಗ, ಆರ್ಥಿಕ ಸ್ಥಿತಿ ಮುಂತಾದ ಬೇಧಭಾವಗಳನ್ನು ತಿರಸ್ಕರಿಸಿದರು. ಅಲ್ಲದೆ ಇವರು ಜಾತಿ-ವರ್ಣಭೇದಗಳ ವಿರೋಧವಾಗಿಯೂ ಮತ್ತು ಸಮಾನತೆಗೆ ಹೆಚ್ಚಿನ ಮನ್ನಣೆಯನ್ನು ನೀಡಿದರು.ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮೊದಲಾದ ಶರಣರು “ಕಾಯಕವೇ ಕೈಲಾಸ”, “ದಾಸೋಹದ ತತ್ತ್ವ”, “ಅನುಭವ ಮಂಟಪ”ದ ಪರಿಕಲ್ಪನೆಯ ಮೂಲಕ ಪ್ರಜಾಪ್ರಭುತ್ವದ ನ್ಯಾಯಯುತ ಸಮಾಜದ ನಿರ್ಮಾಣಕ್ಕೆ ಹೇಗೆ ಶ್ರಮಿಸಿದರು ಎಂಬುದನ್ನು ಭಿನ್ನ ವಚನಕಾರರ ಹಿನ್ನೆಲೆಯಲ್ಲಿ ವಿವರಿಸಿ, ವಿಶ್ಲೇಷಿಸುವುದಾಗಿದೆ. ವಚನಗಳಲ್ಲಿ ಪುರುಷ ಮತ್ತು ಮಹಿಳೆಯ ನಡುವಿನ ಭೇದವನ್ನು ಪ್ರಶ್ನಿಸಿ, ಶಿವಶರಣ ಭಕ್ತರ ಸಮುದಾಯದಲ್ಲಿ ಪ್ರತಿಯೊಬ್ಬರಲ್ಲೂ ಸಮಾನತೆಯನ್ನು ಕಾಣುತ್ತಾ ಪ್ರಾಮಾಣಿಕ ಶ್ರಮ ಮತ್ತು ಸಮಾಜ ಸೇವೆಯ ಪ್ರಾಮುಖ್ಯತೆಯನ್ನು ವಿಶ್ಲೇಷಿಸಲಾಗಿದೆ. ಈ ಸಾಹಿತ್ಯ ಪ್ರಕಾರವು ಅಂತರಂಗ ಮತ್ತು ಬಹಿರಂಗದ ಪ್ರಾಮುಖ್ಯತೆ, ಅವು ದೈನಂದಿನ ಜೀವನದಲ್ಲಿ ಹೇಗೆ ದೀರ್ಘಕಾಲಿಕವಾಗಿ ವ್ಯಕ್ತಿಯ ಆಂತರಿಕ ಹಾಗೂ ಬಾಹ್ಯ ಬೆಳವಣಿಗೆಯ ಮೇಲೆ ಪ್ರಭಾವ ಬೀರುವುದು ಎಂಬುದನ್ನು ಚರ್ಚಿಸಲಾಗುವುದು. ವಚನಗಳು ಸತ್ಯ ಮತ್ತು ಚಿತ್ತ ಶುದ್ಧ ಭಕ್ತಿಯ ತತ್ವಗಳ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದ ಬಗೆ ಹೇಗೆ? ಮತ್ತು ಪ್ರಸ್ತುತ ಸಂದರ್ಭಕ್ಕೂ ವಚನ ಸಾಹಿತ್ಯದ ತತ್ತ್ವಗಳು ಸಾಮಾಜಿಕ ನ್ಯಾಯದ ಪರಿಪ್ರೇಕ್ಷ್ಯದಲ್ಲಿ ಅವುಗಳ ಪ್ರಾಧಾನ್ಯತೆಯನ್ನು ಪ್ರಸ್ತುತತೆಯನ್ನು ಕುರಿತು ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ. ಈ ಸಾಹಿತ್ಯವು ಶರಣ ಪರಂಪರೆಯ ಜೀವನ ಶೈಲಿಯನ್ನು ಪ್ರತಿಬಿಂಬಿಸುವುದರೊಂದಿಗೆ, ನೈತಿಕ ಜೀವನ ಮೌಲ್ಯಗಳನ್ನು ಬೋಧಿಸುವ ಪ್ರಭಾವಿ ಮಾಧ್ಯಮವಾಗಿದೆ. ವಚನ ಸಾಹಿತ್ಯವು ಕೇವಲ ಧಾರ್ಮಿಕ ಮತ್ತು ಸಾಹಿತ್ಯಿಕ ಪ್ರಕಾರವಲ್ಲದೆ, ಅದು ಸಾಮಾಜಿಕ ಕ್ರಾಂತಿಯ ಸಂಕೇತವಾಗಿ, ಮಾನವೀಯತೆಯ ಸಿದ್ಧಾಂತಗಳ ಸಾರಥಿಯಾಗಿ ಹೇಗೆ ನಿಲ್ಲಬಲ್ಲದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. 
APA, Harvard, Vancouver, ISO, and other styles
5

ಮಾರುತಿ, ಮಂಜಪ್ಪ ಚಲವಾದಿ. "ಮಂಟೇಸ್ವಾಮಿ ಕಾವ್ಯದಲ್ಲಿ ಶಾಕ್ತ-ಶೈವಗಳ ಸಂಘರ್ಷ". AKSHARASURYA JOURNAL 05, № 06 (2025): 41 to 52. https://doi.org/10.5281/zenodo.14788714.

Full text
Abstract:
ಶ್ರಮಣ ಧಾರೆಯು ಈ ನೆಲದ ಅತಿಪುರಾತನವಾದ ವಿಚಾರಧಾರೆ. ಸರ್ವ-ಸಾಮರಸ್ಯಮಯಿಯಾದ ಈ ಧಾರೆ ನಾಡಿನುದ್ದಗಲಕ್ಕೂ ವಿಸ್ತರಿಸಿತ್ತು. ಕಾಲ-ಪಲ್ಲಟದಿಂದಾಗಿ ಬಹುತ್ವವನ್ನು ಕೊಲ್ಲುವ ಏಕತ್ವದ ವಲಸೆ ಧಾರೆ ಇಲ್ಲಿನ ಸಮತೆಯೊಳಗೆ ಅಸಮತೆಯ ವಿಷಬೀಜ ಬಿತ್ತಿ ತನ್ನ ಕಾರ್ಯವನ್ನು ಸಾಧು ಮಾಡಿಕೊಂಡಿತು. ಈ ವಿಷಬೀಜ ಮುಂದೆ ಗಿಡವಾಗಿ, ಮರವಾಗಿ ಎಲ್ಲೆಡೆಯು ಹಬ್ಬಿ ವಿಷಲೀನವಾಗುವ ಹೊತ್ತಿನಲ್ಲಿ ವಿಷಕಂಠರಾಗಿ ಬುದ್ಧ, ನಾಗಾರ್ಜುನ, ಸರಹಪಾದ, ಚಾರ್ವಾಕ, ಮುಂದೆ ಕನ್ನಡ ನಾಡಿನಲ್ಲಿ ಇದಕ್ಕೆ ವಚನ ಚಳವಳಿ ಕೈಜೋಡಿಸಿ ಬುಡ ಸಮೇತ ಕಿತ್ತೊಗೆಯುವ ಕಾರ್ಯ ಕೈಗೊಂಡರು. ವಿಷಪ್ರೇರಿತ ವೈದಿಕ ಚಿಂತನೆಯನ್ನು ಬಗ್ಗುಬಡಿಯಲು ಮಧ್ಯಕಾಲೀನ ಸಂದರ್ಭದಲ್ಲಿ ಅನೇಕ ತಾಂತ್ರಿಕರು ಬೀದಿಗಿಳಿದರು. ಅಂತಹ ಮಹತ್ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದವನು ಮಂಟೇಸ್ವಾಮಿ. ಅವೈದಿಕದೊಳಗುದಿಸುತ್ತಿದ್ದ ವೈದಿಕವನ್ನು ಪ್ರಖರವಾಗಿ ಭಂಜಿಸಿದವನು. ಅವನ ಕ್ರಾಂತಿಗಳೆ ಜನಪದರ ಕೊರಳೊಳಗೆ ಹಾಡಾಗಿ, ಕತೆಯಾಗಿ ರೂಪಿತಗೊಂಡು ಇಂದು ಮಂಟೇಸ್ವಾಮಿಕಾವ್ಯವೆಂದು ಮಹಾಕಾವ್ಯದ ಸ್ಥಾನವನ್ನಲಂಕರಿಸಿವೆ. ತಾಂತ್ರಿಕ ಪಂಥದೊಳಗೆ ಇದ್ದ ಅನೇಕ ಸಂಘರ್ಷಗಳನ್ನು ಮಂಟೇಸ್ವಾಮಿಕಾವ್ಯ ತೆರೆದಿಟ್ಟಿದೆ. ಅಂತಹ ಬಹುಮುಖ್ಯ ಸಂಘರ್ಷಗಳಲ್ಲೊಂದು ಶಾಕ್ತ-ಶೈವದ ಸಂಘರ್ಷ. 
APA, Harvard, Vancouver, ISO, and other styles
6

ಸಿ., ನಾಗಭೂಷಣ. "ಗುಮ್ಮಳಾಪುರದ ಸಿದ್ಧಲಿಂಗ ಯತಿಗಳ ಶೂನ್ಯ ಸಂಪಾದನೆ: ಕೆಲವು ಟಿಪ್ಪಣಿಗಳು". AKSHARASURYA 06, № 02 (2025): 01 to 19. https://doi.org/10.5281/zenodo.15123743.

