Academic literature on the topic 'ಸಂವಿಧಾನ'

Create a spot-on reference in APA, MLA, Chicago, Harvard, and other styles

Select a source type:

Consult the lists of relevant articles, books, theses, conference reports, and other scholarly sources on the topic 'ಸಂವಿಧಾನ.'

Next to every source in the list of references, there is an 'Add to bibliography' button. Press on it, and we will generate automatically the bibliographic reference to the chosen work in the citation style you need: APA, MLA, Harvard, Chicago, Vancouver, etc.

You can also download the full text of the academic publication as pdf and read online its abstract whenever available in the metadata.

Journal articles on the topic "ಸಂವಿಧಾನ"

1

ನಾಗರಾಜ, ಹರಿಜನ. "ಅಸ್ಪೃಶ್ಯತೆಯ ನಿರ್ಮೂಲನೆಯಲ್ಲಿ ಸಾಂವಿಧಾನಿಕ ನಿಬಂಧನೆಗಳ ಪಾತ್ರ". AKSHARASURYA JOURNAL 06, № 05 (2025): 105 to 113. https://doi.org/10.5281/zenodo.15504316.

Full text
Abstract:
ಭಾರತವು ಒಂದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಜನಿಸಿದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಅಡಿಯಲ್ಲಿ ಸಮಾನತೆ ಮತ್ತು ಸಮಾನ ಅವಕಾಶಗಳನ್ನು ಪಡೆದು ಸಮಾಜದಲ್ಲಿ ಘನತೆಯಿಂದ ಜೀವಿಸಲು ಅವಕಾಶವಿದೆ. ಭಾರತದಲ್ಲಿ ಸಾವಿರಾರು ಜಾತಿಗಳ ಸಂಕೀರ್ಣತೆಯಿದ್ದರೂ ಸಹ ಎಲ್ಲರೂ ಸಮಾನರು ಎಂಬ ಸಮಾನತೆಯ ಆಶಯವನ್ನು ಇಲ್ಲಿನ ಸಂವಿಧಾನ ಎತ್ತಿಹಿಡಿದಿದೆ. ವಿಶ್ವದ ಅತ್ಯಂತ ದೊಡ್ಡ ಸಂವಿಧಾನ ನಮ್ಮದಾಗಿದ್ದು ಇದರ ಹೆಮ್ಮೆಯ ಸಂಗತಿಯೆಂದರೆ ಅದುವೇ ಸಮಾನತೆ ಎಂದು ಹೇಳಬಹುದು. ಭಾರತದ ಸರ್ಕಾರವು ಸಂವಿಧಾನ ಜಾರಿಯಾದಾಗಿನಿಂದ ಹಿಡಿದು ಪ್ರಸ್ತುತ ದಿನಮಾನದವರೆಗೆ ಇಲ್ಲಿನ ಪ್ರತಿಯೊಬ್ಬ ಪ್ರಜೆಯೂ ಭ್ರಾತೃತ್ವ ಭಾವನೆಯೊಂದಿಗೆ ಯಾವುದೇ ಜಾತಿ, ವರ್ಗ ಮತ್ತು ಮತಗಳ ಬೇಧಭಾವವಿಲ್ಲದೇ ʼನಾವೆಲ್ಲರೂ ಭಾರತೀಯರು, ನಾವೆಲ್ಲರೂ ಸಮಾನರು’ ಎನ್ನುವಂತೆ ಕಾಯ್ದೆ ಕಾನೂನುಗಳನ್ನ
APA, Harvard, Vancouver, ISO, and other styles
2

ಮಾನಸ, ಜಿ. "ಶ್ರೀಸಾಮಾನ್ಯವೇ ಭಗವನ್ ಮಾನ್ಯಂ, ಶ್ರೀಸಾಮಾನ್ಯನೇ ಭಗವದ್ ಧನ್ಯಂ (ಕುವೆಂಪು ವಿರಚಿತ 'ಧನ್ವಂತರಿ ಚಿಕಿತ್ಸೆ' ರಂಗಪ್ರಯೋಗವನ್ನು ಕುರಿತು)". AKSHARASURYA 03, № 06 (2024): 19 to 32. https://doi.org/10.5281/zenodo.11126849.

Full text
Abstract:
ಸ್ವಾತಂತ್ರ್ಯ ಪೂರ್ವದಲ್ಲಿ ರಚಿತವಾದ ಕುವೆಂಪುರವರ ಧನ್ವಂತರಿ ಚಿಕಿತ್ಸೆ ಕಥೆ, ಸ್ವಾತಂತ್ರ್ಯ ದೊರೆತ ಏಳು ದಶಕಗಳ ನಂತರವೂ ಪ್ರಸ್ತುತ ಸ್ಥಿತಿಗತಿಗಳನ್ನು ವರ್ಣಿಸುತ್ತದೆ. ಸ್ವಾತಂತ್ರ್ಯೋತ್ತರ ಭಾರತ ವರ್ಣ ಮತ ಜಾತಿ ಭೇದಗಳಿಲ್ಲದೆ ಸರ್ವರೂ ಸಮಾನರು ಎಂದು ಘೋಷಿಸಿ ಸರ್ವರ ಏಳಿಗೆಗೆ ಸಾಧನವಾಗುವ ಸರ್ವೋದಯ ತತ್ವಕ್ಕೆ ಒಂದು ಅಧಿಕಾರ ಮುದ್ರೆ ಬಿದ್ದಂತಾಯಿತು ಎಂದು ಕುವೆಂಪುರವರು ಭಾರತ ಸಂವಿಧಾನ ಜಾರಿಯಾದಾಗ ಸಂತಸ ವ್ಯಕ್ತಪಡಿಸುತ್ತಾರೆ. ಶ್ರೀಸಾಮಾನ್ಯರಿಗೆ ದೀಕ್ಷಾ ಗೀತೆ ಎಂಬ ಕವಿತೆಯಲ್ಲಿ ಕುವೆಂಪು ಕಣ್ಣಲ್ಲಿ ಕಂಡ ಭಾರತ ಸಂವಿಧಾನದ ಆಶಯವು ದ್ವನಿ ಪೂರ್ಣವಾಗಿ ಪ್ರಸ್ತುತ ಧನ್ವಂತರಿ ಚಿಕಿತ್ಸೆ ರಂಗಪ್ರಯೋಗದಲ್ಲಿ ಮೂಡಿ ಬಂದಿದೆ. ದೈವೀಪುರುಷರಾದ ವಿಶ್ವಾಮಿತ್ರರು,  ವಿಶ್ವವೈದ್ಯ ಧನ್ವಂತರಿಯು ಶ್ರೀಸಾಮಾನ್ಯರ ಅವತಾರವಾಗಿ ಕಾಣುತ್ತಾರೆ. ಮಹಾಗು
APA, Harvard, Vancouver, ISO, and other styles
3

ಭೀ., ಜಿ. ನಂದನ. "ಭಾರತ ಸಂವಿಧಾನ ಮತ್ತು ಬಸವಾದಿ ಶರಣರ ಚಿಂತನೆಗಳು". AKSHARASURYA 03, № 06 (2024): 117 to 128. https://doi.org/10.5281/zenodo.11127212.

Full text
Abstract:
ಭಾರತದ ಸಂವಿಧಾನ ಮತ್ತು ಬಸವಾದಿಶರಣರ ಚಿಂತನೆಗಳು ಎಂಬ ಎರಡು ಮಹಾನ್ ಐತಿಹಾಸಿಕ ದಾಖಲೆಗಳು. ಭಾರತದ ಸಂವಿಧಾನವನ್ನು ಮತ್ತು ಶರಣರ ವಚನ ಸಾಹಿತ್ಯವನ್ನು ಆಳವಾಗಿ ಆಧ್ಯಯನಗೈದವರಿಗೆ ವಚನ ಸಾಹಿತ್ಯದ ಪ್ರತಿಧ್ವನಿಯೇ ಭಾರತ ಸಂವಿಧಾನವೆಂಬ ಒಂದು ಸತ್ಯವು ಗೋಚರಿಸುತ್ತದೆ. ವಚನ ಸಾಹಿತ್ಯದ ವ್ಯಾಪ್ತಿಯು ಆಕಾಶದಷ್ಟು ವಿಶಾಲವಾದದ್ದು ಮತ್ತು ಸಾಗರದಷ್ಟು ಆಳವಾದದ್ದು ಹಾಗು ಅದು ವಿಶ್ವಮಾನವ ಕುಲಕೊಟಿಗೆ ಕಾಲಾತೀತವಾಗಿ ಸಂಬಂಧಿಸಿದ್ದಾಗಿದೆ. ಆದರೆ ಭಾರತದ ಸಂವಿಧಾನವು ವಿಶ್ವದ ಎಲ್ಲ ಸಂವಿಧಾನಗಳ ಒಳ್ಳೆ ಅಂಶಗಳನ್ನು ಒಳಗೊಂಡಿದ್ದರೂ ಅದರ ವ್ಯಾಪ್ತಿಯು ಮಾತ್ರ ಭಾರತಕ್ಕಷ್ಟೇ ಸಿಮಿತವಾಗಿದೆ. ಭಾರತದ ಸಂವಿಧಾನವು ಸಂಸತ್ತಿಕ ಪ್ರಜಾಪ್ತಭುತ್ವ ಮತ್ತು ಸಮಾಜಿಕ ಕಲ್ಯಾಣ ರಾಜ್ಯದ ಹಾಗು ಸಾಮಾಜಿಕ ನ್ಯಾಯದ ಕುರಿತಷ್ಟೇ ಚಿಂತಿಸಿದರೆ ವಚನ ಸಾಹಿತ್ಯವು ಆಧ್ಯಾತ್ಮಿಕ ಪ್ರಜಾ
APA, Harvard, Vancouver, ISO, and other styles
4

ಪಂಕಜ, ಹೆಚ್. ಪಿ. "ಸಂಸತ್ತಿನ ಪ್ರಶ್ನಾವಳಿ". AKSHARASURYA 04, № 03 (2024): 133 to 137. https://doi.org/10.5281/zenodo.12672909.

Full text
Abstract:
ಭಾರತದ ಸಂವಿಧಾನ ವಿಶ್ವದ ಅತ್ಯಂತ ಬೃಹತ್ ಸಂವಿಧಾನ ಮತ್ತು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಆಡಳಿತದ ಅನುಕೂಲಕ್ಕಾಗಿ ದ್ವಿಸದನಗಳನ್ನೊಳಗೊಂಡ ಸಂಸತ್ ವ್ಯವಸ್ಥೆ ರಚನೆಯಾಗಿದೆ. ಪಾರ್ಲಿಮೆಂಟ್‌ನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯ ರ ಅಧಿಕಾರ ದುರುಪಯೋಗ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಂಬಂಧ ಎಲ್ಲಾ ಸದಸ್ಯರು ಸಾರ್ವಜನಿಕ ಮಸೂದೆಯಾಗಲಿ ಖಾಸಗಿ ಮಸೂದೆಯಾಗಲಿ ವಿಷಯಕ್ಕೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪಾರ್ಲಿಮೆಂಟ್ ನಲ್ಲಿ ಸಭೆಯ ನಿರ್ಣಯಗಳನ್ನು ಗೌರವಿಸುವ ಉದ್ದೇಶ ಹಾಗೂ ವ್ಯವಸ್ಥಿತ ರೀತಿಯಲ್ಲಿ ಸಭೆಯ ನಡಾವಳಿಗಳನ್ನು ಪಾಲಿಸಬೇಕು ಎಂಬ ಉದ್ದೇಶದಿಂದ ಪ್ರಶ್ನೆ ಕೇಳುವ ಅವಕಾಶ ಮತ್ತು ಉತ್ತರ ನೀಡಲು ಬೇಕಾಗುವ ಸುವ್ಯವಸ್ಥಿತ ಕ್ರಿಯೆಯಾಗಿದೆ.
APA, Harvard, Vancouver, ISO, and other styles
5

ನಾಗನಗೌಡ, ಗೌಡ್ರ. "ಡಾ. ಬಿ. ಆರ್. ಅಂಬೇಡ್ಕರ್‌‌ ಅವರ ಸಾಮಾಜಿಕ ನ್ಯಾಯದ ಚಿಂತನೆಗಳು". AKSHARASURYA JOURNAL 06, № 05 (2025): 94 to 104. https://doi.org/10.5281/zenodo.15504293.