Full text
Abstract:
ಅಭಿನವ ಅಲ್ಲಮರೆಂದು ಖ್ಯಾತರಾದ ತೋಂಟದ ಸಿದ್ಧಲಿಂಗಯತಿಗಳು, ತಮ್ಮ ಶಿಷ್ಯ-ಪ್ರಶಿಷ್ಯ ಪರಂಪರೆಯ ಮೂಲಕ, ಗ್ರಂಥಸಂಪಾದನೆಯ ವಿಧಿವಿಧಾನಗಳನ್ನು ಅನ್ವಯಿಸಿ ವಚನಗಳನ್ನು ಸಂಕಲಿಸುವ ವ್ಯಾಖ್ಯಾನಿಸುವಂತಹ ಸಾಹಿತ್ಯಕ ಚಟುವಟಿಕೆಗಳನ್ನು ಕೈಗೊಂಡಿರುವುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ವಿಶಿಷ್ಟವಾದುದಾಗಿದೆ. ವಚನ ರಚನೆ ಹಾಗೂ ವಚನ ರಕ್ಷಣೆ, ವ್ಯಾಖ್ಯಾನ ಎರಡರಲ್ಲಿಯೂ ಸ್ಥಾನ ಪಡೆದಿದ್ದಾರೆ. ವಚನಗಳನ್ನು ಸಂಕಲಿಸುವ, ವ್ಯಾಖ್ಯಾನಿಸುವಂತಹ ಸಾಹಿತ್ಯಕ ಚಟುವಟಿಕೆಗಳನ್ನು ತಮ್ಮ ಶಿಷ್ಯ ಪ್ರಶಿಷ್ಯ ಪರಂಪರೆಯ ಮೂಲಕ ಅನುಷ್ಠಾನಗೊಳಿಸಿದರು. “ಕಲ್ಯಾಣ ಕ್ರಾಂತಿಯ ವಿಪ್ಲವದ ನಂತರ ಅಳಿದುಳಿದ ವಚನ ಸಾಹಿತ್ಯವನ್ನು ಸಂರಕ್ಷಿಸುವ ಶೋಧಿಸುವ, ಸಂಕಲಿಸುವ, ವ್ಯಾಖ್ಯಾನಿಸುವ ಮೂಲಕ ಕಾಪಾಡಿಕೊಂಡು ಬರಲು 15 ಮತ್ತು 16 ನೇ ಶತಮಾನದ ಸಂಕಲನಕಾರರು ಕಾರಣರಾಗಿದ್ದಾರೆ. ಈ ಕಾರ್ಯ ವಿಧಾನದಲ್ಲಿ ಆಧುನಿಕ ಸಂಶೋಧನೆ ವಿಧಿವಿಧಾನಗಳಾದ ಆಕರ ಸಂಗ್ರಹ, ಸಂಯೋಜನೆ, ವಿಶ್ಲೇಷಣೆ ಎಂಬ ಮೂರು ಹಂತಗಳನ್ನು ಗುರುತಿಸಬಹುದಾಗಿದೆ. ಅಲ್ಲಲ್ಲಿ ಅಡಗಿದ್ದ ವಚನಗಳನು ಶೋಧಿಸುವಲ್ಲಿ, ಸಂಗ್ರಹಿಸುವಲ್ಲಿ, ನಾಮಾನುಗುಣವಾಗಿ, ವಿಷಯಾನುಗುಣವಾಗಿ ಜೋಡಿಸುವಲ್ಲಿ, ತಾತ್ವಿಕ ದೃಷ್ಟಿಯಿಂದ ಸಂಕಲಿಸುವಲ್ಲಿ, ಸಂವಾದ ರೂಪದಲ್ಲಿ ಸಂಯೋಜಿಸಿ ಸಂಪಾದಿಸುವಲ್ಲಿ, ವಚನಗಳ ಅಂತರಾರ್ಥ ಅರಿತು ವ್ಯಾಖ್ಯಾನಿಸುವಲ್ಲಿ ಆಧುನಿಕ ಗ್ರಂಥ ಸಂಪಾದನೆಯ ಸರ್ವ ಸಾಮಾನ್ಯ ತತ್ವಗಳನ್ನೇ ಅನುಸರಿಸಿದ್ದಾರೆ.” (ಸಿ. ನಾಗಭೂಷಣ; ಶರಣ ಸಾಹಿತ್ಯ ದೀಪಿಕೆ, ಪು. 204) “ಶೂನ್ಯಸಂಪಾದನೆ” ಕೃತಿಯು ಶರಣರ ವಚನಗಳನ್ನು ಬಳಸಿಕೊಂಡು ಶರಣರ ಜೀವನ ಚಿತ್ರವನ್ನು ಬಿಡಿಸುವ ಹಾಗೂ ಶರಣತತ್ವವನ್ನು ಪ್ರತಿಪಾದಿಸುವುದಾಗಿದೆ. ಶೂನ್ಯಸಂಪಾದನೆಯು ತನ್ನ ಸಮಕಾಲೀನ ಸಂದರ್ಭದ ಅಗತ್ಯಗಳಿಗೆ ಸ್ಪಂದಿಸಿದರೆ, ಶರಣರು ರಚಿಸಿದ ಮೂಲ ವಚನಗಳು ಸಮಕಾಲೀನತೆಯ ಜತೆಗೆ ಸಾರ್ವಕಾಲಿಕ ಸತ್ಯಗಳ ಪ್ರತಿಪಾದನೆಗಳನ್ನು ಒಳಗೊಂಡಿವೆ. ಹಾಗೆಯೇ ಮಾನವನ ಬದುಕಿಗೆ ಮೂಲವಾಗಿ ಬೇಕಾಗಿರುವ ಆಧ್ಯಾತ್ಮದ ತಿರುಳನ್ನು ತಿಳಿಸಿಕೊಡುತ್ತದೆ. 
APA, Harvard, Vancouver, ISO, and other styles
7

ಗಣೇಶ, (ಚಿಕ್ಕಮಗಳೂರು ಗಣೇಶ). "ಹಿಂದುಳಿದ ವರ್ಗಗಳ ಚಳವಳಿ: ಚಾರಿತ್ರಿಕ ಹಿನ್ನೆಲೆ, ಸ್ವರೂಪ ಹಾಗೂ ಮಹತ್ವ". AKSHARASURYA JOURNAL 03, № 04. SPECIAL ISSUE. (2024): 38 to 49. https://doi.org/10.5281/zenodo.10929675.

Full text
Abstract:
ಕನ್ನಡ ನೆಲದಲ್ಲಿ ಬಸವಣ್ಣನ ಸಾಂಸ್ಕೃತಿಕ ನಾಯಕತ್ವದಲ್ಲಿ ವಚನ ಸಾಹಿತ್ಯಾಭಿವ್ಯಕ್ತಿಯ ಮೂಲಕ ಜರುಗಿದ ಸಮಾನತೆಯ ಚಿಂತನೆಯ ಹೋರಾಟ ಚರಿತ್ರೆಯಲ್ಲಿ ಮಹತ್ವದ್ದಾಗಿದೆ. ಅದು ಸಂಭವಿಸಿದ ಕಾಲ 12ನೆಯ ಶತಮಾನ. ಅದರ ತರುವಾಯ 19ನೆಯ ಶತಮಾನದಲ್ಲಿ ‘ಬ್ರಾಹ್ಮಣ್ಯ ಆಡಳಿತಶಾಹಿ ಯಜಮಾನಿಕೆ’ ವಿರುದ್ಧ ಹಿಂದುಳಿದ ವರ್ಗಗಳನ್ನು ಜಾಗೃತಿಗೊಳಿಸಲು ಕೆಳಕಾಣಿಸಿದ ಹೋರಾಟಗಳು ಮಹತ್ವದ ಪಾತ್ರ ವಹಿಸಿದವು. ಮಹಾರಾಷ್ಟ್ರದ ಜೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿಗಳು ‘ಸತ್ಯಶೋಧಕ ಸಮಾಜ’ದ ಮುಖಾಂತರ, ಬ್ರಾಹ್ಮಣ್ಯ ಪ್ರಾಬಲ್ಯದ ವಿರೋಧ-ಶೂದ್ರ ದಲಿತರಿಗೆ ಸಮಾನತೆಯ ಹಕ್ಕು-ಮಹಿಳೆಯರ ಶಿಕ್ಷಣದ ಸಲುವಾಗಿ ಹಗಲಿರುಳು ಹೋರಾಡಿದರು. ಶಾಹು ಮಹಾರಾಜರು ತಮ್ಮ ಸಂಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ಬ್ರಾಹ್ಮಣೇತರರಿಗೆ ಅವಕಾಶ ನೀಡುವ ಉದ್ದೇಶದಿಂದ ಉದ್ಯೋಗಗಳಲ್ಲಿ ಮೀಸಲಾತಿ ನೀಡುವ ಪ್ರಕ್ರಿಯೆಯನ್ನು ಆರಂಭಿಸಿದರು. ಆ ಮೂಲಕ, ಫುಲೆ ಅವರು ಆರಂಭಿಸಿದ್ದ ಹಿಂದುಳಿದ ವರ್ಗಗಳ ಅಭ್ಯುದಯದ ಹೋರಾಟಕ್ಕೆ ಶಾಹು ಮಹಾರಾಜರು ಶಾಸನಾತ್ಮಕ ಆದೇಶ ನೀಡಿದರು ಎನ್ನಬಹುದು. ಇನ್ನು ನಾರಾಯಣ ಗುರುಗಳು ಕೇರಳದಲ್ಲಿ ‘ಧರ್ಮ ಪರಿಪಾಲನ ಯೋಗಂ’ ಸಂಸ್ಥೆಯನ್ನು ಆರಂಭಿಸಿ, ಉನ್ನತ ಜಾತಿಯವರ ಯಜಮಾನಿಕೆಯನ್ನು ವಿರೋಧಿಸುವ, ಹಿಂದುಳಿದ ವರ್ಗದವರಿಗೆ ಪ್ರತ್ಯೇಕವಾಗಿ ದೇಗುಲಗಳನ್ನು ನಿರ್ಮಿಸುವ, ಶಿಕ್ಷಣದಿಂದ ಮಾತ್ರ ಸುಧಾರಣೆ ಸಾಧ್ಯವೆಂಬ ಅರಿವು ಮೂಡಿಸುವ ಹಲವು ಸಮಾಜ ಪರಿವರ್ತನ ಕಾರ್ಯಗಳನ್ನು ಪ್ರಾರಂಭಿಸಿದರು. ತಮಿಳುನಾಡಿನ ಪೆರಿಯಾರ್ ರಾಮಸ್ವಾಮಿ ಅವರಂತೂ, ಇಂಥವುಗಳನ್ನು ತುಂಬಾ ಕ್ರಾಂತಿಕಾರಕವಾಗಿ ಮುಖಾಮುಖಿಯಾದರು. ಮೊದಲಿಗೆ ಅವರು ಬ್ರಾಹ್ಮಣಶಾಹಿಯ ವಿರುದ್ಧ ಪ್ರಬಲ ಸೈದ್ಧಾಂತಿಕ ಹೋರಾಟವನ್ನು ಕಟ್ಟಿದರು. ಅದರ ಭಾಗವಾಗಿ ಪುರೋಹಿತಶಾಹಿ ಕುರುಹುಗಳಾದ ದೇವರು ಮತ್ತು ದೇವಾಲಯಗಳನ್ನು ತಿರಸ್ಕರಿಸಲು ಕರೆಕೊಟ್ಟರು. ಮನುಷ್ಯ ಆತ್ಮಘನತೆಗಾಗಿ ವೈಚಾರಿಕವಾಗಿ ಸದೃಢವಾಗುವ ಬಗ್ಗೆ ಅರಿವು ಮೂಡಿಸಿದರು. ಅದಕ್ಕಾಗಿ ‘ಸ್ವಯಂ ಮರ್ಯಾದೈ’ ಚಳವಳಿಯನ್ನು ಕಟ್ಟಿದರು. ಇದೇ ವೇಳೆಗೆ ಮದ್ರಾಸಿನಲ್ಲಿ ‘ಜಸ್ಟಿಸ್ ಪಾರ್ಟಿ’ ಎಂಬ ಹೆಸರಿನಲ್ಲಿ ರಾಜಕೀಯ ಪಕ್ಷದ ಉದಯವಾಯಿತು. ಅದು ತನ್ನ ಪ್ರಣಾಳಿಕೆಯನ್ನು ‘ನಾನ್-ಬ್ರಾಹ್ಮಿನ್ ಮ್ಯಾನಿಫೆಸ್ಟೋ’ ಎಂದು ಘೋಷಿಸಿಕೊಂಡಿತು. ದಕ್ಷಿಣ ಭಾರತದಲ್ಲಿ ಬ್ರಾಹ್ಮಣೇತರ ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಮಟ್ಟವನ್ನು ಸುಧಾರಿಸುವ ಉದ್ದೇಶವನ್ನು ತನ್ನ ಪಕ್ಷದ ಧ್ಯೇಯವನ್ನಾಗಿ ಮಾಡಿಕೊಂಡಿತು. ಹೀಗೆ ಇಪ್ಪತ್ತನೆಯ ಶತಮಾನದ ಶುರುವಿನಲ್ಲಿ ಭಾರತದ ತುಂಬ ಆರಂಭವಾದ ಬ್ರಾಹ್ಮಣೇತರ ವರ್ಗಗಳ ಹಕ್ಕೊತ್ತಾಯದ ಕಾರ್ಯಚಟುವಟಿಕೆಗಳು ಕನ್ನಡ ನೆಲದಲ್ಲಿ ಹಿಂದುಳಿದ ವರ್ಗಗಳ ಚಳವಳಿಯ ಹುಟ್ಟಿಗೆ ಪ್ರೇರಣೆಯನ್ನು ಒದಗಿಸಿದವು.
APA, Harvard, Vancouver, ISO, and other styles
8

ಗಣೇಶ. "ಧರ್ಮ ಮತ್ತು ಅಂಬೇಡ್ಕರ್‌". AKSHARASURYA JOURNAL 06, № 05 (2025): 46 to 53. https://doi.org/10.5281/zenodo.15504212.

Full text
Abstract:
ಅಂಬೇಡ್ಕರ್‌ ಭಾರತದ ಒಬ್ಬ ಶ್ರೇಷ್ಠ ಪ್ರತಿಭಾವಂತ ಬುದ್ಧಿ ಜೀವಿ ಮತ್ತು ಮೇಧಾವಿ. ಪ್ರಪಂಚದ ಅಪ್ರತಿಮ ಚಿಂತಕರ ಸಾಲಿನಲ್ಲಿ ನಿಲ್ಲಬಲ್ಲ, ಮೇರು ವ್ಯಕ್ತಿತ್ವವುಳ್ಳ ಚಿಂತನಶೀಲ ವ್ಯಕ್ತಿ. ಅವರು ಜಗತ್ತಿನ ಎಲ್ಲಾ ಧಾರ್ಮಿಕ ಗ್ರಂಥಗಳನ್ನು ಆಸಕ್ತಿ ಮತ್ತು ಕುತೂಹಲದಿಂದ ಅಮೂಲಾಗ್ರವಾಗಿ ಅಧ್ಯಯನ ಮಾಡಿದ್ದರು. ಧರ್ಮವನ್ನು ಕುರಿತಂತೆ ರಾಬರ್ಟ್ ಸನ್ ಸ್ಮಿತ್ ಅವರ ಪರಿಕಲ್ಪನೆಯನ್ನು ಅಂಬೇಡ್ಕರ್‌ ಹಿಂದೂ ಧರ್ಮದ ತತ್ವಜ್ಞಾವನ್ನು ಕುರಿತ ತಮ್ಮ ಕೃತಿಯಲ್ಲಿ ಹೀಗೆ ಉಲ್ಲೇಖಿಸಿದ್ದಾರೆ. ಧರ್ಮ ಯಾವುದೇ ಕಾರಣಕ್ಕೂ ದುರ್ಬಲರನ್ನು ಶೋಷಿಸುವ ಅಸ್ತ್ರವಾಗಬಾರದು. ಹಿಂದೂ ಧಾರ್ಮಿಕ ವ್ಯವಸ್ಥೆಯಲ್ಲಿ ದೈವಿಕ ಪ್ರಭುತ್ವದ ಲಿಖಿತ ಸಂವಿಧಾನ ಮತ್ತು ಪುರೋಹಿತಶಾಹಿಯ ಅಘೋಷಿತ ಪ್ರಾಬಲ್ಯವನ್ನು ಕಾಪಾಡಿಕೊಂಡು ಬರಲಾಗಿದೆ. ಈ ಧರ್ಮದಲ್ಲಿ ಬಹುಸಂಖ್ಯಾತ ಹಿಂದುಳಿದ ಸಮುದಾಯಗಳ ಜನತೆ ಸಮಾನತೆಯಿಂದ ವಂಚಿತರಾಗಿದ್ದಾರೆ. ಇಂತಹ ಧಾರ್ಮಿಕ ಕಟ್ಟುಪಾಡುಗಳು ಭಾರತೀಯ ಸಮಾಜದಲ್ಲಿ ಬಹುಜನ ಬಂಧುಗಳಿಗೆ ಉಸಿರು ಕಟ್ಟಿಸುವಂತಹ ವಾತಾವರಣವನ್ನು ನಿರ್ಮಿಸಿವೆ. ಧರ್ಮ ಯಾವುದೇ ಕಾರಣಕ್ಕೂ ದುರ್ಬಲರನ್ನು ಶೋಷಿಸುವ ಅಸ್ತ್ರವಾಗಬಾರದು. ಹಿಂದೂ ಧಾರ್ಮಿಕ ವ್ಯವಸ್ಥೆಯಲ್ಲಿ ದೈವಿಕ ಪ್ರಭುತ್ವದ ಲಿಖಿತ ಸಂವಿಧಾನ ಮತ್ತು ಪುರೋಹಿತಶಾಹಿಯ ಅಘೋಷಿತ ಪ್ರಾಬಲ್ಯವನ್ನು ಕಾಪಾಡಿಕೊಂಡು ಬರಲಾಗಿದೆ. ಈ ಧರ್ಮದಲ್ಲಿ ಬಹುಸಂಖ್ಯಾತ ಹಿಂದುಳಿದ ಸಮುದಾಯಗಳ ಜನತೆ ಸಮಾನತೆಯಿಂದ ವಂಚಿತಾಗಿದ್ದಾರೆ. ಇಂತಹ ಧಾರ್ಮಿಕ ಕಟ್ಟುಪಾಡುಗಳು ಭಾರತೀಯ ಸಮಾಜದಲ್ಲಿ ಬಹುಜನ ಬಂಧುಗಳಿಗೆ ಉಸಿರು ಕಟ್ಟಿಸುವಂತಹ ವಾತಾವರಣವನ್ನು ನಿರ್ಮಿಸಿವೆ. ಹಿಂದೂಧರ್ಮದ ಸಿದ್ಧಾಂತಗಳನ್ನು ವಂಶಪಾರಂಪರ್ಯವಾಗಿ ಪಡೆಯುವ ಚರಾಸ್ತಿಯಂತೆ ವೈದಿಕಶಾಹಿ ಸಂರಕ್ಷಿಸಿದೆ. ಇಂತಹ ಧರ್ಮ ಪ್ರಕೃತಿ ಧರ್ಮಕ್ಕೆ ತದ್ವಿರುದ್ಧವಾಗಿದೆ. 
APA, Harvard, Vancouver, ISO, and other styles
9

ರಮೇಶ್. "ಯಯಾತಿ ನಾಟಕದಲ್ಲಿ ಸಾಮಾಜಿಕ ಸಂಘರ್ಷ". AKSHARASURYA JOURNAL 06, № 03 (2025): 41 to 51. https://doi.org/10.5281/zenodo.15343867.