Full text
Abstract:
ಡಾ. ಬಿ.ಆರ್. ಅಂಬೇಡ್ಕರ್‌ ಒಬ್ಬ ಭಾರತೀಯ ಶ್ರೇಷ್ಠ ರಾಜಕೀಯ ನಾಯಕ, ತತ್ವಜ್ಞಾನಿ, ಸಾಮಾಜಿಕ ಚಿಂತಕ, ಇತಿಹಾಸ ಸಂಶೋಧಕ, ಆರ್ಥಿಕ ತಜ್ಞ, ಶ್ರೇಷ್ಠ ಬರಹಗಾರ, ಮಹಿಳಾ ಸಮಾನತೆಯ ಹರಿಕಾರ, ದಲಿತರ ಸೂರ್ಯ, ಕಾರ್ಮಿಕ ಬಂಧು, ಕಾನೂನು ತಜ್ಞ, ಸಂವಿಧಾನ ಶಿಲ್ಪಿ ಎಂದೆಲ್ಲಾ ಪ್ರಖ್ಯಾತರಾಗಿದ್ದಾರೆ. ಭಾರತೀಯ ಸಮಾಜವು ಶತ ಶತಮಾನಗಳಿಂದಲೂ ವರ್ಣ, ಜಾತಿಯ ಹೆಸರಿನಲ್ಲಿ ವರ್ಗೀಕರಣಗೊಂಡು ಇಡೀ ಮಾನವ ಸಂಬಂಧಗಳ ಮೌಲ್ಯವನ್ನೇ ಹಾಳು ಮಾಡಿದೆ. ಸಮಾಜದ ಬಹುಪಾಲು ಜನಾಂಗ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬಲಿಷ್ಠವಾಗಿರುವ ಜಾತಿ, ವರ್ಗಗಳ ತುಳಿತಕ್ಕೆ ಸಿಲುಕಿ ನಲುಗಿವೆ. ಅಂಬೇಡ್ಕರ್‌‌ರವರು ಬಾಲ್ಯದಿಂದಲೂ ಕಂಡುಂಡ ಅಸ್ಪೃಶ್ಯತೆಯ ನೋವು ಅಪಮಾನಗಳು ಅವರನ್ನು ಸಾಮಾಜಿಕ ಚಿಂತನೆಡೆಗೆ ಮುಖ ಮಾಡುವಂತೆ ಪೇರೆಪಿಸಿದವು. ಅವರು ಶಿಕ್ಷಣ-ಸಂಘಟನೆ-ಹೋರಾಟ ಎಂಬ ತತ
APA, Harvard, Vancouver, ISO, and other styles
6

ಪ್ರಸನ್ನಕುಮಾರ್, ಕೆ. "ಅಂಬೇಡ್ಕರ್‌ರವರ ಸಾಮಾಜಿಕ ಚಿಂತನೆಗಳು". AKSHARASURYA JOURNAL 05, № 06 (2025): 110 to 116. https://doi.org/10.5281/zenodo.14788784.

Full text
Abstract:
ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿ ಎಂದು ಕರೆಸಿಕೊಂಡ ಮಹಾನ್ ವ್ಯಕ್ತಿ. ಇವರು ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಇವರು ದೇಶಕ್ಕಾಗಿ ಮಾಡಿದ ಹೋರಾಟಗಳು ಎಂತಹ ದುರ್ಬಲ ವ್ಯಕ್ತಿಗಳನ್ನೂ ಸಹ ಎಚ್ಚರಿಸುತ್ತದೆ. ಇವರ ಕೊಡುಗೆಯನ್ನು ಭಾರತೀಯ ಜನತೆ ಎಂದಿಗೂ ಮರೆಯುವುದಿಲ್ಲ. ಸಂವಿಧಾನ ರಚನೆಗೆ ಮಾತ್ರವಲ್ಲದೇ ಅವರ ಸೇವೆ ಜನತೆಯನ್ನು ಜಾಗೃತರಾಗಿ ಮಾಡುವ ಸಾಧನವಾಗಿದೆ ಎನ್ನಬಹುದು. ಅಂಬೇಡ್ಕರ್ ಅವರು ವೈಚಾರಿಕತೆಯ ನೆಲೆಯಲ್ಲಿ ಈ ದೇಶವನ್ನು ಮುಂದೆ ತೆಗೆದುಕೊಂಡು ಹೋಗಬೇಕೆಂಬ ಮಹದಾಶಯವನ್ನು ಹೊಂದಿರುವ ಅಪರೂಪ ವ್ಯಕ್ತಿ. ಈ ಹಿನ್ನಲೆಯಲ್ಲಿಯೇ ಅವರು “ಈ ದೇಶದಲ್ಲಿ ಗುಡಿ-ಗೋಪುರಗಳಿಗಿಂತ ಶಾಲೆಗಳು ತೆರೆದರೆ, ಆ ದೇಶ ಉದ್ದಾರವಾಗುತ್ತದೆ” ಎಂಬ ನಿಲುವನ್ನು ತ
APA, Harvard, Vancouver, ISO, and other styles
7