Full text
Abstract:
ಗಿರೀಶ್ ಕಾರ್ನಾಡರು ಬಹುಮುಖ ವ್ಯಕ್ತಿತ್ವವುಳ್ಳವರು ನಾಟಕಕಾರ ನಿರ್ದೇಶಕ ನಟ ಪ್ರಾಧ್ಯಾಪಕರಾಗಿ ಹಲವು ಕ್ಷೇತ್ರಗಳಲ್ಲಿ ದುಡಿದವರು ಪದ್ಮಶ್ರೀ, ಪದ್ಮಭೂಷಣ, ಕರ್ನಾಟಕ ನಾಟಕ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಜ್ಞಾನಪೀಠ ಪ್ರಶಸ್ತಿ ವಿಜೇತರು ನಾನಾ ಕ್ಷೇತ್ರಗಳಲ್ಲಿ ಪಾಂಡಿತ್ಯ ಪಡೆದವರು ನಾಗಮಂಡಲ, ತುಘಲಕ್, ಹಯವದನ, ಹಿಟ್ಟಿನ ಹುಂಜ, ತಲೆದಂಡ ಯಯಾತಿ ನಾಟಕಗಳನ್ನು ರಚಿಸಿದ್ದಾರೆ. ಕನ್ನಡಕ್ಕೆ ವಿಶ್ವ ಮಾನ್ಯತೆಯನ್ನು ತಂದುಕೊಟ್ಟವರು.  ಯಯಾತಿ ಪೌರಾಣಿಕ ವ್ಯಕ್ತಿ, ಪಾಂಡವರ ಪೂರ್ವಜರಲ್ಲಿ ಒಬ್ಬ ನಹುಷನ ಮಗ ಅವನಿಗೆ ಇಬ್ಬರು ಹೆಂಡತಿಯರು, ಶರ್ಮಿಷ್ಠೆ ಮತ್ತು ದೇವಯಾನಿ ಶರ್ಮಿಷ್ಠೆ ರಾಕ್ಷಸರಾಜನ ಮಗಳು, ದೇವಯಾನಿ ಅಸುರರ ಗುರು ಶುಕ್ರಾಚಾರ್ಯರ ಮಗಳು ಪುರಾಣಗಳಲ್ಲಿ ಬರುವ ಯಯಾತಿ ಬದುಕನ್ನು ಆಯ್ಕೆ ಮಾಡಿಕೊಂಡು ದೇವಯಾನಿ ಮದುವೆಯ ನಂತರದ ಕಥೆಯ ಆಧಾರದ ಮೇಲೆ ನಾಟಕವನ್ನು ರಚಿಸಿದ್ದಾರೆ. ಮೂಲ ಯಯಾತಿ ಕತೆಯಲ್ಲಿ ಇಲ್ಲದಿರುವ ಚಿತ್ರಲೇಖೆ ಎಂಬ ಪುರುವಿನ ಹೆಂಡತಿ ಪಾತ್ರವನ್ನು ಸೃಷ್ಟಿಸಿ ಹೊಸ ದೃಷ್ಟಿಕೋನದಿಂದ ಯಯಾತಿ ನಾಟಕ ರಚಿಸಿದ್ದಾರೆ. ಸ್ವರ್ಣಲತೆ ಎಂಬ ದಾಸಿ ಪಾತ್ರವನ್ನು ಹೊಸದಾಗಿ ಹುಟ್ಟು ಹಾಕಿದ್ದಾರೆ. ಇಲ್ಲಿ ಪುರು ಆಧುನಿಕ ಯುವಜನಾಂಗದ ಪ್ರತಿನಿಧಿಯಂತೆ ಕಂಡುಬರುತ್ತಾರೆ. ಯಯಾತಿ, ಪುರು, ದೇವಿಯಾನಿ, ಶರ್ಮಿಷ್ಠೆ, ಸ್ವರ್ಣಲತೆ, ಚಿತ್ರಲೇಖೆ ಪಾತ್ರಗಳಲ್ಲದೆ ಕಚ, ಶುಕ್ರಾಚಾರ್ಯ, ಪುರುವಿನ ತಾಯಿ ಪಾತ್ರಗಳ ಪ್ರಸ್ತಾಪವಿದೆ. 
APA, Harvard, Vancouver, ISO, and other styles
10

ಮ.ಸು.ಕೃಷ್ಣಮೂರ್ತಿ. "ಔತ್ತರೇಯ ಸಂತರ ಮೇಲೆ ವೀರಶೈವ ಪ್ರಭಾವ". AKSHARASURYA 04, № 03 (2024): 01 to 36. https://doi.org/10.5281/zenodo.12701300.

Full text
Abstract:
ಬಹುಸಾಂಸ್ಕೃತಿಕ ಸಂಬಂಧಗಳ ಸಂಶೋಧಕ-ಸಾಧಕರು ಮ.ಸು.ಕೃಷ್ಣಮೂರ್ತಿ ಮನುಕುಲವನ್ನು ಇಡಿಯಾಗಿ ಕಾಣುವ ಮನಸ್ಸು, ಕನ್ನಡ-ಹಿಂದಿ ಭಾಷೆ-ಸಾಹಿತ್ಯಗಳ ಸೇತುವೆ, ಎರಡು ಭಾಷೆಗಳಲ್ಲೂ ಬರೆದ ಸವ್ಯಸಾಚಿ, ಬಹುಪ್ರಕಾರಗಳ ಸಾಹಿತ್ಯಕೃಷಿಕ, ಭಾರತೀಯ ಅಧ್ಯಾತ್ಮ ಪರಂಪರೆಯ ಮಹಾಶೋಧಕ ಮೊದಲಾದ ಪ್ರಸಿದ್ಧಿಗೆ ಭಾಜನರಾದ ಸಾಹಿತಿ ಮ.ಸು.ಕೃಷ್ಣಮೂರ್ತಿ ಅವರು. ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಶ್ರೀಯುತರ ಒಂದೊಂದು ಪುಸ್ತಕವೂ ಇವರ ಆಳವಾದ ವಿದ್ವತ್ತಿಗೆ ಸಾಕ್ಷಿಯಾಗಿವೆ. ಕಾದಂಬರಿ, ಕವಿತೆ, ಜೀವನ ಚರಿತ್ರೆ, ಸಣ್ಣಕಥೆ, ನಾಟಕ, ಲಲಿತ ಪ್ರಬಂಧ, ವಚನಗಳು, ಮಕ್ಕಳ ಸಾಹಿತ್ಯ, ಸಂಪಾದನೆ, ಸಂಶೋಧನೆ - ಈ ಎಲ್ಲ ಕ್ಷೇತ್ರಗಳನ್ನು ಸಮೃದ್ಧಗೊಳಿಸುವುದರ ಜೊತೆಗೆ ಎಂ.ಎಸ್.ಕೆ.. ಅವರು ಹಿಂದಿಯಿಂದ ಹಾಗೂ ಇಂಗ್ಲಿಷ್‌ನಿಂದ ಕನ್ನಡಕ್ಕೆ ವಿಪುಲವಾಗಿ ಅನುವಾದಿಸಿದ್ದಾರೆ; ಕನ್ನಡದಿಂದ ಹಿಂದಿಗೂ ಪರಿವರ್ತಿಸಿದ್ದಾರೆ. ಸೃಜನಶೀಲ ಮತ್ತು ವೈಚಾರಿಕ ಲೇಖನಗಳಲ್ಲಿ ಕ್ರಿಯಾಶೀಲರಾಗಿ ಇವರು ಕನ್ನಡದಿಂದ ಹಿಂದಿಗೂ, ಹಿಂದಿಯಿಂದ ಕನ್ನಡಕ್ಕೂ ಯಶಸ್ವಿಯಾದ ಅನುವಾದ ಕಾರ್ಯವನ್ನೂ ಮಾಡಿದ್ದಲ್ಲದೇ, ಹಿಂದಿಯಲ್ಲಿ ಸ್ವತಂತ್ರ ಕೃತಿಗಳನ್ನೂ ಪ್ರಕಟಿಸಿದ್ದಾರೆ. ತಮ್ಮ ಅನುವಾದಗಳ ಮೂಲಕ ಕನ್ನಡ ಮತ್ತು ಹಿಂದಿ ಭಾಷಾ-ಸಂಸ್ಕೃತಿಗಳ ನಡುವೆ ಸೌಹಾರ್ದ ಸೇತುವಾಗಿ ಹಲವು ದಶಕಗಳ ಕಾಲ ಅವರು ಅವಿರತವಾಗಿ ದುಡಿದವರು. ಎಂ.ಎಸ್.ಕೆ.. ತರಹದ ವಿದ್ವಾಂಸರು ಇಲ್ಲದೇ ಹೋದರೆ ನಮ್ಮ ಸಾಹಿತ್ಯಗಳಲ್ಲಿ ಬಹುಭಾಷಾ ಕೊಳುಕೊಡುವಿಕೆಯ ಕೊರತೆಯಿಂದಾಗಿ ಅವು ಸೊರಗಬೇಕಾದಂಥ ಪರಿಸ್ಥಿತಿ ಉದ್ಭವವಾಗುತ್ತಿತ್ತು ಎಂದಿದ್ದಾರೆ ವಿಮರ್ಶಕರು. ಒಂದು ಸಾಹಿತ್ಯ ಎಷ್ಟೇ ದೊಡ್ಡದಿರಲಿ, ಪ್ರಾಚೀನವಾಗಿರಲಿ ಇತರ ಸಾಹಿತ್ಯಗಳೊಡನೆ ಸಂಪರ್ಕ ಹೊಂದದಿದ್ದರೆ ಅದು ಪಲ್ಲವಿಸಲಾರದು ಮತ್ತು ಅದರ ಎತ್ತರ ಬಿತ್ತರಗಳೂ ತಿಳಿಯಲಾರವು. ಈ ದೃಷ್ಟಿಯಿಂದ ಗಮನಿಸಿದರೆ ಎಂ.ಎಸ್.ಕೆ.. ಅವರ ಕೊಡುಗೆ ಅಪಾರವಾಗಿದೆ. ಮ.ಸು.ಕೃಷ್ಣಮೂರ್ತಿ ಅವರು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಗ್ರಾಮದವರು. 