ಗಣೇಶ. "ಧರ್ಮ ಮತ್ತು ಅಂಬೇಡ್ಕರ್‌". AKSHARASURYA JOURNAL 06, № 05 (2025): 46 to 53. https://doi.org/10.5281/zenodo.15504212.

Full text
Abstract:
ಅಂಬೇಡ್ಕರ್‌ ಭಾರತದ ಒಬ್ಬ ಶ್ರೇಷ್ಠ ಪ್ರತಿಭಾವಂತ ಬುದ್ಧಿ ಜೀವಿ ಮತ್ತು ಮೇಧಾವಿ. ಪ್ರಪಂಚದ ಅಪ್ರತಿಮ ಚಿಂತಕರ ಸಾಲಿನಲ್ಲಿ ನಿಲ್ಲಬಲ್ಲ, ಮೇರು ವ್ಯಕ್ತಿತ್ವವುಳ್ಳ ಚಿಂತನಶೀಲ ವ್ಯಕ್ತಿ. ಅವರು ಜಗತ್ತಿನ ಎಲ್ಲಾ ಧಾರ್ಮಿಕ ಗ್ರಂಥಗಳನ್ನು ಆಸಕ್ತಿ ಮತ್ತು ಕುತೂಹಲದಿಂದ ಅಮೂಲಾಗ್ರವಾಗಿ ಅಧ್ಯಯನ ಮಾಡಿದ್ದರು. ಧರ್ಮವನ್ನು ಕುರಿತಂತೆ ರಾಬರ್ಟ್ ಸನ್ ಸ್ಮಿತ್ ಅವರ ಪರಿಕಲ್ಪನೆಯನ್ನು ಅಂಬೇಡ್ಕರ್‌ ಹಿಂದೂ ಧರ್ಮದ ತತ್ವಜ್ಞಾವನ್ನು ಕುರಿತ ತಮ್ಮ ಕೃತಿಯಲ್ಲಿ ಹೀಗೆ ಉಲ್ಲೇಖಿಸಿದ್ದಾರೆ. ಧರ್ಮ ಯಾವುದೇ ಕಾರಣಕ್ಕೂ ದುರ್ಬಲರನ್ನು ಶೋಷಿಸುವ ಅಸ್ತ್ರವಾಗಬಾರದು. ಹಿಂದೂ ಧಾರ್ಮಿಕ ವ್ಯವಸ್ಥೆಯಲ್ಲಿ ದೈವಿಕ ಪ್ರಭುತ್ವದ ಲಿಖಿತ ಸಂವಿಧಾನ ಮತ್ತು ಪುರೋಹಿತಶಾಹಿಯ ಅಘೋಷಿತ ಪ್ರಾಬಲ್ಯವನ್ನು ಕಾಪಾಡಿಕೊಂಡು ಬರಲಾಗಿದೆ. ಈ ಧರ್ಮದಲ್ಲಿ ಬಹುಸಂಖ್ಯಾತ ಹಿಂದುಳಿದ
APA, Harvard, Vancouver, ISO, and other styles
8

ರುಕ್ಮಿಣಿ, ವಿ. "ಡಾ. ಬಿ.ಆರ್. ಅಂಬೇಡ್ಕರ್‌ ಅವರ ದೃಷ್ಟಿಯಲ್ಲಿ ಅಸ್ಪೃಶ್ಯತೆ". AKSHARASURYA JOURNAL 06, № 05 (2025): 175 to 185. https://doi.org/10.5281/zenodo.15504614.