1931ರ ಜೂನ್ 16 ರಂದು ಜನಿಸಿದರು. ತಂದೆ ಎಂ.ಸುಬ್ಬರಾವ್, ತಾಯಿ ನಂಜಮ್ಮ. ಬನಾರಸ ವಿ.ವಿ.ಯಿಂದ ಹಿಂದಿ ಎಂ.ಎ. ಹಾಗೂ ಮೈಸೂರು ವಿ.ವಿ.ಯಿಂದ ಪಿಎಚ್.ಡಿ. ಪದವಿಯನ್ನು ಪಡೆದವರು. 1967ರಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕರಾಗಿ ತಮ್ಮ ಶೈಕ್ಷಣಿಕ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಮೈಸೂರು ವಿ.ವಿ. ಹಿಂದಿ ವಿಭಾಗದ ಪ್ರಾಧ್ಯಾಪಕರಾಗಿ ಹಾಗೂ ಮುಖ್ಯಸ್ಥರಾಗಿ ಸೇವೆಸಲ್ಲಿಸಿದವರು. ಕನ್ನಡ, ಸಂಸ್ಕೃತ ಹಾಗೂ ಹಿಂದಿ ಭಾಷೆಗಳಲ್ಲಿ ಬೋಧನೆ ಮಾಡಿದ ಕೀರ್ತಿ ಇವರದು. 1988ರಿಂದ 1991ರವರೆಗೆ ಭಾರತ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಲ್ಲಿ ಹಿಂದಿ ಸಲಹಾ ಮಂಡಳಿಯ ಸದಸ್ಯರಾಗಿ ಶ್ರೀಯುತರು ಸಲ್ಲಿಸಿದ ಸೇವೆಯು ಗಣನೀಯವಾದುದು. ಶ್ರೀಯುತರು ಫಲ್ಗುಣಿ, ರಥಚಕ್ರ, ಕಸ್ತೂರಿ ಮೃಗ, ನಾದ ಸೇತು, ಹಡಗಿನ ಹಕ್ಕಿ, ಕುರಿ ಸಾಕಿದ ತೋಳ, ಪರಶುರಾಮನ ತಂಗಿಯರು, ಚತುರ್ಮುಖ, ರಥಚಕ್ರ, ಒಂಟಿಸಲಗ ಸೇರಿದಂತೆ 60ಕ್ಕೂ ಅಧಿಕ ಕಾದಂಬರಿಗಳನ್ನು ಮತ್ತು ಯುಗಾಂತ, ರತ್ನಕಂಕಣ, ರಂಗಸಪ್ತಕ, ನಾಟ್ಯಪಂಚಕ ಹೀಗೆ ಒಟ್ಟು 27 ನಾಟಕಗಳನ್ನು ರಚಿಸಿದ್ದಾರೆ. ವ್ಯೋಮಕೇಶನ ವಚನಗಳು (ಆಧುನಿಕ ವಚನಗಳು), ಸಮುದ್ರ ಸಂಗಮ (ಕಾಲ್ಪನಿಕ ಸಂದರ್ಶನ), ಬಿತ್ತಭಿತ್ತಿಯ ಚಿತ್ರಗಳು, ಗೋಪುರದ ದೀಪ, ಚಿತ್ರಕೂಟ (ರೇಖಾಚಿತ್ರ ಸಂಗ್ರಹ), ಗಂಧಮಾಧವ, ಏಕಾಂತ ಸಂಗೀತ, ಹಾದಿಪುರಾಣ, ಚಂಕ್ರಮಣ (ಪ್ರಬಂಧ), ಸಿದ್ಧಸಾಹಿತ್ಯ, ಪರಿಶೋಧನ, ಮುಕ್ತಚಿಂತನ, ಹಿಂದಿ ಸಾಹಿತ್ಯ, ಉತ್ತರದ ಸಂತ ಪರಂಪರೆ, ಸೂಫಿ ಪ್ರೇಮಕಾವ್ಯ, ಮುಸಲ್ಮಾನ ಭಾಗವತರು, ಬಸವರಾಜಮಾರ್ಗ (ಸಂಶೋಧನೆಗಳು), ಕೋಗಿಲೆಯ ಚಿಕ್ಕವ್ವ, ಚಂದಮಾಮನ ಅಳಿಯ, ಚೈತ್ರಪಲ್ಲವಿ, ಮೀರಾಬಾಯಿ, ಮೆಣಸಿನಕಾಯಿ ಸಾಹಸ, ಸಂತ ರೈದಾಸ, ಮಹರ್ಷಿ ಕರ್ವೆ, ಕಿತ್ತೂರ ರಾಣಿ ಚೆನ್ನಮ್ಮ, ಕಾಲುಗಳ ಜಗಳ, ಗೋರಾ ಬಾದಲ್, ಚೈತ್ರ ಪಲ್ಲವ, ವೈಶಾಖ ಪ್ರಭ, ಆಷಾಢ ಸೋನೆ, ಮಕ್ಕಳ ಅಕ್ಕ-ಇವು ಮಕ್ಕಳ ಸಾಹಿತ್ಯ. ಬಾಣಭಟ್ಟನ ಆತ್ಮಕಥೆ, ಅನಾಮದಾಸನ ಕಡತ, ಮೇಘದೂತ, ಒಂದು ಕಳೆಯ ಕಥೆ, ಮೃಗನಯನಿ, ಜೈಸೋಮನಾಥ, ಕಬೀರ ಪದಾವಲೀ, ಮೀರಾ ಪದಾವಲೀ, ರಾಮಚರಿತ ಮಾನಸ, ವಿನಯ ಪತ್ರಿಕಾ, ಮೇಘದೂತ, ಕೋಮಲ ಗಾಂಧಾರ, ಬಿಹಾರೀ ಸಪ್ತಶತೀ, ಸೂರ್ಯನ ಏಳನೇ ಕುದುರೆ, ಚಿದಂಬರಾ ಸಂಚಯನ (ಹಿಂದಿಯಿಂದ ಕನ್ನಡಕ್ಕೆ ಅನುವಾದಿತ) ರಾಗಕಾನಡಾ, ಅಪರಾಜಿತ, ಜ್ಯೋತಿ, ಕಲಶ್ (ಹಿಂದಿ ಕಾದಂಬರಿಗಳು), ಅರಣ್ಯಕ, ಬೆಟ್ಟಕ್ಕೆ ಚಳಿಯಾದಡೆ, ಪುನರಾಗಮನ (ಕಥಾ ಸಂಕಲನ), ಸಂಪಾದನೆ: ನಳ ಚಂಪೂ ಸಂಗ್ರಹ ಮೊದಲಾದವು ಎಂ.ಎಸ್.ಕೆ.. ಅವರ ಕೃತಿಗಳಾಗಿವೆ. ಮ.ಸು.ಕೃಷ್ಣಮೂರ್ತಿ ಅವರ ಸಾಹಿತ್ಯ ಕೃಷಿಯನ್ನು ಗುರುತಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ನೀಡಲಾಗಿದೆ.           ತಾಮ್ರಪತ್ರ-ಹಿಂದಿಯಲ್ಲಿನ ಸಾಹಿತ್ಯದ ಕೆಲಸಕ್ಕಾಗಿ ಭಾರತ ಸರ್ಕಾರದಿಂದ ಪ್ರಶಸ್ತಿ, ಕನ್ನಡದಲ್ಲಿ ಅವರ ಸಾಹಿತ್ಯಿಕ ಕೆಲಸಕ್ಕಾಗಿ ದಕ್ಷಿಣ ಕೇಸರಿ ಸಾಹಿತ್ಯ ಪ್ರಶಸ್ತಿ–2010, ಬಸವರಾಜು ಪ್ರಶಸ್ತಿ-2008ರ ಕನ್ನಡ ಸಾಹಿತ್ಯ ಸೇವೆಗಾಗಿ, ಕುವೆಂಪು ಪ್ರಶಸ್ತಿ, ಕರ್ನಾಟಕ ಸಂಘ, ಶಿವಮೊಗ್ಗ–2010, ಕೇಂದ್ರೀಯ ಹಿಂದಿ ನಿರ್ದೇಶನಾಲಯದಿಂದ ಸತತ 3 ವರ್ಷಗಳ ಗೌರವ, ಬಾಬು ಗಂಗಾಶರಣ ಪ್ರಶಸ್ತಿ, ಕೇಂದ್ರೀಯ ಹಿಂದಿ ಸಂಸ್ಥಾನ, ಆಗ್ರಾ–1996, ಆನಂದ ಋಷಿ ಪ್ರಶಸ್ತಿ, ಹೈದರಾಬಾದ್–1992, ಹಿಂದಿ ಪ್ರತಿಷ್ಠಾನ್ ಪ್ರಶಸ್ತಿ, ಹೈದರಾಬಾದ್–1990, ಮಹಾತ್ಮ ಗಾಂಧಿ ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು–1990, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಶಸ್ತಿ–2000, ಕರ್ನಾಟಕ ರಾಜ್ಯ ಸರ್ಕಾರ ಪ್ರಶಸ್ತಿ, ಉತ್ತರಪ್ರದೇಶ ಸರ್ಕಾರದಿಂದ ಸೌಹಾರ್ದ ಸನ್ಮಾನ–1999, ರಾಷ್ಟ್ರ ಧರ್ಮ ಸೇವಾ ಸನ್ಮಾನ, ಲಕ್ನೋ–2008, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸತತ ಎರಡು ವರ್ಷ, ನೃಪತುಂಗ ಪ್ರಶಸ್ತಿ–2001, ಸ್ವರ್ಣ ಜಯಂತಿ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾನಿಲಯ–1998, ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರಶಸ್ತಿ, ಧಾರವಾಡ–1998, ಟಿಎನ್‌ಶ್ರೀ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾನಿಲಯ–1980, ಅವರ ಹಿಂದಿ ಕಾದಂಬರಿ 'ಅಪರಾಜಿತಾ' ಕೇಂದ್ರ ಹಿಂದಿ ನಿರ್ದೇಶನಾಲಯದಲ್ಲಿ ಪ್ರಥಮ ಸ್ಥಾನ ಗಳಿಸಿತು–1973, ಮತ್ತೊಂದು ಹಿಂದಿ ಕಾದಂಬರಿ 'ರಾಗ ಕಾನಡ' ಬೆಂಗಳೂರು ವಿಶ್ವವಿದ್ಯಾನಿಲಯದ ಮಹಾತ್ಮಾ ಗಾಂಧಿ ಪ್ರಶಸ್ತಿಗೆ ಭಾಜನವಾಗಿದೆ. ಹಿಂದಿ ಕಾದಂಬರಿ 'ಪರಶುರಾಮ್ ಕಿ ಬೆಹೆನೆ'ಗೆ ಕೇಂದ್ರ ಹಿಂದಿ ನಿರ್ದೇಶನಾಲಯ ಪ್ರಶಸ್ತಿ – 1983 ಹಾಗೂ ಹಿಂದಿ ಕಾದಂಬರಿ 'ಜ್ಯೋತಿ ಕಲಶ' ಕೇಂದ್ರ ಹಿಂದಿ ನಿರ್ದೇಶನಾಲಯ ಪ್ರಶಸ್ತಿ–1988 ದೊರೆತಿದೆ. ಶ್ರೀಯುತರ ಸಾಹಿತ್ಯ ಸೇವೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2011ನೇ ಸಾಲಿನ ಗೌರವ ಪ್ರಶಸಿಯನ್ನು ನೀಡಿ ಪುರಸ್ಕರಿಸಿದೆ. ಭಾರತೀಯ ಹಿಂದಿ ಮತ್ತಿತರ ಭಾಷೆಯ ತಿಳಿವು ಮತ್ತು ಅನುಸಂಧಾನದ ಮೂಲಕ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿ ಪರಂಪರೆಗೆ ಮತ್ತಷ್ಟು ಮೆರುಗು ನೀಡಿದ ಎಂ.ಎಸ್.ಕೆ.. ಅವರು ಕನ್ನಡ ಸಂಶೋಧನ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಸಿದ್ಧಸಾಹಿತ್ಯ, ಪರಿಶೋಧನ, ಮುಕ್ತಚಿಂತನ, ಹಿಂದಿ ಸಾಹಿತ್ಯ, ಉತ್ತರದ ಸಂತ ಪರಂಪರೆ, ಸೂಫಿ ಪ್ರೇಮಕಾವ್ಯ, ಮುಸಲ್ಮಾನ ಭಾಗವತರು, ಬಸವರಾಜಮಾರ್ಗ ಎಂಬ ಸಂಶೋಧನ ಕೃತಿಗಳು ಇದುವರೆಗಿನ ಕನ್ನಡ ಬಗೆಗಿನ ತಿಳಿವನ್ನು ವೈಶಾಲ್ಯಗೊಳಿಸುವ ಮಹತ್ವಪೂರ್ಣ ರಚನೆಗಳಾಗಿವೆ. ‘ಸೂಫೀ ಪ್ರೇಮಕಾವ್ಯ’ ಕೃತಿಯು ಎಂ.ಎಸ್.ಕೆ. ಅವರ ಸುಮಾರು 25 ವರ್ಷಗಳಿಗೂ ಮೀರಿದ ಸಾರಸ್ವತ ತಪಸ್ಸಿನ ಫಲ. ಭಾರತೀಯ ಸಾಹಿತ್ಯದಲ್ಲಿ ಒಂದು ಹೊಸ ದನಿಯನ್ನು ಮಿಡಿದ ಸೂಫೀಧರ್ಮ ದರ್ಶನದ ಬಗೆಗೆ ಪ್ರಪ್ರಥಮವಾಗಿ ಕನ್ನಡಕ್ಕೆ ಈ ಸಂಶೋಧನಾತ್ಮಕ ಮಹಾಗ್ರಂಥ ಹೊರ ಬಂದಿತು. ಉತ್ತರ ಭಾರತದಲ್ಲಿ ಸಂತ ಪರಂಪರೆಯ ಸ್ವರೂಪ ಹೇಗಿತ್ತು, ಪ್ರಮುಖರಾದ ಸಂತರ ಸಾಮಾಜಿಕ ದೃಷ್ಟಿಕೋನ ಯಾವ ಬಗೆಯದಾಗಿತ್ತು. ಸಾಮಾಜಿಕ ಬದುಕಿನ ಮುನ್ನಡೆಗೆ ಅವರ ವಿಚಾರಧಾರೆಯ ಕೊಡುಗೆ ಏನು? ಇಂದು ಹೊಸ ಬಗೆಯ ಸಮಾಜವನ್ನು ಕಟ್ಟುವ ಆಕಾಂಕ್ಷೆಯನ್ನು ಹೊಂದಿರುವ ಮನಸ್ಸುಗಳು ಈ ಸಂತ ಪರಂಪರೆಯ ಮೂಲದಿಂದ ತಮ್ಮ ವಿಚಾರಧಾರೆಗಳಿಗೆ ಏನು ಪುಷ್ಟಿಗಳನ್ನು ಪಡೆಯಬಹುದು? ಈ ನಿಟ್ಟಿನಲ್ಲಿ ನಡೆಸಿದ, ಉತ್ತರ ಭಾರತದ ಸಂತಪರಂಪರೆಯನ್ನ ಕುರಿತ ಒಂದು ವಿಸ್ತಾರವಾದ ಅಧ್ಯಯನ ಇಲ್ಲಿರುವುದನ್ನು ಗಮನಿಸಬಹುದಾಗಿದೆ. ಸೂಫೀ ಸಂತರನ್ನು ಕುರಿತು ಎಂ.ಎಸ್.ಕೆ. ಅವರು ಬಹಳ ಗಾಢವಾಗಿ ಚಿಂತಿಸಿ ಬರೆದಿದ್ದಾರೆ. ಎಲ್ಲ ಉಪಾಧಿಗಳನ್ನು ಮೀರಿ ವಿಕಸಿಸಬೇಕೆಂದು ಸೂಫಿಗಳು ನೀಡಿದ ಸಂದೇಶದ ಮಹತ್ವವನ್ನು ಅರಿತವರಾಗಿದ್ದಾರೆ. ಪ್ರಾಯಶಃ ಈ ಹೃದಯ ವೈಶಾಲ್ಯದ, ದೃಷ್ಟಿ ವೈಶಾಲ್ಯದ ಸಂಕೇತವಾಗಿಯೇ ಕಟ್ಟುಕಟ್ಟಳೆಗಳನ್ನು ಮೀರಿ ಮಾನವಹಿತವೊಂದನ್ನೇ ಲಕ್ಷದಲ್ಲಿರಿಸಿಕೊಂಡು ಬಾಳಬೇಕೆಂಬ ಆಶಯವನ್ನು ಎಂ.ಎಸ್.ಕೆ. ಅವರ ಹಲವಾರು ಪ್ರಚುರಪಡಿಸುತ್ತವೆ. ವಿಮರ್ಶಕರಾದ ಸಿ.ನಾಗಣ್ಣ ಅವರು ಹೇಳುವಂತೆ, “ಸಂತ ಸಾಹಿತ್ಯವನ್ನು, ಉಪನಿಷತ್ತುಗಳನ್ನು ಕುರಿತು ಆಳವಾಗಿ ಅಧ್ಯಯನ ಮಾಡಿರುವ ಎಂ.ಎಸ್.ಕೆ. ಅವರು ಈ ರೀತಿ ಒಬ್ಬ ವಿಶ್ವಾತ್ಮಕವಾದಿಯಾಗಿ ಎಲ್ಲ ಕಾಲದ ದೇಶದ ವ್ಯಕ್ತಿಗಳನ್ನು ಏಕತ್ರಗೊಳಿಸಿ ಮೆಚ್ಚುವುದು ಆಶ್ಚರ್ಯವಲ್ಲದಿದ್ದರೂ ಸೂಕ್ಷ್ಮ ಪರಿಶೀಲನೆಯ ಆಧುನಿಕ ಮಾದರಿಯಲ್ಲಿ ಅಖಂಡ ಪರಿಪ್ರೇಕ್ಷಕ್ಕಿಂತ ಸಮುದಾಯಗಳ ಸಮೀಪ ದರ್ಶನ ಮತ್ತು ಅವಲೋಕನದ ವಿಧಾನ ಹೆಚ್ಚು ಲಾಭದಾಯಕವೆಂಬ ತಿಳುವಿಕೆಯಿದೆ.” ಎಂ.ಎಸ್.