Full text
Abstract:
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್‌ ಅವರು ಹಿಂದೂ ಸಮಾಜಕ್ಕೆ ಕಳಂಕವೆನಿಸಿರುವ ಅಸ್ಪೃಶ್ಯತೆಯ ವಿವಿಧ ಆಯಾಮಗಳನ್ನು ವೈಜ್ಞಾನಿಕವಾಗಿ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಭಾರತದಲ್ಲಿ ಮಾತ್ರ ಇದರ ಆಚರಣೆ ಏಕೆ ಮುಂದುವರೆದಿದೆ ಎಂಬುದರ ಬಗ್ಗೆ ವಿಶ್ಲೇಷಣೆ ನೀಡಿದ್ದಾರೆ. ಹಿಂದೂ ಸಮಾಜವನ್ನು ಮಾನವೀಯ ಮೌಲ್ಯಗಳು ಸಮಾನತೆ ಸ್ವಾತಂತ್ರ್ಯ, ನ್ಯಾಯ, ವಿಶ್ವ ಭ್ರಾತೃತ್ವದ ಆಧಾರದ ಮೇಲೆ ಪುನರ್ಘಟಿಸುವ ಪ್ರಯತ್ನವನ್ನು ಅವರ ಸಾಮಾಜಿಕ ಚಿಂತನೆಯಲ್ಲಿ ಕಾಣಬಹುದು. ಸಾಮಾಜಿಕ ಸಂಶೋಧನೆಯ ನೆಲೆಗಟ್ಟಿನಲ್ಲಿ ಅಂಬೇಡ್ಕರ್‌ ಅವರ ಅಸ್ಪೃಶ್ಯತೆಯ ಕುರಿತ ಸಾಮಾಜಿಕ, ರಾಜಕೀಯ, ಧಾರ್ಮಿಕ ವಿಚಾರಗಳು ತುಂಬಾ ಮಹತ್ವವಾಗಿವೆ. ಯುರೋಪಿನ ಚರಿತ್ರೆಯಲ್ಲಿ ಕಂಡುಬರುವ ಅನೇಕ ಅನ್ಯಾಯಗಳನ್ನು ಮೂಢನಂಬಿಕೆಗಳನ್ನು ನಿವಾರಿಸಲಾಗಿದೆ. ಆದರೆ ಭಾರತದಲ್ಲಿ ಹಿಂದೂ ಬ್ರಾಹ್ಮಣ
APA, Harvard, Vancouver, ISO, and other styles
9

ರಾಜಕುಮಾರ, ಎಂ. ಸಿಂಧೆ. "ಡಾ. ಬಿ. ಆರ್. ಅಂಬೇಡ್ಕರ್‌ ಅವರ ಬದುಕಿನಿಂದ ಕಲಿಯಬೇಕಾದ ಸಂದೇಶ". AKSHARASURYA JOURNAL 06, № 01 (2025): 12 to 21. https://doi.org/10.5281/zenodo.14961338.

Full text
Abstract:
ಕಲಿಕೆ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿದೆ. ಅದು ನಿತ್ಯ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಹುಟ್ಟಿನಿಂದ ಸಾವಿನವರೆಗೂ ಜೀವನುದ್ದಕ್ಕೂ ವಿವಿಧ ಜ್ಞಾನಶಾಖೆಗಳ ಮೂಲಕ ಜೀವನಾನುಭವ ಪಡೆಯುತ್ತ, ಹಳೆ ಬೇರು ಹೊಸ ಚಿಗುರು ಎಂಬಂತೆ ಗುರುಹಿರಿಯರ ನಡೆ-ನುಡಿ, ಆಚಾರ ವಿಚಾರಗಳನ್ನು ಅನುಲಕ್ಷಿಸುತ್ತ, ಭವಿಷ್ಯದ ಬದುಕಿನ ಅಗತ್ಯತೆಗಳನ್ನು ಕಲ್ಪಿಸಿಕೊಳ್ಳುತ್ತ ಹಳೆಯ ಮತ್ತು ಹೊಸದರ ಸಮ್ಮಿಶ್ರಣದೊಂದಿಗೆ ಸುಂದರ ಬದುಕು ಕಟ್ಟಿಕೊಳ್ಳಲು ‘ಕಲಿಕೆ’ ಎಂಬ ಪ್ರಕ್ರಿಯೆ ನಡೆಯುತ್ತಲೇ ಸಾಗುತ್ತದೆ.‘ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ’ ಯಿಂದ ಆರಂಭವಾಗಿ ಕಲಿಕೆ ಮುಂದುವರೆಯುತ್ತದೆ. ‘ದೇಶ ಸುತ್ತು ಇಲ್ಲವೇ ಕೋಶ ಓದು’ ಎಂಬಂತೆ ಸಾಹಿತ್ಯ, ಕಾವ್ಯ, ಪುರಾಣ, ಶಾಸ್ತ್ರ, ಕಲೆ ಹೀಗೆ ನೂರಾರು ಪ್ರಕಾರದ ಗ್ರಂಥಗಳ ಅಧ್ಯ
APA, Harvard, Vancouver, ISO, and other styles
10