ಕೆ. ಅವರು ಅಖಂಡ ಭಾರತದ ಸಿದ್ಧ ಪರಂಪರೆಯನ್ನು ಈ ಬಗೆಯಲ್ಲಿ ಸಂಶೋಧನೆಗೆ ಒಳಗು ಮಾಡಿ “ಸಿದ್ಧಸಾಹಿತ್ಯ” ಎಂಬ ಅಮೂಲ್ಯಗ್ರಂಥವನ್ನು ಲೋಕಾರ್ಪಣೆ ಮಾಡಿದ್ದಾರೆ. ಭಾರತದ ದಾರ್ಶನಿಕ ಪರಂಪರೆಯಲ್ಲಿ ತಮ್ಮದೇ ಆದ ಅಸ್ಮಿತೆ ಹಾಗೂ ಅಸ್ತಿತ್ವದ ಮೂಲಕ ನವಧಾರೆಯಾಗಿ ಮೂಡಿಬಂದ ಸಿದ್ಧಪರಂಪರೆಯು ಬೌದ್ಧ-ಜೈನ-ಶೈವಾದಿಗಳ ಆಂತರ್ಯವನ್ನು ನಿಕಷಕ್ಕೆ ಒಡ್ಡಿದ ಬಗೆ, ಶಿಷ್ಪ ಸಂಸ್ಕೃತಿ-ಪರಿಶಿಷ್ಟ ಸಂಸ್ಕೃತಿಗಳಲ್ಲಿ ಏಕವಾಗಿರುವ ಸಿದ್ಧಸಾಹಿತ್ಯ, ಭಾರತದ ಶ್ರಮಣಧಾರೆಯ ತಲಕಾವೇರಿಯಂತೆ ಹರಿದು ವೈವಿಧ್ಯಮಯವಾಗಿ ಹರಿದ ಸಿದ್ಧಧಾರೆಯನ್ನು ಅಮೂಲಾಗ್ರವಾಗಿ ಶೋಧಿಸಿ ಮಂಡಿಸಿರುವ ಮಹತ್ವದ ಗ್ರಂಥವಿದು. “ಮುಕ್ತ ಚಿಂತನ” ಎಂಬುದು ಭಾರತದ ಬಹುಸಂಸ್ಕೃತಿಗಳ ಸಮಾಗಮ ಹಾಗೂ ಸಂಘರ್ಷ ಸಂಗತಿಗಳನ್ನು ಕುರಿತು ಸಾಂಸ್ಕೃತಿಕ ಸಂಶೋಧನೆಯ ವೈಧಾನಿಕತೆಯಲ್ಲಿ ರಚಿಸಿರುವ ಶೋಧನಗ್ರಂಥವಾಗಿದೆ. ಎಂ.ಎಸ್.ಕೆ. ಅವರಾದಿಯಾಗಿ ವಿಶ್ವದಾದ್ಯಂತ ಸಂಸ್ಕೃತಿಶೋಧಕರಿಗೆ ಅರಿವಾದಂತೆ, ಸಂಸ್ಕೃತಿ ಎನ್ನವುದು ಒಂದು ಮಧುವಿದ್ಯೆ, ಮಧುಕರೀವೃತ್ತಿ. ಅದು ಇರುವೆ ಗೂಡಲ್ಲ, ಇಟ್ಟಿಗೆಗೂಡಲ್ಲ, ಜೇನುಗೂಡು, ಇರುವೆ ಗೂಡಿನಲ್ಲಿ ಅಕ್ಕಿಯ ನುಚ್ಚು, ಸಕ್ಕರೆಯ ಕಣ, ಬೇಳೆಯ ತುಣುಕು, ಹೀಗೆ ಹಲವಾರು ವಸ್ತುಗಳ ಕಲಬೆರಕೆಯ, ಮಿಶ್ರಣವನ್ನು ಕಾಣಬಹುದು. ಇಟ್ಟಿಗೆಗೂಡಿಗೆ ಅಗ್ನಿಸಂಸ್ಕಾರವಾದರೂ ಇಟ್ಟಿಗೆಗಳು ತಮ್ಮ ವ್ಯಕ್ತಿತ್ವವನ್ನು ವಿಲೀನಗೊಳಿಸುವುದಿಲ್ಲ, ತಮ್ಮ ದ್ವೈತ ಭಾವವನ್ನು ಬಿಟ್ಟುಕೊಡುವುದಿಲ್ಲ, ಬದಲಾಗಿ ಇನ್ನೂ ದೃಢವಾಗುತ್ತದೆ. ಆದರೆ ಸಂಸ್ಕೃತಿ ಒಂದು ಮಿಶ್ರಣವಲ್ಲ, ರಾಸಾಯನಿಕ ಸಂಯುಕ್ತ. ದುಂಬಿಗಳು ಹಲವಾರು ಹೂಗಳಿಂದ ರಸವನ್ನು ಹೀರಿ ತಮ್ಮದೇ ಆದ ಮಧುವನ್ನು ನಿರ್ಮಿಸುತ್ತವೆ. ಈ ಮಧುವನ್ನು ವಿಶ್ಲೇಷಿಸಿ ಇದು ಗುಲಾಬಿಯ ರಸ, ಇದು ಮಲ್ಲಿಗೆಯದು, ಇದು ಇರುವಂತಿಗೆಯದು, ಇದು ತುಂಬೆಯದು ಎಂದು ಹೇಳಲು ಸಾಧ್ಯವೆ? ಈ ರೀತಿ ಹಲವು ಕುಸುಮರಸಗಳು ಸೇರಿ ತಮ್ಮ ಸ್ವಂತ ಅಸ್ತಿತ್ವವನ್ನು ಕಳೆದುಕೊಂಡು ಮಧುವಾಗಿ ಪರಿಣಮಿಸುತ್ತವೆ. ಎಂ.ಎಸ್.ಕೆ. ಅವರಿಗೆ ಭಾರತೀಯ ಸಂಸ್ಕೃತಿಯನ್ನು ನೆನೆದಾಗಲೆಲ್ಲ ಈ ಮಧುವಿದ್ಯೆ ನೆನಪಾದ್ದರಿಂದ ಹಾಗೂ ಜೇನುಗೂಡು ಅವರ ಚಿತ್ತಭಿತ್ತಿಯ ಮೇಲೆ ಮತ್ತೆ ಮತ್ತೆ ಸುಳಿದಾಡಿದ್ದರಿಂದ ಅವರು ಇಲ್ಲಿ ಮುಕ್ತವಾಗಿ ಭಾರತೀಯ ಸಂಸ್ಕೃತಿಯ “ವೈವಿಧ್ಯತೆಯೊಳಗಣ ಏಕತೆ”ಯನ್ನು ಕುರಿತು ಸಂಶೋಧನೆ ನಡೆಸಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಕುರಿತು ಯಾವುದೇ ವಿಕಾರಗಳಿಲ್ಲದೆ ಅರಿಯಬೇಕಾದ ಅಮೂಲ್ಯವಾದ ವಿಚಾರಗಳು ಇಲ್ಲಿವೆ. 'ಪರಿಶೋಧನ' ಎಂಬುದು ಎಂ.ಎಸ್.ಕೆ. ಅವರು ಕಾಲುಶತಮಾನ ಕಾಲದಲ್ಲಿ ಬರೆದು, ಪ್ರಕಟಿಸಿದ ಸಂಶೋಧನ ಲೇಖನಗಳ ಕೃತಿಯಾಗಿದೆ. ಕನ್ನಡ ಸಾಹಿತ್ಯ ಸಂಸ್ಕೃತಿಗಳ ಮೂಲಾನ್ವೇಷಣೆಗೆ ತೊಡಗಿದಾಗ ನಾವು ಪರಭಾಷೆಗಳ ಪರಪ್ರಾಂತ್ಯಗಳಷ್ಟೇ ಅಲ್ಲ ಪರಕಾಯ ಪ್ರವೇಶವನ್ನೂ ಮಾಡಬೇಕಾಗುತ್ತದೆ. ಕನ್ನಡ ಸಂಸ್ಕೃತಿಯ ಬೇರುಗಳನ್ನು ಸಂಸ್ಕೃತ, ಪ್ರಾಕೃತ, ತಮಿಳು, ತೆಲುಗು, ಮರಾಠಿ ಮೂಲದಲ್ಲಿ ಹುಡುಕಿದ್ದುಂಟು. ಆದರೆ ಮಧ್ಯಕಾಲೀನ ಆರ್ಯಭಾಷೆಯ ಅಂತಿಮ ಹಂತವಾದ ಅಪಭ್ರಂಶ ಮತ್ತು ಇತ್ತೀಚಿನ ಹಿಂದಿ ಮೊದಲಾದ ಮೂಲಗಳು ನಮ್ಮ ವಿದ್ವಾಂಸರ ಕಣ್ಣು ಅಷ್ಟಾಗಿ ಹರಿದಿಲ್ಲ. ಅಂಥ ಪ್ರಯತ್ನವೊಂದನ್ನು ವಿದ್ವಾಂಸರಾದ ಎಂ.ಎಸ್.ಕೆ. ಅವರು ಇಲ್ಲಿ ಮಾಡಿರುವುದು ಮಹತ್ವಪೂರ್ಣವಾದುದಾಗಿದೆ. ಸಿದ್ಧರು ಮತ್ತು ನಾಥರ ಸಾಹಿತ್ಯದ ಶೋಧನೆಗೆ ಇಳಿದಂತೆ ಅವರಿಗೆ ಅರಿವಾದ ವಸ್ತು-ವಿಚಾರಗಳು ಅಮೂಲ್ಯ. ಹೀಗೆ ಹುಡುಕುತ್ತ ಹೋದಾಗ ಬೌದ್ಧ ಸಿದ್ಧರ ಮೂಲಪುರುಷ ನಾಗಾರ್ಜುನ ಕನ್ನಡಿಗ ಎಂಬ ಅಂಶ ಅರಿವಾದುದೇ ಅಲ್ಲದೆ, ಆತನದೆಂದು ಹೇಳಲಾಗುವ ಎರಡು ಕನ್ನಡ ಪದ್ಯಗಳು ದೊರೆತವು. ಹೀಗೆ, ಇದೇ ರೀತಿ ಭಾಷಿಕ ಕೊಳ್ಕೊಡೆಯ ಬಗೆಗೂ ಚಿಂತನ, ಮಂಥನ ನಡೆದಾಗ ನಮ್ಮಲ್ಲಿ ಹಿಂದೆ ಇದ್ದು ಈಗ ಕಣ್ಮರೆಯಾಗಿರುವ ಹಲವು ಶಬ್ದಗಳು ವೇಷಾಂತರದಿಂದ ಬೇರೆ ಭಾಷೆಗಳಲ್ಲಿ ಸೇರಿಕೊಂಡಿರುವ ಅಂಶ ಕಂಡುಬಂದಿತು. ಅಂಥವುಗಳನ್ನು ಪತ್ತೆಹಚ್ಚಿ ಮತ್ತೆ ಅವುಗಳನ್ನು ಪಡೆದುಕೊಳ್ಳುವ ಪ್ರಯತ್ನ ನಡೆಯಬೇಕೆಂದು ಹೊರಟ ಎಂ.ಎಸ್.ಕೆ. ಅವರು, ‘ಹಿಂದಿಯಲ್ಲಿ ಕನ್ನಡ ಶಬ್ದಗಳು', 'ಕಬೀರನಲ್ಲಿ ಕನ್ನಡ ಶಬ್ದಗಳು', ‘ಅಪಭ್ರಂಶ ಸಾಹಿತ್ಯಕ್ಕೆ ಕನ್ನಡದ ಕೊಡುಗೆ', 'ಹಿಂದಿಯ ಪ್ರೇಮಾಖ್ಯಾನವೊಂದರಲ್ಲಿ ಹೊಯ್ಸಳ ರಾಜಕುಮಾರ' ಮೊದಲಾದ ಲೇಖನಗಳ ಮೂಲಕ ಕನ್ನಡಿಗರಲ್ಲಿ ಕುತೂಹಲವನ್ನು ಕೆರಳಿಸಬಲ್ಲಂಥ ಸಂಗತಿಗಳನ್ನು ಇಲ್ಲಿ ಶೋಧಿಸಿಕೊಟ್ಟಿದ್ದಾರೆ.   