ಡಿ., ಪುರುಷೋತ್ತಮ. "ಟಿಪ್ಪು: ಐತಿಹಾಸಿಕ ವ್ಯಕ್ತಿ ಕುರಿತು ಒಂದು ಅವಲೋಕನ". AKSHARASURYA JOURNAL 03, № 04. SPECIAL ISSUE. (2024): 50 to 58. https://doi.org/10.5281/zenodo.10929686.

Full text
Abstract:
ಭಾರತವು ರಾಜ ಮಹಾ ರಾಜರಿಂದ ಅನುಭವಿಸಿದ ಪ್ರಭುತ್ವದ ಕಲ್ಪನೆ, ಬ್ರಿಟೀಷರಿಂದ ಕಲಿತ ಪ್ರಭುತ್ವದ ಪಾಠ, ಸ್ವಾತಂತ್ರ್ಯ ನಂತರ ನಾವು ಅನುಭವಿಸುತ್ತಿರುವ ಪ್ರಜಾಪ್ರಭುತ್ವದ ಕಲ್ಪನೆಗಳಲ್ಲಿ ಬಹಳ ವೈರುಧ್ಯ ಮತ್ತು ವ್ಯತ್ಯಾಸಗಳು ಇವೆ. ಪ್ರಜಾಪ್ರಭುತ್ವದ ದೃಷ್ಟಿಯಿಂದ ಇತಿಹಾಸವನ್ನು ನೋಡಿದರೆ ಬ್ರಿಟೀಷರು, ಇಲ್ಲಿಯ ರಾಜ ಮಹಾರಾಜರುಗಳೆಲ್ಲರೂ ಪ್ರಜಾಪ್ರಭುತ್ವದ ವಿರೋಧಿಗಳೆಂದೇ ಬರೆಯಬೇಕಾಗುತ್ತದೆ. ಏಕೆಂದರೆ ಅವರುಗಳು ಯಾರು ಇಂದಿನ ಸಂವಿಧಾನ ದತ್ತವಾದ ಪ್ರಭುತ್ವನ್ನು ನಡೆಸಿಲ್ಲ. ಪ್ರಜಾಪ್ರಭುತ್ವ ಕಲ್ಪನೆಯಿಂದ ಇತಿಹಾಸ ನೋಡುವುದು ಕೂಡ ತಪ್ಪು. ಏಕೆಂದರೆ ಆ ಕಾಲದ ಚರಿತೆಯಲ್ಲಿ ಇಲ್ಲದನ್ನು ಕಾಣ ಬಯಸಿದರೆ ಅದು ಸಿಗುವುದಿಲ್ಲ. ಇದರಿಂದ ನಮ್ಮ ಪ್ರಭುತ್ವ ಒಪ್ಪುವ ಚರಿತ್ರೆ ನಮಗೆ ಲಬ್ಧವಾಗುವುದಿಲ್ಲ. ಕಾಲ ಪ್ರಜ್ಞೆ ಇರದೆ, ಚಾರಿತ್ರರಿಕ ದೃಷ್ಟಿ ಇರದೆ ಬರೆದ
APA, Harvard, Vancouver, ISO, and other styles
More sources
We offer discounts on all premium plans for authors whose works are included in thematic literature selections. Contact us to get a unique promo code!