ಮ.ಸು.ಕೃಷ್ಣಮೂರ್ತಿ ಅವರ ಸಂಶೋಧನಾ ವೈಶಾಲ್ಯತೆ, ಬಹುಅಭಿಜ್ಞತೆ ಹಾಗೂ ಕನ್ನಡಪ್ರಾಜ್ಞತೆಗೆ “ಔತ್ತರೇಯ ಸಂತರ ಮೇಲೆ ವೀರಶೈವ ಪ್ರಭಾವ” ಎಂಬ ಲೇಖನವೂ ಸಾಕ್ಷಿಯಾಗಿದೆ. ಈ ಲೇಖನವು ಅವರ ‘ಬಸವರಾಜಮಾರ್ಗ’ ಎಂಬ ಸಂಶೋಧನ ಗ್ರಂಥದಲ್ಲಿದೆ. ಕನ್ನಡನಾಡಿನ 12ನೇ ಶತಮಾನದ ಶರಣಮಹಾನದಿಯು ಬಹುಮುಖವಾಗಿ ಪ್ರವಹಿಸಿದ ಹಾಗೂ ಪ್ರಭಾವಿಸಿದ ಬಹುಸಾಂಸ್ಕೃತಿಕ ಸಂಬಂಧಗಳ ಅನುಸಂಧಾನವನ್ನು ಇಲ್ಲಿ ಆಧಾರಸಮೇತ ಪ್ರಸ್ತುತಪಡಿಸಲಾಗಿದೆ. ಈಗಾಗಲೇ, ಕನ್ನಡ ಮರಾಠಿಗಳು ಭಿನ್ನ ಭಾಷೆಗಳಾಗಿದ್ದರೂ ಮರಾಠಿಯ ಮೇಲೆ ಕನ್ನಡದ ಪ್ರಭಾವ ಎಷ್ಟು ವಿಫುಲವಾಗಿದೆ ಎಂಬುದನ್ನು ವಿದ್ವಾಂಸರು ಸಪ್ರಮಾಣವಾಗಿ ತೋರಿಸಿಕೊಟ್ಟಿದ್ದಾರೆ. ಇಂದಿನ ಮಹಾರಾಷ್ಟ್ರದ ಬಹುಭಾಗ ಕರ್ನಾಟಕದ ಗಂಡುಮೆಟ್ಟಾಗಿತ್ತು ಎಂಬುದು ಸಂಶೋಧನೆಯಿಂದ ವ್ಯಕ್ತವಾಗಿದೆ. ಮಹಾರಾಷ್ಟ್ರ ಸಂತರ ಅಧಿದೈವನಾದ ವಿಟ್ಠಲ ಕನ್ನಡದೇವತೆ, 'ಪಂಢರಪುರ ಕನ್ನಡಿಗರ ಪಂಢರಿಗೆ' ಎಂಬುದಕ್ಕೆ ಮಹಾರಾಷ್ಟ್ರ ಸಂತರ ವಾಣಿಯೇ ಸಾಕ್ಷಿ ನುಡಿಯುತ್ತದೆ. ಈ ಸಂಬಂಧವಾಗಿ ಕನ್ನಡದ ಮೇರು ಸಂಶೋಧಕರಾದ ಶಂ.ಬಾ.ಜೋಷಿ, ಎಂ.ಚಿದಾನಂದಮೂರ್ತಿ ಮೊದಲಾದವರು ನಡೆಸಿದ್ದ ಶೋಧನಸಂಗತಿಗಳಿಗೆ ಮತ್ತಷ್ಟು ಬಲಬರುವಂತೆ ಎಂ.ಎಸ್.ಕೆ. ಅವರು ತಮ್ಮ ವಿಚಾರಗಳನ್ನು ನಿರೂಪಿಸಿರುವುದು ವಿಶೇಷ. ಔತ್ತರೇಯ ಸಂತರ ಮೇಲೆ ಕನ್ನಡ ಶಿವಶರಣರ ಪ್ರಭಾವ ಕುರಿತು ಬುದ್ಧಯ್ಯ ಪುರಾಣಿಕರು, ಶ್ರೀ ಜಿ.ವಿ.ಸರ್ದಾರ್, ಪ್ರಭಾಕರ ಮಾಚ್ವೆ, ಫಾರ್ಕುಹರ್ ಅವರ ಚಿಂತನೆಗಳನ್ನು ಪರಾಮರ್ಶಿಸುತ್ತಾ, ಎಂ.ಎಸ್.ಕೆ. ಅವರು ಮಹಾರಾಷ್ಟ್ರದ ತುಕಾರಾಂ, ಏಕನಾಥ, ನಿವೃತ್ತಿನಾಥ, ಜ್ಞಾನದೇವ, ನಾಮದೇವ, ಕಬೀರ ಮೊದಲಾದ ಸಂತರ ಮೇಲೆ ಬಸವಾದಿ ಶರಣರ ಚಳವಳಿ-ಸಾಹಿತ್ಯ ಬೀರಿರುವ ಪ್ರಭಾವವನ್ನು ಭಾಷಿಕ-ಸಾಹಿತ್ಯಕ-ಅಧ್ಯಾತ್ಮಿಕ-ಚಾರಿತ್ರಿಕ ತುಲನೆಯಲ್ಲಿ ಅಮೂಲ್ಯವಾದ ವಿಚಾರಗಳನ್ನು ಮಂಡಿಸಿದ್ದಾರೆ. ಎಂ.ಎಸ್.ಕೆ. ಅವರ ಅಭಿಮತದಂತೆ, ಒಂದು ಭಾಷೆಯಲ್ಲಿ ನಡೆದ ವಿಚಾರಕ್ರಾಂತಿ ಅನ್ಯಭಾಷಾ ಪ್ರದೇಶವನ್ನು ಮುಟ್ಟುತ್ತಿತ್ತು. ಇಂಥ ಪರಿಸ್ಥಿತಿಯಲ್ಲಿ ವಿವಿಧ ಪ್ರಾಂತಗಳ, ಭಾಷೆಗಳ ಸಂತರೂ ಮಹಂತರೂ ಅನ್ಯಪ್ರಾಂತ್ಯಗಳ ಸಂತರ ಸಂಪರ್ಕ ಪಡೆಯುತ್ತಿರಲಿಲ್ಲ ಎಂದು ಹೇಳಲು ಹೇಗೆ ಸಾಧ್ಯ? ಒಂದು ಭಾಷಾ ಸಮುದಾಯದ ಮೇಲೆ ಮತ್ತೊಂದು ಭಾಷಾ ಸಮುದಾಯದ ಪ್ರಭಾವ ಉಂಟಾಯಿತು ಎಂದ ಮಾತ್ರಕ್ಕೆ ಕೊಟ್ಟವನು ಹಿರಿಯ, ಕೊಂಡವನು ಕಿರಿಯ ಎಂಬ ತಾರತಮ್ಯವೇನೂ ಇಲ್ಲ. ಸಂಗಮೋತ್ಸವಕತೆ ಜೀವಂತ ನದಿಯ ಲಕ್ಷಣ. ರವೀಂದ್ರನಾಥ ಠಾಕೂರರು ಹೇಳುವಂತೆ ಭಾರತ ಮಾನವತೆಯ ಒಂದು ಮಹಾಸಾಗರ. ಅದರಲ್ಲಿ ಅದೆಷ್ಟು ಕಿರಿದೊರೆಗಳು, ಮಹಾನದಿಗಳು ಸಂಗಮಗೊಂಡಿವೆಯೋ ಯಾರು ಬಲ್ಲರು? ಈ ಸಂಸ್ಕೃತಿ ಸಂಗಮಕ್ಕೆ ಕನ್ನಡ ನಾಡಿನ ಕೊಡುಗೆ ಗಣನೀಯವಾದುದು. ಭಾರತ ದೇಶದಲ್ಲಿ ಕಾಲಾನುಕಾಲದಿಂದಲೂ ಸಂತರ ಸಂಗಮ, ಸಮಾಗಮ ನಡೆಯುತ್ತಿತ್ತು, ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಈ ಮಹಾತ್ಮರ ಸತ್ಸಂಗದಿಂದ ಜನಸಾಮಾನ್ಯರಿಗೆ ಆಗುವ ಉಪಕಾರ ಅಷ್ಟಿಷ್ಟಲ್ಲ. ಸತ್ಸಂಗದ ಉತ್ಸಂಗದಲ್ಲಿ ಸಾಹಿತ್ಯವೂ ಪಾರಸ್ಪರಿಕ ಕೊಳ್ಕೊಡೆಯಿಂದ ಬೆಳೆದಿರಬೇಕು, ಸಮೃದ್ಧವಾಗಿರಬೇಕು. ಈ ಸತ್ಸಂಗಕ್ಕೆ, ವಿಚಾರವಿನಿಮಯಕ್ಕೆ ಭಾಷೆಯಾಗಲಿ, ದೇಶವಾಗಲಿ, ಪರ್ವತಾರಣ್ಯಗಳಾಗಲಿ ಅಡ್ಡಿಯಾಗಿರಲಿಲ್ಲ ಎಂಬ ಅಂಶ ಭರತಖಂಡದ ಎಲ್ಲ ಭಾಷೆಗಳ ಸಂತ ಸಾಹಿತ್ಯದ ತುಲನಾತ್ಮಕ ವ್ಯಾಸಂಗದಿಂದ ಸ್ಪಷ್ಟವಾಗುತ್ತವೆ ಎಂದು ಎಂ.ಎಸ್.ಕೆ. ಅವರು ನಡೆಸಿರುವ ಸಂಶೋಧನೆಯು ಭಾರತದ ಬಹುಸಾಂಸ್ಕೃತಿಕ ಸಂರಚನೆಗಳೊಂದಿಗೆ ಕನ್ನಡಕ್ಕಿರುವ ಸಾಹಚರ್ಯವನ್ನು ತೌಲನಿಕ ಸಂಶೋಧನೆಯ ಮೂಲಕ ಕಂಡುಕೊಳ್ಳುವುದಕ್ಕೆ ಮಹತ್ತರ ಮಾದರಿಯಾಗಿದೆ.
APA, Harvard, Vancouver, ISO, and other styles
We offer discounts on all premium plans for authors whose works are included in thematic literature selections. Contact us to get a unique promo code!